ಭಯೋತ್ಪಾದಕಿ ಆಯಿಶಾ ಬಾನು !? ಸುದ್ದಿಯ ಇನ್ನೊಂದು ಮುಖ

– ನಸೂ 

ಅಯಿಶಾ ಬಾನು. ಮಂಗಳೂರಿನ ಈ ಹೆಣ್ಣು ಮಗಳು ಇಡೀ ದೇಶದಲ್ಲಿ ಈಗ ಸುದ್ದಿಯಲ್ಲಿರುವ ಹೆಣ್ಣು. ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡಿ ನರೇಂದ್ರ ಮೋದಿಯ ಹೂಂಕಾರ್ ರ್‍ಯಾಲಿಗೆ ಬಾಂಬಿರಿಸಲು ಸಹಕರಿಸಿದ ಆರೋಪ ಹೊತ್ತು ಜೈಲು ಸೇರಿದ ಮಹಿಳೆ. Aysha-Banuಲವ್ ಜೆಹಾದ್‌ನ ಭಾಗವಾಗಿ ಮುಸ್ಲಿಂ ಯುವಕನೊಬ್ಬ ಈಕೆಯನ್ನು ಮದುವೆಯಾಗಿ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದ ಎಂಬುದು ಸಂಘಪರಿವಾರಿಗಳ ಆರೋಪ. ಆದರೆ ಈ ಆಯಿಶಾ ಬಾನು ಜೆಹಾದಿ ಅಲ್ಲವೇ ಅಲ್ಲ. ಆಕೆ ತನ್ನ ಮತ್ತು ಮಕ್ಕಳ ಹೊಟ್ಟೆಗಾಗಿ ತನ್ನ ಬದುಕಿನುದ್ದಕ್ಕೂ “ಜೆಹಾದಿ” ನಡೆಸಿದ ಓರ್ವ ತಾಯಿ.

ಸರಿಸುಮಾರು 5 ವರ್ಷಗಳ ಹಿಂದಿನ ಮಾತು. ಡಿವೈಎಫ್‌ಐ ಜಿಲ್ಲಾಧ್ಯಕ್ಷ, ಗೆಳೆಯ ಮುನೀರ್ ಕಾಟಿಪಳ್ಳ ಮತ್ತು ’ದ ಹಿಂದೂ’ ಪತ್ರಿಕೆಯ ಸುದೀಪ್ತೋ ಮೊಂಡಲ್ ಜೊತೆ ನಾನು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯ ನಿರ್ವಸಿತ ಕಾಲನಿಗೆ ಬೇಟಿ ನೀಡಿ ಸಮಸ್ಯೆಗಳ ಪರಿಶೀಲನೆ ನಡೆಸುತ್ತಿದ್ದೆವು. ಅಲ್ಲಿಂದ ಮರಳಿ ವಾಪಾಸ್ಸಾಗುವ ಸಂದರ್ಭ ಮುನೀರ್ ಕಾಟಿಪಳ್ಳ “ಹಿಂದೂ ಯುವತಿಯೊಬ್ಬಳು ಮತಾಂತರಗೊಂಡು ಪಡುತ್ತಿರುವ ಕಷ್ಟದ” ಬಗ್ಗೆ ವಿವರಗಳನ್ನು ನೀಡುತ್ತಿದ್ದರು. ಸಂಘಪರಿವಾರದ ಮಂದಿ “ಲವ್ ಜೆಹಾದ್” ಬಗ್ಗೆ ಆಂದೋಲನ ಶುರುವಿಟ್ಟುಕೊಂಡಿದ್ದ ದಿನಗಳವು. ಹಿಂದೂ ಯುವತಿಯೊಬ್ಬಳು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಜೀವನ ನಡೆಸುತ್ತಿರುವ ಬಗ್ಗೆ ನಮಗೂ ಕುತೂಹಲಗಳಿದ್ದವು.Muneer Katipalla ಎಸ್‌ಇಝಡ್ ನಿರ್ವಸಿತ ಕಾಲನಿಯಿಂದ ಕೆಲವೇ ಕಿಮಿ ದೂರದಲ್ಲಿ ಹಿಂದೂ ಮತಾಂತರಿ ಯುವತಿಯ ಮನೆಯೂ ಇದ್ದಿದ್ದರಿಂದ ಅವಳ ಮನೆಗೆ ತೆರಳಿ ಮಾತಿಗೆ ಶುರುವಿಟ್ಟುಕೊಂಡೆವು.

ಆಕೆಯ ಹೆಸರು ಆಶಾ. ಕೊಡಗಿನ ವಿರಾಜಪೇಟೆ ತಾಲೂಕಿನ ದೇವಣಗೇರಿ ಗ್ರಾಮದವಳು. ದಲಿತ ಕುಟುಂಬಕ್ಕೆ ಸೇರಿದ ಆಶಾ 1995 ರಲ್ಲಿ ಮಂಗಳೂರಿನ ಬಜಪೆ ನಿವಾಸಿ ಜುಬೇರ್ ಮಹಮ್ಮದ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆಶಾಳು ವಿರಾಜಪೇಟೆಯಲ್ಲಿ ಪಿಯುಸಿ ಪೂರೈಸಿ ಮಡಿಕೇರಿಯಲ್ಲಿ ಪದವಿ ಓದುತ್ತಿದ್ದಳು. ಈ ಸಂದರ್ಭ ಮಡಿಕೇರಿಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಮಂಗಳೂರಿನ ಜುಬೇರ್ ಮಹಮ್ಮದ್ ಪರಿಚಯವಾಗಿ ಪ್ರೀತಿ ಅಂಕುರಿಸಿತ್ತು. ಆದರೆ ಎರಡೂ ಮನೆಯವರಿಗೂ ಮದುವೆ ಇಷ್ಟವಿರಲಿಲ್ಲ. ಜುಬೇರ್ ತಂದೆ ಬೀಡಿ ಕಾಂಟ್ರಾಕ್ಟರ್ ಆಗಿದ್ದರು. ತಕ್ಕಮಟ್ಟಿಗೆ ಸಿರಿವಂತರಾಗಿದ್ದರು. ಆಶಾ ಮನೆಯವರು ಅಂತರ್‌ಮತೀಯ ಮದುವೆಗೆ ಸಿದ್ದವಿರಲಿಲ್ಲ. ಈ ಸಂದರ್ಭ ಇಬ್ಬರೂ ತಮ್ಮ ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿದ್ದರು.

ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಸಹಜವಾಗಿ ಪುರುಷನ ಧರ್ಮಕ್ಕೆ ಮಹಿಳೆ ಮತಾಂತರವಾಗುವುದು ಪುರುಷ ಪ್ರಧಾನ ಸಮಾಜದಲ್ಲಿರುವ ರೂಢಿ. ಅದರಂತೆ ಆಶಾಳನ್ನು ಇಸ್ಲಾಂಗೆ ಮತಾಂತರಗೊಳಿಸಿ ಆಯಿಶಾ ಬಾನು ಎಂದು ಮರುನಾಮಕರಣಗೊಳಿಸಲಾಯಿತು. ಸ್ನೇಹಿತರ ಸಹಕಾರದೊಂದಿಗೆ ಇಸ್ಲಾಂ ಪದ್ದತಿಯಂತೆ ಮದುವೆಯೂ ನಡೆಯಿತು. ನಂತರ ಜುಬೇರ್ ತನ್ನ ಪತ್ನಿ ಆಶಾಳನ್ನು ಮಂಗಳೂರಿನ ಬಜಪೆಗೆ ಕರೆದುಕೊಂಡು ಬಂದು ಬಾಡಿಗೆಗೆ ಮನೆ ಪಡೆದು ಸಂಸಾರ ಶುರುವಿಟ್ಟುಕೊಂಡ. ಆರಂಭದ ಮೂರು ನಾಲ್ಕು ವರ್ಷ ಅವರದ್ದು ಸುಖೀ ದಾಂಪತ್ಯ. ಈ ಮಧ್ಯೆ ಜುಬೇರ್‌ಗೆ ತಂದೆ ತಾಯಿಯ ಜೊತೆ ರಾಜಿಯಾಯಿತು. ತಂದೆ ತಾಯಿಯ ಮನೆಗೆ ಜುಬೇರ್ ನಿತ್ಯ ಹಾಜರಿ ಹಾಕತೊಡಗಿದ. ತನ್ನ ಹಿಂದೂ ಸೊಸೆ ಇಸ್ಲಾಂಗೆ ಮತಾಂತರ ಹೊಂದಿದ್ದರೂ ಆಕೆಯನ್ನು ಜುಬೇರ್ ತಂದೆ ತಾಯಿಗಳು ಸ್ವೀಕರಿಸಲು ಸುತರಾಂ ಸಿದ್ದರಿರಲಿಲ್ಲ. “ನೀನು ನಾನು ನೋಡಿದ ಮುಸ್ಲಿಂ ಹುಡುಗಿಯನ್ನೇ ಮದುವೆಯಾಗಬೇಕು” ಎಂದು ಜುಬೇರ್‌ಗೆ ಆತನ ತಂದೆ ತಾಯಿ ಒತ್ತಡ ಹೇರ ತೊಡಗಿದರು. ಕೊನೆಗೂ ಈ ಒತ್ತಡಕ್ಕೆ ಮಣಿದ ಜುಬೇರ್ ತಂದೆ ತಾಯಿ ನೋಡಿದ್ದ ಮುಸ್ಲಿಂ ಯುವತಿಯನ್ನೇ ಇನ್ನೊಂದು ಮದುವೆಯಾದ. ಆಕೆ ಜುಬೇರ್‌ನ ತಂದೆ ತಾಯಿಯ ಮುದ್ದಿನ ಸೊಸೆಯಾಗಿ ಅವರ ಜೊತೆಯೇ ಇರತೊಡಗಿದಳು.

ಇತ್ತ ಬಾಡಿಗೆ ಮನೆಯಲ್ಲಿದ್ದ ಆಶಾ ಯಾನೆ ಆಯಿಶಾಬಾನು ಒಂದು ಮಗುವಿನ ತಾಯಿಯಾಗಿದ್ದಳು. ತನ್ನ ಗಂಡನ ಎರಡನೇ ವಿವಾಹವನ್ನು ಅಸಹಾಯಕಳಾಗಿ ಸಹಿಸಿಕೊಂಡು ಗಂಡನೊಂದಿಗೆ ಹೊಂದಾಣಿಕೆಯಲ್ಲಿ ಸಂಸಾರ ನಡೆಸುತ್ತಿದ್ದಳು. ಈ ಮಧ್ಯೆ ಜುಬೇರ್ ಎರಡೂ ಕುಟುಂಬಗಳನ್ನು ನಿರ್ವಹಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ. ಆಯಿಶಾ ಬಾನು ಎರಡನೇ ಮಗುವಿನ ತಾಯಿಯಾದಳು. saudi-arabiaತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜುಬೇರ್ ಸೌದೀ ಅರೇಬಿಯಾಕ್ಕೆ ಹೊರಟು ನಿಂತ. ಆ ಸಂದರ್ಭದಲ್ಲಿ ಸೌದಿಗೆ ಹೋಗುವ ಖರ್ಚು ನಿಭಾಯಿಸಲು ಆಯಿಶಾ ಬಾನು ತನ್ನಲ್ಲಿದ್ದ ಅಲ್ಪಸ್ವಲ್ಪ ಚಿನ್ನವನ್ನು ಮಾರಾಟ ಮಾಡಿ ಗಂಡನ ಕೈಗಿತ್ತಳು. ಜುಬೇರನು ಆಯಿಶಾ ಬಾನು ನೀಡಿದ ಹಣದಲ್ಲೇ ಸೌದಿಗೆ ತೆರಳಿದ.

