Daily Archives: April 12, 2014

ಹಿರಿಯ ಪತ್ರಕರ್ತ ಮರಂಕಲ್ ಮೇಲೆ ದಬ್ಬಾಳಿಕೆ: ಇವರು ಅಧಿಕಾರಿಗಳೋ ರೌಡಿಗಳೋ?

-ನಾಗರಾಜ್.
ಮೈಸೂರಿನ ಟೈಮ್ಸ್ ಆಫ್ ಇಂಡಿಯಾ ಬ್ಯೂರೋ ಮುಖ್ಯಸ್ಥ ಎಂ.ಬಿ. ಮರಂಕಲ್ ಚುನಾವಣಾ ಸಂಬಂಧಿ ವರದಿಗಾರಿಕೆಗಾಗಿ ಹಾಸನಕ್ಕೆ ಗುರುವಾರ ಭೇಟಿ ನೀಡಿದಾಗ ಅವರ ಮೇಲೆ ಐಎಎಸ್ (ಪ್ರೊಬೇಷನರಿ) ಅಧಿ
Maramkal
ಕಾರಿ ಹಾಗೂ ಒಬ್ಬ ಪಿ.ಎಸ್.ಐ ದಬ್ಬಾಳಿಕೆ ನಡೆಸಿದ್ದಾರೆ. ಮರಂಕಲ್ ಅವರು ಈ ಸಂಬಂಧ ದೂರು ಕೊಟ್ಟರೂ ಇದುವರೆಗೂ ಅದು ದಾಖಲಾಗಿಲ್ಲ. ಸ್ವೀಕೃತಿಯಾಗಿದೆ ಅಷ್ಟೆ. ಇದು ಪತ್ರಕರ್ತರೊಬ್ಬರ ಮೇಲೆ ನಡೆದ ಹಲ್ಲೆಯೆಂದಷ್ಟೇ ನೋಡಬೇಕಿಲ್ಲ. ಯಾವುದೇ ಸಾಮಾನ್ಯ ಪ್ರಜೆ ಜೊತೆ ಅಧಿಕಾರಿಗಳು ಅಸಭ್ಯವಾಗಿ ವರ್ತಿಸಲು, ಹಲ್ಲೆ ನಡೆಸಲು ಅನುಮತಿ, ಅಧಿಕಾರ ಕೊಟ್ಟವರಾರು?
ಘಟನೆ ವಿವರ:
ಮರಂಕಲ್ ಅವರು ಗುರುವಾರ ಮಧ್ಯಾಹ್ನ ಹಾಸನದಿಂದ ಬೇಲೂರು ಕಡೆ ಹೊರಟಿದ್ದರು. ದಾರಿ ಮಧ್ಯೆ ಸಿಗುವ ಹಗರೆ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಗುಂಪು ಕಾಣಿಸಿತು. ಸಹಜ ಕುತೂಹಲದಿಂದ ಕಾರಿನಿಂದ ಇಳಿದು ಗುಂಪಿನತ್ತ ಧಾವಿಸಿದರು. ಅಲ್ಲಿ ಐಎಎಸ್ (ಪ್ರೊಬೇಷನರಿ) ಅಧಿಕಾರಿ ಆರ್. ರಾಮಚಂದ್ರನ್ ಪ್ರಚಾರಕ್ಕೆ ಬಳಸಿದ ವಾಹನದ ಅನುಮತಿ ಪತ್ರ ಪರಿಶೀಲಿಸುತ್ತಿದ್ದರು. ಈ ಸಂಬಂಧ ಕಾರ್ಯಕರ್ತರು ಮತ್ತು ಅಧಿಕಾರಿ ಮಧ್ಯೆ ವಾದ-ವಿವಾದ ನಡೆಯುತ್ತಿತ್ತು. ಒಬ್ಬ ಪತ್ರಕರ್ತರಾಗಿ ಮರಂಕಲ್ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಅಷ್ಟರಲ್ಲಿ..”ಯಾರೋ ನೀನು..ನಡೆಯೋ ಆಚೆ..” ಎಂದು ರಾಮಚಂದ್ರನ್ ಗದರಿಸಿದ್ದಾರೆ. ಮರಂಕಲ್ ಅವರು ‘ಅಂತಹ ಭಾಷೆ ಬಳಸುವ ಅಗತ್ಯ ಇಲ್ಲ..” ಎಂದಿದ್ದಾರೆ. ಅಷ್ಟಕ್ಕೆ ಸಿಟ್ಟಾದ ಅಧಿಕಾರಿ ಸ್ಥಳದಲ್ಲಿದ್ದ ಪಿಎಸ್ಐ ಕೆ.ಪಿ. ಮಂಜು ಗೆ ‘ಅವನನ್ನು ಆಕಡೆ ತಗೊಂಡೋಗಿ..” ಎಂದು ಆದೇಶ ನೀಡಿದ್ದಾರೆ.
ಆದೇಶ ಪಾಲಿಸುವ ಶಿಸ್ತಿನ ಸಿಪಾಯಿಯಂತೆ ಮಂಜು ನುಗ್ಗಿ ಬಂದವರೇ 56 ವರ್ಷದ ಮರಂಕಲ್ ಅವರನ್ನು ನೂಕಿ ಅವರ ಎದೆಗೆ ತನ್ನ ಮೊಣಕೈ ನಿಂದ ಎರಡು-ಮೂರು ಬಾರಿ ಗುದ್ದಿ ತನ್ನ ಜೀಪಿಗೆ ತಳ್ಳಿದರು. ಅಷ್ಟರಲ್ಲಿ ಮರಂಕಲ್ ಸಾವರಿಸಿಕೊಂಡು ತಾನು ಪತ್ರಕರ್ತ, ಚುನಾವಣೆ ವರದಿಗಾರಿಕೆಗೆ ಬಂದಿದ್ದೇನೆಂದು..ಪೊಲೀಸ್ ಠಾಣೆಗ ಬರಲು ಸಿದ್ಧನಿದ್ದೇನೆಂದು ಹೇಳಲು ಪ್ರಯತ್ನ ಪಟ್ಟರೂ ಪೊಲೀಸ್ ಅಧಿಕಾರಿಗೆ ಕೇಳುವ ಸಹನೆ ಇರಲಿಲ್ಲ. ಅಷ್ಟರಲ್ಲಿ ಸ್ಥಳದಲ್ಲೇ ಇದ್ದ ಇನ್ನೊಬ್ಬ ಅಧಿಕಾರಿ..’ಅವರು ಒಬ್ಬ ಸೀನಿಯರ್ ತರಹ ಕಾಣ್ತಾರೆ..ಬಿಡಿ ಹೋಗಲಿ..’ ಎಂದು ಪೊಲೀಸ ಅಧಿಕಾರಿಗೆ ಸಲಹೆ ನೀಡಿದರು. ಅಷ್ಟಕ್ಕೂ ಸುಮ್ಮನೆ ಬಿಡದ ಪಿಎಸ್ಐ ಅವರನ್ನು ಜೀಪಿನಿಂದ ಕೆಳಕ್ಕೆ ನೂಕಿದರು. (ಅವರೇ ಸ್ವತಃ ನಡೆದು ಹೋಗಲು ಸಿದ್ಧರಿರುವಾಗ ನೂಕುವ ಅಗತ್ಯವೇನಿತ್ತು?).
