ಯಾರ ಜಪ್ತಿಗೂ ಸಿಗದ ಧರ್ಮಸ್ಥಳದ ಕಲೋನಿಯಲ್ ಪಟ್ಟಭದ್ರ ವ್ಯವಸ್ಥೆ

– ಬಿ.ಶ್ರೀಪಾದ ಭಟ್

ಒಂದು ವರ್ಷದ ಹಿಂದೆ ನಡೆದ ಸೌಜನ್ಯ ಹತ್ಯೆ ಪ್ರಕರಣ ಈಗ ಅನಿರೀಕ್ಷಿತವಾದ ತಿರುವು ಪಡೆದುಕೊಂಡು ಕಡೆಗೆ ಧರ್ಮಸ್ಥಳದ ಸೋ ಕಾಲ್ಡ್ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಅಂಗಳಕ್ಕೆ ಬಂದು ತಲುಪಿದೆ. ಅಷ್ಟೇ ಅಲ್ಲ ಅವರಿಗೆ ಉರುಳಾಗುತ್ತಾ ಸಾಗಿದೆ. ಇವರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿದೆ. Dharmasthala_Templeಇಂದು ಸೌಜನ್ಯ ಹತ್ಯೆಯ ಹಿಂದೆಯೇ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಕಳೆದ ಕೆಲವು ವರ್ಷಗಳಿಂದ ನಿಗೂಢ ಕೊಲೆಗಳು ಮತ್ತು ಅದು ಮುಚ್ಚಿ ಹಾಕಿದ ಪ್ರಭಾವಶಾಲಿ ವ್ಯಕ್ತಿ ಮತ್ತು ಸಂಸ್ಥೆಗಳ ಕೈವಾಡ ಇಂದು ಬಯಲಿಗೆ ಬರುತ್ತಿದೆ.

ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಕೆಲವು ವರ್ಷಗಳಿಂದ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಮುತ್ತ ನಡೆದಿದೆ ಎನ್ನಲಾದ ಕೊಲೆಗಳ ಸತ್ಯಶೋಧನೆಗಾಗಿ ಮಂಗಳೂರಿನ ಕಮ್ಯುನಿಷ್ಟ ಮಿತ್ರರು ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟ ಈ ಪ್ರಕರಣ ಮರುಜೀವ ಪಡೆದುಕೊಳ್ಳಲು ಕಾರಣ. ನಿಸ್ವಾರ್ಥದಿಂದ ಈ ಹೋರಾಟವನ್ನು ನಡೆಸಿದ ನಮ್ಮ ಕಮ್ಯುನಿಷ್ಟ ಮಿತ್ರರಿಗೆ ಕನ್ನಡಿಗರು ಧನ್ಯವಾದಗಳನ್ನು ಹೇಳಬೇಕಾಗಿದೆ. ನಮ್ಮ ಮಿತ್ರರು ಇದೇ ತಿಂಗಳು ಸೌಜನ್ಯಳ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 18ರಂದು ಬೆಳ್ತಂಗಡಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದಾರೆ. ನಮ್ಮ ಪ್ರೀತಿಯ ಗೆಳೆಯರಿಗೆ ನಾವೆಲ್ಲ ಸಂಪೂರ್ಣ ಬೆಂಬಲ ಕೊಡಬೇಕಾಗಿದೆ.

