ಹುಡುಗಿ ಅಪರಾತ್ರಿ ಅಲೆದಾಟಕ್ಕೆ ಹೋದರೆ ಏನಾಗುತ್ತೆ?

– ಬಿ.ಎನ್. ಪಲ್ಲವಿ

ಕನ್ನಡದ ಅಗ್ರಮಾನ್ಯ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯಲ್ಲಿ ಇಂದು ಒಂದು ಕಾರ್ಟೂನ್ ಪ್ರಕಟವಾಗಿದೆ. ಪ್ರಕಾಶ್ ಶೆಟ್ಟಿಯವರ ಕಾರ್ಟೂನ್ ಹೀಗಿದೆ – ‘ಹುಡುಗಿಯರು ಅಪರಾತ್ರಿಗೆ ಅಲೆದಾಟಕ್ಕೆ ಹೋದರೆ ಏನಾಗುತ್ತದೆ ಎಂಬುದರ ಬಗ್ಗೆಯೂ ಇಲ್ಲಿ ಪಾಠ ಕಲಿಸುತ್ತಾರೆ ಅಂದಾಗಾಯ್ತು!’ ಎಂದು ದಿನಪತ್ರಿಕೆ ಕೈಯಲ್ಲಿ ಹಿಡಿದ ಪ್ರಜೆ ಮಾತನಾಡುತ್ತಾನೆ. ಪಕ್ಕದಲ್ಲೇ ಒಬ್ಬ ಪೊಲೀಸ್ ಅಧಿಕಾರಿ ಇದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಿತು ಎನ್ನಲಾದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಈ ಕಾರ್ಟೂನ್ ಪ್ರಕಟಗೊಂಡಿದೆ ಎನ್ನುವುದನ್ನು ಸುಲಭವಾಗಿ ಗ್ರಹಿಸಬಹುದು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಅದಿರಲಿ. ಈ ಕಾರ್ಟೂನ್ ಧ್ವನಿಸುತ್ತಿರುವ ಸಂದೇಶವೇನು? ನಾನು ಗ್ರಹಿಸಿದ್ದು ಇಷ್ಟು – ಅಪರಾತ್ರಿ ಅಲೆದಾಟಕ್ಕೆ ಹೋದ ಕಾರಣ ಆ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಒಳಗಾಗಬೇಕಾಯಿತು. ರಾತ್ರಿ ಹೊತ್ತಲ್ಲಿ ಹೊರಗೆ ಹೋಗಿದ್ದರ ಪರಿಣಾಮ ಏನು ಎನ್ನುವುದನ್ನು ವಿಶ್ವವಿದ್ಯಾನಿಲಯ ಇಂತಹದೊಂದು ಘಟನೆ ಮೂಲಕ ವಿದ್ಯಾರ್ಥಿನಿ ಸಮೂಹಕ್ಕೆ ಕಲಿಸಿದೆ. ಹಾಗಾದರೆ, ಮಹಿಳೆ ರಾತ್ರಿ ಹೊರಗೆ ಅಲೆದಾಡಿದರೆ ಅವರು ಅತ್ಯಾಚಾರಕ್ಕೆ ಒಳಗಾಗುವ ಚಾನ್ಸ್ ಇರುತ್ತದೆ ಎನ್ನುವುದು ಪ್ರಕಾಶ್ ಶೆಟ್ಟಿಯವರ ಅಭಿಪ್ರಾಯ.

ಪುರುಷ ಕೇಂದ್ರಿತ ಆಲೋಚನೆಯ ಫಲ ಈ ಕಾರ್ಟೂನ್. ಅತ್ಯಾಚಾರದಂತಹ ಹೀನ ಕೃತ್ಯ ನಡೆಸಿದವರಿಗಿಂತ (ದಾಖಲಾಗಿರುವ ದೂರಿನ ಪ್ರಕಾರ), ರಾತ್ರಿ ಗೆಳೆಯನೊಂದಿಗೆ ಹೊರಗೆ ಹೋಗಿದ್ದ ವಿದ್ಯಾರ್ಥಿನಿಯೇ ಪ್ರಜಾವಾಣಿ ಮತ್ತು ಶೆಟ್ಟಿಯವರ ಕಣ್ಣುಗಳಿಗೆ ಅಪರಾಧಿಯಾಗಿ ಕಾಣುತ್ತಾರೆ. ಸ್ತ್ರೀಪರ ದನಿ ಎತ್ತುವ ಅನೇಕರಿಗೆ ಈ ಪತ್ರಿಕೆ ಅವಕಾಶ ಮಾಡಿಕೊಟ್ಟಿದೆ. ಸ್ತ್ರೀಶೋಷಣೆ ಮತ್ತು ಅವರ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಕೃತ್ಯಗಳು ನಡೆದಾಗಲೆಲ್ಲಾ ಪತ್ರಿಕೆ ಸ್ತ್ರೀಪರ ನಿಂತಿದೆ.

