ಪತ್ರಕರ್ತರು ಅಥವ ಸಮನ್ಸೂ ಇಷ್ಯು ಮಾಡುವ, ದೂರೂ ಕೊಟ್ಟು, ಅಟ್ಟಾಡಿಸಿ ಹಿಡಿವ…

– ರಾಜೇಶ್ ದೇವನಹಳ್ಳಿ

ಪತ್ರಕರ್ತರು ಇತ್ತೀಚೆಗೆ ತಮ್ಮ ವೃತ್ತಿ ಬಿಟ್ಟು ಅಥವಾ ತಮ್ಮ ವೃತ್ತಿ ಜೊತೆಗೆ ಇತರ ಚಟುವಟಿಕೆಗಳಿಂದ ಸುದ್ದಿ ಮಾಡುತ್ತಾರೆ. ಕೆಲವೇ ದಿನಗಳ ಹಿಂದೆ ಸುದ್ದಿವಾಹಿನಿಯ ವರದಿಗಾರನೊಬ್ಬ ಹಲವು ಆರೋಪ ಹೊತ್ತ ಸ್ವಾಮೀಜಿ ಒಬ್ಬರಿಗೆ ಸಮನ್ಸ್ ಜಾರಿ ಮಾಡುವ ಪ್ರಯತ್ನ ಮಾಡಿ ಸುದ್ದಿ ಮಾಡಿದ್ದರು. (ವಿಶಿಷ್ಟ ಎಂದರೆ, ಅದೇ ವರದಿಗಾರನ ಸಂಪಾದಕರು ಸಮನ್ಸ್ ಜಾರಿಯಾದರೂ ಕೋರ್ಟ್‌ಗೆ ಹಾಜರಾಗದೆ, ಕೊನೆಗೆ ಬಂಧನಕ್ಕೆ ಒಳಗಾಗಬೇಕಾಯಿತು. ಆದರೂ ಕನ್ನಡಪ್ರಭ ವರದಿಯಲ್ಲಿ ಮಾತ್ರ ‘ಸಮನ್ಸ್ ಸಮನ್ವಯ’ ಕೊರತೆಯಿಂದ ಹೀಗಾಯಿತು ಎಂದು ಬರೆದರು. ಸಮನ್ಸ್ ಸಮನ್ವಯ ಅಂದ್ರೇನು ಅನ್ನೋದು ಇನ್ನಷ್ಟೆ ಗೊತ್ತಾಗಬೇಕು.)

ಈಗ ಇಲ್ಲೊಂದು ಸುದ್ದಿ ಇದೆ ನೋಡಿ. ತುಮಕೂರಿನ ಇಬ್ಬರು ಪತ್ರಕರ್ತರು ಲಂಚ ತೆಗೆದುಕೊಳ್ಳುತ್ತಿದ್ದ ಎನ್ನಲಾದ ಸರಕಾರಿ ನೌಕರರೊಬ್ಬರನ್ನು ಅಟ್ಟಾಡಿಸಿ ಹಿಡಿದು ಲೋಕಾಯುಕ್ತರಿಗೆ ಒಪ್ಪಿಸಿದರಂತೆ. ಈ ಬಗ್ಗೆ ವರದಿಯೊಂದು ತುಮಕೂರು ಮೂಲದ ‘ಪ್ರಜಾ ಪ್ರಗತಿ’ಯಲ್ಲಿ ಪ್ರಕಟವಾಗಿದೆ. ಆ ನೌಕರನ ವಿರುದ್ಧ ಲೋಕಾಯುಕ್ತರಿಗೆ ದೂರು ಕೊಟ್ಟದ್ದು ಪತ್ರಕರ್ತರೇ. ನಂತರ ಲೋಕಾಯುಕ್ತ ದಾಳಿಯಂತಹ ಸನ್ನಿವೇಶ ಸೃಷ್ಟಿಯಾದಾಗ ಆ ನೌಕರ ಗಲಿಬಿಲಿಯಾಗಿ ಓಡಲಾರಂಭಿಸುತ್ತಾನೆ. ಆ ನೌಕರರನ್ನು ಚಿತ್ರದಲ್ಲಿರುವ ಇಬ್ಬರು ಬೆನ್ನಟ್ಟಿ ಕೊರಳ ಪಟ್ಟಿ ಹಿಡಿದು ತರುತ್ತಾರೆ; ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸುತ್ತಾರೆ.

