ತನ್ನ #*$% ತೋರಿಸುತ್ತಿರುವ ಈ “ವರದಿಗಾರ” ಯಾರು?

-ಶಿವರಾಮ್

ಈ ವೀಡಿಯೋ ಒಮ್ಮೆ ನೋಡಿ, ನಿಮ್ಮೊಳಗೆ ಅಸಹ್ಯ ಹುಟ್ಟುತ್ತದೆ. ಪತ್ರಕರ್ತರಾಗಿದ್ದಲ್ಲಿ ತಲೆತಗ್ಗಿಸಬೇಕೆನಿಸುತ್ತದೆ. ಸುದ್ದಿ ವಾಹಿನಿಯ ಲೋಗೋವನ್ನು ಬಲಗೈಯಲ್ಲಿ ಹಿಡಿದು ವರದಿಗಾರನೊಬ್ಬ ವಕೀಲ ವೃಂದಕ್ಕೆ ತನ್ನ  #*$%ವನ್ನು ತೋರಿಸಲು ಯತ್ನಿಸುತ್ತಿರುವ ತೀರಾ ಮುಜುಗರ ಹುಟ್ಟಿಸುವ ದೃಶ್ಯವಿದು. ಈ ದೃಶ್ಯವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವ ವಕೀಲರ ಪ್ರಕಾರ, ಮಾರ್ಚ್ ಎರಡರಂದು ಕೋರ್ಟ್ ಆವರಣದಲ್ಲಿ ನಡೆದ ಘಟನೆಗಳಿಗೆ ಇದು ಮೂಲ ಕಾರಣ.

ಈ ಅಸಹ್ಯಕರ ದೃಶ್ಯದಲ್ಲಿ ಹಿಂದುಗಡೆ ಅನೇಕ ಕೆಮರಾಗಳಿವೆ, ಮತ್ತು ಅವು ಸುಸ್ಥಿತಿಯಲ್ಲಿವೆ. ಅದರರ್ಥ ಈ ದೃಶ್ಯದ ನಂತರವಷ್ಟೆ ಪರ್ತಕರ್ತರ ಮೇಲೆ ಹಲ್ಲೆಗಳಾದವು. ‘ಅಲ್ಲಿ ಪತ್ರಕರ್ತರ ಮೇಲೆ ನಡೆದದ್ದು ಅಪ್ರಚೋದಿತ ಹಲ್ಲೆ’ ಎಂದು ಪದೇ ಪದೇ ಹೇಳುತ್ತಿರುವ ದೃಶ್ಯ ಮಾಧ್ಯಮಗಳ ವರದಿಗಾರರು, ಸಂಪಾದಕರು ಈಗಲಾದರೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಪ್ರತಿ ದಿನ ಪತ್ರಕರ್ತರ ಮೇಲೆ ದಾಳಿ ಮಾಡಿದ ವಕೀಲರ ಮುಖಗಳನ್ನು ತೋರಿಸಿ, ‘ಇವರನ್ನು ಇನ್ನೂ ಏಕೆ ಬಂಧಿಸಿಲ್ಲ?’ ಎಂದು ಪ್ರಶ್ನೆ ಕೇಳುವ ಸುದ್ದಿ ವಾಹಿನಿಗಳ ಸಂಪಾದಕರೆ, ಈ ದೃಶ್ಯದಲ್ಲಿರುವ ವರದಿಗಾರ ಮತ್ತು ಅವನ ಜೊತೆಯಲ್ಲಿರುವವರು ಯಾರು? ಅವರನ್ನು ಗುರುತಿಸಲು ನಿಮಗೇಕೆ ಸಾಧ್ಯವಾಗಿಲ್ಲ? “ವಕೀಲರ ಸಂಘ ‘ಗೂಂಡಾ ವಕೀಲರನ್ನು’ ಗುರುತಿಸಲಿ, ಅವರನ್ನು ಶಿಕ್ಷಿಸಲಿ,” ಎಂದು ಕೇಳುವ ಸುದ್ದಿ ವಾಹಿನಿಯವರು, ನಿಮ್ಮೊಳಗಿರುವ ಇಂಥವರನ್ನು (ಗೂಂಡಾ ಎನ್ನಬೇಕೊ, ಪುಂಡ ಎನ್ನಬೇಕೋ ತಿಳಿಯುತ್ತಿಲ್ಲ) ನೀವೇಕೆ ಸರಿದಾರಿಗೆ ತರುವುದಿಲ್ಲ?

