ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?


-ನವೀನ್ ಸೂರಿಂಜೆ


 

ಮತ್ತೆ ಮೋಹನ ಆಳ್ವರ “ಆಳ್ವಾಸ್ ನುಡಿಸಿರಿ” ಬಂದಿದೆ. ಈ ಬಾರಿ ನುಡಿಸಿರಿಯ ಘೋಷಣೆ “ಕನ್ನಡ ಮನಸ್ಸು ಮತ್ತು ಜನಪರ ಚಳವಳಿಗಳು”. ಉದ್ಘಾಟಕರು ಕನ್ನಡದ ಪ್ರಗತಿಪರ ಮನಸ್ಸುಗಳ ನೆಚ್ಚಿನ ಮೇಷ್ಟ್ರು ಡಾ.ಯು.ಆರ್.‌ಅನಂತಮೂರ್ತಿ. ಕಳೆದ ಎಂಟು ವರ್ಷಗಳಿಂದ ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ನಡೆಸುವ ಆಳ್ವಾಸ್ ನುಡಿಸಿರಿಯಲ್ಲಿ ರಾಜ್ಯದ ಹಲವಾರು ಬಂಡಾಯ ಸಾಹಿತಿಗಳು ಭಾಗವಹಿಸಿದ್ದಾರೆ. ಸಂಘಪರಿವಾರದ ವಿರಾಟ್ ಹಿಂದೂ ಸಮಾಜೋತ್ಸವಗಳ ಸಂಘಟಕನಾಗಿದ್ದ ವ್ಯಕ್ತಿಯೊಬ್ಬ ತನ್ನ ವ್ಯಾಪಾರಿ ಉದ್ದೇಶಕ್ಕೆ ತನ್ನ ಸಂಸ್ಥೆಯ ಹೆಸರನ್ನೇ ಇಟ್ಟುಕೊಂಡು ಸ್ವಯಂ ವೈಭವೀಕರಣಕ್ಕಾಗಿ ನಡೆಸುವ “ಆಳ್ವಾಸ್” ನುಡಿಸಿರಿಯಲ್ಲಿ ಬಂಡಾಯ ಸಾಹಿತ್ಯದ ರೂವಾರಿ ಬರಗೂರು ರಾಮಚಂದ್ರಪ್ಪರಿಂದ ಹಿಡಿದು ವೈದೇಹಿಯವರೆಗೆ ಖ್ಯಾತನಾಮರು “ಆಳ್ವರು ವ್ಯಕ್ತಿಯಲ್ಲ, ಕನ್ನಡ ಶಕ್ತಿ” ಎಂದು ಸುಳ್ಳು ಸುಳ್ಳೇ ಹಾಡಿ ಹೊಗಳಿದ್ದಾರೆ. ಈ ಬಾರಿ ಅನಂತಮೂರ್ತಿ ಸರದಿ.

ಆಳ್ವಾಸ್ ಪ್ಯಾಕೇಜ್

ಈ ಬಾರಿ ತನ್ನ ಘೋಷಣೆ ಮತ್ತು ಉದ್ಘಾಟಕರ ಹೆಸರಿನಿಂದಾಗಿ “ಆಳ್ವಾಸ್ ನುಡಿಸಿರಿ” ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ನಾಡಿನ ಎಲ್ಲೆಡೆ ಕನ್ನಡ ಅಭಿಮಾನಿಗಳಿಗೆ, ಕನ್ನಡ ಸಾಹಿತಿ ಬಳಗಕ್ಕೆ ಪ್ರತಿವರ್ಷ ಮೋಹನ ಆಳ್ವರ ನುಡಿಸಿರಿ ಸಾಹಿತ್ಯ ಜಾತ್ರೆ ಎಂದರೆ ಏನೋ ಆಕರ್ಷಣೆ. ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮೂಡಬಿದ್ರೆಗೆ ಧಾವಿಸಿ ಬಂದು ಕನ್ನಡ ಮನಸ್ಸುಗಳು, ಕನ್ನಡ ಸಾಹಿತ್ಯ, ಚಳವಳಿ, ನಾಡು ನುಡಿ ಎಂದು ಗಂಭೀರವಾಗಿ ಚರ್ಚಿಸುತ್ತವೆ. ಒಟ್ಟಾರೆ ಕಳೆದ ಎಂಟು ವರ್ಷಗಳ ನುಡಿಸಿರಿ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಬೆಳೆದಿದೆ. ಮತ್ತು ಇಡೀ ಜಗತ್ತಿನ ಕನ್ನಡಿಗರ ಗಮನ ಸೆಳೆದಿದೆ. ಆಳ್ವರ ಸಾಹಿತ್ಯ ಪ್ರೀತಿ, ಕನ್ನಡ ಪ್ರೇಮ, ಆತಿಥ್ಯ ಎಲ್ಲರ ಮನಸ್ಸನ್ನೂ ಸೂರೆಗೊಂಡಿದೆ. ಮೋಹನ ಆಳ್ವರು ಕನ್ನಡ ಸಾಹಿತ್ಯದ ಐಕಾನ್ ಆಗಿ ಬಿಂಬಿತವಾಗಿದ್ದಾರೆ. ಪತ್ರಿಕೆಗಳಂತೂ ಆಳ್ವಾಸ್ ನುಡಿಸಿರಿಯ ಬಗ್ಗೆ ಪುಟಗಟ್ಟಲೆ ಬರೆಯುತ್ತವೆ. ಇಲ್ಲಿಗೆ ಬರೋ ಪ್ರತೀ ಅತಿಥಿ ಸಾಹಿತಿಗಳ ಪ್ರತ್ಯೇಕ ಸಂದರ್ಶನವನ್ನು ಮಾಡುತ್ತದೆ. ಮೂರು ದಿನವೂ ಮುಖ ಪುಟದಲ್ಲಿ ಒಂದು ಸುದ್ದಿಯಾದರೂ ಆಳ್ವಾಸ್ ನುಡಿಸಿರಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ಹಿನ್ನಲೆಯಲ್ಲೇ ಕೆಲವೊಂದು ಸಾಹಿತಿಗಳು ಕೂಡಾ ಇಲ್ಲಿಗೆ ಬರಲು ತುದಿಗಾಲಲ್ಲಿ ನಿಂತಿರುತ್ತಾರೆ.

ಇಷ್ಟಕ್ಕೂ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಕ್ಕಿಂತಲೂ ಆಳ್ವಾಸ್ ನುಡಿಸಿರಿಗೆ ಪತ್ರಿಕೆಗಳು ಹೆಚ್ಚಿನ ಪ್ರಾಮುಖ್ಯತೆ ನೀಡಲು ಆಳ್ವಾಸ್ ನುಡಿಸಿರಿಗಿರುವ ನಿಜವಾದ ಬದ್ಧತೆ ಕಾರಣವಲ್ಲ. ಸುದ್ದಿಗಾಗಿಯೇ ಪ್ರಮುಖ ದಿನ ಪತ್ರಿಕೆಗಳಿಗೆ ಐದರಿಂದ ಏಳು ಲಕ್ಷದವರೆಗೆ ನ್ಯೂಸ್ ಪ್ಯಾಕೇಜ್ ನೀಡಲಾಗುತ್ತದೆ. ಈ ನ್ಯೂಸ್ ಪ್ಯಾಕೇಜ್ ಅಂದರೆ ಪೇಯ್ಡ್ ನ್ಯೂಸ್ ಅಲ್ಲದೆ ಇನ್ನೇನು?

