ಭೂಮಿ ಹುಟ್ಟಿದ್ದು ಹೇಗೆ? ಕನ್ನಡ ಸಾಕ್ಷ್ಯಚಿತ್ರ


– ರವಿ ಕೃಷ್ಣಾರೆಡ್ಡಿ


ಸ್ನೇಹಿತರೆ,

ಇಂದು ಕರ್ನಾಟಕದ ಮನೆಮನೆಯ ಒಳಗೆ ಜ್ಯೋತಿಷಿಗಳು, ಮಂತ್ರವಾದಿಗಳು, ಪೂಜಾರಿಗಳು, ಗ್ರಹ-ನಕ್ಷತ್ರಗಳ ಸುಳ್ಳು ಆಧಾರದ ಮೇಲೆ ಭವಿಷ್ಯ ಹೇಳುವವರು, ವಾಮಾಚಾರಿಗಳು, ಮೂಢರು, ದಡ್ಡರು ಟಿವಿ ಎನ್ನುವ ಪೆಟ್ಟಿಗೆಯ ಮೂಲಕ ಬೆಳ್ಳಂಬೆಳಗ್ಗೆಯ ಬಂದು ಕೂರುತ್ತಿದ್ದಾರೆ. ಕ್ರಮೇಣ ಜನರಲ್ಲಿ ಮೂಢನಂಬಿಕೆ ಹೆಚ್ಚುತ್ತಲೇ ಹೋಗುತ್ತಿದೆ.

ತಮ್ಮ ಮಕ್ಕಳು ಇಂಜಿನಿಯರ್-ಡಾಕ್ಟರ್ ಆಗಬೇಕೆಂದು ಬಯಸುವ ಅಕ್ಷರಸ್ಠರು ಸಹ ಯಾವುದೇ ರೀತಿಯ ವೈಜ್ಞಾನಿಕ ತಿಳಿವಳಿಕೆಗೆ ತೆರೆದುಕೊಳ್ಳದೆ ವಿಶೇಷ ಪೂಜೆ, ವ್ರತ, ಯಜ್ಞ-ಯಾಗಾದಿಗಳಲ್ಲಿ, ವಾಮಾಚಾರದಲ್ಲಿ ತಮ್ಮ ಅವಕಾಶ-ಯಶಸ್ಸುಗಳನ್ನು ಹುಡುಕುತ್ತಿದ್ದಾರೆ. ಹರಕೆ ಹೊತ್ತುಕೊಳ್ಳುವುದು, ಸ್ವಲ್ಪ ದುಡ್ಡು ಬರುವಷ್ಟರಲ್ಲಿ ದೂರದ ದೇವಸ್ಥಾನಗಳಿಗೆ ಹೋಗುವುದು, ಅಸಹ್ಯ ಎನ್ನಿಸುವ ರೀತಿಯಲ್ಲಿ ಕಾಣಿಕೆ ಕೊಡುವುದು ಹೆಚ್ಚಾಗುತ್ತಿದೆ.

ಇವೆಲ್ಲವಕ್ಕೂ ಕ್ಯಾಟಲಿಸ್ಟ್ ರೀತಿಯಲ್ಲಿ ನಮ್ಮ ದೃಶ್ಯ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿವೆ.

ಇದನ್ನು ಎದುರಿಸುವುದು ಹೇಗೆ. ಯಾವ ಕಡೆಯಿಂದ ಎನ್ನುವುದು ನನ್ನನ್ನು ಬಹಳ ದಿನದಿಂದ ಕಾಡುತ್ತಿತ್ತು.

