ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು

– ಜೀವನ್ ಮಂಗಳೂರು

ಆಳ್ವಾಸ್ ವಿಶ್ವ ನುಡಿಸಿರಿ ಮತ್ತು ವಿರಾಸತ್ ಕಾರ್‍ಯಕ್ರಮಗಳನ್ನು ಯಾಕಾಗಿ ಪ್ರಗತಿಪರ ಸಾಹಿತಿಗಳು ಬಹಿಷ್ಕರಿಸಬೇಕು ಎಂದು ಮಂಗಳೂರಿನಲ್ಲಿ ಸಮಾನ ಮನಸ್ಕ ಯುವ ಚಳುವಳಿಗಾರರು, ಪತ್ರಕರ್‍ತರು, ಸಾಹಿತಿಗಳು ಅಭಿಯಾನ ನಡೆಸುತ್ತಿರುವಂತೆಯೇ ರಾಜ್ಯದ ಬಹುದೊಡ್ಡ ಚಿಂತಕರು ಎನಿಸಕೊಂಡವರು ಆಳ್ವಾಸ್ ನುಡಿಸಿರಿಗೆ ಸಾಲುಗಟ್ಟಿ ಬಂದಿದ್ದಾರೆ. abhimata-page1ಈ ಬಾರಿಯಂತೂ ಮಂಗಳೂರಿನಲ್ಲಿ ಆಳ್ವಾಸ್ ನುಡಿಸಿರಿಗೆ ಪರ್‍ಯಾಯವಾಗಿ “ಜನನುಡಿ” ಕಾರ್‍ಯಕ್ರಮ ನಡೆಸಿದ್ದು ರಾಜ್ಯದ ಪ್ರಗತಿಪರ ಮನಸ್ಸುಗಳು “ಅಭಿಮತ ಮಂಗಳೂರು” ಜೊತೆ ದನಿಗೂಡಿಸಿದ್ದರು.

ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಸಲಹೆಗಾರ ಡಾ.ಎಂ. ಮೋಹನ ಆಳ್ವ, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯ ಮುತಾಲಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ವಿಶ್ವ ನುಡಿಸಿರಿಯನ್ನು ವಿರೋಧಿಸಲು ಪ್ರಗತಿಪರರಿಗೆ ಯಾವ ಕಾರಣಗಳೂ ಬೇಕಿಲ್ಲ. ಆದರೂ ಮೋಹನ ಆಳ್ವ ನಡೆಸಿರುವ ಹಿಂದೂ ಸಮಾಜೋತ್ಸವ, ಕೋಮು ಗಲಭೆಯ ಸಂದರ್ಭದಲ್ಲಿ ಆತ ನೀಡಿರುವ ಹೇಳಿಕೆಗಳು, ಆಳ್ವಾಸ್ ನುಡಿಸಿರಿಯ ಹಿಡನ್ ಅಜೆಂಡಾಗಳನ್ನು ವರ್ತಮಾನ.ಕಾಮ್ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ), ಲಡಾಯಿ ಪ್ರಕಾಶನ, ಲಂಕೇಶ್, ಅಗ್ನಿ ಪತ್ರಿಕೆಗಳಲ್ಲಿ ವ್ಯಾಪಕ ಚರ್ಚೆ ನಡೆಸಲಾಗಿತ್ತು. ಈ ಬಾರಿಯ ಆಳ್ವಾಸ್ ನುಡಿಸಿರಿಯ ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಪ್ರೀತಿಯ ಡಾ. ಅರುಣ್ ಜೋಳದ ಕೂಡ್ಲಿಗಿ, ಡಾ.ಕೆ. ಷರೀಫಾ, ಜೆನ್ನಿ ಹೆಸರುಗಳಿದ್ದರೂ ಅವರು ಕಾರ್‍ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಮತ್ತು ಈ ಬಗೆಗಿನ ನಿಲುವನ್ನು ಅವರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಅರ್ಥವಾಗದ ಸಾಹಿತಿಗಳಿಗೆ ಅರ್ಥವಾಗಲೆಂದು ನುಡಿಸಿರಿಗೆ ಪರ್‍ಯಾಯವಾಗಿ ಮಂಗಳೂರಿನಲ್ಲಿ ಎರಡು ದಿನಗಳ “ಜನನುಡಿ” ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇಷ್ಟೆಲ್ಲಾ ಬೆಳವಣಿಗೆಯ ನಂತರವೂ ಕರ್ನಾಟಕದ ಬಂಡಾಯ ಸಾಹಿತಿ ಎಂದೇ ಖ್ಯಾತನಾಮರಾಗಿರುವ ಬರಗೂರು ರಾಮಚಂದ್ರಪ್ಪನವರು ಆಳ್ವಾಸ್ ನುಡಿಸಿರಿಯಲ್ಲಿ ಗುರುವಾರ ಡಿಸೆಂಬರ್ 19 ರಂದು ಸನ್ಮಾನ ಸ್ವೀಕರಿಸಿದ್ದಾರೆ. ಮೋಹನ ಆಳ್ವ, ಬಿ.ಎ. ವಿವೇಕ ರೈ, ಡಾ.ಡಿ. ವಿರೇಂದ್ರ ಹೆಗ್ಗಡೆಯವರು ಬರಗೂರು ರಾಮಚಂದ್ರಪ್ಪನವರನ್ನು ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಜೊತೆಗೆ ಎಸ್.ಎಲ್. ಭೈರಪ್ಪನವರನ್ನೂ ಕುಳ್ಳಿರಿಸಿಕೊಂಡು “ಜೋಡಿ ಸನ್ಮಾನ” ಮಾಡಿದ್ದಾರೆ. ಅಲ್ಲಿಗೆ ಬಂಡಾಯ “ಬಡಾಯಿ”ಯಾಯಿತು.