ಈ ಘಟನೆ ನಂತರ ಮರಂಕಲ್ ಅವರು ತಮ್ಮ ಸಂಪಾದಕರಿಗೆ ಹಾಗೂ ತಮಗೆ ಪರಿಚಿತ ಇರುವ ಇತರೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಅವರ ಸಲಹೆಯಂತೆ ಬೇಲೂರು ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಗೆ ಭೇಟಿ ನೀಡಿ ಅಸಭ್ಯ ವರ್ತನೆ ತೋರಿದ ರಾಮಚಂದ್ರನ್ ಹಾಗೂ ಪಿಎಸ್ಐ ವಿರುದ್ಧ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಲಾಗುವುದು ಎಂದು ಭರವಸೆ ನೀಡಿದ್ದ ಅಧಿಕಾರಿಗಳು ಇದುವರೆಗೂ ಆ ಬಗ್ಗೆ ಕ್ರಮ ಕೈಗೊಂಡಿಲ್ಲ.
ಟೈಮ್ಸ್ ಆಫ್ ಇಂಡಿಯಾ ಸಂಪಾದಕರು ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದಾರೆ. ಬಹುಶಃ ಮೇಲಿನಿಂದ ಒತ್ತಡ ಬಂದ ನಂತರ ಐಎಎಸ್ ಅಧಿಕಾರಿ ಮರಂಕಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕ್ಷಮೆ ಕೇಳುವ ಪ್ರಯತ್ನ ಮಾಡಿದ್ದಾರೆ. ಮಾತನಾಡಲು ಮರಂಕಲ್ ನಿರಾಕರಿಸಿದಾಗ, ಎಸ್ಎಂಎಸ್ ಕಳುಹಿಸಿ ‘ತನ್ನ ಎದುರು ಈ ಘಟನೆ ನಡೆದಿದೆ, ಕ್ಷಮಿಸಿ’ ಎಂದು ಹೇಳಿದ್ದಾರೆ. ಆ ಮೂಲಕ ಆ ಅಧಿಕಾರಿ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮರಂಕಲ್ ಅವರು ಪತ್ರಕರ್ತ ಎನ್ನುವದಕ್ಕಿಂತ ಅವರೊಬ್ಬ ಎಲ್ಲರಂತೆ ಸಾಮಾನ್ಯ ಮನುಷ್ಯ. ಅಧಿಕಾರಿಗಳು ಅಮಾಯಕ ವ್ಯಕ್ತಿ ಮೇಲೆ ಹೀಗೆ ದಬ್ಬಾಳಿಕೆ ನಡೆಸುವುದು ಸರಿಯೆ?
ಪ್ರಶ್ನೆಗಳು : ಇದೇ ಅಧಿಕಾರಿಗಳು ತಮ್ಮ ಕರ್ತವ್ಯ ನಿಮಿತ್ತ ಪ್ರವಾಸದಲ್ಲಿದ್ದಾಗ ಬೇರೆ ಯಾರೇ ಅವರ ಮೇಲೆ ದಾಳಿ, ಹಲ್ಲೆಯಂತಹ ದುಷ್ಕೃತ್ಯಗಳಿಗೆ ಪ್ರಯತ್ನ ನಡೆಸಿದ್ದರೆ ಈ ವ್ಯವಸ್ಥೆ ಇದೇ ರೀತಿ ಪ್ರತಿಕ್ರಿಯಿಸುತ್ತಿತ್ತಾ..? ಕೆಲವೇ ಕ್ಷಣಗಳಲ್ಲಿ ಅಂತಹವರನ್ನು ಲಾಕಪ್ ನಲ್ಲಿ ಹಾಕಿ ಸಾಕಷ್ಟು ಹಿಂಸೆ ಕೊಟ್ಟು, ಕರ್ತವ್ಯಕ್ಕೆ ಅಡ್ಡಿ ಪಡಿಸಿದರು ಎಂದು ದೂರು ದಾಖಲಿಸಿ ಜೈಲಿಗೆ ಅಟ್ಟುತ್ತಿದ್ದರಲ್ಲವೆ..?
ಹಾಗಾದರೆ ಈಗ ಏಕೆ ಮೌನ?
ಪೊಲೀಸರಿಗೆ, ಅಧಿಕಾರಿಗಳಿಗೆ ರೌಡಿಗಳಂತೆ ವರ್ತಿಸಲು ಈ ದೇಶದ ಅದ್ಯಾವ ಕಾನೂನು ಅನುಮತಿ ನೀಡಿದೆ? ಪೊಲೀಸರು ಎಂದರೆ ಸರಕಾರ ನೇಮಿಸಿಕೊಂಡಿರುವ ರೌಡಿಗಳಾ?
ಮರಂಕಲ್ ಅವರು ಈ ಸಂಬಂಧ ಚುನಾವಣಾ ಆಯೋಗಕ್ಕೆ, ಮಾನವ ಹಕ್ಕುಗಳ ಆಯೋಗಗಳಿಗೆ ದೂರು ನೀಡಿದ್ದಾರೆ. ಆ ದೂರಿನ ಪ್ರತಿ ಇಲ್ಲಿದೆ.

