ಮಾಧ್ಯಮಗಳ ಸುದ್ದಿಬಾಕತನ ಮತ್ತು ವಕೀಲರ ವಿರೋಧ


– ಸೂರ್ಯ ಮುಕುಂದರಾಜ್

B.A., LL.B.


 

ಶುಕ್ರವಾರದ (2/3/12) ಬೆಳಿಗ್ಗೆ ದೃಶ್ಯಮಾಧ್ಯಮದ ಮಂದಿ ರಾಜ್ಯದ ಜನತೆಯಲ್ಲಿ ಇನ್ನಿಲ್ಲದಂತೆ ಕುತೂಹಲ ಕೆರಳಿಸಿ ರೋಚಕ ಸುದ್ದಿ ನೀಡಿ ತಮ್ಮ ಬೆನ್ನನ್ನು ತಾವೇ exclusive ಎಂದು ತಟ್ಟಿಕೊಳ್ಳುವ ತವಕದಲ್ಲಿದ್ದರು. ಜನಾರ್ದನ ರೆಡ್ಡಿ ಎಂಬ ಅಂತರರಾಷ್ಟ್ರೀಯ ಗಣಿಕಳ್ಳನ ಮುಖವನ್ನು ರಾಜ್ಯದ ಜನತೆಗೆ ಇನ್ನಿಲ್ಲದಂತೆ ತೋರಿಸುವ ಆತುರದಲ್ಲಿ 24×7 ಸುದ್ದಿವಾಹಿನಿಗಳ ಕ್ಯಾಮೆರಾಗಳು ಸನ್ನದ್ಧವಾಗಿ ನಿಂತಿದ್ದವು. ವಾರ್ತಾವಾಚಕ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ತನ್ನ ಪ್ರತಿನಿಧಿಗೆ ಕೇಳುತ್ತಿದ್ದ, ಅವನ ಪ್ರಶ್ನೆಗಳು ರೆಡ್ಡಿಯನ್ನು ಕರೆತಂದ ಬಸ್‌ಗೆ ಏಸಿ ಇದೆಯಾ, ರೆಡ್ಡಿ ಸ್ನಾನ ಮಾಡಿದ್ರಾ, ತಿಂಡಿ ಏನು ಕೊಟ್ಟಿದ್ದಾರೆ, ಇತ್ಯಾದಿ ಇತ್ಯಾದಿ. ರೆಡ್ಡಿಗೆ ತಂದಿಟ್ಟ ಖಾರಾಬಾತ್, ಇಡ್ಲಿಯನ್ನು ಬ್ರೇಕಿಂಗ್ ಸುದ್ದಿಯಾಗಿ ಬಿತ್ತರಸಿ ಈ ದೃಶ್ಯಾವಳಿ ನಮ್ಮ ಟೀವಿಯಲ್ಲಿ ಮಾತ್ರವೆಂಬ ಸೀಲನ್ನು ಹೆಮ್ಮೆಯಿಂದ ಹೊಡೆದುಕೊಂಡವು. ಹಲಸೂರು ಗೇಟ್ ಠಾಣೆಯಿಂದ ಹೊರಟ ರೆಡ್ಡಿಯಿದ್ದ ಪೊಲೀಸ್ ವಾಹನದ ಬೆನ್ನತ್ತಿದ ಮಾಧ್ಯಮಗಳು ಸಿವಿಲ್ ಕೋರ್ಟ್ ಸಮುಚ್ಛಯದಲ್ಲಿರುವ ಸಿ.ಬಿ.ಐ. ನ್ಯಾಯಾಲಯದವರೆಗೂ ತಮ್ಮ ಪ್ರತಿನಿಧಿಗಳನ್ನು ನಿಲ್ಲಿಸಿದ್ದರು. ಬಹುಶಃ ರೆಡ್ಡಿಯ ಮುಖವನ್ನು ಜನತೆಗೆ ತೋರಿಸುವ ತವಕದಲ್ಲಿ ಕೆಲವು ತಿಂಗಳ ಹಿಂದೆ ವಕೀಲರನ್ನು ಗೂಂಡಾಗಳೆಂದು ಕರೆದು ದ್ವೇಷ ಕಟ್ಟಿಕೊಂಡದ್ದನ್ನು ಮರೆತು ಸಿವಿಲ್ ಕೋರ್ಟ್ ಆವರಣದೊಳಗೆ ಕಾಲಿಟ್ಟ ಮಾಧ್ಯಮಗಳಿಂದಾಗಿ ಒಂದು ಕರಾಳ ಘಟನೆ ಸಂಭವಿಸಿತು.

ಮಾಧ್ಯಮಗಳು ಇಂತಹ ಪರಿಸ್ಥಿತಿಗೆ ಮುಖಾಮುಖಿಯಾಗಲು ಕಾರಣ ತಮ್ಮ ಸೋಗಲಾಡಿತನದ ವರ್ತನೆಯೆಂದು ಮರೆಯಬಾರದು. ಸುದ್ದಿಗೆ ರೋಚಕತೆ ತುಂಬಿ ಜನರ ಮನಸ್ಸಲ್ಲಿ ಗೊಂದಲ ಬಿತ್ತುವ ಕೆಲಸಗಳನ್ನು ಟಿವಿ ಮಾಧ್ಯಮಗಳು ಮಾಡುತ್ತಿಲ್ಲವೆ? ಯಾವುದೇ ವಿಚಾರವನ್ನು ಸುದ್ದಿ ಮಾಡುವಾಗ ತಾವು ತೋರಿಸಿದ ಸುದ್ದಿಯೇ ನೈಜವಾದದ್ದು ಎನ್ನುತ್ತಾರೆ. ಮದುವೆ ಮನೆಗಳಿಗೆ ಹುಡುಗಿಯ ತವರುಮನೆ ಕಡೆಯವರನ್ನು ಕಟ್ಟಿಕೊಂಡು ನುಗ್ಗಿ ಗೂಸಾ ಕೊಡಿಸಿ ಮಜಾ ತೆಗೆದು ಕೊಳ್ಳುವ ಮಾಧ್ಯಮಗಳ ಸುದ್ದಿದಾಹಕ್ಕೆ ಬಲಿಯಾದವರೆಷ್ಟು ಜನ? ಒಂದು ಸುದ್ದಿಯನ್ನು ಜಡ್ಜ್‌ಮೆಂಟ್ ನೀಡುವ ನ್ಯಾಯಾಧೀಶರಂತೆ ತೀರ್ಪು ನೀಡುವ ಕಾರ್ಯವನ್ನು ಇಂದಿನ ಚಾನಲ್‌ಗಳ ನಿರೂಪಕರು ಮಾಡುತ್ತಿದ್ದಾರೆ.