ಪ್ರಜಾಪ್ರಭುತ್ವದ ದೇಶದಲ್ಲೂ ಧರ್ಮಸ್ಥಳದಲ್ಲಿ ಈ ವೀರೇಂದ್ರ ಹೆಗ್ಗಡೆಯವರು ಅನಭಿಷಕ್ತ ರಾಜರಂತೆ ರಾಜ್ಯಾಭಾರ ನಡೆಸುತ್ತಿದ್ದಾರೆ. ಅಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅವರ ಉಕ್ಕಿನ ಹಿಡಿತ ಸಡಿಲಗೊಂಡಿಲ್ಲ. ಇಂದು ಈ ಸರ್ವಾಧಿಕಾರದ ಆಡಳಿತಕ್ಕೆ ಸಮಾಜ ಸೇವೆಯ ಮುಖವಾಡ ಗಟ್ಟಿಯಾಗಿ ಅಂಟಿಕೊಂಡಿದೆ. ಇಷ್ಟಾದರೂ ನಮ್ಮ ದೇಶದ ಪ್ರಜಾಪ್ರಭುತ್ವದ ಸಂವಿಧಾನ ಸಮಾನತೆಗಾಗಿ ಕಲ್ಪಿಸಿಕೊಟ್ಟ ಅಲ್ಪಸಂಖ್ಯಾತರಿಗಾಗಿ ಇರುವ ಮೀಸಲಾತಿಯ ಸವಲತ್ತನ್ನು ತಮ್ಮ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಬಳಸಿಕೊಳ್ಳಲು ಈ  ವೀರೇಂದ್ರ ಹೆಗ್ಗಡೆಯವರಿಗೆ ಯಾವುದೇ ಸಂಕೋಚವಿಲ್ಲ. ಮಾತೆತ್ತಿದರೆ ನಮ್ಮ ಪರಿಸರ, ನಮ್ಮ ಸಂಸ್ಕೃತಿಯ ಕುರಿತಾಗಿ ಮಾತನಾಡುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸುತ್ತಮುತ್ತ ವಸಾಹುಶಾಹಿಯ ಸಮಾಜವನ್ನು ನಿರ್ಮಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅದು ಕಲೋನಿಯಲ್ ರೂಪದಂತೆ ಗೋಚರಿಸದಿರಲು ಅಲ್ಲಿ ಉದಾರವಾದಿ ಮುಖವಾಡವನ್ನು ತೊಡಿಸಲಾಗಿದೆ. ಇದಕ್ಕೆ ಪೂರಕವಾಗಿ ವೀರೇಂದ್ರ ಹೆಗ್ಗಡೆಯವರ ಸಂಘ ಸಂಸ್ಥೆಗಳ ಸಮಾಜ ಸೇವೆಯ ಗರಿಗಳು ಮುಡಿಗೇರಿರುವುದು ಪ್ರಜ್ಞಾವಂತರಲ್ಲಿ ಅಚ್ಚರಿ ಮೂಡಿಸಿದೆ. ಈ ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ ಮೂಲಭೂತವಾದವನ್ನು ಪ್ರಗತಿಪರರು ಬಿಚ್ಚಿ ತೋರಿಸಿದರೆ ಬೆಂಬಲಿಗರು ಅದನ್ನು ಅಲ್ಲಗೆಳೆಯದೆಯೇ ಬದಲಾಗಿ ಹೆಗ್ಗಡೆಯವರ ಸಮಾಜಸೇವೆಯ ಪಟ್ಟಿಗಳನ್ನು ನೀಡಿ ಇದೇ ಅವರ ಅಸ್ಮಿತೆ ನೆನಪಿರಲಿ ಎಂದು ತಾಕೀತು ಮಾಡುತ್ತಾರೆ. ಇಂದು ಧರ್ಮಸ್ಥಳದ ಧಾರ್ಮಿಕತೆಯ ಅಮಾನವೀಯ ಅಟ್ಟಹಾಸವನ್ನು Sowjanya-Rape-Murderದೈವತ್ವದ ಪವಾಡವಾಗಿ ಬಳಸಿಕೊಂಡಿರುವುದು ವೀರೇಂದ್ರ ಹೆಗ್ಗಡೆಯವರ ಚಾಣಾಕ್ಷತೆ ಎನ್ನುವದರಲ್ಲಿ ಅನುಮಾನವೇ ಇಲ್ಲ. ಅಲ್ಲಿನ ಗುಲಾಮಿತನವನ್ನು ಭಕ್ತಿಯ ಪರಾಕಷ್ಟೆಯೆಂಬಂತೆ ಜಗಜ್ಜಾಹೀರುಗೊಳಿಸಿರುವುದು ವೀರೇಂದ್ರ ಹೆಗ್ಗಡೆಯವರ ಬಲು ದೊಡ್ಡ ಮಾರ್ಕೆಟಿಂಗ್‌ ಸಕ್ಸೆಸ್. ಅಲ್ಲಿನ ನಾಗರಿಕರು ಚಿಂತನೆಗೆ ಒರೆ ಹಚ್ಚಬೇಕಾದಂತಹ ತಮ್ಮದೇ ಆದ ಮಿದುಳನ್ನು ಮೌನವಾಗಿ ನಿಷ್ಕ್ರಿಯೆಗೊಳಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಪದತಲದಲ್ಲಿ ಮುಡಿಪಾಗಿರಿಸಿದ್ದಾರೆ. ಕಲೋನಿಯಲ್ನ ಈ ದಿಗ್ವಿಜಯದ ಫಲವಾಗಿ  ಅಲ್ಲಿನ ‘ಒಡೆಯ-ಗುಲಾಮ’ ವ್ಯವಸ್ಥೆ ಗುರು-ಶಿಷ್ಯ ಸಂಬಂಧದ ಮುಖವಾಡ ಧರಿಸಿದೆ. ಹಾಗಾದಲ್ಲಿ ವೀರೇಂದ್ರ ಹೆಡೆಯವರ ಸಾಮ್ರಾಜ್ಯದಲ್ಲಿ ಆಧುನಿಕತೆಯ, ವೈಚಾರಿಕತೆಯ ವ್ಯಾಖ್ಯಾನವೇನು?? ಸ್ವಘೋಷಿತ ಧಾರ್ಮಿಕ ನಾಯಕನ ಈ ಸಕ್ಸೆಸ್ ಓಟ ಎಗ್ಗಿಲ್ಲದೆ ಜನಬೆಂಬಲ ಪಡೆದುಕೊಳ್ಳತೊಡಗಿದರೆ ಇನ್ನೆಲ್ಲಿದೆ ಮಾನವೀಯ ನಾಯಪರವಾದ ಸಂವಾದ?? ಇನ್ನೆಲ್ಲಿದೆ ಹೃದಯ ವೈಶಾಲ್ಯತೆ?

ಈ ವೀರೇಂದ್ರ ಹೆಗ್ಗಡೆಯವರ ಈ ಶಕ್ತಿಕೇಂದ್ರ ಯಾವುದೇ ಬಗೆಯ ಹೊನ್ನಾಳಿ ಹೊಡೆತಕ್ಕೂ, ಬಲವಾದ ಸುತ್ತಿಗೆ ಏಟಿಗೂ ಒಂದಿಂಚೂ ಅಲ್ಲಾಡದಿರಲು ಕಾರಣವೇನು?? ಧರ್ಮಸ್ಥಳ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ಪ್ರಕರಣಗಳು ಸೂಕ್ತವಾಗಿ ತನಿಖೆಯಾಗದಂತೆ ತಡೆಯುತ್ತಿರುವ ಕಾಣದ ಕೈಗಳಾವವು?? ಅಲ್ಲಿನ ಪೋಲೀಸರು ನಿಷ್ಪಕ್ಷಪಾತ ತನಿಖೆ ನಡೆಸದಂತೆ ನಿಗ್ರಹಿಸುತ್ತಿರುವ ರಾಜಕೀಯ ಶಕ್ತಿಗಳಾವುವು?? ಉತ್ತರ ಕ್ಲಿಷ್ಟವೇನಲ್ಲ. ತುಂಬಾ ಸರಳ.

ಸೀನ್ 1:
ಈ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಕೊಲೆ ಸಂಚಿನ ಆರೋಪ ಎದುರಿಸುತ್ತಿರುವಂತಹ ಈ ಸೂಕ್ಷ್ಮ ಸಂದರ್ಭದಲ್ಲಿ  ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ಬುದ್ಧಿಜೀವಿ ರಾಜಕಾರಣಿ ಎಂದೇ ಪ್ರಖ್ಯಾತರಾದ ಕನ್ನಡ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರೂ ಆಗಿರುವ ರಾಜಕಾರಣಿ ಬಿ.ಎಲ್. ಶಂಕರ್ ಏಕಾಏಕಿ ಅವರಿಗೆ ಬೆಂಬಲ ಸೂಚಿಸುತ್ತಿರುವುದರಲ್ಲಿ ಈ ಉತ್ತರ ಅಡಗಿದೆ.

ಸೀನ್ 2:
17ನೇ ಅಕ್ಟೋಬರ್ 2013ರಂದು ತನ್ನ ಶಕ್ತಿಯನ್ನು ಸಾಬೀತುಪಡಿಸಲು ಉಜಿರೆಯಲ್ಲಿ ರಾಜಕಾರಣಿಯಂತೆ ತನ್ನ ಬೆಂಬಲಿಗರ ಸಮಾವೇಶ ನಡೆಸಿದ ವೀರೇಂದ್ರ ಹೆಗ್ಗಡೆಯವರೊಂದಿಗೆ ನಾಚಿಕೆ, ಮಾನವಿಲ್ಲದೆ ವೇದಿಕೆ ಹಂಚಿಕೊಂಡ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವೀರೇಂದ್ರ ಹೆಗ್ಗಡೆಯವರ ಪರವಾಗಿ ಜಿದ್ದಿಗೆ ಬಿದ್ದವರಂತೆ ಮಾತನಾಡಿದರು. ಇವರಿಗೆ ಸಂವಿಧಾನದ ಆಶಯಗಳೇ ಮರೆತುಹೋಗಿದ್ದು ದುರಂತವಲ್ಲದೇ ಮತ್ತಿನ್ನೇನು ?? ನೆನಪಿರಲಿ ಇವರೆಲ್ಲ ಸೆಕ್ಯುಲರ್ ರಾಜಕಾರಣಿಗಳು.

