Daily Archives: December 26, 2011

ಬಂಗಾರಪ್ಪ ನಿಧನ: ತಣ್ಣಗಾದ ತಹತಹ

– ವಿ.ವಿ.ಸಾಗರ್

ರಾಜ್ಯ ರಾಜಕಾರಣದಲ್ಲಿ ಸಮಾಜವಾದದ ನೆಲೆಯಿಂದ ರಾಜಕಾರಣ ಆರಂಭಿಸಿ ಗಟ್ಟಿಯಾಗಿ ಕಾಲೂರಿದ್ದ ಒಂದೊಂದೇ ಕೊಂಡಿಗಳು ಕಳಚುತ್ತಿವೆ. ಕೆಲವೇ ದಿನಗಳ ಹಿಂದೆ ಬುದ್ಧಪ್ರಜ್ಞೆಯ ಕೆ.ಎಚ್.ರಂಗನಾಥ್, ಈಗ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಇನ್ನಿಲ್ಲ.

ಬಂಗಾರಪ್ಪ ಎಂಬ ಹೆಸರೇ ರಾಜ್ಯ ರಾಜಕಾರಣದಲ್ಲಿ ಒಂದು ರೀತಿಯ ಆಕರ್ಷಣೆ, ತಲ್ಲಣ, ಗೊಂದಲ ಎಲ್ಲವೂ ಆಗಿತ್ತು. ಅದು ವಯಕ್ತಿಕ ಲಾಭಕ್ಕೊ ಅಥವಾ ಬೇರ್ಯಾವ ಕಾರಣಕ್ಕೊ ತಮ್ಮ ರಾಜಕೀಯ ಬದುಕನ್ನು ನಿರಂತರ ಪ್ರಯೋಗಕ್ಕೆ ಒಡ್ಡುತ್ತಲೇ ಒಂದು ಶಕ್ತಿಯಾಗಿ ಉಳಿದಿದ್ದು, ವರ್ಣ ರಂಜಿತ ರಾಜಕಾರಣಿ ಎಂದೆಲ್ಲಾ ಬಿರುದು ಗಳಿಸಿದ್ದು, ಕೆಲವೇ ವರ್ಷ ಮಾತ್ರ ಅಧಿಕಾರದಲ್ಲಿದ್ದರೂ ನಿರಂತರವಾಗಿ ಅಧಿಕಾರ ಗದ್ದುಗೆಯಲ್ಲಿ ಕುಳಿತವರು ಕೂಡ ಗಳಿಸಲಾರದಷ್ಟು ಜನಪ್ರಿಯತೆ ಪಡೆದಿದ್ದು, ಮಾಸ್ ಲೀಡರ್ ಎನಿಸಿಕೊಂಡಿದ್ದು ಎಲ್ಲವೂ ಅವರ ರಾಜಕೀಯ ಬದುಕಿನ ಅಕೌಂಟಿನ ಖಾತೆಯಲ್ಲಿ ಠೇವಣಿಯಾಗಿರುವುದು ಗೋಚರಿಸುತ್ತದೆ.

ನಮ್ಮಂತಹ ಕಿರಿಯರಲ್ಲಿ ರಾಜಕೀಯ ಪ್ರಜ್ಞೆ ಮೂಡುವ ಹೊತ್ತಿಗಾಗಲೇ ಬಂಗಾರಪ್ಪ ಅವರ ರಾಜಕೀಯ ದಿನಗಳ ವೈಭವ ಅಂತ್ಯಕ್ಕೆ ಸರಿಯುತ್ತಿತ್ತು. ಸಮಾಜವಾದಿ ನೆಲೆಯಿಂದ ರಾಜಕೀಯ ಆರಂಭಿಸಿ ಈಗ ಯಾವುದೇ ಪಕ್ಷಗಳಲ್ಲಿ ನೆಲೆಗೊಂಡಿದ್ದರೂ ಆ ರಾಜಕಾರಣಿಗಳ ಬಗ್ಗೆ ನಮ್ಮಂತವರಿಗೆ ಒಂದು ಸಣ್ಣ ಕುತೂಹಲ ಇದ್ದಿದ್ದರಿಂದ ಬಂಗಾರಪ್ಪ ಅವರ ಬಗ್ಗೆಯೂ ಕೇಳಿ ತಿಳಿದುಕೊಳ್ಳುವುದರೊಟ್ಟಿಗೆ ಅವರನ್ನು ಗಮನಿಸುವುದು ನಡೆದಿತ್ತು.

