ಆತಂಕ ಸೃಷ್ಟಿಸಿ ವಿ.ವಿ. ತಡೆಯುವ ಹುನ್ನಾರ

– ಸುಧಾಂಶು ಕಾರ್ಕಳ

ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ “ಟಿಪ್ಪು ವಿವಿ: ಮತ್ತೊಂದು ಅಲಿಗಡ ವಿವಿ ಆಗಬಹುದೆ?” ಎಂಬ ತಮ್ಮ ಬರಹದಲ್ಲಿ ಲೇಖಕ ಡಾ.ಜಿ.ಬಿ.ಹರೀಶ್ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ವರದಿ ನೀಡಿರುವ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಅವರ ವರದಿಯನ್ನು ಒಪ್ಪಿಕೊಳ್ಳುತ್ತಲೇ ಮುಸ್ಲಿಮರ ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿಸಲು ಉದ್ದೇಶಿಸಿರುವ ವಿಶ್ವವಿದ್ಯಾನಿಲಯಗಳ ಅಗತ್ಯತೆಯನ್ನು ಪ್ರಶ್ನಿಸಿದ್ದಾರೆ. ಒಂದೆಡೆ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದಂತಾಗಬಾರದು, ಮತ್ತೊಂದೆಡೆ ವರದಿಯ ಶಿಫಾರಸ್ಸುಗಳು ಜಾರಿಯೂ ಆಗಬಾರದು. ಅದು ಅವರ ಜಾಣತನದ ಅಭಿಪ್ರಾಯ. ಒಟ್ಟಿನಲ್ಲಿ ಅಲ್ಪಸಂಖ್ಯಾತರು ಇದ್ದಲ್ಲೇ ಇರಬೇಕು.

ತಮ್ಮ ವಾದ ಮಂಡಿಸುವ ಧಾಟಿಯಲ್ಲಿ ಅಲಿಗಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕೋಮುಗಲಭೆಗಳಲ್ಲಿ Aligarh-muslim-univeristyಭಾಗವಹಿಸಿ ಅಲಿಗಡದ ನಿವಾಸಿಗಳಾದ ಹಿಂದೂಗಳನ್ನು ಆತಂಕಕ್ಕೆ ಒಳಪಡಿಸಿದರು ಎಂದು ಆರೋಪಿಸಿದ್ದಾರೆ. ಅಷ್ಟಕ್ಕೆ ಅವರ ವಾದ ನಿಲ್ಲುವುದಿಲ್ಲ. ಮುಂದೊಂದು ದಿನ ಉದ್ದೇಶಿತ ಟಿಪ್ಪು ವಿ.ವಿ ವಿದ್ಯಾರ್ಥಿಗಳಿಂದ ಅಂತಹದೊಂದು ವಾತಾವರಣ ಸೃಷ್ಟಿಯಾದರೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿ ಕಾಲೇಜು ಶಿಕ್ಷಣ ಪಡೆದುಬಿಟ್ಟರೆ ಅಲ್ಲಿ ಕೋಮುಗಲಭೆಗಳು ನಡೆಯುತ್ತವೆ ಎನ್ನುವ ಆಲೋಚನೆ ತೀರಾ ಸಂಕುಚಿತ ಮನಸ್ಸಿನ ಅಭಿವ್ಯಕ್ತಿ. ಒಂದು ಕೋಮಿನ ಯುವಕರನ್ನು ಹಿಂಸೆ, ಗಲಭೆ, ಭಯೋತ್ಪಾದಕ ಕೃತ್ಯಗಳಿಗೆ ಕಾರಣಕರ್ತರೆಂದು ನೋಡುವ ಜಾಗತಿಕ ದೃಷ್ಟಿಕೋನದ ಭಾಗವಾಗಿ ಹರೀಶ್ ಅವರ ಬರಹ ಕಾಣುತ್ತಿದೆ.

