ಕಬೀರ್ ಹತ್ಯೆ: ಪ್ರಶ್ನೆಗಳಿರುವುದು ಪೊಲೀಸರಿಗೆ!

ಕಬೀರ್

– ಸತ್ಯ, ಶೃಂಗೇರಿ

ದನ ಸಾಗಿಸುತ್ತಿದ್ದ ವಾಹನದಲ್ಲಿದ್ದ ಕಬೀರ್ ನಕ್ಸಲ್ ನಿಗ್ರಹ ಪಡೆಯ ಗುಂಡು ತಗುಲಿ ಅಸುನೀಗಿದ್ದಾನೆ. ಅದು ಕೊಲೆ. ನಕ್ಸಲ್ ನಿಗ್ರಹ ಪಡೆ ಅಂತ ರೂಪಿಸಿ ಅಧಿಕಾರಿಗಳ ಕೈಗೆ ಗನ್ ಕೊಟ್ಟು ಅಮಾಯಕರನ್ನು ಹಿಡಿದು ಅವರ ಎದೆಗೆ ಗುಂಡಿಕ್ಕಿ ಎಂದು ಅಲ್ಲಿಗೆ ಕಳುಹಿಸಿದೆಯೇ ಸರಕಾರ? ಸರಕಾರಕ್ಕೆ, ಮುಖ್ಯಮಂತ್ರಿಗೆ, ಗೃಹಮಂತ್ರಿಗೆ ಕಲ್ಯಾಣ ರಾಜ್ಯದ ಕನಿಷ್ಟ ಪ್ರಜ್ಞೆ ಇದ್ರೆ ಮುಲಾಜಿಲ್ಲದೆ ಈ ಹೊತ್ತಿಗೆ ಗುಂಡು ಹೊಡೆದ ಸಿಬ್ಬಂದಿ ವಿರುದ್ಧ ಕೊಲೆ ಕೇಸು ದಾಖಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಿತ್ತು. ಅವರಲ್ಲಿ ಅಂತಹದೊಂದು ಪ್ರಜ್ಞೆ ಕಾಣುತ್ತಿಲ್ಲ.

ಕಬೀರ್ ತನ್ನ ಇತರ ಗೆಳೆಯರೊಂದಿಗೆ ತನಿಕೋಡು ಚೆಕ್ ಪೋಸ್ಟ್ ಗೆ ಬಂದಾಗ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ (ಅದು ಅರಣ್ಯ ಇಲಾಖೆಯ ಚೆಕ್ ಪೋಸ್ಟ್) ವಾಹನ ತಡೆದಿದ್ದಾರೆ. ಅವರು ತಡೆಯುವ ಅಗತ್ಯವೇನಿಲ್ಲ, ಗೇಟು ಇರುವ ಕಾರಣ ಯಾರೇ ಹೋಗುವವರಿದ್ದರೂ ನಿಲ್ಲಿಸಲೇಬೇಕು. ಅಂತಹವರ ಮೇಲೆ ಸಿಬ್ಬಂದಿ ಗುಂಡು ಹಾರಿಸಿ ಒಬ್ಬ ಹುಡುಗನನ್ನು ಸಾಯಿಸಿದ್ದಾರೆ. ಈಗ ಪೊಲೀಸ್ ಅಧಿಕಾರಿಗಳು ಹೇಳುವ ಕತೆಯೇನೆಂದರೆ…

 

– ಆ ಪ್ರದೇಶದಲ್ಲಿ ನಕ್ಸಲರು ದಾಳಿ ನಡೆಸುವ ಸೂಚನೆ ಇತ್ತು. ಆ ಕಾರಣಕ್ಕೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು. ಮೊದಲು ಬಂದ ಸೂಚನೆ ಪ್ರಕಾರ ನಕ್ಸಲರು ಅದೇ ಚೆಕ್ ಪೋಸ್ಟ್ ಮೇಲೆ ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸುವವರಿದ್ದರು. ಆ ನಂತರದ ಬಂದ ಮಾಹಿತಿ ಎಂದರೆ ಚುನಾವಣೆ ನಂತರ ಪೊಲೀಸರ ಪಡೆ ಕಡಿಮೆಯಾಗಿರುತ್ತದೆ ಎಂಬ ಲೆಕ್ಕಾಚಾರದಲ್ಲಿ ಚುನಾವಣೆ ನಂತರ ದಾಳಿ ಮಾಡಲು ಸಂಚು ರೂಪಿಸಿದ್ದರು.

– ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದರು. ದನ ಸಾಗಿಸುವ ವಾಹನ ಬಂದು ನಿಂತಾಕ್ಷಣ ಸಹಜವಾಗಿ ಅವರು ವಿಚಾರಿಸಿದರು. ಆದರೆ ಕೆಲವೇ ಕ್ಷಣಗಳಲ್ಲಿ, ವಾಹನದಿಂದ ಇಳಿದವರು ಅಲ್ಲಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಿ ಓಡಿಹೋಗಲು ಪ್ರಯತ್ನಿಸಿದರು. ಅವರ ವರ್ತನೆಯಿಂದ ಗಾಬರಿಗೊಂಡ ಸಿಬ್ಬಂದಿ, ಇವರು ನಕ್ಸಲರೇ ಇರಬೇಕು. ಹೀಗೆ ಓಡಿ ಹೋಗಿ ಚೆಕ್ ಪೋಸ್ಟ್ ಸುತ್ತ ಕವರ್ ಮಾಡಿ ದಾಳಿ ಮಾಡಬಹುದು ಎಂದು ಭಾವಿಸಿ ಗುಂಡು ಹಾರಿಸಿದರು. ದಾಳಿಯಲ್ಲಿ ಒಬ್ಬ ಹುಡುಗ ಸತ್ತ. ಇನ್ನೊಬ್ಬ ವಾಹನದ ಹಿಂಬದಿ ಕುಳಿತಿದ್ದ. ಅವನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು. ಉಳಿದ ಮೂವರು ಅಲ್ಲಿಂದ ಓಡಿ ಹೋದರು.

ನಕ್ಸಲರ ದಾಳಿ ಬಗ್ಗೆ ಮಾಹಿತಿ ಇತ್ತು ಎನ್ನುವುದು ಪೊಲೀಸರ ಹೇಳಿಕೆ. ಈ ಹೇಳಿಕೆಗೆ ಯಾವ ಪುರಾವೆಗಳೂ ಸಿಗುವುದಿಲ್ಲ. ಇಂತಹ ಮಾಹಿತಿಗಳನ್ನು ಪೊಲೀಸರು ತಮ್ಮ ಸಂಬರ್ಭಕ್ಕನುಗುಣವಾಗಿ ಸೃಷ್ಟಿಸುವ ಮಟ್ಟಿಗೆ ಚಾಣಾಕ್ಷರು ಎಂಬುದರ ಬಗ್ಗೆ ಯಾರಿಗೂ ಸಂಶಯ ಬೇಡ. ಓಡಿಹೋಗುವವರಿಗೆ ಗುಂಡು ಹೊಡೆದೆವು ಎನ್ನುತ್ತಾರಲ್ಲ ಪೊಲೀಸರು, ಅವರು ಯಾರ ಕಿವಿ ಮೇಲೆ ಹೂ ಇಡಲು ಹೊರಟಿದ್ದಾರೆ? ಬೇಕಿದ್ದರೆ, ಅವರ ಮಂತ್ರಿ ಕೆ.ಜೆ. ಜಾರ್ಜ್ ಕಿವಿ ಮೇಲೆ ಇಡಲಿ, ಆ ಮನುಷ್ಯ ನಂಬ ಬಹುದೇನೋ? ಓಡಿ ಹೋಗುವವರಿಗೆ ಗುಂಡು ಹೊಡೆಯುವುದಾದರೆ ಅದು ನೇರವಾಗಿ ಎದೆಗೆ ಬೀಳಲು ಹೇಗೆ ಸಾಧ್ಯ?

