‘ತಣ್ಣನೆ ಸಾಮೂಹಿಕ ಬೇಟೆ’ ಹಿಂದಿನ ಕೆಲವು ಕರಾಳ ಸತ್ಯಗಳು

– ಜಿ.ಮಹಂತೇಶ್

ಛತ್ತೀಸ್​ಗಢವಷ್ಟೇ ಅಲ್ಲ, ಭಾರತ ದೇಶವೂ ಅಕ್ಷರಶಃ ಬೆಚ್ಚಿ ಬಿದ್ದಿದೆ. ಮಾವೋವಾದಿಗಳನ್ನ ಹತ್ತಿಕ್ಕಲು M_Id_52179_Salwa_Judumಸೆಲ್ವಾ ಜುಡುಂ ಅನ್ನು ಬಳಸಿಕೊಂಡಿದ್ದ ಛತ್ತೀಸ್​ಗಢ ಪ್ರಭುತ್ವಕ್ಕೆ ಮಾವೋವಾದಿಗಳು ಮರ್ಮಾಘಾತದ ಹೊಡೆತ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತ್ತು ಅಹಿಂಸೆಯಲ್ಲಿ ನಂಬಿಕೆ ಇರುವವರ್ಯಾರು ಮಾವೋವಾದಿಗಳ ಈ ಕೃತ್ಯವನ್ನ ಬೆಂಬಲಿಸಲಾರರು. ಆದರೆ ಅದೇ ಪ್ರಭುತ್ವ, ಸೆಲ್ವಾ ಜುಡುಂ ಹೆಸರಿನಲ್ಲಿ ಅದೆಷ್ಟೋ ಮಂದಿ ಆದಿವಾಸಿಗಳನ್ನ ಸಾವಿನ ಮನೆಗೆ ಅಟ್ಟಿತ್ತು. ಆದಿವಾಸಿಗಳ ವಿರುದ್ಧ ಆದಿವಾಸಿಗಳನ್ನೇ ಎತ್ತಿಕಟ್ಟಿ ಅವರೊಳಗೇ ಒಬ್ಬ ಗೂಢಚಾರನನ್ನ ನೇಮಿಸಿತ್ತು. ಅದೇ ಗೂಢಚಾರರ ನೆರವಿನಿಂದ ಸದ್ದಿಲ್ಲದೇ ಮಾರಣ ಹೋಮ ನಡೆಸಿತ್ತು.

ಛತ್ತೀಸ್​ಢದಲ್ಲಿ ಮೊನ್ನೆ ನಡೆದ ಮಹೇಂದ್ರ ಕರ್ಮ ಮತ್ತು ಪಿಸಿಸಿ ಅಧ್ಯಕ್ಷ ನಂದಕುಮಾರ್ ಹಾಗೂ ಅವರ ಪುತ್ರನ ಹತ್ಯೆ ಆದಾಗ ಎಲ್ಲರೂ ಮರುಗಿದರು. ಖುದ್ದು ಸೋನಿಯಾ, ರಾಹುಲ್, ಮನಮೋಹನ್​ಸಿಂಗ್ ಭೇಟಿ ಕೊಟ್ಟು ಕಂಬನಿಗರೆದರು. ನಿಷ್ಪಾಪಿ ಆದಿವಾಸಿಗಳ ಮಾರಣ ಹೋಮ ನಡೆದಾಗ ಬಹುತೇಕ ಹೃದಯಗಳು ಅದ್ಯಾಕೋ ಏನೋ ಮರುಗಲಿಲ್ಲ; ಗಲ್ಲದ ಮೇಲೆ ಕಣ್ಣೀರು ಹರಿಯಲಿಲ್ಲ. ಅರಣ್ಯ ಸಂಪತ್ತಿನ ಲೂಟಿಗೆ ತೊಡಕಾಗಿದ್ದ ಆದಿವಾಸಿಗಳು ಅಲ್ಲಿರುವುದು ಯಾರಿಗೂ ಬೇಡವಾಗಿತ್ತು. ವಿಶೇಷವಾಗಿ ಗಣಿ ದೊರೆಗಳು ಮತ್ತು ಅವರ ಬೆನ್ನಿಗೆ ನಿಂತ ಪ್ರಭುತ್ವಕ್ಕೆ ಸುತಾರಾಂ ಬೇಡವಾಗಿತ್ತು.