ಮರುದಿನ ಮಂಗಳೂರಿನ ಅಭಿಮತದ ಕಾರ್‍ಯಕರ್‍ತರು ಬರಗೂರು ರಾಮಚಂದ್ರಪ್ಪ ವಿರುದ್ದ ಮೆಸೇಜ್ ಅಭಿಯಾನ ನಡೆಸಿದರು.alva-nudisiri-baraguru-mohan-alva-veerendra-heggade-vivek-rai ಸುಮಾರು 20 ಅಧಿಕ ಯುವ ಪತ್ರಕರ್ತರು, ಚಳುವಳಿಗಾರರು, ಸಾಹಿತಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಬರಗೂರು ರಾಮಚಂದ್ರಪ್ಪಗೆ ಮೆಸೇಜ್ ಕಳುಹಿಸಲಾರಂಭಿಸಿದರು. ಬರಗೂರುಗೆ ಕಳುಹಿಸಿದ ಮೊದಲ ಮೆಸೇಜ್ ಹೀಗಿದೆ :

ಅಭಿಮತ ಸದಸ್ಯರು : “ಆರ್‌ಎಸ್‌ಎಸ್ ಸಂಘಟಕ ಮೋಹನ ಆಳ್ವ ಮತ್ತು ಧಾರ್ಮಿಕ ಸರ್ವಾಧಿಕಾರಿ, ದಲಿತ, ಮಹಿಳಾ ಶೋಷಕ, ಮಾತನಾಡುವ ದೇವರಿಂದ ಸನ್ಮಾನ ಸ್ವೀಕರಿಸಿದ ನಮ್ಮ ಪ್ರೀತಿಯ ಬರಗೂರು ಸರ್‌ಗೆ ಅಭಿನಂದನೆಗಳು.”

ಬರಗೂರು : “ಆಳ್ವಾಸ್ ನುಡಿಸಿರಿ ಸಮ್ಮೇಳನದ ಮೊದಲ ಅಧ್ಯಕ್ಷನಾಗಿದ್ದಂದಿನಿಂದ ಇಲ್ಲಿಯವರೆಗೆ ಒಬ್ಬನೇ ಒಬ್ಬ ಪ್ರಗತಿಪರ ಈ ಬಗ್ಗೆ ಆಕ್ಷೇಪ ಮಾಡಿಲ್ಲ. ಈ ಬಾರಿಯೂ ಹೋಗ್ಬೇಡಿ ಎಂದು ಯಾರೂ ಹೇಳಿಲ್ಲ. ಅದೂ ಬೇಡ. ನುಡಿಸಿರಿಯ ವಿರುದ್ದ ಯಾರೂ ನನಗೆ ಮಾಹಿತಿ ನೀಡಿಲ್ಲ. ನನಗೆ ಮನವರಿಕೆ ಮಾಡಿದ್ದಿದ್ದರೆ ಖಂಡಿತ ಹೋಗ್ತಿರಲಿಲ್ಲ. ಹಾಗಾಗಿ ನುಡಿಸಿರಿಯ ಮೊದಲ ಅಧ್ಯಕ್ಷ ಎಂಬ ಕಾರಣಕ್ಕೆ ಹೋದೆ. ಹಾಗಂತ ನನ್ನ ವಿಚಾರಗಳನ್ನು ಬಿಟ್ಟುಕೊಡುವುದಿಲ್ಲ. ಯಾವ ವೇದಿಕೆಯಲ್ಲಾದರೂ ನಾನು ಪ್ರತಿಪಾದಿಸೋದು ನಮ್ಮ ವಿಚಾರಗಳನ್ನೇ. ಮುಂದೆಯೂ ಇದೇ ಬದ್ಧತೆ ಇರುತ್ತದೆ. ಇಷ್ಟಾದರೂ ನಿಮ್ಮ ಮನಸ್ಸಿಗೆ ಬೇಸರ ಮಾಡಿದ ನನ್ನ ನಡೆಗೆ ತೀವ್ರವಾಗಿ ವಿಷಾಧಿಸುತ್ತೇನೆ.”

ಅಭಿಮತ : “ಪ್ರಗತಿಪರರು ಆಳ್ವ, ಹೆಗ್ಗಡೆ, ಪೇಜಾವರರ ಬಗ್ಗೆ ನಿಮಗೆ ಹೇಳಿಕೊಡಬೇಕಿತ್ತೇ? ಆಳ್ವ ಯಾರು, ಹೆಗ್ಗಡೆ ಯಾರು, ಪೇಜಾವರ ಯಾರು? ಅವರ ಕಾರ್‍ಯಕ್ರಮಗಳೇನು? ಹಿಡನ್ ಅಜೆಂಡಾಗಳೇನು ಎಂಬುದನ್ನು ಪ್ರಗತಿಪರರಿಗೆ ಪಾಠ ಮಾಡುವ ಅರ್ಹತೆ ಇರುವವರು ನೀವು ಎಂದು ನಾವಂದುಕೊಂಡಿದ್ದೆವು.”