ಸರಕಾರ ಈ ಘಟನೆ ಬಗ್ಗೆ ಆರ್.ಕೆ. ದತ್ತಾ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದೆ. ತನಿಖೆ ವೇಳೆ ಇಂತಹ ವೀಡಿಯೋಗಳನ್ನೂ ಪರಿಶೀಲಿಸಬಹುದು.

16 thoughts on “ತನ್ನ #*$% ತೋರಿಸುತ್ತಿರುವ ಈ “ವರದಿಗಾರ” ಯಾರು?

 1. patrakarta

  I never expected that journalists will stoop to this level. They are shameless. No matter whatever was the provocation, this behaviour is unforgivable.

  Reply
 2. RAMESH M

  ಮಾದ್ಯಮದವರ ಈ ಪರಿಯ ಅಸಹ್ಯಕರ ನಡವಳಿಕೆ ಖಂಡಿತವಾಗಿ ಖಂಡನೀಯ, ಆದರೆ ಅದೆ ಅಂದಿನ ಅಸಹ್ಯಕರ ದಾಂದಲೆಗೆ ಕಾರಣ ಎನ್ನುವುದು ಮಾತ್ರ ಹಾಸ್ಯಾಸ್ಪದ. ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವ ಹಾಗೆ ಗಲಾಟೆ ಮಾಡಲು ಒಂದು ಕಾರಣ ಬೇಕಾಗಿತ್ತು ಅಷ್ಟೇ ಎನ್ನಿಸುತ್ತದೆ. ಒಟ್ಟಾರೆ ಇಬ್ಬರ ಅಂದಿನ ವರ್ತನೆ ಖಂಡನೀಯ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಂಡಲ್ಲಿ ಮಾತ್ರ ಮುಂದೊಂದು ದಿನ ಇಂಥಹ ಅಸಹ್ಯಕರ ಘಟನೆ ನಡೆಯದಂತೆ ತಡೆಯಬಹುದು. ಗೋಗರಿಯುತ್ತಿರುವಂತೆ ವರ್ತಿಸುತ್ತಿರುವುವವರಿಂದ ಇದೆಲ್ಲಾ ಸಾದ್ಯನ?

  Reply
 3. vasanth

  It was really shocking and exposed the media’s duality. They should introspect before finger pointing others. Today’s TV channels except few exceptions the kind of show and the languages they telecast and use is so bad.

  Reply
 4. ರವಿ ಕುಮಾರ

  this is shame on part of that guy… it shouldn’t be tolerated. the man who is living without any manners can do this type of nonsense.

  Reply
 5. Ananda Prasad

  ಮಾಧ್ಯಮದವರು ತಮ್ಮ ಕ್ಯಾಮರಾಮನ್ ಮತ್ತು ವಿಡಿಯೋಗ್ರಾಫರ್ಗಳಿಗೆ ಸಮರ್ಪಕ ನಡವಳಿಕೆಯ ನೀತಿ ಸಂಹಿತೆಯನ್ನು ಹಾಗೂ ತರಬೇತಿಯನ್ನು ಕೊಡಬೇಕಾದ ಅಗತ್ಯವನ್ನು ಈ ದೃಶ್ಯಾವಳಿ ತೋರಿಸಿಕೊಡುತ್ತಿದೆ. ಇನ್ನು ಮುಂದೆ ಇಂಥ ಘಟನೆಗಳು ನಡೆಯದಂತೆ ಮಾಡಬೇಕಾದರೆ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಇದಕ್ಕೆ ಮುಂದಾಗುವುದು ಉತ್ತಮ.

