ಮೋದಿಯ ಸುಳ್ಳುಗಳಿಗೆ ದೇಶದ ಜನತೆ ಮರುಳಾಗದಿರಲಿ

– ಎಮ್.ಸಿ.ಡೋಂಗ್ರೆ

2014 ರ ನಂತರದ ಭಾರತಕ್ಕೆ ಈಗಿನ ಗುಜರಾತಿನ ಮುಖ್ಯಮಂತ್ರಿಯಾಗಿರುವ ಶ್ರೀ ನರೇಂದ್ರ ಮೋದಿಯವರೇ ಸರಿಯಾದ ನಾಯಕನೆಂದೂ, ಹಾಗೂ ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತವು ಅತ್ಯುನ್ನತವಾದ ಸರ್ವಾಂಗೀಣ ಏಳಿಗೆಯನ್ನು (ಗುಜರಾತ್ ಮಾದರಿಯಲ್ಲಿ) ಹೊಂದುವುದು ಶತಸ್ಸಿದ್ದ ಎಂದೂ ಬಿಂಬಿಸಲಾಗುತ್ತಿದೆ. ದೇಶದ ನಗರ ಕೇಂದ್ರದ ಯುವಜನರು ಮೋದಿಯ ಪ್ರಭಾವಕ್ಕೆ ಒಳಗಾಗುವಂತೆ ಮಾಡುವಲ್ಲಿಯೂ ಸಹ ಸ್ವಲ್ಪ ಮಟ್ಟಿನ ಯಶಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನೂ ಸಹ ನೋಡಬಹುದಾಗಿದೆ. ಮೋದಿಯನ್ನು “ಅಭಿವೃದ್ಧಿಯ ಹರಿಕಾರ”ನೆಂದು ಬಿಂಬಿಸಲಾಗುತ್ತಿದ್ದೆಯೇ ವಿನಹ, ಅವರ ರಾಜಕೀಯ ಹಾಗೂ ವೈಚಾರಿಕ ಹಿನ್ನೆಲೆಯನ್ನು ಮರೆಮಾಚಲಾಗುತ್ತಿದೆ. ಮೋದಿಯ ಹೆಸರಿನ ಮೇಲೆ ಬಿ.ಜೆ.ಪಿ.ಗೆ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತಿದೆಯೇ ವಿನಹ, ಬಿ.ಜೆ.ಪಿ.ಯಿಂದ ಮೋದಿಗೆ ಅಲ್ಲ ಎಂಬುದನ್ನು ಗಮನಿಸಬೇಕು.

ನಗರ ಕೇಂದ್ರದ ಮಧ್ಯಮ ವರ್ಗಕ್ಕೆ ಸೇರಿರುವ ಅನೇಕ ಮಂದಿ ಯುವಕರು, ಶ್ರೀಮಂತ ವರ್ಗದ ಅನೇಕ ಮಂದಿ, Narendra_Modiಮೋದಿಯ ನಾಯಕತ್ವದ ಅಗತ್ಯ ದೇಶಕ್ಕೆ ಬಹಳವಿದೆಯೆಂದು ಹೇಳಲಾರಂಭಿಸಿದ್ದಾರೆ. ಈಗಿನ ನಮ್ಮ ಪ್ರಧಾನಿಯನ್ನು ಒಬ್ಬ “ಜೋಕರ್”ನಂತೆ ಸುಶಿಕ್ಷಿತರ ಮನಸ್ಸಿನಲ್ಲಿ ಮೂಡಿಸುವಲ್ಲಿ ಸಂಘ ಪರಿವಾರ ಸ್ವಲ್ಪ ಸಫಲತೆಯನ್ನು ಕಂಡುಕೊಂಡಿದೆ. ಮೊನ್ನೆಯ ಒಂದು ಸಂದರ್ಶನದಲ್ಲಿ ಬಿ.ಜೆ.ಪಿ.ಯ ನಾಯಕರಲ್ಲೊಬ್ಬರಾಗಿರುವ ಶ್ರೀ ಅರುಣ್ ಶೌರಿಯವರು ಮಾನ್ಯ ಮನಮೋಹನ ಸಿಂಗ್‌ರವರನ್ನು “ಒಬ್ಬ ಬೇಜವಾಬ್ದಾರಿ ಪ್ರಧಾನ ಮಂತ್ರಿ”ಯೆಂದೇ ನೇರವಾಗಿ ಪ್ರತಿಪಾದಿಸಿಯೂ ಆಗಿದೆ.

ಎಡಪಕ್ಷಗಳು ಹಾಗೂ ಕಾಂಗ್ರೆಸ್ ಇವೆರಡೂ ಪಕ್ಷಗಳು ಮೋದಿಯನ್ನು ಒಬ್ಬ “ಕೋಮುವಾದಿ” ಎಂದು ಬಿಂಬಿಸುವಲ್ಲಿ ಮಗ್ನವಾಗಿದ್ದಾವೆಯೇ ವಿನಹ, ಮೋದಿಯ ಕುರಿತು “ಅಭಿವೃದ್ಧಿಯ ಹರಿಕಾರ” ಎಂಬ ಇಮೇಜಿನ ಹಿಂದಿರುವ ಸುಳ್ಳುಗಳನ್ನು ಬಯಲಿಗೆಳೆಯುವಲ್ಲಿ ಸೋಲುತ್ತಿವೆ.

ಗುಜರಾತಿನಲ್ಲಿ ಎಂತಹ ಅಭಿವೃದ್ಧಿಗಳಾಗಿವೆ, ಅದರಲ್ಲಿ ಮೋದಿಯ ಪಾತ್ರ ಅಥವಾ ಕಾಣಿಕೆಯಾದರೂ ಎಷ್ಟು ಎಂಬುದರ ಕುರಿತು ನೈಜ ಚಿತ್ರಣವನ್ನು ಎಲ್ಲಿಯವರೆಗೆ ನಾವು ಜನಮನದಲ್ಲಿ ಮನದಟ್ಟು ಮಾಡುವುದಿಲ್ಲವೋ ಅಲ್ಲಿಯವರೆಗೆ ಮೋದಿಯ ಕುರಿತು ಕುತೂಹಲ, ಮತ್ತು ಮೆಚ್ಚುಗೆ ಇದ್ದೇ ಇರುತ್ತದೆ. ಮೋದಿ ಕೋಮುವಾದಿಯೋ ಅಥವಾ ಅಲ್ಲವೋ ಎಂಬುದು ಜನರಿಗೆ ಈಗ ಮುಖ್ಯವಾದ ಅಂಶವೇ ಅಲ್ಲ. ಜನಸಾಮಾನ್ಯರು ತಮ್ಮ ನಾಯಕನಲ್ಲಿ ಚತುರ ಮಾತುಗಾರಿಕೆಯನ್ನು, ಸ್ಪಷ್ಟವಾಗಿ ಬಾಯಿಬಿಟ್ಟು ಹೇಳುವ ವ್ಯಕ್ತಿತ್ವವನ್ನು, ಹಾಗೂ ಆತ್ಮವಿಶ್ವಾಸದ ಲಕ್ಷಣಗಳನ್ನು ನೋಡಬಯಸುತ್ತಾರೆ.

ಹಾಗಿದ್ದಲ್ಲಿ ಮೋದಿಯ ನಾಯಕತ್ವದಲ್ಲಿ ಗುಜರಾತಿನ ಸಾಧನೆಗಳಾದರೂ ಏನು? ಎಂಬುದನ್ನು ಅವಲೋಕಿಸುವುದು ಬಹಳ ಅಗತ್ಯವೆನಿಸುತ್ತದೆ.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-1 : ಬಿ.ಜೆ.ಪಿ.ಯ ಆಳ್ವಿಕೆಯಲ್ಲಿ :

ಗುಜರಾತ್ ರಾಜ್ಯವನ್ನು ಬಿ.ಜೆ.ಪಿ.ಯು 1998-99 ರಿಂದ (ಅಂದರೆ ಸುಮಾರು 15 ವರ್ಷಗಳಿಂದ) ಆಳುತ್ತ ಬಂದಿದೆ. ಇದರಲ್ಲಿ ಮೋದಿಯ ಆಳ್ವಿಕೆ ಆರಂಭವಾದದ್ದು 10, 2001 ರಿಂದ.

19998-99 ರಿಂದ 2001-02 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ.ಯ ಶ್ರೀ ಕೇಶುಭಾಯ್ ಪಟೇಲರಿದ್ದರು. ಆಗ ಗುಜರಾತ್ ರಾಜ್ಯದ ವಾರ್ಷಿಕ ಅಭಿವೃದ್ಧಿ ದರ 7.5% ಇತ್ತು. ಭಾರತದ ಅಭಿವೃದ್ಧಿ ದರ 10.7 % ಇತ್ತು. ಅಂದರೆ ಬಿ.ಜೆ.ಪಿ.ಯು ಅಧಿಕಾರಕ್ಕೆ ಬಂದಾಕ್ಷಣ ಮಹತ್ತರವಾದ ಪವಾಡಗಳೇನೂ ಗುಜರಾತಿನಲ್ಲಿ ನಡೆಯಲಿಲ್ಲ ಎನ್ನುವುದನ್ನು ತಿಳಿಯಬಹುದು.

ಮೋದಿಯ ಆಡಳಿತ ಅವಧಿ ಆರಂಭಗೊಂಡಿದ್ದು 2002-03 ನೇ ಇಸವಿಯಿಂದ. ಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧಿ ದರ gujarath16.25 %. ಭಾರತದ ವಾರ್ಷಿಕ ಅಭಿವೃದ್ಧೀ ದರ 14%. ಭಾರತದ ಈ ಒಟ್ಟು ಅಭಿವೃದ್ಧೀ ದರವನ್ನು ಲೆಖ್ಖ ಹಾಕುವಾಗ ಅದರಲ್ಲಿ ಗುಜರಾತಿನಂತಹ ಉತ್ತಮ ಅಭಿವೃದ್ಧಿ ಹೊಂದಿರುವ ರಾಜ್ಯಗಳೂ ಸೇರಿರುತ್ತವೆ ಹಾಗೂ ಕಳಪೆ ಪ್ರದರ್ಶನ ನೀಡುವ ರಾಜ್ಯಗಳೂ ಸೇರಿರುತ್ತವೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯವು ಭಾರತಕ್ಕಿಂತ ಅಭಿವೃದ್ಧೀ ದರದಲ್ಲಿ ಕೇವಲ 2..25% ಹೆಚ್ಚಿನ ಅಭಿವೃದ್ದಿ ದರವನ್ನು ತೋರಿಸುತ್ತಿರುವುದು ದೊಡ್ಡ ಮಾತೇನಲ್ಲ.

ಇಲ್ಲಿ ನೀಡಿರುವ ಅಂಕಿ-ಅಂಶಗಳ ಕುರಿತು ಒಂದು ಮಾತು.

  1. ಇಲ್ಲಿಯ ಅಂಕಿ-ಅಂಶಗಳು ಭಾರತದ ರಿಸರ್ವ್ ಬ್ಯಾಂಕ್ ಪ್ರತಿ ವರ್ಷ ಹೊರತರುವ “Handbook of Statistics of Indian Economy”ಎಂಬ ಕಿರುಹೊತ್ತಿಗೆಯ ಆಧರಿಸಿ ನೀಡಲಾಗಿದೆ.
  2. ಅಭಿವೃದ್ಧೀ ದರವನ್ನು ಹೇಳುವಾಗ “ಸಾಮಾನ್ಯ ಸರಾಸರಿ”ಯನ್ನು ತೆಗುಕೊಳ್ಳಲಾಗಿದೆ.
  3. ರಾಜ್ಯದ ಅಭಿವೃದ್ಧಿ ದರವನ್ನು ಹೇಳುವಾಗ “Net State Domestic Product at Factor Cost” ನಲ್ಲಿ ಹೇಳಲಾಗಿದೆ. Factor Cost ನ್ನು ಯಾಕೆ ತೆಗೆದುಕೊಂಡಿದ್ದೇವೆ ಎಂದರೆ ಆಗ ಎಲ್ಲ ಲೆಕ್ಕಾಚಾರದ ಮೇಲೆ ಬೆಲೆ ಏರಿಕೆಯ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವ ಪ್ರಯಾಸದ ಕೆಲಸ ತಪ್ಪುತ್ತದೆ ಎಂಬ ಕಾರಣಕ್ಕೆ. Net State Domestic Product ಅಂದರೆ ಒಂದು ರಾಜ್ಯದ ಒಂದು ವರ್ಷದ ಜಿ.ಡಿ.ಪಿ. ಮೈನಸ್ ಆ ರಾಜ್ಯದ ನಿವೇಶನ, ವಾಹನಗಳು, ಯಂತ್ರೋಪಕರಣಗಳು ಇತ್ಯಾದಿ Capital Goods ಗಳಲ್ಲಿ ಆದ “ಡೆಪ್ರಿಷಿಯೇಷನ್”.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-2 : ಬಿ.ಜೆ.ಪಿ.ಯೇತರ ಪಕ್ಷಗಳ ಆಳ್ವಿಕೆಯಲ್ಲಿ :

  1. 1998-99 ರ ಮೊದಲು ಗುಜರಾತನ್ನು ಕಾಂಗ್ರೆಸ್ ಸರ್ಕಾರವೇ ಅನೇಕ ವರ್ಷಗಳಿಂದ ಅಭಿವೃದ್ಧಿ ಪಡೆಸುತ್ತ ಬಂದಿದೆ. ಗುಜರಾತಿನ ಈಗಿನ ಆರ್ಥಿಕ ಅಭಿವೃದ್ಧಿಗೆ ಭದ್ರವಾದ ಬುನಾದಿಯನ್ನು ಹಾಕಿದ್ದೇ ಅಲ್ಲಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವೆಂಬುದನ್ನು ನಾವು ಮರೆಯಬಾರದು. (1994-95 ರಿಂದ 1998-99 ರವರೆಗೆ ಗುಜರಾತಿನಲ್ಲಿ ರಾಜಕೀಯ ಅಸ್ಥಿರತೆಯಿತ್ತು. ಅನೇಕ ಮಂದಿ ಮುಖ್ಯಮಂತ್ರಿಗಳು ಈ ಅವಧಿಯಲ್ಲಿ ಆಗಿ ಹೋಗಿದ್ದು, ಈ ಒಂದು ಕಾಲಘಟ್ಟವನ್ನು ನಮ್ಮ ಅಧ್ಯಯನದಿಂದ ಹೊರಗಿಡುತ್ತಿದ್ದೇವೆ.)
  2. 1990-91 ರಿಂದ 1993-94 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಶ್ರೀ ಚಿಮನ್ ಭಾಯಿ ಪಟೇಲರಿದ್ದರು. Reliance-Gujarathಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧೀ ದರ 16.75 % ಇತ್ತು!!. ಅಂದರೆ ಮೋದಿಯ ಕಾಲದಲ್ಲಿರುವ ಅಭಿವೃದ್ಧೀ ದರಕ್ಕಿಂತಲೂ ಹೆಚ್ಚು!!.
  3. 1980-81 ರಿಂದ 1989-90 ರ ಅವಧಿಯಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ಸಿನ ಮಾನ್ಯ ಮಾಧವಸಿಂಗ್ ಸೋಳಂಕಿ. ಇವರ ಆಳ್ವಿಕೆಯಲ್ಲಿ ಗುಜರಾತ್ ವಾರ್ಷಕ್ಕೆ 14.8 % ವೇಗದಲ್ಲಿ ಬೆಳೆಯುತ್ತಿತ್ತ್ತು. ಆರ್ಥಿಕ ಉದಾರೀಕರಣ, ಜಾಗತೀಕರಣಗಳ ಕಲ್ಪನೆಯೇ ಇಲ್ಲದಿದ್ದ ಕಾಲ ಅದಾಗಿತ್ತು. ಆಂತಹ ಕಾಲಘಟ್ಟದಲ್ಲೇ ಶೇಕಡಾ 14.8 ರ ದರದಲ್ಲಿ ಅಭಿವೃದ್ಧಿ ಗುಜರಾತಿನಲ್ಲಿ ಆಗಿತ್ತು ಎಂದಾದಲ್ಲಿ ಮೋದಿಯ ಈಗಿನ 16.25% ಅಭಿವೃದ್ಧಿ ದರ ಬಡಾಯೀ ಕೊಚ್ಚಿಕೊಳ್ಳುವುದಕ್ಕೆ ಯೋಗ್ಯವಲ್ಲ. ಮೋದಿಯವರು ತನ್ನ ಮೊದಲು ಇದ್ದ ಅಭಿವೃದ್ಧೀ ದರವು ಕೆಳಗಿಳಿಯದಿರುವಂತೆ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಮಾತ್ರ ಖಂಡಿತವಾಗಿಯೂ ಎಲ್ಲರೂ ಒಪ್ಪಿಕೊಳ್ಳುವ ವಿಚಾರವಾಗಿದೆ.

