ಬಹಿರಂಗವಾದ “ಲಂಚಾವತಾರಿ”ಯ ಜಾತಿ ಪ್ರೇಮ


– ಸೂರ್ಯ ಮುಕುಂದರಾಜ್


 

ತುಂಬಾ ದಿನಗಳಿಂದ ಲೋಕದ ಡೊಂಕನ್ನು ಅಪಹಾಸ್ಯ ಮಾಡುವ ಮೂಲಕ ಹಣ ಮಾಡಿಕೊಂಡಿದ್ದ ವ್ಯುಕ್ತಿಯೊಬ್ಬನ ನಿಜ ಮುಖದ ದರ್ಶನ ತಡವಾದರೂ ಬಹಿರಂಗವಾಗಿದೆ. ಮೇ 14 ನೇ ಸೋಮವಾರದ ಪ್ರಜಾವಾಣಿ ಪತ್ರಿಕೆಯ ವರದಿಯೊಂದರ ತಲೆ ಬರಹ ‘ಬ್ರಾಹ್ಮಣ ಸಾಹಿತಿಗಳ ಕಡೆಗಣನೆ’ ನೋಡಿದಾಗ ಪೇಜಾವರ ಸ್ವಾಮಿಯೋ, ಇಲ್ಲವೇ ಕೇಸರಿಕರಣದ ಪ್ರಭಾವದಿಂದ ಹೊಸದಾಗಿ ಉದಯಿಸಿದ ಬ್ರಾಹ್ಮಣ ಸಾಹಿತಿಯೊಬ್ಬನ ಗೋಳಿನ ನುಡಿಯಿರಬಹುದೆಂದುಕೊಂಡೆ. ವರದಿ ಓದುತ್ತಿದ್ದಂತೆ, ‘ಓ ನಮ್ಮ ಲಂಚಾವತರ, ಪಬ್ಲಿಕ್ ರೇಡರ್ ಮಾಸ್ಟರ್ ಹಿರಣ್ಣಯ್ಯ ಕೊಟ್ಟಿರೋ ಹೊಸಾ ಥಿಯರಿ,’ ಅಂತ ಗೊತ್ತಾಯಿತು. ಹಲವಾರು ವರ್ಷಗಳಿಂದ ವೃತ್ತಿರಂಗಭೂಮಿಯಲ್ಲಿ ದುಡಿದು ಕುಡುಕಾವತಾರ ತಳೆದು ಲಂಚಾವತಾರದ ಮೂಲಕ ಅಬ್ರಾಹ್ಮಣ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ವೇದಿಕೆ ಮೇಲೆ ಛೀ ಥೂ ಎನ್ನುವ ಮೂಲಕ ಬಹುಸಂಖ್ಯಾತ ಅಬ್ರಾಹ್ಮಣ ಪ್ರೇಕ್ಷಕರ ಹಣದಿಂದಲೇ ಹೆಸರು ಆಸ್ತಿ ಸಂಪಾದಿಸಿದ ಮಾಸ್ಟರ್ ಹಿರಣ್ಣಯ್ಯ ಇಂದು ಅವರಲ್ಲಡಗಿದ್ದ ಜಾತಿಭ್ರಷ್ಟನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ.

ತಮ್ಮ ಭಾಷಣದಲ್ಲಿ ಲಂಚಾವತಾರಿ ಕುವೆಂಪು ಅವರಿಗೆ ನೀಡಿರುವಷ್ಟು ಪ್ರಾಶಸ್ತ್ಯವನ್ನು ಪುತಿನ, ಅನಕೃ, ಡಿವಿಜಿ ಅವರಿಗೆ ನೀಡದೇ ಬ್ರಾಹ್ಮಣ ಸಮುದಾಯವನ್ನು ಕಡೆಗಾಣಿಸಲಾಗಿದೆಯೆಂದು ಬೇಸರಪಟ್ಟುಕೊಂಡಿದ್ದಾರೆ. ಪಾಪ, ಹಿರಣ್ಣಯ್ಯನವರ ಜೀವಮಾನದಲ್ಲಿ ಅವರು ಆಡಿದ ನಾಟಕಕ್ಕೆ ಸ್ಕ್ರಿಪ್ಟ್ ಬರೆದವರೇ ಆಲ್ಲ, ಇನ್ನು ಕುವೆಂಪು ಸಾಹಿತ್ಯ ಓದಿರಲು ಹೇಗೆ ಸಾಧ್ಯ? ಹಾಗೇನಾದರೂ ಅವರು ಕುವೆಂಪು ಸಾಹಿತ್ಯವನ್ನು ಓದಿದ್ದರೆ ಬಹುಶಃ ಮಾಸ್ಟರ್ ಈ ರೀತಿ ಹೇಳುತ್ತಿರಲಿಲ್ಲವೇನೋ. ಹಾಗೆಯೇ ಅವರ ನಾಟಕದ ಕ್ವಾಲಿಟಿಯೂ ಆ ಕಾಲದಲ್ಲೇ ಸುಧಾರಿಸಿರುತ್ತಿತ್ತು.