ಕಾರ್ಟೂನ್‌ಗಳು ವಿವಾದಕ್ಕೀಡಾದಗೆಲ್ಲಾ ಕಾರ್ಟೂನಿಸ್ಟ್‌ನ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಚರ್ಚೆ ಆಗುತ್ತದೆ. ಅಂತಹದೊಂದು ಕಾರ್ಟೂನ್ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಬಾರದಿತ್ತು ಎನ್ನುವ ಅಭಿಪ್ರಾಯ ಮಂಡಿಸುವುದು ಈ ಬರಹದ ಉದ್ದೇಶವಲ್ಲ. ಆದರೆ, ಕಾರ್ಟೂನ್ ಬರೆದವರ ಮತ್ತು ಅವನ್ನು ಓಕೆ ಮಾಡಿರುವ ಮನಸ್ಸುಗಳು ಎಂತಹವು ಎಂಬುದನ್ನು ಅರ್ಥ ಮಾಡಿಕೊಳ್ಳುವುದಷ್ಟೆ ಮುಖ್ಯ.

ಬೆಂಗಳೂರು ವಿವಿ ರಿಜಿಸ್ಟ್ರಾರ್ ಮೈಲಾರಪ್ಪ ಕೂಡಾ ಈ ಪ್ರಸ್ತುತ ಕಾರ್ಟೂನ್‌ನ ದನಿಯಲ್ಲಿಯೇ ಮಾತನಾಡಿದ್ದಾರೆ. ರಾತ್ರಿ ಹೊತ್ತು ಆ ವಿದ್ಯಾರ್ಥಿನಿ ಅದೇಕೆ ಓಡಾಡಬೇಕಿತ್ತು ಎಂದು ಮಾಧ್ಯಮದ ಮುಂದೆ ಕೇಳಿದ್ದಾರೆ. ಅಷ್ಟೇ ಅಲ್ಲ, ವಿವಿ ಕ್ಯಾಂಪಸ್‌ನಲ್ಲಿರುವ ಕೆಲ ವಿದ್ಯಾರ್ಥಿನಿಯರೂ ಇಂತಹದೇ ಪ್ರಶ್ನೆ ಎತ್ತಿದ್ದಾರೆ. ಅವರಿಗೆಲ್ಲಾ ಅತ್ಯಾಚಾರಕ್ಕಿಂತ, ಗೆಳೆಯನೊಂದಿಗೆ ರಾತ್ರಿ ಹೊರ ಹೋಗಿದ್ದೇ ದೊಡ್ಡ ಅಪರಾಧವಾಗಿ ಕಾಣುತ್ತಿದೆ. ಇವರೆಲ್ಲ ಇಂತಹ ಸಂಕುಚಿತ ಅಭಿಪ್ರಾಯ ಹೊಂದಲು ಈ ಹೊತ್ತಿನ ಮಾಧ್ಯಮಗಳೂ ಕಾರಣ.

(ಕಾರ್ಟೂನ್ ಕೃಪೆ: ಪ್ರಜಾವಾಣಿ)

11 thoughts on “ಹುಡುಗಿ ಅಪರಾತ್ರಿ ಅಲೆದಾಟಕ್ಕೆ ಹೋದರೆ ಏನಾಗುತ್ತೆ?

  1. urban dsouza

    cartoonist avanadde ondu abhipraaya vannu chitrada mulaka thilisiddu…it is a lighter side matter.yaakistu bhaavodreka aagteera…nimmanta maadyamadinda gondala praramba agodu …?patrkaa swatatntrya…cartoonist aseem trivedi thorisi kottiddu maretiraaa…?

    Reply
  2. tuLuva

    probably cartoonist has criticized inability of police in controlling such crime and their inability o provide justice in this particular case? may be that’s why the police standing there is grinning. i feel the cartoon is questioning the male chauvinistic mentality and is making sarcastic comment on our law and order system..

    Reply
  3. ಪ.ರಾಮಚಂದ್ರ, ದುಬೈ -ಸಂಯುಕ್ತ ಅರಬ್ ಸಂಸ್ಥಾನ

    ಭಾವುಕ ಮನಸ್ಸುಗಳ ಭಾವನೆಗಳ ಲಹರಿಗೆ ಸಾಮ್ಯವಿರುವ ಗಾಢವಾದ ಅಲೋಚನೆಗೆ ಲಾಸ್ಯವಾಡಿದಂತ ಅಂಕುಡೊಂಕಿನ ಗೆರೆಗಳ ‘ ಕಾರ್ಟೂನ್ ‘ !

