ಕಲೋನಿಯಲ್ ನಶೆಯಿಂದ ಕಳಂಕಿತಗೊಂಡ ಭೂ ಮಸೂದೆ

ಮೂಲ : ಮಧುರೇಶ್ ಕುಮಾರ್
ಅನುವಾದ : ಬಿ.ಶ್ರೀಪಾದ ಭಟ್

ಕರಾಳ ಹಿನ್ನೆಲೆಯ, ಭೂ ಆಕ್ರಮಣವನ್ನು ಮೂಲ ಉದ್ದೇಶವನ್ನಾಗಿರಿಸಿಕೊಂಡ 1894 ರ ಭೂ ಮಸೂದೆಯ ಕಾನೂನಿಗೆ ಅಮೂಲಾಗ್ರವಾಗಿ ತಿದ್ದುಪಡಿ ತಂದು ಹೊಸದಾದ ಭೂ ಸ್ವಾಧೀನ ಮಸೂದೆಯನ್ನು ರಚಿಸುವುದು ಮನಮೋಹನಸಿಂಗ್ ನೇತೃತ್ವದ ಯುಪಿಎ-2 ಸರ್ಕಾರದ ಆದ್ಯ ಕರ್ತವ್ಯವಾಗಬೇಕಿತ್ತು. ಆದರೆ ಬದಲಾಗಿ ಭೂ ಸ್ವಾಧೀನ ಮಸೂದೆ ಮತ್ತು ಪುನರ್ವಸತೀಕರಣ ಮಸೂದೆ 2001 ಯನ್ನು ಪಾರ್ಲಿಮೆಂಟಿನಲ್ಲಿ ಅನುಮೋದಿಸುವ ಕುರಿತಾಗಿ ಇತ್ತೀಚಿನ ತಿಂಗಳುಗಳಲ್ಲಿ ರಾಜಕೀಯ ಪಕ್ಷಗಳ ನಡುವೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಚಟುವಟಿಕೆಗಳನ್ನು ಗಮನಿಸಿದರೆ ಅಲ್ಲಿನ ವಿದ್ಯಾಮಾನಗಳೇ ವಿರುದ್ಧ ದಿಕ್ಕಿನಲ್ಲಿವೆ ಎಂದು ನಿಚ್ಛಳವಾಗಿ ಗೋಚರವಾಗುತ್ತದೆ. ಭೂ ಸ್ವಾಧೀನ ಮಸೂದೆಯ ಉದ್ದೇಶವು ಅಭಿವೃದ್ಧಿಯ ಹೆಸರಿನಲ್ಲಿ ಜಮೀನನ್ನು ಕಳೆದುಕೊಂಡ ಸಣ್ಣ, ಅತಿ ಸಣ್ಣ ರೈತರಿಗೆ ಪುನರ್ವಸತೀಕರಣ ಕಲ್ಪಿಸುವುದು ಮತ್ತು ಅವರ ದೈನಂದಿಕ ಜೀವನವನ್ನು ಮರಳಿ ಸಹಜ ಮಾರ್ಗಕ್ಕೆ ಮರಳುವಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಇಲಾಖೆಗಳಲ್ಲೊಂದಾದ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮುಖ್ಯ ಧೇಯೋದ್ಧೇಶವಾಗಿರಬೇಕಿತ್ತು. ಆದರೆ ವಿರುದ್ಧ ದಿಕ್ಕಿನಲ್ಲಿರುವ ಈ ಪ್ರಕ್ರಿಯೆಯು ಸಂಪೂರ್ಣ ಕೈಗಾರೀಕರಣ ಮತ್ತು ನಗರೀಕರಣವನ್ನೇ ಮೂಲೋದ್ದೇಶವನ್ನಾಗಿರಿಸಿಕೊಂಡಿದೆ.

