ಪರಾವಲಂಬಿ ಜೀವಿಗಳ ವಿವೇಕಾನಂದ ಮತ್ತು ಭಾರತಮಾತೆ…

-ರವಿ ಕೃಷ್ಣಾರೆಡ್ಡಿ

ನಮ್ಮಲ್ಲಿ ಒಂದು ವರ್ಗವಿದೆ. ಅವರನ್ನು ನೀವು ಕೆಲವೊಂದು ವಿಷಯಗಳನ್ನು ಮಾತನಾಡದಂತೆ ನಿರ್ಬಂಧಿಸಿಬಿಡಿ. ಬದುಕುವುದಕ್ಕಾಗಿ ಅನ್ನ ದುಡಿಯಲಾರದೆ ಸಾಯುತ್ತವೆ ಅವು. ದೇಶ, ಮತ, ದೇವರು, ಇಂತಹುಗಳನ್ನು ಅನ್ನ ದುಡಿಯುವುದಕ್ಕಾಗಿಯೇ ಬಳಸಿಕೊಳ್ಳುವ ಈ ಮೂಲಭೂತವಾದಿಗಳು ನಿಮಗೆ ಎಲ್ಲಾ ದೇಶಗಳಲ್ಲಿ, ಮತಗಳಲ್ಲಿ ಸಿಗುತ್ತಾರೆ.

ಈಗ ಅಂತಹುದೇ ಪರಾವಲಂಬಿ ಜೀವಿಗಳಿಗೆ, ಹಿಂದು ಮತದವರೆಂದು ಹೇಳಿಕೊಳ್ಳುವ ಈ ಕಷ್ಟಪಟ್ಟು ದುಡಿಯಲಾರದ ಕರ್ನಾಟಕದ ಒಂದು ವರ್ಗಕ್ಕೆ ಸೋಮವಾರ ದಿನೇಶ ಅಮಿನ್‌ಮಟ್ಟುರವರ ಲೇಖನ ಓದಿದಂದಿನಿಂದ ತಮ್ಮ ಜೀವನನಿರ್ವಹಣೆಯ ಅವಕಾಶವನ್ನೇ ಕಿತ್ತುಕೊಂಡಂತಹ ಭಯ ಆವರಿಸಿದೆ. ಹಾಗಾಗಿ ಪ್ರತಿಭಟನೆಯನ್ನು ಮಾಡಿಸುತ್ತಿದ್ದಾರೆ, ಮಾಡುತ್ತಿದ್ದಾರೆ.