ಈ ಹಿನ್ನೆಲೆಯಲ್ಲಿ಼ ನಾನು ಅಮೆರಿಕದಿಂದ ಬಂದ ನಂತರ ವರ್ಷದ ಹಿಂದೆ ಕಡಿಮೆ ಖರ್ಚಿನಲ್ಲಿ ನಮ್ಮ ಬ್ರಹ್ಮಾಂಡ, ಸೂರ್ಯ, ಭೂಮಿ, ಚಂದ್ರ ರೂಪುಗೊಂಡ ಬಗ್ಗೆ ಮತ್ತು ಕಳೆದ ಕೋಟ್ಯಾಂತರ ವರ್ಷಗಳಲ್ಲಿ ಭೂಮಿ ಮತ್ತು ಇಲ್ಲಿಯ ಜೀವಗಳು ರೂಪುಗೊಂಡ ಬಗ್ಗೆ ಒಂದು ಕನ್ನಡ ಡಾಕ್ಯುಮೆಂಟರಿ ಮಾಡಬೇಕೆಂದು ತೀರ್ಮಾನಿಸಿದೆ. ಇದಕ್ಕೆ ಗೆಳೆಯರಾದ ಕುಮಾರ್, ಈಶ್ವರ್, ಶ್ರೀಮಂತ್, ಮತ್ತಿತರರು ಸಹಕರಿಸಿದರು. ಸುಮಾರು 15 ರಿಂದ 20 ಸಾವಿರ ಖರ್ಚು ಬಂತು.

45 ನಿಮಿಷಗಳ ಈ ಡಾಕ್ಯುಮೆಂಟರಿಯ ಬಹುತೇಕ ಕೆಲಸ ಮುಗಿದು ಸುಮಾರು ಐದಾರು ತಿಂಗಳಾಯಿತು. ಹತ್ತಾರು ಜನ ಸ್ನೇಹಿತರಿಗೆ ಪರಿಚಿತರಿಗೆ ನೋಡಿ ಅಭಿಪ್ರಾಯ ಹೇಳಲು ಕೊಟ್ಟಿದ್ದೆ. ಸ್ನೇಹಿತರೊಬ್ಬರು ತಾವು ಕೆಲಸ ಮಾಡುವ ವಿಜಯನಗರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೋಸ್ಕರ ಇದರ ಪ್ರದರ್ಶನ ಇಟ್ಟಿದ್ದರು. ಯುವ ವಿದ್ಯಾರ್ಥಿಗಳ ಅಂದಿನ ಪ್ರತಿಕ್ರಿಯೆ ನೋಡಿ ಇದೊಂದು ಸಾರ್ಥಕ ಪ್ರಯತ್ನ ಎಂದು ಅನ್ನಿಸಿತ್ತು.

ಈ ಸಾಕ್ಷ್ಯಚಿತ್ರದ ಪ್ರದರ್ಶನ ಇಟ್ಟು ಇದನ್ನು ಬಿಡುಗಡೆ ಮಾಡಬೇಕು ಎನ್ನಿಸಿತ್ತು. ಆದರೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಹಲವೆ ಜನ ಬಂದು ನೋಡಿದರೆ ಅದು ಒಂದು ರೀತಿಯ ಅನೈತಿಕ ವೆಚ್ಚ ಎನ್ನಿಸಿ ಸುಮ್ಮನಾದೆ. ಬದಲಿಗೆ ಇದನ್ನು ಹೆಚ್ಚು ಜನ ನೋಡಲಿ ಎಂದು ಯೂಟ್ಯೂಬ್‌ಗೆ ಸೇರಿಸಿದ್ದೇನೆ. (ಡಿವಿಡಿಯಲ್ಲಿಯ ಚಿತ್ರ-ದೃಶ್ಯದ ಗುಣಮಟ್ಟ ಇನ್ನೂ ಚೆನ್ನಾಗಿದೆ. ಇಲ್ಲಿ ಅಂತರ್ಜಾಲಕ್ಕಾಗಿ 240 ಪಿಕ್ಸೆಲ್‌ಗಳಿಗೆ ಸೀಮಿತಗೊಳಿಸಲಾಗಿದೆ.)