1894 ರ ಭೂ ಮಸೂದೆಗೆ ಹೋಲಿಸಿದರೆ ಈಗಿನ ಭೂ ಸ್ವಾಧೀನ ಮಸೂದೆಯು ಅನೇಕ ರೀತಿಯಲ್ಲಿ ಸುಧಾರಿತಗೊಂಡ ಅಂಶಗಳನ್ನು ಒಳಗೊಂಡಿದ್ದರೂ ಮುಖ್ಯವಾದIndustrial_Mangalore ಆಶಯಗಳು ಮತ್ತು ಜೀವಪರ ನಿಲುವುಗಳನ್ನು ಸಂಪೂರ್ಣವಾಗಿ ಕೈ ಬಿಟ್ಟಿದೆ. ಸಂಸದೀಯ ಕಮಿಟಿಯು ಈ ನಿರ್ಲಕ್ಷಿತ ಪರಿಚ್ಛೇದಗಳನ್ನು ಪಟ್ಟಿ ಮಾಡಿಕೊಟ್ಟಿತ್ತು. ಇದರಲ್ಲಿ ಸರ್ಕಾರವು ತಾನು ಸ್ವಾಧೀನ ಪಡೆಸಿಕೊಂಡ ಭೂಮಿಯನ್ನು ನೇರವಾಗಿಯೇ ಆಗಲಿ, ಪರೋಕ್ಷವಾಗಿಯೇ ಆಗಲಿ ಖಾಸಗಿ ಬಂಡವಾಳಶಾಹಿಯವರಿಗೆ ಹಸ್ತಾಂತರಗೊಳಿಸಬಾರದು ಎನ್ನುವ ಅತ್ಯಂತ ಮುಖ್ಯವಾದ ಶಿಫಾರಸನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿತು. ದೇಶದ ಅಭಿವೃದ್ಧಿಗಾಗಿ ಖಾಸಗಿ ಬಂಡವಾಳಶಾಹಿಗಳ ಪಾತ್ರ ಬಹು ಮುಖ್ಯವಾದದ್ದೆಂದು, ಅವರನ್ನು ಒಳಗೊಳ್ಳಲೇಬೇಕೆಂದು ಅಭಿಪ್ರಾಯ ಪಟ್ಟ ಸರ್ಕಾರವು ಸಂಸದೀಯ ಕಮಿಟಿಯ ಶಿಫಾರಸನ್ನು ತಿರಸ್ಕರಿಸಿತು. 1894 ರ ಮಸೂದೆಯಲ್ಲಿ ನಿಷೇಧಿಸಲ್ಪಟ್ಟ ಸಾರ್ವಜನಿಕ ಉದ್ದಿಮೆ ಮತ್ತು ಖಾಸಗಿ ಉದ್ದಿಮೆಗಳ ನಡುವಿನ ಸಹಭಾಗಿತ್ವನ್ನು ಈಗಿನ ಕೇಂದ್ರ ಸರ್ಕಾರದ ಭೂ ಮಸೂದೆಯು ಬಲವಾಗಿ ಸಮರ್ಥಿಸಿಕೊಂಡಿತು. ಏತಕ್ಕಾಗಿ ಸರ್ಕಾರವು ಖಾಸಗಿಯವರಿಗೆ ಮಧ್ಯವರ್ತಿಯಾಗಲು ಬಯಸುತ್ತದೆ? ಇಂದಿನ ಅಭಿವೃದ್ಧಿಯ ಮಾದರಿಯನ್ನು ಅವಲೋಕಿಸಿದಾಗ ಅದು ಇಂಧನ, ಸಾರಿಗೆ, ರೈಲ್ವೇಗಳಂತಹ ಪ್ರಮುಖ ಸಾರ್ವಜನಿಕ ಇಲಾಖೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಖಾಸಗಿ ಬಂಡವಾಳಶಾಹಿಗಳಿಗೆ ಪರಭಾರೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಸರ್ಕಾರವು ವಿವೇಚನೆಯಿಲ್ಲದೆ ಬೇಕಾಬಿಟ್ಟಿ ಜಮೀನನ್ನು ಆಕ್ರಮಿಸಿಕೊಂಡು ಅದನ್ನು ಖಾಸಗಿಯವರ ಕೈಗೊಪ್ಪಿಸುತ್ತಿರುವುದು ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಭೂಮಿಯನ್ನು ಹೊರತುಪಡಿಸಿ ಬೇರೇನನ್ನು ಹೊಂದಿಲ್ಲದ ಸಣ್ಣ, ಅತಿ ಸಣ್ಣ ರೈತರು, ಆದಿವಾಸಿಗಳು, ದಲಿತರು ತಮ್ಮ ಸ್ವಂತದ ಭೂಮಿಯು ಖಾಸಗಿಯವರ ಕೈ ಸೇರುತ್ತಿರುವುದನ್ನು ಸುತಾರಂ ಒಪ್ಪುವುದಿಲ್ಲ.