`ಎಲ್ಲಿಯೂ ನಿಲ್ಲದಿರು ಕೊನೆಯನೆಂದು ಮುಟ್ಟದಿರು’ ಎಂಬ ಕವಿವಾಣಿಯಂತೆ ಸದಾ ತಹತಹದಿಂದ ಹಾರಾಡಿದ ರಾಜಕಾರಣಿ ಇವರು. ಕಾಂಗ್ರೆಸ್ ಬಿಡುವುದು, ಸೇರುವುದು, ತನ್ನದೇ ಪಕ್ಷ ಕಟ್ಟಿದ್ದು, ಕಮಲ ಮುದ್ದಿಸಿದ್ದು, ಸೈಕಲ್ ತುಳಿದಿದ್ದು, ಅಂತ್ಯದಲ್ಲಿ ತೆನೆ ಹೊತ್ತು ನಡೆದಿದ್ದು ಎಲ್ಲವೂ ಇದಕ್ಕೆ ತಾಜಾ ಸಾಕ್ಷಿ.

ಬಹುಶಃ ಕರ್ನಾಟಕದಲ್ಲಿ ಸ್ವಂತ ಪಕ್ಷ ಕಟ್ಟಿ ಒಂದಿಷ್ಟು ಕೊಂಚ ಯಶಸ್ಸು ಗಳಿಸಿ `ಭರವಸೆ ಹುಟ್ಟಿಸಿದವರಲ್ಲಿ ಮೊದಲಿಗರು. ದೇವರಾಜ ಅರಸು ಅಂತಹ ಗಟ್ಟಿ ವ್ಯಕ್ತಿತ್ವದ ರಾಜಕಾರಣಿಗೂ ಸಿಗದ ಫಲವನ್ನು ಈ ವಿಷಯದಲ್ಲಿ ಅವರು ಪಡೆದಿದ್ದರು. ಇವರು ಕಾಂಗ್ರೆಸ್ ಬಿಟ್ಟಾಗ ಪ್ರತಿ ಸಾರಿಯೂ ಈ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಎಲ್ಲ ರಾಜಕೀಯ ಪಕ್ಷಗಳ ಸವಾಲಿನ ಎದುರು ಶಿವಮೊಗ್ಗ ಉಪ ಚುನಾವಣೆಯಲ್ಲಿ ಸೈಕಲ್ ಸವಾರಿ ಹೊರಟು ವಿಜಯ ಪತಾಕೆ ಹಾರಿಸಿದ್ದು ಎಲ್ಲವೂ ಅವರಿಗಿದ್ದ ರಾಜಕೀಯ ಶಕ್ತಿಯ ಕನ್ನಡಿ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಸಿಡಿದು ಪಕ್ಷ ಬಿಡುವ ಸಂದರ್ಭ ಎದುರಾಯಿತು. ಆ ವೇಳೆ ಸಂಪುಟ ಸಭೆಯ ನಂತರ ಅಂದು ಮಂತ್ರಿಯಾಗಿದ್ದ ವಿಶ್ವನಾಥ್(ಈಗ ಸಂಸದ) ಲೋಕಾಭಿರಾಮವಾಗಿ ಈ ವಿಷಯ ಚರ್ಚಿಸಿ ಬಂಗಾರಪ್ಪ ಅವರನ್ನು ಪಕ್ಷ ಬಿಡದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಹಿತದಷ್ಟಿಯಿಂದ ಒಳ್ಳೆಯದು ಎಂಬ ಸಲಹೆ ನೀಡುತ್ತಾರೆ.

ಆದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದಾಗ, ನೋಡಿ ನಾವೆಲ್ಲಾ ಕೇವಲ ಮಂತ್ರಿಗಳಷ್ಟೇ, ಆದರೆ ಬಂಗಾರಪ್ಪ ಜನನಾಯಕ, ಅದರಲ್ಲೂ ಹಿಂದುಳಿದ ಸಮುದಾಯವಾದ ಈಡಿಗರ ಏಕಮಾತ್ರ ನಾಯಕ ಎಂದು ಹೇಳಿದಾಗ ಅದಕ್ಕೆ ದೊಡ್ಡ ಆಕ್ಷೇಪಣೆಗಳೇ ಏಳುತ್ತವೆ. ಆದರೆ ನಿಜಕ್ಕೂ ಬಂಗಾರಪ್ಪ ಅವರನ್ನು ವಿರೋಧಿಸುತ್ತಲೇ ಬಂದಿದ್ದ ಕೆ.ಎಚ್.ರಂಗನಾಥ್ ಕೂಡ ವಿಶ್ವನಾಥ್ ಮಾತಿಗೆ ಬೆಂಬಲಿಸುತ್ತಾರೆ. ಆದರೆ ಇತರೆಯವರು ಒಪ್ಪಲು ತಯಾರಿರಲಿಲ್ಲ. ಅದರ ಫಲ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆಯುತ್ತದೆ. ಈ ವಿಷಯವನ್ನು ವಿಶ್ವನಾಥ್ ತಮ್ಮ ಆತ್ಮಕಥನ ಹಳ್ಳಿಹಕ್ಕಿಯ ಹಾಡು ಕೃತಿಯಲ್ಲಿ ದಾಖಲಿಸಿದ್ದಾರೆ. ಹಾಗೆ ನೋಡಿದರೆ ಬರೀ ಕಾಂಗ್ರೆಸ್ ಅಷ್ಟೇ ಅಲ್ಲ ಅವರ ಶಕ್ತಿಯನ್ನು ಇಡಿಯಾಗಿ ಅವರು ಕಾಲಿಟ್ಟ ಯಾವ ಪಕ್ಷವೂ ಬಳಸಿಕೊಳ್ಳಲಿಲ್ಲ.