ಆಗಷ್ಟೇ ರಚನೆಯಾಗಿದ್ದ ಛತ್ತೀಸ್​ಗಢ ರಾಜ್ಯದಲ್ಲಿ ಮಾವೋವಾದ ಚಳವಳಿಯೂ salwajudum398_080211084403ಹೆಡೆ ಎತ್ತತೊಡಗಿತ್ತು. ಇದರ ಹೆಡೆಯನ್ನ ಬಡಿದು ಬಾಯಿಗೆ ಹಾಕಿಕೊಳ್ಳಲು ಅಲ್ಲಿನ ಪ್ರಭುತ್ವವೇ ಭಯೋತ್ಪಾದಕ ಅಭಿಯಾನ ಆರಂಭಿಸಿತ್ತು. ಈ ಅಭಿಯಾನಕ್ಕಿದ್ದ ಹೆಸರು ಸೆಲ್ವಾ ಜುಡಂ ಎಂದು.

ಆದಿವಾಸಿ ಗೊಂಡಿ ಭಾಷೆಯಲ್ಲಿ ಸೆಲ್ವಾ ಜುಡುಂ ಎಂದರೇ, ತಣ್ಣನೆ ಸಾಮೂಹಿಕ ಬೇಟೆ ಎಂದು. ಛತ್ತೀಸ್​ಗಢ್ ರಾಜ್ಯದಲ್ಲಿ ಬಸ್ತಾರ್ ಎಂಬುದೊಂದು ಸಣ್ಣ ಜಿಲ್ಲೆ ಇದೆ. ಈ ಜಿಲ್ಲೆಯಲ್ಲಿ ಹೇರಳವಾದ ಖನಿಜ ಮತ್ತು ಅರಣ್ಯ ಸಂಪತ್ತನ್ನ ಗರ್ಭೀಕರಿಸಿಕೊಂಡಿದೆ. ಇಲ್ಲಿ ಉತ್ಕ್ರಷ್ಟ ದರ್ಜೆಯ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಡೋಲೋಮೈಟ್, ಬಾಕ್ಸೈಟ್, ವಜ್ರ ಸೇರಿದಂತೆ ಮತ್ತಿತರೆ ಖನಿಜ ಸಂಪತ್ತಿದೆ. ಹೀಗಾಗಿಯೇ ಅಲ್ಲಿನ ಸರ್ಕಾರ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ.

ಛತ್ತೀಸ್​ಗಢ ಸರ್ಕಾರ ಇಲ್ಲಿನ ಖನಿಜ ಸಂಪತ್ತನ್ನ ಬಗೆಯಲು mail_today5_070611101748ಹತ್ತಾರು ಖಾಸಗಿ ಗಣಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆ ಒಪ್ಪಂದ ಮೊತ್ತವೇ 60 ಸಾವಿರ ಕೋಟಿಗಿಂತಲೂ ಅಧಿಕ. ಬಸ್ತಾರ್​ ನೆಲದಲ್ಲಿ ಹುದುಗಿರುವ ಖನಿಜ ಸಂಪತ್ತನ್ನ ಬಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ಆಗಷ್ಟೇ ಹೆಡೆ ಎತ್ತಿದ್ದ ಮಾವೋವಾದಿಗಳು ಖನಿಜ ಸಂಪತ್ತನ್ನ ಬಗೆಯುವುದಕ್ಕೆ ವಿರೋಧಿಸಿ, ಆದಿವಾಸಿಗಳ ಬೆನ್ನಿಗೆ ನಿಂತಿದ್ದರು.