ಈ ಇಬ್ಬರು ಪತ್ರಕರ್ತರಲ್ಲಿ ಒಬ್ಬ ನಂಬರ್ 1 ಆಂಗ್ಲ ಭಾಷಾ ಪತ್ರಿಕೆಯ ಸ್ಥಳೀಯ ವರದಿಗಾರ, ಮತ್ತೊಬ್ಬ ಸದ್ಯ ಭಾರೀ ಸುದ್ದಿಯಲ್ಲಿರುವ ಸುದ್ದಿವಾಹಿನಿಯ ವರದಿಗಾರ.

(ಚಿತ್ರಕೃಪೆ: ಪ್ರಜಾ ಪ್ರಗತಿ)

6 thoughts on “ಪತ್ರಕರ್ತರು ಅಥವ ಸಮನ್ಸೂ ಇಷ್ಯು ಮಾಡುವ, ದೂರೂ ಕೊಟ್ಟು, ಅಟ್ಟಾಡಿಸಿ ಹಿಡಿವ…

  1. prasad raxidi

    ಇವೆಲ್ಲ ತುಂಬಾ ಅಪಾಯಕಾರಿ ಬೆಳವಣಿಗೆಗಳು, ತಲಕಾವೇರಿಯಲ್ಲಿ ಅವ್ಯವಹಾರ ನಡೆಯುವುದನ್ನು ತಡೆಗಟ್ಟುವ ವಿಚಾರದಲ್ಲಿ “ಎಲ್ಲವನ್ನೂ ಪೋಲೀಸರಿಂದ ಅಪೇಕ್ಷಿಸುವುದು ಬೇಡ, ಇಲ್ಲಿ ಸ್ಥಳೀಯರ ಬಳಿ ಸಾಮಾನ್ಯವಾಗಿ ಕೋವಿಗಳಿವೆ, ಸ್ಥಳೀಯಯುವಕರು ಕೋವಿ ಹಿಡಿದು ಗಸ್ತು ತಿರುಗಬಹುದು” ಎಂದು ವಿಧಾನ ಸಭಾಧ್ಯಕ್ಷ ಬೋಪಯ್ಯ ಹೇಳಿದ್ಧಾರೆ.(ಇಂದಿನ ಪ್ರಜಾವಾಣಿ ನೋಡಿ)ಇನ್ನು ಮುಂದೆ ಯಾರು ಬೇಕಾದರೂ ಪೋಲಿಸ್ ಕೆಲಸ ಮಾಡಬಹುದು.

    Reply
  2. Ananda Prasad

    ಕರ್ನಾಟಕದಲ್ಲಿ ಸಂಘ ಪರಿವಾರದ ಪ್ರಯೋಗಶಾಲೆಯಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ದನಗಳ ಸಾಗಾಟವನ್ನು ತಡೆಯುವುದು, ಬೇರೆ ಬೇರೆ ಧರ್ಮದ ಹುಡುಗ ಹುಡುಗಿಯರು ಮಾತಾಡುವುದು ಅಥವಾ ಒಟ್ಟಿಗೆ ಪ್ರಯಾಣಿಸುವುದು ಮೊದಲಾದವುಗಳನ್ನು ತಡೆಯುವುದು ಇಂಥ ಕೆಲಸಗಳನ್ನು ಮಾಡಲು ಕೆಲವು ಸಂಘಟನೆಗಳು ಹಲವಾರು ವರ್ಷಗಳಿಂದ ಕಾರ್ಯ ನಿರತವಾಗಿವೆ. ಈ ಸಂಘಟನೆಗಳು ಪೋಲೀಸರ ಕೆಲಸವನ್ನು ತಾವೇ ಮಾಡುತ್ತಿವೆ. ಈಗ ಪತ್ರಕರ್ತರು ಇಂಥ ಕೆಲಸಗಳಿಗೆ ಇಳಿದಿರುವುದು ಹೊಸ ಸೇರ್ಪಡೆ. ಆದರೆ ಅಗಾಧ ಭ್ರಷ್ಟಾಚಾರ ಮಾಡಿರುವ, ಮಾಡುತ್ತಿರುವ ರಾಜಕಾರಣಿಗಳನ್ನು ಹಿಡಿದು ಶಿಕ್ಷಿಸಲು ಯಾವ ಸಂಘಟನೆಯೂ ಮುಂದಾಗಿರುವುದು ಕಂಡುಬರುತ್ತಿಲ್ಲ.