ಇವೆಲ್ಲಾ ಅವರ ರಾಜಕೀಯ ಶಕ್ತಿಯ ನಿದರ್ಶನಗಳು. ಇದೆಲ್ಲದರ ಆಚೆ ಅವರಲ್ಲಿ ಎಂತಹ ಸಂದರ್ಭವನ್ನು ಹಾಸ್ಯದಿಂದ ತಿಳಿಗೊಳಿಸುವ ಮತ್ತೊಂದು ಮುಖವಿತ್ತು. ಭದ್ರಾವತಿಯಲ್ಲೊಮ್ಮೆ ಒಂದು ಪತ್ರಿಕೆ ಕಚೇರಿ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಭಾಷಣದ ನಂತರ ಅಲ್ಲಿನ ಪತ್ರಕರ್ತರು ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ಸಂಸದರ ನಿಧಿಯಿಂದ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಮನವಿ ಪಡೆದ ಅವರು ಅದು, ಇದು ಕೇಳುತ್ತಲೇ ‘ಬಂಗಾರಪ್ಪ ಅವರು ಒಳ್ಳೆಯವರು ಎಂದು ಬರೆಯಿರಿ, ಅನುದಾನ ಕೊಡೋಣ’ ಎಂದು ನಗುತ್ತಲೇ ಕಾರು ಹತ್ತಿ ಹೊರಟೇ ಬಿಟ್ಟರು.

ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ ನಂತರ ಪಕ್ಷ ಕಟ್ಟಲು ರಾಜ್ಯಾದ್ಯಂತ ಸೈಕಲ್ ತುಳಿಯುತ್ತಿದ್ದರು. ಈ ವೇಳೆ ಚಿತ್ರದುರ್ಗದಲ್ಲಿ ಸಭೆ ಆಯೋಜಿಸಲಾಗಿತ್ತು. ನಿಜಕ್ಕೂ ಆ ಸಭೆಗೆ ಬೆರಗಾಗುವಷ್ಟು ಜನ ಸೇರಿದ್ದರು. ವೇದಿಕೆ ಮೇಲೆ ಕೂತೇ ಇವರು ಎಲ್ಲವನ್ನು ನಿಯಂತ್ರಿಸುತ್ತಿದ್ದರು. ಜಾನಪದ ಕಲಾ ತಂಡವೊಂದು ಪ್ರದರ್ಶನ ನೀಡಿ ವೇದಿಕೆ ಇಳಿದು ಹೋಗುತ್ತಿತ್ತು. ಆಗ ಎದ್ದು ನಿಂತ ಬಂಗಾರಪ್ಪ, ಯಾರೂ ಗಲಾಟೆ ಮಾಡಬಾರದು, ಅವರು ತುಂಬಾ ಚೆನ್ನಾಗಿ ಪ್ರದರ್ಶನ ನೀಡಿದ್ದಾರೆ. ನೀವ್ಯಾರು ಸರಿಯಾಗಿ ನೋಡ್ಲಿಲ್ಲ ಎಂದು ಆ ಕಲಾ ತಂಡವನ್ನು ವೇದಿಕೆ ಕರೆದು ಮತ್ತೊಮ್ಮೆ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು.

ಕಾರ್ಯಕ್ರಮ ಆರಂಭವಾದಾಗ ಮುಖಂಡರೊಬ್ಬರು ಬಂಗಾರಪ್ಪ ಅವರನ್ನು ಯರ್ರಾಬಿರ್ರಿ ಹೊಗಳಿ ಭಾಷಣ ಬಿಡುತ್ತಿದ್ದರು. ಕ್ಷಣ ಹೊತ್ತು ಕೇಳಿಸಿಕೊಂಡ ಇವರು, ನೀವು ಮಾತನಾಡಿದ್ದು ಸಾಕು ಬನ್ನಿ ಎಂದು ವಾಪಾಸು ಕರೆದು ತಮ್ಮ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಮುಖಂಡನನ್ನು ಹೋಗಿ ನೀವು ಮಾತನಾಡಿ ಎಂದು ಕಳುಹಿಸಿದ್ದು ನೋಡಿ ನಾವು ಬಿದ್ದು, ಬಿದ್ದು ನಕ್ಕಿದ್ದೆವು.

