ದುರಾಡಳಿತದ ಲಾಭ ಪಡೆದವರು

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ದುರಾಡಳಿತದ ಲಾಭ ಪಡೆದುಕೊಂಡವರ ಪೈಕಿ ಮಾಧ್ಯಮ ಸಂಸ್ಥೆಗಳೂ ಇವೆ ಎನ್ನುವುದು ಇದೀಗ ಬಯಲಾಗುತ್ತಿದೆ. ವಾರ್ತಾ ಇಲಾಖೆ ಅನುಸರಿಸಬೇಕಾದ ಕಾನೂನನ್ನು ಉಲ್ಲಂಘಿಸಿ ಹೊಸ ದಿಗಂತ ಎಂಬ ಆರ್ ಎಸ್ ಎಸ್ ಪತ್ರಿಕೆಗೆ ಸಾಕಷ್ಟು ಜಾಹೀರಾತು ನೀಡಿದೆ. ಕೇವಲ ಆರು ತಿಂಗಳಲ್ಲಿ ಒಂದು ಕೋಟಿ ಮೊತ್ತದಷ್ಟು ಜಾಹೀರಾತನ್ನು ಆ ಪತ್ರಿಕೆಗೆ ಸರಕಾರ ನೀಡಿದೆ.

ಅನೇಕರು ಗಮನಿಸಿರಬಹುದು ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ನಂತರವಷ್ಟೇ ಹೊಸ ದಿಗಂತ ಹೊಸ ರೂಪ ಪಡೆಯಿತು. ಹೊಸಬರನ್ನು ಸೇರಿಸಿಕೊಂಡು, ಹೊಸ ಹೊಸ ಆವೃತ್ತಿಗಳನ್ನು ಆರಂಭಿಸಿತು. ಬಿಜೆಪಿ ಆಪ್ತ ವಲಯದಲ್ಲಿ ಇದು ‘ನಮ್ಮದೇ ಪತ್ರಿಕೆ’ ಎನ್ನುವಷ್ಟರ ಮಟ್ಟಿಗೆ ಪತ್ರಿಕೆ ಪ್ರಚಾರ ಪಡೆಯಿತು.

ಸರಕಾರ ಕಡಿಮೆ ದುಡ್ಡಿನಲ್ಲಿ ಈ ಪತ್ರಿಕೆಗೆ ಕೈಗಾರಿಕಾ ಶೆಡ್ ಗಳನ್ನು ಮಂಜೂರು ಮಾಡಿದ್ದೂ ಈಗ ಗೋಪ್ಯವಾಗಿ ಉಳಿದಿಲ್ಲ. ಬಹುಶಃ ಇದೇ ಕಾರಣಕ್ಕೆ ಹೊಸ ದಿಗಂತ ಯಡಿಯೂರಪ್ಪನವರ ಬಂಧನವನ್ನು ಮುಖ್ಯ ಸುದ್ದಿಯಾಗಿ ಪ್ರಕಟಿಸಲು ಹಿಂಜರಿದಿತ್ತು.

ತೆಹಲ್ಕಾ ಪತ್ರಿಕೆ ಈ ಬಗ್ಗೆ ಮತ್ತಷ್ಟು ವಿವರಗಳನ್ನೊಳಗೊಂಡ ವರದಿಯನ್ನು ಪ್ರಕಟಿಸಿದೆ. ಹೊಸ ದಿಗಂತದ ಪ್ರಮುಖ ಪತ್ರಕರ್ತರೊಬ್ಬರು ಅಂದಿನ ಮುಖ್ಯಮಂತ್ರಿಯಿಂದ ಮನೆ ಮಂಜೂರು ಮಾಡಿಸಿಕೊಂಡು ಅವರಿಂದಲೇ ಆ ಮನೆಗೆ ಹಣ ಕಟ್ಟಿಸಿದ್ದರು ಎಂದೂ ತೆಹಲ್ಕಾ ವರದಿ ಹೇಳುತ್ತದೆ. ನೀವೂ ಓದಿ.

2 thoughts on “ದುರಾಡಳಿತದ ಲಾಭ ಪಡೆದವರು

  1. vaijanath hiremath

    ಮಾನ್ಯರೆ, ಭಾರತದಲ್ಲಿ ಅದರಲ್ಲೂ ನಮ್ ಕರ್ನಾಟಕದಲ್ಲಿ ವಿಕೀಲೀಕ್ಸ್ ಥರದ ಪತ್ರಕರ್ತರು (ಲಂಕೇಶ ರಂಥವರು ಆಗಿ ಹೋಗಿದ್ದಾರೆ ಇಲ್ಲ ಻ನ್ನೋಲ್ಲ ) ಾದರೆ ಇಂದಿನ ದಿನಗಳಲ್ಲಿ ಅತ್ಯವಶ್ಯವಾಗಿದ್ದಾರೆ ಯಾಕೆ ಕನ್ನಡದಲ್ಲೊಂದು ವಿಕೀಲೀಕ್ಸ್ ಹುಟ್ಟುತ್ತಿಲ್ಲ..? ಅಂತಹ ಧೈರ್ಯ ಿಲ್ಲವೇ ಇಲ್ಲ ಯೋಗ್ಯತೆ ಇಲ್ಲವೇ? ಇದ್ದರೂ ಪರಿಸರದ ಕೊರತೆಯೇ? ಏನು ಎಂಬುದು ನನಗಂತೂ ಅರ್ಥ ಾಗುತ್ತಿಲ್ಲ ಯಾರಾದರೂ ನನಗೆ ಪ್ರತಿಕ್ರಿಯೆ ನೀಡುವರಾದಲ್ಲಿ ದಯವಿಟ್ಟು ಪರಿಹಾರ ರೂಪದ ಪ್ರತಿಕ್ರಿಯೆ ನಿರೀಕ್ಷೆಯಲ್ಲಿ ತಮ್ಮವನು…

    Reply

Leave a Reply

Your email address will not be published. Required fields are marked *