ಹೀಗಾಗಿಯೇ, ಅಲ್ಲಿನ ಸರ್ಕಾರ ಆದಿವಾಸಿ ಸಂಸ್ಕೃತಿಯನ್ನ ಬುಡ ಸಮೇತ ಕೀಳಲಾರಂಭಿಸಿದೆ. ಇದರ ಒಂದು ಭಾಗವಾಗಿಯೇ ಸೆಲ್ವಾ ಜುಡಂ ರೂಪುಗೊಂಡಿರುವುದು. ಆದಿವಾಸಿಗಳ ವಿರೋಧಿಗಳನ್ನ ಕಲೆ ಹಾಕಿ, ತಿಂಗಳಿಗೆ 1,500 ರೂಪಾಯಿಗಳನ್ನ ನೀಡಿದ್ದ ಸರ್ಕಾರ ಅವರನ್ನೇ ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿ ನೇಮಕ ಮಾಡಿತ್ತು. ತರಬೇತಿ ಪಡೆದುಕೊಂಡ ವಿಶೇಷ ಪೊಲೀಸ್ ಅಧಿಕಾರಿಗಳು ಆದಿವಾಸಿಗಳ ನರಮೇಧ ನಡೆಸಿದ್ದರು. ಆದಿವಾಸಿಗಳ ತಲೆ ಕತ್ತರಿಸಿ ಹಳ್ಳಿಗಳ ಪ್ರಮುಖ ಸ್ಥಳಗಳಲ್ಲಿ ನೇತು ಹಾಕಲಾಗಿತ್ತು. ಗರ್ಭಿಣಿಯರ ಹೊಟ್ಟೆ ಸೀಳಿ ಭ್ರೂಣವನ್ನ ಕಿತ್ತೆಸೆಯುತ್ತಿದ್ದರು. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹಳ್ಳಿ ಹಳ್ಳಿಗಳನ್ನೇ ಸುಟ್ಟು ಬೂದಿ ಮಾಡಲಾಗುತ್ತಿತ್ತು. ಆದರೆ, ಹೊರ ಜಗತ್ತಿಗೆ ಇದ್ಯಾವುದು ಬೆಳಕಿಗೆ ಬರಲೇ ಇಲ್ಲ.

selva judumಸೆಲ್ವಾ ಜುಡುಂ ವಿರುದ್ಧ ಕಳೆದ 5 ವರ್ಷಗಳ ಕೆಳಗೆ “ಆದಿವಾಸಿ ಕಲಾ ಮಂಚ್” ತಂಡ, ದೇಶಾದ್ಯಂತ ಸೆಲ್ವಾ ಜುಡಂನ ಭೀಕರತೆಯನ್ನ ಹೇಳಿತ್ತು. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲೂ ಇದೇ ತಂಡ ಸತ್ಯಾಂಶಗಳನ್ನ ಹೊರಗೆಡವಿತ್ತು. ಅದೇ ತಂಡ ಕರ್ನಾಟಕಕ್ಕೂ ಭೇಟಿ ನೀಡಿ ಶಿವಮೊಗ್ಗದಲ್ಲೂ ಸೆಲ್ವಾ ಜುಡುಂನ ಹಿಂದಿರುವ ಅದೆಷ್ಟೋ ಕರಾಳ ಕೃತ್ಯಗಳ ಕಠೋರ ಸತ್ಯಗಳನ್ನ ಬಿಚ್ಚಿಟ್ಟಿತ್ತು. ಆಗ ಆ ತಂಡದ ನೇತೃತ್ವ ವಹಿಸಿದ್ದು ರಾಜ್​ಕುಮಾರ್ ಎನ್ನುವ ಪುಟ್ಟ ಪೋರ. ಶಿವಮೊಗ್ಗಕ್ಕೆ ಆತ ಬಂದಾಗ ಆತನಿಗಿನ್ನೂ 14 ವರ್ಷ. 5ನೇ ತರಗತಿಗೆ ಶರಣು ಹೊಡೆದು, ತನ್ನ ತಾಯ್ನೆಲದ ಮೇಲಿನ ದೌರ್ಜನ್ಯವನ್ನ ಕಂಡಿದ್ದ ಆತನ ಕಣ್ಣುಗಳು ಆಕ್ರೋಶಗೊಂಡಿದ್ದವು. ಈತ ಹೋದಲೆಲ್ಲಾ ಹೇಳುತ್ತಿದ್ದಿದ್ದು `ಹಮ್ ಆದಿವಾಸಿ ಹೈ…ಜಂಗಲ್ ಬಿ ಹಮಾರಾ ಹೈ..ಜಂಗಲ್ ಮೆ ಮಿಲ್ನಾಕಾ ಸಂಪತ್ತಿ ಬಿ ಹಮಾರಾ ಹೈ(ನಾವು ಆದಿವಾಸಿಗಳು….ಇಲ್ಲಿನ ಅರಣ್ಯವೂ ನಮ್ಮದೇ…ಅರಣ್ಯದಲ್ಲಿ ದೊರಕುವ ಸಂಪತ್ತೂ ಕೂಡ ನಮ್ಮದೇ). ಈತನ ಹಾವ ಭಾವಗಳನ್ನ ನೋಡಿದವರಿಗೆ ಈತನನ್ನ ಎಲ್ಲರೂ ಗದ್ದರ್‌ಗೆ ಹೋಲಿಸುತ್ತಿದ್ದರು. ಈತನ ರಟ್ಟೆಯಲ್ಲಿ ಅಂಥಾ ಕಸುವು ಇರಲಿಲ್ಲ….ಮೀಸೆಯೂ ಮೂಡಿರಲಿಲ್ಲ. ಆದರೂ ರಾಜ್ಯ ಪ್ರಭುತ್ವದ ವಿರುದ್ಧ ಸೆಟೆದು ನಿಂತಿದ್ದ. ಸೆಟೆದು ನಿಂತುಕೊಂಡೇ ಹೇಳಿದ್ದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ.