  Reply
 6. satish d.r

  ಲೋಗೋ ಹಿಡಿದು ತನ್ನ —-ತೋರಿಸುತ್ತಿರುವ ಈ ಮಾಧ್ಯಮ ವ್ಯಕ್ತಿ ಅಯೋಗ್ಯನೋ, ಪುಂಡನೋ, ನಾಚಿಕೆ ಬಿಟ್ಟವನೋ ಸಾರ್ವಜನಿಕರೇ ನಿರ್ಧರಿಸಬೇಕು. ಈ ರೀತಿ ಪ್ರಚೋದಿಸಿ ಗಲಾಟೆಗೆ ಕಾರಣ ಕರ್ತರಾದ ಮಾಧ್ಯಮದವರು ತಮಗೆ ನ್ಯಾಯ ಬೇಕು, ರಕ್ಷಣೆ ಬೇಕು ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಟ್ಟರಾದಿಯಾಗಿ ಬಡ ಬಡಿಸುತ್ತಿರುವ ಪತ್ರಕರ್ತರೇ ಇದಕ್ಕೆ ನಿಮ್ಮ ಉತ್ತರವೇನು. .

  Reply
  1. ವಿನಿತಾ

   ಮಹನೀಯರೆ.

   ಪತ್ರಕರ್ತರು ನಾಚಿಕೆ ಬಿಟ್ಟವರಾ. ನಾಚಿಗೇಡಿಗಳು ಲಾಯರ್ಗಳು. ಒಂದು ಕಡೆ ಕಲ್ಲು ತೂರಾಟ ನಡೆಸಿ ಕೊಟ್ಯಾಂತರ ರೂ ಬೆಲೆಬಾಳೋ ಓಬಿ ವಾಹನಗಳಿಗೆ ಕಲ್ಲು ಎಸೆಯುವಾಗ, ತಮ್ಮ ಪ್ಯಾಂಟ್ ಬಿಚ್ಚಿ ಮೇಲೆ ಹಾರಿಸಿ ಪತ್ರಕರ್ತರಿಗೆ ತಮ್ಮ ಡ್ಯಾಷ್ ತೋರಿಸುವಾಗ ಇಲ್ಲದ ಕಾಳಜಿ ಒಬ್ಬ ಪತ್ರಕರ್ತ ಆತನ ಜಿಪ್ ಸರಿ ಮಾಡಿಕೊಳ್ಳೋದ್ರಲ್ಲಿ ಕಾಣಿಸಿತೇ. ಅದು ಅಸಃ್ಯವೇ. ಯಾರೂ ಜಿಪ್ ಇರೋ ಪ್ಯಾಂಟ್ ಹಾಕುವುದಿಲ್ಲವೇ ಅಥವಾ ಜಿಪ್ ಹಾಕಿಕೊಳ್ಳುವುದೇ ಇಲ್ಲವೋ ಗೊತ್ತಿಲ್ಲ. ಇನ್ನು 5 ಸೆಕೆಂಡ್ನ ವೀಡಿಯೋ ತೆಗೆದು ತೋರಿಸಿದ ಮಹಾನ್ ವಕೀಲ ಮುಂದೆ ಆ ಪತ್ರಕರ್ತ ಏನು ಮಾಡ್ತಾನೆ ಅನ್ನೋದನ್ನೂ ತೋರಿಸಬೇಕಿತ್ತು. ಅರ್ಧಂಬರ್ಧ ತೆಗೆದು ತೋರಿಸಿ ತಾವು ಮಾಡಿದನ್ನ ಮಾತ್ರ ಮುಚ್ಚಿಕೊಂಡು ಪತ್ರಕರ್ತರ ಮೇಲೆ ನಿರಂತರವಾಗಿ ಹಲ್ಲೆಗೆ ಪ್ರಯತ್ನ ಪಡೋ ಹೀರೊಗಳು ತೋರಿಸಿ ಹೇಳಬೇಕಲ್ಲವೇ. ಇನ್ನು ಇಲ್ಲಿನ ಚಿತ್ರಣ ನೋಡಿದ್ರೆ ಸಂಜೆಯ ವಾತಾವರಣ ಕಾಣತ್ತೆ ಹೊರತು ಇದೇ ಗಲಾಟೆಗೆ ಕಾರಣವಲ್ಲ ಅನ್ನೋದಂತು ನಿಜ.
   ಒಮ್ಮೆ ಪ್ಯಾಂಟ್ ಜಿಪ್ ಸರಿಪಡಿಸಿಕೊಂಡು, ಕಲ್ಲು ಎಸೆಯುತ್ತಿರೋ ವಕೀಲರಿಂದ ತಮ್ಮ ವರದಿಗಾರರನ್ನು ದೂರ ಕರಿಯೋದು ಅಸಹ್ಯವೇ ಮಹಾನೀಯರೇ. ಇಲ್ಲಿ ಯಾವ ತಪ್ಪು ಯಾವ ರೀತಿಯಲ್ಲಿ ಯಾರಿಗೆ ಎಲ್ಲಿ ಯಾಕೆ ಅದೂ ಹೇಗೆ ಕಾಣಿಸಿತೋ ಶಿವನೇ …………..
   ಇದು ಪುಂಡತನವಲ್ಲ, ಎರಡನಢ ಬಾರಿಗೆ ಕಲ್ಲಿನಿಂದ ಒದೆ ತಿಂದಿದಕ್ಕೆ ಈ ಪ್ರತಿಕ್ರಿಯೆ ಕಿಡಿಗೇಡಿ ವಕೀಲರೇ .

