advt-details-from-news-information-dept-to-various-dailies

ಮಾಧ್ಯಮ ಫಲಾನುಭವಿಗಳು – ಕೆಲವು ದಾಖಲೆಗಳು…

 -ರವಿ ಕೃಷ್ಣಾರೆಡ್ಡಿ

ನಮ್ಮಲ್ಲಿ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಸ್ವಾತಂತ್ರ್ಯವಿದೆ. ಆದರೆ ಅವು ಸ್ವತಂತ್ರವಾಗಿಲ್ಲ.

ನಾನು ಕಳೆದ ವಾರ ಬರೆದ ಪತ್ರಕ್ಕೆ ಉತ್ತರವಾಗಿ ಸಂಪಾದಕೀಯ ಬಳಗ ಒಂದು ಪತ್ರ ಬರೆದಿತ್ತು. ಅದರಲ್ಲಿ “ಹೊಸ ದಿಗಂತ” ಪತ್ರಿಕೆಯ ಕುರಿತು ಹೀಗೆ ಬರೆಯಲಾಗಿತ್ತು:

“ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?”

ಇಂದು ಯಡ್ಡ್‌ಯೂರಪ್ಪನವರಿಗೆ ಜಾಮೀನು ಸಿಕ್ಕರೂ ಸಿಗಬಹುದು. ನಾಳೆ ಯಾವಯಾವ ಪತ್ರಿಕೆಗಳು ಹೇಗೆ ಪ್ರತಿಕ್ರಿಯಿಸುತ್ತವೊ? ಇಂದು ಕನ್ನಡ ಪತ್ರಿಕೆಗಳನ್ನು ಸುದ್ದಿಗಾಗಿ ಓದುವುದಕ್ಕಿಂತ ಅವುಗಳನ್ನು ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ಪ್ರಾಮಾಣಿಕತೆ/ಅಪ್ರಾಮಾಣಿಕತೆಯನ್ನು ಅಳೆಯಲು ಅವುಗಳ ಪತ್ರಿಕೆಗಳ ಪುಟ ತಿರುವಬೇಕಿದೆ.

ತೆಹಲ್ಕಾದಲ್ಲಿ ಬಂದಿರುವ ಲೇಖನವೊಂದರ ಬಗ್ಗೆ ನಮ್ಮಲ್ಲಿ ನೆನ್ನೆ ಒಂದು ಸಣ್ಣ “ದುರಾಡಳಿತದ ಲಾಭ ಪಡೆದವರು” ಲೇಖನ ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿ ನಮಗೆ ಕೆಲವು ದಾಖಲೆಗಳು ಲಭ್ಯವಾಗಿದ್ದು ಅವನ್ನು ಇಲ್ಲಿ ಕೊಡಲಾಗುತ್ತಿದೆ.

ಆದರೆ, ಇಷ್ಟಕ್ಕೂ ಇದರಿಂದ ಏನಾಗುತ್ತದೆ? ಸರ್ಕಾರದ ಭ್ರಷ್ಟತೆಯನ್ನು ಮತ್ತು ಅನೀತಿಯನ್ನು ಹುಡುಕಿ, ವಿಚಾರಣೆಗೆ ಕೋರ್ಟಿಗೆಳೆಯುವ ಒಂದು ಸರ್ಕಾರಿ ಸಂಸ್ಥೆ ನಮ್ಮಲ್ಲಿ ಇಲ್ಲ. ಲೋಕಾಯುಕ್ತವೂ ಸಹ ದೂರು ಕೊಟ್ಟರೆ ವಿಚಾರಣೆ ಎಂಬ ಹಂತದಲ್ಲಿದೆ. ಸ್ವತಂತ್ರ ಆಂತರಿಕ ವಿಚಾರಣಾ ಸಂಸ್ಠೆಯೊಂದು ಇಂದು ತೀರಾ ಅಗತ್ಯವಿದೆ. ಇಲ್ಲದಿದ್ದರೆ, ಇಂತಹ ಕರ್ಮಕಾಂಡಗಳು ಜನರಿಗೆ ಗೊತ್ತಾಗುತ್ತದೆ. ಆದರೆ ಅದರಿಂದ ಯಾರಿಗೂ ಉಪಯೋಗವಿಲ್ಲ. ಫಲಾನುಭವಿಗಳು ವಿಚಾರಣೆಗೊಳಪಡುವುದಿಲ್ಲ. ಸುಳ್ಳು ದಾಖಲೆ ಕೊಟ್ಟ ತಪ್ಪಿತಸ್ಥರಿಗೆ, ಅದರ ಮೇಲೆ ತೀರ್ಮಾನ ಕೈಗೊಳುವ ಸ್ವಜನಪಕ್ಷಪಾತಿಗಳಿಗೆ ಶಿಕ್ಷೆಯಾಗುವುದಿಲ್ಲ. ಎಂದು ನಾವು ಇದನ್ನು ಮೀರುವುದು?

