ಮಡೆ (ಎಂಜಲು) ಸ್ನಾನ ಆಚರಣೆ ಇರಲಿ ಎನ್ನುವುದಾದರೆ ಬೆತ್ತಲೆ ಸೇವೆಯೂ ಇರಲಿ ಬಿಡಿ


– ಚಿದಂಬರ ಬೈಕಂಪಾಡಿ


 

ಆಧುನಿಕತೆಯನ್ನು ಅಪ್ಪಿಕೊಳ್ಳುವ ಮನಸ್ಸುಗಳು ಕುಕ್ಕೆಯಲ್ಲಿ ಮಡೆ ಮಡೆ ಸ್ನಾನಕ್ಕೆ ಅಂಟಿಕೊಂಡಿರುವುದು ವಿಷಾದನೀಯ. ಬದಲಾವಣೆಯನ್ನು ಬಯಸುತ್ತಲೇ ಒಂದು ಕಾಲದಲ್ಲಿ ಮಾಡಿದ ಕಟ್ಟುಪಾಡುಗಳನ್ನು ಮರು ಮೌಲ್ಯಮಾಪನ ಮಾಡದೆ ಸಂದ್ರದಾಯ ಮತ್ತು ಪಾವಿತ್ರ್ಯ ಎನ್ನುವ ಕಾರಣಕ್ಕೆ ಅನುಸರಿಸಲು ಮುಂದಾಗಿರುವುದು ಮೌಢ್ಯತೆಯ ಪರಾಕಾಷ್ಠೆ.

ಮಡೆ ಮಡೆ ಸ್ನಾನಕ್ಕೆ ದೇವಸ್ಥಾನ ಮಂಡಳಿ ಅಥವಾ ಭಕ್ತರು ಕೊಡುತ್ತಿರುವ ಕಾರಣಗಳನ್ನು ಸರ್ಕಾರವೂ ಕಣ್ಣುಮುಚ್ಚಿ ಒಪ್ಪಿಕೊಂಡಿರುವುದು ದುರಂತ ಮಾತ್ರವಲ್ಲ ತನಗಿರುವ ಅಧಿಕಾರವನ್ನು ಚಲಾಯಿಸಲಾಗದ ಅಪವಾದಕ್ಕೆ ಗುರಿಯಾಗಿದೆ.

ಮೌಢ್ಯಗಳನ್ನು ನಿವಾರಿಸಲು ಸುಧಾರಣೆ ಬಯಸುವ ಸರ್ಕಾರ ಅನಾದಿ ಕಾಲದಿಂದ ಕೆಳ ವರ್ಗ ಅನುಸರಿಸಿಕೊಂಡು ಬರುತ್ತಿರುವ ಅಥವಾ ಅನುಸರಿಸಿಕೊಂಡು ಬರಬೇಕೆಂದು ಒತ್ತಡ ಹಾಕಿರುವ ಮನಸ್ಸುಗಳಿಗೆ ಕಡಿವಾಣ ಹಾಕಲಾಗದೆ ಮಕಾಡೆ ಮಲಗಿತು ಎನ್ನಬೇಕೇ?

ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ಕೂಡಾ ದೇವರಿಗೆ ಹರಕೆ ಎನ್ನುವ ವ್ಯಾಖ್ಯೆ ಕೊಡಲಾಗುತ್ತಿತ್ತು. yellamma-neem-leaves-devadasiಬೆತ್ತಲೆ ಸೇವೆ ಅಮಾನವೀಯ ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ ಎಂಜಲು ಎಲೆಯ ಮೇಲೆ ಹೊರಳಾಡಿ ಹರಕೆ ತೀರಿಸಲು ಅವಕಾಶ ಮಾಡಿಕೊಡುವುದು ಎಷ್ಟರ ಮಟ್ಟಿಗೆ ಸರಿ?

ಮಡೆ ಮಡೆ ಸ್ನಾನ ಮಾಡುತ್ತಿರುವವರು ಕೆಳವರ್ಗದ ಜನರು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ನಾಗಾರಾಧನೆ, ಭೂತಾರಾಧನೆಯನ್ನು ಅನಾದಿ ಕಾಲದಿಂದ ಅನುಸರಿಸಿಕೊಂಡು ಬರುತ್ತಿರುವ ಈ ಭಾಗದ ಜನರು ಬದಲಾವಣೆಯನ್ನು ನಿರಾಕರಿಸಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಂಥ ಹರಕೆಯನ್ನು ದೇವರಿಗೆ ಅರ್ಪಿಸಬೇಕು ಎಂದು ಹೇಳಿರುವವರು ಯಾರು, ಯಾವ ಗ್ರಂಥದಲ್ಲಿ ಇಂಥ ಹರಕೆಯನ್ನು ಅನೂಚಾನವಾಗಿ ಅನುಸರಣೆ ಮಾಡಿಕೊಂಡು ಬರಬೇಕೆಂದು ಹೇಳಲಾಗಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ.

ಚರ್ಮ ರೋಗ ವಾಸಿಯಾಗುತ್ತದೆ, ಸಂತಾನ ಭಾಗ್ಯ ಬರುತ್ತದೆ ಎನ್ನುವ ವಾದಗಳನ್ನು ಒಪ್ಪಿಕೊಳ್ಳಲೇ ಬೇಕೆಂಬ ಕಟ್ಟುಪಾಡುಗಳಿಲ್ಲ. ಆದರೆ ಕೆಳವರ್ಗದ ಮನಸ್ಸುಗಳಿಗೆ ಇಂಥ ವಾದಸರಣಿಯನ್ನು ಅರೆದು ಕುಡಿಸಿಬಿಟ್ಟಿದ್ದಾರೆ. ಮಡೆಸ್ನಾನವನ್ನು ಸಮರ್ಥಿಸಿಕೊಳ್ಳುವವರು ಸಾಮೂಹಿಕ ಸಹಭೋಜನ ಆಯೋಜಿಸಿ ಎಲ್ಲರೂ ಊಟ ಮಾಡಿ ಉಳಿದ ಎಂಜಲು ಎಲೆಯ ಮೇಲೆ ದಿನಪೂರ್ತಿ ಉರುಳುಸೇವೆ ಮಾಡಲು ಅವಕಾಶ ಮಾಡಿಕೊಡುವರೇ?

ಇಂಥ ಆಚರಣೆಗಳು ಶತಮಾನಗಳ ಹಿಂದೆ ಇದ್ದ ತಲೆ ಮೇಲೆ ಮಲಹೊರುವಂಥ ಮತ್ತು ಮಲತಿನ್ನಿಸುವಂಥ made-snanaಘಟನೆಯಷ್ಟೇ ಅಪಾಯಕಾರಿ.

