ಮರೆಯಲಾಗದ ಕೋಮು ಹತ್ಯಾಕಾಂಡಗಳ ಗಾಯಗಳು – ಮರೆಯೆಂದರೂ ಮರೆಯಲಿ ಹ್ಯಾಂಗ?

– ಬಿ.ಶ್ರೀಪಾದ ಭಟ್

1989 ಅಕ್ಟೋಬರ್ 24: ಬಿಹಾರ್ ರಾಜ್ಯದ ಭಾಗಲ್ಪುರ್ ಜಿಲ್ಲೆ ಮತ್ತು ಸುತ್ತಮುತ್ತಲ 250 ಹಳ್ಳಿಗಳಲ್ಲಿ ಸಂಭವಿಸಿದ ಹಿಂದೂ ಮತ್ತು ಮುಸ್ಲಿಂರ ನಡುವಿನ ಕೋಮುಗಲಭೆಯಲ್ಲಿ ಸುಮಾರು 1000 ನಾಗರಿಕರು ಸಾವನ್ನಪ್ಪಿದರು. ಇವರಲ್ಲಿ ಅಂದಾಜು 900 ಮುಸ್ಲಿಂ ನಾಗರಿಕರು. ಅಧಿಕೃತ ಮಾಹಿತಿಗಳ bhagalpur-riotsಪ್ರಕಾರ ಸುಮಾರು ಎರಡು ತಿಂಗಳುಗಳ ಕಾಲ ನಿರಂತರವಾಗಿ ನಡೆದ ಈ ಕೋಮು ಗಲಭೆಯ ಹಿಂಸೆಯ ಕರಾಳತೆ ಅಂದಾಜು 250 ಹಳ್ಳಿಗಳಿಗೆ ವ್ಯಾಪಿಸಿತ್ತು. ಈ ಹಳ್ಳಿಗಳ 15000 ಮನೆಗಳು ಧ್ವಂಸಗೊಂಡವು. 50000 ನಾಗರಿಕರು ನಿರಾಶ್ರಿತರಾದರು. ಜಿಲ್ಲೆಯಾದ್ಯಾಂತ ಬಹುಪಾಲು ಮುಸ್ಲಿಂ ಸಮುದಾಯದ ಜೀವನೋಪಾಯವಾಗಿದ್ದ ಸುಮಾರು 1700 ಕೈಮಗ್ಗಗಳು, 700 ಪವರ್‌ಲೂಂಗಳನ್ನು ಸಂಪೂರ್ಣವಾಗಿ ಸುಟ್ಟು ಬೂದಿ ಮಾಡಲಾಯಿತು. ಸುಮಾರು 70 ಮಸೀದಿಗಳನ್ನು ಧ್ವಂಸಗೊಳಿಲಾಯಿತು.

ಚಿಂತಕ ಫ್ರೊ.ವಾರಿಶಾ ಫರತ್ ಬರೆದ The Forgotten Carnage of Bhagalpur (January 19, 2013, Economic & Political Weekly ) ಲೇಖನದ ಸಾರಾಂಶ:

“ಅಧಿಕೃತ ಸುದ್ದಿಯ ಪ್ರಕಾರ ಕೋಮು ಗಲಭೆಗಳು 1989 ರ ಅಕ್ಟೋಬರ್ 24 ರಂದು ಪ್ರಾರಂಭಗೊಂಡು 30 ನೇ ನವೆಂಬರ್ 1989 ರವರೆಗೆ ಮುಂದುವರೆಯಿತು. ಮತ್ತೆ 1990 ರ ಮಾರ್ಚ 22-23 ರಂದು ಇದೇ ಕೋಮುಗಲಭೆಗಳು ಪುನರಾವರ್ತನೆಗೊಂಡವು. 12 ಮತ್ತು 22 ನೇ ಆಗಸ್ಟ್ 1989 ರಂದು ಅಂದರೆ ಈ ಗಲಭೆಯ ಎರಡು ತಿಂಗಳು ಮೊದಲು ಕೋಮು ಗಲಭೆಗಳಿಗೆ ಕುಖ್ಯಾತವಾಗಿದ್ದ ಭಾಗಲ್ಪುರ ಜಿಲ್ಲೆಯಲ್ಲಿ ತೀವ್ರವಾದ ಕೋಮುದ್ವೇಷದ ವಾತಾವರಣವು ನಿರ್ಮಾಣಗೊಂಡಿತ್ತು. ಆದರೆ ಆಗ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಐದು ದಿನಗಳ ರಾಮಶಿಲಾ ಕಾರ್ಯಕ್ರಮ ಭಾಗಲ್ಪುರದ ಈ ಗಲಭೆಗಳಿಗೆ ಬೀಜವನ್ನು ಬಿತ್ತಿತ್ತು. ಆಗ ದೇಶಾದ್ಯಾಂತ ವ್ಯಾಪಿಸಿದ್ದು ಮಂದಿರ ನಿರ್ಮಾಣದ ರಾಮಜನ್ಮಭೂಮಿ ಚಳುವಳಿ ಮತ್ತು ಅದರ ಭಾಗವಾದ ಇಟ್ಟಿಗೆಯ ಮೆರವಣಿಗೆ.ಈ ಇಟ್ಟಿಗೆಯ ಮೆರವಣಿಗೆಯನ್ನು ಭಾಗಲ್ಪುರ ಟೌನ್ ಮತ್ತು ಸುತ್ತಲ ಹಳ್ಳಿಗಳಲ್ಲಿ ನಡೆಸಲಾಗಿತ್ತು. ಧರ್ಮದ ಆಧಾರದ ಮೇಲೆ ಜನರನ್ನು ಧ್ರುವೀಕರಣಗೊಳಿಸುವ ಈ ಬಲಪಂಥೀಯ ಪಕ್ಷಗಳ ಧೋರಣೆಗಳು ಭಾಗಲ್ಪುರ ಜಿಲ್ಲೆಯಾದ್ಯಾಂತ ಸೂಕ್ಮವಾದ, ಪ್ರಚೋದನಾತ್ಮಕವಾದ ವಾತಾವರಣವನ್ನು ನಿರ್ಮಿಸಿತ್ತು. ಈ ಹಿನ್ನೆಯಲ್ಲಿ ಗಲಭೆಗಳು ಸ್ಪೋಟಗೊಂಡಂತಹ ಸಂದರ್ಭದಲ್ಲಿಯೇ ಕೆಲವು ಫೆನಟಿಕ್ ಗುಂಪುಗಳು ಭಾಗಲ್ಪುರ ಪಟ್ಟಣದ ಲಾಡ್ಜ್‌ಗಳಲ್ಲಿ ವಾಸಿಸುತ್ತಿರುವ ಸುಮಾರು 200 ಹಿಂದೂ ವಿಧ್ಯಾರ್ಥಿಗಳನ್ನು ಮುಸ್ಲಿಂರು ಕೊಂದಿದ್ದಾರೆ ಎಂದು ಸುಳ್ಳು ವಂದಂತಿಗಳನ್ನು ಹಬ್ಬಿಸಿದವು. ಇನ್ನೂ ಮುಂದುವರೆದು 31 ಹಿಂದೂ ಹುಡುಗರನ್ನು ಕೊಂದು ಸಂಸ್ಕೃತ ಕಾಲೇಜಿನ ಬಾವಿಯಲ್ಲಿ ಎಸೆದಿದ್ದಾರೆ ಎಂಬಂತಹ ಮಾತುಗಳನ್ನು ಸಹ ತೇಲಿ ಬಿಡಲಾಗಿತ್ತು. ನಂತರ ಇದಕ್ಕೆ ಯಾವ ಪುರಾವೆ ಇಲ್ಲ, ಇದು ಸಂಪೂರ್ಣವಾಗಿ ಕಪೋಲಕಲ್ಪಿತವಾದದೆದ್ದಂದು ಪತ್ರಿಕೆಗಳಲ್ಲಿ ವರದಿಯಾದರೂ, ಅಷ್ಟರಲ್ಲಿ ಇಡೀ ಭಾಗಲ್ಪುರ ಜಿಲ್ಲೆ Communal violence ನ ಹಿಂಸಾತ್ಮಕ ವಾತಾವರಣಕ್ಕೆ ಸಜ್ಜಾಗಿತ್ತು (Minority Commission,1990 : 242). ಬಿಹಾರ ಸರ್ಕಾರವು ರಚಿಸಿದ್ದ ಮೂವರು ಸದಸ್ಯರ ತನಿಖಾ ತಂಡವು ಇಡೀ ಕೋಮು ಗಲಭೆಗೆ ರಾಮಶಿಲಾನ್ಯಾಸಕ್ಕಾಗಿ ನಡೆದ ಮೆರವಣಿಗೆಯೇ ಕಾರಣವೆಂದು ತನ್ನ ವರದಿಯಲ್ಲಿ ತಿಳಿಸಿತ್ತು (ಸಿನ್ಹ & ಹಸನ್ 1995:14). bhagalpur_setencing_313ಅಲ್ಲದೆ ಆಗಿನ ಪೋಲೀಸ್ ಸೂಪರಿಂಟೆಂಡೆಂಟ್ ದ್ವಿವೇದಿ ಮತ್ತು ಇತರೇ ಪೋಲೀಸ್ ಅಧಿಕಾರಿಗಳೂ ಸಹ ಈ ಕೋಮುಗಲಭೆಯ ಹೊಣೆಗಾರರು ಎಂದು ತನಿಖಾ ತಂಡವು ಅಭಿಪ್ರಾಯ ಪಟ್ಟಿತ್ತು. 1989ರಲ್ಲಿ ಭಾಗಲ್ಪುರದಲ್ಲಿ ಈ ಕೋಮುಗಲಭೆ ಜರುಗಿದಾಗ ರಾಜೀವ್ ಗಾಂಧಿ ಇಂಡಿಯಾದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ಕಾಂಗ್ರೆಸ್‌ನ ಜಗನ್ನಾಥ್ ಮಿಶ್ರಾ ಬಿಹಾರ್‌ನ ಮುಖ್ಯಮಂತ್ರಿಯಾಗಿದ್ದರು. ಆಗ ಗಲಭೆಗ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿದ್ದ ರಾಜೀವ್ ಗಾಂಧಿ ಗಲಭೆಗಳ ಸಂದರ್ಭದಲ್ಲಿ ಹಿಂದೂಗಳ ಪರವಾಗಿ ಪಕ್ಷಪಾತದಿಂದ ಕಾರ್ಯನಿರ್ವಹಿಸಿದ ಪೋಲೀಸ್ ಅಧಿಕಾರಿ ದ್ವಿವೇದಿಯನ್ನು ಕೂಡಲೆ ಅಲ್ಲಿಂದ ಬದಲಾಯಿಸುವಂತೆ ಆದೇಶಿಸಿದರು. ಆದರೆ ವಿಶ್ವಹಿಂದೂ ಪರಿಷತ್ ಮತ್ತು ಸಂಘ ಪರಿವಾರದ ಗುಂಪುಗಳು ಇದನ್ನು ತೀವ್ರವಾಗಿ ವಿರೋಧಿಸಿ ದ್ವಿವೇದಿಯ ವರ್ಗಾವಣೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾದವು (ಛೋಪ್ರ & ಝಾ 2012). ಅಂದಿನ ಗಲಭೆಗಳಿಂದ ಬದುಕುಳಿದ ಕೆಲವರ ಪ್ರಕಾರ ಒಂದು ವೇಳೆ ಈ ಪೋಲೀಸ್ ಅಧಿಕಾರಿ ದ್ವಿವೇದಿಯ ವರ್ಗಾವಣೆಯನ್ನು ತಡೆಹಿಡಿಯದಿದ್ದರೆ ಅನೇಕ ನಾಗರಿಕರ ಪ್ರಾಣವನ್ನು ಉಳಿಸಬಹುದಾಗಿತ್ತೆಂದು ಅಭಿಪ್ರಾಯ ಪಡುತ್ತಾರೆ. (The subsequent Commission of Inquiry constituted to probe the riots indicted Dwivedi and noted in its report: “We would hold Dwivedi, the then superintendent of police, Bhagalpur, wholly responsible for whatever happened before 24 October 1989, on 24th itself and [after the] 24th. His communal bias was fully demonstrated not only by his manner of arresting the Muslims and by not extending them adequate help to protect them (Sinha and Hasan 1995: 114).”)

“ಆದರೆ ಆಗಿನ ಕಾಂಗ್ರೆಸ್ ಸರ್ಕಾರವೂ ಕೂಡ ಈ ಕೋಮು ಗಲಭೆಗಳನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಅಥವಾ ಗಲಭೆಯಿಂದ ನಿರಾಶ್ರಿತರಾದವರಿಗೆ ಸೂಕ್ತ ಪುನರ್ವಸತಿಯನ್ನು ಸಹ ಕಲ್ಪಿಸಲಿಲ್ಲ. ಅಷ್ಟೇಕೆ 1990 ರಲ್ಲಿ ಸೆಕ್ಯುಲರ್‌ನ ಪ್ಲಾಟ್‌ಫಾರ್ಮ ಮೇಲೆ ಅಧಿಕಾರಕ್ಕೆ ಬಂದ ಲಾಲೂ ಪ್ರಸಾದ್ ಯಾದವ್ ಸಹ ಆರೋಪಿಗಳಿಗೆ ಶಿಕ್ಷೆಯನ್ನು ಕೊಡಿಸಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಏಕೆಂದರೆ ಬಹುಪಾಲು ಆರೋಪಿಗಳು ಲಾಲೂಪ್ರಸಾದರ ಯಾದವ್ ಜಾತಿಗೆ ಸೇರಿದವರಾಗಿದ್ದರು. ಕಳೆದ ಎಂಟು ವರ್ಷಗಳಿಂದ ಅಧಿಕಾರದಲ್ಲಿರುವ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವೂ ಸಹ ಗಲಭೆಗಳಿಂದ ಬುದುಕುಳಿದ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡಲಿಲ್ಲ. 23 ವರ್ಷಗಳ ನಂತರವೂ ಭಾಗಲ್ಪುರ ಕೋಮು ಗಲಭೆಯ ಗಾಯಗಳು ಇನ್ನೂ ಹಸಿಯಾಗಿವೆ. ಕೋಮು ಗಲಭೆಗಳಿಂದ ಬಲಿಪಶುಗಳಾಗಿ ಬದುಕುಳಿದ ಸಾವಿರಾರು ನಿರಾಶ್ರಿತರು ಆ ದಿನಗಳನ್ನು ನೆನೆಸಿಕೊಂಡು ಇಂದಿಗೂ ಬೆಚ್ಚಿಬೀಳುತ್ತಾರೆ. 23 ವರ್ಷಗಳ ನಂತರವೂ ಅವರ ಅಸಹಾಯಕತೆ, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳು ಕೊನೆಗೊಂಡಿಲ್ಲ. ಚಾಂದೇರಿ ಹಳ್ಳಿಯೊಂದರಲ್ಲಿ 65 ಮುಸ್ಲಿಂರನ್ನು ಕೊಲೆಗೈಯಲಾಯಿತು ಮತ್ತು ಆ ಮೃತ ದೇಹಗಳನ್ನು ಕೆರೆಗೆ ಎಸೆಯಲಾಗಿತ್ತು. bhagalpur_case_study_313ಮಲ್ಲಿಕಾ ಬೇಗಂ ಇಂದು ಆ ಹತ್ಯಾಕಾಂಡದಲ್ಲಿ ಬದುಕುಳಿದ ಏಕೈಕ ಸಾಕ್ಷಿ. ಆಕೆ ಎದೆಗುಂದೆ ಧೈರ್ಯದಿಂದ ಎಲ್ಲಾ ಬಗೆಯ ಬೆದರಿಕೆಗಳು ಮತ್ತು ಪ್ರಲೋಭನೆಗಳನ್ನು ಎದುರಿಸಿ ಹತ್ಯಾಕಾಂಡಕ್ಕೆ ಹೊಣೆಗಾರರಾದ ಸುಮಾರು 16 ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಳು.