ಆದರೂ…

hosadiganta-requesting-recognition-as-statewide-paper-Yeddyurappas-approval

hosadiganta-requesting-recognition-as-statewide-paper-Yeddyurappas-approval

 

objection-to-yeddyurappa's-approval-for-statewide-paper-page1

objection-to-yeddyurappa's-approval-for-statewide-paper-page1

 

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

 

objection-to-yeddyurappa's-approval-for-statewide-paper-page3

objection-to-yeddyurappa's-approval-for-statewide-paper-page3

 

hosadiganta-requesting-industrial-shed-yeddyurappas-approval

hosadiganta-requesting-industrial-shed-yeddyurappas-approval

 

industrial-shed-approval-letter-to-hosadiganta

industrial-shed-approval-letter-to-hosadiganta

 

advt-details-from-news-information-dept-to-various-dailies

advt-details-from-news-information-dept-to-various-dailies

 

20-lakhs-advt-in-2months-to-hosadiganta

 

6 thoughts on “ಮಾಧ್ಯಮ ಫಲಾನುಭವಿಗಳು – ಕೆಲವು ದಾಖಲೆಗಳು…

 1. Anonymous

  ರೆಡ್ಡಿಯವರೆ, ಕಳೆದ ವರುಷ ನಡೆದ ಘಟನೆ ಇದು. ಹೊಸ ದಿಗಂತ ಪತ್ರಿಕೆ ಹುಬ್ಬಳ್ಳಿಯಿಂದ ಪ್ರಕಟವಾಗುತಿದೆ ಎಂದು ಸುಳ್ಳು ಹೇಳಿ ಜಾಹಿರಾತು ಪಡೆಯಲು ಯತ್ನಿಸಿದಾಗ ವಾರ್ತಾಇಲಾಖೆ ನಿರ್ದೇಶಕ ನನ್ನ ಮಿತ್ರ ವಿಶುಕುಮಾರ್ ಜಾಹಿರಾತು ನೀಡಲು ನಿರಾಕರಿಸಿದರು. ನಂತರ ಅವರನ್ನು ಪತ್ರಿಕೆ ಶಿವಮಗ್ಗ ಸಭೆಯಲ್ಲೆ ಯಡಿಯೂರಪ್ಪನ ಬಳಿ ಅಂಕಿತ ಹಾಕಿಸಿ ಇಲಾಖೆಯಿಂದ ವರ್ಗಾವಣೆ ಮಾಡಿಸಿತು. ಈಗ ಹುಬ್ಬಳ್ಳಿಯಿಂದ ಹೊಸದಿಗಂತ ಆವತ್ತಿ ಪ್ರಕಟವಾಗುತ್ತಿದೆ. ಎಲ್ಲರ ಮನೆಗೆ ಪುಕ್ಕಟೆ ಹಂಚಲಾಗುತ್ತಿದೆ.ನನ್ನ ಮನೆಗೆ ಪತ್ರಿಕೆ ಹಾಕಬೇಡವೆಂದು ಏಜೆಂಟ್ ಗೆ ನಾನೇ ಸೂಚಿಸಿದ್ದೇನೆ. j.koppa

