ಮುಸ್ಲಿಂ ಲೇಖಕರ ಸಂಘವು ಜಮಾತೆಯ ಸಹಸಂಘಟನೆ : ಅಮಿನ್ ಮಟ್ಟುರವರಿಗೊಂದು ಪುರಾವೆ

– ನವೀನ್ ಸೂರಿಂಜೆ

ಮುಸ್ಲಿಂ ಲೇಖಕರ ಸಂಘವು ಜಮಾತೆ ಇಸ್ಲಾಮೀ ಹಿಂದ್ ಸಂಘಟನೆಗೆ ಸೇರಿದ್ದು ಎಂದು ನಾನು ದಿನೇಶ್ ಅಮಿನ್ ಮಟ್ಟುರವರಿಗೆ ಮನವರಿಕೆ ಮಾಡಲು ಹೋದರೆ ದಿನೇಶ್ ಅಮೀನ್ ಮಟ್ಟು “ಸುದ್ದಿಯನ್ನು ತಿರುಚುವ ಪತ್ರಕರ್ತ” ಎಂದು ಬರೆದು ಕೈತೊಳೆದುಕೊಂಡಿದ್ದಾರೆ. dinesh-amin-mattuನನ್ನ ಪತ್ರಿಕಾ ಬದುಕನ್ನು ಮೂಲಭೂತವಾದಿಗಳು ಮತ್ತು ಕೋಮುವಾದಿಗಳು ಈ ರೀತಿಯಾಗಿ ಅನೇಕ ಬಾರಿ ಈ ಹಿಂದೆ ಹೀಯಾಳಿಸಿದ್ದಾರೆ. ಆದರೆ ನಾನು ಆದರ್ಶವಾಗಿಟ್ಟುಕೊಂಡ ದಿನೇಶ್ ಅಮೀನ್ ಮಟ್ಟು ಕೂಡಾ ನಾನು ಸುದ್ದಿ ತಿರುಚುವ ತುಂಟತನ ಮಾಡುವವನು ಮತ್ತು ಸುದ್ದಿ ಪವಿತ್ರವಾಗಿರುವಂತದ್ದಾಗಿದ್ದು ಅದನ್ನು ಅಪವಿತ್ರ ಮಾಡಬೇಡ ಎನ್ನುವ ಮೂಲಕ ನಾನು ಸುಳ್ಳು ಸುದ್ದಿ ಬರೆಯುತ್ತಿದ್ದೇನೆ ಎಂಬ ಅರ್ಥದಲ್ಲಿ ಹೇಳಿರುವುದು ನೋವು ತಂದಿದೆ.

ಅದೇನೇ ಆದರೂ ದಿನೇಶ್ ಅಮೀನ್ ಮಟ್ಟುರವರಿಗೆ ಅವರ ಮಾತನ್ನೇ ಹಿಂದಿರುಗಿಸುತ್ತೇನೆ… ಸರ್ ನಿಜವಾಗಿಯೂ ಸುದ್ದಿ ಪವಿತ್ರವಾಗಿರುವುದೇ ಆಗಿದ್ದಲ್ಲಿ ಅದರ ಬಗ್ಗೆ ಪರಾಮರ್ಶಿಸಿ ತೀರ್ಪು ಕೊಡಿ. ತಾವು ಅವರ ಸಂಘಟನೆಯಲ್ಲಿ ಭಾಗವಹಿಸಿದ್ದೀರಿ ಎಂಬ ಕಾರಣಕ್ಕೆ ಸುದ್ದಿ ಸುಳ್ಳು ಆಗುವುದಿಲ್ಲ. ಅಪವಿತ್ರವೂ ಆಗುವುದಿಲ್ಲ…

