ಟಿಪ್ಪು ವಿ.ವಿ. ವಿವಾದ – ತಲೆ ಮಾಸಿದವರ ತಳಮಳಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಕೇಂದ್ರ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಉನ್ನತ ಶಿಕ್ಷಣಕ್ಕಾಗಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ ನಂತರ ಕರ್ನಾಟಕದ ಹಿಂದೂ ಮತೀಯವಾದಿಗಳು ಕುಂಡೆಗೆ ಬೆಂಕಿ ಬಿದ್ದವರಂತೆ ಕಿರುಚುತ್ತಾ ರಾಜ್ಯದ ಉದ್ದಗಲಕ್ಕು ಓಡಾಡುತ್ತಿದ್ದಾರೆ. ಇವರಿಗೆ ಮಠಾಧೀಶರೆಂಬ ಮತಿಹೀನರು ಮತ್ತು ಲೇಖಕ ಮತ್ತು ಸಂಶೋಧಕರೆಂಬ ತಲೆಮಾಸಿದ ಗಿರಾಕಿಗಳು ಹಾಗೂ ಇವರ ಪಾಲಿಗೆ ಬೊಗಳುವ ನಾಯಿಯಂತಿರುವ ಹಲವು ಮಾಧ್ಯಮಗಳ ಅಂಕಣಕಾರರು ಬೆಂಬಲವಾಗಿ ನಿಂತಿದ್ದಾರೆ.

ಈ ದೇಶದಲ್ಲಿ ಎಡಪಂಥೀಯ ಚಿಂತನೆಯ ಶಾಲೆಗಳಿಂದ ಬಂದ ಇತಿಹಾಸಕಾರರು ಬರೆದ ಚರಿತ್ರೆಗಳು ನಕಲಿ; ನಾವು ಬರೆದದ್ದು ಮಾತ್ರ ಅಪ್ಪಟ ಇತಿಹಾಸ ಎಂದು ನಂಬಿರುವ, ಹಾಗೂ ಜನರನ್ನು ನಂಬಿಸಲು ಹೊರಟಿರುವ ಈ ಮೂರ್ಖರು ತಾವು ಹೇಳುತ್ತಿರುವ ಸಂಗತಿಗಳನ್ನು ನನ್ನ ನೆಲವಾದ ಮಂಡ್ಯ ಜಿಲ್ಲೆಯ ಯಾವುದಾದರೂ ಹಳ್ಳಿಗೆ ಹೋಗಿ ದನ ಆಥವಾ ಕುರಿ ಕಾಯುವ ಒಬ್ಬ ವೃದ್ಧ ಅನಕ್ಷರಸ್ತನ ಬಳಿ ಹೋಗಿ ಹೇಳಬೇಕು, ಆತ ನಗಬಾರದ ಜಾಗದಲ್ಲಿ ಗೊಳ್ ಎಂದು ನಕ್ಕು ಬಿಡುತ್ತಾನೆ. ಏಕೆಂದರೆ ನನ್ನ ಜನ ಅಕ್ಷರ ಲೋಕದಿಂದ ದೂರ ಉಳಿದಿದ್ದರೂ, Tippuಕಳೆದ ನಾಲ್ಕು ಶತಮಾನಗಳಿಂದ ನನ್ನ ನೆಲದ ನೆಲದ ಜನ ಟಿಪ್ಪು ಸುಲ್ತಾನ್ ಮತ್ತು ಆತನ ಶೌರ್ಯ ಮತ್ತು ಪರಧರ್ಮ ಸಹಿಷ್ಣುತೆ ಕುರಿತಂತೆ ಬಾಯಿಂದ ಬಾಯಿಗೆ ಹರಿದು ಬಂದಿರುವ ಮೌಖಿಕ ಕಾವ್ಯ ಪ್ರಕಾರಗಳಲ್ಲಿ ಒಂದಾಗಿರುವ ಲಾವಣಿಯಿಂದ ಟಿಪ್ಪು ಸುಲ್ತಾನ್ ಬಗ್ಗೆ ಅಪಾರ ಜ್ಞಾನ ಮತ್ತು ತಿಳುವಳಿಕೆ ಸಂಪಾದಿಸಿದ್ದಾರೆ. ಚರಿತ್ರೆ ಸುಳ್ಳಾದರೂ ವಾಸ್ತವಿಕ ಘಟನೆಗಳ ಆಧಾರದ ಮೇಲೆ ಸೃಷ್ಟಿಯಾಗಿರುವ ಗಾದೆಗಳು ಮತ್ತು ಲಾವಣಿಗಳು ಭೂತಕಾಲದ ಬಗ್ಗೆ ಸುಳ್ಳು ಹೇಳುವುದಿಲ್ಲ. ಇವೊತ್ತಿಗೂ ಮಂಡ್ಯ ಜಿಲ್ಲೆಯಲ್ಲಿ ಒಂದು ಜನಪ್ರಿಯವಾದ ಬೈಗುಳವಿದೆ. ಏನೂ ಕೈಲಾಗದ ಸೋಮಾರಿ ಗಂಡಸನ್ನು “ಗಂಜಾಮ್‌ಗೆ ಹೆಣ ಹೊರೋಕೆ ಹೋಗು” ಎಂದು ಬೈಯ್ಯುವ ವಾಡಿಕೆಯಿದೆ. ತನ್ನ ಜೀವಮಾನದ ಬಹುತೇಕ ಸಮಯವನ್ನು ಬ್ರಿಟಿಷರೊಂದಿಗೆ ಯುದ್ಧ ಮಾಡುವುದರಲ್ಲಿ ಕಳೆದ ಟಿಪ್ಪುವಿನ ಹೋರಾಟ ಮತ್ತು ಜೀವ ಕಳೆದುಕೊಂಡ ಸಾವಿರಾರು ಸೈನಿಕ ಕಥನನವನ್ನು ಪರೋಕ್ಷವಾಗಿ ಬಿಂಬಿಸುವ ಬೈಗುಳವಿದು. (ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಸಮೀಪ ಇರುವ ಪ್ರದೇಶದಲ್ಲಿ ಗಂಜಾಂ ಎಂಬ ಗ್ರಾಮವಿದೆ.)

ಟಿಪ್ಪು ಸುಲ್ತಾನ್ ಒಬ್ಬ ಕೋಮುವಾದಿಯಾಗಿದ್ದ ಎಂದು ಬಿಂಬಿಸುವ ಈ ಮಹಾಶಯರು ಒಮ್ಮೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ ಮತ್ತು ಮೇಲುಕೋಟೆಯ ಯೋಗನರಸಿಂಹ ದೇವಾಲಯಕ್ಕೆ ಹೋಗಿ ಟಿಪ್ಪು ಕೊಟ್ಟಿರುವ ಒಡವೆಗಳು ಯಾವುವು ಹಾಗೂ ಶೃಂಗೇರಿಯ ಶಾರದಾ ದೇವಿಗೆ ನೀಡಿರುವ ಕಾಣಿಕೆಗಳು ಏನು, ಈ ದಾನ ಪತ್ರಗಳು ಯಾವ ಭಾಷೆಯಲ್ಲಿವೆ ಎಂಬುದನ್ನು ನೋಡಿ ಬರಲಿ. ಇಷ್ಟೆಲ್ಲಾ ಸುಳ್ಳು ಹೇಳುವ ಇವರು ಟಿಪ್ಪು ಸುಲ್ತಾನ್ ಆಸ್ಥಾನದಲ್ಲಿ ಸಲಹೆಗಾರರಾಗಿದ್ದವರು ದಿವಾನ್ ಪೂರ್ಣಯ್ಯ, ದೆಹಲಿಯ ಮೊಗಲ್ ಸುಲ್ತಾನ ಆಲಂ ಶಾ ಆಸ್ಥಾನಕ್ಕೆ ಟಿಪ್ಪು ಸುಲ್ತಾನ್ ರಾಯಭಾರಿ ಆಗಿ ನೇಮಕವಾದದ್ದು ಮಾಧವರಾವ್, ವಕೀಲರಾಗಿ ಸೇವೆ ಸಲ್ಲಿಸಿದ್ದು ಸಜ್ಜನರಾವ್, ಇವೆರೆಲ್ಲಾ ಹಿಂದೂ ಜನಾಂಗದ ಬ್ರಾಹಣರಾಗಿದ್ದರು ಎಂದು ತಿಳಿಯದಷ್ಟು ಅಜ್ಞಾನಿಗಳೆ? ಈ ಸತ್ಯ ಕರ್ನಾಟಕದಲ್ಲಿ ಯಾವುದೇ ಮುಸ್ಲಿಂ ಗೋರಿ ಕಂಡೊಡನೆ ಕಿಟಾರನೆ ಕಿರಿಚಿಕೊಳ್ಳುವ ಚಿದಾನಂದಮೂರ್ತಿಗೆ, ಭಾರತದ ಇತಿಹಾಸವನ್ನೆಲ್ಲಾ ಅರೆದು ಕುಡಿದು ಅದನ್ನು ಆಧಾರವಾಗಿ ಇಟ್ಟುಕೊಂಡು ಕಾದಂಬರಿ ಹೊಸೆಯುವ ಎಸ್ .ಎಲ್. ಬೈರಪ್ಪನವರಿಗೆ ಮತ್ತು ಈ ಇಬ್ಬರೂ ಪುರುಷೋತ್ತಮರಿಗೆ ಉತ್ತರ ಕೊಡಿ ಎಂದು ಕೀರಲು ಧ್ವನಿಯಲ್ಲಿ ಕೂಗುತ್ತಿರುವ, ನಮ್ಮ ಪೇಜಾವರ ಸ್ವಾಮಿಗೆ ಏಕೆ ಅರ್ಥವಾಗುವುದಿಲ್ಲ?

ಪ್ರಿಯ ಓದುಗರೆ, ನಿಮ್ಮಲ್ಲಿ ಕೆಲವರಿಗಾದರೂ ಶ್ರೀರಂಗಪಟ್ಟಣದ ಪರಿಚಯವಿದೆ ಎಂದು ಭಾವಿಸಿದ್ದೇನೆ. ಮುಂದೆ ನೀವು ಬೇಟಿ ನೀಡಿದಾಗ ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕಾವೇರಿ ನದಿ ಶ್ರೀರಂಗಪಟ್ಟಣಕ್ಕೆ ಮೊದಲು ಎರಡು ಭಾಗವಾಗಿ ಹರಿದು ನಂತರ ಗಂಜಾಂ ಎಂಬ ಊರಿನ ಬಳಿ ಮತ್ತೇ ಸೇರುತ್ತದೆ. aerial_view_srirangapattanaಈ ಪ್ರದೇಶವನ್ನು ಸಂಗಮ ಎಂದು ಕರೆಯಲಾಗುತ್ತದೆ. ಒಂದು ರೀತಿಯಲ್ಲಿ ದ್ವೀಪದಂತಿರುವ ಶ್ರೀರಂಗಪಟ್ಟಣದ ಕೋಟೆಯ ಮುಖ್ಯಬಾಗಿಲು ಪೂರ್ವದಿಕ್ಕಿಗಿದೆ (ಈಗಿನ ಬಸ್ ನಿಲ್ದಾಣದ ಸಮೀಪ.) ಇನ್ನೊಂದು ಬಾಗಿಲು ದಕ್ಷಿಣ ಭಾಗಕ್ಕಿದ್ದು ಇದನ್ನು ಆನೆ ಬಾಗಿಲು ಎಂದು ಕರೆಯುತ್ತಾರೆ. ಸದಾ ಯುದ್ಧದಲ್ಲಿ ತೊಡಗಿರುತ್ತಿದ್ದ ಟಿಪ್ಪು, ಬ್ರಿಟೀಷರ ಅಂಜಿಕೆಯಿಂದ ಬಲಿಷ್ಟವಾದ ಕೋಟೆಯನ್ನು ಕಟ್ಟಿದ್ದ. ಈ ಎರಡು ಬಾಗಿಲು ಬಿಟ್ಟರೆ ಪಟ್ಟಣ ಪ್ರವೇಶಕ್ಕೆ ಬೇರೆ ಯಾವುದೇ ಅವಕಾಶವಿರಲಿಲ್ಲ. ಆದರೆ ಪ್ರತಿ ದಿನ ಶ್ರೀರಂಗನಾಥನ ದೇವಾಲಯಕ್ಕೆ ಮತ್ತು ದೇವಾಲಯದ ಕೂಗಳತೆಯಲ್ಲಿ ಉತ್ತರ ಭಾಗದ ಕೋಟೆಗೆ ಅಂಟಿಕೊಂಡಂತೆ ಇರುವ ಶ್ರೀರಾಮ ದೇವಸ್ಥಾನದ (ಟಿಪ್ಪು ಶವ ಸಿಕ್ಕ ಜಾಗದ ಬಳಿ ಇರುವ ದೇವಸ್ಥಾನ) ಪೂಜೆ ಪುನಸ್ಕಾರ ಮುಂತಾದ ಕಾರ್ಯಕ್ರಮಗಳಿಗೆ ಉತ್ತರ ಭಾಗದಲ್ಲಿ ಹರಿಯುವ ಕಾವೇರಿಯಿಂದ ನೀರು ತರಲು ಕೋಟೆಯಲ್ಲಿ ಎರಡು ವಿಶೇಷ ಬಾಗಿಲುಗಳನ್ನು ನಿರ್ಮಿಸಿದ್ದ. ಅವುಗಳು ಈಗಲೂ ಅಸ್ತಿತ್ವದಲ್ಲಿವೆ. ಅವನು ಹಿಂದೂ ವಿರೋಧಿಯಾಗಿದ್ದರೆ ಅತಿಕ್ರಮಣದ ಭಯದ ನಡುವೆಯೂ ಬಾಗಿಲು ತೆರೆಯಲು ಸಾಧ್ಯವಿತ್ತೆ? ಶತ್ರುಗಳು ನದಿಯನ್ನು ಈಜಿ ಕೋಟೆ ಪ್ರವೇಶಿಸುವ ಸಾಧ್ಯತೆಗಳಿರಲಿಲ್ಲವೆ? ಟಿಪ್ಪು ಸುಲ್ತಾನನ ಮೂಲ ಅರಮನೆ (ಕುಸಿದ ಹೋಗಿರುವ ಅವಶೇಷಗಳು) ಶ್ರೀರಂಗನಾಥನ ದೇವಸ್ಥಾನಕ್ಕೆ ಅಭಿಮುಖವಾಗಿದೆ. ಅವನು ಪಕ್ಕಾ ಮುಸ್ಲಿಂ ದೊರೆಯಾಗಿದ್ದರೇ ತನ್ನ ಅರಮನೆಯ ಮುಂದೆ ಶ್ರೀರಂಗನಾಥನ ಹಿಂದೂ ದೇಗುಲವಿರಲು ಸಾಧ್ಯವಿತ್ತೆ? ಇಂತಹ ಇತಿಹಾಸದ ಸತ್ಯಗಳನ್ನು ಏಕೆ ಮರೆ ಮಾಚುತ್ತಿದ್ದಾರೆ?

