ಪ್ರಗತಿಪರರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಪಾಸ್ ಪೋರ್ಟ್ ಬೇಕಾ?

ಭೂಮಿ ಬಾನು

“ನೀವು ಉತ್ತರ ಕೊಡ್ರಿ. ನೀವ್ಯಾಕೆ ಇಲ್ಲಿಗೆ ಬಂದ್ರಿ. ನಾನೂರು ಕಿಲೋಮೀಟರ್ ದೂರದಿಂದ ಇಲ್ಲಿಗೆ ಬಂದು ಇಲ್ಲಿಯ ಸ್ಥಳೀಯರ ಭಾವನೆ ಕೆರಳಿಸ್ತೀರಾ…?”

“ನೀವು ಸುಮ್ಮನೆ, ಎಸಿ ಯವರಿಗೆ ಮನವಿ ಕೊಟ್ರಲ್ಲಾ. ಅಷ್ಟು ಸಾಕು. ಮತ್ತೇಕೆ ಇಲ್ಲಿಗೆ ಬಂದಿರಿ…?”

“ನಾನೂ ಈ ಸ್ಟೇಷನ್ ಗೆ ಹೊಸಬ. ನನಗೂ ಮಡೆಸ್ನಾನ ಅಂದರೆ ಗೊತ್ತಿರಲಿಲ್ಲ. ನಾನು ಒಂದು ಗಂಟೆ ನಿಂತು ನೋಡಿದೆ. ಅಲ್ಲಿ ಅವರು ಅವರ ಇಚ್ಛೆಯಂತೆ ಹಾಗೆ ಮಾಡ್ತಾರೆ. ಯಾರ ಒತ್ತಾಯವಿಲ್ಲ. ಎಲ್ಲಾ ಜಾತಿಯವರೂ ಇದ್ದಾರೆ. ಸರಕಾರ, ಪೊಲೀಸ್ ಏನಾದ್ರು ಬಲವಂತದಿಂದ ಹಾಗೆ ಮಾಡಿಸುತ್ತಿದೆಯಾ..?”

“ಇದು ಪೊಲೀಸ್ ಸ್ಟೇಷನ್. ನಿಮ್ಮಪ್ಪನ ಮನೆ ಅಲ್ಲ…”

ಬುಧವಾರ ಮಧ್ಯಾಹ್ನ ಸಮಯ ಸುದ್ದಿ ವಾಹಿನಿಯಲ್ಲಿ ಬಿತ್ತರವಾದ ಸುದ್ದಿಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅಧಿಕಾರಿ ಹಲ್ಲೆಗೊಳಗಾಗ ಕೆ.ಎಸ್ ಶಿವರಾಂ ಮತ್ತಿತತರೊಂದಿಗೆ ಮಾತನಾಡುತ್ತ ಕೇಳಿಬಂದ ವಾಕ್ಯಗಳಿವು. ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಮುಖಂಡರಾದ ಶಿವರಾಂ ಈಗಾಗಲೇ ಮಡೆಸ್ನಾನ ಆಚರಣೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ್ದರು. ನ್ಯಾಯಾಲಯದಲ್ಲಿ ಈ ಪದ್ಧತಿ ಆಚರಣೆಯನ್ನು ಪ್ರಶ್ನಿಸುವ ಉದ್ದೇಶದಿಂದ ಪ್ರತ್ಯಕ್ಷವಾಗಿ ದೇವಾಲಯದಲ್ಲಿ ನಡೆಯುವ ಆಚರಣೆ ಬಗ್ಗೆ ತಿಳಿದುಕೊಳ್ಳಲು ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.

ದೇವಾಲಯ ಪ್ರವೇಶಕ್ಕೆ ನಿರ್ಬಂಧವಿಲ್ಲ. ಪ್ರವೇಶ ದ್ವಾರದ ಹತ್ತಿರ ಅವರು ತಮ್ಮನ್ನು ಮಾತನಾಡಿಸಿದ ಸುದ್ದಿ ವಾಹಿನಿ ವರದಿಗಾರರಿಗೆ ಬೈಟ್ ಕೊಡುತ್ತಿರುವಾಗ ಏಳೆಂಟು ಜನ ಅವರ ಮೇಲೆ ಎರಗಿದರು. ಹಿಗ್ಗಾ ಮುಗ್ಗಾ ಥಳಿಸಿದರು. ಒಬ್ಬ ಮಹಾಶಯನಂತೂ ಶಿವರಾಂ ಅವರ ಮುಖಕ್ಕೆ ವಸ್ತ್ರವನ್ನು ಮುಚ್ಚಿ ಅವರ ಮೇಲೆ ದಾಳಿಗೆ ಇಳಿಯುತ್ತಾನೆ.