ನನ್ನಂತಹವನಿಗೆ, ಹಾಗೂ ನನ್ನ ಅನೇಕ ಸಮಾನಮನಸ್ಕರಿಗೆ ಆ ಲೇಖನದಲ್ಲಿ ಆಕ್ಷೇಪಿಸುವಂತಹುದು ಏನೂ ಇರಲಿಲ್ಲ. ಆದರೆ ಇದನ್ನು ಕೋಮುವಾದಿಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ನನಗನ್ನಿಸುವ ಪ್ರಕಾರ ಇದೇ ಲೇಖನವನ್ನು ಚಾಚೂ ಬದಲಾಯಿಸದೆ ಒಬ್ಬ ಅಪ್ರಬುದ್ಧ ಹಿಂದುತ್ವವಾದಿ ಲೇಖಕನೊಬ್ಬನ ಹೆಸರಿನಲ್ಲಿ ಪ್ರಕಟಿಸಿದ್ದರೆ, ನಿಜಕ್ಕೂ ಆತನ ವಿರುದ್ಧ ಒಂದೇ ಒಂದು ಮಾತನ್ನು ಈ ಬಳಗ ಆಡುತ್ತಿರಲಿಲ್ಲ. ಬದಲಿಗೆ ಕೊಂಡಾಡುತ್ತಿದ್ದರು. ಸಮಾಜ ಸುಧಾರಣೆಯ ಕೆಲಸ ಎನ್ನುತ್ತಿದ್ದರು. ಮತ್ತು ಅದು ಅಲ್ಲಿಗೇ ಕೊನೆಯಾಗುತ್ತಿತ್ತು. ಹಾಗಾಗಿ ನನಗನ್ನಿಸುವುದು ಇದು ವಿಚಾರಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಬದಲಿಗೆ ಯಾರು ಹೇಳುತ್ತಿದ್ದಾರೆ ಎನ್ನುವುದು. ಯಾಕೆಂದರೆ, ದಿನೇಶರ ಬದಲಿಗೆ ಬೇರೊಬ್ಬರು, ಕನ್ನಡದ ಬೇರೆ ಯಾವುದೇ ದಿನಪತ್ರಿಕೆಯಲ್ಲಿ ಹೇಳಿದ್ದರೆ, ಅದು ಅನಪಾಯಕಾರಿಯೂ, ಸ್ವಹಿತಾಸಕ್ತಿಗೆ ಪೂರಕವೂ ಆಗಿರುತ್ತಿತ್ತು. ಆದರೆ ಪ್ರಸ್ತುತ ಲೇಖಕ, ಲೇಖನ, ಮತ್ತು ಅದು ಪ್ರಕಟವಾಗಿರುವ ಪ್ರಜಾವಾಣಿ ಪತ್ರಿಕೆ, ಈ ಕಾಂಬಿನೇಶನ್ ದೀರ್ಘಕಾಲೀನವಾದ ಮತ್ತು ಶಾಶ್ವತವಾದ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯನ್ನು ಕಂಡು ಮೇಲಿನ ಪರಾವಲಂಬಿ ಜೀವಿಗಳು ಗಾಬರಿ ಬಿದ್ದಿರುವುದು.

ಎಷ್ಟೆಲ್ಲ ಓದಿದರೂ ಈ ಭೂಮಿ, ಸೂರ್ಯ, ಜೀವ, ಜೀವವಿಕಾಸ, ಮಾನವ ವಿಕಾಸ, ಇವುಗಳೆಲ್ಲ ಅರ್ಥವೇ ಆಗಿರದ ಅಥವ ಓದಿಯೇ ಇಲ್ಲದ ಜನರೇ ನಮ್ಮ ಮಧ್ಯೆ ಇದ್ದಾರೆ. ಅದನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸುವುದು ವೈಜ್ಞಾನಿಕ ತಿಳಿವಿನ ಮೂಲಕ ಅಲ್ಲ. ಬದಲಿಗೆ ಪುರಾಣಗಳ, ವೇದಾಂತ ಪ್ರವಚನಗಳ, ವೈರಾಗ್ಯ ಬೋಧಕರ, ಜ್ಯೋತಿಷಿಗಳ, ಮುಠ್ಠಾಳರ ಮೂಲಕ. ಗಿಣಿಶಾಸ್ತ್ರ ಹೇಳುವವರಿಗೆ, ಕವಡೆ-ನಾಡಿ ಶಾಸ್ತ್ರದವರಿಗೆ, ಭಯ ಹುಟ್ಟಿಸುವ ಜ್ಯೋತಿಷಿಗಳಿಗೆ, ದೇವಾಲಯದ ಪೂಜಾರಿಗಳಿಗೆ, ಯಾಗ ಮಾಡುವವರಿಗೆ, ಇದು ಸುಭಿಕ್ಷ ಕಾಲ.