ಒಂದು ಖ್ಯಾತ ಸುದ್ದಿ ವಾಹಿನಿಯವರು ಈ ಪ್ರಕರಣವನ್ನು ಸುದ್ದಿ ಮಾಡುವಾಗ “ನಕ್ಸಲರು ಅಲ್ಲದಿದ್ದರೆ, ಅವರೇಕೆ ಓಡಿಹೋದರು..?” ಎಂಬ ಪ್ರಶ್ನೆಯನ್ನು ಕೇಳಿದರು. ಇದು, “ನೀವು ಕಳ್ಳರಲ್ಲದಿದ್ರೆ, ನಿಮ್ಮನ್ನು ಅಟ್ಟಿಸಿಕೊಂಡು ಬಂದ ನಾಯಿಯನ್ನು ಕಂಡು ಏಕೆ ಓಡಿದಿರಿ” ಎಂಬ ಧಾಟಿಯಲ್ಲಿ ಕೇಳಿದಂತೆ. ತನ್ನ ಸಹಚರರಿಗೆ ಏಕಾಏಕಿ ಗುಂಡು ಹೊಡೆದು ಸಾಯಿಸುತ್ತಿದ್ದರೆ, ಅಲ್ಲಿ ಇರಬೇಕಿತ್ತು ಎಂದು ಬಯಸುತ್ತಾರಲ್ಲ, ಇವರೆಲ್ಲಾ ಸಾಮಾನ್ಯ ಪ್ರಜ್ಞೆಯನ್ನು ಎಲ್ಲಿ ಮಾರಿಕೊಂಡರು?

ಪೊಲೀಸ್ ಅಧಿಕಾರಿಗಳು ಒಪ್ಪಿಕೊಳ್ಳುವಂತೆ, ಎಎನ್ಎಫ್ ಸಿಬ್ಬಂದಿಯ ತಪ್ಪು ಗ್ರಹಿಕೆಯಿಂದ ಈ ಪ್ರಕರಣ ನಡೆದಿದೆ. ತಪ್ಪು ಗ್ರಹಿಕೆ ಎಂದು ಒಪ್ಪಿಕೊಳ್ಳುವುದಾರೆ ಮತ್ತು ಆ ತಪ್ಪಿಗೆ 5 ಲಕ್ಷ ರೂಗಳ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಿ ಸಾಂತ್ವನ ಹೇಳುವುದಾರೆ, ಎಎನ್ಎಫ್ ಸಿಬ್ಬಂದಿ ವಿರುದ್ಧ ಇರುವರೆಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ಏಕೆ ದಾಖಲಾಗಿಲ್ಲ? ಸರಕಾರದ ಬಂದೂಕು ಎಂದರೆ, ಯಾರನ್ನಾದರೂ ಅನುಮಾನದ ಮೇಲೆ ಕೊಂದು ಶಿಕ್ಷೆ ತಪ್ಪಿಸಿಕೊಳ್ಳಬಹುದೇ? ಪೊಲೀಸರನ್ನು ಹಾಗಾದರೆ ಸರಕಾರ ಪ್ರಾಯೋಜಿತ ಗುಂಡಾಗಳೆಂದು ಕರೆಯಬೇಕೆ?

ಇನ್ನೂ ಘೋರ ಘಟನೆ ಎಂದರೆ, ಸಾವನ್ನಪ್ಪಿದ ಕಬೀರ್ ಕುಟುಂಬದವರು ಶೃಂಗೇರಿಗೆ ಹೋದಾಗ, ಅಲ್ಲಿಯ ಬಜರಂಗದಳ ಹುಡುಗರು ಅವರ ಮೇಲೆ ಹಲ್ಲೆ ನಡೆಸಿದ್ದು! ಅದೂ ಪೊಲೀಸರ ಎದುರೇ. ಮಗನನ್ನು ಕಳೆದುಕೊಂಡ ದು:ಖದಲ್ಲಿರುವವರಿಗೆ ಸಾಂತ್ವನ ಹೇಳುವುದು ಮನುಷತ್ವ. ಆದರೆ, ಅಂತಹವರಿಗೆ ಕಲ್ಲು ಹೊಡೆಯುವುದು, ಹೀಯಾಳಿಸುವುದು, ಹೊಡೆಯುವುದು, ಅವರ ವಾಹನ ಪುಡಿ-ಪುಡಿ ಮಾಡುವುದನ್ನು ಏನೆಂದು ಅಥೈಸಬೇಕು? ಇವರು ದನದ ವ್ಯಾಪಾರದಲ್ಲಿರುವವರು ಎಂಬ ಕಾರಣಕ್ಕೆ ಅವರ ಮೇಲೆ ಇಂತಹ ಹಲ್ಲೆ ನಡೆದಿದೆ. ಆ ಮೂಲಕ ಪೊಲೀಸರ ಹತ್ಯೆಯನ್ನು ಈ ಬಜರಂಗದಳ ಸಮರ್ಥಿಸುತ್ತದೆ!

ಪೊಲೀಸರ ಹತ್ಯೆ ಮತ್ತು ಬಜರಂಗದಳದವರ ಕೃತ್ಯಗಳಲ್ಲಿ ಢಾಳಾಗಿ ಕಾಣಿಸುವುದು ಮುಸ್ಲಿಮರನ್ನು ಈ ವ್ಯವಸ್ಥೆ ಹಾಗೂ ಕೋಮುವಾದಿ ಮನಸುಗಳು ಕಾಣುವ ಬಗೆ. ಇಂತಹ ಘಟನೆಗಳು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಅನಾಥ ಪ್ರಜ್ಞೆ ಮೂಡಿಸಿದರೆ ಅಚ್ಚರಿಯೇನಿಲ್ಲ. ಈ ಭಾವನೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗದೇ ಹೋಗುವವರು ಹೆಚ್ಚೆಚ್ಚು ಸಂಘಟಿತರಾಗಲು ಆ ಮೂಲಕ ರಕ್ಷಣೆ ಪಡೆಯಲು ಮೂಲಭೂತವಾದದ ಕಡೆಗೆ ಮುಖ ಮಾಡಬಹುದು. ಆ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸಲು, ಬಹುಸಂಖ್ಯಾತ ವರ್ಗದ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸುವಾಗ ಅನುಸರಿಸುವ ಮಾನದಂಡವನ್ನೇ ಅನುಸರಿಸುವುದು ಅಷ್ಟು ಸರಿ ಅಲ್ಲವೇನೋ ಎನಿಸುತ್ತದೆ.

20 thoughts on “ಕಬೀರ್ ಹತ್ಯೆ: ಪ್ರಶ್ನೆಗಳಿರುವುದು ಪೊಲೀಸರಿಗೆ!

 1. hariharbhat

  ಈ ಲೇಖನ ಸಮನ್ವಯತೆ ಹೊಂದಿಲ್ಲ, ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ವಿಭಜತೆಯ ದೃಷ್ಟಿಕೋನ ಹೊಂದಿದೆ. ದೇಶದಲ್ಲಿ ಎಲ್ಲರಿಗೂ ಅನ್ವಯವಾಗುವಂತೆ ಒಂದೇ ಕಾನೂನನ್ನು ದೇಶದ ಹಿತದೃಷ್ಟಿಯಿಂದ ಜಾರಿಗೊಳಿಸಬೇಕು.