ಜಮಾತೆ ಇಸ್ಲಾಮೀ ಹಿಂದ್ ಶಾಂತಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಹೊಂದಿದೆ. ಆ ಪ್ರಕಾಶನ ಸಂಸ್ಥೆಯಲ್ಲಿ ಮಹಿಳಾ ವಿರೋಧಿ ಸಾಹಿತ್ಯವನ್ನು ಪ್ರಕಟ ಮಾಡಲಾಗುತ್ತದೆ. ಈ ರೀತಿಯ ಸಾಹಿತ್ಯ ಕೃಷಿಗಾಗಿ ಮುಸ್ಲಿಂ ಲೇಖಕರ ಸಂಘವನ್ನು ಸ್ಥಾಪಿಸಿದ್ದಾರೆ. ಅದಕ್ಕೆ ಅವರು ಕಾರ್ಯಾಚರಿಸುವ ವಿಳಾಸವೇ ಪುರಾವೆ ಒದಗಿಸುತ್ತದೆ. ಉಳಿದಂತೆ ಸಂಘದ ಕಾರ್ಯಕ್ರಮದ ಸ್ವಯಂ ಸೇವಕರು, ಆಮಂತ್ರಣ ಪತ್ರಿಕೆ ನೀಡಿದವರು, ಪತ್ರಕರ್ತರನ್ನು ಆಹ್ವಾನಿಸಿದವರೆಲ್ಲರೂ ಜಮಾತೆಯ ಕಾರ್ಯಕರ್ತರೇ ಹೊರತು ಲೇಖಕ, ಸಾಹಿತಿಗಳಲ್ಲ ಎಂದು ದಿನೇಶ್ ಅಮೀನ್ ಮಟ್ಟುಗೆ ಮನವರಿಕೆ ಮಾಡಲು ಯತ್ನಿಸಿದ್ದೆ.

ಈ ಮನವರಿಕೆ ಮಾಡುವ ಯತ್ನ ಬಹಿರಂಗವಾಗಿಯೇ ನಡೆಯುತ್ತಿತ್ತಾದರೂ ಜಮಾತೆ ಇಸ್ಲಾಮೀ ಹಿಂದ್ ಸಂಘಟನೆಯು ಮಧ್ಯ ಪ್ರವೇಶಿಸಿ “ಮುಸ್ಲಿಂ ಲೇಖಕರ ಸಂಘ ನಮ್ಮದಲ್ಲ” ಎಂದು ಹೇಳಿಲ್ಲ. 20 ವರ್ಷದ ಹಿಂದೆ ಎಸ್‌ಐ‌ಒ ಸದಸ್ಯನಾಗಿದ್ದ ಉಮ್ಮರ್ ಯು‍.ಎಚ್ ಎಂಬವರು ಮುಸ್ಲಿಂ ಲೇಖಕರ ಸಂಘದ ಕಾರ್ಯದರ್ಶಿಯಾಗಿದ್ದು ಅವರು ಜಮಾತೆ ಸದಸ್ಯರಲ್ಲ ಎನ್ನುತ್ತಾರೆ ದಿನೇಶ್ ಅಮೀನ್ ಮಟ್ಟು. ಇದು ಒಂದು ರೀರಿಯಲ್ಲಿ “ಭಜರಂಗದಳ ಸದಸ್ಯ, ಆದರೆ ಬಿಜೆಪಿ ಅಲ್ಲ” ಎನ್ನುವಂತೆ. ಇನ್ನು ಮುಸ್ಲಿಂ ಲೇಖಕರ ಸಂಘಕ್ಕೆ ಜಮಾತೆ ಸದಸ್ಯನಲ್ಲದ ಪತ್ರಕರ್ತ ಸ್ಥಾಪಕ ಸದಸ್ಯನಾಗಿದ್ದ ಎನ್ನುತ್ತಾರೆ ದಿನೇಶ್ ಅಮೀನ್ ಮಟ್ಟು. ಆದರೆ ಸ್ಥಾಪಕರು ಯಾರು ಎಂದು ಮಾತ್ರ ಪತ್ರಕರ್ತರಾಗಿ ಅವರು ಕಂಡು ಹಿಡಿಯುವುದಿಲ್ಲ. ನಿಮಗೆ ಮಾಹಿತಿ ನೀಡುವ ಉಮ್ಮರ್ ಯು.ಎಚ್ ನಿಮ್ಮನ್ನು ದಾರಿ ತಪ್ಪಿಸಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ನಾನು ಮತ್ತು ಸುದೀಪ್ತೋ ಮೊಂಡಲ್ ಮಗು ಮಾರಾಟ ಜಾಲವನ್ನು ಪತ್ತೆ ಹಚ್ಚಿದ ಸಂಧರ್ಭದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಿ ನಮ್ಮನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ನಾವು ದಾರಿ ತಪ್ಪಲಿಲ್ಲ ಎಂಬುದು ಬೇರೆ ವಿಚಾರ. ಇರಲಿ. ಇಷ್ಟೆಲ್ಲಾ ದಾಖಲೆ ನೀಡಿದ ನಂತರೂ ದಿನೇಶ್ ಅಮೀನ್ ಮಟ್ಟುಗೆ ನಮ್ಮ ವಾದ ಸುಳ್ಳು ಮತ್ತು ತುಂಟತನದ್ದು ಎಂದು ಆರೋಪಿಸಿ “ಸೂಕ್ತ ಪುರಾವೆ ನೀಡುವವರೆಗೆ ಪ್ರತಿಕ್ರಿಯಿಸುವುದಿಲ್ಲ” ಎಂದರು.