ಕೆಲ ವರ್ಷಗಳಿಂದ ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಚರ್ಚ್‌ಗಳ ಮೇಲೆ ದಾಳಿ ನಡೆಯಿತು. ಸೋಕಾಲ್ಡ್ ಸಂಸ್ಕೃತಿ ಉಳಿಸುವ ನೆಪದಲ್ಲಿ ಪಬ್ ದಾಳಿ ನಡೆಯಿತು. ಹೋಮ್ ಸ್ಟೇ ದಾಳಿ ನಡೆಯಿತು. ಈ ಪ್ರಕರಣಗಳಲ್ಲಿ ದಾಳಿ ಮಾಡಿ ಹಿಂಸೆಗೆ ಕಾರಣರಾದವರು ಓದಿದ ಶಾಲೆ, ವಿಶ್ವವಿದ್ಯಾನಿಲಯಗಳು ಯಾವುವು? ಅಷ್ಟೇ ಅಲ್ಲ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಅಲ್ಪಸಂಖ್ಯಾತ ಕೋಮುಗಳನ್ನು ಹೀಯಾಳಿಸುವ, ಸಮಾಜ ಸುಧಾರಕರನ್ನು ಅವಮಾನಿಸುವ ಬರಹಗಳನ್ನು ಬರೆದುಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವ ಸಣ್ಣ ಮನಸಿನ ವ್ಯಕ್ತಿಗಳು ಓದಿದ್ದು ಯಾವ ಕಾಲೇಜುಗಳಲ್ಲಿ ಎನ್ನುವುದನ್ನೂ ಒಮ್ಮೆ ನೋಡಬೇಕಲ್ಲವೆ?

ಸೂಕ್ಷ್ಮವಾಗಿ ಗಮನಿಸಿದರೆ ವ್ಯಕ್ತಿ ಪೂಜೆ, ಅಂಧ ಶ್ರದ್ಧೆ, ಪಂಕ್ತಿ ಬೇಧಗಳನ್ನು ಅನೂಚಾನವಾಗಿ ಅನುಸರಿಸಿಕೊಂಡು ಬಂದಿರುವ ಅನೇಕ ಮಠ, ದೇವಸ್ಥಾನ, ಆಶ್ರಮಗಳು ನಡೆಸುವ ಶಾಲೆ, ಕಾಲೇಜುಗಳಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ಇಂತಹ ಕೋಮು ಭಾವನೆಗಳನ್ನು ಹೊತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಆ ನಂತರವೂ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಅದೇ ಚಾಳಿಯನ್ನು ಮುಂದುವರಿಸಿ, ತಮ್ಮ ಸಂಕುಚಿತ ಅಭಿಪ್ರಾಯಗಳನ್ನು ಸಾರ್ವತ್ರಿಕ ಅಭಿಪ್ರಾಯಗಳೇನೋ ಎಂಬಂತೆ ಬಿಂಬಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. bghareesh-tumkur-univeristyಆ ಬಗ್ಗೆಯೂ ಹರೀಶ್ ಅವರು ಒಮ್ಮೆ ಕಣ್ಣು ಹಾಯಿಸಲಿ.

ಹಿಂದೊಮ್ಮೆ ಹರೀಶ್ ಅವರು ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ವಿಷಕಾರಕ ಕಾದಂಬರಿ “ಆವರಣ”ವನ್ನು ಬಲವಾಗಿ ಸಮರ್ಥಿಸುತ್ತ ಮಾತನಾಡುವಾಗ ’ಹಿಂದೂಗಳು ಇದುವರೆಗೆ ತಾಳ್ಮೆ, ಸಹನೆ ಕಾಪಾಡಿಕೊಂಡು ಬಂದಿದ್ದೇ ನಮ್ಮ ಇಂದಿನ ಸ್ಥಿತಿಗೆ ಕಾರಣ’ ಎಂದು ತಮ್ಮ ವ್ಯಥೆ ವ್ಯಕ್ತಪಡಿಸಿದ್ದರು. ಆ ಮೂಲಕ ಅವರು ಬಹುಸಂಖ್ಯಾತ ಸಮುದಾಯವನ್ನು ರೊಚ್ಚಿಗೇಳಿಸುವ ಪ್ರಯತ್ನ ಮಾಡಿದ್ದರು ಎಂದೇ ಹೇಳಬೇಕು. ಇವರು ಮುಂದೆ ಕೆಲವು ಕಾಲ ಒಂದು ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದರು ಎಂದು ಕೇಳಿದ್ದೇನೆ. ಹಾಗಾದರೆ ಒಂದು ಕೋಮಿನ ಬಗ್ಗೆ ದ್ವೇಷದ ಭಾವನೆ ಇಟ್ಟುಕೊಂಡಿರುವ ಮನುಷ್ಯ ತನ್ನ ವಿದ್ಯಾರ್ಥಿಗಳಿಗೆ ಏನು ಪಾಠ ಮಾಡಿರಬಹುದು ಎನ್ನುವುದು ನನ್ನ ಆತಂಕ.