ಸೀನ್ 3:
17ನೇ ಅಕ್ಟೋಬರ್ 2013ರಂದು ಬೆಂಗಳೂರಿನಲ್ಲಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಸಭ್ಯ, ನಿಷ್ಠಾವಂತ, ಶಿಕ್ಷಿತ, ಸೆಕ್ಯುಲರ್ ರಾಜಕಾರಣಿ ಎಂದೇ ಪ್ರಖ್ಯಾತರಾದ  ಕಾಂಗ್ರೆಸ್‌ನ ಸುದರ್ಶನ್, ಜನಪರ ರಾಜಕಾರಣಿ ಎಂದು ಪ್ರಸಿದ್ಧಿ ಪಡೆದ ಸಿಂಧ್ಯಾ, ಮತಾಂಧ ರಾಜಕಾರಣಿ ಸಿ.ಟಿ.ರವಿ, ಕನ್ನಡ ಚಲನಚಿತ್ರ ರಂಗದ ಗಣ್ಯರು ಮತ್ತು ಪ್ರಖ್ಯಾತ, ಜಾತ್ಯಾತೀತ, ಸೆಕ್ಯುಲರ್ ಸಾಹಿತಿಗಳಾದ ಕಮಲಾ ಹಂಪಾನಾ ಮತ್ತು ಇತ್ಯಾದಿ, ಇತ್ಯಾದಿ, ಇತ್ಯಾದಿ ಮುಖಂಡರು!!

ಸೀನ್ 4:
ಕೇವಲ ಕನ್ನಡ ಸಾಹಿತ್ಯ ಸಂಬಂದಿತ ವಿವಾದಗಳಿಗೆ ಮಾತ್ರ ತೀಕ್ಷಣವಾಗಿ ಪ್ರತಿಕ್ರಿಯಿಸಿ ಅಭಿವ್ಯಕ್ತಿ ಸ್ವಾತಂತ್ರ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಮುಗಿಲುಮುಟ್ಟುವಂತೆ ಘೋಷಿಸುವ ನಮ್ಮ ಬಹುಪಾಲು ಸಾಹಿತಿಗಳು ಮತ್ತು ವಿಮರ್ಶಕರು ಸಾಹಿತ್ಯೇತರವಾದ ಯಾವುದೇ ಬಗೆಯ ಶೋಷಣೆಯ ಕುರಿತಾಗಿ ತಳೆಯುವ ದಿವ್ಯ ನಿರ್ಲಕ್ಷ್ಯ, ನ್ಯಾಯದ, ಸಮತಾವಾದದ ಪರವಾಗಿ ಚಳುವಳಿ ನಡೆಸುವ ಚಳುವಳಿಗಾರರ ಕುರಿತಾದ ಈ ಯುಜಿಸಿ ಪಂಡಿತರ ಅಸಡ್ಡೆ ಇವರ ಕುರಿತಾಗಿ ನಮ್ಮಲ್ಲಿ ಅಸಹ್ಯ ಹುಟ್ಟಿಸಲು ಮಾತ್ರ ಸಾಧ್ಯವಷ್ಟೇ. ಇವರೆಲ್ಲ ತಿರಸ್ಕಾರಕ್ಕೆ ಮಾತ್ರ ಅರ್ಹರು. ಕನ್ನಡಿಗರು ಇವರ ಬೌದ್ಧಿಕ ಅಹಂಕಾರವನ್ನು ನಿರಾಕರಿಸಿ ಎಷ್ಟು ಬೇಗ ಮೂಲೆಗೆ ಎಸೆಯುತ್ತಾರೋ ಅಷ್ಟು ಒಳ್ಳೆಯದು. ಚಿಂತಕರು ಹೇಳಿದಂತೆ ಸಮತಾವಾದದ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾದದ್ದೇನೆಂದರೆ ಪ್ರಜ್ಞಾವಂತರ, ಅಧಿಕಾರಶಾಹಿಯ ದಿವ್ಯ ಮೌನ. ಅನ್ಯಾಯದ, ಅತ್ಯಾಚಾರದ ವಿರುದ್ಧ ತುಟಿಬಿಚ್ಚದ ಭೀಕರವಾದ ಈ ಮೌನ ದಿನಗಳೆದಂತೆ ಒಂದೇ ಏಟಿಗೆ ಎಲ್ಲಾ ಬಗೆಯ ಮಾನವೀಯ, ಜನಪರ ಚಳುವಳಿಗಳನ್ನು ನಾಶಮಾಡಬಲ್ಲದು. ಅಂದರೆ ನ್ಯಾಯದ ಪರವಾಗಿ ಹೋರಾಟ ನಡೆಸುತ್ತಿರುವ ಚಳುವಳಿಗಾರರ ಪರವಾಗಿ ನೀವು ಮಾತನಾಡಲಿಲ್ಲವೆಂದರೆ ನೀವು ನಮ್ಮ ವಿರುದ್ಧ ಇದ್ದೀರಿ ಎಂಬುದಷ್ಟೇ ಈ ಭೀಕರ ಮೌನದ ತಾತ್ಪರ್ಯ. ಈ ಅತ್ಯಾಚಾರ, ಹಲ್ಲೆಗಳನ್ನು ನಡೆಸುವ ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸುವವರೆನ್ನಲ್ಲ ತಂಟೆಕೋರರೆಂದು ವ್ಯಾಖ್ಯಾನಿಸುವ ಗುಂಪಿಗೆ ಈ ಮೌನಧಾರಿಗಳೂ ಸೇರಿಕೊಂಡಿದ್ದಾರೆ ಎಂಬುದು ಸೂರ್ಯ ಸ್ಪಷ್ಟ.