ಈ ದಾಳಿ ಕೆಲವೇ ಕ್ಷಣಗಳಲ್ಲಿ ಸುದ್ದಿಯಾಯಿತು. ಪ್ರತಿಕ್ರಿಯೆಗಳು ವ್ಯಕ್ತವಾದವು. ಶಿವರಾಂ ಮತ್ತವರ ಸ್ನೇಹಿತರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅಲ್ಲಿದ್ದ ಅಧಿಕಾರಿ ದಾಳಿಗೆ ಒಳಗಾದವರನ್ನೇ ಹೀಯಾಳಿಸಿ ಮಾತನಾಡಿದ್ದೂ ಜಗಜ್ಜಾಹೀರಾಗಿದೆ. ಈ ರಾಜ್ಯದ ಗೃಹಮಂತ್ರಿಗೆ ಒಂದಿಷ್ಟು ಕಾನೂನು ಪ್ರಜ್ಞೆ ಇದ್ದಿದ್ದರೆ ಆ ಅಧಿಕಾರಿ ಈ ಹೊತ್ತಿಗೆ ಅಮಾನತ್ತಾಗಬೇಕಿತ್ತು. ದಾಳಿ ಮಾಡಿದವರನ್ನು ಹಿಡಿಯದೆ, ದೂರು ಕೊಟ್ಟು ರಕ್ಷಣೆ ಕೋರಲು ಬಂದವರನ್ನು ಹೀಗೆ ನಡೆಸಿಕೊಳ್ಳುವುದಾದರೆ, ರಾಜ್ಯದ ಜನತೆ ಅದ್ಯಾವ ಧೈರ್ಯದ ಮೇಲೆ ಪೊಲೀಸ್ ವ್ಯವಸ್ಥೆಗೆ ವಿಶ್ವಾಸ ಇಡಬೇಕು? ಈ ಪೊಲೀಸಪ್ಪ ಹೇಳುವುದನ್ನು ನೋಡಿದರೆ, ಸುಬ್ರಹ್ಮಣ್ಯಕ್ಕೆ ಹೋಗುವ ಯಾವುದೇ ಪ್ರಗತಿಪರ ಚಿಂತಕರಿಗೆ ಪಾಸ್ ಪೋರ್ಟ್ ಬೇಕು, ಪೊಲೀಸರ ವಿಶೇಷ ಅನುಮತಿ ಬೇಕು.