ಮೋದಿಯ ಆಗಮನದ ಮೊದಲೇ:

ಗುಜರಾತ್ ಮೊದಲಿನಿಂದಲೂ ನಮ್ಮ ದೇಶದ ಬಹು ದೊಡ್ಡ ವ್ಯಾಪಾರ ಕೇಂದ್ರ. ಹರಪ್ಪ-ಮೊಹೆಂಜೋದಾರೋ ನಾಗರಿಕತೆಯ ಕಾಲದಿಂದಲೂ ಸಹ ಗುಜರಾತ್ ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿದೆ. ಸಂಪದ್ಭರಿತ ರಾಜ್ಯಗಳ ತುಲನೆಯಲ್ಲಿ 1985 ರಿಂದಲೇ ಗುಜರಾತ್ 3 ನೇ ಸ್ಥಾನದಲ್ಲಿದೆ.

  1. ಗುಜರಾತಿನಲ್ಲಿ ಒಟ್ಟು 18028 ಹಳ್ಳಿಗಳಿದ್ದು ಅವುಗಳಲ್ಲಿ 17940 ಹಳ್ಳಿಗಳು 1991 ರಲ್ಲೇ ಸಂಪೂರ್ಣವಾಗಿ ವಿದ್ಯುತ್ ಶಕ್ತಿಯನ್ನು ಪಡೆದಿದ್ದವು.
  2. ಗುಜರಾತಿನ ರಸ್ತೆಗಳಲ್ಲಿ 85% ರಸ್ತೆಗಳು ಮೋದಿ ಬರುವುದಕ್ಕಿಂತಲೂ ಮೊದಲೇ ಸಿಮೆಂಟ್ ರಸ್ತೆಗಳಾಗಿದ್ದವು.
  3. ಪ್ರಪಂಚದ ಅತಿ ದೊಡ್ಡ ಹಡಗುಗಳನ್ನು ಒಡೆಯುವ ಯಾರ್ಡ್, ಅಂಬಾನಿಯವರ ಜಾಮ್ ನಗರದ ಕಚ್ಚಾ ತೈಲ ಶುದ್ಧೀಕರಣ ಫ಼ಾಕ್ಟರಿ ಇವೆಲ್ಲ ಮೋದಿ ಬರುವ ಮೊದಲೇ ಗುಜರಾತಿನಲ್ಲಿ ಅಸ್ತಿತ್ವದಲ್ಲಿದ್ದವು.
  4. ಭಾರತಕ್ಕೆ ಬೇಕಾಗಿರುವ ತೈಲೋತ್ಪನ್ನಗಳಲ್ಲಿ 45% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿತ್ತು.
  5. ಭಾರತದ ಹಡಗುಗಳ ಮೂಲಕ ನಡೆಯುವ ಸರಕು-ಸಾಗಣೆಯ 18% ಗುಜರಾತಿನಿಂದ ಮೋದಿ ಬರುವ ಮೊದಲೇ ನಡೆಯುತ್ತಿತ್ತು.
  6. ನಮ್ಮ ದೇಶಕ್ಕೆ ಬೇಕಾದ ಕಚ್ಚಾ ತೈಲದ 23% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  7. ನಮಗೆ ಬೇಕಾಗಿರುವ ನೈಸರ್ಗಿಕ ಅನಿಲದಲ್ಲಿ 30% ಅನಿಲ ಗುಜರಾತಿನಿಂದ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  8. ನಮ್ಮ ದೇಶಕ್ಕೆ ಅಗತ್ಯವಾಗಿರುವ ಔಷಧಿಗಳಲ್ಲಿ 26% ಔಷಧಿಗಳೂ, 78% ಉಪ್ಪು ಹಾಗೂ 98% ಸೋಡಾ ಆಷ್ ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿದ್ದವು.

ಮೋದಿಯ ಗುಜರಾತ್ v/s ಬೇರೆ ಕೆಲವು ರಾಜ್ಯಗಳು :

2002-03 ರಿಂದ ಮೋದಿಯವರ ಆಡಳಿತ ಗುಜರಾತಿನಲ್ಲಿ ನಡೆಯುತ್ತಿದ್ದು ಗುಜರಾತ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು ದೇಶದ ಬೇರೆ ಯಾವ ರಾಜ್ಯಗಳೂ ಈ ರೀತಿಯ ಅಭಿವೃದ್ಧಿಯನ್ನು ಸಾಧಿಸುತ್ತಿಲ್ಲ ಇದಕ್ಕೆಲ್ಲ ಮಾನ್ಯ ಮೋದಿಯವರ “ಸಮರ್ಥ ನಾಯಕತ್ವ”ವೇ ಕಾರಣ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಗುಜರಾತ್ ರಾಜ್ಯದಷ್ಟೆ ಪ್ರಮಾಣದಲ್ಲಿ(ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು) ಬೇರೆ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅವುಗಳ ಕಡೆಗೆ ಒಂದು ಸಲ ನಮ್ಮ ಗಮನವನ್ನು ನೀಡೋಣ.

  1. ಮಹಾರಾಷ್ಟ್ರ ರಾಜ್ಯ: ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 15.5%.
    • ( ಅ) ಮಹಾರಾಷ್ಟ್ರದ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 54 ಪಟ್ಟು ಹೆಚ್ಚಾಗಿದೆ.
    • (ಆ) ಗುಜರಾತಿನ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 56 ಪಟ್ಟು ಹೆಚ್ಚಾಗಿದೆ.

    ಇದನ್ನು ಗಮನಿಸಿದಾಗ ಮಹಾರಾಷ್ಟ ರಾಜ್ಯದ ಸಾಧನೆಗಳು ಗುಜರಾತಿನ ಸಾಧನೆಗೆ ಬಹಳ ಸಮೀಪದಲ್ಲೇ ಇದೆ.

  2. ಹರಿಯಾಣಾ ರಾಜ್ಯ : 04/2005 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 18%
  3. ಆಂಧ್ರಪ್ರದೇಶ ರಾಜ್ಯ: 05/2004 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 16%
  4. ಇನ್ನು ಜಿ.ಡಿ.ಪಿ.ಯ ಲೆಕ್ಕ ಹಾಕಿದಾಗ ಇಡೀ ದೇಶದಲ್ಲಿ ಗುಜರಾತ್ ಐದನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಮತ್ತು ತಮಿಳುನಾಡಿನ ನಂತರ ಗುಜರಾತ್ ಬರುತ್ತದೆ.
  5. ಪ್ರತಿ ವ್ಯಕ್ತಿಯ ವಾರ್ಷಿಕ ತಲಾ ಆದಾಯವನ್ನು ಲೆಕ್ಕ ಹಾಕಿದರೆ, ಹರ್ಯಾಣಾದಲ್ಲಿ ರೂ. 78781/-, ಮಹಾರಾಷ್ಟ್ರದಲ್ಲಿ ರೂ. 74072/- ಆದರೆ ಗುಜರಾತಿನಲ್ಲಿ ರೂ. 63961/-.

ಮೋದಿಯ ಆಳ್ವಿಕೆಯಲ್ಲಿ ಈಗಿನ ಗುಜರಾತ್ :

ಸುಮಾರು 12 ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಮಾನ್ಯ ನರೇಂದ್ರ ಮೋದಿಯವರ ಸಾಧನೆಗಳಾದರೂ ಏನು? ಜನಸಾಮಾನ್ಯರಿಗೆ ಉಪಯೋಗವಾಗುವ ಕಾರ್ಯಗಳಾದರೂ ಯಾವುವು? ಎಂಬಿತ್ಯಾದಿಗಳನ್ನು ತಿಳಿಯುವ ಮೊದಲು ಗುಜರಾತಿನ ಈಗಿನ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸುವುದು ಒಳ್ಳೆಯದು.

  1. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಗುಜರಾತ್ 10 ನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಕೇರಳ ರಾಜ್ಯಕ್ಕೆ.
  2. 5 ವರ್ಷಕ್ಕೂ ಕಮ್ಮಿ ವಯಸ್ಸಿನ ಮಕ್ಕಳ ಸಂಖ್ಯೆಯಲ್ಲಿ 44.6% ಮಕ್ಕಳು ಸತ್ವಯುತ ಆಹಾರವಿಲ್ಲದೇ ಗುಜರಾತಿನಲ್ಲಿ ನರಳುತ್ತಿದ್ದಾವೆ.
  3. ಗುಜರಾತಿನ ಮಕ್ಕಳಲ್ಲಿ 70% ಮಕ್ಕಳು ಅನಿಮಿಯಾದಿಂದ ಬಳಲುತ್ತಿದ್ದಾರೆ.
  4. ಎನ್.ಆರ್.ಇ.ಜಿ.ಎಸ್. ಸ್ಕೀಂನ ಅಡಿಯಲ್ಲಿ ಬೇರೆ ರಾಜ್ಯದಲ್ಲಿ ಕೊಡುವ ದಿನಗೂಲಿಯ ಅರ್ಧದಷ್ಟು ಮಾತ್ರ ದಿನಗೂಲಿಯನ್ನು ಗುಜರಾತ್ ಸರ್ಕಾರ ಕೊಡುತ್ತಿದೆ.
  5. ಸುಶಿಕ್ಷಿತ ಮಹಿಳೆಯರಲ್ಲಿ ಕೇವಲ 2.04% ಮಹಿಳೆಯರು ಮಾತ್ರ ಸರ್ಕಾರಿ ಹಾಗೂ ಅರೆ ಸರ್ಕಾರೀ ಉದ್ಯೋಗದಲ್ಲಿದ್ದಾರೆ.
  6. ಗುಜರಾತಿನಲ್ಲಿ ಅತೀ ಕಡಿಮೆ ಕೂಲಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿದ್ದು, ಅದರಲ್ಲೂ ಮಹಿಳಾ ಕಾರ್ಮಿಕರಿಗೆ ಸಿಗುವ ಸಂಬಳ ಬಹಳ ನಿಕೃಷ್ಟವಾಗಿರುತ್ತದೆ.
  7. ಸಂಘಟಿತ ಕಾರ್ಮಿಕರಲ್ಲಿ ಉದ್ಯೋಗದ ಬೆಳವಣಿಗೆಯ ಪ್ರಮಾಣ ಅತಿ ಕಡಿಮೆಯಾಗಿದೆ. ವರ್ಷಕ್ಕೆ ಸಂಘಟಿತ ಕ್ಷೇತ್ರದಲ್ಲಿ ಕೇವಲ 0.50% ಉದ್ಯೋಗದಲ್ಲಿ ಹೆಚ್ಚಳವನ್ನು ಕಾಣಬಹುದು. ಅಂದರೆ ಈ ವರ್ಷ 1000 ಜನ ಕೆಲಸದಲ್ಲಿದ್ದರೆ, ಮುಂದಿನ ವರ್ಷದಲ್ಲಿ ಅವರ ಸಂಖ್ಯೆ ಕೇವಲ 1005 !
  8. ಮೋದಿಯವರ ಗುಜರಾತಿನಲ್ಲಿ ಬಡವರೆಂದರೆ ಯಾರೂ ಎಂಬುದನ್ನು ನಿರ್ಧರಿಸಲು ಇರುವ ಮಾನದಂಡವೇ ಬೇರೆ!!. ನಗರ ಪ್ರದೇಶದಲ್ಲಿ ಯಾರ ಮಾಸಿಕ ಆದಾಯ 540/- ರೂಪಾಯಿ ದಾಟುವುದಿಲ್ಲವೋ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ modi-GIMಯಾರ ಮಾಸಿಕ ಆದಾಯ ರೂಪಾಯಿ 361/- ದಾಟುವುದಿಲ್ಲವೋ ಅವರು ಮಾತ್ರ ಬಡವರು. ಅವರಿಗೆ ಮಾತ್ರ BPL.ಕಾರ್ಡ್‌ನ್ನು ನೀಡಲಾಗುವುದು!!.
  9. ಪ್ರತಿ ವರ್ಷ ಅಂತಾರಾಷ್ಟ್ರೀಯ ಉದ್ಯಮಪತಿಗಳನ್ನು ಗುಜರಾತಿಗೆ ಕರೆಯಿಸಿ “ಗ್ಲೋಬಲ್ ಮೀಟ್” ಮಾಡಿ, ಅನೇಕ ಉದ್ದಿಮೆಗಳಿಗೆ ಅಲ್ಲಿ ಸಹಿಹಾಕುವ ಕೆಲಸ ಗುಜರಾತಿನಲ್ಲಿ ನಡೆಸುತ್ತ ಬರಲಾಗಿದೆ. ಆದರೆ ಅವುಗಳಲ್ಲಿ ಕೇವಲ 20% ಮಾತ್ರ ಇಲ್ಲಿಯವರೆಗೆ ಅನುಷ್ಠಾನಗೊಂಡಿವೆ.
  10. ನಮ್ಮ ದೇಶಕ್ಕೆ ಇಲ್ಲಿಯವರೆಗೆ ಹರಿದುಬಂದಿರುವ FDI ನಲ್ಲಿ ಕೇವಲ 5% ಮಾತ್ರ ಗುಜರಾತಿಗೆ ತರಿಸುವಲ್ಲಿ ಮೋದೀಯ ಮೋಡಿ ಕೆಲಸಮಾಡಿದೆ. ತಮಿಳುನಾಡು ಮತ್ತು ಕರ್ನಾಟಕವು ಸದ್ದಿಲ್ಲದೆ ತಲಾ 6% ಈ.FDI ನ್ನು ತಮ್ಮದಾಗಿಸಿದ್ದರೆ, ಮಹಾರಾಷ್ಟ್ರಾದವರು 35% ತಮ್ಮೆಡೆಗೆ ಸೆಳೆದಿದ್ದಾರೆ.

ಕೆ.ಪಿ.ಶಶಿ ಎಂಬ ಚಿಂತಕರು ಗುಜರಾತಿನ ಅಭಿವೃದ್ಧಿಯ ಕುರಿತು ಒಂದು ಮಾತನ್ನು ಹೇಳಿದ್ದು ಅದು ಬಹಳ ಅರ್ಥಪೂರ್ಣವಾಗಿದೆ. ಅವರ ಪ್ರಕಾರ “ಮೋದಿಯವರ ಅಭಿವೃದ್ಧಿಯ ಮಾಡೆಲ್” ಆರ್.ಎಸ್.ಎಸ್.ನ ಚಡ್ಡಿಯಿದ್ದಂತೆ-ಅದು ಎಂದೂ ನೆಲವನ್ನು ಮುಟ್ಟುವುದೇ ಇಲ್ಲ!!.

ಗುಜರಾತಿನ ಕೃಷಿ :- ಸತ್ಯ ಮತ್ತು ಮಿಥ್ಯ

ನರೇಂದ್ರ ಮೋದಿಯ ಅಭಿಮಾನಿಗಳು ನರೇಂದ್ರಮೋದಿಯವರಿಂದ ಗುಜರಾತಿನ ಕೃಷಿ ಬಹಳವಾಗಿ ಬೆಳೆದಿದೆ. ಕೃಷಿಯಲ್ಲಿ ಭಾರತದ ಅಭಿವೃದ್ಧಿಗಿಂತ ಹೆಚ್ಚಿನದಾಗಿ ಅಭಿವೃದ್ಧಿ ಗುಜರಾತಿನಲ್ಲಿ ನಡೆದಿದೆ. ಇದಕ್ಕೆಲ್ಲ ಮೋದಿಯವರ ಸಮರ್ಥ ನಾಯಕತ್ವ, ಒಳನೋಟ ಇವುಗಳೇ ಕಾರಣ ಎಂದೆಲ್ಲ ಹೊಗಳಲು ಆರಂಭಿಸಿದ್ದಾರೆ.

ಮೋದಿಯೂ ಸಹ ತನ್ನ ವೆಬ್‌ಸೈಟ್‌ನಲ್ಲಿ ಹಾಗೂ ಇತರ ಕಡೆಯಲಿ ಭಾಷಣ ಮಾಡುವಾಗ ಈಗ ಭಾರತದ guj-agricultureಕೃಷಿಕ್ಷೇತ್ರದಲ್ಲಿ ನಾವೇ ನಂಬರ್ 1 ಎಂದೆಲ್ಲ ಸುಳ್ಳುಗಳನ್ನೂ ಹೇಳಿಯಾಗಿದೆ. ಭಾರತದ ಕೃಷಿ ವರ್ಷಕ್ಕೆ 4% ನಂತೆ ವೃದ್ಧಿಯಾಗುತ್ತಿದೆ, ಆದರೆ ಗುಜರಾತಿನಲ್ಲಿ ಅದು 11% ನಂತೆ ಹೆಚ್ಚಾಗುತ್ತಿದೆ ಎಂದು ಬಾಯಿಗೆ ಬಂದ ಅಂಕಿ-ಅಂಶಗಳನ್ನು ನೀಡಲಾಗುತ್ತಿದೆ.

ಕೇಂದ್ರ ಸಚಿವಾಲಯವು ಮುದ್ರಿಸಿರುವ ಭಾರತದ ಕೃಷಿಯ ಸ್ಥಿತಿ-ಗತಿ, 2012-13ರ ವರದಿಯ ಪ್ರಕಾರ ಕೃಷಿಯಲ್ಲಿ ಗುಜರಾತಿನ ಸ್ಥಾನ 8ನೇ ಸ್ಥಾನ.

