“ಪುಸ್ತಕ ಪರಿಚಯ”ಕ್ಕೆ ಲೇಖಕರು/ಪ್ರಕಾಶಕರು ಪುಸ್ತಕ ಕಳುಹಿಸಿಕೊಡಿ…

ಲೇಖಕ ಮತ್ತು ಪ್ರಕಾಶಕ ಮಿತ್ರರೇ,

ವರ್ತಮಾನ.ಕಾಮ್‌ನಲ್ಲಿ ನಾವು ಆಗಾಗ ಪುಸ್ತಕ ಪರಿಚಯ ಅಥವಾ ವಿಮರ್ಶೆ ಮಾಡುತ್ತಿರುವುದನ್ನು ತಾವು ಗಮನಿಸಿರುತ್ತೀರಿ (ಹೊತ್ತು ಕಂತುವ ಮುನ್ನ, ಇದು ಮುಂಗಾರು, ಬುಕ್ ಆಫ್ ಟೀ). ಇದನ್ನು ಸಾಧ್ಯವಾದಷ್ಟು ನಿಯಮಿತವಾಗಿ ಮಾಡುವ ಉದ್ದೇಶ ನಮ್ಮದು. ಹಾಗಾಗಿ ನಮ್ಮ ಜಾಲತಾಣಕ್ಕೆ ತಮ್ಮ ಪುಸ್ತಕಗಳನ್ನು ಪರಿಚಯ ಅಥವಾ ವಿಮರ್ಶೆಗೆ ಕಳುಹಿಸಬೇಕೆಂದು ಬಯಸುವ ಲೇಖಕ ಮತ್ತು ಪ್ರಕಾಶಕ ಮಿತ್ರರು ತಮ್ಮ ಪುಸ್ತಕದ ಒಂದು ಪ್ರತಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದೆಂದು ಈ ಮೂಲಕ ತಿಳಿಸುತ್ತೇವೆ. ದಯವಿಟ್ಟು ಇಂತಹ ಪುಸ್ತಕಗಳನ್ನು ಪರಿಚಯ/ವಿಮರ್ಶೆಗಾಗಿ ಎಂದು ಸ್ಪಷ್ಟವಾಗಿ ಸೂಚಿಸಿ.

ನಮ್ಮ ಕಾಲಮಿತಿ ಮತ್ತು ಆದ್ಯತೆಗಳ ಮೇಲೆ ವಾರಕ್ಕೊಂದಾದರೂ ಪುಸ್ತಕವನ್ನು ಪರಿಚಯಿಸುವುದು ನಮ್ಮ ಗುರಿ. ಮತ್ತು ಯಾವುದಾದರು ಪುಸ್ತಕವನ್ನು ಪರಿಚಯಿಸುವ ಅಥವಾ ಬಿಡುವ ಹಕ್ಕು ನಮ್ಮದೇ ಆಗಿರುತ್ತದೆ. ಅದಕ್ಕೆ ಬೇರೆಲ್ಲ ಕಾರಣಗಳಿಗಿಂತ ನಮ್ಮ ಸಮಯ ಮತ್ತು ಅಭಿರುಚಿಯೇ ಮುಖ್ಯವಾಗಿರುತ್ತದೆ ಹೊರತು ಬೇರೇನಲ್ಲ.

ಪುಸ್ತಕವನ್ನು ಕಳುಹಿಸಬೇಕಾದ ವಿಳಾಸ:

ವರ್ತಮಾನ.ಕಾಮ್
೨೨೨, B೪, ತುಂಗಭದ್ರ,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ,
ಬೆಂಗಳೂರು – ೫೬೦೦೪೭

ಮತ್ತು, ನಮ್ಮ ಓದುಗರು ಓದಿದ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆನಿಸಿದ ಪುಸ್ತಕದ ಬಗ್ಗೆ ತಾವು ಬರೆದ ಅಪ್ರಕಟಿತ ಪರಿಚಯ/ವಿಮರ್ಶೆಯನ್ನೂ ಸಹ ಕಳುಹಿಸಬಹುದು. ಅಂತಹ ಸಂದರ್ಭದಲ್ಲಿ ಪುಸ್ತಕದ ಮುಖಪುಟದ ಚಿತ್ರವನ್ನೂ ಸಹ ಕಡ್ಡಾಯವಾಗಿ ಕಳುಹಿಸಿ.

ಇಂತಿ,
ರವಿ ಕೃಷ್ಣಾರೆಡ್ಡಿ

Leave a Reply

Your email address will not be published. Required fields are marked *