ತಮ್ಮ ತವರಾದ ಶಿವಮೊಗ್ಗ ಸೇರಿದಂತೆ ಕರಾವಳಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇವರ ಪ್ರಭಾವದ ಗಾಢತೆ ಕಾಣಬಹುದು. ಅದಕ್ಕೆ ಜಾತಿಯ ಬೆಂಬಲವೂ ಒಂದು ಕಾರಣವಾದರೆ, ಅದರಾಚೆಗೂ ಅವರಿಗಿದ್ದ ಬಡ ಜನರೆಡೆಗಿನ ಕಾಳಜಿಯೂ ಒಂದಾಗಿತ್ತು. ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಎಂಬಂತೆ ಗುರುತಿಸಿಕೊಂಡಿದ್ದ ಬಂಗಾರಪ್ಪ ಅವರ ಸ್ಥಾನವನ್ನು ತುಂಬುವವರು ಯಾರು ? ರಾಜಕೀಯ ಬದುಕಿನ ಅಕೌಂಟಿನಲ್ಲಿ ಇಂತಹ ದೊಡ್ಡ ಠೇವಣಿಯಿದೆ. ಇದನ್ನು ಯಾರು ನಗದೀಕರಿಸಿಕೊಳ್ಳುತ್ತಾರೆ ಎಂಬುದನ್ನು ಕಾಲ ನಿರ್ಧರಿಸಬೇಕಿದೆ.

ಸಮಾಜವಾದಿ ನೆಲೆಯಿಂದ ಬಂದರೂ ಅವರ ರಾಜಕೀಯ ಬದುಕಿನಲ್ಲಿ ಸಮಾಜವಾದದ ಶಿಸ್ತು ಅಳವಡಿಸಿಕೊಳ್ಳದೆ ಚೆಲ್ಲಿದಂತೆ ಬದುಕಿದರು. ಆದರೆ ಅವರು ನಡೆ, ನುಡಿ ಸೇರಿದಂತೆ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದ ಅನೇಕ ಯೋಜನೆಗಳಲ್ಲಿ ಸಮಾಜವಾದದ ಅಂಶಗಳಿದ್ದವು. ಹಿಂದುಳಿದ ಸಮುದಾಯದ ರಾಜಕಾರಣಿಯೊಬ್ಬ ಇಲ್ಲಿನ ಎಲ್ಲ ತರತಮಗಳ ನಡುವೆ ಶಕ್ತಿಯಾಗಿ ಬೆಳೆದಿದ್ದು ಅನೇಕರಿಗೆ ಮಾದರಿ. ಜನರಿಗೆ ಹತ್ತಿರಾಗುವ ಮೂಲಕ ರಾಜಕೀಯ ಶಕ್ತಿ ಗಳಿಸಿಕೊಳ್ಳಬಹುದು ಎಂಬುದನ್ನು ಸಾರೆಕೊಪ್ಪದ ಬಂಗಾರಪ್ಪ ಸಾಧಿಸಿ ತೋರಿಸಿದ್ದರು.