ಜನವರಿ ತಿಂಗಳಲ್ಲಿ ನಡೆದ ಒಂದು ಸಣ್ಣ ಘಟನೆ ಈ ಮಟ್ಟದ ಪ್ರಭಾವ ಬೀರಲು ಕಾರಣವಾ ಎಂಬ ಪ್ರಶ್ನೆಯೇಳಬಹುದು. ಅದೊಂದೆ ಘಟನೆ ಮಾಧ್ಯಮ ಮತ್ತು ವಕೀಲರ ನಡುವಿನ ಕದನಕ್ಕೆ ಕಾರಣವಲ್ಲ. ನಟ ದರ್ಶನ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇಂತಹದೇ ಸುದ್ದಿಬಾಕ ಹಪಹಪಿಯಲ್ಲಿ ತಮ್ಮ ದಂಡಿನೊಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣಕ್ಕೆವು ಕಾಲಿಟ್ಟಿವೆ. ದರ್ಶನ್ ವಿಚಾರಣೆಯ ನಂತರ ಪರಪ್ಪನ ಅಗ್ರಹಾರಕ್ಕೆ ಕರೊದಯ್ಯಲು ಹೊರಟ ವಾಹನದ ಹಿಂದೆ ಹೋಗಲು ತವಕಿಸುತ್ತಿದ್ದ ಸಮಯ ಚಾನಲ್‌ನ ವಾಹನ ಚಾಲಕ ವಕೀಲರೊಬ್ಬರ ಕಾಲಿನ ಮೇಲೆ ವಾಹನ ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದ ವಕೀಲರಿಗೆ ದಬಾಯಿಸಿದ್ದಾರೆ. ಅಂದು ಖಾಸಗಿ ಚಾನಲ್‌ನ ವರದಿಗಾರರ ದರ್ಪ ಪ್ರದರ್ಶನಕ್ಕೆ ಅಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನ ವಕೀಲರು ತಿರುಗಿಬಿದ್ದಿದ್ದಾರೆ. ನಿಮಗೆ ಸುದ್ದಿ ಬೇಕಿದ್ದರೆ ಕೋರ್ಟ್‌ನ ಹೊರಗೆ ಚಿತ್ರೀಕರಿಸಿ, ಇಲ್ಲಿ ವಾತಾವರಣ ಕದಡಬೇಡಿಯೆಂದು ಮಾಧ್ಯಮಗಳ ಪ್ರವೇಶವನ್ನು ಅಂದಿನಿಂದ ತಡೆದಿದ್ದಾರೆ. ಒಂದು ಸಣ್ಣ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದ ಮಾಧ್ಯಮಗಳಿಗೆ ಮೃಷ್ಟಾನ್ನ ಭೋಜನ ಸಿಕ್ಕಂತೆ ಜನವರಿ ತಿಂಗಳ ವಕೀಲರ 7ಗಂಟೆ ರಸ್ತೆ ತಡೆ ಪ್ರಕರಣ ಸಂಭವಿಸಿತು. ವಕೀಲರಿಂದ ಆ ದಿನ ಸಾವಿರಾರು ಜನರು ಪರದಾಡಬೇಕಾಯಿತು ನಿಜ. ಆದರೆ ಆ ಘಟನೆಗೆ ಕಾರಣವಾದ ವಕೀಲನೊಬ್ಬನ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಧರಣಿ ನಡೆಸಿದ ವಕೀಲರನ್ನೇ ಗೂಂಡಾಗಳಂತೆ ಮಾಧ್ಯಮಗಳು ಚಿತ್ರಿಸಿದವು. ಪೊಲೀಸ್ ಕಮೀಶನರ್ ಮಿರ್ಜಿ ಘಟನೆ 12.30 ಕ್ಕೆ ಆರಂಭವಾದ ಬಗ್ಗೆ ತಿಳಿದರೂ ಸಂಜೆ 5ಕ್ಕೆ ಬಂದಿದ್ದಾರೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿದ್ದೆ ಆಗಿದ್ದರೆ ಅಂದೇಕೆ ಒಬ್ಬ ಹಲ್ಲೆ ನಡೆಸಿದ ಪೊಲೀಸ್ ಪೇದೆಯ ಮೇಲೆ ಕ್ರಮ ಕೈಗೊಳ್ಳಲುಇಷ್ಟು ಹೊತ್ತು ಬೇಕಾಯಿತೆ ಎಂದೇಕೆ ಮಾಧ್ಯಮಗಳು ಗೃಹ ಸಚಿವರನ್ನು ಅಂದು ಕೇಳಲಿಲ್ಲ?.

ವಕೀಲರನ್ನು ಜನರ ಕಣ್ಣಲ್ಲಿ ವಿಲನ್‌ಗಳಂತೆ ಚಿತ್ರಿಸಿದ ಮಾಧ್ಯಮಗಳು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿವೆಯೇ? ಭ್ರಷ್ಟ ರಾಜಕಾರಣಿಗಳಿಂದ ಎಂಜಲು ಕಾಸಿಗಾಗಿ ಸೈಟಿಗಾಗಿ ಕೈಯೊಡ್ಡಿ ಸುದ್ದಿ ಬರೆಯುವ ಪತ್ರಕರ್ತರೆಲ್ಲಿ, ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡು ಜೈಲಿಗಟ್ಟಿದ ವಕೀಲರೆಲ್ಲಿ? ಎಷ್ಟೋ ಘಟನೆಗಳನ್ನು ಸೃಷ್ಟಿಸಿ, ತಿರುಚಿ ತೋರಿಸುವ ಸುದ್ದಿಮಾಧ್ಯಮಗಳಲ್ಲಿ ಪ್ರಾಮಾಣಿಕತೆಯ ಲವಲೇಶವೂ ಇಲ್ಲದಂತಾಗಿದೆ. ಖಾಸಗಿ ವಿಚಾರಗಳನ್ನು ಸಾರ್ವಜನಿಕಗೊಳಿಸಿ ಮಾನಹಾನಿ ಮಾಡುವ ಮಾಧ್ಯಮಗಳಿಂದ ಜವಾಬ್ದಾರಿಯುತ ಪತ್ರಿಕೋದ್ಯಮ ನಿರೀಕ್ಷಸಲು ಸಾಧ್ಯವೇ? ಶುಕ್ರವಾರದ ಘಟನೆಯನ್ನು ವೈಭವೀಕರಿಸಿ ಪ್ರಜಾಪ್ರಭುತ್ವದ ಮೇಲಿನ ಹಲ್ಲೆಯೆಂದು ಜನರ ಮುಂದೆ ದುಃಖ ತೋಡಿಕೊಳ್ಳುತ್ತಿರುವ ಮಾಧ್ಯಮಗಳು ಪೊಲೀಸರೊಂದಿಗೆ ಸೇರಿ ಕೆ.ಆರ್. ವೃತ್ತದಲ್ಲಿ ಒಬ್ಬೊಬ್ಬ ವಕೀಲರನ್ನೇ ಇಟ್ಟಾಡಿಸಿಕೊಂಡು ಹೊಡೆದದ್ದನ್ನೇಕೆ ಬಿತ್ತರಿಸಲಿಲ್ಲ? ಸಾಮಾನ್ಯ ಜನರಿಗೆ ಪೊಲೀಸರಿಂದ ದೌರ್ಜನ್ಯವಾದರೆ ನೆನಪಾಗುವುದು ಮಾಧ್ಯಮಗಳಲ್ಲ, ವಕೀಲರು ಅವರ ಕಣ್ಣಿಗೆ ಮೊದಲು ಕಾಣಿಸುವುದು. ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಹೆದರುವ ಎಷ್ಟೋ ಜನರಿಗೆ ವಕೀಲರಿದ್ದರೆ ಎಂತಹದ್ದೋ ಒಂದು ಧೈರ್ಯ. ಖಾಕಿಧಾರಿಗಳ ದರ್ಪ ವಕೀಲರ ಮುಂದೆ ನಡೆಯುವುದಿಲ್ಲ. ಅವಕಾಶವಾದಿ ಪೊಲೀಸರು ಪಾಟಿ ಸವಾಲಿನ ಸೋಲಿಗೊಳಗಾರುತಾರೆ. ವಕೀಲರೆಂದರೆ ಅವರಲ್ಲಿ ಎಂತಹದ್ದೋ ಒಂದು ಸಣ್ಣ ಕಂಪನವಿದೆ. ಇಂತಹ ಪೊಲೀಸರು ಮಾಧ್ಯಮದವರೊಂದಿಗೆ ಸೇರಿ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳನ್ನು ವಕೀಲರಿಗೆ ಒಡೆಯಿರಿ ನಾವಿದ್ದೇವೆಂದು ಉಬ್ಬಿಸಿ ಕಲ್ಲಲ್ಲಿ ಹೊಡೆಸಿದ್ದನ್ನೇಕೆ ನೇರ, ದಿಟ್ಟತನವಿರುವ ಸುದ್ದಿವಾಹಿನಿಗಳು ಬಿತ್ತರಿಸಲಿಲ್ಲ?