ಸೀನ್ 5 :
ಬದಲಾವಣೆಯ ತಂಗಾಳಿ ಬೀಸಿದೆ ಎನ್ನುವ ಹೆಗ್ಗಳಿಕೆಯೊಂದಿಗೆ ಗದ್ದುಗೆ ಹಿಡಿದಿರುವ ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ದಿವ್ಯ ಮೌನದ ಅರ್ಥ ಬಿಡಿಸಿ ಹೇಳಬೇಕೆ ?? ತನ್ನ ರಾಜ್ಯಭಾರದಲ್ಲಿ ಯಾವುದೇ ಪ್ರಜೆಗೆ ಅನ್ಯಾಯವಾದರೂ ತನ್ನ ಶಾಸಕಾಂಗ ಮತ್ತು ಕಾರ್ಯಾಂಗವು ಆತನ/ಆಕೆಯ ಪರವಾಗಿ ಬೆಂಬಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆನ್ನುವುದು ಸಂವಿಧಾನ ಮೂಲ ಆಶಯವೆಂಬುದು ನಮ್ಮ ಮಾನವೀಯ ರಾಜಕಾರಣಿ ಸಿದ್ಧರಾಮಣ್ಣನವರಿಗೆ ಮರೆತು ಹೋಯಿತೆ? ಅಥವಾ ಜಾಣ ಮೌನವೇ !! ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಮತ್ತು ಸೌಜನ್ಯ ಕೊಲೆ ಪ್ರಕರಣ ಮತ್ತು ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಕೊಲೆಗಳ ವಿರುದ್ಧದ ತನಿಖೆ ಮುಗಿಯುವವರೆಗೂ ತನ್ನ ಸರ್ಕಾರದ ಮಂತ್ರಿಗಳಿಗೆ, ತನ್ನ ಪಕ್ಷದ ಶಾಸಕರಿಗೆ, ಕಾರ್ಯಕರ್ತರಿಗೆ ನೀತಿಸಂಹಿತೆಯನ್ನು ಬೋಧಿಸಿ ಈ ಹೆಗ್ಗಡೆಯವರೊಂದಿಗೆ ಸಮಾನ ದೂರದಲ್ಲಿರಬೇಕೆಂದು ಆದೇಶಿಸಲು ಸಿದ್ಧರಾಮಯ್ಯನವರಿಗೆ ಇರುವ ತೊಂದರೆಯಾದರೂ ಏನು? ಅದು ಒಂದೇ ತೊಂದರೆ, ಅದು ರಾಜಕೀಯ ಇಚ್ಛಾಶಕ್ತಿಯ ಕೊರತೆ.

ಬಹುಮತವೇ ನಿರ್ಣಾಯಕವಾಗುವಂತಹ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವೀರೇಂದ್ರ ಹೆಗ್ಗಡೆಯಂತಹ ಅತಿರಥರಿಗೆ ರಾಜ್ಯಾದ್ಯಾಂತ ಈ ನಿಗೂಢ ಬಹುಮತವನ್ನು ಗಳಿಸುವುದು ನೀರು ಕುಡಿದಷ್ಟೇ ಸುಲಭ. ಈ ನಿಗೂಢ ಬಹುಮತವನ್ನು ಆಧಾರವಾಗಿಟ್ಟುಕೊಂಡು ಶತಮಾನಗಳವರೆಗೆ ತನ್ನ ಸ್ಥಾನ ಮಾನವನ್ನು ಅಭಾದಿತವಾಗಿ ಕಾಪಾಡಿಕೊಳ್ಳುವ ನೈಪುಣ್ಯತೆಯೂ ವೀರೇಂದ್ರ ಹೆಗ್ಗಡೆಯವರಿಗೆ ಗೊತ್ತು.  ಸ್ನೇಹ – ಪ್ರೀತಿ – ಭಕ್ತಿಯ ಅಪೂರ್ವ ಸಮ್ಮಿಳನದ ಫಲವನ್ನು ಪಡೆದುಕೊಳ್ಳುವ ಕಲೆಗಾರಿಕೆ ಈ ವೀರೇಂದ್ರ ಹೆಗ್ಗಡೆಯವರಿಗೆ ಸಿದ್ಧಿಸಿದೆ.

ಆದರೆ ಇದನ್ನು ವಿರೋಧಿಸುವ ನೈತಿಕತೆ ಮತ್ತು ಪ್ರಾಮಾಣಿಕತೆ ನಮಗೆ ಸಿದ್ಧಿಸಿಲ್ಲವಲ್ಲ! ಇದಲ್ಲವೇ ದುರಂತ.

12 thoughts on “ಯಾರ ಜಪ್ತಿಗೂ ಸಿಗದ ಧರ್ಮಸ್ಥಳದ ಕಲೋನಿಯಲ್ ಪಟ್ಟಭದ್ರ ವ್ಯವಸ್ಥೆ

  1. ಮೈಕಲ್

    ಕಮ್ಯುನಿಷ್ಟ್ ಪಾರ್ಟಿ ಮತ್ತು ಕೆಲವೇ ಇತರ ಪಾರ್ಟಿಗಳನ್ನು ಬಿಟ್ಟು ಇತರ ಎಲ್ಲಾ ಪಾರ್ಟಿಗಳ ಖಜಾನೆ ಧರ್ಮಸ್ಥಳದಲ್ಲಿರಿದೆ. ಗಟ್ಟಿಯಾಗಿ ಯಾರೂ ದನಿ ಎತ್ತುವಂತಿಲ್ಲ! ಮೌಡ್ಯತೆ ತುಂಬಿದ ಜನ ನ್ಯಾಯ ಕೇಳಲು ಅಲ್ಲಿಯೇ ಮೊರೆ ಹೋಗುತ್ತಾರೆ! ದನಿ ಎತ್ತಿದವರನ್ನು ಧಮನಿಸುತ್ತಾರೆ. ಮಾನ್ಯ ಸಿದ್ದರಾಮಯ್ಯನವರಿಗೆ ತಪ್ಪು ಮಾಹಿತಿ ಕೊಟ್ಟಿರುತ್ತಾರೆ. ಅವರ ಮೇಲೆ ನಮ್ಅಗೆ ವಿಸ್ವಾಸ ಇದೆ. ಅವರು ಈ ಕೂಡಲೇ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಇನ್ಮುಂಚೆ ಇಂಥಾ ದೌರ್ಜನ್ಯಗಳಾಗದಂತೆ ಕ್ಷೇತ್ರವನ್ನು ಮುಜುರಾಯಿ ಇಲಾಖೆಯ ಸುಪರ್ದಿಗೆ ಒಳಪಡಿಸುವಂತೆ ಒತ್ತಾಯಿಸಬೇಕು