  ಮತವನ್ನು, ವೋಟ್ ನ್ನು ಗಮನದಲ್ಲಿಟ್ಟು ಕಾನೂನು ಮಾಡುವದನ್ನು ನಿಲ್ಲಿಸಬೇಕು. ನಮ್ಮಲ್ಲಿ ಎಲ್ಲ ಮತ ಪಂಥಗಳಲ್ಲಿ ಸಾರ್ವಜನಿಕವಾಗಿ ಸರ್ವರೂ ಒಪ್ಪುವಂತಹ ಮುಂದಾಳು (statesmen) ಇದ್ದಾರೆ ಅವರ ಸಲಹೆ ಸರಕಾರ ಪಡೆದು , ನ್ಯಾಯಾಲಯ ನೀಡುವ ಸಲಹೆಗಳಂತೆ ಕಾನೂನು ಮಾಡುವ ಪದ್ಧತಿ ಬರಬೇಕು. ಇಲ್ಲದಿದ್ದರೆ ಮನೆಯಿಂದ ಆಚೆ ಹೋದವರು ಮನೆಗೆ ಪುನಃ ಬರುತ್ತಾರೆಂಬ ವಿಶ್ವಾಸವನ್ನು ನಾವೆಲ್ಲಾ ಕಳೆದುಕೊಳ್ಳುವ ದಿನಗಳು ಬಂದಾವು.

  ನಾನೊಬ್ಬನೇ , ನಾವಷ್ಟೇ ಈ ಜಗತ್ತಿನಲ್ಲಿ ಬದುಕಬೇಕೆಂಬ ನಿಲುವು ಮತ ಪಂಥಗಳೀಗೂ ಮತ್ತು ಅವುಗಳ ಅನುಸರಿಸುವವರಿಗೂ ಹಾನಿಕಾರಕವೇ ವಿನಃ ಒಳ್ಳೆಯ ಜೀವನ ನೀಡಲು ಸಾಧ್ಯವಿಲ್ಲ.

  Reply
 2. Anand Prasad

  ನಕ್ಸಲ್ ನಿಗ್ರಹ ದಳದ ಪೊಲೀಸರು ಮಾಡಿದ್ದು ಅಪ್ಪಟ ಕೊಲೆ ಎಂಬುದರಲ್ಲಿ ಸಂದೇಹವಿಲ್ಲ ಏಕೆಂದರೆ ಇಲ್ಲಿ ಅವರಿಂದ ಹತ್ಯೆಯಾದ ಕಬೀರನ ಕೈಯಲ್ಲಿ ಅಥವಾ ಅವನ ಜೊತೆಗಾರರ ಕೈಯಲ್ಲಿ ಯಾವುದೇ ಆಯುಧ ಇರಲಿಲ್ಲ. ಹೀಗಿರುವಾಗ ನಿರಾಯುಧ ವ್ಯಕ್ತಿಗಳು ಬಂದೂಕು ಹಿಡಿದ ನಕ್ಸಲ್ ನಿಗ್ರಹ ದಳದ ಮೇಲೆ ಧಾಳಿ ಮಾಡಿ ಓಡಿ ಹೋಗಲು ಪ್ರಯತ್ನಿಸಿದ್ದಾರೆ ಎಂಬುದು ಮೇಲ್ನೋಟಕ್ಕೇ ಸುಳ್ಳು ಎಂಬುದು ಕಂಡುಬರುತ್ತದೆ. ದನ ಸಾಗಾಟ ಮಾಡುವವರು ನಕ್ಸಲರೆಂದು ನಿರ್ಣಯಿಸುವ ಪೋಲೀಸರ ತಲೆಯಲ್ಲಿ ಮೆದುಳು ಇದೆಯೋ ಅಥವಾ ಬರೀ ಸೆಗಣಿ ತುಂಬಿದೆಯೋ? ಇಂಥ ಪೆದ್ದಗುಂಡ ಪೋಲೀಸರನ್ನು ನಕ್ಸಲ್ ನಿಗ್ರಹ ದಳಕ್ಕೆ ನೇಮಕ ಮಾಡಿದ ಮೇಲಧಿಕಾರಿಗಳಿಗೆ ನೋಬೆಲ್ ಬಹುಮಾನ ಕೊಟ್ಟರೂ ಕಡಿಮೆಯೇ. ನಿರಾಯುಧ ವ್ಯಕ್ತಿಯ ಮೇಲೆ ಆತ ಓಡಿಹೋದ ಎಂಬ ಕಾರಣಕ್ಕೆ ಎದೆಗೆ ಗುಂಡು ಹಾರಿಸುವ ಆಗತ್ಯ ಇರಲಿಲ್ಲ, ಕಾಲಿಗೆ ಗುಂಡು ಹಾರಿಸಿದರೆ ಸಾಕಿತ್ತು. ಒಬ್ಬ ವ್ಯಕ್ತಿ ದನ ಸಾಗಾಟ ಮಾಡಿದ ಎಂಬ ಕಾರಣಕ್ಕೆ ಆತನಿಗೆ ಮರಣದಂಡನೆ ವಿಧಿಸುವ ಅಧಿಕಾರ ಪೊಲೀಸರಿಗೆ ನಮ್ಮ ಸಂವಿಧಾನ ಕೊಡುತ್ತದೆಯೇ? ಅಕ್ರಮ ದನ ಸಾಗಾಟ ಮಾಡಿದ್ದಾನೆ ಎಂದಾದರೆ ಆತನನ್ನು ಬಂಧಿಸಿ ಕೋರ್ಟಿನಲ್ಲಿ ಕೇಸು ಹಾಕುವುದು ಬಿಟ್ಟು ಆತನನ್ನು ಕೊಲ್ಲುವ ಅಧಿಕಾರ ಪೊಲೀಸರಿಗೆ ಇಲ್ಲವೇ ಇಲ್ಲ. ಬೇಜವಾಬ್ದಾರಿಯುತವಾಗಿ ಒಬ್ಬ ವ್ಯಕ್ತಿಯ ಜೀವ ತೆಗೆದ ಪೊಲೀಸನ ಮೇಲೆ ಕೊಲೆಯ ಪ್ರಕರಣ ದಾಖಲಿಸಿ ಆತನಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸುವುದು ಅಗತ್ಯ ಇದೆ.

  Reply
  1. godbole

   Mr. Ranjan Darga, “ನಕ್ಸಲ್ ನಿಗ್ರಹ ದಳದ ಪೊಲೀಸರು ಮಾಡಿದ್ದು ಅಪ್ಪಟ ಕೊಲೆ ಎಂಬುದರಲ್ಲಿ ಸಂದೇಹವಿಲ್ಲ” but this is not Gujarat and our CM isn’t Narendra Modi! How can pro-Hindutva encounter deaths happen under Congress rule of committed secularist CM?