ಇದೊಂದು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ ಸಾಕ್ಷ್ಯಚಿತ್ರ. ಯಾವುದೇ ಹಣಕಾಸಿನ ಲಾಭವನ್ನು ನಾನು ಇಲ್ಲಿ ಅಪೇಕ್ಷಿಸುತ್ತಿಲ್ಲ. ಯಾವುದೇ ಕಾಪಿರೈಟ್ಸ್ ಇಲ್ಲ. ಇದರ ಡಿವಿಡಿ ಪಡೆದುಕೊಂಡು ಯಾರು ಎಷ್ಟು ಕಾಪಿ ಮಾಡಿಯಾದರೂ ಹಂಚಬಹುದು.

ನಿಮ್ಮಲ್ಲಿ ಯಾರಿಗಾದರೂ ಈ ಸಾಕ್ಷ್ಯಚಿತ್ರದ ಡಿವಿಡಿ ಬೇಕಾದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ಬೆಲೆ ಕೇವಲ 25 ರೂಪಾಯಿ. (ಒಂದು ಖಾಲಿ ಡಿವಿಡಿಯ ಬೆಲೆಯೆ 12 ರಿಂದ 25 ಇರುತ್ತದೆ.) ಆದರೆ ಒಂದು ಡಿವಿಡಿ ಬರ್ನ್ ಮಾಡಲು ಸಾಕಷ್ಟು ಸಮಯ ಮತ್ತು ಶ್ರಮ ಹಿಡಿಸುವುದರಿಂದ ನೀವು ಕನಿಷ್ಟ ಹತ್ತು ಕೊಳ್ಳಬೇಕಾಗುತ್ತದೆ. ಅಂದರೆ 250 ರೂಪಾಯಿ ಕೊಟ್ಟರೆ ನಿಮಗೆ ಹತ್ತು ಡಿವಿಡಿಗಳು ಸಿಗುತ್ತವೆ. ಇವುಗಳನ್ನು ನೀವು ನಿಮ್ಮ ಸ್ನೇಹಿತರಿಗೆ, ನೆಂಟರಿಗೆ, ನೀವು ಓದಿದ ಶಾಲಾಕಾಲೇಜುಗಳಿಗೆ ಉಡುಗೊರೆಯಾಗಿ ಕೊಡಬಹುದು. ಈ ಡಾಕ್ಯುಮೆಂಟರಿಯನ್ನು ಒಮ್ಮೆ ನೋಡಿದರೆ ಇದನ್ನು ಯಾರು ನೋಡಬೇಕು ಎನ್ನುವ ಕಲ್ಪನೆ ನಿಮಗಾಗುತ್ತದೆ ಎನ್ನುವ ನಂಬಿಕೆ ನನ್ನದು.

ಮೊದಲೆ ಹೇಳಿದಂತೆ ಇದು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ ಪ್ರಯತ್ನ. ಇನ್ನೂ ಹಲವು ವೈಜ್ಞಾನಿಕ ಮತ್ತು ವೈಚಾರಿಕ ವಿಷಯಗಳ ಬಗ್ಗೆ ಇಂತಹುದೇ ಇನ್ನೂ ಕೆಲವು ಪ್ರಯತ್ನ ಮಾಡಬೇಕೆಂಬ ಆಲೋಚನೆಗಳಿವೆ. ನಿಮ್ಮಲ್ಲಿ ಯಾರಿಗಾದರೂ ಇಂತಹ ಪ್ರಯತ್ನದಲ್ಲಿ ಪಾಲ್ಗೊಳ್ಳಬೇಕೆಂಬ ಇಚ್ಚೆಯಿದ್ದಲ್ಲಿ ಮತ್ತು ನಿಮಗೆ ಸ್ಚ್ರಿಪ್ಟ್ ಬರೆಯುವ, ಅಥವ ವಿಡಿಯೊ ಎಡಿಟಿಂಗ್ ಮಾಡುವ ಅನುಭವವಿದ್ದಲ್ಲಿ ದಯವಿಟ್ಟು ಸಂಪರ್ಕಿಸಿ. (ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಕೆಲಸಗಳಲ್ಲಿ ತೊಡಗಿಕೊಳ್ಳುವ ಮನಸ್ಸಿರುವ volunteers ಮಾತ್ರ. ಉದ್ಯೋಗಾಕಾಂಕ್ಷಿಗಳಲ್ಲ.)

