ಧಾರ್ಮಿಕ ಹಕ್ಕುಗಳಿಗೆ ತೊಂದರೆಯಾಗದಂತೆ ಮೌಢ್ಯಗಳನ್ನು ನಿಷೇಧಿಸುವ ಕಾನೂನು ಅವಶ್ಯ

– ಜಗದೀಶ ಡಿ

ಮೂಢನಂಬಿಕೆಯ ಪರ ಮತ್ತು ವಿರೋಧಗಳ ಬಗ್ಗೆ ಇತ್ತೀಚಿಗೆ ಕೇಳಿಬರುತ್ತಿವೆ. ಮೂಢನಂಬಿಕೆಗಳಿಗೂ ಮತ್ತು ನಂಬಿಕೆಗಳಿಗೂ ಇರುವ ವ್ಯತ್ಯಾಸ ತುಂಬಾ ತೆಳುಗೆರೆಗಳಾಗಿವೆ. ಮೂಢನಂಬಿಕೆಗಳಿಂದ ತೊಂದರೆ ಒಳಗಾದವರೆ ಇದನ್ನು ನಂಬಿಕೆ ಅಂದುಕೊಂಡಿದ್ದಾರೆ. ಸರ್ಕಾರ ಕಾಯಿದೆಯ ಮೂಲಕ ಮನುಷ್ಯನ ನಂಬಿಕೆಗಳಿಗೆ ಧಕ್ಕೆ ತರಲು ಮುಂದಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. superstitionsಮೂಢನಂಬಿಕೆಗಳ ಬಗ್ಗೆ ಹಲವಾರು ಪ್ರಶ್ನೆಗಳು ಸಹ ಇವೆ.

ಮೂಢನಂಬಿಕೆಗಳು ಯಾವುವು? ಮೂಢನಂಬಿಕೆಗಳನ್ನು ಆಚರಿಸುತ್ತಿರುವರು ಯಾರು? ಮೂಢನಂಬಿಕೆಯ ಶೋಷಣೆಗೆ ಒಳಗಾಗಿರುವವರು ಯಾರು? ಮೂಡನಂಬಿಕೆಗಳು ಇವುಗಳು ಎಂದು ನಿರ್ಧರಿಸುವವರು ಯಾರು? ಇವುಗಳಿಗೆ ಕಾನೂನಿನಲ್ಲಿ ಉತ್ತರ ಹೇಳಬೇಕಾಗುತ್ತದೆ. ಆದರೆ ಸರ್ಕಾರ ಮಹಾರಾಷ್ಟ್ರದ ಮಾದರಿಯಲ್ಲಿ ಕಾನೂನು ಮಾಡಲು ಹೊರಟಿದೆ. ಮಹಾರಾಷ್ಟ್ರ ಸರ್ಕಾರ 18 ವರ್ಷ ಚಳುವಳಿ ಕಟ್ಟಿ, ಬೆಳಸಿ, ಮುನ್ನಡೆಸುತ್ತಿದ್ದ ನರೇಂದ್ರ ದಾಬೋಲ್ಕರ್‌ರ ಕೊಲೆಯ ನಂತರ ಆತುರಾತುರವಾಗಿ 12 ಆಚರಣೆಗಳನ್ನು ಮಾತ್ರ ಮೂಡನಂಬಿಕೆಗಳೆಂದು ತಿಳಿಸಿದೆ. ಆದರೆ ದಾಬೋಲ್ಕರ್ ಹೇಳಿದ 27 ಆಚರಣೆಗಳಲ್ಲಿ 15 ನ್ನು ಮೂಲೆಗುಂಪು ಮಾಡಿದೆ. dhabolkarದಾಬೋಲ್ಕರ್ ಅಂತವರಿಗೆ ರಕ್ಷಣೆಯ ಬಗ್ಗೆ ಯಾವುದೇ ವಿಧಾನಗಳಿಲ್ಲ. ಮೂಢನಂಬಿಕೆಯ ಬಗ್ಗೆ ತರಬೇತಿ ಇಲ್ಲದ ಸಬ್‌ಇನ್‌ಸ್ಪೆಕ್ಟರ್‌ಗೆ ವಿಚಾರಣೆಗೆ ನೇಮಿಸಿರುವುದು ಎಷ್ಟು ಸರಿ! ಇವೆಲ್ಲದರ ಕಡೆಗೆ ಕರ್ನಾಟಕ ಸರ್ಕಾರ ಗಮನ ನೀಡಬೇಕಾಗಿದೆ.

ನಮ್ಮ ಸಂವಿಧಾನದಲ್ಲಿ ಕರ್ತವ್ಯಗಳಿಗಿಂತ ಹಕ್ಕುಗಳಿಗೆ ಹೆಚ್ಚಿನ ಮಹತ್ವ ಇದೆ. ಹಕ್ಕುಚ್ಯುತಿಯಾದರೆ ಮೊಕದ್ದಮೆ ಹೂಡಬಹುದು. ಆದರೆ, ಕರ್ತವ್ಯಚ್ಯುತಿ ಬಂದರೆ ಕಾನೂನುಕ್ರಮ ಜರುಗಿಸುವುದಿಲ್ಲ. ಸಂವಿಧಾನದ 51-ಎ ವಿಧಿಯಲ್ಲಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು ಮೂಲಭೂತ ಕರ್ತವ್ಯವಾಗಿದೆ. ಆದರೆ, ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳು ಸಹ ಮೂಲಭೂತ ಹಕ್ಕುಗಳಾಗಿರುವುದರಿಂದ ಹೆಚ್ಚಿನ ಮಹತ್ವ ಇದೆ. ಜೊತೆಗೆ 298 ವಿಧಿ ಕೂಡ ಧಾರ್ಮಿಕ ಹಕ್ಕು ಮತ್ತು ನಂಬಿಕೆಗಳಿಗೆ ಧಕ್ಕೆ ತರಬಾರದೆಂದು ತಿಳಿಸುತ್ತದೆ.

ಧಾರ್ಮಿಕ ಹಕ್ಕನ್ನು ತಮ್ಮಗೆ ಇಷ್ಟಬಂದ ಹಾಗೆ ಬಳಸಿಕೊಂಡು ಮಾನವನ ಚಿಂತನಾ ಶಕ್ತಿಯನ್ನೆ ಪುರೋಹಿತರು ಮತ್ತು ಜೋತಿಷಿಗಳು ನಿಯಂತ್ರಿಸುತ್ತಿದ್ದಾರೆ. ಅವರು ಹೇಳಿದಂತೆ ಎಲ್ಲವೂ, ಎಲ್ಲರೂ ಕೇಳುವಂತಾಗಿದೆ. ಕಾರ್ಪೋರೇಟ್ ಕಂಪನಿಗಳನ್ನು ಕಾನೂನಿನೊಳಗೆ ವ್ಯಕ್ತಿ ಎಂದು ಪರಿಗಣಿಸುವುದರಿಂದ ಸುಭವಾಗಿ ನುಣಚಿಕೊಳ್ಳುತ್ತಾರೆ. ಕಾರ್ಪೋರೇಟ್‌ಗಳು ಧಾರ್ಮಿಕ ಮುಖವಾಡಗಳನ್ನು ಹಾಕಿಕೊಂಡು ಬಾಬಾರಾಮ್, ರವಿಶಂಕರ್ ಗುರೂಜಿಯಂತಹವರಿಗೆ ಮೊರೆಹೋಗಿದ್ದಾರೆ. idiotic-brahmandaಅದೂ ಅಲ್ಲದೇ ಕಾನೂನು ಮಾಡಬೇಕಾದ ಕ್ಷೇತ್ರದಲ್ಲೇ ಮತ್ತು ವ್ಯಕ್ತಿಗಳಿಂದಲೇ ಮೌಡ್ಯಗಳು ನಡೆಯುತ್ತಿವೆ.

ಇಷ್ಟೆಲ್ಲ ಅಡೆತಡೆಗಳಿದ್ದರು ನಮ್ಮ ರಾಜ್ಯಕ್ಕೆ ಮೂಢನಂಬಿಕೆ ವಿರೋಧಿ ಕಾನೂನು ತುಂಬಾ ಅವಶ್ಯಕವಾಗಿದೆ. ಭಯ ಮತ್ತು ಅರಿವಿನ ಕೊರತೆಯಿಂದ ಹುಟ್ಟಿಕೊಂಡ ಮೂಢನಂಬಿಕೆಗಳು ಜನರನ್ನು ತುಂಬಾ ಬಾಧಿಸುತ್ತಿವೆ. ಜನರ ಆಲೋಚನೆಯನ್ನು ಕಟ್ಟಿಹಾಕುತ್ತಿವೆ. ಅದರಿಂದ ನೊಂದವರು ಜೊತೆಗೆ ಮೂಢನಂಬಿಕೆಗಳನ್ನು ವಿರೋಧಿಸುವವರು ದೂರು ನೀಡಿ ನ್ಯಾಯ ಪಡೆಯುವಂತೆ ಕಾನೂನು ಇರಬೇಕು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಮಟ್ಟದಲ್ಲಿ ಸಮಿತಿ ಇರಬೇಕು. ಜನರು ಮೌಢ್ಯದಿಂದ ಮುಕ್ತರಾಗಬೇಕು. ಧಾರ್ಮಿಕ ಹಕ್ಕುಗಳಿಗೆ ತೊಂದರೆಯಾಗದಂತೆ ಮೌಢ್ಯಗಳನ್ನು ನಿಷೇಧಿಸುವ ಕಾನೂನು ಜಾರಿಗೆ ಬರಬೇಕು.

33 thoughts on “ಧಾರ್ಮಿಕ ಹಕ್ಕುಗಳಿಗೆ ತೊಂದರೆಯಾಗದಂತೆ ಮೌಢ್ಯಗಳನ್ನು ನಿಷೇಧಿಸುವ ಕಾನೂನು ಅವಶ್ಯ