ಈ ಆಚರಣೆಗಳು ನಿಲ್ಲಬಾರದು ಎನ್ನುವ ಮನಸ್ಸುಗಳು ಕೆಳವರ್ಗದವರ ಬಾಯಿಂದ ಇಂಥ ಮಾತುಗಳನ್ನು ಆಡಿಸುತ್ತಿವೆಯೇ ಹೊರತು ಆ ಜನ ತಮ್ಮ ಹೃದಯಾಂತರಾಳದಿಂದ ಹೇಳುತ್ತಿರುವ ಮಾತುಗಳಲ್ಲ. ಮಡೆಸ್ನಾನದ ಹರಕೆ ಹೇಳಿಕೊಳ್ಳುವ ಜನರು ಯಾವ ವರ್ಗದವರು ಎನ್ನುವುದನ್ನು ಅವಲೋಕಿಸಿದರೆ ಭಯಾನಕ ಸತ್ಯ ಬೆಳಕಿಗೆ ಬರುತ್ತದೆ.

ಇಂಥ ಆಚರಣೆಗಳು ಸರ್ಕಾರದ ಅಧೀನದ ದೇವಸ್ಥಾನದಲ್ಲೇ ನಡೆಯಲು ಅವಕಾಶವಾಗಿರುವುದು ವಿಪರ್ಯಾಸ. ಪುರೋಗಾಮಿ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಡೆಸ್ನಾನ ನಿಷೇಧಿಸುವ ಎದೆಗಾರಿಕೆ ತೋರಬೇಕಾಗಿದೆ. ಇಲ್ಲವಾದರೆ ನೂರಾರು ವರ್ಷಗಳ ಹಿಂದೆ ಚಲಾವಣೆಯಲ್ಲಿದ್ದ ಆಚರಣೆಗಳನ್ನು ಮತ್ತೆ ಜಾರಿಗೆ ತಂದು ದೇವರ `ಕೃಪೆ’ಗೆ ಪಾತ್ರರಾಗಲಿ.

19 thoughts on “ಮಡೆ (ಎಂಜಲು) ಸ್ನಾನ ಆಚರಣೆ ಇರಲಿ ಎನ್ನುವುದಾದರೆ ಬೆತ್ತಲೆ ಸೇವೆಯೂ ಇರಲಿ ಬಿಡಿ

  1. Cheenkra Poojary

    Dear Chidambara,

    I notice you have tried to portray that only lower caste offer made snana – which you very well know is not true. Majority of devotees are upper caste and many of them educated engineers and doctors. As someone who has read your motivated stories from “Mungaaru” days I am not surprised at your manipulation of facts though.

    Doesn’t constitution guarantee freedom to observe once belief and religion in this country? Who are you then to challenge this?

    Made snana will die its own death down the years when people realise either it works or does not work, but you have no rights to question people’s belief and dictate what can or can’t be done.

    Liberals make noise about government restricting freedom of speech and expression but in this case have no problem asking government interfere in one’s belief system. You don’t have objection to blaring loudspeakers waking up whole city at 5:30AM every day. Have you asked which books say prayer should be offered on loud speaker to wake everyone – regardless of believers or non believers? Of course, not – you don’t dare challenge that lest your hands are detached like they did in Kerala to a lecturer – isn’t it?

    Regards
    Cheenkra

    Reply
  2. ಚಿದಂಬರ ಬೈಕಂಪಾಡಿ

    ಮಿತ್ರ ಚೀಂಕ್ರ ಪೂಜಾರಿ ಅವರಿಗೆ ವಂದನೆಗಳು

    ನಿಮ್ಮ ಪ್ರತಿಕ್ರಿಯೆ ನಿಮ್ಮ ಅಭಿವ್ಬ್ಯಕ್ತಿ. ಆದರೆ ಆರೋಗ್ಯಕರ ಚರ್ಚೆಯಾಗುವಂಥ ಅಂಶಗಳನ್ನು ಉಲ್ಲೇಖಿಸಿ ನನ್ನ ಅಭಿಪ್ರಾಯಗಳನ್ನು ವಿರೋಧಿಸಲು ನೀವು ಪೂರ್ಣ ಸ್ವತಂತ್ರರು. ಆಕ್ರೋಷದ ಮಾತುಗಳು ಚಿಂತನೆಯಾಗದು.
    ಎಂಜಲು ಎಲೆಯ ಮೇಲೆ ಮಾಡುವ ಮಡೆ ಸ್ನಾನಕ್ಕೆ ವಿರೋಧ ಹೊರತು ಭಕ್ತಿ, ಸೇವೆ ಮಾಡಬೇಡಿ ಎನ್ನುವ ನಾಸ್ತಿಕವಾದ ನನ್ನದಲ್ಲ.
    ನಿಮಗೆ ಹೇಳಬೇಕೆನಿಸಿದ್ದನ್ನು ಮುಕ್ತವಾಗಿ ಬರೆದು ಹೇಳಿಕೊಳ್ಳಿ. ಆದರೆ ಎಲ್ಲವನ್ನೂ ಬೇರೆಯವರೇ ಹೇಳಬೇಕು ಎಂದು ಯಾಕೆ ನಿರೀಕ್ಷೆ ಮಾಡಬೇಕು. ನೀವು ಕೇಳಿರುವ ಕೆಲವು ವಿಚಾರಗಳ ಬಗ್ಗೆ ನೀವೂ ಬರೆಯಬಹುದಲ್ಲಾ?.
    ಮುಂಗಾರು, ಕೈಕತ್ತರಿಸಿದ ಪ್ರಕರಣಗಳನ್ನು ಉಲ್ಲೇಖಿಸಿದ್ದೀರಿ. ಒಬ್ಬ ವಿದ್ಯಾವಂತ ವ್ಯಕ್ತಿ ಇಂತಹ ಅನಗತ್ಯ ಅಂಶಗಳನ್ನು ಪ್ರತಿಕ್ರಿಯೆ ನೆಪದಲ್ಲಿ ಪ್ರಸ್ತಾಪಿಸಿರುವುದು ವಿಷಾದನೀಯ. ನಿಮಗೆ ಹಿತವನಿಸುವುದನ್ನೇ ಎಲ್ಲರೂ ಬರೆಯಬೇಕೆಂದು ನೀವು ನಿರೀಕ್ಷೆ ಮಾಡಿರುವುದು ಸರಿಯಿರಬಹುದು, ಆದರೆ ಅದು ಎಲ್ಲಾ ಸಂದರ್ಭದಲ್ಲೂ ಸಾಧ್ಯವಾಗದಲ್ಲವೇ?

