1 ರೂ ದರದಲ್ಲಿ 30 ಕೆ.ಜಿ. ಅಕ್ಕಿಯ ನಿರ್ಧಾರದ ಹಿಂದಿರುವ ಕಟು ವಾಸ್ತವಗಳು

– ಬಿ.ಜಿ.ಗೋಪಾಲಕೃಷ್ಣ

ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ವ್ಯಾಪಕ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಯಾವುದೇ ನಿಯಮ, ಕಾಯ್ದೆ, ಕಾನೊನು ಅಥವಾ ನಿರ್ಧಾರಗಳು ಚರ್ಚೆಗೆ ಬಾರದೆ ಅಂಕಿತವಾಗಿಬಿಟ್ಟರೆ ಅದರ ಸ್ಯಾರಸ್ಯವೇ ಇರುವುದಿಲ್ಲ. ಒಂದು ಚರ್ಚೆ ಪ್ರಾರಂಭವಾಗಿ ಕೊನೆಗೊಳ್ಳುವುದರೊಳಗಾಗಿ ಅನೇಕ ಕಹಿ ವಾಸ್ತವಗಳು ಬೆಳಕಿಗೆ ಬರುತ್ತವೆ.

ನಾವು ಒಂದು ವಿಷಯವನ್ನು ಯಾವ ದೃಷ್ಟಿ ಕೋನದಲ್ಲಿ ನೋಡುತ್ತೇವೆ, ಯಾವ ಪರಿಸರದಲ್ಲಿ ಬೆಳೆಯುತ್ತಿದೇವೆ, ನಮ್ಮಲ್ಲಿರುವ ವಿಚಾರಧಾರೆಗಳು, ಇವು ನಮ್ಮ ಮುಂದಿರುವ ಚರ್ಚೆಯ ವಿಷಯಗಳ ಬಗ್ಗೆ ಒಂದು ನಿರ್ಧಾರಕ್ಕೆ ತಂದು ನಿಲ್ಲಿಸುತ್ತವೆ. ಉದಾಹರಣೆಗೆ 1. ಮದುವೆಯ ಸಂದರ್ಭದಲ್ಲಿ ಮಾಂಗಲ್ಯ ಧಾರಣೆಯ ಸಮಯದಲ್ಲಿ ಅಕ್ಷತೆಕಾಳಿನ ಹೆಸರಿನಲ್ಲಿ ಅಕ್ಕಿಯನ್ನು ಪ್ರೊಕ್ಷಣೆ ಮಾಡುವುದು (ಕೆಲವು ಕಡೆ ನಿಷಿದ್ದ) . 2. ನವ ವಧು ಅಕ್ಕಿಯನ್ನು ಕಾಲಿನಿಂದ ಒದ್ದು ಗಂಡನ ಮನೆ ಪ್ರವೇಶಿಸುವುದು 3. ಹೊಸ ಮನೆ ಪ್ರವೇಶಿಸುವ ಮೊದಲು ಹಾಲು ಉಕ್ಕಿಸುವುದು. ಪ್ರಸಕ್ತ ಸಮಯದಲ್ಲಿ ಊರ್ಜಿತ. ಆದರೆ ಸತಿ ಪದ್ದತಿ ಅಥವಾ ಕೆರೆಗೆಹಾರ ಪದ್ದತಿಯ ಹೆಸರಿನಲ್ಲಿ ಹೆಣ್ಣಿನ ಪ್ರಾಣಹಾನಿ ಪ್ರಸಕ್ತ ಸಂದರ್ಭದಲ್ಲಿ ಅನೂರ್ಜಿತ. ಅಂದರೆ ನಮ್ಮ ದೃಷ್ಟಿ ಕೋನ ಬದಲಾದಂತೆ. ನಮ್ಮ ನಿರ್ಧಾರಗಳೂ ಬದಲಾಗುತ್ತಾ ಸಾಗುತ್ತವೆ.

