Daily Archives: August 25, 2014

ಸ್ಮಶಾನವಾದ ಕಲಾಗ್ರಾಮ!

images

– ಅಭಿ

ಎಲ್ಲಾ ಭಾಷಾ ರಂಗಭೂಮಿಗಳಿಗೂ ಸಮಾನ ಮಾನ್ಯತೆ ಸಿಗಬೇಕು ಹಾಗೂ ಕನ್ನಡಕ್ಕೂ ಒಂದು ರಾಷ್ಟ್ರೀಯ ನಾಟಕ ಶಾಲೆ ಆಗಬೇಕು ಎಂದು ಹಿರಿಯ ರಂಗ ನಿರ್ದೇಶಕ ಪ್ರಸನ್ನ 2007 ರಲ್ಲಿ ಉಪವಾಸ ಕೂತಿದ್ದರು. ಅವರ ಹೋರಾಟದ ಪರಿಣಾಮ ರಾಷ್ಟ್ರೀಯ ನಾಟಕ ಶಾಲೆ ಒಂದು ಹಂತಕ್ಕೆ ಮಣಿಯಿತು. ಅಂದಿನ ರಾಜ್ಯ ಸರಕಾರ ಕಲಾಗ್ರಾಮದಲ್ಲಿ ಶಾಲೆಯನ್ನು ಆರಂಭಿಸಲು ನಿರ್ಧರಿಸಿತು. ಪೂರ್ಣ ಪ್ರಮಾಣದ ಶಾಲೆ ಇದುವರೆಗೂ ಆರಂಭವಾಗಿಲ್ಲ.

ನಿನ್ನೆ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಮೈಸೂರಿನ ಕಾರ್ಯಕ್ರಮದಲ್ಲಿ ಮಾತನಾಡುತ್ತ ಕಲಾಗ್ರಾಮ ಸ್ಮಶಾನ ಆಗುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಿಜ ಅರ್ಥದಲ್ಲಿ ಅವರು ಸಾವಿರಾರು ಅನಂತಮೂರ್ತಿ ಹಾಗೂ ಜಿ.ಎಸ್24bid.ಶಿವರುದ್ರಪ್ಪ ಅವರ ಅಭಿಮಾನಿಗಳ ಬೇಸರಕ್ಕೆ ದನಿಯಾಗಿದ್ದಾರೆ. ಪ್ರಸನ್ನ ಅವರು ಹೇಳಿರುವಂತೆ ಅನಂತಮೂರ್ತಿ ಮತ್ತು ಜಿ.ಎಸ್.ಎಸ್ ಕೂಡಾ ರಂಗಭೂಮಿ ಮತ್ತು ಕಲೆಯ ಚಟುವಟಿಕೆಗಳಿಗೆ ಮೀಸಲಾಗಿದ್ದ ಸರಕಾರಿ ಜಾಗವನ್ನು ಸ್ಮಶಾನವನ್ನಾಗಿ ಮಾಡಲು ಒಪ್ಪುತ್ತಿರಲಿಲ್ಲ. ನಮ್ಮನ್ನಗಲಿದ ಆ ಇಬ್ಬರು ಹೇಗೆ ಯೋಚಿಸಬಲ್ಲವರಾಗಿದ್ದರು ಎಂಬುದರ ಅರಿವು ಅನೇಕರಿಗೆ ಇರುವುದರಿಂದ ಹೀಗೆ ಧೈರ್ಯವಾಗಿ ಹೇಳಬಹುದು.

ಹಾಗಾದರೆ, ಕಲಾಗ್ರಾಮವನ್ನು ಸ್ಮಶಾನ ಮಾಡಲು ಹೊರಟವರು ಯಾರು ಎನ್ನುವುದನ್ನು ಹುಡಕಬೇಕಿದೆ. ಅನಂತಮೂರ್ತಿಯವರ ಕುಟುಂಬದವರು ಕಲಾಗ್ರಾಮದಲ್ಲಿ ಆಗಬೇಕು ಎಂದು ಅಪೇಕ್ಷಿಸಿದರು ಎಂದು ವರದಿಗಳು ಹೇಳುತ್ತವೆ. ಒಂದು ಪಕ್ಷ ಹಾಗೆ ಹೇಳಿದ್ದರೆ, ಸರಕಾರ ತನ್ನ ವಿವೇಚನೆ ಬಳಸಿ ಕುಟುಂಬದವರಿಗೆ ಹೇಳಬಹುದಿತ್ತು. ಸರಕಾರ ಹೇಳಿದ ಮೇಲೂ ಕಲಾಗ್ರಾಮವೇ ಆಗಬೇಕೆಂದು ಅನಂತಮೂರ್ತಿ ಮನೆಯವರು ಹಟ ಮಾಡುತ್ತಿದ್ದರೆಂದು ಯಾರೂ ಉಹಿಸಲಾಗುವುದಿಲ್ಲ. ಸರಕಾರ ಹೇಳದೇ ಉಳಿದದ್ದು ಏಕೆ ಎನ್ನುವುದು ಪ್ರಶ್ನಾರ್ಹ.ಅನಂತಮೂರ್ತಿಯವರ ಕುಟುಂಬದವರಿಂದ ಇಂತಹದೊಂದು ಪ್ರಸ್ತಾವ 25ndfr-prasanna_ART_511452eಬರಲು ಏನು ಕಾರಣ? ಅನಂತಮೂರ್ತಿಯವರೇ ತಮ್ಮ ಸಂಸ್ಕಾರದ ವಿಧಿ ವಿಧಾನಗಳು ಇಲ್ಲಿಯೇ ಆಗಬೇಕೆಂದು ಹೇಳಿದ್ದರ ಬಗ್ಗೆ ಲಿಖಿತ ದಾಖಲೆಗಳಿಲ್ಲ. ಅನಂತಮೂರ್ತಿಯವರ ಮಗ ಹೇಳುವಂತೆ, ಅಪ್ಪನ ಬಯಕೆಯಂತೆ ವಿಧಿ ವಿಧಾನಗಳು ನಡೆದವು.

ಸಮಾಧಾನದ ಸಂಗತಿ ಎಂದರೆ, ಈ ಎಲ್ಲಾ ವಿಚಾರಗಳ ಬಗ್ಗೆ (ಸಂಸ್ಕಾರ ನಡೆದ ರೀತಿ ಬಗ್ಗೆಯೂ) ಚರ್ಚೆಗಳು ನಡೆಯುತ್ತಿವೆ. ಸದಾ ಚರ್ಚೆ, ವಾಗ್ವಾದಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದ ಅನಂತಮೂರ್ತಿಯವರು ಮತ್ತೆ ತಮ್ಮ ಸಂಸ್ಕಾರ ನಡೆದ ರೀತಿಗಳಿಗಾಗಿ ಚರ್ಚೆಗೆ ಅನುವು ಮಾಡಿಕೊಟ್ಟಿದ್ದಾರೆ. ಹೀಗೊಂದು ಮುಕ್ತ ಚರ್ಚೆ ನಡೆಯಲು ಅವರೇ ಪ್ರೇರಣೆ.