ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

– ಬಿ.ಶ್ರೀಪಾದ ಭಟ್

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನಾತ್ಮಕ ಬದಲಾವಣೆಗಳಿಗಾಗಿ ಸದಾ ತುಡಿಯುವ, ಹಂಬಲಿಸುವ ಚಿಂತನೆಗಳು ಮತ್ತು ಅದನ್ನು ಕಾರ್ಯಗತಗೊಳಿಸುವ ಕ್ರಿಯಾತ್ಮಕ ರೂಪರೇಷೆಗಳು, indiaಮತ್ತು ತಾನು ರೂಪಿಸುವ ನಿಯಮಾವಳಿಗಳಿಗೆ ಉತ್ತರದಾಯಿತ್ವ ಇವೆಲ್ಲವನ್ನು ಕಳೆದುಕೊಂಡು ಅತ್ಯಂತ ಕ್ಷುಲ್ಲಕ ಮತ್ತು ಹೇಸಿಗೆ ಹುಟ್ಟಿಸುವ, ಲಜ್ಜೆಗೆಟ್ಟ ಸ್ಥಿತಿಗೆ ಬಂದು ತಲುಪಿದ್ದರೆ ನಮ್ಮ ಮಾಧ್ಯಮಗಳು ಸದಾ ಧಗಧಗಿಸುವ ತಮ್ಮೊಡಲೊಳಗಿನ ನೈತಿಕತೆ, ಅಂತರ್ಗತವಾಗಿ ಪ್ರವಹಿಸುವ ನ್ಯಾಯವಂತಿಕೆ, ಸಾಮಾಜಿಕ ಮೌಲ್ಯಗಳು ಮತ್ತು ಮುಖ್ಯವಾಗಿ ಮಾನವೀಯತೆಯ, ಸಾಮಾಜಿಕ ನ್ಯಾಯದ ತತ್ವಜ್ಞಾನ ಇವೆಲ್ಲವನ್ನೂ ಮರೆತು, ಅವಕ್ಕೆಲ್ಲಾ ತಿಲಾಂಜಲಿ ನೀಡಿ, ಬದಲಾಗಿ ಅಳುವ ವ್ಯವಸ್ಥೆಯನ್ನು, ಪ್ರಭುತ್ವವನ್ನು ತಮಗೆ ಬೇಕೆಂದಹಾಗೆ ಅಲ್ಲಾಡಿಸುತ್ತೇವೆ, ಬೇಕಿದ್ದರೆ ಬೀಳಿಸುತ್ತೇವೆ ಸಹ ಎಂಬಂತಹ ಮಿತಿಮೀರಿದ ಭಂಡತನದಿಂದಾಗಿ ಇಂದು ತಲುಪಿರುವ ಕೆಳಮಟ್ಟದ ಅನೈತಿಕತೆ ಮತ್ತು ತಮ್ಮೊಂದಿಗೆ ಇಡೀ ವ್ಯವಸ್ಥೆಯ ಶುದ್ಧಾಂಗ ಲವಲವಿಕೆಯನ್ನೇ ಒಂದು ಮಟ್ಟದಲ್ಲಿ ನಿರ್ಜೀವಗೊಳಿಸಿರುವುದು, ಇವೆರೆಡೂ ಒಂದಕ್ಕೊಂದು ತಳಕು ಹಾಕಿಕೊಂಡು ಇಂದು ಇಡೀ ದೇಶವನ್ನೇ ನಗೆಪಾಟಲಿಗೀಡಾಗಿಸಿವೆ. ಇಂಡಿಯಾಗೆ ಈ ರಾಜಕೀಯ ಪಕ್ಷಗಳು ಮತ್ತು ಬಹುಪಾಲು ಮಾಧ್ಯಮಗಳು ಅಂಟಿಸಿರುವ ಕಳಂಕಗಳು ವಿವಿಧ ಸ್ವರೂಪಗಳಲ್ಲಿವೆ. ಒಂದನ್ನು ಬಿಡಿಸಹೊರಟರೆ ಮತ್ತೊಂದಕ್ಕೆ ತಗಲಿಕೊಳ್ಳುತ್ತೇವೆ ಮತ್ತು ಈ ನಿರಂತರ ಅರಾಜಕತೆಗೆ ಭಾಗಿಗಳಾಗುತ್ತಲೇ ಸಾಕ್ಷಿಗಳಾಗುತ್ತೇವೆ. ಸ್ವತಂತ್ರ ಭಾರತದಲ್ಲಿ ಭಾರತೀಯರು ಈ ಮಟ್ಟದಲ್ಲಿ ಮಾನಸಿಕ ದಾಸ್ಯಕ್ಕೆ ಬಲಿಯಾಗಿದ್ದು ಇದೇ ಮೊದಲೇನೊ.

ಬಿಜೆಪಿ ತನ್ನ ವಾರ್ಷಿಕ ಕಾರ್ಯಕಾರಣಿ ಸಭೆಯನ್ನು ನಡೆಸುತ್ತದೆ. ಇದರಲ್ಲಿ ವಿಶೇಷವೇನಿದೆ? ಆದರೆ ಬಹುಪಾಲು ಮಾಧ್ಯಮಗಳಿಗೆ Advaniಅದು ಮೊದಲ ಪುಟದ ಸುದ್ದಿ. ಬ್ರೇಕಿಂಗ್ ನ್ಯೂಸ್. ಮ್ಯಾಜಿಕ್ ಮೊಮೆಂಟ್. ಇದನ್ನು ಮತ್ತು ಈ ತರಹದ ಅನೇಕ ಕ್ಷುಲ್ಲಕ ವಿದ್ಯಾಮಾನಗಳನ್ನು ಒಂದು ಬಗೆಯ ರಿಯಲ್ ಎಸ್ಟೇಟ್ ಧಂಧೆಯ ಮಟ್ಟಕ್ಕೆ ತಂದು ನಿಲ್ಲಿಸಿದ್ದು ನಮ್ಮ ಬಹುಪಾಲು ಕಳಂಕಿತ ಮಾಧ್ಯಮಗಳು. ಈ ರಿಯಲ್ ಎಸ್ಟೇಟ್ ಧಂಧೆಯಲ್ಲಿ ಬಹುಪಾಲು ಕಳಂಕಿತ ಮಾಧ್ಯಮಗಳು ಉತ್ಸಾಹಿ ಬ್ರೋಕರ್‌ನ ಪಾತ್ರ ನಿರ್ವಹಿಸಿದ್ದರೆ ಆ ಬದಿಯಲ್ಲಿ ರಾಜಕೀಯ ಪಕ್ಷಗಳು ಭ್ರಷ್ಟ ಭೂಮಾಲೀಕನ ಪಾತ್ರ ನಿರ್ವಹಿಸಿದ್ದರೆ ಇಲ್ಲಿನ ಜನತೆ ಎಂದಿನಂತೆ ಮೋಸಹೋದ ಖರೀದುದಾರರು. ಇಂದಿನ ಸಂದರ್ಭದಲ್ಲಿ ಮತ್ತು ಹಿಂದೆ ಅನೇಕ ಸಂದರ್ಭಗಳಲ್ಲಿ ಮಾಧ್ಯಮಗಳ ಈ ಗತಿಗೆಟ್ಟ ಹಪಾಹಪಿತನವನ್ನು ತನ್ನ ಅನುಕೂಲಕ್ಕೆ, ತನ್ನ ಮೇಲ್ಮುಖ ಚಲನೆಗೆ ಅದ್ಭುತವಾಗಿ ಬಳಸಿಕೊಂಡಿದ್ದು ಫ್ಯಾಸಿಸ್ಟ್ ರಾಜಕಾರಣಿ ನರೇಂದ್ರ ಮೋದಿ. ಪರಸ್ಪರ ದೈವತ್ವತ್ತಕ್ಕೇರಿಸಿಕೊಳ್ಳುವ ಇವರಿಬ್ಬರ ಕಣ್ಣಾಮುಚ್ಚಾಲೆಯಾಟದ ವಿಷಚಕ್ರದ ಸುಳಿಯಲ್ಲಿ ಸಿಲುಕಿಕೊಂಡ ಇಂಡಿಯಾದ ನಾಗರಿಕರು ತಾವಿದನ್ನು ಆನಂದಿಸುತ್ತಿದ್ದೇವೆಯೋ ಅಥವಾ ತಿರಸ್ಕರಿಸುತ್ತಿದ್ದೇವೆಯೋ ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿ ಮಾನಸಿಕ ದಾಸ್ಯಕ್ಕೆ ಬಲಿಯಾಗುತ್ತಿರುವುದು ಮಾತ್ರ ದುರಂತವೇ ಸರಿ. ಅದರಲ್ಲಿಯೂ ವಿದ್ಯಾವಂತ ಮಧ್ಯಮ, ಮೇಲ್ಮಧ್ಯಮ ವರ್ಗ ಈ ಮಟ್ಟದಲ್ಲಿ ಆತ್ಮವಂಚನೆಗೆ ಗುರಿಯಾಗಿದ್ದು ಇವರ ಕುರಿತಾದ ಪ್ರೀತಿ, ಗೌರವಗಳು ಕುಂಠಿತಗೊಳ್ಳುತ್ತಿವೆ.