ಈಗ ನಮ್ಮ ಮುಂದಿರುವ ಚರ್ಚೆಯ ವಿಷಯವೆಂದರೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ. ಈ ಸರ್ಕಾರದ ಸದ್ಯದ ಕ್ರಮ ಸೋಮಾರಿಗಳ ಸೃಷ್ಟಿಗೆ riceಕಾರಣವಾಗುತ್ತದೆ ಎಂಬ ವಾದವನ್ನು ಮಂಡಿಸುತ್ತಾ ದೇಶದ ಬಗೆಗಿನ ಕಾಳಜಿ ತೊರುತ್ತಿರುವವರಿಗೆ ಕೃತಜ್ಞತೆಗಳು. ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ಭೃಹತ್ ಕಟ್ಟಡಗಳ ನಿರ್ಮಾಣ, ರಸ್ತೆ ಕಾಮಗಾರಿಗಳು , ದೂರಸಂಪರ್ಕ ಟವರ್‌ಗಳ ನಿರ್ಮಾಣ ಮಾಡುತ್ತಿರುವವರು ಹೊರರಾಜ್ಯದವರೇ ಹೆಚ್ಚು. ತಮಿಳುನಾಡಿನಲ್ಲಿ ಒಂದು ಕುಟುಂಬಕ್ಕೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಉಚಿತ, ಕೇರಳ ರಾಜ್ಯದಲ್ಲಿ 14 ಅವಶ್ಯಕ ವಸ್ತುಗಳನ್ನು ಅತೀಕಡಿಮೆ ಬೆಲೆಯಲ್ಲಿ ವಿತರಿಸಲಾಗುತ್ತಿದೆ. ಅವರುಗಳೆಲ್ಲಾ ಸೋಮಾರಿಗಳಾಗಿರುವರೇ?

ಕರ್ನಾಟಕ ರಾಜ್ಯದಲ್ಲಿ ಒಟ್ಟು 1.10 ಕೋಟಿ ಕುಟುಂಬಗಳಲ್ಲಿ ಸುಮಾರು 36 ಲಕ್ಷ ಕುಟುಂಬಗಳಿಗೆ ತಮ್ಮದೇ ಎಂಬ ಒಂದೇ ಒಂದು ಗುಂಟೆ ತುಂಡು ಜಮೀನು ಕೂಡ ಇಲ್ಲ. ಕೂಲಿ-ನಾಲಿ ಮಾಡಿ ಹೂಟ್ಟೆ ಹೊರೆಯ ಬೇಕು. ಇದು ನಮ್ಮ ಭಾರತ ದೇಶದ ಜಮೀನ್‌ದ್ದಾರಿ ಮತ್ತು ಪಾಳೇಗಾರಿ ಪದ್ದತಿಯ ಫಲ ಶೃತಿ. ವರ್ಷ ಪೂರ್ತಿ ಕೂಲಿ ಸಿಗುವುದೇ? ಅವರಿಗೇನು ವಿಶ್ರಾಂತಿ ಬೇಡವೇ? ಮಳೇ ಬಂದರೆ ಕೂಲಿ, ಕೂಲಿ ಮಾಡಿದರೆ ಊಟ. 2 ವರ್ಷಗಳಿಂದ ಮಳೆಯೇ ಕಾಣದ ಕರ್ನಾಟಕದಲ್ಲಿ ಕೂಲಿ ಮಾಡಿ ಬದುಕುವವರ ಬದುಕು ಏನಾಗಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 100 ದಿನ ಕೂಲಿ. ಕಾರ್ಮಿಕರಿಗೆ ನಿಗದಿಪಡಿಸಿದ ಕೆಲಸದ ಪರಿಮಾಣಕ್ಕೆ ಅನುಗುಣವಾಗಿ ದಿನಗೂಲಿ ರೂ 155. 18 ವರ್ಷ ಮೀರಿದ 70 ವರ್ಷದ ಒಳಗಿನವರಿಗೆ ಮಾತ್ರ. ಒಂದು ಕುಟುಂಬದಲ್ಲಿ ಸರಾಸರಿ ಒಬ್ಬ ದುಡಿಯುವವನಿದ್ದು ಐದು ತಿನ್ನುವ ಬಾಯಿಗಳಿದ್ದರೆ ಕೂಲಿ ಸಿಕ್ಕ ದಿನ ತಲಾ ಅದಾಯ 31 ರೂ . ಬಿಸಿಯೂಟ ನೌಕರರ ಸಂಬಳ 500-600 ರೂಪಾಯಿ. ಅಂಗನವಾಡಿ ನೌಕರರ ಸಂಬಳ 1300-1400 ರೂಪಾಯಿ. ಇವರುಗಳ ಬದುಕು ಏಷ್ಟು ಅಸಹನೀಯವಿರಬಹುದು!

ಈ ನಡುವೆ ಹೊಸ ಹೊಸ ಸಂಶೋಧನೆಗಳಿಂದ ಆವಿಷ್ಕಾರಗೊಂಡ ಯಂತ್ರೋಪಕರಣಗಳು ಉಳ್ಳವರ ಜೀವನವನ್ನು ಮತ್ತೊಟ್ಟು ಉತ್ತಮ ಪಡಿಸಿ, ಸುಲಬೀಕರಿಸುವುದರೊಂದಿಗೆ ಬಡವರ ಜೀವನ ಕಟ್ಟಿಕೊಡುವುದಿರಲಿ ಬದುಕನ್ನೇ ಮುರಾಬಟ್ಟೆಯನ್ನಾಗಿಸಿವೆಯನ್ನುವುದು ಕಟು ವಾಸ್ತವ.