ದೂರವಾಣಿ: ೯೬೮೬೦-೮೦೦೦೫

 

20 thoughts on “ಭೂಮಿ ಹುಟ್ಟಿದ್ದು ಹೇಗೆ? ಕನ್ನಡ ಸಾಕ್ಷ್ಯಚಿತ್ರ

 1. Mallikarjuna Hosapalya

  ತುಂಬಾ ಚೆನ್ನಾಗಿದೆ, ಮಾಹಿತಿಪೂರ್ಣ. ನಿಮ್ಮ ಪ್ರಯತ್ನ ಸಾರ್ಥಕ. ನನಗೆ ಹತ್ತು ಪ್ರತಿ ಬೇಕಾಗಿದೆ. ಹಣ ಕಳಿಸುತ್ತೇನೆ.

  ಮಲ್ಲಿಕಾರ್ಜುನ ಹೊಸಪಾಳ್ಯ
  ತುಮಕೂರು

  Reply
 2. Kollegala Sharma

  ಕೃಷ್ಣಾರೆಡ್ಡಿ ಅವರಿಗೆ

  ಚಿತ್ರ ಚೆನ್ನಾಗಿದೆ. ತಾಂತ್ರಿಕವಾಗಿ ತುಸು ಸುಧಾರಣೆ ಅವಶ್ಯಕ ಎನ್ನಿಸಿದರೂ, ಮೊದಲ ಪ್ರಯತ್ನದಲ್ಲಿ ಇದು ನಿಜಕ್ಕೂ ಉತ್ತಮ ಸಾಧನೆ. ಅಭಿನಂದನೆಗಳು. ನನಗೂ ಹತ್ತು ಡಿವಿಡಿಗಳು ಬೇಕು. ಹೇಗೆ ಪಡೆಯಲಿ? ಹಣ ಕಳುಹಿಸುವುದು ಹೇಗೆ ತಿಳಿಸಿದರೆ ಚೆನ್ನ.

  ಕೊಳ್ಳೇಗಾಲ ಶರ್ಮ

  Reply
 3. thontadarya

  ಮಾನ್ಯ ರವಿ ಕೃಷ್ನಾ ರೆಡ್ಡಿಯವರೆ, ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ನಿಮ್ಮ ಚಿತ್ರವನ್ನು ನಮ್ಮ ಫಿಲಂ ಕ್ಲಬ್ ನಲ್ಲಿ ತೋರಿಸಬಯಸಿದ್ದೇನೆ. ದಯವಿಟ್ಟು ನಾನು ಡಿವಿಡಿ ಯನ್ನು ಹೇಗೆ ಪಡೆದುಕೊಳ್ಳಬಹುದು, ತಿಳಿಸಿ.ನಮ್ಮದು ಹೆಚ್ಚಾಗಿ ಹಿರಿಯರೇ ಇರುವ ಪುಟ್ಟ ಕ್ಲಬ್. ಆದರೂ ಸಂವಾದ ಜೋರಾಗಿಯೇ ನಡೆಯುತ್ತದೆ. ಅನೇಕ ಚಿತ್ರ ನಿರ್ದೇಶಕರು ತಮ್ಮ ಚಿತ್ರಗಳನ್ನು ಉಚಿತವಾಗಿ ನೀಡಿ,ತಾವೂ ಬಂದು ಸಹಕರಿಸಿದ್ದಾರೆ.ನೀವು ನನ್ನ ಇ-ಮೆಯಿಲ್ ವಿಳಾಸಕ್ಕೆ ಬರೆದರೆ ನಾನು ಸಂಪರ್ಕಿಸುತ್ತೇನೆ.ನನಗೂ ಇಂತಹ ಆಸೆ ಇದ್ದರೂ ಸಮಾನ ಮನಸ್ಕರಿಲ್ಲದೆ ಇರುವುದರಿಂದ ಸುಮ್ಮನಾಗಿದ್ದೇನೆ. ಭೆಟ್ಟಿಯಾಗೋಣ. ದಯವಿಟ್ಟು ಉತ್ತರಿಸಿ. ಸಂಪಿಗೆ ತೋಂಟದಾರ್ಯ

