ವರ್ತಮಾನದ ಕಥೆಗಳು : ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013ರ ಆಯ್ದಕತೆಗಳ ಕಥಾಸಂಕಲನ

ಆತ್ಮೀಯರೇ,

ಕಳೆದ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ ಮತ್ತು ಬಹುಮಾನಿತ ಕತೆಗಳ ಬಗ್ಗೆ ನಿಮಗೀಗಾಗಲೆ ತಿಳಿದಿದೆ. katha-sprade-2013(ಫಲಿತಾಂಶ, ತೀರ್ಪುಗಾರರ ಮಾತು, ಮೊದಲ ಬಹುಮಾನ ಪಡೆದ ಕತೆ, ಎರಡನೆಯ, ಮೂರನೆಯ, ಸಮಾಧಾನಕರ ಬಹುಮಾನ ಪಡೆದ ಕತೆ-೧, ಕತೆ-೨). ಆ ಸಂದರ್ಭದಲ್ಲಿ ಈ ಬಾರಿಯ ತೀರ್ಪುಗಾರರಾಗಿದ್ದ ಡಾ. ರಾಮಲಿಂಗಪ್ಪ ಟಿ. ಬೇಗೂರುರವರು ಆ ಸ್ಪರ್ಧೆಗೆ ಬಂದಿದ್ದ ಸುಮಾರು ಇಪ್ಪತ್ತು ಕತೆಗಳನ್ನು ಆಯ್ದು “ವರ್ತಮಾನದ ಕಥೆಗಳು” ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸುವ ಆಸಕ್ತಿ ತೋರಿಸಿ ಅದಕ್ಕೆ ಕೆಲವು ಪ್ರಕಾಶಕರನ್ನೂ ಸಂಪರ್ಕಿಸಿದ್ದರು. ಆ ಸಮಯದಲ್ಲಿ ನಾವು ಆಯ್ಕೆ ಮಾಡಿದ ಕತೆಗಳ ಕತೆಗಾರರಿಗೆಲ್ಲ ಇಮೇಲ್ ಬರೆದು ಇದರ ಬಗ್ಗೆ ತಿಳಿಸಿದ್ದೆವು. ಈಗ ಆ ಕಥಾಸಂಕಲನ ಪ್ರಕಟವಾಗಿದೆ ಮತ್ತು ಪ್ರಕಟಗೊಂಡಿರುವ ಕತೆಗಳ ಲೇಖಕರಿಗೆಲ್ಲ ಗೌರವ ಪ್ರತಿಗಳನ್ನು ತಲುಪಿಸಬೇಕಿದೆ. ದಯವಿಟ್ಟು ಈ ಪಟ್ಟಿಯಲ್ಲಿರುವ ಲೇಖಕರು ಡಾ. ರಾಮಲಿಂಗಪ್ಪ ಟಿ. ಬೇಗೂರುರವರನ್ನಾಗಲಿ (೯೪೪೯೨೭೧೧೫೬) ಅಥವ ನನ್ನನ್ನಾಗಲಿ (೯೬೮೬೦೮೦೦೦೫) ಸಂಪರ್ಕಿಸಿ ತಮ್ಮ ಗೌರವ ಪ್ರತಿಗಳನ್ನು ಪಡೆದುಕೊಳ್ಳಬೇಕೆಂದು ಕೋರುತ್ತೇವೆ.

ಸಮಸ್ಯೆ ಏನೆಂದರೆ, ಹಲವರ ಫೋನ್ ನಂಬರ್ ಸಹ ನಮ್ಮಲ್ಲಿಲ್ಲ. ಮತ್ತೆ ಹಲವರು ಇಮೇಲ್ ಮೂಲಕ, ಅದೂ ಹಲವು ದಿನಗಳ ನಂತರ ಉತ್ತರಿಸುತ್ತಾರೆ. ಹಾಗಾಗಿ ನಮ್ಮ ಓದುಗರಿಗೆ ಈ ಪಟ್ಟಿಯಲ್ಲಿರುವ ಯಾರಾದರೂ ಲೇಖಕರು ಪರಿಚಿತರಿದ್ದಲ್ಲಿ ಅವರಿಗೆ ಈ ವಿಷಯದ ಬಗ್ಗೆ ಕರೆ ಮಾಡಿ ತಿಳಿಸಿದರೆ, ಅದೂ ಬಹಳ ಅನುಕೂಲವಾಗುತ್ತದೆ.

ಇದನ್ನೆಲ್ಲ ಸಾಧ್ಯವಾಗಿಸಿದ ಕತೆಗಾರರಿಗೆ, ಮತ್ತು ಡಾ. ರಾಮಲಿಂಗಪ್ಪ ಟಿ. ಬೇಗೂರುರವರಿಗೆ ವರ್ತಮಾನ.ಕಾಮ್ ಪರವಾಗಿ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

vartamaanada-kathegalu-cobverpage

vartamaanada-kathegalu-authours1

vartamaanada-kathegalu-authours2

One thought on “ವರ್ತಮಾನದ ಕಥೆಗಳು : ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013ರ ಆಯ್ದಕತೆಗಳ ಕಥಾಸಂಕಲನ

  1. ಹನುಮಂತ ಹಾಲಿಗೇರಿ,

    ನನಗೂ ಒಂದು ಪ್ರತಿ ಕಳಿಸಿ ಸರ್‍. ಹನುಮಂತ ಹಾಲಿಗೇರಿ, ವಿಜಯ ಕರ್ನಾಟಕ, ಭಟ್‍ ಕಂಪೌಂಡ್‍, ಡಾ.ಪಿಕಳೆ ರೋಡ್‍. ಕಾರವಾರ: 581301

    Reply

Leave a Reply

Your email address will not be published. Required fields are marked *