1984ರ ವರೆಗೂ ಸರ್ಕಾರದ ಯೋಜನೆಗಳಿಗಾಗಿ ಬಡ ರೈತರಿಂದ ಭೂಮಿಯನ್ನು ಸ್ವಾಧೀನಪಡೆಸಿಕೊಂಡು ಅವರಿಗೆ ಪರಿಹಾರವಾಗಿ ಬಿಡಿಗಾಸನ್ನು ಬಿಸಾಡುತ್ತಿದ್ದ droughtಸರ್ಕಾರವು ಇಂದು ಖಾಸಗಿ ಮತ್ತು ಸಾರ್ವಜನಿಕ ಯೋಜನೆಗಳಿಗಾಗಿ ಈ ಕಾರ್ಯಕ್ಕೆ ಕೈ ಹಾಕಿದೆ. ಆದರೆ ಇಂದಿನ ಮಸೂದೆಯಲ್ಲಿ ಭೂಮಿಯನ್ನು ಕಳೆದುಕೊಳ್ಳಲಿರುವ ಶೇಕಡ 80 ರಷ್ಟು ರೈತರ ಅಭಿಪ್ರಾಯವನ್ನು ಆಧರಿಸಿ ಭೂಮಿಯನ್ನು ಸ್ವಾಧೀನಪಡೆಸಿಕೊಳ್ಳಲಾಗುವುದು ಎನ್ನುವ ಕಣ್ಣೊರೆಸುವ ತಂತ್ರಕ್ಕೆ ಕೈ ಹಾಕಿದೆ. ಆದರೆ ಇದೇ ಅಂಶವು ಸರ್ಕಾರಿ ಯೋಜನೆಗಳಿಗೆ ಅನ್ವಯಿಸುವುದಿಲ್ಲ. ಇದು ಯಾವ ಬಗೆಯ ನ್ಯಾಯ?