2007-08 ರಿಂದ 2011-12 ರ ಅವಧಿಯಲ್ಲಿ ಗುಜರಾತಿನ ಕೃಷಿ ಅಭಿವೃದ್ಧಿಯು 4.8% ದರದಲ್ಲಿ ಪ್ರತಿವರ್ಷ ವೃದ್ಧಿಯಾಗುತ್ತಿದೆ.

ಗುಜರಾತ್ ಸರ್ಕಾರವು ಪ್ರತಿ ವರ್ಷ ತನ್ನ ಆರ್ಥಿಕ ಸ್ಥಿತಿ-ಗತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸುತ್ತದೆ. ಈ ರೀತಿ ಪ್ರಕಟಿತ ಮಾಹಿತಿಯ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರಲು ಬಯಸುತ್ತೇವೆ. ಆಗ ಮಾತ್ರ ಎಲ್ಲರಿಗೂ “ಈ ಮೋದಿ ಎನ್ನುವವ ಎಂತಹ ಸುಳ್ಳುಗಾರ” ಎಂಬುದು ಮನದಟ್ಟಾಗುತ್ತದೆ.

ವರ್ಷ ಆಹಾರಧಾನ್ಯಗಳು (ಲಕ್ಷ ಟನ್‌ಗಳಲ್ಲಿ) ಎಣ್ಣೆಕಾಳುಗಳು (ಲಕ್ಷ ಟನ್‌ಗಳಲ್ಲಿ) ಹತ್ತಿ ಬೆಳೆ(ಲಕ್ಷ ಬೇಲ್‌ಗಳಲ್ಲಿ)
1996-97 60.89 38.02 28.18
1997-98 61.13 38.65 34.17
1998-99 60.38 38.81 40.03
1999-2000 44.37 18.26 21.45
2000-01 31.84 17.37 12.82
2001-02 52.54 37.46 16.84
2002-03 43.95 18.77 18.39
2003-04 67.36 58.55 42.79
2004-05 51.53 28.99 55.40
2005-06 61.41 47.34 65.12
2006-07 61.10 28.46 87.87
2007-08 82.06 46.99 78.76
2008-09 63.45 39.32 82.75
2009-10 56.05 30.10 74.01
2010-11 100.71 51.42 98.25
2011-12 92.57 50.53 103.75

1996-97 ರಿಂದ 2004-05 ರವರೆಗೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ದರ ವಾರ್ಷಿಕ ಸರಾಸರಿ 5.65% ಇತ್ತು, ಅದೀಗ 6.47% ಆಗಿದೆ.

ಗುಜರಾತಿನ ಕೃಷಿಯಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಈ ಕೆಲವು ಕಾರಣಗಳನ್ನು ಪಟ್ಟಿಮಾಡಬಹುದು:

  1. ಸರ್ದಾರ್ ಸರೋವರ ಆಣೆಕಟ್ಟಿನಿಂದ ಗುಜರಾತಿನ ಅನೇಕ ಭಾಗಗಳಿಗೆ 2002 ರಿಂದ ನೀರು ಲಭ್ಯವಾಗಲಾರಂಭಗೊಂಡಿದ್ದು.
  2. Bt ಹತ್ತಿಯನ್ನು ಬೆಳೆಸುತ್ತಿರುವುದು
  3. ಮೈನರ್ ಇರಿಗೇಷನ್‌ಗಳ ಆಳವಡಿಕೆ
  4. ಭೂಮಿಯ ಅಂತರ್ಜಲವನ್ನು ಹೆಚ್ಚಿಸಲು ಸಾವಿರಾರು ಚೆಕ್-ಡ್ಯಾಮ್ ಗಳ ರಚನೆ
  5. ಸಣ್ಣ-ಸಣ್ಣ ಯಾಂತ್ರಿಕ ಉಪಕರಣಗಳ ಬಳಕೆ
  6. ಒಳ್ಳೆಯ ಸಾರಿಗೆ ಸೌಕರ್ಯಗಳು
  7. ನಿಯಮಿತವಾಗಿ ಹಾಗೂ ಕಡ್ಡಾಯವಾಗಿ ನಿಗದಿಪಡಿಸಿದ ಅವಧಿಗೆ 3-ಫೇಸ್ ವಿದ್ಯುತ್ ಸರಬರಾಜು

ಮುಗಿಸುವ ಮೊದಲು:

ಗುಜರಾತಿನಲ್ಲಿ ಮೋದಿ ಆಳ್ವಿಕೆಯಲ್ಲಿ ನಗರದ ಮಧ್ಯಮ ವರ್ಗದ ಜನರು ಅನೇಕ ಸೌಲಭ್ಯಗಳಿಂದ, middleclass-indiaಅಭಿವೃದ್ಧಿಯ ಫಲವನ್ನು ಆನಂದಿಸುತ್ತ ಇದ್ದಾರೆಯೇ ವಿನಹ ಅಲ್ಲಿಯ ಆದಿವಾಸಿಗಳ ಹಾಗೂ ದಲಿತರ ಸ್ಥಿತಿ-ಗತಿ ಬಹಳ ಚಿಂತಾಜನಕವಾಗಿದೆ. ಫಲವತ್ತಾದ ಭೂಮಿಯನ್ನು ಉದ್ಯಮಪತಿಗಳಿಗೆ ನೀಡುತ್ತಿರುವುದರ ವಿರುದ್ಧ ಈಗಾಗಲೇ ಗುಜರಾತಿನ ಗ್ರಾಮ-ಗ್ರಾಮಗಳಲ್ಲಿ ಸಂಘಟಿತ ರೈತರಿಂದ ಪ್ರತಿರೋಧ ಬಲಗೊಳ್ಳುತ್ತಿದೆ. ಭಾರತದ ಉದ್ಯಮಪತಿಗಳಿಗೆ ಈಗ ಮೋದಿ ಬೇಕಾಗಿದ್ದಾರೆ. ಯು.ಪಿ.ಎ. ಸರ್ಕಾರದಿಂದ ನಿರೀಕ್ಷಿತ ಅನುಕೂಲತೆಗಳು ಸುಲಭವಾಗಿ ದೊರೆಯಲಾರದು ಎಂದು ಮನಗಂಡಿರುವ ಬಂಡವಾಳಶಾಹಿಗಳು ಈಗ ಮೋದಿಯನ್ನು “ದೇಶದ ಪ್ರಧಾನಿ”ಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಮೋದಿಯ ಸುಳ್ಳುಗಳನ್ನು ಬಯಲು ಮಾಡಬೇಕು, ಮೋದಿಯ ಕೊಳಕು ಕೋಮುವಾದವನ್ನು ಹಿಮ್ಮೆಟ್ಟಿಸುವಲ್ಲಿ ಸಂಘಟಿತ ಹಾಗೂ ವೈಜ್ಞಾನಿಕ ಕಾರ್ಯತಂತ್ರಗಳನ್ನು ರೂಪಿಸಬೇಕು.

74 thoughts on “ಮೋದಿಯ ಸುಳ್ಳುಗಳಿಗೆ ದೇಶದ ಜನತೆ ಮರುಳಾಗದಿರಲಿ

    1. raghavendra.y.s

      why not nitesh kumar, navin patnaik , bjps own shivraj singh chouan,sushma,etc, there is no dearth of leaders in our country.above mentioned are thousand time better than this lier.

      Reply
    1. noushu

      west bangaladallu yesto varsha alli leftist pakshagalanna gallisive centernalli congrassannu gellisive indiadalli electionalli gedda thakshana adhu abivridi antha helakagalla

      Reply
      1. Ananda Prasad

        ನೀವು ಹೇಳಿದ್ದು ಸರಿಯಾಗಿದೆ. ಒಂದು ಪಕ್ಷವು ಸತತವಾಗಿ ಗೆಲ್ಲುತ್ತಿದ್ದರೆ ಅದು ಅಭಿವೃದ್ಧಿ ಎಂದು ಹೇಳಲಾಗದು. ದೇವರು, ಧರ್ಮ, ಮಂದಿರ, ಗೋಮಾತೆ ಮೊದಲಾದ ಧಾರ್ಮಿಕ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಒಂದು ಧರ್ಮದವರನ್ನು ಇನ್ನೊಂದು ಧರ್ಮದವರ ವಿರುದ್ಧ ಎತ್ತಿ ಕಟ್ಟಿ ಬಹುಸಂಖ್ಯಾತರ ಓಟು ಬ್ಯಾಂಕ್ ಮಾಡಿ ಗೆಲ್ಲುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ. ಯಾವ ರೀತಿ ಜಾತಿ ರಾಜಕೀಯ, ವೋಟಿಗಾಗಿ ನೋಟು ಹಂಚುವ ರಾಜಕೀಯ ಅನೈತಿಕವೋ ಅದೇ ರೀತಿ ಅಮಾಯಕ ಬಹುಸಂಖ್ಯಾತರ ಧಾರ್ಮಿಕ ವೋಟ್ ಬ್ಯಾಂಕ್ ರೂಪಿಸಿ ನಡೆಸುವ ರಾಜಕೀಯವೂ ಅನೈತಿಕ. ಈ ರೀತಿ ಅನೈತಿಕ ರಾಜಕೀಯ ಮಾಡಿ ಗಳಿಸಿದ ಬಹುಮತ ವಾಸ್ತವಾಗಿ ಬಹುಮತವಲ್ಲ ಅದು ಅಮಾಯಕ ಜನರಿಗೆ ಧರ್ಮದ ಅಫೀಮು ತಿನ್ನಿಸಿ ಅವರು ಯೋಚನಾರಹಿತ ಸ್ಥಿತಿ ತಲುಪುವಂತೆ ಮಾಡಿ ಮಾಡಿದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಪಹರಣ ಎಂದು ಹೇಳಿದರೆ ತಪ್ಪಾಗಲಾರದು. ಹೀಗಾಗಿ ಧರ್ಮ, ದೇವರು, ಮಂದಿರ, ಗೋಮಾತೆ ಮೊದಲಾದ ಭಾವನಾತ್ಮಕ ವಿಷಯ ಎತ್ತಿಕೊಂಡು ರಾಜಕೀಯ ನಡೆಸುವ ಪಕ್ಷಗಳನ್ನು ವಿದ್ಯಾವಂತ ಜನ ತಿರಸ್ಕರಿಸಿ ಹೊಸ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ. ಆದರೆ ಅದು ಆಗುತ್ತಿದೆಯೇ? ಇಲ್ಲ. ವಿದ್ಯಾವಂತರು ಮೋದಿಯ ಭ್ರಮಾಪಾಶಕ್ಕೆ ಒಳಗಾಗಿದ್ದಾರೆ. ಮೋದಿ ಬ್ರಿಗೇಡ್ ಎಂಬ ಹೆಸರೇ ಭೀತಿ ಹುಟ್ಟಿಸುವಂತಿದೆ. ಬ್ರಿಗೇಡ್ ಎಂದರೆ ಸೈನ್ಯದ ಒಂದು ದಳ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಯ ಹೆಸರಿನಲ್ಲಿ ಸೈನ್ಯ ದಳವನ್ನು ಮಾಡಿ ಅಬ್ಬರದ ಪ್ರಚಾರ ನಡೆಸುವುದು ಅಷ್ಟು ಉತ್ತಮವಾದ ನಡವಳಿಕೆ ಅಲ್ಲ. ಇದರಲ್ಲಿ ವಿದ್ಯಾವಂತ ಜನರೇ ತೊಡಗಿರುವುದು ನಿಜಕ್ಕೂ ಖೇದಕರ. ಈ ರೀತಿಯ ವ್ಯಕ್ತಿಪೂಜೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಸಾರಿ ಸಾರಿ ಹೇಳಬೇಕಾಗಿದೆ. ಅದೇ ರೀತಿ ಬಿಜೆಪಿ ಪಕ್ಷದ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂಬ ಘೋಷಣೆಯಲ್ಲಿಯೂ ಫ್ಯಾಸಿಸಂನ ಧ್ವನಿ ಕಾಣುತ್ತದೆ

        Reply
  1. Theertha Merkaje

    Something is better than nothing. Like modi also. Can you please show the alternative for modi ???? Great you collected good statistics about gujarath. Like this can you please collect the statistics about Robert vadra , Coal scam , 3g scam. Write article about these scams & alert people. Is it possible ???

    Reply
    1. Peter

      Those statistics are infront of the nation but so called future PM projecting like he ‘ll take India over night as US. Even hiding tonnes of facts about him & Gujrat.

      Reply
    2. LogicalIndian

      This is what’s going wrong in this election, BJP has made everyone think we are electing just the PM. PM does not have all the powers, Manmohan singh was not the one doing scam, it was people in his party. Same would happen with modi. Modi doesn’t punish corrupt people around him (babu bokharia, amit shah, yedyurappa) at this stage, he obviously wont even be punishing them when he becomes PM. Why don’t people understand this?
      Let’s aim at putting most clean eligible people into parliament (because its in parliament where decisions are made, bills are passed) and not chose who is the best possible PM candidate. I believe anyone clean and with good administrative knowledge can take up this position.

      DONT VOTE FOR LESSER EVIL, VOTE FOR GREATER GOOD

      Reply
  2. Ananda Prasad

    ಭಾರತಕ್ಕೆ ಧರ್ಮ, ದೇವರು, ಗೋಮಾತೆ, ಮಂದಿರ ಮೊದಲಾದವುಗಳ ಹೆಸರಿನಲ್ಲಿ ರಾಜಕೀಯ ಮಾಡದ ಸ್ವಚ್ಛ ವ್ಯಕ್ತಿತ್ವದ ರಾಷ್ಟ್ರೀಯ ಪಕ್ಷವೊಂದರ ಅವಶ್ಯಕತೆ ಇದೆ. ಅಂಥ ಪಕ್ಷವನ್ನು ರೂಪಿಸುವ ಪ್ರಯತ್ನ ಆಮ್ ಆದ್ಮಿ ಪಕ್ಷ ಕಟ್ಟುವುದರೊಂದಿಗೆ ಆರಂಭವಾಗಿದೆ ಆದರೆ ದೇಶದ ಮಾಧ್ಯಮಗಳಿಗೆ ದೇಶದಲ್ಲಿ ಸ್ವಚ್ಛ ರಾಜಕೀಯ ಪಕ್ಷದ ಬೆಳವಣಿಗೆ ಆಗಬೇಕೆಂಬ ತುಡಿತ ಇಲ್ಲ. ಹೀಗಾಗಿ ಪರ್ಯಾಯ ರಾಜಕೀಯವನ್ನು ಬೆಳೆಸುವ ಕುರಿತು ದೇಶದ ಮಾಧ್ಯಮಗಳು ಯಾವುದೇ ಗಮನ ಹರಿಸುತ್ತಿಲ್ಲ. ಮಾಧ್ಯಮಗಳು ಮೋದಿಯ ಭಜನೆಯಲ್ಲಿ ಮಾತ್ರವೇ ಆಸಕ್ತಿ ಹೊಂದಿವೆ ಹೊರತು ದೇಶಕ್ಕೆ ಕೋಮುವಾದದ ಸೋಂಕಿಲ್ಲದ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಸ್ವಚ್ಛ ಪಕ್ಷಗಳನ್ನು ಬೆಳೆಸುವ ಯತ್ನವನ್ನೇ ಮಾಡುತ್ತಿಲ್ಲ. ಆಮ್ ಆದ್ಮಿ ಪಕ್ಷದ ವಿಶೇಷತೆ, ಅದು ಪ್ರತಿಪಾದಿಸುವ ಪ್ರಜಾಸತ್ತಾತ್ಮಕ ಮೌಲ್ಯಗಳು ಇವುಗಳ ಬಗ್ಗೆ ಮಾಧ್ಯಮಗಳಲ್ಲಿ ಎಳ್ಳು ಕಾಳಿನಷ್ಟೂ ಚರ್ಚೆ ಆಗುತ್ತಿಲ್ಲ ಯಾಕೆ ಎಂದು ದೇಶದ ಜನ ಮಾಧ್ಯಮಗಳನ್ನು ಪ್ರಶ್ನಿಸಬೇಕಾದ ಅಗತ್ಯ ಇದೆ. ಅದೇ ರೀತಿ ಲೋಕಸತ್ತಾ ಪಕ್ಷವು ಕೂಡ ಉತ್ತಮ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಗುಣಗಳನ್ನು ಹೊಂದಿದ್ದು ಇವುಗಳನ್ನು ಮಾಧ್ಯಮಗಳು ಏಕೆ ಜನರ ಮುಂದೆ ಇಡುತ್ತಿಲ್ಲ ಎಂಬುದನ್ನು ದೇಶದ ಪ್ರಜ್ಞಾವಂತ ನಾಗರಿಕರು ಮಾಧ್ಯಮಗಳನ್ನು ಪ್ರಶ್ನಿಸಬೇಕಾಗಿದೆ. ಸ್ವಚ್ಛ ಹಿನ್ನೆಲೆ ಹೊಂದಿಲ್ಲದ ಮೋದಿಯನ್ನೇ ಯಾಕೆ ಮಾಧ್ಯಮಗಳು ಅತಿರಂಜಿಸಿ ಭಾರತದ ಸಂಕಷ್ಟಗಳನ್ನೆಲ್ಲ ಪರಿಹರಿಸಲು ಧರೆಗಿಳಿದ ದೇವದೂತ ಎಂಬ ರೀತಿಯಲ್ಲಿ ವರ್ಣಿಸುತ್ತಿವೆ ಎಂಬುದನ್ನು ಮಾಧ್ಯಮಗಳನ್ನು ಪ್ರಶ್ನಿಸುವ ಗುಣವನ್ನು ನಾಗರಿಕರು ಬೆಳೆಸಿಕೊಳ್ಳಬೇಕಾಗಿದೆ.