    Reply
  3. Umesh

    ಸರಿಯಾಗಿ ಹೇಳಿದ್ದಿರಿ ಚೀಂಕ್ರ ಪೂಜಾರಿ ಅವರೆ. ಇಲ್ಲಿ ಒಂದು ಮುಖ್ಯ ವಿಷಯ ಮಡೆಸ್ನಾನದ ಬಗ್ಗೆ ಕೂಗಾಡುತ್ತಿರುವ ಎಲ್ಲ ಹುಸಿ ವಿಚಾರವಂತರು ಮರೆತಿದ್ದಾರೆ. ಈ ವಿಷಯ ನಾಡಿನ ಉಚ್ಚ ನ್ಯಾಯಲಯದಲ್ಲಿದೆ. ಮಾತಿಗೆ ಮುಂಚೆ ಸಂವಿಧಾನ, ನೆಲದ ಕಾನೂನು ಅಂತ ಚೀರುವ ಈ ಸ್ವಯಂಗೋಷಿತ ಬುದ್ಧಿಜೀವಿಗಳಿಗೆ ಸುಪ್ರೀಂ ಕೋರ್ಟ್ ಯಾವ ತೀರ್ಮಾನ ಕೊಡುತ್ತದೆ ಅಂತ ಕಾಯುವ ವಿವೇಕ ಕೂಡ ಇಲ್ಲದಿರುವುದು ಶೋಚನೀಯ.

    Reply
  4. Ananda Prasad

    ಮಡೆಸ್ನಾನ ಮಾಡುವುದರಲ್ಲಿ ವಿದ್ಯಾವಂತರು ಇದ್ದಾರೆ ಎಂದರೆ ಇವರು ಕಲಿತ ವಿದ್ಯೆಯಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಬರುತ್ತದೆ. ಸಮಕಾಲೀನ ಜ್ಞಾನದ ಜೊತೆ ಇವರು ನವೀಕರಣಗೊಂಡಿಲ್ಲ. ಇವರ ಮನೋಸ್ಥಿತಿ ಹಾಗೂ ಚಿಂತನೆ ಪ್ರಾಚೀನ ಕಾಲದ್ದು. ಯಾವ ರೀತಿ ಆಗಾಗ ನವೀಕರಣಗೊಳ್ಳದ ವೈರಸ್ ನಿರೋಧಕಗಳು ಅಂತರ್ಜಾಲ ವ್ಯವಸ್ಥೆಯಲ್ಲಿ ನಿಷ್ಪ್ರಯೋಜಕವೋ ಅದೇ ರೀತಿ ಸಮಕಾಲೀನ ಜ್ಞಾನದೊಂದಿಗೆ ನವೀಕರಣಗೊಳ್ಳದ ವಿದ್ಯಾವಂತ ಮನಸ್ಸುಗಳೂ ದೇಶದ ಪಾಲಿಗೆ ನಿಷ್ಪ್ರಯೋಜಕ. ಇಂಥ ನಿಷ್ಪ್ರಯೋಜಕ ವಿದ್ಯಾವಂತರು ಹೆಚ್ಚಾಗಿ ಇರುವುದರಿಂದಲೇ ನಮ್ಮ ದೇಶ ಇನ್ನೂ ಇಂಥ ವಿಕೃತ ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದೆ. ವಿದ್ಯಾವಂತರೇ ಇಂಥ ವಿಕೃತ ಆಚರಣೆಗಳನ್ನು ಆಚರಿಸಿದರೆ ಅವರಿಗೂ ಮೆದುಳು ಬೆಳವಣಿಗೆಯಾಗದ ಪ್ರಾಣಿಗಳಿಗೂ ಏನು ವ್ಯತ್ಯಾಸ ಎಂದು ಯೋಚಿಸಬೇಕಾಗುತ್ತದೆ.

    ಸರ್ವೋಚ್ಚ ನ್ಯಾಯಾಲಯವು ಇಂಥ ವಿಕೃತ ಆಚರಣೆಗಳನ್ನು ನಿಷೇಧಿಸದೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರಲು ಹೇಳಿರುವುದರಿಂದ ಸರ್ಕಾರವು ಏನೂ ಮಾಡಲಾಗದ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದೆ. ಸರ್ವೋಚ್ಚ ನ್ಯಾಯಾಲಯವು ಸಮಕಾಲೀನ ಜ್ಞಾನವನ್ನು ಪರಿಗಣಿಸದೆ ಕುರುಡನಂತೆ ವರ್ತಿಸುತ್ತಿರುವುದು ಶೋಚನೀಯ ಹಾಗೂ ಪುರೋಹಿತಶಾಹಿ ಮನಸ್ಥಿತಿಯ ಸಂಕೇತ. ಮಡೆಸ್ನಾನವನ್ನು ಮಾಡದಂತೆ ಅಜ್ಞಾನಿ ಜನತೆಯನ್ನು ಮನೋಪರಿವರ್ತನೆ ಮಾಡುವ ಸಾಮರ್ಥ್ಯ ಬ್ರಾಹ್ಮಣ ಸ್ವಾಮೀಜಿಗಳಿಗೆ ಹಾಗೂ ಧರ್ಮಾಧಿಕಾರಿಗಳಿಗೆ ಇದೆ ಆದರೆ ಅವರು ಇಂಥ ವಿಕೃತ ಆಚರಣೆಗಳ ಬಗ್ಗೆ ಚಕ್ರ ಎತ್ತುತ್ತಿಲ್ಲ. ಈಗ ಇದರ ವಿರೋಧವಾಗಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವವರು ಲಿಂಗಾಯತ ಹಾಗೂ ಬೇರೆ ಜಾತಿಯ ಸ್ವಾಮೀಜಿಗಳು ಮಾತ್ರ. ಎಲ್ಲಾ ಸ್ವಾಮೀಜಿಗಳೂ, ಧರ್ಮಾಧಿಕಾರಿಗಳೂ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರೆ ಅಜ್ಞಾನಿ ಭಕ್ತರ ಮನಸ್ಸಿನ ಮೇಲೆ ಪರಿಣಾಮ ಆಗಿ ಇಂಥ ವಿಕೃತ, ಹೊಲಸು ಹಾಗೂ ಅರ್ಥಹೀನ ಆಚರಣೆಗಳನ್ನು ಕೈಬಿಡಬಹುದು.