ಎಂಬತ್ತು ವರ್ಷಗಳ ಹಿಂದೆಯೇ ಯುರೋಪಿಯನ್ ರಾಷ್ಟ್ರಗಳಲ್ಲಿ ಫ್ಯಾಸಿಸ್ಟರು ನೇರವಾಗಿಯೇ ತಮ್ಮ ಫ್ಯಾಸಿಸ್ಟ್ ಧೋರಣೆಗಳನ್ನು, ಸರ್ವಾಧಿಕಾರ ನೀತಿಯನ್ನು ಬಳಸಿಕೊಂಡು ಅಧಿಕಾರವನ್ನು ವಹಿಸಿಕೊಂಡಿದ್ದೂ ಆಯ್ತು. ಅಲ್ಪಕಾಲಾವಧಿಯ ಸರ್ವಾಧಿಕಾರದ ಆಡಳಿತದ ನಂತರ ತಿರಸ್ಕಾರಕ್ಕೆ ಗುರಿಯಾಗಿ ಅಷ್ಟೇ ಕ್ಷ್ರಿಪ ಗತಿಯಲ್ಲಿ ನಾಶವಾಗಿ, ಕಣ್ಮೆಯಾಗಿದ್ದೂ ಆಯ್ತು. ಆದರೆ ಇಂಡಿಯಾದ ಸಂದರ್ಭದಲ್ಲಿ ತಾನು ಚಾಲ್ತಿಗೆ ಬಂದು ಎಂಬತ್ತು ವರ್ಷಗಳಾದರೂ ಇಲ್ಲಿನ ಫ್ಯಾಸಿಸ್ಟ್ ಪಕ್ಷ ಆರೆಸಸ್‌ಗೆ ತಮ್ಮ ಮತೀಯವಾದಿ ಸಿದ್ಧಾಂತಗಳನ್ನು ಆಧರಿಸಿ ನೇರವಾಗಿ ಅಧಿಕಾರವನ್ನು ಕಬಳಿಸಲು ಇಂದಿಗೂ ಸಾಧ್ಯವಾಗಿಲ್ಲ. ಕೇವಲ ಆರೆಸಸ್ ಮಾತ್ರವಲ್ಲ ಇತರೇ ಧರ್ಮಗಳ ಎಲ್ಲಾ ಬಗೆಯ ಮೂಲಭೂತವಾದಿ ಫ್ಯಾಸಿಸ್ಟರ ವಿಷಯದಲ್ಲಿಯೂ ಸಹ ಈ ಮಾತು ಸತ್ಯ. ಎಲ್ಲಾ ಧರ್ಮಗಳ ಫ್ಯಾಸಿಸ್ಟರು ನೇರವಾಗಿ ಅಧಿಕಾರ ವಹಿಸಿಕೊಳ್ಳುವ ಎಲ್ಲಾ ದಾರಿಗಳನ್ನೂ ನಿರಾಕರಿಸಿದ್ದಾನೆ ಇಂಡಿಯಾದ ಪ್ರಜೆ. ಇಂದಿಗೂ ಫ್ಯಾಸಿಸ್ಟರ ಕೈಗೆ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಗೊಳಿಸಿಲ್ಲ ಇಲ್ಲಿನ ಪ್ರಜ್ಞಾವಂತ ನಾಗರಿಕ. ಇದನ್ನು ಸೋಷಿಯಲಾಜಿ ಮತ್ತು ಅಂಥ್ರೋಪಾಲಜಿ ನೆಲೆಯಲ್ಲಿ ವಿಶ್ಲೇಷಿಸಬೇಕಾದಂತಹ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳು ಮತ್ತು ಬಹುಪಾಲು ಮಾಧ್ಯಮಗಳು ಮಾಡುತ್ತಿರುವುದಾದರೂ ಏನು? ಭಜನೆ !!! ಮೋದಿ ಭಜನೆ!!! ಲಜ್ಜಗೆಟ್ಟ ಈ ಜನಗಳು ಫ್ಯಾಸಿಸ್ಟರ ವಿವಿಧ ಆಯಾಮಗಳನ್ನು, ಅವುಗಳು ರೂಪುಗೊಳಿಸುತ್ತಿರುವ ಏಕರೂಪಿ ವಿನ್ಯಾಸಗಳನ್ನು, ಅವುಗಳ ದಮನೀಯತೆಯ ನಡೆಗಳನ್ನು ಪದರುಪದರಾಗಿ ಬಿಡಿಸಿಡುವುದರ ಬದಲಾಗಿ ಈ ಗುಂಪು ಹಸಿಹಸಿಯಾಗಿ ಸತ್ಯದರ್ಶನದ ಹೆಸರಿನಲ್ಲಿ ಇಲ್ಲಿನ ಜನತೆಯ ಮೇಲೆ ಬೌದ್ಧಿಕ ಡಿಕ್ಟೇಟರ್‌ಶಿಪ್ ನಡೆಸುತ್ತಿದ್ದಾರೆ. ಇಡೀ ವ್ಯವಸ್ಥೆಯನ್ನೇ ಋಣಾತ್ಮಕತೆಯ ದಿಕ್ಕಿಗೆ ದಾರಿ ತಪ್ಪಿಸಿದ ಅಪಕೀರ್ತಿ ಈ ಜನಗಳಿಗೇ ಸಲ್ಲಬೇಕು.

ಸಧ್ಯಕ್ಕೆ ಸುದ್ದಿಯಲ್ಲಿರುವ ಸಂಘಪರಿವಾರವು ಮತ್ತೇನಲ್ಲದೆ ಒಂದು ಮತೀಯವಾದಿ ಲುಂಪೆನ್ ಗುಂಪು. ಧಾರ್ಮಿಕ ಫೆನಟಿಸಂ ಅನ್ನು ತನ್ನ ಏಕಮಾತ್ರ ಅಜೆಂಡಾವನ್ನಾಗಿರಿಸಿಕೊಂಡಿರುವ, ಏಕ್ ಧಕ್ಕ ಔರ್ ದೋ ನುಡಿಗಟ್ಟನ್ನು ತನ್ನ ಸ್ಲೋಗನ್ನಾಗಿಸಿಕೊಂಡ ಈ ಮತೀಯವಾದಿ ಗುಂಪು 1990 ರಿಂದ ಪ್ರತ್ಯಕ್ಷವಾಗಿಯೇ ಮತ್ತು ನೇರವಾಗಿಯೇ ಧರ್ಮದ, ಜಾತಿಯ ಆಧಾರದ ಮೇಲೆ ಇಂಡಿಯಾವನ್ನು ಇಬ್ಭಾಗಿಸಿತು. ಆಗ ಇದರ ನೇತೃತ್ವ ವಹಿಸಿದ್ದು ಎಲ್.ಕೆ,ಅಡ್ವಾನಿ. ತಮ್ಮ ಕೋಮುವಾದಿ ರಥಯಾತ್ರೆಯ ಮೂಲಕ ದೇಶದ ಮೂಲಸೆಲೆಯಾಗಿದ್ದ, ಸ್ವತಂತ್ರ ಭಾರತದಲ್ಲಿ ನೆಹರೂ, ಅಂಬೇಡ್ಕರ್ ಅವರು ಅಪಾರ ನಿಷ್ಟೆ ಮತ್ತು ಬದ್ಧತೆಯಿಂದ ಕಟ್ಟಿದ್ದ ಸಹೋದರತ್ವದ, ಸಂಕೀರ್ಣವಾದ, ಮಾನವೀಯ ಹಿನ್ನೆಲೆಯ ಸಾಂಸ್ಕೃತಿಕ ಎಳೆಗಳ, ಸೆಕ್ಯುಲರ್, Narendra_Modiಜಾತ್ಯಾತೀತ ಸಂವಿಧಾನದ ಧ್ವಂಸ ಕಾರ್ಯವನ್ನು ಶುರಮಾಡಿದ ಅಡ್ವಾನಿ ಮತ್ತವರ ಸಹಚರರಿಗೆ ಸಾರಥಿಯಾಗಿದ್ದು ಆ ಕಾಲದ ಆರೆಸಸ್ ಸ್ವಯಂಸೇವಕ ನರೇಂದ್ರ ಮೋದಿ. ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಇವರ ಕಾರ್ಯಕ್ಕೆ ಸಂಪೂರ್ಣವಾಗಿ ಬೆಂಬಲಿಸಿದ್ದು ಆರೆಸಸ್. ಇದೆಲ್ಲವೂ ಇಂದು ಇತಿಹಾಸದಲ್ಲಿ ದಾಖಲಾಗಿದೆ. ದೇಶವನ್ನು ಒಡೆಯುವ ಈ ದುಷ್ಕೃತ್ಯ ತಾರಕಕ್ಕೇರಿದ್ದು ಬಾಬರಿ ಮಸೀದಿಯ ಧ್ವಂಸದ ಮೂಲಕ. ನಂತರ ತನ್ನ ರಕ್ತಸಿಕ್ತ ಪ್ರಯಾಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಿದ್ದು 2002ರ ಗುಜರಾತ್ ನರಮೇಧದ ಮೂಲಕ.