ಮಡೆಸ್ನಾನ (ಎಂಜಲು ಸ್ನಾನ) ಅವಮಾನಕರ. ಪದ್ಧತಿ ಆಚರಣೆ ನಡೆಸುವವರು ಅವರು ಸ್ವ ಇಚ್ಚೆಯಿಂದಲೇ ಮಾಡುತ್ತಿರಬಹುದು. ಕೆಲ ವರ್ಷಗಳ ಹಿಂದೆ ಬೆತ್ತಲೆ ಸೇವೆ ಮಾಡುತ್ತಿದ್ದವರೂ ಇಚ್ಚೆಯಿಂದಲೇ ಮಾಡುತ್ತಿದ್ದರು! ಹಾಗಂತ ಅಂತಹದೊಂದು ಅನಿಷ್ಟ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಬೇಕಾ? ಮತ್ತೊಬ್ಬನ ಎಂಜಲ ಮೇಲೆ ಉರುಳಾಡುವುದೆಂದರೆ ಅದು ಅಸಹ್ಯ, ಅವಮಾನಕರ ಎಂದು ಗ್ರಹಿಸದಷ್ಟು ಮೂಢರೇ ನಾವು? ಮೊದಲು ಬ್ರಾಹ್ಮಣರು ಉಂಡೇಳುತ್ತಾರೆ. ನಂತರ ಬ್ರಾಹ್ಮಣರನ್ನು ‘ಮೊದಲುಗೊಂಡು’ ಇತರರು ಅವರು (ಬ್ರಾಹ್ಮಣರು) ಉಂಡ ಎಲೆಗಳ ಮೇಲೆ ಉರುಳುತ್ತಾರೆ. ಅನೇಕರು ಈ ವಿಚಾರವಾಗಿ ವಾದ ಮಂಡಿಸುವಾಗ ಅನಗತ್ಯ ಗೊಂದಲ ಸೃಷ್ಟಿಸುತ್ತಾರೆ. ಈ ಪದ್ಧತಿ ಪ್ರಕಾರ ಕೇವಲ ದಲಿತರು ಸೇವೆ ಮಾಡುವುದಿಲ್ಲ. ಬ್ರಾಹ್ಮಣರೂ ಮಾಡುತ್ತಾರೆ. ಹಾಗಾಗಿ ಇದು ದಲಿತ, ಹಿಂದುಳಿದವರನ್ನು ಶೋಷಿಸುವ ಕೃತ್ಯ ಅಲ್ಲ ಎಂದು ವಾದಿಸುತ್ತಾರೆ. ಬ್ರಾಹ್ಮಣರೂ ಸೇವೆ ಮಾಡುತ್ತಾರೆ ಎಂದಾಕ್ಷಣ ಉಳಿದವರಿಗೆ ಅದು ಅವಮಾನವಲ್ಲ ಎಂದು ಗ್ರಹಿಸಬೇಕೆ?

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಅಲ್ಲಿ ಬ್ರಾಹ್ಮಣರು ಉಂಡೆಲೆಗಳ ಮೇಲೆ ಬ್ರಾಹ್ಮಣರೂ ಸೇರಿದಂತೆ ಇತರರು ಉರುಳುತ್ತಾರೆ. ಇದೇ ಬ್ರಾಹ್ಮಣರು, ದಲಿತ ಅಥವಾ ಹಿಂದುಳಿದವರು ಉಂಡೆದ್ದ ಎಲೆಗಳ ಮೇಲೆ ಉರುಳಲು ಸಿದ್ಧರೇ?

ಸುಬ್ರಹ್ಮಣ್ಯದ ವರದಿಗಾರರೊಬ್ಬರ ಪ್ರಕಾರ ಶಿವರಾಂ ಅವರ ಮೇಲೆ ದಾಳಿ ಮಾಡಿದವರು ದಲಿತರಂತೆ. ಇದನ್ನೂ ಒಂದು ತಂತ್ರವಾಗಿಯೇ ನೋಡಬೇಕು. ದಾಳಿಯಂತಹ ದೈಹಿಕ ಶ್ರಮ ಬಯಸುವ ಕೆಲಸಗಳಿಗೆ ಬೇಕಾಗುವವರು ಅವರೇ. ಪಾಪ ಅವರಿಗೆ ಅದರಿಂದ ಉಂಟಾಗುವ ಕಾನೂನು ಪರಿಣಾಮಗಳ ಅರಿವು ಇರುವುದಿಲ್ಲ. ಅವರ ಮುಗ್ಧತೆ, ಅಮಾಯಕತೆಯ ಲಾಭ ಪಡೆಯುವವರು ಬುದ್ದಿವಂತರು.

14 thoughts on “ಪ್ರಗತಿಪರರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಪಾಸ್ ಪೋರ್ಟ್ ಬೇಕಾ?

  1. ಪೃಥ್ವಿ

    ನಿಮ್ಮಂಥ ಅತಿ ಬುದ್ಧಿವಂತರಿಗೆ ಏನೂ ಹೇಳಿದರೂ ಪ್ರಯೋಜನವಾಗದು..ಮೊದಲೇ ಹಳದಿ ಕನ್ನಡಕದವರು, ಹಿಂದು ಧರ್ಮದಲ್ಲಿ ಮಾಡಿದ್ದೆಲ್ಲ ನಿಮಗೆ ಹಳದಿಯೇ ಕಾಣಬಹುದು ಬಿಡಿ..ನಿಮ್ಮ ಬುರುಡೆ ಕೇಳೋಕೆ ನಿಮ್ಮಂಥ ಬುದ್ಧಿವಂತರೇ ಆಗಬೇಕಷ್ಟೇ.