ಸರ್ವೋಚ್ಛ ನ್ಯಾಯಾಲಯ ಹೇಳಿದಂತೆ ಸರ್ಕಾರಿ ಗೋದಾಮುಗಳಲ್ಲಿ 6.67 ಕೋಟಿ ಟನ್ನುಗಳಷ್ಟು ಕೊಳೆಯುತ್ತಿರುವ ಆಹಾರ ಧಾನ್ಯಗಳು. ಲಂಡನ್ ಮೂಲದ ಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 210 ಲಕ್ಷ ಟನ್ ಗೋಧಿ ಅನಗತ್ಯವಾಗಿ ಹಾಳಾಗುತ್ತಿದೆ. ಶೇ.40 ರಷ್ಟು ಹಣ್ಣು ಮತ್ತು ತರಕಾರಿಗಳು ಜನರನ್ನು ತಲುಪದೆ ಹಾಳಾಗುತ್ತಿವೆ. ಇಷ್ಟಿದ್ದರೂ ನೆನ್ನೆ ಮೊನ್ನೆ ಕರ್ನಾಟಕದಲ್ಲಿ ಹಸಿವಿವಿನಿಂದ ಸತ್ತ ವರದಿ ಓದಿದ್ದೇವೆ. ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂಖ್ಯೆಯ ಅಪೌಷ್ಠಿಕ ಜನರಿರುವ ದೇಶ ನಮ್ಮದು. ಅಷ್ಟಕ್ಕೂ ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿಯ ನಿರ್ಧಾರ ಶಾಶ್ವತ ಪರಿಹಾರವೇನಲ್ಲವಲ್ಲ.

ಅದು ಸರಿ, ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ ಸಿಕ್ಕರೆ ಸಾಕೇ? ಸಾಂಬಾರಿಗೆ ಬೇಕಾದ ಎಣ್ಣೆ, ಬೇಳೆ, ತರಕಾರಿ, ತೆಂಗು ಬೇಡವೆ? govt-school-kidsಅವರ ಆರೋಗ್ಯ, ವಿದ್ಯಾಭ್ಯಾಸ, ಮನೆ, ಬಟ್ಟೆ ಮತ್ತು ಇತರೆಗಳಿಗೇ ದುಡಿಯಲೇ ಬೇಕಲ್ಲವೇ? ಅಷ್ಟಕ್ಕೂ ಸರ್ಕಾರದ ಮೇಲೆ ಬೀಳುತ್ತಿರುವ ಹೊರೆಯೆಂದರೆ 24 ರೂಪಾಯಿಗೆ ಖರೀದಿಸಿ 1 ರೂಪಾಯಿ ನಲ್ಲಿ ವಿತರಿಸುವಾಗ 23 ರೂಪಾಯಿ ಹೊರೆ ಯಾಗುತ್ತದೆ ಎಂದರೆ 690 ರೂಪಾಯಿ ಪ್ರತಿ ಕುಟುಂಬಕ್ಕೆ. ಎ.ಪಿ.ಎಲ್ ಕಾರ್ಡ್ ಹೊಂದಿರುವವರಿಗೆ ವಿತರಿಸುತ್ತಿರುವ ಅನಿಲದ ಸಿಲಿಂಡರ್‌ಗೆ ಸರ್ಕಾರ  450 ರೂಗಳ ವರಗೆ ರಿಯಾಯಿತಿ ಕೊಡುತ್ತಿಲ್ಲವೆ?

ಕೆಲವೇ ಕೆಲವು ಉದ್ದಮಿಗಳ ಉದ್ಯಮಕ್ಕೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ನೀಡುತ್ತಿರುವ ಭೂಮಿ, ನೀರು, ವಿದ್ಯುತ್, ರಸ್ತೆ, ತೆರಿಗೆ ರಿಯಾಯಿತಿ, ಸಹಾಯ ದನಗಳು ಲಕ್ಷ ಲಕ್ಷ ಕೋಟಿ ರೂಪಾಯಿ ರೂಪದಲ್ಲಿರುತ್ತವೆ. ಇದು ದೊಡ್ಡವರ (ಕೆಲವೇ ಕೆಲವರ) ವಿಷಯ, ಅಕ್ಕಿ ಸಣ್ಣವರ (ಬಹು ಸಂಖ್ಯಾತರ) ವಿಷಯವಲ್ಲವೇ?

