ಶಾಂತಿ ಪ್ರಕಾಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನೇಶ್ ಅಮೀನ್ ಮಟ್ಟುರವರಿಗೊಂದು ಪತ್ರ…

[ದಿನೇಶ್ ಅಮಿನ್ ಮಟ್ಟುರವರು ಮಂಗಳೂರಿನಲ್ಲಿ ಜಮಾತೆ ಇಸ್ಲಾಮಿ ಹಿಂದ್ ಪ್ರಾಯೋಜಿತ ಮುಸ್ಲಿಂ ಲೇಖಕರ ಸಂಘದ ಸಾಹಿತ್ಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಹೋಗುವ ಒಂದು ದಿನ ಮೊದಲು ನವೀನ್ ಸೂರಿಂಜೆಯವರು ಬರೆದಿದ್ದ ಪತ್ರ.]

ಪ್ರೀತಿಯ ಗುರುಗಳಾದ ದಿನೇಶ್ ಅಮೀನ್ ಮಟ್ಟುರವರಿಗೆ,

ಮಹಿಳಾ ದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳೊಂದಿಗೆ…..

ನೀವು ನಾಳೆ ಮಂಗಳೂರಿನಲ್ಲಿ ನಡೆಯುತ್ತಿರುವ ಮುಸ್ಲಿಂ ಲೇಖಕರ ಸಂಘದ ”ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರಧಾನ” dinesh-amin-mattu-2ಸಮಾರಂಭ ಮತ್ತು ಹಿರಿಯ ಮುಸ್ಲಿಂ ಸಾಹಿತಿಗೆ ಸನ್ಮಾನ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಿರೆಂದು ತಿಳಿಯಿತು.

ಈ ಹಿನ್ನೆಲೆಯಲ್ಲಿ ಮುಸ್ಲಿಂ ಲೇಖಕರ ಸಂಘ ಮತ್ತು ಅದರ ಸ್ಥಾಪಕ ಸಂಘಟನೆ ಮತ್ತು ಅದರ ಉದ್ದೇಶಗಳ ಬಗ್ಗೆ ತಮ್ಮಲ್ಲಿ ಚರ್ಚೆ ಮಾಡಬೇಕು ಎಂದುಕೊಂಡು ಈ ಪತ್ರ. ನನಗೆ ಗೊತ್ತಿರುವ ಪ್ರಕಾರ ಮುಸ್ಲಿಂ ಲೇಖಕರ ಸಂಘವು ”ಹಿದಾಯತ್ ಸೆಂಟರ್, ಬೀಬಿ ಅಲಬಿ ರೋಡ್, ಮಂಗಳೂರು 575001” ಎಂಬ ವಿಳಾಸದಿಂದ ಕಾರ್ಯಾಚರಿಸುತ್ತಿದೆ. ಈ ಸಂಘವು ಜಮಾತೆ ಇಸ್ಲಾಮೀ ಹಿಂದ್ ಎಂಬ ಮುಸ್ಲಿಂ ಸಂಘಟನೆಯು ಸ್ಥಾಪನೆ ಮಾಡಿರುವುದಾಗಿದೆ. ಲೇಖಕರ ಸಂಘ ಮತ್ತು ಜಮಾತೆ ಇಸ್ಲಾಮೀ ಹಿಂದ್ ಒಂದೇ ವಿಳಾಸದಿಂದ ಕಾರ್ಯನಿರ್ವಹಿಸುತ್ತಿದೆ.

ಜಮಾತೆ ಇಸ್ಲಾಮೀ ಹಿಂದ್ ಎಂಬುದು ಒಂದು ಇಸ್ಲಾಮಿಕ್ ಮೂಲಭೂತವಾದಿ ಧಾರ್ಮಿಕ ಸಂಘಟನೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟರ್ ಇಸ್ಲಾಂ ವಾದಿ ಅಬುಲ್ ಅಲ ಮೌದೂದಿಯಿಂದ ಸ್ಥಾಪನೆಗೊಂಡ ಆಂದೋಲನ. shantiprakashanaಇಸ್ಲಾಂ ಧರ್ಮದ ಆಡಳಿತವನ್ನು ಸ್ಥಾಪಿಸುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ತಿಳಿದು ರಾಜಕೀಯ ಚಳುವಳಿ ನಡೆಸುತ್ತಾ ಬಂದಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸಾಹಿತ್ಯ ಹೀಗೆ ವಿವಿಧ ರಂಗಗಳಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿವಿದ ಹೆಸರಿನ ಸಾಮೂಹಿಕ ಸಂಘಟನೆಗಳನ್ನು ಜಮಾತೆ ಇಸ್ಲಾಮಿ ಹುಟ್ಟು ಹಾಕಿದೆ.

ಇಸ್ಲಾಂ ಮೂಲಭೂವಾದಿ ಸಾಹಿತ್ಯವನ್ನು ಜನರ ಮಧ್ಯೆ ವ್ಯಾಪಕವಾಗಿ ಕೊಂಡು ಹೋಗಲು ಜಮಾತೆಯ ಕರ್ನಾಟಕ ಶಾಖೆಯು “ಶಾಂತಿ ಪ್ರಕಾಶನ” ಎಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದೆ. ಹಾಗೆಯೇ ಮುಸ್ಲಿಂ ಬರಹಗಾರರ ಮಧ್ಯೆ ತನ್ನ ಪ್ರಭಾವವನ್ನು ಹರಡಲು ಮತ್ತು ಧಾರ್ಮಿಕ ಮೂಲಭೂತವಾದಿ ಸಾಹಿತ್ಯ ಮತ್ತು ಸಾಹಿತಿಗಳನ್ನು ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ಲೇಖಕರ ಸಂಘವನ್ನು ಕರ್ನಾಟಕದಲ್ಲಿ ಸ್ಥಾಪಿಸಿದೆ.

ಉದಾಹರಣೆಗಳನ್ನು ನಾನು ಈ ರೀತಿ ಕೊಡಬಲ್ಲೆ….