ಮೂರನೆಯದಾಗಿ ಆಹಾರ ಭದ್ರತೆಯ ಪ್ರಶ್ನೆ. ವ್ಯವಸಾಯಕ್ಕಾಗಿ ಉಪಯೋಗಿಸುತ್ತಿದ್ದ ಜಮೀನನ್ನು ಬಡ ರೈತರಿಂದ ಆಕ್ರಮಿಸಿಕೊಂಡು ವ್ಯವಸಾಯೇತರ ಉದ್ದೇಶಗಳಿಗೆ ಪರಭಾರೆ ಮಾಡುವುದು ಆಹಾರ ಉತ್ಪಾದನೆಯಲ್ಲಿ ತೀವ್ರವಾದ ಕಡಿತವನ್ನುಂಟು ಮಾಡುತ್ತದೆ. ಕ್ಷೀಣಗೊಂಡ ಆಹಾರ ಉತ್ಪಾದನೆಯು ಆಹಾರ ಪೂರೈಕೆಯ ಮೇಲೂ ತೀವ್ರವಾದ ಪರಿಣಾಮ ಬೀರುತ್ತದೆ. ವ್ಯವಸಾಯಕ್ಕಾಗಿಯೇ ಮೀಸಲಿಟ್ಟ ಒಣ ಭೂಮಿಯನ್ನಾಗಲೀ ಅಥವಾ ನೀರಾವರಿ ಭೂಮಿಯನ್ನಾಗಲೀ ಬೇರೆ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಳ್ಳಬಾರದೆಂದು ಸ್ಥಾಯೀ ಸಮಿತಿಯು ತನ್ನ ನಿರ್ಧಾರದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೆ ವರ್ಷಕ್ಕೆ ಎರಡು ಬೆಳೆಯನ್ನು ಬೆಳೆಯುವ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲವೆಂದು ಹೇಳುವ ರಂಗೋಲಿ ಕೆಳಗೆ ನುಸುಳುವ ಸರ್ಕಾರ, ದೇಶದ ಬಹುಪಾಲು ರೈತರು ಹೊಂದಿರುವುದು ಒಂದು ಬೆಳೆಯ ಭೂಮಿಯನ್ನು ಹೊಂದಿರುವ ಸತ್ಯವನ್ನು ಮರಮಾಚುತ್ತದೆ. ಈ ಒಂದು ಬೆಳೆಯನ್ನು ಬೆಳೆಯುವ ರೈತರಿಗೇ ಹೆಚ್ಚಿನ ಭದ್ರತೆ ಮತ್ತು ಸಹಾಯವನ್ನು ನೀಡಬೇಕಾದಂತಹ ಸಂದರ್ಭದಲ್ಲಿ ಸರ್ಕಾರವು ಅವರ ಭೂಮಿಯನ್ನು ವಶಪಡಿಸಿಕೊಳ್ಳುವುದು ಪರಮ ನೀಚತನವಲ್ಲವೇ!

ನಾಲ್ಕನೆಯದಾಗಿ ಸ್ಥಾಯೀ ಸಮಿತಿಯು ತನ್ನ ವರದಿಯಲ್ಲಿ ಹೇಳಿರುವ ಪ್ರಕಾರ ಸರ್ಕಾರವು ತಾನು ವಶಪಡಿಸಿಕೊಳ್ಳುವ ಶೇಕಡಾ 90 ರಷ್ಟು ಭೂಮಿಯನ್ನು ಭೂ ಸ್ವಾಧೀನ ಮಸೂದೆಯ ಪರಿಚ್ಛೇಧಗಳನ್ನು ಮಾತ್ರ ಆಧರಿಸದೆ ಜೊತೆಗೆ ಸಂಬಂದಿತ ಕೇಂದ್ರ ಮತ್ತು ಆಯಾ ರಾಜ್ಯಗಳ ಆಕ್ಟ್ ಆನ್ನು ಸಹ ಆಧರಿಸಿ ಭೂ ಸ್ವಾಧೀನ ಪಡಿಸಿಕೊಂಡಿರುವುದು ಮತ್ತು ಇದನ್ನು ತನ್ನ ಮಸೂದೆಯಲ್ಲಿ ಉಪ ಶೆಡ್ಯೂಲ್‌ನ ಅಡಿಯಲ್ಲಿ ತಂದಿರುವುದು ಅನೇಕ ಶಂಕೆಗಳನ್ನು ಹುಟ್ಟು ಹಾಕುತ್ತದೆ. ಆಂದರೆ ದೇಶಾದ್ಯಾಂತ ಏಕರೂಪಿ ಸಮಾನ ಕಾಯ್ದೆಯ ಅಡಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಪುನರ್ವಸತೀಕರಣ ಪ್ರಕ್ರಿಯೆಯನ್ನು ಪುನರ್ರೂಪಿಸುವುದು ಬಹು ಮುಖ್ಯವಾಗಿ ಆಗಬೇಕಾದಂತಹ ಕೆಲಸ

