ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿವೆಯೇ?

– ತೇಜ ಸಚಿನ್ ಪೂಜಾರಿ

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಮಂಗಳೂರಿನ ಮುಸ್ಲಿಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ teja-sachin-poojaryಭಾಗವಹಿಸಿದ ಹಿನ್ನೆಲೆಯಲ್ಲಿ ನವೀನ್ ಸೂರಿಂಜೆ ಹಾಗೂ ಇರ್ಷಾದ್ ಅವರು ಸಹಜವಾದ ಹಲವು ಪ್ರಶ್ನೆಗಳನ್ನು ವರ್ತಮಾನದ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಸಾಕಷ್ಟೂ ಪ್ರತಿಕಿಯೆಗಳೂ ವ್ಯಕ್ತವಾಗಿವೆ. ಚರ್ಚೆಯೂ ನಡೆಯುತ್ತಿದೆ. (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ.) ಆದರೆ “ಜಾಸ್ತಿ ಎಳೆದರೆ ಮೂಲ ಉದ್ದೇಶವೇ ಮರೆಯಾಗುವ ಸಾಧ್ಯತೆ ಇರುತ್ತದೆ” ಎಂಬ ಆತಂಕ ವ್ಯಕ್ತಪಡಿಸುತ್ತಲೇ ಅಕ್ಷತಾ ಹುಂಚದಕಟ್ಟೆ ಬರೆದ ಲೇಖನ ಮುಂದಕ್ಕೆ ಎಳೆಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ಮಟ್ಟು ಅವರು ಪ್ರಸ್ತುತ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರ ಕುರಿತು ನವೀನ್ ವ್ಯಕ್ತಪಡಿಸಿದ್ದ ಆತಂಕಗಳನ್ನು ಅವರ ವೈಯಕ್ತಿಕ ಅಸಮಧಾನವೆಂಬಂತೆ ಅಕ್ಷತಾ ಹುಂಚದಕಟ್ಟೆ ಗ್ರಹಿಸಿದ್ದಾರೆ. ಅದು ತಪ್ಪು. ನವೀನ್ ಅಥವಾ ಇರ್ಷಾದ್ ಅಭಿವ್ಯಕ್ತಿಸಿದ ವಿಚಾರಗಳು ಕೇವಲ ಅವರದ್ದಷ್ಟೇ ಅಲ್ಲ; ಕೋಮುವಾದ ಹಾಗೂ ಮೂಲಭೂತವಾದದಂತಹ ಸಮಸ್ಯಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿರುವ ಕರಾವಳಿಯ ಹಲವು ಯುವ ಸಾಮಾಜಿಕ ಕಾರ್‍ಯಕರ್ತರ ಅಭಿಪ್ರಾಯವೂ ಆಗಿದೆ. ಸಮೂಹದ ಯೋಚನೆಗೆ ನವೀನ್ ಧ್ವನಿಯಾಗಿದ್ದಾರೆ ಆಷ್ಟೇ. ಹಾಗಿದ್ದೂ ನವೀನ್ ಒಬ್ಬರನ್ನೇ ಕಟಕಟೆಯಲ್ಲಿ ನಿಲ್ಲಿಸುವುದು ಬೌದ್ಧಿಕ ಅಪರಾಧ.

ಅಕ್ಷತಾ ಹುಂಚದಕಟ್ಟೆ ಅವರು ಮುಂದುವರಿದು, “ಒಬ್ರಿಗೆ ಸಾಕು ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ ಅನಿಸಿದರೆnaveen-shetty ಅದಕ್ಕೂ ಅವಕಾಶವಿರಬೇಕು ಮತ್ತು ಇನ್ನೊಬ್ರಿಗೆ ನಾನು ಹೇಳುವುದೇನೋ ಉಳಿದಿದೆ ಅನ್ನಿಸಿದರೆ ಅದಕ್ಕೂ ಅವಕಾಶವಿರಬೇಕು” ಅಂದಿದ್ದಾರೆ. ಹೇಳುವ ಹಾಗೂ ಹೇಳದಿರುವ ಸ್ವಾತಂತ್ರ್ಯ ಖಂಡಿತಾ ಎಲ್ಲರಿಗೂ ಅದೆ. ಆದರೆ ಅಕ್ಷತಾ ಹುಂಚದಕಟ್ಟೆ ಅವರ ವಿಚಾರ, ಮಾತು ಅಥವಾ ಮೌನದ ಅಭಿವ್ಯಕ್ತಿಗಳಿಗೆ ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನೇ ಪ್ರಶ್ನಿಸುವಂತಿದೆ. ನುಡಿದಾತ ಅಥವಾ ನುಡಿಯಲಿರುವಾತ ಬಯಸುತ್ತಾನೋ ಇಲ್ಲವೋ (ಅಥವಾ ಭಾಗಿಯಾಗುತ್ತಾನೋ ಇಲ್ಲವೋ) ಆತನ ಮಾತುಗಳು ಮುಂದಿನ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತವೆ. ಅದು ಅನಿವಾರ್ಯ ಕೂಡಾ. ಇಲ್ಲದೆ ಹೋದಲಿ, ಕೃತಿಯೊಂದನ್ನು ರಚಿಸಿ “ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ”’ ಎಂಬಂತೆ ಸಮ್ಮನಿದ್ದು ಬಿಡುವ ಭೈರಪ್ಪ ಅವರನ್ನೇ ಮತ್ತೆ ಮತ್ತೆ ಎಳೆತಂದು ಅವರು ಎಂದೋ ’ಹೇಳಿಯಾದ’, (ಕವಲೋ ಅವರಣವೋ) ಮಾತುಗಳನ್ನೇ ಮತ್ತೆ ಮತ್ತೆ ಕೆದಕಿ ಚರ್ಚಿಸುವುದಾದರೂ ಯಾತಕ್ಕೆ? ಸಮೂಹದಲ್ಲಿ ನುಡಿ ಹಾಗೂ ನಡೆ ಇವೆರಡೂ ಕ್ರಿಯೆಗಳು ತಮಗೆ ಎದುರಾಗುವ ಅಷ್ಟೂ ಪ್ರತಿಕ್ರಿಯೆಗಳಿಗೆ ಗೌರವ ಸಲ್ಲಿಸುವುದು ಅ ಸಮೂಹದ ಆರೋಗ್ಯ ಹಾಗೂ ಜೀವಂತಿಕೆಗೆ ಅತ್ಯಂತ ಮೂಲಭೂತವಾಗಿರುತ್ತದೆ. ಚರ್ಚೆಯಲ್ಲಿ ಮಟ್ಟು ಅವರು ಭಾಗವಹಿಸುತ್ತಾರೋ ಇಲ್ಲವೋ ಇಲ್ಲಿ ಅದು ಅಪ್ರಸ್ತುತ. ಚರ್ಚೆ ಮಟ್ಟು ಸರ್ ಹಾಗೂ ನವೀನ್ ಇಬ್ಬರನ್ನೂ ಮೀರಿ ಬೆಳೆಯಬೇಕು. ಬೆಳೆಯುತ್ತದೆ ಕೂಡಾ.Mohammad Irshad

ನವೀನ್ ಪ್ರಸ್ತಾಪಿಸಿದ ವಿಚಾರ ಮಟ್ಟು ಅವರು ಮುಸ್ಲೀಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದು ಸರಿಯೋ ತಪ್ಪೋ ಎಂಬ ತಕ್ಕಡಿ ನಿರ್ಣಯಕ್ಕೆ ಸೀಮಿತವಾದದ್ದಲ್ಲ. ಅದು ಕೋಮುವಾದ ಹಾಗೂ ಮೂಲಭೂತವಾದದಂತಹ ವಿಚಾರಗಳಲ್ಲಿ ಬೌದ್ಧಿಕ ವರ್ಗ ತೋರುತ್ತಿರುವ ನಡವಳಿಕೆಗೆ ಸಂಬಂದಿಸಿದ್ದಾಗಿದೆ. ಅಲ್ಲಿ ಕಂಡುಬರುತ್ತಿರುವ ತರತಮ ಪ್ರಜ್ಞೆಯ ಕುರಿತಾದದ್ದಾಗಿದೆ.

ಮೂಲಭೂತವಾದ ಹಾಗೂ ಕೋಮುವಾದ ಇಂದಿನ ಬಹುದೊಡ್ಡ ಸವಾಲು. ಧರ್ಮಗಳನ್ನಾಶ್ರಯಿಸಿ ಬೆಳೆಯುತ್ತಿರುವ ಮೂಲಭೂತವಾದ ಒಂದೆಡೆ ಅನ್ಯ ಕೋಮಿನ ಜೊತೆಗೆ ಹಿಂಸಾರೂಪದ ಬೀದಿ ಸಂಘರ್ಷಗಳಿಗೆ, ಇನ್ನೊಂದೆಡೆ ಆಂತರಿಕ ನೆಲೆಯಲ್ಲಿ ಧರ್ಮದೊಳಗೇ ಇರುವಂತಹ ದುರ್ಬಲರ ಪೀಡನೆಗೆ ಕಾರಣವಾಗಿದೆ. ಹಿಂದೂ ಹಾಗೂ ಮುಸ್ಲಿಮ್ ಇವೆರಡೂ ಧಾರ್ಮಿಕ ಗುಂಪುಗಳಲ್ಲಿ ಇಂತಹ ಮೂಲಭೂತವಾದಿ ಪ್ರವೃತ್ತಿಗಳು ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. ಕರಾವಳಿ ತೀರದಲ್ಲಂತೂ ಅದರ ವಿರಾಟ್ ರೂಪದ ಪ್ರದರ್ಶನ ಗಳಿಗೆಲೆಕ್ಕದಲ್ಲಿ ನಡೆಯುತ್ತಿದೆ. ಆಯಾ ಧರ್ಮಗಳಲ್ಲಿರುವ ನಿರ್ದಿಷ್ಟ ಗುಂಪುಗಳು ತಮ್ಮ ತಮ್ಮ ಮತಗಳಲ್ಲಿ ಮೂಲಭೂತವಾದಿ ಚಳವಳಿಗಳನ್ನು ಮುನ್ನಡೆಸುತ್ತಿರುವ ವಿಚಾರ ತೀರಾ ದುರ್ಬೀನು ಹಾಕಿಯೇ ನೋಡಬೇಕಾದ ಸತ್ಯವಲ್ಲ. ಅವುಗಳ ರಹಸ್ಯ ಕಾರ್ಯಸೂಚಿಗಳೂ ಕೂಡಾ ಅಷ್ಟೇ ಸ್ಪಷ್ಟ.