ಇಡೀ ಕಾಲಘಟ್ಟದಲ್ಲಿ ಅಡ್ವಾನಿಯವರು ಅನೇಕ ಬಾರಿ ನೇರವಾಗಿ ಪಾಲುದಾರrAಗಿದ್ದರೆ ಕೆಲವು ಬಾರಿ ಪ್ರೇಕ್ಷಕರಾಗಿಯೂ ತಮ್ಮ ಆರೆಸಸ್ ಸ್ವಯಂಸೇವಕನ ಜವಾಬ್ದಾರಿ ನಿಭಾಯಿಸಿದ್ದಾರೆ. ಇಂದಿಗೂ ಬಾಬರಿ ಮಸೀದಿಯ ಧ್ವಂಸ ಪ್ರಕರಣದಲ್ಲಿ ಇವರ ಮೇಲಿನ ಆಪಾದನೆ ನಿವಾರಣೆಯಾಗಿಲ್ಲ. ಇಂದು ವೃದ್ಧನಾರಿ ಪತಿವ್ರತೆಯ ಮಾದರಿಯಲ್ಲಿ ತಮ್ಮನ್ನು ತಾವು ಹುತಾತ್ಮರಾಗಿಸಕೊಳ್ಳಬಯಸುವ ಅಡ್ವಾನಿಯವರಿಗೆ ಮೃದುವಾದಿಯ ಮುಖವಾಡವನ್ನು ಅದೂ ವಾಜಪೇಯಿಯವರ ವೇಷವನ್ನು ತೊಡಿಸಲು ಬೌದ್ಧಿಕವಾಗಿ ದಿವಾಳಿಯೆದ್ದಿರುವ ಮಾಧ್ಯಮಗಳು ವೇದಿಕೆಯನ್ನೊದಗಿಸುತ್ತಿರುವುದು ಒಂದು ದುರಂತ ಪ್ರಹಸನವಲ್ಲದೆ ಮತ್ತಿನ್ನೇನು ?? ಎಂಬತ್ತಾರರ ಇಳಿ ವಯಸ್ಸಿನಲ್ಲಿಯೂ ನಾವೆಲ್ಲ ಅಸೂಯೆ ಪಡುವಷ್ಟು ಅತ್ಯಂತ ಲವಲವಿಕೆಯಿಂದಿರುವ ಅಡ್ವಾನಿಯವರಿಗೆ ಇಂದು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಗತಕಾಲದ ತಪ್ಪುಗಳ ಕುರಿತಾಗಿ ಪ್ರಾಯಶ್ಚಿತ್ತವಿದ್ದಂತಿಲ್ಲ. ಇಂದು ಮಾಡಿದ್ದುಣ್ಣೋ ಮಾರಾಯನೆಂಬ ಸ್ಥಿತಿಗೆ ಬಂದು ತಲುಪಿರುವ ಅಡ್ವಾನಿಯವರ ಅರವತ್ತು ವರ್ಷಗಳ ದೀರ್ಘವಾದ ರಾಜಕೀಯ ಬದುಕು ಪ್ರತಿಯೊಬ್ಬ ಮತೀಯವಾದಿ ರಾಜಕಾರಣಿಗೆ ತಕ್ಕ ಪಾಠವಾಗಬಲ್ಲದೆಂದು ವಾಸ್ತವ ಸತ್ಯಗಳನ್ನು ಹೇಳಲು ನಿರಾಕರಿಸುತ್ತಿರುವ ನಮ್ಮ ಮಾಧ್ಯಮಗಳಿಗೆ ಸದಾ ಕಾಲ ಅಮ್ನೀಸಿಯ !!

ದೇಶಪ್ರೇಮಕ್ಕೂ ಮತ್ತು ಅದನ್ನು ನೆಪವನ್ನಾಗಿರಿಸಿಕೊಂಡು ದಬ್ಬಾಳಿಕೆ ನಡೆಸುವ ಫ್ಯಾಸಿಸಂನ ಮುಖಗಳಿಗೂ ಇರುವ ಅಜಗಜಾಂತರ ವ್ಯತ್ಯಾಸ ಮತ್ತು ಅಪಾರ ಭಿನ್ನತೆ ಅರವತ್ತು ವರ್ಷಗಳಷ್ಟು ಕಾಲ ಅತ್ಯಂತ ಪ್ರಾಮಾಣಿಕವಾಗಿ ಪಕ್ಷನಿಷ್ಟ ರಾಜಕಾರಣವನ್ನು ಮಾಡಿಕೊಂಡು ಬಂದ ಅಡ್ವಾನಿಯವರಲ್ಲಿನ ಮುಗ್ಧತೆಯ ವ್ಯಕ್ತಿತ್ವ ಅರಿಯದೇ ಹೋಗಿದ್ದು ಕೂಡ ಭಾರತದ ರಾಜಕಾರಣದ ದುರಂತ ಅಧ್ಯಾಯ. ಈ ಕಾಮನ್‌ಸೆನ್ಸ್ ಅನ್ನು ಒಳಗೊಂಡತಂಹ, ಆಳವಾದ ಸಾಮಾಜಿಕ ಒಳನೋಟಗಳನ್ನು ತನ್ನೊಳಗೆ ಬಸಿದುಕೊಳ್ಳುವ ಗುಣವಿಲ್ಲದಿದ್ದಕ್ಕಾಗಿಯೇ ವೈಯುಕ್ತಿಕವಾಗಿ ಮುಸ್ಲಿಂರನ್ನು ತಮ್ಮ ಸ್ನೇಹಿತನಂತೆ ನಡೆಸಿಕೊಳ್ಳುವ, ಮಾನವತಾವಾದಿ, ಸ್ನೇಹಶೀಲ, ಅಪಾರ ಪ್ರೀತಿಯ ಸ್ನೇಹಿತನಂತೆ, ತಂದೆಯಂತೆ ವರ್ತಿಸುವ ಅಡ್ವಾನಿ ಸಾರ್ವಜನಿಕವಾಗಿ ಮತೀಯವಾದಿಯಾಗಿ, ಅನ್ಯಧರ್ಮದ್ವೇಷಿಯಾಗಿ ಬದಲಾಗುತ್ತಿದ್ದದು. ಸಂಘಪರಿವಾರದ ಫೆನಟಿಕ್, ಲುಂಪೆನ್ ಗುಂಪಿನ ನೇತಾರರಾಗಿದ್ದು.ಈ ಸಂದರ್ಭದಲ್ಲಿಯೇ ನರೇಂದ್ರ ಮೋದಿಯೆಂಬ ವರ್ಕೋಹಾಲಿಕ್, ಪ್ರಾಮಾಣಿಕ ಸ್ವಯಂಸೇವಕ ಫ್ಯಾಸಿಸ್ಟ್ ಆಗಿ ರೂಪುಗೊಳ್ಳತೊಡಗಿದ್ದು. ಮೋದಿಯು ಈ ಫ್ಯಾಸಿಸಂನ ಎಲ್ಲ ಪಟ್ಟುಗಳನ್ನು ನಿಭಾಯಿಸುವ ಗುಣಗಳನ್ನೂ ಕಲಿತದ್ದು ಈ ಕಾಲಘಟ್ಟದಲ್ಲಿಯೇ.