ದೃಶ್ಯ ಮಾಧ್ಯಮಗಳು ಇಂದು ಬಳಸುವ ಭಾಷೆಯನ್ನು ಕೇಳಿದರೆ ಎಂತಹ ಕೊಳಕುತನ ಅವರಲ್ಲಿ ತುಂಬಿದೆಯೆಂಬ ಅರಿವಾಗುತ್ತದೆ. ಪಬ್ಲಿಕ್ ಟಿವಿಯ ರಂಗನಾಥ್ ಸಿವಿಲ್ ಕೋರ್ಟ್ ಏನು ವಕೀಲರ ಅಪ್ಪನ ಆಸ್ತಿಯೇ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಸುದ್ದಿಗಾಗಿ ಕೋರ್ಟ್‌ನೊಳಗೆ ನುಗ್ಗಲು ಇವರಿಗೆ ಅನುಮತಿಯಿದೆಯೇ? ಸಾರ್ವಜನಿಕರಿಗೆ ತೊಂದರೆ ನೀಡಿ ಜನಾರ್ದನ ರೆಡ್ಡಿಯ ಮುಖವನ್ನು ತೋರಿಸಿರೆಂದು ಯಾರಾದರೂ ದುಂಬಾಲು ಬಿದ್ದಿದ್ದರೆ? ಇವರ ವಾಹಿನಿಯಲ್ಲಿ ಜನಲೋಕಾಯುಕ್ತರೆಂಬ ಅಣೆಪಟ್ಟಿ ಕಟ್ಟಿಕೊಂಡು ಇವರು ನಡೆಸುವ ರೇಡುಗಳು ನ್ಯಾಯಯುತವೆ? ಮಾಧ್ಯಮವೊಂದರ ಒಡೆಯನೆಂಬ ಕಾರಣಕ್ಕೆ ಕಾನೂನು ಇವರ ಸ್ವತ್ತೇ? ಇನ್ನೊಬ್ಬ ಪತ್ರಕರ್ತ ವಿಶ್ವೇಶ್ವರ್ ಭ‌ಟ್‌ರ ಚಾನಲ್‌ನ ಭಾಷಾ ಬಳಕೆ ನಿಜಕ್ಕೂ ಬೀದಿ ಕುಡುಕನ ಪದಬಳಕೆಯಾಗಿತ್ತು. ರಾಜ್ಯದ ಗೃಹ ಸಚಿವರನ್ನೇ ಬಳೆತೊಟ್ಟಿದ್ದೀರಾ ಎಂದು ಕೇಳುವ, ಕರಿಕೋಟಿನ ಉಗ್ರರು ಎನ್ನುವ, ವಕೀಲರ ಸಂಘದ ಅಧ್ಯಕ್ಷರಿಗೆ ಕಡುಬು ತಿನ್ನುತ್ತಿದ್ದೀರಾ ಎಂದು ಹೀಗೆಳೆಯುವ ಇವರು ಮಟಮಟ ಮಧ್ಯಾಹ್ನವೇ ತೀರ್ಥಸೇವಿಸಿದ್ದರೇನೊ ಎಂದುಕೊಳ್ಳಬಹುದಲ್ಲವೇ? ಪತ್ರಕರ್ತರಿಗಿರಬೇಕಾದ ಕನಿಷ್ಟ ಜ್ಞಾನವೂ ಇವರಲ್ಲಿ ಇಲ್ಲವೆನಿಸುತ್ತದೆ. ಇವರ ಪದಬಳಕೆ ಇವರ ಮನಸ್ಸಲ್ಲಿರುವ ಕೊಳಕುತನ ಮತ್ತು ಅಪ್ರಬುದ್ಧತೆ ತೋರುತ್ತದೆ.

“ಅಗ್ನಿ” ವಾರಪತ್ರಿಕೆಯ ಮಾರ್ಚ್ 8, 2012ರ ಸಂಚಿಕೆಯಲ್ಲಿ ಸದಾನಂದ ಗಂಗನಬೀಡು ತಮ್ಮ ಲೇಖನ ‘ಭಯೋತ್ಪಾದನಾ ದಾಳಿ – ದೃಶ್ಯ ಮಾಧ್ಯಮಗಳ ಯುದ್ಧ ಸಂಭ್ರಮ”ದಲ್ಲಿ  ’26 ನವೆಂಬರ್, 2008 ರಂದು ಮುಂಬೈ ಮೇಲೆ ಆದ ಭಯೋತ್ಪಾದನೆಯ ದಾಳಿಯ ಲೈವ್ ಟೆಲಿಕಾಸ್ಟ್ ಮಾಡಲು ಮಾಧ್ಯಮಗಳು ಪೈಪೋಟಿಗಿಳಿದು ಎನ್ಎಸ್‌ಜಿ ಯೋಧರು ರೂಪಿಸುತ್ತಿದ್ದ ಯುದ್ಧತಂತ್ರ ಭಯೋತ್ಪಾದಕರಿಗೆ ತಿಳಿಯುವಂತೆ ಮಾಡಿದವು, ಇದರ ಫಲವಾಗಿ ನಮ್ಮ ರಾಜ್ಯದ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಏಳು ಯೋಧರು ಉಗ್ರರ ಗುಂಡಿಗೆ ಬಲಿಯಾಗಬೇಕಾಯಿತು. ದೇಶದ ಮಾಧ್ಯಮಗಳು ಯುದ್ಧ ಸಂಭ್ರಮದಿಂದ ಅವನತಿಯ ಅಂಚಿಗೆ ತಲುಪುತ್ತಿವೆ, ದೇಶದ ಭವಿಷ್ಯವನ್ನೂ ಗಂಡಾಂತರಕ್ಕೆ ಸಿಲುಕಿಸುತ್ತಿವೆ,’ ಎಂದು ಹೇಳುತ್ತಾರೆ. ಮತ್ತು ಮಾಧ್ಯಮಗಳ ಈ ದಾಹವನ್ನು ತಮಂಧದ ಕೇಡು ಎನ್ನುತ್ತಾರೆ.

ಹೀಗೆ ಕೇಡುಗಾಲದ ರಣಕೇಕೆಗೆ ಸದಾ ಹಪಿಹಪಿಸುವ ಮಾಧ್ಯಮಗಳು ಜಡ್ಜ್‌ಮೆಂಟಲ್ ಆಗುವುದನ್ನು ಬಿಟ್ಟು ನೈಜ ಸುದ್ದಿಯನ್ನು ನಿಸ್ಪಕ್ಷಪಾತವಾಗಿ ಜನರಿಗೆ ತೋರಿಸಲಿ. ಮಾಧ್ಯಮಗಳ ಪದಪ್ರಯೋಗ ಪ್ರಚೋದನಕಾರಿಯಾಗಿ ಇಲ್ಲದ್ದಿದ್ದರೆ ವಕೀಲ ಸಮುದಾಯ ಪ್ರಚೋದನೆಗೊಳಗಾಗುತ್ತಿರಲಿಲ್ಲ. ಮಾಧ್ಯಮಗಳ ಏಕಪಕ್ಷೀಯ ಧೋರಣೆಗೆ ಸುದ್ದಿಯಾಗಿ ನಲುಗಿದ ಎಷ್ಟೋ ಜನ ಅಮಾಯಕರ ನಿಟ್ಟುಸಿರಿಗೆ ಹೋಲಿಸಿದರೆ ಮಾಧ್ಯಮಗಳಿಗೆ ಆದ ಪರಿಸ್ಥಿತಿ ಏನೇನು ಅಲ್ಲ ಎನ್ನಬಹುದು. ವಕೀಲರನ್ನು ಕ್ರಿಮಿನಲ್‌ಗಳು, ರೌಡಿಗಳು ಎಂದೆಲ್ಲಾ ಹೇಳುವ ನೈತಿಕತೆ ಮಾಧ್ಯಮಗಳಿಗಿಲ್ಲ. ಇಂದು ಮಾಧ್ಯಮಗಳು ತೋರಿಸುತ್ತಿರುವ ಸುದ್ದಿಗಳು ಜನರ ಮನದಲ್ಲಿ ವಕೀಲರು ದುಷ್ಟರೆಂದು ಕಾಣಿಸುತ್ತಿರಬಹುದು, ಒಂದು ದಿನ ಸುದ್ದಿಯ ಬೆನ್ನತ್ತಿ ಪತ್ರಿಕಾ ಧರ್ಮವನ್ನೇ ಮರೆತ ಮಾಧ್ಯಮಗಳ ಮುಖವಾಡದ ದುಷ್ಟತನದ ಅನುಭವ ವೈಯಕ್ತಿಕವಾಗಿ ಅನುಭವಿಸಿದಾಗ ಮಾತ್ರ ಯಾರು ಸರಿಯೆಂದು ಗೊತ್ತಾಗುತ್ತದೆ. ಒಂದಷ್ಟು ಪತ್ರಕರ್ತರು ಕಾಸಿಗಾಗಿ ಸುದ್ದಿ ಪ್ರಕಟಿಸುತ್ತಾರೆಂದ ಮಾತ್ರಕ್ಕೆ ಎಲ್ಲಾ ಪತ್ರಕರ್ತರು ಕಾಸಿಗಾಗಿ ಕೈಯೊಡ್ಡುತ್ತಾರೆ ಎಂದು ಹೇಳುವುದು ನ್ಯಾಯವಲ್ಲ, ಅಲ್ಲವೇ?

