ಪ್ರಶ್ನೆಗಳಿರುವುದು ಡಿ. ವೀರೇಂದ್ರ ಹೆಗ್ಗಡೆಗೆ!!

– ಸುಧಾಂಶು ಕಾರ್ಕಳ

ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಧರ್ಮಸ್ಥಳ ಪುಣ್ಯಕ್ಷೇತ್ರ. ವರ್ಷಕ್ಕೊಮ್ಮೆ ಮಕ್ಕಳು-ಮರಿ ಕಟ್ಟಿಕೊಂಡು, ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಸುವಾಗ ಹಿಂಸೆ ಅನುಭವಿಸಿಯಾದರೂ, ಅಲ್ಲಿಗೆ ಹೋಗದಿದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಅಷ್ಟೇ ಏಕೆ, ಈ ಭಾಗದ ಸಾವಿರಾರು ಮಂದಿ ಬಾಲ್ಯದಲ್ಲಿ ಕೂದಲು ಕೊಡುವ ಶಾಸ್ತ್ರ ಮಾಡಿಸಿಕೊಂಡಿದ್ದು ಇಲ್ಲಿಯೇ. ಬಡ ಬಗ್ಗರ ಮನೆಗಳಲ್ಲಿ ಸರಳ ವಿವಾಹದ ಮಾತು ಬಂದರೆ, dharmasthala-veernedra-heggadeಅವರಿಗೆ ನೆನಪಾಗುವುದು ಧರ್ಮಸ್ಥಳ.

ಪ್ರತಿ ಭಾನುವಾರ ರಾತ್ರಿ ಈ ಭಾಗಗಳ ಕಡೆಯಿಂದ ಧರ್ಮಸ್ಥಳಕ್ಕೆ ಹೊರಡುವ ಎಲ್ಲಾ ಬಸ್ ಗಳು ಭರ್ತಿಯಾಗುವುದಕ್ಕೆ ಇದೇ ‘ಭಕ್ತಿ’ ಕಾರಣ. ಊರಲ್ಲಿ ಯಾರದರು ಒಬ್ಬರು ಧರ್ಮಸ್ಥಳಕ್ಕೆ ಹೋಗುತ್ತಾರೆಂದರೆ ಮನೆಗೊಬ್ಬರು ಮಂಜುನಾಥನಿಗೆ ತಮ್ಮದೂ ಕಾಣಿಕೆ ಇರಲಿ ಎಂದು ತಮ್ಮ ಕೈಲಾದಷ್ಟು ಹಣ ಕೊಟ್ಟು ಕಳುಹಿಸುವುದುಂಟು. ವೀರೇಂದ್ರ ಹೆಗ್ಗಡೆಯವರು ಜನೋಪಕಾರಿ ಕೆಲಸ ಮಾಡಿ ಸಜ್ಜನ, ಸಂಭಾವಿತ, ಮಾತನಾಡುವ ಮಂಜುನಾಥ ಎಂಬೆಲ್ಲಾ ಬಿರುದುಗಳನ್ನು ಗಳಿಸುವುದು ಸಾಧ್ಯವಾಗಿದ್ದು ಇಂತಹ ಲಕ್ಷಾಂತರ ಭಕ್ತರ ಸಾವಿರಾರು ಕೋಟಿಗಳ ದಾನದಿಂದ.