    Reply
  4. ಎಚ್. ಸುಂದರ ರಾವ್

    ಮಹಮ್ಮದರು ಒಳ್ಳೆಯ ವ್ಯಂಗ್ಯಚಿತ್ರಕಾರರೇ. ಆದರೆ ಇಲ್ಲಿ ಅವರು ಆರಿಸಿಕೊಂಡ ವಸ್ತು ವ್ಯಂಗ್ಯಕ್ಕಾಗಲಿ, ಹಾಸ್ಯಕ್ಕಾಗಲಿ ತಕ್ಕುದಲ್ಲ. “ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ನಡೆಯುವಂಥ ವಾತಾವರಣ ವಿಶ್ವವಿದ್ಯಾನಿಲಯದ ಆವರಣದಲ್ಲಿ ಇದೆ, ಇದೆಂಥ ವಿಶ್ವವಿದ್ಯಾನಿಲಯ!” ಎಂಬುದನ್ನು ಹೇಳುವುದು ಅವರ ಉದ್ದೇಶವಾಗಿರಬಹುದು.
    ಮುಖ್ಯ ವಿಷಯ ಇರುವುದು ಹುಡುಗಿಯರು ರಾತ್ರೆ ಹೊರಗಡೆ ತಿರುಗಾಡಬಾರದೆ ಎನ್ನುವ ಪ್ರಶ್ನೆಯಲ್ಲಿ. ಕಾನೂನು, ತರ್ಕ, ತತ್ವ, ಸಿದ್ಧಾಂತ ಎಲ್ಲ ಸರಿಯೇ. ಆದರೆ ವಾಸ್ತವವನ್ನು ನಮ್ಮ ಹೆಣ್ಣುಮಕ್ಕಳು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಮೃಗಗಳಿಂದ ಅಪಾಯವಾಗಬಾರದೆಂದಿದ್ದರೆ ಬೆಟ್ಟದ ಮೇಲೆ ಮನೆ ಮಾಡಬಾರದು.

    Reply
  5. Mallikarjuna Hosapalya

    ಸುಂದರ ರಾವ್ ಅವರೇ, ಇದು ಮಹಮ್ಮದರು ಬರೆದ ವ್ಯಂಗ್ಯಚಿತ್ರವಲ್ಲ, ಅವರು ಪ್ರಜಾವಾಣಿ ಬಿಟ್ಟು ತುಂಬಾ ದಿನಗಳಾದವು. ಲೇಖನದ ಆರಂಭದಲ್ಲೇ ಹೇಳಿದಂತೆ ಇದನ್ನು ಬರೆದವರು ಪ್ರಕಾಶ್ ಶೆಟ್ಟಿಯವರು. ಉಳಿದಂತೆ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವೂ ಇದೆ.

    Reply
  6. ಎಚ್. ಸುಂದರ ರಾವ್

    ಕ್ಷಮಿಸಿ. ಯಾವುದೋ ಗಮನದಲ್ಲಿ ತಪ್ಪಾಯಿತು. ತಿದ್ದಿದ್ದಕ್ಕೆ ಥ್ಯಾಂಕ್ಸ್. ಪ್ರಕಾಶರೂ ಒಳ್ಳೆಯ ವ್ಯಂಗ್ಯಚಿತ್ರಕಾರರೇ.

    Reply
  7. K Aravind MItra

    No, this article is a gross misreading of the Cartoon. It is critiquing the university not the victim. The cartoon says that the university has miserably failed to protect a woman who is walking very much in the premises..Dear Pallavi, I respect your feminist sentiments, but I request you not to over read or rad into things. K Aravind MItra.