   Reply
 7. Sushrutha

  Namma maadhyama da manasthithi hegendare patrakartha ru samvidhaanakke atheetharu. Aane nadedadde daari anda haage nammadu enu maadidaroo, hege maadidaroo sariye anno manobhaava.Vruthi nishta patrakartharu balu aparoopa. Monne monne serida mari patrakarthanoo indu yaava deal bekaadaroo maadisaballe anno matta kke beledide. Eda vo, bala vo ella onde. Neevu maadhyamavannu vimarshisutheeraadare nimma thejo vadhe maadaloo hesodilla namma maadhyama. haagaagiye indu Star sampaadakaru irodu.Star patrike, Star sampaadakeeya, Star patrakartaru illave illa. Ida namma kannada patrikodyama?che

  Reply
 8. C.S.Satish kumar

  Is it good behavior of journalists.As per the Prasar Bharati Act, 1990. MEDIA IS BOUND TO “Safeguarding the citizen’s right to be informed freely, truthfully and objectively on all matters of public interest, national or international, and presenting a fair and balanced flow of information including contrasting views without advocating any opinion or ideology of its own”

  Reply
 9. C.S.Satish kumar

  Dear journalists please do you know fundamental principles
  1) Professional electronic journalists should accept and understand that they operate as trustees of
  public and should, therefore, make it their mission to seek the truth and to report it fairly with
  integrity and independence. Professional journalists should stand fully accountable for their
  actions.
  2) The purpose of this Code is to document the broad paradigms accepted by the members of the
  News Broadcasters Association (NBA) as practice and procedures that would help journalists of
  electronic media to adhere to the highest possible standards of public service and integrity.
  3) News channels recognize that they have a special responsibility in the matter of adhering to high
  standards of journalism since they have the most potent influence on public opinion. The broad
  principles on which the news channels should function are, therefore, as stated hereinafter.
  4) Broadcasters shall, in particular, ensure that they do not select news for the purpose of either
  promoting or hindering either side of any controversial public issue. News shall not be selected or
  designed to promote any particular belief, opinion or desires of any interest group.
  5) The fundamental purpose of dissemination of news in a democracy is to educate and inform the
  people of the happenings in the country, so that the people of the country understand significant
  events and form their own conclusions.
  6) Broadcasters shall ensure a full and fair presentation of news as the same is the fundamental
  responsibility of each news channel. Realizing the importance of presenting all points of view in a
  democracy, the broadcasters should, therefore, take responsibility in ensuring that controversial
  subjects are fairly presented, with time being allotted fairly to each point of view. Besides, the
  selection of items of news shall also be governed by public interest and importance based on the
  significance of these items of news in a democracy.

  Reply
 10. Raghavendra Navada

  ಪೋಲಿಸರು ,ಮಾಧ್ಯಮದವರು ಮತ್ತು ವಕೀಲರು ಯಾರು ಇತವರು ಈ ಮೂವರೊಳಗೆ….ಜನಸಾಮಾನ್ಯರು ಯಾರನ್ನು ನಂಬಬೇಕು…???