  Reply
 4. b.m.basheer

  ಕನ್ನಡದಲ್ಲಿ ಬಂದ ಮಣಿಭೌಮಿಕ್ ಅವರ ಕಾಸ್ಮಿಕ್ ಡಿಟೆಕ್ಟಿವ ಓದಿದ್ದೆ . ಅದರ ಗುಂಗು ನನ್ನಲ್ಲಿ ಈಗಲೂ ಇದೆ. ಬ್ರಹ್ಮಾಂಡದ ಆಳದ ಒಳಗೆ ನಾನು ಕಳೆದೆ ಹೋಗಿ ಬಿಟ್ಟಿದ್ದೆ. ನೀವು ಮಾಡುತ್ತಿರುವ ಪ್ರಯತ್ನ ಒಂದು ರೀತಿಯಲ್ಲಿ ದಾರ್ಶನಿಕವಾದುದು ಕೂಡ. ಶ್ಲಾಘನೀಯ ಪ್ರಯತ್ನ. ಎಲ್ಲ ವಿದ್ಯಾರ್ಥಿಗಳಿಗೂ ಇದು ತಲುಪಬೇಕಾಗಿದೆ. ನನಗೂ ಹತ್ತು ಪ್ರತಿ ಬೇಕು. ಹಣ ಕಳುಹಿಸುತ್ತೇನೆ.
  ಬಿ. ಎಂ. ಬಶೀರ್

  Reply
 5. Ananda Prasad

  ‘ಭೂಮಿ ಹುಟ್ಟಿದ್ದು ಹೇಗೆ’ ಉತ್ತಮವಾಗಿ ಮೂಡಿ ಬಂದಿದೆ ಮತ್ತು ಮಾಹಿತಿಪೂರ್ಣವಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಬಹುದು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಇಂಥ ೬ ಸಾಕ್ಷ್ಯ ಚಿತ್ರಗಳನ್ನು ತಯಾರಿಸಿದೆ. ರಾಜ್ಯ ವಿಜ್ಞಾನ ಪರಿಷತ್ ರಾಜ್ಯಾದ್ಯಂತ ೫೦೦ ಘಟಕಗಳನ್ನು ಹೊಂದಿದೆ ಹಾಗೂ ೪ ದೊಡ್ಡ ವಿಜ್ಞಾನ ಕೇಂದ್ರಗಳು ಹಾಗೂ ೪೨ ಸಣ್ಣ ವಿಜ್ಞಾನ ಕೇಂದ್ರಗಳನ್ನು ರಾಜ್ಯದಲ್ಲಿ ಹೊಂದಿದೆ. ಹೀಗಾಗಿ ರಾಜ್ಯ ವಿಜ್ಞಾನ ಪರಿಷತ್ ಇಂಥ ಚಿತ್ರಗಳ ಪ್ರದರ್ಶನ ತನ್ನ ಕೇಂದ್ರಗಳಲ್ಲಿ ಹಾಗೂ ಘಟಕಗಳಲ್ಲಿ ಪ್ರದರ್ಶಿಸಿದರೆ ಒಳ್ಳೆಯದು. ಅದೇ ರೀತಿ ಇಂಥ ಸಾಕ್ಷ್ಯ ಚಿತ್ರಗಳು ಪ್ರತಿ ಶಾಲೆಯಲ್ಲಿಯೂ ಪ್ರದರ್ಶನವಾಗುವಂತೆ ಆದರೆ ಒಳ್ಳೆಯದು. ದೂರದರ್ಶನದ ಚಂದನ ವಾಹಿನಿ ಅಥವಾ ಟಿವಿ ೯ ಅಥವಾ ಉದಯ ನ್ಯೂಸ್ ವಾಹಿನಿ ಮುಂತಾದವು ಇಂಥ ಸಾಕ್ಷ್ಯ ಚಿತ್ರಗಳ ಪ್ರಸಾರ ಮಾಡಲು ಮುಂದೆ ಬರಬೇಕು. ವಿದೇಶಗಳಲ್ಲಿ ಇರುವ ಕನ್ನಡಿಗರು ಇಂಥ ಪ್ರಯತ್ನಗಳಲ್ಲಿ ಕೈಗೂಡಿಸುವುದು ಒಂದು ಉತ್ತಮ ದೇಶ ಸೇವೆಯಾಗಬಹುದು.

