ಸೌಜನ್ಯ ಹತ್ಯೆ: ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು

– ಶೌರೀಶ್ ಕುದ್ಕುಳಿ

ಪ್ರಜ್ಞಾಪೂರ್ವಕವಾಗಿ ಎಸಗಿದಂತಹ ಒಂದು ಮೃಗೀಯ ಕಾರ್ಯವನ್ನು ಮರೆಮಾಚುವ ಕೆಲಸ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಒಂದು ವರ್ಷದ ಹಿಂದೆ ಸೌಜನ್ಯ ಎಂಬ ಅಮಾಯಕ ಹೆಣ್ಣು ಮಗಳ ದಾರುಣ ಹತ್ಯೆಯಾಯಿತು. ಕೆಲವು ಕಾಮುಕರು ಆಕೆಯನ್ನು ಮೃಗೀಯ ರೀತಿಯಲ್ಲಿ ಬಳಸಿಕೊಂಡು, ಕೊಂದು ಹಾಕಿದರು. ಆ ಹೊತ್ತಲ್ಲಿ, ದೇಹದಲ್ಲಿ ಜೀವಾತ್ಮವಿದ್ದ ಪ್ರತಿ ಮಾನವನೂ ಯಾವ ರೀತಿ ಪ್ರಾಣ ಮತ್ತು ಮಾನ ಉಳಿಸಿಕೊಳ್ಳಲು sowjanya-murderedಒದ್ದಾಡುತ್ತಾನೆಯೋ, ಅದೇ ರೀತಿ ಆಕೆಯೂ ತನ್ನ ಪ್ರಾಣರಕ್ಷಣೆಗೆ ವಿಲವಿಲ ಒದ್ದಾಡಿದ ಕುರುಹುಗಳು ನಿಖರವಾಗಿ ಕಾಣಿಸಿವೆ. ತನ್ನ ಅರಿವಿಗೆ ಸಾವಿನ ಕೊನೆಗಳಿಗೆ ಕಾಣಿಸುತ್ತಿದ್ದು, ಅದನ್ನು ಇನ್ನಾರೋ ಬಲಾತ್ಕಾರವಾಗಿ ಹೇರುತ್ತಿರುವಾಗ, ಅದರಿಂದ ಬಿಡುಗಡೆ ಪಡೆಯುವ ಹೊತ್ತಿನಲ್ಲಿ ನಡೆಸುವ ಫಲಕಾರಿಯಲ್ಲದ ಹೋರಾಟ ಮತ್ತು ಆ ವೇದನೆ ಊಹಿಸಿಕೊಂಡರೆ ಎದೆ ನಡುಗುವಂತಹುದು.

ಧರ್ಮವೇ ನೆಲೆನಿಂತ ಬೀಡಾದ ತುಳುನಾಡು ಮತ್ತು ಕರ್ನಾಟಕದಾದ್ಯಂತ ಮನೆಮಾತಾದ ಶ್ರೀ ಮಂಜುನಾಥನಿರುವ ಧರ್ಮಸ್ಥಳದಲ್ಲಿ ಕಾಮುಕರು ಆಕೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದರು. ಮನೆಗೆ ತೆರಳುವ ಹಾದಿ ಬದಿಯಲ್ಲಿ, ಸಂಜೆ ಸುಮಾರು 5 ಗಂಟೆ ಹೊತ್ತಿಗೆ ನಡೆದ ಈ ಘಟನೆಯ ಸ್ಥಳ ಆ ಸಂದರ್ಭದ ಭೀಕರತೆಯ ಕರಾಳತೆಗೆ ಸಾಕ್ಷಿ. ಮಾನರಕ್ಷಣೆ ಮತ್ತು ಜೀವರಕ್ಷಣೆಗಾಗಿ ಆಕೆ ಒದ್ದಾಡಿರಬಹುದಾದ ಪರಿ, ಆಕೆಯ ಶವ ಬಿದ್ದಿದ್ದ ಜಾಗದಲ್ಲಿರುವ ಕುರುಹುಗಳು ಎಂತಹವರನ್ನೂ ಬೆಚ್ಚಿ ಬೀಳಿಸುವಂತಹದ್ದು. ಕೈ ಕಾಲುಗಳನ್ನು ಮರಕ್ಕೆ ಕಟ್ಟಿ ಹಾಕಿದ ಭೀಭತ್ಸ ಚಿತ್ರ ಹಾಗೆಯೇ ಇತ್ತು. ಕಾಲೇಜಿನ ಗುರುತುಪತ್ರದ ದಾರವೇ ಕತ್ತು ಹಿಸುಕಿ ಕೊಲೆ ಮಾಡಲು ಬಳಸಿದ ಹಗ್ಗವಾಗಿತ್ತು.