ಹರೀಶ್ ಅವರು ಇಂತಹ ಮಾತುಗಳಿಂದ ಅಲ್ಪಸಂಖ್ಯಾತರಿಗೆ avarana-slbವಿ.ವಿ.ಯ ಅಗತ್ಯವಿಲ್ಲ ಮತ್ತು ಆ ಮೂಲಕ ಅವರಿಗೆ ಉನ್ನತ ಶಿಕ್ಷಣ ಬೇಡ ಎನ್ನುವ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೊರಹಾಕಿದ್ದಾರೆ. ಸದ್ಯ ಚಾಲ್ತಿಯಲ್ಲಿರುವ ವಿ.ವಿ.ಗಳು ಅಲ್ಪಸಂಖ್ಯಾತರನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಗಣನೀಯವಾಗಿ ಸೋತಿರುವ ಕಾರಣ ಮುಸ್ಲಿಮರಿಗೆ ಹೆಚ್ಚಿನ ಅವಕಾಶ ಇರುವ ವಿಶ್ವವಿದ್ಯಾನಿಲಯದ ಅಗತ್ಯ ಎದ್ದುಕಾಣುತ್ತಿದೆ. ಸಾಚಾರ್ ವರದಿಯ ಅಂಶಗಳನ್ನು ಒಪ್ಪುವ ನೀವು, ಸದ್ಯ ಚಾಲ್ತಿಯಲ್ಲಿರುವ ವಿ.ವಿಗಳು ಅಲ್ಪಸಂಖ್ಯಾತರಿಗೆ ಶಿಕ್ಷಣ ಕೊಡಿಸುವಲ್ಲಿ ಸೋತಿವೆ ಎನ್ನುವುದನ್ನೂ ಒಪ್ಪಲೇಬೇಕಲ್ಲ. ಈಗಲಾದರೂ ಈ ಚಾರಿತ್ರಿಕ ಅನ್ಯಾಯವನ್ನು ಸರಿದೂಗಿಸಲು ವಿಶೇಷ ಪ್ರಯತ್ನ ಅಗತ್ಯ ಎಂಬ ಸಂಗತಿಯನ್ನು ಒಪ್ಪಿಕೊಳ್ಳಲು ಏನಡ್ಡಿ?

7 thoughts on “ಆತಂಕ ಸೃಷ್ಟಿಸಿ ವಿ.ವಿ. ತಡೆಯುವ ಹುನ್ನಾರ

  1. Srinivasamurthy

    ಯಾವುದೇ ಧರ್ಮಕ್ಕಾಗಲಿ/ಜಾತಿಗಾಗಲಿ ವಿಶ್ವವಿದ್ಯಾಲಯವನ್ನು ಸ್ತಾಪಿಸಬಾರದು. ಮೀಸಲಾತಿಯನ್ನು ನೀಡಿ ವಿದ್ಯಾರ್ತಿ ಸಂಕ್ಯೆಯನ್ನು ಹೆಚ್ಚಿಸಬೇಕು. ಇದೇ ನ್ಯಾಯಯುತ ದಾರಿ. ನಮ್ಮ ನಾಡಿನಲ್ಲಿರುವವರು ಯಾವುದೇ ಕಾರಣಕ್ಕೂ ಪ್ರತ್ಯೇಕತೆಯಲ್ಲಿ ಬದುಕ ಕೂಡದು. ಅದು ನಮ್ಮ ದೇಶದ ೊಗ್ಗಟ್ಟಿಗೆ ತೊಡಕಾಗುತ್ತದೆ. ನೀವೂ ಅಶ್ಟೆ ಪ್ರತ್ಯೇಕತೆಯನ್ನು ವಯಕ್ತಿಕ ಹಿನ್ನೆಲೆಯ ಹೊರತಾಗಿ ಸಾರ್ವಜನಿಕ ನೆಲೆಯಲ್ಲಿ ಬೆಂಬಲಿಸಬಾರದೆಂದು ತಮ್ಮಲ್ಲಿ ಕಾಳಜಿಪೂರ್ವಕ ಮನವಿ.