ಈ ವರ್ಷಗಳಲ್ಲಿ ಫೆನಟಿಸಂನ ರಾಜಕಾರಣವನ್ನು ಹತ್ತಿರದಿಂದ ನೋಡಿ ಈ ಗುಣಗಳನ್ನು ತನ್ನ ವ್ಯಕ್ತತ್ವದ ಅವಿಭಾಜ್ಯ gujarat-povertyಅಂಗವಾಗಿ ರೂಪಿಸಿಕೊಂಡ ಅತ್ಯಂತ ಚಾಣಾಕ್ಷ ರಾಜಕಾರಣಿ ಈ ನರೇಂದ್ರ ಮೋದಿ. ಮುಸಲೋನಿಯ ಮಾದರಿಯಲ್ಲಿಯೇ ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿ ಮಾನವೀಯತೆಯ, ಸೆಕ್ಯುಲರ್‌ನ ಎಲ್ಲಾ ಬಗೆಯ ಮಾದರಿಗಳನ್ನು ಮತ್ತು ಬದುಕನ್ನು ,ಪ್ರಜ್ಞಾವಂತರ ಚಿಂತನೆಗಳನ್ನು ತನ್ನ ಸರ್ವಾಧಿಕಾರದ ಮೂಲಕ ಹೆಚ್ಚೂ ಕಡಿಮೆ ಸಾಯಿಸಿರುವ ಈ ಮೋದಿ ಭಸ್ಮಾಸುರನ ರೀತಿಯಲ್ಲಿ ತನ್ನ ಮುಂದಿನ ಆಹುತಿಗಳಿಗಾಗಿ ದೆಹಲಿಯ ಗುದ್ದುಗೆಗಾಗಿ ತಡಕಾಡುತ್ತಿದ್ದಾನೆ. ಅಪಾರ ಮಹಾತ್ವಾಕಾಂಕ್ಷಿಯಾದ ಈ ಅದ್ಭುತ ಭಾಷಣಕಾರ ನರೇಂದ್ರ ಮೋದಿಯ ಸರ್ವಾಧಿಕಾರಕ್ಕೆ ಮುಂದಿನ ಪ್ರಯೋಗಶಾಲೆ ಕೇಂದ್ರದಲ್ಲಿನ ಅಧಿಕಾರ. ಆದರೆ ಫ್ಯಾಸಿಸ್ಟರಿಗೆ ಎಂದೂ ಮಣೆ ಹಾಕದ ಭಾರತದ ಆರೋಗ್ಯವಂತ ಮನಸ್ಸು ಸರ್ವಾಧಿಕಾರಿ ಮೋದಿಗೂ ಸರಿಯಾಗಿಯೇ ಕಪಾಳಮೋಕ್ಷ ಮಾಡಲಿದೆ. ಹಿಂದೂ ಧರ್ಮದ ಏಕರೂಪಿ ಸಂಸ್ಕೃತಿಯ ಪ್ರತಿಪಾದಕನಾದ ಈ ಮೋದಿ ಸರ್ವಾಧಿಕಾರವನ್ನು ಬಳಸಿಕೊಂಡು ಎಲ್ಲವನ್ನೂ ಸಾಧಿಸಬಹುದೆಂಬ ಹುಸಿ ನಂಬುಗೆಯಲ್ಲಿದ್ದಾನೆ. ಅನೇಕ ಸುಳ್ಳುಗಳನ್ನೊಳಗೊಂಡ ಈತನ ಅಭಿವೃದ್ಧಿ ಮಂತ್ರಗಳ ನಿಜಬಣ್ಣ ಇಂದು ಬಯಲಾಗುತ್ತಿದೆ. ಸರ್ವಾಧಿಕಾರದ ಉಕ್ಕಿನ ಹಿಡಿತದ ಆಡಳಿತದ ಶೈಲಿಯನ್ನು ಸಶಕ್ತ ಆಡಳಿತಗಾರನ ಶೈಲಿಯೆಂದು ಸ್ವತಃ ಮೋದಿ ಮತ್ತು ದಿವಾಳಿಯೆದ್ದ ಬಹುಪಾಲು ಮಾಧ್ಯಮಗಳು ಬೂಸಿ ಬಿಟ್ಟಿದ್ದು, ವರ್ಷಗಳ ಕಾಲ ಹಾದಿ ತಪ್ಪಿಸಿದ್ದು ಇಂದು ಇವೆಲ್ಲವೂ ಬತ್ತಲಾಗಿ ಬಯಲಾಗಿದ್ದೂ ಪ್ರಜ್ಞಾವಂತ ಭಾರತೀಯ ಮರೆತಿಲ್ಲ. ಈತನ ಹತ್ತು ವರ್ಷಗಳ ಕಾಲದ ಆಡಳಿತದಲ್ಲಿ ಗುಜರಾತ್‌ನ ಸೌರಾಷ್ಟ್ರ ಭಾಗವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಗುರಿಯಾಗಿ ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವುದು ಇಂದು ಭಾರತದ ಕಣ್ಣ ಮುಂದಿದೆ.

ಗುಜರಾತ್‌ನ ಹುಸಿ ಅಭಿವೃದ್ಧಿಯ ಕಾಲಘಟ್ಟದಲ್ಲಿಯೇ ಆ ರಾಜ್ಯದಲ್ಲಿ ಮಾನವ ಸಂಪನ್ಮೂಲದ ಸೂಚ್ಯಾಂಕ ಕೆಳಮಟ್ಟದಲ್ಲಿದೆ. Modiಖಾಸಗಿ ಮಾಲೀಕರು ಮತ್ತು ಖಾಸಗಿ ಉದ್ದಿಮೆದಾರರ ಅಭಿವೃದ್ಧಿಯನ್ನು ರಾಜ್ಯದ ಏಳ್ಗೆಯೆಂಬಂತೆ ಜಂಬ ಕೊಚ್ಚಿಕೊಂಡಿದ್ದು, ಮೇಲ್ಪದರದ, ನಗರಕೇಂದ್ರಿತ ಸುಧಾರಣೆಗಳನ್ನು ಇಡೀ ರಾಜ್ಯಕ್ಕೆ ಅನ್ವಯಿಸಿ ದಾರಿ ತಪ್ಪಿಸಿದ್ದು ಇಂದು ಭಾರತೀಯ ಮನಸ್ಸಿಗೆ ನಿಧಾನವಾಗಿಯಾದರೂ ನಿಖರವಾಗಿ ಗೋಚರಿಸುತ್ತಿದೆ. ಸಣ್ಣ ಮಟ್ಟದ ಬಂಡವಾಳ ಹೂಡಿಕೆಯನ್ನು ಕೃತಕವಾಗಿ, ಕಾಲ್ಪನಿಕವಾಗಿ ದ್ವಿಗುಣಗೊಳಿಸಿ ಮೋಸದ ಅಂಕಿಅಂಶಗಳನ್ನು ತೇಲಿಬಿಟ್ಟರೂ ಅದು ಬಹಳ ಕಾಲ ನಿಲ್ಲದೇ ಮೋದಿ ನಗೆಪಾಟಲಿಗೀಡಾಗಬೇಕಾಯ್ತು. ಶಿಲಾಯುಗದ, ಮನುವಾದದ ಗುಂಪಿನ ಸ್ವಯಂಸೇವಕನೊಬ್ಬ ಇಂದು ತಾನೊಬ್ಬ ಆಧುನಿಕ ಮುಖ್ಯಮಂತ್ರಿಯೆಂದು ಅತ್ಯಂತ ಯಶಸ್ವಿಯಾಗಿ ಮಾರ್ಕೆಟಿಂಗ್ ಮಾಡಿದ್ದು ಮೋದಿಯ ಬಲು ದೊಡ್ಡ ಸಾಧನೆ. ಹಾಗೆಯೇ 2002 ರಲ್ಲಿ ಮುಸ್ಲಿಂರ ಹತ್ಯಾಕಾಂಡವೂ ಸಹ. ಇದರ ಕಲೆಯನ್ನು ಯಾವುದೇ ಬಗೆಯ ಸುಗಂಧ ದ್ರವ್ಯಗಳಿಂದಲೂ ತೊಳೆಯಲಾಗದೆ ಸೋತುಹೋಗಿರುವ ಮೋದಿ ಇಂದು ತಿರಸ್ಕೃತಗೊಂಡ ಜನಪ್ರಿಯ ರಾಜಕಾರಣಿ. ಸ್ವತಂತ್ರ ಭಾರತದಲ್ಲಿ ಇಷ್ಟರ ಮಟ್ಟಿಗೆ ಏಕಾಂಗಿಯಾದ ಜನಪ್ರಿಯ ರಾಜಕಾರಣಿಯ ಉದಾಹರಣೆ ಮತ್ತೆಲ್ಲೂ ಸಿಗಲಾರದು. ಏಕೆಂದರೆ ಶಿವ ವಿಶ್ವನಾಥನ್ ಹೇಳಿದಂತೆ ,”ಮೋದಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಏಕೆಂದರೆ ಸಂವಿಧಾನವನ್ನು ಗೌರವಿಸುವ, ಒಳಗೊಳ್ಳುವಿಕೆಯ ಯಾವುದೇ ಗುಣಲಕ್ಷಣಗಳು ಈತನಲ್ಲಿಲ್ಲ.”