ಆದಾಗ್ಯೂ ಅಂತಹ ಮೂಲಭೂತವಾದೀ ಚಳವಳಿಯನ್ನು ಎದುರಿಸುವ, ಅದನ್ನು ಪ್ರಸರಿಸುತ್ತಿರುವ ಗುಂಪುಗಳನ್ನುdinesh-amin-mattu-2 ವಿರೋಧಿಸುವ ಕ್ರಮದಲ್ಲಿ ಮಾತ್ರವೇ ಬಹಳ ಸಮಸ್ಯೆಗಳಿವೆ. ಹಿಂದೂ ಮೂಲಭೂತವಾದದ ಜೊತೆಗೆ ನಿಂತು ಮುಸ್ಲಿಮ್ ಮೂಲಭೂತವಾದವನ್ನು ಖಂಡಿಸುವುದು ಎಷ್ಟರಮಟ್ಟಿಗೆ ಅಸಂಗತವೋ ಮುಸ್ಲಿಮ್ ಮೂಲಭೂತವಾದೀ ವೇದಿಕೆಯಲ್ಲಿ ಆಸೀನರಾಗಿ ಹಿಂದೂ ಕೋಮುವಾದವನ್ನು ಟೀಕಿಸುವುದು ಕೂಡಾ ಅಷ್ಟೇ ಅಸಹಜ. ಒಂದರ ಜೊತೆಗಿನ ಸಾಹಚರ್ಯ ಇನ್ನೊಂದರ ಕಡೆಗಿನ ಟೀಕೆಯನ್ನು ಅಪಮೌಲ್ಯಗೊಳಿಸುತ್ತದೆ. ಆದರೆ ದುರಾದೃಷ್ಟವಶಾತ್ ಇಂತಹ ಬೇಜವಾಬ್ದಾರಿ ನಡವಳಿಕೆಗಳು ನಮ್ಮ ಪ್ರಗತಿಪರ ವರ್ಗದಲ್ಲಿ ಥರೇವಾರಿ ಕಾಣಿಸಿಕೊಳ್ಳುತ್ತಿವೆ. ನವೀನ್ ಅಥವಾ ಇರ್ಷಾದ್ ಪ್ರತಿನಿಧಿಸುವ ಆತಂಕ ಇದೇ ಆಗಿದೆ.

ಹಿಂದೂ ಮೂಲಭೂತವಾದವನ್ನು ತಿರಸ್ಕರಿಸಲು ಬೌದ್ಧಿಕ ವಲಯ ಸ್ಪಷ್ಟವಾದ ಒಂದು ವೇದಿಕೆಯನ್ನು ಈಗಾಗಲೇ ಸಿದ್ಧಗೊಳಿಸಿದೆ. ಅದರ ಅಷ್ಟೂ ಆಯಾಮಗಳನ್ನು ಗುರುತಿಸಿ ಅದಕ್ಕೆ ಸೈದ್ಧಾಂತಿಕ ವಿರೋಧದ ನೆಲೆಗಳನ್ನು ಗಟ್ಟಿಗೊಳಿಸಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆಚರಣೆ ಹೀಗೇ ಎಲ್ಲೆಲ್ಲಿ ಮೂಲಭೂತವಾದದ ಸುಳಿವು ಕಾಣಿಸಿಕೊಳ್ಳುತ್ತಿದೆಯೋ ಅಲ್ಲೆಲ್ಲಾ ಅದನ್ನು ಖಂಡಿಸುವ ಕ್ರಿಯೆಗಳು akshatha-hunchadakatteಅಟೋಮ್ಯಾಟಿಕ್ ಅನ್ನಿಸುವಂತೆ ನಡೆಯುತ್ತಿವೆ. ’ಸಂಘ ಪರಿವಾರ’ ಪರಿಕಲ್ಪನೆಯ ಅಡಿಯಲ್ಲಿ ಹಿಂದೂ ಮೂಲಭೂತವಾದವನ್ನು ಸಮಗ್ರವಾಗಿ ಹಿಡಿದಿಡುವ, ಅದಕ್ಕೆ ಪ್ರತಿಕ್ರಿಯಿಸುವ ನೆಲೆಯನ್ನು ಬುದ್ಧಿಜೀವಿ ವರ್ಗ ಸಾಧಿಸಿದೆ. ಇದು ತುರ್ತು ಅನಿವಾರ್ಯವಾಗಿದ್ದ ಬೆಳವಣಿಗೆ. ಅದರಲ್ಲಿ ನಮ್ಮ ಪ್ರಗತಿಪರ ಗುಂಪುಗಳು ಯಶಸ್ಸು ಕಂಡಿವೆ.

ಆದರೆ ಇಂತಹದ್ದೇ ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿದೆಯೇ? ಸಮಸ್ಯೆ ಇರುವುದು ಇಲ್ಲೇ. ನಮ್ಮ ಬೌದ್ಧಿಕ ವರ್ಗ ಮುಸ್ಲಿಮ್ ಸಮುದಾಯದಲ್ಲಿ ಮೂಲಭೂತದದ ಬೀಜಗಳನ್ನು ಬಿತ್ತುತ್ತಿರುವ ಗುಂಪುಗಳು ಅಥವಾ ಸಂಘಟನೆಗಳ ಬಗ್ಗೆ ಸ್ಪಷ್ಟತೆಯನ್ನು ಇನ್ನೂ ಹೊಂದಿಲ್ಲ. ಅದು ಮುಸ್ಲಿಮ್ ಮೂಲಭೂತವಾದವನ್ನು ಪರಸ್ಪರ ತಿಳಿಯದ ಯಾರೋ ವ್ಯಕ್ತಿಗಳು ಅಥವಾ ಅದೆಲ್ಲಿಂದಲೋ ಬಂದ ಅಲೆಯೊಂದು ಸೃಷ್ಟಿಸಿದ ವಿದ್ಯಮಾನವೆಂಬಂತೆ ಗ್ರಹಿಸುತ್ತಿದೆ. ಹೀಗಾಗಿ ಮೂಲಭೂತವಾದದ ಪ್ರಸರಣಕ್ಕೆ ಸಂಘಟನೆಗಳ ಮಟ್ಟದಲ್ಲಿ ನಡೆಯುತ್ತಿರುವ ವ್ಯವಸ್ಥಿತವಾದ ಪಿತೂರಿಗಳನ್ನು ಒಪ್ಪುವ ಮನಸ್ಥಿತಿಯಲ್ಲಿ ಅದು ಇಲ್ಲ.

ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ವರೂಪದ ಸಮಾಜಗಳಲ್ಲಿ ಅಲ್ಪಸಂಖ್ಯಾತ ಗುಂಪುಗಳ ಮೂಲಭೂತ ಆಚರಣೆಗಳಿಗೆಯೇ ಹಲವು ಅಡ್ಡಿಗಳಿರುತ್ತವೆ. ಇನ್ನೊಂದು ಸಾಂಸ್ಕೃತಿಕ ಅಸ್ಮಿತೆಯ ಬಗೆಗಿನ ಅರಿವಿನ ಕೊರತೆ ಅಥವಾ ಪುರೋಗಾಮಿ ಆಧುನಿಕ ವಿಚಾರಧಾರೆಗಳ ಪ್ರಸರಣದ ಕೊರತೆ ಅಂತಹ ಅಡ್ಡಿಗಳನ್ನು ಸೃಷ್ಟಿಸುತ್ತವೆ. ಇಂತಹ ಸನ್ನಿವೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಸಾಧನೆಯ ನಿಟ್ಟಿನಲ್ಲಿ ಆಯಾ ಸಮಾಜದ ಪ್ರಗತಿಪರ ವರ್ಗಗಳು ಅಲ್ಪಸಂಖ್ಯಾತ ಸಮುದಾಯಗಳೊಳಗಿನ ಗುಂಪುಗಳ ಜೊತೆಗೆ ನಿಲ್ಲುವುದು ಅವಶ್ಯವಾಗಿರುತ್ತದೆ. ಹಾಗೇ ಬೆಂಬಲ ಪಡೆದುಕೊಳ್ಳುವ ಗುಂಪುಗಳು ಬಹುಮಟ್ಟಿಗೆ ಸಂಪ್ರದಾಯ ಶರಣ ವರ್ಗಗಳೇ ಆಗಿರುತ್ತವೆ. jamate-mangaloreಬೌದ್ಧಿಕ ವರ್ಗದ ನೆಲೆಯಲ್ಲಿ ಇದು ಆರಂಭಿಕ ಸ್ವರೂಪದ ಕ್ರಿಯಾಶೀಲತೆಯಾಗಿರುತ್ತದೆ. ಹಾಗೆಯೇ ತರುವಾಯದ ಹಂತದಲ್ಲಿ ಸಮಾಜದ ಬುದ್ಧಿಜೀವಿ ವಲಯ ಅಲ್ಪಸಂಖ್ಯಾತ ಸಮುದಾಯಗಳ ಪ್ರಗತಿಪರ ಗುಂಪುಗಳ ಜೊತೆಗೆ ಗುರುತಿಸಿಕೊಳ್ಳುವುದು ಅದರ ಆರಂಭಿಕ ಸ್ವರೂಪದ ಕ್ರಿಯಾಶೀಲತೆಯ ತಾತ್ವಿಕ ಮುಂದುವರಿಕೆಯಾಗಿರುತ್ತದೆ. ಇಲ್ಲದೆ ಹೋದಲ್ಲಿ ಆರಂಭದಲ್ಲಿ ಬೆಂಬಲ ಪಡೆದುಕೊಳ್ಳುವ ಸಂಪ್ರದಾಯ ಶರಣ ಗುಂಪುಗಳು ಕ್ರಮೇಣ ಒಳಗೂ ಹೊರಗೂ ಘಾತಕವಾಗಿ ಬೆಳೆಯುತ್ತವೆ.

ಆದರೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂದಿಸಿದಂತೆ ಅಂತಹ ಎರಡನೆಯ ಹಂತದ ಕ್ರಿಯಾಶೀಲತೆಯು ನಮ್ಮ ಬೌದ್ಧಿಕ ವಲಯದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತಿದೆಯೇ? ಇಲ್ಲ ಅನ್ನುವುದೇ ನಮ್ಮ ಸಾಮಾಜಿಕ ಸಂದರ್ಭದ ದೊಡ್ಡ ದುರ್ದೈವ. ಹೀಗಾಗಿ ಮುಸ್ಲಿಮ್ ಮೂಲಭೂತವಾದೀ ಗುಂಪುಗಳ ಜೊತೆಗೆ ಅದು ಮತ್ತೆ ಮತ್ತೆ ಅಸೋಸಿಯೇಟ್ ಆಗುತ್ತಿದೆ. ಒಂದು ಗುಂಪಿನ ಮೂಲಭೂತವಾದವನ್ನು ಅಪ್ಪಿಕೊಂಡು ಇನ್ನೊಂದು ಗುಂಪಿನ ಮೂಲಭೂತವಾದವನ್ನು ರಿಜೆಕ್ಟ್ ಮಾಡುವ ಅತಿರೇಕದ ನಡೆಗಳನ್ನು ಅದು ಅನುಸರಿಸುತ್ತಿದೆ.

ಇಂತಹ ದ್ವಂಧ್ವ ನಿಲುವುಗಳು ತಳಮಟ್ಟದಲ್ಲಿ ಕ್ರಿಯಾಶೀಲವಾಗಿರುವ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಬಹುಸಂಖ್ಯಾತ ಸಮಾಜದ ಮೂಲಭೂತವಾದವನ್ನು ಶ್ರೀಸಾಮಾನ್ಯರ ಮಟ್ಟದಲ್ಲಿ ಎದುರಿಸಲು ಪ್ರಯತ್ನಿಸುವ ಅವರು ಜನರ ನಡುವೆ ವಿಶ್ವಾಸದ ಕೊರತೆಯನ್ನು ಅನುಭವಿಸುತ್ತಾರೆ. ಹೀಗೆ, ವಿಚಾರವಾದಿ, ಪ್ರಗತಿಪರ, ಸೆಕ್ಯುಲರಿಸ್ಟ್ ಅಥವಾ ಬುದ್ಧಿಜೀವಿ ಮೊದಲಾದ ಐಡೆಂಟಿಟಿಗಳು ಗೌರವ ಕಳೆದುಕೊಳ್ಳುವಲ್ಲಿ, ಮುಲಭೂತವಾದದ ಸ್ಥಾನದಲ್ಲಿ ಅವುಗಳೇ ಟೀಕೆಗಳಿಗೆ ಗುರಿಯಾಗುತ್ತಿರುವುದರಲ್ಲಿ ಇತರೆ ಅಂಶಗಳ ಜೊತೆಗೆ ನಮ್ಮ ಬೌದ್ಧಿಕ ವಲಯದ ಪಾತ್ರವೂ ಇದೆ.

ನವೀನ್ ಹಾಗೂ ಅವರ ಸಂಗಾತಿಗಳು ಪ್ರಸ್ತಾಪಿಸುತ್ತಿರುವ ವಿಚಾರ, ಎದುರಿಸುತ್ತಿರುವ ಸಮಸ್ಯೆ ಇದೇ ಆಗಿದೆ. ಮೂಲಭೂತವಾದದಲ್ಲಿ ಒಳ್ಳೆಯ ಅಥವಾ ಕೆಟ್ಟ ಮೂಲಭೂತವಾದಗಳು, ಅಪಾಯಕಾರಿ ಅಥವಾ ನಿರುಪದ್ರವಿ, ಜಸ್ಟಿಫೈಡ್ ಅಥವಾ ಅನ್ ಜಸ್ಟಿಫೈಡ್ ಮೂಲಭೂತವಾದಗಳು ಹೀಗೆ ವಿಂಗಡನೆ ಮಾಡುವಂತದ್ದು ನಿಜಕ್ಕೂ ಅಘಾತಕಾರಿ ಬೆಳವಣಿಗೆ. ಅಷ್ಟೂ ಮೂಲಭೂತವಾದಿ ಚಳುವಳಿಗಳನ್ನು ಏಕಪ್ರಕಾರದ ಅಸ್ಖಲಿತ ತತ್ವ ನಿಷ್ಠೆಯಿಂದ ಎದುರಿಸಬೇಕಾಗಿದೆ. ಇದು ಸದ್ಯದ ಅನಿವಾರ್ಯತೆ ಕೂಡಾ.

14 thoughts on “ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿವೆಯೇ?

  1. Dayananda Maada

    ಮೂಲಭೂತವಾದದ ಬಗೆಗಿನ ಚರ್ಚೆ ಮಟ್ಟು ಸರ್ ಮತ್ತು ನವೀನ್ ಅವರನ್ನು ಮೀರಿ ಬೆಳೆಯಬೇಕೆಂದು ತೇಜ್ ಸಚಿನ್ ಪೂಜಾರಿ ಹೇಳಿರುವುದು ಸಮಂಜಸವಾಗಿದೆ. ಆದರೆ ಚರ್ಚೆಯ ಹಾದಿ ತಪ್ಪಿದ್ದೆಲ್ಲಿ ಎನ್ನುವುದನ್ನು ಅವರು ಗಮನಿಸಿದಂತಿಲ್ಲ. ಚರ್ಚೆಯ ಪ್ರಾರಂಭ ಮತ್ತು ಸಾಗುತ್ತಿರುವ ದಾರಿಯನ್ನು ಗಮನಿಸಿದರೆ ಮಟ್ಟು ಸರ್ ಅವರನ್ನು ಟಾರ್ಗೆಟ್ ಮಾಡಲು ಪ್ರಾರಂಭಿಸಿದಂತಿದೆ ಎಂಬ ಗುಮಾನಿ ಬರುತ್ತಿದೆ. ಇದಕ್ಕೆ ಕಾರಣಗಳನ್ನು ಕೊಡುತ್ತೇನೆ
    1. ಧಾರ್ಮಿಕ ಮೂಲಭೂತವಾದ ಜಮಾತೆ ಇಸ್ಲಾಂ, ಶಾಂತಿಪ್ರಕಾಶನ ಮತ್ತು ಮುಸ್ಲಿಮ್ ಲೇಖಕರ ಸಂಘ ಇಲ್ಲವೆ ಪಿಎಫ್ಐ, ಮುಜಾಹಿದ್, ಆರ್‍ಎಸ್ಎಸ್ ವಿಎಚ್ ಪಿಯನ್ನು ಮೀರಿದ್ದು. ಆದುದರಿಂದ ಚರ್ಚೆಯನ್ನು ಎತ್ತಿಕೊಳ್ಳುವಾಗ ಎಲ್ಲವನ್ನೂ ಸೇರಿಸಿಕೊಳ್ಳಬಹುದಿತ್ತು, ಇಲ್ಲವೆ ಎಲ್ಲವನ್ನೂ ಬಿಟ್ಟು ವಿಷಯಾಧರಿತ ಚರ್ಚೆ ನಡೆಸಬಹುದಿತ್ತು. ಹಾಗಾಗಲಿಲ್ಲ. ಇಲ್ಲಿ ಬಡಬಾಡಿಗೆದಾರರಾದ ಮುಸ್ಲಿಮ್ ಲೇಖಕರ ಸಂಘವನ್ನೇ ದೊಡ್ಡ ಮೂಲಭೂತವಾದಿ ಸಂಘಟನೆ ಎಂಬಂತೆ ಬಿಂಬಿಸಲಾಗುತ್ತಿದೆ.