“ನಿಮ್ಮ ಸ್ತ್ರಿಯರಿಂದ ಆಜ್ಞೆ ಉಲ್ಲಂಘನೆಯ ಶಂಕೆ ನಿಮಗಿದ್ದರೆ ನೀವು ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ದೂರ ಇರಿ ಮತ್ತು ಅವರಿಗೆ ಹೊಡೆಯಿರಿ. ಆನಂತರ ಅವರು ನಿಮಗೆ ವಿಧೇಯರಾಗಿ ನಡೆದರೆ ಅವರ ಮೇಲೆ ಕೈ ಎತ್ತಲು ಬೇಕು ಬೇಕೆಂದೇ ನೆಪ ಹುಡುಕಬೇಡಿ.” (ಪವಿತ್ರ ಕುರಾನ್ 4:34)

ಎಂದು ಕುರಾನ್ ಉಲ್ಲೇಖಿಸಿದ ಪ್ರೊ ಮಹಮ್ಮದ್ ಕುತುಬ್ ಎಂಬವರು ಬರೆದ ಪುಸ್ತಕ ”ಮಹಿಳೆ ಇಸ್ಲಾಮಿನಲ್ಲಿ” ಎಂಬ ಪುಸ್ತಕವನ್ನು ಜಮಾತೆ ಇಸ್ಲಾಮಿಯ ಶಾಂತಿ ಪ್ರಕಾಶನ ಪ್ರಕಟಿಸಿದೆ. ಈ ಸಣ್ಣ ಹೇಳಿಕೆಗೆ ಜಮಾತೆ ಮಾದರಿಯಲ್ಲಿ ವಿವರಣೆ ನೀಡಲಾಗಿದೆ. ಪುಸ್ತಕದ ಪುಟ ಸಂಖ್ಯೆ 27 ರಲ್ಲಿ ವಿವರಣೆ ನೀಡಿರುವ ಪ್ರೋ ಮಹಮ್ಮದ್ ಕುತುಬ್ ”ಶಿಸ್ತು ಕ್ರಮವನ್ನು ಸ್ಪಷ್ಟಗೊಳಿಸುವ ಪ್ರಸ್ತುತ ವಾಕ್ಯವು ಅಂತಿಮವಾಗಿ ಗಾಯವಾಗದ ದಂಡನೆಯನ್ನು ಆದೇಶಿಸಿದೆ. ಕುರಾನ್ ನೀಡಿರುವ ಈ ಹಕ್ಕುಗಳನ್ನು ದುರುಪಯೋಗಗೊಳಿಸುವ ಸಂಧರ್ಭಗಳ ಕುರಿತು ನಾವಿಲ್ಲಿ ಚರ್ಚಿಸುತ್ತಿಲ್ಲ. ಯಾಕೆಂದರೆ ಲೋಕದ ಎಲ್ಲಾ ಹಕ್ಕುಗಳನ್ನೂ ದುರುಪಯೋಗ ಮಾಡಲಾಗುತ್ತಿದೆ. ಮಹಿಳೆಯರ ಚಾರಿತ್ರ್ಯ ಸಂಸ್ಕರಣೆ ಮತ್ತು ನೈತಿಕ ಉನ್ನತಿ ಮಾತ್ರ ಅದಕ್ಕಿರುವ ಪರಿಹಾರ” ಎಂದು ಲೇಖಕರು ಬರೆಯುತ್ತಾರೆ. ಶಾಂತಿ ಪ್ರಕಾಶನ ಅದನ್ನು ಪ್ರಕಟಿಸುತ್ತದೆ.

ಇಂತಹ ನೂರಾರು ಉದಾಹರಣೆಗಳನ್ನು ನೀಡಬಹುದು. ಶಾಂತಿ ಪ್ರಕಾಶನ ಪ್ರಕಟಿತ ಇಬ್ರಾಹಿಂ ಸ ಈದ್ ರ ”ಮಹಿಳೆ ಮತ್ತು ಸಮಾಜ” ಎಂಬ ಪುಸ್ತಕದಲ್ಲೂ ಕೂಡಾ ಇಂತಹುದೇ ಮಹಿಳಾ ವಿರೋಧಿ ನಿಲುವುಗಳನ್ನು ಹೇಳಲಾಗಿದೆ.

“ಮಹಿಳೆಯರು ನಿಮ್ಮ ನಿಮ್ಮ ಮನೆಗಳಲ್ಲಿ ಇದ್ದುಕೊಳ್ಳಿರಿ, ಗತ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಬೇಡಿರಿ.” (ಪ್ರವಾದಿ ಪತ್ನಿಯರನ್ನುದ್ದೇಶಿಸಿ ಹೇಳಲಾದ ಸೂಕ್ತ) (ಪವಿತ್ರ ಕುರಾನ್ 33;33)

ಈ ಚಿಕ್ಕ ಸೂಕ್ತವನ್ನು ಲೇಖಕ ತನ್ನದೇ ದಾಟಿಯಲ್ಲಿ ಈಗಿನ ಕಾಲಕ್ಕೆ ಬೇಕಾದ ಹಾಗೆ ತಿರುಚಿ ವಿವರಣೆ ನೀಡುತ್ತಾರೆ. ಅದು ಹೀಗಿದೆ… (ಮಹಿಳೆ ಮತ್ತು ಸಮಾಜದ ಪುಟ ಸಂಖ್ಯೆ 47 ಮತ್ತು 48 )… “ಈ ಮೇಲಿನ ಸೂಕ್ತದಂತೆ ಇಸ್ಲಾಂ ಧರ್ಮವು ರಾಷ್ಟ್ರ ಮತ್ತು ಸಮಾಜದ ಹೊಣೆಯನ್ನು ಪುರುಷರ ಮೇಲೆ ಹಾಕಿದೆ. ಸ್ತ್ರಿಯ ಚಟುವಟಿಕೆಯನ್ನು ಕೇವಲ ಮನೆಗೆ ಸೀಮಿತಗೊಳಿಸಿದೆ. ಪೇಟೆಯ ವ್ಯಾಪಾರಿ, ಕಚೇರಿಯ ಗುಮಾಸ್ತ, ನ್ಯಾಯಾಲಯದ ನ್ಯಾಯಾಧೀಶ, ಸೈನ್ಯದ ಸಿಪಾಯಿಯಾಗುವುದು ಆಕೆಯ ಕಾರ್ಯಕ್ಷೇತ್ರವಲ್ಲ. ಮನೆ ಮಾತ್ರ ಆಕೆಯ ಕಾರ್ಯಕ್ಷೇತ್ರ.”