  1. ಪ್ರಭುರಾಜ್ ಹರಕಂಗಿ

    ನಿಮ್ಮ ಮಾಹಿತಿಗಾಗಿ, ಮೂಢನಂಬಿಕೆ ವಿರೋಧಿ ಕಾನೂನು ಸಂವಿಧಾನದಲಿ ಇದೆ..!! ಹೊಸದಾಗಿ ಇವರೇನು ಮಾಡೋದು.. ದುಡ್ಡು ಹೊಡೆಯೋಕೆ ಮತ್ತೊಂದು ದಾರಿ ಹುಡುಕ್ತಿದಾರೆ ಅಷ್ಟೇ..!! ಇನ್ನು ನೀವು ರಾಮದೇವ, ರವಿಶಂಕರ್, ಸದ್ಗುರು ಜಗ್ಗಿ ವಾಸುದೇವ್ ಇಂಥವರ ಹೆಸರುಗಳನ್ನ ಇಲ್ಲೇ ಏತಕ್ಕೆ ತಂದ್ರಿ ಅಂತ ನನಗಂತೂ ಅರ್ಥ ಆಗ್ಲಿಲ್ಲಾ..! ಜಗತ್ತು ಅವರಿಗೆ ಒಂದೆಡೆ ನೊಬೆಲ್ ಶಾಂತಿ ಪುಸ್ರಸ್ಕಾರ ಕೊಡಿಸಬೇಕು ಅಂತಾ ಓಡಾಡ್ತಿದ್ರೆ ನಿಮ್ಮದೆಂಥಾ ಸಂಕುಚಿತ ಮನೋಭಾವ.. ಹೃದಯ ವೈಶಾಕ್ಯತೆ ಇಲ್ಲೆಡೆ ಇರೋದು ಕೂಡ ಒಂದು ದೊಡ್ಡ ಮೂಧನಬಿಕೆಯೇ.. ನೀವು ಮೊದಲು ಹೊರಗೆ ಬನ್ನಿ..!! ಜ್ಯೋತಿಷ್ಯ ಶಾಸ್ತ್ರದ ಅಧ್ಯಯನ ವಿಶ್ವವಿದ್ಯಾಲಯಗಳಲ್ಲಿ ನಡೀಲಿ, ಆಗ ನಿಜವಾದ ಜ್ಯೋತಿಷಿ – ಸುಳ್ಳು ಜ್ಯಿತಿಷಿ ಯಾರು ಅಂತಾ ಜನರೇ ತೀರ್ಮಾನ ಮಾಡಬಹುದಲ್ಲಾ..!! ನಂಬಿಕೆ ಇದ್ದೋರು ಜ್ಯೋತಿಷಿಗಳನ್ನ ಭೆಟ್ಟಿ ಆಗಲಿ.. ಈಗ ನೀವು ಜ್ಯೋತಿಷ್ಯ ಶಾಸ್ತ್ರ ಸುಳ್ಳು ಅನ್ನೋ ಕಿತ್ತು ಹೋಗಿರೋ ವಾದ ಮಾಡಬೇಡಿ.. ಆಯುರ್ವೇದ,ಯುನಾನಿ, ರೇಕಿ ವೈಜ್ಞಾನಿಕ ಆಲ್ವಾ .. ಹಾಗೆ ಜ್ಯೋತಿಷ್ಯ ಕೂಡ.. ಆಯುರ್ವೇದದದಲ್ಲಿ ಬಹಳಷ್ಟು ಔಷಧಿಗಳನ್ನ ಸಮಯ – ತಿಥಿ – ಗ್ರಹಗತಿ ನೋಡೇ ಕೊಡ್ತಾರೆ..!! ಸ್ವಲ್ಪ ಜ್ಞಾನ ಬೆಳೆಸಿಕೊಂಡು ವಿಸ್ತಾರವಾಗಿ ಓದಿ ಅಂಕಣ ಬರೀರಿ.. ಅದು ನಿಜವಾದ ಪತ್ರಿಕಾ ಧರ್ಮ.. ನೀವು ಒಂದು ಮಗುವನ್ನ ತುಳಿಯೋ ಫೋಟೋ ಹಾಕಿದ್ದೀರಿ, ಅಂತ ಆಚರಣೆಗಳನ್ನಾ ಯಾರೂ ಸಪೋರ್ಟ್ ಮಾಡ್ತಿಲ್ಲಾ.. ಅಂಥಾ ಆಚರಣೆಗಳು ಭಾರತದಲ್ಲಿ ಸತ್ತು ಹೋಗಿ ಬಹಳ ವರ್ಷ ಆಯ್ತು.. ಮತ್ತೆ ಅಂತ ಫೋಟೋ ಹಾಕಿ ಜನರನ್ನ confuse ಮಾಡಿ ನಿಮ್ಮ ಅಂಕಣದ TRP ಜಾಸ್ತಿ ಮಾಡ್ಕೊಳೋ ಪ್ರಯತ್ನ ಬೇಡ.. ಸಂಪೂರ್ಣವಾಗಿ ಆಳ ಅಧ್ಯಯನ ಮಾಡಿ ಬರೀರಿ.. ಇನ್ನೊಂದು ಸದ್ಗುರು ಜಗ್ಗಿ ವಾಸುದೇವ್ ಅವರು ಈ ಸಮಯದ ಜಗತ್ತಿನ ಮೊದಲ 10 ಶೇಷ್ಠ ತತ್ವಜ್ಞಾನ ವಾಗ್ಮಿಗಳಲ್ಲಿ ಒಬ್ಬರು..!! ಅವರು ಮಂತ್ರ – ಯಂತ್ರ ವಿದ್ಯೆಗಳಲ್ಲಿ ಹೊಸ ಪ್ರಯೋಗಗಳನ್ನೂ ಮಾಡಿದಾರೆ ಅನ್ನೋದು ವಿಶೇಷ..!! ನಿಮ್ಮ ಪ್ರಪಂಚವೇ ಸರಿ -ಅದೇ ಸಂಪೂರ್ಣ ಅನ್ನೋದರಿಂದ ಹೊರಬಂದು ನೋಡಿದರೆ ಮಾತ್ರ ನಿಜವಾದ ಅಂಕಣ ಅನ್ನಿಸಿಕೊಳ್ಳುತ್ತೆ..!!

    Reply
  2. Srini

    In every field there are crooks….there are Sanskrit universities which teaches Astrology….yes, as Mr. Prabhuraj rightly mentioned, Ayurveda also follows some part of astrology…..You already have enough laws…just implement them strongly to punish crooks…

    Reply
  3. Kodava

    ಹೌದು . ನಿಜವಾದ ಜ್ಯೋತಿಷ್ಯ ಶಾಸ್ತ್ರ ವೆಂಬುದು ವಿಜ್ಞಾನದ ಇನ್ನೊದು ಮುಖ . ಹಿಂದಿನ ಕಾಲದಲ್ಲಿ ಯಾವ ಸ್ಯಾಟಲೈಟ್/ Computer ಗಳಿದ್ದವು ?? ಕವಡೆ ಯಿಂದಲೇ , ಜ್ಯೋತಿಷ್ಯದಿಂದಲೇ ಸೂರ್ಯಗ್ರಹಣ , ಚಂದ್ರ ಗ್ರಹಣ ವನ್ನು ನಿಖರವಾಗಿ ಹೇಳುತ್ತಿದ್ದರಲ್ಲ .. ಅದು ಸುಳ್ಳಾ ??
    ನಿಜವಾಗಿ ಜನರ ಬಗ್ಗೆ ಕಾಳಜಿ ಇದ್ದರೆ ಈ ಸರ್ಕಾರಕ್ಕೆ ಸುಳ್ಳು ಜಾಹಿರಾತುಗಳನ್ನು ನಿಷೇದಿಸಲಿ. ಇಂದಿನ ಸಮಾಜದಲ್ಲಿ ಜಾಹಿರಾತುಗಳೇ ಜನರನ್ನು ದಾರಿ ತಪ್ಪಿಸುತ್ತವೆ . ಅದು ಯಾವುದೋ ಕ್ರೀಮ್ ಅಂತೆ ಅದನ್ನು ಹಚ್ಚಿಕೊಂಡರೆ ಚರ್ಮ ಬಿಳುಪಾಗುತ್ತ೦ತೆ , ಇನ್ಯಾವುದೋ ಎಣ್ಣೆ ಹಾಕಿದರೆ ತಲೇಲಿ ಕೂದಲು ಬರುತ್ತಂತೆ , ಅದ್ಯಾವುದೋ ಬಟ್ಟೆ ಸೋಪು ಬಟ್ಟೆಯನ್ನು ಹಾಲಿನಂತೆ ಬಿಳುಪು ಮಾಡುತ್ತಂತೆ . ನೈಜತೆಯನ್ನು ಮರೆಮಾಚುವ ಇಂಥ MNC ಕಂಪೆನಿಗಳ ಪೊಳ್ಳು ಜಾಹಿರಾತನ್ನು ಮೊದಲು ನಿಷೇದಿಸಿ. ಅದು ಬಿಟ್ಟು ಸ್ವದೇಶೀ ವಸ್ತುಗಳಿಂದ ಸ್ವದೇಶದಲ್ಲಿ ತಯಾರಾಗಿ , ಯಾವುದೇ ಜಾಹಿರಾತಿಲ್ಲದೇ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ದಿನಬಳಕೆ ವಸ್ತುಗಳನ್ನು ” ಪತಂಜಲಿ ” ಹೆಸರಿನಲ್ಲಿ ತಯಾರಿಸಿ ದೇಶದ ಉದ್ದಾರಕ್ಕೆ ಕೈಜೋಡಿಸುತ್ತಿರುವ ಬಾಬಾ ರಾಮದೇವ್ ಬಗ್ಗೆ ಕೆಟ್ಟದಾಗಿ ಬರೆಯುತ್ತೀರಲ್ಲ ???
    ವರ್ತಮಾನದಲ್ಲಿ ಪೊಳ್ಳು ಜಾಹಿರಾತುಗಳ ಬಗ್ಗೆ ಪಕ್ಷಾತೀತವಾಗಿ ಲೇಖನ ಬರಬಹುದೇ ???

    Reply
  4. Ananda Prasad

    ಜ್ಯೋತಿಷ್ಯ ಶಾಸ್ತ್ರವು ಸೂರ್ಯಗ್ರಹಣ, ಚಂದ್ರ ಗ್ರಹಣಗಳನ್ನು ನಿಖರವಾಗಿ ಹೇಳುವುದು ಖಗೋಳಶಾಸ್ತ್ರದ ಲೆಕ್ಕಾಚಾರಗಳ ಮೂಲಕ. ಖಗೋಳಶಾಸ್ತ್ರ ಒಂದು ವಿಜ್ಞಾನ ಎಂಬುದರಲ್ಲಿ ಸಂದೇಹವಿಲ್ಲ. ಜ್ಯೋತಿಷ್ಯ ಶಾಸ್ತ್ರವು ವಿಜ್ಞಾನವಲ್ಲ. ಯಾರಿಂದಲೂ ಭವಿಷ್ಯದಲ್ಲಿ ಏನಾಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅದರಲ್ಲೂ ಮುಖ್ಯವಾಗಿ ಗ್ರಹ, ನಕ್ಷತ್ರಗಳು ಮಾನವನ ವೈಯಕ್ತಿಕ ಜೀವನದ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಹೀಗಾಗಿ ಗ್ರಹ, ನಕ್ಷತ್ರಗಳ ಲೆಕ್ಕಾಚಾರದ ಮೂಲಕ ಅಥವಾ ಮಾನವನ ಹುಟ್ಟಿದ ದಿನ, ಘಳಿಗೆ ಇತ್ಯಾದಿಗಳ ಮೇಲೆ ಒಬ್ಬ ಮನುಷ್ಯನ ಭವಿಷ್ಯ ಹೇಳುತ್ತೇನೆ ಎಂದು ಜ್ಯೋತಿಷಿಗಳು ಹೇಳುವುದು ಶುದ್ಧ ಸುಳ್ಳು ಎಂಬುದರಲ್ಲಿ ಸಂದೇಹವೇ ಇಲ್ಲ. ಒಬ್ಬ ಮನುಷ್ಯನ ಜೀವನ ಅವನು ಹುಟ್ಟಿದ ದಿನ, ಘಳಿಗೆಯ ಮೇಲೆ ಅವಲಂಬಿತವಾಗಿಲ್ಲ ಬದಲಿಗೆ ಅವನ ಕೌಟುಂಬಿಕ ಹಾಗೂ ಆರ್ಥಿಕ ಹಿನ್ನೆಲೆ, ಪರಿಶ್ರಮ, ಸಾಧನೆ, ಬುದ್ಧಿಶಕ್ತಿಯ ಮೇಲೆ ಅವಲಂಬಿತವಾಗಿದೆ. ಮನುಷ್ಯನ ಬುದ್ಧಿಶಕ್ತಿ ಆತನು ತಂದೆ ತಾಯಿಗಳಿಂದ ಪಡೆದ ವಂಶವಾಹಿಗಳ ಮೇಲೆ ನಿರ್ಧಾರವಾಗುತ್ತದೆ. ಅದನ್ನು ಯಾವ ಜ್ಯೋತಿಷಿ, ಪೂಜೆ, ಪುನಸ್ಕಾರಗಳಿಂದಲೂ ಬದಲಿಸುವುದು ಸಾಧ್ಯವಿಲ್ಲ. ಯಾವುದೇ ಘಟನೆಗಳನ್ನೂ ಯಾವುದೇ ಜ್ಯೋತಿಷಿಯೂ ಮೊದಲೇ ಹೇಳುವುದು ಸಾಧ್ಯವೇ ಇಲ್ಲ. ಕೇವಲ ಊಹೆ ಮಾಡಿ ಹೇಳಬಹುದು ಅಷ್ಟೇ. ಹಾಗೆ ಊಹೆ ಮಾಡಿದ್ದರಲ್ಲಿ ಕೆಲವು ನಿಜವಾಗಬಹುದು, ಉಳಿದವು ಸುಳ್ಳಾಗುತ್ತವೆ. ದುರ್ಬಲ ಮನಸ್ಸಿನ, ಹೆಚ್ಚು ಯೋಚಿಸಲಾರದ ಮನುಷ್ಯರು ಜ್ಯೋತಿಷಿಗಳು ಹೆಣೆದ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ ಹಾಗೂ ಅವರ ಗುಲಾಮರಂತೆ ನಡೆದುಕೊಳ್ಳುತ್ತಾರೆ. ಓರ್ವ ಆತ್ಮವಿಶ್ವಾಸ ಇರುವ, ದೃಢ ನಿಲುವಿನ, ವಿವೇಚನಾ ಶಕ್ತಿ ಇರುವ ಮನುಷ್ಯ ಎಂದೂ ಜ್ಯೋತಿಷ್ಯವನ್ನು ನಂಬಲಾರ. ಅದನ್ನು ನಂಬುವ ಅಗತ್ಯವೂ ಇಲ್ಲ.

