ಕಾಮೆಂಟ್ ಮಾಡುವವರ ಗಮನಕ್ಕೆ, ಮತ್ತೊಮ್ಮೆ…

ಸ್ನೇಹಿತರೇ,

ಇತ್ತೀಚೆಗೆ ಆನಂದ ಪ್ರಸಾದರ “ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?” ಲೇಖನಕ್ಕೆ ಬಂದ ಪ್ರತಿಕ್ರಿಯೆಗೆ ಪೂರಕವಾಗಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಆದರೆ ಅವು ಯಾವುವೂ ಬಹುಶಃ ಪ್ರಕಟವಾಗಿಲ್ಲ. ಅದಕ್ಕೆ ಕಾರಣ, ಪ್ರತಿಕ್ರಿಯಿಸಿದವರ ಹೆಸರು ಮತ್ತ್ ಇಮೇಲ್ ವಿಳಾಸಗಳು ನಮ್ಮ ವೆಬ್‌ಸೈಟ್‌ನ ಬ್ಲಾಕ್ಡ್ ಲಿಸ್ಟ್‌ನಲ್ಲಿರುವುದು.

ನನಗೆ ಮತ್ತು ವರ್ತಮಾನ.ಕಾಮ್‌ಗೆ ಓದುಗರ ಪ್ರತಿಕ್ರಿಯೆಗಳನ್ನು ಅಲ್ಲಲ್ಲಿ ಎಡಿಟ್ ಮಾಡಿ ಅಪ್ರೂವ್ ಮಾಡುವುದರಲ್ಲಿ ನಂಬಿಕೆ ಇಲ್ಲ. courtesy-announcementಪ್ರಕಟವಾದರೆ ಸಂಪೂರ್ಣವಾಗಿ ಪ್ರಕಟವಾಗಬೇಕು, ಇಲ್ಲವಾದಲ್ಲಿ ಇಲ್ಲ. ಈ ನೀತಿಯಿಂದಾಗಿ ಒಂದೇ ಒಂದು ಕೆಟ್ಟ ಅಭಿರುಚಿಯ ಪದ ಇದ್ದರೂ ಅಂತಹ ಕಾಮೆಂಟ್‌ಗಳು ಪ್ರಕಟವಾಗಿಲ್ಲ. ಕೆಲವು ಬಾರಿ ಕಾಮೆಂಟ್ ಎಷ್ಟೇ ಒಳ್ಳೆಯದಿದ್ದರೂ ಒಂದೇ ಒಂದು ಪದದ ಕಾರಣಗಳಿಂದ ಅದನ್ನು ಡಿಲೀಟ್ ಮಾಡಲಾಗಿದೆ. ಇದನ್ನು ನಮ್ಮಲ್ಲಿಯ ಲೇಖನಗಳಿಗೆ ಪ್ರತಿಕ್ರಿಯಿಸುವವರು ಗಮನಿಸಬೇಕು.

ಹಾಗೆಯೇ, ಕೆಲವು ಜನ ಪದೇಪದೇ ವೈಯಕ್ತಿಕ ದಾಳಿ ಮಾಡುವ ಪ್ರತಿಕ್ರಿಯೆಗಳನ್ನು, ಕೆಟ್ಟ ಭಾಷೆಯಲ್ಲಿ ಬೆರೆದಿರುತ್ತಾರೆ. ಅಂತಹ ಮೂರ್ನಾಲ್ಕು ಹೆಸರುಗಳು ನಮ್ಮ ಸಿಸ್ಟಮ್‌ನ ಬ್ಲಾಕ್ಡ್ ಲಿಸ್ಟ್‌ನಲ್ಲಿದ್ದು ಆ ಲಿಸ್ಟ್‌ನಲಿರುವವರು ಮಾಡುವ ಕಾಮೆಂಟ್‌ಗಳು ತನ್ನಂತಾನೆ ತಡೆಹಿಡಿಯಲ್ಪಡುತ್ತವೆ ಮತ್ತು ತನ್ನಂತಾನೆ ಟ್ರ್ಯಾಷ್‌ಗೆ ಹೋಗುತ್ತದೆ.

