ಎ.ಎನ್.ಎಫ್ ನಿಂದ ಕಬೀರ್ ಹತ್ಯೆ ಹಾಗೂ ದಿಕ್ಕು ತಪ್ಪುತ್ತಿರುವ ಹೋರಾಟ


-ಇರ್ಷಾದ್


 

 

 

ಎಪ್ರಿಲ್ 19ರಂದು ಚಿಕ್ಕಮಗಳೂರಿನ ಶೃಂಗೇರಿ ಕೆರೆಕಟ್ಟೆ ತನಿಕೋಡು ತಪಾಸಣಾ ಕೇಂದ್ರದಲ್ಲಿ ನಕ್ಸಲ್ ಎಂಬ ಶಂಕೆಗೆAnti-Naxal-Force ಅಮಾಯಕ ಜೀವವೊಂದು ಬಲಿಯಾಯಿತು. ಮಂಗಳೂರಿನ ಕಾಟಿಪಳ್ಳ ನಿವಾಸಿ ಕಬೀರ್ ಎದೆಯನ್ನು ನಕ್ಸಲ್ ನಿಗೃಹ ದಳದ ಸಿಬಂದಿಯ ಬಂದೂಕಿನ ಗುಂಡು ಸೀಳಿತ್ತು. ಕಬೀರ್ ಸಾವು ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಒಂದರ ಹಿಂದೆ ಒಂದರಂತೆ ಕಬೀರ್ ಸಾವಿಗೆ ನ್ಯಾಯ ಕೋರಿ ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಪ್ರಭುತ್ವದ ದಬ್ಬಾಳಿಕೆ, ಬಡ ಆದಿವಾಸಿಗಳ ಮೇಲಿನ ದೌರ್ಜನ್ಯ ವಿರುದ್ಧ ದಂಗೆ ಎದ್ದು ಹೋರಾಟ ನಡೆಸುತ್ತಿರುವ ಶಕ್ತಿಗಳನ್ನು ಹುಟ್ಟಡಗಿಸುವ ಮನಸ್ಥಿತಿಯ ಬಂದೂಕಿನ ನಳಿಕೆಯಿಂದ ಹೊರ ಬಂದ ಗುಂಡಿನ ವಿರುದ್ಧ ನಡೆಯಬೇಕಾಗಿದ್ದ ಹೋರಾಟ ದಿಕ್ಕು ತಪ್ಪುತ್ತಿದೆ ಎಂದನಿಸುತ್ತಿದೆ. ಜಾತಿ ಧರ್ಮದ ಹೊರತಾಗಿ, ಪ್ರಭುತ್ವದ ಧೋರಣೆಯ ವಿರುದ್ಧ ಧ್ವನಿ ಎತ್ತುತ್ತಾ ಹೋರಾಟಕ್ಕಿಳಿದಿರುವ ನಕ್ಸಲರ ದಮನದ ಹೆಸರಲ್ಲಿ ನಡೆದ ಕಬೀರ್ ಹತ್ಯೆಯನ್ನು ಧರ್ಮದ ಬೇಲಿ ಕಟ್ಟಿ ಅದರ ನೆಲೆಗಟ್ಟಿನಲ್ಲಿ ನ್ಯಾಯ ಕೋರಿ ಹೋರಾಟ ನಡೆಯುತ್ತಿರುವುದು ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುವಂತಿದೆ.

ಜಾನುವಾರು ಸಾಗಾಟ ಸಂಧರ್ಭದಲ್ಲಿ ಗೋ ಮಾತೆ ಸಂರಕ್ಷಣೆ ಹೆಸರಲ್ಲಿ ಸಂಘ ಪರಿವಾರದ ಧರ್ಮಾಂಧರು ನಡೆಸುವ ದೌರ್ಜನ್ಯಕ್ಕೂ, ಪ್ರಭುತ್ವ ಬಡ ಜನರ ಮೇಲೆ, ಆದಿವಾಸಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೇಳುವ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ದಮನಕಾರಿ ನೀತಿಗೂ ವ್ಯತ್ಯಾಸಗಳಿವೆ. ಕರ್ನಾಟದ ಪಶ್ವಿಮ ಘಟ್ಟದಲ್ಲಿ ನಕ್ಸಲ್ ಸಮಸ್ಯೆಯನ್ನು ಹತ್ತಿಕ್ಕಲು ಕಾರ್ಯಾಚರಣೆಗಿಳಿದಿರುವ ನಕ್ಸಲ್ ನಿಗ್ರಹ ಪಡೆಯ ಶಂಕೆಗೆ ಬಲಿಯಾಗಿರುವುದು ಕಬೀರ್ ಮಾತ್ರ ಅಲ್ಲ. ಇಂಥಹಾ ಹತ್ತಾರು ಕಬೀರರು ಈಗಾಗಲೇ ಪಶ್ವಿಮ ಘಟ್ಟದ ಅರಣ್ಯಗಳಲ್ಲಿ ನೆತ್ತರು ಸುರಿಸಿದ್ದಾರೆ. ಪ್ರಭುತ್ವದ ದಮನಕಾರಿ ನೀತಿಗೆ ಬಲಿಯಾದ ಅಮಾಯಕರಲ್ಲಿ ಇದೀಗ ಕಬೀರ್ ಕೂಡಾ ಒಬ್ಬ.

ನಕ್ಸಲ್ ನಿಗೃಹ ಪಡೆ ಹಾಗೂ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ

ಪಶ್ವಿಮ ಘಟ್ಟದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಜಾರಿಗೆ ಬಂದ ದಿನದಿಂದ ಈ ಭಾಗದಲ್ಲಿರುವ ಆದಿವಾಸಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕಾಡಿನ ಮಕ್ಕಳನ್ನು ಕಾಡಿಂದ ಹೊರದಬ್ಬುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದೆ. ಒಂದೆಡೆ ಪ್ರಭುತ್ವ ಬಲಪ್ರದರ್ಶನದಿಂದ ಈ ಕಾರ್ಯವನ್ನು ನಡೆಸುತ್ತಾ ಬರುತ್ತಿದ್ದರೆ ಇನ್ನೊಂದೆಡೆ ವಿದೇಶಿ ಹಣಕಾಸುVittal Malekudiya ನೆರವಿನಿಂದ ಕಾರ್ಯಾಚರಿಸುತ್ತಿರುವ ಸ್ವಯಂ ಸೇವಾ ಸಂಘಗಳು ಆದಿವಾಸಿಗಳನ್ನು ಕಾಡಿಂದ ಹೊರ ಹಾಕಲು ಪ್ರಯತ್ನಪಡುತ್ತಿವೆ. ಆನಾದಿ ಕಾಲದಿಂದ ಅರಣ್ಯದಲ್ಲೇ ನೆಲೆಕಂಡಿರುವ ಆದಿವಾಸಿ ಕುಟುಂಬಗಳು ಯಾವಾಗ ಪ್ರಭುತ್ವದ ಧೋರಣೆಯನ್ನು ವಿರೋಧಿಸಲಿಕ್ಕೆ ಆರಂಭಿಸಿದವೋ ಅಲ್ಲಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ಆರಂಭವಾಗಿದೆ. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದಲ್ಲಿ ವಾಸವಾಗಿರುವ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯ ಹಾಗೂ ಸ್ಥಳೀಯ ಕೆಲ ಯುವಕರು ಪ್ರಭುತ್ವದ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಇವರು ಹೇಳುವ ಪ್ರಕಾರ ಕೆಲ ವರ್ಷಗಳ ಹಿಂದೆ ಪ್ರತಿ ಶನಿವಾರ ಗ್ರಾಮದ ಜನರು ನಾರಾವಿ ಪೇಟೆಗೆ ಬಂದು ದಿನಬಳಕೆಯ ಸಾಮಾಗ್ರಿಗಳನ್ನು ಕೊಂಡ್ಯೊಯುವ ಸಂಧರ್ಭದಲ್ಲಿ ಎ.ಎನ್.ಎಫ್ ನಿಂದ ನಿರಂತರ ದಬ್ಬಾಳಿಕೆ ಇವರ ಮೇಲೆ ನಡೆಯುತ್ತಿತ್ತು. ಅಗತ್ಯಕ್ಕಿಂತ ಹೆಚ್ಚಾಗಿ ಧವಸ ಧಾನ್ಯಗಳನ್ನು ಖರೀದಿಸಿದಲ್ಲಿ ನಕ್ಸಲರಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಶಂಕೆಯಲ್ಲಿ ಎ.ಎನ್.ಎಫ್ ಸಿಬಂದಿಗಳು ಕಿರುಕುಳ ನೀಡುತ್ತಿದ್ದರು. ರಾತ್ರೋ ರಾತ್ರಿ ಮನೆಗಳಿಗೆ ನುಗ್ಗುವುದು, ನಕ್ಸಲರ ಬೆಂಬಲಿಗರು ಎಂಬ ಶಂಕೆಯಲ್ಲಿ ಸ್ಥಳೀಯ ಯುವಕರನ್ನು ಕಸ್ಟಡಿಯಲ್ಲಿ ಕೂಡಿ ಹಾಕಿ ಹಿಂಸೆ ನೀಡುವುದು ಇಲ್ಲಿ ಮಾಮೂಲಾಗಿತ್ತು. ಕುತ್ಲೂರು ನಿವಾಸಿಗಳಾದ ಪೂವಪ್ಪ ಮಲೆಕುಡಿಯ, ಲಿಂಗಣ್ಣ ಮಲೆ ಕುಡಿಯ , ವಿಠಲ್ ಮಲೆ ಕುಡಿಯ , ಶಶಿಧರ್ ಮಲೆ ಕುಡಿಯ ಎ.ಎನ್.ಎಫ್ ದೌರ್ಜನ್ಯದ ಬಲಿಪಶುಗಳು. ನಕ್ಸಲರ ಜೊತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಕಾರಣಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ವಿಠಲ್ ಮಲೆಕುಡಿಯ ಮನೆಗೆ ನುಗ್ಗಿದ ಎ.ಎನ್.ಎಫ್ ವಿಠಲ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಎಂಬಿಬ್ಬರನ್ನು 2012 ಮಾರ್ಚ್ 3 ರಂದು ಬಂಧಿಸಿದ್ದರು. ಇವರ ಮನೆಯಲ್ಲಿ ಶೋಧ ಮಾಡಿದಾಗ ಶಂಕಿತ ನಕ್ಸಲ್ ಎಂಬುವುದಕ್ಕೆ ಸಿಕ್ಕಿದ ಸಾಕ್ಷಿ ಚಾ ಹುಡಿ, ಸಕ್ಕರೆ, ಪೇಪರ್ ಕಟ್ಟಿಂಗ್ಸ್, ಮಕ್ಕಳು ಆಟವಾಡುವ ಬೈನಾಕ್ಯುಲರ್ !

ಶಂಕೆಗೆ ಬಲಿಯಾದ ಜೀವಗಳು

ಇವರಷ್ಟೇ ಅಲ್ಲ,  ನಕ್ಸಲ್ ನಿಗ್ರಹ ದಳದ ಶಂಕೆಗೆ ಕರ್ನಾಟಕದಲ್ಲಿ ಅಮಾಯಕ ಜೀವಗಳು ಬೆಲೆ ತೆತ್ತಿವೆ.

 •  2003 ನವಂಬರ್ 17- ಉಡುಪಿ ಜಿಲ್ಲೆಯ ಈದು ಗ್ರಾಮದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಾಜಿಮಾ -ಪಾರ್ವತಿ ಹತ್ಯೆ
 •  2005 ಜೂನ್ – ಉಡುಪಿ ಜಿಲ್ಲೆಯ ದೇವರ ಬಾಳು ಎನ್ ಕೌಂಟರ್ ನಲ್ಲಿ ಅಜಿತ್ ಕುಸುಬಿ – ಉಮೇಶ್ ಹತ್ಯೆ
 • 2006 ಡಿಸೆಂಬರ್ – ಶೃಂಗೇರಿ –ಕೆಸುಮುಡಿಯಲ್ಲಿ ನಾರಾವಿಯ ದಿನಕರ್ ಹತ್ಯೆ
 •  2007 ಜುಲೈ 10 – ಚಿಕ್ಕಮಗಳೂರು ಜಿಲ್ಲೆಯ ಮೆಣಸಿನ ಹಾಡ್ಯ ದಲ್ಲಿ ಒಬ್ಬ ಶಂಕಿತ ನಕ್ಸಲ್ ಹಾಗೂ ನಾಲ್ವರು ಆಮಾಯಕ ಆದಿವಾಸಿಗಳ ಹತ್ಯೆ.
 •  2008 ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಶಂಕಿತ ನಕ್ಸಲ್ ಮನೋಹರ್ ಹತ್ಯೆ .
 •  2010 ಮಾರ್ಚ್ 1 – ಕಾರ್ಕಳ ಅಂಡಾರು ಗ್ರಾಮಪಂಚಾಯತ್ ವ್ಯಾಪ್ತಿಯಯಲ್ಲಿ ಕುತ್ಲೂರು ಗ್ರಾಮದ ನಿವಾಸಿ ವಸಂತ್ ಹತ್ಯೆ
 •  2012- ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಚೇರು ಅರಣ್ಯ ಪ್ರದೇಶದಲ್ಲಿ ಶಂಕಿತ ನಕ್ಸಲ್ ಯಲ್ಲಪ್ಪ ಹತ್ಯೆ.
 •  2014 ಎಪ್ರಿಲ್ 19- ನಕ್ಸಲ್ ಶಂಕೆಯಲ್ಲಿ ಕಬೀರ್ ಹತ್ಯೆ.

ನಕ್ಸಲ್ ನಿಗ್ರಹ ಪಡೆ ನಡೆಸಿದ ಈ ಎಲ್ಲಾ ಹತ್ಯೆಗಳು ಶಂಕೆಯ ಆಧಾರದಲ್ಲಿ ನಡೆದ ಹತ್ಯೆಗಳಾಗಿವೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.  ವ್ಯಕ್ತಿಯೊಬ್ಬ ನಕ್ಸಲ್ ಎಂದು ಸಂಶಯ ಬಂದರೆ ಸಾಕು, ಆತನ ಬಂಧನಕ್ಕಿಂತ ಹತ್ಯೆ ಮಾಡಿ ಕೈತೊಳೆದುಬಿಡುವುದೇ ಲೇಸು ಎಂಬುವಂತಿದೆ ಎ.ಎನ್.ಎಫ್ ಕಾರ್ಯವೈಖರಿ. ಕಳೆದ 10 ವರ್ಷಗಳಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಎಲ್ಲಾ ಹತ್ಯೆಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುವಂತಹದ್ದು, ಹತ್ಯಗೀಡಾದ ಶಂಕಿತ ನಕ್ಸಲರನ್ನು ತೀರಾ ಹತ್ತಿರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂಬ ಆರೋಪವನ್ನು ಸತ್ಯಶೋಧನಾ ಸಮಿತಿಗಳು ಮಾಡುತ್ತಿವೆ. ಕಬೀರ್ ಹತ್ಯೆಯಲ್ಲೂ ಇಂಥಹ ಅನೇಕ ಅನುಮಾನಗಳು, ಪ್ರಶ್ನೆಗಳು ಕಾಡುತ್ತಿವೆ.

 • ನಕ್ಸಲ್ ಎಂಬ ಅನುಮಾನ ಬಂದ ಕೂಡಲೇ ಎದೆಗೆ ಗುರಿಯಿಟ್ಟು ಹತ್ಯೆ ಮಾಡುವ ಅವಷ್ಯಕತೆ ಏನಿತ್ತು?
 • ಯಾವುದೇ ದಾಳಿ ನಡೆಯದೇ ಇದ್ದರೂ ಪ್ರತಿದಾಳಿ ನಡೆಸುವಂತಹ ಅಧಿಕಾರ ಎ.ಎನ್.ಎಫ್ ಗೆ ಇದೆಯಾ?
 • ವ್ಯವಸ್ಥೆಯ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು, ಆದಿವಾಸಿಗಳು, ದಲಿತರು, ಹಿಂದುಳಿದವರು, ಬಡವರ ಕುರಿತಾದ ಪ್ರಭುತ್ವದ ಧೋರಣೆಗೆ ಎ.ಎನ್.ಎಫ್ ಗುಂಡಿನ ದಾಳಿ ಸಾಕ್ಷಿಯಾಗಿದೆಯೇ?
 •  ಪೊಲೀಸ್ ವ್ಯವಸ್ಥೆಯಲ್ಲಿರುವ ಮತಾಂಧ ಮನಸ್ಥಿತಿ ಕಬೀರ್ ಹತ್ಯೆಗೆ ಪ್ರೆರಣೆ ನೀಡಿತೇ ?
 •  ರಾಷ್ಟ್ರೀಯ ಹೆದ್ದಾರಿಯಲ್ಲೇ ಅನುಮಾನದಿಂದ ಅಮಾಯಕನನ್ನು ನಕ್ಸಲ್ ಹೆಸರಲ್ಲಿ ಹತ್ಯೆಗೈದ ಎ.ಎನ್.ಎಫ್ ದಟ್ಟ ಅರಣ್ಯದಲ್ಲಿ ನಕ್ಸಲ್ ನಿಗೃಹದ ಹೆಸರಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಹೇಗಿರಬಹುದು?

ಕಬೀರ್ ಹತ್ಯೆ ಇಂಥಹ ಹತ್ತು ಹಲವಾರು ಪ್ರೆಶ್ನೆಗಳು, ಅನುಮಾನಗಳು ಎ.ಎನ್.ಎಫ್ ಕಾರ್ಯವೈಖರಿಯ ಕುರಿತಾಗಿ ಹುಟ್ಟುಹಾಕಿದೆ. ಪಶ್ವಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಿಸುವಲ್ಲಿ ಎ.ಎನ್.ಎಫ್ ಅಗತ್ಯ. ಆದರೆ ನಕ್ಸಲ್ ನಿಗ್ರಹದ ಹೆಸರಲ್ಲಿ ಅಮಾಯಕರ ನೆತ್ತರು ಹರಿಸುವ ಕಾಯಕದಲ್ಲಿ ತೊಡಗಿಕೊಂಡರೆ ನಕ್ಸಲ್ ನಿಯಂತ್ರಣ ಸಾಧ್ಯಾನಾ?

ಕಬೀರ್ ಹತ್ಯೆ ದಿಕ್ಕು ತಪ್ಪುತ್ತಿರುವ ಹೋರಾಟ

ಪಶ್ವಿಮ ಘಟ್ಟದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಹತ್ಯಾಕಾಂಡದ ಸರದಿಗೆ ಎಪ್ರಿಲ್ 19 ರಂದು ಶೃಂಗೇರಿಯ ಕೆರೆಕಟ್ಟೆ ತನಿಕೋಡು ಚೆಕ್ ಪೋಸ್ಟ್ ನಲ್ಲಿ ನಡೆದ ಕಬೀರ್ ಹತ್ಯೆ ಮತ್ತೊಂದು ಸೇರ್ಪಡೆಯಷ್ಟೇ. ವಿಪರ್ಯಾಸವೆಂದರೆ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾದ ಹೋರಾಟ ಎಲ್ಲೋ ದಾರಿ ತಪ್ಪುತ್ತಿದೆ ಎಂದನಿಸುತ್ತಿದೆ. ಹೋರಾಟಕ್ಕೆ ಧರ್ಮದ “ ಫ್ರೇಮ್ ” ಕೊಡುವ ಕಾರ್ಯ ನಡೆಯುತ್ತಿದೆ. ಎ.ಎನ್.ಎಫ್ ನಿಂದ ಕಬೀರ್ ಹತ್ಯೆಯ ನಂತರ ನಡೆದ ತೀರಾ ಅಮಾನವೀಯ ಘಟನಾವಳಿಗಳು ಕಬೀರ್ ಹತ್ಯೆಯ ಹೋರಾಟವನ್ನು ಧರ್ಮದ ಫ್ರೇಮ್ ನೊಳಕ್ಕೆ ತಳ್ಳಿ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾಗಿದ್ದ ಹೋರಾಟವನ್ನು ದಿಕ್ಕು ತಪ್ಪುವಂತೆ ಮಾಡಲಾಗುತ್ತಿದೆ.