ಸೌದಿಯಲ್ಲಿ ಉದ್ಯೋಗ ಶುರುವಿಟ್ಟುಕೊಂಡ ಜುಬೇರ್ ಕಾಲಕ್ರಮೇಣ ಆಯಿಶಾ ಬಾನುವಿನ ಸಂಪರ್ಕ ಕಡಿತಗೊಳಿಸತೊಡಗಿದ. ಆಯಿಶಾಳನ್ನು ಮರೆತುಬಿಡಬೇಕು ಎನ್ನುವ ತನ್ನ ತಂದೆ ತಾಯಿಯ ಒತ್ತಡಕ್ಕೆ ಆತ ನಿಧಾನವಾಗಿ ಪ್ರತಿಕ್ರಿಯಿಸತೊಡಗಿದ. ಬಜಪೆಯ ಬಾಡಿಗೆಯಲ್ಲಿ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗಿದ್ದ ಆಯಿಶಾ ಬಾನು ಈಗ ಪೂರ್ಣ ಕಂಗಾಲಾಗಿದ್ದಳು. ಒಂದೆಡೆ ತನ್ನ ಹುಟ್ಟೂರು, ಧರ್ಮ, ತಂದೆ ತಾಯಿ, ಕುಟುಂಬವನ್ನು ತನ್ನ ಪ್ರೀತಿಗಾಗಿ ತೊರೆದು ಬಂದಿದ್ದಳು. ಈಗ ಅತ್ತಲೂ ಸಲ್ಲದೆ ಇತ್ತಲೂ ಸಲ್ಲದೆ ಪರದಾಡಲಾರಂಬಿಸಿದಳು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇಬ್ಬರು ಪುಟ್ಟ ಮಕ್ಕಳಿಗೆ ದಿನದ ತುತ್ತು ತಿನ್ನಿಸುವುದೂ ಕಷ್ಟವಾಗತೊಡಗಿತು. ಗಂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಗಂಡನ ಮನೆಯ ಬಳಿ ಹೋದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. ಅಕ್ಷರಶಃ ಬೀದಿಪಾಲಾದ ಆಯಿಶಾ ಇಬ್ಬರು ಮಕ್ಕಳೊಂದಿಗೆ ಹೇಗಾದರೂ ಬದುಕಬೇಕು ಎಂದು ಹಠಕ್ಕೆ ಬಿದ್ದಿದ್ದಳು.

ಇಬ್ಬರು ಪುಟ್ಟ ಮಕ್ಕಳ ಹೊಟ್ಟೆಗೆ ತುತ್ತಿಲ್ಲದೆ ಹೊಟ್ಟೆ ಬೆನ್ನಿಗಂಟಲಾರಂಭಿಸಿದಾಗ ಅಲ್ಲಿದ್ದ ಕೆಲ ಕಾಳಜಿಯ ಮನಸ್ಸುಗಳು ಆಯಿಶಾ ಬಾನುವಿಗೆ ಅಷ್ಟೋ ಇಷ್ಟೋ ಸಹಾಯಕ್ಕೆ ಧಾವಿಸಿದವು. ಬಜಪೆಯ ಬಾಡಿಗೆ ಮನೆಗೆ ಬಾಡಿಗೆ ನೀಡಲು ಸಾಧ್ಯವಾಗದೆ ಆಕೆಯನ್ನು ಬಾಡಿಗೆ ಮನೆಯಿಂದ ಹೊರದಬ್ಬಲಾಯಿತು. ಕೆಲವರ ಸಹಕಾರ ಪಡೆದುಕೊಂಡ ಆಯಿಶಾ ಬಾನು ತೀರಾ ಕಡಿಮೆ ಬಾಡಿಗೆಯ ಮನೆಯಂತಿರುವ ಪುಟ್ಟ ಗುಡಿಸಲಿಗೆ ಸ್ಥಳಾಂತರಗೊಂಡಳು. ಈ ಗುಡಿಸಲು ಸುರತ್ಕಲ್ ಸಮೀಪದ ಕುಳಾಯಿ ಎಂಬ ಪ್ರದೇಶ ರಸ್ತೆ ಬದಿಯಲ್ಲಿತ್ತು.

ಸುರತ್ಕಲ್‌ನ ಕುಳಾಯಿ ಪ್ರದೇಶ ಮತೀಯ ಶಕ್ತಿಗಳ ಕೇಂದ್ರ. ಈ ಭಾಗದಲ್ಲಿ ಮುಸ್ಲಿಂ ಹುಡುಗಿಯರು ಹೊರಗಡೆ ಕೆಲಸಕ್ಕೆ ಹೋಗುವುದನ್ನು ಈ ಮತೀಯವಾದಿಗಳು ಸಹಿಸುತ್ತಿರಲಿಲ್ಲ. ಒಂದೆಡೆ ಈಕೆ ಹಿಂದೂ ಎಂದು ಮನೆಯೊಳಗೆ ಸೇರಿಸದ ಅತ್ತೆ ಮಾವ. ಮತ್ತೊಂದೆಡೆ ಈಕೆ ಮುಸ್ಲಿಂ ಎಂದು ಮುಸ್ಲಿಂ ಕಟ್ಟುಪಾಡುಗಳನ್ನು ಈಕೆಯ ಮೇಲೆ ಹೇರಿ ಅನ್ನ ಕಸಿದುಕೊಳ್ಳುತ್ತಿದ್ದ ಮತೀಯವಾದಿ ಜನ. ಮತಾಂತರಗೊಂಡ ಹಿಂದೂ ಯುವತಿ ಎಂದು ಹಿಂದೂ ಮತೀಯವಾದಿಗಳ ಕಾಕದೃಷ್ಠಿಯಿಂದ ತಪ್ಪಿಸಿಕೊಳ್ಳಲು ನಿತ್ಯ ಹೆಣಗಾಟ. ಒಟ್ಟು ಈ ಆಯಿಶಾ ಭಾನುವಿಗೆ ಉರಿಯುವ ಒಲೆಯ ಮೇಲಿದ್ದ ಬಾಣಲೆಯಲ್ಲಿ ಬದುಕು ನಿರ್ವಹಿಸುವ ಸ್ಥಿತಿಯಾಗಿತ್ತು. ಕೊನೆಗೂ ಆಕೆ ತನ್ನ ಪುಟ್ಟ ಮಕ್ಕಳ ಹೊಟ್ಟೆ ತುಂಬಿಸಲು ಕೆಲಸ ಮಾಡಲು ನಿರ್ಧರಿಸಿದಳು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ಪಿಟ್ ಎಲೆಗಳ ಪ್ಯಾಕಿಂಗ್ ಫ್ಯಾಕ್ಟರಿಗೆ ತೆರಳಿ, ತಾನು ಮನೆಯಲ್ಲೇ ಪ್ಯಾಕಿಂಗ್ ಮಾಡಿ ನೀಡುವುದಾಗಿ ಕೆಲಸ ಕುದುರಿಸಿಕೊಂಡಳು. ಇಸ್ಪಿಟ್ ಎಲೆಗಳನ್ನು ಮನೆಗೆ ತಂದು ಪ್ಯಾಕ್ ಮಾಡಿ ನೀಡಿ ಸಂಬಳ ಪಡೆದು ಮಕ್ಕಳನ್ನು ಸಾಕತೊಡಗಿದಳು. ಅದು ಇಬ್ಬರು ಮಕ್ಕಳ ಒಂದೊತ್ತಿನ ಊಟಕ್ಕೂ ಸಾಲುತ್ತಿರಲಿಲ್ಲ. ತೀರಾ ಕಡಿಮೆ ಬಾಡಿಗೆಯಾದರೂ ಬಾಡಿಗೆ ಕೊಡುವುದು ದೊಡ್ಡ ಸಾಹಸವಾಗತೊಡಗಿತ್ತು.

ಬಜಪೆಯ ಕೆಲವು ಸಹೃದಯೀ ಮುಸ್ಲಿಂ ಯುವಕರು ಆಗಾಗ ಅಕ್ಕಿ ಬೇಳೆ, ಸಕ್ಕರೆ ಕೊಟ್ಟು ಮಕ್ಕಳು ಉಪವಾಸ ಬೀಳುವುದನ್ನು ತಪ್ಪಿಸುತ್ತಿದ್ದರು. muslim-womanಈ ಮುಸ್ಲಿಂ ಯುವಕರು ಒಂಟಿಯಾಗಿದ್ದ “ಮುಸ್ಲಿಂ” ಮಹಿಳೆಯ ಮನೆಗೆ ಅಕ್ಕಿ ಬೇಳೆ ಹೊತ್ತುಕೊಂಡು ಬರುವುದು ಮುಸ್ಲಿಂ ಧರ್ಮ ರಕ್ಷಕ ಸಂಘಟನೆಗಳಿಗೆ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅದೊಂದು ದಿನ ಅವರು ಆಯಿಶಾ ಬಾನುವಿನ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಪರಪುರಷರ ಜೊತೆ ಮಾತನಾಡಬಾರದು ಮತ್ತು ಪರಪುರಷರಿಂದ ಏನನ್ನೂ ಪಡೆದುಕೊಳ್ಳಬಾರದು ಎಂದು ಮುಸ್ಲಿಂ ಧರ್ಮ ರಕ್ಷಕರು ಫರ್ಮಾನು ಹೊರಡಿಸಿ ಹೊರಟಿದ್ದರು.

ಮುಸ್ಲಿಂ ಧರ್ಮರಕ್ಷಕರ ಈ ಕಾರ್‍ಯಾಚರಣೆ ಕುಳಾಯಿ ಪ್ರದೇಶದಲ್ಲಿದ್ದ ಜಾತ್ಯಾತೀತ ಮನೋಭಾವನೆಯ ಹಿಂದೂ-ಮುಸ್ಲಿಂ ಯುವಕರನ್ನು ಕೆರಳಿಸಿತ್ತು. ಆಯಿಶಾ ಬಾನುವಿನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ನೈತಿಕ ಪೋಲೀಸರ ಮೇಲೆ ಏರಿ ಹೋದರು. ನಂತರ ಈ ಯುವಕರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳರನ್ನು ಸಂಪರ್ಕಿಸಿ ಆಕೆಗೆ ಸಹಾಯ ಮಾಡುವಂತೆ ಕೇಳಿದರು. ಇದಿಷ್ಟೂ ಸಂಗತಿಯನ್ನು ಆಶಾ ಯಾನೆ ಆಯಿಶಾ ಬಾನು ಕಣ್ಣೀರು ಹಾಕುತ್ತಾ ನಮ್ಮ ಮುಂದೆ ಹೇಳಿದಳು.

ನಾವು ಅಸಹಾಯಕರಾಗಿದ್ದೆವು. ಮಹಿಳೆ ಮತ್ತು ಮಗು ಧರ್ಮದ ಸುಳಿಗೆ ಸಿಲುಕಿ ನರಳಾಡುತ್ತಿರುವುದನ್ನು ನೋಡಿಯೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೆವು. ಮುನೀರ್ ಕಾಟಿಪಳ್ಳ ಮಾತ್ರ ದೈರ್ಯ ತೆಗೆದುಕೊಂಡು “ನೀನೇನೂ ಹೆದರಬೇಡ. ನಿನಗೆ ಏನೇ ತೊಂದರೆ ಆದರೂ ಫೋನ್ ಮಾಡು. ನಿನ್ನ ಗಂಡ ವಿದೇಶದಿಂದ ಬರುವ ದಿನಾಂಕ ಗೊತ್ತಾದರೆ ತಿಳಿಸು. ಅದಕ್ಕೂ ಮೊದಲು ನಿನ್ನ ಅತ್ತೆ ಮತ್ತು ಮಾವನನ್ನು ಭೇಟಿಯಾಗಲು ಯತ್ನಿಸುತ್ತೇನೆ” ಎಂದು ಆಕೆಗೆ ಧೈರ್ಯ ನೀಡಿದರು. “ನೀನು ಮರಳಿ ನಿನ್ನ ತಂದೆ ತಾಯಿಯ ಮನೆಗೆ ಹೋಗುವುದಾದರೂ ಅದಕ್ಕೂ ವ್ಯವಸ್ಥೆ ಮಾಡಲು ಸಿದ್ದರಿದ್ದೇವೆ. ಒಟ್ಟು ನಿನ್ನ ಮತ್ತು ಮಕ್ಕಳ ಬದುಕು ಮುಖ್ಯವೇ ಹೊರತು ಧರ್ಮಗಳಲ್ಲ” ಎಂದು ಹೇಳಿದಾಗಲೂ ಆಕೆ ಮರಳಿ ತಂದೆ ತಾಯಿಯನ್ನು ಸೇರಲು ಧೈರ್ಯ ತೋರಲಿಲ್ಲ.