ಮೋಹನ ಆಳ್ವರು ತನ್ನ ಸ್ವಂತ ಖರ್ಚಿನಲ್ಲಿ ತನ್ನದೇ ಆಳ್ವಾಸ್ ಕ್ಯಾಂಪಸ್ಸಿನಲ್ಲಿ ಇಷ್ಟೊಂದು ಅಕ್ಕರೆಯಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಉದ್ದೇಶ ಏನು ಮತ್ತು ಮೋಹನ ಆಳ್ವರ ನಿಜ ವ್ಯಕ್ತಿತ್ವ ಎಂತಹದ್ದು ಎಂದು ಸ್ವಲ್ಪ ವಿಮರ್ಶೆಗೆ ಒಳಪಡಿಸಿದರೆ ಹೊರಬರುವ ಸಂಗತಿಗಳೇ ಬೇರೆ. ತನ್ನ ಶಿಕ್ಷಣ ವ್ಯಾಪಾರದ ಸಾಮ್ರಾಜ್ಯವನ್ನು ವಿಸ್ತರಿಸಲು ಅವರು ಈ ರೀತಿಯ ಸಮ್ಮೇಳನಗಳನ್ನು ವ್ಯವಸ್ಥಿತವಾಗಿ ಬಳಸುತ್ತಿದ್ದಾರೆ. ಒಬ್ಬ ಸಾಮಾನ್ಯ ಭೂಮಾಲೀಕನ ಮಗನಾಗಿ, ಒಬ್ಬ ಸಾಮಾನ್ಯ ವೈದ್ಯನಾಗಿ, ಒಂದಿಷ್ಟು ಕಲೆಯ ಬಗ್ಗೆ ಅಭಿರುಚಿ ಹೊಂದಿದ್ದ ವ್ಯಕ್ತಿಯಾಗಿದ್ದ ಮೋಹನ ಆಳ್ವರು ಈಗ ಶಿಕ್ಷಣ ತಜ್ಞರಾಗಿ, ಸಾಹಿತ್ಯದ ರಾಯಭಾರಿಯಾಗಿ, ಬಹಳ ದೊಡ್ಡ ವ್ಯಕ್ತಿತ್ವವಾಗಿ, ಬೆಳೆದಿದ್ದಾರೆ. ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ನಾಡಿನ ಎಲ್ಲೆಡೆಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಲು ಸಾಲುಗಟ್ಟಿ ನಿಲ್ಲುತ್ತಾರೆ. ಈ ಮಟ್ಟಿಗೆ ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಪ್ರಖ್ಯಾತಿಯನ್ನು ಗಳಿಸಿದೆ. ಈ ರೀತಿಯ ಪ್ರಖ್ಯಾತಿಗೆ, ಇಲ್ಲಿ ಸೀಟು ಗಿಟ್ಟಿಸಲು ನಡೆಯುವ ನೂಕುನುಗ್ಗಲಿಗೆ ಆಳ್ವಾಸ್ ನುಡಿಸಿರಿ ಸಾಹಿತ್ಯ ಜಾತ್ರೆಯೇ ಕಾರಣ. ಕಾಲೇಜಿನ ಬಗ್ಗೆ ಯಾವುದೇ ಜಾಹೀರಾತಿಲ್ಲದೆ ಈ ಮಟ್ಟಿಗೆ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಮತ್ತು ತನ್ನ ಕಾಲೇಜಿನ ಸೀಟುಗಳನ್ನು ಮಾರಾಟ ಮಾಡಲು ಆಳ್ವರು ನುಡಿಸಿರಿಯನ್ನು ಬಹಳ ವ್ಯವಸ್ಥಿತವಾಗಿ ಬಳಕೆ ಮಾಡಿದ್ದಾರೆ. ಆಳ್ವರದೇನೂ  ಬೀದಿಯಲ್ಲಿ ಕಿತ್ತಳೆ ವ್ಯಾಪಾರ ಮಾಡಿ ಸರ್ಕಾರಿ ಶಾಲೆಯೊಂದನ್ನು ಕಟ್ಟಿದ ಮಂಗಳೂರಿನ ಹರೆಕಳ ಹಾಜಬ್ಬನ ರೀತಿಯ ನಿಸ್ವಾರ್ಥ ಸೇವೆಯಲ್ಲ.

ಮೂಲತಹ ಫ್ಯೂಡಲ್ ಭೂ ಮಾಲೀಕ  ವರ್ಗದಿಂದ ಬಂದಿರುವ ಮೋಹನ ಆಳ್ವರು ಆಳದಲ್ಲಿ ಫ್ಯೂಡಲ್ ಮನೋಭಾವವನ್ನೇ ಹಾಸು ಹೊದ್ದು ಬೆಳೆದವರು. ಮೂಡಬಿದ್ರೆ ಪ್ರಾಂತ್ಯದ ಬಹುದೊಡ್ಡ ಭೂ ಮಾಲೀಕ ಕುಟುಂಬ ಮೋಹನ ಆಳ್ವರದ್ದು. ತನ್ನ ವರ್ಗ ಗುಣಕ್ಕೆ ಸಹಜವಾದಂತೆ ವರ್ತಿಸುವ ಆಳ್ವರು ಕಳೆದ ಎರಡು ವರ್ಷಗಳ ಹಿಂದೆ ನುಡಿಸಿರಿ ಕಾರ್ಯಕ್ರಮದಲ್ಲಿ ದಲಿತ ನಿಂದನೆಯನ್ನು ಮಾಡಿದ್ದರು. ಕರಾವಳಿಯ ಅತೀ ಶೋಷಿತ ಜನಾಂಗವಾಗಿರುವ ಕೊರಗರನ್ನು ತನ್ನ ನುಡಿಸಿರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆಸಿ ವೇದಿಕೆ ಹತ್ತಲು ಬಿಡದೆ ಪೆಂಡಾಲ್‌ನ ಹೊರಗಡೆ ನಿಲ್ಲಿಸಿ ಡೋಲು ಬಾರಿಸಿದ್ದರು. ಇದಂತೂ ನಿಷೇದಿತ ಅಜಲು ಪದ್ದತಿಯ ಪ್ರತಿರೂಪದಂತಿತ್ತು. ಇದರ ಬಗ್ಗೆ ಮಾಧ್ಯಮಗಳು, ದಲಿತ ಸಂಘಟನೆಗಳು ಧ್ವನಿ ಎತ್ತಿದ್ದರೂ ಯಾವುದೇ ಮುಲಾಜಿಲ್ಲದೆ ತನ್ನ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು. ಈ ಬಗ್ಗೆ ದಲಿತ ಸಂಘಟನೆಗಳು ಮೂಡಬಿದ್ರೆ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು.

ಇದಾದ ನಂತರ ಇನ್ನೊಂದು ಬಾರಿಯೂ ಮೋಹನ ಆಳ್ವರೂ ಇದೇ ರೀತಿ ದಲಿತ ನಿಂದನೆ ಮಾಡಿದ್ದರು. ದಲಿತರ ಆರಾಧ್ಯ ದೈವಗಳನ್ನು ಮೆರವಣಿಗೆಯಲ್ಲಿ ಮತ್ತು ಮನರಂಜನಾ ವೇದಿಕೆಯಲ್ಲಿ ಪ್ರದರ್ಶಿಸುವಂತಿಲ್ಲ ಎಂದು ಸರ್ಕಾರದ ಆದೇಶವಿದ್ದರೂ ನುಡಿಸಿರಿಯ ಮನರಂಜನಾ ವೇದಿಕೆಯಲ್ಲಿ ದೈವದ ಪಾತ್ರಗಳನ್ನು ಪ್ರದರ್ಶಿಸಿ ಬಹಿರಂಗವಾಗಿ ದಲಿತರನ್ನು ಅವಮಾನಿದ್ದರು. ಈ ಬಗ್ಗೆ ದಲಿತ ಸಂಘಟನೆಗಳು ಮೋಹನ ಆಳ್ವ ಮತ್ತು ಜಿಲ್ಲಾಡಳಿತದ ಗಮನ ಸೆಳೆದರೂ ಮೋಹನ ಆಳ್ವರು ಕ್ಯಾರೇ ಅನ್ನಲಿಲ್ಲ.

ಕನ್ನಡ ಮನಸ್ಸು ಮತ್ತು ಜನಪರ ಚಳವಳಿ

ನವೆಂಬರ್ 16 ರಿಂದ 18 ರವರೆಗೆ ಕನ್ನಡ ಮನಸ್ಸು ಮತ್ತು ಜನಪರ ಚಳವಳಿಗಳು ಎಂಬ ಪರಿಕಲ್ಪನೆಯಲ್ಲಿ ಆಳ್ವಾಸ್ ನುಡಿಸಿರಿಯನ್ನು ಒಂಬತ್ತನೇ ವರ್ಷ ನಡೆಸುತ್ತಿದೆ. ಮೋಹನ ಆಳ್ವರು ಮತ್ತು ಅವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೂ ಜನಪರ ಚಳವಳಿಗಳಿಗೂ ಇರುವ ಸಂಬಂಧವಾದರೂ ಏನು? ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರ್‌.ಎಸ್.ಎಸ್ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಇದೇ ಮೋಹನ ಆಳ್ವರು ಗೌರವಧ್ಯಕ್ಷರಾಗಿದ್ದರು. ಕರಾವಳಿ ಜಿಲ್ಲೆಗಳ ಜನಪರ ಚಳವಳಿಗಳನ್ನು ಸಂಪೂರ್ಣವಾಗಿ ನಾಶಪಡಿಸಿದ, ನಿರ್ವೀರ್‍ಯಗೊಳಿಸಿದ ಪ್ರತಿಗಾಮಿ ಹಿಂದುತ್ವದ ಚಳವಳಿಯ ಶಕ್ತಿ ಪ್ರದರ್ಶನದ ಸಮಾಜೋತ್ಸವದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಐದು ವರ್ಷಗಳ ಹಿಂದಿನ ಹಿಂದುತ್ವದ ಯಶಸ್ವಿ ಸಮಾವೇಶದ ಫಲವೇ ಇಂದಿನ ಬಿಜೆಪಿ ಸರ್ಕಾರ ಮತ್ತು ಕೋಮುವಾದಿ ಮನಸ್ಸುಗಳು. ಈ ಹಿಂದೂ ಸಮಾಜೋತ್ಸವದ ಯಶಸ್ಸಿನ ನಂತರ ಮಂಗಳೂರಿನ ಬೀದಿಗಳಲ್ಲಿ ಹಿಂದುತ್ವದ ನೈತಿಕ ಪೊಲೀಸರದ್ದೇ ಕಾರುಬಾರು.