10 thoughts on “ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

  1. Ananda Prasad

    ದೇಶದಲ್ಲಿ ಇಂದು ಸಮರ್ಪಕ ರಾಷ್ಟ್ರೀಯ ನಾಯಕರ ಕೊರತೆ ಇದೆ. ಮೋದಿ ಒಬ್ಬ ಪ್ರಾದೇಶಿಕ ನಾಯಕನೇ ಹೊರತು ರಾಷ್ಟ್ರೀಯ ನಾಯಕ ಅಲ್ಲ. ಗುಜರಾತಿನಿಂದ ಹೊರಗೆ ಮೋದಿಯ ಪ್ರಭಾವ ಅಷ್ಟಕ್ಕಷ್ಟೇ. ರಾಷ್ಟ್ರೀಯ ನಾಯಕ ಎನಿಸಿಕೊಳ್ಳಲು ಒಬ್ಬ ರಾಜಕಾರಣಿ ರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆಯಲ್ಲಿ ಕನಿಷ್ಠ ಒಂದು ದಶಕವಾದರೂ ಕೆಲಸ ಮಾಡಿ ಇಡೀ ರಾಷ್ಟ್ರದಲ್ಲಿ ತನ್ನ ಕಾರ್ಯಶೈಲಿಯಿಂದ, ಚಿಂತನೆಯಿಂದ, ಸಂಘಟನಾ ಚಾತುರ್ಯದಿಂದ ಪ್ರಭಾವ ಬೀರಲು ಶಕ್ತನಾಗಿರಬೇಕು. ಮೋದಿ ಈ ರೀತಿ ರಾಷ್ಟ್ರಮಟ್ಟದಲ್ಲಿ ಸಂಘಟನೆಯಲ್ಲಿ ಕೆಲಸ ಮಾಡಿಲ್ಲ. ಹೀಗಿದ್ದರೂ ಇವರಿಗೆ ರಾಷ್ಟ್ರೀಯ ನಾಯಕ ಎಂಬ ಇಮೇಜ್ ಸೃಷ್ಟಿಸಲು ಮಾಧ್ಯಮಗಳು ಶಕ್ತಿಮೀರಿ ಶ್ರಮಿಸುತ್ತಿವೆ. ಇದಕ್ಕೆ ಕಾರಣ ಮಾಧ್ಯಮಗಳು ಬಂಡವಾಳಶಾಹಿ ಹಿಡಿತದಲ್ಲಿರುವುದು. ಯಾರು ಬಂಡವಾಳಶಾಹಿಗೆ ಹಿತವರೋ ಅವರನ್ನು ಮೇಲಕ್ಕೆ ಏರಿಸಲು ಅವರು ಶ್ರಮಿಸುವುದು ಮಾಮೂಲು. ಇದರ ಪರಿಣಾಮವಾಗಿಯೇ ಮಾಧ್ಯಮಗಳು ಮೇರೆ ಮೀರಿದ ಮೋದಿ ಭಜನೆಯಲ್ಲಿ ತೊಡಗಿರುವುದು. ಒಂದು ರಾಜ್ಯದಲ್ಲಿ ನಾಲ್ಕು ಬಾರಿ ಚುನಾವಣೆ ಗೆದ್ದ ಮಾತ್ರಕ್ಕೆ ಒಬ್ಬ ರಾಜಕಾರಣಿ ರಾಷ್ಟ್ರೀಯ ನಾಯಕ ಆಗಲು ಸಾಧ್ಯ ಇಲ್ಲ. ಹಾಗೆ ಆಗುವುದಿದ್ದರೆ ಐದು ಬಾರಿ ಪಶ್ಚಿಮ ಬಂಗಾಳದಲ್ಲಿ ಎಡರಂಗವನ್ನು ಸತತವಾಗಿ ಗೆಲ್ಲಿಸಿದ ಹಾಗೂ 1 1 ಬಾರಿ ವಿಧಾನಸಭೆಗೆ ಆರಿಸಿ ಬಂದ ಜ್ಯೋತಿ ಬಸು ರಾಷ್ಟ್ರೀಯ ನಾಯಕ ಆಗಬೇಕಾಗಿತ್ತು. ಆದರೆ ಜ್ಯೋತಿ ಬಸುವನ್ನು ಯಾವುದೇ ಮಾಧ್ಯಮಗಳು ರಾಷ್ಟ್ರೀಯ ನಾಯಕ ಎಂದು ಅಟ್ಟಕ್ಕೆ ಏರಿಸಿದ ಉದಾಹರಣೆ ಇಲ್ಲ. ಕೆಲಸ ಮಾಡುವುದರಲ್ಲಿ ಮೋದಿ ನಿಸ್ಸೀಮನಾದರೂ ಅವರು ಬೆಳೆದುಬಂದ ತಾತ್ವಿಕ ಹಿನ್ನೆಲೆ ಉತ್ತಮವಾಗಿಲ್ಲ. ಇದುವೇ ಅವರ ರಾಷ್ಟ್ರೀಯ ನಾಯಕತ್ವ ಪಟ್ಟಕ್ಕೆ ದೊಡ್ಡ ತೊಡಕಾಗಿದೆ. ಬಲಪಂತೀಯ ಹಿನ್ನೆಲೆಯಿಂದ ಕಳಚಿಕೊಂಡು ಉದಾತ್ತ ವ್ಯಕ್ತಿತ್ವ ಬೆಳೆಸಿಕೊಳ್ಳುವ ಸಂಭಾವ್ಯತೆಯನ್ನು ಮೋದಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಏಕೆಂದರೆ ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದೇ ಉಗ್ರ ಬಲಪಂತೀಯ ತಾತ್ವಿಕ ಹಿನ್ನೆಲೆ. ಮೋದಿಯನ್ನು ಅತ್ಯಂತ ಉಗ್ರವಾಗಿ ಬೆಂಬಲಿಸುವ ಎಲ್ಲರೂ ಬಲಪಂತೀಯ ಒಲವು ಉಳ್ಳ ಮೇಲ್ಮಧ್ಯಮ ವರ್ಗದ ಜನಗಳೇ ಎಂಬುದು ಗಮನಾರ್ಹ. ಇವರೆಲ್ಲರೂ ಸೇರಿ ಇಡೀ ರಾಷ್ಟ್ರದಲ್ಲಿ ಮೋದಿ ಅಲೆಯನ್ನು ಎಬ್ಬಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾ ಇದ್ದಾರೆ. ಇವರು ತೋರಿಕೆಗೆ ಗುಜರಾತಿನ ಅಭಿವೃದ್ಧಿಯ ಮಂತ್ರದಂಡವನ್ನು ಹಿಡಿದುಕೊಂಡಿದ್ದರೂ ಇವರ ಆಳದಲ್ಲಿ ದೇಶದ ಅಧಿಕಾರವನ್ನು ಒಮ್ಮೆ ಹೇಗಾದರೂ ಮಾಡಿ ಹಿಡಿದುಕೊಂಡು ತಮ್ಮ ಬಲಪಂತೀಯ ಉಗ್ರ ಚಿಂತನೆಗಳನ್ನು ಜಾರಿಗೆ ತರುವ ಉದ್ಧೇಶ ಇದೆ. ಹೀಗಾಗಿಯೇ ಇವರು ಶತಾಯ ಗತಾಯ ಮೋದಿಯನ್ನು ಪ್ರಧಾನಿ ಮಾಡಿಯೇ ತೀರಬೇಕೆಂದು ಹಠ ತೊಟ್ಟಿದ್ದು ಉನ್ನತ ರಾಷ್ಟ್ರೀಯ ನಾಯಕರೆಲ್ಲರೂ ಈ ಹಠದ ಮುಂದೆ ಮೂಲೆಗುಂಪಾಗಿದ್ದಾರೆ. ಮೋದಿಯ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ತನ್ನ ಅಜೆಂಡಾಗಳನ್ನು ದೇಶದ ಮೇಲೆ ಹೇರುವ ಹುನ್ನಾರ ಸಂಘ ಪರಿವಾರದ ಕನಸಾಗಿದೆ. ಹೀಗಾಗಿ ಅದೂ ಕೂಡ ಮೋದಿಯ ಬೆನ್ನ ಹಿಂದೆ ನಿಂತಿದೆ. ಇದೆಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತದೋ ಕಾಲವೇ ಹೇಳಬೇಕಷ್ಟೆ.