    Reply
    1. Umesh

      ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇನ್ನೂ ಅಂತಿಮ ತೀರ್ಮಾನ ಬಂದಿಲ್ಲ. ಅಲ್ಲಿಯ ತನಕ ಕಾಯುವ ವಿವೇಕ ಸಂವಿಧಾನದಲ್ಲಿ ನಂಬಿಕೆ ಇರುವ ಎಲ್ಲರ ಕರ್ತವ್ಯ. ಇನ್ನೊಂದು ವಿಚಾರ ಸುಪ್ರೀಂ ಕೋರ್ಟ್ ತಾವು ಹೇಳಿದ ಪ್ರಕಾರ ತೀರ್ಪು ಕೊಟ್ಟರೆ ಅದು ಸರಿ ಇಲ್ಲದ್ದಿದರೆ ಇಲ್ಲ ಎನ್ನುವುದು ಎಷ್ಟು ಸಮಂಜಸ?
      ಏನೇ ಅದರೂ ಸುಪ್ರೀಂ ಕೋರ್ಟ ತೀರ್ಪಿಗೆ ಕಾಯಲೇಬೇಕು ಮತ್ತು ಅದರ ನಿರ್ದೇಶನದಂತೆ ನಡೆವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರ ಕರ್ತವ್ಯ ಕೂಡ ಹೌದು.

      Reply
      1. Ananda Prasad

        ಸರ್ವೋಚ್ಛ ನ್ಯಾಯಾಲಯದ ತೀರ್ಪು ಬರುವುದು ಇನ್ನು ಎಷ್ಟು ವರ್ಷಗಳ ನಂತರ ಎಂಬುದು ಯಾರಿಗೂ ಗೊತ್ತಿಲ್ಲ, ಅಲ್ಲಿಯವರೆಗೆ ಕಾಯುವ ಬದಲು ಇಂಥ ವಿಚಾರಗಳನ್ನು ತುರ್ತಾಗಿ ನಿರ್ಣಯಿಸುವ ಅಗತ್ಯ ಇದೆ. ಕಾವೇರಿ ನೀರಿನ ವಿಚಾರದಲ್ಲಿ ಸರ್ವೊಚ್ಛ ನ್ಯಾಯಾಲಯ ತಮಿಳುನಾಡಿಗೆ ನೀರು ಬಿಡಲು ನಿರ್ಣಯ ಕೊಡುವಾಗ ಬಹಳ ತುರ್ತಾಗಿ ತೀರ್ಪು ಕೊಡುತ್ತದೆ, ಹೀಗಿರುವಾಗ ಮಡೆಸ್ನಾನದಂಥ ಅನಿಷ್ಟ ಆಚರಣೆಗಳನ್ನು ನಿಷೇಧಿಸುವ ತೀರ್ಪು ನೀಡಲು ಹೆಚ್ಚಿನ ವಿಚಾರಣೆಯ ಅಗತ್ಯ ಬೀಳಲಾರದು. ಸಮಕಾಲೀನ ಜ್ಞಾನವನ್ನು ತೆಗೆದುಕೊಂಡು ಶೀಘ್ರ ತೀರ್ಪು ನೀಡುವುದು ಸಾಧ್ಯ ಆದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಲ್ಲಿ ಪುರೋಹಿತಶಾಹಿ ಚಿಂತನೆ ಹಾಗೂ ಪ್ರಭಾವ ಇರುವ ಕಾರಣ ತೀರ್ಪುಗಳನ್ನು, ವಿಚಾರಣೆಗಳನ್ನು ಅನಿರ್ಧಿಷ್ಟಾವಧಿ ಕಾಲ ಮುಂದೆ ಹಾಕಲಾಗುತ್ತಿದೆ. ಇದು ದೇಶದ ದೃಷ್ಟಿಯಿಂದ ಒಳ್ಳೆಯ ಸಂಪ್ರದಾಯ ಅಲ್ಲ. ತುರ್ತಾಗಿ ಆಗಬೇಕಾದ ವಿಚಾರಗಳನ್ನು ಶೀಘ್ರ ವಿಚಾರಣೆ ಮಾಡಿ ತೀರ್ಮಾನ ಹೇಳುವುದು ಯೋಗ್ಯವಾದುದು. ಅದನ್ನು ನ್ಯಾಯಾಲಯ ಮಾಡದೆ ಕಾಲಹರಣ ಮಾಡುವುದು ಸೂಕ್ತವಲ್ಲ

        Reply
  5. Mahesh Kumar

    ಬೆಂಗಳೂರಿನ ಹೋಟೆಲ್ಲುಗಳಲ್ಲಿ, ಮದುವೆ ಛತ್ರಗಳಲ್ಲಿ ಕೆಲವು ಮನೆಗಳಲ್ಲಿಯೂ ಪ್ರತಿದಿನವೂ ಮಕ್ಕಳೂ ಸೇರಿದಂತೆ ಸಾವಿರಾರು ಜನರ ಉಂಡ ತಟ್ಟೆ ಗಳನ್ನು ತೊಳೆಯುತ್ತಿರುತ್ತಾರೆ. ಕೆಲವು ಹೋಟೆಲ್ಲುಗಳಲ್ಲಂತೂ ಆ ದೃಶ್ಯ ನೋಡಿದರೆ ವಾಕರಿಕೆ ಬರದಿರದು. ಅವರ ಕಾಲು ಕೈಗಳು ಮುರುಟಿ ಹೋಗಿರುತ್ತವೆ. ಇದು ದಿನವೂ ಹಣಕ್ಕಾಗಿ ನಡೆಯುತ್ತಿರುತ್ತದೆ. ಇದು ಕೇವಲ ಒಂದು ದಿನವಲ್ಲ, ನಿರಂತರವಾಗಿ ನಡೆಯುವ ಅಸಹ್ಯ. ಆದರೆ ನಮ್ಮ ಪ್ರಗತಿಪರ ಸಾಕ್ಷಿ ಪ್ರಜ್ಞೆಗಳು ಇದುವರೆಗೂ ಚಕಾರವೆತ್ತಿಲ್ಲ.

    ಇವರ ಹಾರಾಟ ಹೋರಾಟ ಕೂಗಾಟಗಳೇನಿದ್ದರೂ ಸ್ವಯಿಚ್ಚೆಯಿಂದ ಹೊರಳಾಡುವವರ ವಿರುದ್ದ.

    ಮಡೆಸ್ನಾನದ ಪರ ನಾನಿಲ್ಲ. ಅದು ನಿಂತರೆ ಒಳ್ಳೆಯದೇ. ಅದನ್ನು ದೇವಳದ ಆಡಳಿತ ಮಂಡಳಿಯೇ ಮುಂದೆ ಬಂದು ನಿಲ್ಲಿಸಿದರೆ ಒಳ್ಳೆಯದೇ.