‘ಮೈ ಇದರ್ ದಮನ್ ಕಿ ಸಚ್ಚಾಯೇ ಬತಾನೆ ಆಯಾ ಹೂಂ. ಆಜ್ ಬಸ್ತಾರ್ ಮೇ ಜನತಾ ಕೆ ಊಪರ್ Saket_gaddarಥಂಢಾಕೆ ನಾಮ್ ಸೆ ಹತ್ಯಾರ್ ಚಲಾ ರಹೇ ಹೈ. ಔರ್ ಯೇ ಕಾರ್ವಾಯೇ ಶಾಂತಿ ಕೆ ಅಭಿಯಾನ್ ಕರ್ಕೆ ಸರ್ಕಾರ್ ಚಿಲ್ಲಾ ರಹೇ ಹೈ. ವೇಷ್ ಬದಲ್ಕರ್ ಶೈತಾನ್ ಆತೇ ಹೈ ಸಾಥ್ ಮೇ ಮಾಯಾ ಕಾ ಜಾಲ್ ಲಾತೇ ಹೈ'( ನಾನಿಲ್ಲಿ ನಮ್ಮನ್ನ ಹತ್ತಿಕ್ಕುತ್ತಿರುವ ಸತ್ಯಾಂಶಗಳನ್ನ ಹೇಳಲು ಬಂದಿರುವೆ. ಇವತ್ತು ಬಸ್ತಾರ್ ಜನರ ಮೇಲೆ ತಣ್ಣಗೆ ಆಯುಧಗಳನ್ನಿಡಿದು ನಮ್ಮನ್ನ ಹೊಡೆದುರುಳಿಸುತ್ತಿವೆ. ಇದನ್ನ ಶಾಂತಿ ಅಭಿಯಾನ ಎಂದು ಸರ್ಕಾರ ಕೂಗುತ್ತಿದೆ. ವೇಷ ಬದಲಿಸಿಕೊಂಡು ಸೈತಾನ ಬರುತ್ತಾನೆ ಮತ್ತು ಮಾಯೆಯ ಜಾಲ ಬೀಸುತ್ತಾನೆ.)

ಹಣೆಗೆ ಕೆಂಪು ಪಟ್ಟಿ, ಸೊಂಟಕ್ಕೆ ಹಸಿರು ಹೊದಿಕೆ ಸುತ್ತಿಕೊಂಡು ಹಾಡುತ್ತ ಹಾಡುತ್ತ…`ಸಾಥಿಯೋ ಚಲೇ ಚಲೋ…ದೂರ್ ನಹೀ…ಮುಕ್ತಾ ಕಾ ಮಕಾನ್…ಮುಕ್ತಿ ಗೀತ್ ಗಾತೆ ಕಹೋ….ಶಹೀದ್ ಹೋಂ…ಸಬ್ ಕೋ ಲಾಲ್ ಸಲಾಂ’ ಎಂದು ಹೇಳುವಾಗಲಂತೂ ಇಡೀ ಸಭಾಂಗಣ ಕೆಂಪಾಗಿತ್ತು.