    Reply
  2. Kodava

    ಇಷ್ಟು ವರ್ಷ ಭಾರತವನ್ನು ಲೂಟಿ ಮಾಡಿದ ಹಾಗು ಮಾಡುತ್ತಿರುವ ಪಕ್ಷಕ್ಕೆ ಅಧಿಕಾರ ಕೊಟ್ಟು ನೋಡಿ ನಮಗೂ ಸಾಕು ಸಾಕಾಗಿದೆ … ಒಮ್ಮೆ ಬೇರೆ ಪಕ್ಷಕ್ಕೆ ಕೊಟ್ಟು ನೋಡೋಣ ??? ಏನಾದರೂ ಬದಲಾವಣೆ ಆಗಬಹುದು ..
    ಈಗ ಭಾರತದಲ್ಲಿ ಯಾರು ಏನು ಕಡಿಮೆಯಿಲ್ಲ .. ಯಾರು ಯಾರ ಪರ ವಹಿಸಬೇಕಿಲ್ಲ .. ಎಲ್ಲರೂ ವಿದ್ಯಾವಂಥರಿದ್ದಾರೆ … ಯಾರು ಏನು ಹೇಗೆ ಎಂಬುದು ನಮಗೆ ತಿಳಿದಿದೆ ..ಮೊದಲು ದೇಶದ ಪ್ರಗತಿಗೆ ದುಡಿಯೋಣ .. ಆಮೇಲೆ ಜಾತಿ ಮತ ಧರ್ಮ ಎಲ್ಲ …..
    ಜೈ ಭಾರತ್ …

    Reply
  3. Shweta Angadi

    I am not much aware of politics what is happening in gujarat…. There are many people who give info with statistics on what all modi has improved….. i completely won’t supporting or protesting against modi…. i want truth… give statistics with examples in articles it helps people like me who don’t have much idea in analyzing and come to conclusion…… Thanks…

    Reply
  4. Raghavendra M Naik

    ಈ secular, communal ಇಂತಹ ಮಾತುಗಳನ್ನು ಕೇಳಿ ಕೇಳಿ ಕಿವಿ ತೂತಾಗಿದೆ. ಮೊದಲಬಾರಿಗೆ ಒಬ್ಬ ನಾಯಕನ ಮೇಲೆ ಭರವಸೆ ಮೂಡಿದೆ. ಆತ ಯಾವ ಪಕ್ಷಕ್ಕೆ ಸೇರಿದವನು?, ಆತನ ಹಿಂದಿನ ಹಿನ್ನಲೆ ಏನು..? ಇವ್ಯಾವು ಸದ್ಯದ ಮಟ್ಟಿಗೆ ನನಗೆ ಮುಖ್ಯವಲ್ಲ. ಆದರೆ 10 ವರ್ಷದಿಂದ ಆತನ ಸಾಧನೆ ಏನು..? ಇತೀಚೆಗೆ ಆತನ ನಡೆ, ನುಡಿ ಇವನ್ನೆಲ್ಲಾ ಗಮನಿಸುತ್ತಾ ಬಂದಿರುವ ನನಗೆ ಆತನಿಗೂ ಒಂದು ಅವಕಾಶ ಕೊಟ್ಟು ನೋಡುವುದರಲ್ಲಿ ಯಾವುದೇ ತಪ್ಪಿಲ್ಲ ಅನ್ನಿಸುತ್ತಿದೆ….! ಸದ್ಯಕ್ಕೆ ಆತನ ಬಿಟ್ಟು ಬೇರೆ option ಕೂಡ ಕಾಣುತ್ತಿಲ್ಲ…! ನೀವು ಹೇಳಿರುವಂತೆ ಆತ ಗುಜರಾತ್ ಬಿಟ್ಟು ಎಲ್ಲೂ ಅಷ್ಟು ಪ್ರಸಿದ್ಧನಲ್ಲ… ಅನ್ನೋದು ಅಪ್ಪಟ ಸುಳ್ಳು….ಆತ popularityಯಲ್ಲಿ ಎಲ್ಲರಿಗಿಂತ ಮುಂದಿದ್ದಾನೆ. ಆತ ಪ್ರದಾನಿಯಾಗಬೇಕು ಅನ್ನೋದಕ್ಕೆ ಆತ ಬಿ.ಜೆ.ಪಿ.ಯವನು ಅನ್ನೋ ಕಾರಣಕ್ಕಿಂತ ಹೆಚ್ಚಾಗಿ… ಆತ ಕಾಂಗ್ರೆಸ್ಸಿಗನಲ್ಲ ಅನ್ನೋ ಕಾರಣವೇ ನನಗೆ ಮುಖ್ಯ…! ಜೈಹಿಂದ್…..!