    2.ಮುಸ್ಲಿಮ್ ಲೇಖಕರ ಸಂಘ ಸ್ಥಾಪನೆಗೊಂಡು 28 ವರ್ಷಗಳಾಯಿತೆಂದು ಹೇಳಿದ್ದೀರಿ. ಇದರ ಕಾರ್ಯಕ್ರಮದಲ್ಲಿ ಯು.ಆರ್.ಅನಂತಮೂರ್ತಿಯವರಿಂದ ಹಿಡಿದು ದೇವನೂರು ಮಹಾದೇವ ವರೆಗಿನ ಅನೇಕ ಪ್ರಗತಿಪರ ಲೇಖಕರು ಹಾಗೂ ರಮ್ಜಾನ್ ದರ್ಗಾ ಅವರಿಂದ ಹಿಡಿದು ಶಿವಸುಂದರ್ ವರೆಗಿನ ಅನೇಕ ಘೋಷಿತ ಎಡಪಂಥೀಯ ಲೇಖಕರು ಭಾಗವಹಿಸಿದ್ದಾರೆ. ಆಗ ನವೀನ್ ಸೂರಿಂಜೆ ಅವರು ಮಂಗಳೂರಿನಲ್ಲಿಯೇ ಇದ್ದರಲ್ಲಾ? ಆಗ ಕಾಣದ ತಪ್ಪು ಮಟ್ಟು ಸರ್ ಭಾಗವಹಿಸಿದ ಕೂಡಲೇ ನವೀನ್ ಅವರಿಗೆ ಈಗ ಯಾಕೆ ಕಾಣಿಸಿದೆ?

    3.ಇಲ್ಲಿಯ ವರೆಗೆ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮಗಳ ಒಂದೇ ಒಂದು ಪೋಟೋ ಹಾಕದೆ ಮತ್ತೆಮತ್ತೆ ಜಮಾತೆ ಇಸ್ಲಾಂ, ಪಿಎಫ್ಐ ಮೆರವಣಿಗೆ, ಸಭೆಗಳ ಪೋಟೋಗಳನ್ನೇ ಯಾಕೆ ಲೇಖನಗಳಲ್ಲಿ ಯಾಕೆ ಪ್ರಕಟಿಸಲಾಗುತ್ತಿದೆ? ಇದು ಯಾರ ತುಂಟತನ? ಲೇಖಕರದ್ದೇ? ವರ್ತಮಾನದ್ದೇ?

    -ದಯಾನಂದ ಮಾಡ

    Reply
  2. Vinod Ahmed

    ಹಿಂದೂ ಮೂಲಭೂತವಾದವನ್ನು ತಿರಸ್ಕರಿಸಲು ಬೌದ್ಧಿಕ ವಲಯ ಸ್ಪಷ್ಟವಾದ ಒಂದು ವೇದಿಕೆಯನ್ನು ಈಗಾಗಲೇ ಸಿದ್ಧಗೊಳಿಸಿದೆ. ಅದರ ಅಷ್ಟೂ ಆಯಾಮಗಳನ್ನು ಗುರುತಿಸಿ ಅದಕ್ಕೆ ಸೈದ್ಧಾಂತಿಕ ವಿರೋಧದ ನೆಲೆಗಳನ್ನು ಗಟ್ಟಿಗೊಳಿಸಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆಚರಣೆ ಹೀಗೇ ಎಲ್ಲೆಲ್ಲಿ ಮೂಲಭೂತವಾದದ ಸುಳಿವು ಕಾಣಿಸಿಕೊಳ್ಳುತ್ತಿದೆಯೋ ಅಲ್ಲೆಲ್ಲಾ ಅದನ್ನು ಖಂಡಿಸುವ ಕ್ರಿಯೆಗಳು ಅಟೋಮ್ಯಾಟಿಕ್ ಅನ್ನಿಸುವಂತೆ ನಡೆಯುತ್ತಿವೆ. ’ಸಂಘ ಪರಿವಾರ’ ಪರಿಕಲ್ಪನೆಯ ಅಡಿಯಲ್ಲಿ ಹಿಂದೂ ಮೂಲಭೂತವಾದವನ್ನು ಸಮಗ್ರವಾಗಿ ಹಿಡಿದಿಡುವ, ಅದಕ್ಕೆ ಪ್ರತಿಕ್ರಿಯಿಸುವ ನೆಲೆಯನ್ನು ಬುದ್ಧಿಜೀವಿ ವರ್ಗ ಸಾಧಿಸಿದೆ. ಇದು ತುರ್ತು ಅನಿವಾರ್ಯವಾಗಿದ್ದ ಬೆಳವಣಿಗೆ. ಅದರಲ್ಲಿ ನಮ್ಮ ಪ್ರಗತಿಪರ ಗುಂಪುಗಳು ಯಶಸ್ಸು ಕಂಡಿವೆ.”
    ಈ ಮೇಲಿನ ಜೋಕನ್ನು ನೋಡಿ-ಜೋರಾಗಿ ನಗೆ ಬ೦ತು.ಕೇವಲ ಕಚೇರಿಯಲ್ಲಿ ಕೂತು
    ವೇದಿಕೆ ಸಿದ್ದಗೊಳಿಸಿದರೆ ಏನು ಪ್ರಯೋಜನ? Rss,Baja,Vhp ಯವರು ನಿಮ್ಮ ಪೊಟ್ಟು ಬೆದರಿಕೆಗೆ
    ಸೊಪ್ಪು ಹಾಕುತ್ತಾರಾ?ಮುಸ್ಲಿ೦ ಹುಡುಗರು( PFI ಯವರು),ಮುಖ೦ಡರು ಬೀದಿಗೆ ಬಿದ್ದು ಅದನ್ನು ಎದುರಿಸು
    ದರಿ೦ದ ಸ್ವಲ್ಪವಾದರೂ ಅವರ ಅರ್ಭಟ ಕಮ್ಮಿಯಾಗಿದೆ.ನಿಮ್ಮ ಮಿತ್ರ ಮುನೀರ್ ರವರು
    ಪ್ರತಿನಿದಿಸುವ ಸ೦ಘಟನೆಯೂ ಸೇರಿದ೦ತೆ ನೀವೆಲ್ಲಾ ಕೇವಲ ಪತ್ರಿಕಾ ಹೇಳಿಕೆ ಕೊಟ್ಟದ್ದಲ್ಲ್
    ಲ್ಲದೇ ಬೇರೇನು ಮಾಡಿದಿರಿ!ಅದಕ್ಕೆ ಸ್ವಲ್ಪ ಅಪವಾದ-ಕೋಮು ಸೋಹಾರ್ದ ವೇದಿಕೆಯವರು.

    ನನಗೆ ಅನಿಸುತ್ತದ್-ನಿಮ್ಮದೇ ಒ೦ದು “ಮಾಪಿಯ” ಕಾರ್ಯಾಚರಿಸುತ್ತಿದೆ,ಅದರ ಅ೦ಗವ್ವೇ
    ಅತ್ಯ೦ತ ಪ್ರಬುದ್ದ ,ಪ್ರ್ರಾಮಾಣಿಕ,ಯಶಸ್ಪಿ ಪತ್ರಕರ್ತ ದಿನೇಶ್ ಅಮೀನ್ ರವರ ಮೇಲೆ
    ಅಸೂಯಯಿ೦ದ ನಡೆಸುವ ಈ ” creative Torture “.
    ಅ೦ದ ಹಾಗೆ ನವೀನ್ ರವರ ಹೆಸರು ಹಿ೦ದೆ Homs stay ದಾಳಿಯ ಸ೦ದರ್ಬ ಕೇಳಿದ್ದೇವೆ,ಆದರೆ
    ಈ ಪುಕ್ಕಟೆ ಪ್ರಚಾರ ಪಡೆಯುವ-ಸಚಿನ್ ಮತ್ತು ಇರ್ಶ್ದದೆ ಯಾರು?
    ಈ ಚರ್ಚೆಯನ್ನು ಇನ್ನೂ ಎಳೆದೆಳೆದು ತಲಪಾಡಿ ಸ೦ಕದವರೆಗೆ ಎಳೆಯಿರಿ.ಆದರೆ’ನಾಯಿ
    ಬೊಗಳಿದರೆ ದೇವ ಲೋಕ ಹಾಳಾಗುವುದ?”-ನಾವು ಚಿಕ್ಕ೦ದಿನಲ್ಲಿ ಕಲಿತದ್ದು.