  Reply
 6. Venkatesh Babu

  Hi Ravi,

  I think I have seen you in KKNC in Bay area, but we never had a chance to introduce ourselves. From long time I was looking for like minded people who are interested in these kind of topics. I really appreciate your effort in presenting these topics in Kannada. I wish you bring lot more of these kind of documentaries in Kannada like “How the life originated on earth?”, “Evolution of human beings”, “what is consciousness”, “How does brain work”, etc. I am fascinated by these subjects and it would be great if I can do something to bring these topics to the public. Please let me know if I can be of any help.

  Regards,
  VBabu

  Reply
 7. vijayendra

  A very good effort Ravi. I wholly enjoyed the documentary. Even 4 year old grand son understood the narration. Keep it up. Vijayendra 9448320220

  Reply
 8. Pingback: ವರ್ತಮಾನ.ಕಾಮ್

 9. Malathesha. M

  ಈ ಜೋತಿಷಿಗಳು ಮತ್ತು ಅವರ ಶಾಸ್ತ್ರ ಕೇಳಿಸಿಕೊಂಡರೆ ನಗೆಯ ಬುಗ್ಗೆ ಹರಿಯತ್ತೆ… ಅಲ್ಲ ಇವರುಗಳೇ ವಿಜ್ಞಾನಿಗಳೇನೋ ಎಂಬುವಂತೆ ವಿವರಿಸುತ್ತಾರಲ್ಲ… ಇದರ ಒಂದೊಂದು ಕಾಪಿಯನ್ನ ಎಲ್ಲಾ ಕನ್ನಡ ನ್ಯೂಸ್ ಚಾನೆಲ್ಗಳಿಗೆ ಕೊಟ್ಟು ಕಳಿಸಿ ಸಾರ್… ಆಗಲಾದರು ಬೆಳಿಗ್ಗೆ ಸ್ವಲ್ಪ ಈ ಜೋತಿಷಿಗಳಿಂದ ರಿಲೀಫ್ ಸಿಗಬಹುದು…

  Reply
 10. vivekananda

  Great initiative sir… you are doing great job in Karnataka.

  To manage effectively you can take the help of online guys such as Flipkart / Indiaplaza etc… I hope this is effective because they already have e-commerce in place.

  Reply
 11. Renukaprasad K.C

  ಭೂಮಿ ಹುಟ್ಟಿದ್ದು ಹೇಗೆ? ಡಾಕ್ಯುಮೆಂಟರಿ ತುಂಬಾ ಅದ್ಭುತವಾಗಿದೆ. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.ಈ ನಿಟ್ಟಿನಲ್ಲಿ ಈ ರೀತಿಯ ಡಾಕ್ಯುಮೆಂಟರಿಗಳು ನಿಮ್ಮಿಂದ ಸೃಷ್ಟಿಯಾಗಲಿ.