    Reply
  5. siddaiah chikkamadegowda

    ಮೋದಿಯವರನ್ನು ಪ್ರಧಾನಿ ಮಾಡುವುದರ ಹಿಂದೆ ಅಮೇರಿಕಾ ನೇತೃತ್ವದ ಸಾಮ್ರಾಜ್ಯಷಾಹಿಗಳ ಹಿತ ಹಡಗಿದೆ. ಈ ಸಾಮ್ರಾಜ್ಯಷಾಹಿಗಳ ಜೊತೆ ಬಹುರಾಷ್ಟೀಯ ಕಂಪೆನಿಗಳ ಮತ್ತು ಅವುಗಳ ಪಾಲುದಾರರಾಗಿರುವ ಭಾರಾತೀಯ ಬೃಹತ್ ಕಂಪೆನಿಗಳ ಹಿತ ಹಡಗಿದೆ. ಪಿ.ವಿ.ನರಸಿಂಹರಾವ್ ಈ ದೇಶದ ಪ್ರಧಾನಿಯಾಗಿದ್ದಾಗ ಅಂತರರಾಷ್ಟೀಯ ಹಣಕಾಸು ಸಂಸ್ಥೆಯ ಜೊತೆ ಮಾಡಿಕೊಂಡ ಒಪ್ಪಂದ (ಗ್ಯಾಟ್ ಒಪ್ಪಂದ) ವನ್ನು, ಜನತೆಯ ಮತ್ತು ಪ್ರಗತಿಪರ ಸಂಘಟನೆಗಳ ವ್ಯಾಪಕ ವಿರೋದಗಳಿಂದಾಗಿ, ಸಂಪೂರ್ಣವಾಗಿ ಜಾರಿಗೊಳಿಸಲು ನಮ್ಮ ದೇಶದ ಬಂಡವಾಳಷಾಹಿ ಆಳುವ ವರ್ಗಕ್ಕೆ ಇನ್ನೂ ಸಾದ್ಯವಾಗಲಿಲ್ಲ. ಬಡವರಿಗೆ, ಜನಸಾಮಾನ್ಯರಿಗೆ ನೀಡುತ್ತಿರುವ ಸಬ್ಸಿಡಿಗಳನ್ನು ಸಂಪೂರ್ಣವಾಗಿ ಹಿಂತೆಗೆಕೊಳ್ಳಬೇಕೆಂಬುದೂ ಅದರಲ್ಲಿರುವ ಒಪ್ಪಂದದ ಒಂದು ಅಂಶ. ಅದರಂತೆ ಪಡಿತರ ವ್ಯೆವಸ್ಥೆಯ ಮೂಲಕ ನೀಡುತ್ತಿರುವ ಅಕ್ಕಿ, ಗೋದಿ, ಸಕ್ಕರೆ, ಬೇಳೆ, ಸೀಮೆಎಣ್ಣೆ ಮುಂತಾದ ಅಗತ್ಯವಸ್ತುಗಳನ್ನು ಸಬ್ಸಿಡಿ ಮೂಲಕ ನೀಡುವುದನ್ನು ಸಂಪೂರ್ಣ ಹಿಂತೆಗೆದುಕೊಳ್ಳಬೇಕು. ರೈತರಿಗೆ ನೀಡುತ್ತಿರುವ ಗೊಬ್ಬರದ ಮೇಲಿನ ಸಬ್ಸಿಡಿ, ವ್ಯೆವಸಾಯಕ್ಕೆ ಉಪಯೋಗಿಸುವ ಹಸು, ಹೆತ್ತು, ಹೆತ್ತಿನಗಾಡಿ, ಟ್ರ್ಯಾಕ್ಟರ್, ಕೊಳವೆಬಾವಿ, ಅದಕ್ಕೆ ಉಪಯೋಗಿಸುತ್ತಿರುವ ವಿದ್ಯುತ್, ಮತ್ತು ಇತರೆ ರೀತಿಯಲ್ಲಿ ನೀಡುತ್ತಿರುವ ಎಲ್ಲಾ ರೀತಿಯ ಸಬ್ಸಡಿಗಳನ್ನು ರದ್ದುಗೊಳಿಸಬೇಕು. ಪೆಟ್ರೋಲಿಯಂ ಪದಾರ್ಥಗಳ ಬೆಲೆನಿಗದಿ ಅದಿಕಾರವನ್ನು ಸರ್ಕಾರ ಇರಿಸಿಕೊಂಡಿದ್ದು, ಅಂತಹ ಅದಿಕಾರವನ್ನು ಸಂಭದ್ದಪಟ್ಟ ತೈಲ ಕಂಪೆನಿಗಳಿಗೆ ನೀಡಬೇಕು. ಡೀಸಲ್, ಅಡುಗೆ ಅನಿಲ, ಸೀಮೆಎಣ್ಣೆ ಇವುಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ರದ್ದುಗೊಳಿಸುವ ಮೂಲಕ, ಮುಕ್ಕ ಮಾರುಕಟ್ಟೆಗೆ ಅವಕಾಶ ನೀಡಬೇಕು. ಆರೋಗ್ಯ, ವಿಮೆ, ಹಣಕಾಸು ವಲಯಗಳಿಂದ ಸರ್ಕಾರ ತನ್ನ ಬಂಡವಾಳ ಹಿಂತೆಗೆದುಕೊಂಡು, ಈ ವಲಯಗಳಲ್ಲಿ ಖಾಸಗಿಯವರಿಗೆ ಬಂಡವಾಳ ಹೂಡುವಂತಹ ವಾತಾವರಣ ನಿರ್ಮಾಣವಾಗಬೇಕು. ನಷ್ಟದಲ್ಲಿರುವ ಕೈಗಾರಿಕೆಗಳನ್ನು ಮುಚ್ಚಬೇಕು. ಲಾಭದಾಯಕವಾದ ಸಾರ್ವಜನಿಕ ಉದ್ಯಮಗಳ ಷೇರುಗಳನ್ನು ವಿದೇಶಿ ಮತ್ತು ದೇಶೀಯ ಕಂಪನಿಗಳಿಗೆ ಮಾರಾಟಮಾಡುವ ಮೂಲಕ, ಈ ಉದ್ಯಮಗಳಲ್ಲಿರುವ ಸರ್ಕಾರಿ ಬಂಡವಾಳವನ್ನು ಸಂಪೂರ್ಣ ಹಿಂತೆಗೆದುಕೊಳ್ಳಬೇಕು.
    ಇಂತಹ ಅನೇಕ ಒಪ್ಪಂದಗಳಲ್ಲಿ ಈಗಾಗಲೇ ಹಲವು ಜಾರಿಯಾಗಿವೆ. ಜಾರಿಮಾಡಬೇಕಾದದ್ದು ಬೇಕಾದಷ್ಟಿದೆ. ನರಸಿಂಹರಾವ್ ಮತ್ತು ವಾಜಪೇಯಿ ಪ್ರಧಾನಿ ಗಳಾಗಿದ್ದಾಗ ಕೆಲವು ಒಪ್ಪಂದಗಳನ್ನು ಜಾರಿಗೊಳಿಸಲಾಗಿತ್ತು. ಮನಮೋಹನ ಸಿಂಗ್ ಪ್ರಧಾನಿ ಯಾದ ಯುಪಿಎ ಒಂದರ ಅವದಿಯಲ್ಲಿ ಕಮ್ಯುನಿಷ್ಟರು ಹೊರಗಿನಿಂದ ಬೆಂಬಲ ಕೊಟ್ಟಿದ್ದ ಪರಿಣಾಮ, ಉದಾರೀಕರಣ ನೀತಿಯನ್ನು ನಿರೀಕ್ಷಿಸಿದ ಮಟ್ಟಕ್ಕೆ ಜಾರಿಗೆ ತರಲು ಅವರಿಗೆ ಸಾದ್ಯವಾಗಲಿಲ್ಲ. ಅಮೇರಿಕಾ ಜೊತಿ ಪರಮಾಣು ಒಪ್ಪಂದದ ಹಿನ್ನಲೆಯಲ್ಲಿ, ಎಡಪಕ್ಷಗಳು ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದು ಕೊಳ್ಳುವ ಬೆದರಿಕೆ ಇದ್ದರೂ, ಅಮೇರಿಕಾಕ್ಕೆ ತಲೆ ಬಾಗಿ ಆ ಒಪ್ಪಂದವನ್ನು ಮಾಡಿಕೊಂಡರು. ಯುಪಿಎ ಎರಡನೇ ಅವದಿಯಲ್ಲೂ ಈ ಸರ್ಕಾರಕ್ಕೆ ತನ್ನ ಉದಾರೀಕರಣ ನೀತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಸಾದ್ಯವಾಗಲಿಲ್ಲ. ಒಂದೆಡೆ ಕಾಂಗ್ರೆಸ್ ಗೆ ಸಂಪೂರ್ಣ ಬಹುಮತ ಇಲ್ಲದಿರುವುದು ಮತ್ತು ಜನತೆಯ ಪ್ರತಿರೋದ ಇದಕ್ಕೆ ಅಡ್ಡಿಯಾಯಿತು. ಕಳೆದ ವರ್ಷ ಅಮೇರಿಕಾದ ಪತ್ರಿಕೆಯೊಂದು “ಮನಮೋಹನ ಸಿಂಗ್ ಒಬ್ಬ ದುರ್ಭಲ ಪ್ರಧಾನಿ” ಎಂದು ಜರಿದಾಗ, ಅವಮಾನಿತರಾದಂತೆ ಕಂಡ ಸಿಂಗ್, ಚಿಲ್ಲರೆ ವ್ಯಾಪಾರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಂತ ನೀತಿಯನ್ನು ಜನರ ವ್ಯಾಪಕ ಪ್ರತಿಭಟನೆಯ ನಡುವೆಯೂ ಜಾರಿಗೆ ತಂದರು.
    ಕಾರ್ಮಿಕರ ವ್ಯಾಪಕ ಪ್ರತಿಭಟನೆಗಳ ನಡುವೆಯೂ, ಲಾಭದಾಯಕ ಸಾರ್ವಜನಿಕ ಉದ್ಯಮಗಳ ಷೇರುಗಳನ್ನು ಪ್ರತಿವರ್ಷ ಮಾರಾಟ ಮಾಡುತ್ತಾ ಸರ್ಕಾರ ತನ್ನ ಪಾಲಿನ ಬಂಡವಾಳವನ್ನು ಹಿಂತೆಗೆದುಕೊಂಡು ಅದರಿಂದ ಬಂದ ಹಣವನ್ನು ಬಜೆಟ್ ಕೊರತೆ ನೀಗಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ. ಹಣಕಾಸು, ವಿಮೆ, ಆರೋಗ್ಯ ದಂತಹ ಕ್ಷೇತ್ರಗಳಲ್ಲಿ ವಿದೇಶಿ ಬಹುರಾಷ್ಟೀಯ ಕಂಪನಿಗಳಿಗೆ ಬಂಡವಾಳ ಹೂಡಲು ಅವಕಾಶ ಮಾಡಿಕೊಡುತ್ತಿದೆ. ಇಷ್ಟಾದರೂ ಆಳುವ ವರ್ಗಕ್ಕೆ ತನ್ನ ಪರವಾದ ನೀತಿಯನ್ನು ಸಂಪೂರ್ಣವಾಗಿ ಜಾರಿಮಾಡಲು ಸಾದ್ಯವಾಗಲಿಲ್ಲ.
    ಈಗ ಲೋಕಸಬಾ ಚುನಾವಣೆ ಹತ್ತಿರ ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ತನ್ನ ಜನವಿರೋದಿ ನೀತಿಗಳಿಂದಾಗಿ ಜನರಿಂದ ದೂರಸರಿಯತೊಡಗಿವೆ. ಮೂರನೇ ರಂಗದತ್ತ ಜನರ ಒಲವು ಮೂಡತೊಡಗಿದೆ. ಮೂರನೇ ರಂಗ ಅದಿಕಾರಕ್ಕೆ ಬಂದರೆ, ಅದರಲ್ಲಿ ಕಮ್ಯುನಿಷ್ಟರ ಪಾಲು ಇದ್ದೇ ಇರುತ್ತದೆ. ಅಂತಹ ಸರ್ಕಾರದಿಂದ ಬಂಡವಾಳಷಾಹಿ ವರ್ಗದ ಅಕ್ರಮ ಲಾಭಗಳಿಕೆಗೆ ಅಡ್ಡಿಯಾಗುತ್ತದೆ. ಮತ್ತು ಈಗಾಗಲೇ ತಾವು ಅಕ್ರಮವಾಗಿ ಗಳಿಸಿರುವ ಸಂಪತ್ತಿನ್ನು ಕಳೆದುಕೊಳ್ಳಬೇಕಾಗಬಹುದು. ಈ ಭಯದಿಂದ ಆಳುವ ಬಂಡವಾಳಷಾಹಿ ವರ್ಗ ಮತ್ತು ಸಾಮ್ರಾಜ್ಯಷಾಹಿಗಳ ಕೂಟ, ಮೋದಿ ಜನಪ್ರಿಯ ನಾಯಕ ನೆಂದು ಬಿಂಬಿಸುತ್ತಾ, ಜನರನ್ನು ಮೋಸಗೊಳಿಸಿ, ಮತ್ತೆ ತನ್ನ ಪರವಾದ ಸರ್ಕಾರ ಅದಿಕಾರಕ್ಕೆ ಬರುವಂತೆ ಇನ್ನಿಲ್ಲದ ಪ್ರಯತ್ನ ಪಡುತ್ತಿವೆ. ಬಾರತದ ಜನತೆ ಆಳುವ ವರ್ಗದ ಈ ಕುತಂತ್ರಕ್ಕೆ ಬಲಿಯಾಗಲಾರರು.