ಕನ್ನಡದ ದಿನಪತ್ರಿಕೆಯಲ್ಲಿ ಯಾವನೋ ಒಬ್ಬ ಆಸಾಮಿ ತನ್ನ ಹೆಸರಿನ ಮುಂದೆ “ಬ್ಲಾಗಿಗ, ಸಾಪ್ಟ್‌ವೇರ್ ತಜ್ಞ” ಎಂದು ವಿಶೇಷಣಗಳನ್ನು ಸೇರಿಸಿಕೊಂಡು ಅಂಕಣ ಬರೆಯುತ್ತಿದ್ದಾನೆ. ಅವನ ಇತಿಹಾಸ ಪ್ರಜ್ಞೆ ಮತ್ತು ಅವನು ಬರೆಯುತ್ತಿರುವ ವಿಷಯ ವೈಖರಿಗಳನ್ನು ಗಮನಿಸಿದರೆ, ಈತ ತನ್ನ ಹೆಸರಿನ ಮುಂದೆ “ಅರಬೆಂದ ಮಡಕೆ” ಎಂಬ ಅರ್ಹತೆಯನ್ನು ಸಹ ಸೇರಿಸಿಕೊಳ್ಳುವುದು ಒಳಿತು.

ಯಾಕೆಂದರೆ, ಟಿಪ್ಪು ಸುಲ್ತಾನ್ ಮತ್ತು ಅವನ ತಂದೆ ಹೈದರ್‌ ಆಲಿ ಬೆಂಗಳೂರು ಸಮೀಪದ ದೇವನಳ್ಳಿಯಲ್ಲಿ ಜನಿಸಿದ ಕನ್ನಡಿಗ ಮುಸ್ಲಿಂರು ಎಂಬ ಜ್ಞಾನವಿಲ್ಲದ ಈ ಅವಿವೇಕಿ, ಟಿಪ್ಪು ಆಳ್ವಿಕೆಯಲ್ಲಿ ಕರ್ನಾಟಕದಲ್ಲಿ ಪರ್ಷಿಯನ್ ಭಾಷೆ ಜಾರಿಗೆ ಬಂತು ಎಂದು ಬರೆಯುತ್ತಾನೆ. ನನ್ನೂರಾದ ಕೊಪ್ಪ ಗ್ರಾಮದಲ್ಲಿ “ಮದ್ದನಹಟ್ಟಿ ನಂಜೇಗೌಡರ ಕುಟುಂಬ” ಎಂಬ ನಮ್ಮ ಮನೆತನದಲ್ಲಿ ನನ್ನ ತಾತ, ಮುತ್ತಾತ ಎಲ್ಲರೂ ಆಗಿನ ಕಾಲದ ಮಠಗಳಲ್ಲಿ ಮರಳಿನ ಮೇಲೆ ಕನ್ನಡ ಅಕ್ಷರ ಕಲಿತು ಕುಮಾರವ್ಯಾಸನ ಮಹಾಭಾರತ ಮತ್ತು ರಾಮಾಯಣ ಕಾವ್ಯಗಳನ್ನು ಶಿವರಾತ್ರಿ ಮತ್ತು ಯುಗಾದಿ ಹಬ್ಬಗಳ ಸಮಯದಲ್ಲಿ ವಾಚನ ಮಾಡುತ್ತಿದ್ದರು. 1966 ರಲ್ಲಿ ಹತ್ತು ವರ್ಷದವನಿರುವಾಗ ನನ್ನ ಚಿಕ್ಕತಾತ ಪುಟ್ಟೀರೆಗೌಡ ನನಗೆ ಅವುಗಳನ್ನು ಕಂಠ ಪಾಠ ಮಾಡಿಸುತ್ತಿದ್ದ. ಟಿಪ್ಪು ಪರ್ಷಿಯನ್ ಭಾಷೆ ಜಾರಿಗೆ ತಂದಿದ್ದರೆ ನನ್ನ ತಾತ ಮತ್ತು ಅವನ ಅಪ್ಪ, ಅಜ್ಜ ಇವರೆಲ್ಲಾ ಪರ್ಷಿಯನ್ ಭಾಷೆ ಕಲಿಯಬೇಕಿತ್ತಲ್ಲವೆ? ಕನ್ನಡವನ್ನು ಏಕೆ ಕಲಿತರು? ಕರ್ನಾಟಕದಲ್ಲಿ ಅತ್ಯಧಿಕ ಕನ್ನಡ ಭಾಷೆಯನ್ನಾಡುವ ಜಿಲ್ಲೆ ಮಂಡ್ಯ ಜಿಲ್ಲೆ ( ಶೇಕಡ 97 ರಷ್ಟು.) ಮಂಡ್ಯ ಟಿಪ್ಪು ಆಳಿದ ನೆಲ. ಇವೊತ್ತಿಗೂ ಕಂದಾಯ ಇಲಾಖೆಯಲ್ಲಿರುವ ಅಮಲ್ದಾರ್, ಶಿರಸ್ತೆದಾರ್, ತಹಶಿಲ್ದಾರ್, ಖಾತೆ, ಪಹಣಿ, ತಲಾಟಿ, ಕಛೇರಿ, ಇಂತಹ ಶಬ್ಧಗಳು ಮೊಗಲರ ಆಳ್ವಿಕೆಯಿಂದಾಗಿ ಮತ್ತು ಹಿಂದಿ, ಉರ್ದು, ಮರಾಠಿ ಭಾಷೆಗಳ ಕೊಡುಕೊಳ್ಳುವಿಕೆಗಳಿಂದಾಗಿ ಜಾರಿಗೆ ಬಂದ ಶಬ್ದಗಳು. ಡಾ. ಹಂಪ ನಾಗರಾಜಯ್ಯನವರು ನಲವತ್ತೈದು ವರ್ಷಗಳ ಹಿಂದೆ ಪಿ.ಹೆಚ್.ಡಿ. ಸಂಶೋಧನೆಗಾಗಿ ಆರಿಸಿಕೊಂಡ ವಿಷಯ, “ದ್ರಾವಿಡ ಭಾಷಾ ವಿಜ್ಞಾನ”. ಈ ಸಂಶೋಧನಾ ಕೃತಿಯಲ್ಲಿ ಕನ್ನಡ ಭಾಷೆಗೆ ಭಾರತೀಯ ಇತರೆ ಭಾಷೆಗಳ ಜೊತೆ ಇರಬಹುದಾದ ಸಂಬಂಧ ಅದ್ಭುತವಾಗಿ ವಿವರಿಸಿದ್ದಾರೆ. ಈ ಅಂಕಣಕೋರನಿಗೆ ಭಾರತೀಯ ಭಾಷೆಗಳ ಬಗ್ಗೆ ಜ್ಞಾನವಿದ್ದರೆ ಟಿಪ್ಪುವಿನಿಂದಾಗಿ ಮುಸ್ಲಿಮರು ಉರ್ದು ಭಾಷೆಯನ್ನಾಡುತ್ತಿದ್ದಾರೆ ಎಂದು ಬರೆಯುತ್ತಿರಲಿಲ್ಲ. ಕರ್ನಾಟಕಕ್ಕೆ 16 ನೇ ಶತಮಾನದಲ್ಲಿ ಆದಿಲ್ ಶಾಹಿ ಆಡಳಿತದಲ್ಲಿ ದಖಃನಿ ಎಂದು ಕರೆಸಿಕೊಳ್ಳುತ್ತಿದ್ದ ಉರ್ದು ನೆರೆಯ ಆಂಧ್ರದ ಮೂಲಕ ಕನ್ನಡದ ನೆಲಕ್ಕೆ ಕಾಲಿಟ್ಟಿತ್ತು.

ಹಾಗೆಯೇ, ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನ ಹೈದರ್ ಆಲಿ ಮತ್ತು ಟಿಪ್ಪು ಇವರ ಕೊಡುಗೆ ಎಂಬುದನ್ನು ಹಿಂದೂ ಧರ್ಮದ ಗುತ್ತಿಗೆ ಹಿಡಿದ ಇವರೆಲ್ಲಾ ಏಕೆ ಮುಚ್ಚಿಡುತ್ತಿದ್ದಾರೆ?

ಭಾರತದ ಪ್ರಖ್ಯಾತ ಇತಿಹಾಸ ತಜ್ಞರಲ್ಲಿ ಕೆ.ಎನ್. ಪಣಿಕ್ಕರ್ ಮುಖ್ಯರು. ಇವರು ಜಗತ್ತಿನ 56 ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸಮಾಡಿದವರು. ಇವರು ಭಾರತದ ಇತಿಹಾಸ ಕುರಿತ ಬರೆದ ಲೇಖನಗಳು “ದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ” ಪತ್ರಿಕೆಯಲ್ಲಿ ಪ್ರಕಟವಾಗಿವೆ. panikkar-bookನಾಲ್ಕೈದು ವರ್ಷಗಳ ಹಿಂದೆ  ಆಕ್ಷ್‌ಪರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನ ಸಂಸ್ಥೆ ಈ ಲೇಖನಗಳ ಸಂಕಲನವನ್ನು “Colonialism, Culture, and Resistance” ಎಂಬ ಹೆಸರಿನಲ್ಲಿ ಪ್ರಕಟಿಸಿದೆ. ಈ ಕೃತಿಯಲ್ಲಿ ಟಿಪ್ಪು ಸುಲ್ತಾನ್ ಕುರಿತು ಅಯ್ಯಪ್ಪ ಪಣಿಕ್ಕರ್ ಹೀಗೆ ಬರೆದಿದ್ದಾರೆ:

“The Mysoreans, the Marathas, and the Sikhs, who had fairly large army at their command, fought against the British independently and were worsted. The others Like rulers of Rajputana, the Nizam, Nawab of Carnatic, and others preferred to function as subordinate allies of the British.
“The Indians had larger infantry and superior on the side, as demonstrated by Mysoreans and the Marathas, but were unable to match the Europeans in artillery which proved to be decisive. By the time the Indian rulers realized this, it was too late to acquire the necessary resources and skills, as in the case of Tipu Sultan, who initiated rather desperate attempts to modernize the state institutaion, including the army, by acquiring scientific knowledge and technological skills from the French.”

ಟಿಪ್ಪು ಸುಲ್ತಾನ್ ಆಧುನಿಕ ತಂತ್ರಜ್ಞಾನಕ್ಕೆ ಎಷ್ಟೊಂದು ಕಾಳಜಿ ವಹಿಸಿದ್ದ ಮತ್ತು ಭಾರತದಲ್ಲಿ ಬ್ರಿಟೀಷರ ವಿರುದ್ದ ಎಷ್ಟು ಕಠಿಣವಾಗಿದ್ದ ಎಂಬುದಕ್ಕೆ ಈ ಮೇಲಿನ ವಾಖ್ಯೆಗಳು ಸಾಕ್ಷಿಯಾಗಿವೆ.

ಭಾರತದ ಇತಿಹಾಸದಲ್ಲಿ ಫಿರಂಗಿಗಳನ್ನು ಆಧುನಿಕ ಪ್ರೆಂಚ್ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿದ ಮೊದಲ ದೊರೆ ಅವನು. ಚೀನಾದಿಂದ ರೇಷ್ಮೆ ಬೆಳೆಯನ್ನು ತಂದು ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಅವನದು. (ಈಗಲೂ ಚನ್ನಪಟ್ಟಣದಲ್ಲಿ ರೇಷ್ಮೆ ಇಲಾಖೆಯ ಆರು ಎಕರೆ ತೋಟಕ್ಕೆ ಟಿಪ್ಪುವಿನ ಹೆಸರಿಡಲಾಗಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತೋಟದ ಪಕ್ಕ ರೈಲ್ವೆ ಹಳಿ ಹಾದು ಹೋಗಿದೆ. ಆಸಕ್ತರು ಗಮನಿಸಬಹುದು.) ಸಕ್ಕರೆ ತಂತ್ರಜ್ಞಾನದ ಬಗ್ಗೆ ಅವನಿಗೆ ಆಸಕ್ತಿ ಇತ್ತು ಎಂಬುದಕ್ಕೆ ಮೈಸೂರಿನಿಂದ ಕೆ.ಆರ್.ಎಸ್. ಜಲಾಶಯಕ್ಕೆ ಹೋಗುವ ಮಾರ್ಗದಲ್ಲಿ ಪಾಲಹಳ್ಳಿ ಎಂಬ ಒಂದು ಊರಿದೆ. ಆ ಊರಿನ ಬತ್ತದ ಗದ್ದೆಗಳಲ್ಲಿ ಟಿಪ್ಪು ಸ್ಥಾಪಿಸಿದ್ದ ಸಕ್ಕರೆ ಕಾರ್ಖಾನೆಯ ಕಟ್ಟಡಗಳ ಅವಶೇಷಗಳಿವೆ.

ನಮ್ಮ ಕಣ್ಣೆದುರಿಗೆ ಇಷ್ಟೆಲ್ಲಾ ಸಾಕ್ಷಾಧಾರಗಳಿರುವಾಗ ಟಿಪ್ಪು ಸುಲ್ತಾನ್ ಒಬ್ಬ ರಾಷ್ಟ್ರ ದ್ರೋಹಿ, ಒಬ್ಬ ಮತಾಂಧ ಎಂದು ಬೊಬ್ಬೆ ಹಾಕುವವರನ್ನು ನಾವು ಏನೆಂದು ಕರೆಯಬೇಕು?

1799 ರ ಮೇ 4 ರಂದು ನಾಲ್ಕನೇ ಮೈಸೂರು ಯುದ್ದದಲ್ಲಿ ಟಿಪ್ಪು ಮಡಿದಾಗ ಅವನ ಅರಮನೆಯಲ್ಲಿದ್ದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡ ಬ್ರಿಟೀಷರು ಅವುಗಳನ್ನು ಈಸ್ಟ್ ಇಂಡಿಯಾ ಕಂಪನಿಯ ಕಚೇರಿಯಿದ್ದ ಕೊಲ್ಕತ್ತ ನಗರಕ್ಕೆ ಕೊಡೊಯ್ದರು. ಟಿಪ್ಪು ಯುದ್ದದಲ್ಲಿ ಮಡಿದಾಗ ಓರ್ವ ಬ್ರಿಟಿಷ್ ಅಧಿಕಾರಿ ಇನ್ನು ಮುಂದೆ ಭಾರತ ನಮ್ಮದಾಯಿತು ಎಂದು ಘೋಷಿಸಿದ ಅಧಿಕೃತ ದಾಖಲೆಗಳಿವೆ. ಬ್ರಿಟೀಷರಿಗೆ ಟಿಪ್ಪು ಸುಲ್ತಾನ್ ಬಗ್ಗೆ ಎಷ್ಟೊಂದು ಭಯವಿತ್ತು ಎಂಬುದಕ್ಕೆ ಈಗ ಕೊಲ್ಕತ್ತ ನಗರದಲ್ಲಿರುವ ವಿಕ್ಟೋರಿಯಾ ಸ್ಮಾರಕ ಭವನದಲ್ಲಿ ಸಾಕ್ಷಾಧಾರವಿದೆ. kolkata-victoria-memorial1799 ರಲ್ಲಿ ಟಿಪ್ಪು ಮಡಿದನಂತರ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಿಟೀಷರು 1802 ರಲ್ಲಿ ಸಿದ್ದಪಡಿಸಿರುವ 10 ಅಡಿ ಅಗಲ ಮತ್ತು 15 ಅಡಿ ಉದ್ದ ಮೇಜಿನ ಮೇಲೆ ಶ್ರೀರಂಗಪಟ್ಟಣದ ಪ್ರತಿಕೃತಿಯನ್ನು ನಾವು ಇಂದಿಗೂ ನೋಡಬಹುದು. ಇಷ್ಟೆಲ್ಲಾ ಸಾಹಸ ಮೆರೆದ ವ್ಯಕ್ತಿಯನ್ನು ಅನುಮಾನದಿಂದ ನೊಡುವ ಮನಸ್ಸುಗಳಿಗೆ, ಅಪಮಾನಿಸುತ್ತಿರುವ ವಿದ್ವಾಂಸರೆಂಬ ಆರೋಪ ಹೊತ್ತಿರುವವರಿಗೆ ನಾವೀಗ ಕೇಳಲೇ ಬೇಕಿದೆ, “ನೀವು ಹೊಟ್ಟೆಗೆ ಏನು ತಿನ್ನುತ್ತೀರಿ?” ಎಂದು.