    Reply
  2. Ananda Prasad

    ಸೌಜನ್ಯ ಕೊಲೆ ಪ್ರಕರಣದಲ್ಲಿ ಈಗ ನಡೆಯುತ್ತಿರುವ ಹೋರಾಟ ನಿಜವಾಗಿ ಪ್ರಜಾಪ್ರಭುತ್ವ ಹಾಗೂ ನ್ಯಾಯದ ಪರವಾಗಿರುವವರು ಹಾಗೂ ಅನ್ಯಾಯ ಹಾಗೂ ಊಳಿಗಮಾನ್ಯ ವ್ಯವಸ್ಥೆಯ ಸಮರ್ಥಕರ ನಡುವಿನ ಹೋರಾಟವಾಗಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷದ ‘ಬಿ’ ಟೀಮಿನಂತೆ ನಡೆದುಕೊಳ್ಳುತ್ತಿರುವುದು ನಾಚಿಕೆಗೇಡು. ಮಂತ್ರಿ ವಿನಯ ಕುಮಾರ ಸೊರಕೆಯವರು ಬಿಜೆಪಿಯಲ್ಲಿದ್ದಾರೋ ಅಥವಾ ಕಾಂಗ್ರೆಸ್ಸಿನಲ್ಲಿದ್ದಾರೋ ಎಂಬ ಸಂಶಯ ಜನಸಾಮಾನ್ಯರಿಗೆ ಮೂಡಿರಬಹುದು. ಸಮಾಜವಾದಿ ಹಿನ್ನೆಲೆಯ ಬಿ. ಎಲ್. ಶಂಕರ್ ಹೆಗ್ಗಡೆ ಪರವಾಗಿ ನಿಂತಿರುವುದು ನೋಡಿದರೆ ಇದು ಅವರ ಮಹಾಪತನ ಎಂದೇ ಹೇಳಬೇಕಾಗುತ್ತದೆ ಮತ್ತು ಇದು ನಿಜಕ್ಕೂ ನಾಚಿಕೆಗೇಡು. ಒಬ್ಬ ಸಮಾಜವಾದಿ ಈ ರೀತಿಯ ಪತನಕ್ಕೆ ಒಳಗಾಗುವುದು ತೀರಾ ಬೇಸರದ ವಿಚಾರ. ಬೆಂಗಳೂರಿನಲ್ಲಿ ಹೆಗ್ಗಡೆಯವರನ್ನು ಬೆಂಬಲಿಸಿ ನಡೆದ ಸಭೆಯಲ್ಲಿ ಕಮಲಾ ಹಂಪಾನಾ ಎಂಬ ಜೈನ ಮೂಲದ ಸಾಹಿತಿ ಹೊರತುಪಡಿಸಿದರೆ ಯಾವುದೇ ಖ್ಯಾತ ಸಾಹಿತಿಗಳು ಭಾಗವಹಿಸಿದ್ದು ಕಂಡುಬರಲಿಲ್ಲ. ಅಷ್ಟರ ಮಟ್ಟಿಗೆ ಕನ್ನಡ ನಾಡು ಧನ್ಯ. ಮಾಧ್ಯಮಗಳು ಮಾತ್ರ ಈ ಸಭೆಯ ಬಗ್ಗೆ ವರದಿ ಮಾಡುತ್ತಾ ಈ ಸಭೆಯಲ್ಲಿ ಖ್ಯಾತ ಸಾಹಿತಿಗಳು ಭಾಗವಹಿಸಿದ್ದರು ಎಂದೇ ಬೊಬ್ಬೆ ಹೊಡೆಯುತ್ತಿದ್ದವು.

    ಹೆಗ್ಗಡೆಯವರು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರನ್ನು ಆ ಮಂಜುನಾಥನೇ ನೋಡಿಕೊಳ್ಳುತ್ತಾನೆ ಎಂದು ತಮ್ಮ ಎಂದಿನ ಧಾಟಿಯಲ್ಲಿಯೇ ಡಯಲಾಗ್ ಬಿಟ್ಟಿದ್ದಾರೆ. ಸೌಜನ್ಯಳಂಥ ಬೆಳೆದು ಬಾಳಬೇಕಾದ ನಿಷ್ಪಾಪಿ, ಅಮಾಯಕ ಹೆಣ್ಣುಮಗಳನ್ನು ಅತ್ಯಂತ ಬರ್ಬರವಾಗಿ ಅತ್ಯಾಚಾರವೆಸಗಿ ಕೊಲ್ಲುವಾಗ ಕೊಲ್ಲುವವರನ್ನು ತಡೆಯುವ ಸಾಮರ್ಥ್ಯ ಇಲ್ಲದ ಮಂಜುನಾಥ/ಅಣ್ಣಪ್ಪ ಇವರ ನೋಡಿಕೊಳ್ಳುವ ಸಾಮರ್ಥ್ಯ ಎಷ್ಟು ಎಂಬುದು ಸಾಬೀತಾಗುತ್ತದೆ. ಮಂಜುನಾಥ/ಅಣ್ಣಪ್ಪ ದೇಶದ/ರಾಜ್ಯದ ಇತರ ಸಾವಿರಾರು ದೇವ/ದೇವತೆಗಳಂತೆ ಒಬ್ಬನೇ ಹೊರತು ವಿಶೇಷ ಸಾಮರ್ಥ್ಯ ಇರುವ ದೇವರು ಅಲ್ಲ ಎಂಬುದು ಧರ್ಮಸ್ಥಳದಲ್ಲಿ ನಡೆದ ಅನಾಚಾರ, ಕೊಲೆ, ದೌರ್ಜನ್ಯದ ಘಟನೆಗಳಿಂದ ಸಾಬೀತಾಗುತ್ತದೆ. ವಾಸ್ತವವಾಗಿ ನೋಡುವುದಾದರೆ ಧರ್ಮಸ್ಥಳದಲ್ಲಿ ನಡೆಯುವ ಅನಾಚಾರ ನೋಡಿದರೆ ಅದನ್ನು ‘ಅಧರ್ಮಸ್ಥಳ’ ಎಂದು ಕರೆಯುವುದೇ ಹೆಚ್ಚು ಸೂಕ್ತ. ಇಲ್ಲಿಗೆ ದೂರದೂರುಗಳಿಂದ ಅಪಾರ ಹಣ ಹಾಗೂ ಸಮಯ ವ್ಯಯ ಮಾಡಿ ಬರುವುದರ ಬದಲು ತಮ್ಮ ತಮ್ಮ ಊರುಗಳಲ್ಲಿ ಇರುವ ದೇವರಿಗೆ ನಡೆದುಕೊಳ್ಳುವುದು ಎಷ್ಟೋ ಮೇಲು. ದೇವರಲ್ಲಿ ಮೇಲು ಕೀಳು; ಶ್ರೇಷ್ಠ, ಕನಿಷ್ಠ ಎಂಬ ಭೇದ ಇಲ್ಲದಿರುವಾಗ ಅಪಾರ ಹಣ ಖರ್ಚು ಮಾಡಿ ಇಲ್ಲಿಗೆ ಬರುವ ಅಗತ್ಯ ಏನು ಎಂಬ ಬಗ್ಗೆ ಜನತೆ ಯೋಚಿಸಬೇಕು. ಧರ್ಮಸ್ಥಳದ ಬಗ್ಗೆ ಬಹಳ ಹಿಂದಿನಿಂದಲೂ ಕಥೆ ಕಟ್ಟಿ ಜನರನ್ನು ಭ್ರಮಾಧೀನರನ್ನಾಗಿ ಮಾಡಲಾಗಿದೆಯೇ ಹೊರತು ಅಲ್ಲಿ ವಿಶೇಷವೇನೂ ಇಲ್ಲ. ಎಲ್ಲ ದೇವಾಲಯಗಳಂತೆ ಅಲ್ಲಿಯೂ ಒಂದು ದೇವರು ಇರುವುದು ಅಷ್ಟೇ. ಇದನ್ನು ನಮ್ಮ ಜನ ಅರ್ಥ ಮಾಡಿಕೊಂಡರೆ ಒಳ್ಳೆಯದು.