ಬಸವಣ್ಣನ ನಂತರ ಆಧುನಿಕ ಕಾಲಘಟ್ಟದಲ್ಲಿ ಜಾತಿ-ಮತಗಳ ಎಲ್ಲೆ ಮೀರಿ ದೇಶವೇ ದೇವರೆಂದ ಕವಿ ಕುವೆಂಪು. ಪುರೋಹಿತ ಶಾಹಿಯ ಕರ್ಮಠತೆಯನ್ನು ಕತ್ತರಿಸಿ ಹಾಕಲು ಶೂದ್ರರಿಗೆ ಶಕ್ತಿ ತುಂಬಿದ್ದು ಕುವೆಂಪು ಅವರ ಸಾಹಿತ್ಯ. ತನ್ನ ಜಾತಿಯೊಳಗಿನ ಮೌಢ್ಯವನ್ನೇ ಖಂಡಿಸಿ ಅದ್ದೂರಿ ವಿವಾಹಗಳಿಗೆ ಬದಲಾಗಿ ಸರಳವಿವಾಹವನ್ನು ಜನಪ್ರಿಯಗೊಳಿಸಿದ ಕೀರ್ತಿ ಕುವೆಂಪು ಅವರದು. ಬಹುಜನರಿಗೆ ಅರ್ಥವಾಗದ ಮಂತ್ರಗಳನ್ನು ಹೇಳಿ ಮೌಢ್ಯಕ್ಕ ತಳ್ಳಿದ್ದ ಪುರೋಹಿತಶಾಹಿಗಳ ಆಟ ನಿಲ್ಲಲು ಮಂತ್ರಮಾಂಗಲ್ಯವನ್ನು ಪರಿಚಿಯಿಸಿದರು. ರೈತ, ದರಿದ್ರನಾರಾಯಣನಿಂದ ಹಿಡಿದು ಆರಕ್ಕೇರದ ಮೂರಕ್ಕಿಳಿಯದ ಮಧ್ಯಮವರ್ಗದ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದು ಕುವೆಂಪು. ಕುವೆಂಪು ಕೇವಲ ಸಾಹಿತಿಯಷ್ಟೇ ಆಗಿರಲಿಲ್ಲ ಎನ್ನುವುದು ಕನ್ನಡದ ಜನತೆಗೆ ತಿಳಿದ ವಿಚಾರ. ಮತ್ತು ಕನ್ನಡದ ಜನತೆ ಅವರನ್ನೆಂದೂ ಜಾತಿಗೆ ಸೀಮಿತಗೊಳಿಸಿಲ್ಲ. ಒಕ್ಕಲಿಗರಲ್ಲಿರುವ ಕೆಲವು ಜಾತಿವಾದಿಗಳು ಮತ್ತು ಹಿರಣ್ಣಯ್ಯನವರಂತಹ ಒಕ್ಕಲಿಗೇತರ ಜಾತಿವಾದಿಗಳು ಮಾತ್ರ ಕುವೆಂಪುರವರನ್ನು ಜಾತಿಯ ದೃಷ್ಟಿಯಿಂದ ನೋಡಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಹಾಗೆಯೇ, ಹಿರಣ್ಣಯ್ಯನವರು ಕನ್ನಡಿಗರು ನಾನಾ ಕಾರಣಗಳಿಗೆ ಮೆಚ್ಚಿಕೊಂಡ, ಓದಿಕೊಂಡ ಪುತಿನ, ಅನಕೃ, ಡಿವಿಜಿಯವರನ್ನು ತಮ್ಮ ರೀತಿಯೇ ಜಾತಿಯ ಕಾಮಾಲೆ ಕಣ್ಣಿನಿಂದ ನೋಡುವಂತೆ ಪ್ರೇರೇಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಜಕ್ಕೂ ಈ ಹಿರಿಯರ ಬಗ್ಗೆ ಹಿರಣ್ಣಯ್ಯನವರಿಗೆ ಗೌರವ ಇದ್ದಿದ್ದೇ ಆದರೆ ಈ ರೀತಿ ಅವರನ್ನು ಜಾತಿ-ಮತಗಳ ಕ್ಷುದ್ರ ಪರಿಧಿಗೆ ಎಳೆಯುತ್ತಿರಲಿಲ್ಲ.