35 thoughts on “ಟಿಪ್ಪು ವಿ.ವಿ. ವಿವಾದ – ತಲೆ ಮಾಸಿದವರ ತಳಮಳಗಳು

  1. Taj Gadinaadu

    ಮತಾಂಧತೆ,ಕೊಮುವಾದಗಳ ಕೊಳಚೆಯಲ್ಲೇ ನರಳಾಡುತ್ತಿರುವ ಕೆಲವರಿಗೆ ಇದೆಲ್ಲಾ ಅರ್ಥವಾಗಲಾರದು…ಅವರ ಬುದ್ಧಿ ಶಕ್ತಿ ಅಷ್ಟಕ್ಕೇ ಸೀಮಿತ…ನೋಡಿ,ಮುಂದೊಂದು ದಿನ ಯಾವುದೋ ಒಂದು ಕಟ್ಟಡಕ್ಕೋ ಮತ್ತೇನಕ್ಕೋ ಡಾ. ಅಬ್ದುಲ್ ಕಲಾಂರ ಹೆಸರು ಪ್ರಸ್ತಾವನೆಗೊಂಡರೆ ಈ ಮಂದಿಯ ಸಂತಾನ ಕಲಾಂ ರನ್ನು ಒಬ್ಬ ಅಪ್ಪಟ ಕೋಮುವಾದಿ ಎಂದು ಬಿಂಬಿಸುತ್ತದೆ…!

    Reply
  2. Naveen

    There is no solution to it. Obviously if the historian is following left ideology he will write all history with green paint, and if he is by RSS ideology he will paint it with Saffron. The truth is already buried along with history only.

    But there is too much negative perception regarding the minority institutes. We forget that they are also same institutes imparting knowledge by taking fees and donation like any other institute. Only difference is they will have Persian architecture on their building. recently I had chance to visit a minority institute oppsite bus stand gate in Dharwad as my seating has been arranged there for UGC NET exam. I see no difference in the campus, ambience etc other than just the architecture. So at the max Tippu university will become one among tens of universities in Karnataka and gradually we will have scandals/ uneligible becoming VC etc and also it will be more competitive cosidering the ugc grant and donation it attract from central govt time to time as it is “minority” university!!!

    Some people have that mindset. they think if they use cheap language that reflect thier “seriousness” because they dont have any other means to express their anger. The writer has so many issues in hand to write but still he want every opportunity to criticize BJP.

    Reply
  3. Rajesh

    This portal always supports either monorities or comrades. Hardly speaks about common mans problem or the reality.

    Reply
  4. srinivas

    The article is informative, but it loses its weight some what because of the indecent language used. The intention of the writer seems to be that of hating some individuals and a perticuler idealogy than putting forword his arguements. It this mindset which takes them away from the majority people. It is also pertinent to note that these persons keep quite when when the other group does something objectionable, which again makes the people to lose their credibility. When the intentions themselves are doubtful, all your intelligence is worthless.

    Reply
  5. anand prasad

    ಟಿಪ್ಪು ಸುಲ್ತಾನನ ಮೇಲೆ ಬಲಪಂಥೀಯರು ಆರೋಪಿಸುವ ಎಲ್ಲ ಆರೋಪಗಳೂ ಸುಳ್ಳಿನ ಕಂತೆ ಹಾಗೂ ನಂಬಲು ಅನರ್ಹವಾದವು. ಬಲಪಂಥೀಯರ ಟಿಪ್ಪು ಕುರಿತಾದ ಅಪಪ್ರಚಾರಗಳು ಬ್ರಿಟಿಷರು ಟಿಪ್ಪುವಿನ ಕುರಿತು ಬರೆದ ಇತಿಹಾಸವನ್ನು ಆಧರಿಸಿದವು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು ಕುರಿತು ಬ್ರಿಟಿಷರು ಅಪಪ್ರಚಾರದ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಇದನ್ನೇ ಪುರೊಹಿತಶಾಹಿ ಮನಸ್ಥಿತಿಯ ಬಲಪಂಥೀಯರು ಲಾಗಾಯ್ತಿನಿಂದ ಹೇಳುತ್ತಾ ಬಂದಿದ್ದಾರೆ.

    Reply
  6. vasanthn

    There is no indecency in the language that Dr. Jagadish Koppa has used in this article. We must understand the truth that Aligarh University is not a centre of terrorism, as some of the right wing fanatics including researcher like Dr. Chidananda Murthy. This is utterly non-sense. When the truth is in front of us, they should not spread such blatant lies. For protecting Mysore Tipu Sulthan sacrifices his two sons. Nowhere in the world history, was such kind of act documented. We should salute him for that.

    When all these facts are true, people should not misinterpret history. For those who are spreading hatred, what kind of a language we must use? We must reject them out rightly without any excuses. Dr. Koppa has done that. There is nothing bad in the article.

    Varthamana is doing excellent job in creating a scientific temper amongst its readers. Thanks for Ravi Krsihana Reddy for that.

    Reply
  7. prasad raxidi

    ಇಷ್ಟೆಲ್ಲ ವಾದ ವಿವಾದದ ನಡುವೆ ನನಗಿನ್ನೂ ಅರ್ಥವಾಗದ ಸಂಗತಿಯೆಂದರೆ ನಾಲ್ಕು ಮೈಲಿಗೊಂದರಂತೆ ಕನ್ನಡ ಶಾಲೆ ತೆರಯಲು ಸಹಾಯ ಮಾಡಿದ ಟಿಪ್ಪುವಿನ ಹೆಸರನ್ನು “ಅಲ್ಪಸಂಖ್ಯಾತರ” ಶಿಕ್ಷಣ ಸಂಸ್ಥೆಗೇ ಯಾಕಿಡಬೇಕು- ಯಾವುದೇ ಕನ್ನಡ ವಿ,ವಿ. ಗೆ ಯಾಕಿಡಬಾರದು…?

    Reply
  8. Vinay

    I would have liked to see the answers for questions raised by the intellectuals, instead all I see is personal attacks being made on the people who raised those questions. I thought Jagadish can do better than that. Sometimes, I feel people argue just to oppose SLB, CM’s views. Couldn’t you have used references just like they did?
    Instead, look at the references you have used.

    #1
    With the proverb regarding Ganjam & carrying dead bodies, does that mean people supported Tipu? It merely gives you a fact that there were lot of casualties from the wars Tipu was waging. As a fellow district man, I’ve also heard people calling cunning person as a Meer sadhaka (after Tipu’s minister Mir Sadiq). Even that doesn’t say if people praise or curse Mir Sadiq for helping British.

    #2
    You also bring in your great grand fathers in to the debate to tell that they learnt Kannada. Your great grand father must have born well after 1850s, clearly 50+ years after Tipu died. So what they studied cannot be linked to Tipu.
    Disregard Mandya district and consider Mysore region alone which is much closer to Srirangpattana. Why are there more Urdu speaking Muslims in that region than Kannada speaking Muslims?

    BTW, nobody denies Lalbag as Tipu/ Hyder Ali’s contribution but if Kannada was indeed their administrative language why didn’t they name it as “Kempu Thota”. Is it true that they had renamed Mysore, Srirangapattana etc., with Islamic names? If it is true, are you still saying Kannada was indeed an administrative language.

    #3
    Does valiantly fighting against British and the fact he was building modern technology to fight them make him secular? Was he fighting a communal force? Would the Mysore region be any better if he had ruled instead of British? Comparing with other Muslim ruled regions in the country, I would say, no.

    These are the questions that come to my mind as a layman. I’m assuming that you are well read than me in these matters. So, could you please answer these questions?

    BTW, if you want to make personal attacks on me too. I’m a software engineer and the last time I studied History or Kannada was in High School.

    Reply
  9. Naveen

    ಟಿಪ್ಪು ಕೋಮುವಾದಿ, ಕನ್ನಡ ವಿರೋಧಿ ಎಂಬುದಕ್ಕೆ ಬೇಕಾದಸ್ತು ಸಾಕ್ಷಿಗಳನ್ನು ಭೈರಪ್ಪ ಮತ್ತು ಮೂರ್ತಿಯವರು ಕೊಟ್ಟಿದ್ದರೂ, ಆತ ಶ್ರಿಂಗೇರಿ ದೇವಸ್ತಾನಕ್ಕೆ ದುಡ್ಡು ಕೊಟ್ಟಿದ್ದ, ಬ್ರಾಹ್ಮಣರನ್ನು ಮಂತ್ರಿ ಮಾಡಿದ್ದ ಎಂಬ ಹಳೆಯ ಸವೆದು ಹೋದ ಉದಾಹರಣೆಗಳನ್ನೇ ಕೊಡುತ್ತಿದ್ದರೆ. ಇದೆ ವಾದದ ಪ್ರಕಾರ, ಅದ್ವಾನಿಯವರ ಕಾರಿನ ಡ್ರೈವರ್ ಮುಸ್ಲಿಂ (ರಥಯಾತ್ರೆ ವೇಳೆ), ಹಾಗಾಗಿ, ಅದ್ವಾನಿ ಮುಸ್ಲಿಂ ವಿರೋಧಿ ಅಲ್ಲ. BJP ಪಕ್ಷದ ರಾಷ್ಟ್ರೀಯ ಉಪಾದ್ಯಕ್ಷರು ಮುಸ್ಲಿಂ ಆಗಿದ್ದರು, ಮತ್ತು ಅಧ್ಯಕ್ಷರು ದಲಿತರು ಆಗಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಮುಸ್ಲಿಂ ಮಂತ್ರಿ ಇದ್ದರು. ಹಾಗಾಗಿ, BJP ಮುಸ್ಲಿಂ ಮತ್ತು ದಲಿತ ವಿರೋಧಿ ಅಲ್ಲ. ನಿದ್ದೆ ಮಾಡುತ್ತಿದ್ದವರನ್ನು ಎಬ್ಬಿಸಬಹುದು , ಆದರೆ ನಿದ್ರಿಸುವರಂತೆ ನಾಟಕ ಮಾಡಿಸುವವರನ್ನು ಎಬ್ಬಿಸಲು ಆಗುವುದಿಲ್ಲ. One cannot convince someone who does not want to get convinced.

    Reply
    1. jagadishkoppa

      ಬೈರಪ್ಪ ಮತ್ತು ಚಿದಾನಂದ ಮೂರ್ತಿಯವರ ಶಂಖದಿಂದ ಬೀಳುವುದು ತೀರ್ಥ. ಉಳಿದವರ ಶಂಖದಿಂದ ಬೀಳುವುದು ನೀರು ಎಂಬ ವಿತಂಡವಾದವನ್ನು ಮೊದಲು ನಿಲ್ಲಿಸಿ. ಇವೆಲ್ಲಾ ಗರ್ಭಗುಡಿ ಸಂಸ್ಕೃತಿಯ ವಟು ಗಳು ಉದುರಿಸುವ ಮಂತ್ರಗಳು. ಅವರದು ಮಾತ್ರ ಸಾಕ್ಷಿ ನಮ್ಮದು ಸೆವೆದು ಹೋದ ಉದಾಹರಣೆಗಳು.ನವೀನ್ ಅವರೆ ಮನದಟ್ಟು ಮಾಡಿಕೊಳ್ಳಿ, ಈ ನೆಲದ ಶೂದ್ರ ಮತ್ತು ದಲಿತ ಪ್ರತಿಭೆಗಳು ಕಿವಿಗೆ ಹೂ ಮುಡಿಯುತ್ತಿದ್ದ ಕಾಲ ಮುಗಿದುಹೋಗಿದೆ. ಅವರಿಗೆ ಬ್ರಾಹ್ಮಣ್ಯವನ್ನು ಮತ್ತು ಪಾಂಡಿತ್ಯವನ್ನು ಕಲಿಸಿಕೊಡುವಷ್ಟು ವೈಚಾರಿಕತೆ ಹೊಂದಿದ್ದಾರೆ. ಯಾವನಿಗಾದರೂ ತಾಕತ್ತಿದ್ದರೇ ನನ್ನೆದುರು ಬಂದು ಟಿಪ್ಪು ಬಗ್ಗೆ ಚರ್ಚೆಮಾಡಲಿಕ್ಕೆ ಹೇಳಿ.

      Reply
  10. ಹಿತೈಷಿ

    ಯಾಕೆ ಜಗದೀಶ್ ಅವರೇ, ಕೇವಲ ನವೀನ್ ಅವರಿಗೆ ಮಾತ್ರ ಉತ್ತರಿಸಿದ್ದಿರಿ? ವಿನಯ್ ಕೂಡ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದರು…. ಅದಕ್ಕೆ ಉತ್ತರಿಸುವ ಗೋಜಿಗೆ ಹೋಗಲೇ ಇಲ್ಲ…
    ಟಿಪ್ಪುವಿನ ಬಗ್ಗೆ ಉತ್ತರಿಸುವದನ್ನು ಬಿಟ್ಟು, “ಗರ್ಭಗುಡಿ”, “ವಟು”, “ಬ್ರಾಹ್ಮಣ್ಯ”, ಮಂತ್ರ” ಮುಂತಾದವನ್ನು ಎಳೆದು ತರುತ್ತಿದ್ದಿರಿ? ಅದಕ್ಕೆ ಮತ್ತು ನೀವು ಮೊದಲು ಬರೆದ ವಿಷಯಕ್ಕೆ ಸಂಭಂದವೇ ಇಲ್ಲ…
    ವಿಷಯಾಂತರ ಬಿಟ್ಟು, ಇಲ್ಲೇ ಟಿಪ್ಪುವಿನ ಬಗ್ಗೆ ಚರ್ಚಿಸಬಹುದಲ್ಲ?

    ಟಿಪ್ಪುವಿನ ವಿಷಯದಲ್ಲಿ ನಾನೇನು ನಿಮ್ಮಷ್ಟು ತಿಳಿದವನಲ್ಲ… ಆದರು, ಧರ್ಮದ ಹೆಸರಿನಲ್ಲಿ ಈಗೀನ ಕಾಲದಲ್ಲಿ, ವಿವಿಯ ಅವಶ್ಯಕತೆ ಇದೆಯೇ? ಅದರ ಬಗ್ಗೆ ಕೂಡ ನಿಮ್ಮ ಅಭಿಪ್ರಾಯವನ್ನು ಒಮ್ಮೆ ತಿಳಿಸಿ…
    ಎಲ್ಲವನ್ನು “ಪ್ರಜಾ ಸಮರ” ದೃಷ್ಟಿಕೋನದಿಂದ ನೋಡಬೇಡಿ…. “ಪ್ರಜಾ ಪ್ರಭುತ್ವ” ದೃಷ್ಟಿಕೋನದಿಂದಲೂ ನೋಡುವದನ್ನು ಕಲಿಯಿರಿ…

    Reply
  11. tuLuva

    The legend of Kumble seme says Tipu Sultan wanted to demolish the temple like Adooru Mahalingeswara temple during his invasion of Coorg, Tulunadu, and Malabar. But after drinking water from the well of the temple, he changed his mind on attacking and demolishing the Garbhagudi and marched towards Malabar. But to satisfy his soldiers and Islamic scholars he made a cut with his sword symobolising the attack. The mark is still visible on the building that is built around the temple well

    source: http://kasargod.nic.in/index_main.htm, http://en.wikipedia.org/wiki/Madhur_Temple

    i have quoted only this example as i learnt about it through my forefathers, in oral form.