ಇದೇ ಭಾನುವಾರ (ಅ.13) ರಂದು ನೂರಾರು ಮಂದಿ ವಿವಿಧ ವಾಹನಗಳಲ್ಲಿ ಧರ್ಮಸ್ಥಳಕ್ಕೆ ಧಾವಿಸಿ ಹೆಗ್ಗಡೆಯವರ ವಿರುದ್ಧ ಪ್ರತಿಭಟನೆ ನಡೆಸಿದರು ಎಂಬ ಸುದ್ದಿ ಟಿವಿಯಲ್ಲಿ ನೋಡಿದಾಗ ಇಂತಹದೊಂದು ಸನ್ನಿವೇಶ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಇದೇ ಮೊದಲಿರಬೇಕಲ್ಲವೇ ಎನಿಸಿತು. ಖಾವಂದರಿಗೆ ಬಿಸಿ ಮುಟ್ಟಿದೆ. ಮಾತನಾಡುವ ಮಂಜುನಾಥನ ಬಗ್ಗೆ ನೇರಾ ನೇರಾ ಮಾತನಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಾಗಿದ್ದು ಆಶಾದಾಯಕ ಬೆಳವಣಿಗೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಒಂದು ವರ್ಷದಿಂದ ಸತತವಾಗಿ ಅಬ್ಬರವಿಲ್ಲದೆ ಪ್ರತಿಭಟನೆ ನಡೆಯುತ್ತಲೇ ಇತ್ತು.JusticeForSowjanya ಫೇಸ್‌ಬುಕ್ ನಲ್ಲಿ ಈ ಪ್ರತಿಭಟನೆಗೆ ಅನೇಕರು ಬೆಂಬಲ ಸೂಚಿಸುತ್ತಲೇ ಬಂದಿದ್ದರು. ಬೆಳ್ತಂಗಡಿ, ಮಂಗಳೂರು ಭಾಗಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರಕರಣ ಆಗಿ ಒಂದು ವರ್ಷದ ನಂತರ ಟಿ.ವಿ9 ಸ್ಟುಡಿಯೋದಲ್ಲಿ ಸೌಜನ್ಯ ಪೋಷಕರು ಏನನ್ನು ಇದುವರೆಗೆ ಮುಚ್ಚಿಡಲಾಗಿತ್ತೋ..ಅದನ್ನು ಹೊರಹಾಕಿದರು.

ಆ ಮೂಲಕ ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಎರಡು ಬಾರಿ ಪ್ರಕರಣದ ತನಿಖೆಯಾದರೂ, ನಿಜ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿಲ್ಲ. ಮಾನಸಿಕ ಅಸ್ವಸ್ಥನೊಬ್ಬನ ತಲೆಗೆ ಈ ಪ್ರಕರಣವನ್ನು ಕಟ್ಟಿ ತನಿಖೆಯ ಶಾಸ್ತ್ರವನ್ನು ಮುಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ ಎನ್ನುವುದು ಆರೋಪ. ಇನ್ನೂ ಗಂಭೀರವಾದ ವಿಚಾರವೆಂದರೆ ಇಂತಹ ಅದೆಷ್ಟೊ ಪ್ರಕರಣಗಳು ಧರ್ಮಸ್ಥಳ ಸುತ್ತ-ಮುತ್ತ ಆಗಿಹೋಗಿವೆ ಎಂಬ ಸುದ್ದಿ. ಸೌಜನ್ಯಳ ತಾಯಿ ಟಿ.ವಿ ಸ್ಟುಡಿಯೋದಲ್ಲಿ ಕೇಳಿದರು.. ನೇತ್ರಾವತಿ ನದಿಯಲ್ಲಿ ಆಗಾಗ ತೇಲಿ ಬರುತ್ತಿದ್ದ ಅನಾಥ ಹೆಣಗಳು ಸೌಜನ್ಯ ಪ್ರಕರಣದ ನಂತರ ನಿಂತಿದ್ದಾದರೂ ಹೇಗೆ?

ಹಾಗಾದರೆ ಈ ಮೊದಲು ನೇತ್ರಾವತಿ ನದಿಯಲ್ಲಿ ಹೇರಳವಾಗಿ ಹೆಣಗಳು ತೇಲಿಬರುತ್ತಿದ್ದವೆ? ಇದುವರೆಗೆ ಯಾಕೆ ಸುದ್ದಿಯಾಗಲಿಲ್ಲ? ಆಯುರ್ವೇದ, ಯೋಗ, ಸ್ವ ಉದ್ಯೋಗ ತರಬೇತಿ, ಪ್ರಕೃತಿ ಚಿಕಿತ್ಸೆ, ಶಿಕ್ಷಣ ಸಂಸ್ಥೆಗಳು, ಪಾಳುಬಿದ್ದ ದೇವಸ್ಥಾನಗಳ ಪುನರುತ್ಥಾನ – ಹೀಗೆ ನಾನಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ದೊಡ್ಡ ಸಾಮ್ರಾಜ್ಯದ ಮೇಲೆ ಈಗ ಅನೇಕ ಪ್ರಶ್ನೆಗಳಿವೆ.