ಇದೇ ಪುಸ್ತಕದ 89 ನೇ ಪುಟದಲ್ಲಿ “ಸ್ತ್ರಿ ಮತ್ತು ಪುರುಷರು ಒಟ್ಟಿಗೆ ಸೇರಬಾರದು. ಓರ್ವ ಮುಸ್ಲಿಂ ಮಹಿಳೆ ಸೈನಿಕ ತರಬೇತಿಯಲ್ಲಾಗಲೀ, ಆಟೋಟದಲ್ಲಾಗಲೀ ಭಾಗವಹಿಸುವಂತಿಲ್ಲ. ಪೇಟೆಯಿಂದ ಪಾರ್ಲಿಮೆಂಟ್ ತನಕ ಮಹಿಳೆಯು ಪುರುಷನೊಂದಿಗೆ ಬೆರೆಯುವುದು ಬೆರೆಯುವುದು ಇಸ್ಲಾಂ ವಿರುದ್ದವಾಗಿದೆ” ಎಂದು ಬರೆಯುತ್ತಾರೆ. ಇವ್ಯಾವ ವಾಕ್ಯಗಳೂ ಕುರಾನ್ ಹೇಳಿದ್ದಲ್ಲ. ಕುರಾನ್ ಹೇಳಿದ ಒಂದು ವಾಕ್ಯವನ್ನು ತನ್ನ ಮೂಲಭೂತವಾದಿ ಚಿಂತನೆಯಲ್ಲಿ ಈಗಿನ ಮಹಿಳೆಯರ ಮೇಲೆ ಹೇರಲಾಗುತ್ತಿರುವಂತದ್ದು. ಇಂಹತ ಪುಸ್ತಕಗಳನ್ನು ಮಾತ್ರ ಶಾಂತಿ ಪ್ರಕಾಶನ ಪ್ರಕಟಿಸುತ್ತದೆ. Sara-Abubakarಸಾರಾ ಅಬೂಬಕ್ಕರ್, ಕೆ ಷರೀಫಾರಂತಹ ಮುಸ್ಲಿಂ ಸಂವೇದನಾಶೀಲ ಪ್ರಗತಿಪರರು ಬರೆದ ಯಾವುದೇ ಪುಸ್ತಕವನ್ನು ಶಾಂತಿ ಪ್ರಕಾಶನ ಪ್ರಕಟ ಮಾಡುವುದಿಲ್ಲ. ಧಾರ್ಮಿಕ ಮೂಲಭೂತವಾದ ಸಾರುವ ಪುಸ್ತಕಗಳ ಪ್ರಕಟಣೆಗಾಗಿಯೇ ಸಾಹಿತಿಗಳನ್ನು ಸಿದ್ದಗೊಳಿಸುವ ಕಾರ್ಖಾನೆಯೇ ”ಮುಸ್ಲಿಂ ಲೇಖಕರ ಸಂಘ”.

ಈ ರೀತಿ ಮೂಲಭೂತವಾದಿ ಸಾಹಿತ್ಯವನ್ನು ಬೆಳೆಸಲು ಜಮಾತೆ ಇಸ್ಲಾಮೀ ಹಿಂದ್ ಇನ್ನಿಲ್ಲದ ಶ್ರಮ ಪಡುತ್ತಿದೆ. ಮುಸ್ಲಿಂ ಲೇಖಕರ ಸಂಘ ನೇರವಾಗಿ ಜಮಾತೆ ಇಸ್ಲಾಮೀ ಹಿಂದ್ ಅಧೀನದಲ್ಲಿ ಇದ್ದರೂ ಕೂಡಾ ತನ್ನ ವಿಚಾರಧಾರೆಯಿಂದ ಹೊರಗಿರುವ ಮುಸ್ಲಿಂ ಸಾಹಿತ್ಯ ಲೋಕವನ್ನು ತಲುಪಲು ಮತ್ತು ಪ್ರಗತಿಶೀಲ ಮುಸ್ಲಿಂ ಸಾಹಿತಿಗಳ ಪ್ರಭಾವಕ್ಕೆ ಯುವ ಮುಸ್ಲಿಂ ಬರಹಗಾರರು ಒಳಗಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಒಂದು ವಿಶಾಲವಾದ ವೇದಿಕೆಯನ್ನು ನಿರ್ಮಿಸಲು ಜಮಾತೆ ಪ್ರಯತ್ನಿಸುತ್ತಿದೆ. ಆ ಹಿನ್ನೆಲೆಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಸದಸ್ಯರಲ್ಲದ ಒಂದಿಷ್ಟು ಪ್ರಗತಿಪರರಂತೆ ಕಾಣುವ ಮುಸ್ಲಿಂ ಬರಹಗಾರರನ್ನು ಮುಸ್ಲಿಂ ಲೇಖಕರ ಸಂಘಕ್ಕೆ ಪದಾಧಿಕಾರಿಗಳನ್ನು ನೇಮಿಸುತ್ತದೆ. ತನ್ನ ಕಾರ್ಯಕ್ರಮಗಳಲ್ಲಿ ಮತ್ತು ಸಮಿತಿಯ ಚಟುವಟಿಕೆಗಳಲ್ಲಿ ವಿಶಾಲ ಮನೋಭಾವ ಹೊಂದಿರುವಂತೆ ತೋರ್ಪಡಿಸಿಕೊಂಡರೂ ಅಂತಿಮವಾಗಿ ಎಲ್ಲರನ್ನೂ ಸೇರಿಸಿ ತನ್ನ ಹಿಡನ್ ಅಜೆಂಡಾವನ್ನು ಸೇರಲು ಯತ್ನಿಸುತ್ತದೆ.