26 thoughts on “ಮಾಧ್ಯಮಗಳ ಸುದ್ದಿಬಾಕತನ ಮತ್ತು ವಕೀಲರ ವಿರೋಧ

  1. SRIDHARA BABU N

    ಇಂದಿನ ನೈಜ ಪತ್ರಕರ್ತರ ಗುಣ ನಿಮ್ಮಲ್ಲಿದೆ, ನಿಮ್ಮ ವರದಿ ಮತ್ತು ಪದ ಬಳಕೆ ನೋಡಿದಾಗ ಕನ್ನಡಪ್ರಭಾ ಪತ್ರಕರ್ತರೆಲ್ಲಾ ನಿಮ್ಮ ಕಾಲಿನಡಿ ತೂರಿ ಕನ್ನಡ ಕಲಿಯಬೇಕು. ಒಂದು ಕಡೆಯೂ ಆಂಗ್ಲ ಬಾಷೆ ಬಳಕೆ ಮಾಡದೆ ಬರೆದಿರುವ ನಿಮ್ಮ ಬರಹ ಅದ್ಬುತ, ನಿಮ್ಮ ಕಾಳಜಿಯ ಬಗ್ಗೆ ನಮ್ಮ ವಕೀಲರ ಪರವಾಗಿ ಧನ್ಯವಾದಗಳು.

    Reply
  2. Ananda Prasad

    ವಕೀಲರು ಎಷ್ಟೇ ಸಮರ್ಥಿಸಿಕೊಂಡರೂ ವಕೀಲರ ವರ್ತನೆಯನ್ನು ರಾಜ್ಯದ ಜನ ಮೆಚ್ಚುವುದಿಲ್ಲ. ಸುದ್ದಿ ವಾಹಿನಿಗಳ ನಡವಳಿಕೆಯಲ್ಲಿ ಲೋಪಗಳಿವೆ ನಿಜ. ಆದರೆ ಅವರು ಗೂಂಡಾಗಿರಿಗೆ ಇಳಿದಿದ್ದಾರೆ ಎಂಬುವುದನ್ನು ಜನ ನಂಬುವುದಿಲ್ಲ. ಕಾನೂನು ಬಲ್ಲ ವಕೀಲರು ಎಲ್ಲವನ್ನೂ ಕಾನೂನಿನ ಪ್ರಕಾರವೇ ಬಗೆ ಹರಿಸಿಕೊಳ್ಳಬೇಕೆಂದು ಜನ ಬಯಸುತ್ತಾರೆ. ಆದರೆ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ವಕೀಲರೂ ಮಾಡಿದ್ದು ಎಷ್ಟು ಮಾತ್ರಕ್ಕೂ ಅಸಮರ್ಥನೀಯ ಹಾಗೂ ವಕೀಲರ ಗೂಂಡಾಗಿರಿ ಎಂದು ಕರೆಯಲು ಅವರ ವರ್ತನೆಯೇ ಕಾರಣ. ಗೂಂಡಾಗಿರಿ ಎಂದು ಸುದ್ದಿ ವಾಹಿನಿಗಳು ಮಾತ್ರವಲ್ಲ, ಮುದ್ರಣ ಮಾಧ್ಯಮದ ಮಂದಿಯೂ ಆ ಘಟನೆಯನ್ನು ಗೂಂಡಾಗಿರಿ ಎಂದು ಕರೆದಿದ್ದಾರೆ. ಮುದ್ರಣ ಮಾಧ್ಯಮದ ಮಂದಿ ಸಾಕಷ್ಟು ಸಂಯಮದಿಂದ ವರದಿ ಮಾಡಿರುವುದನ್ನು ನಾವು ಕಂಡಿದ್ದೇವೆ. ಅಂದಿನ ಘಟನೆಯನ್ನು ಯಾವುದೇ ಜವಾಬ್ದಾರಿಯುತ ವಕೀಲರು ಖಂಡಿಸಲಿಲ್ಲ. ಹೀಗಾಗಿ ಜನರಿಗೆ ವಕೀಲರ ಬಗ್ಗೆ ಕೆಟ್ಟ ಭಾವನೆಯೇ ಬರಲು ಕಾರಣವಾಗಿದೆ. ವಕೀಲರು ತಮ್ಮ ವರ್ತನೆಯನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಎಲ್ಲ ಟಿವಿ ಮಾಧ್ಯಮಗಳೂ ಎಲ್ಲ ವಕೀಲರೂ ಕೆಟ್ಟವರು ಎಂದು ಹೇಳಿಲ್ಲ. ಉದಯ ನ್ಯೂಸ್ ವಾಹಿನಿ ತನ್ನ ‘ಕರೆಂಟ್ ಲೈವ್’ ಎಂಬ ಕಾರ್ಯಕ್ರಮದಲ್ಲಿ ನಡೆದ ಚರ್ಚೆಯಲ್ಲಿ ಕೆಲವು ವಕೀಲರು (ಸಾವಿರದಲ್ಲಿ ನೂರು ವಕೀಲರು) ಗೂಂಡಾ ವರ್ತನೆ ತೋರಿದ್ದಾರೆ, ಇದನ್ನು ಉಳಿದ ವಕೀಲರು ಖಂಡಿಸಬೇಕೆಂದೆ ಹೇಳಿದ್ದಾರೆ. ವಕೀಲರು ಕೋರ್ಟಿನ ಆವರಣದಲ್ಲಿ ಮಾಧ್ಯಮದ ಮಂದಿಗೆ ಪ್ರವೇಶ ನಿರಾಕರಿಸುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭೂಷಣವಲ್ಲ ಎಂಬುದ ಸಾಮಾನ್ಯ ನಾಗರಿಕರ ಅಭಿಮತ. ಕೋರ್ಟಿನಲ್ಲಿ ಏನು ಕಲಾಪ ನಡೆಯುತ್ತದೆ ಎಂದು ತಿಳಿಯುವ ಎಲ್ಲ ಹಕ್ಕೂ ಜನತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ವಕೀಲರು ಮಾಧ್ಯಮ ಮಂದಿಗೆ ಪ್ರವೇಶ ನಿರಾಕರಿಸುವುದು ಸರ್ವತ್ರ ಖಂಡನೀಯ.

    Reply
  3. patrakarta

    Surya, you have written to imply that journalists did provoke the incident by entering the court premises. Journalists were there to cover an event. If advocates were irritated by their presence, it is truly their problem. Your article is grossly one-sided. The act the advocates did on Jan 17, was no different from goondaism. That’s what the media reported. If two advocates were beaten up by the police, it is concerned to those two people. As lawyers they did know how to handle that. When the common public approach courts seeking justice, it was unfortunate you advocates came out of court and staged rasta roko to seek ‘justice’! There is no defence to such an act.
    You have pointed out unruly behaviour of scribes and police in the court premises. That is highly condemnable. Journalists, those attacked on lawyers and damaged vehicles, were no better than goondas. They deserve similar punishment as unruly advocates do. The police joined hands with media. It is sad that innocent lawyers were also beaten up. The guilty must be punished, nomatter whichever section they belong to.

    Reply
  4. ಅಮಾಸ.

    ಗಣಿಮಾಫಿಯಾ, ವಕೀಲರೂ, ಮಾಧ್ಯಮಗಳು, ಪೋಲೀಸೂ, ಪ್ರಜಾಪ್ರಭುತ್ವದಲ್ಲಿ ಅಸ್ತಿತ್ವಕ್ಕಾಗಿ ಹೊಡೆದಾಡುತ್ತಿವೆ. ಇಲ್ಲಿ ಬಿಸಿಲು ಧಗೆ, ದನ-ಕರುಗಳಿಗೆ-ಮನುಷ್ಯರಿಗೂ ಕುಡಿಯಲು ನೀರಿಲ್ಲ.ಕರೆಂಟ್ ಕಟ್, ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ ಹಳ್ಳಿಗರು ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆಗೆ,ಮದುವೆಗೆ, ಹಬ್ಬಕ್ಕೆ ತಯಾರಿ ನಡೆಸಿದ್ದಾರೆ. ಇವರ ಪುಂಡಾಟಿಕೆ ಅವರಿಗೆ ಹಿಡಿಸುವುದಿಲ್ಲ, ಅವರ ಭಾಷೆ ಇವರಿಗೆ ಹಿಡಿಸುವುದಿಲ್ಲ. ಛೇ….!

    Reply
  5. g.mahanthesh.

