ಬೆತ್ತಲಾದ ಮತಾಂಧ ಹಲ್ಲೆಕೋರ ‘ಮಲಿಕ್ ’


-ಇರ್ಷಾದ್ ಉಪ್ಪಿನಂಗಡಿ


 

 

‘ಮುಸ್ಲಿಮ್ ಮಹಿಳೆಯಾಗಿ ತುಂಡುಡುಗೆ ಧರಿಸಿದ್ದು ತಪ್ಪು’ ಎಂಬ ಕಾರಣಕ್ಕಾಗಿ ಬಾಲಿವುಡ್ ನಟಿ ಹಾಗೂ ರೂಪದರ್ಶಿ ಗೌಹರ್ ಖಾನ್ ಮೇಲೆ ಮುಂಬೈನಲ್ಲಿ ನಡೆಯುತ್ತಿದ್ದ ರಿಯಾಲಿಟಿ ಕಾರ್ಯಕ್ರಮದ ವೇದಿಕೆಯಲ್ಲಿ ಮುಸ್ಲಿಮ್ ಪ್ರೇಕ್ಷಕನೊಬ್ಬ ಹಲ್ಲೆ ನಡೆಸಿ ಮತಾಂಧತೆಯನ್ನು ಮೆರೆದಿರುವ ಘಟನೆ ಮುಸ್ಲಿಮ್ ಸಮಾಜದಲ್ಲಿ ಬುರ್ಖಾ ತೊಡದ ಮಹಿಳೆಯರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ‘ಧರ್ಮದಲ್ಲಿ ಯಾವುದೇ ಬಲವಂತವಿಲ್ಲ’ ಎಂಬುವುದನ್ನು ಜಗತ್ತಿಗೆ ಕಲಿಸಿಕೊಟ್ಟ Gauhar-slappedಧರ್ಮ ಇಸ್ಲಾಮ್. ಆ ಧರ್ಮದ ಹೆಸರಲ್ಲಿ ಮತಾಂಧ ಮುಹಮ್ಮದ್ ಅಕಿಲ್ ಮಲಿಕ್ ಮುಂಬೈನಲ್ಲಿ ಗೌಹಾರ್ ಖಾನ್ ಮೇಲೆ ‘ಅನ್ ಇಸ್ಲಾಮಿಕ್’ ಮಾದರಿಯ ವಸ್ತ್ರ ಧರಿಸಿದ್ದಾಳೆ ಎಂಬ ಕಾರಣವನ್ನು ಮುಂದಿಟ್ಟು ನಡೆಸಿರುವ ಹಲ್ಲೆ ಅಮಾನವೀಯ ಹಾಗೂ ಖಂಡನಾರ್ಹ. ಇಸ್ಲಾಮ್ ಧರ್ಮದಲ್ಲಿ ಮಹಿಳೆ ಪರ್ದಾ ಅಥವಾ ಬುರ್ಖಾ ಧರಿಸುವುದು ಒಂದು ಸಂಪ್ರದಾಯ. ಆದರೆ ಬುರ್ಖಾ ಧರಿಸುವುದು ಬಿಡುವುದು ಅವರ ವೈಯಕ್ತಿಕ ವಿಚಾರ. ಇಸ್ಲಾಮ್ ಧರ್ಮದಲ್ಲಿ ಕಡ್ಡಾಯ ವಸ್ತ್ರ ಸಂಹಿತೆಯನ್ನು ಪಾಲನೆ ಮಾಡುವ ಮಹಿಳೆಯರ ಜೊತೆ ಜೊತೆಗೆ ತಮಗಿಷ್ಟವಾದ ವಸ್ತ್ರವನ್ನು ಧರಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಕಷ್ಟು ಮುಸ್ಲಿಮ್ ಮಹಿಳೆಯರಿದ್ದಾರೆ. ಬಾಲಿವುಡ್ ನಲ್ಲೂ ಮಿಂಚಿದ ಮುಸ್ಲಿಮ್ ಮಹಿಳೆಯರು ನಮ್ಮ ಕಣ್ಣ ಮುಂದಿದ್ದಾರೆ. ಆದರೆ ಇಂದು ಬೆಳೆಯುತ್ತಿರುವ ಹಿಂದೂ, ಮುಸ್ಲಿಮ್ ಮೂಲಭೂತವಾದಿ ಸ್ಂಘಟನೆಗಳು ಗೌಹಾರ್ ಖಾನ್ ಅಥವಾ ದೀಪಿಕಾ ಪಡುಕೋಣೆಯಂತಹಾ ಸ್ತ್ರೀಯರು ಯಾವ ರೀತಿಯ ವಸ್ತ್ರ ಧರಿಸಬೇಕು, ಯಾವ ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ನಿರ್ಧರಿಸುವ ಗುತ್ತಿಗೆ ಪಡೆದುಕೊಂಡತಿದೆ.

ಇದು ಕೇವಲ ಗೌಹಾರ್ ಖಾನ್ ಒಬ್ಬಳದ್ದೇ ವ್ಯಥೆ ಅಲ್ಲ. ಈ ಮೂಲಭೂತವಾಧಿ ಮತಾಂಧರ ಅನೈತಿಕ ಪೊಲೀಸರ ಕಣ್ಣಿಗೆ ನಿತ್ಯ ಗುರಿಯಾಗುತ್ತಿರುವ ಇಂಥಹಾ ಸಾಕಷ್ಟು ಮಹಿಳೆಯರಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಮಂಗಳೂರಿನ ಮುಸ್ಲಿಮ್ ಮಹಿಳೆ ಉಮ್ಮು ರಹೀಫ್ ರಹೀನ ಎಂಬುವವರು ತಮ್ಮ ಪೋಟೋವನ್ನು ಹಾಕಿದ್ದ ಕಾರಣಕ್ಕಾಗಿ ಮುಸ್ಲಿಮ್ ಮೂಲಭೂತವಾಧಿಗಳು ಆ ಮಹಿಳೆಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಈ ರೀತಿ ಪರ ಪುರುಷರಿಗೆ ತಮ್ಮ ಮುಖವನ್ನು ತೋರಿಸಲು ಅವಕಾಶ ನೀಡುವುದು ಅಧಾರ್ಮಿಕ ಎಂದು ಅವರ ವಿರುದ್ಧ ಮುಗಿಬಿದ್ದಿದ್ದರು. ಹೀಗೆ ಮಹಿಳೆ ಪೇಸ್ ಬುಕ್ ನಲ್ಲಿ ತಮ್ಮ ಪೋಟೋ ಹಾಕಿದ್ದಾರೆ ಎಂಬ ಕಾರಣಕ್ಕಾಗಿ ಅವರ ಮೇಲೆ ಮುಗಿಬಿದ್ದ ಇದೇ ಮತಾಂಧ ಯುವಕರು ತಮ್ಮ ಪೇಸ್ ಬುಕ್ ಮುಖಪುಟದಲ್ಲಿ ವಿವಿಧ ಭಂಗಿಗಳಲ್ಲಿ ಹತ್ತಾರು ಪೋಟೋಗಳನ್ನು ಹಾಕಿ ನೂರಾರು ಲೈಕ್ ಗಳನ್ನು ಕಾಮೆಂಟ್ ಗಳನ್ನು ಪಡೆದುಕೊಂಡಿದ್ದರು. ಹಾಗೆ ನೋಡಿದ್ದಲ್ಲಿ ಇಸ್ಲಾಮ್ ಧರ್ಮದಲ್ಲಿ ಪೋಟೋ ತೆಗೆಯುವುದು ಹಾಗೂ ಅದನ್ನು ಇಟ್ಟುಕೊಳ್ಳುವುದೇ ನಿಷಿದ್ದ. ಮುಸ್ಲಿಮ್ ಹಿರಿಯ ಧಾರ್ಮಿಕ ಪಂಡಿತರು ಇತ್ತೀಚಿನವರೆಗೂ ಸಭೆ ಸಮಾರಂಭಗಳಲ್ಲಿ ತಮ್ಮ ಪೋಟೋಗಳನ್ನು ತೆಗೆಯೋದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇಂದು ಅಂತಹ ಧಾರ್ಮಿಕ ಕಟ್ಟಲೆಯಿಂದ ಮುಸ್ಲಿಮ್ ಪುರುಷರು ಬದಲಾಗಿದ್ದಾರೆ. ಆದರೆ ಇದೇ ರೀತಿಯಲ್ಲಿ ಮಹಿಳೆಯರು ಬದಲಾವಣೆ ಬಯಸೋದನ್ನು ಮಾತ್ರ ಈ ಮೂಲಭೂತವಾಧಿ ಮನಸ್ಸುಗಳು ಸಹಿಸೋದಿಲ್ಲ.

ಕೆಲ ತಿಂಗಳ ಹಿಂದೆ ನಾನೊಂದು ವರದಿ ಮಾಡಿದ್ದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯೊಂದರಲ್ಲಿ ಪುಟಾಣಿ ಮುಸ್ಲಿಮ್ ಹೆಣ್ಣು ಮಕ್ಕಳು ಶಾಲಾ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡಬಾರದು ಎಂದು ಗ್ರಾಮದ ಮದರಸಾದ ಧಾರ್ಮಿಕ ಮುಖ್ಯ ಶಿಕ್ಷಕರೊಬ್ಬರು ಫತ್ವಾ ( ಅಭಿಪ್ರಾಯ) ಹೊರಡಿಸಿದ್ದರು. muslim-womanಯಾಕೆ ಮಕ್ಕಳು ಡ್ಯಾನ್ಸ್ ಮಾಡಬಾರದು ಎಂದು ಆ ಧಾರ್ಮಿಕ ಶಿಕ್ಷಕರಲ್ಲಿ ಕೇಳಿದ್ರೆ, ಅದು ಅಶ್ಲೀಲ ಹಾಗೂ ಧರ್ಮ ವಿರೋಧಿ ಎಂದಿದ್ದರು. ಆದರೆ ಪಾಪ ಆ ಹೆಣ್ಮಕ್ಕಳಲ್ಲಿ ಈ ಕುರಿತು ವಿಚಾರಿಸಿದಾಗ ಅವರು ಆಸೆಗಣ್ಣಿನಿಂದ ನಮಗೆ ಡ್ಯಾನ್ಸ್ ಮಾಡೋದಕ್ಕೆ ಇಷ್ಟ ಇದೆ ಆದರೆ ಮದರಸಾದ ಧಾರ್ಮಿಕ ಶಿಕ್ಷಕರು ಬೇಡ ಅಂದಿದ್ದಾರೆ ಎಂದು ಕಣ್ಣೀರು ಹಾಕಿದ್ರು. ಇಲ್ಲೂ ಧಾರ್ಮಿಕ ಕಟ್ಟಲೆಗಳು ಕೇವಲ ಹೆಣ್ಣಿಗೆ ಮಾತ್ರ ಸೀಮಿತ. ಮಂಗಳೂರಿನ ಅನೇಕ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೂಡಾ ಬಹುತೇಕ ಹೆಣ್ಮಕ್ಕಳು 8, 9 ನೇ ತರಗತಿಯ ನಂತರ ಶಾಲಾ, ಕಾಲೇಜು ವಾರ್ಷಿಕೋತ್ಸವದಲ್ಲಿ ನೃತ್ಯ, ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆತ್ತವರು ಅವಕಾಶ ನೀಡುವುದಿಲ್ಲ. ಆದರೆ ಅದೇ ಶಾಲೆಗಳಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಮುಸ್ಲಿಮ್ ಹುಡುಗರು ಮುಂಚೂಣಿಯಲ್ಲಿರುತ್ತಾರೆ.

ಧರ್ಮ ಸಂಸ್ಕೃತಿಯ ಹೆಸರಲ್ಲಿ ಹೆಣ್ಣಿನ ನಿಯಂತ್ರಣ ಕೇವಲ ಮುಸ್ಲಿಮ್ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಶಾಲಾ ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್ ಮಾಡಬಾರದು ಎಂದು ಫತ್ವಾ ಹೊರಡಿಸಿದರೋ , ಮುಸ್ಲಿಮ್ ಮಹಿಳೆ ಪೇಸ್ ಬುಕ್ ನಲ್ಲಿ ಪೋಟೋ ಹಾಕಿದಕ್ಕಾಗಿ ಅವರ ಮೇಲೆ ಮುಗಿಬಿದ್ದರೋ ಅಲ್ಲೇ ಹಿಂದೂ ಯುವಕ –ಯುವತಿಯರು ಪಬ್ ಹೋದದಕ್ಕಾಗಿ ಪಬ್ ಮೇಲೆ ದಾಳಿ ನಡೆಸಿ ಅವರ ಮೇಲೆ ಹಲ್ಲೆ ನಡೆಸಲಾಯಿತು, ಹೋಂ ಸ್ಟೇನಲ್ಲಿ ಹುಟ್ಟುಹಬ್ಬದ ಆಚರಣೆ ಮಾಡಿದಕ್ಕಾಗಿ ಅವರ ಮೇಲೂ ಹಲ್ಲೆ ನಡೆಸಲಾಯಿತು.