ಜಮಾತೆ ಇಸ್ಲಾಮೀ ಹಿಂದ್ ಮುಸ್ಲಿಂ ಮೂಲಭೂತವಾದಿ ಸಂಘಟನೆ. devanurಸೂಫಿ ಪರಂಪರೆಯನ್ನೇ ತನ್ನ ಸಂವಿಧಾನದಲ್ಲಿ ಮೂಢನಂಬಿಕೆ ಎನ್ನುವ ಜಮಾತೆ ಇಸ್ಲಾಮೀ ಹಿಂದ್ ದೇವನೂರು ಮಹಾದೇವ ಪ್ರಕಾರ “ಜಮಾತೆ ಇಸ್ಲಾಮೀ ಹಿಂದ್ ಮುಸ್ಲೀಂ ಮೂಲಭೂತವಾದಿಗಳಿಗೆ ಆರ್‌ಎಸ್‌ಎಸ್” ಎಂದಿದ್ದರು. ಅದರ ಸಹಭಾಗಿ ಸಂಘಟನೆಯೇ “ಮುಸ್ಲಿಂ ಲೇಖಕರ ಸಂಘ”.

ಈಗ ನಾವು ಪುರಾವೆ ನೀಡುತ್ತೇವೆ… ನಾನು “ಯಾರ ಜೊತೆ ಮಡಿವಂತಿಕೆ ಬಿಡಬೇಕು” ಎಂದು ತಮಗೆ ಬರೆದ ಪತ್ರಕ್ಕೆ ಈಗ ಉತ್ತರ ನೀಡುವಿರೆಂದು ಬಯಸುತ್ತಾ….

http://jamathmlore.blogspot.in

ಇದು ಜಮಾತೆ ಮಂಗಳೂರು ಘಟಕದ ವೆಬ್ ಸೈಟ್… ಅದರಲ್ಲಿ ಜಮಾತೆಯು 22 ಸಹ ಸಂಘನೆಗಳನ್ನು ಹೊಂದಿದೆ. ಅದರಲ್ಲಿ 9 ನೇ ಸಹ ಸಂಘಟನೆ “ಮುಸ್ಲಿಂ ಲೇಖಕರ ಸಂಘ”.

jamathmlore-blogspot

jamathe-mangalore-website

 

