ಭಟ್ಟರ ಬಂಧನ ಸುದ್ದಿಯಲ್ಲವೇ?

– ರಾಜೇಶ್ ದೇವನಹಳ್ಳಿ

ಸುವರ್ಣ ಸುದ್ದಿ ವಾಹಿನಿ ಮತ್ತು ಕನ್ನಡ ಪ್ರಭ ದಿನಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಇಂದು ಕೋರ್ಟ್ ಮುಂದೆ ಹಾಜರಾದರು. ನ್ಯಾಯಾಂಗ ನಿಂದನೆ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅವರಿಗೆ ಆರೇಳು ಬಾರಿ ಸಮನ್ಸ್ ಜಾರಿಯಾಗಿತ್ತು. ಕೊನೆಗೆ ಜಾಮೀನು ರಹಿತ ವಾರೆಂಟ್ ಜಾರಿಯಾದ ಕಾರಣ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಕೋರ್ಟ್ ಆವರಣದಲ್ಲಿ ನಡೆದ ಗಲಭೆಗಳ ವರದಿಗೆ ಸಂಬಂಧಿಸಿದಂತೆ ಕೂಡಾ ಅವರಿಗೆ ವಾರೆಂಟ್ ಜಾರಿಯಾಗಿತ್ತು ಎಂಬ ಮಾಹಿತಿ ಇದೆ.

ಆದರೆ ಈ ಪ್ರಕರಣ ಯಾವ ಟಿವಿ ಸುದ್ದಿವಾಹಿನಿಗಳಿಗೆ ಸುದ್ದಿಯೇ ಆಗಲಿಲ್ಲ. ಯಾವುದೋ ಮೂಲೆಯಲ್ಲಿ, ವೇಶ್ಯವಾಟಿಕೆ ನಡೆಸುತ್ತಿದ್ದವರ ಬಂಧನವಾದರೆ ಹುಡುಗಿಯರ (ದೂರು ದಾಖಲಾಗುವ ಮೊದಲೇ) ಮುಖ ತೋರಿಸಿ ಅಸಹ್ಯ ಹುಟ್ಟಿಸುವ ಮಾಧ್ಯಮಗಳಿಗೆ, ಸಂಪಾದಕರೊಬ್ಬರು ಆರೋಪ ಹೊತ್ತು ನ್ಯಾಯಾಲಯದ ಮುಂದೆ ಹಾಜರಾದದ್ದು ಸುದ್ದಿಯಲ್ಲವೇ? ಕೋರ್ಟ್ ಆವರಣದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ವಕೀಲರ ಬಂಧನವಾದಾಗ ಗಂಟೆಗಟ್ಟಲೆ ವರದಿ ಮಾಡಿದ್ದು ಇವರೇ ಅಲ್ಲವೆ? ಮಾಧ್ಯಮ ಮಂದಿಗೆ ನೈತಿಕತೆ ಇದ್ದಿದ್ದರೆ ಇದನ್ನೂ ಸುದ್ದಿ ಮಾಡಬೇಕಿತ್ತು.

ಕೋರ್ಟ್ ಆವರಣದಲ್ಲಿ ಸಣ್ಣ ಪುಟ್ಟ ಮಾತಿನ ಚಕಮಕಿ ನಡೆದಿರುವ ವರದಿಗಳಿವೆ. ಪ್ರಧಾನ ಸಂಪಾದಕರಿಗೆ ಪೊಲೀಸ್ ಭದ್ರತೆ ಇತ್ತು. ಆದರೂ ಕೆಲ ವಕೀಲರು ಅವರ ವಿರುದ್ಧ ಘೋಷಣೆ ಕೂಗಿದರು.

ಪತ್ರಿಕೆಗಳು ಹೇಗೆ ವರದಿ ಮಾಡುತ್ತವೆ ಎಂದು ನಾಳೆ ನೋಡಬೇಕು.

(ಚಿತ್ರಕೃಪೆ: vbhat.in)

10 thoughts on “ಭಟ್ಟರ ಬಂಧನ ಸುದ್ದಿಯಲ್ಲವೇ?

  1. Basavaraja Halli

    kela madhyamadavaru naitikatheyannu hanakke marikondiruvaga suddhati sudha v.bhattara bagge suddi maduttara.
    Basava kolli