    Reply
  3. Abbas Noori

    ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿವೆಯೇ?… ಮುಸ್ಲಿಂ ಎಂಬ ಪದ ಬಳಕೆ ನಿಲ್ಲಿಸಿ . ಇಲ್ಲಿ ಚರ್ಚೆ ನಡೆಯುತ್ತಿರುವುದು ಮುಸ್ಲಿಮರ ಬಗ್ಗೆಯಲ್ಲ ಮೌದೂದಿಸಂನ ಹಿಂಬಾಲಕಾರದ ಜಮಾತೆಯ ಬಗ್ಗೆ. ಒಂದು ವಿಭಾಗದ ತಪ್ಪು ಒಪ್ಪುಗಳನ್ನು ಉಲ್ಲೇಖಿಸಿ ಇಡೀ ಮುಸ್ಲಿಂ ಸಮುದಾಯವನ್ನು ಅಪರಾಧಿಯ ಕಟಕಟೆಯಲ್ಲಿ ನಿಲ್ಲಿಸುದನ್ನು ನಾಗರೀಕ ಸಮಾಜ ಒಪ್ಪುದಿಲ್ಲ. ಮೌದೂದಿಸಂನ ಪೊಳ್ಳು ವಾದಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಅದರ ಕಬಂದ ಬಾಹುಗಳು ನಮ್ಮ ನಡುವಿನ ಮುಗ್ಧ ಮುಸ್ಲಿಮರ ನಡುವೆ ಚಾಚದಂತೆ ನೋಡಿಕೊಳ್ಳುವ ನೈತಿಕ ಹೊಣೆಗಾರಿಕೆ ಪ್ರಗತಿಪರರ ಮೇಲಿದೆ. ಅದು ಬಿಟ್ಟು ಪೂರ್ವಗ್ರಹ ಪೀಡಿತರಾಗಿ ಇಡೀ ಮುಸ್ಲಿಮರನ್ನು ಮೌದೂದಿಸಂ, ಜಮಾತೆಯೊಂದಿಗೆ ತಳಕು ಹಾಕುವುದು ಸಲ್ಲ. ಚರ್ಚೆ ಸಾಗುವ ದಾರಿ ನೋಡಿದರೆ, ಮೌದೂದಿಸಂ, ಜಮಾತೆಯ ಬಗ್ಗೆ ಕೇವಲಪಾಸಿಂಗ್ ರೆಫರೆನ್ಸ್ ಕೊಡುವ ಮೂಲಕ ಅಂಗ್ಲ ವಾಕ್ಯದಂತೆ ”ಬೀಟಿಂಗ್ ಅರೌಂಡ್ ದಿ ಬುಶ್ ”. ಮಾತ್ರ ನಡೆದಿದೆ ಎಂಬುದು ನಿಸ್ಪಕ್ಷಮತಿಗಳಾಗಿ ಚಿಂತಿಸುವವರಿಗೆ ಮನದಟ್ಟಾಗುತ್ತದೆ.

    Reply
  4. mohammad rafi

    ಮಿ ವಿನೋದ್ ಅಹ್ಮದ್
    ನನಗೆ ನಗು ಬರುವುದಿಲ್ಲ. ನಿಮ್ಮ ಕಮೆಂಟ್ ಗಳನ್ನು ನೋಡಿ ಅಯ್ಯೋ ಪಾಪ ಅಂತ ಕನಿಕರ ಹುಟ್ಟುತ್ತಿದೆ. ಪಿಎಫ್ಐ ಗೆ ಆರ್ ಎಸ್ ಎಸ್ ಯಾಕೆ ಹೆದರಬೇಕು ? ಯಾವ ಸಂಧರ್ಭದಲ್ಲಿ ಹೆದರಿದೆ. ಪಿಎಫ್ ಐ ಎಷ್ಟು ಬೆಳವಣಿಗೆ ಆಗುತ್ತೋ ಅಷ್ಟು ಆರ್ ಎಸ್ ಎಸ್ ಖುಷಿ ಪಡುತ್ತದೆ…. ಮೊದಲು ನೀವು ಭ್ರಮೆಯಿಂದ ಹೊರ ಬನ್ನಿ… ಅಥವಾ ನೀವು ನಿಮ್ಮ ಅತ್ಯಂತ ಪ್ರಭುದ್ಧ, ಪ್ರಾಮಾಣಿಕ, ಯಶಸ್ವಿ ಪತ್ರಕರ್ತ ದಿನೇಶ್ ಅಮೀನ್ ಮಟ್ಟುರವರನ್ನೇ ಕೇಳಿ. ಅವರು ಏನೂ ಹೇಳದೇ ಇದ್ದರೆ ಅವರ ಹಳೇ ಲೇಖನಗಳನ್ನು ಓದಿ. ಅದರಲ್ಲಿ ಅವರು ಬರೆದಿದ್ದಾರೆ …”ಪಿಎಫ್ಐ ಅಂದರೆ ಬಿಜೆಪಿಗೆ ಪ್ರೀತಿ. ಕಾಂಗ್ರೆಸ್ ಗೆ ಭಯ” ಅಂತ…
    ನವೀನ್ ಹೆಸರು ಹೋಂ ಸ್ಟೇ ಪ್ರಕರಣದಲ್ಲಿ ಮಾತ್ರ ನೀವು ಕೇಳಿದ್ದರೆ ಅದು ನಿಮ್ಮ ಓದಿನ ಕೊರತೆ…. ದಲಿತ, ಻ಲ್ಪಸಂಖ್ಯಾತ, ಶೋಷಿತರ ಪರವಾಗಿ ಯಾವತ್ತೂ ನವೀನ್ ವರದಿ ಮಾಡುತ್ತಲೇ ಇರುತ್ತಾರೆ. ಅವರು ಅನೇಕ ವರ್ಷಗಳಿಂದ ಮಂಗಳೂರಿನಂತಹ ಕೋಮುಸೂಕ್ಷ್ಮ, ದಲಿತ ವಿರೋಧಿ ಮಂಗಳೂರು ಎಂಬ ದೇಶದಲ್ಲಿ ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ತೇಜಾ ಸಚಿನ್ ಮತ್ತು ಇರ್ಷಾದ್ ಪತ್ರಕರ್ತರು.
    ನಾಯಿ ಬೊಗಳಿದ ದೇವಲೋಕ ಹಾಲಾಗುವುದಿಲ್ಲ. ಈಗ ನವೀನ್ ಇರ್ಷಾದ್, ತೇಜಾ ಪೂಜಾರಿ ಸಚಿನ್ ಹಾಳಾಗಿದ್ದಾರೋ… ಇಲ್ವಲ್ಲ…
    ಸುಮ್ಮನೆ ಕೋಮುವಾದ, ಮೂಲಭೂತವಾದದ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಅದೇನೋ ವೈಯುಕ್ತಿಕ ಚರ್ಚೆ ಮಾಡುತ್ತವೆ…
    ಮಹಮ್ಮದ್ ರಫಿ

    Reply
    1. Vinod Ahmed

      ಸ್ವಾಮಿ,ರಫಿಯವರೇ-ನಿಮ್ಮ ಕೋಪ ನೋಡುವಾಗ ನಾನು ಹೆಸರಿಸಿದ ಲೇಖಕ ತಾವೇ ಅ೦ದ ಹಾಗೆ ಅನಿಸುತ್ತೆದೆ.ನಾನು PFI ಯ ಸಮರ್ಥಕನೇನೂ ಅಲ್ಲ.ಇಲ್ಲಿ ವಿಶಯ ಸಹಾ PFIಅಲ್ಲ.
      ಅದು ಸಾ೦ದರ್ಬಿಕವಾಗಿ ನುಸಿಳಿದ್ದು ಅಷ್ಟೇ!ರಾಷ್ಟೀಯ,ಅ೦ತರಾಷ್ಟೀಯ ಮಾದ್ಯಮದಿ೦ದ ಹಿಡಿದು Print & Electronic ಮಾದ್ಯಮದ ವರೆಗೆ ಯಾವ ಪ್ರಕಾರದ ಚರ್ಚ್ ಯನ್ನೇ ತೆಗೆದು ಕೊ೦ಡರೂ,ಅದಕ್ಕೇ ಒ೦ದು ತರಹದ conclusion ಅ೦ಥ ಇರುತ್ತೆ!ಆದರೆ ನಿಮ್ಮ ಸ್ನೇಹಿತರು ಒ೦ದೇ ತರವಾಗಿ ಒಬ್ಬ ಹಿರಿಯ ಮುತ್ಸದ್ದಿ ಮತ್ತು ಒ೦ದು ಸ೦ಘೆಟನೆಯನ್ನು ಹಿಗ್ಗಾಮುಗ್ಗ target ಮಾಡುವಾಗ ಇತರರು ಸುಮ್ಮನಿರಬೇಕೆ೦ದು ತಾವು ಬಯಸುದೇಕ್? ಈ ಇಡೀ ಚರ್ಚೆಯ್ ಒಬ್ಬ ವ್ಯ್ಯಕ್ತಿಯನ್ನು
      ಕೇ೦ದ್ರವಾಗಿಸಿ ನಡೆಯುವಾಗ,ವ್ಯಕ್ತಿಯನ್ನು ಹೆಸರಿಸಬೇಡಿ ಎ೦ದು ಹೆದರಿಸುವ ಪರಿ ಬೇಡ್
      ಅವರ ಲೇಖನದುದ್ದಕ್ಕೂ ಎಷ್ಟೋ ವ್ಯಕ್ತಿಗಳನ್ನು ಹೆಸರಿಸಿದ್ದಾರಲ್ಲ,ಆಗ ನೀವು ನಿದ್ದೆ ಮಾಡುತ್ತ
      ಇದ್ದೀರಾ?
      ನೀವು ಹೆಸರಿಸಿದವರೇನೋ -Vinod mehta,M.J.Akbar ಅಥಾವಾ Rajdeep,Tarun or Barkha ಅಲ್ಲವಲ್ಲಾ,ಅವರ ಬಗ್ಗೆ ಇಡೀ ದೇಶ ತಿಳಿಯಲ.
      ಅವರ ಹತ್ತಿರ ಹೇಳಿ Journalistic Ethics ಇದೆ,ಅದನ್ನು ಪರಿಪಾಲಿಸಲಿ.
      ಇನ್ನು ನಿಮ್ಮ ಕನಿಕರವನ್ನು ನಿಮಗಿ೦ತ ಕಡಿಮೆ IQ ನವರಿಗೆ ಕೊಡಿ,ಅದು ಅವರಿಗೆ ಉಪಯೊ
      ಗಕ್ಕೆ ಬರಬಹುದು.ನಾನು ನಿಮಗಿ೦ಥ ಎಲ್ಲಾ ವಿಧದಲ್ಲಿಯೂ ಶ್ರೇಷ್ಟನೇ.