9 thoughts on “ಮುಸ್ಲಿಂ ಲೇಖಕರ ಸಂಘವು ಜಮಾತೆಯ ಸಹಸಂಘಟನೆ : ಅಮಿನ್ ಮಟ್ಟುರವರಿಗೊಂದು ಪುರಾವೆ

  1. prasadraxidi

    ಯಾವ ಸಂಘಟನೆ ಕಾರ್ಯಕ್ರಮಕ್ಕೆ ಯಾರುಬೇಕಾದರೂ ಹೋಗಬಹುದು ಆ ಸ್ವಾತಂತ್ರ್ಯ ಇಲ್ಲರಿಗೂ ಇದ್ದೇ. ಅದು ಯಾವುದೇ ಧರ್ಮದವರ ಮೋಲಭೂತವಾದಿ ಸಂಘಟನೆಯಾಗಿದ್ದರೂ ನಾವು ಅಲ್ಲಿಗೆ ಹೋಗಿ ನಮ್ಮ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದೆ, ಧೃಡವಾಗಿ -ವಿನಮ್ರವಾಗಿ ನಮ್ಮ ವಿಚಾರಗಳನ್ನು ಹೇಳುವಷ್ಟು ಪ್ರಾಮಾಣಿಕತೆ ಇದ್ದರೆ (ಆಮೇಲೆ ಆ ಸಂಘಟನೆಗಳು ಅಂಥವರನ್ನು ಖಂಡಿತ ಮತ್ತೊಮ್ಮೆ ಕರೆಯುವುದಿಲ್ಲ…!) ಏನೂ ತೊಂದರೆ ಇಲ್ಲ. ಆದರೆ ಯುವಕರಿಗಿಂತ ನಮ್ಮ ಅನೇಕ ಹಿರಿಯರಿಗೇ ಈರೀತಿಯ ಬದ್ಧತೆ ಕಡಿಮೆಯಾಗಿ ಹೆಚ್ಚಿನವರು ಎಲ್ಲ ಎಲ್ಲ ಕಡೆ ಸಲ್ಲುವವರಾಗುವ Comfort zone ಒಳಗೆ ಸೇರಿಕೊಳ್ಳುತ್ತಿರುವದು ವಿಷಾದದ ಸಂಗತಿ…

    Reply
  2. vasanthn

    I think this whole debate is in a way targeting Dinesh Sir. He is so humble person. Sometime we tend to make mistakes. In this case he might have unknowingly accepted the invitation. Why not excuse for this.

    Dinesh sir is vocal against all forms of fundamentalism. He has been writing and talking about it.

    When Naveen was targeted for his report on Home Stay attack by the right wing goons. Dinesh sir tried his best to support him in all possible way. Naveen knows this well. It is not that he should not be criticized but we are all human beings prone to make mistakes.

    Reply
  3. ನವೀನ್ ಸೂರಿಂಜೆ, ಮುಹಮ್ಮದ್ ಇರ್ಷಾದ್, ಸುದೀಪ್ತೋ ಮಂಡಲ್ ………….