    ಆದರೆ ಹೊಟ್ಟೆಪಾಡಿಗಾಗಿ ಒಂದು ಹೊತ್ತಿನ ತುತ್ತಿಗಾಗಿ ತಮ್ಮ ಇಡೀ ಭವಿಶ್ಯವನ್ನೇ ಕಳೆದುಕೊಳ್ಳುವಂತ ಖಾಯಿಲೆಗಳಿಗೆ ತುತ್ತಾಗುವಂತಹ ಕೆಲಸ ಮಾಡುತ್ತಿರುವ ತೀರಾ ಬಡವರ/ಮಕ್ಕಳ ಪರ ಇವರು ಧ್ವನಿಯೆತ್ತುತ್ತಿಲ್ಲವೇಕೆ? ಹೊಟ್ಟೆಪಾಡಿಗಾಗಿ ನಡೆಯುವ ಈ ಅನಿಷ್ಠವನ್ನು ನಿಲ್ಲಿಸುವುದಕ್ಕೇಕೆ ಇವರುಗಳು ಆದ್ಯತೆ ಕೊಡುವುದಿಲ್ಲ? ಇದಕ್ಕೆ ಕಾನೂನಿನ ನೆರವು ಕೂಡ ಇದೆ. ಕಟ್ಟುನಿಟ್ಟಾಗಿ ಜಾರಿ ಮಾಡುವುದಷ್ಟೇ ಆಗ ಬೇಕಾಗಿರುವ ಕೆಲಸ.
    ಧರ್ಮ ಸಂಪ್ರದಾಯ ಆಚರಣೆಗಳ ಹೆಸರಿನಲ್ಲಿ ನಡೆದರೆ ಮಾತ್ರ ಅಮಾನವೀಯತೆಯೆ? ಅದೇ ಲಾಭ ವಾಣಿಜ್ಯ ಅಂತಸ್ತಿನ ಹಣದ ಹೆಸರಿನಲ್ಲಿ ನಡೆದರೆ ಸರಿಯೆ?

    I found this intresting note on Facebook,

    Reply
    1. Ananda Prasad

      ಹೋಟೆಲುಗಳಲ್ಲಿ, ಮದುವೆ ಛತ್ರಗಳಲ್ಲಿ ಉಂಡ ತಟ್ಟೆ ತೊಳೆಯುವುದೂ, ಉಂಡ ಎಂಜಲು ಎಲೆಗಳ ಮೇಲೆ ಉರುಳುವುದೂ ಒಂದೇ ರೀತಿ ನೋಡಲಾಗದು. ಉಂಡ ತಟ್ಟೆ ತೊಳೆಯುವುದರಲ್ಲಿ ಇಡೀ ಮೈ ಹಾಗೂ ಮುಖಕ್ಕೆ ಎಂಜಲು ಮೆತ್ತಿಕೊಳ್ಳುವುದಿಲ್ಲ. ಮಡೆಸ್ನಾನದಲ್ಲಿ ಮುಖ, ಮೈ ಇಡೀ ಎಂಜಲು ಮೆತ್ತಿಕೊಳ್ಳುತ್ತದೆ. ಹೊಟೇಲುಗಳಲ್ಲಿ ಉಂಡ ತಟ್ಟೆ ತೊಳೆಯುವುದು ಒಂದು ಕಾಯಕ. ಕೆಲಸ ಮಾಡಿದ್ದಕ್ಕೆ ಅಲ್ಲಿ ಹಣ ಕೊಡುತ್ತಾರೆ. ತಟ್ಟೆ ತೊಳೆಯುವುದನ್ನೂ, ಎಂಜಲಿನಲ್ಲಿ ನಂಬಿಕೆಗಳ ಹೆಸರಿನಲ್ಲಿ ಉರುಳುವುದನ್ನೂ ಒಂದೇ ಮಾನದಂಡದಿಂದ ನೋಡುವುದು ವಿತಂಡವಾದವಷ್ಟೇ.

      Reply
  6. chandru Belagere

    makkalu musure tholeyuvudu nodalu ashya ennutteeri. hotelenalli undare neevu nimma enjalu neeve tholedu hora banni. idu sadhyavilla eekendare neevu adakke hana needirutteeri. hana padeda karmikaru tamma kelasa maduttiruttare. avaru shram jeevigalu. manasakshiyinda kelasa maduttare. enjalu ele mele uruluva moudyada janaranthalla. thiliyitha maheshkumar.

    Reply
  7. ಗಿರೀಶ್

    ಹಣತೆಗೆದುಕೊಂಡು ಶೋಷಣೆಗೊಳಗಾದರೆ ಅದು ನ್ಯಾಯಸಮ್ಮತ. ತುಂಬಾ ಚೆನ್ನಾಗಿದೆ ನಿಮ್ಮ ಸಮಾನತೆಯ ಪಾಠ. ಹಾಗಾದರೆ ಮಡೆಸ್ನಾನ ಸ್ವಯಿಚ್ಚೆಯಿಂದ ನಡೆಯುತ್ತಲ್ಲ. ಅಲ್ಲಿ ಹೋಗಿ ಮಲೆಕುಡಿ ಜನಾಂಗದವರಿಗೆ ಬುದ್ದಿ ಹೇಳಿ. ಉಂಡ ತಟ್ಟೆ ತೊಳೆಯುವುದರಿಂದ ಕೈ ಮಾತ್ರ ಗಲೀಜು ಎಂದಿರಲ್ಲ. ಕೈ ದೇಹದ ಭಾಗವಲ್ಲವೆ? ಇದೆಯೇನು ನಿಮ್ಮ ಸಮಾನತೆ? ಹೋಟೆಲ್ಲುಗಳಲ್ಲಿ ಪ್ರಸಾದ್ ಅವರೆ ನಿಮ್ಮ ಸಾಲುಗಳನ್ನು ಗಮನಿಸಿದೃ ಕನಿಷ್ಠ ತಾವು ಹೋಟೆಲ್ಲಿರಲಿ ಯಾವುದೇ ಈ ತೆರನಾದ ಶೋಷಣೆ ನೋಡೇ ಇಲ್ಲ ಎನಿಸುತ್ತಿದೆ. ಕೇವಲ ಪ್ರತೊಕ್ರಿಯೆಗೆ ಸೀಮಿತ ಮಾತ್ರ ತಮ್ಮ ಹೋರಾಟ. ತಟ್ಟೆ ತೊಳೆಯುವವರ ಪರಿಸ್ಥಿತಿ ಹೋಗಿ ನೋಡಿ ಕೇವಲ ತಟ್ಟೆಗಳನ್ನು ಎತ್ತುವಾಗ ಕೈ ಮಾತ್ರ ಅಲ್ಲ ಅವರ ಇಡೀ ದೇಹಕ್ಕೆ ಹೇಗೆ ಸೋಕುತ್ತದೆಯೆಂದು. ಒಂದಂತೂ ಅರ್ತವಾಗುತ್ತಿದೆ. ತಮಗಿರುವುದು ಕೇವಲ ಮತ ದ್ವೇಷ ಮತ್ತು ಭಾವನಾತ್ಮಕ ಆಟ ನೈಜ ಕಾಳಜಿಯಲ್ಲ.ಕೊನೆಯದಾಗಿ ಒಂದು ಮಾತು. ಮಡೆಸ್ನಾನ ಕೇವಲ ವರ್ಷಕ್ಕೊಮ್ಮೆ ನಡೆಯುತ್ತದೆ. ಅದೂ ತಕ್ಷಣವೇ ಅವರಿಗೆ ಸ್ನಾನ ಮಾಡಿಸುವಾ ಎಲ್ಲ ಸೌಲಭ್ಯಗಳೂ ಇವೆ. ಆದರೆ ಈ ಬಡ ಕಾರ್ಮಿಕರಿಗೆ ವರ್ಷ ಪೂರ್ತಿ ಅದೆ ಶೋಷಣೆ. ವಿತಂಡವಾದ ಸರಿಯಲ್ಲವೆನ್ನುವ ವಾದವೇ ತಪ್ಪು. ತಂಡವಾದವೇ ಅಪಾಯಕಾರಿ