   Reply
   1. Anand Prasad

    ಮಿಸ್ಟರ್ ಗೋಡ್ಬೋಲೆಯವರೇ ಇಲ್ಲಿಗೆ ರಂಜಾನ್ ದರ್ಗಾ ಅವರನ್ನು ಯಾಕೆ ಎಳೆದುಕೊಂಡು ಬಂದಿದ್ದೀರಿ? ರಂಜಾನ್ ದರ್ಗಾ ಇಲ್ಲಿ ಪ್ರತಿಕ್ರಿಯಿಸಿಯೇ ಇಲ್ಲ. ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಹಿಂದಿನ ಸರ್ಕಾರದ ಅವಧಿಯಲ್ಲಿ ಮತಾಂಧ ಚಿಂತನೆಯ ವ್ಯಕ್ತಿಗಳು ಪೋಲೀಸ್ ವ್ಯವಸ್ಥೆಯೊಳಗೆ ಗಟ್ಟಿಯಾಗಿ ತಳವೂರಿ ಬೆಳೆದಿದ್ದಾರೆ. ಹೀಗಾಗಿ ಇಂಥ ಮತಾಂಧ ಪೊಲೀಸರು ಈಗಿನ ಕಾಂಗ್ರೆಸ್ ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಇದು ಸಮಸ್ಯೆಯ ಮೂಲ. ರಾಜ್ಯದಲ್ಲಿ ಸರಕಾರ ಬದಲಾದರೂ ನೈತಿಕ ಪೋಲೀಸ್ಗಿರಿ ಕಡಿಮೆಯಾಗದೇ ಹೆಚ್ಚಾಗಲು ಇದುವೇ ಕಾರಣ. ಇದು ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದಲ್ಲಿಯೂ ಸಂಘ ಪರಿವಾರದ ಮನೋಭಾವವುಳ್ಳ ಜನ ಇದ್ದಾರೆ. ಇಂಥ ರಾಜಕಾರಣಿಗಳು ಮೃದು ಹಿಂದುತ್ವ ನೀತಿಯನ್ನನುಸರಿಸುತ್ತಾರೆ.

    Reply
    1. Godbole

     “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಹಿಂದಿನ ಸರ್ಕಾರದ ಅವಧಿಯಲ್ಲಿ ಮತಾಂಧ ಚಿಂತನೆಯ ವ್ಯಕ್ತಿಗಳು ಪೋಲೀಸ್ ವ್ಯವಸ್ಥೆಯೊಳಗೆ ಗಟ್ಟಿಯಾಗಿ ತಳವೂರಿ ಬೆಳೆದಿದ್ದಾರೆ. ಹೀಗಾಗಿ ಇಂಥ ಮತಾಂಧ ಪೊಲೀಸರು ಈಗಿನ ಕಾಂಗ್ರೆಸ್ ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಇದು ಸಮಸ್ಯೆಯ ಮೂಲ.”

     ಹಾಗಿದ್ದರೆ ಕಾಂಗ್ರೆಸ್ ಸರಕಾರಕ್ಕೆ ರಾಜಿನಾಮೆ ಕೊಡಲು ಹೇಳಿ ಹಾಗೂ ರಾಜ್ಯದಲ್ಲಿ ಕೇಂದ್ರಾಡಳಿತ ಜಾರಿಯಾಗತಕ್ಕದ್ದು ಅಂತ ಧರಣಿ ಕೂರಿ.

     Reply
     1. Godbole

      VHP leader Sharan Pumpwell has said “the Congress, which is the current ruling government is a root cause of such problems in the state” just like Mr. Soorinje and you! Isn’t this really funny?

    2. ವಿಜಯ್

     @ ಆನಂದ ಪ್ರಸಾದ್..
     [ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಹಿಂದಿನ ಸರ್ಕಾರದ ಅವಧಿಯಲ್ಲಿ ಮತಾಂಧ ಚಿಂತನೆಯ ವ್ಯಕ್ತಿಗಳು ಪೋಲೀಸ್ ವ್ಯವಸ್ಥೆಯೊಳಗೆ ಗಟ್ಟಿಯಾಗಿ ತಳವೂರಿ ಬೆಳೆದಿದ್ದಾರೆ. ಹೀಗಾಗಿ ಇಂಥ ಮತಾಂಧ ಪೊಲೀಸರು ಈಗಿನ ಕಾಂಗ್ರೆಸ್ ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಇದು ಸಮಸ್ಯೆಯ ಮೂಲ. ]
     ನಿಮ್ಮಿಂದ ಇಂಥಹ ಬಾಲಿಶ ಮಾತನ್ನು ನಿರಿಕ್ಷಿಸಿರಲಿಲ್ಲ. ನಿಮ್ಮ ಪ್ರಕಾರ, ಇನ್ನು ಮೇಲೆ ಸರಕಾರ ಬದಲಾದ ಮೇಲೆ ಇಡೀ ಆಡಳಿತ ಯಂತ್ರವನ್ನು ಬದಲಾಯಿಸಬೇಕೆ? ಎಲ್ಲ ಪೋಲಿಸರನ್ನು ಹೊಸದಾಗಿ ಭರ್ತಿ ಮಾಡಿಕೊಳ್ಳಬೇಕೆ? ಅವರ ತಲೆಯಲ್ಲಿ ಹಿಂದಿನ ಸರಕಾರದ ಚಿಂತನೆಗಳು ಉಳಿದಿರಬಹುದು ಎಂಬ ಅನುಮಾನದ ಮೇಲೆ? ಅಥವಾ ತಮಗಾಗದ, ತಮ್ಮ ಚಿಂತನೆಗೆ ಹೊಂದದ ಅಧಿಕಾರಿಗಳನ್ನು ಕಾರಣ ಕೊಡದೆ ಸಸ್ಪೆಂಡ ಮಾಡಬಹುದು ಎಂಬ ಕಾನೂನನ್ನು ತರಬೇಕೆ?
     ಈ ಮತಾಂಧ ಚಿಂತನೆಯ ವ್ಯಕ್ತಿಗಳು ಅಂದರೆ ಏನು ಸ್ವಾಮಿ? ಮುಸ್ಲಿಂನಿಗೆ ಹಿಂದು ಪೋಲಿಸ ಹೊಡೆದರೆ ಮತಾಂಧನಾಗಿ ಬಿಡುತ್ತಾನೆಯೆ? ಹಾಗಾದರೆ ನಾವು ಹಿಂದೆ ನೋಡಿದ, ದಕ್ಷ ಅಧಿಕಾರಿಗಳಾಗಿದ್ದ , ಗೂಂಡಾ ನಿಗ್ರಹ ಪಡೆಯಲ್ಲಿದ್ದ ಶ್ರೀ ಅಬ್ದುಲ್ ಅಜಿಂ, ಬಾವಾ ಇವರು ಹಿಡಿದದ್ದು, ಹೊಡೆದದ್ದು ಎಲ್ಲವನ್ನೂ ಮತೀಯ ಆಧಾರದ ಮೇಲೆಯೇ ನೋಡಬೇಕೆ?

     Reply
 3. Godbole

  “ಅಕ್ರಮ ದನ ಸಾಗಾಟ ಮಾಡಿದ್ದಾನೆ ಎಂದಾದರೆ ಆತನನ್ನು ಬಂಧಿಸಿ ಕೋರ್ಟಿನಲ್ಲಿ ಕೇಸು ಹಾಕುವುದು ಬಿಟ್ಟು ಆತನನ್ನು ಕೊಲ್ಲುವ ಅಧಿಕಾರ ಪೊಲೀಸರಿಗೆ ಇಲ್ಲವೇ ಇಲ್ಲ.”