    ದಯಮಾಡಿ ತಪ್ಪು ತಿಳುವಳಿಕೆ ಬೇಡ. ನಮ್ಮ ಲೇಖನಗಳಲ್ಲಿ ಎಲ್ಲೂ ದಿನೇಶ್ ಅಮೀನ್ ಮಟ್ಟು ಸರ್ ಅವರನ್ನು ಟಾರ್ಗೆಟ್ ಮಾಡುವ ದುರುದ್ದೇಶವನ್ನು ನಾವು ಹೊಂದಿಲ್ಲ. ಅಂಥಹಾ ಆಲೋಚನೆ ಮಾಡುವುದು ತಪ್ಪಾಗುತ್ತದೆ. ಯಾಕೆಂದರೆ ನಾವೆಲ್ಲಾ ದಿನೇಶ್ ಅಮೀನ್ ಮಟ್ಟು ಸರ್ ಅವರನ್ನು ಓದಿಕೊಂಡೇ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು. ಅವರು ನಮ್ಮ ಗುರುಗಳು. ಇಲ್ಲಿ ಉದ್ದೇಶವಿರುವುದು ಹಿಂದೂ ಮೂಲಭೂವಾದ, ಇಸ್ಲಾಂ ಮೂಲಭೂತವಾದದ ಕುರಿತಾಗಿ ಚರ್ಚೆ ಆಗಲಿ ಎಂಬುವಂತಹದ್ದು. ದಿನೇಶ್ ಅಮೀನ್ ಮಟ್ಟು ಅವರು ಎಲ್ಲಿ ಹೋಗಬೇಕು ? ಏನು ಮಾತನಾಡಬೇಕು ? ಎಂಬುವುದನ್ನು ನಿರ್ಧರಿಸಲು ನಾವು ಯಾರು? ಖಂಡಿತಾ ಅಂತಹಾ ತಪ್ಪನ್ನು ನಾವು ಮಾಡುವುದಿಲ್ಲ. ಅಮೀನ್ ಮಟ್ಟು ಎಲ್ಲಿ ಹೋದರೂ ಅವರ ನಿಲುವಿಗೆ ಬದ್ದರಾಗಿರುತ್ತಾರೆ. ಅಧಿಕಾರದ ಸ್ಥಳದಲ್ಲಿದ್ದರೂ ಖಂಡಿತಾ ಅವರೂ ಬದಲಾಗಲಿಲ್ಲ , ಬದಲಾಗಲು ಸಾಧ್ಯಾನೂ ಇಲ್ಲ. ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಅಮೀನ್ ಮಟ್ಟು ಮಾಡಿದ ಭಾಷಣದ ಕುರಿತಾದ ನಿರೀಕ್ಷೆಯ ಹೆಸರಲ್ಲಾದರೂ ದೇಶದಲ್ಲಿ ಬೆಳೆಯುತ್ತಿರುವ ಕೋಮುವಾದ ಮೂಲಭೂತವಾದದ ಕುರಿತಾದ ಚರ್ಚೆ ಇನ್ನಷ್ಟು ಬೆಳೆಯಲಿ ಎಂಬುವುದು ನಮ್ಮ ಆಶಯ.
    ನವೀನ್ ಸೂರಿಂಜೆ, ಮುಹಮ್ಮದ್ ಇರ್ಷಾದ್, ಸುದೀಪ್ತೋ ಮಂಡಲ್ ………….

    Reply
  4. Abdulla Razaak

    ಟಾರ್ಗೆಟ್ ಮಾಡುವ ಉದ್ದೇಶ ಇಲ್ಲ… ದಿನೇಶ್ ಸರ್ ನಮ್ಮ ಗುರುಗಳು ಎಂದು ಹೇಳುತ್ತಿರುವ ನವೀನ್ ಮತ್ತೆ ಮತ್ತೆ ಸತ್ಯವನ್ನು ಯಾಕೆ ತಿರುಚುತ್ತಿದ್ದಾರೆ? ಸುದ್ದಿಗೆ ಯಾವ ಬಣ್ಣವೂ ಇರುವುದಿಲ್ಲ ಎಂದು ಯಾಕೆ ಉಡಾಫೆ ಮಾಡುತ್ತಿದ್ದಾರೆ?

    ಭಾರಿ ದೊಡ್ಡ ತನಿಖೆ ನಡೆಸಿದ್ದೇನೆ ಎಂಬಂತೆ ಜಮಾತೆ ಇಸ್ಲಾಂನ ವೆಬ್ ಸೈಟ್ ಲಿಂಕ್ ಕೊಟ್ಟಿದ್ದಿರಲ್ಲಾ, ಅದರಲ್ಲಿ ದಿನೇಶ್ ಸರ್ ಹೇಳದೆ ಇರುವುದು ಏನಿದೆ? ”ಮುಸ್ಲಿಮ್ ಲೇಖಕರ ಸಂಘ ನಮ್ಮದು” ಎಂದು ಜಮಾತೆ ಇಸ್ಲಾಂ ಎಲ್ಲಿಯಾದರೂ ಹೇಳಿಕೊಂಡಿದಿಯೇ? ಹಿದಾಯತ್ ಸೆಂಟರ್‍ನಲ್ಲಿರುವ ಸಂಸ್ಥೆಗಳ ಪಟ್ಟಿ ಇದೆ, ಅದರಲ್ಲಿ ಮುಸ್ಲಿಮ್ ಲೇಖಕರ ಸಂಘದ ಹೆಸರಿದೆ. ಅದನ್ನು ದಿನೇಶ್ ಸರ್‍ ಅವರೇ ಮೊದಲು ಹೇಳಿದ್ದಾರಲ್ಲಾ?”