ಮುಸ್ಲಿಂ ಲೇಖಕರ ಸಂಘವು ಜಮಾತೆ ಇಸ್ಲಾಮೀ ಹಿಂದ್ ಮಾರ್ಗದರ್ಶನದಲ್ಲಿ ಸಾಹಿತಿಗಳಿಗೆ ಪ್ರಶಸ್ತಿ ವಿತರಣೆ, ಸನ್ಮಾನ, ಸಾಹಿತ್ಯ ಸಮಾವೇಶದಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಕನ್ನಡದ ಹೆಸರಾಂತ ಪ್ರಗತಿಪರ ಸಾಹಿತಿ, ಬರಹಗಾರರು, ಚಿಂತಕರನ್ನು ಅತಿಥಿಗಳಾಗಿ, ಉದ್ಘಾಟಕರಾಗಿ ಆಹ್ವಾನಿಸುತ್ತದೆ. ಹೀಗೆ ಪ್ರಗತಿಪರ ಸೋಗಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಒಟ್ಟು ಕಾರ್ಯಕ್ರಮದಲ್ಲಿ ಇಸ್ಲಾಂ ಮೂಲಭೂತವಾದಿ ಚೌಕಟ್ಟಿನೊಳಗಿರುವ ಸಾಹಿತ್ಯಗಳಿಗೆ ಪ್ರಶಸ್ತಿ ನೀಡುವುದು ಮತ್ತು ತನ್ನ ಶಾಂತಿ ಪ್ರಕಾಶನದ ಮೂಲಭೂತವಾದಿ ಬರಹಗಾರರಿಗೆ ಸನ್ಮಾನ ಮಾಡಿಸುವುದು ಮತ್ತು ಶಾಂತಿ ಪ್ರಕಾಶನದ ತನ್ನ ಇಸ್ಲಾಂ ಮೂಲಭೂತವಾದಿ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಬಹಳ ಶಿಸ್ತು ಬದ್ಧವಾಗಿ ಮಾಡುತ್ತಿದೆ. ಹೀಗೆ ಬಹಳ ಯೋಜನಾ ಬದ್ಧವಾಗಿ ಕೆಲಸ ಮಾಡುವ ಮೂಲಕ ಸೂಫಿ ಸಾಹಿತ್ಯ ಪರಂಪರೆ ಮತ್ತು ಇತ್ತಿಚ್ಚಿನ ದಶಕಗಳಲ್ಲಿ ಎದ್ದು ಬಂದಿರುವ ಪ್ರಗತಿಪರ ಬಂಡಾಯ ಮುಸ್ಲಿಂ ಮಹಿಳಾ ಮತ್ತು ಪುರುಷ ಸಾಹಿತಿಗಳ ಸಾಹಿತ್ಯವನ್ನು ಮುಸ್ಲಿಂ ಸಮುದಾಯದ ಒಳಗಡೆ ನಗಣ್ಯ ಗೊಳಿಸಲು ಮತ್ತು ಅವರನ್ನು ಮುಸ್ಲಿಂ ಸಮುದಾಯದ ಸಾಹಿತ್ಯ ವಲಯದಿಂದ ಪ್ರತ್ಯೇಕಿಸುವಲ್ಲಿ ಯಶಸ್ವಿ ಹೆಜ್ಜೆಗಳನ್ನು ಇಡುತ್ತಿದೆ.

ಮಾರ್ಚ್ ತಿಂಗಳಲ್ಲಿ ಮಹಿಳಾ ದಿನಾಚರಣೆಯನ್ನು ನಾವು ಬಹಳ ಖುಷಿ ಮತ್ತು ಆತ್ಮಾವಲೋಕನದ ಹಿನ್ನೆಲೆಯಲ್ಲಿ ಆಚರಿಸುವುದರಿಂದ ಮತ್ತು ತಾವು ಜಮಾತೆ ಇಸ್ಲಾಮೀ ಹಿಂದ್ ಪ್ರಾಯೋಜಿತ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವೆರೆಂದು ತಿಳಿದು ಬಂದಿದ್ದರಿಂದ ತಮ್ಮ ಜೊತೆ ಇವೆಲ್ಲವನ್ನೂ ಹಂಚಿಕೊಂಡಿದ್ದೇವೆ.

ತಮ್ಮ ವಿಶ್ವಾಸಿ,
ನವೀನ್ ಸೂರಿಂಜೆ

9 thoughts on “ಶಾಂತಿ ಪ್ರಕಾಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನೇಶ್ ಅಮೀನ್ ಮಟ್ಟುರವರಿಗೊಂದು ಪತ್ರ…

  1. ಹನುಮಂತ ಹಾಲಿಗೇರಿ

    ಮುಸ್ಲಿಂ ಮೂಲಭೂತವಾದವನ್ನು ಪ್ರಚುರ ಪಡಿಸಲು ಯತ್ನಿಸುತ್ತಿರುವ ಮುಸ್ಲಿಂ ಲೇಖಕರ ಸಂಘದ ಒಳ ಅಜೆಂಡಾ ಬಯಲು ಮಾಡುವ ಅತ್ಯುತ್ತಮ ಲೇಖನ. ಮುಸ್ಲಿಂ ಬರಹಗಾರರೊಬ್ಬರು ಈ ಲೇಖನ ಬರಿದಿದ್ದರೆ ಇದರ ತೂಕ ಮತ್ತಷ್ಟು ಹೆಚ್ಚುತ್ತಿತ್ತು…

