ಗಾಂಧಿ ಜಯಂತಿ ಕಥಾ ಸ್ಪರ್ಧೆ : ತ್ವರೆ ಮಾಡಿ…

ಸ್ನೇಹಿತರೆ,

ವರ್ತಮಾನ.ಕಾಮ್ ಆಯೋಜಿಸಿರುವ ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 ರ ಬಗ್ಗೆ ಈಗಾಗಲೆ ತಾವು ನಮ್ಮ ವೆಬ್‌ಸೈಟ್‌ನಲ್ಲಿ ಗಮನಿಸಿರುತ್ತೀರಿ. ಸಂತೋಷದ ಸಂಗತಿಯೆಂದರೆ ಈಗಾಗಲೆ ನಮಗೆ ಹಲವಾರು ಉತ್ತಮ ಕತೆಗಳು ನಾಡಿನ ಹಲವು ಉತ್ತಮ ಲೇಖಕರಿಂದ ಬಂದಿದ್ದು, ಕೊನೆಯ ದಿನ ಹತ್ತಿರವಾಗುತ್ತಿದ್ದಂತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕತೆಗಳು ಬರುವ ನಂಬಿಕೆಯಿದೆ.

ಕತೆಗಳನ್ನು ಕಳುಹಿಸಲು ಇದೇ ತಿಂಗಳ 31 ಕೊನೆಯ ದಿನ. ತಾವು ಕತೆಗಾರರಾಗಿದ್ದಲ್ಲಿ ಮತ್ತು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಇಚ್ಚೆಯಿದ್ದಲ್ಲಿ ದಯವಿಟ್ಟು ಆದಷ್ಟು ಬೇಗ ಕತೆಯನ್ನು ಕಳುಹಿಸಿ. ತಮ್ಮ ಕತೆಗಾರ ಸ್ನೇಹಿತರಿಗೂ ತಿಳಿಸಿ.

ಮತ್ತೊಂದು ಮುಖ್ಯ ವಿಷಯ: ನಾವು ಕತೆಗಳನ್ನು ದಯವಿಟ್ಟು ಇಮೇಲ್ ಮೂಲಕ (editor@vartamaana.com ಗೆ) ತಲುಪಿಸಲು ಕೋರಿದ್ದೇವೆ. ಆದರೆ ಕೆಲವು ಪತ್ರಿಕೆಗಳಲ್ಲಿ ಬಂದಿರುವ ನಮ್ಮ ಪ್ರಕಟಣೆಯಲ್ಲಿ ಈ ಸಂಗತಿ ಬಿಟ್ಟುಹೋಗಿದ್ದು, ಅವರು ನಮ್ಮ ಲೆಟರ್‌ಹೆಡ್‌ನಲ್ಲಿದ್ದ ವಿಳಾಸವನ್ನು ಕೊಟ್ಟು ಅಲ್ಲಿಗೆ ಕತೆಗಳನ್ನು ಕಳುಹಿಸಲು ಸೂಚಿಸಿದ್ದಾರೆ. ನಾನು ಮೊದಲ ಪ್ರಕಟಣೆಯಲ್ಲಿ ತಿಳಿಸಿದಂತೆ, ಕೆಲವು ತಾಂತ್ರಿಕ ಅನುಕೂಲಗಳಿಗಾಗಿ ಮತ್ತು ನಮ್ಮ ಮಿತ ಸಂಪನ್ಮೂಲಗಳ ಯೋಗ್ಯ ವಿನಿಯೋಗಕ್ಕಾಗಿ, ದಯವಿಟ್ಟು ನಿಮ್ಮ ಕತೆಗಳನ್ನು ಇಮೇಲ್ ಮೂಲಕವೇ ಕಳುಹಿಸಿ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

Leave a Reply

Your email address will not be published.