ಪಶ್ವಿಮ ಘಟ್ಟದಲ್ಲಿ ಇದುವರೆಗೂ ಎ.ಎನ್.ಎಫ್ ದೌರ್ಜನ್ಯಕ್ಕೆ ಒಳಗಾದರು ಕೇವಲ ಮುಸ್ಲಿಮರಲ್ಲ, ಹಿಂದುಗಳಲ್ಲKabeer_ANF ಬದಲಾಗಿ ಇದನ್ನು ಮೀರಿ ನಿಂತ ಬಡವರು, ಆದಿವಾಸಿಗಳು, ಸಾಮಾಜಿಕ ಕಾರ್ಯಕರ್ತರು. ಪ್ರಭುತ್ವದ ಜನವಿರೋಧಿ ಯೋಜನೆಗಳಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಆನೆ ಕಾರಿಡಾರ್ , ಪುಷ್ಪಗಿರಿ ವನ್ಯಧಾಮ ಮೊದಲಾದವುಗಳು ಈ ಭಾಗದ ಹಿಂದುಗಳು, ದಲಿತರು, ಮುಸ್ಲಿಮರು, ಆದಿವಾಸಿಗಳು ಎಲ್ಲರ ಜೀವನವನ್ನು ಕಸಿದುಕೊಳ್ಳುವ ಯೋಜನೆಗಳಾಗಿದೆ. ಇಂತಹ ಯೋಜನೆಗಳಿಂದಾಗಿ ಈಗಾಗಲೇ ಅರಣ್ಯವಾಸಿಗಳು ನಾನಾ ರೀತಿಯಲ್ಲಿ ದೌಜನ್ಯಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಇನ್ನಷ್ಟು ಯೋಜನೆಗಳು ಜಾರಿಗೆ ಬಂದಲ್ಲಿ ಎಲ್ಲಾ ಧರ್ಮ, ಸಂಸ್ಕೃತಿಗಳ ಬಡ ಜನರು ತಮ್ಮ ಮನೆ ಮಠ ಆಸ್ತಿ, ನೆಲೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರದ ಇಂಥಹ ಯೋಜನೆಗಳನ್ನು ವಿರೋಧಿಸಿಯೇ ಈ ಭಾಗದಲ್ಲಿ ಚಳುವಳಿಗಳು ಹಟ್ಟುಕೊಂಡಿದ್ದು. ವಿರೋಧದ ಧ್ವನಿಗಳನ್ನು ಶಸ್ತ್ರದ ಮೂಲಕ ದಮನ ಮಾಡುವ ಉದ್ದೇಶದಿಂದ ಎ.ಎನ್.ಎಫ್ ಜನ್ಮ ತಾಳಿದೆ. ಪರಿಣಾಮ ಸಾಕಷ್ಟು ರಕ್ತ ಪಾತಗಳು ಪಶ್ವಿಮ ಘಟ್ಟದ ದಟ್ಟಾರಣ್ಯದಲ್ಲಿ ನಡೆಯುತ್ತಿವೆ. ಪ್ರಭುತ್ವದ ಇಂಥಹ ಮನಸ್ಥಿತಿಯೇ ಕಬೀರ್ ಹತ್ಯೆಗೆ ಕಾರಣವಾಗಿರುವುದು. ಯಾರನ್ನೂ ನಕ್ಸಲ್ ಎಂಬ ಶಂಕೆಯ ಹೆಸರಲ್ಲಿ ಗುಂಡಿಕ್ಕಿ ಕೊಲ್ಲುವುದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನ್ಯಾಯಸಮ್ಮತ ಹಾಗೂ ಅನಿವಾರ್ಯ ಎಂಬ ಭಾವನೆ ಪ್ರಭುತ್ವದ ಆದೇಶ ಪಾಲಕರಿಗಿದ್ದಂತಿದೆ. ಇಂಥಹ ಮನಸ್ಥಿತಿಯ ವಿರುದ್ಧ ಎಲ್ಲಾ ಜನಸಾಮಾನ್ಯರು ಹೋರಾಟ ನಡೆಸಬೇಕಾಗಿದೆ. ಕಬೀರ್ ಒಬ್ಬ ಮುಸ್ಲಿಮ್ ದನದ ವ್ಯಾಪಾರಿ ಎಂಬ ಕಾರಣಕ್ಕಾಗಿ ಆತನ ಹತ್ಯೆಯನ್ನು ಸಮರ್ಥಿಸುವುದು ತೀರಾ ಅಮಾನವೀಯ. ಅದೇ ರೀತಿ ಮುಸ್ಲಿಂ ಯುವಕನ ಹತ್ಯೆ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಧರ್ಮದ ಲೇಪನ ಕೊಟ್ಟು ಹೋರಾಟ ಮಾಡುವುದು ಸಮ್ಮತವಲ್ಲ.

ಮನುಷ್ಯನ ರಕ್ತ ಚೆಲ್ಲಿದಕ್ಕೆ ಪಾರಿತೋಷಕ ಕೊಡುವ ಅಮಾನವೀಯತೆ ಬೇಡ

‘ಸ್ವಾಮಿ ವಿವೇಕಾನಂದ ಸಮಾಜಮುಖಿ ಚಿಂತಕ’ ಪುಸ್ತಕದ 43 ನೇ ಪುಟದಲ್ಲಿ ದಾಖಲಾದಂತೆ ಗೋ ರಕ್ಷಣಾ ಸಭೆಯ ಪ್ರಚಾರಕರೊಂದಿಗೆ ಮಾತನಾಡುತ್ತಾ ಸ್ವಾಮಿ ವಿವೇಕಾನಂದ ಹೀಗನ್ನುತ್ತಾರೆ. “ಮಧ್ಯ ಹಿಂದೂಸ್ಥಾನದಲ್ಲಿ ಭಯಂಕರವಾದ ಕ್ಷಾಮ ಬಂದಿದೆ. ಹೊಟ್ಟೆಗಿಲ್ಲದೆ ಒಂದು ಲಕ್ಷ ಜನರು ಸತ್ತುಹೋದರೆಂದು ಇಂಡಿಯಾ ಸರ್ಕಾರದವರು ಪಟ್ಟಿಕೊಟ್ಟಿದ್ದಾರೆ. ನಿಮ್ಮ ಸಭೆ ದುರ್ಭೀಕ್ಷ ಕಾಲದಲ್ಲಿ ಏನಾದರೂ ಸಹಾಯ ಮಾಡುವುದಕ್ಕೆ ಏರ್ಪಾಡು ಮಾಡಿದೆಯೇನೋ?”

ಪ್ರಚಾರಕ: ನಾವು ದುರ್ಭೀಕ್ಷ ಮೊದಲಾಲಾದವುಗಳಿಗೆ ಸಹಾಯ ಮಾಡುವುದಿಲ್ಲ. ಕೇವಲ ಗೋ ಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ :ಅಣ್ಣ ತಮ್ಮಂದಿರಾದ ನಿಮ್ಮ ದೇಶದ ಜನರು ಲಕ್ಷ ಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿದ್ದಾರೆ, ಕೈಯಲ್ಲಾಗುತ್ತಿದ್ದರೂ ಇಂಥಹ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ಅನ್ನಿಸುವುದಿಲ್ಲವೇ ?

ಪ್ರಚಾರಕ : ಇಲ್ಲ; ಕರ್ಮ ಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯನಲ್ಲಿ ಸಹಾನುಭೂತಿಯನ್ನು ತೋರದೆ ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿತ್ತಿರುವುದನ್ನು ನೋಡಿಯೂ ಅವರ ಜೀವವನ್ನು ಉಳಿಸಲಿಕ್ಕೆ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ.

ಇಂಥಹ ಮಹಾನ್ ಸಂತ ಜನ್ಮ ತಾಳಿದ ಈ ನಾಡಿನಲ್ಲಿ ಎ.ಎನ್.ಎಫ್ ನಿಂದ ಹತ್ಯೆಗೀಡಾದ ಯುವಕ ಕಬೀರ್ ಗೋ ಸಾಗಾಟ ಮಾಡಿದ ಎಂಬ ಕಾರಣಕ್ಕಾಗಿ ಆತನ ಸಾವನ್ನು ಸಮರ್ಥಿಸಿಕೊಳ್ಳುವುದು, ಕಬೀರ್ ಸಾವಿಗೆ ಕಾರಣಕರ್ತನಾದ ಎ.ಎನ್.ಎಫ್ ಸಿಬಂಧಿಗೆ ಪಾರಿತೋಷಕಗಳನ್ನು ಘೋಷಣೆ ಮಾಡುವುದು ಅಮಾನವೀಯ ಅಲ್ಲವೇ? ಸ್ವಾಮಿ ವಿವೇಕಾನಂದರ ತತ್ವಾದರ್ಶದಲ್ಲಿ ಯಾರು ನಂಬಿಕೆ ಇಡುತ್ತಾರೋ ಅಂಥವರು ‘ಹತ್ಯೆಗೆ ಬಹುಮಾನ ಕೊಡುವ’ ನೀಚ ಮನಸ್ಥಿತಿಯನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ಎ.ಎನ್.ಎಫ್ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಆದಿವಾಸಿಗಳು ಮುಸ್ಲಿಮರಲ್ಲ. ಇವರಲ್ಲಿ ಅನೇಕರು ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಂಬಿಕೆ ಇಟ್ಟುಕೊಂಡವರು. ಕಬೀರ್ ಹತ್ಯೆಯನ್ನು ಅಭಿನಂದಿಸುವ ಹಿಂದೂ ಪರ ಸಂಘಟನೆಗಳು ಆದಿವಾಸಿಗಳ ಮೇಲಿನ ದಬ್ಬಾಳಿಕೆಗೆ ಪಾರಿತೋಷಕ ಕೊಡುತ್ತಾರೆಯೇ? ( ವಾಸ್ತವದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲಿನ ಪ್ರಭುತ್ವದ ದೌರ್ಜನ್ಯಕ್ಕೆ ಬೆಂಬಲವಾಗಿ ನಿಂತವರು ಈ ಧರ್ಮ ರಕ್ಷಕರು) ಕಬೀರ್ ಹತ್ಯೆಯನ್ನು ಹಿಂದೂ – ಮುಸ್ಲಿಂ ಸಂಘಟನೆಗಳು ಧರ್ಮದ ಆಧಾರದಲ್ಲಿ ವಿಭಜಿಸ ಹೊರಟಿರುವುದು ಪ್ರಭುತ್ವದ ಆದೇಶ ಪಾಲಕರಿಗೆ ಇನ್ನಷ್ಟು ಬಲ ಬಂದತಾಗಿದೆ. ಶಂಕೆಯ ಆಧಾರದಲ್ಲಿ ನಡೆದ ಅಮಾಯಕರ ಹತ್ಯೆಯನ್ನು ನಾಗರಿಕ ಸಮಾಜ ವಿರೋಧಿಸಬೇಕಾಗಿದೆ. ಇಂದು ಕಬೀರ್ ನಾಳೆ ಸುರೇಶ್ ನಾಡಿದ್ದು ಜೋಕಬ್ ಹೀಗೆ ಆಡಳಿತ ವರ್ಗದ ದಮನಕಾರಿ ನೀತಿಗೆ ಬಲಿಯಾಗುತ್ತಲೇ ಇರಬೇಕಾಗುತ್ತದೆ. ಕಬೀರ್ ಹತ್ಯೆ ವಿರುದ್ಧ ಧ್ವನಿ ಎತ್ತುವ ನೆಪದಲ್ಲಿ ಮುಸ್ಲಿಮ್ ಮತೀಯ ಸಂಘಟನೆಗಳು ಹೋರಾಟವನ್ನು ಧಾರ್ಮಿಕ ಚೌಕಟ್ಟಿಗೆ ಸೀಮಿತಗೊಳಿಸುವುದು ಹಾಗೂ ಕಬೀರ್ ಹತ್ಯೆ ಒಬ್ಬ ಮುಸ್ಲಿಮ್ ಯುವಕನ ಹತ್ಯೆ ಎಂಬ ಕಾರಣಕ್ಕಾಗಿ ಕೊಲೆಯನ್ನು ಸಮರ್ಥಿಸಿಕೊಳ್ಳುವುದು ಇವೆರಡು ತೀರಾ ಅಪಾಯಕಾರಿ.

36 thoughts on “ಎ.ಎನ್.ಎಫ್ ನಿಂದ ಕಬೀರ್ ಹತ್ಯೆ ಹಾಗೂ ದಿಕ್ಕು ತಪ್ಪುತ್ತಿರುವ ಹೋರಾಟ

 1. kirankkmr@gmail.com

  ಈ ಪೋಟೋದಲ್ಲಿ ಇರುವ ವ್ಯಕ್ತಿ ಅದು ಪೋಲೀಸ್ ಠಾಣೆಯಲ್ಲಿ ಇರುವ ವ್ಯಕ್ತಿ ಹೆಸರು ದಯಾಮಾಡಿ ಬೇಗ ತಿಳಿಸಿ

  Reply
 2. ವಿಜಯ್

  ೧) “ಬಡ ಆದಿವಾಸಿಗಳ ಮೇಲಿನ ದೌರ್ಜನ್ಯ ವಿರುದ್ಧ ದಂಗೆ ಎದ್ದು ಹೋರಾಟ ನಡೆಸುತ್ತಿರುವ ಶಕ್ತಿಗಳನ್ನು ” ಇಷ್ಟೆಲ್ಲ ವರ್ಣನೆ ಮಾಡಿ, ಅವರ್ಯಾರು ಎಂದು ಹೇಳದೇ ಇರುವುದು ತರವೆ? ಓದುಗರಿಗೆ ಈ ಧೀಮಂತ ಜನರ ಪರಿಚಯವಾದರೂ ಆಗುತ್ತಿತ್ತು!.

  ೨) [ನಕ್ಸಲರ ದಮನದ ಹೆಸರಲ್ಲಿ ನಡೆದ ಕಬೀರ್ ಹತ್ಯೆಯನ್ನು ಧರ್ಮದ ಬೇಲಿ ಕಟ್ಟಿ ಅದರ ನೆಲೆಗಟ್ಟಿನಲ್ಲಿ ನ್ಯಾಯ ಕೋರಿ ಹೋರಾಟ ನಡೆಯುತ್ತಿರುವುದು ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುವಂತಿದೆ.]
  ಮೇಲೆ ಹೀಗೆ ಬರೆದವರು, ಮೂರು ಪ್ಯಾರ ನಂತರ [ ಪೊಲೀಸ್ ವ್ಯವಸ್ಥೆಯಲ್ಲಿರುವ ಮತಾಂಧ ಮನಸ್ಥಿತಿ ಕಬೀರ್ ಹತ್ಯೆಗೆ ಪ್ರೆರಣೆ ನೀಡಿತೇ ?] ಎಂಬ ಅನುಮಾನ ವ್ಯಕ್ತಪಡಿಸುತ್ತೀರಿ.
  ನಿಮ್ಮ ಒಬ್ಬ ಸ್ನೇಹಿತ ಲೇಖಕರಂತೂ,
  [ದನವನ್ನು ಅಧಿಕೃತವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆಗಟ್ಟಿದ ಹಿಂದುತ್ವವಾದಿ ಪೊಲೀಸರು ಕಬೀರ್ ನನ್ನು ಕೊಲೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.]
  [ ಇವೆಲ್ಲವನ್ನೂ ನೋಡಿದಾಗ ಭಜರಂಗದಳದ ಅಜೆಂಡಾದ ಭಾಗವಾಗಿಯೇ ಶೂಟೌಟ್ ನಡೆದಿರುವಂತೆ ಕಾಣುತ್ತಿದೆ.]
  [ ಹೆಚ್ಚುತ್ತಿರುವ ಮುಸ್ಲಿಂ-ದಲಿತ-ಮಹಿಳೆಯರ ಮೇಲಿನ ದಾಳಿ]
  [ಕಾಂಗ್ರೆಸ್ ಸರಕಾರ ಬಂದ ನಂತರ ಮುಸ್ಲೀಮರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿಗಳು ಹೆಚ್ಚಾಗಿವೆ.]
  [ಇದೇ ಧೈರ್ಯದಲ್ಲಿ ಪೊಲೀಸರು ಅಲ್ಪಸಂಖ್ಯಾತರು-ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ.]
  ಎಂದೆಲ್ಲ ಬರೆದು, ಇಡಿ ವಿಷಯವನ್ನು ಜಾತಿ ಮತದ ದೌರ್ಜನ್ಯವೆ ಎಂಬಂತೆ ಬಿಂಬಿಸಿದ್ದಾರೆ.
  ಇನ್ನೊಬ್ಬ ಲೇಖಕರು
  [ಪೊಲೀಸರ ಹತ್ಯೆ ಮತ್ತು ಬಜರಂಗದಳದವರ ಕೃತ್ಯಗಳಲ್ಲಿ ಢಾಳಾಗಿ ಕಾಣಿಸುವುದು ಮುಸ್ಲಿಮರನ್ನು ಈ ವ್ಯವಸ್ಥೆ ಹಾಗೂ ಕೋಮುವಾದಿ ಮನಸುಗಳು ಕಾಣುವ ಬಗೆ. ಇಂತಹ ಘಟನೆಗಳು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಅನಾಥ ಪ್ರಜ್ಞೆ ಮೂಡಿಸಿದರೆ ಅಚ್ಚರಿಯೇನಿಲ್ಲ. ಈ ಭಾವನೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗದೇ ಹೋಗುವವರು ಹೆಚ್ಚೆಚ್ಚು ಸಂಘಟಿತರಾಗಲು ಆ ಮೂಲಕ ರಕ್ಷಣೆ ಪಡೆಯಲು ಮೂಲಭೂತವಾದದ ಕಡೆಗೆ ಮುಖ ಮಾಡಬಹುದು.]
  ಎಂದೆಲ್ಲ ಬರೆದು ಹೆದರಿಸಿದ್ದಾರೆ ಕೂಡ!
  ಹೀಗಿರುವಾಗ ಕಬೀರನ ಹತ್ಯೆಯನ್ನು ಕೋಮಿನ ವಿಷಯವನ್ನಾಗಿ ಮಾಡಿದ್ದು ಯಾರು ಸ್ವಾಮಿ?