      Reply
  5. akshatha humchadakatte

    ಸಚಿನ್ ತೇಜ ಅವರೇ ,
    ನವೀನ ಸೂರಿಂಜೆಯ ವೈಯಕ್ತಿಕ ಅಸಮಾಧಾನದ ಫಲ ಅವರ ಈ ಚಿಂತನೆ ಮತ್ತು ಬರಹ ಎಂದು ನಾನು ಇಡೀ ಲೇಖನದಲ್ಲಿ ಎಲ್ಲೂ ಹೇಳಿಲ್ಲ . ಆದರು ನನ್ನ ತಿಳುವಳಿಕೆಯ ಪ್ರಕಾರ ಜವಾಬ್ದಾರಿಯುತ ಪತ್ರಕರ್ತರು ಅಥವಾ ಲೇಖಕರಿಗೆ ವೈಯಕ್ತಿಕ ಮತ್ತು ಸಾರ್ವತ್ರಿಕದ ನಡುವಿನ ಗೆರೆ ತೀರ ತೆಳುವಾಗಿರುತ್ತದೆ . ಸಾಮೂಹಿಕ ಹಿತಚಿಂತನೆಯೇ ವೈಯಕ್ತಿಕ ಅಭಿಲಾಷೆಯು ಆಗಿಬಿಡುತ್ತದೆ . ನವೀನ ಸೂರಿಂಜೆ ಮತ್ತು ದಿನೇಶ್ ಮಟ್ಟು ನಡುವೆ ನಡೆಯುತ್ತಿರುವುದು ಸಂವಾದ ಎಂದೇ ಗ್ರಹಿಸಿದ್ದೇನೆ . ಯಾವುದೇ ಸಂವಾದದಲ್ಲಿ ಸಾಕು ನಾನು ಹೇಳುವುದೆಲ್ಲ ಹೇಳಿಯಾಗಿದೆ … ಅಂತ ಒಬ್ಬರಿಗೆ ಅನ್ನಿಸಿದರೆ ಅವರ ಮೌನವನ್ನು ಕೆದಕಬಾರದು ಅಂದಿದ್ದೇನೆ ಹೊರತು . ಸಂವಾದವನ್ನು ಇಲ್ಲಿಗೆ ನಿಲ್ಲಿಸಿ ಎನ್ನುವಂತ ಮಾತನ್ನು ನಾನು ಹೇಳುತ್ತಿಲ್ಲ . ಆ ಆಶಯ ನನ್ನದಾಗಿದ್ದರೆ ನಾನ್ಯಾಕೆ ನನ್ನ ಮಾತುಗಳನ್ನು ಇಲ್ಲಿ ಕೂಡಿಸುತಿದ್ದೆ …?
    ನೀವೇ ಹೇಳಿದಂತೆ ದಿನೇಶ ಮಟ್ಟು ಮತ್ತು ನವೀನ ಇಬ್ಬರನ್ನು ಮೀರಿ ಈ ಚರ್ಚೆ ಬೆಳೆಯಬೇಕೆಂಬುದು ನನ್ನ ಆಶೆಯೂ ಆಗಿತ್ತು ಆ ಹಿನ್ನಲೆಯಲ್ಲೇ ನಾನು ಈ ಮಾತು ಹೇಳಿದ್ದೇನೆ . ಆದರೆ ಇಲ್ಲಿರುವ ಅಸ್ಟು ಕಾಮೆಂಟುಗಳನ್ನು ಎದುರಿಡಿದು ನೋಡಿದಾಗ ನನಗೆ ಚರ್ಚೆ ಸಾಗುತ್ತಿರುವ ರೀತಿಯ ಬಗ್ಗೆ ಅಷ್ಟೇನು ಹಿತ ಅನ್ನಿಸುತ್ತಿಲ್ಲ ಆದರೆ ನಿಮಗೆ ಹಾಗನ್ನಿಸದಿದ್ದರೆ ನನ್ನ ಅಭ್ಯಂತರವಿಲ್ಲ ..
    ನೀವು ಹೇಳುತಿದ್ದಿರಲ್ಲ ಹಿಂದೂ ಮೂಲಭೂತವಾದವನ್ನು ತಿರಸ್ಕರಿಸಲು ಬೌದ್ಧಿಕ ವಲಯ ಸ್ಪಷ್ಟವಾದ ಒಂದು ವೇದಿಕೆ ಸಿದ್ಧಗೊಳಿಸಿದೆ . ಮುಸ್ಲಿಂ ಮೂಲಭೂತವಾದವನ್ನು ಪ್ರತಿರೋಧಿಸುವ ದನಿಗಳೇ ಇಲ್ಲ ಎಂಬುದಾಗಿ … ಅದು ಕೂಡ ಪೂರ್ತಿ ಸತ್ಯವಲ್ಲ . ಇಸ್ಟೆಲ್ಲಾ ವೇದಿಕೆಗಳಿದ್ದರೂ ಮೂಲಭೂತವಾದ ಎಂಬುದು ನಮ್ಮಲ್ಲಿ ಬೇರೆ ಬೇರೆ ಸ್ವರೂಪದಲ್ಲಿ , ಆಯಾಮದಲ್ಲಿ ಪ್ರವೇಶಿಸುತ್ತಲೇ ಇದೆ. ಸಾವಿರಾರು ಹೆಂಗಸರು ಕೇಸರಿ ಸೀರೆ ಉಟ್ಟು ದತ್ತ ಮಾಲೆ ಧರಿಸುವುದು, ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ನಿಮಿತ್ತ ಆಯಾ ಕೇರಿಯ ಎಲ್ಲ ಹೆಂಗಸರು ಬರಲೆಬೇಕೆನ್ನುವುದು , ಬರದೆ ಹೋಗುವುವವ್ರನ್ನು ಮಾನಸಿಕವಾಗಿ ದೂರ ಇದುವ ಪ್ರಯತ್ನಗಳು . ಮತ್ತೆ ಅಂಥಲ್ಲಿ ಬಾಗವಹಿಸಿದ ಹೆಂಗಸರ ನಡುವೆಯೂ ಅವರವರ ಜಾತಿಗೆ ಅನುಗುಣವಾಗಿ ಸಿಕ್ಕುವ ಮರ್ಯಾದೆ … ಇವೆಲ್ಲ ನಾವಂತೂ ಚಿಕ್ಕವರಿರುವಾಗ ನಮ್ಮ ಹಳ್ಳಿಯಲ್ಲಿ ಕಾಣದ ಕೇಳದ ದೃಶ್ಯಗಳು . ಹಾಗೆ ನಾನು ಬೇರೆ ಆಯ್ಕೆಯೇ ಇಲ್ಲ ಎನ್ನುವಂತೆ ಬುರ್ಖಾ ಧರಿಸಿದ , ಮತ್ತು ಹತ್ತು ಹಲವು ಸಂಪ್ರದಾಯಗಳಿಗೆ ಶರಣೆ ಆದ ಮುಸ್ಲಿಂ ಹೆಣ್ಣುಮಕ್ಕಳನ್ನು ಕಂಡಿದ್ದು ನಮ್ಮ ಹಳ್ಳಿಯಲ್ಲಿ ಕಂಡಿತ ಅಲ್ಲ . ಶಿವಮೊಗ್ಗೆಯಲ್ಲಿ ನೆಲೆ ನಿಂತ ಮೇಲೆ… ಅದ್ದರಿಂದ ನನ್ನಂತವರ ಚಿಂತೆ ಆ ಧರ್ಮ ಈ ಧರ್ಮ ಎಂದಲ್ಲ …. ಮೂಲಭೂತವಾದಿಗಳ ಮೊದಲ ಮತ್ತು ಅಂತಿಮ ಟಾರ್ಗೆಟ್ ಹೆಣ್ಣೆ ಆಗಿರುತ್ತಾಳಾ ದ್ದರಿಂದ … ಯಾವತ್ತು ಇದು ತೊಲಗಬಹುದು ಎಂದು . ಆದ್ದರಿಂದಲೇ ಮುಸ್ಲಿಂ ಲೇಖಕ ಸಮೂಹ ಪ್ರತಿರೋಧಿಸುವ ಕೆಲಸವನ್ನು ಮಾಡಿ ತೋರಿಸದೆ ಹೋದಾಗ ಸಾರ ಅಬುಬಕರ್, ಭಾನು ಮುಷ್ತಾಕ್ ಮಾಡಿತೋರಿಸಿದರು . ಯಾಕೆಂದರೆ ಎಲ್ಲ ರೀತಿಯ ಮೂಲಭೂತವಾದಿಗಳ ಕಪಿಮುಷ್ಟಿಯಲ್ಲಿ ನವೆಯುವುದು ಹೆಣ್ಣು ಸಮೂಹ .
    ನಾನು ಇ ಹಿನ್ನೆಲೆಯಲ್ಲೇ ದಿನೇಶ ಸರ್ ಮಾತುಗಳಿಂದ … ಬರಹಗಳಿಂದ ಆ ಹೆಣ್ಣುಮಕ್ಕಳ ಪಾಲಿಗೆ ಜ್ಞಾನದ ಕಿಟಕಿ ಕಿಂಡಿಗಳು ತೆರೆಯುವುದಿದ್ದರೆ ಮತ್ತು ದಿನೇಶ ಸರ್ ಅಂಥವರು` ನಾನು ಅವರ ನಡುವೆ ನಿಂತು ನನ್ನ(ಇಡೀ ಪ್ರಗತಿ ಪರ ಸಮುದಾಯದ ) ಮಾತುಗಳನ್ನು ಆಡುತೀನಿ’ ಅಂದ್ರೆ ನಾನು ಸ್ವಾಗತಿಸುತ್ತೇನೆ ಅಂದಿದ್ದು . ಅಷ್ಟೇ.
    AKSHATHA HUMCHADAKATTE