    ವಕೀಲರು ಇನ್ನಾದರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ವಕೀಲರು ಮತ್ತು ನ್ಯಾಯಾಂಗವೇನೂ ಪ್ರಶ್ನಾತೀತವಲ್ಲ. ವಕೀಲರು, ಕಕ್ಷಿದಾರರನ್ನ ಕುರಿ ಚರ್ಮದಂತೆ ಸುಲಿಯುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಎಲ್ಲಾ ನ್ಯಾಯಾಧೀಶರೇನೂ ಪ್ರಾಮಾಣಿಕರಲ್ಲ. ನ್ಯಾಯಾಂಗ ಇಲಾಖೆ ನೌಕರರಿಗೆ ಮೀಸಲಾಗಿಟ್ಟಿದ್ದ ಸೈಟುಗಳನ್ನ 80 ಮಂದಿ ನ್ಯಾಯಾಧೀಶರು ಹೊಡೆದುಕೊಂಡಿಲ್ಲವೇ…?
    ಮಾಧ್ಯಮದಲ್ಲೂ ಕಾಸಿಗಾಗಿ ಸುದ್ದಿಗಾಗಿ ಮಾಡುವುದನ್ನ ಯಾರೂ ಸಮರ್ಥಿಸುವುದಿಲ್ಲ. ಆದರೆ, ಇಲ್ಲಿ ಒಂದು ಪ್ರಶ್ನೆ ಏನಂದರೇ, ವಕೀಲರೆಲ್ಲರೂ ಸಾರ್ವಜನಿಕ ಹಿತಾಸಕ್ತಿಯೊಂದನ್ನೇ ಮುಖ್ಯವಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರಾ…? ಬಲಿಸ್ಟ ಕಕ್ಷಿದಾರರು, ಎದುರು ಪರ ವಕೀಲರು, ನ್ಯಾಯಾಧೀಶರೊಂದಿಗೆ ಸೇರಿಕೊಂಡು ಅಡ್ಜಸ್ಟ್​ಮೆಂಟ್​ ಜಡ್ಜ್​ಮೆಂಟ್​ ಕೊಡುತ್ತಿಲ್ಲವೇ…? ನ್ಯಾಯಾಧೀಶರ ರೂಸ್ಟ್​ ರೆಸಾರ್ಟ್​ ಹಗರಣವನ್ನ ಬಹುಶಃ ಯಾರೂ ಮರೆತಿರಲಾರರು. ನೀವು ಕೂಡ…
    ವಕೀಲರ ಕೆಲ ಗುಂಪು ಮಾಧ್ಯಮದ ಮಂದಿಯನ್ನ ಸುತ್ತುವರಿದು ಮಾರಣಾಂತಿಕ ಹಲ್ಲೆ ನಡೆಸಿದ್ದನ್ನ ದೃಶ್ಯ ಮಾಧ್ಯಮಗಳಲ್ಲಿ ತೋರಿಸಿ ವಕೀಲರ ಕಾರ್ಯ ವೈಖರಿ, ಮನೋ ಧರ್ಮವನ್ನ ಬಟಾ ಬಯಲು ಮಾಡಿದ್ದಾರೆ. ಇಷ್ಟಾದರೂ ವಕೀಲರ ಕೃತ್ಯವನ್ನ ಸಮರ್ಥನೆಗೆ ಮುಂದಾಗಿರುವುದು ಸರಿಯಲ್ಲ. ವಕೀಲರಲ್ಲೂ ಪ್ರಾಜ್ಞರು, ಸಾರ್ವಜನಿಕ ಹಿತಾಸಕ್ತಿ ಬಯಸುವವರಿದ್ದಾರೆ. ಪ್ರೊ.ರವಿವರ್ಮಕುಮಾರ್​, ಸಿ.ಎಚ್‌.ಹನುಮಂತರಾಯರು, ಸಿ.ಎಸ್‌.ದ್ವಾರಕಾನಾಥ್ ಹೀಗೆ ಒಂದಷ್ಟು ಮಂದಿ ಇದ್ದಾರೆ. ಎಲ್ಲಾ ಮಾಧ್ಯಮಗಳೂ ಕಾಸಿಗಾಗಿ ಸುದ್ದಿ ಬಿತ್ತರಿಸುತ್ತಿಲ್ಲ ಎಂಬುದನ್ನ ಗಮನಿಸಬೇಕು. ಕೋರ್ಟ್​ ಏನೂ ಯಾರಪ್ಪನ ಮನೆ ಆಸ್ತಿಯೂ ಅಲ್ಲ, ಅದೊಂದು ಸಾರ್ವಜನಿಕ ಆಸ್ತಿ ಎಂಬ ಅಂಶವನ್ನ ಅರಿತರೆ ಒಳ್ಳೇಯದು.
    ಇನ್ನಾದರೂ ವಕೀಲರು, ತಮಗೆ ತಗುಲಿರುವ ಕಳಂಕವನ್ನ ತೊಳೆದುಕೊಳ್ಳಲು ಮುಂದಾಗಬೇಕು. ಮಾಧ್ಯಮದವರಿಗೆ ವೃತ್ತಿ ಧರ್ಮದ ಪಾಠ ಹೇಳುವಷ್ಟು ನೈತಿಕತೆ, ವಕೀಲರಿಗೂ ಇಲ್ಲವಾಗಿದೆ ಅನ್ನೋದನ್ನ ಅರಿಯಬೇಕು.
    ಹಿಂದೆಲ್ಲಾ ಇದೆಂಥಾ ರಾಜ್ಯ…ಇದೆಂಥಾ ರಾಜ್ಯ…ಪೊಲೀಸರ ರಾಜ್ಯ ಎಂದು ಕರೆಯಲಾಗುತ್ತಿತ್ತು. ಇನ್ನು ಮುಂದೆ ಇದೆಂಥಾ ರಾಜ್ಯ…ಇದೆಂಥಾ ರಾಜ್ಯ…ದುಷ್ಟ ವಕೀಲರ ರಾಜ್ಯ ಅಂತ ಬದಲಿಸಬೇಕಾದೀತೇನೂ….?
    ಇಂತಹ ಮಾತುಗಳಿಗೆ ಅವಕಾಶ ಸಿಗಬಾರದು ಎನ್ನುವುದಾದರೇ ವಕೀಲರು ಅತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಇದು ಇನ್ನಾದರೂ ಸಾಧ್ಯವಾಗುತ್ತಾ…?

    Reply
  6. ರವಿ ಕುಮಾರ

    ಮಾಧ್ಯಮಗಳ ಏಕಮುಖ ವ್ಯಕ್ತಿತವನ್ನು ನೀವು ಚೆನ್ನಾಗಿ ಬಿಂಬಿಸಿದ್ದಿರಿ.. ಆದರೂ ಘಟನೆ ನಡೆದಿದ್ದು ದುರದೃಷ್ಟಕರ. ಮಾಧ್ಯಮದವ್ರು ಕೂಡಾ ವಕೀಲರನ್ನು ಥಳಿಸಿದ್ದು ಯಾವ ಚಾನೆಲ್ ಪ್ರಸಾರ ಮಾಡದಿರುವುದು ಅವರ ಪಾರದರ್ಶಕತೆಯನ್ನು ತೋರಿಸುತ್ತದೆ.

    Reply
  7. ರವಿ

    ನೀವೇನೇ ವಾದ ಮಾಡಿದರೂ ವಕೀಲರ ವರ್ತನೆ ಸಮರ್ಥನೀಯವಲ್ಲ.

    Reply
    1. Laklshmikantha

      What does your comment mean? which act of lawyers he is defending? getting beaten by police! Is the act of channels which is going on for two days as if there is no other thing in the world. Can we defend this!!