    Reply
  3. ನಾನೊಬ್ಬ

    ಪ್ರಜಾಪ್ರಭುತ್ವದ ತತ್ವಗಳಿಗೇ ಹಿಡಿಮಣ್ಣು ಮುಕ್ಕಿಸಿದ ವಿಧಾನಸಭೆಯ ಕುಟಿಲ ಮುಖ್ಯಸ್ಥ ಬೋಪಯ್ಯರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕಾರ್ಯಾಂಗ- ಶಾಸಕಾಂಗ- ಮಾಧ್ಯಮಗಳು- ಮತ್ತೀಗ ನ್ಯಾಯಾಂಗವೂ ಹಾದಿ ತಪ್ಪಿರುವಾಗ….. ಇಲ್ಲಿ ಯಾರು ಯಾರಿಗೆ ತದುಕಿದರೂ-ಗುಂಡಿಕ್ಕಿದರೂ no problem-no tension! ಜೈ ಬಿಜೆಪಿ….

    Reply
  4. ಅನಾಮಿಕ

    ಮತ್ತೊಂದು ಸಂಗತಿಯೊಂದನ್ನು ಇಲ್ಲಿ ಹೇಳಬೇಕು ಎನಿಸುತ್ತಿದೆ. ಈಚೆಗೆ ವಿಧಾನಪರಿಷತ್ ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆದ ವೇಳೆ ಈಗ ಻ಧಿಕಾರಿಯ ಕೊರಳಪಟ್ಟಿ ಹಿಡಿದಿರುವ ಸುದ್ದಿವಾಹಿನಿಯ ಪತ್ರಕತ೵ನ ಮುಂದಾಳತ್ವದಲ್ಲಿಯೇ ಕೆಲವು ಪತ್ರಕತ೵ರು ಬಿಜೆಪಿ ಅಭ್ಯಥಿ೵ಯ ಬಳಿಗೆ ಹೋಗಿದ್ದಾರೆ. ಆತ ಆಯೋಜಿಸಿದ್ದ ಪಾಟಿ೵ಯಲ್ಲಿ ೆನ್ನಾಗಿ ಕುಡಿದಿದ್ದಾರೆ. ಬಳಿಕ ಻ಭ್ಯಥಿ೵ಯಿಂದ ಈ ಪಟಾಲಂಗೆ ಒಂದು ಸಂದೇಶ ರವಾನೆಯಾಗಿದೆ. ಮಾರನೇ ದಿನ ಜೆಡಿಎಸ್ ಅಭ್ಯಥಿ೵ ಶಿಕ್ಷಕರಿಗೆ ಪಾಟಿ೵ ಹಮ್ಮಿಕೊಂಡಿದ್ದ ಻ದನ್ನು ಸುದ್ದಿ ಮಾಡಿದರೆ 1 ಲಕ್ಷ ರೂ ನೀಡುವುದಾಗಿ ಬಿಜೆಪಿ ಅಭ್ಯಥಿ೵ ತಿಳಿಸಿದ್ದಾರೆ. ಮಾರನೇ ದಿನ ಜೆಡಿಎಸ್್ ಪಾಟಿ೵ಗೆ ಪಟಾಲಂ ಹೋಗಿದೆ. ಅಲ್ಲಿಯೂ ಚೆನ್ನಾಗಿ ಕುಡಿದಿದೆ. ನಾವು ಮೂವರು ವರದಿಗಾರರು ಸೇರಿದಂತೆ ಆರು ಮಂದಿ ಇದ್ದೇವೆ. ಕನಿಷ್ವ 2 ಲಕ್ಷ ಹಣ ನೀಡದಿದ್ದರೆ ಈ ವಿಷಯವನ್ನು ಟಿವಿಯಲ್ಲಿ ಬಿತ್ತರಿಸುವುದಾಗಿ ಬೆದೆರಿಕೆವೊಡ್ಡಿದೆ. ಆ ವೇಳೆ ಸ್ಥಳೀಯ ಜೆಡಿಎಸ್್ ಮುಖಂಡನೊಬ್ಬ ಸಂಧಾನಕ್ಕೆ ಮುಂದಾಗಿ 