ನಾವು ಭೇಟಿ ನೀಡಿದ ಒಂದೆರಡು ತಿಂಗಳಲ್ಲಿ ಆಯಿಶಾ ಬಾನು ಮುನೀರ್ ಕಾಟಿಪಳ್ಳಗೆ ದೂರವಾಣಿ ಕರೆ ಮಾಡಿದ್ದಳು. ಮುಸ್ಲಿಂ ಮತೀಯವಾದಿಗಳು ಬಾಡಿಗೆ ಮನೆ ಮಾಲೀಕನಿಗೆ ಒತ್ತಡ ಹಾಕಿ ಆಯಿಶಾ ಬಾನುವನ್ನು ಮನೆಯಿಂದ ಹೊರ ಹಾಕಿಸಿದ್ದರು. ಬಾಡಿಗೆ ಮನೆ ಮಾಲೀಕನೂ ಮುಸ್ಲೀಮನಾಗಿದ್ದರಿಂದ ಆತ ಧರ್ಮ ರಕ್ಷಕರಿಗೆ ಹೆದರಿ ಅವರ ಆಜ್ಞೆಯನ್ನು ಪಾಲಿಸಿದ್ದ. ಒರ್ವ ಮಹಿಳೆ ತನ್ನಿಬ್ಬರು ಮಕ್ಕಳ ಜೊತೆ ಬೀದಿ ಪಾಲಾಗಿದ್ದಳು.

ಆಕೆಯನ್ನು ಡಿವೈಎಫ್‌ಐ ಜಿಲ್ಲಾ ಕಚೇರಿ “ವಿಕಾಸ” ಕ್ಕೆ ಕರೆಸಿಕೊಂಡ ಮುನೀರ್ ಆಕೆಗೆ ವಸತಿ ವ್ಯವಸ್ಥೆ ಮಾಡುವ ಸಲುವಾಗಿ ತನ್ನ ಸಂಘಟನೆಯ ಕಾರ್‍ಯಕರ್ತರ ಬಳಿ ಸಮಾಲೋಚನೆ ನಡೆಸಿ ಕೂಳೂರಿನ ಪಂಜಿಮೊಗೇರಿನಲ್ಲಿ ಬಾಡಿಗೆ ಮನೆಯನ್ನು ಕೊಡಿಸಿದರು. ಪಂಜಿಮೊಗೆರು ಪ್ರದೇಶ ಕಮ್ಯೂನಿಷ್ಠರ ಭದ್ರ ಕೋಟೆ. ಇಲ್ಲಿನ ವಾರ್ಡ್ ಕಾರ್ಪೋರೇಟರ್ ಕೂಡ ಸಿಪಿಐಎಂನಿಂದ ಆಯ್ಕೆಗೊಂಡವರು. ಪಂಜಿಮೊಗರಿನಲ್ಲಿ ಯಾವುದೇ ಕೋಮುವಾದಿಗಳ ಆಟ ನಡೆಯುವುದಿಲ್ಲ ಎಂಬ ಕಾರಣಕ್ಕಾಗಿ ಆಯಿಶಾ ಬಾನು ಎರಡೂ ಕೋಮುವಾದಿಗಳಿಂದ ಸೇಫ್ ಆಗಿದ್ದಳು.

ಇಷ್ಟೆಲ್ಲಾ ಆಗುವಾಗ ಆಯಿಶಾಳ ಎರಡೂ ಮಕ್ಕಳು ಶಾಲೆಗೆ ಹೋಗುವ ಮಟ್ಟಕ್ಕೆ ಬೆಳೆದು ನಿಂತಿದ್ದರು. ಸಿಪಿಐಎಂ ಮತ್ತು ಡಿವೈಎಫ್‌ಐ ಕಾರ್‍ಯಕರ್ತರ ನೆರವಿನಲ್ಲಿ ಇಬ್ಬರು ಮಕ್ಕಳನ್ನು ಕೂಡಾ ಒಳ್ಳೆಯ ವಿದ್ಯಾಭ್ಯಾಸ ಸಿಗಲೆಂಬ ಕಾರಣಕ್ಕಾಗಿ ಖಾಸಗಿ ಶಾಲೆಗೆ ಸೇರಿಸಿದರು. ಖಾಸಗಿ ಶಾಲೆಯ ಫೀಸು ಕಟ್ಟುವ ಕೊನೆಯ ದಿನಾಂಕ ಸಮೀಪಿಸುತ್ತಿತ್ತು. ಈ ಸಂಧರ್ಭ ಡಿವೈಎಫ್‌ಐ ಮುಖಂಡ (ಈಗ ಕಾರ್ಪೋರೇಟರ್) ದಯಾನಂದ ಶೆಟ್ಟಿಯವರನ್ನು ಆಯಿಶಾ ಸಂಪರ್ಕಿಸಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಳು. “ಗಂಡ ವಿದೇಶದಿಂದ ಊರಿಗೆ ಬಂದು ಹದಿನೈದು ದಿನಗಳಾಗಿದ್ದು ತನ್ನನ್ನು ಸಂಪರ್ಕಿಸಿಲ್ಲ” ಎಂದೂ ದಯಾನಂದ ಶೆಟ್ಟಿಯವರಲ್ಲಿ ದೂರಿಕೊಂಡಳು. ದಯಾನಂದ ಶೆಟ್ಟರು ಇದನ್ನು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಗಮನಕ್ಕೆ ತಂದರು.

ಮುನೀರ್ ಕಾಟಿಪಳ್ಳರವರು ಬಜಪೆಯ ಸ್ಥಳೀಯ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೊತೆಗೂಡಿ ನೇರ ಆಯಿಶಾಳ ಪತಿ ಜುಬೇರ್ ಮನೆಗೆ ತೆರಳಿದರು. ಜುಬೇರ್ ಮಹಮ್ಮದ್ ಮನೆಯಲ್ಲಿರಲಿಲ್ಲ. ಆತನನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುನೀರ್ ಕಾಟಿಪಳ್ಳ “ಆಯಿಶಾ ಬಾನು ನಿನ್ನನ್ನು ನಂಬಿಕೊಂಡು ಜಾತಿ, ಧರ್ಮ, ತಂದೆ ತಾಯಿಯನ್ನು ಬಿಟ್ಟು ಬಂದಿದ್ದಾಳೆ. ಆಕೆ ಈಗ ಮರಳಿ ತವರಿಗೆ ಹೋಗುವುದು ಅಷ್ಟು ಸುಲಭವಲ್ಲ. ಆದುದರಿಂದ ಅವಳ ಬದುಕಿಗೊಂದು ವ್ಯವಸ್ಥೆಯಾಗಬೇಕು” ಎಂದು ವಿನಂತಿಸಿದರು. ಆದರೆ ಆತ ಈ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿ ದೂರವಾಣಿ ಕರೆಯನ್ನು ಕಡಿತಗೊಳಿಸಿದಾಗ ಮನೆಯಲ್ಲಿದ್ದ ಜುಬೇರ್‌ನ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಲಾಯಿತು. “ಆಯಿಶಾಳ ಇಡೀ ಬದುಕಿನ ಜವಾಬ್ದಾರಿ ಜುಬೇರ್‌ನದ್ದು. ಅದೆಲ್ಲಾ ಮತ್ತೆ ಚರ್ಚೆ ಮಾಡುವ. ಎಲ್ಲಕ್ಕಿಂತ ಮೊದಲು ನಾಳೆ ಬೆಳಿಗ್ಗೆ 10 ಗಂಟೆಯ ಒಳಗಾಗಿ ಆಕೆಯ ಪಂಜಿಮೊಗರಿನ ಮನೆಗೆ ತೆರಳಿ ಆಕೆಯ ಮಕ್ಕಳ ಸ್ಕೂಲ್ ಫೀಸ್ ಮತ್ತು ಮನೆ ಬಾಡಿಗೆ ನೀಡಬೇಕು. ಇಲ್ಲದೇ ಇದ್ದರೆ ಸಂಘಟನೆಯ ವತಿಯಿಂದ ನಿಮ್ಮ ಮನೆಯ ಎದುರು ಧರಣಿ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಲಾಯಿತು.

ಮಂಗಳೂರಿನಲ್ಲಿ ಡಿವೈಎಫ್‌ಐ ಹೋರಾಟದ ಹಿನ್ನಲೆ ಮತ್ತು ಶೋಷಣೆಗೊಳಗಾದ ವ್ಯಕ್ತಿಗಳ ಪರವಾಗಿ ನಡೆಸುತ್ತಿರುವ ನಿರಂತರ ಹೋರಾಟದ ಬಗ್ಗೆ ತಿಳಿದುಕೊಂಡ ಜುಬೇರ್ ಮಹಮ್ಮದ್ ಮರುದಿನ ಬೆಳಿಗ್ಗೆ 7 ಗಂಟೆಗೇನೇ ನೇರವಾಗಿ ತನ್ನ ಮೊದಲ ಪತ್ನಿ ಆಯೀಶಾಳ ಮನೆಗೆ ಭೇಟಿ ನೀಡಿ ಅವಳ ಜೊತೆ ಒಂದಿಷ್ಟು ಹೊತ್ತು ಪ್ರೀತಿಯಿಂದ ಕಳೆದಿದ್ದ. ನಂತರ ಹತ್ತು ಗಂಟೆಯ ವೇಳೆಗೆ ಮಕ್ಕಳನ್ನು ಆಯಿಶಾಳ ಜೊತೆ ಶಾಲೆಗೆ ಕರೆದುಕೊಂಡು ಹೋಗಿ ಬಾಕಿ ಉಳಿಸಿದ್ದ ಸ್ಕೂಲ್ ಫೀಸ್‌ಗಳನ್ನು ಪಾವತಿಸಿ ಅಲ್ಲಿಂದ ಆಯಿಶಾಳನ್ನು ಮಂಗಳೂರು ನಗರಕ್ಕೆ ಕರೆದೊಯ್ದು ಬಟ್ಟೆ ಬರೆ, ಮಕ್ಕಳ ಆಟಿಕೆ, ಮನೆ ಸಾಮಾಗ್ರಿ ಖರೀಸಿದ್ದ. ಕಷ್ಟ ಮತ್ತು ನೋವಿನಿಂದ ಕಂಗಾಲಾಗಿದ್ದ ಆಯಿಶಾ ಬಾನುವಿಗೆ ಇದು ಕನಸೆಂಬಂತೆ ಕಂಡಿರಬಹುದು. ಆದೇನೇ ಆದರೂ ಆಯಿಶಾ ಬಾನು ಕಷ್ಟದ ಜೀವನ ಮುಗಿದು ಪ್ರೀತಿ ಪ್ರೇಮದ ಎರಡನೇ ಭಾಗ ಆರಂಭವಾಯಿತೆಂದುಕೊಂಡಳು.