ಈ ಘಟನೆಗೆ ಹಲವು ಸಂಘಟನೆಗಳು ಅದರಲ್ಲೂ ವಿದ್ಯಾರ್ಥಿ ಸಂಘಟನೆಗಳು ಮೌನವಾಗಿ ಕಣ್ಣೀರು ಸುರಿಸಿದವು. ಬೀದಿಗಿಳಿದು ಪ್ರತಿಭಟನೆ ಮಾಡಿದವು. ಆದರೆ ಸಾರ್ವಜನಿಕ ಸ್ಮರಣೆ ಅಥವಾ ನೆನಪು ಕ್ಷಣಕಾಲ ಎನ್ನುವಂತೆ, ಸಾರ್ವಜನಿಕರ ರೋಷದ ಬೆಂಕಿ ಇಂದು ತಣ್ಣಗಾಗುತ್ತಿದೆ. ಕಟುಕರು ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ.

ಇವುಗಳ ಅರಿವಿರುವ ಜನತೆ ನ್ಯಾಯಾಲಯ, ಪೋಲಿಸ್ ವ್ಯವಸ್ಥೆ ಮತ್ತು ಅಂತಿಮವಾಗಿ ಸರಕಾರದ ಮೇಲೆ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಹಿಳಾ ಸಂಘಟನೆಗಳು ಮೂಕ ವೇದನವನ್ನು ಅನುಭವಿಸುತ್ತಿವೆಯೋ ಎನ್ನುವಂತೆ ಭಾಸವಾಗುತ್ತಿದೆ! ಮಂಗಳೂರಿನ ಪಬ್ ದಾಳಿಗೊಳಗಾದ ಹೆಣ್ಣು ಮಕ್ಕಳಿಗೆ ದೊರಕಿದ್ದ ಬೆಂಬಲ ಮೈಸೂರಿನಲ್ಲಿ ರೈಲಿನಿಂದ ತಳ್ಳಲ್ಪಟ್ಟ ಹೆಣ್ಣು ಮಗಳಿಗೆ ದೊರಕಿಲ್ಲ! JusticeForSowjanyaಹಾಗೆಯೇ ಧರ್ಮಸ್ಥಳದ ಸೌಜನ್ಯಳ ಅಮಾನುಷ ಕೊಲೆಯ ಖಂಡಿಸಿ ಹೋರಾಟ ಮಾಡಿದವರ ವಿರುದ್ಧ ಕೇಸ್ ದಾಖಲು ಮಾಡಿಕೊಂಡ ಉಡುಗೋರೆ ಮಾತ್ರವೇ ಬೆಳ್ತಂಗಡಿಯ ನಾಗರಿಕರಿಗೆ ದೊರಕಿತು!

ನಮ್ಮ ವ್ಯವಸ್ಥೆ ಹೇಗಿದೆ ಮತ್ತು ಎತ್ತ ಸಾಗುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಪ್ರತಿ ವ್ಯಕ್ತಿ ಯಾ ಸಂಘಟನೆಗೆ ಇಂದು ಸಾರ್ವಜನಿಕವಾಗಿ ಅಜೆಂಡಾ ಬೇಕಾಗಿದೆ. ಕೆಲವೊಮ್ಮೆ ಇವರು ರಾಜಕೀಯ ಪಕ್ಷಗಳ ಮುಖವಾಣಿಯಂತೆ ವರ್ತಿಸುತ್ತವೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಸಾರ್ವಜನಿಕ ಸಂಸ್ಥೆಗಳು ವಿಷಯಾಧಾರಿತ ಚಳುವಳಿಗಳನ್ನು ಮಾಡುತ್ತವೆ. ಇಡೀ ಮನುಕುಲದ ಬುಡಕ್ಕೇ ಪೆಟ್ಟು ಬಿದ್ದಾಗಲೂ, ಸಾರ್ವಜನಿಕರು ಕ್ಷಣ ಕಾಲ ಮಾತ್ರ ವಿಚಲಿತರಾಗಿ ಖಂಡಿಸುತ್ತಾರೆ. ಆದರೆ ಅದರ ಮುಂದಿನ ಬೆಳವಣಿಗೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಸೌಜನ್ಯ ಪ್ರಕರಣವೂ ಈ ರೀತಿಯಾಗಿ ಜನರಿಂದ ಮರೆಯಾಗುತ್ತಿರುವ ವೇದನೆಯ ಪ್ರಕರಣ. ಮರೆಯಾಗುವ ರೀತಿಯಲ್ಲಿ ಕೊಲೆಯ ವಿಚಾರಣೆಯ ಗತಿಯೂ ಸಾಗಿದೆ! ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ. ಸೌಜನ್ಯ ಹೆತ್ತವರಿಗೆ ಪ್ರಚಾರ ಬೇಕಿಲ್ಲ, ನ್ಯಾಯ ಬೇಕಿದೆ. ಮೂಲತ: ಕೃಷಿ ಕುಟುಂಬವಾಗಿರುವ ಇವರು ನ್ಯಾಯಪರತೆಯಿಂದ ಜೀವಿಸುತ್ತಿರುವವರು. ಆಂತರಿಕ ಕಥೆಗಳು ಧರ್ಮದ ನೆಲೆವೀಡಾದ ಧರ್ಮಸ್ಥಳದಲ್ಲಿ ಹರಿದಾಡುತ್ತಿದ್ದರೂ, ಪೋಲಿಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಿದ್ದರೂ, ಕಳೆದು ಹೋದ ಸೌಜನ್ಯ ಬರಲಾರಳು ಎಂಬುದು ಅವರ ಅರಿವಿನಲ್ಲಿದೆ. ಸಮಾಜ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸಿದ್ದೂ ಅವರ ಗಮನದಲ್ಲಿದೆ. Sowjanya-Rape-Murderಆದರೆ ವಿಕೃತವಾಗಿ ಕೊಲೆಗೈದ ಪರಮ ಪಾಪಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನ್ಯಾಯ ಮರೀಚಿಕೆಯಾಗಿರುವುದು ಪ್ರತಿದಿನವನ್ನೂ ನರಕ ಮಾಡಿದೆ.