    Reply
  12. Kumar Buradikatti

    ಈ ಬಾರಿಯ ನಮ್ಮ “ದ ಸಂಡೆ ಇಂಡಿಯನ್” ಪತ್ರಿಕೆಯಲ್ಲಿ ಇದೇ ಕವರ್ ಸ್ಟೋರಿ: “ಹುಲಿಯ ಜಾಡು ಹಿಡಿದು…” ಅಂತ. ಕವರ್ ಸ್ಟೋರಿಯಲ್ಲಿ ನನ್ನ ವಾದ ನಾನು ಮಂಡಿಸಿದ್ದೇನೆ. ಚಿದಾನಂದಮೂರ್ತಿಯವರೂ ತಮ್ಮ ವಾದ ಮಂಡಿಸಲಿ ಅಂತ ಅವರ ಸಂದರ್ಶನವನ್ನೂ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಪತ್ರಿಕೆ ಹೊರಬರುತ್ತದೆ.

    ಆಧುನಿಕ ಭಾರತದ ಹೀರೋಗಳಲ್ಲಿ ನನ್ನ ಅಚ್ಚುಮೆಚ್ಚಿನ ಮೂರು ಜನರೆಂದರೆ ಟಿಪ್ಪೂ ಸುಲ್ತಾನ್, ಭಗತ್ ಸಿಂಗ್ ಮತ್ತು ಅಂಬೇಡ್ಕರ್. ಇನ್ನೂ ಇದ್ದಾರೆ. ಆದರೆ, ಇವರೇ ನನಗೆ ಅತ್ಯಂತ ಪ್ರಿಯರು.

    ಟಿಪ್ಪೂ ಮೇಲುಕೋಟೆ, ಶೃಂಗೇರಿಯ ದೇವಾಲಯಗಳಿಗೆ ದಾನದತ್ತಿ ಕೊಟ್ಟದ್ದು ತನ್ನ ಅನಿಷ್ಟ ನಿವಾರಣೆಗೆ ಹೊರತು ಶ್ರದ್ಧೆ ಭಕ್ತಿಯಿಂದಲ್ಲ ಅಂತ ಚಿಮೂ ಹೇಳುತ್ತಾರೆ. ಸುಮ್ಮನೆ ಚರ್ಚೆಗೆ ಮಾತಾಡುವುದಾದರೆ, ಅಪ್ಪಟ ಹಿಂದೂ ಆಗಿರುವ ಚೀಮೂಗೆ ಇಸ್ಲಾಂನಲ್ಲಿ ಭಕ್ತಿ, ಶ್ರದ್ಧೆ ಬರಬೇಕು ಎಂದು ನಿರೀಕ್ಷಿಸುವುದು ಸರಿಯೆ? ಟಿಪ್ಪೂ ಒಬ್ಬ ಮುಸ್ಲಿಂ ಆಗಿದ್ದ. ತನ್ನ ಧರ್ಮದ ಬಗ್ಗೆ ಅಪಾರ ಶ್ರದ್ಧೆ ಇತ್ತು. ಆತನಿಗೆ ಹಿಂದೂ ದೇವಾಲಯಗಳ ಬಗ್ಗೆ ಭಕ್ತಿ, ಶ್ರದ್ಧೆ ಬರಬೇಕು ಅಂತ ನಿರೀಕ್ಷಿಸುವುದು ಎಷ್ಟು ಸಮಂಜಸ? ಆದರೂ ಆತ ಹಿಂದೂ ದೇವಾಲಯಗಳಿಗೆ ಕಷ್ಟಕಾಲದಲ್ಲಿ ನೆರವು ಒದಗಿಸಿದ್ದನ್ನು ಗುರುತಿಸುವುದಕ್ಕೂ ಹೇಗೆ ಇವರೆಲ್ಲಾ ಹಿಂಜರಿಯುತ್ತಾರೆ?

    ಚಿಮೂ ಒಳ್ಳೆಯ ಸಂಶೋಧಕ ಅಂತ ಕೆಲವರು ಹೇಳ್ತಾರೆ. ಅವರ ಸಂಶೋಧನೆಗಳನ್ನೆಲ್ಲಾ ನಾನು ಓದಿಲ್ಲ. ಆದರೆ, ಇತ್ತೀಚಿನ ಅವರ “ಸಂಶೋಧನೆ”ಗಳನ್ನು ನೋಡಿದರೆ ಅವರೆಂಥ ಸಂಶೋದಕರು ಎಂಬುದು ಅರ್ಥ ಮಾಡಿಕೊಳ್ಳಬಲ್ಲೆ. ಈಗ್ಗೆ ಎರಡು-ಮೂರು ವರ್ಷಗಳ ಹಿಂದೆ ಚಿಮೂ ಒಂದು ಸಂಶೋಧನೆ ಮಾಡಿದ್ರು. ಬಾಬಾಬುಡನ್ ಗಿರಿ ಎಂದೂ ದತ್ತಪೀಠವಾಗಿಯೇ ಇತ್ತು ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ಅವರು ಕೊಟ್ಟ ಚಾರಿತ್ರಿಕ ಸಾಕ್ಷಾಧಾರ ಎಂದರೆ ಆ ಬೆಟ್ಟವನ್ನು ಹತ್ತುವ ದಾರಿಯುದ್ದಕ್ಕೂ ನೆಟ್ಟಿರುವ ಮೈಲಿಗಲ್ಲುಗಳ ಮೇಲೆ ದತ್ತಪೀಠ ಎಂದೇ ಬರೆದಿದ್ದು. ದುರಂತ ನೋಡಿ. ಮೊನ್ನೆ ಮೊನ್ನೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆ ಮೈಲಿಗಲ್ಲುಗಳ ಮೇಲೆ ದತ್ತಪೀಠ ಅಂತ ಬರೆದದ್ದು! ಅದನ್ನೇ ಪುರಾತತ್ವ ಆಧಾರಗಳಂತೆ ತೋರಿಸಲು ಹೋಗಿ ನಗೆಪಾಟಲಿಗೀಡಾಗಿದ್ದು ಚಿಮೂ ಎಂಬ ಸಂಶೋಧಕ!

    Reply
  13. jagadishkoppa

    ಹಿತೈಷಿ ಎಂಬುವರು ಕೇಳಿದ ಪ್ರಶ್ನೆಗೆ ನನ್ನ ುತ್ತರ, ನಾನು ಒಬ್ಬರನ್ನು ಬಿಟ್ಟು ಇನ್ನೊಬ್ಬರಿಗೆ ಅಂತಾ ಉತ್ತರಿಸಿಲ್ಲ. ಚಿದಾನಂದ ಮೂರ್ತಿ ಮತ್ತು ಬೈರಪ್ಪ ಬಿಟ್ಟ ಹೂಸಿನ ವಾಸನೆಯನ್ನು ಪರಿಮಳ ಅಂತ ಬಣ್ಣಿಸುವ ವಿತಂಡವಾದಿಗಳಿಗೆ ಉತ್ತರಿಸಿದ್ದೇನೆ. ಅದಕ್ಕೆ ಹೇಳಿದ್ದು ಮರೆಯಲ್ಲಿ ನಿಂತು ಮೆರವಣಿಗೆಗೆ ಕಲ್ಲು ಹೊಡೆಯುವುದು ಬಿಟ್ಟು ನೇರವಾಗಿ ನನ್ನ ಜೊತೆ ದಾಖಲೆಗಳೊಂದಿಗೆ ಮುಖಾ ಮುಖಿ ಚರ್ಚೆಗೆ ಬನ್ನಿ, ಅಂತಾ. ಟಿಪ್ಪುವನ್ನು ದಾರಿತಪ್ಪಿಸುವವರಲ್ಲಿ ಗರ್ಭಗುಡಿಯ ವಟುಗಳದೇ ಪ್ರಾಬಲ್ಯ. ಈವರೆಗೆ ಟಿಪ್ಪು ಮತಾಂಧ ಎಂದು ತುತ್ತೂರಿ ಊದಿದವರಲ್ಲಿ ಯಾವನಾದರೂ ಒಬ್ಬ ವ್ಯಕ್ತಿ ಟಿಪ್ಪು ಆಸ್ಥಾನದಲ್ಲಿ ಮೂವರು ಹಿಂದು ಬ್ರಾಹ್ಮಣರು ಇದ್ದರು ಎಂದು ತೋರಿಸದ ುದಾಹರಣೆಗಳಿದ್ದರೆ ಸಾಕ್ಷಿ ಸಮೇತ ನನಗೆ ಕೊಡಿ. ಬಾಲ್ಯದಲ್ಲಿ ನಾನು ಊರಿನಲ್ಲಿ ಕಬಡ್ಡಿ ಆಡುವಾಗ ಜಗಳವಾದರೆ, ಆಟಕ್ಕೂ ಸೈ. ಕುಸ್ತಿಗೂ ಸೈ ಎನ್ನುತ್ತಿದ್ದೆ. ಈಗಲೂ ಹೇಳುವುದು ಇಷ್ಟೇ, ” ವಾದಕ್ಕೂ ಸೈ ಕುಸ್ತಿಗೂ ಸೈ, ಆಯ್ಕೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ.

    Reply
  14. ಇನ್ನೊಬ್ಬ ಹಿತೈಷಿ

    ವಿನಯ್ ರವರ ಪ್ರಶ್ನೆಗಳು ಎಷ್ಟು ಬಾಲಿಶವಾಗಿದೆಯೆಂದರೆ ಅದನ್ನೋದುವಾಗಲೇ ನಗು ಬರುತ್ತೆ. ಅಷ್ಟೇ ಅಲ್ಲ ಅದಕ್ಕೆ ಉತ್ತರವನ್ನೂ ಬಯಸುವವರೂ ಇದ್ದಾರೆಯೇ?

    Reply
  15. Indian

    ಟಿಪ್ಪು ಎಂಥಹ ತಲೆಹಿಡುಕ ಅಂತ ತಿಳಿದುಕೊಳ್ಳಲು ಕೊಡಗಿಗೆ ಬನ್ನಿ … ಟಿಪ್ಪು ಮಾಡಿದ ಮತಾಂತರಕ್ಕೆ ಈಗಲೂ ಜೀವಂತ ಸಾಕ್ಷಿಗಳಿವೆ … ಕೊಡಗಿನ ಆಡು ಭಾಷೆ ಗಳನ್ನಾಡುವ , ಕೊಡಗಿನ ಮನೆತನದ ಹೆಸರು ಹೊಂದಿರುವ ಮುಸ್ಲಿಂ ಕುಟುಂಬಗಳಿವೆ ….
    ಅಷ್ಟಕ್ಕೂ ಟಿಪ್ಪು VV ನೇ ಯಾಕೆ ಬೇಕು ?? ಭಗತ್ ಸಿಂಗ್ , ಮದರ್ ತೆರೇಸಾ , ಅಬ್ದುಲ್ ಕಲಾಂ , ಸುಭಾಸ್ ಚಂದ್ರ ಭೋಸ್ …. ಇವರೆಲ್ಲ ಕಣ್ಣಿಗೆ ಕಾಣೋಲ್ವ ??

    Reply
  16. anand prasad

    ಟಿಪ್ಪು ಬಲವಂತದ ಮತಾಂತರ ಮಾಡಿದ್ದು ನಿಜವೇ ಆಗಿದ್ದರೆ ಮತಾಂತರಗೊಂಡವರು ಟಿಪ್ಪು ಮರಣಾನಂತರ ಮರಳಿ ಹಿಂದೂಧರ್ಮಕ್ಕೆ ಬರಬಹುದಾಗಿತ್ತು. ಟಿಪ್ಪುವಿನ ನಂತರ ಇಲ್ಲಿ ಮುಸ್ಲಿಂ ಆಳ್ವಿಕೆ ಇರಲೇ ಇಲ್ಲ. ಟಿಪ್ಪುವಿನ ಕಾಲದಲ್ಲಿ ಮತಾಂತರ ಆಗಿದ್ದರೆ ಅದು ಹಿಂದೂಧರ್ಮದ ಮೇಲುಕೀಳು ನೀತಿಯಿಂದ ಬೇಸತ್ತ ಜನ ಸಮಾನತೆ ಇರುವ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಿರಲೂಬಹುದು. ಇಲ್ಲದಿದ್ದರೆ ಟಿಪ್ಪುವಿನ ಮರಣಾನಂತರ ಮರಳಿ ಹಿಂದೂಧರ್ಮಕ್ಕೆ ಬರಲು ಮತಾಂತರಗೊಂಡವರಿಗೆ ಏನು ಅಡ್ಡಿ ಇತ್ತು ಎಂದು ಗೊತ್ತಾಗುವುದಿಲ್ಲ. ಟಿಪ್ಪುವಿನ ಹೆಸರಿನಲ್ಲಿ ವಿವಿ ಆದಾಕ್ಷಣ ಆಕಾಶವೇ ಕಳಚಿ ಬಿದ್ದಂತೆ ವರ್ತಿಸಬೇಕಾದ ಅಗತ್ಯ ಇದೆ ಎಂದು ಅನಿಸುವುದಿಲ್ಲ. ಟಿಪ್ಪು ವಿವಿ ಆದಾಕ್ಷಣ ಅಲ್ಪಸಂಖ್ಯಾತರ ವೋಟು ಕಾಂಗ್ರೆಸ್ಸಿಗೆ ಹೋಗುತ್ತದೆ ಎಂದು ಹೇಳಲು ಕೂಡ ಕಾರಣಗಳು ಇಲ್ಲ. ವಿವಿ ಆಗದೆ ಇದ್ದರೂ ಕಾಂಗ್ರೆಸ್ಸಿಗೆ ಬೀಳುವ ಅಲ್ಪಸಂಖ್ಯಾತ ಓಟುಗಳು ಬಿದ್ದೇ ಬೀಳುತ್ತವೆ ಏಕೆಂದರೆ ಅಲ್ಪಸಂಖ್ಯಾತರಿಗೆ ಬೇರೆ ಆಯ್ಕೆಗಳು ಇಲ್ಲ. ಬಿಜೆಪಿಯವರು ಅಲ್ಪಸಂಖ್ಯಾತರ ಮೇಲೆ ನಡೆಸಿರುವ, ನಡೆಸುತ್ತಿರುವ ದೌರ್ಜನ್ಯದ ಕಾರಣ ಅವರು ಅದಕ್ಕೆ ವೋಟು ಹಾಕುವ ಸಾಧ್ಯತೆ ಇಲ್ಲ.