ಐದನೇಯದಾಗಿ ಯೋಜನಾ ಆಯೋಗದ ವರದಿಯ ಪ್ರಕಾರ 2031 ರ ವೇಳೆಗೆ ಭಾರತದ ಜನಸಂಖ್ಯೆಯು 2600 ಮಿಲಿಯನ್‌ಗೆ ಮುಟ್ಟುತ್ತದೆ. ಅಂದರೆ 2011 ಗೆ ಹೋಲಿಸಿದರೆ ಮುಂದಿನ 20 ವರ್ಷಗಳಲ್ಲಿ 200 ಮಿಲಿಯನ್‌ನಷ್ಟು ಜನಸಂಖ್ಯೆ ಹೆಚ್ಚಳವಾಗುತ್ತದೆ. ಮುಂದುವರೆದು ಆಯೋಗವು ಆ ಸಂದರ್ಭದಲ್ಲಿ ನಗರಗಳಲ್ಲಿ ಸರಾಸರಿ ಕೇವಲ ಒಂದು ಗಂಟೆಯ ಅವಧಿಗೆ ಮಾತ್ರ ನೀರಿನ ಪೂರೈಕೆ ಇರುತ್ತದೆ ಎಂದು ಅಂದಾಜಿಸುತ್ತದೆ. ಆಗ ಶೇಕಡಾ 13 ರಷ್ಟು ಜನಸಂಖ್ಯೆ ಬಹಿರಂಗ ಶೌಚಾಲಯವನ್ನು ಅವಲಂಬಿಸಬೇಕಾಗುತ್ತದೆ. ಶೇಕಡಾ 37 ರಷ್ಟು ಜನಸಂಖ್ಯೆಯ ಒಳಚರಂಡಿಯ ವ್ಯವಸ್ಥೆ ಖಾಸಗಿಯಾಗಿರದೆ ಸಾರ್ವಜನಿಕಗೊಂಡಿರುತ್ತದೆ. ಶೇಕಡಾ 18 ರಷ್ಟು ಜನಸಂಖ್ಯೆಗೆ ಒಳಚರಂಡಿ ವ್ಯವಸ್ಥೆಯ ಸೌಲಭ್ಯವೇ ಇರುವುದಿಲ್ಲ.

1993-2004 ರ ಅವಧಿಯಲ್ಲಿ ನಗರದ ಬಡಜನರ, ವಸತಿಹೀನರ ಜನಸಂಖ್ಯೆ ಶೇಕಡ 35 ರಷ್ಟು ಹೆಚ್ಚಳಗೊಂಡಿದೆ. ಶೇಕಡ 60 ರಷ್ಟು ಜನಸಂಖ್ಯೆ ಸ್ಲಂಗಳಲ್ಲಿ ವಾಸಿಸುತ್ತಾರೆ. INDIA-BHOPAL-POLLUTION-ACCIDENT-25YRSಆದರೆ ತಮ್ಮ ವಸತಿಗಾಗಿ ಈ ಬಡಜನರು ಬಳಸಿಕೊಳ್ಳುವುದು ಒಟ್ಟು ನಗರ ವ್ಯಾಪ್ತಿಯ ಶೇಕಡ 12 ರಷ್ಟು ಜಾಗವನ್ನು ಮಾತ್ರ ಮತ್ತು ಅವರು ವಾಸಿಸುತ್ತಿರುವ ಆ ಜಾಗವನ್ನು ಅಕ್ರಮವೆಂದೇ ಪರಿಗಣಿಸಲ್ಪಡುತ್ತದೆ. ಮಂದೊಂದು ದಿನ ಈ ಜನರ ವಿರುದ್ಧ ಅತಿಕ್ರಮ ವಲಸೆಗಾರರೆಂದು ಆದೇಶ ಹೊರಡಿಸಿ ಅಧಿಕೃತವಾಗಿಯೇ ತೆರವು ಕಾರ್ಯಕ್ಕೆ ಮುಂದಾಗುತ್ತಾರೆ, ಅವರ ಗುಡಿಸಲುಗಳನ್ನು, ಜನತಾ ಮನೆಗಳನ್ನು ಕೆಡವಲಾಗುತ್ತದೆ. ನಗರದ ಈ ಬಡಜನರ ಸಂಕಷ್ಟಗಳಿಗೆ ಹೊಸ ಭೂಮಸೂದೆಯಲ್ಲಿ ಯಾವುದೇ ಉಲ್ಲೇಖವಿಲ್ಲ. ಏಕೆಂದರೆ ಆ ಮಸೂದೆಯನ್ನು ಗ್ರಾಮದ ಚೌಕಟ್ಟಿನ ಅಡಿಯಲ್ಲಿ ರೂಪಿಸಲಾಗಿದೆ ವಿನಹಃ ನಗರದ ಚೌಕಟ್ಟಿನ ನಿರ್ಗತಿಕರನ್ನು ಅದು ಒಳಗೊಳ್ಳುವುದಿಲ್ಲ. ಬಡತನರೇಖೆಗಿಂತ ಕೆಳಗಿರುವ ಈ ಬಡಜನರ ಈ ಶೋಷಣೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವುದು ಈಗ ತುರ್ತಾಗಿ ಆಗಬೇಕಾಗಿದೆ.