  ತುಂಬಾ ಬೇಜವಾಬ್ದಾರಿತನ ಹಾಗೂ ಮೊದ್ದುಮಣಿತ್ವದಿಂದ ಕೂಡಿದ ಹೇಳಿಕೆ ಇದು. ಅಕ್ರಮ ದನ ಸಾಗಾಟ ಮಾಡುವವರು ರಸ್ತೆ ತಡೆಗಟ್ಟೆಯಲ್ಲಿ ಪೊಲೀಸರನ್ನು ಕಂಡ ತಕ್ಷಣ ತಾವಾಗಿಯೇ ಶರಣಾಗುತ್ತಾರೆ ಎಂದು ಆನಂದ ಪ್ರಸಾದ್ ಅವರು ಭಾವಿಸಿರುವ ಹಾಗೆ ಕಾಣ್ತದೆ! ಅಕ್ರಮ ದನ ಸಾಗಾಟ ಮಾಡುವವರ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಇರುವುದಿಲ್ಲ ಎಂದೂ ಅವರು ತಿಳಿದಿದ್ದಾರೆ! ಪೊಲೀಸರಿಗೆ ಶಂಕಿತ/ಅಪರಾಧಿಗಳನ್ನು ಕೊಂದೇ ತೀರಬೇಕು ಎಂಬ ತೆವಲು ಇರುವುದಿಲ್ಲ. ಹಾಗೆ ನೋಡಿದರೆ ಶಂಕಿತ/ಅಪರಾಧಿಗಳನ್ನು ಕೊಲ್ಲುವುದಕ್ಕಿಂತ ಬಂಧಿಸಿದರೆ ವ್ಯಾವಹಾರಿಕವಾಗಿ ಹಾಗೂ ವೃತ್ತಿಪರವಾಗಿ ಪೊಲೀಸರಿಗೆ ಲಾಭ! ಪೊಲೀಸರು ಶಂಕಿತ/ಅಪರಾಧಿಗಳನ್ನು ಜೀವಂತ ಹಿಡಿಯುವ ಪ್ರಯತ್ನವನ್ನೇ ಮಾಡುತ್ತಾರೆ. ಆದರೆ ಬಹುತೇಕ ಅಪರಾಧಿಗಳು ಗಾಂಧಿವಾದಿಗಳಾಗಿರುವುದಿಲ್ಲ. ಅವರು ಪೋಲೀಸರ ಮೇಲೆ ಹಲ್ಲೆ ಮಾಡಿ ಅವರನ್ನು ಏಮಾರಿಸಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆಗ ಪರಿಸ್ಥಿತಿಯ ಹತೋಟಿ ತಪ್ಪಿ ಗುಂಡಿನ ಚಕಮಕಿ ನಡೆಯುತ್ತದೆ. ಚಕಮಕಿಯಲ್ಲಿ ಪೊಲೀಸರೂ ಕೆಲವೊಮ್ಮೆ ಸಾಯುತ್ತಾರೆ ಎನ್ನುವುದನ್ನು ಮರೆಯಬಾರದು (ಉದಾ: ಛತ್ತೀಸಗಡದ ಮಾವೋವಾದಿ ಪ್ರಕರಣ). ಚಿಕ್ಕಮಗಳೂರಿನಲ್ಲಿ ನಡೆದ ಘಟನೆಯಲ್ಲಿಯೂ ಬಹುಶಃ ಪರಿಸ್ಥಿತಿ ಕೈ ಮೀರಿ ಹೋಗಿದೆ. ಅದಕ್ಕೆ ಕಾರಣ ಕಬೀರ ಹಾಗೂ ಅವನ ಜೊತೆಗಾರರು ಇರಬಹುದು. ಸತ್ಯ ಏನು ಅಂತ ತನಿಖೆಯಾಗಲಿ. ಅದು ಬಿಟ್ಟು ಕಬೀರ ಹಾಲು ಕುಡಿಯುವ ಮಗುವಿನಷ್ಟು ಅಮಾಯಕ ಅಂತ ಪದೇ ಪದೇ ನೀವುಗಳು ಹೇಳುತ್ತಾ ಇದ್ದರೆ, ಆತನ ಬಗ್ಗೆ ನಮ್ಮಗಳ ಅನುಮಾನ ಇನ್ನೂ ಹೆಚ್ಚಾಗುತ್ತದೆ.

  Reply
  1. Anand Prasad

   ಕಬೀರನ ಬಳಿಯಲ್ಲಿ ಯಾವುದೇ ಆಯುಧ ಇದ್ದದ್ದು ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ಆಯುಧ ಇದ್ದಿದ್ದರೆ ಅದು ಆತ ಸತ್ತಾಗ ತನ್ನಿಂದ ತಾನೆ ಗಾಳಿಯಲ್ಲಿ ಮಾಯವಾಗಿ ಹೋಯಿತೇ? ಆತ ಸತ್ತ ಸ್ಥಳದಲ್ಲಿ ಎಷ್ಟು ಆಯುಧ ಇತ್ತು ಅಥವಾ ಅವರು ದನ ಸಾಗಿಸುತ್ತಿದ್ದ ಟೆಂಪೋದಲ್ಲಿ ಎಷ್ಟು ಆಯುಧ ಸಿಕ್ಕಿವೆ? ಟೆಂಪೋವನ್ನು ಅವರು ಅಲ್ಲೇ ಬಿಟ್ಟು ಪ್ರಾಣ ಭಯದಿಂದ ಪರಾರಿಯಾಗಿದ್ದಾರೆ. ಹೀಗಿರುವಾಗ ಟೆಂಪೋದಲ್ಲಿ ಅಡಗಿಸಿ ಇಟ್ಟಿದ್ದ ಆಯುಧ ಸಿಕ್ಕಬೇಕಾಗಿತ್ತು. ಅಂಥ ಆಯುಧ ಸಿಕ್ಕಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ಅಲ್ಲಿ ಆಯುಧ ಸಿಕ್ಕಿದ್ದರೆ ಅದು ಪ್ರಧಾನವಾಗಿ ವರದಿಯಾಗಬೇಕಾಗಿತ್ತು ಏಕೆಂದರೆ ಇದು ಮಾಧ್ಯಮಗಳಿಗೆ ಇದೊಂದು ದೊಡ್ಡ ಬ್ರೆಕಿಂಗ್ ನ್ಯೂಸ್ ಆಗುತ್ತಿತ್ತು.

   Reply
   1. Godbole

    ಘಟನೆ ನಡೆದ ಸ್ಥಳದಲ್ಲಿ ಹಾಗೂ ವೇಳೆಯಲ್ಲಿ ನೀವಾಗಲಿ, ಸೂರಿನ್ಜೆಯಾಗಲಿ, ಸಲಾಂ ಬಾವ ಆಗಲಿ ಇರಲಿಲ್ಲ. ಆದುದರಿಂದಲೇ ನಾನು ಹೇಳಿದ್ದು ನೀವು ಊಹಾಪೋಹಗಳ ಆಧಾರದ ಮೇಲೆ ವರ್ತಮಾನದ ಓದುಗರನ್ನು ದಾರಿ ತಪ್ಪಿಸುವುದು ಬೇಡ ಅಂತ. ಕಾನೂನು ಪ್ರಕಾರ ತನಿಖೆಯಾಗಲಿ, ಕಬೀರ ಅಮಾಯಕನೋ ಉಗ್ರನೋ ನಕ್ಸಳನೋ ದನಕಳ್ಳನೋ ಸತ್ಯ ಹೊರಬರಲಿ, ತಪ್ಪು ಪೊಲೀಸರದ್ದೇ ಆಗಿದ್ದರೆ ಅವರಿಗೆ ಶಿಕ್ಷೆಯಾಗಲಿ.

    Reply
 4. Godbole

  “ಇಂತಹ ಘಟನೆಗಳು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಅನಾಥ ಪ್ರಜ್ಞೆ ಮೂಡಿಸಿದರೆ ಅಚ್ಚರಿಯೇನಿಲ್ಲ. ಈ ಭಾವನೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗದೇ ಹೋಗುವವರು ಹೆಚ್ಚೆಚ್ಚು ಸಂಘಟಿತರಾಗಲು ಆ ಮೂಲಕ ರಕ್ಷಣೆ ಪಡೆಯಲು ಮೂಲಭೂತವಾದದ ಕಡೆಗೆ ಮುಖ ಮಾಡಬಹುದು.”