ಕಾರ್ಮಿಕರಿಗೆ ಪೌಷ್ಠಿಕ ಅಹಾರ ದೊರೆತರೆ ಸದೃಢಕಾಯರಾಗಿ ಕೆಲಸದಲ್ಲಿ ಹೆಚ್ಚು ಶ್ರಮ ವಹಿಸಿ ಕೆಲಸ ನಿರ್ವಹಿಸುವ ಸಾಧ್ಯತೆ ಇರಬಹುದಲ್ಲಾ. Working_in_the_rice_paddyಅನ್ಯ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವೆಲ್ಲಿ? ಕಾರ್ಮಿಕರ ಮದ್ಯ (ಸರಾಯಿ), ಬೆಟ್ಟಿಂಗ್ ನೆಡೆಯುತ್ತದೆ ಎಂದು ಇಸ್ಪೀಟ್ ಆಟ, ಕೋಳಿ ಜೂಜು. ನಿಷೇದಿಸಲಾಗಿದೆ. ಇನ್ನೆಲ್ಲಿಯ ಅನ್ಯ ಚಟುವಟಿಕೆ. ಅದೇ ಶ್ರಿಮಂತರ ಮದ್ಯ ನಿಷೇದಿಸಲಾಗಿದೆಯೇ? ಜಗತ್ ಜಾಹೀರಾಗಿ ಬೆಟ್ಟಿಂಗ್ ಮೂಲಕ ಆಟಗಾರರನ್ನು ಮಾರಾಟಮಾಡಿ, ಯುವ ಜನತೆಯನ್ನು ಬೆಟ್ಟಿಂಗ್ ಕರಾಳ ಬಲೆಗೆ ಕೆಡವಿ, ದೇಶವನ್ನೇ ಸೋಮಾರಿಗಳನ್ನಾಗಿಸಿ ವರ್ಷವಿಡೀ ರಾರಾಜಿಸುತ್ತಿರುವ ಕ್ರಿಕೆಟ್ ಏಷ್ಟೇ ಆದರೂ ಬುದ್ದಿವಂತ ಶ್ರಿಮಂತರ ಆಟವಲ್ಲವೇ?

ಒಂದು ರೂಪಾಯಿ ದರದಲ್ಲಿ 30ಕೆ.ಜಿ. ಅಕ್ಕಿ ದೊರೆತರೆ ಕಡಿಮೆ ಕೂಲಿಗೆ ಜನಸಿಗುವುದಿಲ್ಲಾ ಎಂಬುವುದು ಹಲವರ ಅಹವಾಲು. ಕಡಿಮೆ ಕೂಲಿಗೆ ಯಾಕೆ ದುಡಿಯಬೇಕಂದು ಬಯಸುತ್ತೀರಿ? ಹೌದು, ಯಾರು ಯಾರ ಮನೆಯಲ್ಲೇಕೆ ಕೂಲಿಗಳಾಗಿ ದುಡಿಯಬೇಕು? ನಾವೇನಾರೂ ಅದೇ ಕೂಲಿಗೆ ಅವರುಗಳ ಮನೆಯಲ್ಲಿ ಕೂಲಿಮಾಡುವ ಮನಸ್ಥಿತಿಯಲ್ಲಿದ್ದೇವ? ಬಡವರೂ ಸಹ ಸ್ವತಂತ್ರ ಭಾರತದಲ್ಲಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಸ್ವತಂತ್ರರಾಗಿ ಬಾಳಲಿಬಿಡಿ.

ಬಡತನವನ್ನು ತೊಲಗಿಸಲು ಸಹಕಾರ ಕೊಡಿ, ಬಡವರನಲ್ಲಾ! ಬಡವರಿಗೆ ಶಿಕ್ಷಣ, ಸಮಾಜಿಕ ನ್ಯಾಯ, ಆರ್ಥಿಕ ಸದೃಢತೆ, ಸಾಂಸ್ಕೃತಿಕ ನ್ಯಾಯ ಅರ್ಥವಾಗದ ಪರಿಭಾಷೆಗಳೇ ಆಗಿವೆ. ಕಡೇ ಪಕ್ಷ ಅವರ ಪರವಾಗಿ ಸರ್ಕಾರದ ನಿರ್ದಾರಗಳು ಬಂದಾಗ ಬೆಂಬಲಿಸಲು ಸಾಧ್ಯವಾಗದಿದ್ದಲ್ಲಿ ಮೌನವನ್ನಾದರೂ ವಹಿಸೋಣ.