    Reply
  2. vasanthnanth

    G.B.Harish is finally exposed. He is so retrograde. He spoke so eloquently and cite Lankesh, Tejasvi and many progressive thinkers but at the bottom he is communal. For argument shake he brought up the issues which are so traditional and unprogressive.

    Reply
  3. ಪ್ರಭುರಾಜ್ ಹರಕಂಗಿ

    ಮುಸ್ಲಿಮರೂ ಸಹ ಒಂದು ಕಾಲದಲ್ಲಿ ಹಿಂದುಗಳೇ ಆಗಿದ್ದು.. ಮೊಘಲ್ ರಾಜರ ದಬ್ಬಾಳಿಕೆಯಿಂದಾಗಿ ಮುಸ್ಲಿಮರಾಗಿದ್ದಾರೆ… ಹಾಗಾಗಿ ಅವರನ್ನ ಬೇರೆ ಧರ್ಮದವರು ಎಂದು ಪರಿಗಣಿಸದೆ.. ಹಿಂದೂ ಧರ್ಮದ ಒಂದು ಉಪಜಾತಿಯಾಗಿ ಪರಿಗಣಿಸಿ, ಎಲ್ಲಾ ಭಾರತೀಯರಂತೆ ಅವರಿಗೂ ಸಮಾನ ಅವಕಾಶ ದೊರಕಿಸಿಕೊಡಬೇಕು..!! ವಿಶೇಷ ವಿ.ವಿ ಬೇಕಾಗಿಲ್ಲಾ.. ಇರುವ ವಿದ್ಯಾಲಯಗಳಲ್ಲಿ ವಿಶೇಷ ಸೌಲಭ್ಯ ಒದಗಿಸಿಕೊಟ್ಟಲ್ಲಿ ಅವರಿಗೂ ಯಾವುದೇ ಅಸಂತೃಪ್ತಿ ಇರುವುದಿಲ್ಲಾ..

    Reply
  4. Prasanna Kumar

    ನಾಲ್ಕು ಮದುವೆ, ಆಗಿ ಹತ್ತಾರು ಮಕ್ಕಳನ್ನು ಹುಟ್ಟಿಸಿ, ವಿದ್ಯೆ ಕೊಡಲಾಗದೆ, ಮಾಧ್ಯಮಿಕ / ಹೈಸ್ಕೂಲ್ ಹಂತದಲ್ಲೇ ಶಾಲೆ ಬಿಡಿಸಿ; ಸೈಕಲ್ ಶಾಪ್ ಕೆಲಸಕ್ಕೆ, ಆಟೋ ಓಡಿಸಲಿಕ್ಕೆ, ಲಾರಿ ಕ್ಳೀನರ್ ಕೆಲಸಕ್ಕೆ ಕಳಿಸಿ; ನಮ್ಮ ಮಕ್ಕಳಿಗೆ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ದೊರೆಯುತ್ತಿಲ್ಲ ಎಂದರೆ ಯಾರು ಕಾರಣ? ಯೋಚಿಸಬೇಕಾದ ಪ್ರಶ್ನೆ ಅಲ್ಲವೇ? ಹಾಗಾಗಿ ಮುಸ್ಲಿಮರಲ್ಲಿನ ಬಡತನ ಅಜ್ಞಾನಗಳೇ ಅವರ ಉನ್ನತ ಶಿಕ್ಷಣದ ಕೊರತೆಗೆ ಕಾರಣ ಅಲ್ಲವೇ? ಆದ್ದರಿಂದ ಅವರಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಮೊದಲು ಒತ್ತು ಕೊಡಬೇಕಲ್ಲವೇ?