ಈ ವರ್ಗದ ಮುಂದುವರೆದ ಅವತಾರಗಳೇ ವಿವೇಕಾನಂದರನ್ನು ಮತ್ತು ಭಾರತಮಾತೆಯನ್ನು ತಮ್ಮ ಜೀವನ ನಿರ್ವಹಣೆಗೆ ಮಾರ್ಗ ಮಾಡಿಕೊಂಡಿರುವ ಪರಾವಲಂಬಿ ಜೀವಿಗಳು. ಇವರಿಗೆ ಭಾರತದ ಜನತೆಯ ಮೇಲಿರುವ ಪ್ರೀತಿಗಿಂತ ನೂರ್ಮಡಿ ಹೆಚ್ಚಿನ ಪ್ರೀತಿ ಅಖಂಡ ಭಾರತದ ಭೂಪಟದ ಮೇಲಿದೆ. ದೇಶ ಎಂದರೆ ಅಲ್ಲಿರುವ ಜನಗಳು ಮತ್ತು ಅವರ ಯೋಗ್ಯತೆ ಚಾರಿತ್ರ್ಯ ಎನ್ನುವುದಕ್ಕಿಂತ ಅದರ ಭೌಗೋಳಿಕ ರೂಪ ಎನ್ನುವುದೇ ಇವರ ಭಾವನೆ. ಈಡಿಯಟ್ಸ್.

ನೆನ್ನೆ ಬೆಂಗಳೂರಿನ ಪ್ರಜಾವಾಣಿ ಕಚೇರಿಯ ಮುಂದೆ ನೆರೆದಿದ್ದ, ಸ್ವಯಂಪ್ರೇರಣೆಯಿಂದ ಬಂದವರೇ ಹೆಚ್ಚು ಇದ್ದ, ಹಿರಿಯರು, ಹೆಂಗಸರು, ಕುಂಕುಮಧಾರಿ ಯುವಕರು. ಪ್ರವಚನಕಾರರು, ರಜೆ ಹಾಕಿ ಬಂದಿದ್ದ ವೃತ್ತಿಪರರು, ಬೇರೆಬೇರೆ ಊರುಗಳಿಂದ ಬಂದಿದ್ದ ಜನರನ್ನೆಲ್ಲ ನೋಡಿ ನನಗೆ ಈ ದೇಶದ ಭವಿಷ್ಯದ ಬಗೆಗಿನ ಆಶಾಭಾವನೆ ಒಂದಷ್ಟು ಮುರುಟಿತು. ಅಸಹನೆ, ಕುರುಡುಭಕ್ತಿ, ಮೌಢ್ಯತೆ, ಕೋಮುವಾದ, ಅವೈಜ್ಞಾನಿಕತೆ, ಅವೈಚಾರಿಕತೆ, ಎದೆಯಿಂದ ಎದೆಗೆ ಹರಿಯುತ್ತಿದೆ, ಸತತ. ಒಂದು ಲೇಖನದ ಆಶಯವನ್ನು ಗ್ರಹಿಸಲಾರದ ವಿದ್ಯಾವಂತರು, ವೈಚಾರಿಕತೆಯನ್ನು ಸಾಧಿಸಲಾಗದ ನಮ್ಮ ಶಿಕ್ಷಣ ಪದ್ದತಿ, ದಾರಿತಪ್ಪಿಸಲು ಬೀದಿಗೊಬ್ಬರಂತೆ ಎದ್ದು ನಿಂತಿರುವ ಜನ; ಇವೆಲ್ಲ ನಮ್ಮನ್ನು ಎತ್ತ ಒಯ್ಯಲಿದೆಯೊ?