    Reply
  6. Ananda Prasad

    ಇಸ್ಲಾಮಿಕ್ ಮೂಲಭೂತವಾದದ ಬಗ್ಗೆ ಬುದ್ಧಿಜೀವಿಗಳ ವಲಯದಲ್ಲಿ ಹೆಚ್ಚಿನ ಜಾಗೃತಿ ಉಂಟಾಗಿಲ್ಲ. ಹಿಂದೂ ಮೂಲಭೂತವಾದದ ಬಗ್ಗೆ ಬುದ್ಧಿಜೀವಿಗಳ ವಲಯದಲ್ಲಿ ಖಂಡನೆ/ಚರ್ಚೆ ಆದಷ್ಟು ಇಸ್ಲಾಮಿಕ್ ಮೂಲಭೂತವಾದದ ಬಗ್ಗೆ ಆಗುವುದಿಲ್ಲ. ಸಲ್ಮಾನ್ ರಷ್ದಿ, ತಸ್ಲೀಮಾ ನಸ್ರೀನ್ ಮೊದಲಾದ ಲೇಖಕರಿಗೆ ಫತ್ವಾ ವಿಧಿಸಿದ್ದನ್ನು ಮುಸ್ಲಿಂ ಧರ್ಮೀಯರು ವಿರೋಧಿಸಿದ್ದು/ಚರ್ಚಿಸಿದ್ದು ಕಡಿಮೆಯೇ. ಅದೇ ರೀತಿ ಶಾಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರತಿಗಾಮಿ ಹಾಗೂ ಸಂಪ್ರದಾಯವಾದಿ ಮುಸ್ಲಿಮರ ಒತ್ತಡದಿಂದ ರಾಜೀವ ಗಾಂಧಿ ಸರ್ಕಾರ ನಿಷ್ಫಲಗೊಳಿಸುವ ಕಾನೂನು ತಂದದ್ದು ಕೂಡ ಮುಸ್ಲಿಂ ವಲಯದಲ್ಲಿ ಖಂಡನೆಗೆ ಒಳಗಾಗಿಲ್ಲ. ಮುಸ್ಲಿಮರು ವೈಚಾರಿಕವಾಗಿ ಬೆಳೆಯಬೇಕಾದ ಅಗತ್ಯವನ್ನು ಇವುಗಳು ಒತ್ತಿ ಒತ್ತಿ ಹೇಳುತ್ತಿವೆ. ಮುಸ್ಲಿಮರ ವೋಟ್ ಕೈತಪ್ಪುತ್ತದೆ ಎಂಬ ಹೆದರಿಕೆಯಿಂದ ರಾಜಕೀಯ ಪಕ್ಷಗಳು ಇಸ್ಲಾಮಿಕ್ ಮೂಲಭೂತವಾದದ ಬಗ್ಗೆ ಮಾತಾಡಲು, ಜಾಗೃತಿ ಮೂಡಿಸಲು ಹಿಂಜರಿಯುತ್ತಿವೆ. ಯಾವುದೇ ವೋಟ್ ಬ್ಯಾಂಕ್ ಅನ್ನು ಗಣನೆಗೆ ತೆಗೆದುಕೊಳ್ಳದೆ ಹಿಂದೂ ಮೂಲಭೂತವಾದ, ಇಸ್ಲಾಮಿಕ್ ಮೂಲಭೂತವಾದ ಎಂಬ ಭೇದವಿಲ್ಲದೆ ಲೇಖಕರು, ಪತ್ರಕರ್ತರು, ಬುದ್ಧಿಜೀವಿಗಳು, ಚಿಂತಕರು, ರಾಜಕೀಯ ಪಕ್ಷಗಳು ಎಲ್ಲ ಧರ್ಮಗಳ ಮೂಲಭೂತವಾದಗಳನ್ನೂ ವಿರೋಧಿಸುವ, ಜನಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ.

    Reply
    1. Moulana Abdul Hafeez Al Qasmi

      ಎಲ್ಲವೂ ನನ್ನ ಅನಿಸಿಕೆಯ ಪ್ರಕಾರವೇ ಆಗಬೇಕು ಎಂದರೆ ಅದು ಹೇಗಾಗಲು ಸಾಧ್ಯ ಆನಂದ್ ರವರೇ,
      ಇಸ್ಲಾಂನಲ್ಲಿ ಮೂಲಭೂತವಾವೆಂಬ ವಿಚಾರವೇ ಇಲ್ಲ. ಕಾಮಾಲೆ ಕಣ್ಣಿನವನಿಗೆ ಎಲ್ಲವೂ ಹಳದಿ ಎಂಬಂತೆ, ಸ್ವೇಚ್ಛಾಚಾರಿಗಳಿಗೆ ಇದು ಮೂಲಭೂತವಾದ ಎಂದು ಕಾಣಬಹುದು. ಯಾಕೆಂದರೆ ಇಸ್ಲಾಂ ಎಂದಿಗೂ ಯಾರ ಮೇಲೂ ಬಲವಂತವಾಗಿ ತನ್ನ ಕಾನೂನನ್ನು ಹೇರಲಿಲ್ಲ.
      ಒಟ್ಟಾರೆಯಾಗಿ ಇಂತಹ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಮುಸ್ಲಿಮೇತರರಿಗೂ ಇಸ್ಲಾಂನ ಬಗ್ಗೆ ಹೆಚ್ಚೆಚ್ಚು ಅಧ್ಯಯನ ಮಾಡುವಂತಹ ಅವಕಾಶವನ್ನು ಒದಗಿಸಿದ್ದೀರಿ, ಧನ್ಯವಾದಗಳು ಆನಂದ್ ರವರೇ,

      Reply
  7. Ananda Prasad

    ಇಸ್ಲಾಮಿನಲ್ಲಿ ಮೂಲಭೂತವಾದ ಇಲ್ಲ, ಹೇರಿಕೆ ಇಲ್ಲ ಎಂದು ಆ ಧರ್ಮದವರು ಹೇಳಿದರೂ ಪರಿಸ್ಥಿತಿ ಅದಕ್ಕೆ ವ್ಯತಿರಿಕ್ತವಾಗಿದೆ. ಇಸ್ಲಾಮಿನಲ್ಲಿ ಮೂಲಭೂತವಾದ ಇಲ್ಲದಿದ್ದರೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಾ ಬರಲು ಕಾರಣ ಏನು ಎಂದು ಇಸ್ಲಾಂ ಧರ್ಮಾನುಯಾಯಿಗಳು ಹೇಳಬೇಕು. ಇಸ್ಲಾಮಿನಲ್ಲಿ ಹೇರಿಕೆ ಇಲ್ಲದಿದ್ದರೆ ಇಸ್ಲಾಮಿನಲ್ಲಿ ದೇವರನ್ನು ನಂಬದೆ ಬದುಕಲು ಸಾಧ್ಯವಿದೆಯೇ ಎಂಬ ಬಗ್ಗೆ ಇಸ್ಲಾಂ ಧರ್ಮಾನುಯಾಯಿಗಳು ಹೇಳಬೇಕು. ಹಿಂದೂ ಧರ್ಮದಲ್ಲಿ ದೇವರನ್ನು ನಂಬದೆಯೂ ಬದುಕಬಹುದು, ದೇವರ ಪರಿಕಲ್ಪನೆಯನ್ನು ಟೀಕಿಸಿ, ದೇವರನ್ನು ವಿಮರ್ಶಿಸಿಯೂ ಬದುಕಲು ಸಾಧ್ಯವಿದೆ ಹಾಗೂ ಅಂಥ ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿ ನೂರಾರು ವರ್ಷಗಳಿಂದ ಇದೆ. ಇಂಥ ಸ್ವಾತಂತ್ರ್ಯ ಇಸ್ಲಾಂ ಧರ್ಮದಲ್ಲಿ ಇದೆಯೇ ಎಂದು ಬಲ್ಲವರು ಹೇಳಬೇಕು. ಇಸ್ಲಾಂ ಧರ್ಮಾನುಯಾಯಿಗಳು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಪ್ರಪಂಚದಲ್ಲಿ ಏಕೆ ಉಳಿದೆಲ್ಲ ರಾಷ್ಟ್ರಗಳಿಗಿಂಥ ಹಿಂದಿದ್ದಾರೆ ಎಂದು ಆ ಧರ್ಮದವರು ಯೋಚಿಸಬೇಕು. ಸೌದಿ ಅರೇಬಿಯಾ ದಂಥ ದೇಶಗಳಲ್ಲಿ ಕೆಲವು ಹೆಸರುಗಳನ್ನೂ ಹೇಳಬಾರದು ಎಂಬ ಕಾನೂನನ್ನು ಮಾಡಿರುವುದು ಮೂಲಭೂತವಾದ ಹೌದೋ ಅಲ್ಲವೋ ಎಂದು ಇಸ್ಲಾಂ ಧರ್ಮಾನುಯಾಯಿಗಳು ಯೋಚಿಸಿದ್ದಾರೆಯೇ?