ಮೂರು ನಾಲ್ಕು ವ್ಯಕ್ತಿಗಳ ಕುಕೃತ್ಯ ಇದು ಎಂಬುದು ಅನೇಕರ ಅಭಿಮತ. ಮನೋರೋಗಿ ಈ ಕೃತ್ಯ ಮಾಡಿರಲಾರ ಎಂಬುದು ಸ್ಥಳೀಯರ ಅಭಿಪ್ರಾಯ. ಪೋಲಿಸ್ ಇಲಾಖೆಯ ಕಸ್ಟಡಿಯಲ್ಲಿ ಸದ್ಯಕ್ಕೆ ಇರುವ ವ್ಯಕ್ತಿ ಮನೋರೋಗಿ. ಜಗತ್ತಿನ ವ್ಯವಹಾರದಲ್ಲಿ ಹುಚ್ಚರಾಗಿರುವ ಪ್ರತಿ ಮಾನವನಿಗೆ ಸೌಜನ್ಯ ಪ್ರಕರಣ ಕ್ಷುಲಕವೆಂದೆನಿಸಬಹುದು. ಆದರೆ ಈ ಘಟನೆಯನ್ನು ನಗಣ್ಯ ಮಾಡಿದ್ದಲ್ಲಿ, ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು ಎಂಬ ಸಂದೇಶ ಸಮಾಜಕ್ಕಿದೆ.

36 thoughts on “ಸೌಜನ್ಯ ಹತ್ಯೆ: ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು

  1. Ananda Prasad

    ಧರ್ಮಸ್ಥಳ ಎಂಬುದು ಒಂದು ಪ್ರತ್ಯೇಕ ಸಂಸ್ಥಾನದಂತೆ ಕಾರ್ಯ ನಿರ್ವಹಿಸುತ್ತಿರುವುದು ಮತ್ತು ಎಲ್ಲ ಪಕ್ಷಗಳ ರಾಜಕಾರಣಿಗಳು ಧರ್ಮಸ್ಥಳದ ಪ್ರಭಾವಕ್ಕೆ ಒಳಗಾಗಿರುವುದರಿಂದ ಇಂಥ ಸಮಸ್ಯೆ ಉದ್ಭವಿಸಿದೆ. ಧರ್ಮಸ್ಥಳವನ್ನು ಭಾರತದ ಸಂವಿಧಾನದ ಅಡಿಯಲ್ಲಿ ತಂದು ದೇಶದಲ್ಲಿ ವಿಲೀನಗೊಲಿಸುವವರೆಗೆ ಇಂಥ ಸಮಸ್ಯೆ ಮುಂದುವರಿಯಲಿದೆ. ಭಾರತದ ಎಲ್ಲ ಸಂಸ್ಥಾನಗಳು ದೇಶದಲ್ಲಿ ವಿಲೀನಗೊಂಡರೂ ನಂತರ ಧರ್ಮ, ದೇವರ ಹೆಸರಿನಲ್ಲಿ, ಪವಾಡಗಳ ಹೆಸರಿನಲ್ಲಿ ಅಲ್ಲಲ್ಲಿ ಪ್ರತ್ಯೇಕ ಸಂಸ್ಥಾನಗಳು ಹುಟ್ಟಿಕೊಂಡಿರುವುದು ಭಾರತದ ದುರಂತ. ಇದುವೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಳಗೊಳ್ಳಲು ಮೂಲ ಕಾರಣ. ಧರ್ಮಸ್ಥಳದಲ್ಲಿ ದೇಶದ ಕಾನೂನುಗಳು ಅನ್ವಯವಾಗದಿರುವುದು ಅಲ್ಲಿ ತನಿಖೆ ಸರಿಯಾಗಿ ನಡೆಯದೆ ಇರಲು ಪ್ರಧಾನ ಕಾರಣವಾಗಿದೆ. ಇಂಥ ವ್ಯವಸ್ಥೆ ರೂಪುಗೊಳ್ಳಲು ಮಾಧ್ಯಮಗಳ ಕೊಡುಗೆ ಸಾಕಷ್ಟಿದೆ. ಮಾಧ್ಯಮಗಳು ಧರ್ಮಸ್ಥಳದಲ್ಲಿ ನಡೆಯುವ ಅನಾಚಾರಗಳನ್ನು ಬಯಲಿಗೆಳೆಯುವಲ್ಲಿ, ಜನಜಾಗೃತಿ ಮೂಡಿಸುವಲ್ಲಿ ಸೋತಿವೆ. ಟಿವಿ 9 ಒಂದು ಮಾತ್ರ ಇದೀಗ ಎಲ್ಲಾ ಒತ್ತಡಗಳನ್ನು, ಆಮಿಷಗಳನ್ನು ಮೀರಿ ಅನ್ಯಾಯಕ್ಕೊಳಗಾದವರ ಧ್ವನಿಯನ್ನು ಎತ್ತಿ ಹಿಡಿದಿದೆ. ಉಳಿದ ಟಿವಿ ವಾಹಿನಿಗಳು ಈ ವಿಷಯದಲ್ಲಿ ಮೌನವಾಗಿರಲು ಕಾರಣವೇನು? ಎಲ್ಲ ವಾಹಿನಿಗಳೂ ಜೊತೆಗೂಡಿ ಅನ್ಯಾಯದ ವಿರುದ್ಧ ಹೋರಾಡಿದರೆ ಪ್ರಚಂಡ ಜನಜಾಗೃತಿ ರೂಪುಗೊಂಡು ಸರ್ಕಾರಗಳು ಬಗ್ಗುವುದರಲ್ಲಿ ಸಂದೇಹವಿಲ್ಲ. ಆರಂಭದಲ್ಲಿ ಆಸಾರಾಮ್ ಬಾಪುವಿನ ವಿರುದ್ಧ ಪೊಲೀಸರು ತನಿಖೆ ಕೈಗೊಂಡಾಗ ಆತನ ಅಭಿಮಾನಿಗಳು, ಬೆಂಬಲಿಗರು, ಹಿಂಬಾಲಕರು ಭಾರೀ ಪ್ರತಿಭಟನೆ ಮಾಡಿದರು. ಆದರೆ ಇದಕ್ಕೆ ಜಗ್ಗದೆ ಹಿಂದಿ ಭಾಷೆಯ ಬಹುತೇಕ ಟಿವಿ ವಾಹಿನಿಗಳು ನಿರಂತರವಾಗಿ ಈ ವಿಷಯವನ್ನು ಎತ್ತಿಕೊಂಡು ಪ್ರಚಂಡ ಜನಜಾಗೃತಿ ಮೂಡಿಸಿದ ಪರಿಣಾಮವಾಗಿ ಅಪಾರ ರಾಜಕೀಯ ಪ್ರಭಾವ ಉಳ್ಳ ಆಸಾರಾಮ್ ಬಾಪು ಕಂಬಿಯ ಹಿಂದೆ ಹೋಗಲೇಬೇಕಾಯಿತು. ಹಿಂದಿ ವಾಹಿನಿಗಳಿಗೆ ಸಾಧ್ಯವಾದದ್ದು ಕನ್ನಡ ಟಿವಿ ವಾಹಿನಿಗಳಿಗೆ ಏಕೆ ಸಾಧ್ಯವಿಲ್ಲ? ಅನ್ಯಾಯವನ್ನು ಸಹಿಸಿಕೊಂಡು ಕೂರುವ ದರ್ದು ಕನ್ನಡ ಟಿವಿ ವಾಹಿನಿಗಳಿಗೆ ಬರಲು ಕಾರಣವೇನು ಎಂಬ ಬಗ್ಗೆ ನಾಡಿನ ಪ್ರಜ್ಞಾವಂತರು ಯೋಚಿಸಬೇಕಾದ ಕಾಲ ಸನ್ನಿಹಿತವಾಗಿದೆ. ಅನ್ಯಾಯವನ್ನು ಸಹಿಸಿಕೊಂಡು ಕೂರುವುದೂ ಅನ್ಯಾಯದ ಜೊತೆ ಪಾಲುಗೊಂಡಂತೆ ,ಮತ್ತು ಸಮಾಜದಲ್ಲಿ ಅನ್ಯಾಯ ಹೆಚ್ಚಲು ಕಾರಣ ಎಂಬುದು ಕನ್ನಡ ಟಿವಿ ವಾಹಿನಿಗಳಿಗೆ ಏಕೆ ಅರ್ಥವಾಗುವುದಿಲ್ಲ ಎಂಬ ಪ್ರಶ್ನೆಯನ್ನು ಇದೀಗ ನಾವು ಕೇಳಬೇಕಾಗಿದೆ.