    Reply
  5. ಪ್ರಭುರಾಜ್ ಹರಕಂಗಿ

    ನೀವು ಇದೆ astrology ಮತ್ತು astronomy ವ್ಯತ್ಯಾಸ ಹಿಡ್ಕೊಂಡು ವಾದ ಮಾಡ್ತೀರಿ ಅಂತ ನನಗೆ ಗೊತ್ತಿತ್ತು.. ಸ್ವಾಮಿ ಎಲ್ಲಾ ಭಾರತೀಯ ಖಗೋಳ ಶಾಸ್ತ್ರಜ್ಞರು, ಗಣಿತಜ್ಞರು ಜ್ಯೋತಿಷಿಗಳು ಕೂಡ.. ಆಚಾರ್ಯ ಭಾಸ್ಕರನೇ ಅವನ ಮಗಳ ಸಾಯುವ ಸಮಯ ತಪ್ಪಿಸಬೇಕು ಅಂತ ಯಂತ್ರ ಮಾಡಿ ಕಷ್ಟ ಪಡಲಿಲ್ಲವೇ.. ಇಂಥಾ ಸಾವಿರಾರು ಉದಾಹರಣೆ ಇದೆ..! ನೀವು ನಂಬಿರುವ ವಿಜ್ಞಾನವೂ ನಂಬಿಕೆಯೇ ಹೊರತು ಸತ್ಯ ಅಲ್ಲಾ.. ನೀವು ನಂಬದೆ ಇದ್ರೆ ಹಾಳಾಗಿ ಹೋಗ್ಲಿ ನಮ್ಬವರಿಗಾದ್ರು ಬಿಡಿ..! ಜನರು ಬಹಳ ಸಾರಿ ಪರೀಕ್ಷೆ ಮಾಡಿದ ಮೇಲೆ ಅದು main streamಗೆ ಬರೋದು..! ಜ್ಯೋತಿಷ್ಯ ಅಂದ್ರೆ ನಿಂಗೆ ಹಿಂಗಾಗುತ್ತೆ ಅಂತ ಹೇಳೋದೊಂದೇ ಎಲ್ಲಾ.. ಇನ್ನೂ ಬಹಳಷ್ಟಿದೆ.. ನಿಮಗೆ ಗೊತ್ತಿಲ್ಲಾ ಅಂದ್ರೆ ಒಬ್ಬರನ್ನ ಯಾರಾದರೂ ಜ್ಯೋತಿಷಿನಾ ಭೆಟ್ಟಿ ಆಗಿ.. ತಿಳ್ಕೊಳಿ.. ಮೂಗಿನ ನೇರಕ್ಕೆ ವಿಚಾರ ಮಾಡಿ ಒಂದು ಶಾಸ್ತ್ರ ಕೊಲೆ ಮಾಡಬೇಡಿ..

    Reply
  6. ಪ್ರಭುರಾಜ್ ಹರಕಂಗಿ

    ACCURACY and PRECISION these are the terms used in science to authenticate property of any material by measuring instruments: If you get 10 wrong readings also by an instrument continuously, than average of all those readings a precised value will become TRUTH according to science, this precised reading may not may or may not be accurate some times close to accurate value..!! see the uncertainty is there in every aspect, When Jyotishya Shastra has proven its stability with so much of examples you have to accept it as science..!

    Reply
  7. ಪ್ರಭುರಾಜ್ ಹರಕಂಗಿ

    Jyotishya Shastra is not only in Hindu Religion, Its there in all cultures with different names and has different approach methods.

    Reply
  8. Ananda Prasad

    ವಿಜ್ಞಾನವೂ ಒಂದು ನಂಬಿಕೆ ಎಂಬುದು ಅಮಾಯಕರನ್ನು ದಾರಿ ತಪ್ಪಿಸುವ ವಾದ ಅಥವಾ ವಿತಂಡವಾದ ಎನ್ನಬಹುದು. ವಿಜ್ಞಾನವು ಪ್ರಯೋಗ, ವೀಕ್ಷಣೆ, ಫಲಿತಾಂಶಗಳಿಂದ ಕೂಡಿದ್ದು ಒಂದು ಪ್ರಯೋಗವನ್ನು ಎಷ್ಟು ಸಲ, ಪ್ರಪಂಚದ ಎಲ್ಲೇ ಮಾಡಿದರೂ ಒಂದೇ ಫಲಿತಾಂಶವನ್ನು ನೀಡುತ್ತದೆ. ಹೀಗಾಗಿ ಇದು ಬರಿಯ ನಂಬಿಕೆ ಅಲ್ಲ, ಇದೊಂದು ವಾಸ್ತವ. ಕೆಲವು ಪ್ರತಿಗಾಮಿಗಳು ವಿದ್ಯುತ್ ಕಣ್ಣಿಗೆ ಕಾಣುವುದಿಲ್ಲ ಆದರೂ ನೀವು ವಿದ್ಯುತ್ ಅನ್ನು ನಂಬುತ್ತೀರಿ ಹೀಗಾಗಿ ವಿಜ್ಞಾನವೂ ಒಂದು ನಂಬಿಕೆ ಎಂಬ ಯೋಚಿಸಲಾರದ ಜನರ ದಾರಿ ತಪ್ಪಿಸುವ ವಾದಗಳನ್ನು ಮಾಡುತ್ತಾರೆ. ವಿದ್ಯುತ್ ಕಣ್ಣಿಗೆ ಕಾಣದಿದ್ದರೂ ಅದರ ಸಾಮರ್ಥ್ಯವನ್ನು ಹಲವು ವಿಧಗಳಲ್ಲಿ ಸಾಬೀತು ಪಡಿಸಬಹುದು ಉದಾಹರಣೆಗೆ ಬಲ್ಬ್ ಉರಿಸಿ, ಫ್ಯಾನ್ ತಿರುಗಿಸಿ, ಪಂಪು ಚಾಲೂ ಮಾಡಿ ಇತ್ಯಾದಿ. ನೇರವಾಗಿ ವಿದ್ಯುತ್ ಕಣ್ಣಿಗೆ ಕಾಣದಿದ್ದರೂ ಅದರ ಪರಿಣಾಮಗಳ ಮೂಲಕ ವಿದ್ಯುತ್ ಇದೆ ಎಂಬುದನ್ನು ತೋರಿಸಬಹುದು. ಹೀಗಾಗಿ ವಿಜ್ಞಾನವೂ ನಂಬಿಕೆ ಎಂಬುದು ಜನರ ದಾರಿ ತಪ್ಪಿಸುವ ವಿತಂಡವಾದವೇ ಹೊರತು ಮತ್ತೇನೂ ಅಲ್ಲ. ಸೂಕ್ಷ್ಮ ಜೀವಿಗಳಾದ ವೈರಸ್, ಬ್ಯಾಕ್ಟೀರಿಯಾಗಳು ಕಣ್ಣಿಗೆ ಕಾಣದಿದ್ದರೂ ಸೂಕ್ಷದರ್ಶಕ, ಇಲೆಕ್ಟ್ರಾನ್ ಸೂಕ್ಷದರ್ಶಕದ ಮೂಲಕ ನೋಡಬಹುದು. ಇವುಗಳನ್ನು ವಿದ್ಯಾರ್ಥಿಗಳು ಕಣ್ಣಲ್ಲಿ ನೋಡದಿದ್ದರೂ ಪಾಠ ಮಾಡುವಾಗ ಪುಸ್ತಕದಲ್ಲಿ ಹೇಳಿದ್ದಾರೆ ಎಂದು ನಂಬುವುದು ಮಾತ್ರ ಅಲ್ಲ, ಇವುಗಳ ಅಸ್ತಿತ್ವವನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಹಾಗಾಗಿ ಇವುಗಳನ್ನು ವಿದ್ಯಾರ್ಥಿಗಳು ಪಾಠ ಕೇಳುವಾಗ ನೋಡದೆ ಇದ್ದರೂ ನಂಬಲು ಅಡ್ಡಿ ಇಲ್ಲ. ಇವುಗಳು ಕಣ್ಣಿಗೆ ಕಾಣುವುದಿಲ್ಲ, ಹಾಗಾಗಿ ವೈರಸ್, ಬ್ಯಾಕ್ಟೀರಿಯಾಗಳೇ ಇಲ್ಲ ಎಂದು ಯಾವ ವಿಜ್ಞಾನಿಯೂ ಅಲ್ಲಗಳೆದಿಲ್ಲ.