ಮೊನ್ನೆ ಮೊನ್ನೆ ಮಾವೋವಾದಿಗಳು ಛತ್ತೀಸ್ಗಢದಲ್ಲಿ ನಡೆಸಿದ ಹತ್ಯೆಗಳೂ, ತಣ್ಣನೆಯ ಸಾಮೂಹಿಕ ಬೇಟೆಗೆ ಸಹಜವಾಗಿಯೇ ಪ್ರತಿಕಾರವಾಗಿತ್ತು. ಮಾವೋವಾದಿಗಳ ಪ್ರತಿಕಾರದ ಬಗೆ ಮತ್ತು ಪ್ರಭುತ್ವದ ಕಾರ್ಯಾಚರಣೆ ಎರಡೂ ಮನುಷ್ಯ ವಿರೋಧಿ. ಅಲ್ಲಿನ ಸರ್ಕಾರ ಆದಿವಾಸಿಗಳ ಏಳ್ಗೆಗೆ ಶಾಶ್ವತ ಯೋಜನೆಗಳನ್ನ ರೂಪಿಸಿ, ಅವರೂ ನಮ್ಮವರೇ ಎಂದು ಒಳಗೆ ಬಿಟ್ಟುಕೊಳ್ಳುವ ವಾತಾವರಣ ನಿರ್ಮಾಣ ಆಗಬೇಕು.

ನಿಜಕ್ಕೂ ಇಂಥ ಆಶಯ ಇನ್ನಾದರೂ ಈಡೇರಲಿ.

5 thoughts on “‘ತಣ್ಣನೆ ಸಾಮೂಹಿಕ ಬೇಟೆ’ ಹಿಂದಿನ ಕೆಲವು ಕರಾಳ ಸತ್ಯಗಳು

  1. Ravi

    ಹೊರಜಗತ್ತಿಗೆ ಕಾಣಿಸದ್ದು ನಮ್ಮ ಲೇಖಕರಿಗೆ ಹೇಗೆ ಕಾಣಿಸಿತು…ಕನಸಿನಲ್ಲಾ. ಯೋಚನೆಯಲ್ಲಾ…
    ಅಂದಹಾಗೆ ಹೊರಜಗತ್ತುಅ ಅಂದರೆ ಯಾವುದು…ಒಳಜಗತ್ತು ಲೇಖಕರ ಅಧೀನದ್ದೇ…?
    ————————————————————————————–

    ಹೀಗಾಗಿಯೇ, ಅಲ್ಲಿನ ಸರ್ಕಾರ ಆದಿವಾಸಿ ಸಂಸ್ಕೃತಿಯನ್ನ ಬುಡ ಸಮೇತ ಕೀಳಲಾರಂಭಿಸಿದೆ. ಇದರ ಒಂದು ಭಾಗವಾಗಿಯೇ ಸೆಲ್ವಾ ಜುಡಂ ರೂಪುಗೊಂಡಿರುವುದು. ಆದಿವಾಸಿಗಳ ವಿರೋಧಿಗಳನ್ನ ಕಲೆ ಹಾಕಿ, ತಿಂಗಳಿಗೆ 1,500 ರೂಪಾಯಿಗಳನ್ನ ನೀಡಿದ್ದ ಸರ್ಕಾರ ಅವರನ್ನೇ ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿ ನೇಮಕ ಮಾಡಿತ್ತು. ತರಬೇತಿ ಪಡೆದುಕೊಂಡ ವಿಶೇಷ ಪೊಲೀಸ್ ಅಧಿಕಾರಿಗಳು ಆದಿವಾಸಿಗಳ ನರಮೇಧ ನಡೆಸಿದ್ದರು. ಆದಿವಾಸಿಗಳ ತಲೆ ಕತ್ತರಿಸಿ ಹಳ್ಳಿಗಳ ಪ್ರಮುಖ ಸ್ಥಳಗಳಲ್ಲಿ ನೇತು ಹಾಕಲಾಗಿತ್ತು. ಗರ್ಭಿಣಿಯರ ಹೊಟ್ಟೆ ಸೀಳಿ ಭ್ರೂಣವನ್ನ ಕಿತ್ತೆಸೆಯುತ್ತಿದ್ದರು. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹಳ್ಳಿ ಹಳ್ಳಿಗಳನ್ನೇ ಸುಟ್ಟು ಬೂದಿ ಮಾಡಲಾಗುತ್ತಿತ್ತು. ಆದರೆ, ಹೊರ ಜಗತ್ತಿಗೆ ಇದ್ಯಾವುದು ಬೆಳಕಿಗೆ ಬರಲೇ ಇಲ್ಲ.