“ಮಹಿಳೆ ಬುರ್ಖಾ ಧರಿಸಿ, ಲಜ್ಜೆಯಿಂದ ವರ್ತಿಸಿ ತನ್ನ ಪುರಷನ ಹಿಡಿತದೊಳಗೆ ಇರಬೇಕೇ ಹೊರತು, ಪೇಟೆಯ ವ್ಯಾಪಾರಿ, ಕಛೇರಿಯ ಗುಮಾಸ್ತೆ, ನ್ಯಾಯಾಲಯದ ನ್ಯಾಯಾಧೀಶೆ ಮತ್ತು ಸೈನ್ಯದ ಸಿಪಾಯಿಯಾಗುವುದು ಆಕೆಯ ಸ್ಥಾನಮಾನವಲ್ಲ. ಬದಲಾಗಿ ಆಕೆಯ ನೈಜ್ಯ ಕಾರ್ಯಕ್ಷೇತ್ರ ಆಕೆಯ ಮನೆಯಾಗಿರಬೇಕು” ಎಂದು ಬಯಸುವ ಮತಾಂಧ ಮುಹಮ್ಮದ್ ಅಕಿಲ್  ಹಾಗೂ ಅದೇ ರೀತಿಯಲ್ಲಿ “ಮಹಿಳೆ ಅಚ್ಚ ಭಾರತೀಯ ನಾರಿಯ ರೀತಿಯಲ್ಲಿರಬೇಕು ಸ್ಕರ್ಟ್ ಪ್ಯಾಂಟು ಧರಿಸದಂತೆ ನಿಷೇಧ ಹೇರಬೇಕು. ಹೆಣ್ಣುಮಕ್ಕಳು ಶಾಲೆಯಲ್ಲಿ ಮೊಬೈಲ್ ಬಳಸದಂತೆ ನೋಡಬೇಕು. ಚಲನಚಿತ್ರಗಳಲ್ಲಿ ಮೈ ಕಾಣುವ ತುಂಡುಡುಗೆ ತೊಟ್ಟು ಐಟಮ್ ಹಾಡುಗಳಲ್ಲಿ ನರ್ತಿಸುವ ಮಹಿಳೆಯರೆಲ್ಲಾ ವೇಶ್ಯೆಯರು. ಇವರೆಲ್ಲಾ ಸಮಾಜವನ್ನು ಕುಲಗೆಡಿಸುತ್ತಾರೆ” ಎನ್ನುವ ಹಿಂದೂ ಮಹಾಸಭಾದ ಕಾರ್ಯದರ್ಶಿ ನವೀನ್ ತ್ಯಾಗಿ ಮನಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ. ಈ ಎರಡೂ ಮೂಲಭೂತವಾದ ಅನಾದಿ ಕಾಲದಿಂದಲೂ ಹೆಣ್ಣನ್ನು ಶೋಷಣೆ ಮಾಡಿಕೊಂಡೇ ಬಂದಿದೆ. ಆಕೆಯನ್ನು ಕೇವಲ ಮಕ್ಕಳನ್ನು ಹಡೆಯುವ ಯಂತ್ರದಂತೆ ಪರಿಗಣಿಸಿದೆ. ಧರ್ಮ, ಸಂಸ್ಕೃತಿಯ ಹೆಸರಲ್ಲಿ ಆಕೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡೇ ಬಂದಿದೆ. ಆದರೆ ಇಲ್ಲಿ ಆನೆ ನಡೆದದ್ದೇ ದಾರಿಯೆಂಬುವಂತೆ ಪುರುಷ ಮಾಡಿದ್ದೇ ಧರ್ಮ ಆಡಿದ್ದೇ ಸಂಸ್ಕೃತಿ. ಯಾವಾಗ ಪುರುಷ ಪ್ರಧಾನ ಸಂಸ್ಕೃತಿ, ಧರ್ಮದ ಹಿಡಿತದಿಂದ ತಪ್ಪಿಸಿಕೊಂಡು ಹೊರಪ್ರಪಂಚಕ್ಕೆ ಕಾಲಿಟ್ಟ ಹೆಣ್ಣು ತನಗಿಷ್ಟ ಬಂದ ಉಡುಗೆ ತೊಡುತ್ತಾಳೋ, ತನಗಿಷ್ಟವಾದ ಸಂಗಾತಿಯ ಜೊತೆ ಪಬ್ ಗಳಿಗೆ ಹೋಗುತ್ತಾಳೋ ತನ್ನ ಸುಂದರವಾದ ಪೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕುತ್ತಾಳೋ, ಧರ್ಮ, ಸಂಸ್ಕೃತಿಯನ್ನು ಬದಿಗಿಟ್ಟು ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಾಳೋ ಆವಾಗ ಅದನ್ನು ಸಹಿಸಿಕೊಳ್ಳಲಾಗದ ಮುಹಮ್ಮದ್ ಅಕಿಲ್ ಮಲಿಕ್, ನವೀನ್ ತ್ಯಾಗಿ ಯಂತಹಾ ಮನಸ್ಥಿತಿಯ ಜನ ಮತ್ತೆ ಧರ್ಮ, ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಆಕೆಯ ಮೇಲೆ ದೌರ್ಜನ್ಯ ಎಸಗುತ್ತಾರೆ.

ಧಾರ್ಮಿಕ ಚೌಕಟ್ಟನ್ನು ಪಾಲಿಸಿ, ತಗ್ಗಿ ಬಗ್ಗಿ ನಡೆದ ಹೆಣ್ಣಿನ ಮೇಲೆನೂ ಪುರುಷ ಕಾಮುಕ ಕಣ್ಣುಗಳು ಮುಗಿಬಿದ್ದು ಅತ್ಯಾಚಾರ ನಡೆಸಿ ದೌರ್ಜನ್ಯ ಎಸಗಿ ಅದರಲ್ಲೂ ಹೆಣ್ಣಿನಲ್ಲೇ20090124pub4 ತಪ್ಪನ್ನು ಹುಡುಕಿದ ಇದೇ ಪುರುಷ ಪ್ರಧಾನ ಸಮಾಜ ಹೆಣ್ಣಿನ ವಸ್ತ್ರ ಸಂಹಿತೆಯ ಹೆಸರಲ್ಲಿ ಹಲ್ಲೆ ನಡೆಸಿ ಇನ್ನೊಂದು ರೀತಿಯ ದೌರ್ಜನ್ಯ ಎಸಗುತ್ತಾ ಬಂದಿದೆ. ಒಂದು ಮೂಲಭೂತವಾದ ಪಬ್, ಹೋಂ ಸ್ಟೇಗಳಿಗೆ ಯುವತಿಯರು ಹೋಗಬಾರದು, ತುಂಡುಡುಗೆ ಧರಿಸಬಾರದು ಎಂಬ ಉಪದೇಶ ನೀಡಿ ಅದನ್ನು ಪಾಲಿಸದವರ ಮೇಲೆ ಮುಗಿಬಿದ್ದರೆ ಇಲ್ಲಿ ಇನ್ನೊಂದು ಮೂಲಭೂತವಾಧ ಹೆಣ್ಮಕ್ಕಳು ನೃತ್ಯ ಮಾಡಬಾರದು, ಕಡ್ಡಾಯ ಬುರ್ಖಾ ಧರಿಸಬೇಕು, ಅನ್ಯ ಪುರುಷನ ಜೊತೆ ಸುತ್ತಾಡಬಾರದು ಎಂಬ ಫರ್ಮಾನನ್ನು ಹೊರಡಿಸಿದೆ. ಅದನ್ನು ಯಾರು ಪಾಲಿಸುತ್ತಿಲ್ಲವೋ ಅಂಥಹವರ ಮೇಲೆ ಧರ್ಮ, ಸಂಸ್ಕೃತಿಯ ಹೆಸರಲ್ಲಿ ದೌರ್ಜನ್ಯಗಳು ನಡೆಯುತ್ತವೆ. ಸದ್ಯ ಇಲ್ಲಿ ನನಗೆ ಕಾಣುವ ಅಪಾಯವೆಂದರೆ ಇಂಥಹಾ ಹಲ್ಲೆಗಳು ಟ್ರೆಂಡ್ ಆಗಿ ಮಾರ್ಪಡುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹಾಗೂ ನಾಗರಿಕ ಸಮಾಜ ಇಂಥಹಾ ನೀಚ ಮತಾಂಧರ ಕೃತ್ಯದ ವಿರುದ್ಧ ಪ್ರತಿಭಟಿಸಬೇಕಾಗಿದೆ. ಇದರ ಜೊತೆ ಜೊತೆಗೆ ಹೇಗೆ ಬೀದಿ ಕಾಮುಕರಿಗೆ ಹರಿಯಾಣದ ಸಹೋದರಿಯರು ಥಳಿಸಿ ತಕ್ಕ ಪಾಠ ಕಲಿಸಿದರೋ ಅದೇ ರೀತಿಯಲ್ಲಿ  ವಸ್ತ್ರ ಸಂಹಿತೆ, ಆಚಾರ ವಿಚಾರ ಹೇಗಿರಬೇಕೆಂದು ನಿರ್ಧರಿಸುವ ಈ ಅನೈತಿಕ ಪೊಲೀಸರಿಗೆ ತಕ್ಕ ಪ್ರತ್ಯುತ್ತರ ನೀಡಲು ಸ್ತ್ರೀ ಸಮಾಜ ಮುಂದಾಗಬೇಕಾಗಿದೆ. ಇಲ್ಲದಿದ್ದಲ್ಲಿ ಇನ್ನಷ್ಟು ಗೌಹಾರ್ ಖಾನ್ ಗಳು ಮಹಮ್ಮದ್ ಮಲಿಕ್ ಹಾಗೂ ನವೀನ್ ತ್ಯಾಗಿಯಂತಹಾ ಸಂಸ್ಕೃತಿ ರಕ್ಷಕರಿಂದ ದೌರ್ಜನ್ಯಕ್ಕೊಳಗಾಗುತ್ತಲೇ ಇರಬೇಕಾದ ಪರಿಸ್ಥಿತಿ ಮುಂದುವರಿಯತ್ತದೆ.

77 thoughts on “ಬೆತ್ತಲಾದ ಮತಾಂಧ ಹಲ್ಲೆಕೋರ ‘ಮಲಿಕ್ ’

 1. ಮಹೇಶ

  ಮಹಮ್ಮದ್ ಮಲಿಕ್ ಒಬ್ಬ ಹಿಂದುವಾಗಿ , ಮಹಿಳೆಯಾದ ಗೌಹರ್ ಖಾನ್ ಮೇಲೆ ಇಂತಹ ದೌರ್ಜನ್ಯ ಎಸಗಬಹುದೇ ? ಹಿಂದೂಗಳಿಂದ ಇಂತಹ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ (ಭಾರತದಲ್ಲಿ ವಾಸಿಸುವವರೆಲ್ಲಾ ಹಿಂದುಗಳು – ಸಂಘ ಪರಿವಾರದ ನಾಯಕರ ಮಾತಿನಂತೆ )

  Reply
 2. Salam Bava

  ಈ ಯುವಲೇಖಕರಿಗೆ ಸ್ವಧರ್ಮಿಯರ ಮೇಲೆ ಗೂಬೆ ಕೂರಿಸಿ ತಮ್ಮ TRP ಬೆಳೆಸುವುದು ಅತ್ಯಂತ ಸುಲಭದ ಮಾರ್ಗವಾಗಿದೆ. ಸ್ರಜನಶೀಲತೆ ,ವಿಷಯದ ಗಾಡ ಅರಿವು ಮತ್ತು ತಮ್ಮ ಬೌದ್ದಿಕ ಪರಿಮಿತಿಯ ಕೊರತೆಯಿಂದ ಬಳಲುತ್ತಿರುವ ಇವರು ,ಯಾವುದೇ ಒಬ್ಬ ಹುಚ್ಹ ನಡೆಸಿದ Isolated ಹಲ್ಲೆಯನ್ನು ವ್ಯೆಭವೀಕರಿಸಿದ್ದಾರೆ . ಸಮುದಾಯದಲ್ಲಿ ತುಂಬಾ ಬರ್ನಿಂಗ್ ಇಶ್ಯೂ ಗಳಿವೆ . ಯುವಕರಿಗೆ ಕನಸುಗಳನ್ನು ಬಿತ್ತಿ,ಅವರ ಸಮಸ್ಯೆಗಳಾದ ಶಿಕ್ಷಣ ,ನಿರುದ್ಯೋಗ,ಮುಖ್ಯ ಧಾರೆಯಲ್ಲಿ ಒಂದಾಗುವುದರ ಅಗತ್ಯತೆ – ಇದರ ಕುರಿತು ಅರಿವು ಮೂಡಿಸುವ ಲೇಖನ ಬರಲಿ . ಇನ್ನು ನಿಮಗೆ ಪ್ರಸಿದ್ದಿ ಬೇಕು ಎಂದಾದರೆ ಯಾವುದಾರು ಮಸಾಲೆ ಟಿವಿ ಸೇರಿಕೊಳ್ಳಿ ,ಆದ್ರೆ ಜನಸಮುದಾಯದ ಭಾವನೆಗಳ ಮೇಲೆ ಆಟವಾಡ ಬೇಡಿ !