    Reply
  2. yammarmanvi

    ನವೀನ್ ಅವರೆ ಪ್ರಗತಿಪರ ಎಂಬ ಸೋಗಿನಲ್ಲಿ ನಾಲ್ಕಕ್ಷರ ಬರೆದ ಮಾತ್ರಕ್ಕೆ ನೀವು ಲೇಖಕರು ಬರಹಗಾರರು ಆಗಬಹುದೆ? ಇಸ್ಲಾಮ್ ಧರ್ಮ, ಅದರ ತತ್ವ ಸಿದ್ದಾಂತಗಳಿಗೆ ಬದ್ದವಾದ ಜೀವನ ಸಾಗಿಸಲು ಪ್ರೇರಣೆ ನೀಡುವ ಸಾಹಿತ್ಯ ಸೃಷ್ಟಿಗೆ ನಿಮ್ಮ ವಿರೋಧವೆ? ದಿನೆಶ ಅಮೀನ್ ಮಟ್ಟು ಈಗ ಸರಕಾರದ ಉನ್ನತ ಹುದ್ದೆಯಲ್ಲಿರುವವರು. ಅವರು ಯಾರದ್ದೆ ಕಾರ್ಯಕ್ರಮಕ್ಕೆ ಹೋದರೆ ನಿಮಗೇನು ಅಡ್ಡಿ. ಅವರು ರಾಜ್ಯದದ್ಯಾಂತ ತಮ್ಮದೆ ಆಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಇಸ್ಲಾಮಿ ದೈಷ್ಟಿಕೋನದಲ್ಲಿ ರಚನಾತ್ಮಕ ಸಾಹಿತ್ಯ ಸೃಷ್ಟಿ ಮಾಡುವವರು ಅವರ ಅಭಿಮಾನಿಗಳಾಗಿದ್ದಾರೆ. ಅಂತೆಯೇ ಅವರನ್ನು ಮುಸ್ಲಿಮ್ ಲೇಖಕರ ಕಾರ್ಯಕ್ರಮದಲ್ಲಿ ಆಹ್ವಾನಿಸಿರಬಹುದು. ಅದಕ್ಕಾಗಿ ಇಷ್ಟೊಂದು ರೀತಿಯಲ್ಲಿ ಖಾರವಾಗಿ ಬರೆಯುವುದು ಸರಿಯಲ್ಲ.

    ಹನುಮಂತ ಹಾಲಗೇರಿಯವರೆ ಮುಸ್ಲಿಂ ಮೂಲಭೂತವಾದ ಎಂದರೆ ಏನು ಎಂಬುದು ಸ್ಪಲ್ವ ತಿಳಿಸುವಿರಾ? ನೀವು ನಂಬಿದ ಸಿದ್ಧಾಂತಗಳಲ್ಲಿ ಕೊನೆತನಕವೂ ಸ್ಥಿರವಾಗಿದ್ದು ಅದನ್ನು ಆಚರಿಸಿಕೊಂಡು ಬರುವುದೇ ಮೂಲಭೂತ ವಿಶ್ವಾಸ. ನೀವು ನಿಮ್ಮ ಸಿದ್ದಾಂತದ ಮೂಲಭೂತವಾದಿಗಳೇ. ಪ್ರತಿಯೊಬ್ಬರೂ ತಮ್ಮ ತಮ್ಮ ಸಿದ್ದಾಂತ ಧರ್ಮಗಳ ಮೂಲಭೂತವಾದಿಗಳಾಗಬೇಕು. ಆಗ ಮಾತ್ರ ಇಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲು ಸಾಧ್ಯ.