To

Mr Kaushik Mukherji ,Chief Secretary, Karnataka

cs@karnataka.gov.in

** Mr Lalrokhuma Pachau

DGIGP, Karnataka

dgigp@ksp.gov.in

**The Secretary,

Press Council of India,

Soochna Bhavan, 8-C.G.O. Complex,

Lodhi Road, New Delhi-110003

secy-pci@nic.in

**IGP, Southern Range, Mysore

igpsr@ksp.gov.in

 

**Election commission of India

 Mr. V.S.Sampath

Chief Election Commissioner

 

vs.sampath@eci.gov.in

**Mr. H.S.Brahma

Election Commissioner

hs.brahma@eci.gov.in

**Dr. Nasim Zaidi

Election Commissioner

nasimzaidi@eci.gov.in

**Karnataka Chief electoral officer

Anil Kumar Jha

Chief Election Commissioner

Karnataka

ceo_karnataka@eci.gov.in

NHRC

 Secretary General

Chief Executive Officer of NHRC

sgnhrc@nic.in

Smt. Kanwaljit Deol, IPS

Director General (Investigation)

dg-nhrc@nic.in

**KARNATAKA STATE HUMAN RIGHTS COMMISSION

1st – 4th FLOORS, 5th PHASE, MULTISTOREYED BUILDING, BANGALORE-560 001

Phone: 080-22392200 Fax:080-22392200

E-Mail:  kshrc2007@gmail.com

 

9425013509

 

**POLL OBSERVER (Hassan)

Mr. Raghuveer CSMP IAS 1992 MP MP MP

Shrivastava

sraghu@ias.nic.in

 

**Police Observer (Hassan)

Dr. Ravi M.

muravi91ips@gmail.com

9841022921

** KUWJ Bangalore .

gangadharamudaliar@rediffmail.com

Dear Sir ,

Definitely a law abiding citizen will welcome all the strict measures initiated by the administration, particularly the Election Commission during the elections. But this does not provide with a freedom to the officials to behave rudely and act like goons with the  people.

On April 10, 2014 I was on an election coverage  tour in Hassan district and was travelling on Hassan-Belur highway to notice a group of people belonging to a particular political party and journalistic sense  and curiosity tempted me to take note of the situation and  know  what is transpiring at the spot . I got down from the car and was silently watching the argument of the political party workers and the elections officials led by one probationary IAS officer Ramachandran .

Suddenly without any provocation  officer pointing his fingers at me  shouted and said “Nadiyo Aache( singular term in Kannada asking one to  go away). I reacted to his  shouting and suggested the IAS officer to not behave in such a manner with the citizens. IAS officer  suddenly  asked the police officer ( A sub-inspector ) standing by his side to shove me away. PSI taking orders from the IAS officer started pushing me away and when I objected he manhandled me. Pointing at his dress the PSI shouted “ do you know this worthiness of his  dress” and held me by my shirt and bundled me  into a jeep .

At this juncture I revealed that I am a journalist and I was just watching the happenings at the spot . But the PSI never bothered or evinced any interest to check my identity and journalistic credentials . Though I tried to take out my Identity card and accreditation  card to show it to the officer, he had no patience to wait and badly man handled me.  Even a passer by  pointing at my white beard  suggested the police  officer to respect my age .  Nothing worked .

Another official on poll duty  intervened and  directed the PSI to release me as for  him my age mattered.  Even when PSI asked me to get down from the jeep, he dragged me   to free me on the road. Even my car driver who sensing the danger tried to intervene. But the officials shoved him away.  PSI, when I refused to board the jeep and  volunteered to come to the police station , he hit me twice on my chest with the elbow . Officer was shrewd  enough to show that he was not hitting and make one to believe that  he was only pushing with his elbow .

To be frank  any  frail man of my age( 56 years) would have  collapsed and  got admitted to hospital . As I am hale and healthy and physically fit  I   withstood his physical assault. As a responsible journalist working with a reputed newspaper despite being hit by the police officer I  avoided visiting hospital as there was nothing for me to pretend . To be honest today I  am receiving muscular  spasms  in my chest and back region mostly because of the officer’s hits.