ಬೀಡಿ ಕಾಂಟ್ರಾಕ್ಟರ್ ಆಗಿದ್ದ ಜುಬೇರ್ ತಂದೆ ಇದೇ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ಮಂಗಳೂರು ನಗರ ಮತ್ತು ಬಜಪೆಯಲ್ಲಿ ಉತ್ತಮ ಆದಾಯ ತರುತ್ತಿದ್ದ ಬೀಡಿ ಬ್ರಾಂಚುಗಳನ್ನು ಹೊಂದಿದ್ದ ಜುಬೇರ್ ತಂದೆಯ ಅಕಾಲಿಕ ಮರಣದ ನಂತರ ಬೀಡಿ ಬ್ರಾಂಚುಗಳನ್ನು ಮುಚ್ಚುವಂತಿರಲಿಲ್ಲ. beedi-workerಸೌದಿಗೆ ಹೋಗುವುದನ್ನು ರದ್ದುಪಡಿಸಿದ ಜುಬೇರ್ ಬೀಡಿ ಬ್ರಾಂಚಿನ ಉಸ್ತುವಾರಿ ವಹಿಸಿಕೊಂಡ. ಆಯಿಶಾ ಬಾನು ಜೊತೆಗೆನೇ ಸಂಸಾರ ಹೂಡಿಕೊಂಡ ಜುಬೇರ್, ಪತ್ನಿ ಆಯಿಶಾಳನ್ನೂ ಕೂಡಾ ಬೀಡಿ ಬ್ರಾಂಚಿನ ವ್ಯಾಪಾರದಲ್ಲಿ ತೊಡಗಿಸಿಕೊಂಡ. ಎರಡನೇ ಪತ್ನಿಯ ಮನೆಗೆ ಆಗೊಮ್ಮೆ ಈಗೊಮ್ಮೆ ಹೋಗಿ ಬರುತ್ತಿದ್ದ ಜುಬೇರ್ ಈ ಬಾರಿ ಎರಡೂ ಸಂಸಾರಗಳನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾದಂತೆ ಕಂಡು ಬಂದ. ಎರಡು ಮೂರು ವರ್ಷ ಆಯಿಶಾ ಮತ್ತು ಜುಬೇರ್ ಸುಖೀ ಸಂಸಾರ. ವರ್ಷದ ಹಿಂದೆ ಗರ್ಭಿಣಿಯಾಗಿದ್ದ ಆಯಿಶಾಳಿಗೆ ನಾಲ್ಕು ತಿಂಗಳ ಹಿಂದೆ ಪುಟ್ಟ ಮಗುವೊಂದರ ಜನನವಾಗಿತ್ತು.

ಕಳೆದ ಒಂದು ವರ್ಷದಿಂದ ಆಯಿಶಾ ಮತ್ತು ಜುಬೇರ್ ಸಂಸಾರದಲ್ಲಿ ದಿಡೀರ್ ಬದಲಾವಣೆಗಳು ಕಾಣಲಾರಂಭಿಸಿದವು. ಬೀಡಿ ಕಾಂಟ್ರಾಕ್ಟರ್ ಆಗಿದ್ದ ಜುಬೇದ್‌ಗೆ ಎರಡೂ ಕುಟುಂಬ ನಿರ್ವಹಿಸಲು ತಕ್ಕಮಟ್ಟಿನ ಆರ್ಥಿಕತೆ ಇತ್ತು. ನಾವೂ ಎಲ್ಲರಂತೆ ಬದುಕಬೇಕು. ಕಾರು, ಸ್ವಂತ ಮನೆ ಹೊಂದಬೇಕು ಎಂಬ ಆಸೆ ಎಲ್ಲರಂತೆ ಜುಬೇರ್ ಮತ್ತು ಆಯಿಶಾ ದಂಪತಿಗಳಲ್ಲೂ ಇತ್ತು. ಹೇಗೋ ಹುಂಡಿ ವ್ಯವಹಾರ ಶುರುವಿಟ್ಟುಕೊಂಡ ಜುಬೇರ್ ಚಿಲ್ಲರೆ ಹಣ ಸಂಪಾದನೆಗೆ ತೊಡಗಿಕೊಂಡ. ಹವಾಲ ವ್ಯವಹಾರವನ್ನು ಮಂಗಳೂರಿನಲ್ಲಿ ಹುಂಡಿ ವ್ಯವಹಾರ ಎನ್ನುತ್ತಾರೆ. ಇದು ಕಾನೂನಿನ ಪ್ರಕಾರ ಕಾನೂನು ಬಾಹಿರವಾದರೂ ಗಲ್ಫ್ ರಾಷ್ಟ್ರಗಳಲ್ಲಿನ ಉದ್ಯೋಗವನ್ನೇ ನೆಚ್ಚಿಕೊಂಡಿರುವ ಮಂಗಳೂರಿನ ಮುಸ್ಲಿಂ ಸಮುದಾಯದಲ್ಲಿ ಹವಾಲ ವ್ಯವಹಾರ ತಪ್ಪು ಅನ್ನಿಸೋದೇ ಇಲ್ಲ. ಸೌದಿ ಆರೇಬಿಯಾ, ದುಬೈಗಳಲ್ಲಿ ಕೂಲಿ ಕೆಲಸ ಮಾಡುವ ಮಂಗಳೂರಿನ ಯುವಕರು ಅಷ್ಟೋ ಇಷ್ಟೋ ಸಂಪಾದಿಸಿದ್ದನ್ನು ಕಾನೂನು ರೀತಿಯಲ್ಲಿ ಮಂಗಳೂರಿನ ಹೆತ್ತವರಿಗೆ ಕಳುಹಿಸಿದರೆ ಕಳುಹಿಸಿದ ಹಣದ ಅರ್ಧದಷ್ಟು ಮಾತ್ರ ಹೆತ್ತವರ ಕೈಸೇರುತ್ತದೆ. ಪ್ರಾಮಾಣಿಕವಾಗಿ ದುಡಿದ ಹಣವನ್ನು ಈ ಪರಿ ತೆರಿಗೆಗಳನ್ನು ತಪ್ಪಿಸಲು ಹವಾಲಾ ಮೂಲಕ ಮಂಗಳೂರಿಗೆ ಹಣ ರವಾನೆ ಮಾಡುತ್ತಾರೆ. ಇದೇ ವ್ಯವಹಾರ ಶುರುವಿಟ್ಟುಕೊಂಡ ಜುಬೇರ್ ಮತ್ತು ಆಯಿಶಾ ಹವಾಲಾದಲ್ಲಿ ಬಂದ ಕಮಿಷನ್ ಹಣದಲ್ಲಿ ಒಂದು ಪುಟ್ಟ ಮನೆ ಖರೀದಿ ಮಾಡುತ್ತಾರೆ. ಬೀಡಿ ಬ್ರಾಂಚು ವ್ಯವಹಾರ, ಸುತ್ತಾಡಲೆಂದು ಕಾರು ಖರೀದಿಸುತ್ತಾರೆ. ಒಟ್ಟು ಆಯಿಶಾ ಮತ್ತು ಜುಬೇರ್ ಕಷ್ಟದ ದಿನಗಳು ಮುಗಿದು ತಕ್ಕಮಟ್ಟಿಗೆ ಐಶಾರಾಮಿಯಾಗಿಯೇ ಬದುಕಲಾರಂಭಿಸುತ್ತಾರೆ. ಆದರೆ ಕಮಿಷನ್ ಆಸೆಗಾಗಿ ತಾನು ಮಾಡುತ್ತಿದ್ದ ಹವಾಲಾ ದುಡ್ಡು ಯಾರೆಲ್ಲರ ಕೈ ದಾಟುತ್ತಿದೆ ಎಂಬುದು ಆಯಿಶಾಳಿಗಾಗಲೀ, ಜುಬೇರ್‌ಗಾಗಲೀ ಗೊತ್ತಿರಲಿಲ್ಲ.

ಬಿಹಾರದ ಪಾಟ್ನಾದಲ್ಲಿ ನರೇಂದ್ರ ಮೋದಿ ನಡೆಸಿದ್ದ ಹೂಂಕಾರ್ ರ್‍ಯಾಲಿಯಲ್ಲಿ ನಡೆದ patnablast_hunkar_rallyಸರಣಿ ಸ್ಪೋಟದ ಆರೋಪಿಗಳಿಗೆ ಹಣ ಸರಬರಾಜು ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಆಯಿಶಾ ಮತ್ತು ಆಕೆಯ ಪತಿ ಜುಬೇರ್‌ರನ್ನು ತಮ್ಮ ನಾಲ್ಕು ತಿಂಗಳ ಪುಟ್ಟ ಮಗುವಿನ ಜೊತೆ ಅರೆಸ್ಟ್ ಮಾಡಿದ್ದಾರೆ ಎಂಬುದು ಸುದ್ದಿ. ಆದರೆ ಪೊಲೀಸರು ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಬಿಹಾರದಲ್ಲಿ ಹವಾಲ ಹಣದ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಿದ್ದು, ಅವರ ಅಕೌಂಟ್‌ಗಳಿಗೆ ಆಯಿಶಾ 2 ಕೋಟಿ ಜಮೆ ಮಾಡಿದ್ದಾಳೆ. ಆಯಿಶಾಳ ಪತಿ ಜುಬೇರ್ ಎಕೌಂಟ್‌ನಿಂದ 5 ಕೋಟಿ ವ್ಯವಹಾರವಾಗಿದೆ ಎಂಬುದಷ್ಟೇ ಬಿಹಾರ ಪೊಲೀಸ್ ಇನ್ಸ್‌ಸ್ಪೆಕ್ಟರ್ ರಾಜ್ ಕಿಶೋರ್ ಹೇಳುತ್ತಾರೆ. ಆದರೆ ಯಾವ ಅಧಿಕಾರಿಯೂ ದೃಢೀಕರಿಸದೆ ಮಾಧ್ಯಮಗಳಲ್ಲಿ “ಆಯಿಶಾ ಭಯೋತ್ಪಾದಕಿ” ಎಂಬ ಸುದ್ದಿ ಹರಡಿದ್ದು ಹೇಗೆ ಎಂಬುದು ಮಾಧ್ಯಮಗಳಿಗೇ ಗೊತ್ತಿಲ್ಲ! ಆಯಿಶಾಳನ್ನು ಬಂಧಿಸಲು ಬಿಹಾರದಿಂದ ಇನ್ಸ್‌ಸ್ಪೆಕ್ಟರ್ ರಾಜ್ ಕಿಶೋರ್ ಮತ್ತು ಓರ್ವ ಕಾನ್ಸ್‌ಸ್ಟೇಬಲ್ ಮಾತ್ರ ಮಂಗಳೂರಿಗೆ ಬಂದಿದ್ದರು. ಒಂದು ಸರಳ ವಿಚಾರವೆಂದರೆ ದೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಹಣ ಸರಬರಾಜು ಮಾಡಿದ ಅತೀ ಮುಖ್ಯ ಆರೋಪಿಯನ್ನು ಬಂಧಿಸಲು ಇಬ್ಬರು ಸಿವಿಲ್ ಪೊಲೀಸರು ಮಾತ್ರ ಬರುತ್ತಾರೆ ಎಂಬುದೇ ಆಶ್ಚರ್‍ಯಕರ. ಎನ್‌ಐಎ, ಎಟಿಎಸ್, ಐಬಿ ಮಟ್ಟದಲ್ಲಿ ನಡೆಯಬೇಕಾಗಿದ್ದ ಕಾರ್‍ಯಾಚರಣೆಯನ್ನು ಒಬ್ಬನೇ ಒಬ್ಬ ಇನ್ಸ್‌ಸ್ಪೆಕ್ಟರ್ ಮಾಡುತ್ತಾರೆ ಎಂದರೇ ಇಡೀ ಸುದ್ದಿಯ ಬಗ್ಗೆ ಅನುಮಾನಗಳಿವೆ. ಅಂತೂ ಇಂತೂ ಮಕ್ಕಳ ಹೊಟ್ಟೆ ತುಂಬಿಸಲು ಪ್ರತೀ ಗಳಿಗೇನೂ ಹರಸಾಹಸ ಪಡುತ್ತಿದ್ದ ತಾಯಿಯೊಬ್ಬಳು ಭಯೋತ್ಪಾದಕಿ ಎಂದು ಬಂಧನದಲ್ಲಿರುವ ಹಿನ್ನೆಲೆಯಲ್ಲಿ ಘಟನೆಯ ಸತ್ಯಾಸತ್ಯತೆಯನ್ನು ವಿಶ್ಲೇಷಿಸಬೇಕಿದೆ.