9 thoughts on “1 ರೂ ದರದಲ್ಲಿ 30 ಕೆ.ಜಿ. ಅಕ್ಕಿಯ ನಿರ್ಧಾರದ ಹಿಂದಿರುವ ಕಟು ವಾಸ್ತವಗಳು

  1. Pavan

    ಗೋಪಾಲ್ ಕೃಷ್ಣ ಅವರೇ,
    ಬೆ0ಗಳೂರಿನ ಕಟ್ಟಡ‌ಗಳಲ್ಲಿ ಕೆಲಸ ಮಾಡುತ್ತಿರುವವರು ಬಿಹಾರ ಹಾಗೂ ಇತರ ರಾಜ್ಯಗಳ ಜನರೆ ಹೊರತು ತಮಿಳುನಾಡು ಅಥವ ಅ0ಧ್ರಪ್ರದೇಶದವರಲ್ಲ.ನಾವು ಹೇಳುತ್ತಿರುವುದು ಒ0ದು ರೂಪಾಯಿಗೆ ಕೊದೂವಾ ಕೆಟ್ಟ ಅಕ್ಕಿಯ ಬದಲು ಒಳ್ಳೆಯ ಅಕ್ಕಿ ಯನ್ನು 15 ರೂಪಾಯಿಗೆ ಕೊಡಲಿಯೆ0ದು. ನಮ್ಮ ಯುರಿಯನ್ ಉದಾಹರಣೆಯನ್ನು ತಗೆದುಕೊ0ಡ್ರಿಯಾ,ಒ0ದು ದಿನಕ್ಕೆ 200 ರೂ ಕೂಲಿ ಇದೆ ಮತ್ತು ಎರಡು ಊಟ.200 ರೂ‌ಗಳಲ್ಲಿ ಅವರು ಒ0ದು ತಿ0ಗಳಿಗೆ ಹಾಗಿ ಮಿಕ್ಕುವಷ್ಟು ಅಕ್ಕಿ ಸಕ್ಕರೆ ಮತ್ತು ಗೋಧಿ ಪಡಿತರ ಮೂಲಕ ದೊರೆಯುತ್ತದೆ. ಇನ್ಯಾನೋ0ದು ದಿನ ಕೂಲಿಗೆ ಹೋದರೆ ತಿ0ಗಳಿಗೆ ಬೇಕಾಗುವ ಇತರೇ(ಎಣ್ಣೆ ಇತರೆ) ದೊರೆಯುತ್ತದೆ.ತಿ0ಗಳಿಗೆ ಎರಡು ದಿನ ಕೂಲಿ ಹೋದರೆ ಸಾಕು.ಮಿಕ್ಕಿದ ದಿನ ಅವರಿಗೆ ಎಣ್ಣೆ(ಮದ್ಯ) ಬೇಕಾದರೆ ಕೂಲಿಗೆ ಹೋಗುತ್ತಾರೆ ಇಲ್ಲದಿದ್ದರೆ ಇಲ್ಲ.ಈಗ ಹೇಳಿ 1 ರೂಗೆ 1 ಕೆಜಿ ಅಕ್ಕಿ ವಿತರಣೆ ಜನರನ್ನು ಸೋಮಾರಿಗಳನ್ನು ಮಾಡುತ್ತಿದೆಯೊ ಇಲ್ಲವೋ ಎ0ದು…

    Reply
    1. shakthi

      pavan you are telling 100% true. Mr GOPALAKRISHNA dont write to please one particular class here . While pleasing them you people are spoiling them . Right from the food, education , home and employment everything is free for them .In this fight between lower and upper class actually lower middle class who constitute around 25% here are dying here everyday. They have to work for other 75 % in that 50% are lower class and 25% are upper class .That is why India is not getting developed . If 100% of people do some or the other productive work also India will not be in this situation.

      Ondu gaade heltini anna keli yellarige gottirode adre arta madkolalla aste

      “”koothu thinnonige kudike honnu saaladu””

      Please change your views and dont write like this in future Mr Gopalakrishna.

      Reply
      1. gopala krishna ,Hassan.