  ೩) [ ಪಶ್ವಿಮ ಘಟ್ಟದಲ್ಲಿ ಇದುವರೆಗೂ ಎ.ಎನ್.ಎಫ್ ದೌರ್ಜನ್ಯಕ್ಕೆ ಒಳಗಾದರು ಕೇವಲ ಮುಸ್ಲಿಮರಲ್ಲ, ಹಿಂದುಗಳಲ್ಲ ಬದಲಾಗಿ ಇದನ್ನು ಮೀರಿ ನಿಂತ ಬಡವರು, ಆದಿವಾಸಿಗಳು, ಸಾಮಾಜಿಕ ಕಾರ್ಯಕರ್ತರು. ಪ್ರಭುತ್ವದ ಜನವಿರೋಧಿ ಯೋಜನೆಗಳಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಆನೆ ಕಾರಿಡಾರ್ , ಪುಷ್ಪಗಿರಿ ವನ್ಯಧಾಮ ಮೊದಲಾದವುಗಳು ಈ ಭಾಗದ ಹಿಂದುಗಳು, ದಲಿತರು, ಮುಸ್ಲಿಮರು, ಆದಿವಾಸಿಗಳು ಎಲ್ಲರ ಜೀವನವನ್ನು ಕಸಿದುಕೊಳ್ಳುವ ಯೋಜನೆಗಳಾಗಿದೆ.]
  ಈ ಕಾಡಿನ ನಕ್ಸಲ್ ರನ್ನು ಬೆನ್ನತ್ತುವುದಕ್ಕಿಂತ ಮೊದಲು ನಾಡಿನ ನಕ್ಸಲ್ ರನ್ನು ಜಾತಿ-ಮತ ನೋಡದೆ ಬೆಂಡೆತ್ತಬೇಕು . ಆಗ ಪರಿಸ್ಥಿತಿ ತಾನಾಗಿ ಸುಧಾರಿಸುತ್ತದೆ. ಶಿಕ್ಷಿತನಾಗಿ ತನ್ನ ಸಮುದಾಯಕ್ಕೆ ಆಸ್ತಿಯಾಗಬಹುದಾಗಿದ್ದ ವಿಠಲ್ ಮಲೆಕುಡಿಯನಂಥವರನ್ನು ಬ್ರೇನ್ ವಾಶ ಮಾಡಿ, ಅವನ ಬಾಳನ್ನು ದಿಕ್ಖೆಡಿಸಿದವರು ಮೊದಲು ನಾಶವಾಗಬೇಕು. ತಮ್ಮ ಗಂಜಿ ಸಂಪಾದನೆಗೆ ನಾಡಿನ ನಕ್ಸಲ್ ರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು, ಬೇರೆಯವರ ಜೀವವನ್ನು ಬಲಿ ಕೊಡಲು ಬಲ್ಲರು. ಬಿಳಿರಂಗನ ಬೆಟ್ಟದ ಡಾ.ಸುದರ್ಶನ ನಿನ್ನೆ ಮನೆಯಂಗಳ ಕಾರ್ಯಕ್ರಮದಲ್ಲಿ ಹೇಳಿದ ‘ಕಾಡು ಜನರ ನೇತೃತ್ವದಲ್ಲಿಯೇ ಯೋಜನೆಗಳನ್ನು ರೂಪಿಸುವುದು, ಅಭಿವೃದ್ಧಿ ಮಾಡುವುದರಿಂದ ಕಾಡಿಗೆ ನಕ್ಸಲ್ ರ ಪ್ರವೇಶವನ್ನು ತಡೆಯಬಹುದು’ ಎಂಬ ಮಾತನ್ನು ಇಲ್ಲಿ ನೆನೆಯ ಬಯಸುತ್ತೇನೆ.

  ೪) [ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯನಲ್ಲಿ ಸಹಾನುಭೂತಿಯನ್ನು ತೋರದೆ ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿತ್ತಿರುವುದನ್ನು ನೋಡಿಯೂ ಅವರ ಜೀವವನ್ನು ಉಳಿಸಲಿಕ್ಕೆ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ.]
  ಅನುಕೂಲಕ್ಕೆ ತಕ್ಕಂತೆ ವಿವೇಕಾನಂದರನ್ನು ಉಲ್ಲೇಖಿಸುವ ಪರಿ ಸಂತೋಷ ಕೊಟ್ಟಿತು. ಅಂದಹಾಗೆ, ಕಬೀರ ಬರಗಾಲದಲ್ಲಿದ್ದವರಿಗೆ ಹೊಟ್ಟೆ ತುಂಬಿಸಲು ದನ ಸಾಗಣೆ, ದನ ಕಳ್ಳ ಸಾಗಣೆ ಮಾಡುತ್ತಿದ್ದನೆ? ನ್ಯಾಯಮಾರ್ಗದಲ್ಲಿ ಒಯ್ಯಬಹುದಾದ ಮೂರನ್ನಷ್ಟೇ ಒಯ್ದರೆ, ಉಳಿದವರು ಉಪವಾಸ ಬಿದ್ದು ಸಾಯಬಹುದು ಎಂದು ವ್ಯಾನಿಗೆ ಇಪ್ಪತ್ತೊಂದು ಗೋವುಗಳನ್ನು ತುಂಬಿಸಿದನೆ? ನೀವೇ ಉಲ್ಲೇಖಿಸಿದ ವಿವೇಕಾನಂದರ ವಾಕ್ಯವನ್ನು ಓದಿ, ಇಲ್ಲಿ ವಿವೇಕಾನಂದರು ಪಶು-ಪಕ್ಷಿಗಳಿಗೆ ಅನ್ನ, ರಕ್ಷಣೆ ಕೊಡಬೇಡಿ ಎಂದು ಹೇಳಲಿಲ್ಲ, ಸಹಾನುಭೂತಿ ತೋರದಿರಿ ಎಂದು ಹೇಳಲಿಲ್ಲ.. ಬದಲಿಗೆ, ಎಲ್ಲರೂ ಬದುಕೋಣ ಎಂದಿದ್ದು. ನೀವಿದನ್ನು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ದನ ಸತ್ತ ಬಗ್ಗೆ, ಅವುಗಳನ್ನು ಅಮಾನವೀಯವಾಗಿ ಮೂಟೆಗಳಂತೆ ತುರುಕಿ ಸಾಗಾಟ ಮಾಡುತ್ತಿದ್ದರ ಬಗ್ಗೆ ಮುರುಗಬೇಡಿ..ಬದಲಿಗೆ ‘ಅಮಾಯಕ’ ಕಬೀರನಿಗಾಗಿ ಮರುಗಿ ಎಂದು ಹೇಳಲು ಬಳಸುತ್ತಿರುವುದಕ್ಕೆ ಏನನ್ನಬೇಕೊ?. ಕಬೀರನ ಜಾಗದಲ್ಲಿ ಪ್ರಮೋದ ಪೂಜಾರಿಯೇ ಗುಂಡೇಟಿಗೆ ಬಲಿಯಾಗಿದ್ದರೂ ಈ ಅಮಾನವೀಯತೆಯನ್ನು ಪ್ರಶ್ನೆ ಮಾಡಿಯೇ ಮಾಡುತ್ತಿದ್ದೆವು ಮತ್ತು ಅವನ ಸಾವನ್ನು ಕೂಡ ಕಬೀರ ನ ಸಾವಿನಂತೆ ಪರಿಗಣಿಸುತ್ತಿದ್ದೆವು. ಕೋಮನ್ನು ಹಿನ್ನಲೆಯಾಗಿಟ್ಟುಕೊಂಡು, ಈ ವಿಷಯವನ್ನು ಬಳಸಿದ್ದು/ಬೆಳೆಸಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತಿದ್ದೇ ಇದೆ.

  ಸತ್ತಿದ್ದು ಕಬೀರ..ಆದರೆ ಆತನ ಸಾವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡವರು ಅದಕ್ಕಾಗಿಯೇ ಕಾದು ಕುಳಿತಂತಹ ಜನ. ಒಂದು ಗುಂಪಿಗೆ ತನ್ನ ಮತಬ್ಯಾಂಕನ್ನು ಭಾವಾನಾತ್ಮಕವಾಗಿ ಕೆರಳಿಸಿ ತನ್ನೆಡೆಗೆ ಮಾಡಿಕೊಳ್ಳಬೇಕಿತ್ತು.. ಇನ್ನೊಂದು ಗುಂಪಿಗೆ ಕಾಡಿನಲ್ಲಿ ANF ಕೂಂಬಿಂಗ ಆಪರೇಶನ್ ಕಡಿಮೆ ಮಾಡಿಸಿ, ತನ್ನ ಬಂಧು-ಬಾಂಧವರ ಓಡಾಟಕ್ಕೆ ಅನುಕೂಲ ಕಲ್ಪಿಸಿ ಕೊಡಬೇಕಾಗಿತ್ತು. ಸಧ್ಯಕ್ಕೆ ಇವೆರಡನ್ನು ತಕ್ಕ ಮಟ್ಟಿಗೆ ಸಾಧಿಸಲಾಗಿದೆ. ಈ ಲೇಖನಗಳು ಕಿವಿಯ ಮೇಲಿಟ್ಟ ಹೂವುಗಳಷ್ಟೆ!

  Reply
 3. PRAVEEN shetty

  ವಿಜಯ್ ಅವರೇ ನಿಮ್ಮಂತಹಾ ನೂರಾರು ಭಜರಂಗಿ ವಿಜಯ್ ಗಳು ಆಡುವ ಮಾತು ಇದೆನೇ ……… ಇದರಲ್ಲಿ ಹೊರದೇನೂ ಇಲ್ಲ. ಕಬೀರ್ ಹತ್ಯೆಯನ್ನು ಕೋಮು ಬಣ್ಣಕ್ಕೆ ತಿರುಗಿಸಿದ್ದು ನಿಮ್ಮಂತಹಾ ಭಜರಂಗಿಗಳೇ. ಸತ್ತ ಹೆಣ ಪಡೆಯಲು ಹೋದ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ನಿಮ್ಮಂತಹಾ ಮುನುಷ್ಯತ್ವ ಇಲ್ಲದವರಿಂದ ಇಂಥಹಾ ಅಭಿಪ್ರಾಯಗಳು ಮಾಮೂಲು. ನನಗೆ ಲೇಕಕರು ತಮ್ಮ ಲೇಖನದಲ್ಲಿ ಕಬೀರ್ ಹತ್ಯೆಯನ್ನು ಧರ್ಮದ ಆಧಾರದಲ್ಲಿ ನೋಡಿರುವುದು ಕಂಡುಬರುವುದಿಲ್ಲ. ಬದಲಾಗಿ ನಿಮ್ಮಂಹತಾ ಭಜರಂಗಿಗಳು ಕಬೀರ್ ಸಾವನ್ನು ಕೋಮು ಬಣ್ಣ ಹಚ್ಚುವಾಗ , ಸಾವಿಗೆ ಬಹುಮಾನಗಳನ್ನು ಘೋಷಿಸುವಾಗ ಇದಕ್ಕೆ ಪರ್ಯಾಯವಾಗಿ ಮುಸ್ಲಿಂ ಮೂಲಭೂತವಾದ ಸಂಘಟನೆಗಳು ಕಬೀರ್ ಹತ್ಯೆಯನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿದ್ದಾರೆ. ಕಬೀರ್ ಬದಲು ಹಿಂದೂ ಯುವಕನೊಬ್ಬ ಹತ್ಯೆಯಾಗಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎನ್ನುವ ನಿಮಗೆ ನಾಚಿಕೆಯಾಗಬೇಕು. ಎ.ಎನ್.ಎಫ್ ನಿಂದ ಕೊಲ್ಲಲ್ಪಟ್ಟವರು ಮುಸ್ಲಿಂಮರೇ? ಅವರು ಆದಿವಾಸಿ ಹಿಂದುಗಳಲ್ಲವೇ? ಹಿಂದುಗಳು ನಾವೆಲ್ಲಾ ಒಂದು ಎನ್ನುವಾಗ ನಿಮಗೆ ಇವರು ನಿಮ್ಮವರು ಎಂದನಿಸುವುದಿಲ್ಲವೇ ? ಧರ್ಮಸ್ಥಳದಲ್ಲಿ ಸೌಜನ್ಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದಾಗ ಅದರ ವಿರುದ್ಧ ಧ್ವನಿ ಎತ್ತಲು ನಿಮಗೆ ಸಾಧ್ಯವಾಗಲಿಲ್ಲ. ನಿಮ್ಮಂತಹರಿಗೆ ಈ ವಿಚಾರದ ಬಗ್ಗೆ ಚರ್ಚೆ ಮಾಡುವ ನೈತಿಕತೆ ಇಲ್ಲ ವಿಜಯ್ . ಪಾಪ ನಿಮ್ಮಂತಹಾ ಭಜರಂಗಿಗಳು ಕಿವಿಮೇಲೆ ಇಟ್ಟ ಹೂಗಳಿಗೆ ಪಾಪ ಅಮಾಯಕ ಹಿಂದೂ ಸಮಾಜ ಯುವಕರು ಬಲಿಯಾಗುತ್ತಿದೆ.

  Reply
  1. ವಿಜಯ್

   @ಪ್ರವೀಣ ಶೆಟ್ಟಿ..
   ಬೇರೆ ಯಾರಿಗೂ ಪ್ರಾಪ್ತವಾಗದ ‘ಉನ್ನತ ಮಾನವೀಯ ಮೌಲ್ಯ’ ಗಳ ಅಧೀಕೃತ ದಾಸ್ತಾನುಗಾರರಾಗಿರುವ ನಿಮ್ಮ ಗುಂಪಿನವರು, ತಮ್ಮ ವಾದಗಳನ್ನು ವಿರೋಧಿಸುವ ಇತರರನ್ನು ಕಾಣುವುದು ಭಜರಂಗದಳ/ವಿಶ್ವಹಿಂದುಪರಿಶತ್/ಬಿಜೆಪಿ/ಮೋದಿ ಬೆಂಬಲಿಗರು ಎಂದೆ!..ಇದರಲ್ಲಿ ವಿಶೇಷವೇನಿಲ್ಲ. ಅದು ನಿಮ್ಮಗಳ ವಿಚಾರದ ಮಿತಿ!.

   [ಕಬೀರ್ ಹತ್ಯೆಯನ್ನು ಕೋಮು ಬಣ್ಣಕ್ಕೆ ತಿರುಗಿಸಿದ್ದು ನಿಮ್ಮಂತಹಾ ಭಜರಂಗಿಗಳೇ. ಸತ್ತ ಹೆಣ ಪಡೆಯಲು ಹೋದ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ನಿಮ್ಮಂತಹಾ ಮುನುಷ್ಯತ್ವ ಇಲ್ಲದವರಿಂದ ಇಂಥಹಾ ಅಭಿಪ್ರಾಯಗಳು ಮಾಮೂಲು.]
   ಹೌದೆ? ಸಕತ್ತಾಗಿದೆ ನಿಮ್ಮ ವಿಚಾರಧಾರೆ. ಸತ್ತ ಹೆಣ ಪಡೆಯಲು ಹೋದವರ ಮೇಲೆ ಹಲ್ಲೆ ಮಾಡಿದವರೆಲ್ಲ ಭಜರಂಗಿಗಳೆ ಆಗಿರಬೇಕೆ ಸತ್ತವನು ಮುಸ್ಲಿಂ ಆಗಿದ್ದರಿಂದ?? ಮೇಯಲು ಬಿಟ್ಟ ದನಗಳನ್ನು ಕದಿಯುವ ಇವರ ದನಗಳ್ಳತನದಿಂದ ರೋಷಗೊಂಡಿರುವವರು, ಸ್ವಂತ ದನಗಳನ್ನು ಕಳೆದುಕೊಂಡಿರುವವರು ಆಗಿರಬಾರದೆ?.ದ.ಕ ದಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಂರ ಜೊತೆ ಹೊಡೆದಾಟ ಮಾಡಿದವನು, ಎಡ ಪಂಥಿಗಳಿಗೆ ಬಾರಿಸಿದವನು ಸಂಘ ಪರಿವಾರದವನೇ ಆಗಿರಬೇಕೆಂಬುದು ನಿಮ್ಮ ಗಳ ಅಲಿಖಿತ ನಿಯಮ!.

   [ಇದಕ್ಕೆ ಪರ್ಯಾಯವಾಗಿ ಮುಸ್ಲಿಂ ಮೂಲಭೂತವಾದ ಸಂಘಟನೆಗಳು ಕಬೀರ್ ಹತ್ಯೆಯನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿದ್ದಾರೆ.]
   ಈ ಘಟನೆಗೆ ಕಿಡಿ ಯನ್ನು ಗಾಳಿ ಊದುತ್ತ ಜೀವಂತವಾಗಿರಿಸಿದ್ದು ಯಾರು ಅನ್ನುವುದು ಗೊತ್ತಿದೆ..ಸುಮ್ಮನೆ ಈಗದನ್ನು ಮುಸ್ಲಿಂ ಮೂಲಭೂತವಾದ ಸಂಘಟನೆಗಳ ಮೇಲೆ ದೂಡಬೇಡಿ. ಈ ಘಟನೆ out of proportion ಹಿಗ್ಗುವಂತೆ ಮಾಡಿದ್ದು ನಮ್ಮ ನಡುವೆ ಇರುವ ನಾಡಿನ ನಕ್ಸಲ್ ರು ಮತ್ತು ಅದನ್ನು ರಾಜಕೀಯವಾಗಿ ಬಳಸಿಕೊಂಡಿದ್ದು ಆಳುವ ಪಕ್ಷದ ಶಾಸಕರು..ಇಬ್ಬರಿಗೂ ತಮ್ಮದೇ ಆದ ಸ್ವಾರ್ಥವಿತ್ತು..ಕಬೀರನ ಸಾವನ್ನು ತಮ್ಮ ಬೇಳೆ ಬೇಯಿಸಲು ಬಳಸಿಕೊಂಡರಷ್ಟೆ.

   [ನನಗೆ ಲೇಕಕರು ತಮ್ಮ ಲೇಖನದಲ್ಲಿ ಕಬೀರ್ ಹತ್ಯೆಯನ್ನು ಧರ್ಮದ ಆಧಾರದಲ್ಲಿ ನೋಡಿರುವುದು ಕಂಡುಬರುವುದಿಲ್ಲ.]
   ಯಾರು ಯಾವ ಆಧಾರದ ಮೇಲೆ ನೋಡಿದರು ಎನ್ನುವುದಕ್ಕೆ ಉದಾಗರಣೆಗಳನ್ನು ಅವರವರ ಲೇಖನಗಳಿಂದಲೇ ಎತ್ತಿ ಕೊಟ್ಟಿದ್ದೇನೆ. ಆದರೂ ನಿಮಗೆ ‘ಕಂಡು ಬರುವುದಿಲ್ಲ’ ಅಂದರೆ..ಅದು ನನ್ನ ಸಮಸ್ಯೆಯಲ್ಲ.