28 thoughts on “ಭಯೋತ್ಪಾದಕಿ ಆಯಿಶಾ ಬಾನು !? ಸುದ್ದಿಯ ಇನ್ನೊಂದು ಮುಖ

 1. dr. t s vivekananda

  ಉತ್ತಮ, ಸಕಾಲಿಕ ಬರಹ. ಈ ದೇಶದಲ್ಲಿ ಮುಸ್ಲೀಂಮರ ವಿರುದ್ಧ ಅಪಪ್ರಚಾರ ಮಾಡುವ, ಉತ್ಪ್ರೇಕ್ಷಿಸುವ, ಅನಗತ್ಯ twistಗಳನ್ನು ನೀಡಿ ಜನರನ್ನು ನಂಬಿಸುವ ಹಾಗೂ ಇಂತಹ ಸಂಗತಿಗಳು ಬೇಗ ಜನಮನದಿಂದ ಮರೆಯಾಗದಂತೆ ಎಲ್ಲೆಲ್ಲಿಗೊ link ಮಾಡಿ, follow up ಮಾಡುವ ಒಂದು ವ್ಯವಸ್ಥಿತ ಗುಂಪೇ ಇದೆ. ಡಾ.ಹನೀಫ್ ವಿಷಯದಲ್ಲಿ ಆಗಿದ್ದು ನಮಗೆಲ್ಲಾ ಗೊತ್ತೇ ಇದೆ. ಇದೂ ಹಾಗೆಯೇ ಇರಬಹುದು. ಪ್ರತಿಕ್ರಿಯಿಸುವ ಶಕ್ತಿಯೊಂದಿಗೆ, Right angle ನಲ್ಲಿ ನಿಂತು ನೋಡುವಾ…… ಏನಾಗುತ್ತದೋ!?

  Reply
 2. Indian

  ಚೆನ್ನಾಗಿದೆ ಕಾಗಕ್ಕ ಗೂಬಕ್ಕ ಕಥೆ .. ಮುಂದುವರೆಸಿ ….

  Reply
 3. Keshav Bhat

  It looks somerthing wrong with the article….and the writer do not know what he is writing as the money transation via havaalaa or hundi is done only in cash…and not through bank as any transaction through bank can be traced…and every bank has to report any transaction above RS 2 lacs …to the RBI…;.so definitely the reporter is not writing the truth…

  Reply
 4. prasad

  ಸೌದಿ ಆರೇಬಿಯಾ, ದುಬೈಗಳಲ್ಲಿ ಕೂಲಿ ಕೆಲಸ ಮಾಡುವ ಮಂಗಳೂರಿನ ಯುವಕರು ಅಷ್ಟೋ ಇಷ್ಟೋ ಸಂಪಾದಿಸಿದ್ದನ್ನು ಕಾನೂನು ರೀತಿಯಲ್ಲಿ ಮಂಗಳೂರಿನ ಹೆತ್ತವರಿಗೆ ಕಳುಹಿಸಿದರೆ ಕಳುಹಿಸಿದ ಹಣದ ಅರ್ಧದಷ್ಟು ಮಾತ್ರ ಹೆತ್ತವರ ಕೈಸೇರುತ್ತದೆ ಅಂತ ನಿಮಗೆ ಹೇಳಿದವರು ಯಾರು? ಭಾರತದ ಆದಾಯ ತೆರಿಗೆ ಕಾಯಿದೆಯ ಪ್ರಕಾರ ದೇಶದ ಹೊರಗೆ ಗಳಿಸಿದ ಆದಾಯಕ್ಕೆ ಯಾವುದೇ ತೆರಿಗೆ ಕೊಡಬೇಕಾಗಿಲ್ಲ. ಅದನ್ನು ಭಾರತಕ್ಕೆ ಕಳುಹಿಸಿದರೂ ಕೂಡಾ. ಹವಾಲಾ ಮೂಲಕ ಬರುವುದು ಕಾನೂನುಬಾಹಿರವಾಗಿ ಗಳಿಸಿದ ಹಣ ಮಾತ್ರ. ಇನ್ನು ಗಲ್ಫ್ ದೇಶಗಳಲ್ಲಿ ದುಡಿಯುವ ಮಂಗಳೂರಿನ ಮುಸ್ಲಿಂ ಯುವಕರು ಕಳುಹಿಸಿದ ದುಡ್ಡನ್ನು ಭಯೋತ್ಪಾದಕರಿಗೆ ಕೊಡುವ ಅಗತ್ಯವಾದರೂ ಏನು. ತಾನು ಮಾಡುತ್ತಿದ್ದ ಹವಾಲಾ ದುಡ್ಡು ಯಾರೆಲ್ಲರ ಕೈ ದಾಟುತ್ತಿದೆ ಎಂಬುದು ಆಯಿಶಾಳಿಗಾಗಲೀ, ಜುಬೇರ್‌ಗಾಗಲೀ ಗೊತ್ತಿರಲಿಕ್ಕಿಲ್ಲ ಅಂದುಕೊಂಡರೂ, ಹವಾಲಾ ವ್ಯವಹಾರ ತಪ್ಪು ಅನ್ನುವುದಂತೂ ಖಂಡಿತ ಗೊತ್ತಿರುತ್ತದೆ. ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆಯಾಗಲಿ. ಆಯಿಶಾ ನಿಜವಾಗಿಯೂ ಮುಗ್ಧಳಾದರೆ ಬಿಡುಗಡೆಯಾಗುತ್ತಾಳೆ.

  Reply
 5. Aditya

  Thanks for accepting that you guys helped a terrorist….. Since I myself send money from foreign destination for family maintenance through legal means without any tax, I can call your bluff there. Also, it is funny how you justify havala saying operators don’t feel it is wrong. Terrorists also don’t feel killing innocents bad, do they? So according to you, that is OK… How do you know that both of them did not know money was being sent to terror activities? Did they specially call you form pakistan to inform? How does it matter how many people came to arrest her? How do you know central intel agencies were not keeping their watch on her and Bihar police were just a formality? Do IB, NIA etc.. send a deployed personnel report to you regularly? Getting arrested is not a bad thing for muslim terrorists, they will be treated royally in jail unlike hindu terrorists like Pragya Singh…
  I feel it strange that she had the courage to defy her parents (or father if you say “purusha pradhana samaja”) but did not dare to defy her husband when he was doing wrong, or may be she was OK with killing innocents as long as she and her children were getting easy money…

  Reply
 6. Praveen Kumar

  ವಿದೇಶದಲ್ಲಿ ದುಡಿದ ಹಣಕ್ಕೆ ಭಾರತದಲ್ಲಿ ಯಾವುದೇ ತೆರಿಗೆಯಿಲ್ಲ…! ಹೀಗೆ ಅನಧಿಕ್ರತವಾಗಿ ದುಡ್ಡು ಕಳಿಸುವವರು ಕಪಟಮಾರ್ಗದಿಂದ ಗಳಿಸಿರುವುದು ಮಾತ್ರ..ಕಳ್ಳರ ಪರವಾಗಿ ನಿಲ್ಲುವುದನ್ನು ನಿಲ್ಲಿಸಿ…

  Reply
 7. kuchangiprasanna

  ನಾವು ಚಿಕ್ಕವರಾಗಿದ್ದಾಗ ಒಂದು ಮಾತು ಇತ್ತು, ಕೋರ್ಟಿಗೆ ಹೋದವರಲ್ಲಿ ಗೆದ್ದೋನು ಸೋತ, ಸೋತವನು ಸತ್ತ ಅಂತ, ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ನಡೆದ ಸ್ಫೋಟದ ಆರೋಪಿಗಳು ಅಮಾಯಕರು ಎಂದು ಗೊತ್ತಾಗುವ ಹೊತ್ತಿಗೆ ಅವರ ಕತೆ ಬೀದಿ ಪಾಲಾಗಿತ್ತು. ಭಯೋತ್ಪಾದಕರು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯನ್ನು ಮಾತ್ರ ಸೀದಾ ಕೊಂದೇ ಬಿಡುತ್ತಾರೆ. ಅದರೆ ಬಿಜೆಪಿ ಕಚೇರಿಯ ಸಮೀಪ, ಮೋದಿಯ ಸಮಾವೇಶದ ಆಸುಪಾಸಿನಲ್ಲಿ ಮಾತ್ರ ಬಾಂಬ್ ಸಿಡಿಸುತ್ತಾರೆ, ಇದೆಲ್ಲ ಕಂಡರೆ ಏನನಿಸುತ್ತದೆ, ಇನ್ನೊಂದು, ಮಂಗಳೂರಿನ ಬಂಧಿತ ಮಹಿಳೆ ಧರ್ಮಾಂತರ ಆಗಿರುವುದು ಇಲ್ಲಿ ಅಪ್ರಸ್ತುತ, ಆಕೆಯ ಕೃತ್ಯ ತಪ್ಪೋ, ಸರಿಯೋ ಎನ್ನುವುದು ನ್ಯಾಯಾಲಯ ನಿರ್ಧರಿಸುತ್ತದೆ ಬಿಡಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ , ನ್ಯಾಯ ನಿರ್ಣಯಿಸುವ ನಿಷ್ಪಕ್ಷಪಾತಿ ನ್ಯಾಯಾಲಯದ ಮುಂದೆ ಸಾಕ್ಷ್ಯಗಳನ್ನು ತಂದು ನಿಲ್ಲಿಸುವವರು, ದೋಷಾರೋಪಣೆಗಳನ್ನು ಮಾಡುವವರು ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತದಿಂದ ಕೆಲಸ ಮಾಡುತ್ತಾರೆ ಎಂಬು ಪ್ರಶ್ನಾರ್ಥಕ, ಆದರೂ, ಅಮ್ಮನೊಂದಿಗೆ ಏನೂ ಅರಿಯದ ಎಳೆಕಂದ ಜೈಲು ಸೇರಬೇಕಾಯ್ತಲ್ಲ.

  Reply
 8. VinData

  You’ve gone to great extent to defend her and in the process you make some absurd points like hawala is not illegal for them, foreign income is heavily taxed, only 2 people came from Bihar etc.,
  Since you personally know her, you should either give better evidence or you are better off keeping silent. Else you will get in trouble yourself with this absurdity. BTW, why did u write this article under a pseudo-name.

  Reply
 9. prashanth

  what this fellow is saying is tottaly confusing/ according to him sanjay dutt is also innocent? sir making a crime is not only a criminal act but helping criminals against law and nation is also a criminal act , dont they know to whom they do hawala , what your saying is bullshit and please dont help the criminals who are trying to destroy our nation

  Reply
 10. balu

  It is tooo muchhhhh please think it over before publishing
  these type of article…… people are not fools. We
  have lot of respect on Varthamana

  Reply
 11. Swathy Swami

  ಲೇಖಕರನ್ನು ಆರೋಪಿಯ ವಕೀಲರನ್ನಾಗಿ ನೇಮಿಸಬಹುದು. ಪ್ರಗತಿಪರ ಪತ್ರಕರ್ತರು ಅಂದ್ರೆ ಇವರಪ್ಪ!

  Reply
 12. Laxman Mundashi

  typical defence by communists, they don’t agree that terrorism, naxalism are anti national activities, because they don’t believe in nationalism !!!

  Reply
 13. Srini

  This article is a Joke…What fun you get in defending activities of terrorism when done by certain section of society? Every terrorist has his version..even Kasab had…..

  Reply
 14. Abdul Rehman

  Me also work in Gulf ..
  Who told we have to depend on Hawala….???
  If we are illegal then only illegal way of sending money…
  There is around 150 Rs Commission per transaction whatever the amount may be…
  And also there is no tax till now…
  DYFI Please dont create such stories….
  This is really Kagakka Gubbachi Kathe

  Reply
 15. khushikhan

  right now i am in saudi arabia, As per my concern there are lots of people sending money by hawala because of they dont want to stay in que at bank and some time there is dont have time and in india hawala distributores supplying money door to door, Due to all these benefits people sending money by hawala.