  Reply
  1. ನಾಗಶೆಟ್ಟಿ ಶೆಟ್ಕರ್

   ಸಲಾಂ ಬಾವ ಅವರ ಅಭಿಪ್ರಾಯ ಗಮನಾರ್ಹವಾಗಿದೆ. ಗಂಭೀರ ಸಮಸ್ಯೆಗಳಿಗೆ ಮುಖಾಮುಖಿ ಆಗುವ ಬದಲು ಸೇನ್ಸೆಷಲಿಸ್ಮ್ ಅನ್ನು ಎನ್ಕ್ಯಾಶ್ ಮಾಡುವ ಪ್ರವೃತ್ತಿ ಇಲ್ಲಿ ಕಾಣುತ್ತಿದೆ. ವರ್ತಮಾನ ಪತ್ರಿಕೆ ಜನಪರವಾದ ಲೇಖನಗಳನ್ನು ಕೊಡತಕ್ಕದ್ದು.

   Reply
  2. M A Sriranga

   ಸಲಾಂ ಬಾವ ಅವರಿಗೆ— ಏಟು ಹೊಡೆದವನು ಮತ್ತು ಹೊಡೆಸಿಕೊಂಡಾಕೆ ಇಬ್ಬರೂ ಮುಸ್ಲಿಂ ಆದ್ದರಿಂದ ತಮಗೆ ಕಸಿವಿಸಿ ಆಗಿದೆ. ಆ ಕಸಿವಿಸಿಯನ್ನು ಮರೆಮಾಚಲು ಲೇಖಕರ ಮೇಲೆ ಗೂಬೆ ಕೂರಿಸಿದ್ದೀರಿ . ಅವರಿಬ್ಬರಲ್ಲಿ ಯಾರಾದರು ಒಬ್ಬರು ಹಿಂದೂ ಆಗಿದ್ದರೆ ನಿಮ್ಮ ಟೀಕೆಯ ವರಸೆಯೇ ಬೇರೆ ರೀತಿ ಇರುತ್ತಿತ್ತು ಎಂಬುದು ‘ವರ್ತಮಾನ’ ದ ಓದುಗರಿಗೆ ತಿಳಿದಿರುವ ವಿಷಯ.

   Reply
 3. pramod

  ಯಾವುದು ಸೇನ್ಸೆಷಲಿಸ್ಮ್ ಇಶ್ಸೂ ನಾಗಶೆಟ್ಟಿ ಶೆಟ್ಟರ್, ಪಬ್ ಮೇಲೆ ದಾಳಿ ನಡೆಸಿ ಹೆಣ್ಮಕ್ಕಳ ಸ್ವಾತಂತ್ರವನ್ನು ಕಿತ್ತು ಅವರ ಮೇಲೆ ಹಲ್ಲೆ ನಡೆಸುವುದನ್ನು ಖಂಡಿಸುವುದು ಸೇನ್ಸೆಷನಲಾ ? ಹುಡುಗ ಹುಡುಗಿ ಪರಸ್ಪರ ಮಾತನಾಡಿದರೆ ಅವರನ್ನು ಗುರಿಯಾಗಿಸಿಕೊಂಡು ಹೊಡೆಯುವುದನ್ನು ಖಂಡಿಸುವುದು ಸೇನ್ಸೆಷನಲಾ ? ತುಂಡುಡುಗೆ ಧರಿಸಿದ್ದಾಳೆ ಎಂದು ಧರ್ಮದ ಹೆಸರಲ್ಲಿ ನಟಿವೊಬ್ಬಳಿಗೆ ಹಲ್ಲೆ ನಡೆಸುವುದು ಸೇನ್ಸೆಷನಲಾ ? ನಿಮ್ಮ ಪ್ರಕಾರ ಜನ ಪರವಾದ ಲೇಖನ ಯಾವುದು ದಯವಿಟ್ಟು ತಿಳಿಸುತ್ತೀರಾ? ಇನ್ನು ಸಲಾಂ ಭಾವ ಇಲ್ಲಿ ಸ್ವಧರ್ಮಿಯರ ಮೇಲೆ ಗೂಬೆ ಕೂರಿಸುವುದು ಅಂದರೆ ಏನು ಅರ್ಥ. ಇಲ್ಲಿ ಲೇಖಕರು ಸ್ವಧರ್ಮಿಯರ ಮೇಲೆ ಗೂಬೆ ಕೂರಿಸಿರುವುದು ನನಗೆ ಕಂಡುಬಂದಿಲ್ಲ ಬದಲಾಗಿ ಧರ್ಮದ ಹೆಸರಲ್ಲಿ ಅನ್ಯಾಯ ಎಸಗಿ ಒಬ್ಬರ ಸ್ವಾತಂತ್ರವನ್ನು ಕಸಿದುಕೊಂಡು ಪೌರುಷ ಮೆರೆದು ಧರ್ಮಕ್ಕೆ ಕಳಂಕ ತರುವ ಧರ್ಮಾಂಧರ ವಿರುದ್ಧ ಧ್ವನಿ ಎತ್ತುವುದೇ ವೈಭವಿಕರಣ ಎಂದಾದರೆ ಇಂಥಹಾ ನೂರಾರು ಲೇಖಕಗಳು ಮೂಡಿಬರಲಿ.

  Reply
 4. ಇಶ್ತಿಯಾಕ್

  ಸಲಾಂ ಬಾವರವರೇ, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಾ, ಲೇಖಕರು ಎತ್ತಿರುವ ಪ್ರಶ್ನೆಗಳು ಸಮಯೋಚಿತವಾಗಿವೆ ಎಂದು ನನ್ನ ಅನಿಸಿಕೆ. ಮುಸ್ಲಿಮ್ ಸಮುದಾಯದ ಅಂತಹ ಒಂದು ವರ್ಗದ ಅತಿರೇಕಗಳನ್ನು ಪ್ರಶ್ನಿಸಲೇಬೇಕು. ಆದರೆ ಅದೇ ಸಮಯದಲ್ಲಿ ಪ್ರಶ್ನಿಸಲು ಸಮುದಾಯದಲ್ಲಿ ಅದಕ್ಕೆ ಅನುಗುಣವಾದ ಸ್ಪೇಸ್ ಇಲ್ಲದಿರುವುದನ್ನೂ ನಾವು ಗಮನಿಸಬೇಕು. ಎರಡನೆಯದಾಗಿ, ಇಸ್ಲಾಮ್ ಧರ್ಮವೇ ಕಲಿಸಿಕೊಟ್ಟಂತೆ ಸ್ವಧರ್ಮೀಯರ ಅತಿರೇಕಗಳನ್ನು ಪ್ರಶ್ನಿಸದವರು ಕೋಮುವಾದಿಗಳಾಗುತ್ತಾರೆ. ಜಾತ್ಯತೀತ ಸಮಾಜದಲ್ಲಿ ನಮ್ಮ ನಿಲುವು ಹೇಗಿರಬೇಕೆಂದರೆ, ಹಿಂದೂ ಬಾಂಧವರೂ ಮುಸಲ್ಮಾನರಲ್ಲಿರುವ ಕುಂದುಕೊರತೆಗಳನ್ನು ಎತ್ತಿ ತೋರಿಸುವಂತಾಗಬೇಕು, ಮುಸಲ್ಮಾನರು ಹಿಂದೂ ಸಮುದಾಯವನ್ನು ತಿದ್ದುವಂತಾಗಬೇಕು, ಅವರಿಬ್ಬರ ಮಧ್ಯೆ ಆರೋಗ್ಯಕರ ಚರ್ಚೆಯಾಗಬೇಕು, ಒಳ್ಳೆಯದನ್ನು ಸ್ವೀಕರಿಸುವಂತಾಗಬೇಕು. ಆದರೆ ದುರದೃಷ್ಟವಶಾತ್ ಪರಿಸ್ಥಿತಿ ಆ ರೀತಿಯಲಿಲ್ಲ, ಅಂತರ್-ಸಮುದಾಯಿಕ ವಿಮರ್ಶೆ ನಡೆದರೆ ಕೋಮುಗಲಭೆಗಳು ನಡೆಯುವ ಸಂಭವಗಳೇ ಹೆಚ್ಚು. ಅಂತಹುದರಲ್ಲಿ ಮುಸ್ಲಿಮ್ ವ್ಯಕ್ತಿಯೇ ಸಮುದಾಯದ ಚಟುವಟಿಕೆಗಳನ್ನು ವಿಮರ್ಶಿಸಬಾರದೆಂದರೆ, ಬದಲಾವಣೆ ಹೇಗೆ ಸಾಧ್ಯ?

  ಇನ್ನು, ಬದಲಾವಣೆಗೆ ಸಂಬಂಧಿಸಿದಂತೆ ಇರ್ಷಾದರ approach ಬಗ್ಗೆ ನನಗೂ ಕೆಲವು reservation ಗಳಿವೆ. ಬದಲಾವಣೆಯ ಹೋರಾಟದಲ್ಲಿ ಎರಡು ರೀತಿಗಳಿವೆ. ಒಂದು education ಇನ್ನೊಂದು confrontation. ಈ confrontation ಅನ್ನು ಶೀಘ್ರವಾಗಿ ಮಾಡಬಹುದು ಆದರೆ ನಮ್ಮ ಸಮಾಜದಲ್ಲಿ ಹೆಚ್ಚಿನ ಫಲಿತಾಂಶವನ್ನು ನಿರೀಕ್ಷಿಸುವ ಹಾಗಿಲ್ಲ. ಸಾಮಾನ್ಯವಾಗಿ confrontation ಮಾಡಲು ಬಲ ಹಾಗೂ ಆವೇಶಗಳ ಅಗತ್ಯವಿರುತ್ತದೆ. ಈ ರೀತಿಯ counter-engagement ಇಬ್ಬರ (ಬದಲಾವಣೆ ಬಯಸುವವನ ಹಾಗೂ ಬದಲಾವಣೆಯಾಗಬೇಕಾದವನ) ಮಧ್ಯೆ ಸಂಬಂಧವನ್ನು ಇನ್ನಷ್ಟು ಕೆಡಿಸುತ್ತದೆ. ಫಲಿತಾಂಶ ಸೊನ್ನೆ, ಬದಲಾಗಿ ಇಬ್ಬರೂ ತಮ್ಮ ತಮ್ಮಲೇ ಇನ್ನಷ್ಟು ಬಲಿಷ್ಟವಾಗುತ್ತಾರೆ. ಇನ್ನು confrontation approach ವೈಯುಕ್ತಿಕ, ಆರ್ಥಿಕ ಅಥವಾ ರಾಜಕೀಯ ಹಿತಾಸಕ್ತಿಗಳು ಸೇರಿ ಬಿಟ್ಟರೆ ಕಥೆ ಮುಗಿದ ಹಾಗೆ. ಬದಲಾವಣೆ ಬಯಸುವವನಿಗೆ ಮುಂದಿನ ಸಮುದಾಯದಲ್ಲಿ ಕೇವಲ ಕೆಡುಕುಗಳು ಮಾತ್ರ ಎದ್ದು ಕಾಣುತ್ತದೆ, ಆತ ಬಹಳ selective ಆಗುತ್ತಾನೆ, end of the day ಬದಲಾವಣೆ ಬಯಸುವವನೇ ಇನ್ನೊಂದು ಪಾರ್ಟಿಯಾಗುತ್ತಾನೆಯೇ ಹೊರತು change-factorನಾಗಲು ಸಾಧ್ಯವಿಲ್ಲ ಎಂದು ನನ್ನ ಅನುಭವ.