    Reply
  6. Gladson

    ಮೋದಿ ಮೂರು ಸಲ ಮುಖ್ಯಮಂತ್ರಿ ಆದದ್ದೆ ಸಾಧನೆ ಅನ್ನುವವರು, ಅವರ ಮತಗಳಿಕೆ ಬಗ್ಗೆ ಸ್ವಲ್ಪ ತಲೆಕೆಡಿಸ್ಕೊಂಡ್ರೆ ಒಳ್ಳೆದು…ಅಷ್ಟೊಂದ್ ಜನಪ್ರಿಯ ಮುಖ್ಯಮಂತ್ರಿ ಕನಿಷ್ಟ ನೂರೈವತ್ತು ಸೀಟ್ ಪಡೆಬೇಕಿತ್ತು…ಆದ್ರೆ ಪಡೆದಿದ್ದು ಬರೀ 119… ಸ್ವತ: ಬಿಜೆಪಿ ರಾಷ್ಟ್ರಿಯ ನಾಯಕರಿಗೆ ಮೋದಿಯನ್ನು ಪ್ರಧಾನಿಯನ್ನಾಗಿ ಬಿಂಬಿಸಿದರೆ ಏನಾಗ ಬಹುದು ಎಂದು ಚೆನ್ನಾಗಿ ತಿಳಿದಿದೆ…ಅದ್ಕೆ ಸದ್ಯಕ್ಕೆ ಚುನಾವಣ ಪ್ರಚಾರ ಸಮಿತಿಯ ಸಂಚಾಲಕರನ್ನಾಗಿ ನೇಮಿಸಿದ್ದಾರೆ ವಿನ: ಎಲ್ಲಿಯೂ, ಎಂದೂ ಮೋದಿ ಮಂದಿನ ಪ್ರಧಾನಿ ಎಂದು ಬಿಜೆಪಿಯ ಯಾವದೆ ರಾಷ್ಟೀಯ ನಾಯಕ ಅನುಮೋದಿಸಿಲ್ಲ…ಮೋದಿಯಿಂದ ಕಾಂಗ್ರೆಸ್ ಅಥವಾ ಇತರೆ ಪಕ್ಷಗಳಿಗೆ ಇರುವ ಅಪಾಯಕ್ಕಿಂತ ಬಿಜೆಪಿಗೇ ಅಪಾಯ ಹೆಚ್ಚು. ಅಡ್ವಾಣಿ, ವಾಜಪೇಯಿಯಂತವರು ಬಿಜೆಪಿಯಲ್ಲಿ ದ್ವಿತೀಯ ಸರದಿಯ ನಾಯಕರನ್ನು ಬೆಳೆಸಿದ್ದಾರೆ. ಉಮಾ ಭಾರತಿ, ಶಿವರಾಜ್ ಚೌಹಾಣ್, ರಮಣ್ ಸಿಂಗ್, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮುಂತಾದವರನ್ನು ಗುರುತಿಸಿ ಬೆಳೆಸಿದ ಶ್ರೇಯ ವಾಜಪೇಯಿ, ಅಡ್ವಾಣಿಗೆ ಸಲ್ಲಬೇಕು…ಅವರಿಬ್ಬರು ಕೂಡ ದೀನ್ ದಯಾಳ್ ಶರ್ಮಾ, ಶ್ಯಾಮ್ ಪ್ರಸಾದ್ ಮುಖರ್ಜಿಯವರ ಗರಡಿಯಲ್ಲಿ ಪಳಗಿದವರು. ಆದ್ರೆ ಮೋದಿಯ ವೈಖರಿ ನೋಡಿ. ಮೋದಿ ಬಿಟ್ಟರೆ ಗುಜರಾತಿನ ಬೇರ್ಯಾವ ಬಿಜೆಪಿ ನಾಯಕರ ಬಗ್ಗೆ, ದೇಶಕ್ಕೆ ಬಿಡಲಿ, ಸ್ವತ: ಬಿಜೆಪಿಯ ಕಾರ್ಯಕರ್ತರಿಗೆ ತಿಳಿದಿದೆ? ಯಾಕಂದ್ರೆ ಗುಜರಾತಿನಲ್ಲಿ ಮೋದಿ ನಂತರ ಬೇರೆ ನಾಯಕರೇ ಇಲ್ಲ…ಮೋದಿ ಯಾವಬ್ಬ ನಾಯಕನನ್ನು ಬೆಳೆಯಲು ಬಿಡಲ್ಲಿಲ್ಲ. ಕೇಶು ಭಾಯ್ ಪಟೇಲ್, ಶಂಕರ್ ಸಿಂಗ್ ವಘೇಲರು ಮೋದಿಯನ್ನು ಬೆಳೆಸಿದ್ದು. ಆದರೆ ಅವ್ರನ್ನೆ ಒದ್ದು ಹೊರಗಾಕಿದ ಆಸಾಮಿ ಮೋದಿ ರಾಷ್ಟೀಯ ಸ್ಥರದಲ್ಲೂ ಇದನ್ನು ಮಾಡುವರು ಎಂದು ರಾಷ್ಟ್ರಿಯ ನಾಯಕರಿಗೆ ಅರಿವಿದೆ. ಆದ್ದರಿಂದ ಮೋದಿಯನ್ನು ಬರೀ ಚುನಾವಣೆಯಲ್ಲಿ ಮುಂಚೂಣಿಯಲ್ಲಿಟ್ಟು, ಒಂದು ವೇಳೆ ಸರಕಾರ ರಚಿಸುವ ಚಾನ್ಸ್ ಬಂದರೆ, ಅವ್ರನ್ನು ಬದಿಗಿಟ್ಟು ಅಡ್ವಾಣಿಯನ್ನೊ, ಜೇಟ್ಲಿಯನ್ನೋ ಪ್ರಧಾನಿಯಾಗಿ ಮಾಡುವರು..ಆದರೆ ಮೋದಿ ಮುಂಚೂಣಿಯಲ್ಲಿದ್ದರೂ, ಬಿಜೆಪಿ ಗರಿಷ್ಟ ಎಂದರೆ 175-180 ಸ್ಥಾನ ಪಡೆಯಬಹುದು. ಉಳಿದ 100 ಸ್ಥಾನಗಳಿಗೆ ‘ಭವತಿ ಭಿಕ್ಷಾಂ ದೇವಿಯೆ’ ಗತಿ…but who will support? JD (U) has already walked out. Naveen Patnaik is doubtful NDA starter. Mayavati, Mulayam, Mamata and CPI (M) will never join hands with BJP. Jayalalitha may join. But she is another pain in the neck and will bargain for plum posts…so who will give these 100+ seats to BJP?…

    Reply
  7. J P

    Haalu Baaviyalli Biddee Theerthini andre Nimma hanebaraha Bidd Saaayri anbekaste. Adre Nimma Jothege naavu Bilalla annodann heliyoo bidbeku jothege.

    Reply

Leave a Reply to Ananda Prasad Cancel reply

Your email address will not be published. Required fields are marked *