    ಜ್ಯೋತಿಷ್ಯವು ವಿಜ್ಞಾನ ಎಂದಾದರೆ 5 ಸತ್ತ ಹಾಗೂ 5 ಜೀವಂತ ಇರುವ ಹೀಗೆ ಒಟ್ಟು ಹತ್ತು ವ್ಯಕ್ತಿಗಳ ಹುಟ್ಟಿದ ದಿನ ಮತ್ತು ಸಮಯ ನೀಡಿದರೆ ಅವುಗಳಲ್ಲಿ ಜೀವಂತ ಇರುವವರು ಯಾರು ಮತ್ತು ಎಂದು ನಿಖರವಾಗಿ ಹೇಳಿದರೆ ಅದನ್ನು ವಿಜ್ಞಾನ ಎಂದು ನಂಬಬಹುದು. ಹೀಗೆ ನಿಖರವಾಗಿ ವಾಯ ಜ್ಯೋತಿಷಿಯೂ ಹೇಳುವ ಧೈರ್ಯ ಮಾಡುವುದಿಲ್ಲ. ವಿಚಾರವಾದಿಗಳು ಈ ಕುರಿತು ಲಕ್ಷಾಂತರ ರೂಪಾಯಿಗಳ ಬಹುಮಾನ ಕೊಡುತ್ತೇವೆ ಎಂದು ಸವಾಲು ಹಾಕಿದರೂ ಈ ಸವಾಲನ್ನು ತೆಗೆದುಕೊಳ್ಳಲು ಪ್ರಪಂಚದ ಯಾವ ಜ್ಯೋತಿಷಿಯೂ ಇದುವರೆಗೆ ಮುಂದೆ ಬಂದಿಲ್ಲ. ಇದುವೇ ಸಾಕಲ್ಲವೇ ಜ್ಯೋತಿಷ್ಯ ಎಂಬುದು ಬುರುಡೆ ಎಂದು ಹೇಳ

    Reply
  9. VinData

    Can you guys please stop publishing the picture of a man standing on a baby? Picture itself is disgusting and to see it almost everyday in this blog is even more disgusting.

    Reply
  10. ಪ್ರಭುರಾಜ್ ಹರಕಂಗಿ

    @VinData.. Thats TRP trick, they wont remove it.
    @ಆನಂದ್ ಪ್ರಸಾದ್ : ನಿಮಗೆ ಜ್ಯೋತಿಷಿಗಳು ಹುಟ್ಟೋದು – ಸಾಯೋದು ಹೇಳ್ತಾರೆ ಅಂತಾ ಯಾರು ಹೇಳಿದ್ದು?? ನೀವು ಅಂಕಣಕಾರರಾಗಿ ಈ ಮಕ್ಕಳ ತರಹದ ವಾದ ಮಾಡೋದು ಸರಿಯಲ್ಲಾ. ಮೊದಲು ಓದೋದಕ್ಕೆ ಪ್ರಯತ್ನ ಪಡಿ ನಂತರ ಜ್ಯೋತಿಷ್ಯ ಶಾಸ್ತ್ರದ ವಿಸ್ತಾರ ಗೊತ್ತಾಗುತ್ತೆ.. ಜ್ಯೋತಿಷ್ಯ ಶಾಸ್ತ್ರವೂ ಪ್ರಯೋಗ – ಫಲಿತಾಂಶಗಳಿಂದ ಕೂಡಿದ್ದಾಗಿದೆ.

    Reply
    1. Ananda Prasad

      ಜ್ಯೋತಿಷಿಗಳು ಜಾತಕ ನೋಡಿ ಒಬ್ಬನ ಭವಿಷ್ಯ ಹೇಳುವುದಾದರೆ (ಅಂದರೆ ಹುಟ್ಟಿದ ದಿನ ಮತ್ತು ವೇಳೆ ಆಧರಿಸಿ) ಅದೇ ಆಧಾರದ ಮೇಲೆ ವ್ಯಕ್ತಿ ಸತ್ತಿದ್ದಾನೋ ಇಲ್ಲ ಬದುಕಿದ್ದಾನೋ ಎಂದು ಗೊತ್ತಾಗಬೇಕು. ಟಿವಿಯಲ್ಲಿ ಜ್ಯೋತಿಷಿಗಳು ಹುಟ್ಟಿದ ದಿನ ಹಾಗೂ ವೇಳೆ ಕೇಳಿ ವ್ಯಕ್ತಿಗಳ ಭವಿಷ್ಯದ ಬಗ್ಗೆ ಹೇಳುವ ಕಸರತ್ತು ಮಾಡುತ್ತಿರುವಾಗ ನಾನು ಕೇಳಿದ್ದು ಬಾಲಿಶ ಹೇಗಾಗುತ್ತದೆ? ಬಾಲಿಶ ಆಗುವುದು ಜ್ಯೋತಿಷಿಗಳ ಇಂಥ ನಡವಳಿಕೆಯೇ.

      Reply
  11. Srini

    If one journalist is rapist (tejpal), you can’t call journalists crooks or rapists. Similarly, there are crooks every where….lawyers, doctors, politicians..etc etc… Have you ever been to any Sanskrit university that teaches Astrology as part of their 7 year course? Need of the day is to regulate with existing laws which is already there…. What is the point just drafting new laws ?

    Reply
  12. ಪ್ರಭುರಾಜ್ ಹರಕಂಗಿ

    @ Srini.. ಹ್ಯೋತಿಷ್ಯ ಶಾಸ್ತ್ರ ಕಲಿಸೋ ಸಂಸ್ಕೃತ ವಿಶ್ವವಿದ್ಯಾಲಯಗಳ ಹೆಸರು ಗೊತ್ತಿದ್ರೆ ಹೇಳಿ.. ನನಗೆ ಅದರ ಬಗ್ಗೆ ಮಾಹಿತಿ ಇಲ್ಲಾ..!!

    Reply
  13. ಪ್ರಭುರಾಜ್ ಹರಕಂಗಿ

    @ Srini ಜ್ಯೋತಿಷ್ಯ ಶಾಸ್ತ್ರ ಕಲಿಸೋ ಸಂಸ್ಕೃತ ವಿಶ್ವವಿದ್ಯಾಲಯಗಳ ಹೆಸರು ಗೊತ್ತಿದ್ರೆ ಹೇಳಿ.. ನನಗೆ ಅದರ ಬಗ್ಗೆ ಮಾಹಿತಿ ಇಲ್ಲಾ..!!

    Reply
  14. Srini

    @Prabhuraj – In Sanskrit Vidwat course, Jyotisha is also a subject. One college I know is SMSP Sanskrit College in UDUPI. There is similar on in Tirupati as well. I know about Udupi because my father was principal there (now retired).

    Yes, there are many quacks in TV….such as Brahmanda etc….I don’t deny that…but because of those croocks, I am not ready to insult whole field..That is immature..

    Reply
  15. Kodava

    ವಿಜ್ಞಾನ ಅಸ್ಟೊಂದು ಮುಂದುವರೆದಿದೆ ಅಲ್ವಾ !!! ಹಾಗಾದ್ರೆ ಯಾಕೆ ಇಂಥಹ ದಿನ ಭೂಕಂಪ ಆಗುತ್ತೆ ಅಂತ ಯಾಕೆ ನಿಖರವಾಗಿ ಹೇಳೋಕಾಗಲ್ಲ ??? ಮಳೆ ಬರುತ್ತೆ ಅಂದ ದಿನ ಮಳೆನೆ ಬರೋಲ್ಲ ?? ಎಲ್ಲರೂ ಯಾವುದನ್ನೂ ನಿಖರವಾಗಿ ಹೇಳೋಲ್ಲ … ಶ್ರೀನಿ ಯವರು ಹೇಳಿದ ಹಾಗೆ ಒಬ್ಬ ಕಳ್ಳ ಜ್ಯೋತಿಷ್ಯ ಇದ್ದ ಮಾತ್ರಕ್ಕೆ ಎಲ್ಲರೂ ಕಳ್ಳರಲ್ಲ … ಒಬ್ಬ ಕಳ್ಳ ಡಾಕ್ಟರ್ ಇದ್ದ ಮಾತ್ರಕ್ಕೆ ಎಲ್ಲರೂ ಕಳ್ಳ ಡಾಕ್ಟರ್ ಆಗುತ್ತರೆಯೇ ??? ಆದರೆ ವಿಪರ್ಯಾಸ ಅಂದರೆ ರಾಜಕಾರಣಿಗಳು ( 99 %) ಎಲ್ಲರೂ ಕಳ್ಳರೇ ಇದ್ದರೂ ಅವರನ್ನು ಎಲ್ಲರೂ ನಂಬುವುದು …. ಏನಂತೀರ ???

    Reply
    1. Shamu Hassan

      ವಿಜ್ಞಾನ ಅಸ್ಟೊಂದು ಮುಂದುವರೆದಿದೆ ಅಂದರೆ ಹಿಂದಿನ ದಿನಗಳಿಗೆ ಹೋಲಿಸಿದರೆ ಮುಂದುವರೆದಿದೆ ಎಂರ್ಥ, ಇನ್ನೂ ಈ ಭೂಮಿಯ ಮೇಲೆ ನಡೆಯುತ್ತಿರುವ ವಿಸ್ಮಯಗಳು ಮನುಷ್ಯನ ಪರಿಕ್ಪನೆಗೆ ನಿಲುಕದ್ದಾಗಿದೆ , ಆದುದರಿಂದಲೇ ನಿನಂಪ್ರತಿ ಆವಿಷ್ಕಾರಗಳು ನಡೆಯುತ್ತಿವೆ.
      …. ಇಂಥಹ ದಿನ ಭೂಕಂಪ ಆಗುತ್ತದೆ ಎಂದು ಅಥವಾ ಇಂಥಹ ದಿನ ಮಳೆ ಆಗುತ್ತದೆ ಎಂದು ಹೇಳಲು ವಿಜ್ಞಾನಕ್ಕೆ ಸಾಧ್ಯವಿಲ್ಲವೆನ್ನುವುದಾದರೆ , ಜ್ಯೋತಿಷ್ಯ ದಿಂದ ಹೇಳಬಹುದಲ್ಲಾ ?
      ….. ಫಲ ಜ್ಯೋತಿಷ್ಯ , ಸಂಖ್ಯಾಶಾಸ್ತ್ರಗಳಲ್ಲವೂ ಸುಳ್ಳಿನ ಕಂತೆಗಳು .
      ವಿಜ್ಞಾನದಲ್ಲಿ ಇಂದು ಇಂತಹ ಘಟನೆ ನಡೆಯುತ್ತದೆ ಎಂದರೆ ನಡೆದೇತೀರುತ್ತದೆ . 2012 ರ ಪ್ರಳಯದ ರೀತಿ ಹೆದರಿ ಮುಂದೊಗುವುದಲ್ಲ.
      … ಮಳೆಯ ವಿಚಾರದಲ್ಲಿ “ಮಳೆ ಬರುವ ಸಾಧ್ಯತೆ ಇದೆ ಎಂದಷ್ಟೇ ಹೇಳಲಾಗುತ್ತದೆ ”
      …ಭೂಕಂಪದ ವಿಚಾರವಾಗಿ ಇನ್ನೂ ಅಧ್ಯಯನಗಳು ನಡೆಯಬೇಕಾಗಿದೆ.
      ಪ್ರಕೃತಿಕ ಅವಘಡಗಳು ಸಂಭವಿಸಿದಾಗ ವಿಜ್ಞಾನ ಮತ್ತು ತಂತ್ರಜ್ಞಾನಮಾತ್ರ ಸಹಾಯಕ್ಕ ಬರುತ್ತದೆಯೇ ವರತು , ಯಾವುದೇ ಆಗಂತಕ ಅಥವಾ ಅತೀಮಾನುಷ ಶಕ್ತಿಗಳು ಯಾರನ್ನೂ ರಕ್ಷಿಸಲಾವರು .
      … ವಿಜ್ಞಾನಕ್ಕೇ ಮಾತ್ರ ಎಲ್ಲಾ ಧರ್ಮಗಳನ್ನು ಒಂದು ಮಾಡುವ ಶಕ್ತಿ ಇರುವುದು…
      ನಾವಿಂದು ಕಂಪ್ಯೂಟರ್ ಉಪಯೊಗಿಸುತ್ತಿರುವುದು ವಿಜ್ಞಾನದ ಅವೀಷ್ಕಾರವೇ ವರತು, ಯಾವುದೇ ಜ್ಯೋತಿಷಿ ಹೇಳಿರಲೇ ಇಲ್ಲ ಕಂಪ್ಯೂಟರ್ ಅವೀಷ್ಕಾರದ ಕುರಿತು. ಯಾವುದೇ ಧರ್ಮ ಗ್ರಂಥಗಳಲ್ಲೂ ಬರೆದಿರಲಿಲ್ಲ ಕಂಪ್ಯೂಟರ್ ನಲ್ಲಿ ಬಳಸುವ Boolean Algebra ದ ಬಗ್ಗೆ.
      … ಜಗತ್ತಿಗೇ ಅನ್ನ ಕೊಡುವ ವ್ಯವಸಾಯದ ಬಗ್ಗೇಯೇ ಆ ಪುರಾಗಲ್ಲಿ ಬರೆದಿಲ್ಲ ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ಇನ್ನೆಲ್ಲಿ ಬರೆದಾರು ?