  ಇನ್ನೊಂದು educatig approach. ಈ ಪ್ರಕ್ರಿಯೆಯಲ್ಲಿ ಮೂಲಭೂತವಾಗಿ ಇಬ್ಬರು ಪರಸ್ಪರ ಎಂಗೇಜ್ ಆಗಿರಬೇಕು, ಅದಕ್ಕಾಗಿ ಒಬ್ಬರಲ್ಲಿ ಪ್ರಾಮಾಣಿಕತೆ ಇನ್ನೊಬ್ಬರಲ್ಲಿ ಸ್ಪೇಸ್ ನೀಡುವ ಉದಾರತೆಯಿರಬೇಕು. Educatig ಬಹಳ ಸಮಯ ತೆಗೆದುಕೊಳ್ಳುತ್ತದೆ, ಆದರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಈ ಪ್ರಕ್ರಿಯೆಯಲ್ಲಿ ಬಲ ಹಾಗೂ ಆವೇಶಗಳಿಗಿಂತ ಹೆಚ್ಚಾಗಿ ವಿವೇಕ ಹಾಗೂ ಸಂಯಮದ ಅಗ್ತ್ಯವಿರುತ್ತದೆ. ಯಾರಲ್ಲಿ ಬದಲಾವಣೆ ಬಯಸುತ್ತೇವೆಯೋ ಆ ವ್ಯಕ್ತಿಯ/ಸಮುದಾಯದ ತನ್ನದೇ ಆದ ಸಮಸ್ಯೆಗಳು, ಆಂತರಿಕ ಡೈನಾಮಿಕ್ಸ್ ಗಳು, ಅವುಗಳ ಸಂಕೀರ್ಣತೆಗಳು, ಇತರ ಪ್ರಭಾವಶಾಲಿ factorಗಳು ಇರುತ್ತವೆ. ಅಂತಹ ಭಿನ್ನಾಭಿಪ್ರಾಯಗಳನ್ನು ಅರಿಯಬೇಕಾಗುತ್ತದೆ ಒಂದು ಮಟ್ಟಿಗೆ ಸಹಿಸಬೇಕಾಗುತ್ತದೆ, ಅದಕ್ಕಾಗಿ ಆರೋಗ್ಯಕರವಾಗಿ engage ಕೂಡಾ ಆಗಬೇಕಾಗುತ್ತದೆ. ಅವರಲ್ಲಿರುವ ಕೆಡುಕಿನ ಜತೆ ಅವರಲ್ಲಿರುವ ಒಳಿತನ್ನು ಗಮನಿಸಬೇಕಾಗುತ್ತದೆ, ಹಾಗೂ ಪ್ರೋತ್ಶಾಹಿಸಬೇಕಾಗುತ್ತದೆ, ಆವಾಗಲೇ ಪರಸ್ಪರ ವಿಶ್ವಾಸ ಹುಟ್ಟುತ್ತದೆ. ಆಗ ಬದಲಾವಣೆಯಾಗಬಹುದು ಎಂದು ನನ್ನ ವೈಯುಕ್ತಿಕ ನಿಲುವು. ದೂರ ನಿಂತು ವಿಮರ್ಶೆ ಮಾಡುವುದು ಬಹಳ ಸುಲಭ, ಆದರೆ ರಚನಾತ್ಮಕವಾಗಿ ಎಂಗೇಜ್ ಆಗುವುದು ಬಹಳ ಕಷ್ಟ.

  ಅದಿರಲಿ, ಇಲ್ಲಿ ನಾವು ಬಳಸುವ ಭಾಷೆಯೂ ಬಹಳ ಮುಖ್ಯಪಾತ್ರವನ್ನು ವಹಿಸುತ್ತದೆ. ಒಬ್ಬನ ಹಿಂದುಳಿಯುವಿಕೆಯನ್ನು ಎಡ್ರೆಸ್ ಮಾಡಲು ಸಬಲೀಕರಣದ ಭಾಷೆಯನ್ನು, ಶೋಷಣೆಯನ್ನು ಅರ್ಥಮಾಡಿಸಲು ನ್ಯಾಯ ಭಾಷೆಯನ್ನು, ಬಡತನವನ್ನು ದೂರಿಕರಿಸಲು ಅವರಿಗರ್ಥವಾಗುವ ಅರ್ಥಶಾಸ್ತ್ರದ ಭಾಷೆಯಲ್ಲೂ, ಕಾರ್ಮಿಕರಿಗೆ ಹಕ್ಕಿನ ಭಾಷೆಯಲ್ಲೂ ಮಾತನಾಡಬೇಕಾಗುತ್ತದೆ. ಅದೇ ರೀತಿ ಮುಸಲ್ಮಾನ ಸಮುದಾಯದೊಂದು ವೈಶಿಷ್ಟವಿದೆ, ಅವರಿಗೆ ಸಾಮಾನ್ಯವಾಗಿ ಅರ್ಥವಾಗುವುದು ಧರ್ಮದ ಭಾಷೆ, ಆದುದರಿಂದ ಅವರಲ್ಲಿರುವ ಅಧರ್ಮದ ಬಗ್ಗೆ ತಿಳುವಳಿಕೆಮೂಡಿಸಲು ಅದೇ ಭಾಷೆಯನ್ನು ಬಳಸಬೇಕಾಗಿರುವುದು ನಮ್ಮ ಮುಂದಿರುವ ಅನಿವಾರ್ಯತೆಯಾಗಿದೆ. ಅವರು ರಾಜಕೀಯ ಭಾಷೆ ಅಥವಾ ಇನ್ನಿತರ ಭಾಷೆಯನ್ನು ಕಲಿಯಬೇಕೆಂದು ಆಶಿಸುವುದು ತಪ್ಪಲ್ಲ, ಆದರೆ ಕೇವಲ ದೂರ ನಿಂತು ಅವರ ಭಾಷೆಯನ್ನು ಕೇವಲ ಟೀಕಿಸುತ್ತಾಲಿದ್ದರೆ ಅದು ಬದಲಾವಣೆಯ ಪ್ರಾಮಾಣಿಕ ಪ್ರಯತ್ನವಾಗಲಾರದೆಂದೂ ನನ್ನ ಅಭಿಪ್ರಾಯ.

  ಪ್ರಿಯ ಇರ್ಷಾದರೇ, ಸಲಾಮ್ ಬಾವಾರವರೇ, ಇಷ್ಟೊಂದು ಉಪದೇಶ (ದ ಪ್ರಥಮ ಎಡ್ರೆಸಿ ನಾನೇ ಆಗಿದ್ದು) ನಿಮಗೆ ಮಾಡುತ್ತಿದ್ದೇನೆಯೆಂದು ತಪ್ಪು ತಿಳಿಯಬೇಡಿ; ಜನರಲ್ ಆಗಿ ಹೇಳುತ್ತಿದ್ದೇನೆ. ನಿಮ್ಮನ್ನು ಓದುತ್ತಿರುತ್ತೇನೆ, ನಿಮ್ಮಿಂದ ಕಲಿಯುತ್ತಿರುತ್ತೇನೆ, ಗೌರವಿಸುತ್ತೇನೆ. ಆದರೆ ಸಾಮಾಜಿಕ ತಾಣಗಳಲ್ಲಿ, ಅಲ್ಲಿ ಇಲ್ಲಿ ಎಲ್ಲಾ ಕಡೆ ಹೆಚ್ಚಾಗಿ ತಲೆಕೆಟ್ಟುಹೋಗುವ ರೀತಿಯಲ್ಲಿ ನಡೆಯವುದನ್ನು ನೋಡಿ, ಹೇಳಿದಷ್ಟು-ಸಿಂಪಲ್-ಅಲ್ಲದ ಕೆಲ ವಿಷಯಗಳನ್ನು ಹಂಚಿಕೊಳ್ಳಬೇಕೆನಿಸಿತು. ಧನ್ಯವಾದಗಳು.

  ಇಶ್ತಿಯಾಕ್

  Reply
 5. Ananda Prasad

  ಟಿ. ಆರ್. ಪಿ. ಎಂಬುದು ಜಾಹೀರಾತಿನ ಮೂಲಕ ಆದಾಯ ಪಡೆಯುವ ಟಿವಿ ಮಾಧ್ಯಮ ಹಾಗೂ ಜಾಹೀರಾತಿನ ಮೂಲಕ ನಡೆಯುವ ಅಂತರ್ಜಾಲ ಪತ್ರಿಕೆಗಳಿಗೆ ಮಾತ್ರ ಅನ್ವಯಿಸುತ್ತದೆ. ವರ್ತಮಾನ ವೆಬ್ ಸೈಟ್ ಜಾಹೀರಾತಿನ ಆದಾಯದ ಮೂಲಕ ನಡೆಯುವುದಲ್ಲವಾದ ಕಾರಣ ಮತ್ತು ಇಲ್ಲಿ ಲೇಖಕರು ಯಾವುದೇ ಸಂಭಾವನೆ ಪಡೆಯದೇ ಸ್ವಯಂಸೇವಕರಂತೆ ಬರೆಯುವ ಕಾರಣ ಟಿ. ಆರ್. ಪಿ. ಗಾಗಿ ಸೆನ್ಸೇಷನಲ್ ವಿಷಯಗಳನ್ನು ಬರೆಯುತ್ತಾರೆ ಎಂದು ಹೇಳುವುದು ಉಚಿತವಲ್ಲ. ಲೇಖಕರು ಸಹಜವಾಗಿ ಧರ್ಮದ ಹೆಸರಿನಲ್ಲಿ ನಡೆಯುವ ಕಾನೂನು ಕೈಗೆತ್ತಿಕೊಳ್ಳುವ ಘಟನೆಗಳನ್ನು ಹಾಗೂ ಧಾರ್ಮಿಕ ಮೂಲದ ನೈತಿಕ ಪೋಲೀಸ್ಗಿರಿಯನ್ನು ವಿರೋಧಿಸಿ ಬರೆದಿದ್ದಾರೆ. ಇದನ್ನು ತಪ್ಪೆಂದು ಹೇಳಲಾಗದು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವುದು ಉಚಿತವಲ್ಲ. ನೈತಿಕ ಪೊಲೀಸರಿಗೆ ಹಾಗೂ ಧಾರ್ಮಿಕ ಮೂಲಭೂತವಾದಿಗಳಿಗೆ ಕೆಲವರು ಧರಿಸುವ ಬಟ್ಟೆಯ ಮೇಲೆ ಆಕ್ರೋಶ ಇದ್ದರೆ ಕಾನೂನುಬದ್ಧ ಹಾಗೂ ಸಂವಿಧಾನಬದ್ಧವಾಗಿ ಇಂಥ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸುವ ಕಾನೂನು ತರುವಂತೆ ಸರಕಾರಕ್ಕೆ ಒತ್ತಡ ತರಲಿ, ಅದೂ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ದಾರಿಯಲ್ಲಿ ಮಾಡಲಿ.

  Reply
 6. ashok kumar valaduir

  ಮೂಲಭೂತವಾದಿಗಳಿಂದ ಮಾನವೀಯತೆ , ವ್ಯಕ್ತಿ ಸ್ವಾತಂತ್ರ್ಯ ಹರಣವಾಗುತಿದೆ.