    Reply
    1. Ananda Prasad

      ಹಣ ತೆಗೆದುಕೊಂಡು ಶೋಷಣೆಗೊಳಗಾದರೆ ಅದು ಶೋಷಣೆ ಅಲ್ಲವೆಂದು ನಾನು ಹೇಳಿಲ್ಲ. ನಿಮ್ಮ ಅನಿಸಿಕೆ ನೋಡಿದರೆ ನಾನು ಬಾಲಕಾರ್ಮಿಕರನ್ನು ಶೋಷಣೆ ಮಾಡಿದ್ದೇನೆಯೋ ಎಂಬ ರೀತಿ ಇದೆ. ಜನಸಂಖ್ಯೆ ಮೇರೆ ಮೀರಿದಾಗ ಶೋಷಣೆ ಹಲವು ವಿಧಗಳಲ್ಲಿ ನಡೆಯುತ್ತಿರುತ್ತದೆ. ಅದನ್ನೆಲ್ಲ ತಡೆಯಲು ನನ್ನಿಂದ ಸಾಧ್ಯವಿಲ್ಲ, ಅದನ್ನು ತಡೆಯುವ ಸಂವಿಧಾನಿಕ ಅಧಿಕಾರ ನನಗಿಲ್ಲ. ನಿಮಗೆ ಬಾಲಕಾರ್ಮಿಕರ ಶೋಷಣೆಯ ಬಗ್ಗೆ ಅಷ್ಟು ಕಾಳಜಿ ಇದ್ದರೆ ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳನ್ನು ಭೇಟಿ ಮಾಡಿ ಅದನ್ನು ತಡೆಯಲು ಕ್ರಮ ಕೈಗೊಳ್ಳಿ. ಅಲ್ಲದೆ ಇಲ್ಲಿ ಪ್ರಕಟವಾದ ಲೇಖನ ಬಾಲಕಾರ್ಮಿಕರ ಸಮಸ್ಯೆ ಅಥವಾ ಶೋಷಣೆಯ ಬಗ್ಗೆ ಅಲ್ಲ. ಇಲ್ಲಿನ ಲೇಖನ ನಂಬಿಕೆಯ ಹೆಸರಿನಲ್ಲಿ ನಡೆಯುವ ಅಮಾಯಕರ ಶೋಷಣೆಯ ಬಗ್ಗೆ. ಅಮಾಯಕರನ್ನು ನಂಬಿಕೆಯ ಹೆಸರಿನಲ್ಲಿ ಕಥೆ ಕಟ್ಟಿ ಎಂಜಲೆಲೆಯ ಮೇಲೆ ಹೊರಳಾಡಿಸುವ ಅತ್ಯಂತ ನೀಚ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಬೇಕೆಂದು ವಾದಿಸುವ ಮನುಷ್ಯರ ಬಗ್ಗೆ ಏನೆಂದು ಹೇಳುವುದು? ಹಾಗೆ ಹೇಳುವವರು ಯಾವ ಶತಮಾನದಲ್ಲಿ ಬದುಕುತ್ತಿದ್ದಾರೆ ಎಂದು ಕೇಳಬೇಕಾಗುತ್ತದೆ.

      Reply
  8. Kodava

    ಮಡೆ ಸ್ನಾನ ಸರಿ – ತಪ್ಪು ಅಂತ ಹೇಳೋಕೆ ನೀವ್ಯಾರು ?? ನಾವ್ಯಾರು ?? ಅಸ್ಟೊಂದು ಕಾಳಜಿ ಇದ್ದರೆ ಮಡೆ ಸ್ನಾನ ಮಾಡೋರಿಗೆ ಹೋಗಿ ಬುದ್ದಿ ಹೇಳಿ .. ಅವರಲ್ಲಿ ಜಾಗೃತಿ ಮೂಡಿಸಿ .. ಅದು ಬಿಟ್ಟು ಸಮ್ಮನೆ ಹೀಗೆ ಬರೆದು ಪೇಪರಲ್ಲಿ ಬರೆದು ಪೇಪರ್ ತುಂಬಿಸಬೇಡಿ … ಇನ್ನು ಮಡೆ ಸ್ನಾನ ಮಾಡುವವರು ೧ -೨ ನೆ ತರಗತಿ ಓದಿ ಶಾಲೆ ಬಿಟ್ಟವರಲ್ಲ . ಅದರಲ್ಲಿ ವಿದ್ಯಾವಂತರು ಇದ್ದಾರೆ .
    ವರ್ಷಕ್ಕೊಮ್ಮೆ ಮಡೆ ಸ್ನಾನ ಮಾಡೋದ್ರಿಂದ ಸಮಾಜಕ್ಕೆ ಆಗಲಿ , ದೇಶಕ್ಕೆ ಆಗಲೇ ಯಾವುದೇ ತೊಂದರೆ ಇಲ್ಲ .. ತೊಂದರೆ ಇದ್ದರೆ ಅದು ಮಡೆ ಸ್ನಾನ ಮಾಡೋರಿಗೆ ಮಾತ್ರ .. ದೇವರಲ್ಲಿ ಹೇಳಿಕೊಂಡ ಹರಕೆ ಫಲಿಸಿದುದರ ಪಲವಾಗಿ ಅವರು ಮಡೆ ಸ್ನಾನ ಮಾಡಿ ಹರಕೆ ತೀರಿಸುತ್ತಾರೆ … ಅದು ಅವರವರ ನಂಬಿಕೆ ….
    ಇನ್ನು ಇದನ್ನು ಮಲಹೊರುವಂಥ , ಮಲತಿನ್ನಿಸುವಂಥ ಮತ್ತು ಬೆತ್ತಲೆ ಸೇವೆ ಗಳಿಗೆ ಹೊಲಿಸಿದ್ದಿರಲ್ಲ … ಹಾಗಾದ್ರೆ ಗೋಹತ್ಯೆಯನ್ನು ಯಾವುದಕ್ಕೆ ಹೋಲಿಸುತ್ತೀರ ?? ?