ಕಾಮೆಂಟ್‌ಗಳು ಎಷ್ಟೇ ತೀಕ್ಷಣವಾಗಿದ್ದರೂ ಅವು ಇಲ್ಲಿ ಪ್ರಕಟವಾಗುತ್ತವೆ, ಆದರೆ, ಭಾಷೆ ಸಭ್ಯವಾಗಿರಲಿ. ಹಾಗೆಯೇ ಪ್ರತಿಕ್ರಿಯಿಸುತ್ತಿರುವ ಲೇಖನಕ್ಕೆ ವಸ್ತುನಿಷ್ಟವಾಗಿರಲಿ. ಇಂತಹ ಅನೇಕ ಕಾಮೆಂಟ್‌ಗಳು ಇಲ್ಲಿ ಯಾವುದೇ ಅಡೆತಡೆ ಇಲ್ಲದೆ ಪ್ರಕಟವಾಗಿವೆ.

ಮತ್ತು, ನೀವು ಮೊದಲ ಸಲ ಕಾಮೆಂಟ್ ಹಾಕುತ್ತಿದ್ದರೆ ಅದು ಅಪ್ರೂವ್ ಆಗುವ ತನಕ ಪೆಂಡಿಂಗ್‌ನಲಿರುತ್ತದೆ. ಒಮ್ಮೆ ಅಪ್ರೂವ್ ಆದಮೇಲೆ, ನೀವು ಅದೇ ಹೆಸರಿನಲ್ಲಿ ಮತ್ತು ಇಮೇಲ್‌ನಲ್ಲಿ ಕಾಮೆಂಟ್ ಮಾಡಿದರೆ ಯಾವುದೇ ನಿರ್ಬಂಧ ಇಲ್ಲದೆ ತತ್‌ಕ್ಷಣ ಪ್ರಕಟವಾಗುತ್ತದೆ. ಮೊದಲ ಬಾರಿಗೆ ಮಾತ್ರ ಅಪ್ರೂವ್ ಮಾಡುವ ತನಕ ಕಾಯಬೇಕು. ಮತ್ತು, ಅಪ್ರೂವ್ ಆದ ಮೇಲೆ ನೀವು ಪದೇಪದೇ ಕೆಟ್ಟ ಭಾಷೆಯಲ್ಲಿ ಅಥವ ಅಸಂಗತವಾಗಿ ಪ್ರತಿಕ್ರಿಯಿಸುತ್ತ ಹೋದರೆ, ಒಂದು ಇಲ್ಲ ಎರಡು ಬಾರಿ ಡಿಲೀಟ್ ಮಾಡಿ ನೋಡಲಾಗುತ್ತದೆ. ಅದೇ ರೀತಿಯೆ ಮಾಡುತ್ತಿದ್ದರೆ ಆ ಹೆಸರು ನಮ್ಮ ಬ್ಲಾಕ್ಡ್ ಲಿಸ್ಟ್‌ಗೆ ಹೋಗುತ್ತದೆ.

ಬರಹಗಾರರು ಬರೆಯುವಷ್ಟೇ ಬದ್ಧತೆಯಿಂದ ಮತ್ತು ಪ್ರಬುದ್ಧತೆಯಿಂದ ಪ್ರತಿಕ್ರಿಯಿಸುವವರೂ ಸಂವಾದಿಸಬೇಕು ಎನ್ನುವುದೇ ಈ ಎಲ್ಲದರ ಹಿಂದಿರುವ ಉದ್ದೇಶ. ಕಾಮೆಂಟ್ ಮಾಡುವವರು ಸಹಕರಿಸಬೇಕು.

ಈ ಮಾಹಿತಿಗೆ ಪೂರಕವಾಗಿ ವರ್ತಮಾನ.ಕಾಮ್‌ಗೆ ವರ್ಷ ಪೂರೈಸಿದ ಆಸುಪಾಸಿನಲ್ಲಿ ಬರೆದಿದ್ದ “ಓದುಗರ ಮತ್ತು ಕಾಮೆಂಟುದಾರರ ಗಮನಕ್ಕೆ…” ಲೇಖನವನ್ನು ಮತ್ತೊಮ್ಮೆ  ಗಮನಿಸಬೇಕೆಂದು ವಿನಂತಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