    Reply
  3. S.I.Hassan

    ನವೀನ ಸೂರಿಂಜೆಯವರು ಬರೆಯುವ ರಭಸದಲ್ಲಿ ಎಡವಿ ಬಿದ್ದು ಅಜ್ನ್ಯಾನ ಹಾಗು ಮೂಲಭೂತವಾದಕ್ಕೆ ಬಲಿಯಾಗಿದ್ದಾರೆ. ತಾವೇ ಸರಿ ಉಳಿದವರು ತಪ್ಪು ಎಂಬ ಅಹಂ ಮತ್ತು ಭ್ರಮೆ ಇದಕ್ಕೆ ಕಾರಣವಿರಬಹುದು. ಇಲ್ಲಿ ಬರೆಯುವ ಉದ್ದೇಶ ವಾದ ಪ್ರತಿವಾದ ನಡೆಸುವುದು ಅಲ್ಲ. ಬದಲಾಗಿ ನಿಮ್ಮಿಂದ ತಿಳಿದೇ ಅಥವಾ ತಿಳಿಯದೇ ಮರೆಯಾಗಿರುವ ಹಾಗು ಓದುಗರಲ್ಲಿ ಹುಟ್ಟಿರುವ ಅನಗತ್ಯ ಸಂಶಯಗಳನ್ನು ದೂರಿಕರಿಸುವುದಾಗಿದೆ.
    ಯಾವುದೇ ಸಂಘಟನೆ ಇರಲಿ, ಅದಕ್ಕೆ ಕೆಲವು ತತ್ವ ಸಿದ್ಧಾಂತಗಳಿರುತ್ತದೆ. ಅದಕ್ಕನುಗುಣವಾಗಿಯೇ ಅದರ ಕಾರ್ಯಕ್ರಮಗಳು ಹಾಗು ರೀತಿ ನೀತಿಗಳು ನಿರ್ಧರಿಸಲ್ಪಡುತ್ತವೆ . ಜಮಾತೆ ಇಸ್ಲಾಮಿ ಹಿಂದ್ ನ ಉದ್ದೇಶ ಕೇವಲ ಹಾಗು ಕೇವಲ ಪರಲೋಕದ ವಿಜಯವಾಗಿದೆ. ಆದರೆ ಅದು ಸ್ವಾರ್ಥಕ್ಕೆ ಬಲಿಯಾಗದೆ, ಇಡೀ ಮಾನವ ಕುಲವು ಪರಲೋಕದಲ್ಲಿ ವಿಜಯಿಯಾಗಬೇಕೆಂದು ಬಯಸುತ್ತದೆ, ಇದಕ್ಕೆ ನೀಡುವ ಕಾರಣ– ಮಾನವ ಕುಲವು ಪ್ರಥಮ ಮಾನವ ಆದಮರ ಸಂತತಿ. ಎಂದರೆ ಮಾನವ ಕುಲವು ಒಂದು ರೀತಿಯಲ್ಲಿ ಸಹೋದರತೆಯಿಂದ ಬಿಗಿಯಲ್ಪಟ್ಟಿದೆ. ಮಾನವನು ಮಾನವನ ಬಗ್ಗೆ ಒಳಿತನ್ನು ಬೋಧಿಸದಿದ್ದರೆ, ಮಾನವೀಯತೆಯಾ ಅರ್ಥವೇನು?
    ಇದರ ಹೊರತು ಜಮಾತಿಗೆ ಯಾವುದೇ ಇತರ ಅಜೆಂಡಾವಿಲ್ಲ.ಇದನ್ನು ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಪ್ರಕಟಿಸಿಯೂ, ವಿತರಿಸಿಯೂ ಆಗಿದೆ.ಇನ್ನು ನೀವು ಹೇಳಿರುವ “ಹಿಡನ್ ಅಜೆಂಡಾ” ಏನೆಂದು ನೀವೇ ಬಲ್ಲಿರಿ.
    ಇನ್ನು ಮಹಿಳೆಯರ ವಿಷಯ. ಮಹಿಳೆಯರನ್ನು ಮನೆಯ ಹೊರಗೆ ತಂದ ಅಪಖ್ಯಾತಿ ಇನ್ನೂ ಕೂಡ ಜಮಾತಿನ ಮೇಲೆ ಮುಸ್ಲಿಮರ ಕೆಲವು ವರ್ಗಗಳು ಹೊರಿಸುತ್ತಿವೆ. ಈಗ ನೀವೇ ಇದರ ಬಗ್ಗೆ ಆಲೋಚಿಸಿರಿ.
    ಪ್ರಗತಿಪರ ಎಂದರೆ ವಿವೇಚನೆಯುಳ್ಳವರೂ, ಸತ್ಯಾಸತ್ಯತೆಯನ್ನು ಪೂರ್ವಗ್ರಹ ಪೀಡಿತರಾಗದೆ ತಿಳಿಯಲು ಹಂಬಲಿಸುವವರಾಗಬೇಕು.(ವಿಳಾಸವಂತು ನಿಮಗೆ ತಿಳಿದಿದೆ). ಇದು ಕೇವಲ ಒಂದು ಸಿದ್ಧಾಂತಕ್ಕೆ ಸೀಮಿತವಲ್ಲ. ಮಾನವಿಯತೆಯೇ ಅವಮಾನಿತರಾಗಿರುವ ಈ ಯುಗದಲ್ಲಿ ಸಕಾರಾತ್ಮವಾಗಿ ಕಾರ್ಯನಿರತರಾಗಿರುವವರಿಗೆ ಹೊಂದಿಕೊಂಡು ನಡೆಯಬೇಕು. ಶ್ರೀಯುತ ದಿನೇಶ್ ಅಮೀನ್ ಮಟ್ಟುರವರು ಮಾಡಿರುವುದೇ ಅದನ್ನೇ. . ನೀವು ಜೈಲಿನಲ್ಲಿರುವಾಗ ” Free naveen soorinje” ಎಂಬ ಧ್ಯೇಯ ವಾಕ್ಯದಡಿ ಸೇರಿ ಕೆಲವು ಜಮಾತಿನವರು ಮಾಡಿದ್ದು ಅದನ್ನೇ.(ಇದರ ಅರ್ಥ ನೀವು ಅವರ ಬಗ್ಗೆ ಬರೆಯಬಾರದು ಎಂದಲ್ಲ). ಇಲ್ಲಿ ಬರೆಯಲು ಅವಕಾಶ ನೀಡಿ ವರ್ತಮಾನ.ಕಾಂ ಮಾಡುತ್ತಿರುವುದು ಅದನ್ನೇ

    Reply
  4. yammarmanvi

    ಧನ್ಯವಾದಗಳು ಎಸ್.ಐ. ಹಸನ್ ಸಾಹೆಬರಿಗೆ. ನಿಮ್ಮ ಲೇಖನದಿಂದಲಾದರೂ ಸೂರಿಂಜೆಯವ ಕಣ್ಣು ತೆರೆದೀತು ಎಂದು ಆಶಿಸುತ್ತ. ಸೃಷ್ಟಿಕರ್ತನು ಇವರಿಗೆ ಸತ್ಯವನ್ನು ಅರಿಯುವ ಅವಕಾಶ ನೀಡಲಿ ಎಂದು ಪ್ರಾರ್ಥಿಸುವೆ.

    Reply
  5. ಓದುಗಾಭಿಮಾನಿ

    ಮುಸ್ಲಿಮ್ ಸಮುದಾಯದೊಳಗಿನ ಬೆಳವಣಿಗೆಗಳನ್ನು ಬಹಳ ಹತ್ತಿರದಿಂದ ಗಮನಿಸುತ್ತಾ ಬಂದವರಲ್ಲಿ ನಾನೂ ಒಬ್ಬ. ನನ್ನ ಅಧ್ಯಯನದ ಪ್ರಕಾರ ಮುಸ್ಲಿಮ್ ಸಮುದಾಯದಲ್ಲಿಂದು ಯಾವುದಾದಾರು ಸೆನ್ಸಿಬಲ್ ಹಾಗೂ ರೆಸ್ಪಾನ್ಸಿಬಲ್ ಸಂಘಟನೆಯೊಂದಿದ್ದರೆ ಅದು ಜಮಾತೆ ಇಸ್ಲಾಮಿ ಹಿಂದ್ ಎಂದು ನನ್ನ ಭಾವನೆ. (ನಾನು ಜಮಾತೆಯ ಸದಸ್ಯನಾಗಲಿ, ಕಮ್ಯುನಿಸ್ಟರ ವಿರೋಧಿಯಾಗಲಿ ಅಲ್ಲ ). ಮೂಲಭೂತವಾದದ ಮಟ್ಟಿಗೆ ಹೇಳುವುದಾದರೆ, ನಮ್ಮ ಸಮಾಜದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಸಂಘಟನೆಗಳು ಮೂಲಭೂತವಾದಿಗಳೇ. ಅದು ಸಂಘ ಪರಿವಾರವಾಗಿರಬಹುದು, ಜಮಾತೆಯಾಗಿರಬಹುದು, ಸೂರಿಂಜೆ ಪ್ರತಿನಿಧಿಸುತ್ತಿರುವ ಕಮ್ಯೂನಿಸ್ಟ್ ಪಕ್ಷವಾಗಿರಬಹು ಅಥವಾ ಅದರ ಅಂಗಸಂಸ್ಥೆಗಳಾಗಿರಬಹುದು, ಎಲ್ಲಾರೂ ತಮ್ಮ ತಮ್ಮ ಸಿದ್ದಾಂತಗಳಲ್ಲಿ ಮೂಲಭೂತವಾದಿಗಳೇ ವಿನಹ ಉದಾರವಾದಿಗಳಲ್ಲ. ಜಮಾತೆಯ ಮೂಲಭೂತವಾದದ ಸ್ವರೂಪ ಧಾರ್ಮಿಕತೆಕ್ಕಿಂತ ಹೆಚ್ಚಾಗಿ ಕಮ್ಯುನಿಸ್ಟ್ ತರಹದ ಸೈದ್ದಾಂತಿಕವಾದುದ್ದು. ಮೌದೂದಿ-ಮೂಲಭೂತವಾದವಾಗಿರಲಿ, ಮಾರ್ಕ್ಸ್-ಮೂಲಭೂತವಾದವಾಗಿರಲಿ, ಬಲವಾಗಿರಲಿ ಅಥವಾ ಎಡಮೂಲಭೂತವಾದವಾಗಿರಲಿ ಯಾವುದೂ ಸಮಾಜಕ್ಕೆ ಒಳ್ಳೆಯದಲ್ಲ.