ಸೌಜನ್ಯ ಹತ್ಯೆ ಅಷ್ಟೇ ಅಲ್ಲ..ಇದುವರೆಗೆ ಆಗಿ ಹೋಗಿರುವ ನಾನಾ ಪ್ರಕರಣಗಳ ಬಗ್ಗೆಯೂ ತಕ್ಕ ತನಿಖೆ ನಡೆಯಬೇಕು. sowjanya-rape-murderಪಾಪಕ್ಷೇತ್ರ, ಪುಣ್ಯಕ್ಷೇತ್ರ ಎಂದು ಯಾವ ಸ್ಥಳವೂ ಇರುವುದಿಲ್ಲ. ಆದರೆ ಅಲ್ಲಿ ನೆಲೆಸಿರುವವರು ಆ ಸ್ಥಳಕ್ಕೆ ಒಂದು ಘನತೆ ತರಲು ಸಾಧ್ಯ. ತಮ್ಮ ಮಗಳ ಹತ್ಯೆಗೆ ಸೂಕ್ತ ತನಿಖೆ ಕೋರಲು ಪ್ರತಿಭಟನೆ ನಡೆಸುವುದನ್ನೂ ಬೇಡ ಎಂದು ಫರ್ಮಾನು ಹೊರಡಿಸುವವರಿಂದ ಯಾವ ಕ್ಷೇತ್ರಕ್ಕಾಗಲಿ ಯಾವ ಘನತೆ ದಕ್ಕೀತು? ಧರ್ಮಸ್ಥಳಕ್ಕೆ ಭೇಟಿ ನೀಡುವ ಎಲ್ಲರೂ ಈ ಪ್ರಶ್ನೆಗಳನ್ನು ಕೇಳಬೇಕಿದೆ. ಅವರ ದೇಣಿಗೆ ಹಣ ವಿನಿಯೋಗ ಆಗುತ್ತಿರುವುದು ಹೇಗೆ ಎನ್ನುವುದನನ್ನು ಕೇಳಲೇಬೇಕಲ್ಲವೆ.

ಸರಕಾರ ಸೂಕ್ತ ತನಿಖೆ ಆದೇಶಿಸುವ ಮೂಲಕ ಮುಚ್ಚಿ ಹೋಗಿರಬಹುದಾದ ಸತ್ಯಗಳನ್ನು ಹೊರತರಲೇಬೇಕು. ಅವ್ಯವಹಾರ, ಅನಾಚಾರಗಳು ಬಯಲಾದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ದೇವಸ್ಥಾನವನ್ನು ತನ್ನ ವಶಕ್ಕೆ ಅಂದರೆ ಜನತೆಯ ಆಡಳಿತಕ್ಕೆ ತೆಗೆದುಕೊಳ್ಳಬೇಕು.

7 thoughts on “ಪ್ರಶ್ನೆಗಳಿರುವುದು ಡಿ. ವೀರೇಂದ್ರ ಹೆಗ್ಗಡೆಗೆ!!