    Reply
  8. chandrashekara shetty cartoonist

    ಹುಡುಗಿಯರ ಅಪರಾತ್ರಿ ಅಲೆದಾಟದ ಪರಿಣಾಮ ಎಂತಹ ಕೆಟ್ಟ ಪಲಿತಾಂಶ ನೀಡುತ್ತೆ ಅನ್ನೋದೇ ವ್ಯಂಗ್ಯ ಚಿತ್ರಕಲಾವಿದ ಪ್ರಕಾಶ್ ಶೆಟ್ಟಿ ಯವರ ಈ ವ್ಯಂಗ್ಯ ಚಿತ್ರದ ಸಂದೇಶವೇ ಹೊರತು,ಹುಡುಗಿಯರ ಮೇಲೆ ಅತ್ಯಾಚಾರ ನಡೆಸುವುದು ಸರಿ,ಹುಡುಗಿಯರ ಅಪರಾತ್ರಿ ಅಲೆದಾಟ ತಪ್ಪು ಅಂತ ಅಲ್ಲ ,ನಾವು ಓದುಗರು ನಮ್ಮ ಸಂಸ್ಕೃತಿ,ನಮ್ಮ ಪೋಲಿಸ್ ವ್ಯವಸ್ತೆ ಮತ್ತು ನಮ್ಮ ದೇಶದ ಕಾನೂನನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲವನ್ನು ಅವಲೋಕಿಸ ಬೇಕಾಗುತ್ತೆ ,ಇಲ್ಲಿ ಅತ್ಯಾಚಾರ ನಡೆದೂ ಆಗಿದೆ ,ತನಿಖೆಯೂ ನಡೆಯುತ್ತೆ ನಂತರ ಅಪರಾದಿಗೆ ಶಿಕ್ಷೆಯು ಆಗಬಹುದು ಆದರೆ ಅದೆಲ್ಲಕಿಂತಲೂ ಮೊದಲು,ಅವರವರ ಜಾಗ್ರತೆ ಯಲ್ಲಿ ಅವರವರು ಇದ್ದಲ್ಲಿ ಇಂತಹ ಘಟನೆಗಳಿಗೆ ಅವಕಾಶವೇ ಇಲ್ಲ ಅಲ್ಲವೇ. ಇಲ್ಲಿ ವ್ಯಂಗ್ಯ ಚಿತ್ರಕಾರನ ಉದ್ದೇಶ ಕೂಡ ಅದೇ ,ನಾವು ಇಂತಹ ವಿಚಾರಗಳಲ್ಲಿ ಚರ್ಚಿಸುವಾಗ ಸುಮ್ಮನೆ ‘ಚರ್ಚೆ’ಗಾಗಿ ಚರ್ಚಿಸದೆ ,ಸಮಾಜಮುಖಿ ಯಾಗಿ ಚರ್ಚಿಸುವುದು ಒಳಿತು ಅನ್ನೋದು ನನ್ನ ಅಬಿಪ್ರಾಯ.

    Reply
  9. prasad raxidi

    ಪ್ರಕಾಶ್ ಶೆಟ್ಟಿ ಒಳ್ಳೆಯ ಕಲಾವಿದರೆಂಬರಬಗ್ಗೆ ಬಹುಷಃ ಯಾರದ್ದೂ ತಕರಾರು ಇರಲಾರದು,ಆದರೆ ಒಂದು ಪ್ರಮುಖ ಪತ್ರಿಕೆಯ ವ್ಯಂಗ್ಯಚಿತ್ರವನ್ನು ಎರಡನೇ ಸಂಪಾದಕೀಯವೆಂದೇ ಜನ ಗಮನಿಸುತ್ತಾರೆ. ಮೇಲೆ ಹೇಳಿದ ವ್ಯಂಗ್ಯಚಿತ್ರ ನಿಜವಾಗಿಯೂ ಒಳ್ಳೆಯಚಿತ್ರವಲ್ಲವೆಂದೇ ನನ್ನ ಅನಿಸಿಕೆ, ಹಾಗೇ ಆಚಿತ್ರ ಬಿಂಬಿಸುವ ಧೋರಣೆ ಕೂಡಾ (ಚಿತ್ರಕಾರರ ಧೋರಣೆ ಖಂಡಿತ ಅದಿರಲಾರದು ಎಂದುಕೊಂಡೇ ಚಿತ್ರವನ್ನು ನೋಡಿದ್ದೇನೆ)..ಆದರೆ ನಂತರ ಎಸ್.ಎಂ.ಕೃಷ್ಣರ ಬಗ್ಗೆ ಅವರು 28/10/12 ರಪ್ರಜಾವಾಣಿಯಲ್ಲಿ ರಚಿಸಿದ ಚಿತ್ರವನ್ನು ನೋಡಿದ ಮೇಲೆ ಅದರ ಬಗ್ಗೆ ಪ್ರತಿಭಟನೆಯನ್ನು ದಾಖಲಿಸುವುದು ಅಗತ್ಯವೆನಿಸಿತು..

    Reply
  10. Hayapada

    Neevu chappali hakade horage hogi mullu chuchidre mullina tappa??? neevu chatri tagondu hogade male bandu neevu oddeyadre aga adu maleya tappe…???

    Reply

Leave a Reply

Your email address will not be published. Required fields are marked *