  Reply
 16. ಓದುಗ

  ಸಕಾಲಿಕ ಲೇಖನ. ಅದರೆ ಕೆಲವೊಂದು ಮಾಹಿತಿಗಳು ಅಪೂರ್ಣವಾಗಿದೆ ಹಾಗೂ ಓದುಗರ ದಾರಿತಪ್ಪಿಸುವಂತಿದೆ. ಮೊದಲನೆಯದಾಗಿ, ಹವಾಲ ಕೇವಲ ಒಂದು ಸಮುದಾಯದ ಸ್ವತ್ತಲ್ಲ, ಅದನ್ನು ಸಡೆಸುವವರಲ್ಲಿ ಹಾಗೂ ಅದರ ಫಲಾನುಭಾವಿಗಳಲ್ಲಿ ಎಲ್ಲ ಸಮುದಾಯದವರಿದ್ದಾರೆಯೆಂಬುವುದನ್ನು ಇಲ್ಲಿ ಪ್ರಸ್ತುತಪಡಿಸಬೇಕಿತ್ತು.
  ಎರಡನೆಯದಾಗಿ ಲೇಖಕರು – “ಗಲ್ಫ್ ರಾಷ್ಟ್ರಗಳಲ್ಲಿನ ಉದ್ಯೋಗವನ್ನೇ ನೆಚ್ಚಿಕೊಂಡಿರುವ ಮಂಗಳೂರಿನ ಮುಸ್ಲಿಂ ಸಮುದಾಯದಲ್ಲಿ ಹವಾಲ ವ್ಯವಹಾರ ತಪ್ಪು ಅನ್ನಿಸೋದೇ ಇಲ್ಲ. ಸೌದಿ ಆರೇಬಿಯಾ, ದುಬೈಗಳಲ್ಲಿ ಕೂಲಿ ಕೆಲಸ ಮಾಡುವ ಮಂಗಳೂರಿನ ಯುವಕರು…” ಬರೆಯುತ್ತಾರೆ. ಅದ್ಯಾಕೆ “ತಪ್ಪು ಅನ್ನಿಸೋದೇ ಇಲ್ಲ” ಅಂತ ಲೇಖಕರು ವಿಶದಪಡಿಸಬೇಕಿತ್ತು. ಅಥವಾ ಹವಾಲದ ಸೂತ್ರಧಾರಿಗಳು ಯಾವ ರೀತಿ ಹಣಕಾಸಿನ ವ್ಯವಹಾರದ ಕಾನೂನುಗಳನ್ನು ಅಥವಾ ಬ್ಯಾಕಿಂಗ್ ಸುಧಾರಣೆಗಳನ್ನು ಬಲ್ಲದ ಅನಕ್ಷರಸ್ಥ ಹಾಗೂ ಅಶಿಕ್ಷಿತ ಅಮಾಯಕ ಯುವಕರನ್ನು ತಪ್ಪು ಮಾಹಿತಿ ನೀಡಿ ಅವರನ್ನು ಒಂದು ದಾಳವಾಗಿ ಬಳಸಿಕೊಳ್ಳುತ್ತಾರೆ ಎಂಬುವುದನ್ನು ತಿಳಿಸಬೇಕಿತ್ತು.
  ಅಥವಾ ಇದೊಂದು ಸುಳ್ಳಾರೋಪದಂತನಿಸುತ್ತದೆ. ಕೆಲಮಂದಿಯ ಪಾಲ್ಗೊಳ್ಳುವಿಕೆಯನ್ನು ನೋಡಿ ಮಾಡಿರುವ ಜನರೈಲೇಝೇಶನ್ ಲೇಖಕರ ಪ್ರಬುದ್ದತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ.
  ಓದುಗರು ಹವಾಲದ ಬಗ್ಗೆ ಓದುವಾಗ 1980-2000ರ ನಡುವಿನ ಕೆಲ ವಸ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೊರದೇಶದಲ್ಲಿ ಸಂಪಾದಿಸಿದ ಹಣಕ್ಕೆ ಭಾರತದಲ್ಲಿ ತೆರಿಗೆಯಿಲ್ಲ ಸರಿ. ಆದರೆ ಭಾರತದಷ್ಟು ಅಭಿವೃದ್ದಿ ಸಾಧಿಸದ ಸೌದಿ ದೇಶದಲ್ಲಿ ಒಂದು ದೂರದ ಹಳ್ಳಿ-ಗುಡ್ಡಗಾಡಿನಲ್ಲಿ ಹಗಲು ರಾತ್ರಿ ರಜೆಯಿಲ್ಲದೆ ಪ್ರಾಣಿಗಿಂತಲೂ ಕೀಳಾಗಿ ದುಡಿಯುವ ವಿದೇಶಿ ವ್ಯಕ್ತಿಯೊಬ್ಬ ಮಂಗಳೂರಿನಲ್ಲಿರುವ ತನ್ನ ಮನೆ ನಡೆಸಲು ಹರಸಾಹಸ ಪಡುವ ಸ್ಥಿತಿಯಲ್ಲಿ, ಆತನಿಗೆ ಹೆಚ್ಚು ಕಷ್ಟವಿಲ್ಲದೆ- ಹೆಚ್ಚು ಖರ್ಚಿಲ್ಲದೆ (ಬ್ಯಾಂಕಿಗೆ ಪ್ರಯಾಣ, ದುಬಾರಿ ಡಿಡಿ ಚಾರ್ಜ್ ಇತ್ಯಾದಿ) ಇಲ್ಲದೆ ಹಣ ಕಳುಹಿಸಲು ಸಹಾಯ ಮಾಡುತ್ತಿದ್ದವರು ಈ ಹವಾಲ ಏಜೆಂಟ್ ಗಳು. ಭಾರತದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಬಹಳಷ್ಟು ಕಾನೂನಿನ- ತಂತ್ರಜ್ನ್ಯಾನದ ಸುಧಾರಣೆಯಾಗಿದೆ, ಆದರೆ ಗಲ್ಫ್ ದೇಶದ ಭಾರತೀಯ ಕಾರ್ಮಿಕನ ಬದುಕಿನಲ್ಲಿ ಅಂತಹ ಬದಲಾವಣೆಯೇನೂ ಆಗಿಲ್ಲ. ಎಲೆಲ್ಲಿ ಬದಲಾವಣೆಯಾಗಿದೆಯೋ, ಅಲ್ಲಿನ ಭಾರತೀಯ ಕಾರ್ಮಿಕರು ಬದಲಾಗಿದ್ದಾರೆ. ಶಿಕ್ಷಿತ ಯುವ ಸಮುದಾಯ ಹವಾಲವನ್ನು ಯಾವಾಗಲೋ ಚರಂಡಿಗೆಸೆದಾಗಿದೆಯೆಂಬುವುದನ್ನೂ ನಾವು ಗಮನಿಸಬೇಕು.
  ಅದೇನೆ ಇರಲಿ, ಕೆಲ ಪೀತಕಣ್ಣಿನ ಓದುಗರು ಲೇಖನವನ್ನು ಅರ್ಥಮಾಡದೆ, ಅರ್ಥವಾದಂತೆ ನಟಿಸಿ (ನಿದ್ದೆ ಮಾಡದೆ ನಿದ್ದೆ ಮಾಡಿದಂತೆ ನಟನೆ) ಹಾಕಿರುವ ಕಮೆಂಟುಗಳನ್ನು ನೋಡಿ ನಗು ಬರುತ್ತಿದೆ. ಲೇಖಕರು ಇಲ್ಲಿ ಕೇವಲ ಆಯಿಶಾಳ ಜೀವನವನ್ನುಯಥವತ್ತಾಗಿ ಮುಂದಿಡುತ್ತಾ ಹಾಗೂ ಪೋಲಿಸರ ನಿಲುವನ್ನು ತಿಳಿಸುತ್ತಾ “ಮಿಲಾರ್ಡ್! ದ ಗ್ರೇಟ್ ಇಂಡಿಯನ್ ಮೀಡಿಯಾ”ದ ತೀರ್ಮಾನವನ್ನು ಪ್ರಶ್ನಿಸಿದ್ದಾರೆ.
  ಆದರೆ ಪೀತಕಣ್ಣುಗಳಿಗೆ, ಕಾಗಕ್ಕ- ಗೂಬಕ್ಕ ಕಥೆ ಆರಂಭಿಸಿದವರು ಯಾರು, ಹಾಸ್ಯ ಮಾಡುತಿರುವವರಾರು, ಗಾಂಧಿ-ಕಥಾ ಸ್ಫರ್ಧೆಗೆ ಯೋಗ್ಯವಾದ “ಭಯೋತ್ಪಾದನಾ” ಕಥೆಯನ್ನು ಕಟ್ಟುತಿರುವವರಾರು, ಮತ್ತು ಸ್ವತಹ ತಾವು ಯಾವುದರ ವಕೀಲರು ಎಂದು ತಿಳಿಯದಿರುವುದು ದುರಾದೃಷ್ಟವೇ ಸರಿ.

  Reply
 17. ಜೆ.ವಿ.ಕಾರ್ಲೊ, ಹಾಸನ

  Proper Channel ಗಳಲ್ಲಿ ಹೋದರೆ ನೀವು ತಂದ , ಕಳುಹಿಸುವ ಡಾಲರ್ ಗಳಿಗೆ ಸಿಗುವ ರುಪಾಯಿಗಳಿಗಿಂತ ಹೆಚ್ಚಿನ ರುಪಾಯಿಗಳು ಅನಧಿಕೃತ ದಲ್ಲಾಳಿಗಳು ಕೊಡುವಾಗ ದೇಶದಲ್ಲಿ ಕೆಲಸ ಸಿಗದೆ ಹೊರಗೆ ಕೂಲಿ ಕೆಲಸಕ್ಕೆ ಹೋದವರಿಗೆ ಯಾಕೆ ತಪ್ಪೆನಿಸಬೇಕು? ರಾಜಕಾರಣಿಗಳು, ದೊಡ್ಡ ದೊಡ್ಡ ಉಧ್ಯಮಪತಿಗಳು ಇದನ್ನೇ ಮಾಡಿಕೊಂಡು ಯಾವುದೇ ಪಾಪ ಪ್ರಜ್ಞೆಯಿಲ್ಲದೆ ಬದುಕುತ್ತಿಲ್ಲವೇ?

  Reply
 18. Kumar

  ಹಿಂದುಗಳ ಬಗ್ಗೆ ಬರೆಯುವಾಗ, ನಿಮ್ಮ ಮಾತು ಹೀಗಿರುತ್ತದೆ:
  > ಸುರತ್ಕಲ್‌ನ ಕುಳಾಯಿ ಪ್ರದೇಶ ಮತೀಯ ಶಕ್ತಿಗಳ ಕೇಂದ್ರ.
  > ಹಿಂದೂ ಮತೀಯವಾದಿಗಳ ಕಾಕದೃಷ್ಠಿಯಿಂದ ತಪ್ಪಿಸಿಕೊಳ್ಳಲು ನಿತ್ಯ ಹೆಣಗಾಟ

  ಅದೇ ಮುಸ್ಲಿಮರ ಬಗ್ಗೆ ಬರೆಯುವಾಗ, ಹೀಗಿರುತ್ತದೆ:
  > ಮುಸ್ಲಿಂ ಧರ್ಮರಕ್ಷಕರ ಈ ಕಾರ್‍ಯಾಚರಣೆ

  ಹಿಂದುಗಳಾದರೆ “ಮತೀಯವಾದಿ”ಗಳೆಂಬ ಹಣೆಪಟ್ಟಿ; ಅದೇ ಕೆಲಸವನ್ನು ಮುಸಲ್ಮಾನರು ಮಾಡಿದರೆ, ಅವರು “ಮುಸ್ಲಿಂ ಧರ್ಮರಕ್ಷಕರು”!!
  ವಾಹ್! ನಿಮ್ಮ “ಜಾತ್ಯಾತೀತವಾದ”, “ಕಮ್ಯುನಿಸಂ”, “ಪ್ರಗತಿಪರತೆ”ಗೆ ಬಹುಪರಾಕ್!!

