ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮ ಹಾಗೂ ದಿನೇಶ್ ಅಮೀನ್ ಮಟ್ಟು ಭಾಷಣ

– ಇರ್ಷಾದ್

“ಮುಸ್ಲಿಮ್ ಲೇಖಕರ ಸಂಘ” ಶುಕ್ರವಾರ ಸಂಜೆ ಮಂಗಳೂರಿನಲ್ಲಿ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಮುಸ್ಲಿಂ ಸಾಹಿತಿಗಳಿಗೆ ಸನ್ಮಾನ, ಜೊತೆಗೆ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಪ್ರಧಾನ ಭಾಷಣಕಾರರಾಗಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಆಗಮಿಸಿದ್ದರು. ಪ್ರಗತಿಪರ ಚಿಂತಕ, ಕೋಮುವಾದ ಮೂಲಭೂತವಾದ ವಿರೋಧಿ ಮನಸ್ಥಿತಿ ಹೊಂದಿರುವ ಹಾಗೂ ತಮ್ಮ ಮೊನಚಾದ ಬರಹಗಳಿಂದ ಜನರ ಹೃದಯ ಗೆದ್ದಿರುವ ದಿನೇಶ್ ಅಮೀನ್ ಮಟ್ಟು ಅವರ ಭಾಷಣದಲ್ಲಿ ಏನಿರಬಹುದು ಎಂಬ ಕುತೂಹಲದಿಂದ ನಾನೂ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಮೀನ್ ಮಟ್ಟು ಅವರ ಮಾತುಗಳ ಕುರಿತಾಗಿ ಹೇಳೋದಕ್ಕಿಂತ ಮೊದಲು ಕೆಲವೊಂದು ವಿಚಾರಗಳ dinesh-amin-mattu-2ಕುರಿತಾಗಿ ಹೇಳಲೇ ಬೇಕಾಗುತ್ತದೆ.

ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಾಹಿತ್ಯ ವಲಯದಲ್ಲಿ ಪ್ರಗತಿಪರ ಚಿಂತನೆ ಮಾಡುವ ಸಾಹಿತಿಗಳ ಬರಹಗಾರರ ದಂಡೇ ಇತ್ತು. ಬೊಳುವಾರು ಮುಹಮ್ಮದ್, ಫಕೀರ್ ಮುಹಮ್ಮದ್ ಕಟಪಾಡಿ, ಬಿ.ಎಮ್. ರಶೀದ್, ಸಾರಾ ಅಬೂಬಕ್ಕರ್, ಮುಂತಾದ ಪ್ರಗತಿಪರ ಬರಹಗಾರರು ಮುಸ್ಲಿಮ್ ಸಮಾಜದಲ್ಲಿರುವ ಮೂಲಭೂತವಾದತ್ವವನ್ನು ಖಂಡಿಸುವುದರ ಜೊತೆಗೆ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಮೇಲೆ ಬಹುಸಂಖ್ಯಾತ ಕೋಮುವಾದಿಗಳಿಂದ ನಡೆಯುತ್ತಿರುವ ದೌರ್ಜನ್ಯದ ವಿರುದ್ಧವೂ ಧ್ವನಿ ಎತ್ತಿದವರು. ಆದರೆ ಈ ಎಲ್ಲಾ ಪ್ರಗತಿಪರ ಲೇಖಕರು ಮುಸ್ಲಿಂ ಸಮುದಾಯಕ್ಕೆ ಲೇಖಕರಾಗಿ ಕಂಡುಬಂದಿಲ್ಲ. ಬದಲಾಗಿ ಇವರ ಪ್ರಗತಿಪರ ಚಿಂತನೆ ಮುಸ್ಲಿಂ ಸಮುದಾಯದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗತೊಡಗಿತು. ಪ್ರಸ್ತುತ ದಿನಗಳಲ್ಲಿ ಮುಸ್ಲಿಂ ಮಹಿಳೆಯರ ಪರಿಸ್ಥಿತಿ ಕುರಿತಾಗಿ ಧ್ವನಿ ಎತ್ತುವುದರ ಜೊತೆಗೆ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಕುರಿತಾಗಿಯೂ ಧ್ವನಿ ಎತ್ತುತ್ತಿರುವ ಲೇಖಕಿಯರಾದ Sara-Abubakarಸಾರಾ ಅಬೂಬಕ್ಕರ್, ಕೆ.ಶರೀಫಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ ಹಾಗೂ ಜೊಹರಾ ನಿಸಾರ್ ಅಹಮ್ಮದ್ ಅಂತವರನ್ನು ಜಮಾತೇ ಇಸ್ಲಾಂಮೀ ಹಿಂದ್ ಸಿದ್ದಾಂತ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಅವರ ಪಾಲಿಗೆ ಇವರೆಲ್ಲಾ ಧರ್ಮವಿರೋಧಿಗಳು. ಯಾಕೆಂದರೆ ಇವರುಗಳು ಧರ್ಮ ವಿಧಿಸಿರುವ ಕಟ್ಟುಪಾಡುಗಳೊಳಗಿಲ್ಲ. ಮುಸ್ಲಿಮ್ ಸಮಾಜದಲ್ಲಿರುವ ಬಹುಪತ್ನಿತ್ವದ ದುರುಪಯೋಗ ಹಾಗೂ ಅದರಿಂದಾಗುತ್ತಿರುವ ಅನಾಹುತಗಳು, ಮುಸ್ಲಿಮ್ ಮಹಿಳೆಯರ ಪರಿಸ್ಥಿತಿ, ಧಾರ್ಮಿಕ ಕಟ್ಟುಪಾಡುಗಳು, ಕುರುಡು ನಂಬಿಕೆಗಳಿಂದಾಗುತ್ತಿರವ ಅನಾಹುತಗಳ ಕುರಿತಾಗಿ ಸಾಕಷ್ಟು ಲೇಖನಗಳನ್ನು ಬರೆದವರು ಹಾಗೂ ಈ ಕುರಿತು ಬೆಳಕು ಚೆಲ್ಲಿದವರು. ಆದರೆ ಈ ಎಲ್ಲಾ ವಿಚಾರವಾದಿಗಳ ಕುರಿತಾಗಿ ಮುಸ್ಲಿಂ ಲೇಖಕರ ಸಂಘದ ನಿಲುವೇನು ಎಂಬುವುದಂತೂ ಸ್ಪಷ್ಟ.