    ಒಮ್ಮೆ ಮಕ್ಕಳು ಕಡಿಮೆ ಆದರೆ ಅವರನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳಿಸುವ ಪ್ರಮೇಯ ಬರದೆ ಓದಿಸುತ್ತಾರೆ. ಸಹಜವಾಗಿ ಉನ್ನತ ಶಿಕ್ಷಣ ಪಡೆಯುತ್ತಾರೆ. ಅದು ಬಿಟ್ಟು ಧರ್ಮಾಧಾರಿತ ವಿಶ್ವವಿದ್ಯಾಲಯ ಸ್ಥಾಪನೆ ಸೂಕ್ತ ಅಲ್ಲ. ಇದು ಧರ್ಮಾಂಧತೆ / ಕೋಮುವಾದವನ್ನು ಸೃಷ್ಟಿಸುತ್ತದೆ ಅಷ್ಟೇ!!

    ಅಲೀಗಢ್ ಮುಸ್ಲಿಂ ವಿಶ್ವವಿದ್ಯಾಲಯ ದೇಶ ವಿಭಜನೆಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬುದು ಕಹಿಯಾದ ಸಂಗತಿಯಾದರೂ ಸತ್ಯ ಅಲ್ಲವೇ?

    Reply
    1. Munwar Ali

      ಪ್ರಸನ್ನ ಕುಮಾರ್ ಅವರೆ: ನಾಲ್ಕು ಮದುವೆ ಯಾಗುವುದು ಇಸ್ಲಾಂಮಿನಲ್ಲಿ ಕಡ್ಡಾಯವಿಲ್ಲ. ಮದುವೆ ಯಾಗುವುದು ಕಡ್ಡಾಯವಾಗಿದೆ. ನೀವು ಕುರ್-ಆನ್ನಲ್ಲಿ ಸೂರ ನಿಸಾ ಅಂತ ಒಂದು ಅಧ್ಯಾಯವನ್ನು ಓದಿ ಆಗನಿಮಗೆ ಗೊತ್ತಾಗುತ್ತದೆ.
      ಮದುವೆ ಒಂದು ಮಾಡಿ ನೀಮಗೆ ಇನ್ನೊಂದು ಮದುವೆ ಅದರೆ ಇಬ್ಬರೂ ಹೆಂಡತಿಯರನ್ನು ಸಾಕಲು ಕಷ್ಟವಾಗುತ್ತೆ ಅಂತ ಅರಿವಿದ್ದರೆ, ಅವರಿಬ್ಬರಲ್ಲಿ ನ್ಯಾಯಸಂಮ್ಮತವಾದ ಸಂಸಾರ ನಡೆಸಲು ಆಗುವುದಿಲ್ಲವಾದರೆ ಇನ್ನೊಂದು ಮಾದುವೆ ಆಗಬಾರದು…
      ನಿಮಗೆ ಗೊತ್ತೆ ಶ್ರೀ ಕೃಷ್ಣನಿಗೆ ಎಷ್ಟು ಜನ ಹಂಡತಿಯರೂ ಅಂತ 1,2,3,4……..ಎಷ್ಟೂ?
      ಮಕ್ಕಳು ಹೆಚ್ಚಾದರೆ ಪಾಲನೆ ಪೊಷಣೆ ಮಾಡಲು ಸಧ್ಯಾವಿಲ್ಲಅಂತ ಹೇಳುತ್ತಿರುವುದು ತಪ್ಪು.
      ನಿಮಗೆ ಗೊತ್ತೆ ಗಾಂಧೀಜಿ ತಮ್ಮ ಪಾಲಕರಿಗೆ ಎಷ್ಟನೆ ಮಗು ಅಂತ.
      ಕೌಶಿತ಻ಕಿ ಉಪನಿಷದ್ ಮತ್ತು ಮಹನಾರಾಯನ ುಪನಿಷದ್ ಪ್ರಕಾರ abortion ಮಾಡಿಸುವುದು ಅಪರಾಧವಾಗಿದೆ. ಕುರ್-ಆನ್ ಕುಡ ನಿಷೇಧಿಸಿದೆ….