  1. Ananda Prasad

    ನಮ್ಮ ದೇಶದಲ್ಲಿ ಧಾರ್ಮಿಕ ಎಂದು ಹೇಳಲ್ಪಡುವವರ ಕೈಗಳು ತುಂಬಾ ಉದ್ದವಾಗಿರುತ್ತವೆ ಎಲ್ಲಾ ರಾಜಕೀಯ ಪಕ್ಷಗಳ ಮೇಲೆಯೂ ಅವರ ಹಿಡಿತವಿರುತ್ತದೆ. ಹೀಗಾಗಿ ಧಾರ್ಮಿಕರು ನಡೆಸಿದ ಅತ್ಯಾಚಾರ, ಅನಾಚಾರಗಳು ತನಿಖೆಗೆ ಒಳಪಡುವುದಿಲ್ಲ. ಅಂಥ ಪ್ರಕರಣಗಳಲ್ಲಿ ತನಿಖೆಯ ನಾಟಕ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತದೆ. ಭಾರತದಲ್ಲಿ ಲಾಗಾಯ್ತಿನಿಂದಲೂ ಧಾರ್ಮಿಕತೆಯ ವೇಷ ಹಾಕಿ ನಡೆಸುವ ಅನಾಚಾರಗಳಿಗೆ ಸಂವಿಧಾನದಲ್ಲಿ ತನಿಖೆಯಿಂದ ವಿನಾಯ್ತಿ ಇದೆಯೇನೋ ಎಂಬ ರೀತಿಯೇ ತನಿಖೆ ನಡೆಯುತ್ತದೆ. ಹೀಗಾಗದೇ ಇರಬೇಕಾದರೆ ಪ್ರಚಂಡ ಜನಾಭಿಪ್ರಾಯ ರೂಪುಗೊಳ್ಳಬೇಕು. ಇಲ್ಲದೆ ಹೋದರೆ ಸರ್ಕಾರಗಳು ಬಗ್ಗುವುದಿಲ್ಲ. ಉದಾಹರಣೆಗೆ ಆಸಾರಂ ಬಾಪುವನ್ನು ಹಲವಾರು ದಿನಗಳವರೆಗೆ ಬಂಧಿಸಲು ಸಾಧ್ಯವಾಗಲಿಲ್ಲ. ಹಿಂದಿ ಭಾಷೆಯ ಎಲ್ಲ ವಾಹಿನಿಗಳೂ ಈ ಬಗ್ಗೆ ನಿರಂತರ ಜನಾಭಿಪ್ರಾಯ ರೂಪಿಸಿದ ನಂತರವಷ್ಟೇ ಆಸಾರಂ ಬಾಪುವಿನ ಬಂಧನವಾಗಿ ಈಗ ಆತನ ವಿರುದ್ಧ ನಾನಾ ಪ್ರಕರಣಗಳು ಹೊರಗೆ ಬರುತ್ತಿವೆ. ಸೌಜನ್ಯ ಪ್ರಕರಣದಲ್ಲಿಯೂ ಅಷ್ಟೇ. ಕನ್ನಡದ ಎಲ್ಲ ವಾಹಿನಿಗಳು ನಿರಂತರ ಜನಾಭಿಪ್ರಾಯ ಮೂಡಿಸಿದರೆ ಮಾತ್ರ ಪ್ರಕರಣ ಮುಂದೆ ಹೋಗಬಹುದು, ಇಲ್ಲದೆ ಹೋದರೆ ಪ್ರಕರಣ ಮುಚ್ಚಿ ಹಾಕಿ ಸರ್ಕಾರ ಹಾಗೂ ಪೊಲೀಸರು ಕೈತೊಳೆದುಕೊಳ್ಳಬಹುದು ಏಕೆಂದರೆ ಧರ್ಮದ ಕೈಗಳು ಅಷ್ಟು ಉದ್ಧವಾಗಿವೆ, ಕ್ರೂರವಾಗಿವೆ ಹಾಗೂ ಅಮಾನುಷವಾಗಿವೆ. ಅದೇ ರೀತಿ ಹಿಂದಿ ಹಾಗೂ ಆಂಗ್ಲ ಭಾಷಾ ಟಿವಿ ವಾಹಿನಿಗಳೂ ಈ ಪ್ರಕರಣವನ್ನು ಕೈಗೆ ಎತ್ತಿಕೊಳ್ಳುವಂತೆ ಹೋರಾಟಗಾರರು ಗಮನ ಹರಿಸಿದರೆ ಪ್ರಚಂಡ ಜನಾಭಿಪ್ರಾಯ ರೂಪುಗೊಂಡು ಕಾನೂನಿನ ಕೈಗಳು ಅಪರಾಧಿಗಳನ್ನು ಹಿಡಿಯಲು ಮುಂದೆ ಬರಬಹುದು.