ನಾಲ್ಕು ವರ್ಷದ ಹಿಂದೆ ಇದೇ ಮೂಡಬಿದ್ರೆಯ ಪಕ್ಕದಲ್ಲಿರುವ ಎಡಪದವಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಇಬ್ಬರು ಇಬ್ಬರು ಹಿಂದೂ ವಿದ್ಯಾರ್ಥಿನಿಯರಿದ್ದರು. ಇದು ಮಂಗಳೂರಿನ ಮಟ್ಟಿಗೆ ಮಹಾ ಅಪರಾಧ. ಈ ಅಪರಾಧಕ್ಕಾಗಿ ಈ ವಿದ್ಯಾರ್ಥಿಗಳಿದ್ದ ಬಸ್ಸನ್ನು ಮಾರ್ಗ ಮಧ್ಯದಲ್ಲಿ ಭಜರಂಗದಳದವರು ತಡೆದರು. ಬಸ್ಸಿಗೆ ನುಗ್ಗಿ ನಾಲ್ಕೂ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಬಸ್ಸಿನಿಂದ ಇಳಿಸಲಾಯಿತು. ಆ ಸಂದರ್ಭ ಈ ಕಾಲೇಜಿಗೆ ಮೋಹನ ಆಳ್ವರು ಗೌರವ ಸಲಹೆಗಾರರಾಗಿದ್ದರು. ಮೊದಲೇ ತನ್ನ ಕಾಲೇಜಿನ ವಿದ್ಯಾರ್ಥಿಗಳನ್ನು ಕ್ರೀಡಾಕೂಟದಲ್ಲಿ ಹಿಂದಿಕ್ಕಿ ಪ್ರಶಸ್ತಿ ಪಡೆಯುತ್ತಿದ್ದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಬಗ್ಗೆ ಅಸಹನೆ ಹೊಂದಿದ್ದ ಮೊಹನ ಆಳ್ವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವುದನ್ನು ಬಿಟ್ಟು ಜೊತೆಯಾಗಿ ಕ್ರೀಡಾಕೂಟಕ್ಕೆ ತೆರಳಿದ್ದಕ್ಕಾಗಿ ಪೆಟ್ಟು ತಿಂದ ವಿದ್ಯಾರ್ಥಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ “ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿಲ್ಲ. ಮಜಾ ಮಾಡಲು ಹೊರಟಿದ್ದರು” ಎಂಬ ಹೇಳಿಕೆ ನೀಡಿದ್ದರು. ಆಗ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಮೋಹನ ಆಳ್ವರ ವಿರುದ್ದ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ತನ್ನ ಕಾಲೇಜಿನ ವಿದ್ಯಾರ್ಥಿಗಳು ತನ್ನ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿದ್ದರು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಮೋಹನ ಆಳ್ವರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ಹರಿಹಾಯ್ದಿದ್ದರು.

ಈಗಲಾದರೂ ಮೋಹನ ಆಳ್ವ ಮನಷ್ಯ ಪರ ನಿಲುವುಗಳನ್ನು ಹೊಂದಿದ್ದಾರೆಯೇ ಎಂದರೆ ಅದೂ ಇಲ್ಲ. ಮೊನ್ನೆ ಮೊನ್ನೆ ನಡೆದ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆ ದಾಳಿಯ ಪ್ರಕರಣದಲ್ಲೂ ಹುಡುಗಿಯರ ಮೇಲೆ ಹಲ್ಲೆ ನಡೆಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನೇ ಸಮರ್ಥಿಸಿಕೊಂಡಿದ್ದರು. “ಹುಡುಗಿಯರ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಆದರೆ ಹುಡುಗಿಯರು ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಅಶ್ಲೀಲ ಬಟ್ಟೆ ತೊಟ್ಟುಕೊಂಡು ಹೋಂ ಸ್ಟೆಗಳಲ್ಲಿ ಹುಟ್ಟು ಹಬ್ಬ ಆಚರಿಸಿದ್ದೂ ತಪ್ಪು” ಎಂದಿದ್ದರು. ಇದು ಮೋಹನ ಆಳ್ವರ ದೊಡ್ಡ, ವಿಶಾಲಹೃದಯದ  ಮನಸ್ಸು.

ಆಳ್ವರ ಜನಪರ ಚಳವಳಿ ಮನಸ್ಸು

ವಿದ್ಯಾರ್ಥಿಗಳು ತಮ್ಮ ಇಷ್ಟ ಬಂದ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು ತಮ್ಮ ಬೇಡಿಕೆಗಳ ಪೂರೈಕೆಗಾಗಿ ಹೋರಾಟ, ಪ್ರತಿಭಟನೆಗಳನ್ನು ನಡೆಸಬಹುದು ಮತ್ತು ತಮ್ಮ ಸುತ್ತಮುತ್ತ ನಡೆಯುವ ಬೆಳವಣಿಗೆಗಳಿಗೆ ಸ್ಪಂದಿಸಿ ಚಳವಳಿಗಳನ್ನು ಸಂಘಟಿಸಬಹುದು ಎಂದು ಸಂವಿಧಾನ ವಿದ್ಯಾರ್ಥಿಗಳಿಗೆ ಹಕ್ಕು ನೀಡಿದೆ. ಕಾಲೇಜು ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ಸಂಘಗಳನ್ನು ರಚಿಸುವುದು ಮತ್ತು ವಿದ್ಯಾರ್ಥಿ ಸಂಘಕ್ಕೆ ಮುಕ್ತ ಚುನಾವಣೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೆಳೆಸಬೇಕು ಎಂಬ ನಿಯಮವೇ ಇದೆ. ಆದರೆ ಮೋಹನ ಆಳ್ವರ ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣೆ ಬಿಡಿ, ವಿದ್ಯಾರ್ಥಿ ಸಂಘಗಳಿಗೇ ಅವಕಾಶವಿಲ್ಲ. ವಿದ್ಯಾರ್ಥಿಗಳು ಯಾವುದೇ ವಿದ್ಯಾರ್ಥಿ ಸಂಘಟನೆಗಳ ಸದಸ್ಯರಾಗುವಂತಿಲ್ಲ. ವಿದ್ಯಾರ್ಥಿ ಸಂಘಟನೆಗಳಿಗಂತೂ ಮೋಹನ ಆಳ್ವರ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣ ನಿಷೇದ. ಇನ್ನು ಹೋರಾಟಗಳಂತೂ ಆಳ್ವರ ವಿದ್ಯಾರ್ಥಿಗಳಿಗೆ ಕನಸ್ಸಿನ ಮಾತು. ವಿದ್ಯಾರ್ಥಿಗಳು, ಯುವ ಜನಾಂಗ ಇಲ್ಲದ ಯಾವ ಜನಪರ ಚಳವಳಿಯ ಬಗ್ಗೆ ಮೋಹನ ಆಳ್ವ ಮಾತನಾಡುತ್ತಿದ್ದಾರೆ? ಈ ದೇಶದ ಸ್ವಾತಂತ್ರ್ಯ ಚಳವಳಿ, ಜೇಪಿ ಆಂದೋಲನ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ, ನಾಡು ನುಡಿಗಾಗಿ ನಡೆದ ಎಲ್ಲಾ ಹೋರಾಟಗಳಿಂದ ಹಿಡಿದು ಮೊನ್ನೆ ಮೊನ್ನೆ ದಕ್ಷಿಣ ಕನ್ನಡದಲ್ಲಿ ನಡೆದ ನೈತಿಕ ಪೊಲೀಸರ ವಿರುದ್ಧ ಹೋರಾಟದವರೆಗೆ ನಡೆದ ಜನಪರ ಚಳವಳಿಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳನ್ನು ಹೊರಗಿಟ್ಟು ಯಾವುದೇ ಚಳವಳಿಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಮೋಹನ ಆಳ್ವರ ಕನ್ನಡ ಮನಸ್ಸು ಮತ್ತು ಜನಪರ ಚಳವಳಿಯ ಪರಿಕಲ್ಪನೆ.