ಸಾರೆಕೊಪ್ಪದ ಸರದಾರ ಇನ್ನಿಲ್ಲ

ಕರ್ನಾಟಕ ರಾಜಕೀಯ ಕಂಡ ಬಹು ಮುಖ ವ್ಯಕ್ತಿತ್ವದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತಮ್ಮ 79ನೇ ವಯಸ್ಸಿಗೆ ಇಂದು ತಮ್ಮ ಇಹಲೋಕ ತ್ಯಜಿಸಿದ್ದಾರೆ. ಕರ್ನಾಟಕದ ರಾಜಕಾರಣಿಗಳು ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದಕ್ಕೆ ಉದಾಹರಣೆಯಾಗಿದ್ದವರು ಬಂಗಾರಪ್ಪ.
ಅವರು ಕಟ್ಟದ ಪಕ್ಷಗಳಿಲ್ಲ, ಕರ್ನಾಟಕದಲ್ಲಿರುವ ಪಕ್ಷಗಳಿಗೆ ಸೇರ್ಪಡೆಯಾಗಿ, ಮತ್ತೆ ತ್ಯಜಿಸಿ ಬಾರದೆ ಇರುವ ಪಕ್ಷಗಳಿಲ್ಲ. ಬಂಗಾರಪ್ಪ ತಮ್ಮ ಬದುಕಿನುದ್ದಕ್ಕೂ ದೇವೆಗೌಡರಂತೆ ರಾಜಕೀಯವನ್ನು ಉಂಡು, ಹಾಸಿ, ಹೊದ್ದವರು. ತಾವು ಮುಖ್ಯಮಂತ್ರಿಯಾಗಿದ್ದಾಗ ಇವತ್ತಿನ ಯಡಿಯೂರಪ್ಪನಂತೆ ಯಾವ ಅಂಜಿಕೆಯಿಲ್ಲದೆ ಜಾತಿ ರಾಜಕಾರಣವನ್ನು ನೇರವಾಗಿ ಮಾಡಿದರು.
ಕರ್ನಾಟಕ ಯಶಸ್ವಿ ರಾಜಕಾರಣಿ ಎಂದು ನಾವು ಕರೆಯಲಾಗದಿದ್ದರೂ, ಅವರೊಬ್ಬ ನಾಡು ಕಂಡ ಅಪ್ರತಿಮ ಹೋರಾಟಗಾರ ಇದರಲ್ಲಿ ಎರಡನೆ ಮಾತಿಲ್ಲ. ಇವರು ತಮ್ಮ ಹುಟ್ಟು ಹೋರಾಟವನ್ನು ಹಠವಾಗಿ ಪರಿವರ್ತಿಸಿಕೊಂಡ  ಫಲವಾಗಿ ಇಳಿವಯಸ್ಸಿನಲ್ಲಿ ಅನೇಕ ಸೋಲುಗಳನ್ನು ಅನುಭವಿಸಬೇಕಾಯಿತು. ಒಂದು ವರ್ಷದ ಹಿಂದೆ ಮುಲಾಯಂಸಿಂಗ್ ಯಾದವ್ ರವರ ಸಮಾಜವಾದಿ ಪಕ್ಷವನ್ನು ತೊರೆದು  ದೇವೆಗೌಡರ ಜೆ.ಡಿ.ಎಸ್.ಪಕ್ಷ ಸೇರಿದ್ದ ಬಂಗಾರಪ್ಪನವರು ಬಿ.ಜೆ.ಪಿ. ಸೋಲಿಸಲು ಪಣ ತೊಟ್ಟಿದ್ದರು. ಆದರೆ, ಯುದ್ಧಕ್ಕೆ ಮುನ್ನವೇ ಅವರು ಇಲ್ಲವಾದದ್ದು, ರಾಜಕೀಯ ಕುತೂಹಲಕ್ಕೆ ತೆರೆಬಿದ್ದಂತಾಗಿದೆ.
ನಾಲ್ಕು ವರ್ಷದ ಹಿಂದೆ ಬಂಗಾರಪ್ಪನವರಿಗೆ 75 ವರ್ಷ ತುಂಬಿದ ಸಮಯದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಸಂಪಾದಕತ್ವದಲ್ಲಿ ಹೊರತರಲಾಗಿದ್ದ  ಸಾರೆಕೊಪ್ಪದ ಬಂಗಾರ ಎಂಬ ಅಭಿನಂದನಾ ಗ್ರಂಥಕ್ಕೆ ನಾನು ಬರೆದಿದ್ದ ಒಂದು ಲೇಖನ ಅವರ ಸಾವಿನ ಸಂದರ್ಭದಲ್ಲಿ ಇಲ್ಲಿದೆ.
– ಡಾ.ಎನ್.ಜಗದೀಶ್ ಕೊಪ್ಪ
ಜನ ನದಿಯಂತೆ ಹರಿದು ಬರುತ್ತಾರೆ