  Reply
 7. Salam Bava

  “ಸಲಾಂ ಬಾವ ಅವರಿಗೆ— ಏಟು ಹೊಡೆದವನು ಮತ್ತು ಹೊಡೆಸಿಕೊಂಡಾಕೆ ಇಬ್ಬರೂ ಮುಸ್ಲಿಂ ಆದ್ದರಿಂದ ತಮಗೆ ಕಸಿವಿಸಿ ಆಗಿದೆ. ಆ ಕಸಿವಿಸಿಯನ್ನು ಮರೆಮಾಚಲು ಲೇಖಕರ ಮೇಲೆ ಗೂಬೆ ಕೂರಿಸಿದ್ದೀರಿ . ಅವರಿಬ್ಬರಲ್ಲಿ ಯಾರಾದರು ಒಬ್ಬರು ಹಿಂದೂ ಆಗಿದ್ದರೆ ಟೀಕೆಯ ವರಸೆಯೇ ಬೇರೆ ರೀತಿ ಇರುತ್ತಿತ್ತು ಎಂಬುದು ‘ವರ್ತಮಾನ’ ದ ಓದುಗರಿಗೆ ತಿಳಿದಿರುವ ವಿಷಯ. “- M A Sriranga says:
  ಇದು ತಮ್ಮ ಸಂಕುಚಿತ ,ಎಲ್ಲವನ್ನೂ ಕೋಮು ಬಣ್ಣದಿಂದ ನೋಡುವ ಮನೋಸ್ಥಿತಿಯನ್ನು ಸೂಚಿಸುತ್ತದೆ. ಅದಕ್ಕೆ ಮದ್ದಿಲ್ಲ

  “ಟಿ. ಆರ್. ಪಿ. ಎಂಬುದು ಜಾಹೀರಾತಿನ ಮೂಲಕ ಆದಾಯ ಪಡೆಯುವ ಟಿವಿ ಮಾಧ್ಯಮ ಹಾಗೂ ಜಾಹೀರಾತಿನ ಮೂಲಕ ನಡೆಯುವ ಅಂತರ್ಜಾಲ ಪತ್ರಿಕೆಗಳಿಗೆ ಮಾತ್ರ ಅನ್ವಯಿಸುತ್ತದೆ. ವರ್ತಮಾನ ವೆಬ್ ಸೈಟ್ ಜಾಹೀರಾತಿನ ಆದಾಯದ ಮೂಲಕ ನಡೆಯುವುದಲ್ಲವಾದ ಕಾರಣ ಮತ್ತು ಇಲ್ಲಿ ಲೇಖಕರು ಯಾವುದೇ ಸಂಭಾವನೆ ಪಡೆಯದೇ ಸ್ವಯಂಸೇವಕರಂತೆ ಬರೆಯುವ ಕಾರಣ ಟಿ. ಆರ್. ಪಿ. ಗಾಗಿ ಸೆನ್ಸೇಷನಲ್ ವಿಷಯಗಳನ್ನು ಬರೆಯುತ್ತಾರೆ ಎಂದು ಹೇಳುವುದು ಉಚಿತವಲ್ಲ”- Ananda Prasad says

  ಟಿ .ಆರ್ .ಪಿ ಎಂದು ನಾನು ಕೇವಲ ಆಲಂಕಾರಿಕಾಗಿ ಪ್ರಯೋಗಿಸಿದ ಪದ ,ಅದು ಏನೆಂದು ನನಗೆ ಚೆನ್ನಾಗಿ ತಿಳೆದಿದೆ .ನಾನು ನ್ಯೆತಿಕ ಪೋಲಿಸಗಿರಿಯನ್ನು ಯಾವತ್ತಿಗೂ ಸಮರ್ಥಿಸಲಾರೆ,ಬೆಂಬಲಿಸಿಲ್ಲ . ನನ್ನ ತಾತ್ವಿಕ ವಿರೋದ ಒಂದು ವ್ಯಕ್ತಿಯ ಹುಚ್ಚು ಕ್ರತ್ಯವನ್ನು ಇಡೀ ಸಮುದಾಯದ ಮೇಲೆ ,ಅದಕ್ಕಿಂತಲೂ ಒಂದು ದಾರ್ಮಿಕ ನಂಬಿಕೆಯ ಮೇಲೆ ಹೇರಿ ,ಅವರೆಲ್ಲರೂ ಅವನ ಕ್ರತ್ಯಕ್ಕೆ ಹೊಣೆಗಾರರು ಎಂದು ರೂಪಿಸಲು ಪ್ರಯತ್ನಿಸುವ ಹೊಣೆಗೇಡಿತನದ ಬಗ್ಗೆ !

  “ಇಲ್ಲಿ ಲೇಖಕರು ಸ್ವಧರ್ಮಿಯರ ಮೇಲೆ ಗೂಬೆ ಕೂರಿಸಿರುವುದು ನನಗೆ ಕಂಡುಬಂದಿಲ್ಲ ಬದಲಾಗಿ ಧರ್ಮದ ಹೆಸರಲ್ಲಿ ಅನ್ಯಾಯ ಎಸಗಿ ಒಬ್ಬರ ಸ್ವಾತಂತ್ರವನ್ನು ಕಸಿದುಕೊಂಡು ಪೌರುಷ ಮೆರೆದು ಧರ್ಮಕ್ಕೆ ಕಳಂಕ ತರುವ ಧರ್ಮಾಂಧರ ವಿರುದ್ಧ ಧ್ವನಿ ಎತ್ತುವುದೇ ವೈಭವಿಕರಣ ಎಂದಾದರೆ ಇಂಥಹಾ ನೂರಾರು ಲೇಖಕಗಳು ಮೂಡಿಬರಲಿ”pramod says:

  ತಮ್ಮದು ತಪ್ಪು ತಿಳುವಳಿಕೆ -ಇಲ್ಲಿ ದರ್ಮದ ಹೆಸರಿನಲ್ಲಿ ಅನ್ಯಾಯ ಎಸಗಿದ್ದು ಅಂತ ಯಾಕೆ ಹೇಳುವುದು ? ಓರ್ವನ ವ್ಯೆಯುಕ್ತಿಕ ಕ್ರತ್ಯ ಎಂದು ಯಾಕೆ ತಾವು ಅದನ್ನು ಗಣಿಸುದಿಲ್ಲ .ಇನ್ನು ನಾಗಶೆಟ್ಟಿ ಶೆಟ್ಕರ್ ರವರು ಅತ್ಯಂತ ಪ್ರಗತಿಗಾಮಿ,ಲಿಬರಲ್ ದೋರಣೆಯ ನಿಷ್ಟುರ ವ್ಯಕ್ತಿ ,ಅವರಿಗೆ ಅರ್ಥವಾದದ್ದು -ತಮಗೆ ಅರ್ಥವಾಗಿಲ್ಲ ಎಂಬುದು ಸ್ವಷ್ಟ

  “ನಿಮ್ಮ ಇನ್ನೊಂದು educatig approach. :ಈ ಪ್ರಕ್ರಿಯೆಯಲ್ಲಿ ಮೂಲಭೂತವಾಗಿ ಇಬ್ಬರು ಪರಸ್ಪರ ಎಂಗೇಜ್ ಆಗಿರಬೇಕು, ಅದಕ್ಕಾಗಿ ಒಬ್ಬರಲ್ಲಿ ಪ್ರಾಮಾಣಿಕತೆ ಇನ್ನೊಬ್ಬರಲ್ಲಿ ಸ್ಪೇಸ್ ನೀಡುವ ಉದಾರತೆಯಿರಬೇಕು. Educatig ಬಹಳ ಸಮಯ ತೆಗೆದುಕೊಳ್ಳುತ್ತದೆ, ಆದರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಈ ಪ್ರಕ್ರಿಯೆಯಲ್ಲಿ ಬಲ ಹಾಗೂ ಆವೇಶಗಳಿಗಿಂತ ಹೆಚ್ಚಾಗಿ ವಿವೇಕ ಹಾಗೂ ಸಂಯಮದ ಅಗ್ತ್ಯವಿರುತ್ತದೆ. ದೂರ ನಿಂತು ವಿಮರ್ಶೆ ಮಾಡುವುದು ಬಹಳ ಸುಲಭ, ಆದರೆ ರಚನಾತ್ಮಕವಾಗಿ ಎಂಗೇಜ್ ಆಗುವುದು ಬಹಳ ಕಷ್ಟ”ಇಶ್ತಿಯಾಕ್ says:
  ಇವರ ಕಮೆಂಟ್ ಸಮಸ್ಯೆಯ ಆಳಕ್ಕೆ ಹೋಗಿ ,ಅದನ್ನು ಹೆಡ್ ಆನ್ ಪರಿಹರಿಸುವ ಬಗೆಯನ್ನು ಸೂಚಿಸುತ್ತದೆ . ನಾನು ಸಹಾ ಸರಳವಾಗಿ ಹೇಳುವುದು ಅದನ್ನೇ -ದೂರ ನಿಂತು ಕಲ್ಲೆಸೆದು ತಮಾಷೆ ನೋಡುವುದಕ್ಕಿಂತ ,ಸಮಸ್ಯೆಯ ಪರಿಹಾರಕ್ಕೆ ಸಮುದಾಯದ ಒಳಗೆ ನುಗ್ಗಿ ಎಂದು . ನಾನು ವಿಮರ್ಶೆಯನ್ನು ,ಆರೋಗ್ಯಕರವಾದ ಚರ್ಚೆಯನ್ನು ಯಾವಾಗಲೂ ಸ್ವಾಗತಿಸುವವ .

  Reply
  1. ನಾಗಶೆಟ್ಟಿ ಶೆಟ್ಕರ್

   “ಇಲ್ಲಿ ದರ್ಮದ ಹೆಸರಿನಲ್ಲಿ ಅನ್ಯಾಯ ಎಸಗಿದ್ದು ಅಂತ ಯಾಕೆ ಹೇಳುವುದು ? ಓರ್ವನ ವ್ಯೆಯುಕ್ತಿಕ ಕ್ರತ್ಯ ಎಂದು ಯಾಕೆ ತಾವು ಅದನ್ನು ಗಣಿಸುದಿಲ್ಲ.”

   Exactly! ಯಾವನೋ ಒಬ್ಬ ದುರುಳ ಅಥವಾ ಮಂದಮತಿ ಅಥವಾ ಬಾಡಿಗೆ ರೌಡಿಯು ಒಬ್ಬಳ ಮೇಲೆ ಹಲ್ಲೆ ಮಾಡಿದನೆಂದು ಅದಕ್ಕೆ ಧಾರ್ಮಿಕ ಸ್ವರೂಪ ನೀಡುವುದು ಏತಕ್ಕೆ? ಒಂದು ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿಟ್ಟು ನೈತಿಕ ಪಾಠ ಹೇಳುವುದು ಏತಕ್ಕೆ? ಆತನನ್ನು ಒಬ್ಬ ಕ್ರಿಮಿನಲ್ ಎಂದು ಪರಿಗಣಿಸಿ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳತಕ್ಕದ್ದು.

   Reply
 8. ನಾಗಶೆಟ್ಟಿ ಶೆಟ್ಕರ್

  “ಅವರಿಬ್ಬರಲ್ಲಿ ಯಾರಾದರು ಒಬ್ಬರು ಹಿಂದೂ ಆಗಿದ್ದರೆ ನಿಮ್ಮ ಟೀಕೆಯ ವರಸೆಯೇ ಬೇರೆ ರೀತಿ ಇರುತ್ತಿತ್ತು ”

  ಮೊನ್ನೆ ಬಸ್ ಒಂದರಲ್ಲಿ ಮೂವರು ಹೆಂಗಸರು ಚುಡಾಯಿಸಿದ ಸಹಪ್ರಯಾಣಿಕರನ್ನು ಥಳಿಸಿದರು. ಈ ಪ್ರಕರಣದಲ್ಲಿ ಎಲ್ಲರೂ ಹಿಂದೂ ಧರ್ಮದವರೇ. ಆದರೆ ನಾನಾಗಲಿ ಸಲಾಂ ಬಾವ ಅವರಾಗಲಿ ಈ ಪ್ರಕರಣಕ್ಕೆ ಧಾರ್ಮಿಕ ಸ್ವರೂಪ ಕೊಟ್ಟು ಹಿಂದೂಗಳಿಗೆ ನೈತಿಕ ಪಾಠ ಹೇಳಲು ಮುಂದಾಗಲಿಲ್ಲ!