25 ಸಾವಿರ ರೂ ನೀಡುವುದಾಗಿ ತಿಳಿಸಿದ್ದಾನೆ. ೀ ಮಾತು ಸಹಿಸಲು ಪಟಾಲಂಗೆ ಆಗಿಲ್ಲ. ಾಗ ಬೆದರಿಕೆಯನ್ನು ಮುಂದುವರಿಸಿದೆ. ಿದಿಂದ ರೊಚ್ಚಿಗೆದ್ದ ಪಾನಮತ್ತ ಶಿಕ್ಷಕರು ಸುದ್ದಿವಾಹಿನಿಯ ವರದಿಗಾರರು ಹಾಗೂ ಕ್ಯಾಮೆರಾಮನ್್ಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ಆಗ ಪಟಾಲಂ ಪೊಲೀಸರಿಗೆ ದೂರು ನೀಡಿದೆ. ಕೊನೆಗೆ ಜೆಡಿಎಸ್್ ಮುಖಂಡನೊಂದಿಗೆ 4 ಲಕ್ಷ ರೂಗೆ ಡೀಲ್ ಮಾಡಿಕೊಂಡಿದೆ. ಆದರೆ, ಪತ್ರಕತ೵ರ ಮೇಲೆ ಹಲ್ಲೆ ನಡೆಸಿದ ಶಿಕ್ಷಕರನ್ನು ಆರೋಪಪಟ್ಟಿಯಿಂದ ಕೈಬಿಡಿಸಿ ತಮಗೆ ಈ ಹಿಂದೆ ಡಿಡಿಪಿಐ ಕಚೇರಿಗೆ ಹೋಗಿದ್ದ ವೇಳೆ ಅಲ್ಲಿ ಇವರಿಗೆ ಸ್ಪಂದಿಸದೆ ಪ್ರಥಮದಜೆ೵ ಸಹಾಯಕನ ಮೇಲೆ ಎಫ್್ಐಆರ್್ ದಾಖಲಿಸಿದೆ. ವಾಸ್ತವವಾಗಿ ಆತ ಪಾಟಿ೵ಗೆ ಹೋಗಿಲ್ಲ. ಸಿಕ್ಕಿದ ಹಣವನ್ನು 6 ಮಂದಿ ಹಂಚಿಕೊಂಡಿದ್ದಾರೆ.
    ಆಹಾರ ಿಲಾಖೆಯ ನೌಕರನ ಬಳಿಗೂ ಮೊದಲು ಈ ಪಟಾಲಂ ಹೋಗಿ ಹಣದ ಬೇಡಿಕೆ ಇಟ್ಟಿದೆ. ಆತ ಸ್ಪಂದಿಸಿಲ್ಲ. ನಂತರ, ಲೋಕಾಯುಕ್ತರಿಗೆ ತಾವೇ ದೂರು ನೀಡಿದ್ದಾರೆ. ಪತ್ರಕತ೵ರು ಇಂತಹ ಲಜ್ಜೆಗೆಟ್ಟ ಕೆಲಸ ಮಾಡಬಹುದು? ಬಿಜೆಪಿ ಮತ್ತು ಜೆಡಿಎಸ್್ ಪಾಟಿ೵ ಬಗ್ಗೆ ಸುದ್ದಿ ಮಾಡಿದ್ದರೆ ಪತ್ರಕತ೵ರ ಸಾಚಾತನ ಗೊತ್ತಾಗುತ್ತಿತ್ತು. ಅದನ್ನು ಬಿಟ್ಟಿ ಬ್ಲಾಕ್್ಮೇಲ್್ ಮಾಡುವ ಻ಗತ್ಯವೇನಿದೆ? ಹೋಗಲಿ ಬಿಡಿ ಸ್ವಾಮಿ. ಇವರ ಕೆಲಸ ಮಾಡುತ್ತಿರುವ ಸುದ್ದಿವಾಹಿನಿಯ ಸಂಪಾದಕರೇ ಗಣಿಕಪ್ಪ ಪಡೆದಿದ್ದರು ಎಂದು ಸುದ್ದಿ ಮಾಹಿತಿಹಕ್ಕು ಕಾಯ್ದೆಯಡಿ ಬಯಲಾಗಿತ್ತು. ಻ಂತಹ ಸಂಪಾದಕನ ಕಾಲರ್್ಪಟ್ಟಿ ಹಿಡಿದು ಕೇಳುವ ತಾಕತ್ತು ಇವರಿಗೆ ಇದೆಯೇ?