ಇವುಗಳಿಗೆ ಸಾಮಾಜಿಕ-ರಾಜಕೀಯ ಪರ್ಯಾಯವೊಂದನ್ನು ಕರ್ನಾಟಕದಲ್ಲಿ ಸೃಷ್ಟಿಸಿಕೊಳ್ಳಲಾಗದೆ ಹೋದರೆ…

8 thoughts on “ಪರಾವಲಂಬಿ ಜೀವಿಗಳ ವಿವೇಕಾನಂದ ಮತ್ತು ಭಾರತಮಾತೆ…

  1. vaijanath hiremath

    ಮಾನ್ಯರೆ, ಸ್ವಾಮಿ ಪತ್ರಕರ್ತ ದಿನೇಶ ಻ಮೀನ್ ಮಟ್ಟು ಬರೆದ ವಿವೇಕಾನಂದರ ಲೇಖನ ಕುರಿತಾಗಿ ಎದ್ದಿರುವ ವಿವಾದ ನಿಜಕ್ಕೂ ಬೇಸರದ ಸಂಗತಿಯೇ ನಿಮ್ಮ ಲೇಖನದಲ್ಲಿ ಬರೆದಂತೆ ಈ ದೇಶದಲ್ಲಿ ಇನ್ನು ಪರಂಪರಾಗತ (ಸಧ್ಯ ಅಸ್ತಿತ್ವದಲ್ಲಿರುವ ಸಂಪ್ರದಾಯವನ್ನು ಅನುಕರಣೆ ಮಾಡುವವರಿಗೆ ಅನ್ವಯ)ಆಚರಣೆ ನಂಬಿಕೆಗಳ ಮೇಲೆ ನೆಲೆ ನಿಂತವರ ಭಾವನೆಗಳನ್ನೂ ಗಮನದಲ್ಲಿಟ್ಟುಕೊಂಡೇ ಲೇಖನ ಬರೆಯಬೇಕು ಇದು ಒಬ್ಬ ಬರಹಗಾರ(ಪತ್ರಕರ್ತ, ಕವಿ.ಲೇಖಕರಿಗೂ ಅನ್ವಯ) ಹಾಗಂತ ಸತ್ಯವನ್ನು ಮುಚ್ಚಿಡಲಾಗದು ಎಂಬುದನ್ನೂ ಅರಿತಿರಬೇಕು. ಒಟ್ಟಿನಲ್ಲಿ ತಂತಿಯ/ಹಗ್ಗದ ಮೇಲಿನ ನಡಿಗೆಯಂತೆ ಲೇಖನವಿರಬೇಕು. 1ವೇಳೆ ಸತ್ಯ ಹೇಳಲೇಬೇಕಾದ ಸಂದರ್ಭದಲ್ಲಿ ವಿರೋಧಗಳನ್ನು ನಿರ್ಲಕ್ಷ್ಯಿಸಿ ಅನುಲಕ್ಷಿಸಬೇಕು ಎಂಬುದು ನನ್ನನಿಸಿಕೆ.
    ಇನ್ನು ವಿರೋಧಕ್ಕಾಗಿ ವಿರೋಧ ಸಲ್ಲದು. ಈ ದೇಶದಲ್ಲಿ ಇನ್ನು ತನ್ನರಿವೇ ತನಗೆ ಗುರುವಾಗಬೇಕು ಎಂಬ ವಚನಕಾರರ ವಾಣಿ 12ನೇ ಶತಮಾನದ ನಂತರ ನಮ್ ನಾಡಿನಲ್ಲಿ ಇವೊತ್ತು ಇನ್ನು ಕ್ಷೀಣಿಸಿದೆ ಇದನ್ನು ಎತ್ತರಿಸುವ ಕೆಲಸ ಮಾಡಬೇಕೇ ಹೊರತು ಅದನ್ನು ಬಿಟ್ಟು ಕ್ಷಿಣಿಸಿದ ಅರಿವನ್ನು ಆಚಾರ-ವಿಚಾರಗಳ ಟೀಕೆಗಳ ಮೂಲಕ ಎತ್ತುತ್ತೇವೆ ಎಂದು ಹೊರಟಿರುವ ಻ಅಣ್ಣಗಳಿರಾ ನೀವು ಮಾಡುತ್ತಿರುವುದೇನು ಗೊತ್ತಾ..? ಅರಿವು ಮೂಡಿಸಲು ಆಚಾರ ಟೀಕೆಗೆ ಇಳಿದ ನಿಮ್ಮಿಂದ ಆಗುತ್ತಿರುವುದು ಬರಿ ಅ-ನಾಚಾರ ಅಷ್ಟೆ…. ;-(