ಹಿರಣ್ಣಯ್ಯ ಮುಂದುವರೆದು ತಮ್ಮ ಹರಿತ ನಾಲಗೆಯಿಂದ, “ದೇವರ ಕೆಲಸಕ್ಕೆ ಹುಟ್ಟಿದ ನಮಗೆ ಯಾರೋ ಒಬ್ಬರು ತಪ್ಪು ಮಾಡಿದರು ಎಂದು ಇಡೀ ಸಮುದಾಯವನ್ನು ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ,” ಎಂದು ಪ್ರಶ್ನಿಸುತ್ತಾರೆ. ಒಬ್ಬ ಪ್ರಬುದ್ಧ ರಂಗನಟನಾಗಿದ್ದರೆ ಈ ರೀತಿ ಕಂದಾಚಾರಿಯಂತೆ ಮಾತನಾಡುತ್ತಿರಲಿಲ್ಲವೇನೋ. ಹಿರಣ್ಣಯ್ಯ ಇನ್ನೂ ತನ್ನ ಸಮಾಜದ ಬಾಂಧವರು ದೇವರ ಕೆಲಸಕ್ಕೆ ಹುಟ್ಟಿದವರೆಂದು ಕರೆದುಕೊಳ್ಳುವುದೇ ಅಸಹ್ಯ ಅನ್ನಿಸದಿರುವುದು ಖೇದಕರ. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಅನಂತಮೂರ್ತಿ ತಮ್ಮ ಜಾತಿಯೊಳಗಿನ ಕರ್ಮಠತೆಯನ್ನು ಟೀಕಿಸುವ ಮೂಲಕ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಪ್ರೊ.ಕಿ.ರಂ.ನಾಗರಾಜ ತಮ್ಮ ಬದುಕಿನ ಕಡೆಗಾಲದವರೆಗೂ ಕೂಡ ಬ್ರಾಹ್ಮಣರಂತೆ ಬಾಳಲಿಲ್ಲ. ನೂರಾರು ಶಿಷ್ಯರನ್ನು ಸಲುಹಿದ ಕಿ.ರಂ. ಎಂದಿಗೂ ತಮ್ಮ ಶಿಷ್ಯರ ಬೆನ್ನು ತಡವಿ ಜನಿವಾರವಿದೆಯೇ ಎಂದು ಪರೀಕ್ಷಿಸಿದವರಲ್ಲ. ಇವರೆಲ್ಲ ಬ್ರಾಹ್ಮಣ್ಯದ ಕರ್ಮಠತೆಯಿಂದ ಹೊರಗೆ ಬಂದವರು. ಆದರೆ ಹಿರಣ್ಣಯ್ಯ? ಜಗತ್ತಿಗೇ ಬುದ್ಧಿ ಹೇಳುವವರಂತೆ ನಟಿಸುವ ವ್ಯಕ್ತಿ ಈ ರೀತಿ ಒಬ್ಬ ಕಂದಾಚಾರಿಯಂತೆ “ದೇವರ ಸೇವೆಗೆ ಹುಟ್ಟಿದವರು ನಾವು” ಎಂದು ಹೇಳಿಕೊಳ್ಳಲು ಹಿಂಜರಿಯದಿರುವುದು ಅವರಲ್ಲಿನ ಜಾತಿಪ್ರೇಮ ಜೀವಂತವಾಗಿರುವುದರ ಪ್ರತೀಕ. ಕುವೆಂಪು ಜಗತ್ತಿಗೆ ವಿಶ್ವಮಾನವಧರ್ಮ ಸಾರಿದವರು. “ಮನುಷ್ಯ ಹುಟ್ಟುತ್ತಾ ವಿಶ್ವಮಾನವ, ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ,” ಎಂದೇಳಿದ್ದರು. ಹಾಗೇ ನೋಡಿದಾಗ ಹಿರಣ್ಣಯ್ಯ ಜಾತಿವಾದಿಯಾಗುವ ಮೂಲಕ ಅಲ್ಪಮಾನವನಾಗಿದ್ದಾರೆ ಎಂದರೆ ತಪ್ಪಾಗಲಾರದೇನೋ?