ಯಾಕೆಂದರೆ “ಮುಸ್ಲಿಮ್ ಲೇಖಕರ ಸಂಘ” ಮುಸ್ಲಿಮ್ ಧಾರ್ಮಿಕ ಸಂಘಟನೆ ಜಮಾತೆ ಇಸ್ಲಾಂಮೀ ಹಿಂದ್ ಸಂಘಟನೆಯ ಹಿನ್ನೆಲೆಯಲ್ಲಿ ಕಾರ್ಯಾಚರಿಸುವಂತಹಾ ಸಂಘವಾಗಿದೆ. ಜಮಾತೆ ಇಸ್ಲಾಂ ಸಂಘಟನೆ ಧಾರ್ಮಿಕ ಮೂಲಭೂತವಾದವನ್ನು ಮೈಗೂಡಿಸಿಕೊಂಡಿರುವ ಸಂಘಟನೆ. ಜೊತೆಗೆ ಇಸ್ಲಾಂ ರಾಷ್ಟ್ರವನ್ನು ಪ್ರತಿಪಾದಿಸುವ ಸಂಘಟನೆಯಾಗಿದೆ. ಇನ್ನು ಸಂಘದ ಕಾರ್ಯಕ್ರಮದಲ್ಲಿ ಸನ್ಮಾನಿತಗೊಂಡ ಲೇಖಕರು ಕೂಡಾ ಜಮಾತ್ ಇಸ್ಲಾಮೀ ಹಿಂದ್ ಕಾರ್ಯಕರ್ತರು. (ಮರಿಯಮ್ಮ ಇಸ್ಮಾಯಿಲ್ ಹಾಗೂ ಎಸ್. ಅಬ್ದುಲ್ ಕರೀಮ್ ದಾವಣಗೆರೆ) ಈ ಎಲ್ಲಾ ವಿಚಾರಗಳನ್ನು ನೋಡಿಕೊಂಡು ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದ ದಿನೇಶ್ ಅಮೀನ್ ಮಟ್ಟು ಅವರ ಮಾತುಗಳಲ್ಲಿ ನನಗೆ ಸಹಜ ಕುತೂಹಲವಿತ್ತು. ಯಾಕೆಂದರೆ ಮಹಿಳಾ ಪರ, ಕೋಮುವಾದತ್ವ, ಮೂಲಭೂತವಾದತ್ವ ವಿರೋಧಿ, ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಅಮೀನ್ ಮಟ್ಟು ಇಲ್ಲಿ ಸಾಕಷ್ಟು ವಿಚಾರಗಳ ಕುರಿತಾಗಿ ಮಾತನಾಡೋದಿತ್ತು. ಆದರೆ ಅವರು ಇಲ್ಲಿ ತಮ್ಮ ನೈಜ್ಯ ಜವಾಬ್ದಾರಿಯನ್ನು ಪೂರ್ಣಗೊಳಿಸಿಲ್ಲ ಎಂದನಿಸಿದೆ.

ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಬಂದಂತಹಾ ಬಹುತೇಕ ಜನರಿಗೆ ಅಮೀನ್ ಮಟ್ಟು ಅವರ ಬರವಣಿಗೆ ಪ್ರಿಯವಾದುದು. ಯಾಕೆಂದರೆ ಅವರು ಆರ್.ಎಸ್.ಎಸ್ ನ್ನು ಹಾಗೂ ಪಿ.ಎಫ್.ಐ ಯನ್ನೂ ಖಂಡಿಸುತ್ತಾರೆ. ಈ ಕಾರಣಕ್ಕಾಗಿ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದ ಆಯೋಜಕರಾದ ಜಮಾತೇ ಇಸ್ಲಾಂಮೀ ಹಿಂದ್ ಹಾಗೂ ಕಾರ್ಯಕ್ರಮದಲ್ಲಿದ್ದಂತಹಾ ಜಮಾತ್ ಕಾರ್ಯಕರ್ತರೂ ಆರ್.ಎಸ್.ಎಸ್ ಹಾಗೂ ಪಿ.ಎಫ್.ಐ ಖಂಡಿಸುತ್ತಾರೆ. ಆದರೆ ಇಸ್ಲಾಂ ಧಾರ್ಮಿಕ ಮೂಲಭೂತವಾದವನ್ನಲ್ಲ. ಅದಕ್ಕಾಗಿ ಈ ಸಂಘಕ್ಕೆ ಮುಸ್ಲಿಂ ತೀವ್ರವಾದ ಸಂಘಟನೆ PFI-eventಪಿ.ಎಫ್.ಐ ಜೊತೆ ಜೊತೆಗೆ ಮುಸ್ಲಿಂ ಪ್ರಗತಿಪರ ಲೇಖಕರಾದ ಸಾರಾ ಅಬೂಬಕ್ಕರ್, ಬೊಳುವಾರು ಮೋಹಮ್ಮದ್ ಕುಌ, ಮುಹಮ್ಮದ್ ಕಟಪಾಡಿ ಅಂತಹಾ ಸಾಹಿತಿಗಳು ಮುಸ್ಲಿಂ ಸಾಹಿತಿಗಳಾಗಿ ಕಂಡಿಲ್ಲ. (ಹಿಂದೂ) ಎಡಪಂಥೀಯವಾದ ಹಾಗೂ ಪ್ರಗತಿಪರ ಚಿಂತನೆಗಳನ್ನು ಒಪ್ಪುವ ಈ ಮನಸ್ಥಿತಿ (ಮುಸ್ಲಿಮ್) ಎಡಪಂಥೀಯವಾದವನ್ನು, ಪ್ರಗತಿಪರ ಚಿಂತನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಬಹುಸಂಖ್ಯಾತ ಕೋಮುವಾದಿಗಳಿಂದ ದಬ್ಬಾಳಿಕೆ ಸಂದರ್ಭದಲ್ಲಿ ಜ್ಯಾತ್ಯಾತೀತರಾಗುವ ಈ ಮನಸ್ಥಿತಿ ಮುಸ್ಲಿಮ್ ಧಾರ್ಮಿಕ ವಿಚಾರಗಳು ಬಂದಾಗ ಪಕ್ಕಾ ಮೂಲಭೂತವಾದವನ್ನು ಪ್ರತಿನಿಧಿಸುತ್ತದೆ.