For a moment I was forced to believe and ask myself  “Whether we are living in a police state and is it a democracy we have inherited after 65 years of freedom . As a journalist I am of the firm opinion that  this incident would have not happened to anybody whether he or she is a journalist or a law abiding  citizen. Police officer treated me like a criminal ( In a welfare state even criminal  also be dealt as per the law and not like this ) and he his behavior reminded me of scenes from Hindi movies where police official express their heroic mannerism  through illegal means and ways.

Sir I immediately briefed about this incident to Hassan DC who prompt enough to regret the incident, Hassan SP , Southern range IGP and an official working with the election observer . Later I reached the Belur police inspector’s office and lodged a written complaint . After filing the complaint I spoke to the ADGP(L&O ) M N Reddy  besides informing my office on the issue.

My sincere request to you all is such incidents should not recur in future. I  am neither seeking action against the officials for having   hang ups  of being a journalist of a reputed newspaper nor that stakes of  my status in the society  are in jeopardy . But the officers should be disciplined which will not only send a strong message to the  other officials of such mind set , it will also save  the innocent citizens from such harassments and humiliations. A strong action against these officials will send a right message across the society  and reinforce  peoples faith in democratic values and principles.   

I hope  the incident will be inquired and action will be initiated against the guilty .

With regards

Your sincerely

M B Maramkal

Chief Of Bureau

The Times Of India

Prince of Wales Road Near RTO office

Mysore -570 005

 

 

ಹಿಂದುತ್ವ ಮಾದರಿಯ ನವ ಉದಾರೀಕರಣ

– ಇಂಗ್ಲೀಷ್ ಮೂಲ : ವರ್ಗೀಸ್ ಕೆ.ಜಾರ್ಜ
– ಅನುವಾದ : ಬಿ.ಶ್ರೀಪಾದ ಭಟ್

‘ಯಾರು ಹಿಂದೂಗಳ ಪರವಾಗಿ ಮಾತನಾಡುತ್ತಾರೋ ಅವರೇ ಈ ದೇಶವನ್ನು ಆಳುತ್ತಾರೆ’ ಎಂಬ ಘೋಷಣೆ ಹಾಗೂ ಮೋದಿಯ  ಮೋದಿಯ ಮುಖಪುಟವನ್ನು ಹೊತ್ತಂತmodi_bjp_conclave ದೊಡ್ಡ ಭಿತ್ತಿಪತ್ರಗಳು 2007 ರಲ್ಲಿ ಗುಜರಾತ್ ನಲ್ಲಿ ರಾರಾಜಿಸುತ್ತಿದ್ದವು. ಈ ಭಿತ್ತಿಪತ್ರಗಳನ್ನು 2007ರ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ ಅದರ ಪಕ್ಷದ ಕಛೇರಿಯ ಮುಂದೆ ಪ್ರಚಾರಕ್ಕಾಗಿ ಅಂಟಿಸಲಾಗಿತ್ತು. 2012ರ ಮೂರನೇ ಗೆಲುವಲ್ಲ; 2007ರ ಗುಜರಾತ್ ವಿಧಾನ ಸಭಾ ಚುನಾವಣೆಯ ಎರಡನೇ ಗೆಲುವೇ ಮೋದಿ ಮಾದರಿಯ ಹಿಂದುತ್ವದ ಪಥಕ್ರಮಣದ ಮುನ್ನುಡಿಯಾಗಿತ್ತು. ಈ ಮುನ್ನುಡಿಯು ಮೂಲ ಹಿಂದುತ್ವದ ಮುಂದುವರೆದ ಅವತರಿಣಿಕೆಯಾಗಿತ್ತು. ರಾಜಕೀಯ ವ್ಯಾಖ್ಯಾನಕಾರರು ಇಂದಿನ 2014ರ ಚುನಾವಣೆಯ ಚರ್ಚೆಯನ್ನಾಗಿರಿಸಿಕೊಂಡಿರುವ ‘ಹಿಂದುತ್ವದ ಮೇಲೆ ಅಭಿವೃದ್ಧಿಯು ಮೇಲುಗೈ ಸಾಧಿಸಿದೆ’  ಎನ್ನುವ ಚಿಂತನೆ ಮತ್ತೇನಲ್ಲದೆ ಹಿಂದುತ್ವ 2.0 ಅಷ್ಟೇ. ಬಹುಪಾಲು ವ್ಯಾಖ್ಯಾನಕಾರರು ಮೋದಿ ಮಾದರಿಯ ರಾಜಕೀಯ ಎನ್ನುವುದು ಇದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈ ಮಾದರಿಯನ್ನು ಅರ್ಥ ಮಾಡಿಕೊಂಡಿಲ್ಲ. ಕಳೆದ ಕೆಲವು ವರ್ಷಗಳಿಂದ  ನರೇಂದ್ರ ಮೋದಿಯ ರಾಜಕೀಯ ಮಾತುಗಳು ಮತ್ತು ನಡೆಗಳನ್ನು ಗಮನಿಸಿದರೆ ಧಾರ್ಮಿಕ ರಾಷ್ಟ್ರೀಯತೆಯನ್ನು ಆರ್ಥಿಕ ಅಭಿವೃದ್ಧಿಯೊಂದಿಗೆ ಬೆರೆಸುವುದೇ ಈ ಹಿಂದುತ್ವ 2.0ರ ಹೊಸ ಸಿದ್ಧಾಂತ ಎಂಬ ಅಂಶ ತಿಳಿಯುತ್ತದೆ.