“ಲೋಗೇನ್ ಹಳ್ಳಿಯಲ್ಲಿ 118 ನಾಗರಿಕರನ್ನು ಹತ್ಯೆ ಮಾಡಲಾಯಿತು. ತಮ್ಮ ಹತ್ಯಾಕಾಂಡವನ್ನು ಮುಚ್ಚಿ ಹಾಕಲು ಕೊಲೆಗಾರರು ಹೆಣಗಳನ್ನು ಹೊಲಗಳಲ್ಲಿ ಹೂಳಿ ಆ ಶವಗಳ ಮೇಲೆ ತರಕಾರಿಯ ಗಿಡಗಳನ್ನು ಬೆಳೆಸಿದರು. ಗಲಭೆಗಳಿಂದ ಬದುಕುಳಿದ ಅನೇಕ ಕುಟುಂಬಗಳು ಇಂದಿಗೂ ಭಯದ ನೆರಳಿನಲ್ಲಿ ಬದುಕುತ್ತಿವೆ. ಉದಾಹರಣೆಗೆ ಹತ್ತಾರು ಕೊಲೆಗಳಲ್ಲಿ ಭಾಗಿಯಾಗಿದ್ದ ಕಮಲೇಶ್ವರ್ ಯಾದವ್ ಎನ್ನುವ ಕೊಲೆಗಾರ ಕುಖ್ಯಾತ ಪಾರ್ಬತ್ತಿ ಕೇಸಿನಲ್ಲಿ ಮಹಮದ್ ಮುನ್ನಾ ಎನ್ನುವವರ ಹತ್ಯೆಯಲ್ಲಿ ಆರೋಪಿಯೆಂದು ಸಾಬೀತಾಗಿದೆ. ಆದರೆ ಕೊಲೆಯಾದ ಮುನ್ನಾನ ಕುಟುಂಬಕ್ಕೆ ಇಂದಿಗೂ ರಕ್ಷಣೆ ಒದಗಿಸಿಲ್ಲ. ಆದರೆ 23 ವರ್ಷಗಳ ಹಿಂದಿನ ಅಸಹಾಯಕ ಮುಸ್ಲಿಂ ನಾಗರಿಕರ ವಿರುದ್ಧದ ಆ ಸಾಮೂಹಿಕ ಅತ್ಯಾಚಾರದ ಆ ಭೀಕರತೆ ಸಾರ್ವಜನಿಕರ ನೆನಪಿನ ಭಿತ್ತಿಯಿಂದ ಅಳಿಸಿಹೋಗಿದ್ದರೂ, ಭಾಗಲ್ಪುರ ಕೋಮುಗಲೆಭೆಗಳ ತುತ್ತಾಗಿ ತಮ್ಮ ಮಕ್ಕಳು, ಸಂಬಂಧಿಕರನ್ನು ಕಳೆದುಕೊಂಡು ಇಂದಿಗೂ ಅನಾಥರಾಗಿ ಬದುಕುತ್ತಿರುವ ಬಹುಪಾಲು ನಿರಾಶ್ರಿತರಿಗೆ 23 ವರ್ಷಗಳ ನಂತರವೂ ಆ ಹತ್ಯಾಕಾಂಡದ ಗಾಯಗಳಿಂದ, ಅದರ ಕರಾಳತೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅದನ್ನು ಮರೆಯಲು ನಡೆಸಿದ ಪ್ರಯತ್ನಗಳೇ ಯಾತನಾಮಯವಾದವುಗಳು. ಆ ಕೋಮು ಗಲಭೆಗಳಲ್ಲಿ ಅತ್ಯಾಚಾರಕ್ಕೆ, ಹಲ್ಲೆಗೆ ತುತ್ತಾಗಿ ಮೃತರಾದ 10000 ಮುಸ್ಲಿಂ ಗಂಡಸರು, ಹೆಂಗಸರು, ಮಕ್ಕಳು ಇವರೆಲ್ಲರ ನೆನಪಿರುವುದು ಇಂದು ಒಂಟಿಯಾಗಿ ಹೋರಾಟ ಮಾಡುತ್ತಿರುವ ಅವರ ಸಂಬಂಧಿಕರಿಗಷ್ಟೇ.

“ದೆಹಲಿ ಮೂಲದ The People’s Union for Democratic Rights (PUDR) ಈ ಭಾಗಲ್ಪುರ ಕೋಮುಗಲಭೆಗಳ ಕುರಿತಾಗಿ ಸುಧೀರ್ಘವಾದ, ವಿವರವಾದ ಡಾಕ್ಯುಮೆಂಟರಿಯನ್ನು ತಯಾರಿಸಿದೆ. ಅದರಲ್ಲೂ ಅಲ್ಲಿನ ಪೋಲೀಸ್ ವ್ಯವಸ್ಥೆಯು ಒಂದು ಕೋಮಿನ ಪರವಾಗಿ ಬೆಂಬಲಕ್ಕೆ ನಿಂತಿರುವುದನ್ನು ಎಳೆಎಳೆಯಾಗಿ,ಸಾಕ್ಷಿ ಸಮೇತ ಚಿತ್ರಿಸಿದೆ.