ಈ ಎಲ್ಲಾ ವಿಚಾರಗಳ ಕುರಿತಾಗಿ ಮಾಹಿತಿಯನ್ನು ಹೊಂದಿರುವ ದಿನೇಶ್ ಅಮೀನ್ ಮಟ್ಟು ಅವರು ಇಲ್ಲಿ ಮಾತನಾಡಬೇಕಾಗಿದ್ದು ಇಂಥಹಾ ವಿಚಾರಗಳನ್ನೇ. ಮುಸ್ಲಿಮ್ ಸಮುದಾಯದಲ್ಲಿರುವ ನ್ಯೂನತೆಗಳು, ಧರ್ಮದ ಹೆಸರಲ್ಲಿ ಹೇರಲ್ಪಡುತ್ತಿರುವ ಕಟ್ಟುಪಾಡುಗಳ ವಿರುದ್ಧ ಪ್ರಗತಿಪರ ನೆಲೆಯಲ್ಲಿ ಹೋರಾಟಗಳನ್ನು ನಡೆಸುವ ಹಾಗೂ ಧಾರ್ಮಿಕ ಮೂಲಭೂತವಾದತ್ವವನ್ನು ವಿರೋಧಿಸಿ ಬರವಣಿಗೆಗಳ ಮೂಲಕ ಧ್ವನಿ ಎತ್ತುವ ಮುಸ್ಲಿಂ ಲೇಖಕರ ಹೋರಾಟಗಾರರ ಪರಿಸ್ಥಿತಿ ಹೇಗಿದೆ? ಅವರನ್ನು ಮುಸ್ಲಿಂ ಸಮುದಾಯದ ಮೂಲಭೂತ ಮನಸ್ಥಿತಿಗಳು ನೋಡುತ್ತಿರುವ ದೃಷ್ಟಿಕೋನದಲ್ಲಿ ಆಗಬೇಕಾದ ಬದಲಾವಣೆಗಳು ಯಾವುವು ಎಂಬುವುದರ ಕುರಿತಾಗಿದೆ. ಮುಸ್ಲಿಂ ಲೇಖಕರ ಸಂಘದ ಬೆನ್ನೆಲುಬಾಗಿರುವ ಜಮಾತೇ ಇಸ್ಲಾಂಮೀ ಹಿಂದ್ ಧಾರ್ಮಿಕ ಸಂಘಟನೆ ಪ್ರಗತಿಪರ ಚಿಂತಕರು ಹಾಗೂ ಮಹಿಳಾ ಪ್ರಗತಿಪರತೆ ಕುರಿತಾಗಿ ತಳೆದಿರುವ ನಿಲುವುಗಳೇನು ಎಂಬುವುದರ ಕುರಿತಾಗಿರಬೇಕಿತ್ತು. ಮುಸ್ಲಿಂ ಪ್ರಗತಿಪರ ಲೇಖಕಿ ಸಾರಾ ಅಬೂಬಕ್ಕರ್ ಕುರಿತಾಗಿ ಜಮಾತ್ ಹೊಂದಿರುವ ನಿಲುವಿನ ಕುರಿತಾಗಿ ಸ್ಪಷ್ಟತೆ ಇರುವ ಅಮೀನ್ ಮಟ್ಟು ಅವರು ಕಾರ್ಯಕ್ರಮದ ಸಭಾಂಗಣದಲ್ಲಿ ತುಂಬಿದ ಸಾಹಿತ್ಯಾಭಿಮಾನಿಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರೇ ವಿನಹ ಜಮಾತ್ ನಂತಹಾ ಪ್ರಗತಿಪರ ಚಿಂತನೆಗಳ ವಿರೋಧಿ ಸಂಘಟನೆಯ ಕುರಿತಾಗಿ ಚಕಾರವೆತ್ತಿಲ್ಲ. ಈ ಹಿಂದೆ ಖ್ಯಾತ ಸಾಹಿತಿ ಹಾಗೂ ಬಂಡಾಯ ಬರಹಗಾರರಾದ devanurದೇವನೂರು ಜಮಾತೇ ಇಸ್ಲಾಂಮೀ ಹಿಂದ್ ಮುಸ್ಲಿಮ್ ರ ಆರ್.ಎಸ್.ಎಸ್ ಎಂಬ ಹೇಳಿಕೆಯನ್ನು ನಿಡಿದ್ದರು ಎಂಬುವುದನ್ನು ನಾವಿಲ್ಲಿ ಗಮನಿಸಬೇಕು. ಮಟ್ಟು ಅವರು ತಮ್ಮ ಭಾಷಣದಲ್ಲಿ ಹಿಂದೂ ಸಂಘಟನೆಗಳು ಹಿಂದೂ ಸಮಾಜದಲ್ಲಿದ್ದ ಕೆಲವೊಂದು ಆಚರಣೆಗಳ ವಿರುದ್ಧ ಹೇಗೆ ಧ್ವನಿಎತ್ತಬೇಕು ಎಂದು ವಿವರಣೆ ನೀಡಿದರೆ ಹೊರತು ಮುಸ್ಲಿಂ ಧಾರ್ಮಿಕ ಸಂಘಟನೆಗಳ ಸಮಾಜ ತಿದ್ದುವ ಕಾರ್ಯಗಳ ಕುರಿತಾಗಿ ಎಳ್ಳಷ್ಟೂ ಮಾತನಾಡಿಲ್ಲ. ಅವರ ಮಾತುಗಳ ಪ್ರಕಾರ ಸಾಹಿತ್ಯ ಧ್ವನಿ ಇಲ್ಲದವರ ಧ್ವನಿಯಾಗಬೇಕು. ಜನರ ನೋವುಗಳನ್ನು ಹೊರಹಾಕುವಲ್ಲಿ ಸಾಹಿತ್ಯ ಪಾತ್ರದ ಕುರಿತಾಗಿ ಉಲ್ಲೇಖಿಸಿದರೂ, ಸಾಹಿತ್ಯವನ್ನು ಧಾರ್ಮಿಕ ಕಟ್ಟುಪಾಡಿನಲ್ಲಿಟ್ಟು ಧಾರ್ಮಿಕ ಸಾಹಿತ್ಯ ಮಾತ್ರ ನೈಜ್ಯ ಸಾಹಿತ್ಯ ಉಳಿದೆಲ್ಲಾ ಅಶ್ಲೀಲ ಸಾಹಿತ್ಯ ಎಂಬ ಮನಸ್ಥಿತಿ ಹೊಂದಿರುವವರ ಕುರಿತಾಗಿ ಮಾತನಾಡದೇ ಇರುವುದು ನಿಜಕ್ಕೂ ಬೇಸರ ತಂದಿದೆ. ಇನ್ನು ಹಿಂದೂ ಧರ್ಮದಲ್ಲಿ ಪ್ರಗತಿಪರ ಚಿಂತನೆಗಳಿಗೆ ಅವಕಾಶವಿದೆ ಹಾಗೂ ಇಸ್ಲಾಂ ಧರ್ಮದಲ್ಲಿ ಪ್ರಗತಿಪರ ಚಿಂತನೆಗೆ ಅವಕಾಶವಿಲ್ಲ ಎಂಬ ಮಾತನ್ನಾಡುವ ಸಂದರ್ಭದಲ್ಲಿ ಪ್ರಗತಿಪರ ಚಿಂತನೆಗೆ ಎಳ್ಳಷ್ಟೂ ಅವಕಾಶವನ್ನು ನೀಡದ ಧಾರ್ಮಿಕ ಸಂಘಟನೆ ಜಮಾತೇ ಇಸ್ಲಾಂಮೀ ಹಿಂದ್ ಹಾಗೂ ಅವರ ಅಧೀನದಲ್ಲಿರುವ ಮುಸ್ಲಿಂ ಲೇಖಕರ ಸಂಘದ ನಿಲುವಿನ ಕುರಿತಾಗಿ ಚಕಾರವೆತ್ತದೇ ಇರುವುದು ಆಶ್ವರ್ಯ ಉಂಟುಮಾಡಿದೆ. ದಿನೇಶ್ ಅಮೀನ್ ಮಟ್ಟು ಅವರ ಈ ನಡೆ ಅವರ ನಿಲುವುಗಳಿಂದ ಪ್ರೇರಿತರಾಗಿ ಅವರನ್ನು ಹಿಂಬಾಲಿಸುವ ಅದೆಷ್ಟೋ ಜನರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ.

10 thoughts on “ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮ ಹಾಗೂ ದಿನೇಶ್ ಅಮೀನ್ ಮಟ್ಟು ಭಾಷಣ

  1. Mansoor

    ಬಹುಶ ಈ ಲೇಖನ ಬರೆದವರಿಗೆ ನೈಜ ಸ್ಥಿತಿ ಅರಿತಿಲ್ಲ ಎಂದು ಭಾಸವಾಗುತ್ತದೆ.. ಕೇವಲ ಪೂರ್ವಗ್ರಹ ಪೀಡಿತವಾಗಿ ಬರೆದರೆ ಎಲ್ಲವೂ ಲೇಖನವಾಗುವುದಿಲ್ಲ.. ಪತ್ರಕರ್ತರು ಮೂಲ ಪತ್ರಿಕಾ ಧರ್ಮ ಮರೆದರೆ ಹೀಗೆ ಸಂಶಯ ಪಿಶಾಚಿಯಾಗುವುದು..

    Reply
  2. Anonymous

    1980 rinda 2014 ra varege karnatakadalli hutti beleda muslim sahithigalu neevu mele soochisidavaru matravalla.neevu ullekisiruva sahithigalige bahalastu prashasthigalu bandide. Guruthisalpadada muslim sahithigalannu prothsahisi guruthisuvudu shresta karya.