    Reply
  2. Ananda Prasad

    ಪ್ರಜಾವಾಣಿ ಪತ್ರಿಕೆಯ ವಿರುದ್ಧ ಹಿಡಿದ ಪ್ರತಿಭಟನಾಕಾರರು ಹಿಡಿದ ಬ್ಯಾನರ್ ‘ಕನ್ನಡಪ್ರಭ, ವಿಜಯ ಕರ್ನಾಟಕ, ಉದಯವಾಣಿ, ಹೊಸದಿಗಂತ ಇವರಿಗಿರುವ ವಿವೇಕ ನಿಮಗೇಕೆ ಇಲ್ಲ?’ ಎಂಬುದನ್ನು ನೋಡಿ ಆಶ್ಚರ್ಯವೇನೂ ಆಗುವುದಿಲ್ಲ ಏಕೆಂದರೆ ಈ ಪತ್ರಿಕೆಗಳು ವೈಚಾರಿಕತೆ, ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಕೆಲಸದಲ್ಲಿ ಹಿಂದಿನಿಂದಲೂ ಬಹಳ ಹಿಂದೆ ಇವೆ. ಕರ್ನಾಟಕದಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಜನಪರ ಹೋರಾಟಗಳನ್ನು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿರುವುದು ಪ್ರಜಾವಾಣಿ ಮಾತ್ರವೇ ಆಗಿದೆ. ಇತ್ತೀಚಿಗೆ ವಾರ್ತಾಭಾರತಿ ಆರಂಭವಾದ ನಂತರ ಅದೂ ಈ ಕೆಲಸದಲ್ಲಿ ತೊಡಗಿದೆ.
    ನಮ್ಮ ಸಮಾಜದಲ್ಲಿ ವಿಚಾರಶೀಲರಿಗೆ ಯಾವಾಗಲೂ ಬಹಿಷ್ಕಾರ ಇದ್ದದ್ದೇ. ಬಸವಣ್ಣ ಕೂಡ ಪುರೋಹಿತಶಾಹಿಯ ವಿರೋಧದಿಂದಾಗಿ ತನ್ನ ಮಂತ್ರಿ ಸ್ಥಾನವನ್ನು ಬಿಟ್ಟು (ಆದರೆ ತನ್ನ ವಿಚಾರಗಳಲ್ಲಿ ರಾಜಿಯಾಗದೆ) ತೆರಳಬೇಕಾಗಿ ಬಂತು. ತನ್ನ ವಿಚಾರಗಳಲ್ಲಿ ರಾಜಿಯಾದರೆ ಅವರು ಮಂತ್ರಿಯಾಗಿ ಮುಂದುವರಿಯುವ ಅವಕಾಶ ರಾಜ ಬಿಜ್ಜಳ ನೀಡಿದ್ದ. ಆದರೆ ತನ್ನ ಅತ್ಹ್ಮಸಾಕ್ಷಿಗೆ ವಿರುದ್ಧವಾಗಿ ಬಸವಣ್ಣ ನಡೆದುಕೊಳ್ಳದೆ ಮಂತ್ರಿ ಸ್ಥಾನದಿಂದ ನಿರ್ಗಮಿಸಿದರು.