ಇಂಡಿಯಾದಲ್ಲಿ ಹಿಂದುತ್ವದ ಬಲಪಂಥೀಯ ಸಿದ್ಧಾಂತದ ಬೆಳವಣಿಗೆ ಕುಂಠಿತಗೊಳ್ಳುತ್ತಿರುವುದಕ್ಕೆ ಮೂರು ಪ್ರಮುಖ ಸಂಧಿಗ್ಧತೆಗಳು ಮುಖ್ಯ ಕಾರಣಗಳಾಗಿವೆ. ಮೊದಲನೆಯದು ಹಿಂದು ಸಂಪ್ರದಾಯವಾದಿಗಳು ಮತ್ತು ಮಧ್ಯಮವರ್ಗಗಳ ನಡುವಿನ ಕಂದಕ. ಹಿಂದೂ ಧರ್ಮದ ಶ್ರೇಣೀಕೃತ ಸಮಾಜದ ಜಾತಿ ಪದ್ಧತಿಯಲ್ಲಿ ಅಲ್ಪಸಂಖ್ಯಾತರಾದ ಮೇಲ್ಜಾತಿಗಳ ಅಧಿಕಾರವನ್ನು ಇಂದಿನ ಪ್ರಜಾಪ್ರಭುತ್ವದ ಗಟ್ಟಿಯಾದ ನೆಲೆಯಲ್ಲಿ ನಿರಂತರವಾಗಿ ವಿರೋಧಿಸುತ್ತಿರುವ ಬಹುಸಂಖ್ಯಾತ ತಳ ಸಮುದಾಯಗಳು. ಮೂರನೆಯದು ತನ್ನ ಇಂದಿನ ಸಂಘಟನೆಯನ್ನು ಬಿಜೆಪಿಯ ರಾಜಕೀಯದೊಂದಿಗೆ ಬೆರೆಸುವುದು ಹೇಗೆ ಎನ್ನುವ ಜಿಜ್ಞಾಸೆಯಲ್ಲಿರುವ ಆರೆಸ್ಸೆಸ್.

ಕಳೆದ ಕೆಲವು ವರ್ಷಗಳ ರಾಜಕೀಯವನ್ನು ಗಮನಿಸಿದರೆ ಬಿಜೆಪಿಯ ಬೆಳವಣಿಗೆ ಭೌಗೋಳಿಕವಾಗಿ ಅಲ್ಲಲ್ಲಿ ತೇಪೆ ಹಚ್ಚಿದಂತಿದ್ದರೆ, ಚುನಾವಣಾ ಸಂಧರ್ಭದಲ್ಲಿ ಒಂದು ಎಪಿಸೋಡಿನಂತಿದೆ. ಇಂಡಿಯಾದಲ್ಲಿನ ಹಿಂದೂ ರಾಷ್ಟ್ರೀಯತೆಯ ಇತಿಹಾಸವನ್ನು ಗಮನಿಸಿದಾಗ ರಾಜಕೀಯ ವಿಶ್ಲೇಷಕರು ಮೋದಿಯು ತನ್ನ ಹಿಂದಿನ ತಲೆಮಾರಿನ ನಾಯಕರಾದ ವಾಜಪೇಯಿ ಮತ್ತು ಅಡ್ವಾಣಿನಿಗಿಂತಲೂ ಭಿನ್ನವಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ವಾಜಪೇಯಿಯವರನ್ನು ನಾವು ಸೋಲಿಸಿದ್ದೇವೆ; ಇನ್ನು ಈ ಮೋದಿ ಯಾವ ರೀತಿಯಲ್ಲಿಯೂ ವಾಜಪೇಯಿಯವರಿಗೆ ಸಮಾನರಲ್ಲ’ ಎಂದು ಕಾಂಗ್ರೆಸ್ ಪಕ್ಷದ ಜೈರಾಮ್ ರಮೇಶ್ ಹೇಳುತ್ತಾರೆ.

ಇತಿಹಾಸವು ಭವಿಷ್ಯದ ಮುನ್ಸೂಚಿ ಎನ್ನುವುದೇನೋ ನಿಜ. ಆದರೆ ಮೊದಲನೇ ಬಾರಿ ಎನ್ನುವ ಸಂಗತಿಯೂ ಇರುತ್ತದೆ ಎಂಬ ಪಾಠವನ್ನೂ ನಮಗೆ ಇತಿಹಾಸವು middleclass-indiaಕಲಿಸುತ್ತದೆ. ಕಳೆದ ಒಂದು ದಶಕದಲ್ಲಿ ಗುಜರಾತ್ ನಲ್ಲಿ ಜರುಗಿದ ಈ ಹಿಂದುತ್ವ  2.0 ದ ಸಾಮಾಜಿಕ ಲ್ಯಾಬೋರೇಟರಿಯು ಮೇಲಿನ ಮೂರು ಸಂಧಿಗ್ಧತೆಗಳನ್ನು ಮೀರಲು ಸಹಕಾರಿಯಾಗುತ್ತದೆ ಎನ್ನುವುದು ಸಣ್ಣ ವಿಷಯವೇನಲ್ಲ. ಈ ಆಧುನಿಕತೆಯ ಅಭಿವೃದ್ಧಿ ಮತ್ತು ಹಿಂದುತ್ವದ ಸಂಪ್ರದಾಯವನ್ನು ಒಂದಕ್ಕೊಂದು ಬೆರಸುವುದರಲ್ಲಿ ಮೋದಿ ನಿಪುಣ. ಟಾಟಾ ಕಂಪನಿಯ ನ್ಯಾನೋ ಕಾರಿನ ಕಾರ್ಖಾನೆ ಪಶ್ಚಿಮ ಬಂಗಾಳದಿಂದ ಗುಜರಾತ್ ಗೆ ಸ್ಥಳಾಂತರಗೊಂಡಾಗ ಮೋದಿಯು ಇದನ್ನು ಕ್ರಷ್ಣ ಪರಮಾತ್ಮನು ಉತ್ತರ ಪ್ರದೇಶದ ಮುಥುರಾದಲ್ಲಿ ಹುಟ್ಟಿ ದ್ವಾರಕೆಯಲ್ಲಿ ಬೆಳೆದದ್ದಕ್ಕೆ ಹೋಲಿಸಿದ್ದರು.