    Jih muslim sangatanegalalliye atyantha pragathipara. adara kendra salaha samithi,rajya salaha samithi,allade kerala rajya karya darshigalallorvaru mahileyaragiddare.nimma article na sameepada photo nodi.karyakramdalli mahileyaru bagavahisiruvudu.80 ra dashakadalli idu sadyavitthe. estondu instutuiton galannu theredu mahila sabaleekarana dalli pramuka patra vahiside jih.Mahileyara maseedi pravesha,mahileya samasyegala itharth kagi counseling centre,anupama mahila masika.barahagararu lekakiyaru.ninneya karyakramadalli uthama krithi mahilege.

    jih Rss holike ithihasada bagegina ajnana. jabalpura,bagalpura,tane poone meerath,mujafarbad ahmadabad galali sambavisida komu galabe galli aparadigalu sanga hinnaleyavaru.galabeya nanthara rachisida ayo0gagala report nodiri.
    Jamaathe islami hind na karyakartharu bagavahisida onde ondu galabe deshada ithiyasadallilla

    Reply
  3. Girish

    ಇವರೊಬ್ಬರೇಅಲ್ಲ… ಬಹುತೇಕ “ಪ್ರಗತಿಪರ ಚಿಂತಕ”ರು ಇಂತಹ ವಿಷಯಗಳಲ್ಲಿ ಮೆತ್ತಗಾಗಿ ಬಿಡುತ್ತಾರೆ… ಬಹುಶ: ಇದು “ಪ್ರಗತಿ ವಿರೋಧಿ”ಯಾಗಿ ಕಾಣುತ್ತಿರಬೇಕು…!

    Reply
  4. thouseef

    ತಾನು ಏನನ್ನು ನ೦ಬಿದ್ದೇನೋ ಅದನ್ನೇ ಮತ್ತೊಬ್ಬರು ಭಾಷಣದಲ್ಲಿ ಹೇಳಬೇಕು ಎ೦ದು ಬಯಸುವುದು ತಪ್ಪಲ್ಲ.. ಆದರೆ ಹಾಗೆ ಆಗ್ರಹಿಸುವುದು ಮೂಖ೯ತನ ಮಾತ್ರವಲ್ಲ ಕೋಮುವಾದವು ಕೂಡ. ಜಾತ್ಯಾತೀತ ಧಮ೯ವನ್ನು ಪ್ರತಿಪಾದಿಸುವ ಇಷಾ೯ದ್ ನ೦ತಹ ಪ್ರಗತಿಪರರು ಕೂಡಾ ಕೆಲವೊಮ್ಮೆ ಕೋಮುವಾದಿಗಳಾಗುತ್ತಾರೆ. ಅಮೀನ್ ಮಟ್ಟು ಏನು ಹೇಳಬೇಕೆ೦ದು ನಿಧ೯ರಿಸುವ ಹಕ್ಕು ಇಷಾ೯ದ್ ಗೆ ಇಲ್ಲ. ಇಷಾ೯ದ್ ರವರೇ ಮುಸ್ಲಿ೦ ಲೇಖಕರ ಸ೦ಘ ಅಥವಾ ಜಮಾತೆ ಇಸ್ಲಾಮೀ ಹಿ೦ದ್ ನ ಬಗ್ಗೆ ಸ೦ಶೋಧನಾತ್ಮಕ ಲೇಖನವನ್ನು ಬರೆಯಿರಿ, ಚಚಿ೯ಸೋಣ.

    Reply
    1. nisar bangalore

      ಹಾಗೂ ಶರೀಯತ್ ಕಾನೂನಿನಲ್ಲಿ ಸಂಪೂರ್ಣವಾಗಿ ವಿಶ್ವಾಸವಿಟ್ಟುಕೊಂಡು ಸಾಮಾಜಿಕವಾಗಿ ನಾವು ಜ್ಯಾತ್ಯಾತೀತವಾದಿಗಳು ಎಂದು ಎಡಪಂಥೀಯ ಹಾಗೂ ಪ್ರಗತಿಪರರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಕಹಿ ಸತ್ಯ. ಇಸ್ಲಾಂಮಿನ ಹೆಸರಲ್ಲಿ ಜಮಾತೇ ಇಸ್ಲಾಂ ಸಿದ್ದಾಂತವನ್ನು ಪ್ರಚುರ ಪಡಿಸುವ ಸಾಹಿತ್ಯ ಧಾರ್ಮಿಕ ಅಥವಾ ಜಮಾತೇ ಸಾಹಿತ್ಯವಾಗುತ್ತದೆ ಹೊರತು ಅದು ನೈಜ್ಯವಾದ ಸಾಹಿತ್ಯವಾಗೂದಿಲ್ಲ. ಜಮಾತ್ ನ ಶಾಂತಿ ಪ್ರಕಾಶನದ ಬಹುತೇಕ ಪುಸ್ತಕಗಳು ಮೂಲಭೂತ ಹಾಗೂ ಮಹಿಳೆಯರ ಕುರಿತು ಕಲೀಫಾ ಆಡಳಿತ ಸಂಧರ್ಭದ ವಿಚಾರವಾದವನ್ನು ಪ್ರಕಟಿಸುತ್ತದೆ. ಜೊತೆಗೆ ಆ ನಿಲುವುಗಳು ಆಧುನಿಕ ರೀತಿಯಲ್ಲಿ ಎಷ್ಟು ಪ್ರಸ್ತುತ ಎಂದೂ ತನ್ನದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡು ಹೋಗುತ್ತದೆ. ಜೊತೆಗೆ ಲೇಖಕರು ಉಲ್ಲೇಖಿಸಿದಂತ್ತೆ( ಹಿಂದೂ) ಎಡಪಂಥೀಯರನ್ನು ಒಪ್ಪಿಕೊಳ್ಳುವ ಜಮಾತ್ ಯಾವತ್ತೂ ಮುಸ್ಲಿಂ ಪ್ರಗತಿಪರರನ್ನು ಒಪ್ಪಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಒಬ್ಬಪ್ರಗತಿಪರ ಚಿಂತಯನ್ನು ಒಳಗೊಂಡ ಹೊಸ ಪೀಳಿಗೆಗೆ ಆದರ್ಶವಾಗಿರುವ ದಿನೇಶ್ ಅಮೀನ್ ಮಟ್ಟು ಅವರು ಜಮಾತ್ ವೇದಿಕೆಯಲ್ಲಿ ಇಂಥಹಾ ಕೆಲವೊಂದು ವಿಚಾರಗಳನ್ನು ಮಾತನಾಡಬಹುದಾಗಿತ್ತು ಎಂದು ನಿರೀಕ್ಷಿಸುವುದು ತಪ್ಪಲ್ಲ ಎಂಬುವುದು ನನ್ನ ಅಭಿಪ್ರಾಯ.