    ಈ ಭೂಮಿಯಲ್ಲಿ ಜೀವಿಗಳ ಉಗಮ ಯಾವ ರೀತಿ ಆಗಿ ವಿಕಾಸ ಯಾವ ರೀತಿ ಆಗಿದೆ ಎಂಬುದಕ್ಕೆ ಸ್ಪಷ್ಟವಾದ ಆಧಾರಗಳನ್ನು ವಿಜ್ಞಾನ ನೀಡಿದೆ. ಆದರೆ ಆ ಸತ್ಯವನ್ನು ಒಪ್ಪಿಕೊಳ್ಳಲು ಗಂಡೆದೆ ಬೇಕು. ಅದು ನಮ್ಮ ಜನರಲ್ಲಿ ಇಲ್ಲ. ಹಾಗಾಗಿ ಸತ್ಯ ಅವರಿಗೆ ಬೇಡ. ಸತ್ಯ ಬೇಡದವರಿಗೆ ನಾವೇನು ಮಾಡಲು ಸಾಧ್ಯ. ಸತ್ಯದ ಹಾದಿಯಲ್ಲಿ ನಾವು ಕಡಿಮೆ ಸಂಖ್ಯೆಯ ಜನ ಅದರೂ ಪರವಾಗಿಲ್ಲ ರಾಜಿ ಮಾಡಿಕೊಳ್ಳದೆ ನಮ್ಮ ಅತ್ಹ್ಮಸಾಕ್ಷಿಗೆ ವಿರುದ್ಧವಾಗಿ ನಡೆಯದೆ ಮುಂದುವರಿಯೋಣ. ನಮ್ಮಲ್ಲಿ ಉನ್ನತ ವಿದ್ಯಾವಂತರ ಸಂಖ್ಯೆ ಸಾಕಷ್ಟಿದೆ, ಅದರಲ್ಲಿ ಎಷ್ಟು ಜನರಿಗೆ ಈ ಭೂಮಿಯಲ್ಲಿ ಜೀವ ವಿಕಾಸವಾಗಿ ಮಾನವನ ತನಕ ನಡೆದು ಬಂದಿದೆ ಎಂಬ ಸತ್ಯ ತಿಳಿದುಕೊಳ್ಳುವ ಕುತೂಹಲ ಇದೆ? ಬಹಳ ಕಡಿಮೆ ಜನಕ್ಕೆ ಅದು ಇದೆ. ಈ ಸತ್ಯವನ್ನು ತಿಳಿದುಕೊಳ್ಳಲು ಸೂಕ್ಷಜೀವಿಶಾಸ್ತ್ರ, ಅಣುಜೀವಿಶಾಸ್ತ್ರ, ಅನುವಂಶೀಯ ವಿಜ್ಞಾನ, ಜೀವರಸಾಯನಶಾಸ್ತ್ರ ಇವುಗಳಲ್ಲಿ ಆಸಕ್ತಿ ಇರಬೇಕಾಗುತ್ತದೆ. ಹಾಗಾಗಿ ಬಹುತೇಕ ವಿದ್ಯವಂತರಿಗೂ ಸತ್ಯ ತಿಳಿದುಕೊಳ್ಳುವ ಆಸಕ್ತಿ ಇಲ್ಲ. ಈ ಸತ್ಯವನ್ನು ತಿಳಿದುಕೊಂಡರೆ ನಮ್ಮ ಚಿಂತನೆಯಲ್ಲಿ ಮಹತ್ತರ ಮಾರ್ಪಾಡು ಆಗುತ್ತದೆ. ನಾವು ಸಾಗಬೇಕಾದ ಹಾದಿ ಸ್ಪಷ್ಟವಾಗುತ್ತದೆ.