    Reply
  2. vasanthn

    The state would use this to nab the naxals. They don’t solve the problems of the advasi people. It is for them blessing in disguise to encounter naxals. Development what development.

    Reply
  3. Harish Kumar

    ಶಸ್ತ್ರಗಳಿಂದ ಮಾತನಾಡಿಸಿದರೆ ನಿಮಗೆ ಶಸ್ತ್ರಗಳಿಂದಲೇ ಮರುತ್ತರ ಸಿಗುತ್ತದೆ. ಎಲ್ಲಿ ತನಕ ಆಳುವ ವರ್ಗಗಳು ತಮ್ಮ ಅಭಿವೃದ್ದಿ ಚಿಂತನೆಗಳನ್ನು ಬದಲಾಯಿಸಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಈ ಸಂಘರ್ಷ ನಿಲ್ಲುವುದಿಲ್ಲ. ಪ್ರಭುತ್ವ ಎನ್ನುವುದು ಬರಿ ಆಳುವ ವರ್ಗ ಮತ್ತು ಬಂಡವಾಳಶಾಹಿಗಳ ಗುಂಪಲ್ಲ, ದೇಶದ ಪ್ರತಿಯೊಬ್ಬ ನಾಗರೀಕ ಪ್ರಭುತ್ವದಲ್ಲಿ ಸೇರಿರುತ್ತಾನೆ ಹಾಗು ಸಮಾನವಾದ ಹಕ್ಕಿರುತ್ತದೆ. ಅವರವರ ಹಕ್ಕನ್ನು ರಕ್ಷಿಸಿಕೊಳ್ಳುವ ಅಧಿಕಾರ ಎಲ್ಲರಿಗೂ ಇದೆ.

    Reply
  4. ಆನಿಲ ಬಾಸೂರ್

    ಹಿಂಸೆ ತಂತಾನೆ ಹುಟ್ಟಿಕೊಳ್ಳಲ್ಲ. ಅದು ಪ್ರತಿಕಾರದಿಂದ ಆಗುತ್ತೆ. ಪ್ರಭುತ್ವದ ದಮನಕಾರಿ ನೀತಿಯಿಂದ ನಕ್ಸಲಿಸಂ ಹುಟ್ಟಿಕೊಂಡಿದೆ. ತಮ್ಮ ಹಕ್ಕನ್ನು ಮಾನವೀಯತೆಯಿಂದ ರಕ್ಷಿಸಿಕೊಳ್ಳಲು ಆಗದಿದ್ದಲ್ಲಿ, ಹೀಗೆ ಹಿಂಸೆ ತಾಂಡವಾಡುತ್ತದೆ. ಇನ್ನಾದ್ರೂ ನಮ್ಮ ವ್ಯವಸ್ಥೆ ಬದಲಾಗಬೇಕು. ರಕ್ಷಿತ ಅರಣ್ಯದಲ್ಲಿ ರೇಸಾರ್ಟ್ ನಡೆಸಲು ಅವಕಾಶ ಕೊಡುವ ನಮ್ಮ ವ್ಯವಸ್ಥೆ, ಅಲ್ಲಿನ ಆದಿವಾಸಿಗಳನ್ನು ಕಾಡು ರಕ್ಷಣೆ ನೆಪದಲ್ಲಿ ಹೊರ ಹಾಕಲು ಮುಂದಾಗಿರುವುದು ಸರಿನಾ? ಇಂತಹ ಸ್ಥಿತಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಸಂಘರ್ಷಗಳು ನಡೆಯುತ್ತಲೆ ಇರ್ತವೆ. ​

    Reply

Leave a Reply to ಆನಿಲ ಬಾಸೂರ್ Cancel reply

Your email address will not be published. Required fields are marked *