    Reply
    1. ಮಂಜುನಾಥ್ ಸೋನು

      ಸ್ವಾಮಿ ಯಾವ ಧರ್ಮದಲ್ಲಿಯಾದ್ರು ಕೆಲವ್ರು ಉಂಡ ಎಂಜಲ ಎಲೆ ಮೇಲೆ ಉರುಳಾಡೋದು ಸರಿ ಅನ್ನೋ ಪದ್ದತಿ ಇದೆ ಅಂತ ಹೇಳ್ತೀರಾ

      Reply
  2. Ananthakrishna Sharma

    ಇದಕ್ಕೆ ನೀವೆನಂತೀರಾ????????????????

    ಮನುಷ್ಯನಿಗೆ ಅವನದೇ ಆದ ಸ್ವಾತಂತ್ರ್ಯವಿದೆಯೇ??????…… ಇದೆ ಎನ್ನುವುದಾದರೆ…… ಅವರ ಭಾವನೆಗೆ ಸಂಭಂದಪಟ್ಟ ವಿಚಾರವನ್ನು ಅವರಿಗೆ ಮಾಡಲು ಬಿಡಿ. ಮಡೆ ಸ್ನಾನ ಮಾಡಬೇಡಿ, ಅದನ್ನು ಮಾಡಲು ಬಿಡುವುದಿಲ್ಲ ಎನ್ನುವುದಕ್ಕೆ ನಾವು ಯಾರು?????
    ಪ್ರಗತಿಪರರು ಎಂಬ ಹಣೆಪಟ್ಟಿ ಹಾಕಿಕೊಂಡು…. ನಾನು ಇದನ್ನು ಮಾಡಲು ಬಿಡುವುದಿಲ್ಲ….. ಅದನ್ನು ಮಾಡಲು ಬಿಡುವುದಿಲ್ಲ ಎನ್ನುವುದಕ್ಕಿಂತ….. ನಾನು ಯಾರಿಗೂ ಏನನ್ನೂ ಭೋದನೆ ಮಾಡುವುದಕ್ಕೆ ಹೋಗುವುದಿಲ್ಲ…. ಯಾರಿಗೆ ಯಾವುದು ಸರಿ ಎನಿಸುವುದೋ ಅದನ್ನು ಮಾಡಲಿ ಅಂತ ಸುಮ್ಮನಿರಿ….
    ಸಮಾಜಕ್ಕೇ ಕಂಠಕವಾಗಿರುವ….. ಮಧ್ಯಪಾನ, ಧೂಮ್ರಪಾನ, ವೇಶ್ಯಾವಾಟಿಕೆ, ಲೈವ್ ಬ್ಯಾಂಡ್ ಇವೆಲ್ಲವನ್ನೂ ತಡೆಯುವ ಪ್ರಯತ್ನ ಮೊದಲು ನಡೆಯಲಿ. ಪ್ರಗತಿಪರರು ಎಂಬ ಸೋಗಿನಿಂದ ಏನನ್ನೂ ಸಧಿಸಲು ಸಾಧ್ಯವಿಲ್ಲ.
    ಇದಕ್ಕೆ ನೀವೆನಂತೀರಾ????????????????

    Reply
  3. Mahesh

    ಒಬ್ಬ ಮನುಷ್ಯನಿಗೆ ಅವನದೇ ಆದ ನಂಬಿಕೆಗಳು ಇರುತ್ತವೆ. ಅದರಿಂದಲೇ ಆತ ಬದುಕುತ್ತಾನೆ. ಆದರೆ ನಂಬಿಕೆಯೇ ಇಲ್ಲದ ಮಂದಿಗೆ ಇದೆಲ್ಲಾ ಮೌಡ್ಯವಾಗಿ ಕಾಣುತ್ತದೆ.ಹಳದಿ ಕಣ್ಣಿನ ಮಂದಿಗೆ ಅದೇ ಕಾಣುವುದು. ಒಂದು ಲಕ್ಷ ಜನ ಒಂದು ವಿಚಾರವನ್ನು ಗಟ್ಟಿಯಾಗಿ ನಂಬಿರುವಾಗ ಅಲ್ಲಿ ಏಕಾಏಕಿ ಬಂದು ಅಲ್ಲಿನ ಜನರನ್ನೇ ಅವಮಾನಿಸುವುದಲ್ಲ , ಅದಕ್ಕೂ ಒಂದು ನಿಯಮ ಇದೆ. ಎಲ್ಲವೂ ನಮ್ಮದೇ ಸರಿ ಎಂದು ಹೋಗುವವರಿಗೆ ಇದೇ ಆಗೋದು.