    Reply
  3. vageesh kumar

    ಆನಂದ್ ಪ್ರಸಾದ್ ಅವರೇ ಆಮ್ ಆದ್ಮಿ ಪಕ್ಷದ ಬಗ್ಗೆ ಅಷ್ಟು ನಿರೀಕ್ಷೆ ಬೇಡ. ಪಾಪ, ಗಾಂಧೀಜಿಯವರನ್ನು ಉಪವಾಸ ಕೆಡವಿ ನೆಹರು ಪ್ರಧಾನಿಯಾದರು. ಅದೇ ರೀತಿ ಅಣ್ಣಾ ಹಜಾರೆ ಅವರನ್ನು ಬಳಸಿಕೊಂಡು ಕೇಜ್ರಿವಾಲ್, ಕಿರಣ್ ಬೇಡಿ, ಪ್ರಶಾಂತ್ ಭಷಣ್ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರು ಅಷ್ಟು ಪ್ರಾಮಾಣಿಕರಾದರೆ ಕೇಜ್ರಿವಾಲ್ ಲಕ್ಷಾಂತರ ತೆರಿಗೆ ಉಳಿಸಿಕೊಂಡಿzಕೆ ? ಕಿರಣ್ ಬೇಡಿ ಇಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿ ಹೈಎಂಡ್ ಟಿಕೆಟ್ ಹಣ ಕ್ಲೈಮ್ ಮಾಡಿzಕೆ ? ಹರ್ಯಾಣ (ಅಥವಾ ಹಿಮಾಚಲ ಪ್ರದೇಶ)ದಲ್ಲಿ ಸ್ವಂತ ಮನೆಯನ್ನು ಬಿಟ್ಟರೆ ಬೇರೆ ಭೂಮಿ ಖರೀದಿಸಬಾರದು ಎಂಬ ಕಾನೂನು ಗೊತ್ತಿದ್ದೂ ಪ್ರಶಾಂತ್ ಭಷಣ್ ಅಪಾರ ಜಾಗ ಖರೀದಿಸಿ ರೆಸಾರ್ಟ್ ಮಾಡಿದ್ದು ಯಾಕೆ ? (ಪರಿಸರ ರಕ್ಷಣೆಯ ಹಿನ್ನೆಲೆಯಲ್ಲಿ ಅಲ್ಲಿ ಬೇರೆಡೆಯರು ಬಂದು ವ್ಯಾಪಾರಿ ಬುದ್ಧಿಯಿಂದ ಭಮಿ ಖರೀದಿಸುವಂತಿಲ್ಲ). ಆದ್ದರಿಂದ ಸಿನಿಕತನ ಬೇಡ. ಎಲ್ಲರೂ ಕಳ್ಳರೇ. ಎಲ್ಲರೂ ಅವರವರ ಮೂಗಿನ ನೇರಕ್ಕೆ ಜಾತ್ಯತೀತರು, ಶುದ್ಧಹಸ್ತರು, ಪ್ರಾಮಾಣಿಕರು ಅಲ್ಲವೇ ? ಥೂ ಖಚಡಾ ಪೊಲಿಟಿಕ್ಸ್

    Reply
    1. Ananda Prasad

      ಕೇಜರಿವಾಲ್ ತೆರಿಗೆ ಕಳ್ಳತನ ಮಾಡಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಬಹಳ ಉತ್ತಮ ಸಂಬಳ ತರುವ ಹುದ್ದೆ ಬಿಟ್ಟು ಸಮಾಜ ಸೇವೆಗೆ ಧುಮುಕಿರುವ ಕೇಜರಿವಾಲ್ ಬಗ್ಗೆ ಮಾಡುವ ಆಪಾದನೆಗಳಲ್ಲಿ ಹುರುಳಿದೆ ಎಂದು ನನಗೆ ಅನಿಸುತ್ತಿಲ್ಲ. ಕಿರಣ್ ಬೇಡಿ ಆಮ್ ಆದ್ಮಿ ಪಕ್ಷದಲ್ಲಿ ಇಲ್ಲ. ಪ್ರಶಾಂತ್ ಭೂಷಣ್ ಭ್ರಷ್ಟಾಚಾರ ಮಾಡಿ ಆ ಹಣದಿಂದ ಭೂಮಿ ಖರೀದಿಸಿಲ್ಲ ಎಂದು ನನ್ನ ಭಾವನೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಅಂಶಗಳು ಆಮ್ ಆದ್ಮಿ ಪಕ್ಷದಲ್ಲಿ ಇವೆ. ಪಕ್ಷದೊಳಗೆ ಅಂತರಿಕ ಲೋಕಪಾಲ್ ವ್ಯವಸ್ಥೆ ಇದೆ. ಇಂಥ ವ್ಯವಸ್ಥೆ ಭಾರತದ ಯಾವ ರಾಜಕೀಯ ಪಕ್ಷಗಳಲ್ಲೂ ಇಲ್ಲ. ಹೀಗಾಗಿ ಇಂಥ ರಾಜಕೀಯ ಪಕ್ಷವನ್ನು ಬೆಳೆಸಿದರೆ ಭಾರತದ ರಾಜಕೀಯ ನಿಧಾನಕ್ಕೆ ಸ್ವಚ್ಚವಾಗುತ್ತಾ ಬರುವುದರಲ್ಲಿ ಸಂದೇಹವಿಲ್ಲ. ಅದೇ ರೀತಿ ಲೋಕಸತ್ತಾ ಪಕ್ಷದಲ್ಲಿಯೂ ಪ್ರಜಾಪ್ರಭುತ್ವದ ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿಯುವ ಅಂಶಗಳು ಇವೆ. ಈ ಪಕ್ಷಗಳನ್ನು ಜನ ಬೆಳೆಸಿದರೆ ದೇಶದ ರಾಜಕೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ ಬರಲಿರುವುದು ಖಚಿತ. ಮಾಧ್ಯಮಗಳು ಇಂಥ ಪಕ್ಷಗಳನ್ನು ಜನರ ಮುಂದೆ ಇಡಲು ಮುಂದೆ ಬರುತ್ತಿಲ್ಲ ಏಕೆಂದರೆ ಮಾಧ್ಯಮಗಳಿಗೆ ಹಾಗೂ ಅದನ್ನು ನಡೆಸುವ ಮಾಲಿಕರಿಗೆ ದೇಶದ ಉದ್ಧಾರ ಬೇಕಾಗಿಲ್ಲ. ಅವರಿಗೆ ದೇಶ ಈಗ ಇರುವಂತೆಯೇ ಮೂಲಭೂತವಾದ ಹಾಗೂ ಪುರೋಹಿತಶಾಹಿ ನಿಯಂತ್ರಣದಲ್ಲಿ ಇರಬೇಕೆಂದು ಇದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯುವುದು ಅವರಿಗೆ ಇಷ್ಟವಿಲ್ಲ.

      Reply
      1. Girish Joshi

        ಆನಂದ ಪ್ರಸಾದ ಅವರೆ ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ಅನ್ನುವಂತಿದೆ ನಿಮ್ಮ ಧಾಟಿ…ನೋಡಿ ಎಲ್ಲರೂ ಕಳಂಕಿತರೆ ಆದ್ರೆ ಯುವ ಸಮೂಹದಲ್ಲಿ ಒಂದು ಭರವಸೆಯ ಬೆಳಕನ್ನು ತೋರಿದ್ದು ಮಾತ್ರ ಲಾಲ್ ಬಹದ್ದೂರ ಶಾಸ್ತ್ರೀಜಿ ಮತ್ತೇ ಅವರನ್ನು ಬಿಟ್ಟರೆ ಮೋದಿ ಅವರೆ…ಏನೋ ಹೇಳಬೇಕೆಂಬುದನ್ನು ಹೇಳದೇ ಪೂರ್ವಾಗ್ರಹ ಪೀಡಿತರಾಗುವುದು ಒಳ್ಳೆಯದಾ…

        Reply
        1. Ananda Prasad

          ಗುಜರಾತ್ ಗಲಭೆಗಳ ಕಳಂಕ ಹೊತ್ತ ಮೋದಿಯನ್ನು ನಿಷ್ಕಳಂಕ ಲಾಲ್ ಬಹಾದುರ್ ಶಾಸ್ತ್ರಿಯವರಿಗೆ ಹೋಲಿಸುವುದು ಶಾಸ್ತ್ರಿಯವರಿಗೆ ಮಾಡುವ ಅವಮಾನವೇ ಆದೀತು. ಒರಟು ಸ್ವಭಾವದ ಹಿಂಬಾಲಕರನ್ನು ಕಟ್ಟಿಕೊಂಡಿರದ ಸೌಮ್ಯ, ಸುಸಂಕೃತ ಸ್ವಭಾವದ ಶಾಸ್ತ್ರಿಯವರು ಎಂದೂ ದೇವರು, ಧರ್ಮ, ಗೋಮಾತೆ, ಮಂದಿರ ಮೊದಲಾದ ಭಾವನಾತ್ಮಕ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ. ನಾಡಿನ ಸುಸಂಕೃತ ಜನ ಇದನ್ನು ಗಮನಿಸುತ್ತಾರೆ ಎಂದು ಭಾವಿಸುತ್ತೇನೆ.

          Reply
    2. kendusiruha

      ಸಿನಿಕತನ ಬೇಡ ಅಂತೀರಿ, ಇಷ್ಟು ಸಿನಿಕತನದಿಂದ ಮಾತಾಡ್ತೀರಿ…ದೇಶವನ್ನೇ ಅಡವಿಟ್ಟಿರೋರಿಗೆ ಹೋಲಿಸಿದರೆ ಕೆಜ್ರಿವಾಲ್ ನುರು ಪಟ್ಟು ಬೆಟರ್…ಆದರೆ ಅವರ ಬಳಿ ಸಂಘಟನೆ ಇಲ್ಲ ಅಷ್ಟೆ.

      Reply
  4. Iranna

    “ಎಮ್.ಸಿ.ಡೋಂಗ್ರೆ ಸುಳ್ಳುಗಳಿಗೆ ದೇಶದ ಜನತೆ ಮರುಳಾಗದಿರಲಿ”…..

    Reply
    1. vikram

      Nimma congress sarakaradalli ,,,INDIA deshawanna mari ,, namge neeru kudisiddu saku MR DONGRI ,,, WRITE SENSE if you can ,,, NOT NONSENSE,,,TAKE national index of development and write your article,, DONT FOOL PEOPLE

      Reply
  5. ಆತ್ರಾಡಿ ಸುರೇಶ ಹೆಗ್ಡೆ

    ಮಾನ್ಯ ಡೋಂಗ್ರೆಯವರೇ,
    ಮೋದಿ ಹೇಳುತ್ತಿರುವುದೆಲ್ಲಾ ಸುಳ್ಳು ಅಂತ ನನ್ನಂತಹ ಅವಿವೇಕಿಗೆ ತಿಳಿಸಿದ್ಉದಕ್ಕಾಗಿ ಧನ್ಯವಾದಗಳು.

    ದಯವಿಟ್ಟು ರಾವುಲನ/ಸೋನಿಯಾಳ/ಮನಮೋಹನನ ಬಗ್ಗೆಯೂ ಒಂದು ಲೇಖನ ಬರೆದು ಅವರೆಷ್ಟು ಸತ್ಯ ಹೇಳಿದ್ದಾರೆ/ಸುಳ್ಳು ಹೇಳಿದ್ದಾರೆ ಅಂತ ಕೂಡ ನಮಗೆ ತಿಳಿಸಿಕೊಡಿ ಎಂದು ಅಂಗಲಾಚಿ ಬೇಡಿಕೊಳ್ತೇನೆ. ಪ್ಲೀಸ್

    Reply
    1. Kodava

      ಹೌದು ಒಳ್ಳೆಯ ಮಾತು ಆತ್ರಾಡಿ ಸುರೇಶ ಹೆಗ್ಡೆ ಅವರೆ. ಮೋದಿಯ ಬಗ್ಗೆ ತಿಳಿದುಕೊಂಡೆವು . ಇನ್ನು ರಾಹುಲನ ಹಾಗು ಆತನ ಪರಿವಾರದ ಬಗ್ಗೆ ಲೇಖನ ಬರೆಯುತ್ತಾರ ಈ ಲೇಖಕರು ?? ಖಂಡಿತ ಇಲ್ಲ ??
      ಗುಜರಾತ್ ಮೊದಲೇ ಅಭಿವೃದ್ದಿ ಹೊಂದಿರಬಹುದು . ಅದನ್ನು ಇಷ್ಟು ವರ್ಷ ಮೇನ್ಟೇನ್ ಮಾಡುವುದು ಇದೆಯಲ್ಲ ಅದು ಸಾಮಾನ್ಯವೇ ???UPA ನವರು ನಮ್ಮ ದೇಶವನ್ನು ಮಾಡಿದರಲ್ಲ ಹಾಗೇನ ???

      Reply
  6. ಆತ್ರಾಡಿ ಸುರೇಶ ಹೆಗ್ಡೆ

    “ಭಾರತದ ಉದ್ಯಮಪತಿಗಳಿಗೆ ಈಗ ಮೋದಿ ಬೇಕಾಗಿದ್ದಾರೆ” ಹೌದು ಒಪ್ಪೋಣ.

    ಆದರೆ ವಿದೇಶೀ ಉದ್ಯಮಪತಿಗಳಿಗೆ ಸೋನಿಯಾ ಬೇಕಾಗಿದ್ದಾರೆ.

    ನಮಗೆ ಯಾರು ಬೇಕಾಗಿದ್ದಾರೆ?

    ಭಾರತೀಯ ಉದ್ಯಮಪತಿಗಳೋ ಅಥವಾ ವಿದೇಶೀ ಉದ್ಯಮಪತಿಗಳೋ?

    ಆಯ್ಕೆ ನಮ್ಮ ಕೈಯಲ್ಲೇ ಇದೆ.

    Reply
    1. LogicalIndian

      Whole world knows about Congress, Sonia, and Rahul, they are corrupt and no explanation is needed for this, they exposed themselves.

      Reply
  7. ajithkumar ullal

    Vartamana …hate Modi propaganda maduthide. abhivradhi bagee comparison koduva Dongri Ya hineyala bagge yako vondhu samshayya…Secularism na hesarinalli samaj vana vodeyuva e nayakaru ..yavudhe galabe galu aadaga ..beedhige bandhu janaranu sangahatisuva badhalu …..Raje ya suka anubavisi TV nodi maru divasa ankana bareyalu sidathe nadesuva Dongri yanthavarige ….yava arhathe ide swami……

    Reply
  8. shantharam D

    we are living in present , every one knows what happening in INDIA .in this situation we want strong leader , he is only NarendraModi . think in all parameters. just see the body language of our present Centrel ministers they have lost their confidence like… leave me now we cannot run the government till 5 years.

    Reply
  9. anil

    ಮೋದಿಯವರ 5% ಸತ್ಯದ ಹಿಂದೆ 95% ಸುಳ್ಲು ಇದೆ.ಗುಜರಾತಿನಲ್ಲಿ ಮೊದಿಯವರು ಮಾಡಿರುವ Total ಅಭಿವ್ರದ್ದಿಯ 90% ಅಭಿವ್ರದ್ದಿಯು ಅವರು ಮುಕ್ಯಮಂತ್ರಿಯಾಗುವ ಮೊದಲೆ ಆಗಿತ್ತು.