“ಇಂದಿಗೂ ಆ ಶಾಪಗ್ರಸ್ಥ ಪಟ್ಟಣವು ಪ್ರತ್ಯೇಕವಾದ, ಒಡಕಿನ ಪಟ್ಟಣವಾಗಿಯೇ ಉಳಿದಿದೆ. ಇಂದು ಬಿಜೆಪಿಯ ಮುಸ್ಲಿಂ ಮುಖವಾಡ ಶಾನವಾಜ್ ಹುಸೇನ್ ಈ ಭಾಗಲ್ಪುರ ಕ್ಷೇತ್ರದ ಪಾರ್ಲಿಮೆಂಟ್ ಶಾಸಕ. ಬಿಜೆಪಿಯ ಈ ಮುಖವಾಡ ಕಳೆದೆರೆಡು ಬಾರಿ ಸತತವಾಗಿ ಈ ಕ್ಷೇತ್ರದಿಂದ ಗೆಲವು ಸಾಧಿಸಿರುವುದು ಕೋಮು ಸೌಹಾರ್ದತೆಗೆ ಸಾಕ್ಷಿ ಎಂದು ಬಣ್ಣಿಸಲಾಗುತ್ತಿದೆ. ಆದರೆ ವಾಸ್ತವದ ಚಿತ್ರಣವೇ ಬೇರೆಯಾಗಿದೆ. ನ್ಯಾಯ ಗಳಿಸುವ ಸಾಧ್ಯತೆಗಳು ಕ್ಷೀಣಿಸುತ್ತಿರುವ ಈ ಘಟ್ಟದಲ್ಲಿ ಮತ್ತೊಮ್ಮೆ ಈ ಕೋಮು ಗಲಭೆ ನಡೆಯಬಾರದು ಎನ್ನವಷ್ಟಕ್ಕೆ ಮಾತ್ರ ವ್ಯವಸ್ಥೆ ತನ್ನನ್ನು ಸೀಮಿತಗೊಳಿಸಿಕೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಆ ಕರಾಳವಾದ ಕೋಮು ಗಲಭೆಗಳು ಮರಳುವ ಆತಂಕಗಳು ಕಡಿಯಿದ್ದರೂ ಸಹ ಕೋಮು ಗಲಭೆಗಳು ಘಟಿಸುವುದಕ್ಕಾಗಿ ನೂರಾರು ದಾರಿಗಳು ಇಂದಿಗೂ ನಿಚ್ಛಳವಾಗಿವೆ.

“1990 ರಲ್ಲಿ ಲಾಲೂ ಪ್ರಸಾದರ ನೇತೃತ್ವದ ಆಗಿನ ಬಿಹಾರ ಸರ್ಕಾರವು Commission of Inquiry Act (1952) ಅಡಿಯಲ್ಲಿ ಕೋಮು ಗಲಭೆಗಳನ್ನು ಕುರಿತಾದ ವರದಿಯನ್ನು ನೀಡಲು, ಈ ಕೋಮು ಗಲಭೆಗಳಿಗೆ ಕಾರಣಗಳನ್ನು, ವ್ಯಕ್ತಿಗಳು, ಸಂಘಟನೆಗಳ ಜವಾಬ್ದಾರಿಗಳು ಮತ್ತು ಕೋಮು ಗಲಭೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಸೂಚಿಸಲು ತನಿಖಾ ತಂಡವನ್ನು ರಚಿಸಿತ್ತು. ಇದರ ಭಾಗವಾಗಿ 126 ಸಾಕ್ಷಿಗಳನ್ನು ಪರೀಕ್ಷಿಸಲಾಯಿತು. ಕೂಲಂಕಷ ತನಿಖೆಯ ನಂತರ ತನಿಖಾ ತಂಡದ ಅಧ್ಯಕ್ಷ ಜಸ್ಟೀಸ್ ರಾಮ ನಂದನ ಪ್ರಸಾದ್‌ರ ವರದಿ ಮತ್ತು ತನಿಖಾ ತಂಡದ ಸದಸ್ಯರಾದ ಜಸ್ಟೀಸ್ ಚಂದ್ರ ಪ್ರಸಾದ ಸಿನ್ಹಾ ಮತ್ತು ಎಸ್.ಶಾಮ್ಸುಲ್ ಹಸನ್ ಅವರ ವರದಿ ಹೀಗೆ ಮೂರು ಭಿನ್ನ ವರದಿಗಳು ಬಿಡುಗಡೆಗೊಂಡವು. ಇವುಗಳ ಹೊರತಾಗಿ ಅಲ್ಪಸಂಖ್ಯಾತ ಆಯೋಗದ ಎಸ್.ಎಂ.ಭುರೆ ಮತ್ತು ಅವರ ಸದಸ್ಯರ ನೇತೃತ್ವದ ತಂಡವು ಸಹ ತನಿಖಾ ವರದಿಯನ್ನು ರೂಪಿಸಿತು. ತನಿಖಾ ತಂಡಗಳಿಂದ, ನ್ಯಾಯಾಂಗದಿಂದ ಈ ಕೋಮು ಗಲಭೆಗೆ ಪ್ರಚೋದಿಸಿದ್ದಾರೆ ಮತ್ತು ಮುಸ್ಲಿಂರ ವಿರುದ್ಧ ಕರ್ತವ್ಯಲೋಪ ಎಸೆಗಿದ್ದಾರೆ ಎಂದು ಆರೋಪಕ್ಕೆ ಒಳಗಾಗಿರುವ ಪೋಲೀಸ್ ಸೂಪರಿಂಟೆಂಡೆಂಟ್ ಕೆ.ಎಸ್.ದ್ವಿವೇದಿಗೆ ನಿತೀಶ್ ಕುಮಾರ್ ಸರ್ಕಾರ 2011 ರಲ್ಲಿ ಅಡಿಶನಲ್ ಡೈರೆಕ್ಟರ್ ಜನರಲ್ ಆಗಿ ಭಡ್ತಿಯನ್ನು ನೀಡಿತು. ಇದೇ ಬಗೆಯ ಕರ್ತವ್ಯ ಲೋಪದ ಆರೋಪ ಎದುರಿಸುತ್ತಿರುವ ಇತರೇ ಪೋಲೀಸ್ ಅಧಿಕಾರಿಗಳಿಗೂ ಪ್ರಮೋಶನ್ ನೀಡಲಾಗಿದೆ.”

2013 ಸೆಪ್ಟೆಂಬರ್: ಭಾಗಲ್ಪುರದ ಚಾಮನಗರದ ಅಂಗಡಿಯ ಮುಂದೆ ಕುಳಿತಿರುವ ಜಿಯಾವುದ್ದೀನ್ ಮತ್ತು ಚಂಪಾನಗರದ ರಾಜಕೀಯ ಆಕ್ಟಿವಿಸ್ಟ್ ಮೆಜಾಹತ್ ಅನ್ಸಾರಿ ಹೇಳುವುದೇನೆಂದರೆ ಮೊನ್ನೆ ಮುಜಫರ್ ನಗರದಲ್ಲಿ ನಡೆದ ಕೋಮುಗಲಭೆಗಳನ್ನು ನೋಡಿದಾಗ ನಮಗೆ ಭಾಗಲ್ಪುರದ ಕರಾಳತೆ ನೆನಪಾಗುತ್ತದೆ. ಅಂದು ನಮಗೆಲ್ಲಾ ಆಗಿದ್ದೇ ಇಂದು ಮುಜಫರ್ ನಗರದ ನಾಗರಿಕರಿಗೆ ಆಗುತ್ತಿದೆ. ಇದಕ್ಕೆ ಕೊನೆಯೆಂದೋ? (ದಿ ಹಿಂದೂ, 3 ನೇ ಅಕ್ಟೋಬರ್, 2013)