    Reply
  3. santhosh kumar

    ಕರ್ನಾಟಕದಲ್ಲಿ ೭೦-೮೦ರ ದಶಕದ ಹೋರಾಟದ ಫಲವಾಗಿ ರೂಪುಗೊಂಡಿದ್ದ ಜನತಾ ಪರಿವಾರವೆಂಬ ಪರ್ಯಾಯ ಯಾವಾಗ ಒಡೆದು ಹೋಯಿತೋ ಆಗಲೇ ಕರ್ನಾಟಕದ ಉತ್ತಮ ದಿನಗಳು ಮುಗಿದವು ಎಂದು ಕಾಣುತ್ತದೆ. ತದನಂತರ ಕರ್ನಾಟಕ ಪ್ರತಿಗಾಮಿಯಾಗುತ್ತ ನಡೆಯುತ್ತಿದೆ. ಮುಂದಿನ ದಿನಗಳಲ್ಲೂ ಪ್ರಗತಿಪರ ಪರ್ಯಾಯ ಬರುವ ಲಕ್ಷಣ ಕಾಣಿಸುತ್ತಿಲ್ಲ. ಇದರಿಂದ ಹೊರಗೆ ಬರುವುದು ಹೇಗೆ ಎಂಬ ಬಗ್ಗೆ ಸಾಹಿತಿಗಳಾಗಲಿ, ಚಿಂತಕರಾಗಲಿ, ಪತ್ರಕರ್ತರಾಗಲೀ, ಮಾಧ್ಯಮಗಳಾಗಲಿ ಚಿಂತಿಸುವುದು ಕಂಡು ಬರುತ್ತಿಲ್ಲ. ದೇವೇಗೌಡರ ಕುಟುಂಬ ರಾಜಕಾರಣ ಇರುವವರೆಗೆ ಕರ್ನಾಟಕದಲ್ಲಿ ಪ್ರಗತಿಪರ ಪರ್ಯಾಯ ರಾಜಕಾರಣ ಯಶಸ್ವಿಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಪ್ರಗತಿಪರ ಶಕ್ತಿಗಳು ಒಂದು ವೇದಿಕೆಯಲ್ಲಿ ಒಟ್ಟಾಗದೇ ಇರಲು ದೇವೇಗೌಡರ ಕುಟುಂಬ ರಾಜಕೀಯವೇ ಪ್ರಧಾನ ಕಾರಣವಾಗಿ ಕಾಣುತ್ತದೆ. ಜನತಾ ಪರಿವಾರದಲ್ಲಿದ್ದ ಎಲ್ಲ ಪ್ರಗತಿಪರ ಚಿಂತನಶೀಲ ರಾಜಕಾರಣಿಗಳು ದೇವೇಗೌಡರ ಕುಟುಂಬ ರಾಜಕಾರಣದಿಂದಾಗಿ ಬೇರೆ ಪಕ್ಷಕ್ಕೆ ಹೋಗಿ ಅಲ್ಲಿಯೂ ಸಮರ್ಪಕ ನೆಲೆಯಿಲ್ಲದೆ ಕರ್ನಾಟಕದ ರಾಜಕಾರಣವೇ ರಾಡಿ ಎಬ್ಬಿಸಿದಂತೆ ಆಗಿದೆ. ಕರ್ನಾಟದ ಮುಂದಿನ ರಾಜಕಾರಣ ಸದಾ ಪ್ರಶ್ನಾರ್ಥಕ ಚಿನ್ಹೆಯಾಗಿಯೇ ಉಳಿಯುವಂತೆ ಕಾಣುತ್ತದೆ.

    Reply
  4. Srinath

    Dear Ravikrishna Reddy,

    I read all your writings, its high time you should get rid of your surname “REDDY”. it shows you still bound by caste-ism.

    ~Srinath

    Reply
  5. KOTETHOTA ARUNA KUMAR

    ಪ್ರೀತಿಯ ರವಿಕೃಷ್ಣರವರೆ,
    ಇದು ಸಕಾಲಿಕವಾದ ಲೇಖನ. ಎಲ್ಲ ಚಳುವಳಿಗಳು ದುರುಪಯೋಗದ ಹಾದಿಯಲ್ಲಿ ಇರುವಾಗ ವಿತಂಡವಾದಿಗಳ ಹಾರಾಟವನ್ನು ನಿರಲ್ಯಕ್ಷಿಸುವುದು ಒಳಿತು.

    Reply
  6. guhehswara

    Dear friend ,

    hats off to you .you have touched the right chord and you are spot on in your analysis .why these idiots are providing the means of lively hood to these parasites since thousands of years .Any sensible people would have dealt with it .The people who make earth shattering noise if 2 rs is raised for petrol or milk are falling prey to these wreched creatures thus empowering them even more .The routes of money and lively hood of all such rascals should be blocked . . . by not buying any of their products .

    Reply

Leave a Reply

Your email address will not be published. Required fields are marked *