ಬರಗೂರು : “ಪ್ರಗತಿಪರರ ನಡುವೆ ಗೊಂದಲಗಳು ಇದೆ. ದಯವಿಟ್ಟು ನನ್ನನ್ನು ಅರ್ಥ ಮಾಡಿಕೊಳ್ಳಿ. ನಾನು ಆತ್ಮಾವಲೋಕನದಿಂದ ತಿದ್ದಿಕೊಳ್ಳುವ ಸ್ವಭಾವದವನು. ಈಗ ನನಗೆ ಇಷ್ಟು ಸಾಕು. ಮುಂದೆ ಮಾತನಾಡೋಣ.”

ಅಭಿಮತ : “456 ಮಹಿಳೆಯರ ರಕ್ತ ಕುಡಿದ ಮಾತನಾಡುವ ದೇವರ ಜೊತೆ ವೇದಿಕೆ ಹಂಚಿಕೊಂಡಿದ್ದೇ ಅಲ್ಲದೆ ಅವರಿಂದ ಸನ್ಮಾನ ಸ್ವೀಕರಿಸಿದವರ ಜೊತೆ ಮುಂದೆ ಮಾತನಾಡಲು ಏನಿದೆ ಸಾರ್ ? ಎನಿವೇ… ಥ್ಯಾಂಕ್ಯೂ ಸರ್..”

ಬರಗೂರು :: “ಪ್ರಗತಿಪರರ ನಡುವೆ ಗೊಂದಲಗಳು ಇದೆ. ದಯವಿಟ್ಟು ನನ್ನನ್ನು ಅರ್ಥ ಮಾಡಿಕೊಳ್ಳಿ. ನಾನು ಆತ್ಮಾವಲೋಕನದಿಂದ ತಿದ್ದಿಕೊಳ್ಳುವ ಸ್ವಭಾವದವನು. ಈಗ ನನಗೆ ಇಷ್ಟು ಸಾಕು. ಮುಂದೆ ಮಾತನಾಡೋಣ.” (ಮತ್ತೆ ಅದೇ ಮೆಸೇಜು.)

ಅಭಿಮತ : “ನಿಮಗೆ ಹೊದಿಸಿದ ಶಾಲನ್ನು ಡ್ರೈ-ವಾಶ್ ಗೆ ಕೊಡಿ ಸರ್. ಅದರಲ್ಲಿ ಮಹಿಳೆಯರ ಮತ್ತು ದಲಿತರ ರಕ್ತದ ಕಲೆಗಳಿವೆ ಸರ್.”

ಕೊನೇ ಮೆಸೇಜ್‌ಗೆ ಬರಗೂರು ರಾಮಚಂದ್ರಪ್ಪ ಉತ್ತರ ನೀಡಿಲ್ಲ. ಉತ್ತರವಾಗಿ ಶುಕ್ರವಾರ ನುಡಿಸಿರಿಯಲ್ಲಿ alva-nudisiri-baraguru-bhairappaಪಾಲ್ಗೊಳ್ಳಬೇಕಿದ್ದ “ಸಮಾಜ” ಎಂಬ ವಿಚಾರಗೋಷ್ಠಿಗೆ ಗೈರು ಹಾಜರಾಗಿ ಬೆಂಗಳೂರು ಬಸ್ಸು ಹಿಡಿದರು. ಪ್ರಜಾವಾಣಿ ಜೊತೆ ಮಾತನಾಡುತ್ತಾ ರಾಮಚಂದ್ರಪ್ಪ ಹೀಗೆ ಹೇಳುತ್ತಾರೆ “ ಆಳ್ವಾಸ್ ನುಡಿಸಿರಿಯಲ್ಲಿ ಕೋಟಿಗಟ್ಟಲೆ ಸಂಪತ್ತಿನ ವೈಭವೀಕರಣವೇ ಮನಸ್ಸಿಗೆ ತೀರಾ ಕಿರಿಕಿರಿ ಉಂಟು ಮಾಡಿದೆ. ಸಂಪತ್ತಿನ ವಿಜೃಂಭಣೆಯಿಂದ ವಿವೇಕ ನಾಶವಾಗಿ ವಿಕಾರತೆಯೇ ಮುನ್ನಲೆಗೆ ಬರುತ್ತದೆ. ಆದುದರಿಂದ ನಾನು ಉಪನ್ಯಾಸ ಕಾರ್‍ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ನಾನು ನುಡಿಸಿರಿಯ ಮೊದಲನೇ ಅಧ್ಯಕ್ಷ ಎನ್ನುವ ನೆಲೆಯಲ್ಲಿ ಭಾಗವಹಿಸಿದ್ದೆ. ಆದರೆ ಇಲ್ಲಿ ಜನಪರ ವಿಚಾರಗಳಿಗೆ ಮನ್ನಣೆ ಇಲ್ಲ. ಮೊದಲ ಅಧ್ಯಕ್ಷ ಎನ್ನುವ ನೆಲೆಯಲ್ಲಿ ಮಾತನಾಡಲು ಅವಕಾಶ ನೀಡಿದ್ದರೆ ಇದನ್ನೇ ಹೇಳುತ್ತಿದೆ. ಇಷ್ಟು ವರ್ಷದ ನುಡಿಸಿರಿಯಲ್ಲಿ ವಿರೇಂದ್ರ ಹೆಗ್ಗಡೆಯಂತವರು ಸಭೆಯಲ್ಲಿ ಕುಳಿತು ಕಾರ್‍ಯಕ್ರಮ ವೀಕ್ಷಿಸುತ್ತಿದ್ದರು. ಈ ಬಾರಿ ಸೌಜನ್ಯ ಪ್ರಕರಣ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರೂ ಅವರ ಭಾಗವಹಿಸುವಿಕೆಯನ್ನು ಅತಿಯಾಗಿ ಮಾಡಲಾಗಿದೆ. ಮಾತಿಗೆ ಅವಕಾಶ ಸಿಕ್ಕಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದೆ,” ಎಂದಿದ್ದಾರೆ.