   [ಕಬೀರ್ ಬದಲು ಹಿಂದೂ ಯುವಕನೊಬ್ಬ ಹತ್ಯೆಯಾಗಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎನ್ನುವ ನಿಮಗೆ ನಾಚಿಕೆಯಾಗಬೇಕು.]
   ಮೊದಲು ನಾನು ಬರೆದದ್ದನ್ನು ಸರಿಯಾಗಿ ಓದಿ ಆಮೇಲೆ ಕಮೆಂಟ್ ಮಾಡಿ..ನಿಮ್ಮ ತಲೆಯಲ್ಲಿ ಬಂದದ್ದನ್ನು ‘ನಾನು ಹೇಳಲು ಹೊರಟಿದ್ದು’ ಎಂದು ಕಲ್ಪಿಸಿಕೊಂಡು ಬರೆಯದಿರಿ. .[ಕಬೀರನ ಜಾಗದಲ್ಲಿ ಪ್ರಮೋದ ಪೂಜಾರಿಯೇ ಗುಂಡೇಟಿಗೆ ಬಲಿಯಾಗಿದ್ದರೂ ಈ ಅಮಾನವೀಯತೆಯನ್ನು ಪ್ರಶ್ನೆ ಮಾಡಿಯೇ ಮಾಡುತ್ತಿದ್ದೆವು ]..ಇದರ ಮೇಲಿನ ವಾಕ್ಯವನ್ನು ಓದಿದ್ದರೆ ನಿಮಗೆ ನಾನು ಯಾವ ಅಮಾನವೀಯತೆಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಗೊತ್ತಾಗುತ್ತದೆ. ನಾನು ಮಾತನಾಡುತ್ತಿದ್ದುದು ‘ದನಗಳ ಅಮಾನವೀಯ ಸಾಗಾಟದ ಬಗ್ಗೆ’ . ಕಬೀರನ ಜಾಗದಲ್ಲಿ ಪ್ರಮೋದ ಪೂಜಾರಿ ಇದ್ದಿದ್ದರೂ ಈ ವಿಷಯದ ಬಗ್ಗೆ ನನ್ನ ನಿಲುವು ಬದಲಾಗುತ್ತಿರಲಿಲ್ಲ ಎಂಬರ್ಥದಿಂದ ಬರೆದಿದ್ದೇನೆ.

   [ಧರ್ಮಸ್ಥಳದಲ್ಲಿ ಸೌಜನ್ಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದಾಗ ಅದರ ವಿರುದ್ಧ ಧ್ವನಿ ಎತ್ತಲು ನಿಮಗೆ ಸಾಧ್ಯವಾಗಲಿಲ್ಲ. ನಿಮ್ಮಂತಹರಿಗೆ ಈ ವಿಚಾರದ ಬಗ್ಗೆ ಚರ್ಚೆ ಮಾಡುವ ನೈತಿಕತೆ ಇಲ್ಲ ವಿಜಯ್ ]
   ಧರ್ಮಸ್ಥಳದ ಹೋರಾಟದಲ್ಲಿ ಯಾವತ್ತು ಎಡಪಂಥಿಗಳು ಹೊಕ್ಕರೊ ಆವಾಗಲೇ ಆ ಹೋರಾಟದ ದಿಕ್ಕು ತಪ್ಪಿದೆ, ಅಜೆಂಡ ಪ್ರೇರಿತ, ಗಂಜಿ ಸಂಪಾದನೆಯ ಹೋರಾಟವಿದು ಎಂದು ಎಲ್ಲರಿಗೂ ಗೊತ್ತಾಗಿತ್ತು. ಮಹೇಶ ಶೆಟ್ಟಿ ತಿಮರೋಡಿಯನ್ನು ಬಳಸಿಕೊಂಡು, ತಲೆ ಮೇಲೆ ಹೊತ್ತುಕೊಂಡು ಕುಣಿದಾಡಿದವರು ಈಗ ಆ ಮನುಷ್ಯ ಬಿಜೆಪಿಗೆ ಬೆಂಬಲ ಕೊಟ್ಟ ಮೇಲೆ ಒಮ್ಮಿಂದೊಮ್ಮೆಗೆ ಅವರ ವಿರುದ್ಧವಾಗಿರುವುದೇಕೆ?? ಇವರುಗಳಿಗೆ ಮಹೇಶ ಶೆಟ್ಟರು ಮಾಡಿದ ‘ಸೌಜನ್ಯ ಪರ ಹೋರಾಟ’ ಈಗ ನಗಣ್ಯವೆನಿಸುತ್ತಿದೆಯೆ?? ಇದನ್ನು ನೋಡಿದಾಗಲೇ ಗೊತ್ತಾಗುದಿಲ್ಲವೆ ನಿಮ್ಮಗಳ ‘ಸೌಜನ್ಯ ಪರ ಹೋರಾಟ’ ಯಾವ ಅಜೆಂಡದಿಂದ ಪ್ರೇರಿತವಾಗಿತ್ತು ಅಂತ?
   ಕರಾವಳಿ ಅಲೆಯ ವರದಿಗಾರ ವಿಠಲ್ ಶೆಟ್ಟಿಯವರಿಗೆ, ಮುಸ್ಲಿಂ ಸಂಘಟನೆಯೊಂದು ನಾಯಿಗೆ ಹೊಡೆದ ಹಾಗೆ ಹೊಡೆದಾಗ, ಇಂತಹ ‘ಉಗ್ರ ಹೋರಾಟ’ ವೇಕೆ ಇರಲಿಲ್ಲ ನಿಮ್ಮ ಗುಂಪಿನಿಂದ?? ಬ್ಲಾಗಿನಲ್ಲಿ/ ಪೇಪರಿನಲ್ಲಿ ಒಂದೆರಡು ಸಂತಾಪ ಸೂಚಕ ಲೇಖನಗಳನ್ನು ಬರೆದು, ”ಉಗ್ರವಾಗಿ ಖಂಡಿಸುತ್ತೇವೆ’ ಎನ್ನುವುದನ್ನು ಬಿಟ್ಟು, ಬೇರೆನಾದರೂ ಮಾಡಿದ್ರಾ? ಮೊದಲು ನಿಮ್ಮ ದ್ವಂದ್ವ ಗಳನ್ನು ತಿದ್ದಿಕೊಳ್ಳಿ, ಆಮೇಲೆ ಉಳಿದವರಿಗೆ ನೈತಿಕತೆ ಬೋಧಿಸಿ.

   [ಪಾಪ ನಿಮ್ಮಂತಹಾ ಭಜರಂಗಿಗಳು ಕಿವಿಮೇಲೆ ಇಟ್ಟ ಹೂಗಳಿಗೆ ಪಾಪ ಅಮಾಯಕ ಹಿಂದೂ ಸಮಾಜ ಯುವಕರು ಬಲಿಯಾಗುತ್ತಿದೆ.]
   ಛೆ…ಹೀಗೆ ಬಲಿಯಾಗಬಾರದು ಎಂದು ನಾಡಿನ ಕೆಲವು ಚಾಣಾಕ್ಷರು ಅವರನ್ನು ಬ್ರೈನ್ ವಾಶ್ ಮಾಡಿ, ಕೈಗೆ ಬಂದೂಕು ಕೊಟ್ಟು ಕಾಡಿಗೆ ಕಳಿಸುತ್ತಿದ್ದಾರೆ..ತಾವಿಲ್ಲಿ ಜಾಥಾ/ಧರಣಿ/ಸೆಮಿನಾರ ಮುಂತಾದ ಟೈಂಪಾಸ್ ಆಕ್ಟಿವಿಟಿಗಳನ್ನು ಮುಂದುವರೆಸಿದ್ದಾರೆ!.

   Reply
 4. Godbole

  [ಮೇಯಲು ಬಿಟ್ಟ ದನಗಳನ್ನು ಕದಿಯುವ ಇವರ ದನಗಳ್ಳತನದಿಂದ ರೋಷಗೊಂಡಿರುವವರು, ಸ್ವಂತ ದನಗಳನ್ನು ಕಳೆದುಕೊಂಡಿರುವವರು ಆಗಿರಬಾರದೆ?]

  ಮಂಗಳೂರಿನ ಎಂ ಎಲ್ ಎ ಒಬ್ಬರು ಭಜರಂಗದಳದವರಿಗೆ ಕೆಟ್ಟ ಹೆಸರು ಬರಲಿ ಎಂದು ಸ್ಥಳೀಯ ಗೂಂಡಾಗಳಿಗೆ ಕಾಸು ಕೊಟ್ಟು ಅವರ ಕೈಯಲ್ಲಿ ಕಬೀರನ ಕುಟುಂಬದವರಿಗೆ ಹೊಡೆಸಿದರು ಅಂತ ವಿಶ್ವಸನೀಯ ಸುದ್ದಿ ಮೂಲಗಳು ಹೇಳಿವೆ.

  Reply
 5. PRAVEEN shetty

  ತಿಳುವಳಿಕೆ ಇಲ್ಲದೇ ಮಾತನಾಡಬೇಡಿ ಮಿ. ವಿಜಯ್ ಕಬೀರ್ ಹತ್ಯೆಯನ್ನು ಸಮರ್ಥಿಸಿ ಒಂದರ ನಂತರ ಒಂದರಂತ್ತೆ ಹೇಳಿಕೆಕೊಡುತ್ತಿರುವವರು ನಿಮ್ಮ ಚೆಡ್ಡಿ ಮಿತ್ರರು ಆಗೂ ಅದನ್ನು ಅನುಮೋದಿಸುವವರು. ಕಬೀರ್ ಹತ್ಯೆ ಮಾಡಿದ ಎ.ಎನ್ಎಫ್ ಯೋಧನಿಗೆ 1 ಲಕ್ಷ ಬಹುಮಾನವನ್ನು ಘೋಷಿಸುವುದು ಅಮಾನವಿಯ ಅಲ್ಲವೇ , ಕಬೀರ್ ಮೇಲೆ ಗುಂಡಿಟ್ಟ ಯೊಧನಿಗೆ ಶಿಕ್ಷೆಯಾದರೆ 50 ಲಕ್ಷ ರೂಪಾಯಿ ಯೊಧನಿಗೆ ಪರಿಹಾರ ನೀಡುತ್ತೇನೆ ಎನ್ನುವುದು ಅಮಾನವೀಯ ಅಲ್ಲವೇ , ಗೋ ಹತ್ಯೆಯನ್ನು ನಿಲ್ಲಿಸಲು ಗೋ ಸಾಗಾಟಗಾರರ ಮೇಲೆ ಗುಂಡಿಕ್ಕಿ ಕೊಲೆ ಮಾಡುವುದು ಪರಿಹಾರ ಎನ್ನುವ ಶಾಸಕ ಸುನೀಲ್ ಕುಮಾರ್ ಅವರ ಹೇಳಿಕೆ ಅಮಾನವೀಯ ಅಲ್ಲವೇ ಕಬೀರ್ ಹತ್ಯೆಯನ್ನು ಕೋಮು ಬಣ್ಣಕ್ಕೆ ತಿರುಗಿಸುವವರು ಯಾರು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ ? ನಾನೊಬ್ಬ ವರ್ತಮಾನದ ಓದುಗನಾಗಿದ್ದೇನೆ. ಅನೇಕ ಲೇಖನಗಳನ್ನು ಗಮನಿಸುತ್ತಿರುತ್ತೇನೆ , ಇದು ಪ್ರಗತಿಪರ ಚಿಂತನೆಗಳಿಗೆ ವೇದಿಕೆ. ನಿಮ್ಮಂತಹಾ ಕೋಮುವಾದಿಗಳಿಗೆ ಸಹಜವಾಗಿ ಇಂಥಹಾ ಲೇಖನಗಳು ಉರಿ ಶುರುಮಾಡುತ್ತವೆ. ಸಹಜ ಬಿಡಿ. ಲೇಖಕರ ಮನಸ್ಥಿತಿ ಸರಿಯಾಗಿದೆ ಬದಲಾಗಬೇಕಾಗಿದ್ದು ನಿಮ್ಮ ಚಿಂತನೆ ಸ್ವಾಮಿ , ಧರ್ಮಸ್ಥಳದ ಹೋರಾಟವನ್ನು ದಾರಿ ತಪ್ಪಿಸಿದ್ದು ಎಡಪಂಥೀಯರಲ್ಲ ನಿಮ್ಮ ಚಿಂತನೆಯುಳ್ಳ ತಿಮರೋಡಿಯವರು . ಅದನ್ನು ರಾಜಕೀಯ ಲಾಬಕ್ಕಾಗಿ , ಧರ್ಮಸ್ಥಳದ ಹೆಗ್ಗಡೆಯವರ ಕುಟುಂಬದ ಮೇಲಿನ ವಯಕ್ತಿ ದ್ವೇಶಕ್ಕಾಗಿ ಅದನ್ನು ಬಳಸಿಕೊಂಡಿದ್ದಾರೆ. ಎಡಪಪಂಥೀಯರ ಹೋರಾಟ ನಿರಂತರ ಸಾಗುತ್ತಿದೆ. ಅದು ಇರಲಿ ಆಶ್ಚರ್ಯವಾಗುತ್ತಿದೆ ನಿಮ್ಮ ಈ ಹೇಳಿಕೆ ನೋಡಿ “ಈ ಘಟನೆಗೆ ಕಿಡಿ ಯನ್ನು ಗಾಳಿ ಊದುತ್ತ ಜೀವಂತವಾಗಿರಿಸಿದ್ದು ಯಾರು ಅನ್ನುವುದು ಗೊತ್ತಿದೆ..ಸುಮ್ಮನೆ ಈಗದನ್ನು ಮುಸ್ಲಿಂ ಮೂಲಭೂತವಾದ ಸಂಘಟನೆಗಳ ಮೇಲೆ ದೂಡಬೇಡಿ.” ರಕ್ತದಲ್ಲೇ ಮುಸ್ಲಿಂಮರ ವಿರುದ್ಧ ಕಿಡಿಕಾರುತ್ತಿರುವ ನಿಮ್ಮಂತವರಿಗೆ ದಿಢೀರ್ ಮುಸ್ಲಿಂ ಮೂಲಭೂತವಾದಿಗಳ ಕುರಿತಾಗಿ ಪ್ರೀತಿ ಹುಟ್ಟಲು ಕಾರಣ ದಯಮಾಡಿ ವಿವರಿಸಿ ಮಾನ್ಯ ವಿಜಯ್ ಅವರೇ ? ಕಾತುರನಾಗಿದ್ದೇನೆ ಉತ್ತರ ಪಡೆಯಲು. ಧನ್ಯವಾದಗಳು.

  Reply
  1. ವಿಜಯ್

   [ತಿಳುವಳಿಕೆ ಇಲ್ಲದೇ ಮಾತನಾಡಬೇಡಿ ಮಿ. ವಿಜಯ್ ಕಬೀರ್ ಹತ್ಯೆಯನ್ನು ಸಮರ್ಥಿಸಿ ಒಂದರ ನಂತರ ಒಂದರಂತ್ತೆ ಹೇಳಿಕೆಕೊಡುತ್ತಿರುವವರು ನಿಮ್ಮ ಚೆಡ್ಡಿ ಮಿತ್ರರು ಆಗೂ ಅದನ್ನು ಅನುಮೋದಿಸುವವರು.]
   ನಿಮ್ಮ ಚೆಡ್ಡಿ ಹಾಕದ ಮಿತ್ರರು ಘಟನೆಯ ಪ್ರತ್ಯಕ್ಷದರ್ಶಿಗಳಂತೆ ಅದೊಂದು ಮೊದಲೇ ನಿರ್ಣಯಿಸಲ್ಪಟ್ಟ ಎನ್ ಕೌಂಟರ್ ಎಂಬಂತೆ ತಮ್ಮ ಎಂದಿನ ಪುಂಗಿಯೂದಿ ಘಟನೆಯ ಲಾಭ ಪಡೆಯಲು ಕವಣಿಸಿದ ಮೇಲೆಯೇ ಚೆಡ್ಡಿ ಹಾಕುವವರು ಆಟಕ್ಕಿಳಿದಿದ್ದು!. ಎಲ್ಲ ಘಟನಾವಳಿಯನ್ನು ಗಮನಿಸಿ, ಯಾರ ಪ್ರವೇಶದ ನಂತರ ಬೆಂಕಿ ಹತ್ತಿಕೊಂಡಿತು ಎಂಬುದನ್ನು ಕೂಡ ಗಮನಿಸಿ. ರಾಡಿ ಮಾಡಿ ಸಮ್ಮನೆ ಇನ್ನೊಬ್ಬರನ್ನು ದೂರುವುದನ್ನು ನಿಲ್ಲಿಸಿ. ಅದಕ್ಕೆ ನಾನು ಬರೆದಿದ್ದು [ಈ ಘಟನೆಗೆ ಕಿಡಿ ಯನ್ನು ಗಾಳಿ ಊದುತ್ತ ಜೀವಂತವಾಗಿರಿಸಿದ್ದು ಯಾರು ಅನ್ನುವುದು ಗೊತ್ತಿದೆ..ಸುಮ್ಮನೆ ಈಗದನ್ನು ಮುಸ್ಲಿಂ ಮೂಲಭೂತವಾದ ಸಂಘಟನೆಗಳ ಮೇಲೆ ದೂಡಬೇಡಿ.] ಎಂದು..ನಾನಿಲ್ಲಿ ಮುಸ್ಲಿಂ ಮೂಲಭೂತವಾದಿಗಳನ್ನು ಅಪ್ಪಿಕೊಳ್ಳಲಿಲ್ಲ. ನೀವು ಮೊಸರು ತಿಂದು ಅವರ ಬಾಯಿಗೆ ಒರೆಸಬೇಡಿ ಎಂದು ಹೇಳಿದ್ದು!.

   [ನಾನೊಬ್ಬ ವರ್ತಮಾನದ ಓದುಗನಾಗಿದ್ದೇನೆ. ಅನೇಕ ಲೇಖನಗಳನ್ನು ಗಮನಿಸುತ್ತಿರುತ್ತೇನೆ , ಇದು ಪ್ರಗತಿಪರ ಚಿಂತನೆಗಳಿಗೆ ವೇದಿಕೆ. ನಿಮ್ಮಂತಹಾ ಕೋಮುವಾದಿಗಳಿಗೆ ಸಹಜವಾಗಿ ಇಂಥಹಾ ಲೇಖನಗಳು ಉರಿ ಶುರುಮಾಡುತ್ತವೆ. ಸಹಜ ಬಿಡಿ ಲೇಖಕರ ಮನಸ್ಥಿತಿ ಸರಿಯಾಗಿದೆ ಬದಲಾಗಬೇಕಾಗಿದ್ದು ನಿಮ್ಮ ಚಿಂತನೆ ಸ್ವಾಮಿ]
   ಈ ಸ್ವಘೋಷಿತ ಮಾನವತಾವಾದಿಗಳ, ಪ್ರಗತಿಪರರು ಆಗಾಗ ಅಪರೂಪಕ್ಕಾದರೂ ಕನ್ನಡಿ ನೋಡುವ ಹವ್ಯಾಸ ಇಟ್ಟುಕೊಂಡರೆ ಒಳ್ಳೆಯದು!