ಬಂಗಾರಪ್ಪ ಕರ್ನಾಟಕದ ರಾಜಕೀಯ ರಂಗದಲ್ಲಿ ಕಳೆದ 40 ವರ್ಷಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗುಳಿದ ಒಂದು ಹೆಸರು. ಬಡತನ, ಹಸಿವು, ಶೋಷಣೆ, ಗುಲಾಮಗಿರಿತನ ಇವುಗಳ ವಿರುದ್ಧ ತನ್ನ ರಾಜಕೀಯ ಬದುಕಿನುದ್ದಕ್ಕೂ ಹೋರಾಡುತ್ತಲೇ ಬಂದ ಹುಟ್ಟು ಹೋರಾಟಗಾರ ಎಸ್.ಬಂಗಾರಪ್ಪನವರು ಕನರ್ಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ವಲಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಕರ್ನಾಟಕದ  ರಾಜಕೀಯಕ್ಕೆ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಎಚ್.ಪಟೇಲರಂತಹ ಧೀಮಂತ ನಾಯಕರು ಹಾಗೂ ಚಿಂತಕರನ್ನು ನೀಡಿದ ಶಿವಮೊಗ್ಗ ಜಿಲ್ಲೆಯ ಮಣ್ಣಿನಿಂದ ಹುಟ್ಟಿ ಬಂದ ಇನ್ನೋರ್ವ ರಾಜಕೀಯ ನೇತಾರ ಎಸ್.ಬಂಗಾರಪ್ಪ.
1960ರ ದಶಕದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮುನ್ನ ವಕೀಲಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಡವರ ಮತ್ತು ಗೇಣಿದಾರರ ಪರ ಹೋರಾಡುತ್ತಾ ಸಮಾಜವಾದಿ ಚಳುವಳಿಗೆ ಧುಮುಕಿದ ಬಂಗಾರಪ್ಪನವರು, 1967ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ವಿಧಾನಸಭೆ ಪ್ರವೇಶಿಸಿದರು. ಆನಂತರ ಬಂಗಾರಪ್ಪನವರದ್ದು ವರ್ಣರಂಜಿತ ವ್ಯಕ್ತಿತ್ವ.
ಸೊರಬ ಕ್ಷೇತ್ರದಿಂದ ಸೋಲಿಲ್ಲದ ಸರದಾರನಂತೆ ನಿರಂತರವಾಗಿ ವಿಧಾನಸಭೆಗೆ ಆರಿಸಿ ಬಂದ ಬಂಗಾರಪ್ಪನವರು ಆಯಾ ಕಾಲಘಟ್ಟದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ದನಿಯೆತ್ತಿ ಕರ್ನಾಟಕದ ಜನಮನವನ್ನು ಸೂರೆ ಗೊಂಡರು. ರಾಜಕೀಯ ಬದುಕಿನ ಒತ್ತಡಗಳಿಗೆ ಅನುಗುಣವಾಗಿ ಬಂಗಾರಪ್ಪನವರು ಪಕ್ಷಗಳನ್ನು ಬದಲಾಯಿಸಿದರೂ ಕೂಡ ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಎಂದೂ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಲಿಕೊಡಲಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಮಮನೋಹರ ಲೋಹಿಯಾರ ಚಿಂತನೆ ಹಾಗೂ ಶಾಂತವೇರಿ ಗೋಪಾಲಗೌಡರ ಪ್ರಭಾವ.
ಗೋಪಾಲಗೌಡರ ನಿಧನಾನಂತರ ಶಿವಮೊಗ್ಗ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿ ಜೆ.ಎಚ್.ಪಟೇಲರ ಜೊತೆ ಗುರುತಿಸಿಕೊಂಡ ಬಂಗಾರಪ್ಪನವರು ಕೇವಲ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರತೊಡಗಿದರು.
ಕರ್ನಾಟಕ ಕಂಡ ಜನಪರ ಕಾಳಜಿಯ ಧೀಮಂತ ಮುಖ್ಯಮಂತ್ರಿ ಎಂದೇ ಹೆಸರಾದ ದಿವಂಗತ ದೇವರಾಜ ಅರಸುರವರು ಕಟ್ಟಿದ ಕ್ರಾಂತಿ ರಂಗ ಪಕ್ಷವನ್ನು ಅವರ ನಿಧನಾನಂತರ ಮುನ್ನಡೆಸುವುದರ ಮೂಲಕ 80ರ ದಶಕದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಪತನಗೊಳಿಸುವುದರಲ್ಲಿ ಬಂಗಾರಪ್ಪನವರ ಪಾತ್ರ ಪ್ರಮುಖವಾದುದು. ಗುಂಡೂರಾವ್ ಸರಕಾರ ಪತನಗೊಂಡ ನಂತರ ಈ ರಾಜ್ಯದ ಚುಕ್ಕಾಣಿ ಹಿಡಿದು ಮುಖ್ಯ ಮಂತ್ರಿಯಾಗಬೇಕಿದ್ದ ಬಂಗಾರಪ್ಪ ಹಲವು ರಾಜಕೀಯ ಒಳಸುಳಿಗೆ ಸಿಲುಕಿ ಅಂದಿನ ಜನತಾ ಸರಕಾರದ ರಾಮಕೃಷ್ಣ ಹೆಗಡೆಯವರಿಗೆ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡಬೇಕಾಗಿ ಬಂದಿತು. ನಂತರದ ದಿನಗಳಲ್ಲಿ ತಮ್ಮ ಕ್ರಾಂತಿರಂಗ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿದ ಬಂಗಾರಪ್ಪನವರು ಕಾಂಗ್ರೆಸ್ ನೇತೃತ್ವದ ಸರಕಾರಗಳಲ್ಲಿ ಪ್ರಭಾವಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. 1989ರಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅನಿರೀಕ್ಷಿತವಾಗಿ ಕೆಳಗಿಳಿಸಿ ಬಂಗಾರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರು.