ಮೊದಲನೆಯದಾಗಿ ಬರಗೂರು ರಾಮಚಂದ್ರಪ್ಪನವರು ಕನ್ನಡದ ಸಾಕ್ಷಿಪ್ರಜ್ಞೆಯಂತಿರುವವರು. ಅವರಿಗೆ ಕನ್ನಡ ಭಾಷೆ ಓದಲು ಬರೆಯಲು ಬರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಆಳ್ವಾಸ್ ನುಡಿಸಿರಿಯ ಆಮಂತ್ರಣ ಪತ್ರಿಕೆಯಲ್ಲಿ ಡಾ.ಡಿ. ವಿರೇಂದ್ರ ಹೆಗ್ಗಡೆಯವರ ಹೆಸರು ಮಾತ್ರವಲ್ಲ ಫೋಟೋ ಕೂಡಾ ಅಚ್ಚಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಸಾಹಿತ್ಯ-ನಾಡು-ನುಡಿಗಿಂತಲೂ ವಿರೇಂದ್ರ ಹೆಗ್ಗಡೆಯನ್ನು ವೈಭವೀಕರಿಸಲಾಗಿದೆ. ಸ್ವಾಗತ ಸಮಿತಿಯ ಗೌರವ ಮಾರ್ಗದರ್ಶಕರು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಎಂದಿದೆ. ವೀರೇಂದ್ರ ಹೆಗ್ಗಡೆ ಪತ್ನಿ ಹೇಮಾವತಿ ಹೆಗ್ಗಡೆ ಹೆಸರು ಒಂದು ಉಪನ್ಯಾಸದಲ್ಲಿದೆ. ಎಲ್ಲೆಲ್ಲಿ ವೇದಿಕೆಯಲ್ಲಿ ಜಾಗ ಇದೆಯೋ ಅಲ್ಲಲ್ಲಿ ವೀರೇಂದ್ರ ಹೆಗ್ಗಡೆಯ ತಮ್ಮಂದಿರಾದ ಹರ್ಷೇಂದ್ರ ಹೆಗ್ಗಡೆ, ಸುರೇಂದ್ರ ಹೆಗ್ಗಡೆಯ ಹೆಸರನ್ನು ತೂರಿಸಿ ತೂರಿಸಿ ಹಾಕಲಾಗಿದೆ. ಹೆಗ್ಗಡೆಯ ಇಡೀ ಫ್ಯಾಮಿಲಿ ಈ ಕಾರ್‍ಯಕ್ರಮದಲ್ಲಿ ಇನ್ವಾಲ್ವ್ ಆಗಿರುವುದು ಎಂತಹ ಮೂರ್ಖನಿಗೂ ಅರ್ಥ ಆಗುವಂತದ್ದು. “ನನಗೆ ಗೊತ್ತಿರಲಿಲ್ಲ. ಹೇಳಬೇಕಿತ್ತು” ಎಂದೆಲ್ಲಾ ಹೇಳುವುದನ್ನು ನಂಬಲಾಗುವುದಿಲ್ಲ. ಏನೇ ಆಗಲಿ. ಫಲ ಪುಷ್ಪ ತಾಂಬೂಲ, ಶಾಲು, ನಗದಿನ ಜೊತೆ ಸನ್ಮಾನ ಸ್ವೀಕರಿಸಿ ಉಪನ್ಯಾಸ ನೀಡದ ಬರಗೂರು ಬಂಡಾಯಕ್ಕೆ ಅಭಿನಂದನೆಗಳು.

ನಾಳೆ ಡಿಸೆಂಬರ್ 22 ರಂದು ಫಕೀರ್ ಮಹಮ್ಮದ್ ಕಟ್ಪಾಡಿ, ಟಿ.ಎನ್. ಸೀತಾರಾಂ ಆಳ್ವಾಸ್ ವಿಶ್ವನುಡಿಸಿರಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಫಕೀರ್ ಮಹಮ್ಮದ್ ಕಟ್ಪಾಡಿ, ಟಿ.ಎನ್. ಸೀತಾರಾಂ ಸೇರಿದಂತೆ 16 ಮಂದಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಸುರತ್ಕಲ್‌ನ ಕೋಮುಗಲಭೆಗೆ ಕಾರಣನಾಗಿದ್ದ ರಾಜಕಾರಣಿ ಕುಂಬ್ಳೆ ಸುಂದರರಾವ್‌ಗೂ, ಆರ್‌ಎಸ್‌ಎಸ್‌‍ನ ಮುಖ್ಯ ಫೈನಾನ್ಸಿಯರ್ ದಯಾನಂದ ಪೈಗೂ ಇವರ ಜೊತೆ ಪ್ರಶಸ್ತಿ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. ಫಕೀರ್ ಮಹಮ್ಮದ್ ಕಟ್ಪಾಡಿಯವರಂತೂ ಕೋಮುವಾದದ ಬಗ್ಗೆ ದಿನಗಟ್ಟಲೆ ಮಾತನಾಡುವವರು, ಬರೆಯುವವರು. ಕೋಮುಸೌಹಾರ್ಧ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಕಟ್ಪಾಡಿಯವರು ಆಳ್ವಾಸ್ ನುಡಿಸಿರಿಗೆ ತೆರಳಬಾರದು ಎಂದು ಕೋಮುಸೌಹಾರ್ದ ವೇದಿಕೆಯ ರಾಜ್ಯ ಕಾರ್‍ಯದರ್ಶಿ ಕೆ.ಎಲ್. ಅಶೋಕ್ ಮನವಿ ಮಾಡಿದ್ದರೂ ಹೋಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಾಳೆ ಪ್ರಶಸ್ತಿ ಸ್ವೀಕರಿಸಿದರೆ “ಅಭಿಮತ ಮಂಗಳೂರು”ನ ನೂರಾರು ಯುವ ಪತ್ರಕರ್ತ, ಚಳುವಳಿಗಾರರು, ಸಾಹಿತಿ ಸದಸ್ಯರು ಫಕೀರ್ ಮಹಮ್ಮದ್ ಕಟ್ಪಾಡಿ ವಿರುದ್ಧ ನಿರ್ಣಯ ಕೈಗೊಳ್ಳುತ್ತಾರೆ….