    Reply
  5. Mohammad Irshad

    ತಮ್ಮ ಈ ವರದಿ ನಿಜಕ್ಕೂ ಎಲ್ಲಾ ಪತ್ರಕರ್ತರಿಗೆ ಪಾಠ. ನಡೆದ ಸುದ್ದಿಯನ್ನು ಜನರಿಗೆ ತಿಳಿಸುವ ಹಾಗೂ ತಿಳಿಯದ ಸುದ್ದಿಗಳನ್ನು ಕೆದಕಿ ಜನರ ಮುಂಡಿಡುವ ಮಾಧ್ಯಮವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಸಮಾಜದಲ್ಲಿರುವ ಹುಳುಕನ್ನು ಜನರ ಮುಂದಿಟ್ಟು ಅದರ ಬದಲಾವಣೆಗೆ ಕಾರಣಕರ್ತನಾಗಿಬೇಕು. ಆದರೆ ಇಂದಿನ ದಿನಗಳಲ್ಲಿ ಕೆಲವೊಂದು ಪತ್ರಕರ್ತರನ್ನು ನೋಡಿದ್ರೆ ತಾವು ಸ್ವತಃ ಕುಡುಕರಾಗಿದ್ದು, ಭೃಷ್ಟರಾಗಿದ್ದು, ಜಾತಿವಾದಿಯಗಿದ್ದು, ಹುಡಿಗಿ ಪೀಡಕರಾಗಿದ್ದು ಇದನ್ನೆಲ್ಲಾ ಮರೆತು ಸಮಾಜದಲ್ಲಿ ಯಾರಾದ್ರು ತಪ್ಪು ಮಾಡಿದ್ರೆ ತಾವೇ ದೇಶದ ಕಾನೂನನ್ನು ಕಾಪಾಡುವವರು ಎಂಬ ಭ್ರಮೆಯಿಂದ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು. ಇತರರ ಬಗ್ಗೆ ಮಾತನಾಡುವುಕ್ಕಿಂತ ತನ್ನನ್ನು ಮೊದಲು ತಿದ್ದಿಕೊಳ್ಳುವ ಮನೋಭಾವ ಪತ್ರಕರ್ತರು ಹುಟ್ಟಿಕೊಳ್ಳಬೇಕು. ಜೊತೆಗೆ ಪತ್ರಕರ್ತರು ಯಾವುದೋ ದೇವಲೋಕದಿಂದ ಬಂದಿದ್ದೇವೆ ಎಂಬ ಭ್ರಮೆಯನ್ನು ಬಿಟ್ಟುಬಿಡಬೇಕು. ಇಲ್ಲದಿದ್ದಲ್ಲಿ ಸಮಾಜ ನಮಗೆ ತಕ್ಕ ಪಾಠ ಕಳಿಸುತ್ತೆ ಎಂಬುವುದನ್ನು ನಾನೊಬ್ಬ ಪತ್ರಕರ್ತನಾಗಿ ಹೇಳೋದಕ್ಕೆ ಬಯಸುತ್ತೇನೆ.

    Reply

Leave a Reply

Your email address will not be published. Required fields are marked *