30 ನೇ ಸೆಪ್ಟೆಂಬರ್ 2013 : ಕರ್ನಾಟಕದ ಶಿರಾ ತಾಲೂಕಿನಲ್ಲಿ ಇದ್ದಕ್ಕಿಂದ್ದಂತೆ ಕೋಮುಗಲಭೆಗಳು ಶುರುವಾಗಿ ಇಡೀ ಪಟ್ಟಣವೇ ಭಯಗ್ರಸ್ಥವಾಯಿತು. sira-communal-clash1996 ರ ಜನವರಿಯಲ್ಲಿ ಜರುಗಿದ ಕೋಮು ಗಲಭೆಗಳ ನಂತರ ಇದೇ ಮೊದಲ ಬಾರಿಗೆ ಶಿರಾ ಪಟ್ಟಣ ಗಲಭೆಗೀಡಾಗಿದೆ. ಇದು ದಿಢೀರನೆ ಉಧ್ವವಿಸಿದ್ದಲ್ಲ. ಅಲ್ಲಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಾಗವೊಂದರಲ್ಲಿ ವ್ಯಾಪಾರದ ಮಳಿಗೆಗಳನ್ನು ಕಟ್ಟಲಾಯಿತು. ಆದರೆ ಇದು ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ. ಈ ಚೆಡ್ಡಿಗಳು ಕೂಗುಮಾರಿಗಳಂತೆ ಕಿರುಚಾಡುತ್ತಾ ಅದು ಸ್ಮಶಾನಕ್ಕೆ ಸೇರಿದ ಜಾಗವೆಂತಲೂ ಅಲ್ಲಿ ಮಳಿಗೆಗಳನ್ನು ನಿರ್ಮಿಸಿರುವುದು ಕಾನೂನುಬಾಹಿರವೆಂತಲೂ ಪಟ್ಟಣದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ. ಆದರೆ ತಮಾಶೆಯೆಂದರೆ ಇಂದು ಆ ಜಾಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು. ಆದರೆ ಈ ಬಿಜೆಪಿ ಏತಕ್ಕೆ ಅದರಲ್ಲಿ ಮೂಗು ತೂರಿಸುತ್ತಿದೆ? ಮತ್ತೇನಕ್ಕೆ, ಕೋಮು ಗಲಭೆಗಳನ್ನು ಹುಟ್ಟು ಹಾಕಲಿಕ್ಕೆ. ಶಿರಾ ಪಟ್ಟಣದ ಪ್ರಗತಿಪರ ಹೋರಾಟಗಾರರ ಪ್ರಕಾರ ಇಂದಿನ ಇಲ್ಲಿನ ಗಲಭೆಗೂ, ಕಳೆದ ತಿಂಗಳು ಮುಜಫರ್ ನಗರದ ಗಲಭೆಗೂ ಸಾಮ್ಯತೆ ಇದೆ. ಹಿಂದೂ ಹುಡುಗಿಯೊಬ್ಬಳನ್ನು ಮುಸ್ಲಿಂ ಯುವಕರಿಬ್ಬರು ಚುಡಾಯಿಸಿದರೆಂಬ ಗುಲ್ಲೇ ಶಿರಾ ಗಲಭೆಯ ಹುಟ್ಟಿಗೆ ಕಾರಣ. ಇದನ್ನು ಮುಂದು ಮಾಡಿ ಇಡೀ ಪಟ್ಟಣದ ಶಾಂತಿ ಕದಡುವಂತೆ ಮಾಡಿತು ಈ ಸಂಘ ಪರಿಪಾರ. ಮುಸ್ಲಿಂ ಮಳಿಗೆಗಳನ್ನು ಈ ಬೆಂಕಿಗೆ ತುಪ್ಪದಂತೆ ಬಳಸಿಕೊಳ್ಳುತ್ತಿದೆ ಈ ಬಿಜೆಪಿ. ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಇಚ್ಛಾಶಕ್ತಿಯಿದ್ದರೆ ಇದನ್ನು ಸಣ್ಣದರಲ್ಲೇ ತುಂಡು ಮಾಡಬಹುದೆಂದು ಅಲ್ಲಿನ ಪ್ರಗತಿಪರ ಹೋರಾಟಗಾರರು ನೊಂದು ನುಡಿಯುತ್ತಾರೆ.deccanherald-sira-town-clash ಆದರೆ ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ಈ ಕಮ್ಯೂನಲ್ ಗಲಭೆಗಳ ಆಳಗಳ ಕುರಿತಾದ ಇರುವ ಸೆನ್ಸಿಟಿವಿಟಿಯ ಕೊರತೆ ಇಂದಿನ ಸಂದರ್ಭದಲ್ಲಿ ಗೋಚರವಾಗುತ್ತಿದೆ. ಮತ್ತೊಂದು ಆತಂಕದ ವಿಚಾರವೆಂದರೆ ಗಲಭೆಯ ಹಿನ್ನೆಲೆಯಲ್ಲಿ ಸಂಘ ಪರಿವಾರದಿಂದ ಬಂಧಿತರಾದ ಹುಡುಗರ ಸರಾಸರಿ ವಯಸ್ಸು ಸುಮಾರು 20 ರಿಂದ 23. ಈ ಲುಂಪೆನ್ ಗುಂಪೆಲ್ಲ ಓಬಿಸಿ ಗುಂಪಿಗೆ ಸೇರಿದವರು. ಪ್ರಗತಿಪರ ಹೋರಾಟಗಾರರು ಹೇಳಿದ್ದು ಈ ಹುಡುಗರು ಮೋದಿಯ ಮಂತ್ರವನ್ನು ಕತ್ತಿಯಂತೆ ಝಳಪಿಸುತ್ತಿದ್ದಾರೆ.

ನೆನಪಿರಲಿ ಗುಜರಾತ್ ಹತ್ಯಾಕಾಂಡದಲ್ಲೂ ಸಂಘ ಪರಿವಾರದ ಪರವಾಗಿ ಹೋರಾಡಿದವರು ಓಬಿಸಿ ಮತ್ತು ದಲಿತ ಹುಡುಗರು. ಇಡೀ ಕೋಮು ಗಲಭೆಗಳ ರಕ್ತಸಿಕ್ತ ಹಿತಿಹಾಸದುದ್ದಕ್ಕೂ ಇದು ನಿಜ. ಕಳೆದ ಎಂಬತ್ತು ವರ್ಷಗಳಲ್ಲಿ ಮೇಲ್ಜಾತಿ ಆರೆಸಸ್‌ನ ರಾಜಕೀಯ ಆಕಾಂಕ್ಷೆಗೆ ಬಾಣಗಳಾಗಿ ಬಳಕೆಗೊಂಡು ಗೋಣು ಮರಿದುಕೊಂಡು ಹಳ್ಳಕ್ಕೆ ಬೀಳುತ್ತಿರುವುವರು ಓಬಿಸಿ ಮತ್ತು ದಲಿತರು.