      Reply
  8. chandrashekar.p

    ನೀಮಗೆ ಏನಾದರೂ ರೆಡ್ಡಿಯನ್ನು ಸುದ್ಧಿಯನ್ನು ತೋರಿಸುವುದು ನಿಮಗೆ ಸಮಸ್ಯೆನ? ಅಥವ ರೆಡ್ಡಿಯ ಬಗ್ಗೆ ಸುದ್ಧಿ ಮಾಡಬಾರದು ಅನ್ನುವುದು ನಿಮ್ಮ ಉದ್ದೇಶನ?. ನಿಮ್ಮ ಲೇಖನವನ್ನು ಓದಿದರೆ ಯಾರಿಗಾದರೂ ಈ ಪ್ರಶ್ನೆ ಮೂಡದಿರಲು ಸಾಧ್ಯವಿಲ್ಲ. ಸುದ್ಧಿಯನ್ನು ಪ್ರಕಟಿಸುವುದು ಸುದ್ಧಿವಾಹನಿಗಳ ಕೆಲಸ, ತಮಗೆ ಬೇಕಾದ ಸುದ್ದಿ ಅಥವ ಕಾರ್ಯಕ್ರಮವನ್ನು ಆಯ್ಕೆ ಮಾಡಿ ನೋಡುವ ಅವಕಾಶ ಅಂತು ಪ್ರೇಕ್ಷಕನಿಗಿದೆ. ಪ್ರಚೋಧನ ಕಾರಿ ಸುದ್ಧಿಗಳನ್ನು ನೋಡದೇ ಇದ್ದರೆ ಮಾದ್ಯಮಗಳ ಟಿ.ಆರ್.ಪಿಗಳೇ ಇಲ್ಲದೆ ಮುಚ್ಚುತ್ತಿದ್ದವಲ್ಲ. ಅಥವ ಪ್ರಚೋಧನಕಾರಿಯಲ್ಲ ಸುದ್ಧಿಗಳನ್ನು ಬಿತ್ತಿರಿಸುವ ಚಂದನ, ಡಿ,ಡಿ 1 ಮಾದ್ಯಮಗಳನ್ನು ನಗರದಲ್ಲಿರುವರು ಎಷ್ಟು ಜನ ನೋಡಿ ಪ್ರೋತ್ಸಾಹಿಸುತ್ತಿದ್ದಾರೆ.
    ಇರಲಿ ಮಾಧ್ಯಮಗಳು ಸರಿಯಾದ ಕಾರ್ಯನಿರ್ವಹಿಸದೇ ಇರುವುದು ಅಥವ ಅವರು ಸುದ್ಧಿಗಾಗಿ ಎಲ್ಲೆ ಮಿರಿದರೂ ಆ ತಪ್ಪನ್ನು ಶಿಕ್ಷಿಸುವ ಕ್ರಮವನ್ನು ನಿಮ್ಮ ಕಾನೂನು ಸಂವಿಧಾನದಲ್ಲಿ ವಿವರಿಸಿಲ್ಲವೇ? ಪಾಳೇಗಾರರಂತೆ ಹಲ್ಲೆ ಮಾಡುವ ಮೂಲಕ ನ್ಯಾಯವನ್ನು ಜಾರಿ ಮಾಡಲು ನೀವು ಕಾನೂನಿಗಿಂತಲೂ ದೊಡ್ಡವರೇ? ನಿಮ್ಮ ಕಾನೂನು ಅಥವ ಎಲ್.ಎಲ್.ಬಿಯಲ್ಲಿ ಇದನ್ನೇ ಹೇಳಿಕೊಡಲಾಗಿದಯಾ?
    ಸಿ.ಬಿ.ಐ ರೆಡ್ಡಿಯನ್ನು ಬಂದಿಸಿದ ನಂತರ ಮೊದಲ ಬಾರಿಗೆ ಕರ್ನಾಟಕಕ್ಕೆ ಬರಲಾಗಿತ್ತು. ಅದನ್ನ ಸುದ್ಧಿ ಮಾಡುವುದು ಸಮಾನ್ಯ. ರೆಡ್ಡಿ ಬೆಂಗಳೂರಿಗೆ ಬರುವ ಹಿಂದಿನ ದೀನವೇ ಮಾಧ್ಯಮದಲ್ಲಿ ನಾಳೆ ರೆಡ್ಡಿ ಬೆಂಗಳೂರು ನ್ಯಾಯಲಾಯಕ್ಕೆ ಹಾಜರಾಗುವ ಸಾಧ್ಯತೆಗಳ ಬಗ್ಗೆ ವರದಿ ಪ್ರಕಟಿಸಿತ್ತು. ಅದರಂತೆ ರೆಡ್ಡಿ ಬೆಂಗಳೂರಿಗೆ ಬಂದಿದ್ದು ಕರ್ನಾಟಕಕ್ಕೆ ಬಂದಿರುವುದ ಪ್ರಮುಖ ಸುದ್ದಿ ಆಗುತಿತ್ತು. ಅವರ ಯಾರೋ ದಾರಿಯಲ್ಲಿ ಹೋಗುವ ವ್ಯಕ್ತಿ ಅಲ್ಲವಲ್ಲ. ಈ ರಾಜ್ಯದ ಮಾಜಿ ಸಚಿವ, ಕರ್ನಾಟಕ ಸರ್ಕಾರದ ಉಳಿಸಿದವರು, ಹಣದ ಮಳೆ ಸುರಿದು ಸಚಿವರನ್ನು ಕಾಸಿಗೆ ಕೊಂಡು ಸರ್ಕಾರ ನಡೆಸಿದವನು, ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಿದ ಒಬ್ಬ ಲೂಟಿಕೋರ ರಾಜ್ಯಕ್ಕೆ ಬರುವುದು ಸಣ್ಣ ಅಥವ ಮಾನ್ಯತೆ ಇಲ್ಲದ ಸುದ್ಧಿಯೇ?
    ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಮಾಧ್ಯಮ ಲೋಕದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಮುಂದೆ ತಂದು ನಿಲ್ಲಿಸಿದರೆ ನಿಮ್ಮ ದೌರ್ಜನ್ಯ ಮರೆಮಾಚುವುದೇ? ಒಂದು ವೇಳೆ ಸಮರ್ಥನೆಗೆ ನಿಂತಲ್ಲಿ ವಕೀಲರ ಬಗ್ಗೆ ಮಾಡಲು ಬೇಕಾದಷ್ಟು ಇದೆ.
    ಕಾನೂನಿ ಅರಿವಿದೆ ಎಂದು ಒಂದು ಕಾರಣಕ್ಕೆ ಕಾನೂನಿಗಿಂತ ದೊಡ್ಡವರಾದರೇ ಯಾವು ನ್ಯಾಯ ನಿಮ್ಮ ಕಡೆ ನಿಲ್ಲುತ್ತದೆ?.

    Reply
  9. Ashwini

    Your article raises some pertinent points about the media but at the same time what you have written is absolutely biased and the evidence that you have marshalled to prove your points casts doubt on your integrity as a lawyer.

    You have recalled the police atrocity on some lawyers who violated traffic rules some days ago. Was it just a case of police atrocity on lawyers or was the police atrocity a sequel to the three lawyers atrocity on the hapless traffic constable in the first place? Please clarify with your lawywer friends.

    About the much debated 28/11 media coverage, enough has been said about the media’s overzealousness. But to say that the media coverage leaked the strategy to the militants is laughable. Senior military officers like former Army Spokesperson S K Sakuja have said it repeatedly. You are quoting Agni…Aha Aha…

    Reply
  10. raj

    Yes the media’s some of the peoples thinks that they can do anything, they can as well take bribe and publish some wrong story … how many of the media persons have made crores of monet today ? where that money comes from ? these media persons think that they are the supreme, let them remember that they exist only if people watch them.. they also mis guide the people…

    Reply
  11. Bengaluriga

    As expected this article defends their (lawyer’s) action. But the sad thing is that these lawyers forgotten how to behave in such situations. Instead of using the law & rules they showed their might and now they cry hoarse and they expect the sympathy from very people whom they have attacked.

    Reply
  12. bharath

    Bengaluriga, nimmanna nodi nagodu alodu gottagtilla…namage yara simpathy nu beda, media davarige janagala sympathy bekittu, adakke 3 dinadina namma image halu madiddu…yavdadru bagge mathadtha, eradu kadeyavaranna keli judge madbeku…

    Reply
  13. sunil kumar bj

    Drushya Madhyamadavara kelasave drushyagalannu bittarisuvudu andamele anvaru reddy mukhanadru torisli adarinda nimagenu tondare? nodo janakke artha agutte , ade riti avarenu court nalli yava lawer hege anta enu torisoke bandilvalla
    idella doddavaragalu nadesta iro hodedata
    so cheap to look
    samarthanegalantu innu asahya media & lawers ellardu

    Reply
  14. Avinash

    brother, really it is true that these media people and police personnels do not have ethical values… they think as if they are the only reformers of the society … we condemn this act ..

    we being the law students support you

    Avinash And Sunil
    Dhrawd

    Reply
  15. r.ramachandra

    ondhu bari tappu madidare avarannu bidabahudu vakeelaru galate maduvudu, policenavara jothe galate maaduvudu publice mele halle maduvudu, traffice police navara jothe galate maduvudu normal agibittide. vakeelaru tamma principles annu change madikolluvudu olleyadu, yekendare police iruvudu one lakh, lawyers iruvudu some lakhs but publice iruvudu 6 crore avarella tamma sahaneya route bittu vakeelaranthe madidare avara gati?

    Reply
  16. C.S.Satish kumar

    you the media people self declared that 4th wing of government, ok assuming for a movement you media is 4th wing of government. our constitution is ensure the rights and duties to other wings of government as like you the 4th wing of our government is also have rights and fundamental obligations and duties. non of media was acted with morally and ethically binding on all mass media. you the mass media is acted with bias. you colluded with police passed bade massage to society and made grate mistake it can’t rectify.