ಒಂದು ದಶಕದ ಹಿಂದೆ ಸಂಘಪರಿವಾರವು ವಾಜಪೇಯಿಯವರ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯನ್ನು ತೀವ್ರವಾಗಿ ವಿರೋಧಿಸಿತ್ತು. ಇದಕ್ಕಾಗಿ ತನ್ನ ಅಂಗ ಸಂಸ್ಥೆ ಸ್ವದೇಶಿ ಜಾಗರಣ ಮಂಚವನ್ನು ಬಳಸಿಕೊಂಡಿತ್ತು. ಆದರೆ ಮೋದಿಯು ಈ ಸ್ವದೇಶಿ ಜಾಗರಣ ಮಂಚವನ್ನು ಗುಜರಾತ್ ರಾಜ್ಯದಿಂದಲೇ ಓಡಿಸಿಬಿಟ್ಟರು. ಬಲಪಂಥೀಯರ ಬಂಡವಾಳಶಾಹಿ ವಿರೋಧಿ ಧ್ವನಿಯು ಇಂದು ಕಾಣಿಸುತ್ತಿಲ್ಲ ಮತ್ತು ಕೇಳಿಸುತ್ತಿಲ್ಲ. ಆದರೆ ಸಾಂಪ್ರದಾಯಿಕತೆಯನ್ನು ಬಿಟ್ಟುಕೊಟ್ಟಿಲ್ಲ. ಎಪ್ರಿಲ್ ೨ ರಂದು ತನ್ನ ಬಿಹಾರಿನ ಚುನಾವಣಾ ಭಾಷಣದಲ್ಲಿ ಈ ಜನ್ಮಭೂಮಿಯು ಗೋವುಗಳನ್ನು ಪೂಜಿಸುವವರ ದೇಶ. ಹಾಗಾಗಿ ಗೋವು ಹತ್ಯೆ ಮಾಡುವವರನ್ನು ನೀವು ಹೇಗೆ ಬೆಂಬಲಿಸುತ್ತೀರಿ? ಎಂದು ಮೋದಿಯು ಸಭಿಕರನ್ನು ಪ್ರಶ್ನಿಸುತ್ತಾರೆ. ಆ ಮೂಲಕ ಕಳೆದ ಒಂದು ಶತಮಾನದ ಹಿಂದುತ್ವ ರಾಜಕೀಯದ ಫೇವರಿಟ್ ವಿಷಯವನ್ನು ಮರಳಿ ಎತ್ತಿಕೊಂಡು ಪ್ರಚೋದಿಸುತ್ತಾರೆ.

ಮತ್ತೊಂದೆಡೆ ಮೋದಿಯ ಹಿಂದುಳಿದ ವರ್ಗದ ಹಿನ್ನೆಲೆಯು ತಳ ಸಮುದಾಯಗಳು ಈ ಹಿಂದುತ್ವದ ಕುರಿತಾದ ಗುಮಾನಿಗಳನ್ನು ಕಳಚಿಕೊಳ್ಳಲು ಸಹಾಯ ಮಾಡುತ್ತಿದೆ. ರಾಜಕೀಯ ಪಕ್ಷವೊಂದು ತನ್ನ ಮಾತೃಪಕ್ಷದ ಸಿದ್ಧಾಂತ ಮತ್ತು ನಿಯಂತ್ರಣಕ್ಕೆ ಆದ್ಯತೆ ಕೊಡಬೇಕೆ ಅಥವಾ ಹೊಂದಾಣಿಕೆ ಮತ್ತು ಮುಕ್ತ ತತ್ವಗಳಿಗೆ ದಾರಿ ಮಾಡಿಕೊಡಬೇಕೆ ಎನ್ನುವ ಜಿಜ್ಞಾಸೆ ಸಂಘ ಪರಿವಾರದಲ್ಲಿ ಕಳೆದ ದಶಕದಿಂದಲೂ ನಡೆಯುತ್ತಿದೆ. 2009ರಲ್ಲಿನ ಸೋಲಿನ ನಂತರ ಈ ವಿಷಯಗಳು ಮತ್ತೆ ಚರ್ಚೆಗೆ ಬಂದವು. ಅರುಣ್ ಜೇಟ್ಲಿಯಂತವರು ಎರಡನೆಯದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕೆಂದು ವಾದಿಸುತ್ತಿದ್ದಾರೆ. ಸ್ವತಃ ಮೋದಿಯೇ 2012ರವರೆಗೂ ಅನೇಕ ಬಾರಿ ತನ್ನ ಮಾತೃಪಕ್ಷ ಆರೆಸ್ಸೆಸ್ ನ ಹುಕುಂಗಳನ್ನು ಉಲ್ಲಂಘಿಸಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ತನ್ನದೇ ನೆಲೆಗಟ್ಟನ್ನು ಕಂಡುಕೊಳ್ಳಲು ಸೋತಿದ್ದ ಬಿಜೆಪಿ ಪಕ್ಷವು ದಯನೀಯವಾಗಿ ಆರೆಸ್ಸೆಸ್ ಗೆ ಶರಣಾಗತವಾಯಿತು. ಹಳೆ ತಲೆಮಾರಿನವರು ಇಂದಿಗೂ ಸಂಘ ಪರಿವಾರದಲ್ಲಿ ಪ್ರಾಮುಖ್ಯತೆ ಹೊಂದಿದ್ದಾರೆ ಎಂದು ಪರಸ್ಪರ ಮೋಸಗೊಳಿಸುವ ವಿಚಿತ್ರವಾದ ಹೊಂದಾಣಿಕೆ ಸಧ್ಯಕ್ಕೆ ಈ ಆರೆಸಸ್-ಬಿಜೆಪಿಯ ನಡುವೆ ಏರ್ಪಟ್ಟಿದೆ.ಆದರೆ ಇವರಿಬ್ಬರೂ ಮಾಡುತ್ತಿರುವ ಏಕೈಕ ಕೆಲಸವೆಂದರೆ ಮೋದಿಯನ್ನು ಪೈಪೋಟಿಯಲ್ಲಿ ಓಲೈಸುವುದು.