  Reply
 11. shwetha kalani

  ಯಾರೇ ಪತ್ರಕರ್ತೆ,ಪತ್ರಕರ್ತನಾಗಲಿ ಅಥವಾ ಯಾರೇ ವರದಿಗಾರರಾಗಲಿ ಅವರಿಗೆ ತರಗತಿಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಬೇಕಾದ ಎಲ್ಲಾ ತರಬೇತಿಗಳನ್ನ ಕೊಡೋದ್ರ ಜೊತೆಗೆ ಗಡಿಯನ್ನೂ ಹಾಕಿರುತ್ತಾರೆ. ಆದ್ರೆ ಯಾರೇ ಒಬ್ಬ ತನ್ನ ಸಂಸ್ಥೆ ಅಥವಾ ಹಕ್ಕಿಗೆ ಚ್ಯುತಿ ಬರೋ ಹಾಗೆ ನಡೆದುಕೊಂದ್ರೆ ಯಾರೇ ಆದರೂ ಸುಮ್ಮನಿರಲ್ಲ ಅನ್ನೋದಕ್ಕೆ ಈ ವರದಿಗಾರ ಸಾಕ್ಷಿಯಷ್ಟೇ. ಅಷ್ಟೊತ್ತಿಗಾಗಲೇ ಪೊಲೀಸರು ಕ್ಯಾಮೆರಾಗಳನ್ನ ಆಫ್ ಮಾಡಿಸಿದ್ದ ಸಂದರ್ಭದಲ್ಲಿ ನಾಲ್ಕನೇ ಮಹಡಿಯಿಂದ ಕಲ್ಲು ಎಸೆದರೇ, ಒಂದು ಮತ್ತು ಎರಡನೇ ಮಹಡಿಯಲ್ಲಿ ನಿಂತಿದ್ದ ವಕೀಲರು ತಮ್ಮ ಪ್ಯಾಂಟ್ ಬಿಚ್ಚಿ ಲಾರ್ಡ್ಸ್ನಲ್ಲಿ ಗಂಗೂಲಿ ಶರ್ಟ್ ಹಾರಿಸುವಂತೆ ಹಾರಿಸಿದ್ದು ಮಾತ್ರ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಅಷ್ಟು ಹೊತ್ತಿಗಾಗ್ಲೆ ಪತ್ರಕರ್ತರ ಕ್ಯಾಮೆರಾಗಳು ಸ್ವಚ್ ಆಫ್ ಆಗಿದ್ವು. ಒಂದು ಕಡೆ ಬಟ್ಟೆ ಬಿಚ್ಚಿ ತೋರಿಸಿದ ವಕೀಲರ ವರ್ತನೆ ಖಂಡಿಸಿ ಇಲ್ಲಿ ಕಾಣುವ ಪತ್ರಕರ್ತರೂ ಅದನ್ನೇ ಮಾಡಿದ್ದು.ಅಲ್ಲಿ ವಕೀಲರು ಮಾಡ್ತಿದ್ದ ಕೆಲ್ಸವನ್ನ ನೋಡಿದ ಯಾರಿಗಾದ್ರೂ ಇನ್ನೂ ಕೆಟ್ಟದಾಗಿ ಸಿಟ್ಟು ಬರ್ತಿತ್ತು ಅನ್ನೋದಂತು ನಿಜ. ಒಂದು ಕಡೆ ಪತ್ರಕರ್ತರ ಮೇಲೆ ನಿರಂತರವಾಗಿ ಹಲ್ಲೆ ಮಾಡೋ ಪ್ಲಾನ್ ಇಟ್ಟುಕೊಂಡೇ ಕಾಯೋ ವಕೀಲರ ವಿರುದ್ದದ ಈ ರೀತಿಯ ಪ್ರತಿಭಟನೆಯಿಂದಾದ್ರೂ ಮಾಧ್ಯಮಗಳ ಕೆಲ್ಸಕ್ಕೆ ಅಡ್ಡಿಪಡಿಸದೇ, ತಮ್ಮ ಕೆಲ್ಸವನ್ನು ನೀಟಾಗಿ ಮಾಡಿ ಮುಗಿಸುವಂತೆ ಬಿಟ್ಟು ತಮ್ಮ ಕೆಲಸವನ್ನ ಮಾಡೋದು ಒಳಿತನ್ನಿಸತ್ತೆ.ಏನಂತಿರಾ ವಕೀಲರೇ।।।, ಬ್ಲಾಗ್ ಬರೆಯೋದು ಕಾಮೆಂಟ್ ಕೊಡೋದು ಇವೆಲ್ಲಾ ಒಂದು ರೀತಿಲಿ ತುಚ್ಛ ಅನ್ನಿಸಲ್ವೇ ನಿಮಗೆ ತಪ್ಪೇ ಮಾಡಿಲ್ಲ ಅಂದ್ಏಲೆ ಬೇರೆಯವ್ರ ಕಡೆಗೆ ಕೈ ತೋರಿಸೋದಾದ್ರು ಯಾಕೆ.