    Reply
  17. ಟಿ ಕೆ ಎಸ್ ಭಟ್

    ಮೇಲಿನ ಲೇಖನದಲ್ಲಿ ಮಾಧ್ಯಮ ಎಂದಿರುವಲ್ಲಿ ವಕೀಲ ಎಂದು ಹಾಕಿ ಬರೆದರೂ ಅದೆಲ್ಲವೂ ನಿಜವಾಗುತ್ತದೆಯಲ್ಲವೇ? ಮೊನ್ನೆಯ ಪ್ರಕರಣದಲ್ಲಿ ಮಾಧ್ಯಮಗಳ ಏಕಪಕ್ಷೀಯ ಧೋರಣೆಯ ಬಗ್ಗೆ ಮಾತನಾಡುತ್ತಿರುವ ವಕೀಲರಲ್ಲಿ ಯಾರೊಬ್ಬರೂ ತಮ್ಮವರ ಅಧಿಕಪ್ರಸಂಗಿತನದ ಬಗ್ಗೆ ಹೇಳಿಕೊಳ್ಳುತ್ತಿಲ್ಲ. ಆದರೆ ಅನೇಕ ಮಾಧ್ಯಮದ ಮಿತ್ರರು ಆತ್ಮಾವಲೋಕವನ್ನು ಬಹಿರಂಗವಾಗಿಯೇ ಮಾಡಿಕೊಂಡಿದ್ದಾರೆ. ಸಿಟಿ ಸಿವಿಲ್ ಕೋರ್ಟ್ ಸಾಕಷ್ಟು ‘ಸಿವಿಲ್’ಆಗಿ ಇಲ್ಲ ಎಂಬುದನ್ನು ಹೇಳುವುದಕ್ಕೆ ಮಾಧ್ಯಮಗಳು ಬೇಕಾಗಿಲ್ಲ. ಅಲ್ಲಿಗೆ ಭೇಟಿ ನೀಡಿದ ಯಾವುದೇ ಮನುಷ್ಯ ಹೇಳಬಹುದು. ಅನೇಕರನ್ನು ಥಳಿಸುವುದಕ್ಕಾಗಿಯೇ ಒಂದು ಸುಳ್ಳು ಕೇಸು ದಾಖಲಿಸಿ ಇಲ್ಲಿಗೆ ಕರೆಯಿಸಿಕೊಳ್ಳುವ ಪ್ರವೃತ್ತಿಯ ಬಗ್ಗೆ ತಿಳಿಯದೇ ಇರುವ ವಕೀಲರೇನೂ ಇರಲಿಕ್ಕಿಲ್ಲ. ವಕೀಲರು ಮಾಧ್ಯಮದವರಿಗೆ ಥಳಿಸುವುದಕ್ಕೆ ಮೊದಲು ಇತರ ಅನೇಕರಿಗೆ ಅನೇಕ ಬಾರಿ ಇಲ್ಲಿ ಥಳಿಸಿದ್ದಾರೆ. ಅವರನ್ನು ಅಂದೇ ಮಾನವಂತ ವಕೀಲರು ಖಂಡಿಸಿ ಎಚ್ಚರಿಕೆ ನೀಡಿದ್ದರೆ ಮೊನ್ನೆಯ ಘಟನೆ ಸಂಭವಿಸುತ್ತಲೇ ಇರಲಿಲ್ಲ ಎಂಬುದನ್ನೇಕೆ ಮರೆಯುವುದು. ಪೊಲೀಸರು ಮಾಧ್ಯಮಗಳನ್ನು ಬಳಸಿಕೊಂಡರು ಎಂಬುದು ವಕೀಲರ ಆರೋಪ. ಹಾಗೆ ಬಳಸಿಕೊಳ್ಳಲು ಸಾಧ್ಯವಾಗುವಂಥ ವಾತಾವವರಣವೊಂದನ್ನು ಸೃಷ್ಟಿಸಿಕೊಟ್ಟದ್ದೂ ವಕೀಲರೇ ಹೊರತು ಮಾಧ್ಯಮದವರಲ್ಲ.

    Reply
  18. prasad raxidi

    ವಕೀಲರಲ್ಲೂ ಪ್ರಜ್ಞಾವಂತರು ಇದ್ದಾರೆ,ಆದರೆ ಅವರು ಹೇಳಿದ್ದು ಮಾಧ್ಯಮದಲ್ಲಿ ಹೆಚ್ಚು ವರದಿಯಾಗಿಲ್ಲ , ಹಾಸನದಲ್ಲಿ ನಿಜ ನುಡಿದ ಐವರು ವಕೀಲರ ಮೇಲೆ( ಜ. ಹೊ ನಾರಾಯಣ ಸ್ವಾಮಿ, ಭಾನು ಮುಷ್ತಾಕ್, ಜವರೇಗೌಡ ಮುಂತಾದವರು) ಅಮಾನತು ಕ್ರಮಕ್ಕೆ ಹಾಸನದ ವಕೀಲರ ಸಂಘ ಮುಂದಾಗಿದೆ..!

    Reply
  19. Akshatha Raveesh

    Good article Soorya…………but all these efforts are useless as the general public has pledged its thinking capacity and concluding ability with the medias…………..
    “bhorgallamele neereredanthe………”

    Reply
  20. ಪುರುಷೋತ್ತಮ

    ಪೋಲಿಅಸರು ಮತ್ತು ಮಾದ್ಯಮಗಳು ಸೃಷ್ಟಿಸಿರುವ ಗೂಂಡಾಗಿರಿಗಿಂತ ವಕೀಲರು ಮಾಡಿದ ತಪ್ಪು ನನಗೆ ಚಿಕ್ಕದೆಂದು ನನ್ನ ಭಾವನೆ. ಮಂಗಳೂರಿನ ರೇವೂ ಪಾರ್ಟಿಗಳಲ್ಲಿ ನಡೆದ ಕಾಮಕೀಳೆಯನ್ನು ಕ್ಷಣ ಕ್ಷಣಕ್ಕು ಬಿತ್ತರಿಸಿದರು ಹಾಗೆಯೆ ಪೋಲಿಸರು ಯಾವ ಪ್ರಮಾಣದ ಪ್ರಮಾಣಿಕರು ಎಂದು ನಮಗೆಲ್ಲ ಗೊತ್ತಿದೆ ಚಿಕ್ಕ ಚಿಕ್ಕ ಹುಡಿಗಿಯರನ್ನು ತನ್ನ ಅಧಿಕಾರದಿಂದ ಬಳಸಿಕೊಂಡಿರುವುದನ್ನು ನಾನು ಬಿಡಿಸಿ ಹೇಳ ಬೇಕಾಗಿಲ್ಲ. ಮಾದ್ಯದ ವರದಿಗಾರರು ತನ್ನ ಪ್ಯಾಂಟಿನ ಜಿಪ್ಪನ್ನು ತೆಗೆದು ತೋರಿಸಿದ್ದು ವಿಡಿಯೋ ನೀವು ನೋಡಬಹುದು. ಅಲ್ಲದೆ ಕೆ,ಆರ್, ಸರ್ಕಲ್ಲ್ ನಲ್ಲಿ ವರದಿಗಾರರು ಕಲ್ಲನ್ನು ಕೈಯಲ್ಲಿಡಿದು ನಿಂತಿರುವ ದೃಷ್ಯವನ್ನು ನೀವು ನೋಡಬಹುದು. ಪೋಲಿಸರು ವಕೀಲರ ಗಾಡಿಗಳಿಗೆ ಬೆಂಕಿಯನ್ನಿಡುವುದನ್ನು ನೀವು ನೋಡಬಹುದು ಇವು ಯಾವ ದೃಷ್ಯಗಳು ಮಾದ್ಯಮದ ಕಣ್ಣಿಗೆ ಕಾಣಿಸಿಲ್ಲವೇ? ನನಗೂ ಒಳ್ಳೆಯ ಮಾದ್ಯಮದ ಮತ್ತು ಪೋಲಿಸ್ ಸ್ನೇಹಿತರು ಇದ್ದಾರೆ ಅವರು ಯಾರು ಈ ರೀತಿ ವರ್ತಿಸುತ್ತಿಲ್ಲ. ಜನರು ದಡ್ಡರಲ್ಲ ಜನರಿಗೆ ಗೊತ್ತಿದೆ ಯಾವುದು ಸತ್ಯ ಯಾವುದು ಸುಳ್ಳು ಎಂದು ಮಾದ್ಯಮಗಳು ತಮ್ಮ ಟಿ.ಆರ್.ಪಿ. ರೇಟ್ ಗಳ ಬರಾಟೆಯಲ್ಲಿ ವಕೀಲರನ್ನು ವಿಲನ್ನಗಳಾಗಿ, ರೌಡಿಗಳಾಗಿ, ತಾಲೀಬಾನುಗಳಾಗಿ, ಹೇಳಿ ಹಸಿ ಹಸಿ ಸತ್ಯಗಳೆಂದು ಬಿತ್ತರಿಸುತ್ತ ಜನರ ಕಣ್ಣಿಗೆ ಮಣ್ಣನ್ನು ಎರಚುತಿದ್ದಾರೆ.