    ಸತ್ಯವನ್ನು ತಿರುಚಿ ಓದುಗರ ದಾರಿ ತಪ್ಪಿಸಬೇಡಿ ನವೀನ್, ಮತ್ತೊಮ್ಮೆ ಲಿಂಕ್‍ ತೆರೆದು ನೋಡಿ. ( ಈ ಚರ್ಚೆಯನ್ನು ಗಮನಿಸುತ್ತಿರುವವರೆಲ್ಲ ದಯವಿಟ್ಟು ಇದನ್ನು ತೆರೆದು ನೋಡಿ) ಅಲ್ಲಿ ಒಂದೆಡೆ ‘….The various wings of the Jamaat-e-Islami Hind are Women’s Units, the Students’ Islamic Organisation, the Girls Islamic Organization and the Idara-e-Adab-e-Islami for promoting literary activities.” ಎಂದಿದೆ. ಎಲ್ಲಿಯೂ ಮುಸ್ಲಿಮ್ ಲೇಖಕರ ಸಂಘ ಎಂದು ಹೇಳಿಲ್ಲ.

    ನೀವು ನಿಜವಾಗಿ ದಿನೇಶ್ ಸರ್‍ ಅವರನ್ನು ಗುರುಗಳು ಎಂದು ಸ್ವೀಕರಿಸುವುದಿದ್ದರೆ ನಿಮ್ಮಿಂದಾದ ಪ್ರಮಾದವನ್ನು ಒಪ್ಪಿಕೊಂಡು ಚರ್ಚೆಯನ್ನು ನಿಲ್ಲಿಸಿ.

    ಅಬ್ದುಲ್ಲಾ ರಜಾಕ್

    Reply
  5. Abdulla Razaak

    ನವೀನ್ ನಿಮ್ಮಲ್ಲಿ ನಿಜಕ್ಕೂ ಪ್ರಾಮಾಣಿಕತೆ ಇದ್ದಿದ್ದರೆ ”ಶಾಂತಿ ಪ್ರಕಾಶನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ..ಎಂಬ ತಪ್ಪುದಾರಿಗೆಳೆಯುವ ತಲೆಬರಹದ ಬಗ್ಗೆ ದಿನೇಶ್ ಸರ್‍ ಪ್ರಶ್ನಿಸುವ ವರೆಗೆ ಯಾಕೆ ಸ್ಪಷ್ಟನೆ ನೀಡಲಿಲ್ಲ? ”ಮುಸ್ಲಿಮ್ ಲೇಖಕರ ಸಂಘ ಸ್ಥಾಪಿಸಿದ್ದು ಜಮಾತೆ ಇಸ್ಲಾಂ ಹಿಂದ್ ಅಲ್ಲ ಎಂದು ಪುರಾವೆ ಸಹಿತ ದಿನೇಶ್ ಸರ್ ಹೇಳಿದರೂ ಇಲ್ಲಿಯ ವರೆಗೆ ಯಾಕೆ ತಪ್ಪು ಒಪ್ಪಿಕೊಳ್ಳಲಿಲ್ಲ? ನೀವು ದುರುದ್ದೇಶದಿಂದಲೇ ಈ ಚರ್ಚೆ ನಡೆಸುತ್ತಿದ್ದೀರಿ ಎನ್ನುವ ಸಂಶಯ ನಮಗೆ. ಇದರಿಂದ ದಿನೇಶ್ ಸರ್ ಅವರ ವ್ಯಕ್ತಿತ್ವಕ್ಕೆ ಏನೂ ಧಕ್ಕೆಯಾಗಲಾರದು, ನನ್ನಂತಹವರು ಓದಲು ಬಂದ ದಿನದಿಂದ ಅವರ ಬರವಣಿಗೆಯ ಮೂಲಕ
    ಅವರನ್ನು ಅರ್ಥಮಾಡಿಕೊಂಡಿದ್ದೇವೆ, ಆ ಅಭಿಪ್ರಾಯವನ್ನು ನೀವು ಬದಲಾಯಿಸಲಾರಿರಿ.
    ಅವರನ್ನು ಗುರುಗಳು ಎಂದು ಹೇಳುತ್ತಿರುವ ನೀವು ಹೊಸಬರು, ನಿಮ್ಮ ಬಗ್ಗೆ ಸಂಶಯ ಮೂಡುತ್ತಿದೆ, ಇದನ್ನೊಂದು ಸೆನ್ಸೇಷೇಶನ್ ಮಾಡುತ್ತಿರುವ ವರ್ತಮಾನದ ಬಗ್ಗೆಯೂ ಗುಮಾನಿ ಮೂಡುತ್ತಿದೆ. ಇಷ್ಟು ವರ್ಷ ಸಂಘ ಪರಿವಾರದವರು ಮಾಡಲಾರದ್ದನ್ನು ನೀವೆಲ್ಲ ಕೂಡಿ ಮಾಡುತ್ತಿದ್ದೀರಿ.
    ದಯವಿಟ್ಟು ನಿಮ್ಮನ್ನು ತಿದ್ದಿಕೊಳ್ಳಿ.