   [ಧರ್ಮಸ್ಥಳದ ಹೋರಾಟವನ್ನು ದಾರಿ ತಪ್ಪಿಸಿದ್ದು ಎಡಪಂಥೀಯರಲ್ಲ ನಿಮ್ಮ ಚಿಂತನೆಯುಳ್ಳ ತಿಮರೋಡಿಯವರು . ಅದನ್ನು ರಾಜಕೀಯ ಲಾಬಕ್ಕಾಗಿ , ಧರ್ಮಸ್ಥಳದ ಹೆಗ್ಗಡೆಯವರ ಕುಟುಂಬದ ಮೇಲಿನ ವಯಕ್ತಿ ದ್ವೇಶಕ್ಕಾಗಿ ಅದನ್ನು ಬಳಸಿಕೊಂಡಿದ್ದಾರೆ. ಎಡಪಪಂಥೀಯರ ಹೋರಾಟ ನಿರಂತರ ಸಾಗುತ್ತಿದೆ]
   ನಿಮ್ಮ ಬಾಯಿಯಿಂದಲೇ ಈ ಮಾತುಗಳು ಬರಲಿ ಎಂದು ಕಾಯುತ್ತಿದ್ದೆ!..ಮೊದಲು ಗೊತ್ತಾಗಿರಲಿಲ್ಲವೆ ಈ ಸತ್ಯ..ತಲೆ ಮೇಲೆ ಹೊತ್ತು ಮೆರೆಸುವಾಗ..ಅವರ ಹೋರಾಟದ ವೇದಿಕೆಗೆ ಹೋಗಿ ಭಾಷಣ ಬಿಗಿಯುವಾಗ?? ಹೋರಾಟಕ್ಕೆ ಅವರನ್ನೇ ಉತ್ಸವ ಮೂರ್ತಿಯನ್ನಾಗಿ ಮಾಡುವಾಗ? ನಿಮ್ಮ ಎಡಪಂಥಿಯರು ಏನು ನಿಸ್ವಾರ್ಥ ಹೋರಾಟ ಮಾಡಿದರೆ?? ನಿಮ್ಮ ನಿಸ್ವಾರ್ಥ ಹೋರಾಟದ ಕಾಗೆ-ಗುಬ್ಬಿ ಕಥೆಯನ್ನು ಧರ್ಮಸ್ಥಳದ ಅಕ್ಕ-ಪಕ್ಕದವರೇ ನಂಬುತ್ತಾರೆಯೊ ಎಂದು ಒಮ್ಮೆ ಪರಿಕ್ಷಿಸಿ ನೋಡಿ!.

   [ರಕ್ತದಲ್ಲೇ ಮುಸ್ಲಿಂಮರ ವಿರುದ್ಧ ಕಿಡಿಕಾರುತ್ತಿರುವ ನಿಮ್ಮಂತವರಿಗೆ ದಿಢೀರ್ ಮುಸ್ಲಿಂ ಮೂಲಭೂತವಾದಿಗಳ ಕುರಿತಾಗಿ ಪ್ರೀತಿ ಹುಟ್ಟಲು ಕಾರಣ ದಯಮಾಡಿ ವಿವರಿಸಿ ಮಾನ್ಯ ವಿಜಯ್ ಅವರೇ ? ಕಾತುರನಾಗಿದ್ದೇನೆ ]
   ಮೇಲೆ ಉತ್ತರ ಕೊಟ್ಟಿದ್ದೇನೆ. ಇನ್ನೊಂದೆನೆಂದರೆ..ಸ್ವಾಮಿ..ನನಗೆ ಮುಸ್ಲಿಂರ ಬಗ್ಗೆ ಪ್ರೀತಿಯಿದೆಯೊ ಅಥವಾ ದ್ವೇಷವಿದೆಯೊ ಎಂಬ ಬಗ್ಗೆ ನಿಮ್ಮಿಂದ, ಅದೂ ಎಡಪಂಥೀಯರಿಂದ/ ಕೃಪಾಪೋಷಿತ ನಾಟಕ ಮಂಡಳಿಯಿಂದ ನನಗೆ ಸರ್ಟಿಫೀಕೆಟ್ ಬೇಕಾಗಿಲ್ಲ.
   ಮರು ಧನ್ಯವಾದಗಳು.

   Reply
 6. ಕೀರ್ತಿ ಬೆಂಗಳೂರು

  ಎಷ್ಟಾದರೂ ಬಲಪಂಥೀಯರೆಲ್ಲರೂ ಒಂದೇ ಅಲ್ವೇ , ಪ್ರವೀಣ್ ಅವರೇ ವಿಜಯ್ ಅವರಂತಹಾ ಬಲಪಂಥೀಯರು ಮುಸ್ಲಿಂ ಮೂಲಭೂತವಾದಿ ಜೊತೆ ಕೈಜೋಡಿಸುವುದು ಸಹಜ. ಇದು ಅಂತರಾಷ್ಟ್ರೀಯ ಮಟ್ಟದಲ್ಲೇ ನಡೆಯುತ್ತಿರುವ ವಿಷಯ ಬಿಡಿ.

  Reply
  1. avani

   ಕೀರ್ತಿ ಅವರೆ ಚನ್ನಾಗಿ ಕುಟುಕಿದ್ದೀರಾ . ಎಲ್ಲರೂ ಹಿಂದುಗಳ ಬಲ ಪಂಥಿತ್ವವನ್ನು ತೆಗಳುತ್ತಾರೆ ವಿನಾ ಮುಸ್ಲಿಂರ ಬಲಪಂಥ ವಿಚಾರಗಳನ್ನು ತೆಗಳುವದೇ ಇಲ್ಲ. ಅವರ ಧರ್ಮದ ಕೊಂಕು ಕುರಿತು ಮಾತನಾಡುವದಿಲ್ಲ. ಏಕೆಂದರೆ ಮುಸ್ಲಿಂರು ತಲೆ ಕೈಕಾಲು ಕಡಿಯಲು ಆದೇಶಿಸುತ್ತಾರೆ ಎಂಬ ಹೆದರಿಕೆಯಿಂದ.

   Reply
 7. ಕೀರ್ತಿ ಬೆಂಗಳೂರು

  ಪ್ರಿಯ ವಿಜಯ್ ಅವರೇ, ವಿಟ್ಲದಲ್ಲಿ ಪತ್ರಕರ್ತ ವಿ.ಟಿ ಪ್ರಸಾದ್ ಮೇಲೆ ಹಲ್ಲೆ ಫಿ.ಎಪ್.ಐ ಗೂಂಡಾಗಳಿಂದ ಹಲ್ಲೆ ನಡೆದಾದ ಅದನ್ನು ನಿಮ್ಮ ದೃಷ್ಟಿಯಲ್ಲಿ ಕಪಟ ಜ್ಯಾತ್ಯಾತೀತರು ಎನ್ನುವವರು ತೀಕ್ಷವಾಗಿ ಖಂಡಿಸಿದ್ದಾರೆ. ಜಿಲ್ಲೆಯಯಲ್ಲಿ ನಡೆಯುತ್ತಿರುವ ಹಿಂದೂ ಮೂಲಭೂತವಾದ ಹಾಗೂ ಮುಸ್ಲಿಂ ಮೂಲಭೂತವಾಗಿಗಳ ನೈತಿಕ ಪೊಲಿಸ್ ಗಿರಿಯಯನ್ನು ಇವರೆಲ್ಲಾ ಖಂಡಿಸುತ್ತಲೇ ಬಂದಿದ್ದಾರೆ. ನಿಮಗೆ ಬಹುಷಃ ಇದರ ಅರಿವಿರಲಿಕ್ಕಿಲ್ಲ. ಅಥ ಸಂಘಪರಿವಾರದ ಜನರ ರೀತಿಯಲ್ಲಿ ಸತ್ಯ ಗೊತ್ತಿದ್ದರೂ ಅದನ್ನು ಸುಳ್ಳು ಮಾಡುವ ಪ್ರಯತ್ನ ನಿಮ್ಮದಿರಬಹುದು. ಅರ್ಥವಾಗದ ಸಂಗತಿ ಎಂದರೆ ಅಂಥಹಾ ಮುಸ್ಲಿಂ ಮೂಲಭೂತವಾಗಿಗಳ ಪರವಾಗಿ ನೀವೇ ಮಾತನಾಡುತ್ತಿದ್ದೀರಲ್ಲಾ ನನಗಂತ್ತೂ ಅರ್ಥವಾಗುತಿಲ್ಲಪ್ಪಾ??????? ಪ್ರವೀಣ್ ಅವರೇ ನಿಮ್ಮಂತೆ ವಿಜಯ್ ಅವರ ಉತ್ತರಕ್ಕಾಗಿ ನಾನೂ ಕಾತುರನಾಗಿದ್ದೇನೆ .

  Reply
  1. ವಿಜಯ್

   [ಜಿಲ್ಲೆಯಯಲ್ಲಿ ನಡೆಯುತ್ತಿರುವ ಹಿಂದೂ ಮೂಲಭೂತವಾದ ಹಾಗೂ ಮುಸ್ಲಿಂ ಮೂಲಭೂತವಾಗಿಗಳ ನೈತಿಕ ಪೊಲಿಸ್ ಗಿರಿಯಯನ್ನು ಇವರೆಲ್ಲಾ ಖಂಡಿಸುತ್ತಲೇ ಬಂದಿದ್ದಾರೆ. ನಿಮಗೆ ಬಹುಷಃ ಇದರ ಅರಿವಿರಲಿಕ್ಕಿಲ್ಲ.]
   ಕೀರ್ತಿ ಅವರೆ..ಕಳೆದ ಮೂರು-ನಾಲ್ಕು ವರುಷಗಳಿಂದ ಇವರ ಒಂದೊಂದು ನಡೆಯನ್ನು ಚೆನ್ನಾಗಿ ಗಮನಿಸುತ್ತಲೇ ಬಂದಿದ್ದೇನೆ. ಇವರು ಯಾವ-ಯಾವ ಸಮಯದಲ್ಲಿ ಎಂತೆಂತಹ ಆಟ ಆಡುತ್ತಾರೆ..ಇವರ ನಡೆ ಹೇಗಿರುತ್ತದೆ ಎಂಬ ಬಗ್ಗೆಯೂ ತಿಳುವಳಿಕೆ ಹೊಂದಿದ್ದೇನೆ. ಆದ್ದರಿಂದ ನಾನು ಈ ವಿಷಯದಲ್ಲಿ ಪೂರ್ವಾಗ್ರಹ ಪೀಡಿತನಾಗಿದ್ದೇನೆ, ಯಾವುದೋ ಪಂಥ/ಸಿದ್ಧಾಂತವನ್ನು ಅಪ್ಪಿಕೊಂಡು ಈ ರೀತಿ ಹೇಳುತ್ತಿದ್ದೇನೆ ಎಂಬುದು ನಿಮ್ಮ ನಂಬಿಕೆಯಾದಲ್ಲಿ ಅದು ನಿಮಗೆ ಬಿಟ್ಟಿದ್ದು..ನನಗೆ ಅಭ್ಯಂತರವಿಲ್ಲ.

   [ಮುಸ್ಲಿಂ ಮೂಲಭೂತವಾಗಿಗಳ ಪರವಾಗಿ ನೀವೇ ಮಾತನಾಡುತ್ತಿದ್ದೀರಲ್ಲಾ ನನಗಂತ್ತೂ ಅರ್ಥವಾಗುತಿಲ್ಲಪ್ಪಾ??????? ]
   ಅರ್ಥವಾಗುವಂತಹ ಉತ್ತರವನ್ನು ಮೇಲಿನ ಕಮೆಂಟ್ ನಲ್ಲಿ ಕೊಟ್ಟಿದ್ದೇನೆ!

   Reply
 8. Salam Bava

  ನಮ್ಮಲ್ಲಿ ಜನಾರ್ಧನ ಪೂಜಾರಿಯವರು ಕೆಲವು ಸಂಧರ್ಭಗಳಲ್ಲಿ ಒಂದು ಮಾತು ಹೇಳುತ್ತಾ ಇರುತ್ತಾರೆ ‘ಮೇಲು ಜಾತಿಯವರು ಬಿಲ್ಲವ, ಮೊಗವೀರ ಯುವಕರಿಗೆ ಖಡ್ಗ,ಗುರಾಣಿ ಕೊಟ್ಟು ದಂಗೆಗೆ ಕಳುಹಿಸಿದರು ,ತಮ್ಮ ಮಕ್ಕಳನ್ನು ಮಾತ್ರಾ ಡಾಕ್ಟರ್ ,ಇಂಜಿನೀಯರ್ ಮಾಡಿ ಒಂಧಾ ಅಮೇರಿಕಾ ,ಯರೋಪಿಗೆ ಕಳುಹಿಸಿದರು ಅಥವಾ ದೊಡ್ಡ,ದೊಡ್ಡ ಹುದ್ದೆಯಲ್ಲಿ ನೇಮಿಸಿದರು ‘. ಈ ಸಂದರ್ಭಕ್ಕೆ ಅವರ ಮಾತು ತುಂಬಾ ಸಾಮ್ಯತೆ ತರುತ್ತದೆಯಲ್ಲವೇ ?ಇದು ಮುಸ್ಲಿಮರಿಗೂ ಅನ್ವಯಿಸುತ್ತದೆ ಎಂದು ನನಗೆ ಅನಿಸುತ್ತದೆ

  Reply
  1. Godbole

   ಪೂಜಾರಿಯವರು ಬಿಲ್ಲವ ಜಾತಿಯೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವ ಕಾಂಗ್ರೆಸ್ ರಾಜಕಾರಣಿ. ಬಿಲ್ಲವರ ವೋಟು ಭಾಜಪಗೆ ಗಣನೀಯ ಸಂಖ್ಯೆಯಲ್ಲಿ ಹರಿದು ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ
   ಪೂಜಾರಿ ಅವರಿಗೆ ಬಿಲ್ಲವರ ವೋಟು ಹಾಗೂ ಮೊಗವೀರ ಮೊದಲಾದ ಜಾತಿಗಳ ವೋಟು ಬೇಕಾಗಿದೆ, ಅವರ ರಾಜಕೀಯ ಅಸ್ತಿತ್ವಕ್ಕೆ. ಅದಕ್ಕೋಸ್ಕರ ಬಿಲ್ಲವರನ್ನು ಬಂಟ ಬ್ರಾಹ್ಮಣ ಗೌಡ ಮೊದಲಾದ ಸೋ ಕಾಲ್ಡ್ ಮೇಲು ಜಾತಿಗಳ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಆದುದರಿಂದ ಪೂಜಾರಿಯವರ ರಾಜಕೀಯ ಪ್ರೇರಿತ ಮಾತುಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ ಬಾವ ಅವರೇ!

   Reply
   1. Salam Bava

    ಅವರು ರಾಜಕಾರಣಿ ಹೌದು ,ಬಿಲ್ಲವ ಮುಖಂಡರೂ ಹೌದು .ಬಿಲ್ಲವರಿಗೆ ರಾಜಕೀಯ ಶಕ್ತಿಯನ್ನು ಕೂಟ್ಟು ,ಅವರನ್ನು ಮುಖ್ಯ ವಾಹಿನಿಗೆ ತಂದು ಅವರ ಆತ್ಮಾಭಿಮಾನವನ್ನು ಬಡಿದೆಬ್ಬಿಸಿದವರು,ಅಭಿವ್ರದ್ದಿ ಮಾಡಿದವರು ಪೂಜಾರಿ . ಆದ್ರೆ ತದ ನಂತರ ಮುಂದಿನ ಪೀಳಿಗೆ ಸಂಘಿಗಳ ಕಪಿ ಮುಷ್ಟಿಗೆ ಸಿಲುಕಿ ಇವರನ್ನು ಮರತದ್ದು ಒಂದು tragedy

    Reply
  2. Godbole

   ಸಲಾಂ ಬಾವ ಅವರೇ, ತನಿಕೋಡು ಘಟನೆ ಬಗ್ಗೆ ಸಿ ಓ ಡಿ ತನ್ನ ವರದಿ ಸಲ್ಲಿಸಿದೆ. ಸಿ ಓ ಡಿ ವರದಿ ಪ್ರಕಾರ ಕಬೀರ ಅವರಿಗೆ ಗುಂಡು ಬಿದ್ದಿರುವುದು ನೀವು ಹೇಳಿದ ಹಾಗೆ ಅವರ ಎದೆಗಲ್ಲ!! ಕಬೀರ ಅವರ ಬೆನ್ನು ಹಾಗೂ ಭುಜಕ್ಕೆ ಗುಂಡು ಬಿದ್ದಿದೆ ಅಂತ ಶವವನ್ನು ತಪಾಸಣೆ ಮಾಡಿದ ತಜ್ಞರು ಹೇಳಿದ್ದಾರೆ. 🙂 ಇದರ ಬಗ್ಗೆ ಏನು ಹೇಳುತ್ತೀರಿ ನೀವು?

   Reply
   1. Salam Bava

    Mr.Godbole- “ಪೋಲಿಸರಿಂದ ಪೋಲೀಸರಿಗಾಗಿ ಪೋಲಿಸರೇ” ನಡೆಸಿದ ತನಿಖೆಯಿಂದ ಬೇರೆ ಯಾವ ವಿಧದ ರಿಪೋರ್ಟ್ ಬರಬಹುದು. .ಕೇವಲ ನ್ಯಾಯಾಂಗ ತನಿಖೆಯಿಂದ ಮಾತ್ರಾ ಸತ್ಯ ಹೊರಬರಬಹುದು . ಆದ್ರೆ ಗ್ರಹ ಮಂತ್ರಿ ಅದಕ್ಕೆ ಸಮ್ಮತಿಯನ್ನು ಕೊಡುತ್ತಿಲ್ಲ ,ಯಾಕೆಂದರೆ ಅವರಿಗೆ ಗೂತ್ತಿದೆ ಕಬೀರ್ ನಿರಪರಾದಿ ,ಅವನ ಹತ್ಯೆ ಒಂದು ತರದ Trigger happyಪೋಲಿಸ್ ನಡೆಸಿದ ಪಾಪಕ್ರತ್ಯ ಎಂದು .

    Reply
    1. bhatmahesht

     ಸಲಾಮ್ ಬಾವಾರವರೇ, ಪೋಲೀಸರಿಂದ ಪೋಲೀಸರಿಗಾಗಿ ಪೋಲೀಸರೇ ನಡೆಸಿದ ತನಿಖೆಯನ್ನು ನಂಬಲು ಅಸಾಧ್ಯ ಎಂದು ಹೇಳುವದಾದರೆ, ಮುಸ್ಲಿಮರ ಪರವಾಗಿ ಮಾತನಾಡುವ ಮುಸ್ಲಿಮರ ಮಾತುಗಳು ಪೂರ್ವಾಗ್ರಹ ಪೀಡಿತವಾಗಿರುತ್ತವೆ ಎಂದು ಹೇಳಬಹುದಲ್ಲವೇ ?

     Reply
   2. ವಿಜಯ್

    @ಗೋಡಬೊಲೆ..
    ಅವರ ರಿಪೋರ್ಟ ಏನೇ ಬಂದಿರಬಹುದು.. ಆದರೆ ಅವರ ರಿಪೋರ್ಟ್ ;ಇವರ’ ರಿಪೋರ್ಟ ಪ್ರಕಾರ ಇಲ್ಲ..ಆದ್ದರಿಂದ ಇದು ಅನ್ಯಾಯವೆ!
    ೧) ಪೋಸ್ಟ್ ಮಾರ್ಟಮ್ ನಡೆಸಿದ ಡಾಕ್ಟರ್ ಸಂಘಪರಿವಾದವರು ಆಗಿರಬಾರದೇಕೆ? ಪ್ರಭಾವಿತನಾದವರು ಆಗಿರಬಾರದೇಕೆ?
    ೨) ತನಿಖೆ ನಡೆಸಿದ ಪೋಲಿಸರು ಮತಾಂಧರಲ್ಲವೆಂಬ ಖಾತ್ರಿ ಇದೆಯೆ ನಿಮಗೆ?
    ಈ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ ಸ್ಕಾಟ್ ಲ್ಯಾಂಡ್ ಯಾರ್ಡ್ ಪೋಲಿಸರಿಂದ ತನಿಖೆ ಮಾಡಿಸಬೇಕು..!!