    Reply
    1. Kumar Buradikatti

      ಟಿಪ್ಪೂ ಕಾಲದಲ್ಲಿ ಮತಾಂತರ ಆಗಲೇ ಇಲ್ಲ ಎಂದು ಹೇಳುವುದು ಇನ್ನೊಂದು ತುದಿಯ ಅತಿರೇಕದ ವಾದವಷ್ಟೇ ಆಗುತ್ತದೆಯೇ ಹೊರತು ಅಂದಿನ ಕಾಲಘಟ್ಟದ ವಸ್ತುನಿಷ್ಠ ಚಿತ್ರಣವಾಗುವುದಿಲ್ಲ. ಹೌದು, ಆ ಕಾಲದ ಎಲ್ಲಾ ರಾಜರೂ ತಮ್ಮ ತಮ್ಮ ಧರ್ಮದಲ್ಲಿ ಶ್ರದ್ಧೆ ಇದ್ದಂತೆ, ಚಿದಾನಂದಮೂರ್ತಿಗಳನ್ನೂ ಒಳಗೊಂಡಂತೆ ಇಂದಿನ ಎಲ್ಲಾ ಮಂದಿಗೂ ತಮ್ಮ ತಮ್ಮ ಧರ್ಮದಲ್ಲಿ ಶ್ರದ್ಧೆ ಇರುವಂತೆ ಟಿಪ್ಪೂಗೂ ಕೂಡ ಇಸ್ಲಾಂನಲ್ಲಿ ಅಪಾರ ಶ್ರದ್ಧೆ ಇತ್ತು. ಆತ ಇಸ್ಲಾಂ ಧರ್ಮದ ಪ್ರತಿಪಾದಕನಾಗಿದ್ದದ್ದೂ ನಿಜ. ಇಸ್ಲಾಂ ಧರ್ಮಕ್ಕೆ ಅನ್ಯ ಧರ್ಮೀಯರು ಮತಾಂತರಗೊಳ್ಳುವಂತೆ ಉತ್ತೇಜಿಸಿದ್ದೂ ನಿಜ. ಅಂತೆಯೇ ಒಂದು ಮಟ್ಟಿನ ಹಿಂದೂಗಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದೂ ನಿಜ. ಆದರೆ, ಅವು ಯಾವೂ ಬಲವಂತದ ಮತಾಂತರಗಳಾಗಿರಲಿಲ್ಲ. ಅವನ ಕಾಲದಲ್ಲಿ ದಲಿತರು, ಸಮಾಜದ ಇನ್ನಿತರ ದಮನಿತ ಶೂದ್ರ ತಳಸಮುದಾಯಗಳು ಹಿಂದೂ ಧರ್ಮದಲ್ಲಿನ ಉಸಿರು ಕಟ್ಟಿಸುವ ವಾತಾವರಣದಿಂದ ಹೊರಬರುವುದಕ್ಕೆ ಉತ್ಸುಕರಾಗಿದ್ದರು. ಟಿಪ್ಪೂವಿನ ಪ್ರೋತ್ಸಾಹ ಅವರು ಹಿಂದೂ ಧರ್ಮ ತೊರೆದು ಇಸ್ಲಾಂಗೆ ಸ್ವಪ್ರೇರಣೆಯಿಂದ ಮತಾಂತರಗೊಳ್ಳುವುದಕ್ಕೆ ಪ್ರಚೋದಿಸಿತಷ್ಟೆ. ಈ ಸ್ವಪ್ರೇರಿತ ಮತಾಂತರಗಳಲ್ಲದೇ ಅಲ್ಪ ಪ್ರಮಾಣದಲ್ಲಿ “ಒತ್ತಾಯದ ಮತಾಂತರ”ಗಳೂ ನಡೆದವು. ಭವಿಷ್ಯವಿಲ್ಲದೇ ನಿಕೃಷ್ಟ ಜೀವನ ಸಾಗಿಸುತ್ತಿದ್ದ ಖೈದಿಗಳು, ನಿರ್ಗತಿಕರು, ವೇಶ್ಯೆಯರು, ಭಿಕ್ಷುಕರು ಮುಂತಾದವರಿಗೆ ಉತ್ತಮ ಭವಿಷ್ಯದ ಭರವಸೆ ತೋರಿಸಿಯೂ ಮತಾಂತರ ಮಾಡಿಕೊಳ್ಳಲಾಯಿತು. ಹೀಗೆ ಮತಾಂತರಗೊಂಡವರು ಟಿಪ್ಪೂ ನೇತೃತ್ವದ ಮೈಸೂರು ರಾಜ್ಯದಲ್ಲಿ ಅನೇಕ ಉದ್ಯೋಗಗಳನ್ನು ಪಡೆದುಕೊಂಡು ಭವಿಷ್ಯವನ್ನು ರೂಪಿಸಿಕೊಂಡರು. ವಾಸ್ತವದಲ್ಲಿ ಮೈಸೂರು ಸೈನ್ಯದ ಚೇಲಾ ಬೆಟಾಲಿಯನ್ ಇಂತಹ ಮತಾಂತರಗೊಂಡ ವರ್ಗಗಳ ಜನರಿಂದಲೇ ನಿರ್ಮಾಣವಾದ ಸೈನಿಕ ತುಕಡಿಯಾಗಿತ್ತು. ವಿಶೇಷ ಎಂದರೆ ಇದು ಮೈಸೂರು ಸೈನ್ಯದ ಅತ್ಯುತ್ತಮವಾಗಿ ತರಬೇತುಗೊಂಡ ನಿಷ್ಠ ಮತ್ತು ಧೈರ್ಯಶಾಲಿ ಸೈನಿಕ ತುಕಡಿಯಾಗಿತ್ತು! “ಉತ್ತಮ ಬದುಕಿನ ಭರವಸೆಯ ಆಮೀಷವೊಡ್ಡಿ ನಡೆಸಲಾದ ಈ ಬಲವಂತದ ಮತಾಂತರವನ್ನು” ವಿರೋಧಿಸುವಾಗಲೂ, ಈ ನಿರ್ಗತಿಕ ಜನವರ್ಗಗಳಿಗೆ ಪರ್ಯಾಯ ಆಯ್ಕೆಯೇನಾದರೂ ಇತ್ತೆ ಎಂಬ ಕೋನದಿಂದಲೂ ನೋಡಬೇಕಾಗುತ್ತದೆ.

      ಇನ್ನೊಂದು ವಿಷಯವನ್ನೂ ಇಲ್ಲಿ ಗಮನಿಸಿ. ಮುಸ್ಲಿಂ ರಾಜರಾದ ಹೈದರಾಬಾದಿನ ನಿಜಾಮರು ಆಳಿದ ಪ್ರದೇಶಕ್ಕೂ, ಅದಕ್ಕೂ ಹಿಂದೆ ಮುಸ್ಲಿಂ ದೊರೆಗಳು ಆಳಿದ ಉತ್ತರ ಪ್ರದೇಶಕ್ಕೂ ಟಿಪ್ಪು ಮತ್ತು ಹೈದರ್ ಆಳಿದ ದಕ್ಷಿಣ ಕರ್ನಾಟಕಕ್ಕೂ ಹೋಲಿಸಿ ನೋಡಿ. ಉತ್ತರ ಪ್ರದೇಶದಗಳಲ್ಲಿ ಈಗಲೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದರೆ ದಕ್ಷಿಣ ಕರ್ನಾಟಕದಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿಲ್ಲ. ಅದಕ್ಕೆ ಪ್ರಧಾನ ಕಾರಣ ಹೈದರ್ ಮತ್ತು ಟಿಪ್ಪೂ ಅನ್ಯ ಧರ್ಮಿಯರನ್ನು ಬೃಹತ್ ಪ್ರಮಾಣದಲ್ಲಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡದಿರುವುದೇ ಆಗಿದೆ.

      ಟಿಪ್ಪೂ ಪರಧರ್ಮ ಸಹಿಷ್ಣು ಆಗಿದ್ದ ಎನ್ನುವುದಕ್ಕೆ ನಮ್ಮೆದುರು ಬೇಕಾದಷ್ಟು ನಿದರ್ಶನಗಳಿವೆ. ನೆನಪಿರಲಿ, ನಾವು ಯಾವ ಮರಾಠರನ್ನು ಹಿಂದೂಗಳು ಎಂದು ಕರೆಯುತ್ತೇವೆಯೋ ಅದೇ ಮರಾಠರು ಹಿಂದೂಗಳ ಪವಿತ್ರ ಸ್ಥಳವೆನಿಸಿದ ಶೃಂಗೇರಿಯ ಮೇಲೆ ದಾಳಿ ಮಾಡಿ ಶಾರದಾಪೀಠವನ್ನು ಧ್ವಂಸಗೊಳಿದರು. ಆದರೆ, ಮುಸ್ಲಿಂ ಆಗಿದ್ದ ಟಿಪ್ಪೂ ಶೃಂಗೇರಿ ರಕ್ಷಣೆಗೆ ವಿಫಲನಾಗಿದ್ದಕ್ಕೆ ಕ್ಷಮೆಯಾಚಿಸಿ ಶಾರದಾಪೀಠದ ಮರುಸ್ಥಾಪನೆಗೆ, ಅದರ ಜೀರ್ಣೋದ್ಧಾರಕ್ಕೆ ಅಪಾರ ನೆರವು ನೀಡಿದ ದಾಖಲೆಗಳು ಇಂದಿಗೂ ಶೃಂಗೇರಿ ಮಠದಲ್ಲಿವೆ. ಅಷ್ಟೇ ಏಕೆ, ನಂಜನಗೂಡಿನ ದೇವಾಲಯದಲ್ಲಿ ಪಚ್ಚೆಲಿಂಗ ಸ್ಥಾಪನೆ, ದೇವನಹಳ್ಳಿಯ ಕೋಟೆಯ ವೇಣುಗೋಪಾಲಸ್ವಾಮಿ, ತಮಿಳುನಾಡಿನ ನಾಮಕಲ್ ಕೋಟೆಯಲ್ಲಿರುವ ರಂಗನಾಥಸ್ವಾಮಿ ಮತ್ತು ನರಸಿಂಹಸ್ವಾಮಿ, ಬಾದಾಮಿಯ ವಾತಾಪಿ, ಬೆಂಗಳೂರು ಕೋಟೆಯಲ್ಲಿರುವ ಗಣೇಶನ ದೇವಸ್ಥಾನ, ಮೇಲುಕೋಟೆಯ ದೇವಸ್ಥಾನ ಮುಂತಾದವುಗಳಿಗೆ ಆತ ನೀಡಿದ ಅಪಾರ ಹಣಕಾಸಿನ ನೆರವವನ್ನು ಯಾರಾದರೂ ಮರೆಮಾಚಲಾದೀತೆ? ಅಷ್ಟೆಲ್ಲಾ ದೂರ ಹೋಗಬೇಡಿ. ಆತ ಮುಸ್ಲಿಂ ಮತಾಂಧನಾಗಿದ್ದರೆ, ಹಿಂದೂ ವಿರೋಧಿಯಾಗಿದ್ದರೆ ತನ್ನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ನೂರಾರು ವರ್ಷಗಳಿಂದ ತಲೆಯೆತ್ತಿ ನಿಂತಿದ್ದ ಶ್ರೀರಂಗನಾಥಸ್ವಾಮಿ ದೇವಸ್ಥಾನವನ್ನು ಯಾಕೆ ಕೆಡವಲಿಲ್ಲ? ಬದಲಿಗೆ ಅದಕ್ಕೆ ದಾನದತ್ತಿಗಳನ್ನು ಏಕೆ ಮಾಡಿದ? ಒಂದೆಡೆ ಮಸೀದಿಯಿಂದ ನಮಾಜು, ಇನ್ನೊಂದೆಡೆ ಶ್ರೀರಂಗನಾಥಸ್ವಾಮಿ ದೇವಸ್ಥಾನದಿಂದ ಘಂಟಾನಾದ ಕೇಳುತ್ತಲೇ ಪ್ರಶಾಂತಚಿತ್ತದಿಂದ ಶ್ರೀರಂಗಪಟ್ಟಣದಲ್ಲಿ ಟಿಪ್ಪೂ ನೆಲೆಸಿದ್ದಕ್ಕೆ ಬೇರೇನಾದರೂ ಕಾರಣಗಳಿದ್ದವೆ? ಬೆಂಗಳೂರಿನ ಕೋಟೆ ವೆಂಕಟರಮಣ ದೇವಾಸ್ಥಾನದ ಬಳಿಯಲ್ಲಿಯೇ ತನಗೊಂದು ಅರಮನೆಯನ್ನೇಕೆ ಕಟ್ಟಿಕೊಂಡ? ತನ್ನ ಕಾಲದಲ್ಲಿ ಚಾಲ್ತಿಯಲ್ಲಿದ್ದ ತ್ರಿಶೂಲ, ಲಕ್ಷ್ಮಿದೇವಿಯ ಕೆತ್ತನೆಗಳಿರುವ ನಾಣ್ಯಗಳನ್ನು ಹಿಂತೆಗೆದುಕೊಳ್ಳಲಿಲ್ಲ?

      ಟಿಪ್ಪೂ ಹಿಂದೂ ದೇವಾಲಯಗಳಿಗೆ ದಾನದತ್ತಿ ಕೊಟ್ಟಿದ್ದು ತನ್ನ ಅನಿಷ್ಟ ನಿವಾರಣೆಗೇ ಹೊರತು ಭಕ್ತಿಯಿಂದಲ್ಲ ಎಂದು ಚಿದಾನಂದಮೂರ್ತಿಯವರು ವಾದಿಸುತ್ತಾರೆ! ಶೃಂಗೇರಿ ಮಠಕ್ಕೆ ಟಿಪ್ಪು ಬರೆದ ಪತ್ರದಲ್ಲಿ ಆತನ ಶ್ರದ್ಧೆ ವ್ಯಕ್ತವಾಗಿರುವುದನ್ನು ಒಪ್ಪಿಕೊಳ್ಳುತ್ತಲೇ ಅದು ತೋರಿಕೆಗೆ ಮಾತ್ರ ಎಂದು ಜರಿಯುತ್ತಾರೆ! ಸುಮ್ಮನೆ ಚರ್ಚೆಗಾಗಿ ಮಾತಾಡುವುದಾದರೆ, ಕಟ್ಟಾ ಹಿಂದೂ ಧರ್ಮಿಯರಾಗಿರುವ ಚಿದಾನಂದಮೂರ್ತಿಯವರಿಗೆ ಇಸ್ಲಾಂ ಧರ್ಮದಲ್ಲಿ ಶ್ರದ್ಧೆ ಇರಬೇಕು, ಅಲ್ಹಾನಲ್ಲಿ ಭಕ್ತಿ ಬರಬೇಕು ಎಂದು ನಿರೀಕ್ಷಿಸುವುದು ಎಷ್ಟು ಅಸಮಂಜಸವೋ ಹಾಗೆಯೇ ಕಟ್ಟಾ ಮುಸ್ಲಿಂ ಧರ್ಮಿಯನಾಗಿದ್ದ ಟಿಪ್ಪೂಗೆ ಹಿಂದೂ ಧರ್ಮದಲ್ಲಿ ಶ್ರದ್ಧೆ, ಶಾರದಾಪೀಠ, ಮೇಲುಕೋಟೆ ಬಗ್ಗೆ ಭಕ್ತಿ ಇರಬೇಕಿತ್ತು ಎಂದು ನಿರೀಕ್ಷಿಸುವುದೂ ಅಷ್ಟೇ ಅಸಮಂಜಸವಾಗುತ್ತದೆಯಲ್ಲವೆ? ಕಷ್ಟ ಕಾಲದಲ್ಲಿ ಆ ದೇವಸ್ಥಾನಗಳ ನೆರವಿಗೆ ನಿಂತ ಆತನ ಪರಧರ್ಮ ಸಹಿಷ್ಣು ಭಾವನೆಯನ್ನು ಅರಿಯಲು ಇಷ್ಟವಿಲ್ಲದವರಿಗೆ ಇಂತಹ ಮೊಂಡುವಾದಗಳು ಹುಟ್ಟಿಕೊಳ್ಳುತ್ತವೆಯಷ್ಟೆ.