      Reply
  5. nisar bangalore

    ಜಮಾತೇ ಇಸ್ಲಾಂ ಸಂಘಟನೆ ಹಾಗೂ ಅವರ ಕಾರ್ಯಕರ್ತರ ಪ್ರಕಾರ ಹಿಂದೂ ಕೋಮುವಾದಕ್ಕೆ ಮುಸ್ಲಿಂ ಪ್ರತಿರೋಧ ಮಾತ್ರ ಕೋಮುವಾದ ಹಾಗೂ ಮೂಲಭೂತವಾದವಾಗಿದೆ. ಹೊರತು ಪಡಿಸಿ ಜನರನ್ನು ಧಾರ್ಮಿಕವಾಗಿ ಪಕ್ಕಾ ಗೊಳಿಸುವುದು. ಶರೀಯತ್ ಆಧಾರದಲ್ಲೇ ನಾನು ನಡೆಯಬೇಕು ಎಂಬ ಚಿಂತನೆಯನ್ನಿಟ್ಟುಕೊಳ್ಳುವುದು. ಇಸ್ಲಾಂ ದೇಶದ ಸ್ಥಾಪನೆಯಾಗಬೇಕೆಂಬ ಕಲ್ಪನೆಯನ್ನು ಹೊಂದಿರುವುದು ( ಅದಕ್ಕಾಗಿ ಜಮಾತ್ ಅನುಸರಿಸುತ್ತಿರುವು ಮಾರ್ಗ ಶಾಂತಿ ಮಾರ್ಗ ಹಾಗೂ ಮತಪರಿವರ್ತನೆಯ ಮಾರ್ಗವನ್ನು ) ಬಹುಸಂಸ್ಕೃತಿಯ ಪ್ರತೀಕವಾದ ದರ್ಗಾ ಸಂಸ್ಕೃತಿಯನ್ನು ವಿರೋಧಿಸುತ್ತಾ ಬಂದಿರುವ ಜಮಾತ್ ಧರ್ಮಾಧಾರಿತ ಸಮಾಜವನ್ನು ಕಟ್ಟಲು ಹೊರಟಿರುವುದು ಕೋಮುದಾದ ಅಥವಾ ಮೂಲಭೂತವಾದ ಅಲ್ಲವೇ ? ಇಂಥಹಾ ಸಿದ್ದಾಂತವನ್ನು ಅಜೆಂಡಾವಾಗಿಟ್ಟುಕೊಂಡು ಅದಕ್ಕಾಗಿ ಶ್ರಮಿಸುತ್ತಿರುವ ಜಮಾತ್ ಒಂದು ಜ್ಯಾತ್ಯಾತೀತವಾದ ಸಂಘಟನೆಯಾಗಲು ಸಾಧ್ಯವೇ? ಶಾಂತಿ ಪ್ರಕಾಶನ ಪ್ರಕಟಿಸಿದ ಪುಸ್ತಕಗಳಲ್ಲಿ ಮಹಿಳೆಯರ ಕುರಿತಾದ ಇಸ್ಲಾಂ ಚಿಂತನೆಗಳನ್ನು ತಮ್ಮದೇ ಆದ ರೀತಿಯಲ್ಲಿ ಆಧುನಿಕ ಸಮಾಜಕ್ಕೆ ಅಳವಡಿಕೆಯಾಗುವಂತ್ತೆ ವಿಮರ್ಶಿಸಿ ಅದನ್ನು ಪ್ರಚುರ ಪಡಿಸುವ ಸಾಹಿತ್ಯ ಪ್ರಗತಿಪರ ಚಿಂತಕರು ಸಾಹಿತಿಗಳು ಒಪ್ಪುವಂತಹಾ ಸಾಹಿತ್ಯವಾದಲು ಸಾಧ್ಯವೇ?

    Reply
  6. ಜಮಾತೇ ಇಸ್ಲಾಮೀ ಹಿಂದ್ ಇಸ್ಲಾಂ ದೇಶ ಸ್ಥಾಪನೆ ಮಾಡುವಲ್ಲಿ ನಂಬಿಕೆ ಇಟ್ಟುಕೊಂಡತಹಾ ಧಾರ್ಮಿಕ ಸಂಘಟನೆ ಎಂಬುವುದರಲ್ಲಿ ಸಂಶಯವಿಲ್ಲ. ಶಾಂತಿ ಪ್ರಕಾಶನದ ಬಹುತೇಕ ಪುಸ್ತಕಗಳು ( ಜಮಾತ್ ಸಾಹಿತ್ಯ ) ಧಾರ್ಮಿಕವಾಗಿ ಇಸ್ಲಾಂ ಧರ್ಮಿಯರು ಏನನ್ನು ಮಾಡಬೇಕು ಏನನ್ನು ಮಾಡಬಾರದು ಎಂಬುವುದನ್ನು ಪ್ರಚುರಪಡಿಸುವ ಕಾರ್ಯದಲ್ಲಿ ನಿರತವಾಗಿರುವಂತಹದ್ದು ತಿಳಿದಿರುವ ಸತ್ಯ. ಹಿಂದೂ ಕೋಮುವಾದಕ್ಕೆ ಪ್ರತಿರೋಧವನ್ನು ಇಸ್ಲಾಂ ಕೋಮುವಾದ ಅಥವಾ ಮೂಲಭೂತವಾದ ಎಂದು ಬಿಂಬಿಸುತ್ತಾ ಹೊರಟಿರುವ ಜಮಾತ್ ನಾನು ಇಸ್ಲಾಂ ರಾಷ್ಟ್ರ ಚಿಂತನೆಯಲ್ಲಿ ನಂಬಿಕೆಯಿಟ್ಟುಕೊಂಡಿರುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತೆರೆಯ ಹಿಂದಿಡಲು ಪ್ರಯತ್ನಿಸುತ್ತಿದೆ. ಜೊತೆಗೆ ಸ್ವತಹಃ ಮೂಲಭೂತವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಜಮಾತ್ ಪ್ರಗತಿಪರ ವೇದಿಕೆಗಳಲ್ಲಿ ತನ್ನನ್ನು ಜ್ಯಾತ್ಯಾತೀತ ಸಂಘಟನೆ ಎಂಬುವಂತ್ತೆ ಬಿಂಬಿಸಹೊರಟಿರುವುದು ವಿಪರ್ಯಾಸ. ಬಹು ಸಂಸ್ಕೃತಿಯ ಪ್ರತೀಕವಾದ ದರ್ಗಾ ಸಂಸ್ಕೃತಿಯನ್ನು ಜಮಾತ್ ಎಂದೂ ಒಪ್ಪಿಕೊಳ್ಳುವುದಿಲ್ಲ. ಇಸ್ಲಾಂಮಿನ ಪ್ರಗತಿಪರ ಚಿಂತನೆಗಳನ್ನೊಳಗೊಂಡ ಸೂಫಿಸಂನ್ನು ಕೂಡಾ ಜಮಾತ್ ವಿರೋಧಿಸುತ್ತದೆ. ಜಮಾತ್ ಸಂಸ್ಥಾಪಕ ಮೊದ್ದೂದಿ ಅವರ ಚಿಂತನೆಗಳನ್ನು ಅಧ್ಯಯನ ಮಾಡಿದಾಗ ಖಂಡಿತಾವಾಗಿಯೂ ಜಮಾತ್ ಏನೆಂಬುವುದನ್ನು ನಾನು ತಿಳಿದುಕೊಳ್ಳಬಹುದು. ಇದರ ಜೊತೆಗೆ ಲೇಖಕರು ಹೇಳಿದ ಹಾಗೆ ( ಹಿಂದೂ) ಪ್ರಗತಿಪರ ಹಾಗೂ ಎಂಡಪಂಥೀಯರನ್ನು ಒಪ್ಪಿ ಅವರನ್ನು ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸಿ ತಾನೂ ಜ್ಯಾತ್ಯಾತೀಯ ಎಂಬತ್ತೆ ತನ್ನನ್ನು ಬಿಂಬಿಸಹೊರಟಿರುವ ಜಮಾತ್ (ಮುಸ್ಲಿಂ) ಪ್ರಗತಿಪರರನ್ನು ಖಂಡಿತಾ ಒಪ್ಪಿಕೊಳ್ಳುವುದಿಲ್ಲ ಎಂಬುವುದು ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ಪ್ರಗತಿಪರ ಚಿಂತಕ ಹಾಗೂ ಆದರ್ಶ ಪತ್ರಕರ್ತರಾಗಿರುವ ಯುವ ಪ್ರಗತಿಪರ ಪತ್ರಕರ್ತರಿಗೆ ಮಾದರಿಯಾಗಿರುವ ದಿನೇಶ್ ಅಮೀನ್ ಮಟ್ಟು ಅವರಿಂದ ಜಮಾತ್ ವೇದಿಕೆಯಲ್ಲಿ ಮಾಡುವ ಭಾಷಣದಲ್ಲಿ ಸಾಕಷ್ಟು ವಿಚಾರಗಳ ಕುರಿತು ಮಾತನಾಡಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ ಎಂಬುವುದು ತನ್ನ ಅನಿಸಿಕೆ.