    Reply
  6. Naveen H

    ಯಾರೇ ಅಗಲಿ ನೋಡಿದ ತಕ್ಷಣ ಗೊತ್ತಾಗತ್ತೆ ಜಮಾತೆ ಹಾಗೂ ಮುಸ್ಲಿಂ ಲೇಖಕರ ಸಂಘ, ಶಾಂತಿ ಪ್ರಕಾಶನ ಎಲ್ಲಾ ಒಂದೇ ಪರಿವಾರಕ್ಕೆ ಸೇರಿದ್ದು ಅಂತ. ಇಲ್ಲದಿದ್ದರೆ ಅದಕ್ಕೆ ಕಚೇರಿ ಹಿದಾಯತ್ ಸೆಂಟರ್ ನಲ್ಲೆ ಯಾಕೆ?

    ಇಷ್ಟೆಲ್ಲಾ ಮಾತನಾಡುವವರು ಎಲ್ಲಿಯೂ ಶಾಂತಿ ಪ್ರಕಾಶನವನ್ನು ಅದರ ವಿಚಾರಧಾರೆಗಳ ಬಗ್ಗೆ ವಿಮರ್ಶಿಸುತ್ತಿಲ್ಲವಲ್ಲಾ? ಅಬ್ದುಲ್ ರಜಾಕ್ ಅವರೇ ಶಾಂತಿ ಪ್ರಕಾಶನವನ್ನು ವಿಮರ್ಶಿಸಿದಾಕ್ಷಣ ನಿಮ್ಮಲ್ಲಿ ಎಂಥೆಂಥಾ ಗುಮಾನಿಗಳು ಹುಟ್ಟಿಕೊಂಡುಬಿತ್ತ್ವಲ್ಲಾ? ಭೇಷ್!! ಇನ್ನಷ್ಟು ಮುಂದೆ ಹೋಗಿ ನವೀನ ಸೂರಿಂಜೆ ಸಂಘ ಪರಿವಾರದ ಚೇಲಾ ಎಂದು ಅಂದು ಬಿಡಿ. ಅದೂ ಆಗಿ ಹೋಗಲಿ.

    ಸದಾ ಒಂದು ಸಮುದಾಯದಲ್ಲೇ ಹುಳುಕು ಹುಡುಕುವ ಸೊ ಕಾಲ್ಡ್ ಪ್ರಗತಿಪರರಲ್ಲಿ ಅತ್ಯಂತ ಅಪರೂಪವೆಂಬಂತೆ ವರ್ತಮಾನ.ಕಾಂ ಒಂದು ಚರ್ಚೆಕೆ ಪೀಠಿಕೆ ಹಾಕಿ ಕೊಟ್ಟಿದೆ. ಇಲ್ಲಿಗೆ ವ್ಯಕ್ತಿಗತ ಟೀಕೆ ಬಿಟ್ಟು ಶಾಂತಿ ಪ್ರಕಾಶನದ idiology ಬಗ್ಗೆ ಚರ್ಚಿಸೋಣವೇ?? ಅಥವಾ ವಿಮರ್ಶೆ ಗಿಮರ್ಶೆಯಲ್ಲಾ ಕೇವಲ ವಟುಗಳು, ಜನಿವಾರಗಳು, ಲಿಂಗಗಳಿಗೆ ಮಾತ್ರ ಸೀಮಿತವೇ??