        ನಮ್ಮ Engineering Collage ಉಪನ್ಯಾಸಕರ ಸಂಬಳ ರೂ 50,000/- ರಿಂದ 1,00,000/- ದವರೆಗಿದೆ ಅವರುಗಳು 4 ಗೋಡೆಯ ನಡುವೆ ಅವರ ಕೆಲಸ . ಅನುಭವಕ್ಕೆ ತಕ್ಕಂತೆ increment . ಅವರುಗಳು ಕಷ್ಟಪಟ್ಟು ಓದಿದ್ದಾರೆ ಎಂದರೆ . ಶ್ರಮವನ್ನು ಅಳೆಯುವ ಮೂಲಮಾನವೇ? ಈ ದೇಶದಲ್ಲಿರುವ ಭೂಮಿಯನ್ನು ವ್ಯವಸಾಯ ಮಾಡುವವರಿಗೆ ಸಮನಾಗಿ ಹಚ್ಚಿಬಿಡಿ. 1000 ಅಥವಾ 2000 ಎಕರೆ ಜಮೀನು ಅವರುಗಳಿಗೆ ಬಂದಿರುವುದು ಪಾಳೇಗಾರಿ ಮತ್ತು ಜಮೀನ್ದಾರಿ ಪದ್ದತಿಯಿಂದ ಎಂಬುದು ಏಲ್ಲರಿಗು ತಿಳಿದಿರುವ ವಿಷಯವಲ್ಲಾವೆ? ಈ ದೇಶದ ಪ್ರಕೃತಿ ಸಂಪತ್ತು ಪ್ರತಿಯೊಬ್ಬರಿಗೂ ಸಮನಾಗಿ ಪಾಲು ಸಿಗಬೇಕು….
        ಒಂದು ರೂಪಾಯಿ ದರದಲ್ಲಿ 30ಕೆ.ಜಿ. ಅಕ್ಕಿ ದೊರೆತರೆ ಕಡಿಮೆ ಕೂಲಿಗೆ ಜನಸಿಗುವುದಿಲ್ಲಾ ಎಂಬುವುದು ತಮ್ಮ ಅಹವಾಲು. ಕಡಿಮೆ ಕೂಲಿಗೆ ಯಾಕೆ ದುಡಿಯಬೇಕಂದು ಬಯಸುತ್ತೀರಿ? ಹೌದು, ಯಾರು ಯಾರ ಮನೆಯಲ್ಲೇಕೆ ಕೂಲಿಗಳಾಗಿ ದುಡಿಯಬೇಕು? ನಾವೇನಾರೂ ಅದೇ ಕೂಲಿಗೆ ಅವರುಗಳ ಮನೆಯಲ್ಲಿ ಕೂಲಿಮಾಡುವ ಮನಸ್ಥಿತಿಯಲ್ಲಿದ್ದೇವ? ಬಡವರೂ ಸಹ ಸ್ವತಂತ್ರ ಭಾರತದಲ್ಲಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಸ್ವತಂತ್ರರಾಗಿ ಬಾಳಲಿಬಿಡಿ.
        ಅಹಾರ ದೊರೆತರೆ ಸಧೃಡರಾಗಿ , ಬುದ್ದಿ ಶಾಲಿಗಳಾಗುತ್ತಾರೆ ಎಂಬುದು ಜೀವಶಾಸ್ತ್ರ ತಿಳಿದಿದೆ. ಬುದ್ದಿ ಶಾಲಿಗಳಾದರೆ ದೊಡ್ಡವರ ಕುತಂತ್ರ ತಿಳಿಯತ್ತದೆ ಎಂದು ಅವರಿಗೆ ಅಹಾರ ಸಿಗಬಾರದೆಂದು ಆಶಿಸಬಹುದೇ?