    Reply
  2. srinivasamurthy

    ಒಂದು ಕಡೆ ಒಳ್ಳೆಯ ಕೆಲಸವನ್ನು ಮಾಡುತ್ತಾ ಮತ್ತೊಂದು ಕಡೆ ಕೆಟ್ಟವರನ್ನು ಪೋಶಿಸುತ್ತಿರುವವರ ಕಪಟಗಳನ್ನು ಹೊರಗೆಡವುದು ಇನ್ನೂ ತೀವ್ರವಾಗಬೇಕಾಗಿದೆ. ಹೆಗ್ಗಡೆಯವರು ಈಗೇನೋ ತಮ್ಮ ಸಂಬಂಧಿಕರದಲ್ಲ ಅಂತ ಹೇಳಿದ್ದನ್ನೇ ಹೇಳುತ್ತಾರೆ. ಒಂದು ವೇಳೆ ಅವರ ಕಡೆಯವರೇ ತಪ್ಪು ಮಾಡಿದ್ದೂ ಎಂದು ಸಾಭೀತುವಾದಲ್ಲಿ ಮತ್ತೆ ಕಾನೂನಿನ ಒಳ ದಾರಿಗಳನ್ನು ಹುಡುಕಿ ವ್ಯಾಜ್ಯವನ್ನು ಎಳೆದು ಬಿಡುವ ಅಪಾಯವಿದೆ. ಹೆಗ್ಗಡೆಯವರ ತಮ್ಮನ ಮಗನ ಹಾಜರಾತಿಯನ್ನೋ/ಇಲ್ಲಿಂದ ವಿದೇಶಕ್ಕೆ ತೆರಳಿದ ಏರ್ಪೋರ್ಟ್ ಮಾಹಿತಿಗಳನ್ನು ಹುಡುಕಿದರೆ ಖಂಡಿತವಾಗಿಯೂ ಒಂದು ಕುರುಹು ಸಿಗಬಹುದೇನೋ ಕಾಯ್ದು ನೋಡಬೇಕು. ಈಗೇನೋ 15 ದಿನಗಳೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಸತ್ಯವನ್ನು ಸಾಯಿಸದೆ ನೈಜತೆಯನ್ನು ಎತ್ತಿ ಹಿಡಿಯುವರೇ ಈ ಪೋಲಿಸರೂ? ತುಂಬಾ ಅನುಮಾನಗಳಿವೆ. ಆದರೂ ಕ್ಶೇತ್ರದ ಮಹಿಮೆಗೆ ಕಳಂಕ ಹಚ್ಚಿರುವ ಹೆಗ್ಗಡೆಯವರು ಸತ್ಯವನ್ನು ಒಪ್ಪಿಕೊಂಡಾದರೂ ಕ್ಶೇತ್ರದ ಮಹಿಮೆಯನ್ನು ಉಳಿಸಲು ಯತ್ನಿಸಲಿ. ಹಾ! ರಾಜಕೀಯದಿಂದಲೇ ದರ್ಮಸ್ತಳದ ಪಟ್ಟ ಗಿಟ್ಟಿಸಿದವರನ್ನು ನಂಬ ಬಾರದು.

    Reply
  3. Ganesh ujire

    rajakiyadavarannu e prakarandinda doora idli …rajakidavarannu ottugudisi matte aaropigalannu protest madlikke noduthidare …namge nyaya beke beku

    Reply
  4. saifuddin shabuddin master

    we call polticians are corrupt, shamless, illegitimate so on……& on , even after they have a opposition at least. where as these so called godman they are fooling the whole including the creator and they don’t have any opposition. lets the law of the lanad preavail. we all resposible ctizens of india demand for a impartial,unbiased legal enquiry and prosecution by the government. don’t test our patience. othewise people have to go for mass protests.

    Reply
  5. Manoj Puttur

    Few questions –
    We call ourselves a democratic, pluralist, secular society…But where, on which corner of India do we have all that??
    Why do we fear to face trial if we have nothing to hide??
    Emotional statements such as ‘I am hurt’, ‘Is it the reward i get for all that i have done’…are they required??
    No doubt Dharmasthala feeds lakhs of people across Karnataka directly or indirectly..But that does not mean it is above justice??

    Reply
  6. Kodava

    ಸೌಜನ್ಯ ಕೊಲೆ ಪ್ರಕರಣ ಸಂಬಂಧ ವಿನಾಕಾರಣ ಶ್ರೀಕ್ಷೇತ್ರ ಧಮ೯ಸ್ಥಳದ ವಿರುದ್ಧ ಕ್ಯಾತೆ ತೆಗೆಯುವವರಿಗೆ ಇದು ಸರಿಯಾದ ಸವಾಲು.
    ಹೌದು… ಅಂದು ತಮ್ಮ ತಮ್ಮನ ಮಗ ವಿದೇಶದಲ್ಲಿದ್ದ ಎಂದು ವೀರೇಂದ್ರ ಹೆಗ್ಗಡೆಯವರು ಈಗಾಗಲೇ ಸಾಕ್ಷ್ಯ ಒದಗಿಸಿದ್ದಾರೆ. ಅದನ್ನು ಅಲ್ಲಗಳೆಯುವವರು ಆತ ಅಂದು ಭಾರತದಲ್ಲೇ ಇದ್ದ ಎಂದು ಸಾಬೀತುಪಡಿಸಲಿ.