  Reply
 12. Balasaheb Lokapur

  Balasaheb Lokapur
  I being geography lecturer I realy I want D v D to show my students in class
  please send 10 dvd to me. I will send money now

  lecturer
  sakri college
  bagalakot

  Reply
 13. Maulana Abdul Hafeez

  ಮಾನ್ಯ ರವಿ ಕೃಷ್ಣಾ ರೆಡ್ಡಿಯವರೇ,
  ತಾವು ಮಾಡಿರುವಂತಹ ಪ್ರಯತ್ನ ಶ್ಲಾಘನೀಯ.
  ತಾವು ಹಣಕಾಸಿನ ಉದ್ದೇಶದಿಂದ ಇದನ್ನು ಮಾಡಲಿಲ್ಲ. ಬದಲಾಗಿ ಸಮಾಜದಲ್ಲಿ ಕಪಟ ಸ್ವಾಮೀಜಿಗಳು, ಮಂತ್ರವಾದಿಗಳು ,ತಂತ್ರವಾದಿಗಳು ಜನಸಾಮಾನ್ಯರಿಗೆ ನೀಡುವಂತಹ ಕಿರುಕುಳ ಹಾಗೂ ಉಪಟಲಗಳನ್ನು ತಮಗೆ ಸಹಿಸಲಾಗಲಿಲ್ಲ. ಇದನ್ನು ಹೇಗಾದರೂ ವೈಜ್ನಾನಿಕ ರೂಪದಲ್ಲಿ ಜನರಿಗೆ ಅತ್ಯಂತ ಸರಳ ರೂಪದಲ್ಲಿ ಮನವರಿಕೆ ಮಾಡಿಕೊಡಬೇಕು ಎಂಬ ತೀರ್ಮಾನಕ್ಕೆ ತಾವು ಬಂದಿದ್ದೀರಿ. ಇದಕ್ಕೆ ತಕ್ಕಂತಹ ರೂಪುರೇಶೆಗಳನ್ನು ಸಿಧ್ಧಪಡಿಸಿದ್ದೀರಿ. ಇದು ನೋಡಲಿಕ್ಕೆ 45 ನಿಮಿಷದ ವೀಡಿಯೋ ಆಗಿದೆ. ಆದರೆ ಇದನ್ನು ಸಿಧ್ಧಪಡಿಸಲು ಖಂಡಿತಾ ತಾವು ಪಟ್ಟಂತಹ ಶ್ರಮ ಎಷ್ಟಿರಬಹುದು ಎಂದು ವೀಕ್ಷಕರಿಗೆ ಮನವರಿಕೆ ಆಗುತ್ತದೆ.
  ಈಗ ನಿಸ್ವಾರ್ಥ ಎಂಬ ಪದ ಹೆಚ್ಚು ಕಡಿಮೆ ಮರೀಚಿಕೆಯಾಗಿಯೇ ಹೋಗಿದೆ. ದುಡ್ಡೇ ದೊಡ್ಡಪ್ಪ ಎಂದು ಹೇಳಿಕೊಳ್ಳುವಂತಹ ಕಾಲ ಇದು. ಪರಿಸ್ಥಿತಿ ಹೀಗಿರುವಾಗ ತಾವು ಇಷ್ಟೊಂದು ಕಷ್ಟಪಟ್ಟು ತಯಾರಿಸಿದಂತಹ ವೀಡಿಯೋದ ಕಾಪಿರೈಟ್ ಕೂಡಾ ಯಾವುದೇ ಅನುಮತಿ ಇಲ್ಲದೆ ಮಾಡಿಕೊಳ್ಳಬಹುದು ಎಂದಿರುವುದು ತಮ್ಮ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ. ತಮ್ಮಂತಹ ನಿಸ್ವಾರ್ಥಿಗಳ ಸೇವೆ ಇನ್ನು ಮುಂದಕ್ಕೂ ನಮಗೆ ಸಿಗುವಂತಾಗಲಿ.
  ಅಭಿನಂದನೆಗಳು ರವಿಕೃಷ್ಣಾ ರೆಡ್ಡಿಯವರೇ.

  Reply

Leave a Reply

Your email address will not be published. Required fields are marked *