ಕಡೆಯದಾಗಿ ಅಭಿವೃಧ್ಧಿಯ ಹೆಸರಿನಲ್ಲಿ ಭೂಮಿಯನ್ನು ಕಳೆದುಕೊಳ್ಳುವ ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಆದಿವಾಸಿಗಳು ಮತ್ತು ದಲಿತರಿಗೆ ಪರಿಹಾರವು ಕೇವಲ ಹಣದ ರೂಪದಲ್ಲಿರುತ್ತದೆ ವಿನಹಃ ಅವರಿಗೆ ಭೂಮಿಗೆ ಬದಲಾಗಿ ಪರ್ಯಾಯ ಜಾಗದಲ್ಲಿ ಭೂಮಿಯನ್ನು ಒದಗಿಸುವುದಿಲ್ಲ. ಇದು ಇಡೀ ಆದಿವಾಸಿ ಮತ್ತು ದಲಿತ ಸಮುದಾಯಕ್ಕೆ,ಸಣ್ಣ ಮತ್ತು ಅತಿ ಸಣ್ಣ ರೈತರ ದೈನಂದಿನ ಜೀವನ ಕ್ರಮಕ್ಕೆ ತೀವ್ರ ಧಕ್ಕೆಯನ್ನುಂಟು ಮಾಡುತ್ತದೆ. ಅವರ ಭವಿಷ್ಯವನ್ನು ಸರ್ಕಾರವು ಪರಿಹಾರ ರೂಪದಲ್ಲಿ ಕೊಡುವ ಹಣದ ಮೇಲೆ ಅವಂಬಿಸುವಂತೆ ಮಾಡಲು ಶಕ್ಯವೇ ಇಲ್ಲ. ಅವರಿಗೆ ಮತ್ತು ಮುಂದಿನ ತಲೆಮಾರಿಗೆ ಭವಿಷ್ಯದಲ್ಲಿ ಜೀವಿಸಲು ಭೂಮಿಯ ಅವಶ್ಯಕತೆ ಇದೆ ವಿನಹಃ ಪುಡಿಗಾಸಿನಲ್ಲಲ್ಲ. ಇದರಿಂದ ಇವರೆಲ್ಲ ಕ್ರಮೇಣ ನಗರ,ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. ಈ ಮೂಲಕ ಆರ್ಥಿಕ ಸಮತೋಲನತೆಯು ಹಳಿತಪ್ಪುತ್ತದೆ. ಏಕೆಂದರೆ ಹಳ್ಳಿಗಳಿಂದ ನಗರ, Working_in_the_rice_paddyಪಟ್ಟಣಗಳಿಗೆ ವಲಸೆ ಹೋಗುವವರ ಜನಸಂಖ್ಯೆ ಮಿತಿಮೀರಿದಾಗ ಇಡೀ ವ್ಯವಸ್ಥೆಯಲ್ಲಿ ಅರಾಜಕತೆ ರಾರಾಜಿಸುತ್ತದೆ. ಎಲ್ಲರಿಗೂ ಕಾರ್ಖಾನೆಗಳಲ್ಲಿ, ಸೇವಾ ಕೇಂದ್ರಗಳಲ್ಲಿ ನೌಕರಿಯನ್ನು ಒದಗಿಸುವುದು ಕಷ್ಟಕರ. ಶಿಕ್ಷಣದ ಕೊರತೆ ತೀವ್ರವಾಗುತ್ತದೆ. ವಸತಿ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆದರೆ ತನ್ನ ಭೂ ಸ್ವಾಧೀನ ಮಸೂದೆಯ ಮೂಲಕ ಸ್ವತಹಃ ತಾನೇ ಗ್ರಾಮೀಣ ಭಾಗದ ಸಣ್ಣ, ಅತಿ ಸಣ್ಣ ರೈತರು, ಆದಿವಾಸಿಗಳು, ದಲಿತರನ್ನು ಒಕ್ಕಲೆಬ್ಬಿಸಿ ನಗರಕ್ಕೆ ವಲಸೆ ಹೋಗುವಂತಹ ಅನಿವಾರ್ಯ ವಾತಾವರಣ ಸೃಷ್ಟಿಸುವ ಸರ್ಕಾರ ಇದೇ ಜನತೆಗೆ ನಗರಗಳಲ್ಲಿ, ಪಟ್ಟಣಗಳಲ್ಲಿ ಬದುಕುವ ಸೌಲಭ್ಯವನ್ನು ಸಹ ಕಿತ್ತುಕೊಳ್ಳುತ್ತದೆ. ಇದಕ್ಕೆಲ್ಲಾ ಮೂಲಭೂತ ಕಾರಣ ಈ ಭೂ ಮಸೂದೆಯ ಈಗಿನ ಸ್ವರೂಪ ಮತ್ತದರ ಕಾನೂನುಗಳು.