      ದೇಶದ ಸ್ವಾತಂತ್ರ ಹೋರಟದ ಮೊದಲ ಬುನಾದಿ ಹಾಕಿದ್ದು ಮುಸಲ್ಮಾನರೇ ಹೋರತು ಮತ್ತಾರು ಅಲ್ಲ, ಅದರಲ್ಲಿ ಮೊದಲಿಗರು ಮುಸ್ಲಿಂ ವಿದ್ವಾಸರು,ಪಂಡಿತರು,ಮಹನಿಯರು.. ದೆಹಲಿಯಿಂದ – ಮಿರಠ್ ವರೆಗೂ ಸುಮಾರು ಸಾವಿರಕ್ಕಿಂತ ಹೆಚ್ಚು ವಿದ್ವಾಸರನ್ನು ಬ್ರಿಟಿಷರು ಗಲ್ಲಿಗೆರಿಸಿದು. ಕೆವಲ ಭಾರತ ಸ್ವಾತಂತ್ರಕ್ಕೆ ಹೊರಾಟ ನಡೆಸಿದ್ಕ್ಕೆ.. .

      ಬವಿಭಜನೆಗೂ ಅಲಿಗಡ್ ವಿ.ವಿ.ಕ್ಕೂ ಸಂಭಂಧವಿಲ್ಲ… ,..

      Reply
  5. bhaskara

    ಮಹನೀಯರೆ,
    ಹರೀಶರ ಮಾತಿನಲ್ಲಿ ಸತ್ವವಿದೆ, ಸತ್ಯವಿದೆ. ಅವರು ಮುಸಲ್ಮಾನರಿಗೆ ಉನ್ನತ ಶಿಕ್ಷಣ ಬೇಡ ಎಂದು ಎಲ್ಲೂ ಹೇಳೀಲ್ಲವಲ್ಲ? ಪ್ರತ್ಯೇಕ ವಿ ವಿ ಯಾಕೆ? ಮುಸಲ್ಮಾನರು, ಇಂದಿಗೂ ಬೆರೆ ಬೆರ್ ವಿ ವಿ ಗಳಲ್ಲಿ ಓದುತಿಲ್ಲವೆ? ಅವರಿಗಾಗಿಯೇ ಪ್ರತ್ಯೇಕ ವಿ ವಿ ತೆರೆದು ಅವರನ್ನು ಮುಖ್ಯವಾಹಿನಿಯಿಂದ ದೂರ ಇಡುತ್ತಿರುವುದು ಸರ್ಕಾರ. ಅದರ ಬದಲು ಅವರೂ ಎಲ್ಲರಂತೆಯೆ ಕಲಿತರೆ ಸಮಾನತೆ ಇರುುದಿಲ್ಲವೆ? ಹರೀಶ್ ಅವರನ್ನು ಸುಮ್ಮನೆ ದೂಷಿಸಲು ಬರೆದ ಕೆಟ್ಟ ಲೇಖನ ಅಷ್ಟೆ ಇದು.

    Reply
  6. Kodava

    ಜಾತಿ ಜಾತಿ ಜಾತಿ .. ಮೊದಲು ಜಾತಿಯನ್ನು ಸಮಾಜದಿಂದ ಕಿತ್ತೊಗೆಯಬೇಕು . ಆಗಲೇ ದೇಶದ ಉದ್ದಾರ ಸಾದ್ಯ . ಹೊಲಸು ತಿಂದು , ಹೊಲಸು ಮಾಡುವ ಹಾಗು ಹೊಲಸಿಗಾಗಿ ಬದುಕುವ ನೀಚ ರಾಜಕಾರಣಿಗಳಿಂದ ಮಾತ್ರ ಜಾತಿ ಒಡೆಯುವ ಹಾಗು ಜಾತಿ ರಾಜಕಾರಣ ಮಾಡಲು ಸಾದ್ಯ . ಯಾವುದೋ ಒಂದು ಪಂಗಡ ದ ಮತಕ್ಕಾಗಿ ಅವರನ್ನು ಒಲಿಸುವ ಹಟಕ್ಕೆ ಬಿದ್ದು ಮನುಷ್ಯ ಜಾತಿ ಗಳ ನಡುವೆ ತಂದು ಹಾಕುವ ಕೆಲಸವನ್ನು ಇಂದು ಒಂದು ಪಕ್ಷ ಮಾಡುತ್ತಿದೆ .

    Reply

Leave a Reply

Your email address will not be published. Required fields are marked *