10 thoughts on “ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು

  1. Shantha kumr, Tarikere

    this is also type of fascism. some of progressive(?) young writers articles appeared in vijay next, which is owned by times of india group(friend of narendara modi !). even in kannada prabha also. some intellectuals participate in suvarna news channel. please ban thal also… ! Let your fascism will continue in m’lore. please open an office, to issue secular certificate !
    -Shantha kumar

    Reply
  2. prasadraxidi

    ಹೌದು ನಮಗೆ (ಪ್ರಗತಿಪರರಿಗೆ) ಗೊಂದಲವಿದೆ..ನಾವು ಯಾರನ್ನು ನಂಬಬೇಕು. ನಮಗೆ ಬೈರಪ್ಪ ಗೊತ್ತಿದೆ. ವೀರೇಂದ್ರ-ಪೇಜಾವರ ಗೊತ್ತಿದೆ….ಆದರೆ…. ಯಾರು ಬಂಡಾಯಗಾರರು… ಯಾರು .. ಜನಪರರರು ಹೌದು ..ಗೊಂದಲವಾಗುತ್ತಿದೆ.. …………… ನಮಗೀಗ ಗದ್ದೆ ಕೊಯ್ಲಿನ ಕಾಫಿ ಕೊಯ್ಲಿನ ಸಮಯ ಕೆಲಸಗಾರರೊಂದಿಗೆ ಕೆಲಸ ಮಾಡುತ್ತಿದ್ದರೆ. ಈ ಗೊಂದಲಗಳಿಂದ ಸ್ವಲ್ಪ ಬಿಡುಗಡೆ …ಅನಿಸುತ್ತದೆ..

    Reply
  3. ಅನಿತಾ

    ಒಂದು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಲೇಖಕರಿಗೆ ನೀವು ಹಾಕುವ ಬಹಿಷ್ಕಾರ ನಿಮ್ಮ ಗುಂಪಿನ ಸರ್ವಾಧಿಕಾರಿ ಧೋರಣೆಯ, ಹತಾಶೆಯ ಸೂಚನೆ. ಕಟಪಾಡಿಯಂಥಹವರು ಇದನ್ನು ಅರ್ಥಮಾದಿಕೊಳ್ಳುವರು