ಮೋಹನ ಆಳ್ವರಂತಹ ಒಬ್ಬ ಯಶಸ್ವಿ ಶಿಕ್ಷಣದ ವ್ಯಾಪಾರಿ ತನ್ನ ವ್ಯಾಪಾರಿ ಉದ್ದೇಶಕ್ಕಾಗಿ “ಆಳ್ವಾಸ್ ನುಡಿಸಿರಿ”ಯನ್ನು ಬಳಸಿಕೊಳ್ಳುವುದು ಸಹಜ. ಆದರೆ ಇಲ್ಲಿನ ಶೋಷಿತ ವರ್ಗಗಳಿಗಾಗಿ ಬಂಡಾಯ ಸಾಹಿತ್ಯವನ್ನೇ ಸೃಷ್ಠಿ ಮಾಡಿದ, ಕೋಮುವಾದದ ವಿರುದ್ಧ ಸಾಹಿತ್ಯದ ಮೂಲಕ ಮಾತ್ರವಲ್ಲದೆ ಬೀದಿಗಿಳಿದು ಹೋರಾಟಕ್ಕಿಳಿದ ನಾಡಿನ ಖ್ಯಾತ ಸಾಹಿತಿಗಳು ಹಿಂದೂ ಸಮಾಜೋತ್ಸವದ ಸಂಘಟಕ ನಡೆಸುವ ಸಾಹಿತ್ಯ ಜಾತ್ರೆಗೆ ಧಾವಿಸಿ ಬರುವುದು ಅರ್ಥವಾಗದ ವಿಚಾರ. ಮಂಗಳೂರನ್ನು ಕೋಮುವಾದದ ಅಗ್ನಿಕುಂಡವನ್ನಾಗಿಸಿ, ಶಿಕ್ಷಣವನ್ನು ಶ್ರೀಮಂತರ ಮಕ್ಕಳಿಗೆ ಮಾರಾಟಕ್ಕಿಟ್ಟ ವ್ಯಕ್ತಿಯ ಬಗ್ಗೆ ಕೋಮುವಾದವನ್ನು ವಿರೋಧಿಸುವ, ಉಚಿತ ಮತ್ತು ಸಮಾನ ಶಿಕ್ಷಣದ ಅನುಷ್ಠಾನಕ್ಕಾಗಿ ಆಗ್ರಹಿಸುವ, ಜನಪರ ಚಳವಳಿಗಳನ್ನು ಕಟ್ಟುವ ಸಾಹಿತ್ಯದ ಮನಸ್ಸುಗಳಿಗೆ ಅರ್ಥವಾಗದಿರುವುದು ವರ್ತಮಾನದ ದುರಂತ. ಈ ಬಾರಿ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟಿಸಲು ಬರುವ ಮುನ್ನ ಕನ್ನಡ ಮನಸ್ಸುಗಳ ಪ್ರೀತಿಯ ಮೇಷ್ಟ್ರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ಮೇಷ್ಟ್ರು ಆಳ್ವರ ಬಗ್ಗೆ, ಅವರ ನುಡಿಸಿರಿಯ ನೈಜ ಉದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಿ. ಇಲ್ಲದಿದ್ದಲ್ಲಿ ಆಳ್ವರ ನುಡಿಸಿರಿಯ ವೇದಿಕೆಯಲ್ಲಿ ಆಳ್ವರೇ ನಾಚಿಕೊಳ್ಳುವಂತೆ ಕನ್ನಡದ ಜನಪರ ಸಾಹಿತಿಗಳು ಹೊಗಳುವುದನ್ನು ಕಂಡು ಜಿಲ್ಲೆಯ ವಿಚಾರವಾದಿಯೊಬ್ಬರು ಹೇಳಿದಂತೆ “ಜಮೀನ್ದಾರರ ಮನೆಯ ಜಿಲೇಬಿ ಎಂದರೆ ಎಲ್ಲರಿಗೂ ಇಷ್ಟ” ಎಂಬ ಮಾತು ಅನಂತಮೂರ್ತಿಯವರಿಗೂ ಅನ್ವಯಿಸುತ್ತದೆ.

17 thoughts on “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?

  1. mahanthesh.g.

    ಅನಂತಮೂರ್ತಿ ಅವರ ಬಗ್ಗೆ ಲಂಕೇಶ್​ ಮೇಷ್ಟ್ರು ಈ ಹಿಂದೆಯೇ ಹೇಳಿದ್ದಾರೆ. ಅನೇಕ ಸುಳ್ಳುಗಳಿಗೆ ಸತ್ಯದ ವೇಷ ಹಾಕಬಲ್ಲ ಜಾಣ್ಮೆ ಅನಂತಮೂರ್ತಿಗಿದೆ ಎಂದು. ಆದರೂ ಅನಂತಮೂರ್ತಿ ಒಬ್ಬ ಸಾರ್ವಜನಿಕ ಮನುಷ್ಯ ಎಂಬುದು ಮಾತ್ರ ನಿರ್ವಿವಿವಾದ.
    ಮಹಂತೇಶ್​.ಜಿ.

    Reply
  2. Nagaraju

    ಅನಂತಮೂರ್ತಿ ಅವರು ಅವಕಾಶ ಮೂರ್ತಿ ಎನ್ನುವ ಮಾತು ಚಂಪಾ ಹೇಳಿದ್ದು ಕಾಲಕಾಲಕ್ಕೆ ಸಾಬೀತಾಗುತ್ತ ಇದೆಯಲ್ಲ. ಬಂಡಾಯದ ಬರಗೂರು, ಸಾಕ್ಷಿಪ್ರಜ್ಞೆ ಎಂದು ದಾಸಕೂಟದಿಂದ ಹೊಗಳಿಸಿಕೊಳ್ಳುತ್ತಿರುವ ಅನಂತಮೂರ್ತಿ ಅವರ ಬಗ್ಗೆ ಇಷ್ಟೊಂದು ಗಂಭೀರ ಚಿಂತನೆ ಅವಶ್ಯಕವೇ..

    Reply
  3. Nagaraju

    ಅಷ್ಟಕ್ಕೂ ನಿಸಾರ್ ಯಾವ ಜನಪರ ಹೋರಾಟದಲ್ಲಿ ಭಾಗಿಯಾಗಿದ್ದರು? ಅನಂತಮೂರ್ತಿ ಕನ್ನಡದ ಯಾವ ಹೋರಾಟದಲ್ಲಿ ಮುಂದೆ ನಿಂತಿದ್ದರು? ಗೋಕಾಕ್ ಚಳವಳಿ ಕಾಲದಲ್ಲಿ ಇವರು ವಹಿಸಿದ್ದ ಪಾತ್ರ ಏನು ಎಂಬುದನ್ನು ಕನ್ನಡದ ನಿಜವಾದ ಮನಸ್ಸುಗಳು ಅರ್ಥಮಾಡಿಕೊಂಡಿವೆ…

    Reply
  4. oduga

    ನವೀನ್ ರವರೇ, ನಿಮ್ಮ ಲೇಖನ ಮೆಚ್ಚುವಂತದ್ದೆ. ಅದಕ್ಕಿಂತಲೂ ಹೆಚ್ಚಾಗಿ, ನಿಮ್ಮ ಧೈರ್ಯವನ್ನು ಖಂಡಿತವಾಗಿಯೂ ಪ್ರಶಂಶಿಸಬೇಕಾದದ್ದು. ಈ ತನಕ ಯಾವುದೇ ವ್ಯಕ್ತಿ ಇಂತಹ ವಿಚಾರಗಳನ್ನು ಬಯಸಿಯೂ ಬರೆಯುವ ಸಾಹಸವನ್ನು ಮಾಡಿಲ್ಲ. ಏಕೆಂದರೆ ಇಡಿಯ ಕರಾವಳಿಯ ನಿಯಂತ್ರಣ ಅಂತಹ ಶೈಕ್ಷಣಿಕ- ಧಾರ್ಮಿಕ- ಸಾಂಸ್ಕೃತಿಕ-ಮಾಧ್ಯಮ ವ್ಯಾಪಾರಿಗಳ ಕೈಯಲ್ಲೇ ಇದೆ. ಇಂಥವರು ತಮ್ಮ ಸೊಫಸ್ಟಿಕೇಟೆಡ್ ಆಮಿಷಗಳಿಂದ ಕರಾವಳಿ ಜನರ ಬುದ್ದಿಗೆ ಮಂಕುಬೂದಿಯನ್ನೆರಚಿ ತಮ್ಮ ’ವ್ಯಾಪಾರ’ವನ್ನು ಭರ್ಜರಿಯಾಗಿ ನಡೆಸುತ್ತಿರುವವರು. ಇತ್ತೀಚೆಗೆ ಮಂಗಳೂರಿನ ಪಕ್ಕದ ಉಡುಪಿ ಜಿಲ್ಲೆಯಲ್ಲೂ ಇಂಥ ವ್ಯಕ್ತಿಯೊಬ್ಬರು ಉದಯಿಸಿದ್ದಾರೆ ಎಂದು ಮೊನ್ನೆಯ ದಿ ಹಿಂದೂ ಪತ್ರಿಕೆಯಲ್ಲಿ ಜಾಹೀರಾತೊಂದನ್ನು ನೋಡಿ ತಿಳಿಯಿತು. ತನ್ನ “ದುಡ್ಡಿನ” ಬಲದಿಂದ “ಸಮಾಜ ಸೇವೆ”ಯನ್ನು ಮಾಡುತ್ತಿರುವ ಈ ವ್ಯಕ್ತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕೊಡಮಾಡುವ “ಪ್ರತಿಷ್ಟಿತ” ನಾಡೋಜ ಪ್ರಶಸ್ತಿಯೂ ಸಿಕ್ಕಿದೆಯೆಂದು ತಿಳಿದು ಬಹಳ ಅಚ್ಚರಿಯಾಯಿತು. ಹಾಗಾದರೆ, ಅದೆಷ್ಟೋ ಮಂದಿಗೆ ಈ ತನಕ ನಾಡೋಜ ಪ್ರಶಸ್ತಿ ಸಿಗಬೇಕಿತ್ತು, ಅಥವಾ ಇಂಥ ಇನ್ನೆಷ್ಟು ಮಂದಿಗೆ ಸಿಗಲಿದೆಯೋ ಎಂದು ಕಾದು ನೋಡ ಬೇಕು. ಕರಾವಳಿಯಲ್ಲಿ ದುಡ್ಡಿದ್ದರೆ ಸಾಕು, ಎಲ್ಲಾ ಪ್ರಶಸ್ತಿಗಳು, ಹೊಗಳಿಕೆಗಳು ವ್ಯಕ್ತಿಯನ್ನು ಹುಡಿಕಿಕೊಂಡು ಬರುತ್ತವೆಯೆಂದು ಕಾಣ್ಸುತ್ತೆ.

    Reply
  5. airshelf

    Knowing Mr.Alva closely, i need to write few things here. Mr.Alva provides education at very reasonable cost and TOTAL FREE for merit students. One of my cousin who got total free sponsorship for 2 years = ZERO COST. Would you mind sharing all details/numbers and then we can discuss this further. This is extreme negative journalism.