ಕಡೆಯದಾಗಿ ಸಂವಿಧಾನದ 73 ಮತ್ತು 74 ತಿದ್ದುಪಡಿಯು ಸಂಪೂರ್ಣ ವಿಕೇಂದ್ರೀಕರಣ ವ್ಯವಸ್ಥೆಗೆ ಆದೇಶಿಸುತ್ತ ಗ್ರಾಮ, ಹೋಬಳಿ, ತಾಲೂಕು ಮಟ್ಟಗಳಲ್ಲಿ ಸ್ಥಳೀಯ ಮಟ್ಟದಲ್ಲಿಯೇ ಅಧಿಕಾರವಿರಬೇಕು ಎಂದು ಪ್ರತಿಪಾದಿಸುತ್ತದೆ. ಆದರೆ ಕೇಂದ್ರ ಸರ್ಕಾರದ ಈ ಹೊಸ ಭೂ ಮಸೂದೆ ಸಂವಿಧಾನದ ಮೇಲಿನ ಆಶಯಗಳಿಗೇ ವ್ಯತಿರಿಕ್ತವಾಗಿದೆ. ಸ್ಥಳೀಯ ಜನರ ಅಧಿಕಾರವನ್ನು ಕಿತ್ತುಕೊಂಡು ಅದನ್ನು ಕೇಂದ್ರೀಕರಿಸಿ ಅವರ ಸಂವಿಧಾನಬದ್ಧ ಹಕ್ಕುಗಳಿಗೆ ಮಾರಕವಾಗುತ್ತದೆ ಈ ಭೂ ಮಸೂದೆಯ ಕಾನೂನುಗಳು.

( ಕೃಪೆ : ತೆಹೆಲ್ಕ ವಾರಪತ್ರಿಕೆ)

One thought on “ಕಲೋನಿಯಲ್ ನಶೆಯಿಂದ ಕಳಂಕಿತಗೊಂಡ ಭೂ ಮಸೂದೆ

  1. NagarajaM

    Land-has become gold mine for Land Mafia. Politicians, officials are stake holders
    in it reaping rich illegal benefits depriving poor marginal farmers. Agriculture is non-remunerative, this is helping them. The risk of price fluctuation is suicidal
    to farmers interest. All these do not mean that agricultural land is to be kept
    intact, but transition has to be more beneficial to farmers since land value has
    been skyrocketing recently.

    Reply

Leave a Reply

Your email address will not be published. Required fields are marked *