    Reply
  7. nisar bangalore

    ಜಮಾತೇ ಇಸ್ಲಾಮೀ ಹಿಂದ್ ಇಸ್ಲಾಂ ದೇಶ ಸ್ಥಾಪನೆ ಮಾಡುವಲ್ಲಿ ನಂಬಿಕೆ ಇಟ್ಟುಕೊಂಡತಹಾ ಧಾರ್ಮಿಕ ಸಂಘಟನೆ ಎಂಬುವುದರಲ್ಲಿ ಸಂಶಯವಿಲ್ಲ. ಶಾಂತಿ ಪ್ರಕಾಶನದ ಬಹುತೇಕ ಪುಸ್ತಕಗಳು ( ಜಮಾತ್ ಸಾಹಿತ್ಯ ) ಧಾರ್ಮಿಕವಾಗಿ ಇಸ್ಲಾಂ ಧರ್ಮಿಯರು ಏನನ್ನು ಮಾಡಬೇಕು ಏನನ್ನು ಮಾಡಬಾರದು ಎಂಬುವುದನ್ನು ಪ್ರಚುರಪಡಿಸುವ ಕಾರ್ಯದಲ್ಲಿ ನಿರತವಾಗಿರುವಂತಹದ್ದು ತಿಳಿದಿರುವ ಸತ್ಯ. ಹಿಂದೂ ಕೋಮುವಾದಕ್ಕೆ ಪ್ರತಿರೋಧವನ್ನು ಇಸ್ಲಾಂ ಕೋಮುವಾದ ಅಥವಾ ಮೂಲಭೂತವಾದ ಎಂದು ಬಿಂಬಿಸುತ್ತಾ ಹೊರಟಿರುವ ಜಮಾತ್ ನಾನು ಇಸ್ಲಾಂ ರಾಷ್ಟ್ರ ಚಿಂತನೆಯಲ್ಲಿ ನಂಬಿಕೆಯಿಟ್ಟುಕೊಂಡಿರುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತೆರೆಯ ಹಿಂದಿಡಲು ಪ್ರಯತ್ನಿಸುತ್ತಿದೆ. ಜೊತೆಗೆ ಸ್ವತಹಃ ಮೂಲಭೂತವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಜಮಾತ್ ಪ್ರಗತಿಪರ ವೇದಿಕೆಗಳಲ್ಲಿ ತನ್ನನ್ನು ಜ್ಯಾತ್ಯಾತೀತ ಸಂಘಟನೆ ಎಂಬುವಂತ್ತೆ ಬಿಂಬಿಸಹೊರಟಿರುವುದು ವಿಪರ್ಯಾಸ. ಬಹು ಸಂಸ್ಕೃತಿಯ ಪ್ರತೀಕವಾದ ದರ್ಗಾ ಸಂಸ್ಕೃತಿಯನ್ನು ಜಮಾತ್ ಎಂದೂ ಒಪ್ಪಿಕೊಳ್ಳುವುದಿಲ್ಲ. ಇಸ್ಲಾಂಮಿನ ಪ್ರಗತಿಪರ ಚಿಂತನೆಗಳನ್ನೊಳಗೊಂಡ ಸೂಫಿಸಂನ್ನು ಕೂಡಾ ಜಮಾತ್ ವಿರೋಧಿಸುತ್ತದೆ. ಜಮಾತ್ ಸಂಸ್ಥಾಪಕ ಮೊದ್ದೂದಿ ಅವರ ಚಿಂತನೆಗಳನ್ನು ಅಧ್ಯಯನ ಮಾಡಿದಾಗ ಖಂಡಿತಾವಾಗಿಯೂ ಜಮಾತ್ ಏನೆಂಬುವುದನ್ನು ನಾನು ತಿಳಿದುಕೊಳ್ಳಬಹುದು. ಇದರ ಜೊತೆಗೆ ಲೇಖಕರು ಹೇಳಿದ ಹಾಗೆ ( ಹಿಂದೂ) ಪ್ರಗತಿಪರ ಹಾಗೂ ಎಂಡಪಂಥೀಯರನ್ನು ಒಪ್ಪಿ ಅವರನ್ನು ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸಿ ತಾನೂ ಜ್ಯಾತ್ಯಾತೀಯ ಎಂಬತ್ತೆ ತನ್ನನ್ನು ಬಿಂಬಿಸಹೊರಟಿರುವ ಜಮಾತ್ (ಮುಸ್ಲಿಂ) ಪ್ರಗತಿಪರರನ್ನು ಖಂಡಿತಾ ಒಪ್ಪಿಕೊಳ್ಳುವುದಿಲ್ಲ ಎಂಬುವುದು ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ಪ್ರಗತಿಪರ ಚಿಂತಕ ಹಾಗೂ ಆದರ್ಶ ಪತ್ರಕರ್ತರಾಗಿರುವ ಯುವ ಪ್ರಗತಿಪರ ಪತ್ರಕರ್ತರಿಗೆ ಮಾದರಿಯಾಗಿರುವ ದಿನೇಶ್ ಅಮೀನ್ ಮಟ್ಟು ಅವರಿಂದ ಜಮಾತ್ ವೇದಿಕೆಯಲ್ಲಿ ಮಾಡುವ ಭಾಷಣದಲ್ಲಿ ಸಾಕಷ್ಟು ವಿಚಾರಗಳ ಕುರಿತು ಮಾತನಾಡಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ ಎಂಬುವುದು ತನ್ನ ಅನಿಸಿಕೆ.

    Reply
  8. ಓದುಗ

    ದಿನೇಶ್ ಮಟ್ಟುರವರು ಈ ನಾಡು ಕಂಡ ಅಪರೂಪದ ಚಿಂತಕರಲ್ಲೊಬ್ಬರು. ಮಟ್ಟುರವರು ತಮ್ಮ ಭಾಷಣದಲ್ಲಿ ಏನನ್ನಬೇಕು, ಏನನ್ನಬಾರದು ಎಂದು ಬಯಸುವುದು ಅಥವಾ ತೀರ್ಮಾನಿಸುವುದು ಇರ್ಷಾದ್ ರಂತಹ ಉದಯೋನ್ಮುಖ ಲೇಖಕರಾದ ತಮಗೆ ಸ್ವಾತಂತ್ರ್ಯವಿದೆ, ನಾನದನ್ನು ಗೌರವಿಸುತ್ತೇನೆ. ಆದರೆ ಜಮಾತೆ ಸಂಘಟನೆಯ ಮೇಲಿನ ಸಿಟ್ಟನ್ನು ತೀರಿಸುವ ಹಠದಲ್ಲಿ ತಾವು ದಿನೇಶ್ ಮಟ್ಟುರಂತಹ ವ್ಯಕ್ತಿಯನ್ನು ಬಲಿಪಶು ಮಾಡುವ ಕೊಳಕು ರಾಜಕೀಯಕ್ಕೆ ದಯಾಮಾಡಿ ಕೈ ಹಾಕಬೇಡಿ ಇರ್ಷಾದ್.