  Reply
 9. ಅನಿತಾ

  ‘ಯಾವನೋ ಒಬ್ಬ ದುರುಳ ಅಥವಾ ಮಂದಮತಿ ಅಥವಾ ಬಾಡಿಗೆ ರೌಡಿಯು ಒಬ್ಬಳ ಮೇಲೆ ಹಲ್ಲೆ ಮಾಡಿದನೆಂದು ಅದಕ್ಕೆ ಧಾರ್ಮಿಕ ಸ್ವರೂಪ ನೀಡುವುದು ಏತಕ್ಕೆ?’ – ಹಾಗಾದರೆ ಹಿಂದೂಗಳಲ್ಲಿ ಕೆಲವರು ‘ದುರುಳ ಮಂದಮತಿಗಳು’ ಮಾಡಿದ ಪಬ್ ದಾಳಿಯನ್ನು ದೇಶದಾದ್ಯಂತ ‘ಪ್ರಗತಿಪರ’ ಚಾನಲ್ ಗಳು ಯಾಕೆ ವೈಭವೀಕರಿಸಿದರು? ಪ್ರಗತಿಪರರು ಯಾಕೆ ದೇಶವೇ ಅದುರುವಂತೆ ಕೂಗಾಡಿದರು? ಇದು ಮನು ಧರ್ಮೀಯರ ಮನಸ್ಥಿತಿ ಅಂದರು. ಹಿಂದೂ ಮತಾಂಧ ಸಂಘಟನೆಗಳನ್ನೂ ಹಳಿದರು. ಅದನ್ನು ಯಾರೋ ಹುಚ್ಚರ ಕೆಲಸ ಅಂತ ನಿರ್ಲಕ್ಷಿಸಬೇಕಿತ್ತಲ್ಲವೆ? ಯಾರೋ ಹುಚ್ಚರು ಅಸ್ರೃಶ್ಯತೆ ಆಚರಿಸಿದರೆ ಹಿಂದೂ ಧರ್ಮವೇ ಸರಿಯಲ್ಲ ಅಂದವರೂ ಅನ್ನುವವರೂ ಪ್ರಗತಿಪರರೇ. ತಸ್ಲೀಮಾ ಇದೇರೀತಿ ಮುಸ್ಲಿಂ ಮತಾಂಧರ ಬಗ್ಗೆ ಬರೆದಾಗಲೂ ಪಬ್ಲಿಸಿಟಿಗಾಗಿ ಬರೆಯುವವಳು ಎನ್ನಲಾಗಿತ್ತು. ನಾನು ಪಬ್ ದಾಳಿ, ಮೇಲಿನ ಲೇಖನದಲ್ಲಿ ಉಲ್ಲೇಖಿಸಿದ ದಾಳಿ ಎರಡನ್ನೂ ಖಂಡಿಸುವವಳೇ. ಆದರೆ ಅಷ್ಟೇ ತೀವ್ರವಾಗಿ ಸಲಾಂಬಾಬಾ ರಂಥವರ ಪ್ರಗತಿಪರರ ಇಬ್ಬಗೆಯ ನೀತಿಯನ್ನೂ ಖಂಡಿಸುತ್ತೇನೆ. ಯಾಕೆಂದರೆ ಮೇಲಿನ ಲೇಖನದಲ್ಲಿ ಹೇಳಿರುವುದು ಕೇವಲ ಒಬ್ಬ ಹುಚ್ಚನ ಕೆಲಸದಂತೆ ನನಗೆ ಕಾಣಿಸುತ್ತಿಲ್ಲ. ಅದರ ಹಿಂದೆ ಮುಸ್ಲಿಂ ಮತಾಂಧ ಸಿದ್ದಾಂತವಿದೆ. ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದದ್ದು ಮನುವಾದರೆ ಆ ನೀತಿ ಈಗ ವ್ಯಕ್ತವಾಗಿ ಕಾಣಿಸುತ್ತಿರುವುದು ಮುಸ್ಲಿಂ ಮತಾಂಧರಲ್ಲಾಗಿದೆ. ಅಂತಹ ಮತಾಂಧತೆಯ ವ್ಯಕ್ತರೂಪ ಆ ಹುಚ್ಚನಲ್ಲಿ ಕಾಣಿಸಿದೆ. ಇಂತಹ ಹುಚ್ಚಿಗೆ ಕಾರಣವಾಗುವ ಮತಾಂಧ ಮನೋಸ್ಥಿತಿಯನ್ನೂ ಅದಕ್ಕೆ ಕಾರಣವಾಗುವ ಮತೀಯ ಸಿದ್ದಾಂತವನ್ನೂ ಇರ್ಷಾದರೂ ಖಂಡಿಸಿದ್ದಾರೆ. ಮುಸ್ಲಿಂ ಮತಾಂದತೆಯನ್ನು ಧೈರ್ಯವಹಿಸಿ ಖಂಡಿಸುವ ಮುಸ್ಲಿಂ ಪ್ರಗತಿಪರ ಯುವಕರೇ ಇಲ್ಲವೆನ್ನುವಷ್ಟು ಕಡಿಮೆಯಾಗಿರುವಾಗ ದಿಟ್ಟತನ ತೋರಿದ ಇರ್ಷಾದರನ್ನೂ ಖಂಡಿಸಿ ನಿರುತ್ಸಾಹಗೊಳಿಸುವ ಮನೋಸ್ಥಿತಿಗೆ ಏನೆನ್ನೋಣ? ಇದು ಪ್ರಗತಿಪರ ಮನೋಭಾವವೆ?

  Reply
  1. ನಾಗಶೆಟ್ಟಿ ಶೆಟ್ಕರ್

   ಮಂಗಳೂರಿನ ಪಬ್ ದಾಳಿಗೂ ಗೋಹರ್ ಖಾನ್ ಹಲ್ಲೆಗೂ ಮಹತ್ತರವಾದ ವ್ಯತ್ಯಾಸಗಳಿವೆ. ಪಬ್ ದಾಳಿ ನಡೆಸಿದ್ದು ಮನುಸ್ಮೃತಿಯನ್ನು ಸಂವಿಧಾನವಾಗಿ ಒಪ್ಪಿಕೊಂಡಿರುವ ಒಂದು ಮತಾಂಧ ಸಂಘಟನೆ. ಆ ಸಂಘಟನೆಯ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ!

   Reply
   1. Ganesh

    But in Mumbai case no one knows who is behind the seen!!!. Thought for you to think and refresh. Prejudice is not good.

    Reply
 10. M A Sriranga

  ಸಲಾಂ ಬಾವ ಅವರಿಗೆ—- ಇರ್ಶಾದ್ ಅವರ ಲೇಖನದ ಮೊದಲ ಸಾಲು “ಮುಸ್ಲಿಂ ಮಹಿಳೆಯಾಗಿ ತುಂಡುಡುಗೆ ಧರಿಸಿದ್ದು ತಪ್ಪು”. ನಿಮ್ಮ ಮೊದಲ commentನ ಮೊದಲ ಸಾಲು “ಈ ಯುವ ಲೇಖಕರಿಗೆ ಸ್ವಧರ್ಮೀಯರ ಬಗ್ಗೆ ಗೂಬೆ ಕೂರಿಸಿ ……….”. ಇವನ್ನು ತಾವು ಮತ್ತೊಮ್ಮೆ ಗಮನಿಸಿ. ಮುಸ್ಲಿಮರಿಗೆ ಮುಸ್ಲಿಮರಿಂದಲೇ ಈ ರೀತಿಯ ಹಲ್ಲೆಗಳದಾಗ ಇಸ್ಲಾಂ ಧರ್ಮದಲ್ಲಿ ಈ ರೀತಿ ಮಾಡಬೇಕು ಎಂದು ಹೇಳಿಲ್ಲ ಎನ್ನುತ್ತೀರಿ. ಜತೆಗೆ ಅವನನ್ನು ಹುಚ್ಚ ಎಂದು ಮಾಫಿ ಮಾಡುತ್ತೀರಿ. ಇದು ತಮ್ಮ ಒಬ್ಬರ ಸಮಸ್ಯೆ ಅಲ್ಲ. ಇಂದು ಕನ್ನಡದಲ್ಲಿ ಬರೆಯುತ್ತಿರುವ,ತಾವು ಪ್ರಗತಿಪರರು ಎಂದು ಹೇಳಿಕೊಳ್ಳುವ ಮುಸ್ಲಿಂ ಮಹಿಳಾ ಸಾಹಿತಿಗಳದ್ದೂ ಇದೇ ರಾಗ. ಕನ್ನಡದ ಮುಸ್ಲಿಮೇತರ ಲೇಖಕ ಮತ್ತು ಲೇಖಕಿಯರು ತಮ್ಮ ತಮ್ಮ ಜನಾಂಗದ ನಂಬಿಕೆಗಳು, ಧರ್ಮ,ನಡೆ ನುಡಿಗಳನ್ನು ಯಾವುದೇ ಮುಲಾಜಿಲ್ಲದೆ ಟೀಕಿಸುತ್ತಿದ್ದಾರೆ. ಬುರ್ಖಾ ವಿಷಯದಲ್ಲಿ ವರ್ತಮಾನ ಇತರ ಬ್ಲಾಗ್ ಗಳಲ್ಲಿ ನಡೆದ ಚರ್ಚೆಯನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಆಗ ಯಾರದ್ದು ಸಂಕುಚಿತ ಮತ್ತು ಕೋಮು ಭಾವನೆ ಎಂದು ತಮಗೆ ತಿಳಿಯುತ್ತದೆ.

  Reply
  1. ನಾಗಶೆಟ್ಟಿ ಶೆಟ್ಕರ್

   “ಅವನನ್ನು ಹುಚ್ಚ ಎಂದು ಮಾಫಿ ಮಾಡುತ್ತೀರಿ.”

   ಸಲಾಂ ಬಾವ ಅವರು ಗೋಹರ್ ಹಲ್ಲೆಕೋರನನ್ನು ಮಾಫಿ ಮಾಡಿಲ್ಲ, ಮಾಫಿ ಮಾಡಿ ಅಂತ ಕೂಡ ಹೇಳಿಲ್ಲ! ಏಕೆ ಹೀಗೆ ನಿಮ್ಮ ತಪ್ಪು ಕಲ್ಪನೆಗಳನ್ನು ಸಲಾಂ ಬಾವ ಅವರ ಮೇಲೆ ಆರೋಪಿಸುತ್ತಿದ್ದೀರಿ? ಇದು ದುರುಳತನವಲ್ಲವೇ? ಗೋಹರ್ ಹಲ್ಲೆಕೋರನಿಗೆ ಕ್ರಿಮಿನಲ್ ಕಾನೂನು ಅನ್ವಯ ಶಿಕ್ಷೆ ಸಿಗತಕ್ಕದ್ದು. ಆದರೆ ಆತನ ನೆಪ ಮಾಡಿಕೊಂಡು ಮುಸಲ್ಮಾನರನ್ನು ನಿಮ್ಮ ನೈತಿಕ ಬೋಧನೆಗೆ ಟಾರ್ಗೆಟ್ ಮಾಡುವುದು ಏಕೆ?

   Reply
 11. M A Sriranga

  ನಾಗಶೆಟ್ಟಿ ಶೆಟ್ಕರ್ ಅವರಿಗೆ—– ತಮ್ಮ ಸರ್ವ ಧರ್ಮ ಸಮನ್ವಯದ ಪ್ರತಿಕ್ರಿಯೆಗಳನ್ನು ನಾನು ಸುಮಾರು ಒಂದೂವರೆ ವರ್ಷದಿಂದ ಸಾಕಷ್ಟು ಓದಿದ್ದೇನೆ!!. ಹೀಗಾಗಿ ಅದರ ಬಗ್ಗೆ ಮತ್ತೊಮ್ಮೆ ಹೇಳುವಂತಹುದೇನೂ ಇಲ್ಲ.

  Reply
 12. ಇರ್ಷಾದ್ ಉಪ್ಪಿನಂಗಡಿ.