ತಮ್ಮ ಜಿಲ್ಲೆಯಾದ ಶಿವಮೊಗ್ಗದ ಜನತೆಯನ್ನು ಜಾತಿ ಧರ್ಮದ ಹಂಗಿಲ್ಲದೆ, ರಾಜಕೀಯ ಪಕ್ಷಗಳ ಕಟ್ಟುಪಾಡುಗಳಿಲ್ಲದೆ ಪ್ರೀತಿಸಬಲ್ಲ ವ್ಯಕ್ತಿತ್ವ ಬಂಗಾರಪ್ಪನವರದ್ದು. ಇಂದಿಗೂ ಶಿವಮೊಗ್ಗ ಜಿಲ್ಲೆಯ ಯಾವುದೇ ಹಳ್ಳಿಗೆ ಹೋಗಲಿ ಅಲ್ಲಿಯ ಗ್ರಾಮಸ್ಥರನ್ನು ಹೆಸರಿಡಿದು ಕರೆಯುವಷ್ಟು ನೆನಪನ್ನು ಬಂಗಾರಪ್ಪ ಉಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಬಂಗಾರಪ್ಪನವರ ಯಾವುದೇ ಕಾರ್ಯಕ್ರಮ ನಡೆಯಲಿ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳಿಂದ ಜನರು ನದಿಯಂತೆ ಹರಿದು ಬರುತ್ತಾರೆ. ಜೊತೆಗೆ ಬಂಗಾರಪ್ಪನವರು ಎಷ್ಟೇ ಪಕ್ಷಗಳನ್ನು ಬದಲಾಯಿಸಿದರೂ ಅವರನ್ನು ಗೆಲ್ಲಿಸುತ್ತಲೇ ಬಂದಿದ್ದಾರೆ.
ಬಂಗಾರಪ್ಪನವರ ರಾಜಕೀಯ ತಪ್ಪು ನಿರ್ಧಾರಗಳಿಂದಾಗಿ ಇಂದಿನ ಯು.ಪಿ.ಎ. ಸರಕಾರದಲ್ಲಿ ಕೇಂದ್ರ ಸಚಿವರಾಗುವ ಅವಕಾಶವನ್ನು ಕಳೆದುಕೊಂಡರು. ಬಂಗಾರಪ್ಪನವರು ಬಿ.ಜೆ.ಪಿ. ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದಾಗ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರಕಾರ ಚುನಾವಣೆಯಲ್ಲಿ ಸೋಲುಂಡಿತು. ಬಂಗಾರಪ್ಪನವರ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗದ ಬಿ.ಜೆ.ಪಿ. ಪಕ್ಷದ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲಾರದೆ ರಾಜಿನಾಮೆ ನೀಡಿ ಅವರು ಹೊರಬಂದರು.
ಅತ್ತ ಕಾಂಗ್ರೆಸ್ ಪಕ್ಷವನ್ನು ಇತ್ತ ಬಿ.ಜೆ.ಪಿ.ಪಕ್ಷವನ್ನು ಸಮಾನ ಶತೃಗಳಂತೆ ಭಾವಿಸಿರುವ ಬಂಗಾರಪ್ಪನವರು ತಮ್ಮ 75ರ ಈ ಇಳಿವಯಸ್ಸಿನಲ್ಲೂ ಉತ್ತರ ಪ್ರದೇಶದ ಮುಲಾಯಂಸಿಂಗ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಸೇರಿ ಮತ್ತೆ ಲೋಕಸಭೆಗೆ ಸ್ವರ್ಧಿಸಿ ಜಯಭೇರಿ ಬಾರಿಸಿ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ಬೆಳೆಯಲು ಶ್ರಮಿಸುತ್ತಿದ್ದಾರೆ.
ನನಗೆ ಬಂಗಾರಪ್ಪನವರ ಬಗ್ಗೆ ಗೌರವ ಮೂಡಲು ವಿಶೇಷ ಕಾರಣವೆಂದರೆ ಅವರ ಶಿಸ್ತುಬದ್ಧ ಜೀವನ. ನಿರಂತರ ರಾಜಕೀಯ ಚಟುವಟಿಕೆಗಳ ನಡುವೆಯೂ ಕ್ರೀಡೆ, ಸಂಗೀತ, ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡಿರುವ ಬಂಗಾರಪ್ಪನವರು ಯಾವುದೇ ದುರಭ್ಯಾಸಗಳಿಲ್ಲದೆ ತಮ್ಮ ದೇಹ ಹಾಗೂ ಮನಸ್ಸನ್ನ ಆರೋಗ್ಯಯುತವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಇಂದಿನ  ಕರ್ನಾಟಕ ದ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ, ಬಂಗಾರಪ್ಪ ಮತ್ತು ದೇವೇಗೌಡ ಮೂವರು ಒಂದೇ ವಯೋಮಾನದವರು. ಈ ಮೂವರ ಹೋರಾಟ, ಚಿಂತನೆ ಮತ್ತು ಜನಪರ ಕಾಳಜಿ ಕರ್ನಾಟಕದ ಭವಿಷ್ಯದ ರಾಜಕಾರಣಿಗಳಿಗೆ ಮಾದರಿಯಾಗಬಲ್ಲದು. 75 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವ ಬಂಗಾರಪ್ಪನವರು ಇನ್ನಷ್ಟು ಕಾಲ ನಮ್ಮ ನಡುವೆ ಇದ್ದು ಕರ್ನಾಟಕದ ನೆಲ ಜಲ, ಭಾಷೆ ಸಂಸ್ಕೃತಿ ಮುಂತಾದ ಹೋರಾಟಗಳಿಗೆ ಸ್ಫೂರ್ತಿ ತುಂಬಲಿ ಎಂಬುದು ನನ್ನ ಆಶಯ.