2002 ರಲ್ಲಿ ಜರುಗಿದ ಗುಜರಾತ್ ಹತ್ಯಾಕಾಂಡವನ್ನು ಒಳಗೊಂಡು ಇಂಡಿಯಾದಲ್ಲಿ ಕಳೆದ ಎಂಬತ್ತು ವರ್ಷಗಳಲ್ಲಿ ಘಟಿಸಿದ ನೂರಾರು ಕೋಮು ಗಲಭೆಗಳಿಗೂ ಒಂದಕ್ಕೊಂದು ಅಪಾರ ಸಾಮ್ಯತೆಗಳಿವೆ. ಈ ಎಲ್ಲ ಗಲಭೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶವೆಂದರೆ ಸಂಘ ಪರಿವಾರದ ಪಾತ್ರ. ಸಂಘ ಪರಿವಾರದ ಎಲ್ಲ ಅಂಗ ಪಕ್ಷಗಳು ಒಂದಕ್ಕೊಂದು ಪೂರಕವಾಗಿ, ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತ ಹತ್ಯಾಕಾಂಡಗಳ ಷಡ್ಯಂತ್ರಗಳನ್ನು ರೂಪಿಸುತ್ತವೆ. ಈಗ ಹೇಳಿ, ಇಂದು ಈ ಮತೀಯವಾದಿಗಳ ಗುಂಪಿನ ನಾಯಕನಾದ ನರೇಂದ್ರ ಮೋದಿಯ ನೇತೃತ್ವದಲ್ಲಿ ಗುಜರಾತ್‌ನಲ್ಲಿ ಜರುಗಿದ ಹತ್ಯಾಕಾಂಡಗಳನ್ನು ಒಂದು ಘಟನೆಯಷ್ಟೇ ಅದನ್ನು ಮರೆತುಬಿಡಿ ಎಂದು ಮಾನವಿಲ್ಲದೆ ಬೊಗಳುತ್ತಿರುವ ಮಾಧ್ಯಮಗಳು ಮತ್ತು ಮಧ್ಯಮವರ್ಗಗಳಿಗೆ ಆತ್ಮಸಾಕ್ಷಿಯೆಂಬುದಿದೆಯೇ? ಇವರೆಂದಾರೂ ಈ ಕೋಮು ಗಲಭೆಗಳಿಗೆ ತುತ್ತಾಗಿದ್ದವರೇ? ಓಬಿಸಿ ಮತ್ತು ದಲಿತರನ್ನು ಬಳಸಿಕೊಂಡು ಈ ಬ್ರಾಹ್ಮಣ್ಯದ ಆರೆಸಸ್ ಅಧಿಕಾರದ ಹತ್ತಿರಕ್ಕೆ ನಿಧಾನವಾಗಿ ತೆವಳುತ್ತಿದೆ. ಮೋದಿ ಕಂಡ ಕಂಡಲ್ಲಿ ಮತಾಂಧತೆಯ ಬೆಂಕಿಯುಗುಳುತ್ತಿದ್ದಾನೆ. ಕಳೆದ ದಶಕದಲ್ಲಿ ಹೆಚ್ಚೂ ಕಡಿಮೆ ತಣ್ಣಗಿದ್ದ ಕೋಮುವಾದ ಇಂದು ದೇಶದ ಅನೇಕ ಭಾಗಗಳಲ್ಲಿ ಪುನರಾವರ್ತನೆಯಾಗುತ್ತಿದೆ. ಇಂದು ಮೋದಿಯ ಬೆಂಬಲಿಗರು ಸಂವಿಧಾನವನ್ನೇ ತಿರಸ್ಕರಿಸುತ್ತಿದ್ದಾರೆ. ಮಧ್ಯಮ ವರ್ಗಕ್ಕೆ ಇಂದು ಸರ್ವಾಧಿಕಾರ ಅಪ್ಯಾಯಮಾನವಾಗಿ ಗೋಚರಿಸುತ್ತಿದೆ. ಫ್ಯಾಸಿಸ್ಟ್ ನಾಯಕ ಹಿಂದೂ ಧರ್ಮದ ಪುನರುದ್ಧಾರಕನಂತೆ ಕಂಗೊಳಿಸುತ್ತಿದ್ದಾನೆ.

12 thoughts on “ಮರೆಯಲಾಗದ ಕೋಮು ಹತ್ಯಾಕಾಂಡಗಳ ಗಾಯಗಳು – ಮರೆಯೆಂದರೂ ಮರೆಯಲಿ ಹ್ಯಾಂಗ?

  1. Gurumurthy CM

    ಭಾರತದಲ್ಲಿ ನಡೆದ ನಡೆಯುವ ಎಲ್ಲಾ ಕೋಮು ಗಲಭೆಗೂ ಸಂಘ ಪರಿವಾರವೇ ಕಾರಣ ಎಂದು ಅದೆಷ್ಟು ಸುಲಭವಾಗಿ ತೀರ್ಪಿತ್ತು ಬಿಟ್ಟಿರಿ!!!ಮುಸಲ್ಮಾನರೆಲ್ಲಾ ಅಮಾಯಕರು ಮುಗ್ದರು ಹಿಂದೂಗಳೆಲ್ಲಾ ರಾಕ್ಷಸರು… ಹಿಂದೂಗಳಾದ ನಮ್ಮಲ್ಲಿ ರಾಕ್ಷಸೀ ಪ್ರವೃತ್ತಿ ರಕ್ತದಲ್ಲೇ ಬಂದಿದೆ ಹಾಗಾಗಿ ಇಲ್ಲಿ ಶಾಂತಿ ನೆಲೆಸಬೇಕಾದರೆ ಹಿಂದೂಗಳ ಸರ್ವನಾಶವಾಗಬೇಕು,ಇಡೀ ಭಾರತ ಇಸ್ಲಾಂ ರಾಷ್ಟವಾಗಬೇಕು.ಈ ಆಶಯ ನಿಮ್ಮ ಲೇಖನದಲ್ಲಿ ಎದ್ದು ಕಾಣುತ್ತಿದೆ ಶಾಂತಿ ಸಹಿಷ್ಣತೆಗೆ ಕಾರಣವಾಗಿರುವ ಇಸ್ಲ್ಲಾಂಗೆ ನಾವೆಲ್ಲಾ ಮತಾಂತ ವಾಗಬೇಕಿದೆ ಅದರ ಪೌರೋಹಿತ್ಯವನ್ನು ತಾವೇ ವಹಿಸಿ.ಆ ಮೂಲಕ ಭಾರತದಲ್ಲಿ ಶಾಂತಿ ನೆಲೆಸಲು ಶ್ರಮಿಸಿದ ಹೆಸರೂ ನಿಮ್ಮದಾಗುತ್ತದೆ.ಹಿಂದೂವಾಗಿ ಹುಟ್ಟಿದ್ದೇ ಅಪರಾಧವಾಗಿದೆ.

    Reply
  2. Umesh

    ಶ್ರೀಪಾದಭಟ್ಟರೆ,
    ಯಾಕೆ ತಾವು ತಮ್ಮದೇ ಆದ Marxists ಪಕ್ಷದವರಿಂದ ಪಶ್ಚಿಮ ಬಂಗಾಳದಲ್ಲಿ ನಡೆದ ‘ನಂದಿಗ್ರಾಮದ ‘ ಬಡ ರೈತರ ಹತ್ಯಾಕಾಂಡದ ಬಗ್ಗೆ ಸೊಲ್ಲೆತ್ತುವುದಿಲ್ಲ ? ನಂದಿಗ್ರಾಮದಲ್ಲಿ ಕಮ್ಯುನಿಸ್ಟ್ರು ನಡೆಸಿದ ಮಾರಣಹೋಮದ ಬಗ್ಗೆ ಇರುವ ಡಾಕ್ಯುಮೆಂಟರಿ ತೆಗೆದು ನೋಡಿ. ಕಾಶ್ಮೀರದಲ್ಲಿ ನಡೆದ ಹಿಂದೂ ಪಂಡಿತರ ಮಾರಣಹೋಮದ ಬಗ್ಗೆ ಎಲ್ಲಿ ನಿಮ್ಮ ಲೇಖನ? ಯಾವುದೇ ಗಲಬೆಗಳು ನಡೆದರೂ ಅದು ಖಂಡನೀಯ . ಆದರೆ ಲೇಖನ ನಿಷ್ಪಕ್ಷಪಾತವಾಗಿರಬೇಕು.