    Reply
  4. Shashidhar Hemmady

    ಸಂಗಾತಿಗಳೆ,
    ನುಡಿಸಿರಿಗೆ ಪರ್ಯಾಯವಾಗಿ ‘ಜನನುಡಿ’ಯನ್ನು ನಾವು ಕಟ್ಟಿದ್ದೇವೆ. ಸಮಾವೇಶವೊಂದನ್ನು ಚಿಕಮಟ್ಟದಲ್ಲಿಯಾದರೂ ಅತ್ಯಂತ ಯಶಸ್ವಿಯಾಗಿ ನಾವು ಸಂಘಟಿಸಿದ್ದೇವೆ. ನಮ್ಮ ಹೊಣೆಗಾರಿಕೆಯೂ ಈಗ ಹೆಚ್ಚಿದೆ. ಆದರೆ ನಾವು ಮುಂದುವರಿಯುತ್ತಾ ಈ ಚರ್ಚೆಯನ್ನು ತೀರಾ ವ್ಯಕ್ತಿಗತ ಮಟ್ಟಕ್ಕೆ ತಂದು ನಿಲ್ಲಿಸಿಬಿಟ್ಟರೆ ಅದರಿಂದ ಅನಾಹುತಗಳೇ ಹೆಚ್ಚು. ಅಲ್ಲಿ ಹೋದ ಸಾಹಿತಿಗಳನ್ನು, ಕಲಾವಿದರನ್ನು ಸರಾಸಗಟಾಗಿ ತಿರಸ್ಕರಿಸುವುದು ಅಥವಾ ಬಹಿಷ್ಕಾರ ಹಾಕಬೇಕೆಂದು ಹೇಳುವುದು ಸಮಂಜಸವಲ್ಲ. ನಾವಿದನ್ನು ಇದಕ್ಕಿಂತ ಭಿನ್ನವಾದ, ವಿಶಾಲವಾದ ವ್ಯಾಪ್ತಿಯನ್ನಿಟ್ಟುಕೊಂಡು ಚರ್ಚಿಸಬೇಕಾಗಿದೆ. ನುಡಿಸಿರಿಗೆ ಹೋದ ಬಗ್ಗೆ ನಮ್ಮ ಭಿನ್ನಾಭಿಪ್ರಾಯವನ್ನು, ಅಸಮಾಧಾನವನ್ನು ಮುಕ್ತವಾಗಿ ಹೇಳೋಣ. ಆದರೆ ಹೋದ ಕಾರಣಕ್ಕೆ ಅವರು ಖಳನಾಯಕರಾಗಿಬಿಟ್ಟರು ಎಂಬ ನಿರ್ಣಯಕ್ಕೆ ನಾವು ಗಡಿಬಿಡಿಯಲ್ಲಿ ಬರಬೇಕಾಗಿಲ್ಲ. ಹಲವರಿಗೆ ಅಲ್ಲಿಯ ಕೆಲವು ವಿಚಾರಗಳು ತಿಳಿಯದಿರಬಹುದು. ಕೆಲವರಿಗೆ ನಮ್ಮ ಜೊತೆಗೂ (ಅಭಿಮತ) ಭಿನ್ನಾಭಿಪ್ರಾಯಗಳಿರಬಹುದು. ಮುಂದಿನ ದಿನಗಳಲ್ಲಿ ನಾವು ಹೆಚ್ಚು ಪರಿಣಾಮಕಾರಿಯಾಗಿ ನಮ್ಮ ವಿಚಾರಗಳನ್ನು ಹೇಳುತ್ತಾ ಹೋದರೆ ಅರ್ಥೈಸಿಕೊಳ್ಳುವ ಕನ್ನಡ ಮನಸ್ಸುಗಳು ಹೆಚ್ಚಾಗುತ್ತವೆ. ಕೊನೆಗೂ ಬರಗೂರು, ಫಕೀರ್ ಮೊಹಮ್ಮದ್ ಸರ್ ಎಲ್ಲರೂ ನಮ್ಮ ಕಡೆಯವರೇ ವಿನಃ ಆಳ್ವ-ಹೆಗ್ಗಡೆ ಕಡೆಗೆ ಸೇರಿದವರಲ್ಲ ಎಂಬುದು ನಮಗೆ ನೆನಪಿರಬೇಕು. ಬರಗೂರು-ಫಕೀರ್ ನುಡಿಸಿರಿಗೆ ಹೋದ ಬಗ್ಗೆ ನನಗೂ ನೋವಿದೆ. ಆದರೆ ಅದಕ್ಕೆ ಇಷ್ಟು ಖಾರವಾಗಿ (ಬರಗೂರರ ಸನ್ಮಾನದ ಶಾಲಿನಲ್ಲಿ ಮೆತ್ತಿದ ರಕ್ತದ ಕಲೆಗಳು) ಪ್ರತಿಕ್ರಿಯಿಸುವುದು ಬೇಡ. ಈ ಸಂವಾದ, ಚಳವಳಿ ಮುಂದುವರಿಯಲಿ. ಆದರೆ ನಮ್ಮ ನಡೆ-ನುಡಿಗಳ ಬಗ್ಗೆ ನಮಗೆ ಎಚ್ಚರವಿರದಿದ್ದರೆ ‘ಜನನುಡಿ’ಯ ಉದ್ದೇಶಕ್ಕೆ ನಾವೇ ಕುಂದುಂಟುಮಾಡುತ್ತಿರಬಹುದು.
    -ಶಶಿಧರ ಹೆಮ್ಮಾಡಿ, ಕುಂದಾಪುರ

    Reply
  5. K.Phaniraj

    ’ಅಭಿಮತ’ದ ಸಂಗಾತಿಗಳು, ಚರ್ಚೆಯನ್ನು ವೈಯಕ್ತಿಕರಿಸುವುದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಬಗ್ಗೆ ಶಶಿಧರ ಹೆಮ್ಮಾಡಿ ಮತ್ತು ಕೆಲವರು ಸರಿಯಾಗಿಯೇ ಬರೆದಿದ್ದಾರೆ. ’ಅಭಿಮತ’ದ ಸಂಗಾತಿಗಳು ಆ ಮಾತಿಗೆ ಕಿವಿಗೊಡುತ್ತಾರೆ ಎಂದು ನಂಬುತ್ತೇನೆ.
    ಜೊತೆಗೆ: ’ಅಭಿಮತ’ದ ಸಂಗಾತಿಗಳು ತಮ್ಮ ’ಫೇಸ್ ಬುಕ್’ ನಲ್ಲೂ ಮತ್ತೂ ಈ ವೆಬ್ ಪತ್ರಿಕೆಯಲ್ಲೂ, ಈ ವೈಯಕ್ತಿಕರಿಸಿದ ಚರ್ಚೆಯಲ್ಲಿ ಮತ್ತೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯನ್ನು ಎಳೆದು ತರುವ ಕೆಲಸ ಮಾಡುತ್ತಿದ್ದಾರೆ (ಫಕೀರರ ಭಾಗವಹಿಸುವಿಕೆಯ ಸಂಬಂಧ). ಇದು ಆಕಸ್ಮಿಕವಾದುದಲ್ಲ ಎನ್ನುವುದು ಇಲ್ಲಿನ ಬರಹದ ಈ ಸಾಲುಗಳನ್ನು ನೋಡಿದರೆ ತಿಳಿಯುತ್ತದೆ :
    “ಫಕೀರ್ ಮಹಮ್ಮದ್ ಕಟ್ಪಾಡಿಯವರಂತೂ ಕೋಮುವಾದದ ಬಗ್ಗೆ ದಿನಗಟ್ಟಲೆ ಮಾತನಾಡುವವರು, ಬರೆಯುವವರು. ಕೋಮುಸೌಹಾರ್ಧ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಕಟ್ಪಾಡಿಯವರು ಆಳ್ವಾಸ್ ನುಡಿಸಿರಿಗೆ ತೆರಳಬಾರದು ಎಂದು ಕೋಮುಸೌಹಾರ್ದ ವೇದಿಕೆಯ ರಾಜ್ಯ ಕಾರ್‍ಯದರ್ಶಿ ಕೆ.ಎಲ್. ಅಶೋಕ್ ಮನವಿ ಮಾಡಿದ್ದರೂ ಹೋಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಾಳೆ ಪ್ರಶಸ್ತಿ ಸ್ವೀಕರಿಸಿದರೆ “ಅಭಿಮತ ಮಂಗಳೂರು”ನ ನೂರಾರು ಯುವ ಪತ್ರಕರ್ತ, ಚಳುವಳಿಗಾರರು, ಸಾಹಿತಿ ಸದಸ್ಯರು ಫಕೀರ್ ಮಹಮ್ಮದ್ ಕಟ್ಪಾಡಿ ವಿರುದ್ಧ ನಿರ್ಣಯ ಕೈಗೊಳ್ಳುತ್ತಾರೆ….”.