    Reply
  10. vageesh kumar

    ನಾನು ಯಾರ ಪರವೂ ಅಲ್ಲ. ವಿರೋಧಿಯೂ ಅಲ್ಲ. ಆದರೆ, ಆನಂದ್ ಸರ್, ನಾನು ಬರೆದಿದ್ದು ಖಂಡಿತವಾಗಿಯೂ ಸತ್ಯ ಎನ್ನುವುದನ್ನು ತೋರಿಸಲು ಈ ಕೆಳಗಿನ ವಿವರಣೆ ನೀಡುತ್ತಿzನೆ.
    ಕುಮುದ್ ಭಷಣ್ ಎಜುಕೇಶನ್ ಸೊಸೈಟಿಗೆ ೪.೬೮ ಹೆಕ್ಟೇರ್ ಭಮಿಯನ್ನು ಹಿಂದಿನ ಬಿಜೆಪಿ ಸರಕಾರವಿದ್ದಾಗ ಪ್ರಶಾಂತ್ ಮಂಜೂರು ಮಾಡಿಸಿಕೊಂಡಿದ್ದರು. ಅದು ಕಾನೂನು ಬಾಹಿರವಾಗಿದ್ದು ತನಿಖೆ ನಡೆಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಹೊರ ಪ್ರದೇಶದವರು ಸ್ವಂತ ಬಳಕೆಗೆ ಹೊರತಾಗಿ ವಾಣಿಜ್ಯ ಉzಶಕ್ಕೆ ಭಮಿ ಖರೀದಿಸುವಂತಿಲ್ಲ. ಅಲ್ಲಿನ ಪರಿಸರ ಅತ್ಯಂತ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಇಂತಹ ಕಾನೂನು ಜಾರಿಗೆ ಬಂದಿದೆ. ಆದರೆ, ಈ ಬಗ್ಗೆ ಕೇಳಿದಾಗ ಪ್ರಕಾಂಡ ವಕೀಲ ಪ್ರಶಾಂತ್ ಭಷಣ್ ಹೇಳಿzನೆಂದರೆ, ಇಂತಹ ಕಾನೂನು ಇರುವುದೇ ನನಗೆ ಅರಿವಿರಲಿಲ್ಲ ಎಂದು.
    ಇನ್ನು ಕೇಜ್ರಿವಾಲ್ ತಮ್ಮ ಸೇವಾವಧಿಯಲ್ಲಿ ಒಟ್ಟು ೯.೧೮ ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಇದೇನೂ ಮರೆವು ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ ಸರಕಾರಿ ಅಧಿಕಾರಿಯಾಗಿ ಅವರು ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯ. ಆದರೂ ಆದಾಯ ತೆರಿಗೆ ಇಲಾಖೆ ನೋಟೀಸ್ ಕೊಡಬೇಕಾಯಿತು. ಜೊತೆಗೆ ಕಾನೂನು ವಿರುದ್ಧವಾಗಿ ಲಾಬಿ ಮಾಡಿ ಎರಡು ವರ್ಷ ಸುದೀರ್ಘ ರಜೆ ತೆಗೆದುಕೊಂಡ (ವೇತನ) ಆರೋಪವೂ ಅವರ ಮೇಲಿದೆ. Government rules on Leave
    Leave-without-pay is availed when “permissible leaves” (casual leave, medical leave and earned leave) have been exhausted. It is usually granted in extraordinary circumstances when officer cannot attend work because of reasons such as a serious medical condition
    – The three-year bond period cannot include leave without pay, that too for personal work like RTI campaign.
    It would amount to a break in service

    Reply
    1. Ananda Prasad

      ನೀವು ನೀಡಿರುವ ಮಾಹಿತಿ ನಿಜವಿರಬಹುದು. ಆದರೂ ಆಮ್ ಆದ್ಮಿ ಪಾರ್ಟಿಯಲ್ಲಿ ಅಳವಡಿಸಿದ ಕೆಲವು ಅಂಶಗಳು ಪ್ರಜಾಪ್ರಭುತ್ವವನ್ನು ಬಲಪಡಿಸುವಂಥ ಸಾಮರ್ಥ್ಯ ಹೊಂದಿವೆ. ಉದಾಹರಣೆಗೆ ಪಾರ್ಟಿಗೆ ಪಡೆದ ಹಣದ ಮೂಲದ ಘೋಷಣೆ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಆಂತರಿಕ ಲೋಕಪಾಲ ವ್ಯವಸ್ಥೆ, ವಂಶಾಡಳಿತ ತಪ್ಪಿಸಲು ರೂಪಿಸಿದ ವ್ಯವಸ್ಥೆ ಇವೇ ಮೊದಲಾದವು ಪ್ರಜಾಪ್ರಭುತ್ವವನ್ನು ಬಲಪಡಿಸುವಂಥ ಸುಧಾರಣೆಗಳಾಗಿವೆ. ಪ್ರಸ್ತುತ ಪ್ರಮುಖ ರಾಜಕೀಯ ಪಕ್ಷಗಳು ಎಡಪಕ್ಷಗಳನ್ನೂ ಒಳಗೊಂದು ಮಾಹಿತಿ ಹಕ್ಕಿನ ಅನುಸಾರ ಪಾರ್ಟಿ ಫಂಡಿಗೆ ಪಡೆದ ಹಣದ ಮೂಲ ಬಹಿರಂಗಪಡಿಸಬೇಕು ಎಂದು ಹೇಳಿದಾಗ ಅದನ್ನು ಎಲ್ಲ ರಾಜಕೀಯ ಪಕ್ಷಗಳೂ ವಿರೋಧಿಸಿರುವಾಗ ಆಮ್ ಆದ್ಮಿ ಪಾರ್ಟಿ ವಿಶಿಷ್ಟವಾಗಿ ನಿಲ್ಲುತ್ತದೆ. ಲೋಕಸತ್ತಾ ಪಕ್ಷವು ಅಳವಡಿಸಿರುವ ಅಂಶಗಳೂ ಪ್ರಜಾಪ್ರಭುತ್ವವನ್ನು ಬಲಪಡಿಸುವಂಥ ಸಾಮರ್ಥ್ಯ ಪಡೆದಿವೆ. ಇವುಗಳನ್ನು ಯಾಕೆ ಮಾಧ್ಯಮಗಳು ಜನರ ಮುಂದೆ ಇಡುತ್ತಿಲ್ಲ ಎಂಬುದನ್ನು ಮಾಧ್ಯಮಗಳಿಗೆ ಪ್ರಜ್ಞಾವಂತರು ಕೇಳಬೇಕಾಗಿದೆ.

      Reply
  11. pavan

    ಸರ್ ದಯವಿಟ್ಟು ಮೋದಿಯವರ ಬಗ್ಗೆ ಅಪಪ್ರಚಾರ ಮಾಡಬೇಡಿ… ನಮ್ಮ ಕನಸಿನ ಭಾರತಕ್ಕೆ ಮೋದಿ ನಾಯಕತ್ವ ಅಗತ್ಯವಿದೆ…..

    Reply
  12. Kiran

    Illi kottiro nimma Statistics prakara 1998-99 and 2000-01 gujrat GDP 7.5% and India is at 10.7% next 2002-03 Gujrat GDP is at 16.25% and India GDP 14% andre Gujrat Growth is morethan 100% .. ok these are history and now India’s GDP growth is 4.4% Gujrat is at 8.5% . iga heli yaranna ugibeku illi…!!?? Interestingly before 2002 Vajapayee was the PM and after 2002 MMSingh is PM..

    Reply
  13. Mayura

    ಮೋದಿಯವರ ಬಗ್ಗೆ ಬರೆದಿದ್ದೀರಿ ಸಂತೋಷ ಗುಜರಾತ್ ಬಗ್ಗೆ ಗೊತ್ತಿರಲಿಲ್ಲ, ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಬಗ್ಗೆ, ಹಾಗೂ ಕಾಂಗ್ರೆಸ್ ಸರಕಾರದ ಆಡಳಿತದ ಬಗ್ಗೆ, ಜನಸಾಮಾನ್ಯರು ಇಂದಿನ ದಿನನಿತ್ಯದ ಆಹಾರ ಸಾಮಾಗ್ರಿಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಬಡಜನರ ಜೀವನದ ಬಗ್ಗೆ ಬರೆಯಿರಿ, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಬರೆದು ಜನರು ನಂಬಿಕೆ ಇಟ್ಟು ನಮ್ಮ ದೇಶವನ್ನು ಮುಂದುವರೆಸಲು ಮೋದಿಯ ಬಗ್ಗೆ ಒಲವು ತೋರಿದರೆ ನಿಮಗೆ ಆಗುವ ನಷ್ಟವೇನ್ರಿ ? ಇಲ್ಲಿಯತನಕ ಕಾಂಗ್ರೆಸ್ ಸರಕಾರ ನಮ್ಮ ದೇಶವನ್ನು ಮುಂದುವರೆಸಿರುವುದು ಅಷ್ಟರಲ್ಲೇ ಇದೆ…..

    Reply
    1. Yogi Raakakesh

      Thanks Mayura for your comment…
      We need to focus on things which need to be rectified… The focus should be not be on somebody who wants to rectify…
      At least there are few people here who are thinking seriously about the nation, not just hating Modi….

      Reply
  14. sunilyoganna

    Only ur telling About NAMO please tell about Sonia,Rahul,MM Singhu and the congress Corruption so that every on knows how much Congress and team is looting India……Please right about as well and dont try to target narendra Modi…

    Reply
  15. Pavan Vishwakarma

    Congress is trying all the possible moves to show themselves as the best. I hope you people have seen the recent advertisements regarding Bills passed in Lok Sabha (Land Bil, Food Bill, etc). They are also planning to make Nandan Nilekani contest in the coming Lok Sabha election. In the same way the above article may also be a paid one. Whatever the author is telling may be correct but in the same way he has to give stats of other states also. Once WB was a prosperous state. But what is it’s position now. What about UP, Delhi, Andhra. I request the author to do the same kind of work and give stats for other states too. Also of individuals like Sonia, Rahul, Robert, Diggy, Salman Khurshid.

    Reply
  16. Gururaja Shenoy

    Mr M C Dongre ,

    Thanks for the Gujarath state Statics ,i would like to request all other state statics please it would help us compare .

    Reply
  17. VISHAL

    k consider i agree with ur post for this moment. wen ind got independence 1rs =1usd.at that time wen british were rulin ,india was in good condition compared to now . right from the independence till now congress government has ruled india for most of the years wats the development they have made still india is developing country. now reply to this .

    Reply
  18. vishwa kamareddy

    dongre yavare 60 years congress kaiyalli adhikar kottu nodiddeve.avar itihas bareyo dhairya immant yaobba barahagaranigu agode illa.ega 5 years modi kaiyalli kodona. nimma gantu enadaru hogutta.

    Reply
  19. ರವಿಕುಮಾರ ಜಿ ಬಿ

    ಕೆ.ಪಿ.ಶಶಿ ಎಂಬ ಚಿಂತಕರು ಗುಜರಾತಿನ ಅಭಿವೃದ್ಧಿಯ ಕುರಿತು ಒಂದು ಮಾತನ್ನು ಹೇಳಿದ್ದು ಅದು ಬಹಳ ಅರ್ಥಪೂರ್ಣವಾಗಿದೆ. ಅವರ ಪ್ರಕಾರ “ಮೋದಿಯವರ ಅಭಿವೃದ್ಧಿಯ ಮಾಡೆಲ್” ಆರ್.ಎಸ್.ಎಸ್.ನ ಚಡ್ಡಿಯಿದ್ದಂತೆ-ಅದು ಎಂದೂ ನೆಲವನ್ನು ಮುಟ್ಟುವುದೇ ಇಲ್ಲ!!.ಹಾಗೆಯೇ ಈ ಕಾಂಗ್ರೆಸ್ಸಿಗರ ಅಭಿವೃದ್ದಿಯ ಮಾಡೆಲ್ ನೆಲದಿಂದ ಮೇಲೆ ಏಳುವುದೇ ಇಲ್ಲಾ!!!ಇನ್ನೂ ಕೆಳಗೆ ಇಳಿಯುತ್ತದೆ !!! ಎಷ್ಟೊಂದು ಸತ್ಯ ಹೇಳಿದ್ದೀರಿ ಅಲ್ಲವೇ!!! ಕಂಗ್ರಾಟ್ಸ್!!- ಎಮ್.ಸಿ.ಡೋಂಗ್ರೆ

    Reply
    1. Yogi Raakakesh

      before somebody dares to talk about RSS and their shorts, they should go and see how selflessly they are serving the nation…

      Just by writing the blogs, commenting by watching TV cannot be considered as serving the nation my dear…. Just a sarcastic sentence makes you happy… are we happy not to have hopes for the future..? Do we have problems in the mindset….? Time to think…

      Reply
  20. ಜೆ.ವಿ.ಕಾರ್ಲೊ, ಹಾಸನ

    ಮೋದಿಯ ಅಭಿವೃದ್ಧಿ ಬಗ್ಗೆ ಮಾತಾಡಿದಾಕ್ಷಣ ಸೋನಿಯಾ, ರಾಜಿವ್, ರಾಹುಲನ ಹೆಸರು ಪ್ರತ್ಯಕ್ಷವಾಗುತ್ತದೆ. ಮೋದಿ ವಿರೋಧಿಗಳೆಂದಾಕ್ಷಣ ಅವರೆಲ್ಲಾ ಸೋನಿಯಾ ಪರವೆಂದು ಮೈಮೇಲೆ ಬೀಳುತ್ತಾರೆ! ಈ ದೇಶದಲ್ಲಿ ಇವೆರಡೇ ಪಕ್ಷಗಳಿರುವುದೇ? ಡೊಂಗ್ರೆಯವರನ್ನು ನಾನು ದೂರದಿಂದ ಕಂಡಿದ್ದೇನೆ. ಅವರು ಸೋನಿಯ ಪರ ವೆಂದು ನನಗೆಂದೂ ಕಾಣಿಸಿಲ್ಲ.

    Reply
  21. Girish Joshi

    ಅಕ್ಷರಗಳನ್ನು ಮಾರಿಕೊಳ್ಳೋ ಜನರಿದ್ದಾರೆ..ಬೌದ್ಧಿಕತೆಯನ್ನು ಬಳಸಿ, ಅದೇ ಅಕ್ಷರಗಳಿಂದ ದಾರಿ ತಪ್ಪಿಸುತ್ತಿರುವವರು ಯಾರು ಅಂತ ಸಮಾಜಕ್ಕೆ ಗೊತ್ತಾಗಬೇಕಿದೆ. ಅಲ್ಲಾರೀ ಯುವ ಜನತೆಯ ಕಣ್ಣುಗಳಲ್ಲಿ ಆಶಾಭಾವ ತುಂಬಿದ್ದು ಮೋದಿ ಅವರ ತಪ್ಪೇ…ಅವರ ಅಭಿವೃದ್ಧಿ ಕಾರ್ಯಗಳನ್ನು ಒಂದೆಡೆ ಶ್ಲಾಘಿಸುತ್ತ ಿನ್ನೊಂದೆಡೆ ಜನರಿಗೆ ನಂಬ ಬೇಡಿ ಅಂತ ಹೇಳಿದ್ರೆ ಕೇಳೋಕೆ ಅವರೇನು ದಡ್ಡರಾ..?ಸ್ವಾಮಿ ನಿಮ್ಮಲ್ಲಿರುವ ಪ್ರಕಾಂಡ ಜ್ಞಾನ ಹಾಗೂ ಭಾಷೆಯ ಹಿಡಿತವನ್ನು ಮೋದಿಯವರ ಬಗ್ಗೆ ಬರೆದದ್ದಕ್ಕೆ ಅಭಿನಂದನೆಗಳು…ಚಿನ್ನವನ್ನು ಬೆಂಕಿಯಿಂದ ಕಾಯಿಸಿದಾಗಲೇ ಹೊಳಪು ಬರುತ್ತೆ…ತಮಗೆ ಒಳ್ಳೆಯದಾಗಲಿ. ತಮ್ಮ ಸಾಹಿತ್ಯ ಜ್ಞಾನವನ್ನು ಉತ್ತಮವಾದ ಸಾಹಿತ್ಯ ಕೃಷಿಗೆ ಬಳಸಿದಲ್ಲಿ ತಾವೂ ಒಂದು ದಿನ ಯುಆರ್ ಆಗಬಹುದು…ಶುಭವಾಗಲಿ

    Reply
  22. Mallikarjuna Jalageri

    ಗುಜರಾತ್‍ನ ಮಾನವ ಅಭಿವೃದ್ಧಿ ಸೂಚ್ಯಂಕ ಇತ್ಯಾದಿ ತಿಳಿಸಿದ್ದಕ್ಕೆ ಧನ್ಯವಾದ.
    ಆದರೆ, ಅದನ್ನ ಇತರ ರಾಜ್ಯಗಳ ಜೊತೆ ಹೋಲಿಸಿ ನೋಡ್ಬೇಕು ಅಲ್ವಾ?

    ೧೦ ವರ್ಷದಿಂದ ಅಲ್ಲಿ ಗಲಭೆಗಳು ನಡೆದಿಲ್ಲ….
    ಕೆ.ಪಿ.ಶಶಿ ಎಂಬ ಚಿಂತಕರ ಬಗ್ಗೆ ಗೊತ್ತಿಲ್ಲ, ಹುಡುಕ್ತೀನಿ.
    ನಾನಂತೂ ಸ್ವಾಮಿನಾಥನ್ ಅಯ್ಯರ್, ಒಥನು ಡೇ, ಬಿಬೇಕ್ ದೇಬ್ರಾಯ್, ಜಗದೀಶ್ ಭಗ್ವತಿ ಇವರ ಲೇಕನ ಓದಿ, (ತವ್ಲೀನ್ ಸಿಂಗ್ ಕೂಡ) ಮೋದಿ ವಾಸಿ ಅಂತ ಅಂದ್ಕೊಂಡಿದೀನಿ.