      Reply
  17. naveen

    ಆಯ್ತುರೀ ಟಿಪ್ಪು ವಿ ವಿ ಬರಲಿ. ಜೊತೆಗೆ ದಂಡಿಯಾಗಿ ಕೇಂದ್ರ ಸರ್ಕಾರದ UGC ಫಂಡ್ ನ್ನೂ ತೆಗೆದುಕೊಂಡು ಬರಲಿ. ಹ್ಯಾಗೂ ಇದು ಮೈನೋರಿಟಿ ವಿವಿ. ಫಂಡ್ ಗೇನೂ ಕೊರತೆ ಇರಲ್ಲ. ಅಷ್ಟರಲ್ಲಿ ಇಲ್ಲಿ ಕಿತ್ತಾಡೋವ್ರೆಲ್ಲ ಇಂಟರ್ನೆಟ್ ಬಂದ್ ಮಾಡಿ ಸ್ವಲ್ಪ ಪುಸ್ತಕ ಓದಿ ನೆಟ್ ಎಕ್ಷಾಮ್ ಕ್ಲಿಯರ್ ಮಾಡ್ಕೊಳ್ಳಿ. ಕೇಂದ್ರ ಸರ್ಕಾರದ ugc ಕಮಿಷನ್ ಫಂಡ್ ಬರತ್ತೆ. ದಂಡಿಯಾಗೆ ಬರತ್ತೆ. ಎಲ್ರೂ ಸೇರಿ ಸಂ ಶೋಧನೆ ಮಾಡೋಣ. ಟಿಪ್ಪು ಯಾರು ಅಂತ ಶ್ರೀರಂಗಪಟ್ಟಣದ ಕಲ್ಲು ಮಣ್ಣು ಎಲ್ಲ ಕೇಳೋಣ. ಉತ್ತರ ಸಿಕ್ಕಿತೋ ಇಲ್ಲೋ ಬೇರೆ ಪ್ರಶ್ನೆ. Stifund ಸಿಕ್ರೆ ಸಾಕು. ಫ್ರೆಂಚ್ ಗಡ್ಡ ಬಿಟ್ಟವರು ನಮ್ಮ HOD ಆಗಿರ್ತಾರೆ. ಅವರಿಗೊಂದಿಷ್ಟು ಮಾಸ್ಕ ಹೊಡೆದು ಒಂದೆರಡು ಸೆಮಿನಾರ್ಗೆ ಹೆಲ್ಪ್ ಮಾಡಿದ್ರೆ ಇನ್ನೇನು ಬೇಕು??
    ಇದು ಬಿಟ್ಟು ಬೇರೆ ಏನಾದ್ರು ನಿರೀಕ್ಷೆ ಇದೆಯಾ? ಈ ಉದ್ದೇಶಿತ ವಿವಿ ಇಂದ??

    Reply
  18. vasanthn

    ರೀ ನವೀನ್ ರವರೇ,
    ಸಕಾ೵ರಿ ವಿಶ್ವ ವಿದ್ಯಾಲಯಗಳಲ್ಲಿ ಒಂದಷ್ಟು ಸಾಮಾಜಿಕ ನ್ಯಾಯ ಎಂಬುದು ಇರುತ್ತದೆ. ಅದರೆ ಇದೇ ಬಿಜೆಪಿ ಸಕಾ೵ರ 14 ಖಾಸಗಿ ವಿಶ್ವ ವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡಿದಾಗ ನಿಮ್ಮ ಧ್ವನಿ ಎಲ್ಲಿ ಹೋಗಿತ್ತು. ಅಲೈಯನ್ಸ್ ವಿಶ್ವ ವಿದ್ಯಾಲಯದಲ್ಲಿ ಎಎಂಬಿಯ ಕೋಸ್೵ನ ಫೀ 12 ಲಕ್ಷ. ಒಮ್ಮೆ ಯೋಚಿಸಿ.
    ಇವತ್ತು ನಾನು ಹಾಸನದಿಂದ ಬಸ್ಸಿನಲ್ಲಿ ಬರುವಾಗ ಹಾಸನದಲ್ಲಿ ರಸ್ತೆ ಗಳಲ್ಲಿ ರಾಜಾಜಿಸಯತ್ತಿದ್ದ ಆರ್ ಎಸ್ ಎಸ್ ಬ್ಯಾನರ್ ಗಳನ್ನು ನೋಡಿದೆ ಒಂದು ಸ್ಲೋಗನ್ ” ಭಾರತದ ಹಿಂದೂಗಳ ಸಂತತಿಗೆ ಬಾಬರ್ ಸಂತತಿಗಲ್ಲ” ಎಂದಿತ್ತು. ಇದು ಎನ್ನನ್ನು ಸೂಚಿಸುತ್ತದೆ. ಏಕೆ ಮುಸ್ಲಿಂರ ಮೇಲೆ ಈ ಮಟ್ಟದ ದ್ವೇಷ?
    ಸ್ವಲ್ಪ ಯೋಚಿಸಿ….

    Reply
  19. rajesh

    ಮಾನ್ಯ ಇಂಡಿಯನ್ ಅವರೇ, ಟಿಪ್ಪೂ ತಲೆಹಿಡುಕ ಖಂಡಿತ ಆಗಿರಲಿಲ್ಲ. ಹಾಗೇ ನಮ್ಮ ದೇಶದ ಇತಿಹಾಸದಲ್ಲಿ ತಲೆಹಿಡಿಯುವ ಕೆಲಸ ಮಾಡಿದ್ದರೆ ಅದು ನಿಮ್ಮ ಪೂರ್ವಜರಾದಂತಹ ಗೋಲ್ವಾಲ್ಕರ್, ಹೆಡಗೆವಾರ್ ಮುಂತಾದವರು. ನಮ್ಮ ಮಾತೃಬೂಮಿ ಭಾರತಮಾತೆಯ ಮೇಲಿನ ದಾಸ್ಯದ ನೊಗವನ್ನು ಸಂಪೂರ್ಣ ಕಳಚಿಹಾಕುವ ಪಣತೊಟ್ಟು ಅದಕ್ಕಾಗಿ ತನ್ನ ಪ್ರಾಣವನ್ನೇ ನೀಡಿದ ಟಿಪ್ಪೂ ಎಲ್ಲಿ ಬ್ರಿಟಿಷರಿರುವಷ್ಟೂ ದಿನ ಒಂದೇ ಒಂದು ದಿನ ಅವರ ವಿರಿದ್ಧ ಸೊಲ್ಲೆತ್ತದೆ ಅದುಮಿಕೊಂಡಿದ್ದ ನರಸತ್ತ ಜನರೆಲ್ಲಿ? ಕೊಡಗಿನಲ್ಲಿ, ಮಲಬಾರ್ ನಲ್ಲಿ ಟಿಪ್ಪೂ ಬಗ್ಗುಬಡಿಯಲು ಯತ್ನಿಸಿದ್ದು ಜನಗಳ ರಕ್ತಹೀರುತ್ತಿದ್ದ ಪಾಳೇಗಾರ ವರ್ಗವನ್ನು. ಮತ್ತು ದುಡಿಯದೆಯೇ ಬೊಜ್ಜುಬೆಳೆಸಿಕೊಳ್ಳುತ್ತಿದ್ದ ವರ್ಗವನ್ನು.
    ಕೇರಳದ ನಾಯರ್‌ಗಳಿಗೆ, ಮಂಗಳೂರಿನ ಕ್ರಿಶ್ಚಿಯನ್ನರಿಗೆ ಮತ್ತು ಮಡಿಕೇರಿಯ ಕೊಡವರಿಗೆ ಟಿಪ್ಪೂ ಕ್ರೂರಿಯಾಗಿ ಕಂಡುಬಂದಿದ್ದರೆ, ಆತನು ಮಾಪಿಳ್ಳೆ ಮುಸ್ಲಿಮರನ್ನಾಗಲೀ ಕಡಪ ಮತ್ತು ಕರ್ನೂಲುಗಳ ಮುಸ್ಲಿಂ ನವಾಬರನ್ನೇನೂ ಸುಮ್ಮನೆ ಬಿಟ್ಟಿರಲಿಲ್ಲ. ಟಿಪ್ಪೂ ಮರಾಠರಿಗಿಂತ ಹೆಚ್ಚು ಕಿಡಿಕಾರುತ್ತಿದ್ದುದು ಹೈದರಾಬಾದಿನ ನಿಜಾಮನ ಮೇಲೆ.
    ಪ್ರಸಿದ್ದ ಚರಿತ್ರಕಾರ ಬಿ.ಎ.ಸಾಲ್ತರ್ ಭಾರತೀಯ ಇತಿಹಾಸ ಮಹಾಸಮ್ಮೇಳನದಲ್ಲಿ ‘ಹಿಂದೂ ಧರ್ಮದ ರಕ್ಷಕನಾಗಿ ಟಿಪ್ಪೂ ಸುಲ್ತಾನ’ ಎಂಬ ಶೀರ್ಷಿಕೆಯಡಿ ಸುದೀರ್ಘ ಪ್ರಬಂಧವೊಂದನ್ನು ಬರೆದಿದ್ದಾರೆ. ಮತ್ತೊಬ್ಬ ಚಿಂತಕ ಎ. ಸುಬ್ಬರಾಯ ಚೆಟ್ಟಿಯವರು “ಹಿಂದೂ ಮಠಗಳಿಗೆ ಮತ್ತು ಹಿಂದೂಗಳಿಗೆ ಟಿಪ್ಪೂ ನೀಡಿದ ಕೊಡುಗೆಗಳ” ಒಂದು ಪಟ್ಟಿಯನ್ನೇ ಮಾಡಿದ್ದಾರೆ. ಮೈಸೂರ್ ಗೆಝೆಟಿಯರ್‌ನ ಸಂಪಾದಕರಾದ ಪ್ರಸಿದ್ದ ಇತಿಹಾಸಕಾರ ಡಾ.ಪಂಡಾ ಅವರಿಗೆ ಟಿಪ್ಪೂನಿಂದ ಪ್ರತಿವರ್ಷವೂ ದೇಣಿಗೆ ಪಡೆಯುತ್ತಿದ್ದ ೧೫೬ ದೇವಸ್ಥಾನಗಳ ಪಟ್ಟಿಯನ್ನು ನೀಡಿದ್ದಾರಲ್ಲದೆ ಶೃಂಗೇರಿಯ ಮಠಾಧೀಶ ಶಂಕರಾರ್ಯರಿಗೆ ಟಿಪ್ಪೂ ಬರೆದಿದ್ದ ೩೦ ಪತ್ರಗಳ ಪ್ರತಿಗಳನ್ನೂ ನೀಡಿದ್ದಾರೆ. ಶೃಂಗೇರಿಯ ಶಾರದಾಮಠದ ಮೂರ್ತಿಯನ್ನು ಪುನಃಸ್ಥಾಪಿಸಲು ಟಿಪ್ಪೂ ದೇಣೀಗೆ ನೀಡಿದ್ದ. ಶ್ರೀರಂಗಪಟ್ಟಣದ ದೇವಸ್ಥಾನವು ಟಿಪ್ಪೂ ಸುಲ್ತಾನನ ಅರಮನೆಗೆ ಕೂಗಳತೆಯ ದೂರದಲ್ಲಿದೆ. ಅಲ್ಲಿ ದೇಗುಲದ ಗಂಟಾನಾದ ಮತ್ತು ಮಸೀದಿಯ ಪ್ರಾರ್ಥನೆಗಳೆರಡನ್ನೂ ಸಮಾನಗೌರವದಿಂದ ಟಿಪ್ಪೂ ಕೇಳಿಸಿಕೊಳ್ಳುತ್ತಿದ್ದ. ನಂಜನಗೂಡಿನ ಲಕ್ಷ್ಮೀಕಾಂತ ದೇವಸ್ಥಾನ ಮತ್ತು ಕಾಳೀ ದೇವಸ್ಥಾನಕ್ಕೆ, ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ ದೇವಸ್ಥಾನ್ಕಕ್ಕೆ, ಹಾಗೂ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ಮತ್ತು ನರಸಿಂಹ ಹಾಗೂ ಗಂಗಾಧರೇಶ್ವರ ದೇವಾಲಯಗಳಿಗೆ ಟಿಪ್ಪೂ ದೇಣಿಗೆಗಳನ್ನು ನಿಯಮಿತವಾಗಿ ನೀಡುತ್ತಿದ್ದ.
    ಇದರೊಂದಿಗೆ ಟಿಪ್ಪೂನ ಆಡಳಿತಾಂಗದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಹಿಂದೂ ಅಧಿಕಾರಿಗಳೇ. ಕಂದಾಯ ಮಂತ್ರಿಯಾಗಿ ಪೂರ್ಣಯ್ಯ, ಹಣಕಾಸು ಮಂತ್ರಿಯಾಗಿ ದಿವಾನ್ ಕೃಷ್ಣರಾವ್, ಬಂದರು ಮತ್ತು ಆರಕ್ಷಕ ಇಲಾಖೆಯ ಉಸ್ತುವಾರಿ ಮಂತ್ರಿಯಾಗಿ ಶಾಮರಾವ್ ಇದ್ದರಲ್ಲದೆ ರಂಗ ಐಯಂಗಾರ್, ನರಸಿಂಗ ಐಯಂಗಾರ್‌ರಂತವರು ಉನ್ನತ ಹುದ್ದೆಗಳಲ್ಲಿದ್ದರು. ಮದರಾಸಿನಲ್ಲಿ ಟಿಪ್ಪೂ ಸರ್ಕಾರದ ರಾಯಭಾರಿಯಾಗಿದ್ದವರು ಶ್ರೀನಿವಾಸ ರಾವ್. ಪುಣೆಯಲ್ಲಿ ಅಪ್ಪಾಜಿ ರಾಮ ಮತ್ತು ದೆಹಲಿಯಲ್ಲಿ ಮೂಲಚಂದ್. ಟಿಪ್ಪೂನ ಆಪ್ತಸಹಾಯಕನಾಗಿದ್ದುದು ಸುಬ್ಬಾರಾವ್. ಅವರ ನಂಬುಗಸ್ತರಾಗಿದ್ದುದು ನಾಯಕರಾವ್ ಮತ್ತು ನಾಯಕ ಸಂಗನ. ನಾರಾಣಯ್ಯ ಎಂಬುವವರು ಟಿಪ್ಪೂನ ಮುನ್ಷಿಯಾಗಿದ್ದರು. ಕೊಡಗಿನಲ್ಲಿ ನಾಗಪ್ಪಯ್ಯರನ್ನು ಫೌಜ್‌ದಾರ್ ಆಗಿ ನೇಮಿಸಿದ್ದರು. ಟಿಪ್ಪೂ ಸೇನೆಯ ಒಂದು ದಳದ ದಳಪತಿಯಾಗಿ ಹರಿಸಿಂಗ್ ಎಂಬುವವರಿದ್ದರು. ಹಾಗೆಯೇ ಟಿಪ್ಪೂ ಸೇನೆಯ ೩೦೦೦ ಕುದುರೆಗಳ ಅಶ್ವದಳದ ದಳಪತಿಯಾಗಿದ್ದುದು ಶಿವಾಜಿ ಎಂಬುವವರು.. ಟಿಪ್ಪೂನ ನಾಣ್ಯಗಳ ಮೇಲೆ ಹಿಂದೂ ರಾಜಶಾಹಿಯ ಪ್ರತೀಕವಾದ ಆನೆಯ ಚಿತ್ರವನ್ನು ಠಂಕಿಸಲಾಗುತ್ತಿತ್ತು. ರಾಜಗೃಹಗಳ ಒಂದು ವಿಭಾಗವನ್ನು ಬ್ರಾಹ್ಮಣರಿಗೆಂದೇ ಮೀಸಲಿರಿಸಿದ್ದ. ಸಿರಿಯಾದ ಕ್ಯಾಥೊಲಿಕ್ ಧರ್ಮಾನುಯಾಯಿಗಳಾಗಿದ್ದ ಅರ್ಮೇನಿಯನ್ನರನ್ನು ದಕ್ಷಿಣ ಕನ್ನಡದಲ್ಲಿ ಬಂದು ನೆಲೆಯೂರಲು ಪ್ರೋತ್ಸಾಹ ನೀಡಿದ್ದ. ಕಾಂಜೀವರಂನ ದೇವಸ್ಥಾನದ ನಿರ್ಮಾಣಕಾರ್ಯ ಪೂರೈಸಲು ೧೦,೦೦೦ ಹನ್‌ಗಳ ದೇಣೀಗೆ ನೀಡಿದ್ದಲ್ಲದೆ ಅದರ ನಿರ್ಮಾಣ ಪೂರ್ಣಗೊಂಡೊಡನೆ ಅದರ ತೇರಿನಲ್ಲಿಯೂ ಪಾಲ್ಗೊಂಡಿದ್ದ. ಮೇಲುಕೋಟೆ ದೇವಸ್ಥಾನದ ಎರಡು ಪಂಗಡಗಳಲ್ಲಿ ತೀವ್ರ ವ್ಯಾಜ್ಯ ಎದುರಾದಾಗ ಎರಡೂ ಪಂಗಡಗಳೂ ಒಪ್ಪುವಂತಹ ಒಂದು ಪರಿಹಾರವನ್ನು ನೀಡಿದ್ದ ಟಿಪ್ಪೂ ಎದುರಾಗಿದ್ದ ವ್ಯಾಜ್ಯವನ್ನು ಪರಿಹರಿಸಿದ್ದನು. ದಿಂಡಿಗಲ್‌ನಲ್ಲಿ ನಡೆಸಿದ್ದ ಒಂದು ಸೇನಾದಾಳಿಯಲ್ಲಿ ತನ್ನ ಸೈನಿಕರಿಗೆ ದಕ್ಷಿಣ ದಿಕ್ಕಿನಿಂದ ಗುಂಡುಹಾರಿಸದಿರಲು ಆದೇಶಿಸಿದ್ದನು. ಅದಕ್ಕೆ ಕಾರಣ ಅಲ್ಲಿ ಜಾರಾನ ದೇವಸ್ಥಾನವಿದ್ದುದೇ ಆಗಿತ್ತು.