ಆರೆಸ್ಸೆಸ್ ನ ಸಂಚಾಲಕ ರಾಮ ಮಾಧವ ಅವರು “ಇಲ್ಲಿ ಎರಡು ವಿಷಯಗಳಲ್ಲಿ ನಮ್ಮಲ್ಲಿ ಸಹಭಾಗಿತ್ವವಿದೆ. ಮೊದಲನೆಯದು ನಾವೆಲ್ಲರೂ ನಂಬಿರುವ, ಒಪ್ಪಿರುವ narender_modi_rssನಮ್ಮ ಹಿಂದುತ್ವದ ಸಿದ್ಧಾಂತ. ಎರಡನೆಯದು ಮಾನವ ಸಂಪನ್ಮೂಲವನ್ನು ಹಂಚಿಕೊಳ್ಳುವುದು. ಈ ಎರಡೂ ವಿಷಯಗಳಲ್ಲಿಯೂ ಆರೆಸಸ್ ಮತ್ತು ಬಿಜೆಪಿಯ ನಡುವೆ ಮೊದಲಿನಿಂದಲೂ ಇರುವ ಸೌಹಾರ್ದಯುತವಾದ ಮತ್ತು ಸಾಂಪ್ರದಾಯಿಕವಾದ ಸಂಬಂಧಗಳನ್ನು ಮುಂದುವರೆಸುತ್ತೇವೆ.” ಎಂದು ಹೇಳುತ್ತಾರೆ. ಮೋದಿಯನ್ನು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಏಕೈಕ ನಾಯಕನೆಂದು ಬಿಂಬಿಸುವುದರ ಅಗತ್ಯತೆಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ “ಆರೆಸಸ್ ಒಬ್ಬ ವ್ಯಕ್ತಿಯನ್ನು ನಾಯಕನನ್ನಾಗಿ ಬಿಂಬಿಸಲು ಎಂದಿಗೂ ವಿರೋಧಿಸುವುದಿಲ್ಲ. ನಿಜಕ್ಕೂ ಹೇಳಬೇಕೆಂದರೆ ಅದು ಇಂದು ಅಗತ್ಯವಾಗಿದೆ. 2009ರ ನಮ್ಮ ’ಅಡ್ವಾಣಿ ನಮ್ಮ ಪ್ರಧಾನ ಮಂತ್ರಿ’ ಸ್ಲೋಗನ್ ಅನ್ನು ಜನ ಮರೆತಿದ್ದಾರೆ.  ಹೀಗಾಗಿ ಮೋದಿಯವರ ಏಕೈಕ ನಾಯಕನೆಂದು ಓಲೈಸುವುದರಲ್ಲಿ ಅಂತಹ ಅಭೂತಪೂರ್ವವಾದದ್ದೇನು ಇಲ್ಲ” ಎಂದು ವಿವರಿಸಿದರು. ಇಂದು ಮೋದಿಯ ವ್ಹಿಪ್ ಅನ್ನು ಈಡೇರಿಸಲು ಆರೆಸಸ್ ತನ್ನ ವ್ಹಿಪ್ ಅನ್ನು ಬಳಸುತ್ತಿದೆ.