    Reply
  23. Hemraj

    ಇವತ್ತು ಈ ಬುದ್ಧಿಜೀವಿ ಜನಗಳು ಮೋದಿಯನ್ನ ವಿಶ್ಲೇಷಣೆ ಮಾಡುವಷ್ಟನ್ನ, ನಮ್ಮ ದೇಶ ಪ್ರಧಾನಿಗಳು ಮತ್ತು ಕೇಂದ್ರ ಸರ್ಕಾರಗಳನ್ನು ಮಾಡಿದ್ದರೆ ಈ ೬೦ ವರ್ಷಗಳಲ್ಲಿ ದೇಶ ಎಷ್ಟೋ ಮುಂದುವರೆದಿರುತ್ತಿತ್ತು. ಯಾರ ಸುಳ್ಳುಗಳಿಗೆ ಜನ ಮರುಳಾಗಬಾರದೋ ಜನ ತಿಳಿದರೆ ಒಳ್ಳೆಯದು!!!.

    Reply
  24. Yogi Raakakesh

    what a wonderful article dear writer….
    But I humbly admit on behalf of everybody that we do not require another secular-thinker on the earth. We have already a lot destroying the nation.

    I have stayed in Gandhinagar for the three years and I know the real face of Gujarat much better. I can give you a list of what has he done already which is available in the net world.

    I wonder why don’t you mention the awards offered to him by the central congress led government, the awards given by the UN etc… One can not lead the society just by making them deluded for such a long time…

    Can you kindly define what do you mean by “secularism”? He is the only national leader who has been following the real meaning of it. Somebody was mentioning about Nitish, Naveen patnaik etc, are they secular???? just because he refused to wear the head-scarf is he not secular…?

    A leader should be a VISIONARY.. and HE IS… If he loses the next election, its not his failure… but its the failure of the nation, we lose a hope which leads to a better future…

    If you want details, how and why ONLY MODI…. I have.. I can… If we have to reach to a better conclusion with open mindedness, without any ego… I am READY…

    NAMO is the RAY OF HOPE…

    Reply
  25. Vince

    May be its true.. dongre, do u think what ever congress is doing in right? Please write wisely …not supporting any party. If its wrong..its wrong for congress as well BJP. If you do not like Modi, its ok…but please bring all the corrupt things from congress out.

    Reply
  26. Ananda Prasad

    ಮೋದಿ ಒಬ್ಬರೇ ಈ ದೇಶದ ಆಶಾಕಿರಣ ಎಂಬುದು ಉತ್ತಮ ಬೆಳವಣಿಗೆ ಅಲ್ಲ ಏಕೆಂದರೆ ಮೋದಿ ಬಿಜೆಪಿ ಪಕ್ಷದವರು ಹಾಗೂ ಸಂಘದ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದವರು. ಹೀಗಾಗಿ ಇವರಿಂದಲೂ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿಯ ಅಬ್ಬರದ ಪ್ರಚಾರ ನೋಡಿದಾಗಲೇ ಇದು ಸ್ಪಷ್ಟವಾಗುತ್ತದೆ. ಮೋದಿಯ ಪ್ರಚಾರ ಸಭೆಗೆ ದೆಹಲಿಯ ಕೆಂಪು ಕೋಟೆಯ ಮಾದರಿಯ ವೇದಿಕೆಯನ್ನು ನಿರ್ಮಿಸುವ ಅಗತ್ಯ ಏನು ಎಂದು ಗೊತ್ತಾಗುವುದಿಲ್ಲ. ಈ ವೇದಿಕೆಯ ನಿರ್ಮಾಣದ ಖರ್ಚು 2 ಕೋಟಿ ರೂಪಾಯಿ ಎಂದು ಅಂತರ್ಜಾಲದಲ್ಲಿ ಹುಡುಕಿದಾಗ ಕಂಡುಬರುತ್ತದೆ. ನಿಜವಾದ ದೇಶಭಕ್ತರು ಈ ರೀತಿ ದುಂದು ವೆಚ್ಚ ಮಾಡುವುದಿಲ್ಲ. ಒಂದೆರಡು ಲಕ್ಷ ರೂಪಾಯಿಗಳಲ್ಲಿ ವೇದಿಕೆ ನಿರ್ಮಿಸಲು ಸಾಧ್ಯವಿರುವಾಗ ಈ ರೀತಿಯ ದುಂದು ವೆಚ್ಚ ಯಾಕಾಗಿ ಎಂದು ಕೇಳುವ ವಿವೇಕಿಗಳು, ಪ್ರಜ್ಞಾವಂತರು ನಮ್ಮ ದೇಶದಲ್ಲಿ ಇಲ್ಲದಿರುವುದು ಈ ದೇಶದ ದುರಂತ. ಈ ರೀತಿಯ ದುಂದು ವೆಚ್ಚಕ್ಕೆ ಹಣ ಕೊಡುತ್ತಿರುವವರು ಯಾರು ಮತ್ತು ಅವರು ಯಾಕಾಗಿ ಬಿಜೆಪಿ ಪಕ್ಷಕ್ಕೆ ಹಣ ಕೊಡುತ್ತಿದ್ದಾರೆ ಎಂದು ದೇಶದ ಜನ ಚಿಂತಿಸಬೇಕು. ಆದರೆ ಅದು ನಡೆಯುತ್ತಿಲ್ಲ. ಈ ರೀತಿಯ ದುಂದು ವೆಚ್ಚ ಮಾಡುವುದರ ಬದಲು ಸರಳ ವೇದಿಕೆ ನಿರ್ಮಿಸಿ ಉಳಿದ ಹಣವನ್ನು ಉತ್ತರಾಖಂಡ ಸಂತ್ರಸ್ತರಿಗೋ ಅಥವಾ ದೇಶದ ಉಳಿದ ಭಾಗಗಳ ಪ್ರವಾಹ/ಬರ ಪೀಡಿತರಿಗೋ ಸಹಾಯ ಮಾಡುವುದು ನಿಜವಾದ ದೇಶಭಕ್ತರ ಲಕ್ಷಣ ಎನ್ನದೆ ವಿಧಿ ಇಲ್ಲ. ವೇದಿಕೆಗೆ ಈ ರೀತಿ ದುಂದು ವೆಚ್ಚ ಮಾಡುವ ಬಿಜೆಪಿ ಮೋದಿಯ ಭಾಷಣಕ್ಕೆ ಬರುವ ಸಭಿಕರಿಗೆ 5 ರೂಪಾಯಿ ಪ್ರವೇಶ ಧನ ನಿಗದಿ ಮಾಡಿ ಅದನ್ನು ಉತ್ತರಾಖಂಡ ಸಂತ್ರಸ್ತರಿಗೆ ನೀಡುತ್ತೇನೆ ಎಂದು ಬೊಬ್ಬೆ ಹಾಕುವುದು ಕೇವಲ ತೋರಿಕೆಯಂತೆ ಕಾಣುತ್ತದೆ. 5 ರೂಪಾಯಿಯಂತೆ 1 ಲಕ್ಷ ಜನ ಸೇರಿದರೆ 5 ಲಕ್ಷ ರೂಪಾಯಿಯಷ್ಟೇ ಆಗುತ್ತದೆ. ಇದರ ಬದಲು ಸಮಾರಂಭವನ್ನು ಸರಳ ವೇದಿಕೆಯಲ್ಲಿ ಮುಗಿಸಿದ್ದರೆ 1.9 5 ಕೋಟಿ ರೂಪಾಯಿ ಉಳಿಸಬಹುದಾಗಿತ್ತು.

    Reply
  27. Balasubrahmanya.

    Ananda Prasad re nivu heluva vicharadhalli dhvandhva yedhukanuthave, Modhi bagge BJP ,RSS,hinnele Endhavaru higagi Evarindha hechinadhannu nirikshisalu sadhya Ella yendhiri. Yakesadhyavilla ,Edi Gujarathalli jathyathithavagi aadalitha nadesi Eevathu alliyajanathe navella Ondu navella bandu yendu samarasyadindha jivana nadesuthidhare Allade musalmanare hechina (bahumatha) Eruva gillegalallikuda Modhiyavaranne bembalisidhare. hegidhu avarannu hindhu vaadhi yennuvadhu sariyalla. Kregivalaru heluthiruvadhella sariyedhu prathipaghisuthiri 1. Ethanaka kregivalaru yelliyadharu aadalitha nadesidhara? ,2. Annahajare yavarondige Edhavaru yake horabarabekaEthu ? avaronghige hondhanike madalagadhavarige yellarannu Otigeserisi kondu aadalithamadalu saadhyavee? 3.Namma sidhantha mathra Oleyadhu, berella ketadhu yemba vadha sariyalla. 4.Kregivalara mele kuda therige dhurupayogadha aapadhane Edhe Edharabage jana mavna kanuthidhe? nimage Evishaya silli yagidharu bereyavarige adhe dhodda vishaya. 5. Thamma thamma vicharagalanna janara mundhe Edi, janara jagrthigolisi , Thamma vichara horathu , Modhi BJP,RSS, mooladhavaru hagagi Olle aadalitha kodalu saadhyavillavembudhu avivekathan. 6.Aadalithakke baaradhe kregivala Olleya aadalitha kotaru yendu nirikshe rariyalla ,Evaralli Etta nirikshe sariyadhare ,Modhiyavaralli janathe Eduva nirikshe kooda sariye. 7. Dhelli yalli BJP madidha vecha nimage netalli huduki sikkithu, aadhare Kregivalara melina dhuruvayoga bagge nimage nettalli sikkitho, alla kandu kanadhanthidiro?

    Reply
  28. Ananda Prasad

    ಧರ್ಮ ಹಾಗೂ ಉನ್ಮಾದಕರ ರಾಷ್ಟ್ರೀಯತೆಯನ್ನು ರಾಜಕೀಯಕ್ಕೆ ಬಳಸುವ ಬಿಜೆಪಿ, ಸಂಘ ಪರಿವಾರದ ಸಂಘಟನೆಗಳ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಮಾರಕ. ಇದು ಭ್ರಷ್ಟಾಚಾರಕ್ಕಿಂತ ಹೆಚ್ಚು ಹಾನಿಕಾರಕ. ಬಿಜೆಪಿ ಮೋದಿಯ ರ್ಯಾಲಿಗಳಿಗಾಗಿ ಅಪಾರ ದುಂದು ವೆಚ್ಚ ಮಾಡುತ್ತಿದೆ. ಈ ರೀತಿಯ ದುಂದು ವೆಚ್ಚದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಿಲ್ಲ. ಮೋದಿಯ ದೆಹಲಿ ರ್ಯಾಲಿಗೆ 15 ಕೋಟಿ ರೂಪಾಯಿ ಖರ್ಚಾಗಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ. ಮೋದಿಯನ್ನು ದೆಹಲಿ ವಿಮಾನ ನಿಲ್ದಾಣದಿಂದ ರ್ಯಾಲಿ ನಡೆಯುವ ಜಾಗಕ್ಕೆ ಕರೆ ತರಲು ಮತ್ತು ವಾಪಸ್ ಬಿಡಲು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ದುಂದು ವೆಚ್ಚ ಮಾಡಲು ಪಕ್ಷಕ್ಕೆ ಹಣ ಕೊಡುವವರು ಯಾರು? ಅವರು ಸುಮ್ಮನೆ ಹಣ ಕೊಡುತ್ತಾರೆಯೇ? ಕೊಟ್ಟ ಹಣಕ್ಕೆ ಬಡ್ಡಿ ಸಹಿತ ಬೇರೆ ಲಾಭ ಮಾಡಿಕೊಳ್ಳುವ ಬಂಡವಾಳಗಾರರಿಂದ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಗುರಿ ಮಾತ್ರವಲ್ಲ ಅದನ್ನು ತಲುಪುವ ದಾರಿಯೂ ಸರಿಯಾಗಿರಬೇಕು ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದಾರೆ. ಪಾರದರ್ಶಕತೆ ಇಲ್ಲದ ಬಿಜೆಪಿಯ ಪಾರ್ಟಿ ಫಂಡಿಗೆ ಪಡೆಯುವ ಅನೈತಿಕ ಮೂಲದ ಹಣದಿಂದ ಶುದ್ಧ ಆಡಳಿತ ಕೊಡುವುದು ಎಂದಿಗೂ ಸಾಧ್ಯವಿಲ್ಲ. ಇದು ಬಿಜೆಪಿ ಎಂದು ಮಾತ್ರವಲ್ಲ ಕಾಂಗ್ರೆಸ್ ಸಹಿತ ಅನೈತಿಕ ಮೂಲಗಳಿಂದ ಪಾರ್ಟಿಗೆ ಹಣ ಪಡೆಯುವ ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯ. ಹಾಗಾಗಿಯೇ ಬಿಜೆಪಿ ಬಂದರೂ ಹೆಚ್ಚಿನ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದುದು. ಮೋದಿ ಗುಜರಾತಿನಲ್ಲಿ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ್ದಾರೆ ಹಾಗೂ ತನ್ನ ಕೈಗೊಂಬೆ ಜನರನ್ನೇ ಲೋಕಾಯುಕ್ತರನ್ನಾಗಿ ನೇಮಿಸಲು ವೇದಿಕೆ ಸಿದ್ಧಪಡಿಸಿದ್ದಾರೆ. ಹೀಗೆ ಮಾಡಿದ ಮೋದಿ ಕೇಂದ್ರದಲ್ಲಿ ಸಶಕ್ತ ಲೋಕಪಾಲ್ ಮಸೂದೆ ತರುತ್ತಾರೆ ಎಂದು ಯಾರಾದರೂ ನಿರೀಕ್ಷಿಸಲು ಸಾಧ್ಯವೇ? ಅದೇ ರೀತಿ ಸಿಬಿಐ ಅನ್ನು ಸ್ವತಂತ್ರ ಸಂಸ್ಥೆಯನ್ನಾಗಿ ಮಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವೇ?

    ಕೇಜರಿವಾಲರು ಹಾಗೂ ಸಂಗಡಿಗರು ಕಟ್ಟುತ್ತಿರುವ ಪಕ್ಷದಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ದುಂದುವೆಚ್ಚಕ್ಕೆ ಅವರು ಆಸ್ಪದ ನೀಡುವುದಿಲ್ಲ. ಪಡೆದ ಒಂದೊಂದು ರೂಪಾಯಿಯ ಮೂಲವನ್ನೂ ತಮ್ಮ ವೆಬ್ ಸೈಟಿನಲ್ಲಿ ದಾಖಲಿಸಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲಿ ಪಾರದರ್ಶಕತೆ ಹಾಗೂ ಕ್ರಿಮಿನಲ್ ಹಿನ್ನೆಲೆ ಇಲ್ಲದ ಸಚ್ಚಾರಿತ್ರ್ಯ ಉಳ್ಳ ವ್ಯಕ್ತಿಗಳನ್ನೇ ಚುನಾವಣೆಗೆ ನಿಲ್ಲಿಸಲು ಸೂಕ್ತ ಕ್ರಮ ಹಾಗೂ ಪ್ರಕ್ರಿಯೆ ಅಳವಡಿಸಿದ್ದಾರೆ. ವಂಶಪಾರಂಪರ್ಯ ರಾಜಕೀಯಕ್ಕೆ ಬ್ರೇಕ್ ಹಾಕಲು ಸೂಕ್ತ ವ್ಯವಸ್ಥೆ ಅಳವಡಿಸಿದ್ದಾರೆ. ಹೈಕಮಾಂಡ್ ಎಂಬ ಸಂಸ್ಕೃತಿಗೆ ಆಮ್ ಆದ್ಮಿ ಪಕ್ಷದಲ್ಲಿ ಆಸ್ಪದವನ್ನೇ ನೀಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಕೆಲವು ಮೂಲಭೂತ ಸುಧಾರಣೆಗಳನ್ನು ಪಕ್ಷ ಮಟ್ಟದಲ್ಲಿಯೇ ಅಳವಡಿಸಿರುವುದರಿಂದ ಸಚ್ಚಾರಿತ್ರ್ಯ ಉಳ್ಳ ವ್ಯಕ್ತಿಗಳಷ್ಟೇ ಶಾಸನ ಸಭೆಗಳನ್ನು ಪ್ರವೇಶಿಸುವ ವ್ಯವಸ್ಥೆ ರೂಪಿಸಿದ್ದಾರೆ. ಹೀಗಾಗಿ ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪದಡಿಸುವುದರಲ್ಲಿ ಸಂದೇಹವಿಲ್ಲ. ಚುನಾವಣಾ ಸುಧಾರಣೆ ತರುವ, ನ್ಯಾಯಾಂಗ ಸುಧಾರಣೆ ತರುವ, ಸಶಕ್ತ ಲೋಕಪಾಲ ವ್ಯವಸ್ಥೆ ತರುವ, ಸಿಬಿಐ ಅನ್ನು ಸ್ವತಂತ್ರ ಸಂಸ್ಥೆಯಾಗಿ ಮಾಡುವಂಥ ಮಹತ್ತರ ಹಾಗೂ ದೂರಗಾಮಿ ಪರಿಣಾಮ ಬೀರುವ ಸುಧಾರಣೆಗಳನ್ನು ಆಮ್ ಆದ್ಮಿ ಪಕ್ಷ ಮಹತ್ತರ ಗುರಿಯನ್ನು ಹೊಂದಿದೆ. ಹೀಗಾಗಿ ಇದು ಬೇರೆ ರಾಜಕೀಯ ಪಕ್ಷಗಳಿಗಿಂಥ ಭಿನ್ನ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಉತ್ತಮ ಗುರಿ ಉಳ್ಳ ವ್ಯಕ್ತಿಗಳು ಇದ್ದರೆ ಆಡಳಿತದಲ್ಲಿ ಅನುಭವ ಇರಬೇಕೆಂದೇನೂ ಇಲ್ಲ, ಒಳ್ಳೆಯ ಆಡಳಿತ ನೀಡಲು ಸಾಧ್ಯವಿದೆ. ಅಂತ ಇಚ್ಛಾಶಕ್ತಿ ಉಳ್ಳ ಜನ ಬೇಕು ಅಷ್ಟೇ. ಅದು ಆಮ್ ಆದ್ಮಿ ಪಕ್ಷದಲ್ಲಿ ಕಂಡುಬರುತ್ತಾ ಇದೆ.