    Reply
    1. ಮಂಜುನಾಥ್

      ಅಲ್ಲಾ ಮಹೇಶ್ ರವರೇ ನಂಬಿಕೆಗಳು ಇರುತ್ತವೆ ಹಂಗಂತ ಎಲ್ಲರ ನಂಬಿಕೆಗಳನ್ನು ಬೆಂಬಲಿಸ್ತೀವಿ ಅಂತಾದ್ರೆ ನರಬಲಿ ಕೊಡೋದು ,ದೇವ್ರ ಹೆಸರಿನಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಸೂಳೆಯರನ್ನಾಗಿಸೋದು, ಬೆತ್ತಲೆ ಸೇವೆ ಮಾಡೋದು ಇವೇಲ್ಲವೂ ಕೂಡ ಜನರ ನಂಬಿಕೆಗಳೇ ಅದನ್ನೂ ಸರಿ ಆಂತ ನೀವು ಒಪ್ಕೋತೀರಾ,?
      ಯಾರೋ ಮಾಡಿದ ಆಚರಣೆಗಳನ್ನು ಸಮರ್ಥಿಸಿಕೊಳ್ಳೋದಕ್ಕೂ ಮುಂಚೆ ಸ್ವಲ್ಪ ಯೋಚನೆ ಮಾಡೋದು ಒಳ್ಳೆಯದು ಅನ್ಸುತ್ತೆ

      Reply
  4. Vasanth

    To,
    All of the three who commented to this article.

    Sir

    The same thing is not applicable to all. For example in Kappadi the govt. has banned the animal sacrifices. The tradition is very old. Why government has banned this. It has strong cultural root. Why. Police there in the uniform have stopped this. Why they can’t stop there in Subramanya.
    Muslims are not allowed to ear beef. Cow slaughter in Karnataka is banned. Why they have been eating beef for centuries. Why you don’t allow them to consume. Is it a sin. If this is uncivilized then the maddesnanna is also uncivilized. it just not a matter of faith. It is maintaining stereotype of the society.
    We should stop this nonsense.

    Reply
  5. ಹರೀಶ್

    ನನ್ನ ಪ್ರಕಾರ ಯಾವುದೇ ನೆಲದಲ್ಲಾಗಲಿ, ಉರುಳಾಡುವುದು ಅವಮಾನ.
    http://www.thehindu.com/news/cities/Mangalore/article2333216.ece
    ಸೋನಿಯಾ ಆರೋಗ್ಯಕ್ಕಾಗಿ ಜನಾರ್ಧನ ಪೂಜಾರಿ ನಡೆದುಕೊಂಡಿದ್ದು ನನಗೆ ಅಸಹ್ಯ, ಅವಮಾನಕರ ಎಂದೆನಿಸಿತು. ಆದರೆ ಅದನ್ನು ವಿರೋಧಿಸುವ ಅಧಿಕಾರ ನನಗಿಲ್ಲ. ಸಾಧ್ಯವಾದರೆ ತಿಳಿಹೇಳಬಹುದಷ್ಟೆ. ಯಾಕೆಂದರೆ ಅವರ ಮನಸ್ಸಿನಲ್ಲಿ ಅವರದೇ ಆದ ನಂಬಿಕೆಗಳಿರುತ್ತವೆ.

    ತಿರುಪತಿಯ ಕೇಶಮಂಡನವೂ ನನ್ನ ಪ್ರಕಾರ ಅವಮಾನಕರ. ನಾನು ಅದನ್ನು ಖಂಡಿತಾ ಮಾಡಲಾರೆ. ಆದರೆ ತಿರುಪತಿಯ ಭಕ್ತರನ್ನು ನಾನು ವಿರೋಧಿಸುವುದು ಸರಿಯಲ್ಲ.

    ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು ಒಂಡ ಎಲೆಯನ್ನು ದೇವರ ಪ್ರಸಾದವೆಂಬ ಪವಿತ್ರ ಭಾವನೆಯಿಂದ ಅದರ ಮೇಲೆ ಉರುಳುತ್ತಾರೆ. ನಂತರ ಸ್ನಾನವೂ ಮಾಡುತ್ತಾರೆ, ಹಾಗಾಗಿ ಅದು ಹಿಂಸೆಯಲ್ಲ. ಅದರಿಂದ ಅವರಿಗೆ ಮಾನಸಿಕ ಸಂತೃಪ್ತಿ ಸಿಗುತ್ತದೆ. ಅದನ್ನು ನೀವು ನಿಷೇಧಿಸಿದರೆ, ಹರಕೆ ಹೇಳಿಕೊಂಡವರು ಅದನ್ನು ತೀರಿಸಲಾಗಲಿಲ್ಲವೆಂಬ ಕೊರಗಿನಂದ ಮಾನಸಿಕವಾಗಿ ದುರ್ಬಲರಾಗುವುದು ಭಾವನಾರಹಿತರಿಗೆ ಅರ್ಥವಾಗುವುದಿಲ್ಲ.

    ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಮಾಡುವುದನ್ನು ವಿರೋಧಿಸೋಣ. ದಲಿತರಿಗೆ ಅವರ ಜೊತೆ ಕುಳಿತುಕೊಳ್ಳುವ ಹಕ್ಕನ್ನು ನೀಡಬೇಕೆಂದು ಒತ್ತಯಿಸೋಣ. ಮಡೆಸ್ನಾನದ ಹೇರಿಕೆಯಿದ್ದಲ್ಲಿ ವಿರೋಧಿಸೋಣ. ಇಲ್ಲವೆಂದರೆ ಶಾಸಕರನ್ನು ಮಾರುವ, ಕ್ರಿಕೆಟಿಗರನ್ನು ಹರಾಜು ಹಾಕುವ ಅವಮಾನಗಳನ್ನು ಮೊದಲು ವಿರೋಧಿಸಿ ನಂತರ ಸುಬ್ರಮ್ಹಣ್ಯದಲ್ಲಿ ಜಾಗೃತಿ ಮೂಡಿಸಿ.

    Reply
  6. Ivan Dilva

    ಮಡೆಸ್ನಾನ ಪರಿವೀಕ್ಷಣೆಗೆ ಬಂದ ಶಿವರಾಮು ರವರ ಮೇಲೆ ಹಲ್ಲೆ ಮಾಡಿದ ಆರು ಮಂದಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಹಾಗೆ ಬಿಡುಗಡೆಯಾಗಿ ಬಂದ ಆರು ಜನರನ್ನು ಸುಬ್ರಮಣ್ಯದ ಬೀದಿಗಳಲ್ಲಿ ಕೊಂಬು ಕಹಳೆ ವಾದ್ಯಗಳೊಂದಿಗೆ ಸುಬ್ರಮಣ್ಯ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದು ಮುಖ್ಯ ಅರ್ಚಕ ( ಸರ್ಕಾರದ ಸಂಬಳ ಪಡೆಯುತ್ತಿರುವ) ಜೋಗಿತ್ತಾಯ ರು ಶಾಲು ಹೊದಿಸಿ ಸನ್ಮಾನ ಮಾಡಿದರು ಹಾಗು ಪ್ರಸಾದ ನೀಡಿದರು ………….
    ಹೀಗೆ …. ಶಿವಳ್ಳಿ ಬ್ರಾಹ್ಮಣರು ತಾವು ಉಂಡು ಎಸೆದ ಎಂಜಲೆಲೆಯ ಮೇಲೆ ಹೊರಳಾಡಿದ ಹಿಂದುಳಿದ ಜಾತಿಯವರನ್ನು ನೋಡಲು ಬಂದ ದಲಿತರಾದ ಶಿವರಾಮುರವರನ್ನು ಥಳಿಸಿದ ಹಿಂದುಳಿದ ಜಾತಿಗಳಾದ ಮಲೆಕುಡಿಯರು ಮತ್ತು ಅಲ್ಲಿನ ಇತರ ಜನಾಂಗದವರನ್ನು ಈ ರೀತಿ ಸನ್ಮಾನಿಸಿ ಸರಕಾರಕ್ಕೆ ಮತ್ತು ಪ್ರಜ್ನಾವಂಥರಿಗೆ ಸಡ್ಡು ಹೊಡೆದರು , ಸಾಲದೆಂಬಂತೆ ಸ್ಥಳೀಯ ಆಚರಣೆಗಳ ಬಗ್ಗೆ ಅಪಪ್ರಚಾರ ಮಾಡುವ ಬುದ್ದಿಜೀವಿಗಳ ಹುನ್ನಾರದ ವಿರುದ್ಧ ಒಂದು ದಿನದ ಸುಬ್ರಮಣ್ಯ ಬಂದ್ ಆಚರಿಸಲು ಕರೆ ನೀಡಿದ್ದಾರೆ. ಮತ್ತೊಂದು ಬ್ರೆಕಿಂಗ್ ನ್ಯೂಸ್ …. ಈ ಎಲ್ಲಾ ವಿಧ್ಯಮಾನಗಳ ಬಗ್ಗೆ ಪೇಜಾವರ ಶ್ರೀಗಳು ‘ತಟಸ್ಥ ‘ ನಿಲುವು ತಳೆದಿದ್ದಾರೆ !!!!!!!!!