    Reply
  6. venu

    ನವೀನ್ ಅವರೇ ನೀವು ಎಲ್ಲವನ್ನು ಕೆಂಪು ಕನ್ನಡಕ ಹಾಕಿಕೊಂಡು ನೋಡುವ ಪ್ರಯತ್ನಕ್ಕೆ ಇಳಿಬೇಡಿ. ಆಳ್ವಾಸ್ ಸುಡಿಸಿರಿಗೆ ಅನಂತಮೂರ್ತಿ ಯಾಕೆ ಹೋಗ್ಬಾರ್ದು ಅನ್ನುವುದು ನನಗೆ ಅರ್ಥವಾಗುತ್ತಿಲ್ಲ.ಅಷ್ಟಕ್ಕೂ ಅನಂತಮೂರ್ತಿ ಹೋಗೋದು ಆಳ್ವಾ ಮಾಡ್ತಿರುವ ಹಿಂದೂ ಸಮಾಜೋತ್ಸವಕ್ಕಲ್ಲ… ಒಂದು ಸಾಹಿತ್ಯ ಜಾತ್ರೆಗೆ. ಆಳ್ವಾ ಹಿಂದುವಾದಿ ಅನ್ನೋ ಕಾರಣಕ್ಕೆ ಅದನ್ನ ನಿರಾಕರಿಸುವುದಾದ್ರೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಎಲ್ಲಾ ಸಾಹಿತ್ಯ ಸಮ್ಮೇಳನ, ಬೆಳಗಾಂನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಗಳನ್ನೆಲ್ಲ ಪ್ರಗತಿಪರ ಸಾಹಿತಿಗಳೆಲ್ಲ ನಿರಾಕರಿಸಬೇಕಾಗಿತ್ತು. ನೀವು ಕೂಡ ಇದೇ ರೀತಿಯಲ್ಲಿ ಅದರ ವಿರುದ್ಧ ದ್ವನಿ ಎತ್ತಬೇಕಿತ್ತು… ಸಾಹಿತ್ಯದ ಕೆಲಸಗಳಿಗೂ ಪಂಥಗಳ ಬಣ್ಣ ಕಟ್ಟವುದು ಸರಿಯಲ್ಲ… ಇನ್ನು ಆಳ್ವಾ ಶಿಕ್ಷಣವನ್ನು ವ್ಯಾಪಾರಿಕರಣ ಮಾಡಿದ್ದಾರೆ ಅಂತ ನೀವು ಹೇಳುತ್ತೀರಿ. ಅದು ನಿಜವೇ ಇರಬಹುದು. ಹಾಗಾದ್ರೆ ನೀವೇ ಒಂದು ಸಂಸ್ಥೆ ಕಟ್ಟಿ ವಿಸ್ವಾರ್ಥ ಸೇವೆ ಒದಗಿಸಿ. ಎಲ್ಲವನ್ನು ವಿರೋಧಿಸುವುದು ಮಾತ್ರ ಆದರ್ಶ ಅಲ್ಲ ಅಲ್ವಾ?! ನೋಡಿ ಹತ್ತು ಜನರಿಂದ ಶುಲ್ಕ ತಗೆದುಕೊಂಡು ಒಂದಿಬ್ಬರಿಗೆ ಉಚಿತ ಶಿಕ್ಷಣ ಕೊಟ್ರೆ ಅದು ಕೂಡ ಸೇವೆ….(airshelf ಕಮೆಂಟನ್ನ ಗಮನಿಸಿ)

    Reply
  7. vasanth

    Very interesting article. Our so called educationist collect hefty fee from as many student as possible, out of that they invest on or provide scholarship to those in need. This can’t be called as philanthropy. This is just an eye wash.

    Reply
  8. Shrinidhi Darbhe

    ಸುರಿನ್ಜೆಯವರೇ ಅದ್ಭುತ ಲೇಖನ…! ಮೋಹನ್ ಆಳ್ವ ಅವರ ಬಗ್ಗೆ ಬರೆದಿದ್ದಿರಾ… ಸ್ವಲ್ಪ ಪ್ರಪಂಚ ಸುತ್ತ ಕಣ್ಣು ಹಾಯಿಸಿ ಸಾರ್. ನಿಮ್ಮ ಕಾಮಾಲೆ ಕಣ್ಣಿಗೆ ಹಳದಿ ಹಳದಿ ಕಂಡರೆ ತಪ್ಪು ಡಾ.ಅಳ್ವರದಲ್ಲ…
    ಈ ಪ್ರಶ್ನೆಗಳಿಗೆ ಉತ್ತರಿಸಿ ಸುರಿನ್ಜೆಯವರೇ…
    ೧. ನೀವು ಹೇಳಿದಂತೆ ಡಾ. ಆಳ್ವ ಮಕ್ಕಳ ದೊನೆಶನ್ ಹಣದಲ್ಲಿ ನುಡಿಸಿರಿಯನ್ನು ಅವರ ವ್ಯಾಪಾರ ದೃಷ್ಟಿಯಿಂದ ಮಾಡುತ್ತಿದ್ದಾರೆ… ರಾಜ್ಯದ ರಾಷ್ಟ್ರದ ಎಲ್ಲಾ ಶಿಕ್ಷಣ ಸಂಸ್ಥೆಗಳು ದೊನೆಶನ್ ತೆಗೆದುಕೊಳ್ಳುತ್ತಿದೆ ಆದರೆ ಆಳ್ವಾಸ್ ಸಂಸ್ಥೆ ಮಾತ್ರ ಒಟ್ಟು ೧೫೦೦೦ ವಿದ್ಯಾರ್ಥಿಗಳಲ್ಲಿ ೧೫೦೦ ವಿದ್ಯಾರ್ಥಿಗಳಿಗೆ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ , ಆರ್ಥಿಕ ಹಿಂದುಳಿದ ಹಾಗು ಇನ್ನಿತರ ವಿಶೇಷ ಸಾಧಕ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದೆ…
    ೧.೧ ನೀವೇ ಹೇಳಿ ಉಳಿದ ಯಾವ ಸಂಸ್ಥೆ ಇಂತಹ ಕೆಲಸ ಮಾಡುತ್ತಿದೆ?
    ೧.೨ ಉಳಿದ ವಿದ್ಯಾರ್ಥಿಗಳ ಶುಲ್ಕವು ಇನ್ನಿತರ ಕಾಲೇಜುಗಳಲ್ಲಿ ಪಡೆಯುತ್ತಿರುವ ಶುಲ್ಕಗಳಿಗಿಂತ ಕಡಿಮೆಯಾಗಿದೆ. ನುಡಿಸಿರಿ ಅಥವಾ ವಿರಾಸತ್ ಅಥವಾ ಇನ್ನಾವುದೇ ಕಾರ್ಯಕ್ರಮದ ವೆಚ್ಚಕ್ಕೆ ಮಕ್ಕಳಿಂದ ಯಾವುದೇ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ.
    ೧.೩ ಉಳಿದ ಶಿಕ್ಷಣ ಸಂಸ್ಥೆಗಳ ಡೊನೇಶನ್ ಹಣವು ಅವರ ಜೇಬಲ್ಲೆ ಉಳಿಯುತ್ತದೆ ಆದರೆ ಆಳ್ವರ ಕಾರ್ಯಕ್ರಮ ಸಮಾಜವನ್ನು ಕಟ್ಟುವ ದೃಷ್ಟಿಯಲ್ಲಿ ವಿನಿಯೋಗವಾಗುತ್ತಿದೆ ಅನಿಸುತ್ತಿಲ್ಲವೇ ?
    ೧.೪ ಇಷ್ಟೆಲ್ಲಾ ಮಹಾನ್ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ಅಷ್ಟೊಂದು ಅಚ್ಚು ಕಟ್ಟಾಗೆ ಮಾಡುವ ಕಾರ್ಯಕ್ರಮ ಓದಿನ ಹಂತದಲ್ಲೇ ಮಕ್ಕಳಿಗೆ ಸಿಗುವುದರಿಂದ ಅವರ ಅನುಭವ ವಿಸ್ತಾರವಗುವುದಿಲ್ಲವೇ?

    ೨ ಡಾ, ಆಳ್ವರು ಸುಮಾರು ೩೦ ವರ್ಷದ ಪರಿಶ್ರಮ ಇವತ್ತಿನ ಆಳ್ವಾಸ್ ಸಂಸ್ಥೆ..
    ೨.೧ ಡಾ. ಆಳ್ವ ಅವರ ಪರಿಶ್ರಮ , ಅವರ ಪ್ರಾಮಾಣಿಕ ಪ್ರಯತ್ನದ ಬಗ್ಗೆ ನಿಮಗೆ ಏನಾದರು ಅರಿವಿದೆಯೇ?
    ೨.೨ ಡಾ. ಆಳ್ವ ದೊಡ್ಡ ಭೂ ಮಾಲಿಕರ ಮಗ ಎಂದಿರಲ್ಲ, ಇವತ್ತಿನ ಆಳ್ವಾಸ್ ಸಂಸ್ಥೆ ನಿಜವಾಗಲು ಆಳ್ವರ ಕನಸು ಮತ್ತ್ತು ಪರಿಶ್ರಮದ ಕಾರಣ.