  ಇದೆಲ್ಲ ಬುಲ್ ಶಿಟ್. ಬಹುಶ ಮುಸಲ್ಮಾನರು ಅನಾಥಪ್ರಜ್ಞೆಯಿಂದ ಬಳಲಿ ಅಂತ ನೀವುಗಳು ಬಯಸುತ್ತೀರಿ. ನಿಮ್ಮಂಥವರು ಘಟನೆಗಳಿಗೆ ಕೊಡುವ ಬಣ್ಣ ಕೂಡ ಮುಸ್ಲಿಂ ಮೂಲಭೂತವಾದ ಹೆಚ್ಚಲು ಕಾರಣ ಅಂತ ನಿಚ್ಚಳವಾಗುತ್ತಿದೆ.

  Reply
 5. J P

  Laati Matthu Gun Hidida kaigala medullugalige paachi hididaaga inthahadde nadeyuvudu. sarakaara, pragathipararannu dooshisi sittu kaledukondre Gataneyannu agugolisida Shakthigalige nasta illa, Laabhave Agutthe. Ivugallannella Nirummalavagi eenoo agadavaranthe thannage sahisikolluva
  sajjanarige enoo javabhadari ilve? Jermanya Naazigalirali, Italia Fazygalirali avarellaroo aa deshagala Sajjanara thannaneya sahaanuboothiya santhanave allave? O kalave E Deshada manassugala naduve Berlin Goode eeladirali. Aroopa madodu beda namma Anna Thammndira medulu tholeyoona. Alli Paachi nelegolladanthe echhara vahisoona.

  Reply
 6. J P

  ಮೆದುಳಿಗೆ ಪಾಚಿ ಹಿಡಿಸಿ ಅವರ ಕೈಗೆ ಲಾಟಿ ಕೊಡಿ ಇಲ್ಲಾ ಕೋವಿ ಕೊಡಿ ಅವರು ಅದನ್ನೆ ಮಾಡುತ್ತಾರೆ. ಹೆಣ ಎದುರಿಗಿಟ್ಟು ಆಪಾದನೆ ಮಾಡ್ತಾ ಕೂತರಾಗದು. ಇದರ ಜವಾಬ್ದಾರಿ ಮೆದುಳು ಪಾಚಿಯಾಗುವುದನ್ನು ತಣ್ಣಗೆ ನೋಡುತ್ತಾ ಕುಳಿತ ನಮ್ಮೆಲ್ಲರದೂ ಅಹುದು. ಸರಕಾರ ಮತ್ತು ಪ್ರಗತಿಪರರನ್ನು ದೂರಿ ನಮ್ಮ ಜವಾಬ್ದಾರಿ ತೀರಿತು ಎಂದು ಕೂರುವುದನ್ನೆ ಆ ‘ಪಾಚಿ ಗುತ್ತಿಗೆ’ದಾರರೂ ಬಯಸುತ್ತಾರೆ. ನಮ್ಮ ಮನಸ್ಸುಗಳ ನಡುವೆ ಗೋಡೆಗಳು ಏಳದಿರಲಿ. ನಮ್ಮ ಅಣ್ಣ ತಮ್ಮಂದಿರ ತಲೆಯೊಳಗಿನ ಪಾಚಿಯನ್ನು ನಿರಂತರವಾಗಿ ತೊಳೆಯೋಣ.ಇದು ಸ್ಯಾಂಪಲ್ ಅಷ್ಟೆ. ಈಗ ಬೀಸುತ್ತಿದೆ ಎಂದು ಹೇಳುವ ಗಾಳಿ ನಿಜಕ್ಕೂ ಬೀಸಿದರೆ ಇದು ಇನ್ನೂ ಹೆಚ್ಚಾಗಾಬಹುದು. ನಮಗೆ ಅಂತಾದ್ದೊಂದು ಕಾಲ ಬಾರದಿರಲಿ. ಗೆಳೆಯರೆ ಜೀವ ಪವಿತ್ರ ಎಂದು ಕಂಡಿತಾ ನೀವೆಲ್ಲರೂ ಹೇಳುತ್ತೀರಿ ಅಲ್ಲವೆ?

  Reply
 7. Godbole

  “ಅಮಾಯಕ” ಕಬೀರ್ ಜೊತೆಗಿದ್ದ ವಾಹನ ಚಾಲಕ ಪ್ರವೀಣ್ ಪೂಜಾರಿ ಈ ಹಿಂದೆ ಇದೇ ರೀತಿ ಅಕ್ರಮವಾಗಿ ದನ ಸಾಗಿಸುತ್ತಿದ್ದಾಗ ಚೆಕ್ ಪೋಸ್ಟ್ ಒಂದರಲ್ಲಿ ಕಂಡ ಪೋಲೀಸರ ಮೇಲೆ ಗಾಡಿ ಓಡಿಸಿ ಕೊಲ್ಲುವ ಪ್ರಯತ್ನ ಮಾಡಿದ್ದ ಹಾಗೂ ಅವನಿಗೆ ಕೊಲೆ ಯತ್ನ ಮಾಡಿದ ಅಪರಾಧಕ್ಕೆ ಶಿಕ್ಷೆಯೂ ಆಗಿತ್ತು ಅಂತ ಇಂದು ವರದಿಯಾಗಿದೆ. 😀 “ಅಕ್ರಮ ದನ ಸಾಗಾಟ ಮಾಡಿದ್ದಾನೆ ಎಂದಾದರೆ ಆತನನ್ನು ಬಂಧಿಸಿ ಕೋರ್ಟಿನಲ್ಲಿ ಕೇಸು ಹಾಕುವುದು ಬಿಟ್ಟು ಆತನನ್ನು ಕೊಲ್ಲುವ ಅಧಿಕಾರ ಪೊಲೀಸರಿಗೆ ಇಲ್ಲವೇ ಇಲ್ಲ.” ಅಂತ ಬರೆದವರ ಮೆದುಳಿಗೆ ಅಂಟಿರುವುದು ಪಾಚಿಯೋ ಅಥವಾ ಮತ್ತೇನೋ? 😉

  ಪತ್ರಕರ ನವೀನ ಸೂರಿಂಜೆ ಮಂಗಳೂರಿನ ಎಂ ಎಲ್ ಎ ಮೊಯಿಯುದ್ದೀನ್ ಬಾವ ಅವರಿಗೆ ಆಪ್ತರು ಎನ್ನವುದು ಓಪನ್ ಸೀಕ್ರೆಟ್. ಈ ಬಾವ ಅವರು ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಸ್ಥಾನಕ್ಕಾಗಿ ಆಸೆ ಪಡುತ್ತಿರುವವರು ಹಾಗೂ ಏನಾದರೂ ಮಾಡಿ ಈ ಬರಿ ಮಂತ್ರಿಯಾಗಲೇ ಬೇಕು ಅಂತ ಹಠ ಹಿಡಿದು ಕುಳಿತವರು. ಇವರ ಪರವಾಗಿ ಸೂರಿಂಜೆ ಕೆಲಸ ಮಾಡುತ್ತಿದ್ದಾರೆ ಅಂತ ಮಂಗಲೂರಿನಲ್ಲೆಲ್ಲ ಸುದ್ದಿ. ಕಬೀರ್ ಸಾವನ್ನೂ ಬಾವ ಪರ ಬಳಸಿ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೇರುವ ಯತ್ನ ಸೂರಿಂಜೆ ಮಾಡಿರಬಹುದು ಎಂದು ದಟ್ಟವಾದ ಅನುಮಾನವಿದೆ.