  “ಅಯಿಶಾ ಬಾನು” ಮುಸಲ್ಮಾನ ಹೆಣ್ಣುಮಗಳೆಂಬ ಕಾರಣಕ್ಕೆ ನೀವು ಅವಳನ್ನು ಸಮರ್ಥಿಸುತ್ತಿದ್ದೀರಿ.
  ಅವಳಷ್ಟೇ ಕಡುಬಡತನದಲ್ಲಿರುವ ಹಿಂದು ಹೆಣ್ಣುಮಕ್ಕಳೂ ಅಲ್ಲಿರುವರಲ್ಲವೇ? ಅವರೆಲ್ಲರೂ “ಹವಾಲಾ” ಇಲ್ಲವೇ “ಹುಂಡಿ” ಮೂಲಕ ಭಯೋತ್ಪಾದಕರಿಗೆ ಸಹಕರಿಸುತ್ತಿರುವರೇ?
  ಇವಳು ಮಾತ್ರ ಆ ಕಾರ್ಯಕ್ಕೆ ಇಳಿಯಲು ಕಾರಣಗಳೇನು?
  ಅವಳ ಗಂಡ ಇದ್ದಕ್ಕಿದ್ದಂತೆ ಅವಳೊಡನೆ ಪ್ರೀತಿಯಿಂದ ಇರಲಾರಂಭಿಸಿದ್ದಕ್ಕೂ, ಅವಳ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಓಡಾಡುವುದಕ್ಕೆ ಆರಂಭವಾಗುವುದಕ್ಕೂ, ಕಾಕತಾಳೀಯ ಎನ್ನುವುದಕ್ಕಿಂತ ಹೆಚ್ಚಿನ ಅರ್ಥ ಇರಬೇಕಲ್ಲವೇ?
  ಇದೇ ರೀತಿ ಕೆಲಸ ಮಾಡಿ, ಯಾರಾದರೂ ಹಿಂದು ಹುಡುಗಿ ಸಿಕ್ಕಿಕೊಂಡಿದ್ದರೆ, ಆಗಲೂ ನೀವು ಇದೇ ರೀತಿಯ ಲೇಖನ ಬರೆಯುತ್ತಿದ್ದರೇನು?
  ನಿಮಗೆ ಆ ಹುಡುಗಿಯ ಕುರಿತು ತಿಳಿದಿರುವುದು, ಬಡವಳಾದರೂ ಅವಳು ಕೋಟಿಗಟ್ಟಕೆ “ಹಣ ವರ್ಗಾವಣೆ” ಮಾಡಿರುವುದನ್ನು ನೀವು ಸಮರ್ಥಿಸುತ್ತಿರುವುದು, ಇತ್ಯಾದಿಗಳು, ನಿಮ್ಮದೂ “ಇದರಲ್ಲಿ” ಪಾಲಿರಬಹುದು ಎಂದೇ ಸೂಚಿಸುತ್ತದೆ!

  Reply
  1. Kodava

   ಕುಮಾರ್ 200 % ನಿಜವಾದ ಮಾತು ಹೇಳಿದ್ದೀರಿ . ಈ ಲೇಖನ / ಕಥೆ ಬರೆದವರ ಮೇಲೆ ಅನುಮಾನ ಬಲವಾಗುತ್ತಿದೆ . ಇತ್ತೀಚಿನ ಮಾಹಿತಿಗಳ ಪ್ರಕಾರ ಆಯಿಶಾಬಾನು ಹಾಗು ವರ ಪತಿಗೆ ಪಾಕಿಸ್ತಾನದಿಂದ ಕರೆಗಳು ಬಂದಿರುವುದು ಬಹಿರಂಗಗೊಂಡಿದೆ . ಈ ಲೇಖನ / ಕಥೆ ಬರೆದವರನ್ನು ವಿಚಾರಣೆಗೆ ಒಳಪಡಿಸಿದರೆ ಇನ್ನಷ್ಟು ಸತ್ಯಗಳು ಹೊರಬೀಳುತ್ತವೆ .

   ಹಾಗು “ವರ್ತಮಾನ” ಬರಿ ಹಿಂದೂಗಳ ಹಾಗು ಮೋದಿ ವಿರೋದಿ ಹಾಗು ಕಾಂಗ್ರೆಸ್ಸ್ ಪ್ರೇಮಿ ಅಂತ ಮೊದಲ ನೋಟದಲ್ಲೇ ಕಂಡುಬರುತ್ತದೆ . ನೀವು ನಿಜವಾಗಿ ಭಾರತೀಯರೇ ಆಗಿದ್ದರೆ ಜಾತ್ಯಾತೀತವಾಗಿ / ಪಕ್ಷಾತೀತವಾಗಿ ಲೇಖನಗಳನ್ನು ಪ್ರಕಟಿಸಿ . ಉಗ್ರಗಾಮಿಗಳ ಬಗ್ಗೆ ಹಾಗು ಉಗ್ರವಾದದ ಬಗ್ಗೆ ಯಾವುದೇ ಲೇಖನ ಪ್ರಕಟಣೆಯಾಗಿದ್ದು ನಾ ಕಾಣೆ .

   Reply
 19. Ismail

  Mangalurallagali….Deshada Ithara kadeyallagali…..Hawala Hana Kotigattale..Kai badalaaysutthe….Nanage gotthiruva nagna sathyavendare…illi e koti vyavahara nadesuvavarellaru Marvadigalu Matthu gujaraathigalu…Avrannu nammuralli Saitgalu Annutthare….idi Karavaliya “Adike” Vyavaharavu e hanada Melene Nadeyutthe….Ayshla bandhanavaada dina adake Vyapara sthabdavagitthu…Karana Hawala hana Baralilla….idenu dodda Sangathiye Alla…Ayesha maadidre Bayodpadane Bereyoru Maadidre Sari ennuva Manasthithi Apayakaari…

  Reply
 20. Manjunath

  ನಮ್ಮ ದೇಶದ ಸ್ಥಿತಿ ಹೇಗಿದೆಯೆಂದರೆ ನಾವೀಗ ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ. ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಕೆಲವು ವ್ಯಕ್ತಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸಿದ ಪೋಲೀಸರು ಈಗ ಹಿಂದಿನ ಆರೋಪ ಪಟ್ಟಿಯನ್ನು ರದ್ದು ಪಡಿಸಿ ಹೊಸದಾಗಿ ಇತರ ಕೆಲವು ವ್ಯಕ್ತಿಗಳ ಮೇಲೆ ಆರೋಪ ಹೊರಿಸಿ ಹಿಂದಿನ ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದಾರೆ. ಅಂದರೆ ಮೊದಲಿನ ಆರೋಪ ಪಟ್ಟಿಯನ್ನು ಯಾವ ಆಧಾರದ ಮೇಲೆ ತಯಾರಿಸಲಾಯಿತು?? ಅದರಿಂದ ಜೈಲು ಸೇರಿ ತಮ್ಮ ಜೀವನವನ್ನೇ ಕಳೆದುಕೊಂಡವರ ಬದುಕಿಗೆ ಯಾರು ಹೊಣೆ?? ಹಾಗಿದ್ದರೆ ಈಗಿನ ಆರೋಪ ಪಟ್ಟಿ ಸರಿ ಅಂತ ಏನು ಗ್ಯಾರ್ಂಟಿ??? ಅಂದರೆ ಈ ಬಾರಿ ಆರೋಪ ಹೊರಿಸಿಕೊಂಡವರು ಸಹ ನಿರಪರಾಧಿಗಳಾಗಿರಬಹುದಲ್ಲವೇ??
  ಅಂದರೆ ನಮ್ಮ ಪೋಲೀಸರು ಹೊರಿಸುವ ಅನೇಕ್ ಆರೋಪಗಳು ಸುಳ್ಳು ತಾನೇ?? ಅಂದರೆ ಅವರು ಕಳೆದುಕೊಂಡ ಬದುಕನ್ನು ಯಾರು ಮರಳಿಸುತ್ತಾರೆ???
  ನಿಜಕ್ಕೂ ನಮ್ಮ ಪೋಲೀಸರು ಸತ್ಯವನ್ನೇ ಹೇಳುತ್ತಾರೆ ಅಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಒಂದು ವಿಡಂಬನೆಯಾಗಿ ಕಾಣಿಸುತ್ತಿಲ್ಲವೇ???
  ಅಂದರೆ ಪೋಲೀಸರ ವರದಿಯ ಆಧಾರದಲ್ಲಿ ಆರೋಪಿಯನ್ನು ಬಂಧಿಸಿಟ್ಟು ಅವರ ವೃತ್ತಿ ಜೀವನವನ್ನೇ ಇಲ್ಲವಾಗಿಸುವುದು ಹಾಸ್ಯಾಸ್ಪದವಾಗಿ ಕಾಣಿಸುವುದಿಲ್ಲವೇ??
  ಅಂದರೆ ಪೋಲೀಸರು ತಮಗೆ ಮಾಮೂಲು ಕೊಡದ ವ್ಯಕ್ತಿಯೊಬ್ಬನ ಮೇಲೆ ಸುಳ್ಳು ಆರೋಪ ಹೊರಿಸಿದರೆ ಸಾಕು, ನಮ್ಮ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನವೆಂಬ ಹೆಸರಿನಲ್ಲಿ ವೃತ್ತಿ ಜೀವನದಿಂದ ಬೇರ್ಪಡಿಸುತ್ತದೆ. ನಂತರ ವರ್ಷಗಟ್ಟಲೆ ವಿಚಾರಣೆ ನಡೆದು ಆತ ದೋಷಮುಕ್ತಗೊಂಡು ಹೊರಬರುವ ಹೊತ್ತಿಗೆ ಆತನ ಬದುಕು ಸರ್ವನಾಶವಾಗಿರುತ್ತದೆ!!!
  ನಂಬಿದರೆ ನಂಬಿ!!! ನಮ್ಮ ದೇಶದಲ್ಲಿ ನಿರಪರಾಧಿಗಳಿಗೂ ಶಿಕ್ಷೆಯಾಗುತ್ತದೆ.
  ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಧ್ಯೇಯ. ಆದರೆ ಇಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ, ಬದಲಿಗೆ ನಿರಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ!!!!
  ಮೇರಾ ಭಾರತ್ ಮಹಾನ್!!!!