ಆರ್ಥಿಕ ಸುಧಾರಣೆಯ ಸಂಬಂಧದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಕೆಲವು ಸಾಮ್ಯತೆಗಳಿದ್ದರೂ ಅನೇಕ ಭಿನ್ನತೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಹಿಂದೂಗಳ ಒಳಗೊಳ್ಳುವಿಕೆಯೇ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯ ಮೂಲ ಉದ್ದೇಶವಾಗಿರಬೇಕೆಂಬುದು ಹಿಂದುತ್ವ 2.0ದ ಮೂಲಭೂತ ಆಶಯ. ಇಂದಿನ ಗುಜರಾತ್ ರಾಜ್ಯ ಸರಕಾರವು ಮುಸ್ಲಿಂಮರಿಗೆ ಸ್ಕಾಲರ್ಶಿಪ್ ಸೌಲಭ್ಯವನ್ನು ವಿರೋಧಿಸಿ ಸುಪ್ರೀಂ ಕೋರ್ಟನಲ್ಲಿ ಕೇಸ್ ನಡೆಸುತ್ತಿದೆ. ಬಡವರಿಗಾಗಿ ಹಮ್ಮಿಕೊಳ್ಳಲಾಗುವ ಕಲ್ಯಾಣ ಕಾರ್ಯಕ್ರಮಗಳನ್ನು ಒಂದು ವ್ಯರ್ಥವಾದ, ಹಣ ಪೋಲು ಮಾಡುವ ಕಾರ್ಯಕ್ರಮವೆಂದು ಮೋದಿ ಖಂಡಿಸಿದ್ದಾರೆ.  ‘ಆಹಾರ ಭದ್ರತೆ ಕಾಯ್ದೆ’ಯನ್ನು ಕೇವಲ ಒಂದು ಕಾಗದದ ತುಂಡು ಮಾತ್ರ ಎಂದು ಟೀಕಿಸಿದ್ದಾರೆ. ಅಲ್ಲದೆ  ಕೊಳ್ಳುಬಾಕುತನದ ಆರ್ಥಿಕ ಅಭಿವೃದ್ಧಿಯ ಜೊತೆ ಜೊತೆಗೆ ಹಿಂದೂಗಳ ಅಭಿವೃದ್ಧಿಯೂ ಸಹ ಆದ್ಯತೆಯಾಗಿ ಪರಿಗಣಿತವಾಗಿದೆ.

ಮೋದಿಯ ಹೇಳಿಕೆಗಳನ್ನು Deconstruct ಮಾಡಬಯಸುವವರು ಕೆಲವು ಸಾದೃಶ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ. ಮೋದಿಗಾಗಿ ‘ಗುಜರಾತ್  2002’ ಅನ್ನು cut off point ಆಗಿ ಪರಿಗಣಿಸುತ್ತಾರೆ. ಎಲ್ಲಾ ಹೋಲಿಕೆಗಳನ್ನು 2002ರ ಮುಂಚೆ ಮತ್ತು ನಂತರ ಎಂದು ಚರ್ಚಿಸಲಾಗುತ್ತದೆ. “2002 ರ ಮುಂಚೆ ಇಷ್ಟೊಂದು ಶಾಲೆಗಳು, ಇಷ್ಟೊಂದು ನೀರಾವರಿ ಯೋಜನೆಗಳು; 2002ರ ನಂತರ ಎಷ್ಟೊಂದು ಶಾಲೆಗಳು ಹಾಗೂ ಇನ್ನೂ ಎಷ್ಟೊಂದು ಯೋಜನೆಗಳು.” ಹಾಗೆಯೇ ಕೋಮು ಗಲಭೆಗಳು ಸಹ. “2002ರ ಮುಂಚೆ ಎಷ್ಟೊಂದು ಕೋಮು ಗಲಭೆಗಳು; 2002ರ ನಂತರ ಒಂದೂ ಕೋಮು ಗಲಭೆಗಳಿಲ್ಲ.”

ಆಮೆ ವೇಗದ ಆರ್ಥಿಕ ಪ್ರಗತಿಯನ್ನು ‘ಹಿಂದೂ ಮಾದರಿಯ ಪ್ರಗತಿ’ ಎನ್ನುವ ಅಪಹಾಸ್ಯಕ್ಕೆ ವ್ಯತಿರಿಕ್ತವಾಗಿ ಹಿಂದೂ ಪ್ರತಿಪಾದನೆ, ಕೊಳ್ಳು ಬಾಕುತನದ ಉತ್ಕರ್ಷ, ಆರ್ಥಿಕ ಅಭಿವೃದ್ಧಿ ಎನ್ನುವ ಅಂಶಗಳು ಹಿಂದುತ್ವದ ಬೆಳವಣಿಗೆಯ ದಿಕ್ಸೂಚಿ ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ‘ಹಿಂದೂ ಪುಕ್ಕಲುತನ’ ಎನ್ನುವ ಅಪಮಾನದ ಸ್ಥಿತಿಗೆ ಈ ದೇಶವೆಲ್ಲಿ ಮರಳುತ್ತೇವೆಯೋ ಎನ್ನುವ ಆತಂಕ ಇಂಡಿಯಾದ ಮಧ್ಯಮವರ್ಗಗಳಲ್ಲಿ ಮನೆಮಾಡಿದೆ. ಈ ಆತಂಕವನ್ನು ಮೀರುವ ಪ್ರಕ್ರಿಯೆಯೇ ಹಿಂದುತ್ವ 2.0ದ ಹುಟ್ಟಿಗೆ ಕಾರಣವಾಗಿದೆ.

 ಹಿಂದುತ್ವ 2.0 ದ ಸಹಾಯದಿಂದ ತನ್ನೆಲ್ಲ ದೌರ್ಬಲ್ಯಗಳನ್ನು ಮೀರಿ ಬೆಳೆಯಲು ಹಿಂದೂ ರಾಷ್ಟ್ರೀಯವಾದಿ ರಾಜಕಾರಣವು ತವಕಿಸುತ್ತಿದೆ.

( ಕೃಪೆ : ದ ಹಿಂದೂ, 4,ಎಪ್ರಿಲ್, 2014)