    ತಾವೇ ಸರಿ ತಮ್ಮದೇ ಸರಿ ಎನುವ ಈ ಕಾಲದಲ್ಲಿ ಒಬ್ಬರಿಗೆ ಇನ್ನೊಬ್ಬರ ಮೂಲಭೂತವಾದ ಅಪಾಯಕಾರಿಯಾಗಿ ಕಾಣಿಸುವುದು ಸಹಜ. ಇನ್ನೂ ತುಲಾನಾತ್ಮಕವಾಗಿ ನೋಡುವುದಾದರೆ ಜಮತೆ ಸಂಘಟನೆ ಕಮ್ಯುನಿಸ್ಟ್ ಗಿಂತ ಸ್ವಲ್ಪ ಹೆಚ್ಚು ಉದಾರವಾದಿ ಹಾಗೂ ವಿಶಾಲ ಮನೋಭಾವವನ್ನು ಹೊಂದಿದೆ. ಅದು ಸ್ವಾತಂತ್ರೋತ್ತರದಲ್ಲಿ ಕಾಲಕ್ಕೆ ತಕ್ಕಂತೆ ಬಹಳಷ್ಟು ಧೋರಣೆಗಳನ್ನು ಬದಲಾಯಿಸುತ್ತಾ ಸಮಾಜಮುಖಿಯಾಗುತ್ತಾ ಬಂದಿದೆ. ದೇಶದ, ಹಾಗೂ ದೇಶವಾಸಿಗಳ ಹಿತಾಕಾಂಕ್ಷೆಯನ್ನು ಮುಂದಿಟ್ಟುಕೊಂಡು ತಮ್ಮನ್ನು ವಿರೋಧಿಸುವ ಸಂಘಟನೆಗಳೊಂದಿಗೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕಾಮನ್ ಏಜೆಂಡಾಗಾಗಿ ಕೆಲಸ ಮಾಡುತ್ತಾ ಇದೆ. ಅದನ್ನು ’ಸೋಗು’ ಎಂದು ಹೀಯಾಳಿಸುವುದು ಒಂದು ವಿಕೃತ ಯೋಚನೆ. ಸ್ವತಹ ಕಮ್ಯುನಿಸ್ಟ್ ಆಗಿದ್ದು ಜ್ಯಾತ್ಯತೀತವಾದಿ ಹಾಗೂ ಪ್ರಗತಿಪರವಾದಿಯ ಸೋಗುಹಾಕಿಕೊಂಡು ಇತರರ ಸೋಗಿನ ಬಗ್ಗೆ ಬರೆಯುತ್ತಿರುವುದು ಹಾಸ್ಯಸ್ಪದವೇ ಸರಿ. ಎಲ್ಲಾ ಸಂಘಟನೆಗಳು ತಮ್ಮ ತಮ್ಮ ಏಜೆಂಡಾಗಳನ್ನು ಸಮಾಜದಲ್ಲಿ ಜಾರಿಗೊಳಿಸಲು ಇಂತಹ ಹಲಾವಾರು ರೀತಿಯ ಸರ್ಕಸ್ ಗಳನ್ನು ಮಾಡುತ್ತವೆ, ಎಲ್ಲಿಯವರೆಗೆ ಅದು ಸಂವಿಧಾನ ವಿರೋಧಿಯಾಗಿರುವುದಿಲ್ಲವೋ ಅದರಲ್ಲೇನೂ ತಪ್ಪಿಲ್ಲ. ಅದರಲ್ಲೂ, ಜಮಾತೆ ಇತರರಂತೆ ಕದ್ದು ಮುಚ್ಚಿಯಂತೂ ಮಾಡ್ತಿಲ್ಲವಲ್ಲ.