    Reply
  2. divakarkukkikatte

    adu Manjunatha Swameya Nyalaya, thapistharege kandetha shikshe aagutte., kadu nodi alli Annappaniddane!!!!!!!!?

    Reply
  3. radhika gurucharan

    divakar kukkikatteyavare…ee modalu alli intaha ghatanegalu nadedittu…swalpa kala suddiyagi matte saddillade muleseriddu nimage tilidirabahudu aagalu annappanidda..heggade idda..jana badalagade intaha samasyegalige kone illa…modalu mooda nambikeyinda horabandu manushyanannu manushyanage kani..devaragi alla…aagaladaru samasyege parihaara sikkeetu..kelavu jivaglu ulideetu…

    Reply
    1. sharath kumar

      really radhika intha moodanambikeyindha alli nadithiro athyachaaragalu mooleserthirod athyachaara jaasthi agthirodu innu ide reethi adare ondhu hosa sene kattabekadeethu on the spot justice gaagi

      Reply
    2. Rakesh

      Radhika Gurucharan….Thanks for such a meaningful comment. It;ll take a long time for we…the Indians to come out of that hangover. I thank U n welcome ur comment.

      Reply
  4. vidya.kundargi.

    ಧರ್ಮಸ್ಥಳದಲ್ಲಿ ದೇಶದ ಕಾನೂನುಗಳು ಅನ್ವಯವಾಗದಿರುವುದು ಅಲ್ಲಿ ತನಿಖೆ ಸರಿಯಾಗಿ ನಡೆಯದೆ ಇರಲು ಪ್ರಧಾನ ಕಾರಣವಾಗಿದೆ……….ಹಾಗಾದರೆ ಅದಕ್ಕೆ ‘ಧರ್ಮಸ್ಥಳ’ ಎಂಬ ಹೆಸರು ಬೇರೆ ಕೇಡು

    Reply
  5. Kiran Gowda C.H.

    Ee thappu madidavaru yaru antha gotthiddu, avarige namma vyavasthe yavude thanike nadesade matthu yavude shikshe kodade iddaga, summane prathibhatane madodu bittu saarvajanikare kanunu meeri avarige shikshe kodabeku, ee reethi aadaga mathra ee reethiya ghatanegalu kadime aagoke sadhya, Bharatha deshadanthaha punya bhumiyalli intha neecha janagalu badukoke arharalla……

    Reply
  6. mahesh

    Indian system has been changed to British rule .largest constitution cannot give justice to the poor people in India . Why we need such a system . please protect it. You may be sufferer one day .Please revolt against it

    Reply
  7. Anant

    Navu chikkavariddaginida Shri dharmasthla da mahatme yannu kelutta iddeve, intha sthaldalli intha ghore krutya nadeeyutte andre namage safe place bere yellide?

    Reply
  8. arun kumar

    ನೋಡಿ ಶ್ರೀ ಕ್ಷೇತ್ರ ಧರ್ಮಸ್ತಳ ಒಂದು ಶಕ್ತಿಯುತ ದೇವತಾ ಸ್ತಳ,ಈ ಘಟನೆ ಬಗ್ಗೆ ನಮಗೂ ಹೃದಯ ಕಲಕಿ ನೋವುಂಟಾಗಿದೆ, ಯಾವುದೊ ಮೃಗದಂತಹ ಮನುಷ್ಯ ಮಾಡಿದ ಕ್ರೂರ ಗಟನೆಯನ್ನು ,ಶ್ರೀ ಕ್ಷೇತ್ರ ಧರ್ಮಸ್ತಳದ ಮೇಲೆ ಆರೋಪ ಮಾಡುವುದು ಸರಿಯಲ್ಲ,ನನ್ನ ಸ್ನೇಹಿತ ರಾದಂತಹ ಪ್ರಸಾದ್ ರವರೆ ,ಹಿಂದೆ ಒಂದು ಬಾರಿ ಸರ್ಕಾರವು ಸಂವಿದಾನದ ತಂದುಕೊಂಡಿತ್ತು,ಆದರೆ ಅಲ್ಲಿನ ಧಾನ ಧರ್ಮದ ಒಳ್ಳೆಯ ಕೆಲಸ ಅನ್ನಧಾನ,ಹಲವು ಸಮಾಜ ಕಾರ್ಯಗಳು ,ಸರ್ಕಾರವು ಮಾಡುವುದರಲ್ಲಿ ವಿಫಲವಾದ ಸಂಗತಿ ಗೋತ್ತಿದೆ, ಆದರೆ ಈ ಕುಕೃತ್ಯಕ್ಕು, ಸಂಸ್ಥಾನಕ್ಕು ಯಾವುದೆ ರೀತಿಯಲ್ಲಿ ಹೊಂದಿಸಿ ಮಾತನಾಡ ಬೇಡಿ ,ಎನ್ನುವುದು ನನ್ನ ವಾದ.