      Reply
  16. Ahamed

    ಜನ ಸಾಮಾನ್ಯರೆ ಪುರೋಹಿತಶಾಹಿಗಳ ಮತಾಂಧ ಭಾವನಾತ್ಮಕ ಸಮ್ಮೋಹನಕ್ಕೆ ಒಳಗಾಗದಿರಿ॒
    ಕಳೆದ ೩ತಿಂಗಳ ಹಿಂದೆ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಬೋಲ್ಕರರ ಹತ್ಯೆಯ ಕಾರಣ ದೇಶಾದ್ಯಂತ ಮಾನವ ಪ್ರೇಮಿಗಳು ನಡೆಸಿದ ವಿಚಾರ ಯುದ್ಧದ ಕಾರಣ ಮಹಾರಾಷ್ಟ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ಮೂಢನಂಬಿಕೆ ವಿರೋಧಿ ಶಾಸನವನ್ನು ಜಾರಿಗೊಳಿಸಿತು, ಇದರಿಂದ ಪ್ರೇರೇಪಿತರಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರ್ನಾಟಕದಲ್ಲೂ ಈ ಮಾದರಿ ಶಾಸನ ರೂಪಿಸಲು ಭರವಸೆ ನೀಡಿ ಕರಡು ಸಿದ್ಧಪಡಿಸಲು ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿದ್ಯಾಲಯದ ಸಾಮಾಜಿಕ ಹೊರಗೊಳ್ಳುವಿಕೆ ಮತ್ತು ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರಕ್ಕೆ ವಹಿಸಿತ್ತು ಅದು ಸಮಗ್ರ ಅಧ್ಯಯನ ಮಾಡಿ ಒಂದು ಕರಡನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿದೆ. ಈ ಕರಡು ಕುರಿತು ಮಾದ್ಯಮಗಳ ಮೂಲಕ ಸಾಕಷ್ಟು ಚರ್ಚೆ ಶುರುವಾಗಿದೆ. ಕೆಲ ಪತ್ರಿಕೆಗಳು ಹಿಂದೂ ಧರ್ಮದ ಮೇಲಿನ ದಾಳಿ ಎಂತಲೂ ಪ್ರತಿಪಾದಿಸುತ್ತಿದೆ ವಿರೋಧಿ ಪಕ್ಷಗಳು ಸಹಜವೆಂಬಂತೆ ತಮ್ಮ ರಾಜಕೀಯ ದಾಳಿಯನ್ನು ಮಾಡುತ್ತಿವೆ, ಮತ್ತೊಂದು ಪತ್ರಿಕೆಯಲ್ಲಿ ಅಂಕಣಕಾರರೊಬ್ಬರು ಎಂದಿನಂತೆ ಪ್ರತಿಗಾಮಿ ಸಿದ್ಧಾಂತವನ್ನು ಮಂಡಿಸಿ ಕರಡಿನಲ್ಲಿ ಪ್ರಸ್ತಾಪಿತವಾದದ್ದೂ, ಇಲ್ಲದ್ದು ಎಲ್ಲವನ್ನೂ ಗೋಜಲುಗೊಳಿಸಿ ಪ್ರತಿಯೊಬ್ಬರ ಆಚಾರ ವಿಚಾರವನ್ನೂ ತಾರ್ಕಿಕವಾಗಿ ಎಳೆತಂದು ಕರಡಿನ ಮೂಲಾಶಯವನ್ನೇ ಮರೆಮಾಚಿ ಚರ್ಚಿಸುವ ವೇದಿಕೆ ಸೃಷ್ಟಿಸುತ್ತಿದ್ದಾರೆ ಒಟ್ಟಾರೆ ಕರಡು ಜನಮಾನಸದಿಂದ ದೂರಸರಿಯಲೇ ಬೇಕು ಎಂಬುದು ಇವರ ಸೈದ್ಧಾಂತಿಕ ಗುರಿ. ಇದು ನಿನ್ನೆ ಮೊನ್ನೆಯದಲ್ಲ ಬಿಡಿ ತಲತಲಾಂತರದಿಂದ ನಡೆಸಿಕೊಂಡು ಬಂದ ಇವರ ಜಾಣ ತಂತ್ರ ಅದು.
    ನಮ್ಮ ಸಂವಿಧಾನದ ವಿಧಿ ೫೧ಎ(ಹೆಚ್) ವೈಜ್ಞಾನಿಕ ಮನೋಭಾವದ ಕುರಿತು ಈ ರೀತಿ ಹೇಳುತ್ತದೆ: ದೇಶದ ಪ್ರತಿಯೊಬ್ಬ ನಾಗರೀಕನೂ ವೈಜ್ಞಾನಿಕ ಮನೋಭಾವ, ಮಾನವೀಯತೆ ಮತ್ತು ವೈಚಾರಿಕ ಮನೋಭಾವವನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಹೊಂದಿರತಕ್ಕದ್ದು. ಹಾಗೆಯೆ ಪ್ರತಿಯೊಬ್ಬನಿಗೂ ವ್ಯಕ್ತಿ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸ್ವಾತಂತ್ರದ ಹಕ್ಕನ್ನೂ ನೀಡಿದೆ. ಇದರ ವಿಶಾಲಾರ್ಥ ತಲತಲಾಂತರದಿಂದ ಬೆಳೆದು ಬಂದ ಭಾರತದ ಸಾಂಸ್ಕೃತಿಕ ಬದುಕಿನಲ್ಲಿ ಸಾಕಷ್ಟು ಮೂಢಾಚರಣೆಗಳು ತಮಗರಿವಿಲ್ಲದಂತೆಯೇ ಸಮಾಜ ಮತ್ತು ಜನತೆ ಅಳವಡಿಸಿಕೊಂಡಿರುತ್ತಾರೆ. ದೇವರು ಮತ್ತು ಧರ್ಮದ ಕುರಿತು ಇರುವ ಮುಗ್ಧತೆ ಮತ್ತು ಅಜ್ಞಾನವನ್ನು ಭಾರತದ ಪುರೋಹಿತವರ್ಗ ಮತ್ತು ಪಾಳೇಗಾರಿ ವರ್ಗ ಪ್ರಜ್ಞಾಪೂರ್ವಕವಾಗಿ ಬಳಸಿಕೊಂಡು ಅಂಧಕಾರದಲ್ಲಿ ಇಡುತ್ತಿವೆ ಎನ್ನುವುದನ್ನು ಸಾಕಷ್ಟು ಅಧ್ಯಯನಗಳು ಧೃಢಪಡಿಸಿವೆ. ಈ ಹಿನ್ನಲೆಯಲ್ಲಿ ಜನತೆ ತಮ್ಮನ್ನು ತಾವು ಅರ್ಥೈಸಿಕೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಎಲ್ಲರಿಗೂ ಇಂದು ಸಾಕ್ಷರತೆ ಪಡೆಯುವ ಹಕ್ಕಿದೆ ಹಾಗಾಗಿಯೆ ಅವರ ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡಲೇ ಬೇಕಾಗಿದೆ ಅದೇ ಸಂದರ್ಭದಲ್ಲಿ ಕಾಲದ ಸವೆತದ ಜೊತೆ ಈ ಹಿಂದೆ ಇದ್ದ ನಂಬಿಕೆಗಳೆಲ್ಲವೂ ವಿಜ್ಞಾನದ ಬೆಳವಣಿಗೆಯ ಜೊತೆ ವಿಕಾಸವಾಗುತ್ತಾ, ಪಕ್ವಗೊಳ್ಳುತ್ತಾ ಸಾಗುತ್ತಿದೆ ಹಾಗಾಗಿ ಬಾಲವಿವಾಹ, ಮಡೆಸ್ನಾನ, ಸತಿ ಸಹಗಮನ, ಮಾಟ-ಮಂತ್ರ, ಜ್ಯೋತಿಷ್ಯ, ವಾಸ್ತು, ಅಸ್ಪೃಷ್ಯತೆ, ಜಾತಿ ಪದ್ಧತಿ, ಲಿಂಗ ತಾರತಮ್ಯ ಅಮಾನವೀಯತೆ ಎಂಬುದು ಸಾಬೀತಾಗಿದೆ ಹಾಗಾಗಿಯೇ ಜನತೆ ಇವನ್ನೂ ದೂರೀಕರಿಸುತ್ತಿದ್ದಾರೆ ಆದರೆ ಧರ್ಮಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಪುರೋಹಿತ ಪಾಳೆಗಾರಿವರ್ಗ ಜನಮಾನಸದಲ್ಲಿ ವೈಚಾರಿಕತೆ ಪುಟಿದೇಳದಂತೆ ತಡೆದು ಇಡಲು ಈ ಎಲ್ಲಾ ಚಟುವಟಿಕೆಗಳನ್ನು ಪರಂಪರೆ, ನಂಬಿಕೆ, ಬದುಕಿನ ಅಂಗ ಭಾಗವೆಂಬಂತಲೇ ಪೋಷಿಕೊಂಡು ಬರುವ ಹುನ್ನಾರ ನಡೆಸುತ್ತಲೇ ಇವೆ ಇದರ ಭಾಗವಾಗಿಯೇ ಬಹುತೇಕ ಸಮುದಾಯಗಳು ಅಮಾನವೀಯವಾಗಿ ಬಲಿಪಶುಗೊಳಗಾಗುತ್ತಿವೆ ಹಾಗಾಗಿ ಈ ಎಲ್ಲಾ ಚಟುವಟಿಕೆಗಳು ಇನ್ನೂ ಜೀವಂತವಾಗಿವೆ. ಈ ಸೈಬರ್ ಯುಗದಲ್ಲೂ ಇಂತಹ ಅಮಾನವೀಯ ಚಟುವಟಿಕೆಗಳು ಭಾರತದ ಬೆಳವಣಿಗೆಗೆ ಗಂಡಾಂತರಕಾರಿ, ಈ ಭಯದಿಂದಲೆ ಜನತೆಯ ಧಾರ್ಮಿಕ ನಂಬಿಕೆಗಳನ್ನು ರಕ್ಷಿಸುತ್ತಲೆ ಅತ್ಯಂತ ಅಪಾಯಕಾರಿ ಧಾರ್ಮಿಕ ಚಟುವಟಿಕೆಗಳನ್ನ ನಿಯಂತ್ರಿಸಲೇ ಬೇಕಾಗಿದೆ ಇದನ್ನು ಕಾನೂನಿಂದಲೇ ಸಾಧ್ಯವಿಲ್ಲ ಎನ್ನುವುದು ಸತ್ಯ ಈ ದೇಶದಲ್ಲಿ ಬಹಳಷ್ಟು ಈ ಕುರಿತ ಕಾನೂನುಗಳು ಸಹ ಇವೆ ಅದೂ ಸತ್ಯ ಜನತೆಯಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದು, ಪ್ರಜ್ಞೆ ಮೂಡಿಸುವವರಿಗೆ ರಕ್ಷಣೆ ನಿಡುವುದು ವ್ಯವಸ್ಥೆಯ ಆದ್ಯತೆಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲೇ ನಡೆದ ಪ್ರಯತ್ನವನ್ನು ಮೊಟುಕುಗೊಳಿಸುವ ಅತಿರಂಜಿತ ಪ್ರಯತ್ನ ನಡೆಸುತ್ತಿರುವುದು ಅಪಾಯಕಾರಿ ಇದನ್ನು ಸೈದ್ಧಾಂತಿಕವಾಗೆ ಎದುರಿಸಬೇಕಿದೆ.