        Reply
  2. madhu

    ಪವನ್‌ರವರೇ ಹಾಗೂ ಶಕ್ತಿ ಯವರೇ, ನಿಮ್ಮ ಮಾತಿನ ತಾತ್ಪರ್ಯ ಹೇಗಿದೆಯೆಂದರೆ ಭೂಮಿ ಮೇಲೆ ಮನುಷ್ಯ ಜಾತಿ ಇರುವವರೆಗೂ ಆಳು-ಅರಸ ಸಂಸ್ಕೃತಿ ಇರಲೇಬೇಕು ಎನ್ನುವಂತಿದೆ. ಹಸಿದವನಿಗೆ ತಿನ್ನಲು ಯೋಗ್ಯವಾದ ಅಕ್ಕಿ ಕೊಟ್ಟರೆ ಸಾಕು, 15 ರೂನ ಅಕ್ಕಿಯೇ ಬೇಕೆಂದಿಲ್ಲ. ನನ್ನ ಪ್ರಕಾರ, ಸರ್ಕಾರ ಹಸಿದವನಿಗೆ ತಿನ್ನಲು ಆಗದಂಥ ಅಕ್ಕಿಯನ್ನೆನೊ ಕೊಡುವುದಿಲ್ಲ. ನೀವು ಹೇಳುತ್ತಿರುವುದು ಕೂಲಿಯವನು ತಾನು ದುಡಿಯುವ ದುಡ್ಡು ಬರೀ ತಿನ್ನಲಿಕ್ಕೆ ಸಾಕಾಗುವಷ್ಟಿರಬೇಕು ಅನ್ನುವಂತಿದೆ. ಮೂರು ದಿನದ ಕೂಲಿಯಿಂದ ತಾನು ತಿಂಗಳು ಪೂರ್ತಿ ತಿನ್ನುವಂತಾದರೆ ಒಳ್ಳೆಯದೇ ಅಲ್ಲವೇ? ಮಿಕ್ಕ ದಿನಗಳಲ್ಲಿ ದುಡಿದ ಹಣದಿಂದ ಮಕ್ಕಳಿಗೆ ಒಳ್ಳೆ ವಿಧ್ಯಬ್ಯಾಸ ಮಾಡಿಸಬಹುದು, ಒಳ್ಳೆ ಮನೆ ಕಟ್ಟಬಹುದು, ತೀರ್ಥ ಯಾತ್ರೆ ಮಾಡಬಹುದು, ಮೋಟರ್ ಗಾಡಿ ಕೊಳ್ಳಬಹುದು, ಒಳ್ಳೆ ಬಟ್ಟೆ ಧರಿಸಬಹುದು, ಸೋಪು ಹಾಕಿ ಮುಖ ತೊಳೆದುಕೊಳ್ಳಬಹುದು.. ಇವೆಲ್ಲ ಸವಲತ್ತು ನಮಗೆ ಮಾತ್ರ ಸೀಮಿತವಾಗಬೇಕೆ? ದೇಶದ ಎಲ್ಲರೋ ಒಳ್ಳೆ ಜೀವನ ನೆಡೆಸುವಂತಾಗುವುದಲ್ಲವೇ? ಇನ್ನೊಂದು ವಿಚಾರವೆಂದರೆ, ಗೋದಾಮಿನಲ್ಲಿ ಇಲಿ ಹೆಗ್ಗಣಗಳ ಪಾಲಾಗುತ್ತಿರುವ ಅಕ್ಕಿ ಗೋದಿ ಬಡವರಾದರೂ ತಿನ್ನಲಿ ಬಿಡಿ, ನೀವಂತೂ ಅದನ್ನು ತಿನ್ನುವುದಿಲ್ಲ, ಯಾಕೆಂದರೆ ಅದು 15 ರೂ ನಷ್ಟು ಒಳ್ಳೆ ಅಕ್ಕಿಯಲ್ಲವಲ್ಲ…! ಗ್ರಾಮೀಣ ಉಧ್ಯೋಗ ಖಾತ್ರಿ ಯೋಜನೆಗೆ ನನ್ನ ವಿರೋಧವೂ ಇದೆ. ಯಾಕೆಂದರೆ ಅದು ಅರ್ಥವಿಲ್ಲದ ಕೆಲಸಕ್ಕೆ ಸುಮ್ಮನೆ ಹಣ ಹಂಚಿದ ಹಾಗೆ. ಆದರೆ, ನೇರ ಹೊಟ್ಟೆಗೆ ಬೀಳುವ ಅನ್ನದ ಮೇಲೇಕೆ ಇಷ್ಟೊಂದು ವ್ಯಾಗ್ಯುದ್ಧ? ಅಂತಾರಾಷ್ಟ್ರೀಯ ಕ್ರೀಡೆಗಲ್ಲಿ ನಮ್ಮ ದೇಶದ ಸಾಧನೆ ಅಷ್ಟಕ್ಕಷ್ಟೇ, ಯಾಕೆಂದರೆ ಹೊಟ್ಟೆಗೇ ಇಲ್ಲದವರು ಇನ್ನೂ ಬೇರೆ ದೇಶದ ಧಡೂತಿ ಜನರೆದುರು ಹೋಆರಾಡಿ ಗೆಲ್ಲು ಅಂದರೆ ಆದೀತೆ?

    ನಮ್ಮಲ್ಲ್ಲಿ ಮೊದಲಿನಿದಲೂ ಆಳು ಅರಸನ ಸಂಸ್ಕೃತಿ ಇರುವುದರಿಂದ, ಇವತ್ತು ಕೂಲಿಗೆ ಕರೆದ ತಕ್ಷಣ, ಕೂಲಿಯವನು ಬರೋಲ್ಲ ವೆಂದರೆ, ಅಥವಾ ಹೆಚ್ಚು ಹಣ ಕೇಳಿದರೆ, ಕರೆದವನ ಮೈ ಉರಿಯುವುದು ಅರ್ಥ ಮಾಡಿಕೊಳ್ಳುವಂಥದೆ. ಆದರೆ ಆ ಸ್ವಾತಂತ್ರ್ಯ ಅವನಿಗಿರುವ ಹಕ್ಕು. ಅರಸ ಕರೆದ ತಕ್ಷಣ ಆಳು ಓಡೋಡಿ ಬಂದಂತೆ ಬಯಸುವುದು ತಪ್ಪು. ನೆನಪಿರಲಿ, ನಮ್ಮ ದೇಶದ 90 ಭಾಗದ ಮೇಲ್ವರ್ಗದವರು ಮೊದಲು ಬಡವರಾಗಿಯೂ ಆಮೇಲೆ ಒಂದಲ್ಲ ಒಂದು ರೀತಿ ಸರ್ಕಾರದ ಹಾಗೂ ಸಮಾಜದ ಸಹಾಯ ಪಡೆದೆ ಮೇಲೆ ಬಂದಿದ್ದಾರೆ. ಅದು ಅವರೇ ಆಗಿರಬಹುದು ಅಥವಾ ಅವರ ತಾತ ಮುತ್ತಾತ ರಾಗಿರಬಹುದು.