    Reply
  3. B.Sripad Bhat

    ” In recent times shashanka the enemy and oppressor of budddhism,cut down the bodhi tree,destroyed its roots down to the water and burned what remained.Budhda’s image removed and replaced by shiva” – Huen Tsang

    ” Sashanka the Shaivite brahmin king of Bengal murdered the last buddhist emperor ‘Rajyawardhana’ elder brother of ‘Harshavardhana’ in 605 AD and then marched on to the Bodh Gaya where he destroyed the bodhi tree under which buddha had attaine enlightenment.finally he slaughtered all buddhist monks in the area around Kushinagar”

    “Even after the Islamic invasions of india, hindu bigotry and hatred for Buddhists was not subdued.A Tibetan pilgrim who visited bihar three decades after the invasion of Bakhtiaruddin Khilji in the 12th century the biggest library at nalanda was destroyed by hindu mendicants who took advantage of the chaos produced by invasion” – Sharmasvamin a tibetian scholar

    ” Suddhavan ( shankarachaya’s follower) issued orders to put to death all the bhuddists from rameswaram to himalayas. Hindus performed a yagna, a fire sacrifice and threw embers and ashes from sacrifice into buddhist temples.one storeyed bulding of nalanda university consumed.numerous destroyed Buddhist shrines were converted into Hindu temples after their destruction. The seat of Buddha’s enlightenment was in the possession of Hindu Mahant till 1952 ” – ahir

    “Gupta dynasty was a period of somewhat aggressive hinduism and nationalism.We thus find racial antagonism at work.Indo – aryan aristocrat was proud of his race and looked down upon these barbarians and mamachas.The Gupta’s period was a period of hindu imperialism in india.” – jawahar nehru in ” discovery of india

    Ambedkar has enumerated the evils of Hinduism in the following manner:
    1. It has deprived moral life of freedom.
    2. It has only emphasized conformity to commands.
    3. The laws are unjust because they are not the same for one class as of another. Besides, the code is treated as final.
    According to Ambedkar, “what is called religion by Hindus is nothing but a multitude of commands and prohibitions.”
     Ambedkar “Buddha and the Future of his Religion” published in 1950
    Not very long ago there used to be boards on club doors and other social resorts maintained by Europeans in India, which said “Dogs and Indians” are not allowed. The temples of Hindus carry similar boards today, the only difference is that the boards on the Hindu temples practically say : “All Hindus and all animals including gods are admitted, only Untouchables are not admitted”. The situation in both cases is of parity. But Hindus never begged for admission in those places form which the Europeans in their arrogance had excluded them. Why should an Untouchable beg for admission in a place from which he has been excluded by the the arrogance of the Hindus? This is the reason of the Depressed Class man who is interested in material welfare. He is prepared to say the Hindus, “to open or not to open your temples is a question for you to consider and not for me to agitate. If you think, it is bad manners not to respect the sacredness of human personality, open your temple and be a gentleman. If you rather be a Hindu than a gentleman, then shut the doors and damn yourself for I don’t care to come.”
     Ambedkar, Appendix I and II, Annihilation of Caste. Vol-I, Dr. Ambedkar Writing and Speeches

    The Hindus claim to be a very tolerant people. In my opinion this is a mistake. On many occasions they can be intolerant and if on some occasions they are tolerant that is because they are too weak to oppose or too indifferent to oppose. This indifference of the Hindus has become so much a part of their nature that a Hindu will quite meekly tolerate an insult as well as a wrong. You see amongst them, to use the words of Morris, ” The great reading down the little, the strong beating down the weak, cruel men fearing not, kind men daring not and wise men caring not.” With the Hindu Gods all forbearing, it is not difficult to imagine the pitiable condition of the wronged and the oppressed among the Hindus. Indifferentism is the worst kind of disease that can infect a people. Why is the Hindu so indifferent? In my opinion this indifferentism is the result of Caste System which has made Sanghatan and co-operation even for a good cause impossible.
     Ambedkar, SECTION XI Annihilation of Caste. Vol-I, Dr. Babasaheb Ambedkar Writing and Speeches

    ಕಾಮಾಲೆ ಕಣ್ಣಿನಿಂದ ಧರ್ಮಾಂಧರಾದವರಿಗೆ ಪದೇ ಪದೇ ಉತ್ತರ ಹೇಳುವುದೇ ಒಂದು ವೇಸ್ಟ್. ಆದರೆ ಪ್ರತಿಕ್ರಿಯೆಯಾಗಿ ಮೇಲಿನ ಚಿಂತಕರ ಕೆಲವು ನುಡಿಗಳು ಈ ಜನಕ್ಕೆ ಅರ್ಥವಾದರೆ…..

    Reply
  4. Umesh

    ಶ್ರೀಪಾದಭಟ್ಟರೆ,
    ತಾವು ಚರಿತ್ರೆಯ ಪಾಠಗಳನ್ನು ಸರಿಯಾಗಿ ಓದಿಲ್ಲವೆಂದು ತೋರುತ್ತದೆ.
    ನೊಬೆಲ್ ವಿಜೇತಕಾರ ಅಮರ್ತ್ಯ ಸೇನ್ ಹೇಳಿರುವುದು –

    Amartya Sen (gave the keynote at the Indian Science Congress at Chennai and the topic was Nalanda.)
    “Nalanda was violently destroyed in an Afghan attack, led by the ruthless conqueror, Bakhtiyar Khilji, Nalanda university, an internationally renowned centre of higher education in India, which was established in the early fifth century, was ending its continuous existence of more than seven hundred years…”

    ಜಗತ್ತಿನ ಶ್ರೇಷ್ಠ ಚರಿತ್ರಕಾರ ವಿಲ್ ದುರಾಂಟ್ ಬರೆದಿರುವುದು (our oriental heritage: the story of civilization, Volume I ):

    “The Mohammedans destroyed nearly all the monasteries, Buddhist or Brahman, in northern India. Nalanda was burned to the ground in 1197, and all its monks were slaughtered. we can never estimate the abundant life of ancient India from what these fanatics spared.”

    ತಮ್ಮ ತಪ್ಪು ಮಾರ್ಕ್ಸ್ವಾದಿ ದೃಷ್ಟಿಕೋನದಿಂದ ಹೊರಬಂದು ಚರಿತ್ರೆಯನ್ನು ಆಬ್ಜೆಕ್ಟಿವ್ ಆಗಿ ಅರಿಯಿರಿ.

    Reply
  5. Srinivasamurthy

    ನೀವು ಬರೆದಿರುವ ಲೇಖನದ ಶೀರ್ಶಿಕೆ `ಮರೆಯಲಾಗದ ಕೋಮು ಹತ್ಯಾಕಾಂಡಗಳ ಗಾಯಗಳು’ ಹಾ! ತಾನೆ ಇಲ್ಲಿ ಕೇವಲ ಿಸ್ಲಾಮಿಗಳ ಮೇಲೆ ಹಿಂದೂನವರು ಮಾಡಿದ ತಪ್ಪುಗಳನ್ನು ಮಾತ್ರ ುಲ್ಲೇಕಿಸಿದ್ದೀರಿ. ಇದು ನಿಮ್ಮ ಪಕ್ಶಪಾತವಲ್ಲದೆ ಇನ್ನೇನು? ಕಾಮಾಲೆ ಕಣ್ಣಿನಿಂದ ಧರ್ಮಾಂಧರಾದವರಿಗೆ ಪದೇ ಪದೇ ಉತ್ತರ ಹೇಳುವುದೇ ಒಂದು ವೇಸ್ಟ್. ಅಂತ ಹೇಳಿದಿರಿ. ಒಂದೇ ಧರ್ಮದವರ ಕುರಿತು ಹೀಗೆ ಯಾಕೆ ಬರೆದೀರಿ ಸ್ವಾಮಿ.