    Reply
  9. Ananda Prasad

    ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ನಿಷ್ಪಕ್ಷಪಾತವಾಗಿ ಕೈಗೊಳ್ಳಲು ಅವಕಾಶ ನೀಡಿಲ್ಲ ಎಂಬುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟ. ಪೊಲೀಸರು ತನಿಖೆ ಕೈಗೊಳ್ಳದಂತೆ ತಡೆದ ಪ್ರಭಾವಿ ಶಕ್ತಿಗಳು ಯಾವುವು ಎಂಬುದು ಹೊರಗೆ ಬರಬೇಕಾಗಿದೆ. ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಜನರ ಹಾಗೂ ಮಾಧ್ಯಮಗಳ ಪ್ರಚಂಡ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಸಾಧ್ಯವಾಗಿರುವಾಗ ಸೌಜನ್ಯ ಪ್ರಕರಣದಲ್ಲಿ ಏಕೆ ಸಾಧ್ಯವಾಗಿಲ್ಲ ಎಂಬುದು ಎಲ್ಲಾ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿರುವ ಪ್ರಶ್ನೆ. ಅಲ್ಲಿ ಅತ್ಯಾಚಾರ ನಡೆಸಿ ಕೊಲೆ ನಡೆಸಿದ್ದರೆ ಅತ್ಯಾಚಾರಕ್ಕೀಡಾದ ವ್ಯಕ್ತಿಯ ಬಟ್ಟೆಗಳಲ್ಲಿ ಹಾಗೂ ಗುಪ್ತಾಂಗದಲ್ಲಿ ವೀರ್ಯಾಣು ಇದ್ದೇ ಇರುತ್ತದೆ. ಅದನ್ನು ಸಂಗ್ರಹಿಸಿ ಡಿ. ಎನ್. ಎ. ಪರೀಕ್ಷೆ ನಡೆಸಿ ಅತ್ಯಾಚಾರ ನಡೆಸಿದ ಆರೋಪ/ಅನುಮಾನ ಇರುವ ವ್ಯಕ್ತಿಯ ವೀರ್ಯಾಣುವಿನ ಜೊತೆ ತುಲನೆ ಮಾಡಿ 100% ಒಬ್ಬ ವ್ಯಕ್ತಿ ಅಪರಾಧಿ ಹೌದೋ ಅಲ್ಲವೋ ಎಂದು ಇಂದಿನ ವಿಜ್ಞಾನ ಯುಗದಲ್ಲಿ ನಿರೂಪಿಸಲು ಸಾಧ್ಯವಿರುವಾಗ ಇದನ್ನು ಪೊಲೀಸರು ನಡೆಸದೆ ಇರಲು ಕಾರಣವೇನು? ಇಷ್ಟು ಸಾರ್ವಜನಿಕ ಒತ್ತಡ ಇರುವಾಗಲೂ ಈ ಪ್ರಕರಣ ಮುಚ್ಚಿ ಹಾಕಲು ಅತ್ಯಂತ ಬಲವಾದ ಒತ್ತಡ ಪೋಲೀಸರ ಮೇಲೆ ಇತ್ತು ಎಂಬುದು ಅನ್ನ ತಿನ್ನುವ ಎಲ್ಲ ಜನರ ಅಭಿಪ್ರಾಯವಾಗಿದೆ. ಹಾಗಾದರೆ ಆ ಒತ್ತಡ ಹಾಕಿದವರು ಯಾರು ಎಂದು ಹಿಂದೆ ಅಲ್ಲಿ ಕರ್ತವ್ಯ ನಿರ್ವಹಿಸದ ಪೋಲೀಸರ ಮೇಲೆ ತೀವ್ರ ತನಿಖೆ ನಡೆಸಿದರೆ ಸತ್ಯ ಹೊರಬಂದೀತು. ಇದೇ ಆಧಾರದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಧ್ಯವಿದೆ.