    Reply
  21. Surya

    Javabdariyuta sthanadalliruva madhyamagalu police ilakege lati charge madi antha prochodane needuvudu yaava vrutti dharma? galate gatisiddu court aavaranada horage aadare aamayakridda courtina olage nuggi barisiddu yeshtu sari?.

    Reply
  22. ANIL SWAMY

    “ಮಾಧ್ಯಮಗಳದು ತಪ್ಪು ಅನ್ನೊ ರೀತಿ ಇಲ್ಲಿ ಬಿಂಬಿಸಲಾಗಿದೆ..
    ಎಕೆಂದರೆ ಸ್ವಲ್ಪ ದಿನಗಳ ಹಿಂದೆ ಬೆಂಗಳೂರಿನ ಕೋಟರ್್
    ಆವರಣದಲ್ಲಿ ಮಾಧ್ಯಮದವರು ವರದಿ ಮಾಡುತ್ತಿರುವಾಗ
    ಕೆಣಕಿದ್ದು ಯಾರು.? ಅದೇ ಆ ಕಪ್ಪು ಕೋಟಿನವರೆ,
    ಇದೇ ನಾ ಅವರು ನ್ಯಾಯ ಹೇಳೋದು.? ಇದೆನಾ ಅವರು
    ಕಲಿತಿದ್ದು.? ಇಲ್ಲಿ ಮಾದ್ಯಮಗಳದ್ದು ತಪ್ಪು ಇರುತ್ತವೆ. ನಿಜ..
    ಆದರೆ ಆ ತಪ್ಪುಗಳು ಸುದ್ಧಿ ಕೊಡೊ ಆತರದಲ್ಲಿ ಕೆಲವೊಂದು
    ಸಲ ಎಡವಟ್ಟು ಆಗೋದು ಸಹಜ.. ಜನ ಬಯಸೋದು ಕೂಡ ಅದನ್ನೆ.

    Reply
  23. ANIL SWAMY-YADAGIRI

    “ಜಾಮೀನಿಗೆ ಕೊಟ್ಟ ಲಂಚ ಐದು ಕೋಟಿ ರೂಪಾಯಿ
    ನ್ಯಾಯಧೀಶರ ಭ್ರಷ್ಟತೇ ತೊಲಗಬೇಕು”

    ಯಾದಗಿರಿ : ಭಾರತದಲ್ಲಿ ಒಂದು ಗಾದೆ ಮಾತು ಅತ್ಯಂತ ಪ್ರಚಲಿತದಲ್ಲಿದೆ.. ಎಲ್ಲರ ಮನೆ ದೋಸೆ ತೂತೆ… ಹೌದು ಇದು ನೂರಕ್ಕೆ ನೂರರಷ್ಟು ಸತ್ಯ.. ಹೌದು ನಮ್ಮ ಸಂವಿಧಾನದ ಎಲ್ಲಾ ಅಂಗಗಳಿಗೆ ಈಗ ತೂತು ಬಿದ್ದಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಅನ್ನೊದಕ್ಕೆ ಗಣಿಧಣಿ ಜನಾರ್ಧನ ರೆಡ್ಡಿಗೆ ಬೇಲು ದೊಕಿಸಿಕೊಡುವುದರಲ್ಲಿ ಹೈದ್ರಾಬಾದ್ನ ಸಿಬಿಐ ವಿಶೇಷ ನ್ಯಾಯಲಯದ ನ್ಯಾಯಧೀಶರು ರೆಡ್ಡಿ ಬಳಗದಿಂದ ಲಂಚ ಪಡೆದದ್ದು ಈಗ ಜಗಜ್ಜಾಹಿರ. ಈಗ ನಿವೇ ಹೇಳಿ.. ನಮ್ಮ ದೇಶದ ಮಯ್ಯಾದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿ ಹರಜಾಗಿದೆ. ನಾನು ಇಲ್ಲಿ ನ್ಯಾಯಂಗ ವ್ಯವಸ್ಥೆಯ ಬಗ್ಗೆ ಟೀಕೆ ಮಾಡ್ತಾಯಿಲ್ಲ.. ಆದರೆ ಇಲ್ಲಿ ಜನಸಾಮಾನ್ಯರ ಸ್ಥಿತಿಗತಿ ಏನೆಂಬುದನ್ನು ಯಾರು ಅರ್ಥ ಮಾಡಿಕೊಳ್ಳಬೇಕು.. ರಾಜಕೀಯ ವ್ಯವಸ್ಥೆಯಂತು ಹರಿದು ಹೋದ ಬಟ್ಟೆಯಂತಾಗಿದೆ.. ಜನಸಾಮಾನ್ಯರಿಗಾಗಿ ಕಾನೂನು ಎಂಬ, ನಮ್ಮ ನ್ಯಾಯಂಗದ ಮೂಲಾಂಶ ಈಗ ನಂಬಿಕೆ ಕಳೆದುಕೊಳ್ಳುತ್ತಿದೆ. ಒಬ್ಬ ಸಾಮಾನ್ಯ ಮನುಷ್ಯು ನ್ಯಾಯ ಗೆಲ್ಲಲು ಅಥಾವ ನ್ಯಾಯಲಯದಿಂದ ಜಾಮೀನು ಪಡೆಯಲು ಚಪ್ಪಲಿ ಹರಿಯೋವರೆಗೂ ಅಲೆದಾಡಬೇಕು ಮತ್ತು ದುಡ್ಡು ಖಚರ್ು ಮಾಡ್ಬೇಕು. ಆದರೆ ಒಬ್ಬ ಪ್ರಭಾವಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಅತೀ ಬೇಗನೇ ಜಾಮೀನಿನ ಮೇಲೆ ಹೊರಗೆ ಬಂದು ಐಷರಾಮಿಯಾಗಿ ಒಡಾಡುತ್ತಾನೆ. ಆದರೆ ಇಲ್ಲಿ ಸಾಮಾನ್ಯ ವ್ಯಕ್ತಿಯ ಪಾಡು ನಾಯಿ ಪಾಡು.. ನ್ಯಾಯ ಕೊಡಬೇಕಾದ ನ್ಯಾಯಧೀಶರೇ ಈ ರೀತಿ ಲಂಚ ತೆಗೆದುಕೊಂಡರೆ-ಬೇಲಿಯೇ ಎದ್ದು ಹೋಲ ಮೇಯ್ದ ಹಾಗೇ ಆಗುತ್ತೇ..

    ಅನಿಲ್ ಸ್ವಾಮಿ, ಯಾದಗಿರಿ

    Reply
  24. ANIL SWAMY-YADAGIRI

    ” ಹೋ… ಹಾಗದರೆ ನಾನು ಒಬ್ಬ ಜನಸಾಮಾನ್ಯನಾಗಿ ನಿಮ್ಮನ್ನು ಒಂದು ಸಿಂಪಲ್ ಆಗಿ ಪ್ರಶ್ನೆ ಕೇಳುತ್ತೇನೆ., ದಯವಿಟ್ಟು ತಪ್ಪು ಭಾವಿಸಬೇಡಿ..
    ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವಾಗ ನೀವುಗಳು ನಿಸ್ಪಕ್ಷವಾಗಿ ನ್ಯಾಯ ದೊರಕಿಸಿ ಕೊಡುವಿರಾ.? ಮಾಧ್ಯಮಗಳು ವರದಿ ಮಾಡೋದು ತಪ್ಪು ಅಂದರೆ
    ನೀವುಗಳು ವಾದ ಮಾಡೋದು ತಪ್ಪು ಅಂತಾ ನಾವುಗಳು ಭಾವಿಸಬೇಕಾದಿತು..

    ಅನಿಲ್ ಸ್ವಾಮಿ, ಯಾದಗಿ

    Reply

Leave a Reply to Bengaluriga Cancel reply

Your email address will not be published. Required fields are marked *