    ಈ ನೆಲದಲ್ಲಿನ ನಿಜವಾದ ತಲೆಹಿಡುಕರಿಗೆ ದೇಶಪ್ರೇಮಿ ಮತ್ತು ಪರಮತ ಸಹಿಷ್ಣು ಟಿಪ್ಪೂ ಅರ್ಥವಾಗುವುದು ಸಾಧ್ಯವಿಲ್ಲ.
    ಅಂದಹಾಗೆ ತಮ್ಮ ವಾದವನ್ನು ಮಂಡಿಸಲು ಮಾನ್ಯ ಚಿಮೂ ಅವರು ಬಳಸುತ್ತಿರುವುದು ಯಾವನೋ ಮೊಗಲ್ ರಾಜನೊಬ್ಬ ಬರೆದ ಗ್ರಂಥವನ್ನು ಮತ್ತು ಟಿಪ್ಪೂ ಖಡ್ಗದ ಮೇಲಿನ ಬರಹದ ತಿರುಚಲ್ಪಟ್ಟ ಅನುವಾದವನ್ನು. ನಾಚಿಕೆಯಾಗಬೇಕು ಇಂಥವರಿಗೆ!

    ಮಂಜುನಾಥ್

    Reply
  20. Naveen

    To Vasanth

    First thing I am not BJP supporter.

    Alliance University is because of the policy of NAAC accredition constituted by UGC, Ministry of HRD of central govt and AICTE which all are under central govt. They decided to give university status to all institutes which were accredited with 5star or A+.

    So what I do here? One thing is certain. all these pvt universities are here to loot and earn money. None of them will neither start any course in humanities or un glamorous subjects like history, languages etc nor they contribute anything to society.

    I agree Sangh has hate towards minority communities.

    Neither i supported Sangh and its family nor opposed proposed Tippu university. I just said possible scenario after setting up of this university.

    Do you think it will be ideal center of learning with all the lectures/professors/researchers dedicated their life for society than craving for UGC fund and how to loot it??

    Naveen

    Reply
  21. Harshakugwe

    ಪ್ರಿಯ ಜಗದೀಶ್ ಕೊಪ್ಪ ಸರ್, ಟಿಪ್ಪು ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಮಾತನಾಡುವವರಿಗೆ ಸರಿಯಾಗಿ ಉತ್ತರಿಸಿದ್ದೀರಿ.
    ಯಾರೆಲ್ಲಾ ಟಿಪ್ಪೂ ಬಗ್ಗೆ ಹಗುರವಾಗಿ ಮಾತನಾಡುತ್ತಾರೋ ಅವರಿಗೆ ಅರ್ಥವಾಗಬೇಕಿರುವ ಒಂದು ವಿಷಯವೆನೆಂದರೆ ಒಂದೊಮ್ಮೆ ಈ ನಾಡಿನಲ್ಲಿ ಟಿಪ್ಪೂ ಎಂಬ ಒಬ್ಬ ವ್ಯಕ್ತಿ ಹುಟ್ಟಿರದಿದ್ದರೆ ನಮ್ಮ ಕನ್ನಡ ನಾಡು ಅದರಲ್ಲೂ ಮೈಸೂರು ಮಲೆನಾಡು ಸೀಮೆಗಳು ಇಂದಿರುವಂತಿರಲಿಲ್ಲ. ಬದಲಿಗೆ ಬಿಹಾರ ಜಾರ್ಖಂಡ್ ಗಳಂತೆ ಅಥವಾ ಹೈದರಾಬಾದಿನ ನಿಜಾಮನಾಳಿದ ಬೀದರ್ ಗುಲ್ಬರ್ಗಗಳಂತೆ ಇರುತ್ತಿತ್ತು ಎನ್ನುವುದನ್ನು ಅರಿಯಬೇಕಿದೆ. ಯಾಕೆಂದರೆ ಟಿಪ್ಪೂಗಿಂತ ಮುಂಚೆ ಮೈಸೂರಿನ ಚಿಕ್ಕದೇವರಾಜ ಒಡೆಯರ್ ಅವರು ಆರಂಭಿಸಿದ್ದ ಪಾಳೇಗಾರ ವಿರೋಧಿ ಆಂಧೋಲನವನ್ನು ಯಶಸ್ವಿಯಾಗಿ ಈ ಭಾಗಗಳಲ್ಲಿ ಪೂರೈಸಿದ್ದು ಟಿಪ್ಪೂ. ಟಿಪ್ಪೂ ಕೇವಲ 30-40 ವರ್ಷಗಳ ಕಾಲಾವಧಿಯಲ್ಲಿ ಮಾಡಿದ ಒಟ್ಟೂಕೆಲಸಗಳನ್ನು ಗಮನಿಸಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ… ಅವನಂತಹ ವೀರಯೋಧ, ಮತ್ತು ತನ್ನ ಕಾಲಕ್ಕಿಂತಲೂ ಮುಂದಿದ್ದ ಒಬ್ಬ ಆಡಳಿತಗಾರ ನಮ್ಮ ದೇಶದ ಚರಿತ್ರೆಯಲ್ಲೇ ಮತ್ತೊಬ್ಬನಿಲ್ಲ.
    ವಾಸ್ತವದಲ್ಲಿ ಟಿಪ್ಪೂ ಕುರಿತು ಅನೇಕ ವಸಾಹತುಶಾಹಿಶಾಹಿ ಇತಿಹಾಸಕಾರರು ಇನ್ನಿಲ್ಲದ ಅಪಪ್ರಚಾರಗಳನ್ನು ನಡೆಸಿ ಆತನನ್ನು ಮತಾಂಧ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ. ಅಂತಹ ಪ್ರಚಾರಕ್ಕೆ ಅನೇಕ ‘ಸಂಶೋಧಕರೂ’ ಈಡಾಗಿದ್ದಾರೆ. ಇದರ ಹೊರತಾಗಿಯೂ ಎರಡು ಇತಿಹಾಸಕಾರ ಉಲ್ಲೇಖವನ್ನು ಮತ್ತು ಟಿಪ್ಪೂ ಸುಲ್ತಾನನ ವಿರುದ್ಧ ಯುದ್ಧಮಾಡಿದ ಬ್ರಿಟಿಷ್ ಅಧಿಕಾರಿಯ ಮಾತುಗಳನ್ನು ಉಲ್ಲೇಖಿಸಲು ಇಲ್ಲಿ ಇಚ್ಛಿಸುತ್ತೆನೆ.

    ಜೇಮ್ಸ್ ಮಿಲ್ ಎಂಬ ಚರಿತ್ರಕಾರ-
    “ಆತ (ಟಿಪ್ಪೂ) ತನ್ನ ಕಾಲಕ್ಕಿಂತಲೂ ಪ್ರಬುದ್ಧವಾದ ಸಮಾಜವ್ಯವಸ್ಥೆಯಲ್ಲಿನ ಆಡಳಿತಗಾರರ ದೃಷ್ಟಿಗೂ ನಿಲುಕದ ಸಂವೇದನೆಯನ್ನು ಹೊಂದಿದ್ದ. ತಮ್ಮ ಕೈಗಳಿಂದ ಶ್ರಮದಲ್ಲಿ ತೊಡಗುವವರ ಸಮೃದ್ಧಿಯನ್ನೂ ಆಮೂಲಕ ರಾಜ್ಯದ ಸಮೃದ್ಧಿಯನ್ನೂ ಸಾಕಾರಗೊಳಿಸುವುದು ಅದೇ ಅಗಿದೆ. ಅದೇ ರೀತಿಯಲ್ಲಿ ಆತನ ಸೀಮೆಯಲ್ಲಿ ಅತಿಹೆಚ್ಚು ಕೃಷಿಚಟುವಟಿಕೆಯಿದ್ದುದಲ್ಲದೆ ಭಾರತದಲ್ಲಿ ಅತಿಹೆಚ್ಚು ಸಮೃದ್ಧಿಯೆಡೆಗೆ ಸಾಗುತ್ತಿದ್ದ ಜನತೆ ಆತನ ನಾಡಿನಲ್ಲಿದ್ದರು. ಅದೇ ಕಾಲಾವಧಿಯಲ್ಲಿ ಬ್ರಿಟಿಷರ ಅಡಿಯಲ್ಲಿದ್ದ ಕರ್ನಾಟಿಕ್ ಮತ್ತು ಔಧ್ ಪ್ರಾಂತ್ಯಗಳ ಜನರ ಜೀವನ ಮರುಭೂಮಿಸದೃಸವಾಗಿ ಅವರು ಈ ಭೂಮಿಯ ಮೇಲಿ ಅತ್ಯಂತ ನತದೃಷ್ಟ ಪ್ರಜೆಗಳಾಗಿದ್ದರು ”

    ಮೂರನೇ ಮೈಸೂರುಯುದ್ಧದಲ್ಲಿ ಟಿಪ್ಪೂ ವಿರುದ್ಧ ಬಾಂಬೆ ಸೇನಾತುಕಡಿಗೆ ನೇತೃತ್ವವಹಿಸಿದ್ದ ಎಡ್‌ವರ್ಡ್ ಮೂರ್‌ – “ವ್ಯಕ್ತಿಯೊಬ್ಬ ಪರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಅಲ್ಲಿ ಉತ್ತಮ ಕೃಷಿಚಟುವಟಿಕೆಯಿರುವುದನ್ನು, ಅಲ್ಲಿನ ಜನವಸತಿಗಳಲ್ಲಿ ಸದಾಚಟುವಟಿಕೆಯಲ್ಲಿರುವ ಜನರನ್ನು, ಹೊಸದಾಗಿ ನಿರ್ಮಾಣಗೊಂಡ ನಗರಗಳನ್ನು, ವಾಣಿಜ್ಯ ವಿಸ್ತರಣೆಯನ್ನು, ಪಟ್ಟಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು, ಮತ್ತು ಪ್ರತಿಯೊಂದೂ ಸುಭಿಕ್ಷೆಯೆಡೆ ಸಾಗುತ್ತಿರುವುದನ್ನು ಗಮನಸಿದರೆ ಆ ಅಲ್ಲಿನ ಜನಮಾನಸಕ್ಕೆ ಅನುಗುಣವಾಗಿಯೇ ಆಡಳಿತ ನಡೆಯುತ್ತಿದೆ ಎಂಬ ಸಹಜ ತೀರ್ಮಾನಕ್ಕೆ ಆ ಪ್ರಯಾಣಿಕ ವ್ಯಕ್ತಿ ಬರುತ್ತಾನೆ. ಇದುವೇ ಟಿಪ್ಪೂ ಸೀಮೆಯ ಚಿತ್ರಣ ಹಾಗೂ ಅದರ ಆಡಳಿತದ ಕುರಿತು ನಮ್ಮ ತೀರ್ಮಾನ”

    ಪ್ರಾಕ್ಸಿ ಹೀಗೆ ಫರ್ನಾಂಡಿಸ್ ಬರೆಯುತ್ತಾನೆ, “ಟಿಪ್ಪೂ ಪರಿಕಲ್ಪನೆಯ ರಾಷ್ಟ್ರಪ್ರಭುತ್ವ, ಪ್ರಜೆಗಳೆಡೆ ಸರ್ಕಾರದ ಹೊಣೆಗಾರಿಕೆ, ಊಳಿಗಮಾನ್ಯ ಮಧ್ಯವರ್ತಿ ವರ್ಗದ ನಿರ್ಮೂಲನೆ, ಒಂದು ಪ್ರಮಾಣಬದ್ಧ ಕಾನೂನು ವ್ಯವಸ್ಥೆಯನ್ನೂ ರೂಪಿಸುವಲ್ಲಿ ಆತನ ಪ್ರಯತ್ನ ಹಾಗೂ ಆತನ ರೂಪಿಸಿದ ನಾಗರಿಕ ಸೇವೆಗಳು, ಎಲ್ಲವೂ ಆಧುನಿಕ ಪರಿಕಲ್ಪನೆಗಳೇ ಆಗಿದ್ದವು. ಅವು ಆತನ ಕಾಲವನ್ನೂ ಮೀರಿದ ಚಿಂತನೆಗಳಾಗಿದ್ದರಿಂದ ಆತನ ಸುತ್ತಲಿದ್ದ ಅನೇಕರಿಗೆ ಅವನ್ನು ಅರಗಿಸಿಕೊಳ್ಳಲಾಗಲೀ, ಒಪ್ಪ್ಪಿಕೊಳ್ಳಲಾಗಲೀ ಆಗಿರಲಿಲ್ಲ”

    ದೇಶಪ್ರೇಮ ಎಂದರೆ ತಾವು ಹೇಳಿದ್ದು, ದೇಶಪ್ರೇಮಿಗಳು ತಾವುಮಾತ್ರ ಎಂದು ಉಳಿದವರನ್ನು ಸಂಶಯಪಡುತ್ತಲೇ ಕಾಲಕಳೆಯುವವರಿಗೆ ಸತ್ಯ ರುಚಿಸುವುದಿಲ್ಲ.