  Reply
  1. Kumar

   > ಪೋಲೀಸರು ತಮಗೆ ಮಾಮೂಲು ಕೊಡದ ವ್ಯಕ್ತಿಯೊಬ್ಬನ ಮೇಲೆ ಸುಳ್ಳು ಆರೋಪ ಹೊರಿಸಿದರೆ ಸಾಕು

   ವಿಷಯವನ್ನು ಅಷ್ಟು ಹಗುರ ಮಾಡಿಬಿಡಬೇಡಿ. ತಾವು ಹೇಳಿದಂತೆಯೇ, ಪೊಲೀಸರು ಮಾಮೂಲು ತೆಗೆದುಕೊಳ್ಳುವರು ಎಂಬುದನ್ನು ವಾದಕ್ಕಾಗಿ ಒಪ್ಪಿಕೊಳ್ಳೋಣ. ಆ ರೀತಿ, ಮಾಮೂಲು ಯಾರ ಬಳಿ ಪಡೆಯುತ್ತಾರೆ ಮತ್ತು ಪಡೆಯುವವರು ಯಾವ ಪೊಲೀಸರು? ಕೊಡುವವರು ಮತ್ತು ಪಡೆಯುವವರು ಇಬ್ಬರೂ ಸ್ಥಳೀಯರೇ ಆಗಿರಬೇಕಲ್ಲವೇ?
   ಈ “ಆಯೇಶಾ ಬಾನು” ಪ್ರಕರಣದಲ್ಲಿ, ಬಿಹಾರದ ಪೊಲೀಸರು ಕರ್ನಾಟಕದವರೆಗೆ ಬಂದು ಆಕೆಯನ್ನು ಬಂಧಿಸಿದ್ದಾರೆ. ಅಂದರೆ, ಅವರು ಆಕೆಯನ್ನು “ಮಾಮೂಲು” ಕೇಳಿ, ಆಕೆ ನಿರಾಕರಿಸಿರುವ ಸಾಧ್ಯತೆ ಇರಲಾರದು ಅಲ್ಲವೇ?
   ಬಿಹಾರದ ಪಾಟ್ನಾದಿಂದ ಮಂಗಳೂರಿನ ಯಾವುದೋ ಮೂಲೆಯಲ್ಲಿರುವ ಗುಡಿಸಲಿನ ಬಾಗಿಲನ್ನು ಪೊಲೀಸರು ತಟ್ಟಿದರೆಂದರೆ, ಅವರು ಅದರ ಕುರಿತಾಗಿ ಮೊದಲೇ ಅಧ್ಯಯನ-ತನಿಖೆಗಳನ್ನು ಮಾಡಿದ್ದಾರೆ, ಅವರಿಗೆ ನಿಖರವಾದ ಮಾಹಿತಿಗಳು ದೊರೆತಿದೆ ಎಂದೇ ಅರ್ಥವಲ್ಲವೇ?
   ಕೇವಲ “ಮಾಮೂಲಿನ ಆಸೆ”ಗಾಗಿ ಬಿಹಾರದ ಪಾಟ್ನಾದಿಂದ ಮಂಗಳೂರಿಗೆ ಪೊಲೀಸರು ಬಂದಿದ್ದಾರೆ ಎನ್ನುವ ನಿಮ್ಮ ಮಾತು ಹಾಸ್ಯಾಸ್ಪದವಾದೀತು!
   ಪೊಲೀಸರ ಕೆಲಸವನ್ನು ಅಷ್ಟೊಂದು ಹಗುರವಾಗಿ ಕಾಣಬೇಡಿ. ಕೆಲವೊಮ್ಮೆ (ಮಾಲೇಗಾವ್ ತರಹದ ಪ್ರಕರಣದಲ್ಲಿ) ಪೊಲೀಸರು ರಾಜಕೀಯ ನೇತಾಗಳ ಆಜ್ಞೆಗೆ ಅನುಸಾರವಾಗಿ ನಡೆದುಕೊಳ್ಳುತ್ತಾರೆ, ತಮ್ಮ ಆರೋಪಗಳನ್ನೇ ಬದಲಾಯಿಸುತ್ತಾರೆ ಎನ್ನುವುದು ಸ್ವಲ್ಪಮಟ್ಟಿಗೆ ಸತ್ಯವಿರಬಹುದು. ಹಾಗೆಂದು, ಪೊಲೀಸರು ಮಾಡಿದ್ದೆಲ್ಲಾ ತಪ್ಪೇ ಎಂದೆನ್ನಬೇಡಿ. ಅವರು ತಮ್ಮ ಕೆಲಸ ಸರಿಯಾಗಿ ಮಾಡದಿದ್ದರೆ, ನಾಳೆ ನಿಮ್ಮ-ನಮ್ಮ ಮನೆಗಳ ಮೇಲೂ ಮತಾಂಧರಿಂದ ಧಾಳಿಗಳಾಗಬಹುದೆನ್ನುವುದನ್ನು ನೆನಪಿಡಿ. ಪೊಲೀಸರು ಕುರಿತು ಸಹಾನುಭೂತಿ ಬೆಳೆಸಿಕೊಳ್ಳಿ, ಗೌರವ ಬೆಳೆಸಿಕೊಳ್ಳಿ.

   Reply
 21. manjunath

  ಕುಮಾರ್ ಅವರೇ, ನೀವು ತಪ್ಪಾಗಿ ಅರ್ಥ್ ಮಾಡಿಕೊಂಡಿದ್ದೀರಿ. ನಾನು ಹೇಳಿದ್ದು ಆಯೇಶಾ ಬಾನುವನ್ನು ಮಾಮೂಲಿಗಾಗಿ ಬಂಧಿಸಿದ್ದಾರೆ ಎಂದೋ ಅಥವಾ ಆಕೆ ನಿರಪರಾಧಿ ಅಂತಲೋ ಖಂಡಿತ ಅಲ್ಲ. ಬಿಹಾರದ ಪೋಲೀಸರು ಮಾಮೂಲಿಗಾಗಿ ಮಂಗಳೂರಿಗೆ ಬರುತ್ತಾರೆ ಎನ್ನುವಷ್ಟು ಮೂರ್ಖ ನಾನಲ್ಲ. ಆದರೆ ನೀವು ಆ ರೀತಿ ಅರ್ಥಮಾಡಿಕೊಳ್ಳುವಷ್ಟು……. ಸರಿ ಬಿಡಿ.

  “ಪೋಲೀಸರು ವ್ಯಕ್ತಿಯೊಬ್ಬನ ಮೇಲೆ ಸುಳ್ಳು ಆರೋಪ ಹೊರಿಸಿದರೆ ಸಾಕು, ನಮ್ಮ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನವೆಂಬ ಹೆಸರಿನಲ್ಲಿ ವೃತ್ತಿ ಜೀವನದಿಂದ ಬೇರ್ಪಡಿಸುತ್ತದೆ. ನಂತರ ವರ್ಷಗಟ್ಟಲೆ ವಿಚಾರಣೆ ನಡೆದು ಆತ ದೋಷಮುಕ್ತಗೊಂಡು ಹೊರಬರುವ ಹೊತ್ತಿಗೆ ಆತನ ಬದುಕು ಸರ್ವನಾಶವಾಗಿರುತ್ತದೆ!!!” ಎಂದು ನಾನು ಹೇಳಿದ್ದನ್ನು ನೀವು ತಪ್ಪು ಎಂದು ಹೇಳುತ್ತಿದ್ದೀರಿ ಎಂದಿರಲಿ. ಸುಮ್ಮನೆ ಒಮ್ಮೆ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಗಳನ್ನು ಮಾತನಾಡಿಸಿ ಬನ್ನಿ, ನಿಮಗೇ ಸತ್ಯ ಏನೆಂದು ಅರ್ಥವಾಗುತ್ತದೆ.

  ಇನ್ನಷ್ಟು ಉದಾಹರಣೆಗಳು ಬೇಕೇ:

  ನವೀನ್ ಸೂರಿಂಜೆ ಎಂಬ ನಿರಪರಾಧಿ ಪತ್ರಕರ್ತನನ್ನು ಆರು ತಿಂಗಳಿಗೂ ಹೆಚ್ಚು ಕಾಲ ಬಂಧಿಸಿಟ್ಟದ್ದು ಸರಿ ಎನ್ನುತೀರಾ? ಆತನ ಕಳೆದುಹೋದ ಜೀವನಕ್ಕೆ ಯಾರು ಹೊಣೆ???

  ಹೋಮ್ ಸ್ಟೇ ದಾಳಿ ಆರೋಪಿಗಳೆಂದು ಒಂದಷ್ಟು ಜನರನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧಿಸಿಟ್ಟರಲ್ಲಾ, ಅವರಲ್ಲಿ ಎಷ್ಟು ಮಂದಿ ಅಮಾಯಕರಿದ್ದರು ಎಂಬುದು ನಿಮಗೆ ಗೊತ್ತಿದೆಯೇ??

  ವಿಠಲ ಮಲೆಕುಡಿಯ ಎಂಬ ಸ್ನಾತಕೋತ್ತರ ವಿದ್ಯಾರ್ಥಿಯನ್ನು ವಿನಾಕಾರಣ ಮೂರು ತಿಂಗಳು ಬಂಧಿಸಿಟ್ಟು ಪಾಠ ಕೇಳದಂತೆ ಮಾಡಿ ಅವನ ಜೀವನವನ್ನೇ ಸರ್ವನಾಶ ಮಾಡಿದರಲ್ಲಾ, ಇದನ್ನು ಸರಿ ಎಂದು ಹೇಳುತ್ತೀರಾ??

  ಸಂತೋಷ್ ರಾವ್ ಎಂಬ ಹುಚ್ಚನನ್ನು ಕಳೆದೊಂದು ವರ್ಷದಿಂದ ಸೆರೆಮನೆಯಲ್ಲಿಟ್ಟದ್ದು ನಿಮಗೆ ನ್ಯಾಯ ಎಂದು ಕಾಣುತ್ತಿದೆಯೇ???

  ಮೊನ್ನೆ ಮೊನ್ನೆ ದಾವಣಗೆರೆಯ ಹೆಸರಾಂತ ವಕೀಲರೊಬ್ಬರ ಮಾನ ಕಾಪಾಡಲು ಬಡಪಾಯಿ ಟ್ಯಾಕ್ಸಿ ಡ್ರೈವರ್ ಒಬ್ಬನ ಮೇಲೆ ರೇಪ್ ಕೇಸು ಹಾಕಿ ಒಳಗಡೆ ಕೂರಿಸಿದ್ದನ್ನು ನೀವು ಸಮರ್ಥಿಸುತ್ತೀರಾ??

  ಪುತ್ತೂರಿನಂತಹ ಬುದ್ದಿವಂತರ ಊರಿನಲ್ಲೇ ಕಳ್ಳನನ್ನು ಮಾತ್ರ ನಂಬುವ ಪೋಲೀಸರು ಹೆಸರಾಂತ ಚಿನ್ನದಂಗಡಿಯೊಂದರಿಂದ ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಂಡು ನಂತರ ಎಸ್.ಪಿ. ಯಿಂದ ಉಗಿಸಿಕೊಂಡು ನಂತರ ಚಿನ್ನ ಮರಳಿಸಿದ್ದು ನಿಮಗೆ ಗೊತ್ತೇ ಇಲ್ಲವೇ??

  ಕಸಬ್ ಎಂಬ ಅಂಗೈ ಹುಣ್ಣಿಗೆ ೫೦ ಕೋಟಿ ರೂಪೈ ಖರ್ಚು ಮಾಡಿ ವಿಚಾರಣೆ ಮಾಡಿದ್ದು ಹಾಸ್ಯಾಸ್ಪದವಾಗಿ ಕಾಣಿಸುವುದಿಲ್ಲವೇ??

  ನನ್ನ ಉದ್ದೇಶ ಆಯಿಷಾಳನ್ನು ಸಮರ್ಥಿಸುವುದು ಖಂಡಿತ ಅಲ್ಲ. ಆದರೆ ಅಂತಿಮವಾಗಿ ನ್ಯಾಯಾಲಯದ ತೀರ್ಪು ಬರುವವರೆಗೆ ನಮ್ಮ ಇಂದಿನ ವ್ಯವಸ್ಥೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರುವುದು ಅಸಾಧ್ಯ.

  Reply
 22. ನಸೂ

  ಆಯಿಶಾ ಭಾನುವನ್ನು ಸಮರ್ಥಿಸುವ ಲೇಖನ ಇದಲ್ಲ. ಕಾನೂನು ಭಾಹಿರ ಹವಾಲ ಸೆಕ್ಷನ್ನುಗಳಿಗೂ, ಭಯೋತ್ಪಾಧನಾ ಪ್ರಕರಣದ ಸೆಕ್ಷನ್ನುಗಳಿಗೂ ವ್ಯತ್ಯಾಸವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹವಾಲ ವ್ಯವಹಾರದ ಆರೋಪಕ್ಕೂ, ಭಯೋತ್ಪಾಧಕಿ ಎಂಬ ಆರೋಪಕ್ಕೂ ವ್ಯತ್ಯಾಸವಿದೆ. ಆಕೆ ಯಾವ ಅಪರಾಧ ಮಾಡಿದ್ದಾಳೋ ಅದಕ್ಕೆ ಸಂಬಂಧಿಸಿದ ಸೆಕ್ಷನ್ ದಾಖಲಿಸಿ ಆರೋಪಗಳನ್ನು ಹೊರಿಸಲಿ. ಆಕೆಯ ಬದುಕಿನ ದುರಂತ ದಿನಗಳು, ಆಕೆ ಊಟಕ್ಕಾಗಿ ಪಟ್ಟ ಪಾಡು, ಆಕೆಯ ಜೊತೆ ಹಿಂದೂ-ಮುಸ್ಲಿಂ ಕೋಮುವಾದಿಗಳು ನಡೆದುಕೊಂಡ ಕ್ರೂರ ರೀತಿ, ಕೊನೆಗೂ ಆಕೆ ತನ್ನ ಪುಟ್ಟ ಪಾಪು ಜೊತೆ ಭಯೋತ್ಪಾಧಕಿ ಎಂದು ಜೈಲು ಸೇರಿದ್ದು….. ಈ ಹಿನ್ನಲೆಯಲ್ಲಿ ಈ ಲೇಖನ ….

  ನಸೂ

  Reply
  1. Aditya

   Nobody is responsible for her plight but herself. Also, it is a well established legal precedence that if illegal activities of a person help terrorists, the person is also a terrorist. People who helped in Rajiv’s killing were all terrorists, not just the ones who killed him. If we go by your logic, people procuring arms for terror activities are not terrorist but merely offenders under arms act, which doesn’t make any sense.

   Reply

Leave a Reply

Your email address will not be published.