  ಆತ್ಮಿಯರೇ ,,, ನಾನು ಇಲ್ಲಿ ಇಸ್ಲಾಮ್ ಧರ್ಮವನ್ನು ಎಲ್ಲೂ ಟೀಕಿಸಿಲ್ಲ. ಇಸ್ಲಾಮ್ ಧರ್ಮವನ್ನು ಒಪ್ಪಿಕೊಂಡು ಬದುಕುತ್ತಿರುವ ಕೋಟ್ಯಾಂತರ ಮುಸ್ಲಿಮರಿಂದ -ಅಥವಾ ಹಿಂದೂ ಧರ್ಮವನ್ನು ಒಪ್ಪಿಕೊಂಡು ಬದುಕುತ್ತಿರುವ ಕೋಟ್ಯಾಂತರ ಹಿಂದೂಗಳಿಂದ ಯಾರಿಗೂ ಏನೂ ಸಮಸ್ಯೆ ಇಲ್ಲ. ಇವರೆಲ್ಲರೂ ತಮ್ಮ ಧರ್ಮವನ್ನು ಪಾಲಿಸಿಕೊಂಡು ಪರ ಧರ್ಮವನ್ನು ಗೌರವಿಸುತ್ತಾ ಬದುಕುತ್ತಿದ್ದಾರೆ. ಇಲ್ಲಿ ಸಮಸ್ಯೆ ಇರುವುದು ಧರ್ಮದ ಹೆಸರಲ್ಲಿ ,ಹಿಂದುತ್ವದ ಹೆಸರಲ್ಲಿ, ಇಸ್ಲಾಮ್ ಶುದ್ದೀಕರರಣ ಹೆಸರಲ್ಲಿ ಮತಾಂಧತೆಯನ್ನು ಮೆರೆಯುವ ಅದನ್ನು ಭೋಧಿಸುವ , ಅದಕ್ಕಾಗಿ ಪ್ರಾಣ ತೆಗೆಯುವ ಹಾಗೂ ಕಳೆದುಕೊಳ್ಳಲೂ ತಯಾರಾಗಿರುವ ಧರ್ಮಾಂಧರಿಂದ ನಮ್ಮ ಸಮಾಜಕ್ಕೆ ಕಂಟಕವಾಗಿರುವುದು. ಇಲ್ಲಿ ಒಂದು ಧರ್ಮದ ಮೂಲಭೂತವಾದ ಮತ್ತೊಂದು ಧರ್ಮಕ್ಕೆ ಎಷ್ಟು ಅಪಾಯಕಾರಿಯೋ ಸ್ವಧರ್ಮಕ್ಕೂ ಅಷ್ಟೇ ಅಪಾಯಕಾರಿ. ಇಲ್ಲಿ ಮೂಲಭೂತವಾದಿಗಳಿಗೆ ಟಾರ್ಗೆಟ್ ಆಗುವವರು ಮಹಿಳೆಯರು ಹಾಗೂ ಧರ್ಮದ ಧರ್ಮಾಂಧತೆಗೆ ಒಳಗಾಗದೆ ಮಾನವೀಯತೆಗೆ , ವ್ಯಕ್ತಿ ಸ್ವಾತಂತ್ರಕ್ಕೆ , ಪ್ರಜಾಪ್ರಭುತ್ವ ಮೌಲ್ಯಗಳಿಗೆ ಒತ್ತು ಕೊಡುವವರು. ಪ್ರತಿಕೃಯೆ ನೀಡಿದ ಕೆಲವರ ಅಭಿಪ್ರಾಯದಂತ್ತೆ ಯಾರೋ ಒಬ್ಬ ಪುಂಡನ ಕೃತ್ಯಕ್ಕೆ ಸಮುದಾಯವನ್ನು ಏಕೆ ಬಲಿ ಕೊಡುತ್ತೀರಾ ಎಂದು? ಒಂದು ವೇಳೆ ನಾನು ಆ ಪುಂಡನ ಕೃತ್ಯಕ್ಕೆ ಇಸ್ಲಾಂ ಧರ್ಮವೇ ಹೊಣೆ ಎಂದು ಬಿಂಬಿಸಿದರೆ ಅದು ನನ್ನ ತಪ್ಪಾಭಿಪ್ರಾಯ. ನಾನು ಇಲ್ಲಿ ಇಸ್ಲಾಂ ಧರ್ಮವನ್ನೂ ಹಿಂದೂ ಧರ್ಮವನ್ನೋ ಖಂಡಿಸಲು ಹೋಗಿಲ್ಲ ಬದಲಾಗಿ ಇಂಥಹಾ ಮತಾಂಧತೆ ಮೆರೆಯುವವರು ಜನಸಾಮಾನ್ಯರು ಪಾಲಿಸುತ್ತಿರಯುವ ಇಸ್ಲಾಮ್ ಧರ್ಮವನ್ನೋ-ಹಿಂದೂ ಧರ್ಮವನ್ನೋ ಒಪ್ಪುವವರಲ್ಲ ಬದಲಾಗಿ ಇವರೆಲ್ಲಾ ಧರ್ಮವನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಅದುವೇ ಧರ್ಮವೆಂದು ವಾದಿಸುವವರು, ತಮ್ಮ ಸಿದ್ದಾಂತವನ್ನು ಜಾರಿಗೆ ತರಲು ಹೊರಟವರು. ಇವರ ಕೃತ್ಯವನ್ನು ಖಂಡಿಸದೆ ಮತ್ಯಾರ ಕೃತ್ಯವನ್ನು ಖಂಡಿಸುವುದು. ಇಂಥಹಾ ಮತಾಂಧರನ್ನು ಹುಚ್ಚ ಎಂದು ಮಾಫೀ ಮಾಡಲು ಸಾಧ್ಯವಿಲ್ಲ. ಇವರ ಈ ಕೃತ್ಯಗಳ ಹಿಂದಿನ ಪ್ರೇರಣೆ ಮೂಲಭೂತವಾದ, ಕೋಮುವಾದ ಇದು ಅಪಾಯಕಾರಿ. ಹೌದು ನನ್ನ ಪ್ರಕಾರ ಇಲ್ಲಿ ಬಡತನ-ನಿರುದ್ಯೋಗ ಖಂಡಿತಾ ಸಮಸ್ಯೆನೇ ಆದರೆ ಅವೆಲ್ಲದಕ್ಕಿಂತಲೂ ಅಪಾಯಕಾರಿ ಅಂದರೆ ಜನರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುವ ಮೂಲಭೂತವಾದ -ಕೋಮುವಾದ . ನಾನೂ ಒಂದು ಎಲೆಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ಕೆಲಸ ಮಾಡುವವ. ಟಿ.ಆರ್.ಪಿ ಗಳಿಗಾಗಿ ನಾನು ಕೆಲಸ ಮಾಡಿರುವ ಮಾಧ್ಯಮ ಸಂಸ್ಥೆ ಇಂಥಹಾ ವಿಚಾರಗಳ ಕುರಿತಾಗಿ ವರದಿ ಮಾಡಿದ್ದಲ್ಲಿ ಅದನ್ನು ಪ್ರಕಟ ಮಾಡುತ್ತಲೇ ಇರಲಿಲ್ಲ. ಇಂಥಹಾ ವಿಚಾರಗಳು ಟಿ.ಆರ್.ಪಿ ಸಿಗುವುದಿಲ್ಲ ಬದಲಾಗಿ ಜೋತಿಷ್ಯ, ಗಂಡ ಹೆಂಡತಿ ಕುರಿತಾದ ಸುದ್ದಿಗಳಿಗೆ ಹೆಚ್ಚಿನ ಟಿ.ಆರ್.ಪಿ. ಧನ್ಯವಾದಗಳು.
  ಇರ್ಷಾದ್ ಉಪ್ಪಿನಂಗಡಿ.

  Reply
  1. ನಾಗಶೆಟ್ಟಿ ಶೆಟ್ಕರ್

   ಇರ್ಶಾದ್ ಅವರೇ, ನಿಮ್ಮ ಸಮಜಾಯಿಷಿ ನನಗೆ ಸಮಾಧಾನ ನೀಡಲಿಲ್ಲ. ಯಾವನೋ ಒಬ್ಬ ಇಸ್ಲಾಂ ಹೆಸರಿನಲ್ಲಿ ಒಬ್ಬಳ ಮೇಲೆ ಹಲ್ಲೆ ಮಾಡಿದನೆಂದು ಮತಾಂಧತೆಯ ಬಗ್ಗೆ ನೀವು ಲೆಕ್ಚರ್ ಕೊಟ್ಟಿದ್ದು ಏಕೆ? ಹಲ್ಲೆಕೋರನನ್ನು ಬಂಧಿಸಿ ಅವನ ಕೃತ್ಯದ ಬಗ್ಗೆ ಸಾಕ್ಷ್ಯ ಸಂಗ್ರಹಿಸಿ ಅವನಿಗೆ ಕಾನೂನು ರೀತ್ಯಾ ಶಿಕ್ಷೆ ಆಗುವಂತೆ ಮಾಡುವುದು ನಾಗರಿಕ ಸಮಾಜದ ಕರ್ತವ್ಯ. ಇಸ್ಲಾಂ ಮತದ ರಾಜಕೀಯ ಮುಖಂಡರೂ ಧಾರ್ಮಿಕ ಮುಖಂಡರೂ ಹಲ್ಲೆಕೋರನನ್ನು ಸಮರ್ಥಿಸಿ ಮಾತಾಡಿಲ್ಲ, ಅವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಅಡ್ಡಿ ಮಾಡಿಲ್ಲ. ಹಲ್ಲೆಕೋರ ಸತ್ಯ ಹೇಳಿದ್ದಾನೆ ಎಂದು ನಂಬುವುದು ಹೇಗೆ? ಗೋಹರ್ ಖಾನ್ ಬಗ್ಗೆ ವೈಯಕ್ತಿಕ ಅಥವಾ ಪ್ರೊಫೆಶನಲ್ ದ್ವೇಷವಿರುವ ಕೆಲವರು ಅವನಿಗೆ ದುಡ್ಡು ಕೊಟ್ಟು ಹೊಡೆಸಿರಬಹುದು. ಇಸ್ಲಾಂ ಬಗ್ಗೆ ಅಸಹನೆ ಇರುವ ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕೆ ಗೂಂಡ ಒಬ್ಬನಿಗೆ ದುಡ್ಡು ಕೊಟ್ಟು ಇಸ್ಲಾಂ ಅನ್ನು ನೆಪವಾಗಿಸಲು ಹೇಳಿಕೊಟ್ಟಿರಬಹುದು. ಪ್ರಕರಣದ ಬಗ್ಗೆ ಪೂರ್ಣ ಸ್ಪಷ್ಟತೆ ಇಲ್ಲದಿರುವುದರಿಂದ ಇದು ಮುಸ್ಲಿಂ ಮತಾಂಧತೆಯ ಕಾರಣದಿಂದ ಜರುಗಿದ ಘಟನೆ ಅಂತ ನೀವೇಕೆ ಲೇಬಲ್ ಕೊಡುವುದು?

   Reply
    1. ನಾಗಶೆಟ್ಟಿ ಶೆಟ್ಕರ್

     ಸಂವಾದ ಮಾಡುವ ಬಯಕೆ ಇದ್ದರೆ ಕನ್ನಡದಲ್ಲೇ ಚರ್ಚೆ ಮಾಡಿ. ನಿಮ್ಮ ಆಂಗ್ಲ ದುರಭಿಮಾನ ನೋಡಿ ಜಿಗುಪ್ಸೆ ಹುಟ್ಟಿದೆ.

     Reply
     1. Ganesh

      Surprisingly I have seen you using English words in your comments! Language not be a barrier for discussion if you are with true spirit of discussion. Once I get Kannada software I shall definitely reply in Kannada.

 13. ಮಹೇಶ

  ನಾಗಶೆಟ್ಟಿ ಶೆಟ್ಕರ್ ರವರೇ,
  ನಾಳೆಯಿಂದ ಇಸ್ಲಾಂ ಧರ್ಮದ ಹೆಣ್ಣುಮಕ್ಕೆಳೆಲ್ಲಾ ತಮಗಿಷ್ಟ ಬಂದಂತೆ ಬಟ್ಟೆ ಹಾಕಿಕೊಂಡು ಓಡಾಡಬಹುದೇ ? ಶಾಲಾ ಕಾಲೇಜುಗಳಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದೇ ? ಫೇಸಬುಕ್ ಪ್ರೊಫೈಲ್ ನಲ್ಲಿ ತಮ್ಮ ಫೋಟೋಗಳನ್ನು ಆರಾಮವಾಗಿ ಹಾಕಿಕೊಳ್ಳಬಹುದೇ ? ಒಮ್ಮೆ ಯಾರಾದರೂ ಆ ಹೆಣ್ಣುಮಕ್ಕಳನ್ನು ಇಸ್ಲಾಂ ಧರ್ಮದ ಹೆಸರಿನಲ್ಲಿ ವಿರೋಧಿಸಿದರೆ ಅವರೆಲ್ಲಾ ಯಾರು ? ಇಸ್ಲಾಂನ ಹೆಸರನ್ನು ಹಾಳುಮಾಡಲು ಬಂದ ಬಾಡಿಗೆ ಗೂಂಡಾಗಳು ಎಂದು ನೂರಕ್ಕೆ ನೂರರಷ್ಟು ಖಚಿತವಾಗಿ ಹೇಳಬಹುದಲ್ಲ.