    Reply
    1. Moulana Abdul Hafeez Al Qasmi

      ಯಾವುದೇ ಒಂದು ದೇಶದಲ್ಲಿ ಒಂದು ಧರ್ಮದ ಜನಸಂಖ್ಯೆಯ ಪ್ರಮಾಣ ಕಡಿಮೆಯಾದರೆ ಅದಕ್ಕೆ ಇನ್ನೊಂದು ಧರ್ಮವನ್ನು ದೂರುವುದು ಯಾವ ನ್ಯಾಯ?
      ಪ್ರತಿಕ್ರಿಯೆಯಲ್ಲಿ ಹೇಳಿದ ಪ್ರಕಾರ, ಹಿಂದೂ ಧರ್ಮದಲ್ಲಿ ದೇವರನ್ನು ನಂಬದೆ ಬದುಕಲು ಸಾಧ್ಯವಿದೆಯೆಂದು ಉಲ್ಲೇಖಿಸಿದ್ದೀರಿ. ನಂಬದೆ ಬದುಕುವವರು ಬದುಕಲಿ ಬಿಡಿ. ಆದರೆ ಇದನ್ನೇ ನೆಪವಾಗಿಸಿ ಇನ್ನೊಂದು ಧರ್ಮದ ಅನುಯಾಯಿಗಳ ನಂಬಿಕೆಯ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಅಗತ್ಯವಾದರೂ ಏನಿದೆ? ಅದು ಅವರ ವೈಯ್ಯಕ್ತಿಕ ವಿಚಾರ. ಈ ನಂಬಿಕೆಯಿಂದ ಅವರಿಗೆ ಇನ್ನಷ್ಟು ಮನಸ್ಸಿಗೆ ಶಾಂತಿ ಸಿಗುತ್ತದಯೇ ವಿನಃ ಯಾವ ತೊಂದರೆಯನ್ನೂ ನೋವನ್ನೂ ಅವರು ಅನುಭವಿಸುತ್ತಿಲ್ಲ. ಇದೊಂದು ದೇವನ ಕಡೆಯಿಂದ ದೊರೆತಂತಹ ಬಹು ದೊಡ್ಡ ಅನುಗ್ರಹ ಎಂದು ಅವರು ಭಾವಿಸುತ್ತಾರೆ. ಆದರೆ ಇದೇ ವಿಚಾರ ಯಾರಿಗಾದರೂ ನೋವು ಎಂದು ಕಂಡು ಬಂದಲ್ಲಿ ಅದಕ್ಕೆ ಆ ಧರ್ಮದ ಅನುಯಾಯಿಗಳು ಏನು ಮಾಡಲಿಕ್ಕೆ ಸಾಧ್ಯ ಹೇಳಿ?
      ಇಂದು ವಿಶ್ವದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಗಳಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಆದರೆ ನಮ್ಮ ಮಾಧ್ಯಮಗಳು ಅದಕ್ಕೆ ಅವಕಾಶವನ್ನು ನೀಡುತ್ತಿಲ್ಲ. ಅಂದ ಮಾತ್ರಕ್ಕೆ ಅವರನ್ನು ಹಿಂದುಳಿದಿದ್ದಾರೆ ಎಂದು ದೂರುವುದು ಸಲ್ಲ.
      ಒಟ್ಟಲ್ಲಿ ಒಂದು ಧರ್ಮದ ಅನುಯಾಯಿಯಾಗಿ, ದೇವರನ್ನು ನಂಬಿ ಮನುಷ್ಯನಾಗಿ ಬಾಳಿದರೆ ಅವನು ಮೂಲಭೂತವಾದಿ, ಸ್ವೇಚ್ಛಾಚಾರಿಯಾಗಿ ಜೀವಿಸಿದರೆ ಅವನು ಬುಧ್ದಿವಂತ ಅಲ್ಲವೇ?
      ಹಾ ಇದೆಂತಹ ನ್ಯಾಯ?

      Reply
  8. Ananda Prasad

    ಸ್ವಾತಂತ್ರ್ಯ ದೊರಕುವ ಸಮಯದಲ್ಲಿ ಪಾಕಿಸ್ತಾನದಲ್ಲಿ ಇದ್ದ ಹಿಂದೂಗಳ ಜನಸಂಖ್ಯೆ ತದನಂತರದಲ್ಲಿ ತೀವ್ರವಾಗಿ ಕುಸಿಯಲು ಆ ದೇಶ ಅಳವಡಿಸಿಕೊಂಡ ಇಸ್ಲಾಮಿಕ್ ನೀತಿಗಳು ಕಾರಣ ಎಂಬುದು ಹಗಲಿನಷ್ಟೇ ಸತ್ಯ. ಹೀಗಾಗಿ ಇದಕ್ಕೆ ಧರ್ಮವನ್ನು ದೂರಬಾರದು ಎಂದರೆ ಹೇಗೆ? ಇಸ್ಲಾಂ ಧರ್ಮದ ಸಂಕುಚಿತ ನೀತಿಗಳಿಂದಾಗಿಯೇ ಹೀಗಾಗಿದೆ. ಇಸ್ಲಾಂ ಧರ್ಮದಲ್ಲಿ ವೈಚಾರಿಕ ಸ್ವಾತಂತ್ರ್ಯವಿಲ್ಲ, ಹೀಗಾಗಿ ದೇವರ ವಿಷಯದಲ್ಲಿ ಮುಕ್ತ ಚರ್ಚೆಗೆ ಅವಕಾಶವಿಲ್ಲ. ಇದು ಇಸ್ಲಾಂ ಧರ್ಮದ ದೊಡ್ಡ ಲೋಪವೂ ಹೌದು. ವೈಚಾರಿಕ ಮುಕ್ತತೆ ಇಲ್ಲದ ಕಾರಣ ಇಸ್ಲಾಮಿಕ್ ದೇಶಗಳು ವಿಜ್ಞಾನ, ತಂತ್ರಜ್ಞಾನದಲ್ಲಿ ತೀವ್ರ ಹಿಂದೆ ಬಿದ್ದಿವೆ. ಗಲ್ಫ್ ದೇಶಗಳು ಇಂದು ವಿಜ್ಞಾನ, ತಂತ್ರಜ್ಞಾನಗಳಿಗೆ ಬೇರೆ ದೇಶಗಳ ಜನತೆಯನ್ನು ಅವಲಂಬಿಸಿರುವುದು ನೋಡಿದರೆ ಇದು ಗೊತ್ತಾಗುತ್ತದೆ. ದೇವರನ್ನು ನಂಬದವರು ಸ್ವೇಚ್ಛಾಚಾರಿಗಳು ಎಂದು ಹೇಳಲು ಸಾಧ್ಯವಿಲ್ಲ. ಅವರು ದೇವರನ್ನು ನಂಬದೆ ಇದ್ದರೂ ಮಾನವೀಯತೆಯನ್ನು, ವಿಶಾಲ ಮನೋಭಾವನೆ, ಸಹೋದರತ್ವವನ್ನು ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆ. ಹೀಗಿರುವಾಗ ಅವರು ಸ್ವೇಚ್ಛಾಚಾರಿಗಳಾಗಲು ಸಾಧ್ಯವಿಲ್ಲ. ಇದೇನಿದ್ದರೂ ಧರ್ಮದ ದೊಡ್ಡಸ್ತಿಕೆಯನ್ನು ಎತ್ತಿಹಿಡಿಯುವವರ ಮಾತುಗಳಷ್ಟೇ.

    Reply
  9. Moulana Abdul Hafeez Al Qasmi

    ಒಬ್ಬ ವ್ಯಕ್ತಿಗೆ ತನ್ನದೇ ಧರ್ಮ ಹಾಗೂ ದೇವರ ಮೇಲೆ ನಂಬಿಕೆಯೇ ಇಲ್ಲ ಎಂದಿರುವಾಗ ಯಾವುದೇ ಪ್ರತಿಕ್ರಿಯೆಯನ್ನು ನೀಡದಿರುವುದೇ ಲೇಸು.

    Reply
  10. rajl

    ಒಬ್ಬ ವ್ಯಕ್ತಿಗೆ ತನ್ನದೇ ಧರ್ಮ ಹಾಗೂ ದೇವರ ಮೇಲೆ ನಂಬಿಕೆಯೇ ಇರಬೆಕು ಎನ್ದು ನನಗೆ ಅನ್ನಿಸುವುದಿಲ್ಲ..

    Reply
    1. Moulana Abdul Hafeez Al Qasmi

      ನಿಮಗೆ ಅನಿಸದಿದ್ದರೆ ಅದು ನಿಮಗೆ ಬಿಟ್ಟ ವಿಚಾರ.
      ಅಗಾಧವಾದ ಈ ಭೂಲೋಕವನ್ನು ಒಮ್ಮೆ ಗಮನಿಸಿ. ಸೃಷ್ಟಿಕರ್ತನ ಸೃಷ್ಟಿಗಳನ್ನು ದಿಟ್ಟಿಸಿ ನೋಡಿ. ಖಂಡಿತವಾಗಿಯೂ ದೇವರು ಇದ್ದಾನೆ ಎಂದು ತಾವು ಒಪ್ಪುವಿರಿ.

      Reply

Leave a Reply to Dayananda Maada Cancel reply

Your email address will not be published. Required fields are marked *