Daily Archives: June 29, 2012

ಪತ್ರಕರ್ತರು ಅಥವ ಸಮನ್ಸೂ ಇಷ್ಯು ಮಾಡುವ, ದೂರೂ ಕೊಟ್ಟು, ಅಟ್ಟಾಡಿಸಿ ಹಿಡಿವ…

– ರಾಜೇಶ್ ದೇವನಹಳ್ಳಿ

ಪತ್ರಕರ್ತರು ಇತ್ತೀಚೆಗೆ ತಮ್ಮ ವೃತ್ತಿ ಬಿಟ್ಟು ಅಥವಾ ತಮ್ಮ ವೃತ್ತಿ ಜೊತೆಗೆ ಇತರ ಚಟುವಟಿಕೆಗಳಿಂದ ಸುದ್ದಿ ಮಾಡುತ್ತಾರೆ. ಕೆಲವೇ ದಿನಗಳ ಹಿಂದೆ ಸುದ್ದಿವಾಹಿನಿಯ ವರದಿಗಾರನೊಬ್ಬ ಹಲವು ಆರೋಪ ಹೊತ್ತ ಸ್ವಾಮೀಜಿ ಒಬ್ಬರಿಗೆ ಸಮನ್ಸ್ ಜಾರಿ ಮಾಡುವ ಪ್ರಯತ್ನ ಮಾಡಿ ಸುದ್ದಿ ಮಾಡಿದ್ದರು. (ವಿಶಿಷ್ಟ ಎಂದರೆ, ಅದೇ ವರದಿಗಾರನ ಸಂಪಾದಕರು ಸಮನ್ಸ್ ಜಾರಿಯಾದರೂ ಕೋರ್ಟ್‌ಗೆ ಹಾಜರಾಗದೆ, ಕೊನೆಗೆ ಬಂಧನಕ್ಕೆ ಒಳಗಾಗಬೇಕಾಯಿತು. ಆದರೂ ಕನ್ನಡಪ್ರಭ ವರದಿಯಲ್ಲಿ ಮಾತ್ರ ‘ಸಮನ್ಸ್ ಸಮನ್ವಯ’ ಕೊರತೆಯಿಂದ ಹೀಗಾಯಿತು ಎಂದು ಬರೆದರು. ಸಮನ್ಸ್ ಸಮನ್ವಯ ಅಂದ್ರೇನು ಅನ್ನೋದು ಇನ್ನಷ್ಟೆ ಗೊತ್ತಾಗಬೇಕು.)

ಈಗ ಇಲ್ಲೊಂದು ಸುದ್ದಿ ಇದೆ ನೋಡಿ. ತುಮಕೂರಿನ ಇಬ್ಬರು ಪತ್ರಕರ್ತರು ಲಂಚ ತೆಗೆದುಕೊಳ್ಳುತ್ತಿದ್ದ ಎನ್ನಲಾದ ಸರಕಾರಿ ನೌಕರರೊಬ್ಬರನ್ನು ಅಟ್ಟಾಡಿಸಿ ಹಿಡಿದು ಲೋಕಾಯುಕ್ತರಿಗೆ ಒಪ್ಪಿಸಿದರಂತೆ. ಈ ಬಗ್ಗೆ ವರದಿಯೊಂದು ತುಮಕೂರು ಮೂಲದ ‘ಪ್ರಜಾ ಪ್ರಗತಿ’ಯಲ್ಲಿ ಪ್ರಕಟವಾಗಿದೆ. ಆ ನೌಕರನ ವಿರುದ್ಧ ಲೋಕಾಯುಕ್ತರಿಗೆ ದೂರು ಕೊಟ್ಟದ್ದು ಪತ್ರಕರ್ತರೇ. ನಂತರ ಲೋಕಾಯುಕ್ತ ದಾಳಿಯಂತಹ ಸನ್ನಿವೇಶ ಸೃಷ್ಟಿಯಾದಾಗ ಆ ನೌಕರ ಗಲಿಬಿಲಿಯಾಗಿ ಓಡಲಾರಂಭಿಸುತ್ತಾನೆ. ಆ ನೌಕರರನ್ನು ಚಿತ್ರದಲ್ಲಿರುವ ಇಬ್ಬರು ಬೆನ್ನಟ್ಟಿ ಕೊರಳ ಪಟ್ಟಿ ಹಿಡಿದು ತರುತ್ತಾರೆ; ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸುತ್ತಾರೆ.

ಈ ಇಬ್ಬರು ಪತ್ರಕರ್ತರಲ್ಲಿ ಒಬ್ಬ ನಂಬರ್ 1 ಆಂಗ್ಲ ಭಾಷಾ ಪತ್ರಿಕೆಯ ಸ್ಥಳೀಯ ವರದಿಗಾರ, ಮತ್ತೊಬ್ಬ ಸದ್ಯ ಭಾರೀ ಸುದ್ದಿಯಲ್ಲಿರುವ ಸುದ್ದಿವಾಹಿನಿಯ ವರದಿಗಾರ.

(ಚಿತ್ರಕೃಪೆ: ಪ್ರಜಾ ಪ್ರಗತಿ)