Daily Archives: September 1, 2014

ದಲಿತರು ಮತ್ತು ಸ್ವಾವಲಂಬನೆ – ತಿಪಟೂರಿನಲ್ಲಿ : ಸೆಪ್ಟೆಂಬರ್ 6, 2014

ಸ್ನೇಹಿತರೇ,

ವರ್ತಮಾನ.ಕಾಮ್ ಕಳೆದ ಒಂದು ವರ್ಷದಲ್ಲಿ ರಾಜ್ಯದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ “ದಲಿತರು ಮತ್ತು ಉದ್ಯಮಶೀಲತೆ” ವಿಷಯವಾಗಿ ಹಾಸನ, ತುಮಕೂರು, ಮತ್ತು ಮೈಸೂರಿನಲ್ಲಿ ವಿಚಾರಸಂಕಿರಣವನ್ನು ಏರ್ಪಡಿಸಿದ್ದು ತಮಗೆಲ್ಲ ತಿಳಿದಿದೆ. ಅದರ ಮುಂದುವರಿದ ಭಾಗವಾಗಿ ಇದೇ ಶನಿವಾರದಂದು (06-o9-2014) ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ಅಲ್ಲಿಯ “ದಲಿತ ಸಾಹಿತ್ಯ ಪರಿಷತ್” ಮತ್ತು “ಸ್ನೇಹ ಜ್ಯೋತಿ ರೂರಲ್ ಡೆವಲಪ್‌ಮೆಂಟ್ ಸೊಸೈಟಿ”ಯವರ ಸಂಯುಕ್ತಾಶ್ರಯದಲ್ಲಿ “ದಲಿತರು ಮತ್ತು ಸ್ವಾವಲಂಬನೆ” ವಿಚಾರವಾಗಿ ಒಂದು ದಿನದ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ತಿಪಟೂರು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ಮತ್ತು ಸಾಮಾಜಿಕವಾಗಿ ಕ್ರಿಯಾಶೀಲ ವ್ಯಕ್ತಿಗಳೊನ್ನಳಗೊಂಡ ಪ್ರದೇಶ. ಜಿಲ್ಲಾ ಕೇಂದ್ರವಾಗಿರುವ ತುಮಕೂರಿಗಿಂತ ಹಾಸನವೇ ಹತ್ತು-ಹದಿನೈದು ಕಿ.ಮೀ. ಹತ್ತಿರ. ಹಾಗಾಗಿ ತಿಪಟೂರಿನ ಸುತ್ತಮುತ್ತಲ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ ಜನತೆಯ ಜೊತೆಗೆ ಹಾಸನ ಜಿಲ್ಲೆಯ ಗಂಡಸಿ, ಅರಸಿಕೆರೆ, ಚನ್ನರಾಯಪಟ್ಟಣ, ಹಾಸನದ ಆಸಕ್ತ ಜನರೂ ಸಹ ಇದರಲ್ಲಿ ಭಾಗವಹಿಸಬಹುದು. ಕಾರ್ಯಕ್ರಮದ ಹೆಚ್ಚಿನ ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ. ವರ್ತಮಾನ ಬಳಗದ ಪರವಾಗಿ ನಿಮ್ಮೆಲ್ಲರಿಗೂ ಸ್ವಾಗತ.

ನಮಸ್ಕಾರ,
ಬಿ. ಶ್ರೀಪಾದ್ ಭಟ್ ಮತ್ತು ರವಿ
ವರ್ತಮಾನ ಬಳಗದ ಪರವಾಗಿ

dalit-entrepreneur-tiptur-1