    ಸಾಮಾಜಿಕ ಬೆಳವಣಿಗೆಗಳನ್ನು ಬಹಳ ಹತ್ತಿರದಿಂದ ಮುಕ್ತಮನಸ್ಸಿನಿಂದ ಆಬ್ಸರ್ವ್ ಮಾಡುವ ಒಬ್ಬ ವ್ಯಕ್ತಿಯಾಗಿ ನಾನು ಕೆಲ ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ. ಮೊದಲನೆಯದಾಗಿ ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಎಲ್ಲರಲ್ಲೂ ಒಂದಲ್ಲ ಒಂದು ತರಹದ ಲೋಪದೋಷಗಳು ಇದ್ದೇ ಇರುತ್ತವೆ. ಆ ಲೋಪಗಳನ್ನು ಅರಿತುಕೊಂಡು ಅದನ್ನು ತಿದ್ದುವ ಮನೋಭಾವವಿದ್ದರೆ ಸಾಕು, ಸಮಾಜ ಬದಲಾಗುತ್ತದೆ. ನಾನು ಮುಸ್ಲಿಮ್ ಸಮುದಾಯದ ಯಾವುದೇ ಸಂಘಟನೆಯ ಸದಸ್ಯನಲ್ಲ. ಪ್ರಗತಿಪರತೆಯ ಒಂದು ಕಾರಣಕ್ಕಾಗಿ ಜಮಾತೆ ಸಂಘಟನೆಯನ್ನು ಇಷ್ಟಪಡುತ್ತೇನೆ, ಏಕೆಂದರೆ ಅದರಲ್ಲಿ ಲೋಪಗಳನ್ನು ಅರಿತುಕೊಂಡು ಅದನ್ನು ತಿದ್ದುವ ಪ್ರಾಮಾಣಿಕ ಮನೋಭಾವವಿದೆ. ಲೇಖಕರಂತೆ ತಾವೇ ಸರಿ ಎಂಬ ಅಹಂ ಅವರಲಿಲ್ಲ. ತಮ್ಮ ತಮ್ಮ ವಿಚಾರಧಾರೆಗಳನ್ನು ಪ್ರಕಟಿಸುವ ಹಕ್ಕು ಎಲ್ಲರಿಗೂ ಈ ದೇಶದಲ್ಲಿದೆ. ಇಲ್ಲಿ ಜಮಾತೆ ಇತರರ ಹೇರುವ ಪ್ರಯತ್ನವನ್ನು ಮಾಡುತಿಲ್ಲ ಅಥವಾ ಹೇರಿಸಿಕೊಳ್ಳುವಷ್ಟು ಜನರೂ ದಡ್ಡರೂ ಅಲ್ಲವೆಂದೂ ನನ್ನ ಅನಿಸಿಕೆ.

    ಸೈದ್ದಾಂತಿಕ-ಕೋಮುವಾದದ ಕನ್ನಡಕವನ್ನು ಧರಿಸಿದವರಿಗೆ ಮಾರ್ಕ್ಸ್ ನ ಸಿದ್ದಾಂತದ ತಳಹದಿಯಲ್ಲಿ ದೇಶ ನಿರ್ಮಾಣವಾಗುವುದು ತಪ್ಪಾಗಿ ಕಾಣದೆ ಮುಹಮ್ಮದರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳ ಮೇಲೆ ಸಮಾಜವನ್ನು ಕಟ್ಟಲು ಪ್ರಯತ್ನಿಸುತ್ತಿರುವ ಜಮಾತೆ ಅಪರಾಧಿಯಾಗಿ ಕಾಣುವುದು ಸಹಜ. ಪ್ರಗತಿಪರರೆನ್ನಲಾದವರನ್ನು ಒಪ್ಪಿಕೊಳ್ಳುವ ಬಗ್ಗೆ, ಹಾಗೂ ವೈವಿಧ್ಯತೆಯನ್ನು ಒಪ್ಪಿಕೊಳ್ಳುವ ಬಗ್ಗೆ ನೀವೆತ್ತಿರುವ ಪ್ರಶ್ನೆಗಳನೊಮ್ಮೆ ಸ್ವತಹ ನೀವು ನಿಮ್ಮ ಬಳಿಯೊಮ್ಮೆ ಕೇಳಿ ನೋಡಿ. ನೀವು ಬಯಸಿದವರನ್ನು ಅವರೇ ಮೊದಲು ಒಪ್ಪಿಕೊಳ್ಳಬೇಕೆಂದು ನಿಯಮವೇನಾದರು ಇದೆಯೇ? ತಮ್ಮನ್ನು ತಾವೇ ’ಪ್ರಗತಿಪರ’ರೆಂದು ಟ್ಯಾಗ್ ಮಾಡಿಕೊಂಡ ನೀವೇಕೆ ಜಮಾತೆ ಸಂಘಟನೆಯನ್ನು ಒಪ್ಪಿಕೊಳ್ಳಬಾರದು? ನೀವೇಕೆ ಕಥಾ ಸ್ಪರ್ಧೆಯನ್ನು ಏರ್ಪಡಿಸಿ ಅಂಥವರಿಗೆ ಪ್ರಶಸ್ತಿಯನ್ನು ನೀಡಬಾರದು? ವಾಸ್ತವದಲ್ಲಿ ನನಗನ್ನಿಸಿದೇನಂದರೆ, ನಿಮಗೆ ಬೇಕಾಗಿರುವುದು ಕಣ್ಣಿಗೆ ಕಾಣುವ ’ವೈವಿಧ್ಯತೆ’, ವೈಚಾರಿಕ ವೈವಿಧ್ಯತೆಯಲ್ಲ. ಎಟ್ ಲೀಸ್ಟ್ ಜಮಾತೆ ಸಂಘಟನೆಗೆ ದಿನೇಶ್ ಮಟ್ಟುರವರನ್ನು ಅಥವಾ ಇನ್ನಾರನ್ನೋ ಕರೆದು ಅವರ ಮಾತುಗಳನ್ನಾಲಿಸುವ ಸಂಯಮವಿದೆ, ನಿಮಗಂತೂ ಅದೂ ಇಲ್ವಲ್ಲ, ಮೇಲಾಗಿ ವೈವಿಧ್ಯತೆಯ ಭಾಷಣವನ್ನು ಬಿಗಿಯುತ್ತಿದ್ದಿರಲ್ಲ ಇರ್ಷಾದ್!!!

    ಮಹಿಳೆಯರ ಹಕ್ಕು, ಹಾಗೂ ಧಾರ್ಮಿಕ ಮುಖವಾಡದಲ್ಲಿ ಮುಸ್ಲಿಮ್ ಮಹಿಳೆಯ ಮೇಲೆ ನಡೆಯುತ್ತಿದ್ದ ಶೋಷಣೆಯ ವಿರುದ್ಧ ಜಮಾತೆ ಸಂಘಟನೆ ಕೆಲಸ ಮಾಡಿದೆಯೋ ಅಷ್ಟು ಬೇರಾವ ಧಾರ್ಮಿಕ-ವೈಚಾರಿಕ ಸಂಘಟನೆ ಬಹುಷ ಮಾಡಿರಲಾರದು. ಮುಸ್ಲಿಮ್ ಹೆಣ್ಣನ್ನು ಶಾಲೆಗೆ ಕರೆತಂದ, ವೇದಿಕೆಗೆ ಹತ್ತಿಸಿದ, ಸಾಮಾಜಿಕ ಹೋರಾಟಕ್ಕೆ ದೂಡಿದ, ರಾಜಕೀಯಕ್ಕಾಗಿ ಬಳಸಿದ, ಪುಸ್ತಕ-ಪೇಪರ್ (ಶಾಂತಿ ಪ್ರಕಾಶನ- ಅನುಪಮ)ಗಳಲ್ಲಿ ಬರೆಸಿ ಅವರನ್ನು ’ಅಟ್ಟ’ಕ್ಕೇರಿಸಿದ ಅಪಖ್ಯಾತಿ, ದೂಷಣೆಗಳನ್ನು ಇನ್ನೂ ಜಮಾತೆ ಎದುರಿಸುತ್ತಿರುವುದು, ತಲಾಖ್ ನ ವಾಸ್ತವವನ್ನು ಜನರ ಮುಂದಿಟ್ಟದ್ದು, ಮಹಿಳೆಯ ಘನತೆ, ಹಾಗೂ ಸ್ಥಾನಮಾನದ ಬಗ್ಗೆ ಪುರುಷರಲ್ಲಿ ಜಾಗೃತಿಯನ್ನುಂಟು ಮಾಡಿದ್ದು, ಸೆಲ್ಫ್-ರೈಟಿಯಸ್ ಆಗಿರುವ ತಮಗೆ ಕಾಣಿಸದಿರುವುದು ಸಹಜ ಇರ್ಷಾದ್.