    Reply
  17. ಪ್ರಭುರಾಜ್ ಹರಕಂಗಿ

    @Shamu Hassan : ನಾನು ಮೇಲೆ ಬರೆದ accuracy ಮತ್ತು precision ಬಗೆಗಿನ ವಿಜ್ಞಾನದ ಜಿಜ್ಞಾಸೆ ಅರಿತವರಾಗಿದ್ರೆ ಹಸ್ಸನ್ ಅವರು ಜ್ಯೋತಿಷ್ಯ ಶಾಸ್ತ್ರ ಕೂಡ ಸಂಭವನೀಯತೆ ತೋರಿಸೋ ಒಂದು ವಿಜ್ಞಾನ ಅನ್ನೋ ಥರ ನೋಡುತ್ತಿದ್ರು..ಆದರೆ ಅವರು ಅದನ್ನ ಓದಲಿಲ್ಲ ಅನ್ಸುತ್ತೆ.. ಓದಿದರೂ ಅರ್ಥೈಸಿಕೊಂಡಿದ್ದಾರೋ ಇಲ್ಲವೋ.. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ 3 ನೇ ಸೆಮಿಸ್ಟರ್ ನಲ್ಲಿ measurements ವಿಷಯದಲ್ಲಿ ನಿಮಗೆ ಇದರ ಬಗ್ಗೆ ಪೂರ್ತಿ ಮಾಹಿತಿ ಸಿಗುತ್ತೆ.. A K sawhani ಅವರು ಬರೆದಿರುವ ಪುಸ್ತಕ ನೋಡಬಹುದು.. ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಹತ್ತಿರವೂ ಇರುತ್ತೆ,..

    ವಿಜ್ಞಾನ ವಿಷಯಗಳಲ್ಲೂ ನೂರಕ್ಕೆ 80 ಶೇಕಡಾ ನೈಜತೆ ಬಿಟ್ಟು ಕನ್ವೆನ್ಷನ್ ಗಳನ್ನೇ ಉಪಯೋಗಿಸೋದು..

    ಹಳೆಯ ಪ್ರಯೋಗಗಳ ಉತ್ತರಗಳನ್ನ ಬಳಸಿಕೊಂಡು ಎಲ್ಲಾ ಶಾಸ್ತ್ರಗಳೂ ಸಂಭವನೀಯತೆ ಹೇಳುತ್ತವೆ.. ಹಾಗೆಯೇ ಜ್ಯೋತಿಷ್ಯ ಕೂಡ ಅದರಲ್ಲಿ ಒಂದು..

    ಭೂಮಿಯ ಗುರುತ್ವಾಕರ್ಷಣೆ ಅತಿಮಾನುಷವೇ.. ಅದರ ಅಪ್ಲಿಕೇಶನ್ ಗಳು ನಮ್ಮ ಸಹಾಯಕ್ಕೆ ಬರುತ್ತವೆ.. ಜ್ಯೋತಿಷ್ಯ ಶಾಸ್ತ್ರವು ಕೂಡ ಅಂತ ಒಂದು ಅಪ್ಲಿಕೇಶನ್ ಟೂಲ್ ಮಾತ್ರ.. ಇಡೀ ವಿಜ್ಞಾನವೇ ಮನುಷ್ಯನ ಜೀವನ ಸುಧಾರಿಸುವ ಸಲಕರಣೆಗಳನ್ನ ತಯಾರು ಮಾಡುತ್ತೆ.. ಅದರಲ್ಲಿ ಒಂದು ಸಣ್ಣ ವಿಭಾಗ ಜ್ಯೋತಿಶ್ಯ ಶಾಸ್ತ್ರ..

    Reply
    1. Ananda Prasad

      ಜ್ಯೋತಿಷ್ಯವು ವಿಜ್ಞಾನ ಅಲ್ಲ, ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರವೂ ಇಲ್ಲ. ಉದಾಹರಣೆಗೆ ಮದುವೆಗೂ ಮೊದಲು ವಧು ವರರ ಜಾತಕ ನೋಡಿ ಅವುಗಳು ಕೂಡಿಬಂದರೆ ಮಾತ್ರ ಮದುವೆ ಮಾಡಬೇಕು ಎಂಬುದು. ಜಾತಕ ಎಂಬುದು ವ್ಯಕ್ತಿಯ ಹುಟ್ಟಿದ ದಿನ ಹಾಗೂ ವೇಳೆಯನ್ನು ಆಧಾರವಾಗಿ ಇಟ್ಟುಕೊಂಡು ರೂಪಿಸುವಂಥದ್ದು. ಹೀಗಾಗಿ ಜಾತಕ ಎಂಬುದು ಸಂಪೂರ್ಣ ಅವೈಜ್ಞಾನಿಕ. ವಧು ಅಥವಾ ವರರ ಹುಟ್ಟಿದ ದಿನ ಹಾಗೂ ವೇಳೆಗಳು ಹೇಗೆ ಮದುವೆಯಾಗುವ ವ್ಯಕ್ತಿಗಳ ಜೀವನವನ್ನು ಪ್ರಭಾವಿಸುತ್ತವೆ? ಅವುಗಳು ವ್ಯಕ್ತಿಗಳ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಲು ಒಂದು ಎಳ್ಳು ಕಾಳಿನಷ್ಟೂ ವೈಜ್ಞಾನಿಕ ಆಧಾರ ಇಲ್ಲ. ಅದೇ ರೀತಿ ಶುಭ ವೇಳೆ ಅಥವಾ ಮುಹೂರ್ತ ಎಂಬ ಕಲ್ಪನೆ. ಇದು ಕೂಡ ಶುದ್ಧ ಅವೈಜ್ಞಾನಿಕ. ವೇಳೆಯಲ್ಲಿ ಶುಭ ವೇಳೆ ಅಶುಭ ವೇಳೆ ಎಂದು ನಿರ್ಧರಿಸಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲವೇ ಇಲ್ಲ. ಎಲ್ಲ ವೇಳೆಗಳೂ ಶುಭ ವೇಳೆಗಳೇ. ಶುಭ ವೇಳೆ ಅಶುಭ ವೇಳೆ ಎಂದು ಕಾದು ಕುಳಿತು ರೈಲು, ಬಸ್ಸು, ವಿಮಾನ ಮೊದಲಾದವುಗಳನ್ನು ಬಿಡಲು ಆಗುತ್ತದೆಯೇ? ಪ್ರಪಂಚದಲ್ಲಿ ಪ್ರತಿ ಕ್ಷಣ ರೈಲು, ಬಸ್ಸು, ವಿಮಾನಗಳು ಸಂಚರಿಸುತ್ತಲೇ ಇರುತ್ತವೆ. ಹೀಗಿರುವಾಗ ಶುಭ ಅಶುಭ ಎಂದು ಹೇಳುವುದು ಶುದ್ಧ ಅವೈಜ್ಞಾನಿಕ. ಮೂಲ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣಿನ ಮದುವೆ ಆಗುವುದು ಜಾತಕ ನೋಡಿದರೆ ಬಹಳ ಕಷ್ಟ. ಮೂಲ ನಕ್ಷತ್ರದಲ್ಲಿ ಹುಟ್ಟಿದ ವಧು ಯಾವ ಪಾಪ, ಅಪರಾಧ ಮಾಡದಿದ್ದರೂ ಅವರಿಗೆ ಕಳಂಕ ತರುವುದು ಜ್ಯೋತಿಷಿಗಳ ಮಹಾಪರಾಧ. ಮೂಲ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣನ್ನು ಜಾತಕ ನೋಡಿ ಮದುವೆ ಆಗುವವರು ಇಂದಿಗೂ ಮದುವೆಯಾಗಲು ಜ್ಯೋತಿಷಿಗಳ ಪೊಳ್ಳು ಶಾಸ್ತ್ರದ ಕಾರಣ ಹಿಂಜರಿಯುತ್ತಾರೆ. ಹೇಗೆ ನೋಡಿದರೂ ಜ್ಯೋತಿಷ್ಯ ಎಂಬುದು ವಿಜ್ಞಾನ ಅಲ್ಲ, ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಎಲ್ಲಾ ವಿಚಾರಶೀಲ, ವಿದ್ಯಾವಂತ ಮನುಷ್ಯರೂ ಜನರಿಗೆ ತಿಳುವಳಿಕೆ ಕೊಡಲು ಮುಂದೆ ಬರಬೇಕು.