    ಟಿಪ್ಪೂ ಕಾಲದಲ್ಲಿ ಮತಾಂತರವಾಗಿದ್ದು ವಾಸ್ತವ. ಅದಕ್ಕೆ ಕಾರಣ ಟಿಪ್ಪೂ ಅನುಸರಿಸಿದ ಸೂಫಿ ಇಸ್ಲಾಂ ಧರ್ಮ ಎಷ್ಟೋ ಕೆಳಜಾತಿಗಳಿಗೆ ಕರ್ಮಠ ಹಿಂದೂ ಧರ್ಮಕ್ಕಿಂತ ಸಾವಿರ ಪಾಲು ಉತ್ತಮವಾಗಿ ಕಂಡುಬಂದದ್ದು. ಹಾಗಾಗಿ ಚಿಮೂ ಹೇಳುವಂತೆ ಲಕ್ಷಾಂತರ ಅಲ್ಲದಿದ್ದರೂ ಸಾವಿರಾರು ಜನರು ಸ್ವ ಇಚ್ಛೆಯಿಂದ ಮತಾಂತರಗೊಂಡಿದ್ದರು. ಇಲ್ಲಿ ತಮ್ಮನ್ನು ಕಾಲಲ್ಲಿ ಮೆಟ್ಟುವ ಮೆಟ್ಟಿಗಿಂತ ಕಡೆಯಾಗಿ ನೋಡುವ ಧರ್ಮಕ್ಕಿಂತ ಟಿಪ್ಪೂನಂತಹ ವೀರ ದೇಶಪ್ರೇಮಿ ಪಾಲಿಸಿದ ಧರ್ಮ (ಗಮನಿಸಿ ಅದು ಕರ್ಮಠ ಇಸ್ಲಾಂ ಆಗಿರಲಿಲ್ಲ) ಉತ್ತಮ,ವಾಗಿ ಕಂಡುಬಂದಿದ್ದರೆ ಅದು ಟಿಪ್ಪೂನ ತಪ್ಪೇ, ಹಿಂದೂ ಧರ್ಮದ ತಪ್ಪೇ?
    ಅಷ್ಟಕ್ಕೂ ಟಿಪ್ಪೂ ಕರ್ಮಠ ಮುಸ್ಲಿಂ ಮತಾಂಧನಾಗಿದ್ದರೆ ಅವನು ಮಲಬಾರ್ ನಲ್ಲಿ, ಕೊಡಗಿನಲ್ಲಿ ಒಂದು ನೀತಿ ಮತ್ತೆ ಶೃಂಗೇರಿಯಲ್ಲಿ, ಶ್ರೀರಂಗಪಟ್ಟಣದಲ್ಲಿ, ಮೇಲುಕೋಟೆಯಲ್ಲಿ ಒಂದು ನೀತಿ ತೋರುವ ಅಗತ್ಯ ಏನಿತ್ತು ಅಂತ? 150ಕ್ಕೂ ಹೆಚ್ಚು ದೇವಸ್ಥಾನಗಳಿಗೆ ನಿಯಮಿತವಾಗಿ ದೇಣಿಗೆ ನೀಡುವ ಹರಕತ್ತಾದರೂ ಟಿಪ್ಪೂಗೆ ಏನಿತ್ತು? ಚಿಮೂ ಹೇಳ್ತಾರೆ ಅವನು ದೂರದಲ್ಲಿ ಮಾತ್ರ ಮತಾಂತರ ಮಾಡಿದ ಹತ್ತಿರದಲ್ಲಿ ಒಳ್ಳೆಯವನು ಅಂತ ತೋರಿಸಿಕೊಂಡ ಅಂತ. ದೊಡ್ಡವರ ಬಾಯಲ್ಲಿ ಎಂತಹ ಬಾಲಿಶವಾದ ಮಾತು ನೋಡಿ! ಮತಾಂಧರಾದವರಿಗೆ ಹತ್ತಿರ ಒಂದು ನೀತಿ ದೂರ ಒಂದು ನೀತಿ ಇರುತ್ತಾ? ಅಷಕ್ಕೂ ದೂರದ ತಮಿಳು ನಾಡಿನಲ್ಲೂ ಕಾಂಜೀವರಂ ದೇವಸ್ಥಾನಕ್ಕೆ ದೇಣಿಗೆ ನೀಡಿ ಅದರ ತೇರಿನಲ್ಲೂ ಪಾಲ್ಗೊಂಡಿದ್ದ ಟಿಪ್ಪೂ.

    ‘ಅಂದಹಾಗೆ ಬ್ರಿಟಿಷರೊಡಗೂಡಿ ಟಿಪ್ಪೂನನ್ನು ಹತ್ಯೆಮಾಡಲು ಕಾರಣನಾದ ‘ಮೀರ್ ಸಾಧಕ್’ ನ ಹೆಸರು ಇಂದಿಗೂ ಕನ್ನಡಿಗರು ದ್ರೋಹಿಗಳಿಗೆ ಬಳಸುವ ಒಂದು ನೆಗೆಟಿವ್ ವಿಶೇಷಣ…

    Reply
  22. ಮಹೇಶ

    ಮತಾಂತರದಿಂದ ಮನುಷ್ಯ ಕೆಟ್ಟವನಾಗುತ್ತಾನೆ ಎಂಬುದನ್ನು ಖಂಡಿತ ಒಪ್ಪಲಿಕ್ಕೆ ಸಾಧ್ಯವಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕ ಔನ್ನತ್ಯಕ್ಕೆ ಮತಾಂತರ ರಹದಾರಿಯಾಗುವದಾದರೆ ಯಾಕೆ ಮತಾಂತರವಾಗಬಾರದು? ಮತಾಂತರ ಮಾಡಿದ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸುವವರಿದ್ದರೆ ಅದನ್ನು ಖಂಡಿತ ನಾನು ವಿರೋಧಿಸುತ್ತೇನೆ.

    Reply
  23. Bhairav Gowda

    ನವೀನಅವರೇ ,ಈ ಹೇಳಿಕೆ ನಿಜವಾಗಲು ಸತ್ಯಾನಾ? -” ಟಿಪ್ಪೂನಿಂದ ಪ್ರತಿವರ್ಷವೂ ದೇಣಿಗೆ ಪಡೆಯುತ್ತಿದ್ದ ೧೫೬ ದೇವಸ್ಥಾನಗಳ ಪಟ್ಟಿಯನ್ನು ನೀಡಿದ್ದಾರಲ್ಲದೆ ಶೃಂಗೇರಿಯ ಮಠಾಧೀಶ ಶಂಕರಾರ್ಯರಿಗೆ ಟಿಪ್ಪೂ ಬರೆದಿದ್ದ ೩೦ ಪತ್ರಗಳ ಪ್ರತಿಗಳನ್ನೂ ನೀಡಿದ್ದಾರೆ.”
    ಏಕೆಂದರೆ ಟಿಪ್ಪು ಹುಟ್ಟಿದ ದಿನದಿಂದ(20 November 1750) ಹಿಡಿದು ಸಾಯೋತನಕ(4 May ೧೭೯೯)ಶೃಂಗೇರಿ ಮಠದಲ್ಲಿ ಶಂಕರಾಚಾರ್ಯ ಅನ್ನೋ ಮಠಾಧೀಶರೆ ಇರ್ಲಿಲ್ಲ.

    ಬೇಕಾದರೆ ಶೃಂಗೇರಿ ಮಠದ ಸ್ವಾಮಿಗಳ ವಿವರ ನೋಡಿ :

    # Jagadgurus of the Sringeri Sharada Peetham Period of Reign (CE)
    1. Sri Shankara Bhagavatpada 820 (videha-mukti)
    2. Sri Sureshwaracharya 820 – 834
    3. Sri Nityabodaghana 834-848
    4. Sri Jnanaghana 848 – 910
    5. Sri Jnanottama 910 – 954
    6. Sri Jnanagiri 954 – 1038
    7. Sri Simhagiri 1038 – 1098
    8. Sri Ishwara Tirtha 1098 – 1146
    9. Sri Nrisimha Tirtha 1146 – 1229
    10. Sri Vidya Shankara Tirtha 1229 – 1333
    11. Sri Bharati Krishna Tirtha 1333 – 1380
    12. Sri Vidyaranya 1380 – 1386
    13. Sri Chandrasekhara Bharati I 1386 – 1389
    14. Sri Nrisimha Bharati I 1389 – 1408
    15. Sri Puroshottama Bharati I 1408 – 1448
    16. Sri Shankara Bharati 1448 – 1455
    17. Sri Chandrasekhara Bharati II 1455 – 1464
    18. Sri Nrisimha Bharati II 1464 – 1479
    19. Sri Puroshottama Bharati II 1479 – 1517
    20. Sri Ramachandra Bharati 1517 – 1560
    21. Sri Nrisimha Bharati III 1560 – 1573
    22. Sri Nrisimha Bharati IV 1573 – 1576
    23. Sri Nrisimha Bharati V 1576 – 1600
    24. Sri Abhinava Nrisimha Bharati 1600 – 1623
    25. Sri Sacchidananda Bharati I 1623 – 1663
    26. Sri Nrisimha Bharati VI 1663 – 1706
    27. Sri Sacchidananda Bharati II 1706 – 1741
    28. Sri Abhinava Sacchidananda Bharati I 1741 – 1767
    29. Sri Nrisimha Bharati VII 1767 – 1770
    30. Sri Sacchidananda Bharati III 1770 – 1814
    31. Sri Abhinava Sacchidananda Bharati II 1814 – 1817
    32. Sri Nrisimha Bharati VIII 1817 – 1879
    33. Sri Sacchidananda Shivabhinava Nrisimha Bharati 1879 – 1912
    34. Sri Chandrasekhara Bharati III 1912 – 1954
    35. Sri Abhinava Vidyatirtha 1954 – 1989
    36. Sri Bharati Tirtha 1989 – Present

    Reply
  24. naveen

    Hello

    Please dont confuse. I am not arguing about Tippu. There are two Naveen here. I am one who always writing about the possible result of Tippu University like eating UGC money, so called research students, HOD etc.

    Other Naveen is one who compared Advanis driver, BJP’s Muslim VP etc.

    Regards,
    Naveen

    Reply
  25. Bhairav Gowda

    sorry this reply for rajesh, not for naveen.
    @rajeshಅವರೇ ,ಈ ಹೇಳಿಕೆ ನಿಜವಾಗಲು ಸತ್ಯಾನಾ? -” ಟಿಪ್ಪೂನಿಂದ ಪ್ರತಿವರ್ಷವೂ ದೇಣಿಗೆ ಪಡೆಯುತ್ತಿದ್ದ ೧೫೬ ದೇವಸ್ಥಾನಗಳ ಪಟ್ಟಿಯನ್ನು ನೀಡಿದ್ದಾರಲ್ಲದೆ ಶೃಂಗೇರಿಯ ಮಠಾಧೀಶ ಶಂಕರಾರ್ಯರಿಗೆ ಟಿಪ್ಪೂ ಬರೆದಿದ್ದ ೩೦ ಪತ್ರಗಳ ಪ್ರತಿಗಳನ್ನೂ ನೀಡಿದ್ದಾರೆ.”
    ಏಕೆಂದರೆ ಟಿಪ್ಪು ಹುಟ್ಟಿದ ದಿನದಿಂದ(20 November 1750) ಹಿಡಿದು ಸಾಯೋತನಕ(4 May ೧೭೯೯)ಶೃಂಗೇರಿ ಮಠದಲ್ಲಿ ಶಂಕರಾಚಾರ್ಯ ಅನ್ನೋ ಮಠಾಧೀಶರೆ ಇರ್ಲಿಲ್ಲ.

    ಬೇಕಾದರೆ ಶೃಂಗೇರಿ ಮಠದ ಸ್ವಾಮಿಗಳ ವಿವರ ನೋಡಿ :

    # Jagadgurus of the Sringeri Sharada Peetham Period of Reign (CE)
    1. Sri Shankara Bhagavatpada 820 (videha-mukti)
    2. Sri Sureshwaracharya 820 – 834
    3. Sri Nityabodaghana 834-848
    4. Sri Jnanaghana 848 – 910
    5. Sri Jnanottama 910 – 954
    6. Sri Jnanagiri 954 – 1038
    7. Sri Simhagiri 1038 – 1098
    8. Sri Ishwara Tirtha 1098 – 1146
    9. Sri Nrisimha Tirtha 1146 – 1229
    10. Sri Vidya Shankara Tirtha 1229 – 1333
    11. Sri Bharati Krishna Tirtha 1333 – 1380
    12. Sri Vidyaranya 1380 – 1386
    13. Sri Chandrasekhara Bharati I 1386 – 1389
    14. Sri Nrisimha Bharati I 1389 – 1408
    15. Sri Puroshottama Bharati I 1408 – 1448
    16. Sri Shankara Bharati 1448 – 1455
    17. Sri Chandrasekhara Bharati II 1455 – 1464
    18. Sri Nrisimha Bharati II 1464 – 1479
    19. Sri Puroshottama Bharati II 1479 – 1517
    20. Sri Ramachandra Bharati 1517 – 1560
    21. Sri Nrisimha Bharati III 1560 – 1573
    22. Sri Nrisimha Bharati IV 1573 – 1576
    23. Sri Nrisimha Bharati V 1576 – 1600
    24. Sri Abhinava Nrisimha Bharati 1600 – 1623
    25. Sri Sacchidananda Bharati I 1623 – 1663
    26. Sri Nrisimha Bharati VI 1663 – 1706
    27. Sri Sacchidananda Bharati II 1706 – 1741
    28. Sri Abhinava Sacchidananda Bharati I 1741 – 1767
    29. Sri Nrisimha Bharati VII 1767 – 1770
    30. Sri Sacchidananda Bharati III 1770 – 1814
    31. Sri Abhinava Sacchidananda Bharati II 1814 – 1817
    32. Sri Nrisimha Bharati VIII 1817 – 1879
    33. Sri Sacchidananda Shivabhinava Nrisimha Bharati 1879 – 1912
    34. Sri Chandrasekhara Bharati III 1912 – 1954
    35. Sri Abhinava Vidyatirtha 1954 – 1989
    36. Sri Bharati Tirtha 1989 – Present

    Reply
  26. jagadishkoppa

    ಭೈರವ್ ಗೌಡರಿಗೆ ಮನವಿ. ಚರ್ಚೆಯ ಹಾದಿ ತಪ್ಪಿಸಬೇಡಿ. ಶೃಂಗೇರಿ ಮಠಾಧೀಶರು ಅಂದರೇ ಒಂದರ್ಥದಲ್ಲಿ ಅವರು ಶಂಕರಾಚಾರ್ಯರ ಉ
    ತ್ತಾರಾಧಿಕಾರಿಗಳು ಎಂದರ್ಥ. ಶೃಂಗೇರಿ ಮಠ ಶಂಕರಾಚಾರ್ಯರಿಂದ ಸ್ಥಾಪಿತವಾದ ಮಠ.

    Reply
  27. chandappa

    Alpa sankyatarige pratyeka viswavidyanilayada agatyave ella. haage koduvudadare bere hindulida varh=gakko vishwa vidyalaya kodali. edarinda prayojanakkinta haaniye hechchu.

    Reply

Leave a Reply to srinivas Cancel reply

Your email address will not be published. Required fields are marked *