2 thoughts on “ಕಾಮೆಂಟ್ ಮಾಡುವವರ ಗಮನಕ್ಕೆ, ಮತ್ತೊಮ್ಮೆ…

  1. Ananda Prasad

    ಅಂತರ್ಜಾಲದಲ್ಲಿ ಯಾವುದೇ ಉತ್ತರದಾಯಿತ್ವ ಇಲ್ಲದೆ ನಕಲಿ ಹೆಸರುಗಳಿಂದ ಅಥವಾ ಅನಾಮಿಕರಾಗಿ ಪ್ರತಿಕ್ರಿಯಿಸುವ ಅವಕಾಶ ಇರುವುದರಿಂದ ವೈಯಕ್ತಿಕ ನಿಂದನೆಯ, ಕೀಳು ಭಾಷೆಯ ಪ್ರತಿಕ್ರಿಯೆಗಳು ಕಂಡುಬರುತ್ತವೆ. ಹೆಚ್ಚಾಗಿ ಇಂಥ ವೈಯಕ್ತಿಕ ನಿಂದನೆಯ, ಕೀಳು ಭಾಷೆಯ, ತೀವ್ರ ವ್ಯಂಗ್ಯದ ಪ್ರತಿಕ್ರಿಯೆಗಳು ವ್ಯಕ್ತವಾಗುವುದು ಬಲಪಂಥೀಯ ಚಿಂತನೆಯ, ಸಂಪ್ರದಾಯವಾದಿ ಮನಸ್ಥಿತಿಯ, ಮೂಢನಂಬಿಕೆಗಳನ್ನು ಹೊಂದಿದ ವ್ಯಕ್ತಿಗಳಿಂದ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಇಂಥ ಕೀಳು ಭಾಷೆಯ ವೈಯಕ್ತಿಕ ನಿಂದನೆಯ ತೀವ್ರ ವ್ಯಂಗ್ಯದ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವುದು ಅಗತ್ಯ ಇದೆ. ಹೀಗಾಗಿ ‘ವರ್ತಮಾನ’ವು ಇಂಥ ಕೀಳು ಭಾಷೆಯ ಪ್ರತಿಕ್ರಿಯೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡಿರುವುದು ಒಳ್ಳೆಯ ಹೆಜ್ಜೆ. ಕೀಳು ಭಾಷೆಯ ಪ್ರತಿಕ್ರಿಯೆಗಳಿಗೆ ಅವಕಾಶ ಕೊಟ್ಟರೆ ಅಪಾರ ಪ್ರತಿಕ್ರಿಯೆಗಳು ಬರಬಹುದು ಆದರೆ ಗುಣಮಟ್ಟ ತೀವ್ರವಾಗಿ ಕುಸಿಯುತ್ತದೆ. ಉದಾಹರಣೆಗೆ ಟೈಮ್ಸ್ ಆಫ್ ಇಂಡಿಯಾ ಇಂಡಿಯಾ ಟೈಮ್ಸ್ ಸೈಟಿನಲ್ಲಿ ಕೆಲವೊಮ್ಮೆಒಂದೊಂದು ಲೇಖನಕ್ಕೆ ೫೦೦, ೬೦೦ ಪ್ರತಿಕ್ರಿಯೆಗಳು ಬರುತ್ತವೆ. ಇವುಗಳಲ್ಲಿ ಕುತ್ಸಿತ ಮನೋಭಾವ, ಅನಾರೋಗ್ಯಕರ ತೀವ್ರ ವ್ಯಂಗ್ಯ, ವೈಯಕ್ತಿಕ ನಿಂದನೆ ಎದ್ದು ಕಾಣುತ್ತದೆ. ಲೇಖನಗಳು ನರೇಂದ್ರ ಮೋದಿಗೆ ಸಂಬಂಧಪಟ್ಟಿದ್ದಾದರೆ ಮೋದಿಯನ್ನು ಸಮರ್ಥಿಸಿ, ಬೇರೆ ಮೋದಿಯ ವಿರೋಧಿಗಳನ್ನು ನಿಂದಿಸಿ ಇಂಥ ಪ್ರತಿಕ್ರಿಯೆಗಳು ಬಲಪಂಥೀಯರಿಂದ ಪುಂಖಾನುಪುಂಖವಾಗಿ ವ್ಯಕ್ತವಾಗುತ್ತವೆ.

    Reply

Leave a Reply

Your email address will not be published. Required fields are marked *