    Reply
  29. Balasubrahmanya.

    Evathu Edheshadhalli kanuva yella partigalu Ondhu kaladhalli jana nambuvanthe nadakondavare, brashtachara, pramanikathe, Uthama aadalitha Uthama guri,Enthaha aadharsha galanna janaramudhitu adhikarakke bandhavarellaru,Omme adhikara sikka mele yaryaru hege yembudu thiluvalike bandhadhu ,allithanaka yellaru Olleyavare ! 1.Annahajare yavara horatadhalli kejarivalaru Otige Edhavare aadhare Eega bere bere yagidhare yaakehigaEthu . Annahajare Evaranna horahakidhara ? alla Kejarivalare horabandhara? 2.yaavade aase aakaankshe Elladha Annahajare Obbarondhige hondhanike madikondu hogalu vipalaragidhare, Ennu yestesto janarellarannu Otige serisi kondu Edheshadha samagra aadalitha nadesabahude? hegenambali ? . 3. Prathiyobbarigu avaravara nambikeye sariyedhe vadhisuthare. 4.Aadalitha nadesuva thakathe bere,Uthama guriEruvadhe bere, Uthama guriEruvavarige aadalithadha anubhavavu Eralebeku, Avagale Olle aadalitha madabahudhu. Yavathu dhuradha betta nunageye. !!

    Reply
    1. Ananda Prasad

      ಅಣ್ಣಾ ಹಜಾರೆ ಹಾಗೂ ಕೇಜರಿವಾಲ್ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಉಂಟಾಗಿದ್ದು ಅವರು ಬೇರೆ ದಾರಿಯಲ್ಲಿ ನಡೆಯಲು ಕಾರಣ ಎಂದು ನನ್ನ ಅನಿಸಿಕೆ. ಅಣ್ಣಾ ಹಜಾರೆಯವರಿಗೆ ಸ್ಪಷ್ಟವಾದ ರಾಜಕೀಯ ನಿಲುವು ಇಲ್ಲ. ಅವರು ಬಿಜೆಪಿ ಹಾಗೂ ಸಂಘ ಪರಿವಾರದ ಕಡೆಗೆ ವಾಲುತ್ತಿದ್ದರು. ಅಲ್ಲದೆ ಸಂಸತ್ತಿನ ಮೇಲೆ ಹೊರಗಿನಿಂದ ಒತ್ತಡ ಹಾಕಿ ಪ್ರಯೋಜನವಾಗುವುದಿಲ್ಲ ಎಂಬುದನ್ನು ಮನಗಂಡ ಕೇಜರಿವಾಲರು ಚುನಾವಣೆಗಳ ಮೂಲಕ ಸಂಸತ್ತಿನ ಒಳಗೆ ಹೋಗಿ ಬದಲಾವಣೆ ತರಲು ಪ್ರಯತ್ನಿಸುವುದು ಸೂಕ್ತ ಎಂದು ರಾಜಕೀಯ ಪಕ್ಷ ಕಟ್ಟಿ ಹೋರಾಟಕ್ಕೆ ತೊಡಗಿದ್ದಾರೆ. ಇದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಇದು ಸರಿಯಾದ ಹೆಜ್ಜೆಯೇ ಆಗಿದೆ. ಈ ರೀತಿಯ ಹೋರಾಟಕ್ಕೆ ಅಣ್ಣಾ ಹಜಾರೆಗೆ ಮನಸ್ಸಿಲ್ಲದಿದ್ದರೆ ಅದಕ್ಕೆ ಕೇಜರಿವಾಲರನ್ನು ಹೊಣೆಯಾಗಿ ಮಾಡಲಾಗದು. ಅನುಭವವೇ ಮುಖ್ಯವಲ್ಲ. ಒಳ್ಳೆ ಗುರಿ ಮತ್ತು ಅದನ್ನು ಸಾಧಿಸುವ ಇಚ್ಛಾಶಕ್ತಿ ಇದ್ದರೆ ಒಳ್ಳೆಯ ಆಡಳಿತ ಕೊಡುವುದು ಅಸಂಭವವೇನೂ ಅಲ್ಲ. ಹುಟ್ಟಿನಿಂದಲೇ ಯಾರಿಗೂ ಅನುಭವ ಬರುವುದಿಲ್ಲ. ಕಲಿಯುತ್ತಾ ಅನುಭವ ತಾನಾಗಿಯೇ ಬರುತ್ತದೆ. ಈಗ ಅನುಭವ ಇರುವವರು ಕೊಡುತ್ತಿರುವ ಆಡಳಿತದ ಗುಣಮಟ್ಟ ನೋಡಿದರೆ ಇನ್ನು ನಾವು ಕಳೆದುಕೊಳ್ಳಲು ಏನೂ ಉಳಿದಿಲ್ಲ. ಕೇಜರಿವಾಲರು ಹಾಗೂ ಸಂಗಡಿಗರು ಪ್ರಜಾಪ್ರಭುತ್ವದ ಸುಧಾರಣೆಗೆ ತಮ್ಮ ಪಕ್ಷದಲ್ಲಿ ಅಳವಡಿಸಿದ ಕೆಲವು ಅಂಶಗಳು ಅವರು ವಿಭಿನ್ನ ಎಂಬುದನ್ನು ಎತ್ತಿ ತೋರಿಸುತ್ತವೆ. ಅಧಿಕಾರ ಎಂಥವರನ್ನೂ ಬದಲಾವಣೆ ಮಾಡಿಸುತ್ತದೆ ಎಂಬುದು ನಿಜವಾದರೂ ಆಮ್ ಆದ್ಮಿ ಪಕ್ಷದಲ್ಲಿ ಅಳವಡಿಸಿದ ಕೆಲವು ಒಳ್ಳೆಯ ನಿಯಂತ್ರಕ ಅಂಶಗಳು ಅದನ್ನು ತಡೆಯಲು ಸೂಕ್ತವಾಗಿವೆ. ನಾಯಕರು ದಾರಿ ತಪ್ಪಿದರೆ ಅದನ್ನು ನಿಯಂತ್ರಿಸುವ ವ್ಯವಸ್ಥೆ ಆಮ್ ಆದ್ಮಿ ಪಕ್ಷದಲ್ಲಿ ಇದೆ. ಪಕ್ಷವು ಯಾವ ರೀತಿ ಮುನ್ನಡೆಯಬೇಕು ಎಂಬುದನ್ನು ಜನರು ಸೂಚಿಸಲು ಪಕ್ಷದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇದೆ. ಹೀಗಿದ್ದಾಗಲೇ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗುವುದು.

      Reply
  30. Balasubrahmanya.

    Annahajare yavathu BJP,RSS, parivaradha kadege valaleElla . SHREE BA BA Ramdhevuji avara sathyagraha dhalli RSS na kela nayakaru bhagavahisidhakke Annahajare virodhisi bembala nirakarisidharu Enthaha Annahajareya mele apavadha madabaradhu. YeneErali Kejarivara mathu avarondhigiruva nayakara mele kelavu aapadhanegalive avugala bage yake mavunavagidhiri? 1.Kejarivala Evaramele therige vanchane , hagu KELASA (rajadhalli Edhu) madadhe yeradu vrshadha vethana padedha aaropa Edhe Ebagge yenu heluthiri? 2.Prashanthbhushan Evaru himachala pradheshadhali madidha avyavahara dhabagge yenathiri? 3.Kejarivalaru Prashanthbhushanara mele yavatharahadha krama kaigondidhare? 4.Prashantha ra mele yake ,Pramanika Kejarivalaru krama kaigollalilla.?????? HIGIRUVAGA E YARANNU HEGE NAMBABAHUDHU? Helodhu Shasthra E kodhu Ghala, allave. Prathiyobbaralli Ondhondhu korethegalive , Modhi bagge korathe helidhiri hage Evarabagge kuda korathe heluvavaru Edhare

    Reply
    1. Ananda Prasad

      ಅಣ್ಣಾ ಹಜಾರೆಯವರನ್ನು ಆರ್. ಎಸ್. ಎಸ್. ಹೋರಾಟದ ಸಮಯದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅಣ್ಣಾ ಹಜಾರೆಯವರ ಕೆಲವು ನಿಲುವುಗಳು ಕೂಡ ಸಂಘ ಪರಿವಾರದ ನಿಲುವುಗಳ ಜೊತೆ ಹೋಲುತ್ತವೆ. ಕೇಜ್ರಿವಾಲರು ಸರ್ಕಾರೀ ಸೇವೆಯಲ್ಲಿದ್ದ ಸಮಯದಲ್ಲಿ ವಿದೇಶ ವ್ಯಾಸಂಗಕ್ಕೆ ಹೋಗಿ ನಂತರ ಸೇವೆಗೆ ರಾಜೀನಾಮೆ ಕೊಟ್ಟ ಬಗ್ಗೆ ಕೆಲವರು ಆಕ್ಷೇಪ ಎತ್ತುತ್ತಿದ್ದಾರೆ. ಅವರು ಸೇವೆ ವೇಳೆ ವಿದೇಶ ವ್ಯಾಸಂಗಕ್ಕೆ ಹೋಗುವಾಗ ನಿಯಮಗಳನುಸಾರ ಕರಾರು ಪಾಲಿಸಿಲ್ಲ ಎಂಬುದು ಅವರ ಮೇಲೆ ಇರುವ ಆಪಾದನೆ. ಕರಾರಿನ ಪ್ರಕಾರ ಅವರು ವ್ಯಾಸಂಗದ ರಜೆಯ ಸಮಯದ ಸಂಬಳವನ್ನು ಅವಧಿಪೂರ್ವ ರಾಜೀನಾಮೆ ನೀಡಿದರೆ ವಾಪಸ್ ಪಾವತಿಸಬೇಕು ಹೀಗೇನೋ ನಿಯಮ ಇರಬೇಕು, ಅದನ್ನು ಪಾವತಿಸಿಲ್ಲ ಎಂಬುದು ಆಪಾದನೆಯೇ ಹೊರತು ಅವರು ಆದಾಯ ತೆರಿಗೆ ಪಾವತಿಸಿಲ್ಲ ಎಂಬುದು ಅಥವಾ ತೆರಿಗೆ ವಂಚನೆ ಮಾಡಿದ್ದಾರೆ ಎಂಬುದು ಅಲ್ಲ. ಇನ್ನು ಪ್ರಶಾಂತ್ ಭೂಷಣ್ ಮೇಲೆ ಇರುವ ಆಪಾದನೆ ಅವರು ಹಿಮಾಚಲಪ್ರದೇಶದಲ್ಲಿ ಪರಿಸರ ನಿಯಮ ಪಾಲಿಸದೆ ಭೂಮಿ ಖರೀದಿಸಿದ್ದಾರೆ ಎಂಬುದು. ಇವುಗಳು ತುಂಬಾ ಗಂಭೀರ ಸ್ವರೂಪದ ಅಪರಾಧಗಳಲ್ಲ. ಅದರೂ ಈ ಬಗ್ಗೆ ದೇಶದ ನಾಗರಿಕರು ಈ ಬಗ್ಗೆ ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಅಭಿಪ್ರಾಯ ತಿಳಿಸಿ ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಆಗ್ರಹಿಸಬಹುದು. ಆಮ್ ಆದ್ಮಿ ಪಕ್ಷದ ವೆಬ್ ಸೈಟಿಗೆ ಹೋಗಿ ನಾಗರಿಕರು ತಮ್ಮ ಆಕ್ಷೇಪಗಳನ್ನು ದಾಖಲಿಸಬಹುದು.

      ಮೋದಿಗೆ ಹೋಲಿಸಿದರೆ ಕೇಜ್ರಿವಾಲರು ಸಾವಿರ ಪಾಲು ಉತ್ತಮ ಏಕೆಂದರೆ ಅವರ ಮೇಲೆ ಗುಜರಾತ್ ಗಲಭೆಗಳನ್ನು ನಿಯಂತ್ರಿಸದೆ ನೂರಾರು ಅಮಾಯಕರ ಸಾವಿಗೆ ಕಾರಣವಾದ ಕಳಂಕ ಇಲ್ಲ. ಮೋದಿಯಂತೆ ನಕಲಿ ಎನ್ಕೌಂಟರ್ ನಡೆಸಿದ ಕಳಂಕ ಇಲ್ಲ. ಮೋದಿಯಂತೆ ಕೇಜ್ರಿವಾಲರು ಧರ್ಮ, ದೇವರು, ಮಂದಿರ, ಗೋಮಾತೆ ಮೊದಲಾದ ವಿಷಯಗಳನ್ನು ರಾಜಕೀಯ ಉತ್ಕರ್ಷಕ್ಕೆ ಬಳಸಿದ ಉದಾಹರಣೆ ಇಲ್ಲ. ಕೇಜ್ರಿವಾಲರು ಜನರ ನೈಜ ಸಮಸ್ಯೆಗಳನ್ನು ಎತ್ತಿಕೊಂಡು ಪಕ್ಷವನ್ನು ಕಟ್ಟುವ ಅತ್ಯಂತ ಕಠಿಣ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಬಿಜೆಪಿಯವರಂತೆ ದೇವರು, ಧರ್ಮ, ಮಂದಿರ, ಗೋಮಾತೆ ಮೊದಲಾದ ಭಾವನಾತ್ಮಕ ವಿಷಯಗಳನ್ನು ಎತ್ತಿಕೊಂಡು ಅಮಾಯಕ ಜನರನ್ನು ಕೆರಳಿಸಿ ಪಕ್ಷ ಕಟ್ಟುವ ಸುಲಭದ ಹಾದಿಯನ್ನು ತುಳಿದಿಲ್ಲ. ಇದುವೇ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಗೆ ಅವರ ಪ್ರಾಮಾಣಿಕ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ.

      Reply
  31. Balasubrahmanya.

    Nimma vadhadhalli hurulilla Annahajareyavaru yavathu RSS na horatadhalli bagavahisidhilla. RSS BA BA Ramdhevji yavara horatadha samayadhalli samalochane nadesidhu. aakaranadhindhale Annahajare BA BA horatakke bembala kodalilla. neevu heluvanthe Annahajare horata samayadhalli RSS samalochisidhe aadhalli aaga Annahajareyondhige Kejarivalaru Edharu , Eega Kejarivalaru RSS nondhige Edharendhnthaeithu. Erali ,E dheshakke Aadhrsha vannakoduthene yemba Kejarivalarige therige Elake eindha notisu jariyadhadhu nimage silliyallave?, kyatha okilaradha prashanthabushanaru Ondhu rajyadha kanunannu palisadhirodhu aparadhave . nimage aavichara sannadhagi kanabahudhu ,yavade adhikara Elladhagale higemadidhavaru adhikara sikkidhaga yenumadabhudhu?. Moodhige Kejarivalarannu holisuvike sariA alla, Moodhi gujarathina yashasvi aadalithagara, sathathavagi Moorane bari C.M. aagi Edi rajyadha yella janaru jathiyatheyannu meeri bembalisidharu, Gujarathina 8 jilleyalli musalmanare bahusankyatharu higidhu allellaru Moodhiyanne bembalisidharu , yake? neevu heluvanthe Dharmra, Dhevaru, Mandhira, Gomathe ,modhaladha vishayagalanne mundhittu madhuva rajakarana kshanika ,Hagagilla yella samudhayagalannu Ottige serisi yellarigu jathyathita neleyalli siguva savalathu needi Dheshadhalle Uthama abhivrdhigara, Uthama aadalithagara, yendhu prashamshege pathraradhavaru…… , Gujarat rajyakke prakrthivikopa galadha, bhukampa, chandamarutha, 2002 ra komugalabe modhaladhavu galindha thatharisidhanthaha rajyavannu , Edi prapanchakke Ondhu madhari rajyavagi parivarthisidharu, Neevu heluvanthe Gujarathina janathe Moodhi aadalithake bandhadhinindha ( sumaru 15 varshavu) Ethnaka Dhevaru, Dharma, Mandhira, modhaladha keralisuva vicharakkolagagi ,BJP yanna gellisidharendhanthaithu .Yavadhe rajyadha hechina yella janarannu, hechu samaya Enthaha bramege valagagisi aadalitha nadesallaguvadhilla, yavade ounmadha, keralisuvike galu kshanika. Moodhiya rithiye bere , hage aadalitha nadesuva nadeye bere, hagagi janara bembala noorakke noore.