      Reply
    2. Ananda Prasad

      ಜ್ಯೋತಿಷ್ಯ ಎಂಬುದು ಸಂಪೂರ್ಣ ಅವೈಜ್ಞಾನಿಕ. ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲವೇ ಇಲ್ಲ. ಉದಾಹರಣೆಗೆ ವಧು ಹಾಗೂ ವರರ ಜಾತಕ ನೋಡಿ ಅವುಗಳು ಕೂಡಿ ಬಂದರೆ ಮಾತ್ರ ಮಾಡುವೆ ಮಾಡಬೇಕು ಎಂಬುದು. ಜಾತಕ ಎಂಬುದು ವ್ಯಕ್ತಿಯ ಹುಟ್ಟಿದ ದಿನ ಹಾಗೂ ವೇಳೆಯನ್ನು ಅವಲಂಬಿಸಿ ರೂಪಿಸಿರುವಂಥದ್ದು. ವ್ಯಕ್ತಿಯ ಹುಟ್ಟಿದ ವೇಳೆ ಹಾಗೂ ದಿನ ಹೇಗೆ ಆತನ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರಬಲ್ಲದು? ಜಾತಕ ವ್ಯಕ್ತಿಯ ಮದುವೆ ಹಾಗೂ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಅದೇ ರೀತಿ ಒಳ್ಳೆಯ ಕಾಲ ಕೆಟ್ಟ ಕಾಲ ಅಥವಾ ಶುಭ ವೇಳೆ , ಅಶುಭ ವೇಳೆ ಎಂಬ ಜ್ಯೋತಿಷಿಗಳ ಬುರುಡೆಗೂ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಎಲ್ಲ ವೇಳೆಗಳೂ ಶುಭ ವೇಳೆಗಳೇ. ಶುಭ ವೇಳೆ ಅಶುಭ ವೇಳೆ ಎಂದು ರೈಲು, ಬಸ್ಸು, ವಿಮಾನಗಳನ್ನು ಕಾದು ಕುಳಿತು ಬಿಡಲು ಆಗುತ್ತದೆಯೇ? ಪ್ರಪಂಚದಲ್ಲಿ ಪ್ರತಿ ಕ್ಷಣವೂ ವಿಮಾನ, ಬಸ್ಸು, ರೈಲುಗಳು ನಿರಂತರವಾಗಿ ಸಂಚರಿಸುತ್ತಲೇ ಇರುತ್ತವೆ. ಹೀಗಾಗಿ ಶುಭ ವೇಳೆ ಅಶುಭ ವೇಳೆ ಎಂಬುದು ಶುದ್ಧ ಅವೈಜ್ಞಾನಿಕ. ಮೂಲ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣನ್ನು ಮದುವೆಯಾಗಲು ಇಂದಿಗೂ ಜಾತಕ ನೋಡಿ ಮದುವೆಯಾಗುವವರು ಮುಂದೆ ಬರುವುದಿಲ್ಲ. ಮೂಲ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣು ಯಾವುದೇ ಪಾಪ, ಅಪರಾಧ ಮಾಡದಿದ್ದರೂ ಹೆಣ್ಣಿಗೆ ಇಂಥ ಶಿಕ್ಷೆ ನೀಡುವ ಜ್ಯೋತಿಷಿಗಳ ಮಹಾಪರಾಧಕ್ಕೆ ಏನೆಂದು ಹೇಳುವುದು? ಜ್ಯೋತಿಷ್ಯ ಎಂಬುದು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದ, ಜನರ ದಾರಿ ತಪ್ಪಿಸುವ ಒಂದು ಶಾಸ್ತ್ರವೇ ಹೊರತು ಅದರಿಂದ ಮೂರು ಕಾಸಿನ ಪ್ರಯೋಜನ ಜ್ಯೋತಿಷಿಗಳನ್ನು ಹೊರತುಪಡಿಸಿದರೆ ಉಳಿದವರಿಗೆ ಇಲ್ಲ. ಹೀಗಾಗಿ ಎಲ್ಲ ವಿದ್ಯಾವಂತ, ವಿಚಾರವಂತ ವ್ಯಕಿಗಳೂ ಜ್ಯೋತಿಷ್ಯದ ಪೊಳ್ಳುತನವನ್ನು ವಿವರಿಸಿ ಜನತೆಯನ್ನು ಅದರ ಕಬಂಧಬಾಹುಗಳಿಂದ ಬಿಡಿಸಲು ಮುಂದೆ ಬರುವುದು ದೇಶದ ಹಿತದೃಷ್ಟಿಯಿಂದ ಅಗತ್ಯ.

      Reply
    3. Shamu Hassan

      ವಿಜ್ಞಾನದ ವಿಷಯದಲ್ಲಿ 10 ಮಂದಿ ವಿಜ್ಞಾನಿಗಳು ಒಂದು ಸಮಸ್ಯೆಗೆ ಒಂದೇ ಒಂದು solution ಹೇಳುತ್ತಾರೆ ,
      ಆದರೆ ಜ್ಯೋತಿಷ್ಯದಲ್ಲಿ 10 ಮಂದಿ ಜ್ಯೋತಿಷಿಗಳು10 ರೀತಿಯ solution ಹೇಳುತ್ತಾರೆ.

      Reply
    4. Shamu Hassan

      ಅತ್ಯುತ್ತಮವಾಗಿ ವಯಕ್ತಿಕ ಟೀಕೆಗಳನ್ನು ಮಾಡುತ್ತೀರಿ !, ಭಾರತದಲ್ಲಿ ಶೇ. ಎಷ್ಟು ಮಂದಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ 3 ನೇ ಸೆಮಿಸ್ಟರ್ ನಲ್ಲಿ measurements ವಿಷಯ ಓದಿದ್ದಾರೆ?
      ಪುರಾಣಗಳಲ್ಲಿ Semiconductor ಗಳಬಗ್ಗೆ ಹೇಳಲಾಗಿದೆಯೇ? E & C ಇಂಜಿನಿಯರಿಂಗ್ ನಲ್ಲಿ 1 ನೇ ಸೆಮಿಸ್ಟರ್ ನಿಂದ 8 ನೇ ಸೆಮಿಸ್ಟರ್ ವರೆವಿಗೆ Semiconductor ಗಳ ಬಗ್ಗೆಯೇ ಇದೆ .

      Reply
  18. ಪ್ರಭುರಾಜ್ ಹರಕಂಗಿ

    ACCURACY and PRECISION these are the terms used in science to authenticate property of any material by measuring instruments:
    If you get 10 wrong readings also by an instrument continuously, than average of all those readings a precised value will become TRUTH according to science, this precised reading may or may not be accurate(real value) some times close to accurate value..!! see the uncertainty is there in every aspect.
    When Jyotishya Shastra has proven its stability with so much of examples you have to accept it as science..!

    Reply
  19. Kodava

    ರಸ್ತೆ ಬದಿ ನಿಮ್ಮ ಹಸ್ತ ರೇಖೆ ನೋಡಿ ನಿಮ್ಮ ಜಾತಕ ಹೇಳಲಾಗುವುದು , ವಶೀಕರಣ ಮಾಡಲಾಗುವು ಅಂತ ಬೋರ್ಡ್ ಹಾಕೊಂಡಿರೋ ಜ್ಯೋತಿಷ್ಯಗಳನ್ನೂ ಅಥವಾ TV ಯಲ್ಲಿ ಬರುವ ಕೆಲವು ಬೊಗಳೆ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ಇಲ್ಲಿ ಸಮರ್ಥಿಸಿಕೊಳ್ಲಲಾಗುತ್ತಿಲ್ಲ ..
    ಆದರೆ ಜ್ಯೋತಿಷ್ಯ ಶಾಸ್ತ್ರ ಅಂತ ಒಂದು ಲೆಕ್ಕಾಚಾರ ಇರುವುದು ಮಾತ್ರ ಸತ್ಯ . … ಅದನ್ನು ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ನಂಬುವವರು ನಂಬ ಬಹುದು … ಎಲ್ಲ ಅವರವರ ಭಾವಕ್ಕೆ …

    Reply
  20. ಗಿರೀಶ್

    ವಿಜ್ಞಾನವೂ ತನ್ನ ಹಿಂದಿನ ಆಧಾರಗಳ ಮೇಲೆಯೇ ನಿಂತಿರುವುದು, ಮತ್ತು ಅದೂ ಕೂಡ ಶೇಕಡವಾರು ಪರಿಣಾಮಗಳ ಮೇಲೆಯೇ ನಿಂತಿದೆಯೆ ಹೊರತು ೧೦೦% ಮೇಲಲ್ಲ. ತಾವೇ ತಿಳಿಸಿದಂತೆ ಒಂದು ಪ್ರಯೋಗ ಹತ್ತು ಬಾರಿ ಮಾಡಿದಾಗ ಹತ್ತು ವಿಭಿನ್ನ ಫಲಿತಾಂಶಗಳೇ ಬರುತ್ತವೆ ಆದರೆ ಅವುಗಳು ಬಹು ಹತ್ತಿರದಲ್ಲಿರುತ್ತವೆಯೆ ಹೊರತು ಎಲ್ಲವೂ ಒಂದೆ ಫಲಿತಾಂಶದಿಂದ ಕೂಡಿರುವುದಿಲ್ಲ.
    ಜೋತಿಶ ಶಾಸ್ತ್ರವನ್ನು ಸಂಸ್ಕೃತ ವಿದ್ಯಾಲಯಗಳಲ್ಲಿ ಕಲಿಸಲಾಗುತ್ತದೆಯೆ ಹೊರತು ಫಲ ಜ್ಯೋತಿಶ್ಯವನ್ನಲ್ಲ. ದೃಗ್ಗಣಿತವನ್ನು ಬಳಸಿ ಪಂಚಾಂಗವನ್ನು ರಚಿಸಲಾಗುತ್ತದೆ. ಜೋತಿಶಶಾಸ್ತ್ರ ಖಗೋಲ ಅಧ್ಯಯನ ಶಾಸ್ತ್ರವೇ ಹೊರತು ಫಲ ಜ್ಯೋತಿಶ್ಯದ ಬಗ್ಗೆಯಲ್ಲ. ಗಣಿತ ಈಗಿನ ವಿಜ್ಞಾನಶಾಹಿಗಳ ಸ್ವತ್ತಂತೂ ಅಲ್ಲ. ಆದರೂ ಅದು ನಿಖರತೆಯಲ್ಲಿ ೯೫%ನ್ನು ಮುಟ್ಟುತ್ತದೆ. ಹೌದು ಅದನ್ನು ಯಾರೋ ಡೋಂಗಿಗಳು ಅದರ ಹೆಸರಿನಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರೆ ಅದಕ್ಕೆ ಜೋತಿಶಾಸ್ತ್ರವನ್ನೇ ದೂರುವುದರಿಂದ ಒಂದು ವೈಜ್ಞಾನಿಕ ಅರಿವನ್ನು ಕಳೆದುಕೊಳ್ಳುತ್ತೇವಷ್ಟೇ.
    ಹೌದು ಅದನ್ನು ಯಾರೋ ಡೋಂಗಿಗಳು ಅದರ ಹೆಸರಿನಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರೆ ಅದಕ್ಕೆ ಜೋತಿಶಾಸ್ತ್ರವನ್ನೇ ದೂರುವುದರಿಂದ ಒಂದು ವೈಜ್ಞಾನಿಕ ಅರಿವನ್ನು ಕಳೆದುಕೊಳ್ಳುತ್ತೇವಷ್ಟೇ.
    ೫ ಜನ ಕ್ಯಾನ್ಸರ್ ರೋಗಿಗಳನ್ನು ಕರೆತಂದು ಇವರಲ್ಲಿ ೫ ಜನರೂ ಬದುಕುತ್ತಾರೆಯೋ ಅಥವ ೫ ಜನರೂ ಸಾಯುತ್ತಾರೋ ಅಥವ ಯಾರ್ಯಾರು ಸಾಯುತ್ತಾರೆಂಬುದನ್ನು ಇಂದಿನ ವೈದ್ಯರುಗಳು ತಮ್ಮ ಹಿಂದಿನ ವೈಜ್ಞಾನಿಕ ಅನುಭವ ಬಳಸಿ ಹೇಳಬಲ್ಲರೆ?