    Reply
  2. Jagannath poojar Gulbarga

    ರಾಜೇಶ ದೇವನಹಳ್ಳಿ ಸರ್ ತಾವು ಬರೆದಿರುವ ಸುದ್ದಿ ಪರಿಪೂರ್ಣವಾಗಿಲ್ಲ.( ಕೋರ್ಟ್ ಆವರಣದಲ್ಲಿ ನಡೆದ ಗಲಭೆಗಳ ವರದಿಗೆ ಸಂಬಂಧಿಸಿದಂತೆ ಕೂಡಾ ಅವರಿಗೆ ವಾರೆಂಟ್ ಜಾರಿಯಾಗಿತ್ತು ಎಂಬ ಮಾಹಿತಿ ಇದೆ)(ನೀವು ಹೇಳಿರುವ ವಿಷಯಕ್ಕೆ ಅವರಿಗೆ ವಾರೆಂಟ್ ಜಾರಿಯಾಗಿದ್ದರೆ ಅವರ ಜೊತೆಗೆ ಇಡೀ ರಾಜ್ಯದ ಮಾಧ್ಯಮಬಳಗದ ಗೆಳೆಯರು ಸುದ್ದಿ ಮಾಡುತ್ತಿದ್ದರು)
    ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕದಲ್ಲಿ ಸಂಪಾದಕರಾಗಿದ್ದಾಗಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2008ರಲ್ಲಿ ಮಾನನಷ್ಟ ಮೊಕದ್ದಮೆಯೊಂದನ್ನು ಎದುರಿಸುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ(ಜೂ.27) ವಿಚಾರಣೆ ನಡೆದಿತ್ತು. ಅದರೆ, ವಿಶ್ವೇಶ್ವರ ಭಟ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಅವರ ವಿರುದ್ಧ ಬಂಧನ ವಾರೆಂಟ್ ಹೊರೆಸಿ ವಶಕ್ಕೆ ತೆಗೆದುಕೊಳ್ಳುವಂತೆ ಕೋರ್ಟ್ ಆದೇಶಿಸಿತ್ತು.ಇದು ವಿಷಯ ಅದಕ್ಕಾಗಿ ತಾವು ಸುದ್ದಿಯನ್ನು ಪರಿಪೂರ್ಣವಾಗಿ ಬರೆದರೆ ನಾವು ನಿಮ್ಮ ವರದಿಗಳನ್ನು ದಿನಲೂ ಓದುವರಾಗಿರುತ್ತೇವೆ….. (ಸರ್ ಇದು ನನ್ನ ಚಿಕ್ಕ ಸಲಹೆ)

    Reply
  3. ಪ್ರಜೆ

    ಎರಡು ವಾರಗಳ ಹಿಂದೆ ನಿತ್ಯಾನಂದನಿಗೆ ಅಮೆರಿಕದ ಸಮನ್ಸ್​ ಇದೆ,ಆತ ಅದಕ್ಕೆ ಕೇರ್​ ಮಾಡದೆ ಆಶ್ರಮದೊಳಗೆ ಕೂತಿದಾನೆ ಅಂತ ಬೆಳಗಿನಿಂದ ಬೈಗಿನವರೆಗೆ ಬೊಬ್ಬೆ ಹೊಡೆದಿತ್ತು ಸುವರ್ಣವಾಹಿನಿ. ಆ ವಾಹಿನಿಯ `ಘನ` ವರದಿಗಾರನೊಬ್ಬ ಹೀರೋ ಪೋಸ್​ನಲ್ಲಿ ತಾನೇ ಸಮನ್ಸ್​ ಜಾರಿ ಮಾಡೋಕೆ ಹೋಗಿ ಕರ್ನಾಟಕದ ಜನತೆಗೆ ಬೇಕಿಲ್ಲದ ಅನಗತ್ಯ ಗಲಾಟೆಗೆ ಕಾರಣನಾದ. ಆದ್ರೆ ಸಮಾಜಕ್ಕೆ ಇಷ್ಟೆಲ್ಲ ನೈತಿಕತೆಯ ಪಾಠ ಮಾಡಿದ ಸುದ್ದಿವಾಹಿನಿ ಮುಖ್ಯಸ್ಥ ವಿಶ್ವೇಶ್ವರ ಭಟ್ಟರು ಸತತ 6 ಬಾರಿ ಸಮನ್ಸ್​ ಬಂದಾಗಲೂ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ! ಕಾನೂನಿಗೆ ತಲೆಬಾಗಲಿಲ್ಲ. ನಿತ್ಯಾನಂದನ ಬಗ್ಗೆ ಬೊಬ್ಬೆ ಹೊಡೆಯೋಕೆ, ಆತನಿಗೆ ಸಮನ್ಸ್​ ಜಾರಿ ಮಾಡೋಕೆ ಈ ನಾಲಾಯಕ್​ರಿಗೆ ಯಾವ ನೈತಿಕತೆಯಿದೆ. ಇಂಥ ಮಂದಿ ಸುದ್ದಿಕೇಂದ್ರಗಳ ಮುಖ್ಯಸ್ಥರಾಗಿ ಕೂತಿರೋದು ಸಮಾಜದ ದುರಾದೃಷ್ಟ.