10 thoughts on “ಬಹಿರಂಗವಾದ “ಲಂಚಾವತಾರಿ”ಯ ಜಾತಿ ಪ್ರೇಮ

  1. ಚರಿತಾ

    ನಿಜ. ನಂಗೂ ಕೆಲವೊಮ್ಮೆ ಅವರ ಮಾತಿನ ವರಸೆ ಹಾಗೆ ಅನಿಸಿದ್ದಿದೆ.
    ದೊಡ್ಡ ಮಾತಾಡುವ ಸಣ್ಣ ಜನ. ಏನನ್ನೋದು ಇದಕ್ಕೆ?

    Reply
  2. g.mahanthesh.

    ಲಂಚಾವತಾರದ ಹಿರಣ್ಣಯ್ಯ ಅವರ ಒಳಗೆ ಅಡಗಿ ಕುಳಿತಿದ್ದ ಜಾತೀಯತೆ ಬಹಿರಂಗವಾಗಿರುವುದು ಇದೇ ಮೊದಲನೇಲ್ಲ. ಅವರು ನಡೆಸಿಕೊಡುತ್ತಿರುವ ಏಕ ವ್ಯಕ್ತಿ ಪ್ರದರ್ಶನದಲ್ಲೂ ಅನ್ಯ ಜಾತಿ ಮತ್ತು ಧರ್ಮಗಳ ಬಗ್ಗೆ ತಮ್ಮ ಅಸಹನೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಲಂಚಾವತರಾರದಲ್ಲಿ ಅಪಹಾಸ್ಯಕ್ಕೀಡಾಗುವವರು ದೇವೇಗೌಡರೇ ವಿನಃ ರಾಮಕೃಷ್ಣ ಹೆಗಡೆಯಲ್ಲ. ಇನ್ನು ಅದೇ ರೀತಿ ಇಂದಿರಾಗಾಂಧಿ ಕೂಡ ಇವರ ಪಾಲಿಗೆ ರಾಕ್ಷಸಿಯಾಗಿದ್ದ್ರೇ ವಾಜಪೇಯಿ, ಅಡ್ವಾಣಿ ಎಲ್ಲೂ ಈ ಪ್ರಹಸನದಲ್ಲಿ ಅಪಹಾಸ್ಯಕ್ಕೀಡಾಗುವುದಿಲ್ಲ. ಇಂಥವರಿಗೆ ಭೈರಪ್ಪನವರು ಸುಲಭವಾಗಿ ಅರ್ಥ ಆಗುತ್ತಾರೆ ವಿನಃ ಕುವೆಂಪು ಅವರಲ್ಲ ಅನ್ನುವ ವಿಚಾರವನ್ನ ಮತ್ತೆ ಮತ್ತೆ ಪ್ರಸ್ತಾಪಿಸುವ ಅಗತ್ಯವೂ ಇಲ್ಲ ಎಂದೆನಿಸುತ್ತದೆ.

    Reply
  3. shylesh

    itha bari bayuthalle banshankariyalli sarkra kotta jagadalli bari barjari mane karnataka bankina badige .enjoy madutha samajavannu thidduthiddare ….vede hlodakke badanekayi thinnuvudakke….

    Reply
  4. dinesh patwardhan

    master maatugalige hechhu mahatva needa beekilla, ennonndu sangati kuvempurannu okkaliga fremenadi katti haakidavaru eddare

    Reply
  5. shreepadu

    ಬ್ರಾಹ್ಮಣರನ್ನ ಬಯ್ಯುವುದೇ ಫುಲ್ ಟೈಮ್ ಅಜೆಂಡಾ ಮಾಡ್ಕೊಂಡಿರೋ ಹಾಗಿದೆ ಲೇಖನ.ಇರಲಿ.