  Reply
 8. ಅನಿತಾ

  ಇಂತಹ ಘಟನೆಗಳು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಅನಾಥ ಪ್ರಜ್ಞೆ ಮೂಡಿಸಿದರೆ ಅಚ್ಚರಿಯೇನಿಲ್ಲ. ಈ ಭಾವನೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗದೇ ಹೋಗುವವರು ಹೆಚ್ಚೆಚ್ಚು ಸಂಘಟಿತರಾಗಲು ಆ ಮೂಲಕ ರಕ್ಷಣೆ ಪಡೆಯಲು ಮೂಲಭೂತವಾದದ ಕಡೆಗೆ ಮುಖ ಮಾಡಬಹುದು. ಆ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸಲು, ಬಹುಸಂಖ್ಯಾತ ವರ್ಗದ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸುವಾಗ ಅನುಸರಿಸುವ ಮಾನದಂಡವನ್ನೇ ಅನುಸರಿಸುವುದು ಅಷ್ಟು ಸರಿ ಅಲ್ಲವೇನೋ ಎನಿಸುತ್ತದೆ.- Tappu abhipraaya. Kraistaru mattu muslimarige holisidare hindoogale ee jagattinalli alpasankhyaataru. Muslim dharmave samvidhaanavulla muslimarannu prathama darje naagarikarannaagiyoo muslimetararannu dviteeya darje prajegalannaagiyoo kaanuva hattippattu muslim deshagalive. Adare onde ondu hindoo desha illa (Nepaala eega hindoo raastra alla) Jaagatika islamic bhayotpaadane Bharatadalloo aalavaagi berooriruvaaga abhadrateya bheetiyinda Hindoogalu sanghatitaraaguttiruvudu sariyallave? Idakke enu heluviri?

  Reply
 9. Naveen

  ….. ಅಲ್ಪಸಂಖ್ಯಾತರ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸಲು, ಬಹುಸಂಖ್ಯಾತ ವರ್ಗದ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸುವಾಗ ಅನುಸರಿಸುವ ಮಾನದಂಡವನ್ನೇ ಅನುಸರಿಸುವುದು ಅಷ್ಟು ಸರಿ ಅಲ್ಲವೇನೋ ಎನಿಸುತ್ತದೆ.-

  ಇದರ ಅರ್ಥ ಏನು ಅಂತ ಯಾರಾದ್ರೂ ಬಿಡಿಸಿ ಹೇಳ್ತೀರಾ? ನಾನು ಗ್ರಹಿಸಿದ0ಗೆ ಇದರ ಅರ್ಥ ಒಬ್ಬ ಅಲ್ಪಸಂಖ್ಯಾತ ತಪ್ಪು ಮಾಡಿದರೆ ಹಾಗೆ ಮಾಡಬಾರದು ಕಂದ ಅಂತ ತಲೆ ಸವಾರಿ ಕಳಿಸಿ ಕೊಡುವದೇ??
  ನನಗೆ ಅನ್ನಿಸಿದಂತೆ ಇಲ್ಲಿ ಆಗಿದ್ದು ನಕ್ಸಲೀಯರ ಮಿಂಚಿನ ದಾಳಿಯನ್ನು ಊಹಿಸಿ ಪೊಲೀಸಾರು ಹೆದರಿ ಇವರು ಗಾಡಿಯಿಂದ ಅಲುಗಾಡಲೂ ಬಿಡದೆ ಫೈರ್ ಮಾಡಿದ್ದಾರೆ. ಇದೊಂದು ನಕ್ಸಲರ ಅಂಜಿಕೆಯಿಂದ ಆದ ಅವಘಡ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು. ಹಾಗೆ ಒರಿಸ್ಸಾ, ಬಿಹಾರ್, ಬಂಗಾಳ, ಚತ್ತೀಸ್‍ಗರ್ ಗಳಲ್ಲಿ ಹೀಗೆ ಸತ್ತುಹೋದ ಪೋಲೀಸರ ಬಗ್ಗೆ ಮರುಗುವವರು ಯಾರು??

  Reply
 10. ಅನಿತಾ

  ಇಂತಹ ಘಟನೆಗಳು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಅನಾಥ ಪ್ರಜ್ಞೆ ಮೂಡಿಸಿದರೆ ಅಚ್ಚರಿಯೇನಿಲ್ಲ. ಈ ಭಾವನೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗದೇ ಹೋಗುವವರು ಹೆಚ್ಚೆಚ್ಚು ಸಂಘಟಿತರಾಗಲು ಆ ಮೂಲಕ ರಕ್ಷಣೆ ಪಡೆಯಲು ಮೂಲಭೂತವಾದದ ಕಡೆಗೆ ಮುಖ ಮಾಡಬಹುದು. ಆ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸಲು, ಬಹುಸಂಖ್ಯಾತ ವರ್ಗದ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸುವಾಗ ಅನುಸರಿಸುವ ಮಾನದಂಡವನ್ನೇ ಅನುಸರಿಸುವುದು ಅಷ್ಟು ಸರಿ ಅಲ್ಲವೇನೋ ಎನಿಸುತ್ತದೆ.

  ALPASANKHYAATA KOMUVAADAVANNU EE LEKHAKARANTE KELAVU RAJAKAARANIGALOO PURASKARISUTTIRUVUDU VISHAADANEEYA
  ಹೊಸದಿಲ್ಲಿ: “ಮುಸ್ಲಿಮರೇ, ನೀವು ಬಹಳ ಕಾಲದಿಂದಲೂ ಜಾತ್ಯತೀತರಾಗಿ ಉಳಿದಿದ್ದೀರಿ. ಇನ್ನಾದರೂ ನೀವು ಕೋಮುವಾದಿಗಳಾಗಿ. ನೀವು ಜಾತ್ಯತೀತರಾಗಿ ಬಹಳ ಕಾಲದಿಂದ ಮತ ಹಾಕುತ್ತಿರುವ ಪಕ್ಷ ನಿಮಗಾಗಿ ಏನೂ ಮಾಡಿಲ್ಲ. ಈಗ ನಿಮ್ಮ ಒಳಿತಿಗಾಗಿಯಾದರೂ ನೀವು ನಿಮಗೆ ಮತ ಹಾಕಿ’

  -ಹೀಗೆಂದು ಮುಸ್ಲಿಮರಿಗೆ ಕರೆ ನೀಡಿದವರು ಆಮ್‌ ಆದ್ಮಿ ಪಕ್ಷದ ನಾಯಕಿ ಹಾಗೂ ಲೋಕಸಭೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಶಾಜಿಯಾ ಇಲ್‌ಮಿ !

  ಇಲ್‌ಮಿ ಅವರು ಈ ರೀತಿ ಅತ್ಯಂತ ವಿವಾದಾತ್ಮಕವಾಗಿ ಮತ್ತು ಕೋಮು ದ್ವೇಷಯುಕ್ತವಾಗಿ ಮುಸ್ಲಿಮರಿಗೆ ಕರೆ ನೀಡಿರುವ ವಿಡಿಯೋ ಚಿತ್ರಿಕೆಯೊಂದು ಈಗ ಎಲ್ಲೆಂದರಲ್ಲಿ ಹರಿದಾಡುತ್ತಿದ್ದು ಇದನ್ನು ನೋಡಿರುವ ಅನೇಕ ಮುಸ್ಲಿಂ ನಾಯಕರು, ಇಲ್‌ಮಿ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ.

  ಬಿಜೆಪಿಯು ಇಲ್‌ಮಿ ಅವರ ಈ ವಿಡಿಯೋ ಚಿತ್ರಿಕೆಯನ್ನು ಕಟುವಾಗಿ ಟೀಕಿಸಿದ್ದು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಸಿದ್ಧವಾಗುತ್ತಿದೆ.