    Reply
  4. vivekaa

    ಎರಡು ವಾರಗಳ ಹಿಂದೆ ನಿತ್ಯಾನಂದನಿಗೆ ಅಮೆರಿಕದ ಸಮನ್ಸ್​ ಇದೆ,ಆತ ಅದಕ್ಕೆ ಕೇರ್​ ಮಾಡದೆ ಆಶ್ರಮದೊಳಗೆ ಕೂತಿದಾನೆ ಅಂತ ಬೆಳಗಿನಿಂದ ಬೈಗಿನವರೆಗೆ ಬೊಬ್ಬೆ ಹೊಡೆದಿತ್ತು ಸುವರ್ಣವಾಹಿನಿ. ಆ ವಾಹಿನಿಯ `ಘನ` ವರದಿಗಾರನೊಬ್ಬ ಹೀರೋ ಪೋಸ್​ನಲ್ಲಿ ತಾನೇ ಸಮನ್ಸ್​ ಜಾರಿ ಮಾಡೋಕೆ ಹೋಗಿ ಕರ್ನಾಟಕದ ಜನತೆಗೆ ಬೇಕಿಲ್ಲದ ಅನಗತ್ಯ ಗಲಾಟೆಗೆ ಕಾರಣನಾದ. ಆದ್ರೆ ಸಮಾಜಕ್ಕೆ ಇಷ್ಟೆಲ್ಲ ನೈತಿಕತೆಯ ಪಾಠ ಮಾಡಿದ ಸುದ್ದಿವಾಹಿನಿ ಮುಖ್ಯಸ್ಥ ವಿಶ್ವೇಶ್ವರ ಭಟ್ಟರು ಸತತ 6 ಬಾರಿ ಸಮನ್ಸ್​ ಬಂದಾಗಲೂ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ! ಕಾನೂನಿಗೆ ತಲೆಬಾಗಲಿಲ್ಲ. ನಿತ್ಯಾನಂದನ ಬಗ್ಗೆ ಬೊಬ್ಬೆ ಹೊಡೆಯೋಕೆ, ಆತನಿಗೆ ಸಮನ್ಸ್​ ಜಾರಿ ಮಾಡೋಕೆ ಈ ನಾಲಾಯಕ್​ರಿಗೆ ಯಾವ ನೈತಿಕತೆಯಿದೆ. ಇಂಥ ಮಂದಿ ಸುದ್ದಿಕೇಂದ್ರಗಳ ಮುಖ್ಯಸ್ಥರಾಗಿ ಕೂತಿರೋದು ಸಮಾಜದ ದುರಾದೃಷ್ಟ.

    Reply

    Reply
  5. vinay

    Suvarna News channel… indeed spreading a very wrong taste among the public…. All the anchors in the channel are fit for acting in Street dramas . The whole channel is having very cheap taste and trying out very cheap gimmicks to get public attention

    Reply
  6. NaveenKumar

    ಊರಿಗೆಲ್ಲಾ ಬುದ್ದಿ ಹೇಳಿ ಮೆನಗೆ ಹೋಗಿ ಒಲೆ ಮುಂದೆ ಏನು ಮಾಡುತ್ತಿದ್ದರಂತೆ? ಅಂದಗಾಯ್ತು ವಿ.ಭಟ್ಟರ ಕತೆ ಏನಪ್ಪಾ ಇದು. ನಾನು ಒಬ್ಬ ಪತ್ರಕರ್ತನಾಗಿ ಸುವರ್ಣವಾಹಿಗಿ ಇಡೀ ತನ್ನ ದಿನವನ್ನೆಲ್ಲಾ ನಿತ್ಯಾನಂದನ ಸುದ್ದಿಗಾಗಿ ಮೀಸಲಿಟ್ಟು ಅಸಹ್ಯ ಹುಟ್ಟಿಸಿತು. ಸ್ವಾಮೀಜಿಗಳ ಅಕ್ರಮಗಳ ಕುರಿತು ಮಾದ್ಯಮಗಳಲ್ಲಿ ವರದಿಯಾಗಿರುವುದು ಇದೆ ಮೊದಲೇನು ಅಲ್ಲ ಆದರೆ ಈ ರೀತಿ ಒಂದು ದಿನದ ಎಲ್ಲಾ ರೀತಿಯ ಪ್ರೋಗ್ರಾಂಗಳಲ್ಲಿ ನಿತ್ಯಾನಂದನನ್ನೆ ಗುರಿಯಾಗಿ ವರದಿ ಮಾಡಿದ್ದು ಯಾವರೀತಿ ಸರಿ. ಮಾಡಿದ್ದು ಉಣ್ಣೋ ಮಹಾರಾಯ ಅಂದಹಾಗೆ ಕೃಷ್ಣಾ ಪಾಲೆಮಾರ್ ಕೂಡ 25 ಕೋಟಿ ಮಾನನಷ್ಟ ಮೊಕ್ಕದಮೆ ಹಾಕಿದ್ದಾರಂತೆ ಈ ಮಾದ್ಯಮದ ವಿರುದ್ಧ ಅದು ಏನಾಗುತ್ತೋ? ಅತಿಯಾದರೆ ಅಮೃತವು ವಿಷವಾಗುವುದಯ್ಯ ಎನ್ನೋದು ಇದಕೇನಾ

    Reply
  7. muralidhara

    Very good,the channel becoming more 7 more worsen day by dayin fact we had lot of hopes about this channel. I think they will correct in days to come and telecast reports worth watching… too much is too bad. they created nausea towards news by lingering upon one single issue..

    Reply

Leave a Reply

Your email address will not be published. Required fields are marked *