    Reply
  3. Srini

    Mr.Hegde himself is asking for CBI probe…What is stoping Mr.CM to do so? There is no point blaming Mr.Hegde without any proper investigation.

    Reply
  4. Ananda Prasad

    ಸೌಜನ್ಯ ಕೊಲೆಯ ಸಿಬಿಐ ತನಿಖೆಯಿಂದ ಪ್ರಯೋಜನ ಆಗುತ್ತದೆಯಾ ಎಂಬ ಪ್ರಶ್ನೆಯೂ ಇದೆ ಏಕೆಂದರೆ ಸಿಬಿಐ ಆಳುವ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುವ ಸಂಸ್ಥೆ ಎಂದು ಎಲ್ಲರೂ ಆಪಾದಿಸುತ್ತಾರೆ. ಹೀಗಿರುವಾಗ ಸಿಬಿಐ ತನಿಖೆಯಿಂದಲೂ ಪ್ರಯೋಜನ ಆದೀತು ಎಂಬುದಕ್ಕೆ ಆಧಾರಗಳಿಲ್ಲ. ಸುಪ್ರೀಂ ಕೋರ್ಟಿನ ನಿರ್ದೇಶನದಲ್ಲಿ ಸಿಬಿಐ ತನಿಖೆ ಆದರೆ ಏನಾದರೂ ಪ್ರಯೋಜನ ಆದೀತೋ ಏನೋ? ವಾಸ್ತವವಾಗಿ ಕೊಲೆ ನಡೆದಾಗಲೇ ಬಲವಾದ ಜೈವಿಕ ಸಾಕ್ಷ್ಯವಾದ ಅತ್ಯಾಚಾರಕ್ಕೊಳಗಾದ ವ್ಯಕ್ತಿಯ ಬಟ್ಟೆ ಬರೆ ಅಥವಾ ಗುಪ್ತಾಂಗದಲ್ಲಿ ಲಭ್ಯವಿರುವ ವೀರ್ಯಾಣುಗಳನ್ನು ಸಂಗ್ರಹಿಸಿ ಅವುಗಳಲ್ಲಿರುವ ಡಿ. ಎನ್. ಎ. ಮಾದರಿಯ ದಾಖಲೆ ಮಾಡಿ ಇಟ್ಟಿದ್ದರೆ ಆಪಾದಿತ/ಅನುಮಾನಿತ ವ್ಯಕ್ತಿಯ ಡಿ. ಎನ್. ಎ. ಮಾದರಿಯ ಜೊತೆ ಹೋಲಿಸಿ 100% ಒಬ್ಬ ವ್ಯಕ್ತಿ ಅಪರಾಧಿ ಹೌದೋ ಅಲ್ಲವೋ ಎಂದು ವೈಜ್ಞಾನಿಕವಾಗಿ ಸಾಬೀತು ಮಾಡಲು ಸಾಧ್ಯವಾಗುತ್ತಿತ್ತು. ಈಗ ಪೋಲೀಸರ ಬಳಿ ಜೈವಿಕ ಸಾಕ್ಷ್ಯಗಳು ಇರುವ ಸಂಭವ ಇಲ್ಲ. ಕೊಲೆ ನಡೆದ ನಂತರ ಪೊಲೀಸರು ಸೌಜನ್ಯ ಮನೆಗೆ ತೆರಳಿ ಅಲ್ಲಿಂದ ಸೌಜನ್ಯ ಬಟ್ಟೆ ಬರೆಗಳನ್ನು ಹೋಲಿಕೆ ಮಾಡಿ ನೋಡಲು ಎಂದು ತೆಗೆದುಕೊಂಡು ಬಂದು ಅವುಗಳನ್ನು ಶವದ ಮೇಲೆ ಹಾಕಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆಪಾದಿಸುತ್ತಾ ಇರುವ ಕಾರಣ ಘಟನೆ ನಡೆದ ಸಂದರ್ಭದಲ್ಲಿ ಇದ್ದ ಬಟ್ಟೆ ಬರೆಗಳನ್ನು ನಾಶ ಮಾಡಲಾಗಿದೆ ಎಂಬ ಅಂಶ ಕಂಡು ಬರುತ್ತಾ ಇದೆ. ಹೀಗಾಗಿ ಬಲವಾದ ಜೈವಿಕ ಸಾಕ್ಷ್ಯ ಆಗಬಹುದಾಗಿದ್ದ ವಸ್ತು ನಾಶವಾಗಿದೆ. ಇನ್ನೇನಿದ್ದರೂ ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಪೋಲೀಸ್ ಅಧಿಕಾರಿಯ ತೀವ್ರ ವಿಚಾರಣೆಯಿಂದ ಅಥವಾ ಸಂತ್ರಸ್ತ ಕುಟುಂಬದ ಸದಸ್ಯರು ಆಪಾದಿಸುತ್ತಿರುವ ವ್ಯಕ್ತಿಗಳ ತೀವ್ರ ವಿಚಾರಣೆಯಿಂದಷ್ಟೇ ಸತ್ಯ ಹೊರಬರಲು ಸಾಧ್ಯ. ಸಂತ್ರಸ್ತ ಕುಟುಂಬ ಆಪಾದಿಸುತ್ತಿರುವ ಆಪಾದಿತನೊಬ್ಬ ಘಟನೆ ನಡೆದ ಸಮಯದಲ್ಲಿ ವಿದೇಶದಲ್ಲಿ ಇದ್ದದ್ದು ನಿಜವೋ ಎಂಬ ಬಗ್ಗೆ ವೀಸಾ ದಾಖಲೆಗಳನ್ನು ಅಧಿಕೃತ ಮೂಲಗಳಿಂದ ಪಡೆದು ಪರಿಶೀಲಿಸಬೇಕಾಗಿದೆ.