  Reply
 12. Prashanth Mirle

  ವಿನಿತಾ ಮತ್ತು ಶ್ವೇತಾ ಅವರ ಸಮರ್ಥನೆ ನಿಜಕ್ಕೂ ಗಾಬರಿ ತರಿಸುವಂತಹದ್ದಾಗಿದೆ…… ಈ ರೀತಿಯ ಬರಹ ಬೆರೆಯವರದ್ದಾಗಿದೆ ಎಂಬದು ನನ್ನ ಅನುಮಾನ…..

  ರವಿಯವರೇ ದಯವಿಟ್ಟು ಇದರ ಸತ್ಯಾಂಶವನ್ನು ತಿಳಿಸಿಕೊಟ್ಟರೆ ಒಳಿತು…. ಇದರಿಂದ ಒದುಗರಿಗೆ ಸ್ವಲ್ಪ ಸಮಾಧಾನವಾಗಬಹುದು.

  Reply
 13. ಪುರುಷೋತ್ತಮ

  ನಾನು ಒಬ್ಬ ವಕೀಲನಾಗಿ ಹೇಳುತ್ತಿದ್ದೇನೆ, ವಿನಿತಾ ಮತ್ತು ಶ್ವೇತಾ ಅವರ ಸಮರ್ಥನೆ ನಿಜಕ್ಕೂ ಗಾಬರಿ ತರಿಸುವಂತಹದ್ದಾಗಿದೆ. ಪೋಲಿಸರು ,ಮಾಧ್ಯಮದವರು ಮತ್ತು ವಕೀಲರ ಕೆಲಸ ಏನು ಅದನ್ನೆ ಮಾಡಿಕೊಂಡು ಹೋಗಬೇಕು. ಮಾಧ್ಯಮದವರು ಗೂಂಡಾಗಳೆ, ವಕೀಲರ ಗೂಂಡಾಗಳೆ, ಎಲ್ಲದ್ದಕ್ಕೂ ಮಿಗಿಲಾಗಿ ಪೋಲಿಸರು ಗೂಂಡಾಗಳೆ, ಸುಮ್ಮನೆ ಸಮರ್ಥನೆ ಮಾಡಿಕೊಂಡು ಹೋಗೋದು ಸರಿ ಇಲ್ಲ. ಯಾರೆ ತಪ್ಪು ಮಾಡಿದರು ಅದು ತಪ್ಪೆ ಇದ್ದನ್ನ ನಾವೂ ನೀವೂ ಮಾಡಿದರೆ ಸಾಕು ಅಂತ ನನಗೆ ಅನ್ನಿಸುತ್ತದೆ. ಇಲ್ಲಿ ಯಾರು ಮೊದಲೂ ತಪ್ಪು ಮಾಡಿದರು ಅಂತ ಅಲ್ಲ ಎಷ್ಟು ತೋದರೆ ಆಗಿದೆ ಏನೆಲ್ಲ ನಷ್ಟವಾಗದೆ ಇಲ್ಲ ಮಾನವ ಹಕ್ಕುಗಳಿಗೆ ಚುತ್ತಿ ಬಂದಿದೆ ಎಂಬುದನ್ನು ಮಾತ್ರ ಗಣನೆಗೆ ತೆಗೆದು ಕೊಳ್ಳಬೇಕು. ವಕೀಲರ ಮತ್ತು ಮಾಧ್ಯಮದವರು ತಪ್ಪನ್ನ ಪೋಲಿಸರು ುಒಪಯೋಗಿಸಿಕೋಡು ಮಹಿಳಾ ವಕೀಲರು ಮತ್ತು ಕೋರ್ಟ್ ನ ಸಿಂಬಂದಿಗಳು ಹಾಗೂ ವಕೀಲರನ್ನು ಯಾವ ರೀತಿ ತಳಿಸಿದ್ದಾರೆ ಎಂಬುದ್ದನ್ನು ಮೊದಲು ಒಪ್ಪಿಕೊಳ್ಳಬೇಕು ಸ್ನೇಹಿತರೆ.

  Reply

Leave a Reply

Your email address will not be published.