    ಇದೀಗ ಮಾಧ್ಯಮಗಳು ಧರ್ಮಸ್ಥಳದ ವಿಚಾರವಾಗಿ ಯಾವುದೇ ವಿಚಾರಗಳನ್ನು ಪ್ರಕಟಿಸದಂತೆ ಅಲ್ಲಿನವರು ನ್ಯಾಯಾಲಯದಿಂದ ತಡೆ ತಂದು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸಲು ಕಾರಣವೇನು? ಎಂಬ ಬಗ್ಗೆ ಪ್ರಜ್ಞಾವಂತರು ಯೋಚಿಸಬೇಕಾಗಿದೆ. ಈ ವಿಚಾರದಲ್ಲಿ ನೊಂದವರ ಧ್ವನಿಯನ್ನು ಎತ್ತಿ ಹಿಡಿದದ್ದಕ್ಕಾಗಿ ಟಿವಿ 9 ರ ಮೇಲೆ ಮಾನಹಾನಿ ಖಟ್ಲೆ ಹಾಕಲಾಗಿದೆ. ಹೀಗಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದು ಬೆಳೆಯುವುದು ಹೇಗೆ? ಆಸಾರಂ ಬಾಪುವಿನ ವಿಚಾರದಲ್ಲಿಯೂ ಹೀಗೆಯೇ ನ್ಯಾಯಾಲಯಗಳು ತಡೆಯಾಜ್ಞೆ ನೀಡಿದ್ದರೆ ಆತನ ವಿರುದ್ಧ ಪ್ರಚಂಡ ಜನಜಾಗೃತಿ ನಡೆದು ಆತನ ಬಂಧನ ಆಗುತ್ತಿರಲಿಲ್ಲ. ಆಸಾರಂನ ವಿಚಾರದಲ್ಲಿ ಅನ್ವಯವಾಗದ ಈ ಮಾಧ್ಯಮಗಳ ಮೇಲಿನ ನಿರ್ಬಂಧ ಧರ್ಮಸ್ಥಳದ ಸೌಜನ್ಯ ವಿಚಾರದಲ್ಲಿ ಯಾಕೆ ಆಗುತ್ತಿದೆ ಎಂಬ ಬಗ್ಗೆ ಅನ್ನ ತಿನ್ನುವ ನಾಗರಿಕರು ಯೋಚಿಸಬೇಕಾಗಿದೆ. ಸಗಣಿ ಅಥವಾ ಮಣ್ಣು ತಿನ್ನುವವರು ಯೋಚಿಸಬೇಕಾಗಿಲ್ಲ.

    Reply
  10. baaaapooooo

    maha bharata,ramayandalli rakshasige aadante saujanya prakaranadalliyu adhamarige shikshe aagle beku. eshtu mele hodarooo kelage beelalebeku. saujanyala kutumbakke nyaya sigali.

    Reply
  11. Mahesh

    All investigations done by CBI should be transparent to Media & Public. Culprits should be hanged in public, who ever it may be irrespect of Status or whatever it may be……

    Reply
  12. sharath kumar

    thappithasthara rakshane maadi amayakanannu jailige kalisiddare papigala lokadalli sajjanaru badukuvudu thumbaane kasta sowjanya obbalu mathravalla innu aneka hudugiyaru ide thara agiddare adu belakige barade haage mucchi hogive adannu prathibatisuva dairya yaarigu illa aaropi yaarendu ellarigu gottide aadare yaaru bai biduthilla innu aa manjunatha swamiye avathara etthi papigalige shikshisabekagide

    Reply
  13. adarsh.as

    really radhika intha moodanambikeyindha alli nadithiro athyachaaragalu mooleserthirod athyachaara jaasthi agthirodu innu ide reethi adare ondhu hosa sene kattabekadeethu on the spot justice gaagi

    Reply
  14. n.ravikumar

    sowjanya la aatmkke shanthi sigli. Drmasthala d hegede avru tamma family govrvavannu ulisikollalu horaduvudkkinth a natdrusta sowjanyala kutumba kke nyaa kagi horaduvude nijvada
    darmarkshane .

    Reply
  15. Lokesh Poojary

    sowjanya athyachara kole prakaranadalli bagi adavarige kanditha shikshe age aguthe .aagu soorya chandra e boomina kapadtha iddare annode nija adre sowjanya athmakke shanthi aagu sowjanya kutumbakke nyaya indalla nale sikke sigutthe annappaswamy manjunathaswamy papigalanna janara mundebahirangavagi nilse nillistare

    Reply
  16. vijendra shetty

    nijakku heya kruthya paapa a mugdha hudugiya maana,prana yeradakku sanchakara,,,thandide…dharmasthaladalli manjunathaniddane ,,but thappanna thadeyutthane annodu yaaru think maadabedi..nanna prakara,,devrilla,,adondu ketta nambike,,edanna bidi,,,yellaru chennagirthira,,,entha paristhithi galige…pragnavantha nagarikaru naave thirmana kodabeku nadu rodalli anaatha shavavagi malagisabeku aagale avala aathmakke shanthi,,,devranna nambedi,,,avne shikshe kodthane annodanna marth bidi,,,

    Reply
    1. manjunath

      Nija adre kelavondu paristigalalli nambekagutte aste. adu manasige sambanda patta visya manassinina nemmadige devaru edane antha nambtive horathu, devaru yenu madalla.