  Reply
  1. vaijanath hiremath

   ಮಾನ್ಯರೆ, ಇಲ್ಲಿ 1ವಿಚಾರ ಹೇಳಬೇಕಾದುದೇನೆಂದರೆ ಸಂಘ ಪರಿವಾರದ ಹಿನ್ನೆಲೆ ಯಿರುವ ಈ ಪತ್ರಿಕೆ ಶಿಸ್ತು, ಸಂಯಮ ವೆಂದೆಲ್ಲಾ ಬೊಗಳೆ ಬಿಡುತ್ತಿದ್ದ ಚೆಡ್ಡಿಗಳಿಗೆ ಚೆಡ್ಡಿಗಳು ಬಿಚ್ಚುವ ಬಾಲ ಹೇಗಿರುತ್ತೆ ಅನ್ನೋದಿಕ್ಕೆ ಇದಕ್ಕಿಂತ ಬೇರೆ ಉದಾ. ಬೇಕೇ? ಯಡ್ಡಿ ಕೂಡಾ ಇಂತಹ ಭಟ್ಟಂಗಿಗಳಿಗೆ ಮತ್ತು ಬಿದ್ದರೆ ಕಾಲು ಎದ್ದರೆ ಜುಟ್ಟು ಅನ್ನೋ ಥರಾ ವರ್ತಿಸೋ ಈ ಎಡಬಿಡಂಗಿಗಳಿಗೆ ಪಾಠ ಕಲಿಸಬೇಕು ಎಂದರೆ ಇಂತಹ ಪತ್ರಿಕೆಯನ್ನು ನಿರ್ನಾಮ ಮಾಡಬೇಕು ಇಲ್ಲವೇ ಯಡ್ಡಿಯಂತಹ ಋಣ ಭಾದೆಯಿಂದ ನರಳುವರಿಗೆ ತಕ್ಕಪಾಠವನ್ನಾದರೂ ಕಲಿಸಬೇಕು ಅಂದಾಗ ಮಾತ್ರ ಚೆಡ್ಡಿಗಳು ಬಾಲ ಬಿಚ್ಚುವುದು ಕಡಿಮೆಯಾದಿತು…!

   Reply
   1. ಲಡಾಯಿ ಬಸು

    vaijanath hiremath ನೀವು ಅರಿತುಕೊಂಡ ಸತ್ಯ ನಿಮಗೆ ದಾರಿದೀಪವಾಗಲಿ

    Reply
 2. Anonymous

  ಒಂದು ವೇಳೆ ಕರಾವಳಿ ಅಲೆಗೂ ಜಾಹೀರಾತು ನೀಡಿದ್ದರೆ ಇದೆಲ್ಲ ಹೊರಗೆ ಬರ್ತಿತ್ತಾ? ಸೀತಾರಾಮ್ ಅವರು ಶ್ರಮವಹಿಸಿ ಟೆಹೆಲ್ಕಾದ ವರೆಗೂ ಲೇಖನ ಕಳಿಸ್ತಾಇದ್ರಾ??

  Reply
 3. Ananda Prasad

  ಕರಾವಳಿ ಅಲೆಗೆ ಜಾಹೀರಾತು ನೀಡಿದ್ದರೂ ಈ ವಿಷಯ ಹೊರಗೆ ಬರ್ತಿತ್ತು ಏಕೆಂದರೆ ಕರಾವಳಿ ಅಲೆ ಜಾಹೀರಾತಿಗಾಗಿ ಜೊಲ್ಲು ಸುರಿಸುವ ಪತ್ರಿಕೆಯಲ್ಲವೆಂಬುದು ಅದರ ನಿಲುವನ್ನು ನೋಡಿದಾಗ ಗೊತ್ತಾಗುತ್ತದೆ. ಈ ಪತ್ರಿಕೆಯು ಯಾವಾಗಲೂ ಜನಪರ ನಿಲುವನ್ನು ಕಾಪಾಡಿಕೊಂಡು ಬಂದಿದೆ.

  Reply
 4. Pingback: ಯಾಕ್ರೀ, ಎಷ್ಟೊಂದು ಜಾಹಿರಾತು ನೀಡಿದ್ದೇವೆ, ಇಷ್ಟೇನಾ ಸುದ್ದಿ ನಮ್ಮದು? « ವರ್ತಮಾನ – Vartamaana

Leave a Reply

Your email address will not be published.