    ಅದರ ಬದಲು ಸುಮ್ ಸುಮ್ನೆ ಹಿಂದೂ ಧಾಮಿ೯ಕ ಮುಖಂಡರು, ಕ್ಷೇತ್ರಗಳ ಬಗ್ಗೆ ವಿನಾಕಾರಣ ಕ್ಯಾತೆ ತೆಗೆದರೆ ಶ್ರೀಪತಿ ರಾವ್ ಅವರು ಹೇಳಿದಂತೆ ನಮ್ಮ ಹೀರೋ ಕೖಷ್ಣ… ಅಂದು ಆತನ ಮಾಗ೯ದಶ೯ನದಿಂದ ಅಲ್ಪಸಂಖ್ಯಾತರಾಗಿದ್ದ ಪಾಂಡವರು ಬಹುಸಂಖ್ಯಾತರಾಗಿದ್ದ ಕೌರವರ ವಿರುದ್ಧ ಜಯಗಳಿಸಿದ್ದರು. ಇಂದು ಮನಸು ಮಾಡಿದರೆ ಬಹುಸಂಖ್ಯಾತರಾಗಿರುವ ನಮಗೆ ಅದೇ ಕೖಷ್ಣನ ಮಾಗ೯ದಶ೯ನದಲ್ಲಿ ಅಲ್ಪರ.. ಐ ಮೀನ್, ಕಡಿಮೆ ಸಂಖ್ಯೆಯಲ್ಲಿರುವ ಡೋಂಗಿಗಳ ಕುತಂತ್ರ ಹತ್ತಿಕ್ಕುವುದು ಏನೇನೂ ಅಲ್ಲ…

    Reply
  7. Rama pratheek kariyal

    ತಮ್ಮ ಲೇಖನವನ್ನು ಒದಿದೆ. ತುಂಬಾ ಒಳ್ಳೇ ಪ್ರಯತ್ನ, ಹೆಗ್ಗಡೆಯನ್ನು ಸಮರ್ಥಿಸುವುದಕ್ಕೆ.
    ನಾನಿಲ್ಲಿ ನಿಮ್ಮ ಲೇಖನವನ್ನು ದೂಷಿಸುತ್ತಿಲ್ಲ. ಬದಲಾಗಿ ಹೆಗ್ಗಡೆಯ ಬಗ್ಗೆ ತಾವು ತಿಳಿಯ ಬೇಕಾದ್ದು ಬಹಳಷ್ಟಿದೆ.
    • ಶ್ರೀ ಅಣ್ಣಪ್ಪ ಸ್ವಾಮಿ ದೈವ ಅವರ ಮನೆ ದೈವ. ಅಂದರೆ ಮಂಜುನಾಥ ದೇವರಿಗೂ ಜೈನರಿಗೂ ಏನು ಸಂಬಂಧ?
    • ಬ್ರಾಹ್ಮಣ ಹಿಂಸೆ ದೋಷ ಕಾಣಲು ಕಾರಣ ಏನು?
    • ದೇವಳದಲ್ಲಿ ಕಳ್ಳತನದ ಆರೋಪಹೊತ್ತ ಅರ್ಚಕರು ಹೇಗೆ ನಾಪತ್ತೆಯಾದ್ದು?
    • ಪ್ರಸ್ಥುತ ಮಾಧ್ಯಮಗಳ ಪ್ರಶ್ನೆಯನ್ನು ತಿರುಚಿ ಉತ್ತರ ನೀಡುತ್ತಿರುವುದೇಕೆ?
    ಇದೆಲ್ಲಾ just sample questionಗಳು.
    “ಉಪ್ಪು ತಿಂದವ ನೀರು ಕುಡಿಯಲೇ ಬೇಕು”.
    Personally I will not give respect to him, because he is not an agent of GOD, just a businessman.
    With a “COLORFUL MASK”.

    Reply

Leave a Reply to srinivasamurthy Cancel reply

Your email address will not be published. Required fields are marked *