    ನಿಮಗೆ ಹಿರಣ್ಣಯ್ಯ ಅವರ ವಿಚಾರ ಸರಿ ಬರಲಿಲ್ಲ ಅಂದರೆ ತರ್ಕಬದ್ದವಾಗಿ ಎದುರಿಸಬಹುದು.ಅದು ಬಿಟ್ಟು “ಅವರು ಆಡಿದ ನಾಟಕಕ್ಕೆ ಸ್ಕ್ರಿಪ್ಟ್ ಬರೆದವರೇ ಆಲ್ಲ, ಇನ್ನು ಕುವೆಂಪು ಸಾಹಿತ್ಯ ಓದಿರಲು ಹೇಗೆ ಸಾಧ್ಯ?” ತರದ ವಾಕ್ಯಗಳು ಸುಮ್ಮನೆ ನಿಮ್ಮ ಲೆವೆಲ್ ತೋರಿಸುತ್ತದೆ.ಬಹುಶ ಅದೇ ದಾಟಿಯಲ್ಲಿ ನಿಮಗೂ ಬೇರೆಯವರು ಉತ್ತರ ಕೊಡಬಹುದು.”ಜೀವಮಾನದಲ್ಲಿ ಒಂದ್ ನಾಟಕ ನೆಟ್ಟಗ್ ಅಡಿದಿರೋ ಇಲ್ಲೋ , ಆಡ್ಕೊಂಡ್ ನಿಗಾಡೋಕೆನ್ ಕಮ್ಮಿ ಇಲ್ಲ :ಪ” ಅಂತ ಅಲ್ವ ??.

    ಅಷ್ಟಕ್ಕೂ , ಇಡೀ ಒಂದ್ ಸಮುದಾಯ ಯಾವತ್ತೂ ಯಾವ ಕಾಲದಲ್ಲೂ ಕೆಟ್ಟದಾಗಿರಲಿಲ್ಲ ಮತ್ತು ಒಳ್ಳೆಯದೂ ಆಗಿರಲಿಲ್ಲ ಅಲ್ಲವ ??

    Reply
    1. Surya

      Bhramanara ee manastitine vishada moodsodu nange.. nimma level yenu antha nim comment odidrene tiliyutte.. tammanta alpamatigalige nanna bio data helo avshyakate illa.. yava samudayanu nan target madilla madirodu nimma preetiya nata ratnakara annodanna taavu martiro hagide..

      Reply
      1. shreepadu

        ಆತ್ಮರತಿ ಅಂದ್ರೆ ಗೊತ್ತಲ್ಲ ??.ಇರಲಿ ನಮ್ಮಂತ ಅಲ್ಪಮತಿಗಳಿಗೆ ತಿಳಿಯಪಡಿಸುವ ಅವಶ್ಯಕತೆ ಇಲ್ಲ.

        ತಾತ್ವಿಕ ಭಿನ್ನಾಭಿಪ್ರಾಯಗಳನ್ನ ತಾತ್ವಿಕತೆಯ ಮಟ್ಟದಲ್ಲೇ ವ್ಯಕ್ತಪಡಿಸುವುದು ವಿವೇಕತೆ.ಅವರ ಮೇಲಿನ ವೈಯುಕ್ತಿಕ ಕಾಮ್ಮೆನ್ತುಗಳು ಸ್ವಾಗತಾರ್ಹವಲ್ಲ.

        Reply
  6. sharanabasva anwar

    naanu mr. hirannayyaravalli kandiddu obba kalavidha mukha kalavidhanige kale mukhya. kalavidhanu kaleyannu janaru mechchikolluttare. adre hirannayannavru yaranno mechchisalu hogi tamma mansik dourbalyavannu torisikottiddare. adu avarige shreyshu alla. brahmanu devar puje madalu huttideyadre devru brahman jatiyalli yeke huttalilla. Rama, krishna, Srinivasa endella heluv eevar adevru yava jatige serive. I deshadalli matra all vishwad yavude bhagakke hogi kanoonu elladkinta melu ide. devaru keval manasik dourbaly iddavarannu hedrisuvdakke matravaagide. sampradayad hesaralli soshane horatu mattenu alla . hirannayya navare nivu tinnuva ahaara elli yaara holadalli beledide endu heli? nivu usiraduv gali ellinda burutade heli ? sury prakashmanavagi kanalu hege ? namma vicharagalu aachargulu avu namma mane godeya madhye irbeku. adannu bhahirangavagi matanadidre namma vyaktitvavannu bayalige taruttade. nanu nimmannu obba kalavidhani noduttene nimma natane bagge mechchuge ide.intaha matugalind tavu kubjaragabedi. bittubidi nimma anisikegallu, durbalar sahakkagi eddu nilli jagatte nimma padadakelage nilluttade.

    Reply

Leave a Reply to shreepadu Cancel reply

Your email address will not be published. Required fields are marked *