    Reply
    1. Ananda Prasad

      ಮೋದಿ ಬೆಳೆದು ಬಂದ ಸೈದ್ಧಾಂತಿಕ ಹಿನ್ನೆಲೆ ಸಂಘ ಪರಿವಾರದ ಹಿನ್ನೆಲೆ ಆದುದರಿಂದ ನನಗೆ ಅವರ ಬಗ್ಗೆ ವಿಶ್ವಾಸವಿಲ್ಲ. ಅವರು ಜನರ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟ ಮಾಡಿ ರಾಜಕೀಯದಲ್ಲಿ ಬೆಳೆದು ಬಂದಿದ್ದರೆ ಅವರನ್ನು ನಂಬಲು ಸಾಧ್ಯವಾಗುತ್ತಿತ್ತು. ಆದರೆ ಅವರು ಬೆಳೆದು ಬಂದ ಬಗೆ ಆ ರೀತಿ ಇಲ್ಲ. ಮೋದಿ ಪ್ರಾಮಾಣಿಕ ನಾಯಕ ಎಂದಾದರೆ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದು ಲೋಕಾಯುಕ್ತ ನೇಮಕದಲ್ಲಿ ಸರ್ಕಾರದ ಹಿಡಿತ ಹೆಚ್ಚಾಗಿರುವಂತೆ ನೋಡಿಕೊಳ್ಳುತ್ತಿರಲಿಲ್ಲ. ಓರ್ವ ಪ್ರಾಮಾಣಿಕ ಆಡಳಿತಗಾರ ಹೀಗೆ ಮಾಡಲಾರ. ಪ್ರಾಮಾಣಿಕ ಆಡಳಿತಗಾರ ಯಾರ ಅಂಜಿಕೆಯೂ ಇರಬೇಕಾಗಿಲ್ಲ.

      Reply
    2. Ananda Prasad

      ಕೇಜ್ರಿವಾಲ್ ಮೇಲೆ ಇರುವ ಆಪಾದನೆಯಲ್ಲಿ ಹುರುಳಿಲ್ಲ. ಕೇಜ್ರಿವಾಲ್ ಸರ್ಕಾರೀ ಸೇವೆಯಲ್ಲಿದ್ದಾಗ 2 ವರ್ಷಗಳ ಮಟ್ಟಿಗೆ ಅಧ್ಯಯನ ರಜೆಯಲ್ಲಿ ವಿದೇಶಕ್ಕೆ ಹೋಗಿದ್ದರು ಮತ್ತು ಅವರು ಅಧ್ಯಯನ ರಜೆಯ ನಂತರ ನಿಯಮಾನುಸಾರ ಸೇವೆಗೆ ಹಿಂದಿರುಗಿ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಕರಾರಿನಂತೆ ಮೂರು ವರ್ಷ ಕೆಲಸ ಪೂರ್ತಿಗೊಳಿಸಿದ್ದಾರೆ. ಹಾಗಾಗಿ ಅವರು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಅಥವಾ ಅನೈತಿಕವಾಗಿ ಸರ್ಕಾರದ ಹಣವನ್ನು ಬಳಸಿಕೊಂಡಿಲ್ಲ. ಹೆಚ್ಚಿನ ವಿವರಗಳಿಗಾಗಿ ಈ ವಿಳಾಸದಲ್ಲಿ ನೋಡಬಹುದು http://groups.yahoo.com/neo/groups/karmayog/conversations/topics/75478

      ಪ್ರಶಾಂತ್ ಭೂಷಣ್ ಮೇಲೆ ಇರುವ ಆಪಾದನೆ ಅವರು ಹಿಮಾಚಲ ಪ್ರದೇಶದಲ್ಲಿ ಸ್ಥಳೀಯ ಕಾನೂನು ಉಲ್ಲಂಘಿಸಿ ಭೂಮಿ ಖರೀದಿಸಿದ್ದಾರೆ ಎಂಬುದು. ಭೂಷಣ್ ಅವರು ಅಲ್ಲಿ 4.68 ಎಕರೆ ಭೂಮಿಯನ್ನು ಅವರ ಒಡೆತನದ ವಿದ್ಯಾಸಂಸ್ಥೆಯ ನಿರ್ಮಾಣಕ್ಕಾಗಿ ಪಡೆದಿದ್ದಾರೆ. ಈ ಭೂಮಿಯನ್ನು ಅಲ್ಲಿ ಮೊದಲು ಇದ್ದ ಬಿಜೆಪಿ ಸರ್ಕಾರ ಅವರಿಗೆ ಮಂಜೂರು ಮಾಡಿದೆ. ಅಲ್ಲಿ ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ಕೆಲವು ಲಕ್ಷಗಳಿಗೆ ಸರ್ಕಾರ ನೀಡಿದೆ ಎಂಬುದು ಆಪಾದನೆ. ಅದು ಕಾನೂನು ಉಲ್ಲಂಘಿಸಿ ನೀಡಲಾಗಿದೆಯೋ ಎಂಬ ಬಗ್ಗೆ ಸ್ಪಷ್ಟವಿಲ್ಲ. ಈ ವಿಷಯದ ತನಿಖೆಗಾಗಿ ಅಲ್ಲಿನ ಈಗಿನ ಕಾಂಗ್ರೆಸ್ ಸರ್ಕಾರ ಆದೇಶಿಸಿದೆ. ಆ ತನಿಖೆ ಪೂರ್ಣಗೊಂಡಿದೆಯೋ, ಅಲ್ಲಿ ಕಾನೂನು ಉಲ್ಲಂಘನೆ ಆಗಿದೆಯೋ ಎಂಬ ಬಗ್ಗೆ ಏನೂ ತಿಳಿದು ಬಂದಿಲ್ಲ. ಹೀಗಾಗಿ ಭೂಶನ್ ಅಪರಾಧಿ ಎಂದು ಹೇಳುವಂತಿಲ್ಲ. ತನಿಖೆಯ ನಂತರ ಈ ಕುರಿತು ಏನನ್ನಾದರೂ ಹೇಳಬಹುದು.

      Reply
  32. Balasubrahmanya.

    Kejarivalara avara sevavadhiyalli 9 laksha dhamele therige baki madidharu, adhakkagi therige Elake Endha notisu bandhithu , E baggeye nimmalli prashnishidhu adhake yavade Utharakodadhe ,avaru rajeya mele padedha vethanakke vivarane koduthidhiri.vishaya berekade thirugisuthidhiri. Prashanthbhushanarige BJP sarakara jaga manjurumadirabahudhu aadhare manjuruaagalu Evaru arji hakabekalla? vanijyakkagi bere rajyadhavarige bhumi hondhalu kanuninalli avakashavilla. Higidhu arji hakuvaga alliya kanoonannu ,Oba kyatha vakilanagi thilidhu kondirabekalla , Mele helidhannu Gothilladhe aagidhe Yendhu helalu sadhyavilla ! hagagi Evarugala melina aapadhane mele hurulidhe. Adhikara Ellade hige madidhavaru Adhikarakke bandhare……..? Narendhra Moodhi ,BJP, RSS, na hinnele Endha bandhavaru,Hage Gujarathannu jathyathita hagu prajaprabhuthvadha neleyalle abhivrdhi madi Aa rajyadha janathe Endha sai yenisikondavaru, Eethanaka madhyamagalu nadesidha sameekshegalu Moodhiyavare PRADHANI aagaliyendhu haaraisidhare. hagagi Yella rajakaranigalindha Moodhiyavaru Laksha laksha palu Uthamarendhu bahumathadhindha janatheye heluthidhare . Kelavondhu thithasakthigalu virodhisabahudhu adhu naganya.

    Reply
    1. Ananda Prasad

      ಕೇಜ್ರಿವಾಲ್ ಸೇವಾವಧಿಯಲ್ಲಿ ತೆರಿಗೆ ಬಾಕಿ ಮಾಡಿದ್ದು ಅಲ್ಲ. ವೇತನ ಕೊಡುವಾಗಲೇ ಆದಾಯ ತೆರಿಗೆ ಮುರಿದೇ ಕೊಡುವ ಕಾರಣ ಆದಾಯ ತೆರಿಗೆ ಬಾಕಿ ಉಳಿಸಿಕೊಳ್ಳುವ ಸಂಭವ ಇಲ್ಲ. ವಿಷಯ ಇರುವುದು ಕೇಜ್ರಿವಾಲ್ ಸರ್ಕಾರೀ ಸೇವೆಯಲ್ಲಿ ಇರುವಾಗ ರಜೆ ಪಡೆದು ವಿದೇಶ ವ್ಯಾಸಂಗಕ್ಕೆ ಎರಡು ವರ್ಷದ ಮಟ್ಟಿಗೆ ಹೋಗಿದ್ದರು. ಈ ರೀತಿಯ ರಜೆ ಪಡೆದು ಅಧ್ಯಯನಕ್ಕೆ ಹೋದರೆ ವಾಪಸ್ ಕೆಲಸಕ್ಕೆ ಸೇರಿ ಮೂರು ವರ್ಷ ಅವಧಿ ಮುಗಿಸಿರಬೇಕು ಅಲ್ಲಿಯವರೆಗೆ ಬೇರೆ ಕೆಲಸಕ್ಕೆ ಸೇರುವಂತಿಲ್ಲ ಅಥವಾ ರಾಜಿನಾಮೆ ಕೊಡುವಂತಿಲ್ಲ ಎಂಬುದು ನಿಯಮ. ನಿಯಮಾನುಸಾರ ನಡೆದುಕೊಳ್ಳದಿದ್ದರೆ ವ್ಯಾಸಂಗದ ಅವಧಿಯಲ್ಲಿ ಪಡೆದ ಸಂಬಳವನ್ನು ಬಡ್ಡಿ ಸಹಿತ ಕೊಡಬೇಕು ಎಂಬುದು ಸರ್ಕಾರೀ ನಿಯಮ. ಆ ನಿಯಮದಂತೆ ಕೇಜ್ರಿವಾಲ್ ಮೂರು ವರ್ಷ ಅವಧಿ ಸೇವೆಯನ್ನು ಪೂರೈಸಿ ನಂತರ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಅವರು ಆ ಮೂರು ವರ್ಷ ಅವಧಿಯಲ್ಲಿ ತಾಂತ್ರಿಕವಾಗಿ ಸರ್ಕಾರೀ ಸೇವೆಯಲ್ಲಿದ್ದರೂ ವೇತನ ರಹಿತ ರಜೆಯನ್ನು ಪಡೆದುಕೊಂಡಿದ್ದರು ಮತ್ತು ಮಾಹಿತಿ ಹಕ್ಕು ಅಧಿನಿಯಮದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ತಿಳಿದುಬರುತ್ತದೆ. ಈ ವಿಷಯದಲ್ಲಿ ಕೇಜ್ರಿವಾಲ್ ತಪ್ಪಿತಸ್ಥ ಎಂದಾದರೆ ಅವರಿಂದ ಹಣವನ್ನು ಬಡ್ಡಿ ಸಹಿತ ಪಡೆದುಕೊಳ್ಳಲು ಸರ್ಕಾರಿ ಇಲಾಖೆ ಸ್ವತಂತ್ರವಾಗಿದೆ. ಹೆಚ್ಚಿನ ವಿವರಗಳಿಗಾಗಿ ಈ ವಿಳಾಸದಲ್ಲಿ ನೋಡಬಹುದು http://indiatoday.intoday.in/story/i-t-slaps-notice-on-arvind-kejriwal-asks-to-pay-dues-of-rs-9-lakh/1/149759.html

      ಭಾರತದ ಇಂದಿನ ಅಧೋಗತಿಗೆ ಪ್ರತಿಭಾವಂತರು ರಾಜಕೀಯವನ್ನು ಕಡೆಗಣಿಸಿರುವುದು ಅಥವಾ ರಾಜಕೀಯದಿಂದ ದೂರ ನಿಂತಿರುವುದು ಪ್ರಧಾನ ಕಾರಣ. ಇದೀಗ ಐಐಟಿಯಂಥ ಉನ್ನತ ವಿದ್ಯಸಂಸ್ಥೆಯಿಂದ ಪದವಿ ಪಡೆದ ಹಾಗೂ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಸಾದ ಕೇಜ್ರಿವಾಲ್ ಅವರಂಥವರು ದೇಶದ ರಾಜಕೀಯವನ್ನು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಧಾರಣೆಗೊಳಿಸುವ ಏಕಮಾತ್ರ ಉದ್ಧೇಶದಿಂದ ರಾಜಕೀಯಕ್ಕೆ ಧುಮುಕಿರುವಾಗ ಅದನ್ನು ಬೆಂಬಲಿಸುವುದು ಪ್ರಜ್ಞಾವಂತರ, ಚಿಂತಕರ, ಮಾಧ್ಯಮಗಳ ಕರ್ತವ್ಯವಾಗಿರುತ್ತದೆ. ಆದರೆ ಅದು ನಡೆಯುತ್ತಿಲ್ಲ ಬದಲಿಗೆ ಅವರ ಮೇಲೆ ಕೆಸರು ಎರಚುವ ಪ್ರಯತ್ನ ನಡೆಯುತ್ತಿದೆ. ಇದು ಸಮಂಜಸವಲ್ಲ. ಕೇಜ್ರಿವಾಲ್ ಬಯಸಿದ್ದರೆ ಉಳಿದ ಹಲವು ಪ್ರತಿಭಾವಂತರಂತೆ ವಿದೇಶಗಳಿಗೆ ಹಾರಿ ಭೋಗಜೀವನದಲ್ಲಿ ಮುಳುಗಬಹುದಾಗಿತ್ತು ಅಥವಾ ದೇಶದಲ್ಲಿಯೇ ಇರುವ ಹುದ್ಧೆಯಲ್ಲಿಯೇ ಐಶಾರಾಮಿ ಜೀವನ ತೆಗೆಯಬಹುದಾಗಿತ್ತು. ಆದರೆ ಅವರು ಹಾಗೆ ಮಾಡದೆ ದೇಶದ ರಾಜಕೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಗಾಗಿ ಮಹಾತ್ಮಾ ಗಾಂಧಿಯವರಂತೆ ಸರಳ ಜೀವನದಲ್ಲಿ ತೃಪ್ತಿಯನ್ನು ಕಾಣುತ್ತಾ ಹೋರಾಟದ ಬದುಕನ್ನು ಆರಿಸಿಕೊಂಡಿದ್ದಾರೆ. ಇದಕ್ಕಾಗಿ ನಾವು ಅವರನ್ನು ಮೆಚ್ಚಬೇಕು, ಕೆಸರು ಎರಚುವುದಲ್ಲ.

      Reply
  33. mithra

    ಉದ್ಯಮಪತಿಗಳಿಗೆ ಮೋದಿ ಬೇಕಾಗಿದ್ದಾರೆ…… ಅಥವಾ ಸೋನಿಯಾ ಬೇಕಾಗಿದ್ದಾರೆ….. ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತದಿಂದ ಭ್ರಮನಿರಸನಗೊಂಡಿರುವ ಜನಸಾಮಾನ್ಯ ಒಂದು ವೇಳೆ….ಅದಿಕಾರ ಬದಲಾವಣೆ ಬಯಸಿದಲ್ಲಿ ……ಓಟು ಚದುರಿಹೊಗದಂತೆ ಅಧಿಕಾರ ಧ್ರುವೀಕರಣಕ್ಕಾಗಿ ಮೋದಿ ಯನ್ನು ಹೀಗೆ ಪ್ರತಿಬಿಂಬಿಸಲಾಗುತ್ತಿದೆ…. ….ಯೋಗ್ಯ ನಾಯಕತ್ವವಿಲ್ಲದೇ ಸೊರಗಿದ್ದ ಬಿಜೆಪಿ ಕೂಡ ರಾಮದೇಗುಲ ….ಹಿಂದುತ್ವ…. ಸಮಾನ ನಾಗರೀಕ ಹಕ್ಕು…..ಎಲ್ಲವನ್ನು ಬದಿಗಿಟ್ಟು …..ಗುಜರಾತ್ ಪ್ರಗತಿ ಎಂಬ ಮಂತ್ರ ಜಪಿಸುತ್ತಿದೆ…..

    Reply
  34. Pingback: Samuel

Leave a Reply

Your email address will not be published. Required fields are marked *