    Reply
  7. ಸಂತೋಷ್

    “ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಅಲ್ಲಿ ಬ್ರಾಹ್ಮಣರು ಉಂಡೆಲೆಗಳ ಮೇಲೆ ಬ್ರಾಹ್ಮಣರೂ ಸೇರಿದಂತೆ ಇತರರು ಉರುಳುತ್ತಾರೆ. ಇದೇ ಬ್ರಾಹ್ಮಣರು, ದಲಿತ ಅಥವಾ ಹಿಂದುಳಿದವರು ಉಂಡೆದ್ದ ಎಲೆಗಳ ಮೇಲೆ ಉರುಳಲು ಸಿದ್ಧರೇ?”

    ಇಂದಿನ ಕನ್ನಡ ಪ್ರಭ ನೋಡಿ ಸಾರ‍್, ಸುಮ್ಮನೆ ಏಕೆ ಕನಿಷ್ಟ ಜ್ಞಾನವನ್ನು ಪ್ರದರ್ಶಿಸುತ್ತೀರಿ.

    Reply
    1. vithalrao kulkarni malkhed

      ನನ್ನ ಪ್ರಕಾರ ಯಾರು ಯಾರ ಎಂಜಲ ಎಳೆಯ ಮೇಲೆ ಉರುಳಾಡುವ ಪ್ರಮೇಯ ವೆ ಇಲ್ಲ…
      ಇದನ್ನು ಸಾಮರಸ್ಯ ಭಾವ ದಿಂದ ತಿಳಿಸಿ ಹೇಳಿ ಹೀಗೆ ಲ್ಲ ಮಾಡುವದು ಅನ ಹೈಜೆನಿಕ್ ಎಂದು ತಿಳಿಸಿ ಹೇಳಬೇಕು…ಉತರ ಕರ್ನಾಟಕ ದಲ್ಲಿ ಒಂದು ಕಾಲಕ್ಕೆ ಪ್ರಖ್ಯಾತ ವಾಗಿದ್ದ ” ಸಿಡಿ “ಆಡುವದು ಜನರು ಕ್ರಮೇಣ ಬಂದು ಮಾಡಿಲ್ಲವೇ…? ಅದು ಯಾರಿಗಾದರು ಗೊತ್ತಾಯಿತಾ..ಹಾಗೆ ಇದನ್ನು ಕ್ರಮೇಣ ಬಂದ ಮಾಡಲು ವಿಚಾರವಂತರು ಸಹಕರಿಸಬೇಕು..ಅದು ಬಿಟ್ಟು ಟಿವಿ ಕ್ಯಾಮೆರ ಮಧ್ಯಮ ಗಳನ್ನೂ ಕರೆದುಕೊಂಡು ಹೋಗಿ ಹೆಸರು ಗಳಿಸಲು ಒಂದು ಸಾಧನ ವನ್ನಾಗಿ ಮಾಡಿಕೊಳ್ಳಬಾರದು..