    Reply
    1. Godbole

     “ಈ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ ಸ್ಕಾಟ್ ಲ್ಯಾಂಡ್ ಯಾರ್ಡ್ ಪೋಲಿಸರಿಂದ ತನಿಖೆ ಮಾಡಿಸಬೇಕು..!!”

     ಅಕ್ರಮ ಗೋ ಸಾಗಾಣಿಕದಾರ ಕಬೀರನ ಸಾವಿನ ಪ್ರಕರಣವನ್ನು (ಇಸ್ರೇಲ್ ಹೊರತಾಗಿ) ಮಧ್ಯಪ್ರಾಚ್ಯ ದೇಶಗಳ ಪೊಲೀಸರಿಂದ ತನಿಖೆ ಮಾಡಿಸಿದರೆ ಉತ್ತಮ ಅಂತ ನನ್ನ ಭಾವನೆ! ಶೀಘ್ರವೇ ಕಬೀರ ಶವವನ್ನು ಗಲ್ಫಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾನ್ಯ ಗೃಹಮಂತ್ರಿಗಳು ಮಾಡಬೇಕು ಅಂತ ವಿನಂತಿ.

     Reply
     1. Salam Bava

      ನಿಮ್ಮ problem ಏನೆಂದರೆ ಮುಸ್ಲಿಂ ಎಂದು ಹೆಸರು ಕೇಳಿದಾಕ್ಸ್ಣ ,ಅದನ್ನು ಗೇಲಿ ಮಾಡೋದು. ಅದು ಅಮಾಯಕರ ಸಾವೇ ಇರಲಿ, ಅದರಲ್ಲೂ ಪರಮ ಸುಖ ಕಾಣುವವರು. ಎಲ್ಲಾ ಸುಮನಸ್ಕರ ಬೇಡಿಕೆ-ಕಬೀರ್ ಹತ್ಯಾ ಕಾಂಡ ದ ತನಿಖೆ ಯನ್ನು CBI ಗೆ ವಹಿಸಲು . ಇಲ್ಲವಾದರೆ ೨೦೦೦ ಸಾವಿರ ನರಹತ್ಯಗೆ ಕಾರಣವಾದ ಮೋದಿಯನ್ನುCET ಸುಮ್ಮನೆ Clean Chit ಕೊಟ್ಟಿದ್ದರೆ ,ಇನ್ನು ಇಂಥ ಚಿಲ್ಲರೆ ಕೇಸು ಯಾರು care ಮಾಡುತ್ತಾರೆ. ಅದನ್ನೇ ಫಾಲೂ ಮಾಡಲು ಮತ್ತೆ ” ನಾಮೋ” ದಂಥ ,ಪೇಯ್ಡ್ , ಪ್ರೊಫೆಷನಲ್ ಕಾಮೆಂಟಿಗರು ಕಬೀರನಿಗೆ ಯಾರು
      ಇದ್ದಾರೆ?

     2. Godbole

      ಸಲಾಮ್ ಬಾವ ಅವರೆ, ಬಾಯಿಗೆ ಬಂದ ಹಾಗೆ ಮಾತನಾಡಬೇಡಿ. ನಾನೆಂದೂ ಅ) ಮುಸ್ಲಿಮ್ ಹೆಸರು ಹೇಳಿದಾಕ್ಷಣ ಅದನ್ನು ಗೇಲಿ ಮಾಡಿಲ್ಲ. ಆ) ಅಮಾಯಕರ ಸಾವಿನಲ್ಲಿ (ಅವರು ಯಾರೇ ಆಗಿರಲಿ) ಪರಮ ಸುಖ ಕಂಡಿಲ್ಲ. ಇ) ಪೇಯ್ಡ್ ಪ್ರೊಫೆಷನಲ್ ಕಮೆಂಟಿಗನಾಗಿ ಕೆಲಸ ಮಾಡಿಲ್ಲ. ಈ) ಮೋದಿಯ ಬೆಂಬಲಕ್ಕೆ ನಿಂತಿಲ್ಲ. ನೀವು ನಿಜಕ್ಕೂ ಸತ್ಯದ ಪರವಾಗಿ ಮಾತನಾಡುವವರಾಗಿದ್ದರೆ ನಿಮ್ಮ ಮೇಲಿನ ಆಪಾದನೆಗಳನ್ನು ಆಧಾರಗಳ ಸಹಿತ ರುಜುವಾತು ಪಡಿಸಿ.

      ಕಬೀರನ ಕಳೇಬರದ ಪೋಸ್ಟ್ ಮಾರ್ಟಮ್ ಅನ್ನು ಮಧ್ಯಪ್ರಾಚ್ಯ ದೇಶಗಳ ಪೋಲೀಸರಿಂದ ಮಾಡಿಸಿ ಅಂತ ಹೇಳಿದ್ದು ವ್ಯಂಗ್ಯದಿಂದ. ಆದರೆ ನನ್ನ ವ್ಯಂಗ್ಯ ಕಬೀರನ ಕುರಿತು ಅಲ್ಲ, ಅದು
      “ಪೋಲೀಸರಿಂದ ಪೋಲೀಸರಿಗಾಗಿ ಪೋಲೀಸರೇ ನಡೆಸಿದ ತನಿಖೆ” ಎಂದು ಹೇಳಿದವರ ಕುರಿತು. ಅಲ್ಲೇಲ್ಲೋ ಮಧ್ಯಪ್ರಾಚ್ಯ ದೇಶವೊಂದರಲ್ಲಿ ಕುಳಿತು ಈ ನಾಡಿನ ಪೋಲೀಸ್ ತನಿಖೆ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಹುಂಬರಿದ್ದಾರಲ್ಲ ಅವರ ಕುರಿತು.

      ಒಬ್ಬ ಅಕ್ರಮ ದನ ಸಾಗಣಿಕದಾರನ ಸಾವಿನ ಬಗ್ಗೆ ಇಷ್ಟೆಲ್ಲಾ ರಂಪ ಮಾಡುತ್ತಿರುವ ನೀವು ಮುಳಬಾಲಿಗಿನ ಮಸೀದಿಯಲ್ಲಿ ಕುರಾನ್ ಸುಟ್ಟ ಕಾರಣಕ್ಕೆ ಮುಸಲ್ಮಾನರಿಂದಲೇ ಬರ್ಬರವಾಗಿ ಹತ್ಯೆಗೀಡಾದ ಅಮಾಯಕ ಮುಸಲ್ಮಾನ ಯುವಕನ ಬಗ್ಗೆ ಏಕೆ ನ್ಯಾಯ ಬೇಕು ಅಂತ ಕೇಳುವುದಿಲ್ಲ? ಎಲ್ಲರ ಮುಂದೆ ಕೊಲೆಯಾದ ಆ ಯುವಕನ ಸಹೋದರಿ ಹಾಗೂ ತಾಯಿ ಕೊಲೆಗಾರರನ್ನು ಗುರುತಿಸಲು ಮುಂದೆ ಬಂದಿದ್ದರೂ ಏಕೆ ಕೊಲೆಗಾರರ ಬಂಧನವಾಗಿಲ್ಲ? ಅವರಿಗೆ ರಾಜಕೀಯ ಆಶ್ರಯ ನೀಡಿರುವ ಮುಸಲ್ಮಾನ ನಾಯಕರ ವಿರುದ್ಧ ನೀವು ಒಂದೂ ಮಾತನ್ನಾಡುವುದಿಲ್ಲ? ಹೇಳಿ ಬಾವ ಅವರೆ!

 9. M A Sriranga

  ಇತ್ತೀಚಿಗೆ ಸುದ್ದಿವಾಹಿನಿಯೊಂದರ ಚರ್ಚೆಯಲ್ಲಿ ಕೇಳಿಬಂದ ಮಾತು -There is nothing left in the Left.

  Reply
 10. PRAVEEN shetty

  (ನಿಮ್ಮ ಬಾಯಿಯಿಂದಲೇ ಈ ಮಾತುಗಳು ಬರಲಿ ಎಂದು ಕಾಯುತ್ತಿದ್ದೆ!..ಮೊದಲು ಗೊತ್ತಾಗಿರಲಿಲ್ಲವೆ ಈ ಸತ್ಯ..ತಲೆ ಮೇಲೆ ಹೊತ್ತು ಮೆರೆಸುವಾಗ..ಅವರ ಹೋರಾಟದ ವೇದಿಕೆಗೆ ಹೋಗಿ ಭಾಷಣ ಬಿಗಿಯುವಾಗ?? ಹೋರಾಟಕ್ಕೆ ಅವರನ್ನೇ ಉತ್ಸವ ಮೂರ್ತಿಯನ್ನಾಗಿ ಮಾಡುವಾಗ? ನಿಮ್ಮ ಎಡಪಂಥಿಯರು ಏನು ನಿಸ್ವಾರ್ಥ ಹೋರಾಟ ಮಾಡಿದರೆ?? ನಿಮ್ಮ ನಿಸ್ವಾರ್ಥ ಹೋರಾಟದ ಕಾಗೆ-ಗುಬ್ಬಿ ಕಥೆಯನ್ನು ಧರ್ಮಸ್ಥಳದ ಅಕ್ಕ-ಪಕ್ಕದವರೇ ನಂಬುತ್ತಾರೆಯೊ ಎಂದು ಒಮ್ಮೆ ಪರಿಕ್ಷಿಸಿ ನೋಡಿ!.) ಅದಕ್ಕೆ ಹೇಳಿದ್ದು ತಿಮಗೆ ತಿಳುವಳಿಕೆಯ ಕೊರತೆ ಇದೆ ಅಥವಾ ನೀವು ಪೂರ್ವಾಗೃಹ ಪೀಡಿತರಾಗಿದ್ದೀರಾ. ಎಡ ಪಂಥೀಯರು ತಿಮರೋಡಿ ಜೊತೆ ಸೇರಿ ಎಲ್ಲೂ ಹೋರಾಟ ಮಾಡಿಲ್ಲ. ಆತನನ್ನು ಮೆರಿಸಿದ್ದು ಮಾಧ್ಯಮ ಎಂಬುವುದು ತಿಳಿದುಕೊಳ್ಳಿ. ಎಡಪಂಥೀಯರ ಕೆಲವೊಂದು ಹೋರಾಟದಲ್ಲಿ ಅವರು ಪಾಲ್ಗೊಂಡಿದ್ದರು. ಹೊರತು ಪಡಿಸಿ ಸೌಜನ್ಯ ಹೋರಾಟದಲ್ಲಿ ಎಡಪಂಥೀಯರ ನಿಲುವು ಸ್ಪಷ್ಟವಾಗಿತ್ತು. ಎಡಪಂಥೀಯರು ಹೋರಾಟ ಮಾಡಿದ್ದು ಸ್ವಾರ್ಥಕ್ಕಾಗಿ ಅಲ್ಲ ಸ್ವಾರ್ಥಕ್ಕಾಗಿ ಮಾಡಿದ್ದು ನಿಮ್ಮ ಸಂಘಪರಿವಾರದ ಗರಡಿಯಲ್ಲಿ ಬೆಳೆದ ತಿಮರೋಡಿ.

  ( ಯಾರ ಪ್ರವೇಶದ ನಂತರ ಬೆಂಕಿ ಹತ್ತಿಕೊಂಡಿತು ಎಂಬುದನ್ನು ಕೂಡ ಗಮನಿಸಿ.) ಗಮನಿಸಬೇಕಾಗಿದ್ದು ನೀವು ಸ್ವಾಮಿ ನಿಮ್ಮ ಕೇಸರಿ ಕಣ್ಣಡಕವನ್ನು ಸ್ವಲ್ಪ ಪಕ್ಕಕ್ಕೆ ಇರಿಸಿ. ನಂತರ ಸತ್ಯ ಅರಿವಾಗಬಹುದು.

  (ನಾನಿಲ್ಲಿ ಮುಸ್ಲಿಂ ಮೂಲಭೂತವಾದಿಗಳನ್ನು ಅಪ್ಪಿಕೊಳ್ಳಲಿಲ್ಲ. ನೀವು ಮೊಸರು ತಿಂದು ಅವರ ಬಾಯಿಗೆ ಒರೆಸಬೇಡಿ ಎಂದು ಹೇಳಿದ್ದು!. ) ಅಬ್ಬಬ್ಬಾ ಆಶ್ವರ್ಯವಾಗುತ್ತದೆ ನಿಮ್ಮ ನಡೆ ನೋಡಿ. ಹಿಂದೂ ಮೂಲಭೂತವಾದಿಗಳಾದ ನೀವು ಮುಸ್ಲಿಂ ಮೂಲಭೂತವಾದಿಗಳಾದ ಅವರೂ ಪರಸ್ಪರ ಅಪ್ಪಿಕೊಂಡು ಒಟ್ಟೊಟ್ಟಿಗೆ ಮೊಸರು ಕುಡಿದು ಗೊತ್ತಾಗದಂತ್ತೆ ಬಾಯಿ ಒರೆಸಿಕೊಳ್ಳುತ್ತಿರುವಂತ್ತಿದೆ ನಿಮ್ಮ ವಾದದ ದಾಟಿ.
  ಅಘೋಷಿತ ಸರ್ಕಾರದಿಂದ ಸೌಜನ್ಯಳ ಹತ್ಯೆಯಾಗಿತು. ಘೋಷಿತ ಸರ್ಕಾರದಿಂದ ಕಬೀರ್ ಹತ್ಯೆಯಾಯಿತು. ಈ ಎರಡೂ ಹತ್ಯೆಗಳನ್ನು ಜಾತಿ ಧರ್ಮ ಮೀರಿ ಖಂಡಿಸಬೇಕಾದ ಅಗತ್ಯ ಇದೆ. ಕೇಸರಿ ಕನ್ನಡಕ ತೊಟ್ಟ ನಿಮಗೆ ಹಸಿರು ಕನ್ನಡಕ ತೊಟ್ಟ ನಿಮ್ಮ ಮಿತ್ರರಿಗೆ ಅರ್ಥವಾಗೋದಿಲ್ಲ ಬಿಡಿ ವಿಜಯ್
  ಧನ್ಯವಾದಗಳು.

  Reply
  1. ವಿಜಯ್

   [ಅದಕ್ಕೆ ಹೇಳಿದ್ದು ತಿಮಗೆ ತಿಳುವಳಿಕೆಯ ಕೊರತೆ ಇದೆ ಅಥವಾ ನೀವು ಪೂರ್ವಾಗೃಹ ಪೀಡಿತರಾಗಿದ್ದೀರಾ..ಎಡ ಪಂಥೀಯರು ತಿಮರೋಡಿ ಜೊತೆ ಸೇರಿ ಎಲ್ಲೂ ಹೋರಾಟ ಮಾಡಿಲ್ಲ. ಆತನನ್ನು ಮೆರಿಸಿದ್ದು ಮಾಧ್ಯಮ ಎಂಬುವುದು ತಿಳಿದುಕೊಳ್ಳಿ. ಎಡಪಂಥೀಯರ ಕೆಲವೊಂದು ಹೋರಾಟದಲ್ಲಿ ಅವರು ಪಾಲ್ಗೊಂಡಿದ್ದರು. ಹೊರತು ಪಡಿಸಿ ಸೌಜನ್ಯ ಹೋರಾಟದಲ್ಲಿ ಎಡಪಂಥೀಯರ ನಿಲುವು ಸ್ಪಷ್ಟವಾಗಿತ್ತು. ಎಡಪಂಥೀಯರು ಹೋರಾಟ ಮಾಡಿದ್ದು ಸ್ವಾರ್ಥಕ್ಕಾಗಿ ಅಲ್ಲ ಸ್ವಾರ್ಥಕ್ಕಾಗಿ ಮಾಡಿದ್ದು ನಿಮ್ಮ ಸಂಘಪರಿವಾರದ ಗರಡಿಯಲ್ಲಿ ಬೆಳೆದ ತಿಮರೋಡಿ. ]
   ನಿಮಗೆ ಅವಶ್ಯಕತೆಗಿಂತಲೂ ಹೆಚ್ಚಿಗೆ ತಿಳುವಳಿಕೆ ತುಂಬಿದೆಯೇನೊ ಎಂಬ ಅನುಮಾನ ನನಗೆ!
   http://www.sahilonlineDOTorg/kannada/south_canara_dist_news/udupi/17783.html ಇಲ್ಲಿ ಸ್ವಲ್ಪ ಗಮನ ಹರಿಸಿ. ಈ ಸಭೆಯ ಅಧ್ಯಕ್ಷತೆ ವಹಿಸಿದ್ದು ತಿಮರೋಡಿ..ಉಳಿದವರೆಲ್ಲ ನಿಮ್ಮ ಪ್ರೊಫೆಶನಲ್ ಹೋರಾಟಗಾರರೆ. ಸಂಘಪರಿವಾರ ಹಿನ್ನಲೆಯ ತಿಮರೋಡಿಯನ್ನು ನಂಬುವ ‘ಮುಗ್ಧತೆ’ ತೋರಿಸಿದ್ದು ಮತ್ತು ಅವರನ್ನು ಸಭೆಯ ಅಧ್ಯಕ್ಷರನ್ನಾಗಿ ಮಾಡಿದ್ದು ಏಕೊ? ಕಾರಣ ಸ್ಫಷ್ಟ..ಇಲ್ಲಿ ಭಾಗವಹಿಸಿದ ತಿಮರೋಡಿ ಮತ್ತು ಎಡಪಂಥೀಯರು, ಈ ಚಳುವಳಿ ಸುರುಹಚ್ಚಿಕೊಂಡಿದ್ದೆ ಸ್ವಾರ್ಥಕ್ಕಾಗಿ. ಇಬ್ಬರಿಗೂ ಒಬ್ಬರಿಗೊಬ್ಬರ ಅವಶ್ಯಕತೆಯಿತ್ತು. ನಮ್ಮ ಕಡೆ ಒಂದು ಗಾದೆಯಿದೆ ‘ಅನ್ನ ಹಳಸಿತ್ತು..ನಾಯಿ ಹಸಿದಿತ್ತು’ ಅಂತ..ಆ ರೀತಿಯ ಕತೆ ಇದು. ತಿಮರೋಡಿಗೆ ಹೆಗ್ಗಡೆ ಕುಟುಂಬದ ಮೇಲೆ ದ್ವೇಷವಿತ್ತು, ಎಡಪಂಥೀಯರಿಗೆ ಧರ್ಮಸ್ಥಳದ ಯೋಜನೆಗಳಿಂದ ದ.ಕ ನಲ್ಲಿ ಮೊದಲಿನಂತೆ ತಮ್ಮ ‘ಸಿದ್ಧಾಂತ’ ಬಿತ್ತುವಿಕೆ ನಡೆಯುತ್ತಿಲ್ಲ/ ಬೆಳ್ತಂಗಡಿ ಕಾಡುಗಳಲ್ಲಿ ಚಟುವಟಿಕೆ ಮಾಡಲು ಕಾರಣಗಳಿಲ್ಲ ಎಂಬ ಕಾರಣಗಳಿದ್ದವು. ಇಂತಹದುದರಲ್ಲಿ..ವಿಹಿಂಪ ಬಿಟ್ಟುಬಂದ ತಿಮರೋಡಿ ‘ಶತ್ತುವಿನ ಶತ್ರು ನನಗೆ ಮಿತ್ರ’ ಎಂಬಂತೆ ನಿಮಗೆ ಕಂಡ. ಈಗ ಮತ್ತೆ ನಿಮ್ಮ ಇನ್ನೊಬ್ಬ ಶತ್ರುವಿನ ಮನೆಗೆ ವಾಪಸ ಹೋದ ತಿಮರೋಡಿ ಅಪಥ್ಯವೆನಿಸುತ್ತಿದ್ದಾರೆ ಅಷ್ಟೆ. ಆಗ ತಿಮರೋಡಿಗೆ ಮಾಧ್ಯಮ ಪ್ರಚಾರ ಕೊಟ್ಟಿದ್ದನ್ನು ಕಂಡು ನೀವಂತು ಖಂಡಿತ ದು:ಖಪಡಲಿಲ್ಲ, ಬದಲಿಗೆ ಸಿಗುತ್ತಿರುವ ಪ್ರಚಾರಕ್ಕೆ ಖುಷಿಪಟ್ಟಿರಿ.. ಈಗ ನಿಮಗೆ ಮಾಧ್ಯಮ ಪ್ರಚಾರ ನೆನೆದು ದು:ಖವಾಗುತ್ತಿದೆಯಷ್ಟೆ!
   ಇವತ್ತಿನಿಂದ ಹೊಸದೊಂದು ಕಾರ್ಯಕ್ರಮ ಸುರು ಇಟ್ಟುಕೊಂಡಿದ್ದೀರಿ ಚಾಲ್ತಿಯಲ್ಲಿರಲು ಮತ್ತು ಪೂರ್ತಿಯಾಗಿ ಸತ್ತುಹೋಗದಂತೆ ಕಾಯ್ದುಕೊಳ್ಳಲು….’ಪಂಕ್ತಿಭೇದ ವಿರೋಧಿಸಿ ಆಹೋರಾತ್ರಿ ಧರಣಿ’ ಯಂತೆ.. ಬ್ರಾಹ್ಮಣರ ಜೊತೆಗೆ ಊಟ ಮಾಡಿಸಿಯೇ ಸಮಾಜವನ್ನು ‘ಮೇಲೆ’ತ್ತಬಹುದು, ಇದೊಂದು ತೀರ ತುರ್ತಿನ ಸಮಸ್ಯೆ ಎಂದು ಯಾರಿಗೂ ಗೊತ್ತಿರಲಿಲ್ಲ!. ನಿರಂತರ ‘ಹೋರಾಟ’ ಕ್ಕೆ ಜಯವಾಗಲಿ!