    ಒಂದು ಕ್ಷಣಕ್ಕೆ ಜಮಾತೆ ವೈವಿಧ್ಯತೆ ವಿರೋಧಿ ಎಂದು ಒಪ್ಪಿಕೊಳ್ಳೊಣ. ಸೂರಿಂಜೆಯವರು ಪ್ರತಿನಿಧಿಸುತ್ತಿರುವ “ಪ್ರಗತಿಪರ’ವೆನ್ನಲಾಗುತ್ತಿರುವವರು ಬೇರೆ ಸಿದ್ದಾಂತಿಗಳನ್ನೇಕೆ ತಮ್ಮ ಕಾರ್ಯಕ್ರಮಗಳಿಗೇಕೆ ಆಹ್ವಾನಿಸುವುದಿಲ್ಲ? ಅವರನ್ನು ತಮ್ಮ ಸಂಘಟನೆಗಳ ಪದಾಧಿಕಾರಿಗಳಾಗಿ ನೇಮಿಸಲ್ಲ, ಅಥವಾ ಪ್ರಶಸ್ತಿಯನ್ನು ನೀಡುವುದಿಲ್ಲ? (ಒಬ್ಬ ಮಟ್ಟುತಂತಹ ಜವಾಬ್ದಾರಿಯುತ ವ್ಯಕ್ತಿ ಜಮಾತೆಯ ಕಾರ್ಯಕ್ರಮಕ್ಕೆ ಹೋಗುವುದನ್ನೇ ಸಹಿಸದವರಿಂದ ಅಂತಹುಗಳನ್ನು ಆಪೇಕ್ಷಿಸುವುದೂ ಕೂಡಾ ಮೂರ್ಖತನವೇ ಸರಿ). ಇನ್ನು ಜಮಾತೆಯ ಕೋಮುವಾದದ ಬಗ್ಗೆ ಹೇಳುವುದಾದರೆ, ಅದು ಈ ಶತಮಾನದ ಜೋಕ್ ಅಲ್ಲದೆ ಬೇರನಲ್ಲ.

    ಲೇಖಕರಿಗೆ ಸಮಾಜ ಸುಧಾರಣೆಯ ಬಗ್ಗೆ ಹಂಬಲವಿಲ್ಲವೇನಂದಲ್ಲ; ಆ ಹಂಬಲದ ಜತೆಗೆ ಸಾಮಾಜಿಕ ಪ್ರಬುದ್ಧತೆಯ ಅಗತ್ಯವಿದೆ. ಸಮಾಜಕ್ಕೆ ಯಾರು ಹಿತವರು, ಯಾರು ವೈರಿಗಳು; ಯಾರು ಪ್ರಾಮಾಣಿಕರು, ಯಾರಲ್ಲ ಮುಂತಾದವುಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುವ ಅಗತ್ಯ ನಮ್ಮ ಮುಂದಿದೆ. ಅದರಲ್ಲಿ ಹಲವಾರು ಹೊಂದಾಣಿಕೆಗಳನ್ನು ಮಾಡಾಬೇಕಾಗುತ್ತದೆ, ಪರಸ್ಪರರ ಸಣ್ಣ ಪುಟ್ಟ ಕುಂದುಕೊರತೆಗಳನ್ನು ದೊಡ್ಡ ವಿಷಯವನ್ನಾಗಿ ಮಾಡದೆ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟುಕೊಂಡು ಮುನ್ನಡೆಯಬೇಕಾಗುತ್ತದೆ. ಅದನ್ನೇ ದಿನೇಶ್ ಅಮೀನ್ ಮಟ್ಟುರವರು ಮಾಡಿದ್ದಾರೆ ಅಂತ ಮೇಲ್ನೋಟಕ್ಕೆ ಭಾಸವಾಗುತ್ತದೆ. ಅದಕ್ಕಾಗಿ ಅವರು ಅಭಿನಾಂದರ್ಹರೂ ಕೂಡಾ.

    Reply
  6. Anonymous

    naveen sooranjiyavru ettida prasne samanjasavagide, moolbhoot yavude dharmadirali adannu virodhisuvadu pragatiparra kartavya.
    GANAPATHI KODLE
    GULBARGA.

    Reply
  7. Ananda Prasad

    ಎಲ್ಲ ಧರ್ಮಗಳ ಎಲ್ಲಾ ರೀತಿಯ ಪುರೋಹಿತಶಾಹೀ ಕರ್ಮಕಾಂಡಗಳನ್ನು ಹಾಗೂ ಮೂಲಭೂತವಾದವನ್ನು ನಾವು ವಿರೋಧಿಸಬೇಕಾಗಿದೆ. ಆದರೆ ದುರದೃಷ್ಟವಶಾತ್ ದಿನೇಶ್ ಅಮೀನ್ ಮಟ್ಟು ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುವ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ ಎಂದು ಕಂಡುಬರುತ್ತದೆ. ಅವರು ಆ ಹುದ್ಧೆಯಲ್ಲಿ ಇರುವವರೆಗೂ ಮುಕ್ತವಾಗಿ ಮಾತಾಡಲು ಸಾಧ್ಯವಾಗದು ಎಂದು ಕಾಣುತ್ತದೆ.

    Reply
  8. Rahil Bolar

    Dear Mr.Naveen,

    I kindly request you to go through some explanations (even if its lengthy!)pertaining to your allegations which is not only against jamath hind but also against the quran.

    you have already showcased a negative view of Islam, especially when women’s issues are involved.I would like to share some information regarding the status of women in Islam as you are so much concerned about them ,

    “Live with them (your wives) on a footing of kindness and equity. If you dislike them it may be that you dislike something in which Allah has placed a great deal of good.” [Noble Quran 4:19]

    “From what is left by parents and those nearest related there is a share for men and a share for women, whether the property be small or large –a determinate share” [Noble Quran 4:7]
    (muslim mothers, wives, daughters, and sisters had received inheritance rights thirteen hundred years before Europe recognized that these rights even existed)

    Regarding Mother:
    “Paradise is at the feet of mothers.” [In An-Nasa’i, Ibn Majah, Ahmad]

    A man came to the Messenger of Allaah (pbuh) and said: “O Messenger of Allaah, who is most deserving of my good company?
    ” He said: “Your mother.”
    He said: “Then who?”
    He said: “Your mother.”
    He said: “Then who?”
    He said: “Your mother.”
    He said: “Then who?” He said: “Then your father.”

    Regarding wife:
    The most perfect believers are the best in conduct and best of you are those who are best to their wives. [Ibn-Hanbal, No. 7396]

    Mr.Naveen islam should be viewed as a religion that had immensely improved the status of women and had granted them many rights that the modern world has recognized only this century.

    Mr.Naveen negative portrayal of Islam in the media has to end if we are to live in a world free from all traces of discrimination, prejudice, and misunderstanding

    I also request all comrades to read the quran keeping your communist ideology aside.

    Reply

Leave a Reply to yammarmanvi Cancel reply

Your email address will not be published. Required fields are marked *