    ಆಶ್ಚರ್ಯವೆಂದರೆ, ’ಸಮುದಾಯ’ದ ಬೆಂಗಳೂರು ಘಟಕ ’ನುಡಿಸಿರಿ’ಯಲ್ಲಿ ಪ್ರದರ್ಶನಕ್ಕೆ ಮೊದಲಾಗಿ ಒಪ್ಪಿಕೊಂಡದ್ದು ಯಾಕೆ ಎನ್ನುವ ವಿಷಯದಲ್ಲಿ ಮಾತ್ರ ಮೌನವಿದೆ. ವಿದ್ಯಮಾನಗಳನ್ನು ಗಮನಿಸಿದರೆ, ಕೊನೆಯ ಕ್ಷಣದಲ್ಲಿ ’ಸಮುದಾಯ’ ಘಟಕದವದರು ಪ್ರದರ್ಶನದಿಂದ ಹಿಂದೆ ಸರಿದು ’ಅಭಿಮತ’ ವೇದಿಕೆಯಲ್ಲಿ ನಾಟಕ ಪ್ರದರ್ಶನ ನಡೆಸಿದ್ದು ತಿಳಿದು ಬರುತ್ತದೆ. ’ಅಭಿಮತ’ದ ಸಂಗಾತಿಗಳೇ ಬರೆದಿರುವ ಹಾಗೆ:
    “ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಸಲಹೆಗಾರ ಡಾ.ಎಂ. ಮೋಹನ ಆಳ್ವ, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯ ಮುತಾಲಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ವಿಶ್ವ ನುಡಿಸಿರಿಯನ್ನು ವಿರೋಧಿಸಲು ಪ್ರಗತಿಪರರಿಗೆ ಯಾವ ಕಾರಣಗಳೂ ಬೇಕಿಲ್ಲ. ಆದರೂ ಮೋಹನ ಆಳ್ವ ನಡೆಸಿರುವ ಹಿಂದೂ ಸಮಾಜೋತ್ಸವ, ಕೋಮು ಗಲಭೆಯ ಸಂದರ್ಭದಲ್ಲಿ ಆತ ನೀಡಿರುವ ಹೇಳಿಕೆಗಳು, ಆಳ್ವಾಸ್ ನುಡಿಸಿರಿಯ ಹಿಡನ್ ಅಜೆಂಡಾಗಳನ್ನು ವರ್ತಮಾನ.ಕಾಮ್ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ), ಲಡಾಯಿ ಪ್ರಕಾಶನ, ಲಂಕೇಶ್, ಅಗ್ನಿ ಪತ್ರಿಕೆಗಳಲ್ಲಿ ವ್ಯಾಪಕ ಚರ್ಚೆ ನಡೆಸಲಾಗಿತ್ತು. …”
    ಇಷ್ಟಾದರೂ ’ಸಮುದಾಯ’ ಬೆಂಗಳೂರು ಘಟಕದವರು ಯಾವ ಅಲೋಚನೆಗಳನ್ನು ಇಟ್ಟುಕೊಂಡು, ಒಪ್ಪಿಕೊಂಡರು? ಹಾಗು ಕೊನೆಯ ಗಳಿಗೆಯವರೆಗೆ ಹಿಂತೆಗೆದುಕೊಳ್ಳಲು ಕಾದರು? ಎನ್ನುವ ಸಂಗತಿ ಸಹಜವಾಗಿಯೇ ಸಾರ್ವಜನಿಕ ಅವಗಹನೆಗೆ ಬರುವಂತಿದೆ. ಇತರರ ವಿಷಯದಲ್ಲಿ ಕಿವಿಗಡಚ್ಚಿಕ್ಕುವ ’ನೈತಿಕ ಶುದ್ಧತೆ’ಯ ಮಾತುಗಳನ್ನು ಸಾರ್ವಜನಿಕದಲ್ಲಿ ಎತ್ತಿ ಆಡುವುದು, ಅದರೆ ಆ ವಿಷಯದಲ್ಲಿ ದೇಶಾವರಿ ಮೌನವಹಿಸುವುದು ಏನನ್ನು ಸೂಚಿಸುತ್ತದೆ?
    ಅಧಿಕಾರವನ್ನು ಪ್ರತಿರೋಧಿಸುವಾಗ, ಅಧಿಕಾರದಲ್ಲಿ ಭಾಗಿಯಾಗುವ ವ್ಯಕ್ತಿ ಹಾಗು ಸಂಸ್ಥೆಗಳ ವರ್ತನೆಯನ್ನು, ಅಧಿಕಾರಸ್ಠರು ತಮ್ಮ ಯಜಮಾನಿಕೆಯ ಜಾಲವನ್ನು ಹೇಗೆಲ್ಲ ವಿಸ್ತರಿಸಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿ ಮಾತ್ರವೇ ನೋಡುವುದು ಎಡಪಂಥದ ವಿಧಾನ. ಬರಗೂರು, ಫಕೀರ್ ಹಾಗು ಬೆಂಗಳೂರು ಸಮುದಾಯ (ಅಥವ ನನ್ನನ್ನೂ ಸೇರಿದ ಹಾಗೆ ಇನ್ನ್ಯಾರದೇ) ವರ್ತನೆಗಳನ್ನು ಈ ಬಗೆಯ ಎಡ ವೈಚಾರಿಕತೆಯಿಂದ ಓದಿಕೊಳ್ಳದೆ, ವ್ಯಕ್ತಿಗತ ’ನೈತಿಕ ಹಿರಿಮೆ’ X ‘ಅನೈತಿಕತೆ’ಯ ಸಮಸ್ಯೆಯನ್ನಾಗಿಸಿದ ತಕ್ಷಣ, ಕೆಲವನ್ನು ಎತ್ತಿ ಆಡುವ, ಕೆಲವನ್ನು ಸಮಜಾಯಿಷಿಯಿಂದ ಮುಚ್ಚಿಟ್ಟುಕೊಳ್ಳುವ ಆಟಕ್ಕೆ ಬೀಳುತ್ತೇವೆ.
    ಇಷ್ಟನ್ನು ’ಅಭಿಮತ’ದ ಸಂಗಾತಿಗಳಿಗೆ ಹೇಳಬೇಕೆನಿಸಿತು. ಹೇಳಿರುವೆ.
    – ಕೆ.ಫಣಿರಾಜ್