   [ನಿಮ್ಮ ಕೇಸರಿ ಕಣ್ಣಡಕವನ್ನು ಸ್ವಲ್ಪ ಪಕ್ಕಕ್ಕೆ ಇರಿಸಿ] [ಹಿಂದೂ ಮೂಲಭೂತವಾದಿಗಳಾದ ನೀವು]
   ಒಬ್ಬ ಮನುಷ್ಯ ಯಾವುದಾದರೂ ಒಂದು ಗುಂಪಲ್ಲಿ ಇರಬೇಕು, ಯಾವುದಾದರೂ ಸಿದ್ಧಾಂತಕ್ಕೆ ಜೋತು ಬಿದ್ದಿರಬೇಕು, ಅಲ್ಲಿಯೇ ಗೂಟ ಬಡಿದುಕೊಂಡು ಅಲುಗಾಡದಿರಬೇಕು ಎಂಬ ನಿಮ್ಮ ಎಡಬಿಡಂಗಿ ಚಿಂತನೆಯನ್ನು ನಮಗೆ ದಯವಿಟ್ಟು ಲಾಗೂ ಮಾಡಬೇಡಿ..ನಿಮ್ಮ ಕಲ್ಪನೆಯ ಬ್ರ್ಯಾಂಡನ್ನು ನನಗೆ ತಗುಲಿಸಬೇಡಿ. ನಿಮ್ಮ ಹಾಗೆ ೧೮ನೆ ಶತಮಾನದ ಪರದೇಶದವರು ಕೊಟ್ಟ ಬೂರ್ಜ್ವಾ, ಇಂಪಿರಿಯಲಿಸ್ಮ, ಕ್ಯಾಪಟಲಿಸಿಸ್ಮ , ಫ್ಯೂಡಲ್ ಸೋಡಾಗ್ಲಾಸನ್ನು ಎಲ್ಲರೂ ಹಾಕಿ ತಿರುಗಾಡಬೇಕು ಎಂದು ಬಯಸಬೇಡಿ. ಸರಿ ಇದ್ದವರ ಪರ ಅಷ್ಟೆ ನಾನು. ದ.ಕ ನಲ್ಲಿ ಈ ಎಡಪಂಥಿಗಳು, ಅವರ ಪ್ರಾಯೋಜಿತ ವೇದಿಕೆಗಳು, ಕಾಂಗಿಗಳು, ಮುಸ್ಲಿಂ ಸಂಘಟನೆಗಳು, ಸಂಘಪರಿವಾರ ಇವರೆಲ್ಲ ಆಡುತ್ತಿರುವ ಪ್ರಾಯೋಜಿತ ನಾಟಕಗಳು ಅವರನ್ನು/ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುವ ಎಲ್ಲರಿಗೂ ಗೊತ್ತೆ ಇದೆ. ಕೆಲವೇ ಪ್ರಾಮಾಣಿಕರನ್ನು ಬಿಟ್ಟರೆ, ೯೦% ಗಂಜಿ ಗಿರಾಕಿಗಳೆ.

   ನಾನು ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಬೆಂಬಲಿಗನಷ್ಡ..ಬಿಜೆಪಿ ನನಗೆ ಉಳಿದೆಲ್ಲ ಪಕ್ಷಗಳಂತೆ ಒಂದು ಪಕ್ಷವಷ್ಟೆ. ಮುಂದಿನ ದಿನಗಳಲ್ಲಿ ಆಪ್ ಚಂಚಲತೆಯನ್ನು ಬಿಟ್ಟರೆ, ಯೋಗೆಂದ್ರ ಯಾದವ್ ನನ್ನು ಹೊರ ಹಾಕಿದರೆ ‘ಆಪ್’ ಪಕ್ಷ ಕೂಡ ನನಗೆ ಆಪ್ತ.
   ಕೊನೆಯದಾಗಿ, ಈ ಲೇಖನದ ಮುಖ್ಯ ಅಂಶವಾದ ‘ಕಬೀರ ಪ್ರಕರಣ’ ದ ಬಗ್ಗೆ ಸಿ.ಒ.ಡಿ ತನಿಖಾ ವರದಿ ಬಂದಾಗಿದೆ. ಈಗ ಈ ಘಟನೆಯ ನಿಮ್ಮ ಅಭಿಪ್ರಾಯವೇನು ಎಂದು ಕೇಳಬಹುದೆ?

   Reply
  2. ವಿಜಯ್

   [ಅದಕ್ಕೆ ಹೇಳಿದ್ದು ತಿಮಗೆ ತಿಳುವಳಿಕೆಯ ಕೊರತೆ ಇದೆ ಅಥವಾ ನೀವು ಪೂರ್ವಾಗೃಹ ಪೀಡಿತರಾಗಿದ್ದೀರಾ..ಎಡ ಪಂಥೀಯರು ತಿಮರೋಡಿ ಜೊತೆ ಸೇರಿ ಎಲ್ಲೂ ಹೋರಾಟ ಮಾಡಿಲ್ಲ. ಆತನನ್ನು ಮೆರಿಸಿದ್ದು ಮಾಧ್ಯಮ ಎಂಬುವುದು ತಿಳಿದುಕೊಳ್ಳಿ. ಎಡಪಂಥೀಯರ ಕೆಲವೊಂದು ಹೋರಾಟದಲ್ಲಿ ಅವರು ಪಾಲ್ಗೊಂಡಿದ್ದರು. ಹೊರತು ಪಡಿಸಿ ಸೌಜನ್ಯ ಹೋರಾಟದಲ್ಲಿ ಎಡಪಂಥೀಯರ ನಿಲುವು ಸ್ಪಷ್ಟವಾಗಿತ್ತು. ಎಡಪಂಥೀಯರು ಹೋರಾಟ ಮಾಡಿದ್ದು ಸ್ವಾರ್ಥಕ್ಕಾಗಿ ಅಲ್ಲ ಸ್ವಾರ್ಥಕ್ಕಾಗಿ ಮಾಡಿದ್ದು ನಿಮ್ಮ ಸಂಘಪರಿವಾರದ ಗರಡಿಯಲ್ಲಿ ಬೆಳೆದ ತಿಮರೋಡಿ. ]
   ನಿಮಗೆ ಅವಶ್ಯಕತೆಗಿಂತಲೂ ಹೆಚ್ಚಿಗೆ ತಿಳುವಳಿಕೆ ತುಂಬಿದೆಯೇನೊ ಎಂಬ ಅನುಮಾನ ನನಗೆ!
   sahilonlineDOTorg/kannada/south_canara_dist_news/udupi/17783.html ಇಲ್ಲಿ ಸ್ವಲ್ಪ ಗಮನ ಹರಿಸಿ. ಈ ಸಭೆಯ ಅಧ್ಯಕ್ಷತೆ ವಹಿಸಿದ್ದು ತಿಮರೋಡಿ..ಉಳಿದವರೆಲ್ಲ ನಿಮ್ಮ ಪ್ರೊಫೆಶನಲ್ ಹೋರಾಟಗಾರರೆ. ಸಂಘಪರಿವಾರ ಹಿನ್ನಲೆಯ ತಿಮರೋಡಿಯನ್ನು ನಂಬುವ ‘ಮುಗ್ಧತೆ’ ತೋರಿಸಿದ್ದು ಮತ್ತು ಅವರನ್ನು ಸಭೆಯ ಅಧ್ಯಕ್ಷರನ್ನಾಗಿ ಮಾಡಿದ್ದು ಏಕೊ? ಕಾರಣ ಸ್ಫಷ್ಟ..ಇಲ್ಲಿ ಭಾಗವಹಿಸಿದ ತಿಮರೋಡಿ ಮತ್ತು ಎಡಪಂಥೀಯರು, ಈ ಚಳುವಳಿ ಸುರುಹಚ್ಚಿಕೊಂಡಿದ್ದೆ ಸ್ವಾರ್ಥಕ್ಕಾಗಿ. ಇಬ್ಬರಿಗೂ ಒಬ್ಬರಿಗೊಬ್ಬರ ಅವಶ್ಯಕತೆಯಿತ್ತು. ನಮ್ಮ ಕಡೆ ಒಂದು ಗಾದೆಯಿದೆ ‘ಅನ್ನ ಹಳಸಿತ್ತು..ನಾಯಿ ಹಸಿದಿತ್ತು’ ಅಂತ..ಆ ರೀತಿಯ ಕತೆ ಇದು. ತಿಮರೋಡಿಗೆ ಹೆಗ್ಗಡೆ ಕುಟುಂಬದ ಮೇಲೆ ದ್ವೇಷವಿತ್ತು, ಎಡಪಂಥೀಯರಿಗೆ ಧರ್ಮಸ್ಥಳದ ಯೋಜನೆಗಳಿಂದ ದ.ಕ ನಲ್ಲಿ ಮೊದಲಿನಂತೆ ತಮ್ಮ ‘ಸಿದ್ಧಾಂತ’ ಬಿತ್ತುವಿಕೆ ನಡೆಯುತ್ತಿಲ್ಲ/ ಬೆಳ್ತಂಗಡಿ ಕಾಡುಗಳಲ್ಲಿ ಚಟುವಟಿಕೆ ಮಾಡಲು ಕಾರಣಗಳಿಲ್ಲ ಎಂಬ ಕಾರಣಗಳಿದ್ದವು. ಇಂತಹದುದರಲ್ಲಿ..ವಿಹಿಂಪ ಬಿಟ್ಟುಬಂದ ತಿಮರೋಡಿ ‘ಶತ್ತುವಿನ ಶತ್ರು ನನಗೆ ಮಿತ್ರ’ ಎಂಬಂತೆ ನಿಮಗೆ ಕಂಡ. ಈಗ ಮತ್ತೆ ನಿಮ್ಮ ಇನ್ನೊಬ್ಬ ಶತ್ರುವಿನ ಮನೆಗೆ ವಾಪಸ ಹೋದ ತಿಮರೋಡಿ ಅಪಥ್ಯವೆನಿಸುತ್ತಿದ್ದಾರೆ ಅಷ್ಟೆ. ಆಗ ತಿಮರೋಡಿಗೆ ಮಾಧ್ಯಮ ಪ್ರಚಾರ ಕೊಟ್ಟಿದ್ದನ್ನು ಕಂಡು ನೀವಂತು ಖಂಡಿತ ದು:ಖಪಡಲಿಲ್ಲ, ಬದಲಿಗೆ ಸಿಗುತ್ತಿರುವ ಪ್ರಚಾರಕ್ಕೆ ಖುಷಿಪಟ್ಟಿರಿ.. ಈಗ ನಿಮಗೆ ಮಾಧ್ಯಮ ಪ್ರಚಾರ ನೆನೆದು ದು:ಖವಾಗುತ್ತಿದೆಯಷ್ಟೆ!
   ಇವತ್ತಿನಿಂದ ಹೊಸದೊಂದು ಕಾರ್ಯಕ್ರಮ ಸುರು ಇಟ್ಟುಕೊಂಡಿದ್ದೀರಿ ಚಾಲ್ತಿಯಲ್ಲಿರಲು ಮತ್ತು ಪೂರ್ತಿಯಾಗಿ ಸತ್ತುಹೋಗದಂತೆ ಕಾಯ್ದುಕೊಳ್ಳಲು….’ಪಂಕ್ತಿಭೇದ ವಿರೋಧಿಸಿ ಆಹೋರಾತ್ರಿ ಧರಣಿ’ ಯಂತೆ.. ಬ್ರಾಹ್ಮಣರ ಜೊತೆಗೆ ಊಟ ಮಾಡಿಸಿಯೇ ಸಮಾಜವನ್ನು ‘ಮೇಲೆ’ತ್ತಬಹುದು, ಇದೊಂದು ತೀರ ತುರ್ತಿನ ಸಮಸ್ಯೆ ಎಂದು ಯಾರಿಗೂ ಗೊತ್ತಿರಲಿಲ್ಲ!. ನಿರಂತರ ‘ಹೋರಾಟ’ ಕ್ಕೆ ಜಯವಾಗಲಿ!

   [ನಿಮ್ಮ ಕೇಸರಿ ಕಣ್ಣಡಕವನ್ನು ಸ್ವಲ್ಪ ಪಕ್ಕಕ್ಕೆ ಇರಿಸಿ] [ಹಿಂದೂ ಮೂಲಭೂತವಾದಿಗಳಾದ ನೀವು]
   ಒಬ್ಬ ಮನುಷ್ಯ ಯಾವುದಾದರೂ ಒಂದು ಗುಂಪಲ್ಲಿ ಇರಬೇಕು, ಯಾವುದಾದರೂ ಸಿದ್ಧಾಂತಕ್ಕೆ ಜೋತು ಬಿದ್ದಿರಬೇಕು, ಅಲ್ಲಿಯೇ ಗೂಟ ಬಡಿದುಕೊಂಡು ಅಲುಗಾಡದಿರಬೇಕು ಎಂಬ ನಿಮ್ಮ ಎಡಬಿಡಂಗಿ ಚಿಂತನೆಯನ್ನು ನಮಗೆ ದಯವಿಟ್ಟು ಲಾಗೂ ಮಾಡಬೇಡಿ..ನಿಮ್ಮ ಕಲ್ಪನೆಯ ಬ್ರ್ಯಾಂಡನ್ನು ನನಗೆ ತಗುಲಿಸಬೇಡಿ. ನಿಮ್ಮ ಹಾಗೆ ೧೮ನೆ ಶತಮಾನದ ಪರದೇಶದವರು ಕೊಟ್ಟ ಬೂರ್ಜ್ವಾ, ಇಂಪಿರಿಯಲಿಸ್ಮ, ಕ್ಯಾಪಟಲಿಸಿಸ್ಮ , ಫ್ಯೂಡಲ್ ಸೋಡಾಗ್ಲಾಸನ್ನು ಎಲ್ಲರೂ ಹಾಕಿ ತಿರುಗಾಡಬೇಕು ಎಂದು ಬಯಸಬೇಡಿ. ಸರಿ ಇದ್ದವರ ಪರ ಅಷ್ಟೆ ನಾನು. ದ.ಕ ನಲ್ಲಿ ಈ ಎಡಪಂಥಿಗಳು, ಅವರ ಪ್ರಾಯೋಜಿತ ವೇದಿಕೆಗಳು, ಕಾಂಗಿಗಳು, ಮುಸ್ಲಿಂ ಸಂಘಟನೆಗಳು, ಸಂಘಪರಿವಾರ ಇವರೆಲ್ಲ ಆಡುತ್ತಿರುವ ಪ್ರಾಯೋಜಿತ ನಾಟಕಗಳು ಅವರನ್ನು/ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುವ ಎಲ್ಲರಿಗೂ ಗೊತ್ತೆ ಇದೆ. ಕೆಲವೇ ಪ್ರಾಮಾಣಿಕರನ್ನು ಬಿಟ್ಟರೆ, ೯೦% ಗಂಜಿ ಗಿರಾಕಿಗಳೆ.
   ನಾನು ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಬೆಂಬಲಿಗನಷ್ಡ..ಬಿಜೆಪಿ ನನಗೆ ಉಳಿದೆಲ್ಲ ಪಕ್ಷಗಳಂತೆ ಒಂದು ಪಕ್ಷವಷ್ಟೆ. ಮುಂದಿನ ದಿನಗಳಲ್ಲಿ ಆಪ್ ಚಂಚಲತೆಯನ್ನು ಬಿಟ್ಟರೆ, ಯೋಗೆಂದ್ರ ಯಾದವ್ ನನ್ನು ಹೊರ ಹಾಕಿದರೆ ‘ಆಪ್’ ಪಕ್ಷ ಕೂಡ ನನಗೆ ಆಪ್ತ.
   ಕೊನೆಯದಾಗಿ, ಈ ಲೇಖನದ ಮುಖ್ಯ ಅಂಶವಾದ ‘ಕಬೀರ ಪ್ರಕರಣ’ ದ ಬಗ್ಗೆ ಸಿ.ಒ.ಡಿ ತನಿಖಾ ವರದಿ ಬಂದಾಗಿದೆ. ಈಗ ಈ ಘಟನೆಯ ನಿಮ್ಮ ಅಭಿಪ್ರಾಯವೇನು ಎಂದು ಕೇಳಬಹುದೆ?