    ಒನ್ನೋದು ವಿಚಾರ. ಸರ್ಕಾರದ ಈ ಎಲ್ಲ ಅಗತ್ಯತೆಗಳ ಪೂರೈಕೆಯಿಂದ, ಮುಂದೆ ಮೀಸಲಾತಿ ವಿರೋಧಕ್ಕೆ ಒಂದು ಶಕ್ಕ್ತಿ ಬರುತ್ತದೆ. ಸಮಾನ ಸವಲತ್ತುಗಳಿದ್ದರಲ್ಲವೇ ಸಮಾನ ಅವಕಾಶಗಳಿಗೆ ಹೋರಾಡುವುದಕ್ಕೆ ಧೈರ್ಯ ಬರುವುದು?

    ಇದೆಲ್ಲವೂ ಅರಗಿಸಿಕೊಳ್ಳುವುದಕ್ಕೆ ಕೆಲ ಕಾಲ ಬೇಕಾಗುವುದು, ಆದರೆ ಇದು ಮುಂದೆ ಸಮಾಜದ ಸಮತೋಲನಕ್ಕೆ ಸಹಾಯಕಾರಿಯಾಗುವುದು.

    Reply
  3. Pavan

    Hi Madhu,

    If that would be the case today we would not see the poor people in the India.. I do not think u r from village, if that is the case u would have see and understood by this time what people do if they get extra money…

    Reply
    1. madhu

      I understand what you are talking about. Of all those people, some drink, majority use it wise… the govt used to give 60k to build each house.. it was not at all sufficient to even build basic house.. so poor people had to earn more and use it to build house.. now that’s what i am talking about. Since our country is so big, govt can not monitor each and everyone with a stick if anyone is using its facility to drink or to the betterment of their life. Remember, even in a family, that may include a ruthless drunkard, at least the wife will be responsible.. she will try hard to save money and use it for some good purpose.. 10 years back, the dalit women( I am not dalit) in my village used to come to borewell to collect water, when i see them, most of them didn’t had saree to wear..even whatever they were wearing, used to be torn here and there. Today, I see gold on them. They can afford to eat chicken in festivals(those times, some ‘lower’ caste people used to come to every house to collect non veg food during festivals, now that’s not happening).The kids who used to work as labors are now grown up but their kids are into schools.

      This is a good sign. These changes happened because of the govt’s constant effort to give social justice. But the alarming news is that there is a new section of people forced to move to below poverty line, due to globalization, many had to quit agriculture, move to urban, work hard, earn less, lose health, and move back to same old village. They have no work to do, no health to work and no money to survive.

      We are living in a co-dependent society. Those who climb up the ladder has to lend a supporting hand to those who can’t. Its a cycle, tomorrow it could be you in their position. If you are one of those in the private sector, imagine you lose your job, your age and health and the chained events in the society force you to be helpless. I am sure you would appreciate little help from the govt.

      As a matter of fact, I did gross calculation, with the 30kg policy, poor people are not saving in thousands that they can use it to drink and spill over. Eearlier, they are speding around 150rs per month for rice, now they have to spend 30rs for the same. I don’t think the 130rs difference per month will make anyone lazy. Today’s world is highly competitive. Every one is racing, poor and rich. The negatives with this policy doesn’t justify the positives coming out.

      Reply
  4. Pavan

    Hi Madhu,

    I think you didnt understand my point. I am telling people are not working only because they are getting rice and everything for very cheap and why should they work. If they build house and all with there savings it will be good only, but that is not a case. they are spending time in front of temples or sleeping in home.

    Reply
    1. madhu

      :)…. the ultra-poor people work only for ‘food’, because they have no other hope. Rest all work for other luxuries also, as they can afford to earn food easily. Its understandable that the ‘olds’ don’t work and spend time sleeping in home or temples etc. Think about the upcoming generations, they still have life and hopes. I don’t think this young generation also sleep.

      Policies like these, give new hope for ultra-poor people, to think beyond food and an encouragement for rest poor people to work more and come above poverty line. (there is a catch, it will be govt responsible to scrutinize all these and remove from BPL list once they are better off.)

      Totally agree that some sleep.. but have you ever seen that the whole village sleeping??

      Reply
  5. Pavan

    Hello Madhu,

    Go and see the villages first and ask some people then you will get to the fact of all these bogus projects.. people are selling the rice also which they get from govt..

    Reply

Leave a Reply

Your email address will not be published. Required fields are marked *