      Reply
  8. kiran gajanur

    ಆಚರಣೆಯ ಹೆಸರಿನಲ್ಲಿ ನಡೆಯುವ ಮೌದ್ಯಥೆಯನ್ನು ಒಂದು ಸಮಾಜ ಖಂಡಿಸಲೇಬೇಕು ಭಾರತದಲ್ಲಿ ಸಾವಿರಾರು ಆಚರಣೆಗಳಿವೆ ಆದರೆ ಮಾಡೆ ಸ್ನಾನ ಎನ್ನುವುದು ಮಾನವ ವಿರೋಧಿ ನಡವಳಿಕೆ ಅದನ್ನು ಯಾವುದೇ ಜಾತಿ ಮಾಡಲಿ ಅದು ಖಂಡನಿಯವೇ ಬ್ರಾಹ್ಮಣ ರಲ್ಲದೆ ಇತರೆ ಹಲವು ಜಾತಿಗಳು ಇ ಮೌದ್ಯ ಪಾಲಿಸುತ್ತಿವೆ ಎಂಬುದು ಬ್ರಾಹ್ಮಣರು ಆಚರಿಸಿದ ಅನಾಗರಿಕತೆಗೆ ಸಮರ್ಥನೆಯಗಲಾರದು ಕನ್ನದಪ್ರಭದ ಭಟ್ಟರು ಅ ಅರ್ಥದಲ್ಲಿ ಹೇಳಿದ್ದಾರೆ. ಮಾಡೆ ಸ್ನಾನ ದಂಥಹ ಮೌದ್ಯತೆ ಯಾವ ಜಾತಿಯೇ ಮಾಡಲಿ ಅದು ಅನಾಗರಿಕವೇ

    Reply
  9. kiran gajanur

    ಆಚರಣೆಯ ಹೆಸರಿನಲ್ಲಿ ನಡೆಯುವ ಮೌದ್ಯಥೆಯನ್ನು ಒಂದು ಸಮಾಜ ಖಂಡಿಸಲೇಬೇಕು ಭಾರತದಲ್ಲಿ ಸಾವಿರಾರು ಆಚರಣೆಗಳಿವೆ ಆದರೆ ಮಾಡೆ ಸ್ನಾನ ಎನ್ನುವುದು ಮಾನವ ವಿರೋಧಿ ನಡವಳಿಕೆ ಅದನ್ನು ಯಾವುದೇ ಜಾತಿ ಮಾಡಲಿ ಅದು ಖಂಡನಿಯವೇ ಬ್ರಾಹ್ಮಣ ರಲ್ಲದೆ ಇತರೆ ಹಲವು ಜಾತಿಗಳು ಇ ಮೌದ್ಯ ಪಾಲಿಸುತ್ತಿವೆ ಎಂಬುದು ಬ್ರಾಹ್ಮಣರು ಆಚರಿಸಿದ ಅನಾಗರಿಕತೆಗೆ ಸಮರ್ಥನೆಯಗಲಾರದು ಕನ್ನದಪ್ರಭದ ಭಟ್ಟರು ಅ ಅರ್ಥದಲ್ಲಿ ಹೇಳಿದ್ದಾರೆ. ಮಾಡೆ ಸ್ನಾನ ದಂಥಹ ಮೌದ್ಯತೆ ಯಾವ ಜಾತಿಯೇ ಮಾಡಲಿ ಅದು ಅನಾ ಗರಿಕವೇ

    Reply
  10. Jayapal H R

    The whole idea of made made snana is deplorable. This is the time state should ban such things. Those who thrashed Shivaramu should be punished as per laws and Sub inspector of Subramanya should be suspended pending an inquiry..

    Those who support Madesnanana does not have an iota of sensitivity. They are nothing but caste minded, chaplianistic and chauvnistic fellows..I think this is a tip of an ice berg in so called Hindutva hegemony..

    Reply

Leave a Reply

Your email address will not be published. Required fields are marked *