    Reply
  6. Mahesh

    ಭಾಗಲ್ಪುರ ಗಲಭೆಯನ್ನು ಕಾಂಗ್ರೆಸ್ಸಿನವರೇ ಪ್ರಚೋದಿಸಿದರು ಎಂದ ಆಗಿನ ಬಿಹಾರದ ಆಗಿನ ಮುಖ್ಯಮಂತ್ತಿಗಳಾದ ಕಾಂಗ್ರೆಸ್ಸಿನವರೇ ಆದ ಸತ್ಯೇಂದ್ರ ನರೇನ್ ಸಿನ್ಹಾರವರು ತಮ್ಮ ಆತ್ಮಕಥೆಯಲ್ಲಿ ಹೇಳಿದ್ದಾರಲ್ಲ. ಪ್ರಭುತ್ವದ ಸಹಾಯವಿಲ್ಲದಿದ್ದರೆ ಭಾಗಲ್ಪುರ ಗಲಭೆ ಮಾಡಿದವರಲ್ಲಿ ಬೆರಳೆಣಿಕೆಯಷ್ಟು ಜನರಿಗೂ ಶಿಕ್ಷೆಯಾಗದೇ ಇರುವುದು ಸಾಧ್ಯವೇ ?

    ಶ್ರೀಪಾದ ಭಟ್ಟರವರೇ, ನಾನು ಟೆಕ್ಟ್ ಬುಕ್ ಗಳಲ್ಲಿ ಓದಿರುವ ಪ್ರಕಾರ ಹ್ಯೂಯೆನ್ ತ್ಸಾಂಗ್ ನ ಕಾಲ ಕ್ರಿ.ಶ. 630 ರ ಸುಮಾರಿಗೆ. ಶಂಕರಾಚಾರ್ಯರು ಬದುಕಿದ ಕಾಲ ಕ್ರಿ.ಶ. 788 ರಿಂದ 820. ಹ್ಯುಯೆನ್ ತ್ಸಾಂಗ್ ಶಂಕರಾಚಾರ್ಯರ ಬಗ್ಗೆ ಹೇಗೆ ಹೇಳಲು ಸಾಧ್ಯ ?

    Reply
  7. B.Sripad Bhat

    Mr. Mahesh, first try to read with patience and with open mind. I had written about SHASHANKA not SHANKARACHARYA.SHASHANKA period is approximately between 590 AD and 625 AD. and Huen Tsang came to india in the first half of 7th centuary.( around 630 to 640 AD) where did i wriitten about Shankaracharya ??? are you really intrested in debate or only in slandering ???

    Reply
  8. Mahesh

    ಶ್ರೀಪಾದ ಭಟ್ಟರವರೇ, ಶಶಾಂಕ ಎಂದು ತಾವು ಬರೆದಿದ್ದನ್ನು ಶಂಕರ ಎಂದು ಭಾವಿಸಿ ನನ್ನ ಸಂದೇಹ ವ್ಯಕ್ತಪಡಿಸಿದೆ. ದಯವಿಟ್ಟು ನನ್ನ ಕಡೆಯಿಂದಾದ ಈ ತಪ್ಪನ್ನು ಕ್ಷಮಿಸಿ.
    ನಾನು ತಪ್ಪು ಮಾಹಿತಿಯನ್ನು ಪ್ರಚಾರ ಮಾಡಲೇ ಪ್ರಶ್ನೆ ಕೇಳಿರಬಹುದು, ಕುತ್ಸಿತ ಭಾವನೆಯಿಂದ ಕೇಳಿರಬಹುದು, ನಿಜವಾಗಿ ಚರ್ಚಿಸಲೆಂದೇ ಕೇಳಿರಬಹುದು, ಅಥವಾ ಇನ್ಯಾವುದೋ ಭಾವನೆಯಿಂದ ಕೇಳಿರಬಹುದು, ಅವುಗಳು ಏನೇ ಇದ್ದರು ಅವುಗಳಿಗೆಲ್ಲ ನಿಮ್ಮ ಉತ್ತರ ಒಂದೇ ಆಗಿರುತ್ತದೆ ಮತ್ತು ವಸ್ತುನಿಷ್ಛವಾಗಿರುತ್ತದೆ ಎಂದು ಭಾವಿಸುತ್ತೇನೆ.

    ಭಾಗಲ್ಪುರ ಗಲಭೆಯಲ್ಲಿ ದ್ವಿವೇದಿಯವರ ವರ್ಗಾವಣೆಯನ್ನು ಆಗಿನ ಪ್ರಧಾನಮಂತ್ರಿಗಳಾಗಿದ್ದ ರಾಜೀವ್ ಗಾಂಧಿಯವರೇ ತಡೆದರು ಎಂದು ಬಿಹಾರದ ಆಗಿನ ಕಾಂಗ್ರೆಸ್ ಮುಖ್ಯಮಂತ್ರಿಗಳಾಗಿದ್ದ ಸತ್ಯೇಂದ್ರ ನರೇನ್ ಸಿನ್ಹಾರವರು ತಿಳಿಸಿದ್ದಾರೆ. ಕಾಂಗ್ರೆಸ್ಸಿನವರೇ ಕೆಲವರು ಉರಿಯುವ ಬೆಂಕಿಗೆ ತುಪ್ಪ ಸುರಿದು ಗಲಭೆಯನ್ನು ಪ್ರಚೋದಿಸಿದರು ಎಂದು ಕೆಲವರ ಹೆಸರನ್ನೂ ಸಹ ತಿಳಿಸಿದ್ದಾರೆ. http://expressindia.indianexpress.com/news/fullstory.php?newsid=51405

    Reply
  9. ಅನಿತಾ

    ೧ ಕೇರಳದ ಮಾರಾಡ್ ಹತ್ಯಾಕಾಂಡ, ದೆಹಲಿ ಸಿಖ್ ಹತ್ಯಾಕಾಂಡ, ಪ. ಬಂಗಾಳದ ನಂದಿ ಗ್ರಾಮದ ಬಡ ರೈತರ ಕಗ್ಗೊಲೆ, ಕಾಶ್ಮೀರ ಪಂಡಿತರ ನೆತ್ತರೋಕುಳಿ, ಕೇರಳದ ಕಮ್ಯುನಿಸ್ಟ್ ಗ್ರಾಮಗಳಲ್ಲಿರುವ ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಿ ಮಲಗಿಸಿದ ರೀತಿ ಇವೆಲ್ಲವೂ ಮರೆಯಬಹುದಾದ ಹತ್ಯಾಕಾನ್ಡ ಗಳೇ?
    ೨’ ‘ಕಾಮಾಲೆ ಕಣ್ಣಿನಿಂದ ಧರ್ಮಾಂಧರಾದವರಿಗೆ ಪದೇ ಪದೇ ಉತ್ತರ ಹೇಳುವುದೇ ಒಂದು ವೇಸ್ಟ್. ಆದರೆ ಪ್ರತಿಕ್ರಿಯೆಯಾಗಿ ಮೇಲಿನ ಚಿಂತಕರ ಕೆಲವು ನುಡಿಗಳು ಈ ಜನಕ್ಕೆ ಅರ್ಥವಾದರೆ…..”- ಹೀಗೆ ಬರೆಯುವ ಲೇಖಕರೆ ಕಾಮಾಲೆ ಕಣ್ಣಿನಿಂದ ನೋಡಿ ಏಕಪಕ್ಷೀಯವಾಗಿ ಬರೆಯಬಹುದೆ?

    Reply

Leave a Reply to Kodava Cancel reply

Your email address will not be published. Required fields are marked *