    ಸೂರಿಂಜೆಯವರೇ , ಪ್ರತಿಯೊಬ್ಬ ಮನುಷ್ಯನಲ್ಲೂ ನೆಗೆಟಿವ್ ಮತ್ತು ಪಾಸಿಟಿವ್ ಅಂಶಗಳು ಇರುತ್ತೆ. ಅದು ಡಾ. ಆಳ್ವ ಮಾತ್ರ ಅಲ್ಲ ನನ್ನನ್ನು ನಿಮ್ಮನ್ನು ಹೊರತಾಗಿಲ್ಲ. ಆದರೆ ಡಾ ಆಳ್ವ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಕೊಡುವ ಪ್ರಯತ್ನ ಮಾಡಿದ್ದಾರೆ.. ಅದನ್ನು ಪ್ರಶಂಸಿವ ಬದಲು…

    ನಾನು ೫ ವರುಷ ಆ ಸಂಸ್ಥೆ ಯಲ್ಲಿ ಓದಿದ್ದೇನೆ, ಇವತ್ತಿಗೂ ಆಳ್ವಾಸ್ ಸಂಸ್ಥೆಯಲ್ಲಿ ಓದಿದ್ದೇನೆ ಮತ್ತು ನನ್ನ ಜೀವನಕ್ಕೆ ಒಂದು ಸಮರ್ಥ ಬುನಾದಿ ಆಳ್ವಾಸ್ ಸಂಸ್ಥೆ ಕಟ್ಟಿ ಕೊಟ್ಟಿದೆ ಅನ್ನುವುದಕ್ಕೆ ಹೆಮ್ಮೆ ಪಡುತ್ತೇನೆ. ನಾನು ಮಾತ್ರ ಅಲ್ಲ ನನ್ನೆಲ್ಲಾ ಗೆಳೆಯರು ಇದಕ್ಕೆ ಹೊರತಾಗಿಲ್ಲ… ದಯವಿಟ್ಟು ಕಾಮಾಲೆ ಕಾಯಿಲೆಗೆ ಸೂಕ್ತ ಔಷಧಿ ಮಾಡಿಸಿಕೊಳ್ಳಿ.

    ಶ್ರೀನಿಧಿ .ಡಿ
    ಹಳೇ ವಿದ್ಯಾರ್ಥಿ ಆಳ್ವಾಸ್ ವಿದ್ಯಾ ಸಂಸ್ಥೆ

    Reply
  9. Kamalaksha Kampa

    You Are wrong, If your Cousin Studied free cost not only enough , Every Poor poor Stdents have to Study. . . .!

    Reply
    1. arun kumar, chikkamagaluru

      ಶ್ರೀನಿಧಿಯವರೇ,
      ನನ್ನ ಅಕ್ಕನ ಮಗಳು ಆಳ್ವಾಸ್ನಲ್ಲೇ ಓದಿದ್ದು. ಅಲ್ಲಿ ಸೆಕೆಂಡ್ ಈಯರ್ ಮುಗಿದ ನಂತರ ಅವಳ ತಾಯಿ ತೀರಿಕೊಂಡರು. ಅವರಿಗೆ ಆಳ್ವಾಸ್ನಲ್ಲಿ ವಿದ್ಯಾವ್ಯಾಸ ಮುಂದುವರಿಸೋದು ಕೌಂಟುಂಬಿಕ ಸಮಸ್ಯೆಗಳಿಂದ ಕಷ್ಟವಾಯಿತು. ಮನೆ ಸಮೀಪದ ಬೇರೋಂದು ಕಾಲೇಜಿಗೆ ಸೇರಿಸುವುದೆಂದು ನಿರ್ಧರಿಸಿ ಅಕ್ಕನ ಮಗಳ ಸಟರ್ಿಫೀಕೇಟ್ ಕೇಳಿದೆವು. ಪ್ರಾರಂಭದಲ್ಲಿ ಅಕ್ಕನ ಮಗಳೇ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಿಗೆ ತನ್ನ ಸಮಸ್ಯೆ ವಿವರಿಸಿ ಸಟರ್ಿಫೀಕೇಟ್ ನೀಡುವಂತೆ ಕೇಳಿಕೊಂಡಳು. ಪ್ರಾಂಶುಪಾಲರು 1 ಲಕ್ಷ ರೂಪಾಯಿ ಕೇಳಿದರು. ಅಷ್ಟೊಂದು ದುಡ್ಡು ಅವಳ ತಂದೆಯ ಬಳಿ ಇರಲಿಲ್ಲ. ಮತ್ತೊಂದೆಡೆ ಆಗಷ್ಟೇ ಅವಳ ತಾಯಿ ತೀರಿಕೊಂಡಿದ್ದರು. ನಾವು ಒಂದಷ್ಟು ಜನ ಹೋಗಿ ಸಟರ್ಿಫೀಕೇಟ್ ಕೇಳಿದೆವು. ಅರ್ಧದಲ್ಲಿ ಶಿಕ್ಷಣ ಸ್ಥಗಿತಗೊಳಿಸುವುದಾದರೆ ಒಂದು ಲಕ್ಷ ನೀಡಲೇ ಬೇಕು. ಇಲ್ಲವಾದರೆ ಸಟರ್ಿಫಿಕೇಟ್ ನೀಡಲು ಆಗುವುದಿಲ್ಲ ಎಂದರು. ನೀವು ಅರ್ಧದಲ್ಲಿ ಶಿಕ್ಷಣ ಮುಗಿಸಿದರೆ ನಮಗೆ ಒಂದು ಸೀಟಿನ ಡೊನೇಷನ್ ನಷ್ಠವಾಗುತ್ತದೆ ಎಂದರು. ನಾವು ಎರಡು ವರ್ಷದ ಶೈಕ್ಷಣಿಕ ಅವಧಿಯ ಸಂಪೂರ್ಣ ಮೊತ್ತ ಪಾವತಿಸಿದ್ದೆವು. ಮುಂದೆ ಬರದೇ ಇರುವ ಶೈಕ್ಷಣಿಕ ವರ್ಷದ ಫೀಸು ಮತ್ತು ಇನ್ನಿತರ ಶುಲ್ಕ ಮತ್ತು ಇನ್ನೇನೋ ಸುಡುಗಾಡು ದಂಢಗಳು ಸೇರಿ 1 ಲಕ್ಷ ರೂ ತೆರಬೇಕು ಎಂದರು. ನನ್ನ ಅಕ್ಕನ ಮಗಳು ಅತ್ತು ಗೋಗೆರೆದರೂ ಮನಸ್ಸು ಕರಗಲಿಲ್ಲ. ಕೊನೆಗೆ ಆಳ್ವರನ್ನು ಬೇಟಿಯಾಗಿ ಸಮಸ್ಯೆಯನ್ನು ವಿವರಿಸಿದೆವು. ಅವರ ಮನಸ್ಸು ಕರಗಲಿಲ್ಲ. ನಮ್ಮ ಅಕ್ಕನ ಮಗಳು ನಿಜವಾಗಿಯೂ ಆಳ್ವರ ಕಾಲು ಹಿಡಿದು ಅತ್ತಿದ್ದಾಳೆ. ಆಳ್ವರ ಪ್ರತಿಕ್ರೀಯೆ ನೀಡಲೇ ಇಲ್ಲ. ಪ್ರಾಂಶುಪಾಲರು ಹೇಳಿದಂತೆ ವ್ಯವಹರಿಸಿ ಎಂದರು. ಕೊನೆಗೆ ನಾವು ಮೀಡಿಯಾವನ್ನು ಸಂಪಕರ್ಿಸುವ ಬಗ್ಗೆ ಆಳ್ವರಿಗೆ ತಿಳಿಸಿದೆವು. ಅದಕ್ಕೆ ಆಳ್ವರು “ನೀವು ಯಾವ ಮೀಡಿಯಾ ಬಳಿ ಬೇಕಾದರೂ ಹೋಗಿ. ಇಲ್ಲಿಗೆ ಯಾರೂ ಬರಲ್ಲ” ಎಂದರು. ನಾವು ನೇರವಾಗಿ ಟಿವಿ 9 ಕಚೇರಿಯನ್ನು ಸಂಪಕರ್ಿಸಿದೆವು. ಟಿವಿ 8 ಕಚೇರಿಗೆ ತೆರಳಿ ದಾಖಲೆ ನೀಡಿದೆವು. ನಂತರ ಅಲ್ಲೇ ಪಕ್ಕದಲ್ಲಿರುವ ಕಸ್ತೂರಿ ಕಚೇರಿಗೂ ತೆರಳಿದೆವು. ಇದೇ ಲೇಖನದ ಲೇಖಕರಾಗಿರುವ ನವೀನ್ ಸೂರಂಜೀಯವರು ಮತ್ತು ಟಿ ವಿ 9 ನ ರಾಜೇಶ್ರವರು ಆಳ್ವಾಸ್ಗೆ ಬಂದು ದಾಖಲೆಗಳ ಸಮೇತ ಪ್ರಾಂಶುಪಾಲರ ಹೇಳಿಕೆ ಕೇಳಿದರು. ಆಗ ಪ್ರಾಂಶುಪಾಲರು “ಅರ್ಧದಲ್ಲಿ ಬಿಡುವ ವಿದ್ಯಾಥರ್ಿ ಉಳಿದ ಶೈಕ್ಷಣಿಕ ವರ್ಷದ ಫೀಸು ಮತ್ತು ಧಂಢ ಮತ್ತು ಇತರ ಶುಲ್ಕಗಳನ್ನು ಪಾವತಿಸಬೇಕು ಎಂಬ ಕಾನೂನಿನ ಬಗ್ಗೆ ಯೂನಿವಸರ್ಿಟಿ ಗೈಡ್ಲೈನ್ಸ್ ಇದೆ” ಎಂದರು. “ಎಲ್ಲಿದೆ ಗೈಡ್ಲೈನ್ ತೋರಿಸಿ” ಎಂದು ನವೀನ್ ಸೂರೆಂಜಿಯವರು ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ ಅವರು “ಆಳ್ವರು ನುಡಿಸಿರಿ, ವಿರಾಸತ್ ಮಾಡುತ್ತಾರೆ, ನೀವು ಹಾಗೆಲ್ಲ ಅವರ ಮೇಲೆ ಆರೋಪಿಸಬಾರದು” ಎಂದರು. ಅದಕ್ಕೆ ನವೀನ್ ಸೂರೆಂಜಿಯವರು “ಅದೆಲ್ಲಾ ಮತ್ತೆ ಮಾತಾಡೋಣಾ. ಮೊದಲು ಗೈಡ್ಲೈನ್ಸ್ ತೋರಿಸಿ. ಅದನ್ನು ತೋರಿಸಿದೆ ಬೇರೇನೂ ಮಾತಾಡಬೇಡಿ” ಎಂದರು. ಕೊನೆಗೆ ಯೂನಿವಸರ್ಿಟಿ ಗೈಡ್ಲೈನ್ಸ್ ತೋರಿಸಿದರು. ಅದರಲ್ಲಿ ಸ್ಪಷ್ಟವಾಗಿ ಬರೆದಿತ್ತು — “ವಿದ್ಯಾಥರ್ಿ ಕೇಳಿದ ತಕ್ಷಣ ಆಕೆ ಅಥವಾ ಆತನ ಸಟರ್ಿಫೀಕೇಟ್ ನೀಡತಕ್ಕದ್ದು. ಬಾಕಿ ಶುಲ್ಕ ಮತ್ತು ಶೈಕ್ಷಣಿಕ ಅವಧಿ ಪೂರೈಸಿದ ಫೀಸು ಹೊರತುಪಡಿಸಿ ಬೇರಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ” ಎಂದಿತ್ತು. ಅದಕ್ಕೆ ಸೂರೆಂಝೀಯವರು ಆ ವಾಕ್ಯಕ್ಕೆ ಅಂಡರ್ಲೈನ್ ಹಾಕಿ “ಈಗ ಮಾತನಾಡಿ” ಎಂದರು. ಪ್ರಾಂಶುಪಾಲರು ಮತ್ತು ಆಳ್ವರ ದ್ವನಿಯೇ ಇರಲಿಲ್ಲ. ಕೊನೆಗೆ ವರದಿಗಾರರು ಕಾಲೇಜಿನ ಬೇರೆ ಬೇರೆ ವಿದ್ಯಾಥರ್ಿಗಳ ಬಳಿ ಮಾತನಾಡಿದ್ದರು. ಹಲವಾರು ಫಾರಿನ್ ಮತ್ತು ಹೋರರಾಜ್ಯದ ಶ್ರೀಮಂತ ವಿದ್ಯಾಥರ್ಿಗಳು ಈ ರೀತಿ ಸಟರ್ಿಪೀಕೇಟ್ ಅನಿವಾರ್ಯತೆಯಿಂದ ಲಕ್ಷಾಂತರ ಫೀಸು ಕೊಟ್ಟು ಸಟರ್ಿಫೀಕೇಟ್ ತೆಗೆದುಕೊಂಡಿದ್ದಾರೆ ಎಂದು ಬೇರೆ ವಿದ್ಯಾಥರ್ಿಗಳು ಮಾಹಿತಿ ನೀಡಿದರು. ಈಗಲೂ ಯಾರಾದರೂ ಆಳ್ವರ ವಿರುದ್ಧ ದೂರು ನೀಡುವುದಾದರೆ ನಾವು ಅವರೊಂದಿಗೆ ಸೇರಿಕೊಳ್ಳಲು ಸಿದ್ದರಿದ್ದೇವೆ. 14,500 ವಿದ್ಯಾಥರ್ಿಗಳ ದರೋಡೆ ಮಾಡಿ 1500 ಪ್ರತಿಭಾ ವಂತ ವಿದ್ಯಾಥರ್ಿಗಳಿಗೆ ಉಚಿತ ಶಿಕ್ಷಣ ನೀಡುವುದು ಯಾವ ನ್ಯಾಯ ? ರ್ಯಾಂಕ್ ಸ್ಟೂಡೆಂಟ್ಗಳಿಗೆ ಮಾತ್ರ ಈ ಉಚಿತ ಅನ್ವಯಿಸುತ್ತದೆ. ಯಾಕೆಂದರೆ ಅವರು ಮತ್ತೆ ಆಳ್ವಾಸ್ಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗುತ್ತಾರೆ. ಅವರು ಆಳ್ವಾಸ್ನಲ್ಲೂ ರ್ಯಾಂಕ್ ಗಳಿಸುತ್ತಾರೆ. ಮುಂದಿನ ವರ್ಷದ ಜಾಹೀರಾತಿನಲ್ಲಿ ಅವರ ಫೋಟೋ ಇರುತ್ತದೆ. ಸರಿಯಾಗಿ ಬರೆದಿದ್ದೀರಿ ನವೀನ್ ಸೂರೆಂಜಿ, ಥ್ಯಾಂಕ್ಯಾ ಸರ್ ,.