    Reply
  9. yogesh

    ಯ ಬೀಳಲಾರದು. ಸಮಕಾಲೀನ ಜ್ಞಾನವನ್ನು ತೆಗೆದುಕೊಂಡು ಶೀಘ್ರ ತೀರ್ಪು ನೀಡುವುದು ಸಾಧ್ಯ ಆದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಲ್ಲಿ ಪುರೋಹಿತಶಾಹಿ ಚಿಂತನೆ ಹಾಗೂ ಪ್ರಭಾವ ಇರುವ ಕಾರಣ ತೀರ್ಪುಗಳನ್ನು, ವಿಚಾರಣೆಗಳನ್ನು ಅನಿರ್ಧಿಷ್ಟಾವಧಿ ಕಾಲ ಮುಂದೆ ಹಾಕಲಾಗುತ್ತಿದೆ. ಇದು ದೇಶದ ದೃಷ್ಟಿಯಿಂದ ಒಳ್ಳೆಯ ಸಂಪ್ರದಾಯ ಅಲ್ಲ. ತುರ್ತಾಗಿ ಆಗಬೇಕಾದ ವಿಚಾರಗಳನ್ನು ಶೀಘ್ರ ವಿಚಾರಣೆ ಮಾಡಿ ತೀರ್ಮಾನ ಹೇಳುವುದು ಯೋಗ್ಯವಾದುದು. ಅದನ್ನು ನ್ಯಾಯಾಲಯ ಮಾಡದೆ ಕಾಲಹರಣ ಮಾಡುವುದು ಸೂಕ್ತವಲ್ಲ, NAYANGA NINDANEVAREGU HOYTA NIMMA VAADA. NODONA.

    Reply
    1. Ananda Prasad

      ನ್ಯಾಯಾಂಗ ನಿಂದನೆಯಾಗುವಂಥ ಯಾವುದೇ ಕೆಲಸ ನಾನು ಮಾಡಿಲ್ಲ. ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಇದೆ. ನಾವೇನೂ ಹಿಟ್ಲರನ ಸರ್ವಾಧಿಕಾರಿ ರಾಜ್ಯದಲ್ಲಿ ಬದುಕುತ್ತಿಲ್ಲ ನ್ಯಾಯಾಲಯದ ಬಗ್ಗೆ ಚಕಾರ ಎತ್ತಬಾರದು ಎಂದು ಹೇಳಲು. ನ್ಯಾಯಾಂಗ ನಿಂದನೆ ಪ್ರಧಾನವಾಗಿ ಅನ್ವಯವಾಗುವುದು ನ್ಯಾಯಾಲಯ ಕೊಟ್ಟ ತೀರ್ಪನ್ನು ಸಂಬಂಧಪಟ್ಟವರು ಪಾಲಿಸದೇ ಇದ್ದ ಸಂದರ್ಭಗಳಲ್ಲಿಯೇ ಹೊರತು ಜನಸಾಮಾನ್ಯರು ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆ ತಮ್ಮ ಅನಿಸಿಕೆ ಹೇಳುವುದೇ ಅಪರಾಧವಾದರೆ ಅದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಲು ಸಾಧ್ಯವೇ ಇಲ್ಲ. ನ್ಯಾಯಾಂಗ ನಿಂದನೆಯ ಗುಮ್ಮನನ್ನು ತೋರಿಸಿ ನನ್ನನ್ನು ಬೆದರಿಸುವ ಅವಶ್ಯಕತೆ ಇಲ್ಲ ಎಂದು ಕಾಣುತ್ತದೆ.

      Reply
  10. Ananda Prasad

    ನಿಮ್ಮ ವ್ಯಂಗ್ಯ ಅರ್ಥ ಆಗುತ್ತದೆ, ಆದರೆ ಅದರ ಅಗತ್ಯ ಇರಲಿಲ್ಲ ಎಂದು ಕಾಣುತ್ತದೆ. ತಮ್ಮ ವಿಚಾರಧಾರೆಯನ್ನು ಒಪ್ಪದವರನ್ನು ವ್ಯಂಗ್ಯವಾಗಿ ಕಾಣುವುದು ಮನುಷ್ಯನ ಸಹಜ ಸ್ವಭಾವ. ನಮ್ಮ ಬಟ್ಟಲನ್ನು ನಾವೇ ತೊಳೆಯಬೇಕು ಎಂಬ ಪದ್ಧತಿ ಎಲ್ಲಿಯಾದರೂ ಇದೆಯೇ? ಅಂಥ ಪದ್ಧತಿ ಯಾವುದಾದರೂ ಹೋಟೆಲಿನಲ್ಲಿ ಇದ್ದರೆ ತಿಳಿಸಿ ಅಥವಾ ಹೋಟೆಲಿನವರು ನೀವು ತಿಂದ ತಟ್ಟೆಯನ್ನು ನೀವೇ ತೊಳೆದು ಇಡಬೇಕು ಎಂಬ ನಿಯಮ ಮಾಡಿದರೆ ನಾನು ತಿಂದ ತಟ್ಟೆಯನ್ನು ತೊಳೆದು ಇಡಲು ನನ್ನ ಅಭ್ಯಂತರ ಇಲ್ಲ. ಮಲೆಕುಡಿಯರು ಅಥವಾ ಎಂಜಲಿನಲ್ಲಿ ಹೊರಳುವ ಉನ್ನತ ವಿದ್ಯಾವಂತರು ಯಾರೇ ಇರಲಿ ಅವರಿಗೆ ನನ್ನಂಥ ಸಾಮಾನ್ಯ ಮನುಷ್ಯ ಹೇಳಿದರೆ ಪ್ರಭಾವ ಬೀರುವುದಿಲ್ಲ. ಸಮಾಜದಲ್ಲಿ ಗಣ್ಯಾತಿಗಣ್ಯ ಎನಿಸಿಕೊಂಡ ಸ್ವಾಮೀಜಿಗಳು, ಧರ್ಮಾಧಿಕಾರಿಗಳು ಅಥವಾ ಸಿರಿವಂತರು ಹೇಳಿದರೆ ಅವರ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಒಂದು ಮನೋವೈಜ್ಞಾನಿಕ ಸತ್ಯ. ಹೀಗಾಗಿ ಸಮಾಜದಲ್ಲಿ ನಡೆಯುವ ಇಂಥ ಅನಿಷ್ಟ ಸಂಪ್ರದಾಯಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸುವುದು ಅವರೆಲ್ಲರ ನೈತಿಕ ಜವಾಬ್ದಾರಿ. ಅದನ್ನು ಅವರು ನಿಭಾಯಿಸದೇ ಖೇದಕರ ಇರುವುದು ಖೇದಕರ. ಎಂಜಲಿನಲ್ಲಿ ಉರುಳಿದರೆ ಕಾಯಿಲೆ ಗುಣ ಆಗುತ್ತದೆ ಎಂಬ ಆಧಾರರಹಿತ ಅಂತೆ ಕಂತೆಯನ್ನು ಬಿತ್ತಿ ಅಮಾಯಕರನ್ನು ಇಂಥ ಹೊಲಸು ಕಾರ್ಯ ಮಾಡಲು ಪ್ರೇರೇಪಿಸಿದ ವ್ಯಕ್ತಿಗಳ/ಶಕ್ತಿಗಳ ಮನಸ್ಸು ಎಷ್ಟು ಕೆಳಮಟ್ಟದ್ದು ಎಂದು ಎಲ್ಲರೂ ಯೋಚಿಸಬೇಕಾಗಿದೆ.