   Reply
 11. Salam Bava

  Mr.Godbole-ಕಳೆದ ೨ ವಾರಗಳಿಂದ ಇದೇ ಒಂದು ಚರ್ವಿತ ಚರ್ವಣ ಮಾಡಿ ನಿಮಗೆ ಸಾಕಾಗಲಿಲ್ಲ್ಲವೇ ?ನೀವೇ ಮತ್ತೆ ಕಬೀರನ ಹತ್ಯಾ ವಿಷಯವನ್ನು ಕೆದಕ್ಕಿದ್ದೇಕೆ ?ಈ ಹತ್ಯೆಯನ್ನು Justify ಮಾಡಿದ್ದು ಮತ್ತು ಅದನ್ನೇ ಬಿತ್ತರಿಸುತ್ತ , ಒಂದು ತರಹದ ಆತ್ಮ ರತಿ ಕಂಡದ್ದು ನೀವೇ ತಾನೆ. ನಿಮ್ಮ ಹಾಗೆ ನಾನೂ ಭಾರತೀಯ ಪ್ರಜೆ,ನನ್ನ ವಾಸ್ತವ್ಯ (ಮಧ್ಯಪ್ರಾಚ್ಯ -ನಿಮ್ಮ ತಪ್ಪು ತಿಳುವಳಿಕೆ) ಎಲ್ಲಿದ್ದರೂ ಪ್ರತಿಬಟಿಸುವ ಹಕ್ಕು ಇದೆ. ಇನ್ನು ಮಸೀದಿಯಲ್ಲಿ ನಡೆದ ಹತ್ಯೆ ಸಹಾ ಅತ್ಯಂತ ಖಂಡನಾರ್ಹ ,ಅಪರಾದಿಗಳಿಗೆ ಶಿಕ್ಸ್ ಆಗಬೇಕು ಅಂಥ ನಾನು ಮೊದಲಿಗೇ ಬರೆದಿದ್ದೆ. ನಿಮಗೆ ನೆನಪಿಲ್ಲ ! ಒಂದು ವಿಶಯ ನೀವು ಯಾಕೆ acept ಮಾಡುವುದಿಲ್ಲ – ಇಲ್ಲಿಯ ಕಾಮೆಂಟ್ ಈ ಲೇಖನಕ್ಕೆ ಮಾತ್ರ ಸಂಬಂದಿಸಿದೆ ಹೊರತು ಜಗತ್ತಿನ ಎಲ್ಲಾ ಆಗು ಹೋಗುಗಳಿಗೆ ಅಲ್ಲಾ ಅಂತ .ಃಆಗಾದರೆ ಸೌಜನ್ಯ ಕೊಲೆ ಪ್ರಕರಣ ,ನಿರಪರಾದಿಗಳನ್ನು ನಕ್ಷಲ್ ಅಂತ encounter ಮಾಡಿದ್ದು ,ಬಾಗಲಕೋಟೆ ಮತ್ತು ಬಿಜಾಪುರದಲ್ಲಿ ದೇವಸ್ಥಾನಕ್ಕೆ ಹರಕೆ ಹೊರಲು ಹೋದ ದಲಿತರ ಮೇಲೆ ಹಲ್ಲೆ ,ಕೇರಳದಲ್ಲಿ ಮುಸ್ಲಿಂ ತೀವ್ರ ವಾದಿಗಳು ಅದ್ಯಾಪಕರ ಮೇಲೆ ನಡಿಸಿದ ಹಲ್ಲೆ ಮತ್ತು ಉಡುಪಿಯ ಶ್ರೀಕೃಷ್ಣ ಮಠ ದಲ್ಲಿ ಬಂಟ ಮಹಿಳಾ ಲೆಕ್ಚರ್ ರನ್ನು ಬ್ರ್ಹಾಹ್ಮಣ ಪಂಕ್ತಿಯಿಂದ ಎಬ್ಬಿಸಿದ್ದು – ಇದನ್ನೆಲಾ ತಾವು ಈ ವೇದಿಕೆಯಲ್ಲಿ ಯಾಕೆ ಖಂಡಿಸಿಲ್ಲ ಎಂದು ನಾನು ಆರೋಪಿಸಿದರೆ ಅದಕ್ಕೆ ಯಾವುದೇ ಪ್ರಶಕ್ತಿ ಇದೆಯೇ ?
  ಇನ್ನು ತಮ್ಮನ್ನು ನಾನು ಪಯ್ಡೆ ಎಂದು ಆರೂಪಿಸಿಲ್ಲ,ತಾವೇ ಸ್ವಂತ ಭಾವಿಸಿದ್ದು . ಆದ್ರೆ ಒಂದು ಮಾತ್ರ ನಿಜ -ಸ್ವಂತ ತಾವು ಬ್ರಹಸ್ವತಿ ಎಂದು ತಿಳ ಕೊಂಡು ಎಲ್ಲದಕ್ಕೂ ಪ್ರತಿಕಯಿಸುವುದ್ ,ದಿನದ ೨೪ ಗಂಟೆಯೂ ಎಲ್ಲರನ್ನೂ ಅಟಕಾಯಿಸುತ್ತಾ ಇರುವುದು ಒಂದು ತರಹದ ಕಿರಿಕಿರಿ ಎಂದು ತಾವು ಅರ್ಥ ಮಾಡಿ ಕೊಂಡರೆ ಎಲ್ಲಾ ಓದುಗರಿಗೂ ಒಂದು ತರಹದ ಮನಶ್ಯಾಂತಿ ಇಂದ “ವರ್ತಮಾನ ” ದ ಲೇಖನ ಓದಬಹುದು,ಆಸ್ವಾದಿಸಬಹುದು .ಆದು ಬಿಟ್ಟು -ತಲೆ ಸರಿಯಿಲ್ಲ ,ಹುಂಬ ಅಂತೆಲ್ಲಾ ಬಡಬದಿಸಿದರೆ ಎಲ್ಲಾ ಓದು ,ಪ್ರತಿಕಿಯ್ -Waste

  Reply
  1. Godbole

   ಮಾನ್ಯ ಸಲಾಂ ಬಾವ ಅವರೇ,
   [ಕಳೆದ ೨ ವಾರಗಳಿಂದ ಇದೇ ಒಂದು ಚರ್ವಿತ ಚರ್ವಣ ಮಾಡಿ ನಿಮಗೆ ಸಾಕಾಗಲಿಲ್ಲ್ಲವೇ ?ನೀವೇ ಮತ್ತೆ ಕಬೀರನ ಹತ್ಯಾ ವಿಷಯವನ್ನು ಕೆದಕ್ಕಿದ್ದೇಕೆ ?]
   ಅಕ್ರಮ ಗೋಸಾಗಣಿಕದಾರ ಕಬೀರನ ಸಾವಿನ ವಿಷಯವನ್ನು ಚರ್ವಣವಾಗಿಸಿದವರು ನಾನಲ್ಲ, ನೀವು ಹಾಗೂ ನೀವು ಬಹುವಾಗಿ ಮೆಚ್ಚುವ ಪ್ರಗತಿಪರ ಹೋರಾಟಗಾರರು! ನೋಡಿ ನಿನ್ನೆಯಷ್ಟೇ ಲಡಾಯಿ ಬ್ಲಾಗಿನಲ್ಲಿ ನಿಮ್ಮವರೊಬ್ಬರು ಬರೆದಿದ್ದಾರೆ: __http://ladaiprakashanabasu.blogspot.in/2014/05/blog-post_4.html__
   ಇನ್ನು ನಿಮ್ಮ ವಿಷಯಕ್ಕೆ ಬರೋಣ. ಮೊನ್ನೆಯವರೆಗೆ ಕಬೀರನ ವಿಷಯದಲ್ಲಿ ಸರ್ಕಾರ ಹಾಗೂ ಪೋಲೀಸರ ಬಗ್ಗೆ ಸಕತ್ ಗರಂ ಆಗಿದ್ದ ನೀವು ಪೋಸ್ಟ್ ಮಾರ್ಟಂ ವರದಿ ಬಂದ ನಂತರ ಕಬೀರನ ಸಾವು ಚರ್ವಿತ ಚರ್ವಣವಾಗಿದೆ ಅಂತ ಹೇಳುತ್ತಿದ್ದೀರಿ! ಕಬೀರನ ಕುಟುಂಬಕ್ಕೆ ಗಲಾಟೆ ಮಾಡಿ ಲಕ್ಷಾಂತರ ಪರಿಹಾರವನ್ನು ಸರಕಾರದಿಂದ ಕೊಡಿಸಿ ಆಯಿತಲ್ಲ, ಇನ್ನು ಅವನ ಸಾವಿನ ಸತ್ಯಾಸತ್ಯತೆ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು ಎಂಬ ನಿಲುವು ತಮ್ಮದು!
   [ಇನ್ನು ಮಸೀದಿಯಲ್ಲಿ ನಡೆದ ಹತ್ಯೆ ಸಹಾ ಅತ್ಯಂತ ಖಂಡನಾರ್ಹ]
   ನಿಮ್ಮ ಲಿಪ್ ಸಿಂಪತಿಯಿಂದ ಹತ್ಯೆಗೀಡಾದ ಯುವಕನಿಗೆ ಏನೂ ಪ್ರಯೋಜನವಿಲ್ಲ.
   [ಸ್ವಂತ ತಾವು ಬ್ರಹಸ್ವತಿ ಎಂದು ತಿಳ ಕೊಂಡು ಎಲ್ಲದಕ್ಕೂ ಪ್ರತಿಕಯಿಸುವುದ್ ,ದಿನದ ೨೪ ಗಂಟೆಯೂ ಎಲ್ಲರನ್ನೂ ಅಟಕಾಯಿಸುತ್ತಾ ಇರುವುದು ಒಂದು ತರಹದ ಕಿರಿಕಿರಿ]
   ಅಪ್ರಿಯ ಸತ್ಯದ ವಿಷಯ ತೆಗೆದಾಗೆಲ್ಲ ವೈಯಕ್ತಿಕ ಹಲ್ಲೆ ಮಾಡುವುದು ನಿಮ್ಮಂತಹವ ದಂಧೆ!

   Reply
 12. Salam Bava

  Mr.godbole-ಕಬೀರನ ಪರವಾಗಿ ವಾದಿಸಿದ್ದು ಕೇವಲ ಮಾನವೀಯ ನೆಲೆಯಲ್ಲಿ,ಅದಕ್ಕೆ ಕೋಮುವಿನ ಬಣ್ಣ ಕೊಟ್ಟವರು ನೀವು ಮತ್ತು ನಿಮ್ಮ ಭಜರಂಗಿಗಳು . ಇನ್ನು “ಲಡಾಯಿ “ನ್ನು ನನಗೆ ಪರಿಚಯಿಸಿದ್ದಕ್ಕೆ Thanks. ಅಸ್ಸಾಂನಲ್ಲಿ ಮುಸ್ಲಿಂರ ಮಾರಣ ಹೋಮ ನಡೆಯುತ್ತಾ ಇದೆಯಲ್ಲಾ ,ನೀವ್ಯಾಕೆ ಪ್ರತಿಕಯಿಸುತ್ತಿಲ್ಲ . ಓರ್ವ ಅಪರಾದಿ ಪೊಲೀಸನಿಗೆ ಬೇಕಾಗಿ ವಾದಿಸಿದ ನಿಮ್ಮ ನ್ಯಾಯಪರತೆ ಈಗ ವಿಶ್ರಾಂತ ಸ್ತಿತಿಯಲ್ಲಿ ಇದೆಯೋ ?

  Reply
 13. Godbole

  [ಕಬೀರನ ಪರವಾಗಿ ವಾದಿಸಿದ್ದು ಕೇವಲ ಮಾನವೀಯ ನೆಲೆಯಲ್ಲಿ,ಅದಕ್ಕೆ ಕೋಮುವಿನ ಬಣ್ಣ ಕೊಟ್ಟವರು ನೀವು ಮತ್ತು ನಿಮ್ಮ ಭಜರಂಗಿಗಳು .]

  ನಿಮ್ಮ ಮಾನವೀಯ ನೆಲೆಗಳ ಪರಿಚಯ ನಮಗೆ ಚೆನಾಗಿ ಆಗಿದೆ. ಇನ್ನು ವಾದ ಮಾಡಲು ಬಂಡವಾಳ ಸಾಲದೇ ಹೋದಾಗ ಭಜರಂಗಿ ಅಂತ ಜರಿಯುವುದು ನಿಮ್ಮ ಕುಲಕಸುಬು.

  [ಅಸ್ಸಾಂನಲ್ಲಿ ಮುಸ್ಲಿಂರ ಮಾರಣ ಹೋಮ ನಡೆಯುತ್ತಾ ಇದೆಯಲ್ಲಾ ,ನೀವ್ಯಾಕೆ ಪ್ರತಿಕಯಿಸುತ್ತಿಲ್ಲ .]

  ಪ್ರತಿಭಟನೆಗಳನ್ನು ಗುತ್ತಿಗೆ ತೆಗೆದುಕೊಂಡಿರುವುದು ನೀವು ಮೆಚ್ಚುವ ಪ್ರಗತಿಪರರು, ನಾನಲ್ಲ. ನಿಮ್ಮ ಮಂಗಳೂರಿನ ಎಂ ಎಲ್ ಎ ಬಾವ ಅವರಿಗೆ ಹೇಳಿ ಅಸ್ಸಾಮಿಗೆ ಹೋಗಿ ಅಲ್ಲಿನ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಿ ಅಂತ.

  [ಓರ್ವ ಅಪರಾದಿ ಪೊಲೀಸನಿಗೆ ಬೇಕಾಗಿ ವಾದಿಸಿದ ನಿಮ್ಮ ನ್ಯಾಯಪರತೆ ಈಗ ವಿಶ್ರಾಂತ ಸ್ತಿತಿಯಲ್ಲಿ ಇದೆಯೋ ?]

  ಅಪರಾಧಿ ಯಾರು ಅಂತ ತನಿಖೆ ಹೇಳುತ್ತದೆ, ಕೋರ್ಟು ನಿರ್ಧರಿಸುತ್ತದೆ. ಅಕ್ರಮ ಗೊಸಾಗಾಣಿಕೆ ಕೂಡ ಕಾನೂನು ರೀತ್ಯಾ ಅಪರಾಧ.

  Reply
 14. Salam Bava

  ಈ ಸಂತೆ ವಾದ ಮಾಡಲು ಯಾವ ಬಂಡವಾಳದ ಅಗತ್ಯ ಇದೆ .ನೀವು ಗೇಲಿ ಮಾಡಿದ so called ಪ್ರಗತಿ ಪರರಿಂದಾಗಿ ಇವತ್ತು ಭಾರತ ಅಖಂಡವಾಗಿ ಉಳಿದಿದೆ. ನಿಮಂಥವರಿಗೆ ಸ್ವಾತಂತ್ರ್ಯ್ ನಂತರ ಅದಿಕಾರ ಸಿಕ್ಕಿದ್ದರೆ ಭಾರತ ಇಸ್ಟರಲ್ಲೇ ನುಚ್ಚು ನೂರಾಗಿರುತ್ತಿತ್ತು. ಅವತ್ತು ಗಾಂದಿ ,ನೆಹರು,ಅಂಬೇಡ್ಕರ್ ಮತ್ತು ಲೋಹಿಯಾರಂಥ ಮುತ್ಸದ್ದಿಗಳು ಇದ್ದದ್ದರಿಂದ ಇವತ್ತು ನಾವೆಲ್ಲಾ ಹೆಮ್ಮೆ ಪಡುತ್ತೇವೆ . ನಿಮ್ಮ ಕಣ್ಮಣಿ ಗುಜ್ಜು ಭಾಯಿಗೆ ಅಧಿಕಾರ ಸಿಕ್ಕಿದ್ದರೆ !ನೀವೇ ಆಲೋಚಿಸಿ ಉತ್ತರ ಕಂಡು ಹಿಡಿಯಿರಿ

  Reply
  1. Godbole

   [ಈ ಸಂತೆ ವಾದ ಮಾಡಲು ಯಾವ ಬಂಡವಾಳದ ಅಗತ್ಯ ಇದೆ]

   ಬಂಡವಾಳ ಇಲ್ಲ ಅಂತ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು.

   [ನೀವು ಗೇಲಿ ಮಾಡಿದ so called ಪ್ರಗತಿ ಪರರಿಂದಾಗಿ ಇವತ್ತು ಭಾರತ ಅಖಂಡವಾಗಿ ಉಳಿದಿದೆ.]

   ಭಾರತ ಇಂದಿಗೂ ಅಖಂಡವಾಗಿರುವುದಕ್ಕೆ ಭಾರತೀಯತೆಯೇ ಕಾರಣ. ಭಾರತವು ಭಾವೈಕ್ಯತೆಯಿಂದ ಎಲ್ಲಾ ಕಾಲದಲ್ಲೂ ಅಖಂಡವಾಗಿತ್ತು. ಭಾರತೀಯತೆಯನ್ನು ಭಾವ ಭಾಗಿರಥಿ ಅಂತ ಕರೆಯುವುದು ಇದೇ ಕಾರಣಕ್ಕೆ. ಇದೆಲ್ಲ ನಿಮಗೆ ಅರ್ಥವಾಗಲ್ಲ ಬಿಡಿ. ನಿಮ್ಮದೇನಿದ್ದರೂ ಹೆಣ ಬಿದ್ದ ಕಡೆ ಕಾಸು ಎಣಿಸುವ ಸಂಸ್ಕೃತಿ. ಅಸ್ಸಾಮಿನಲ್ಲಿ ಬೋಡೊ-ಮುಸ್ಲಿಮ ಗಲಾಟೆಯನ್ನು ಮುಂದುಮಾಡಿಕೊಂಡು ಎಷ್ಟು ಹಣ ಹೊಡೆಯುವ ಪ್ಲಾನ್ ಇದೆಯೋ ನೀವೇ ಬಲ್ಲಿರಿ.

   [ನಿಮಂಥವರಿಗೆ ಸ್ವಾತಂತ್ರ್ಯ್ ನಂತರ ಅದಿಕಾರ ಸಿಕ್ಕಿದ್ದರೆ ಭಾರತ ಇಸ್ಟರಲ್ಲೇ ನುಚ್ಚು ನೂರಾಗಿರುತ್ತಿತ್ತು.]

   ಭಾರತ ನುಚ್ಚುನೂರಾಗಲಿ ಎಂಬ ಆಸೆ ನಿಮ್ಮ ಮನದಾಳದಲ್ಲಿ ಗಾಢವಾಗಿ ಇದೆ ಅಂತ ಕಾಣುತ್ತದೆ. ಬಹುಶಃ ಅದೇ ಕಾರಣವಿರಬಹುದು ನೀವು ಪದೇ ಪದೇ ಭಾರತ ನುಚ್ಚುನೂರಾಗುವ ಮಾತನ್ನು ಆಡುತ್ತಿರುವುದಕ್ಕೆ!

   [ನಿಮ್ಮ ಕಣ್ಮಣಿ ಗುಜ್ಜು ಭಾಯಿಗೆ ಅಧಿಕಾರ ಸಿಕ್ಕಿದ್ದರೆ !]

   ಯಾವ ರಾಜಕಾರಣಿಯೂ ನನ್ನ ಕಣ್ಮಣಿ ಅಲ್ಲ. ಗುಜ್ಜು ಭಾಯಿ ಬಗ್ಗೆ ನನಗೆ ಒಲವು ಇಲ್ಲ, ಆದರೆ ನಿಮ್ಮ ಹಾಗೆ ಆತನನ್ನು ದ್ವೇಷಿಸುವುದೂ ಇಲ್ಲ!

   Reply

Leave a Reply to Salam Bava Cancel reply

Your email address will not be published.