    ವಿಜ್ಞಾನವೂ ನಂಬಿಕೆ ಹೇಗೆಂದರೆ, ಮೊದಲು ಭೂಮಿ ಚಪ್ಪೆಯಾಗಿರುವುದನ್ನು ನಂತರ ಅದು ಸುಳ್ಳೆಂದು ಸಾಬೀತಾಯಿತು. ಹಾಗೆಯೆ ನ್ಯೂಟನ್ನನ ನಿಯಮಗಳನ್ನು ಈಗ ಅಲ್ಲಗಳೆಯಲಾಗುತ್ತಿದೆ. ಆದರೆ ಈಗಿನ ಮಟ್ಟಿಗೆ ಅದು ಸತ್ಯ ಏಕೆಂದರೆ ಅದು ನಮಗೆ ಸದ್ಯಕ್ಕೆ ತಿಳಿದಿರುವ ಸತ್ಯವಷ್ಟೇ. ನಾಳೆ ಬೇರೊಂದು ಸಿದ್ದಾಂತ ಇದನ್ನು ಸುಳ್ಳೆಂದು ಸಾಬೀತು ಪಡಿಸಿದಾಗ ಈಗಿನವರನ್ನೆಲ್ಲಾ ಮೂಢನಂಬಿಕೆಯೆಂದು ಅಪಹಾಸ್ಯ ಮಾಡುವುದು ಸರಿಯೆ?

    Reply
  21. Ananda Prasad

    ವಿಜ್ಞಾನವು ನಂಬಿಕೆ ಎಂಬುದು ಹೇಳಲು ಸಾಧ್ಯವಿಲ್ಲ. ವಿಜ್ಞಾನವು ಕಾಲಕಾಲಕ್ಕೆ ನವೀಕರಿಸಲ್ಪಡುತ್ತದೆ. ವಿಜ್ಞಾನವು ಹಿಂದಿನ ಜ್ಞಾನದಲ್ಲಿ ತಪ್ಪು ಇದ್ದರೆ ಅದನ್ನು ಒಪ್ಪಿಕೊಂಡು ಅದನ್ನು ಪ್ರಸಕ್ತ ಜ್ಞಾನದ ಜೊತೆ ಹೋಲಿಸಿ ನವೀಕೃತ ಜ್ಞಾನವನ್ನು ಪುರಸ್ಕರಿಸುತ್ತದೆ. ಜ್ಯೋತಿಷ್ಯದಲ್ಲಿ ಅಂಥ ಯಾವುದೇ ವೈಜ್ಞಾನಿಕ ವಿಧಾನಗಳು ಇಲ್ಲ. ಓಬೀರಾಯನ ಕಾಲದ ತತ್ವಗಳನ್ನು ಇಂದಿಗೂ ಹಿಡಿದುಕೊಂಡು ಗ್ರಹ, ನಕ್ಷತ್ರಗಳು ಮನುಷ್ಯನ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮಾನವ ಜೀವನವನ್ನು ಅವು ನಿಯಂತ್ರಿಸುತ್ತವೆ ಎಂದು ಹೇಳುವುದು ಇಂದಿನ ವೈಜ್ಞಾನಿಕ ಯುಗದಲ್ಲಿ ಇಂದಿನ ವೈಜ್ಞಾನಿಕ ಮಾಹಿತಿಗಳ ಆಧಾರದಲ್ಲಿ ಹೇಳಲು ಸಾಧ್ಯವೇ ಇಲ್ಲ.

    ವೈದ್ಯರು 5 ಜನ ಕ್ಯಾನ್ಸರ್ ರೋಗಿಗಳಲ್ಲಿ ಯಾರು ಬದುಕುತ್ತಾರೆ, ಯಾರು ಸಾಯುತ್ತಾರೆ ಎಂದು ಹೇಳಲು ಹೋಗುವುದಿಲ್ಲ. ಅವರು ಅದಕ್ಕೆ ಇಂದಿನ ಜ್ಞಾನದ ಆಧಾರದಲ್ಲಿ ಇರುವ ಚಿಕಿತ್ಸೆಯನ್ನು ನೀಡುತ್ತಾರೆ. ವಿಜ್ಞಾನವು ಭೂಕಂಪದಂಥ ಘಟನೆಗಳು ಎಂದು ಸಂಭವಿಸುತ್ತದೆ ಎಂದು ಹೇಳುವಷ್ಟು ಬೆಳೆದಿಲ್ಲ, ಹೀಗಾಗಿ ಭೂಕಂಪಗಳ ಮುನ್ಸೂಚನೆ ತಾನು ನೀಡುತ್ತೇನೆ ಎಂದು ಎಂದೂ ಹೇಳಿಕೊಂಡಿಲ್ಲ. ವಿಜ್ಞಾನವು ಚಂಡಮಾರುತ ಯಾವ ಸಮಯದಲ್ಲಿ ಎಲ್ಲಿ ಬರಬಹುದು ಎಂಬುದನ್ನು ಇಂದು ಉಪಗ್ರಹ ಕೊಡುವ ಮಾಹಿತಿ ಆಧರಿಸಿ ಮುನ್ಸೂಚನೆ ಕೊಟ್ಟು ಲಕ್ಷಾಂತರ ಜನರ ಪ್ರಾಣಹಾನಿಯನ್ನು ತಪ್ಪಿಸುವಲ್ಲಿ ಸಫಲವಾಗಿದೆ. ಆದರೆ ಯಾವುದೇ ಜ್ಯೋತಿಷಿಯು ಚಂಡಮಾರುತ ಯಾವಾಗ ಬರುತ್ತದೆ ಎಂದು ಹೇಳಲಾರ.

    Reply
  22. sudheer sanu

    ಆನಂದ ಪ್ರಸಾದರಿಗೆ ನನ್ನದೊಂದು ಪುಕ್ಕಟೆ ಸಲಹೆ… ದಯವಿಟ್ಟು ಓದುವ ಅಭ್ಯಾಸ ರೂಢಿಸಿಕೊಳ್ಳಿ, ವೈಚಾರಿಕ ಮಡಿವಂತಿಕೆಯನ್ನು ಬಿಡಿ. ಆಗ ಖಂಡಿತವಾಗಿ ನಿಮ್ಮ ಬಾಲಿಶ ವಿಚಾರಗಳು ಒಂದಷ್ಟು ಪ್ರೌಢವಾಗಬಹುದು. ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ. ಆದರೆ ಅಧ್ಯಯನದ ಕೊರತೆ ಢಾಳಾಗಿ ಕಾಣುತ್ತದೆ.

    Reply
  23. Ananda Prasad

    ತಾವು ನಂಬಿದ ವಿಚಾರಧಾರೆಯನ್ನು ಒಪ್ಪದ ಜನರ ಅಭಿಪ್ರಾಯಗಳು ವಿರೋಧಿಗಳಿಗೆ ಯಾವಾಗಲೂ ಬಾಲಿಶವಾಗಿ ಕಾಣುವುದು ಸಹಜ. ತಮ್ಮ ವಿಚಾರಧಾರೆಯನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಲು ಅಸಾಧ್ಯವಾದಾಗ ಮನುಷ್ಯ ಅಂತಹವುಗಳನ್ನು ಬಾಲಿಶ ಎಂದು ತಿರಸ್ಕರಿಸುವುದು ಮನೋವೈಜ್ಞಾನಿಕ ಸತ್ಯ. ನಿಮ್ಮ ಪುಕ್ಕಟೆ ಸಲಹೆಯಂತೆ ನನ್ನದೂ ಪುಕ್ಕಟೆ ಸಲಹೆ ಏನೆಂದರೆ ಕನ್ನಡದ ಖ್ಯಾತ ವಿಜ್ಞಾನ ಸಾಹಿತಿ ಜಿ. ಟಿ. ನಾರಾಯಣ ರಾವ್ ಬರೆದ ‘ವೈಜ್ಞಾನಿಕ ಮನೋಧರ್ಮ’ (ಪುಟ 152, ಬೆಲೆ 85 ರೂಪಾಯಿ, ಪ್ರಕಾಶಕರು ನವಕರ್ನಾಟಕ ಪ್ರಕಾಶನ ಬೆಂಗಳೂರು, ಎಂಟನೇ ಮುದ್ರಣ 2011) ಕೃತಿಯನ್ನು ಒಮ್ಮೆ ಓದಿ ನೋಡಿ. ನಿಮ್ಮ ಅರಿವಿನ ದಿಗಂತ ವಿಸ್ತರಿಸಬಹುದು. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ 1990 ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಡಾ||ಎಚ್.ಎನ್. ದತ್ತಿನಿಧಿ ಪ್ರಶಸ್ತಿ 1992 ಪಡೆದಿದೆ. ಅದೇ ರೀತಿ ಇವರೇ ಬರೆದ ‘ಜಾತಕ ಮತ್ತು ಭವಿಷ್ಯ’ ಕೃತಿಯನ್ನೂ ಓದಿ ನೋಡಿ. ನಂತರ ಯಾರ ಅಭಿಪ್ರಾಯಗಳು ಬಾಲಿಶ ಎಂದು ಯೋಚಿಸಿ.

    Reply
  24. Ananda Prasad

    ಕನ್ನಡದಲ್ಲಿ ‘ಬಾಲ ವಿಜ್ಞಾನ’ ಎಂಬ ಮಾಸಿಕ ಪತ್ರಿಕೆಯನ್ನು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ಧೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 1977 ರಿಂದಲೂ ಪ್ರಕಟಿಸುತ್ತಾ ಬಂದಿದೆ. 2 4 ಪುಟಗಳ ಇದರ ಬೆಲೆ 10 ರೂಪಾಯಿ ಮತ್ತು ವಾರ್ಷಿಕ ಚಂದಾ 100 ರೂಪಾಯಿ. ಈ ಮಾಸಿಕ ಪತ್ರಿಕೆಯನ್ನು ಸರ್ಕಾರದ ವತಿಯಿಂದಲೇ ರಾಜ್ಯದ ಎಲ್ಲ ಖಾಸಗಿ ಹಾಗೂ ಸರ್ಕಾರೀ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿದರೆ ರಾಜ್ಯದಲ್ಲಿ ವಿಜ್ಞಾನವನ್ನು ಕಲಿಯಲು ಮಕ್ಕಳಲ್ಲಿ ಆಸಕ್ತಿ ಹಾಗೂ ಕುತೂಹಲ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಸಾಧ್ಯತೆ ಇದೆ. ಇಂಥ ಒಂದು ಉತ್ತಮ ಪತ್ರಿಕೆ ಇದ್ದರೂ ಇದನ್ನು ಸರ್ಕಾರವಾಗಲೀ, ಸಂಘ ಸಂಸ್ಥೆಗಳಾಗಲೀ ಎಲ್ಲ ಶಾಲೆಗಳಿಗೂ ತರಿಸುವಂತೆ ಪ್ರೋತ್ಸಾಹ ನೀಡದೆ ಇದ್ದರೆ ಭವಿಷ್ಯದ ವಿಜ್ಞಾನಿಗಳನ್ನು ರೂಪಿಸುವುದು ಕಷ್ಟ. ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ಮನೋಭಾವನೆ ಮೂಡಿಸಲೂ ಈ ಪತ್ರಿಕೆ ಮಹತ್ತರ ಪಾತ್ರ ವಹಿಸಬಲ್ಲದು. ಈ ಪತ್ರಿಕೆಯನ್ನು ತರಿಸಲು ಆಸಕ್ತಿ ಇರುವವರು ಈ ವಿಳಾಸಕ್ಕೆ ಡಿಡಿ ಅಥವಾ ಮನಿಯಾರ್ಡರ್ ಮೂಲಕ – ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂಬರ್ 24/2 ಮತ್ತು 24/3 , 21 ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು- 560070 ಹಣ ಕಳುಹಿಸಬಹುದು.

    Reply

Leave a Reply

Your email address will not be published. Required fields are marked *