    Reply
  5. ADESH GAONKAR

    plz dont blame anyone without proof…..if have any proof plz bring it out,and present to investigating,officer in front of media………

    Reply
  6. Sandeep Shetty

    Why there is hit and run kind of statements. If there are really so many murder/rapes happening around Dharmasthala, reveal those as case by case(As scene by scene in above article).

    Reply
  7. Naveen

    Yes. Everybody is talking in hit n run style without piinting to specific incident. I support that this murder case need to be probed and guilty should be ounished. But why everybody blaming Dharmaashikaari? Its pity that blame should go to govt for its inqction but unfortunately its not BJP govt to blame it for every wrong evil on earth!

    we see Dharmasthala is a big tourist destination and all sort of people visit all places. Any body can commit crime and run away! Now dharmadhikaari should take blame forever just because some aesthic people grabbed opportunity to put mud on religious dharmaadhikaari.

    com/ CPI communists dont beleive in god or religious activities. Now they seized opportunities and making use of it.
    and its pity these guys still dragging BJP into it and giving benefit of doubt to congress n its cm!!

    Naveen

    Reply
  8. yathish kumar

    ಕಮ್ಯುನಿಷ್ಟರು 100 % ಹಿಂದೂ ವಿರೋದಿಗಳು ಕೆಲವು ವರ್ಷದ ಹಿಂದೆ ಇದೇ ಮತಾಂಧ ಕಮ್ಯುನಿಷ್ಟರು ಹಿಂದೂಗಳ ಪವಿತ್ರ ಉಡುಪಿ ಕೃಷ್ಣ ಮಟ ಮತ್ತು ಸುಬ್ರಮಣ್ಯ ದಲ್ಲಿ ಇದೇ ತರಹದ ಪ್ರತಿಬಟನೆ ಮಾಡಿ ತಮ್ಮ ಬೇಳೆ ಬೈಸಿ ಕೊಂಡಿರುವುದು ಎಲ್ಲರಿಗು ಗೊತ್ತು.. ಯುರೋಪ್ ಹಾಗು ಅಮೇರಿಕ ದೇಶಗಳಿಂದ ಭಾರತದ ಚರ್ಚ್ ಗಳಿಗೆ ಅಪಾರ ಹಣ ಬರುತ್ತಿದೆ.. ಹಿಂದೂಗಳು ಚರ್ಚ್ ಗಳನ್ನೂ ಮುಜುರಾಯಿ ಇಲಾಖೆಗೆ ಹಸ್ತಾಂತರಗೊಳ್ಳಬೇಕೆಂದು ಒತ್ತಡ ಹೇರಬೇಕು. ಅಮಾಯಕ ಹಿಂದುಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಕನ್ವರ್ಟ್ ಮಾಡಲು ಇದೇ ಹಣ ದುರುಪಯೋಗವಾಗುತ್ತದೆ..ಆದರೆ ಚರ್ಚ್ ನಲ್ಲಿರುವ ಕ್ರಿಶ್ಚಿಯನ್ ಫಾದರ್ ಗಳು ಮಾಡುವ gay ಸಂಸ್ಕೃತಿಯನ್ನು ಯಾರು ಮಾತಾಡುತ್ತಿಲಾ? ಸೌಜನ್ಯ ಕೊಲೆ ಪ್ರಕರಣವನ್ನು ಉಪಯೋಗಿಸಿ ಹಿಂದೂ ಧರ್ಮವನ್ನು ಹಿಂದೂಗಳ ಆರಾದ್ಯ ಸ್ಥಳವಾದ ಧರ್ಮಸ್ಥಳವನ್ನು ತೆಗಳಲು ಉಪಯೋಗಿಸಿದರೆ ಪರಿಸ್ಥಿತಿ ಸರಿಯಾಗಿ ಇರೋದಿಲ್ಲ. ನಿಮಗ ನಿಮ್ಮ ಚರ್ಚ್ ಗಳಿಗೆ ಸರಕಾರ ಹಿಂದೂ ದೇವಸ್ಥಾನದಿಂದ ಸಂಗ್ರಹಿಸಿದ ಕೋಟಿಯಾಂತರ ಹಣವನ್ನು ಮುಜುರಾಯಿ ಇಲಾಖೆ ಮುಕಾಂತರ ನೀಡುತ್ತದೆ… ಅದು ಸಾಕಾಗಲಿಲ್ಲ ಅಂತ ನೀವು ಧರ್ಮಸ್ಥಳ ಹಣವನ್ನು ಕೇಳುತ್ತಿರಬಹುದು!

    Reply
  9. Kodava

    ಸೌಜನ್ಯ ಕೊಲೆ ಪ್ರಕರಣ ಸಂಬಂಧ ವಿನಾಕಾರಣ ಶ್ರೀಕ್ಷೇತ್ರ ಧಮ೯ಸ್ಥಳದ ವಿರುದ್ಧ ಕ್ಯಾತೆ ತೆಗೆಯುವವರಿಗೆ ಇದು ಸರಿಯಾದ ಸವಾಲು.
    ಹೌದು… ಅಂದು ತಮ್ಮ ತಮ್ಮನ ಮಗ ವಿದೇಶದಲ್ಲಿದ್ದ ಎಂದು ವೀರೇಂದ್ರ ಹೆಗ್ಗಡೆಯವರು ಈಗಾಗಲೇ ಸಾಕ್ಷ್ಯ ಒದಗಿಸಿದ್ದಾರೆ. ಅದನ್ನು ಅಲ್ಲಗಳೆಯುವವರು ಆತ ಅಂದು ಭಾರತದಲ್ಲೇ ಇದ್ದ ಎಂದು ಸಾಬೀತುಪಡಿಸಲಿ.