Bhagvad Gita Debate: Anchor Takes Sides

– Bhoomi Banu

Sagarika Ghosh of Cnn.Ibn anchored a discussion on the issue ‘Should Bhagvad Gita be India’s national book?’ on December 20 in her programme Face the Nation. Earlier on the day Indian parliament had responded to a petition in Siberian court demanding ban on Russian translation of Swamy Prabhupada’s book on Bhagvad Gita. The contentious issue in the book is that it carried message extremist in nature.

Noted thinker Prof. Kancha Ilaih, spokesperson of ISKCON Amogh Leela Das, president of Janata Party Dr. Subramanya Swamy and Prof Pushpesh Panth of JNU were on the panel. Jaggi Vasudev’s opinion on the issue was also aired on the programme. Prof. Ilaiah had joined the debate from Hyderabad.

Going by the names of the individuals on the panel one could easily make out that the anchor or the channel did not give enough space for the ‘other view’. It was an interesting debate since there was lot of scope to study how so called ‘upper class intellectuals’ belittle, ignore and ridicule the opinions expressed by a thinker known for his organic views, based on democratic principles.

As Prof. Ilaiah disputed the ‘common belief’ that Bhagvad Gita is a book of non-violence, Dr. Swamy reacted, “Kancha Ilaiah, as usual is doing either propaganda or not read the book. He should read it first”. Arrogance was writ large on his face.

Prof. Pushpesh and another guy from ISKCON went on praising with superlatives. Prof. Pushpesh said Gita is a great work, you get into it and you will get what you want. ISKCON spokesperson said Gita is a ‘science of soul’ and in that way it is concerned to all no matter the religion, he or she belongs to.

Nobody in the panel even attempted to dispute the fact that Gita taught ‘killing enemy through means of god’. When Prof. Kancha Ilaiah raised that, nobody bothered to respond to it properly.  Instead, they exhibited mannerisms, ridiculing in nature. Prof. Pushpesh stated that the whole body is a metaphor for Kurukshetra! If he wants to study the text with metaphors of such magnitude, it is fine. But the simple reading of the text tells readers different things. Lord Krishna in straight forward words provokes Arjuna to fight his relatives in the war field. And, as we know Arjuna follows it. To that extent the book preaches violence.

Kancha Ilaiah, citing Dr.B.R Ambedkar’s observations on the Gita, argued that it stood on the premises of four varnas. Of course there are enough evidences in the text to substantiate the argument. Further, the saying ‘don’t expect the fruits for your labour’ – is simply the ideology which spoiled the fortune of the working class, which was constituted by majority of backward classes and dalits.

Interestingly, the anchor also joins the panel in her studio to counter Kancha Ilaiah’s views. Kancha Ilaiah rejects the idea of declaring it a national book, arguing that the book has divisive elements and honouring it with such a status was against diversity of the land.

Either by slip of her tongue or in a deliberate attempt Sagarika Ghosh asks Prof. Pushpesh to quote from Bhagvad Gita so that ‘WE’ can counter Kancha Ilaiah’s argument and state it is not a religious text (19.07 min). Her tone and use of words explicitly convey that she finds comfortable with the argument placed by ‘the upper caste intellectuals’. And, with that she raises doubt among the viewers, at least a section of viewers, that if her intention in organising such debate was only to echo the feelings raised by the BJP on the floor of parliament.