      Reply
      1. prasad raxidi

        ನೀವು ನಮಗೆ ಗೊತ್ತಿರದ ಆಳ್ವರ ಇನ್ನೊಂದು ಮುಖ ತೋರಿಸಿದ್ದೀರಿ. ….
        ನನ್ನ ಮಗನಿಗೆ ಚಿಕ್ಕಮಗಳೂರಿನ A I T ಯಲ್ಲಿ ಇಂಜಿನಿಯರಿಂಗ್ ಸೀಟು ಸಿಕ್ಕಿ ಅಲ್ಲಿ ದಾಖಲಾಗಿ ಒಂದುವಾರ ಕ್ಲಾಸಿಗೆ ಹೋಗಿದ್ದ. ನಂತರ ಮೈಸೂರಿನಲ್ಲಿ ಸೀಟು ಸಿಕ್ಕಿತು. ನಾನು ಹೋಗಿ ಪ್ರಿನ್ಸಿಪಾಲರಲ್ಲಿ ಮೈಸೂರಿನಲ್ಲಿ ಓದಿಸಲು ನನಗೆ ಆರ್ಥಿಕ ತುಂಬ ಅನುಕೂಲವಾಗುತ್ತದೆ. ಎಂದು ವಿಣತಿಸಿಕೊಂಡೆ. ಸ್ವಾಮೀಜಿಯವರಲ್ಲಿ ಮಾತನಾಡಿ ಒಂದು ವಾರದಲ್ಲಿ ತಿಳಿಸುತ್ತೇನೆ ಎಂದರು . ಒಂದು ವಾರದ ನಂತರ ಕೇವಲ ಒಂದು ಸಾವಿರ ರೂ ಉಳಿಸಿಕೊಂಡು ಬಾಕಿ ಎಲ್ಲ ಹಣವನ್ನು ವಾಪಸ್ ಕೊಟ್ಟರು.. ಅವರಿಗೆ ಸಾಧ್ಯವಾದರೆ ಆಳ್ವರಿಗೇಕೆ ಸಾಧ್ಯವಿಲ್ಲ.

        Reply
  10. suhas, b'lore

    ಪ್ರಾಮಾಣಿಕತೆಯ ಅಹಂ, ನೈತಿಕ ಅಂಹಕಾರ ಮೈಗೂಡಿದರೆ, ಪ್ರಪಂಚವೇ ಕೆಟ್ಟದಾಗಿ ಕಾಣುತ್ತದೆ. ನವೀನ್ ರೀತಿಯಲ್ಲಿಯೇ ಯೋಚಿಸುವುದಾದರೆ- ಶೋ ಗ್ಲಾಸ್ ಹಾಕಿಕೊಂಡ ಸ್ಟೈಲೀಶ್ ನವೀನ್ ಏಕೆ, ಬಡವರ ಬಗ್ಗೆ, ಡೊನೇಶನ್ ಕಟ್ಟಲು ಸಾಧ್ಯವಾಗದವರ ಬಗ್ಗೆ ಮಾತನಾಡಬೇಕು ? -ಸುಹಾಸ್ ಬೆಂಗಳೂರು