    ಅದರ ಬದಲು ಸುಮ್ ಸುಮ್ನೆ ಹಿಂದೂ ಧಾಮಿ೯ಕ ಮುಖಂಡರು, ಕ್ಷೇತ್ರಗಳ ಬಗ್ಗೆ ವಿನಾಕಾರಣ ಕ್ಯಾತೆ ತೆಗೆದರೆ ಶ್ರೀಪತಿ ರಾವ್ ಅವರು ಹೇಳಿದಂತೆ ನಮ್ಮ ಹೀರೋ ಕೖಷ್ಣ… ಅಂದು ಆತನ ಮಾಗ೯ದಶ೯ನದಿಂದ ಅಲ್ಪಸಂಖ್ಯಾತರಾಗಿದ್ದ ಪಾಂಡವರು ಬಹುಸಂಖ್ಯಾತರಾಗಿದ್ದ ಕೌರವರ ವಿರುದ್ಧ ಜಯಗಳಿಸಿದ್ದರು. ಇಂದು ಮನಸು ಮಾಡಿದರೆ ಬಹುಸಂಖ್ಯಾತರಾಗಿರುವ ನಮಗೆ ಅದೇ ಕೖಷ್ಣನ ಮಾಗ೯ದಶ೯ನದಲ್ಲಿ ಅಲ್ಪರ.. ಐ ಮೀನ್, ಕಡಿಮೆ ಸಂಖ್ಯೆಯಲ್ಲಿರುವ ಡೋಂಗಿಗಳ ಕುತಂತ್ರ ಹತ್ತಿಕ್ಕುವುದು ಏನೇನೂ ಅಲ್ಲ…

    Reply
  10. Kodava

    ಸೌಜನ್ಯ ಅತ್ಯಾಚಾರ, ಕೊಲೆ ಮತ್ತು ವೀರೇಂದ್ರ ಹೆಗಡೆಯವರ ಕುಟುಂಬ.

    ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೆಲವು ಸಂಘಟನೆ ಮತ್ತು ವ್ಯಕ್ತಿಗಳಿಂದ ಆರೋಪಿಗಳಲ್ಲೊಬ್ಬನಾಗಿ ಹೆಸರಿಸಲ್ಪಟ್ಟ ತನ್ನ ತಮ್ಮನ ಮಗ ಘಟನೆ ನಡೆದ ದಿನದಂದು ಮತ್ತು ಇಂದೂ ಸಹಾ ವಿದೇಶದಲ್ಲಿದ್ದಾನೆಂದು ವೀರೇಂದ್ರ ಹೆಗ್ಗಡೆಯವರು ಬಹಿರಂಗವಾಗಿಯೇ ಹೇಳಿದ್ದಾರೆ.

    ಆದರೆ, ಇಂದೂ ಸಹಾ ಅವರ ಹಾಗೂ ಅವರ ಕುಟುಂಬದ ವಿರುದ್ಧ ನಿರಂತರ ದೋಷಾರೋಪ ವಿವಿಧ ರೀತಿಯಲ್ಲಿ ನಡೆಯುತ್ತಲೇ ಇದೆ.

    ಘಟನೆಗೆ ಸಂಬಂಧಿಸಿದಂತೆ, ಪಳಗಿದ ಪೊಲೀಸರಿಗಿಂತ ಮೇಧಾವಿಗಳ ರೀತಿಯಲ್ಲಿ ನೂರಾರು ರೀತಿಯ ಪ್ರಶ್ನೆ, ತರ್ಕ ಮಂಡಿಸುವವರು ಆ ಬಗೆಗೆ ಹೆಚ್ಚಿನ ಮಾಹಿತಿ ಎಲ್ಲವನ್ನೂ ತನಿಖಾ ಸಂಸ್ಥೆಗಳ ಜತೆ ಹಂಚಿಕೊಳ್ಳಲಿ. ಆದರೆ, ಧರ್ಮಸ್ಥಳ ಕ್ಷೇತ್ರ, ಅದರ ಪಾವಿತ್ರ್ಯತೆ ಮತ್ತು ಈ ಪವಿತ್ರ ಕ್ಷೇತ್ರದ ಮೇಲಿನ ಹಿಂದೂಗಳ ಧಾರ್ಮಿಕ ನಂಬಿಕೆಯ ಮೇಲೆ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಧಾಳಿ ನಡೆಸುವವರು ಮೊದಲು ವೀರೇಂದ್ರ ಹೆಗ್ಗಡೆಯವರ ಹೇಳಿಕೆಯನ್ನು ಅಲ್ಲಗಳೆದು ಅವರ ತಮ್ಮನ ಮಗ ಘಟನೆಯ ದಿನ ಭಾರತದಲ್ಲೇ ಇದ್ದ ಎಂದು ಸಾಬೀತುಪಡಿಸಲಿ. ಆಗ ಎಲ್ಲವೂ ಸ್ಪಷ್ಟವಾಗುತ್ತದೆ.

    ಅದನ್ನು ಬಿಟ್ಟು ಬರೇ ಬೊಗಳೆ ಹೊಡೆಯುವುದನ್ನು ಮುಂದುವರೆಸಿದರೆ ಈ ಎಲ್ಲ ಗಂಟಲುಬೇನೆಯವರ ಹಿಂದೆ ಹಿಂದೂ ಧರ್ಮವನ್ನು ನಾಶಪಡಿಸಬೇಕೆನ್ನುವವರ ಗುಂಪಿನ ಹುನ್ನಾರ ಇದೆಯೆಂಬುದೂ ಅಷ್ಟೇ ಸ್ಪಷ್ಟವಾಗುತ್ತದೆ.

    ನಾವು ಹಿಂದೂಗಳು… ವಿಚಾರಹೀನರೇನಲ್ಲ, ಶಕ್ತಿಹೀನರೂ ಅಲ್ಲ. ಕೃಷ್ಣ ನಮ್ಮ ಹೀರೋ. ಆತನೇ ತಾಳ್ಮೆಯಿಂದಿದ್ದೂ ನೂರು ತಪ್ಪುಗಳನ್ನು ಮನ್ನಿಸಿದ ಮೇಲೆ ಎದುರಿಲ್ಲದ, ಸಾಟಿಯಿಲ್ಲದ ಸುದರ್ಶನ ಚಕ್ರ ಪ್ರಯೋಗಿಸಿ ಶತ್ರುವಧೆ ನಡೆಸುವಂತೆ ಸಾಧಿಸಿ ತೋರಿಸಿದ್ದಾನೆ.

    ಧರ್ಮವಿರೋಧೀ ಶಿಶುಪಾಲರಿಗೆ ಅಷ್ಟು ಎಚ್ಚರ ಇದ್ದರೆ ಒಳ್ಳೆಯದು.

    Reply

Leave a Reply to ಮೈಕಲ್ Cancel reply

Your email address will not be published. Required fields are marked *