      Reply
  17. rohith and shashi

    veeri beyad.
    yarige helli yarige bhiduhage . enews
    nodi swami e papada kutumba . bage yaru henu helli kullovbhavane kelluvaru yaru eella. .yake

    karanna ; devaru anath puje maduva veerendra hegdeyavaru.

    adhare yaru madidapapu o adare hana e davarige edella kamanu billu hage
    adhre e badavaru bage yarige kanu kanalav. manush evathu nalle mannaguthane . antha bhareuavanu brama adu eriyara kaladalli .
    ega manushana anebaraha bariuvaru manushare agubitidare enu swami
    evathu evaru nalle namavaru .nodi swami enumunde ege aghadange nodi.
    janaru devaru antha pujemadutha eda maneyalli devaru thapu madidane antha thillidu kolha bedi . thevaru edare . devaru nabidarige . manush edane mosa maduudake. yaru yarige henu madidru . nane nama namanu nuduvaru yaru ella . adre yaru yariellaantha kullithukondre nale nama manege kalu akalu bharuvagha kellalu bharuvaru yaru eralla . emaguvige adha nast kast yarige bharhadage noduvathakadu . avara kutumba.
    antha kaibitu hogabedi emaguvige karanaradavaru yaru madalu pathe achi
    avarundige enu yaru yaru edare evaru eketta kelasa maduhodake hege
    evara maneyalli onedu henu anuva makkalu elva . chi madabeku maduva
    time nali adre eg alla emakalu maduva thapige yaru heluvaru elva
    thapu thapu///////////////////?

    Reply
  18. preetham

    Tappu madidavrige shikshe agalebeku,, but Manjunatha swamy name yelliu tarabaradu,,, a devara sathya dindale evathu e vishya belakiga bandidu ,,, EDU SATHYA>

    Reply
  19. pradeep

    ujireyalli yesto parkarnagalu nadediddu adannu belikege bandaddu sowjanya ondu mathra ethaya nuraru pakarnagalu nadedive innu mundy yadaru enthaya gattanaygallu nadeyadanthay nodikollabekagidy hage sowjana aathmakke shathi sigabekadare thappikasare shishay aagabekagidy. navella ogaattage avalige naaya dorekisonna friends. hagge Tv 9 vhiniyahiniyavarige dannyavadagalu sojjannga belakige thagedu samajakke thaorisidakke thank again………….

    Reply
  20. harish

    for the 1 st time i feel that tv9 people did the right thing……….hats offffff for them & mahesh shetty thimarodu………….

    Reply
  21. ivan

    elli yeno game naditha edea. first aa familygea justice segabeku. thapu madidavanegea shikshea agalleabeku ..enu ithara yaregu agadage sarakara gamana edabeku ..

    Reply
  22. suhan mada

    suhan
    pratiyobba bharatiyanigu samaana nyaya sigbeku , murder rape robary edakke pratyeka special police department secret squad matte special court maadi adastu bega shikshe siguvantagabeku

    Reply
  23. Sukesh Shetty

    Sukesh Shetty;
    Prithiya bandhugale, sowjanya mele nadeda gattane nijakku hrudaya vidrahaka, Idu namma deshadalli sarve samanya, adare idu nadedirodu dharmasthala andaga nijakku novina sangathi, iddakke mula karana nave, yakandre e rithi agodike karana enu annodanna navu yaru vimarshe maodilla, e rithi ada gattane nadeyoke aa papi galige mula karana namma rajanga, karyanga mattu sashakanga sari yagi karya nirvahisade irodu, adike namma kannmunde sakshi iddrunu adara badalvanege yaru yochane madtha illa, 5 varshakkome adanna sari mado avakasha namage iddaru matte ade thappu nave madthivi andmele idikella hone nu nave, namma thappu enu antha vemarshe madi adanna sari madodu namma dharma namma karthavya kuda, adanna bittu kailagade irovra thara enu thappu madade iro aha manjunatha devara hesaru halu madodu yava nyaya, egaladaru hecchettu namma kanuninalli thiddu padi, police vyavasthe yannu balapadisi rajakiyadalli thivravada badalavane madidalli kanditha namma desha idi prapanchadalle athi unnatha sthana honduvudu kannditha…..
    egaladru deshakkagi namma jawabdari enu antha artha madikonddu adanna olle rithi yalli nadesona….idanna navu madiddalli sowjannyala rithi essto hennu makkala athmakke shanthi sigutte, avara kutumbakke nyaya kotta hage antha bavisthini…….

    Reply

Leave a Reply to baaaapooooo Cancel reply

Your email address will not be published. Required fields are marked *