    Reply
  11. Shrinidhi.d

    ಅರುಣ್ ಕುಮಾರ ಅವರೇ,

    ಆಳ್ವರು ವಿರಾಸತ್ ಆರಂಭಿಸಿ ೨೦ ವರುಷ ಆಯಿತು ಆಗ ವಿದ್ಯಾರ್ಥಿಗಳೇ ಇರಲಿಲ್ಲ ಕಾಲೇಜು ಇರಲಿಲ್ಲ…. ನುಡಿಸಿರಿ ಆರಂಭಿಸಿ ೯ ವರುಷ ಆಯಿತು. ಆಗ ಇದ್ದಿದ್ದು ೧೦೦೦ ವಿದ್ಯಾರ್ಥಿಗಳು. ಆಳ್ವರೆನು ಕೋಟ್ಯಾಂತರ ರುಪಾಯಿ ಕಯ್ಯಲ್ಲಿದ್ದು ಸಂಸ್ಥೆ ಆರಂಭಿಸಿಲ್ಲ ಅವರ ನಗುವಿನ ಹಿಂದೆ ಇರುವ ಶ್ರಮವನ್ನು ಅರಿಯೋ ಪ್ರಯತ್ನ ಮಾಡಿ…. ಅದೆಸ್ಟೋ ಅಶಕ್ತರಿಗೆ ಓದು, ಜೀವನ ನೀಡಿದ್ದಾರೆ… ಬಲ್ಬ್ ಉರಿಯಬೇಕಾದರೆ ಪ್ಲಾಸ್ ಮತ್ತು ಮೈನಸ್ ಎರಡು ಬೇಕು ಆಗ ಮಾತ್ರ ಬೆಳಕು ಬರುತ್ತೆ…. ೧೫೦೦೦ ಜನರಲ್ಲಿ ೪-೫ ಜನರಿಗೆ ಆ ರೀತಿ ಆದರೆ ಅದೇನು ದೊಡ್ಡ ವಿಷಯ ಅಲ್ಲ. ಅವರು ಮನುಷ್ಯರೇ, ಕೊಡುವವರಿದ್ದರೆ ಕಚ್ಚಾಡಿ ತಿನ್ನೋರು ಸಾವಿರ ಬಿಡಿ… ಸ್ವಲ್ಪ ವಾಸ್ತವವನ್ನು ಅರಿತು ಯೋಚಿಸಿದರೆ ಅರ್ಥವಾದಿತು… ಉಚಿತ ಸೀಟು ಚಿನ್ನದ ಮೊಟ್ಟೆಯಿಡುವ ಮಕ್ಕಳಿಗೆ ಎಂದಿರಲ್ಲ. ಅವರ ಶಿಕ್ಷಣ ಮುಗಿದು ಸಂಪಾದಿಸಲು ಆರಂಭಿಸಿದ ನಂತರ ಆಳ್ವರೇನೋ ಅವರಿಂದ ಹಣ ಕೇಳಿದಂತೆ ಆರೋಪಿಸುತ್ತಿರಲ್ಲ, … ಸ್ವಲ್ಪ ವಿಸ್ತಾರವಾಗಿ ಯೋಚಿಸಿ. ಆಳ್ವಾಸ್ ವಿದ್ಯಾ ಸಂಸ್ಥೆ ಒಂದು ವಿಶಿಷ್ಟ ಹಾಗು ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆ, ಧರ್ಮದ ಆನ್ನ ಛತ್ರವಲ್ಲ… ಯಾವ ವಿದ್ಯಾರ್ಥಿಗೆ ಅವಶ್ಯವಿದೆಯೋ ಅವರಿಗೆ ಆಳ್ವರ ಕಯ್ಯಲ್ಲಾದ ಸಹಾಯ ಮಾಡುತ್ತಾರೆ ಅಸ್ಟೆ. ಸುರಿಂಜೆ ಅವರ ಪ್ರಕಾರ ಆಳ್ವರು ಈ ರೀತಿ ಸಮಾಜಕ್ಕೆ ಏನನ್ನು ಕೊಡದೆ , ಉಳಿದ ವಿದ್ಯಾ ಸಂಸ್ಥೆಗಳಂತೆ ಲಕ್ಷಾಂತರ ಹಣವನ್ನು ಪಡೆದು ತಮ್ಮ ಬ್ಯಾಂಕ್ ಬ್ಯಾಲೆನ್ಸ ಹೆಚ್ಚಿಸಲಿ ಎಂದಂತಿದೆ…

    Reply
  12. oduga

    Surinjeyavare, Ei nimma teeke astondu samanjasa anisutilla. ivattu samajaghatuka shakthigalu namma nimma mundene bahalastu anyayagalannu maduthiruvaga Dr. Alva ravaru yellakkintahalu binnavagi uttama kelasagalannu Ei samajakkagi maaduthiddare. Teekisuvudu bahala sulabha, aadare uttama karyagalannu maadi torisuvudu bahala kasta. adakku punya beku. Sri Devaru Dr.Alvarige innastu uttama kelasa maadalu shakthi kodali yendu Sri Devaralli Prarthisuthene, nivu saha olleya vishayagalannu prakatisi shabbas thekkolli. indina janasamanyra thondaregala bagge gamanaharisi adara virudda horadi….

    Reply
  13. arif kudroli

    ಇಂದು ಕೋಮುವಾದ, ಬಂಡವಾಳಶಾಹಿತ್ವವು ಪರೋಕ್ಷವಾಗಿ ಬುದ್ಧಿಜೀವಿಗಳು, ಪ್ರಗತಿಪರ ಸಾಹಿತಿಗಳ ಮೇಲೂ ಪ್ರಭಾವ ಬೀರುತ್ತಿದೆ ಎನ್ನುವುದಕ್ಕೆ ಆಳ್ವಾಸ್ ವಿರಾಸಾಠ್ ಒಂದು ಉದಾಹರಣೆಯಷ್ಟೇ. ಕೋಮುವಾದ, ಬಂಡವಾಳಶಾಹಿತ್ವವನ್ನು ವಿರೋಧಿಸುವವರು ಅವುಗಳು ಪ್ರಚಾರಪಡಿಸುವ ಪೊಳ್ಳು ವಾದಗಳಿಗೆ ಬಲಿಯಾಗಿರುವುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿದೆ. ಕೇರಳದ ಉನ್ನತ ಅಧಿಕಾರಿಗಳು ಲವ್ ಜಿಹಾದ್ ಒಂದು ಕಟ್ಟುಕತೆ ಎಂದು ಹೇಳಿದ ಬಳಿಕವೂ ರಾಜ್ಯದ ಆಗಿನ ಮುಖ್ಯಮಂತ್ರಿಯಾಗಿದ್ದ ಸಿಪಿಎಂನ ಅಚ್ಯುತಾನಂದ್‌ರಂತಹ ಮೇಧಾವಿಗಳು ಕೂಡ ಕೆಲವು ಮುಸ್ಲಿಮ್ ಸಂಘಟನೆಗಳು ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಪ್ರಯತ್ನಿಸುತ್ತಿದೆ ಎಂಬ ಅಪ್ರಬುದ್ಧ ಹೇಳಿಕೆ ಕೊಟ್ಟು ಟೀಕೆಗೊಳಗಾಗಿದ್ದರು. ಇಂದು ಮಾಲ್ ಸಂಸ್ಕೃತಿಯನ್ನು ವಿರೋಧಿಸುವ ಮಂದಿ (ಅವರಲ್ಲಿ ಪ್ರಗತಿಪರರೂ ಒಳಗೊಂಡಿದ್ದಾರೆ. ಹಾಗೆಯೇ ಪತ್ರಕರ್ತರೂ ಕೂಡ) ಸ್ವತ: ತಾವೇ ದೊಡ್ಡ ದೊಡ್ಡ ಮಾಲ್‌ಗಳಿಗೆ ಗ್ರಾಹಕರಾಗಿ ಹೋಗುತ್ತಾರೆ. ತಮ್ಮ ಭಾಷಣ, ಬರಹಗಳಲ್ಲಿ ವಸಾಹತುಶಾಹಿತ್ವ, ಬಂಡವಾಳಶಾಹಿತ್ವ, ಸಾಮ್ರಾಜ್ಯಶಾಹಿತ್ವ ಎಂದೆಲ್ಲಾ ಬಡಬಡಿಸುವ ಮಂದಿ ಇವೆಲ್ಲದರ ಹೊಸ ರೂಪಗಳನ್ನು ತನ್ನಲ್ಲಿ ಒಳಗೊಳ್ಳಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಬೆಂಬಲಿಸುತ್ತಿರುವುದನ್ನೂ ನಾವು ಕಂಡಿದ್ದೇವೆ. ಯಾರಾದರೂ ಇವುಗಳೆಲ್ಲವ್ನೂ ತಿರಸ್ಕರಿಸಿ ಗಟ್ಟಿ ನಿಲುವಿನಿಂದ ವರ್ತಿಸಿದರೆ ಪ್ರಭುತ್ವದ ಕಣ್ಣಿಗೆ ಅವುಗಳು ಪ್ರಭಾವ ಬೀರಬಲ್ಲ ಮಾಧ್ಯಮಗಳ ಕಣ್ಣಿಗೆ ತೀವ್ರವಾದಿಗಳಾಗಿ, ಉಗ್ರವಾದಿಗಳಾಗಿ ಅಥವಾ ನಕ್ಸಲೈಟರಾಗಿ ಕಾಣುತ್ತಾರೆ.

    Reply
  14. revanth acharya

    athanobba pakka business man annodanna thilkolloke yake nimgyarigu sadya ella … mall gallalli offer kottu kotyanthara ru hana mado hage aalva nudisirige karchu madi thanna college ge prachara needutthane …..alvas yenu kannada medium college allalva … kannada da bagge astondu preethi edre alvas annu kannada medium agi munduvarestha edda … business man gal buddiyanna ariyo thakkatthu yee employ mentality hondiro janaralli elde erodu kedakara sangathi

    Reply

Leave a Reply to prasad raxidi Cancel reply

Your email address will not be published. Required fields are marked *