    ಜಮಾತೆಯ ಒಂದು ವೈಷಿಷ್ಟ್ಯ (ಅದು ನಿಮಗೆ ಸಮಸ್ಯೆಯಾಗಿ ಕಾಣಬಹುದು) ವೇನೆಂದರೆ ಅದು ಬಳಸುವ ಧಾರ್ಮಿಕತೆಯ ಭಾಷೆ. ಮುಸ್ಲಿಮ್ ಸಮುದಾಯಕ್ಕೆ ಸುಲಭವಾಗಿ ಅರ್ಥವಾಗುವ ಭಾಷೆ ಅದು. ಅದು ಪ್ಲಸ್ ಪಾಯಿಂಟೋ, ಅಥವಾ ಮೈನಸೋ ಅದನ್ನರಿಯುದು ಸ್ವಲ್ಪ ಕ್ಲಿಷ್ಟಕರವಾದದ್ದು. ಮುಸ್ಲಿಮರನ್ನು ಪ್ರಗತಿಪರರನ್ನಾಗಿ ಮಾಡಬೇಕಾದರೆ ’ಧಾರ್ಮಿಕ’ ಭಾಷೆಯನ್ನುಪಯೋಗಿಸುವುದು ಅನಿವಾರ್ಯವೆಂದು ಜಮಾತೆ ಸಂಘಟನೆಗೆ ತಿಳಿದಿದೆ. ಇಲ್ಲದಿದ್ದರೆ ಮುಸ್ಲಿಮರು ಯಾವತ್ತೋ ಎಮ್.ಜೆ ಅಕ್ಬರ್, ರಹಮತ್ ತರಿಕೆರೆ, (ನೀವಂದಂತೆ) ಮುನೀರ್ ಕಾಟಿಪಳ್ಳ ರವರ ಭಾಷೆಯನ್ನು ಅರ್ಥಮಾಡಿಕೊಂಡು ಪ್ರಗತಿಪರರಾಗುತಿತ್ತು.

    ಇನ್ನು ದೇವನೂರು ರವರ ಫತ್ವಾವನ್ನು ನೀವು ಉಲ್ಲೇಖಿಸಿದ್ದೀರಿ. ನಾನು ಬಹಳವಾಗಿ ಗೌರವಿಸುವವರಲ್ಲಿ ದೇವನೂರು ಒಬ್ಬರು. ಆದರೆ ಅವರೆಂದದ್ದು, ಅಥವಾ ಜಮಾತೆಯ ಇನ್ನಾರೋ ನಾಯಕರು ಅಂದದ್ದು ಗಾಸ್ಪೆಲ್ ಟ್ರುತ್ ಆಗಿ ಸ್ವೀಕರಿಸುವವ ’ವಿಧೇಯತೆ’ ಸಾಮಾನ್ಯ ಓದುಗ/ ಕೇಳುಗನಾದ ನನ್ನಲಿಲ್ಲ. ಏಕೆಂದರೆ ಜನತಂತ್ರ ವ್ಯವಸ್ಥೆಯಲ್ಲಿ ಯಾರೂ ವಿಮರ್ಶಾತೀತರಲ್ಲ. ಜಮಾತೆ ಸಂಘಟನೆ ಇಂದಿರಾ ಗಾಂಧಿಯ ಫ್ಯಾಸಿಸ್ಟ್ ಧೋರಣೆಯ ವಿರುದ್ಧ ಆಗಿನ ಜನಸಂಘವನ್ನು ಒಂದು ಚುನಾವಣೆಯಲ್ಲಿ ಬೆಂಬಲಿಸಿದ್ದರಿಂದ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದೆಯೆಂದು ನಂಬುವ ಸ್ವಾತಂತ್ರ್ಯ ಅವರಿಗಿದೆ. ಆ ಕಾಲಘಟ್ಟದಲ್ಲಿ ಎಡಪಕ್ಷಗಳು ಜನಸಂಘವನ್ನು ಬೆಂಬಲಿಸಿದ್ದವು, ಆದರೆ ಅವರೇಕೆ ಆರ್ ಎಸ್ ಎಸ್ ಆಗುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳುವ ಸ್ವಾತಂತ್ರ್ಯ ಆ ಕಾರ್ಯಕ್ರಮದಲ್ಲಿ ಸಭಿಕರಿಗಿರಲಿಲ್ಲ ಅದು ಬೇರೆ ವಿಷಯ. ಆಗ ಜಮಾತೆ ಮಾತ್ರವಲ್ಲ, ಎಲ್ಲ ಜನತಂತ್ರಪ್ರಿಯ ಸಂಘಟನೆಗಳು ಜನಸಂಘ ಭಾಗವಾಗಿದ್ದ ರಾಜಕೀಯ ಶಕ್ತಿಯನ್ನು ಬೆಂಬಲಿಸಿದ್ದನ್ನು ತಮ್ಮ ಭಾಷಣದಲ್ಲಿ ಅಡಗಿಸುವ ಪಾಂಡಿತ್ಯ ಅವರಿಗಿದೆ. ಅಂತಹ ಪಾಂಡಿತ್ಯಕ್ಕಾಗಿ ನಮಗೆ ದೇವನೂರು ಇಷ್ಟವಾಗುತ್ತಾರೆ. ತಮ್ಮ ’ಜ್ಯಾತ್ಯತೀತ’ ಇಮೇಜ್ ಹಾಳಾಗಬಾರದಾದರೆ, ಸಂಘಪರಿವಾರದ ಜತೆ ಒಂದು ಪ್ರಮುಖ ಮುಸ್ಲಿಮ್ ಸಂಘಟನೆಯನ್ನು ಬೈಯ್ಯುವುದು ಇಂದಿನ ಸನ್ನಿವೇಶದಲ್ಲಿ ಅನಿವಾರ್ಯವೆಂದು ಜನರಿಗೆ ತಿಳಿದಿದೆ ಇರ್ಷಾದ್.

    ಕೊನೆಯದಾಗಿ, ಜಮಾತೆ ಸಂಘಟನೆಯ ಮೇಲೆ ಕೋಮುವಾದದ ಆರೋಪವನ್ನು ಹೊರಿಸಿದ್ದೀರಿ. ನಗಬೇಕೋ, ಅಳಬೇಕೋ ಅರ್ಥವಾಗುತ್ತಿಲ್ಲ. ಇಸ್ಲಾಮೋಫೋಬಿಯ ಸಾಮಾನ್ಯವಾಗಿರುವ ಇಂದಿನ ಸನ್ನಿವೇಶದಲ್ಲಿ, ನೀವು ಒಂದು ವೇಳೆ ಜಮಾತೆಯ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿರುತ್ತಿದ್ದರೆ ಬಹುಷ ಅದನ್ನು ಬಹಳಷ್ಟು ಮೆದುಳುಗಳು ಪರಿಗಣಿಸುತಿತ್ತೇನೋ, ಆದರೆ ಕೋಮುವಾದದ ರೆಟಾರಿಕ್ ಅನ್ನು ಬಹುಷ ನೀವೆ ಕೇಳಿಸಿಕೊಳ್ಳ ಬೇಕು ಅಂತ ಅನಿಸುತ್ತೆ.

    Reply

Leave a Reply to Anonymous Cancel reply

Your email address will not be published. Required fields are marked *