    Reply
  11. Ananda Prasad

    ನಿಮಗೆ ಮಾತು ಮಾತಿಗೂ ವ್ಯಂಗ್ಯದ ಬಾಣ ಬಿಡದೆ ಪ್ರತಿಕ್ರಿಯಿಸದಿದ್ದರೆ ನಿದ್ದೆ ಬರುವುದಿಲ್ಲವೇನೋ? ಮಡೆಸ್ನಾನ ವಿರೋಧಿಸುವವರು ಹಣ ಮಾಡಲು ವಿರೋಧಿಸುತ್ತಿದ್ದಾರೆ ಎಂದು ಹೇಳುವುದು ಅಸಂಬದ್ಧ ಧೋರಣೆಯಾಗಿದೆ. ಇದರಲ್ಲಿ ಎಳ್ಳು ಕಾಳಿನಷ್ಟೂ ಹುರುಳಿಲ್ಲ. ಕುಕ್ಕೆ ಸುಬ್ರಮಣ್ಯದಲ್ಲಿ ಮಡೆಸ್ನಾನದ ಬಗ್ಗೆ ಜನಜಾಗೃತಿ ಮೂಡಿಸಲು ಹೋದವರ ಮೇಲೆ ಅಲ್ಲಿನ ಧಾರ್ಮಿಕ ಗೂಂಡಾಗಳು ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂಬುದು ನಿಮಗೆ ತಿಳಿದಿಲ್ಲವೇ ಅಥವಾ ಜಾಣ ಕುರುಡೇ? ಇಂಥ ಗೂಂಡಾಗಿರಿ ಪ್ರದರ್ಶಿಸಿದರೆ ಜನಜಾಗೃತಿ ಮೂಡಿಸುವುದಾದರೂ ಹೇಗೆ? ಹೊಟೇಲುಗಳಲ್ಲಿ ನಮ್ಮ ಊಟದ ತಟ್ಟೆಯನ್ನು ನಾವೇ ತೊಳೆದುಕೊಳ್ಳುವ ಹೊಸ ಸಂಪ್ರದಾಯ ಸೃಷ್ಟಿಸಲು ನಾನು ಹೋಟೆಲ್ ಉದ್ಯಮಿಯೇನೂ ಅಲ್ಲ. ಈ ಬಗ್ಗೆ ನಿಮಗೆ ಅಷ್ಟು ಕಾಳಜಿ ಇದ್ದರೆ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರೆ ಒಳ್ಳೆಯದು.

    Reply
  12. Srini

    Well, last year it was not local goondas who welcomed “Buddhi Jeevies”.. It was same local tribes (malekudiayru). You need to understand their sentiments before spread your online propaganda…

    Reply
    1. Ananda Prasad

      ಅದಕ್ಕೇ ನಾನು ಹೇಳಿದ್ದು ಈ ಬಗ್ಗೆ ಧಾರ್ಮಿಕ ಕ್ಷೇತ್ರದ ನಾಯಕರೇ ಜಾಗೃತಿ ಮೂಡಿಸಬೇಕು ಎಂದು ಹೇಳಿದ್ದು. ‘ಶಂಖದಿಂದ ಬಂದರೇ ತೀರ್ಥ’ ಎಂದು ಭಾವನೆ ಇರುವಾಗ ಧಾರ್ಮಿಕ ಕ್ಷೇತ್ರದ ಜನರೇ ಈ ಬಗ್ಗೆ ಜಾಗೃತಿ ಮೂಡಿಸುವುದು ಪರಿಣಾಮಕಾರಿ. ಅಲ್ಲದೆ ಇಂಥ ನಂಬಿಕೆಯನ್ನು ಕಥೆ ಕಟ್ಟಿ ಅವರಲ್ಲಿ ಬಿತ್ತಿದ್ದು ಕೂಡ ಧಾರ್ಮಿಕ ಕ್ಷೇತ್ರದ ಪುರೋಹಿತಶಾಹಿಗಳೇ. ಇಂಥ ಭಾವನೆ ಬಿತ್ತಿದ್ದು ಬುದ್ಧಿಜೀವಿಗಳಂತೂ ಅಲ್ಲ.

      Reply
  13. Ananda Prasad

    ನಾನು ದುಡಿದು ಹೊಟ್ಟೆ ತುಂಬಿಸಿಕೊಳ್ಳುವವನೇ ಹೊರತು ಸಮಸ್ಯೆಗಳನ್ನು ಜೀವಂತ ಇಟ್ಟು ತುಂಬಿಸಿ ಕೊಳ್ಳಬೇಕಾದ ಅನಿವಾರ್ಯತೆ ನನಗಿಲ್ಲ. ಅಲ್ಲದೆ ನಾನು ಕಮ್ಯುನಿಷ್ಟನೂ ಅಲ್ಲ.

    Reply

Leave a Reply to Ananda Prasad Cancel reply

Your email address will not be published. Required fields are marked *