    Reply
  6. Ahamed

    ನಮ್ಮೆಲ್ಲರ ಪ್ರೀತಿಯ ಬರಗೂರರೆ ನೀವು ಕಾಂಗ್ರೆಸ್ ಸೇರಿದಾಗಲೇ ನಿಮ್ಮ ಸುಂದರ ಭಾಷಣ ಕಹಿಯಾಗತೊಡಗಿತು, ಮೋಹನ ಆಳ್ವರ ವಿರಾಸತ್ತಿನ ನುಡಿ-ಸಿರಿಯಲ್ಲಿ 50ಸಾವಿರ ನಗದಿನೊಂದಿಗೆ ಪಡೆದ ಪಾರಿತೋಷಕವನ್ನು ಕೊಟ್ಟು ಬಂದಿರೋ ಹೇಗೆ ಸ್ವಲ್ಪ ತಿಳಿಯ ಪಡಿಸುವಿರ?

    Reply
  7. ASHOK KUMAR VALADUR

    ಸಾಹಿತ್ಯ ವಲಯದಲ್ಲಿ ಈ ರೀತಿ ಬಣಗಳನ್ನು ಕಟ್ಟಿಕೊಂಡರೆ ನಮ್ಮ ಕನ್ನಡತನ ಉಳಿಯುವುದೇ ?. ಧರ್ಮ ಮತ್ತು ರಾಜಕೀಯ ವನ್ನು ಎಲ್ಲಾ ಕಡೆ ಬೆರೆಸುವುದು ಸೂಕ್ತವಲ್ಲ. ಕನ್ನಡ ಸಾಹಿತ್ಯದ ಗತವನ್ನು ಒಮ್ಮೆ ವಿಶ್ಲೇಷಿಸುವುದು ಆರೊಗ್ಯಕರ.

    Reply
  8. Basava Halli

    ಅಧರ್ಮ, ಅಧಿಕಾರ ಇರುವವರೆಗೂ ಎಲ್ಲರಿಗೂ ಮಂಕುಬೂದಿ ಎರಚಲಾಗುತ್ತದೆ.
    ಸಾಮಾನ್ಯ ಜನರಿಲ್ಲದ ಕಡೆ ಸಾಹಿತಿಗಳು ಯಾಕೆ ಹೋಗಬೇಕು ? ಕ್ಯಾಷ್ ಬಜೆಟ್ನ ಸಾಹಿತ್ಯ ಸಮಾರಂಭಗಳು ಸಾಂಸ್ಕೃತಿಕ ಮುಖವಾಡಗಳೆಂದೇ ಹೇಳುವವರು ಖೆಡ್ಡಾಕ್ಕೆ ಬೀಳುತ್ತಿರುವುದು ನೋಡಿದರೆ ಕನ್ನಡ ಸಾಹಿತಿ ಹಣದ ಕಡೆಗೆ ವಾಲಿದ್ದಾನಾ ? ವಿಚಾರದ ಕಡೆಗಾ ?

    Reply

Leave a Reply

Your email address will not be published. Required fields are marked *