  ವಿವಾದಾತ್ಮಕ ವಿಡಿಯೋದಲ್ಲಿ ಇಲ್‌ಮಿ ಹೀಗೆ ಹೇಳುತ್ತಾರೆ:

  “ಮುಸ್ಲಿಮರೇ, ನೀವು ಹೆಚ್ಚು ಮತನಿರಪೇಕ್ಷತೆಯನ್ನು ತೋರಬೇಡಿ. ಈ ದೇಶದಲ್ಲಿ ಮುಸ್ಲಿಮರು ಬಹುವಾಗಿ ಜಾತ್ಯತೀತತೆಯನ್ನು ತೋರುತ್ತಾ ಬಂದಿದ್ದಾರೆ. ಮುಸ್ಲಿಮರು ಈಗ ಕೋಮುವಾದಿಗಳಾಗಬೇಕಾದ ಸಮಯ ಬಂದಿದೆ. ಮುಸ್ಲಿಮರು ಕೋಮುವಾದಿಗಳಲ್ಲ , ಹಾಗಾಗಿಯೇ ಅವರು ತಮಗಾಗಿ ತಾವು ಮತಹಾಕುತ್ತಿಲ್ಲ.

  ಅರವಿಂದ ಕೇಜ್ರಿವಾಲರು ನಮ್ಮವರು. ಮುಸ್ಲಿಮರು ಬಹು ದೀರ್ಘ‌ಕಾಲದಿಂದ ಜಾತ್ಯತೀರಾಗಿ ಉಳಿದಿದ್ದಾರೆ. ಆ ಪ್ರಕಾರ ಅವರು ಕಾಂಗ್ರೆಸ್‌ಗೆ ಮತ ಹಾಕುತ್ತಾ ಬಂದಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಲಾಗಾಯ್ತಿನಿಂದಲೂ ಗೆಲ್ಲುತ್ತಾ ಬಂದಿದೆ. ನೀವು ಇನ್ನಾದರೂ ಜಾತ್ಯತೀತರಾಗಿ ಉಳಿಯಬೇಡಿ. ನಿಮ್ಮ ಮನೆಯ (ಸಮುದಾಯದ) ಪರಿಸ್ಥಿತಿಯನ್ನೇ ಒಮ್ಮೆ ನೋಡಿಕೊಳ್ಳಿ.

  ಇತರ ಪಕ್ಷಗಳು ತಮ್ಮದೇ ಆದ ವೋಟ್‌ ಬ್ಯಾಂಕ್‌ ಅನ್ನು ಸುರಕ್ಷಿತವಾಗಿ ಇಟ್ಟುಕೊಂಡಿವೆ ಮತ್ತು ಮುಸ್ಲಿಮರ ಮತಗಳನ್ನು ಒಡೆಯುತ್ತಾ ಬಂದಿವೆ. ನನ್ನ ಈ ಹೇಳಿಕೆ ವಿವಾದಾತ್ಮಕ ಎಂದು ನಿಮಗನಿಸಬಹುದು. ಆದರೆ ನಾವು (ಮುಸ್ಲಿಮರು) ನಮ್ಮ ಹಿತಾಸಕ್ತಿಯನ್ನೂ ನೋಡಿಕೊಳ್ಳಬೇಕು. ನಮಗಾಗಿ ನಾವು ಮತ ಹಾಕಬೇಕು’ .

  ಇಲ್‌ಮಿ ಅವರ ಈ ವಿಡಿಯೋ ಹೇಳಿಕೆಗೆ ಕಾಂಗ್ರೆಸ್‌ನ ಮೀಮ್‌ ಅಫ್ಜಲ್‌ ತೀವ್ರ ಖಂಡನೆ ವ್ಯಕ್ತಪಡಿಸಿದ್ದು ಇದೊಂದು ಅತ್ಯಂತ ಬಾಲಿಶ ಹೇಳಿಕೆ ಎಂದಿದ್ದಾರೆ.

  ಮತ್ತೋರ್ವ ಕಾಂಗ್ರೆಸ್‌ ನಾಯಕ ಜೆ ಪಿ ಅಗ್ರವಾಲ್‌ ಅವರು “ಬಡೀ ಘಟಿಯಾ ಶಬ್ದ್ ಹೇಂ, ಯೇ (ಶಾಜಿಯಾ ಇಲ್‌ಮಿ) ಭೀ ತೊಗಾಡಿಯಾ ಹೋ ಗಯೀ ಹೇಂ’ ಎಂದಿದ್ದಾರೆ.

  ಮೌಲಾನಾ ಖಲೀದ್‌ ರಶೀದ್‌ ಅವರು ಇಲ್‌ಮಿ ಅವರ ಹೇಳಿಕೆಗಳನ್ನು ಅತ್ಯಂತ ಆಕ್ಷೇಪಾರ್ಹ ಎಂದಿದ್ದಾರೆ.

  Reply
  1. Ananda Prasad

   ಶಾಜ್ಹಿಯ ಇಲ್ಮಿಯ ಹೇಳಿಕೆಯ ಕುರಿತಾದ ಆಮ್ ಆದ್ಮಿ ಪಕ್ಷದ ವೆಬ್ ಸೈಟಿನಲ್ಲಿ ಕೊಟ್ಟಿರುವ ಸೃಷ್ಟೀಕರಣ ಈ ರೀತಿ ಇದೆ –
   In response to the Shazia Ilmi’s clip which came out yesterday(22nd April ’14), Aam Aadmi Party had issued a statement through our official social media account that:

   Regarding Shazia Ilmi’s clip-Aam Aadmi Party does not believe in mixing politics & religion, neither does it endorse it. All our representatives should be careful in their choice of words so that there is no scope for misinterpretation.

   Here is the statement by Shazia Ilmi in response to the video clip:

   I wish to clarify the statement attributed to me regarding exhorting the Muslims to be more communal. Nothing can be farther from my intent and indeed my politics. It is quite clear from the tone and tenor of the conversation that I am using the word ‘secular’ and ‘communal’ in an ironic manner. And in an informal casual setting wherein a 80 second video clip purports to put context to a half hour conversation. The point was simply to say that the Muslim community has allowed itself to be used far too long by the so-called secular politics. It would be much better if the community were to turn to their real-life material interests, the so-called community interests like education, employment, etc. It should also be noted that I am making a plea to vote for a candidate who is not Muslim, and in the name of a leader who is not Muslim. I am shocked to see a statement like this can be distorted and misconstrued as communal or inciting hatred. My party and I have always stood against any form of communalism and shall continue to do so.

   Aam Aadmi Party would like to reiterate that the party does not believe in politics of communalism and is strictly against it. Neither will we evade or take lightly, concerns of AAP supporters and general public over such a serious issue. However, the fact that those who have brought this 80 second clip in public domain have not shared the rest of the video which can show the actual context, raises serious questions about the intentions behind the video clip. If they have really done this in public interest, we request them to share the full unclipped video or the link to download it in public and also send it to us at socialmedia@aamaadmiparty.org, so that the truth becomes clear between what is being attributed through the short clip and the response to it.

   Reply
  2. Godbole

   ಸೆಕ್ಯೂಲರ್ ಹಾಗೂ ಕಮ್ಯೂನಲ್ ಪದಗಳು ವರ್ತಮಾನದಲ್ಲಿ ಅರ್ಥ ಕಳೆದುಕೊಂಡಿವೆ. ಆದುದರಿಂದ ಇಲ್ಮಿ ಅವರ ಹೇಳಿಕೆಗೆ ವಿಪರೀತ ಅರ್ಥ ಕಲ್ಪಿಸುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದಿಂದ ಮುಸಲ್ಮಾನರು ಉದ್ಧಾರವಾಗಿಲ್ಲ, ಆದುದರಿಂದ ಆಪ್ ಪಕ್ಷಕ್ಕೆ ವೋಟು ಕೊಡಿ ಎಂದು ಹೇಳುವುದು ಇಲ್ಮಿಯವರ ಉದ್ದೇಶವಾಗಿತ್ತು.

   Reply

Leave a Reply

Your email address will not be published.