    Reply
  7. aslam, mangalore

    ನನಗೆ ಒಂದು ಅರ್ಥವಾಗಲಿಲ್ಲ. ಮುಸ್ಲಿಂ ಲೇಖಕರ ಸಂಘ ಮೂಲಭೂತವಾದಿ ಸಂಘಟನೆಯೇ ಆಗಿದ್ದರೆ, ಇದು ನೀಡುವ ಪ್ರಶಸ್ತಿಯನ್ನು, ಖ್ಯಾತ ಮನುಷ್ಯ ಪರ ಕತೆಗಾರ, ಒಂದು ಕಾಲದಲ್ಲಿ ಲಂಕೇಶರಿಗೆ ತೀರ ಆಪ್ತರಿದ್ದ ಅಂಕಣಕಾರ ಅಬ್ದುಲ್ ರಶೀದ್ ಅವರು ಸ್ವೀಕರಿಸುತ್ತಿದ್ದರೆ? ಅವರ ಕಥಾ ಸಂಕಲನಕ್ಕೆ ಈ ಪ್ರಶಸ್ತಿ ಸಿಕ್ಕಿದೆ ಮಾತ್ರವಲ್ಲ ಅಬ್ದುಲ್ ರಶೀದ್ ಅವರು ಸಭೆಯಲ್ಲಿ ಭಾಗವಹಿಸಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈಗ ಪ್ರಶ್ನೆ, ಒಂದೋ ರಶೀದ್ ಅವರ ಕತೆಗಳು ಮೂಲಭೂತ ವಾದವನ್ನು ಸಮರ್ಥಿಸುತ್ತದೆ ಎಂದು ಲೇಖಕರ ಸಂಘ ಪ್ರಶಸ್ತಿಯನ್ನು ಕೊಟ್ಟಿತೋ? ಅಥವಾ ಲಂಕೇಶರ ತತ್ವ ಸಿದ್ಧಾಂತಗಳನ್ನು ಪ್ರೋತ್ಸಾಹಿಸುತ್ತದೆ ಎಂದು ರಶೀದ್ ಪ್ರಶಸ್ತಿಯನ್ನು ಸ್ವೀಕರಿಸಿದರೋ? ಯಾಕೋ ಕನಕದಾಸರ “ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ” ಪದ್ಯ ನೆನಪಾಯಿತು.
    aslam mangalore

    Reply
  8. aman thejas

    ನವೀನ್ ಸೂರಿಂಜೆಯವರೇ ಇದೆಲ್ಲ ನಿಮ್ಮ ಪುಬ್ಲಿಸಿಟಿ ಸ್ಟಂಟ್ . ಅಮಿನ್ ಮಟ್ಟು ಸರ್ ಬಗ್ಗೆ ಚೀಪ್ ಆಗಿ ಬರೆಯ ಬೇಡಿ . ಬಂಡೆ ಕಲ್ಲಿಗೆ ನಿಮ್ಮ ತಲೆಯನ್ನು ಚಚಿದರೆ ನಿಮ್ಮ ತಲೆ ಒಡೆಯೋದು ವಿನಃ ಬಂಡೆ ಕಲ್ಲಿಗೆ ಏನಾಗಲ್ಲ. ಇದನ್ನು ನೀವು ತಿಳ್ಕೊಳ್ಳಿ .

    Reply

Leave a Reply to Abdulla Razaak Cancel reply

Your email address will not be published. Required fields are marked *