  Reply
  1. ನಾಗಶೆಟ್ಟಿ ಶೆಟ್ಕರ್

   ತಾರ್ಕಿಕ ಸ್ಪಷ್ಟತೆ ಇಲ್ಲದೆ ವಾದಕ್ಕೋಸ್ಕರ ವಾದ ಮಾಡುವುದು ನಿಮಗೆ ಶೋಭೆಯಲ್ಲ.

   ಮುಸ್ಲಿಮ್ ಹೆಣ್ಣು ಮಕ್ಕಳು ಏನು ಮಾಡಬೇಕು ಅಂತ ಅವರೂ ಅವರ ಕುಟುಂಬದವರೂ ಹಿತೈಷಿಗಳೂ ನಿರ್ಧಾರ ಮಾಡುತ್ತಾರೆ. ನಿಮಗೆ ನಮಗೆ ಅವರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕುವ ಹಕ್ಕಿಲ್ಲ.

   ಇಸ್ಲಾಂ ಹೆಸರನ್ನು ಹಾಳು ಮಾಡುವ ಕೆಲಸ ವ್ಯವಸ್ಥಿತವಾಗಿ ಸಾಗಿದೆ ಎಂಬುದು ದಿಟ.

   Reply
 14. Salam Bava

  ನಾಗಶೆಟ್ ರವರು ಸಮುದಾಯದ ತಲ್ಲಣಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಹೇಶ್ ರು ಒಬ್ಬ ಹೆಣ್ಣಿಗೆ ಕಪಾಳ ಮೋಕ್ಸ ಮಾಡಿದರೆ ಅದು ಒಬ್ಬ ಹಿಂದೂ ಮತಾಂದನ ಕ್ರಿಯೆ ಎಂದು ಬಿಂಬಿಸಲ್ಪಡುದಿಲ್ಲ .ಓರ್ವನ ತಕ್ಷಣದ ಪ್ರತಿಕಿಯೆ ಎಂದು ಶಬ್ದಗಳ ಚೆಲ್ಲಾಟ ಸುರುವಾಗುತ್ತದೆ !ಅದೇ ಪ್ರವಿಲೆಜೆ ಮಲಿಕ್ ನಿಗೆ ಯಾಕಿಲ್ಲ . ಲೇಖನ ಸುರುವಾಗುವುದೇ ‘ಮುಸ್ಲಿಂ ಪ್ರೇಕ್ಸಕ ‘ಎಂದು ,ಅವನು ಕೇವಲ ‘ಪ್ರೇಕ್ಷಕ ‘ಯಾಕಾಗುದಿಲ್ಲ ? ೬೦% ಮುಸ್ಲಿಮರು ನಿರುದ್ಯೋಗ ,ಬಡತನ ,ಶಿಕ್ಹಣದಲ್ಲಿ ಹಿಂದುಳುಯುವಿಕೆ ,ತಲೆಗೊಂದು ಸೂರು ,ವ್ಯೆದ್ಯಕೀಯ ಸೌಲಭ್ಯದ ಕೊರತೆ,ವರದಕ್ಷಿಣೆ ಮತ್ತು ರಾಷ್ಟ್ರೀಯ ಮುಖ್ಯಧಾರೆಯಿಂದ ವಿಮುಖತೆ ಇದೆಲ್ಲಾ ನನನ್ನಂಥವನಿಗೆ ಸಮುದಾಯದ ಸುಟ್ಟು ತಿನ್ನುವ ಸಮಸ್ಯೆಗಳು .ಜಗತ್ತಿನ ಎಲ್ಲಾ ಉಗ್ರವಾದಗಳಿಗೂ ಈ ಒಂದು ಏಟೇ ಕಾರಣ ಮತ್ತು ಬೇರೆಲ್ಲಾ ಸಮಸ್ಯಗಳು ಗೌಣ ಎಂಭಂಥ ಸಜಾಯಿಕೆಯನ್ನು ಲೇಖಕರು ಕೂಟ್ಟು ಒಂದು ತರಹದ ಉಡಾಪೆತನ ಮೆರೆದ್ದಿದ್ದಾರೆ ಮುಸ್ಲಿಂ ಹೆಣ್ಣು ಮಕ್ಕಳು ತಮಗೆ ಇಷ್ಟ ಬಂದಂಥ ವಸ್ತ್ರ ಧರಿಸುತ್ತಾರೆ ,ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಳುತ್ತಾರೆ -ಆದರೆ ಅದನ್ನು ನೋಡುವ ಕಣ್ಣು ಮತ್ತು ಹ್ರದಯ ಬೇಕು . ಎರಡನ್ನೂ ಮುಚ್ಚಿ ಯಾವಗಲೋ ಫಿಕ್ಸ್ ಮಾಡಿಟ್ಟದ್ದನ್ನೇ ಚರ್ವಿತ ಚರ್ವಣ ಮಾಡಿ ದರೆ ?
  ಪಭ್ ದಾಳಿ ಒಂದು ವ್ಯವಸ್ಥಿತವಾಗಿ ,ಪ್ರಿಪ್ಲನ್ನೆಡ್ ಮತ್ತು ಒಂದು ಬಲ್ಯಾಡ ಸಂಘಟನೆ ನಡೆಸಿದ ಧಾಳಿ ,ಅದೇ ತರಹದ್ದು ಈಗಲೂ ಅವರಿಂದ ವ್ಯಾಪಕವಾಗಿ ನಡೆಯುತ್ತಾ ಇದೆ . ಅದನ್ನು ಈ ಒಂದು ಹುಚ್ಚು ಕ್ರತ್ಯಕ್ಕೆ ಸಮೀಕರಿಸುದು ಸಲ್ಲ . ಇನ್ನು ಇದರಲ್ಲಿ ಯಾರನ್ನೂ ವ್ಯೇಯುಕ್ಥಿಕವಾಗಿ ದೂಶಿಸುವುದು ಸಲ್ಲ .ಚರ್ಚೆ ಆರೊಗ್ಯಪೋರ್ನವಾಗಿದ್ದ್ರ್ರೆ ನನ್ನ ಅರಿವಿನ ವಿಸ್ತಾರ ಕೂಡಾ ಹೆಚ್ಚಾಗಬಹುದೆಂದು ನನ್ನ ಅನಿಸಿಕೆ !

  Reply
 15. ಮಹೇಶ

  ಹಾಗಾದರೆ ನಾಗಶೆಟ್ಟಿ ಶೆಟ್ಕರ್ ರವರೇ, ಈ ಕೆಳಗಿನ ವಿಷಯಗಳಿಗೆ ನೇರವಾದ ಉತ್ತರ ಕೊಡಿ.
  1. ಇಸ್ಲಾಂ ಧರ್ಮದ ಮಹಿಳೆಯವರು ಪಬ್ಲಿಕ್ ಪ್ಲೇಸ್ ಗಳಲ್ಲಿ ತುಂಡುಡುಗೆ ಉಡುವುದು ಇಸ್ಲಾಂ ಧರ್ಮದ ಪ್ರಕಾರ ಸರಿಯೇ ಅಥವಾ ತಪ್ಪೇ?
  2. ಇಸ್ಲಾಂ ಧರ್ಮದ ಹೆಣ್ಣುಮಕ್ಕಳು ತಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿ ತಮ್ಮ ಫೋಟೋಗಳನ್ನು ಹಾಕಿಕೊಳ್ಳುವುದು ಇಸ್ಲಾಂ ಧರ್ಮದ ಪ್ರಕಾರ ಸರಿಯೇ ಅಥವಾ ತಪ್ಪೇ?
  3. ಇಸ್ಲಾಂ ಧರ್ಮದ ಹೆಣ್ಣುಮಕ್ಕಳು ಶಾಲಾ ಕಾಲೇಜಿನ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇಸ್ಲಾಂ ಧರ್ಮದ ಪ್ರಕಾರ ಸರಿಯೇ ಅಥವಾ ತಪ್ಪೇ?

  ಇಸ್ಲಾಂ ಬಗ್ಗೆ ತಿಳಿದಿರುವ ಯಾರೇ ಆಗಲಿ ಈ ಸಂದೇಹಗಳನ್ನು ಪರಿಹರಿಸಬೇಕಾಗಿ ವಿನಂತಿ.

  Reply
  1. ನಾಗಶೆಟ್ಟಿ ಶೆಟ್ಕರ್

   ಇಸ್ಲಾಂ ಧರ್ಮದ ಹೆಸರಿನಲ್ಲಿ ಕೆಲವರು ಪುಂಡರು ವಿರೋಧಿಸಿದರು ಎಂಬ ಕಾರಣಕ್ಕೆ ಇಸ್ಲಾಂ ಧರ್ಮಕ್ಕೂ ಆ ಪುಂಡರ ದುಷ್ಕೃತ್ಯಗಳಿಗೂ ಕಾರ್ಯ ಕಾರಣ ಸಂಬಂಧ ಕಟ್ಟುವ ನಂಜಿನ ಬುದ್ಧಿಯನ್ನು ದಯವಿಟ್ಟು ತ್ಯಜಿಸಿ.

   Reply
 16. Ananda Prasad

  ಪೊಲೀಸ್‌ಗಿರಿಯ ಒಂದು ಮಾದರಿ ಫೇಸ್‌ಬುಕ್ಕಿನಲ್ಲಿ ಕಂಡುಬಂದಿದೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ಈ ಫೇಸ್‌ಬುಕ್ ಪುಟವನ್ನ್ನು ಮತ್ತು ಅವರ ಬೆದರಿಕೆಯನ್ನು ಕೆಲವು ಪುಂಡರ ಕೃತ್ಯ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕನ್ನಡ ಡಾಟ್ ವನ್ಇಂಡಿಯಾ ಡಾಟ್ ಕಾಂ ವೆಬ್‌ಸೈಟ್ ನೋಡಿ. ಈ ರೀತಿಯ ಬೆದರಿಕೆ ಹಾಕುವುದು ಸ್ಪಷ್ಟವಾಗಿ ಸಂವಿಧಾನಬಾಹಿರ ಹಾಗೂ ಕಾನೂನುಬಾಹಿರ. ಇವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

  Reply
  1. ನಾಗಶೆಟ್ಟಿ ಶೆಟ್ಕರ್

   ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬುದು ಕೆಲವು ಪುಂಡರ ಕೃತ್ಯ ಅಲ್ಲ ಎಂಬುದಕ್ಕೆ ನಿಮ್ಮ ಬಳಿ ಏನು ಸಾಕ್ಷ್ಯಾಧಾರಗಳಿವೆ?

   Reply
   1. ನಾಗಶೆಟ್ಟಿ ಶೆಟ್ಕರ್

    ಕ್ಷಮಿಸಿ, ನಾನು ಕೇಳಬಯಸಿದ್ದು ಮೇಲಿನ ಪ್ರಶ್ನೆಯನ್ನಲ್ಲ, ಈ ಕೆಳಗಿನ ಪ್ರಶ್ನೆಯನ್ನು: ಗೋಹರ್ ಖಾನ್ ಹಲ್ಲೆಯು ಒಬ್ಬ ಪುಂಡನ ಕೃತ್ಯ ಅಲ್ಲ, ಅದು ಮುಸ್ಲಿಂ ಡಿಫೆನ್ಸ್ ಫೋರ್ಸಿನ ಕಾರ್ಯಾಚರಣೆ ಎಂಬುದಕ್ಕೆ
    ನಿಮ್ಮ ಬಳಿ ಏನು ಸಾಕ್ಷ್ಯಾಧಾರಗಳಿವೆ?

    Reply
    1. Ananda Prasad

     ನಾನು ಹೇಳಿದ್ದು ಗೌಹರ್ ಖಾನ್ ಪ್ರಕರಣದ ಬಗ್ಗೆ ಅಲ್ಲ. ಮಂಗಳೂರಿನಲ್ಲಿ ಕೆಲವರು ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ಫೇಸ್ಬುಕ್ಕಿನಲ್ಲಿ ಪುಟ ತೆರೆದು ಬೆದರಿಕೆ ಸಂದೇಶ ಬಿತ್ತುತ್ತಿರುವ ಬಗ್ಗೆ. ಈ ಬಗ್ಗೆ ಸ್ಪಷ್ಟ ಮಾಹಿತಿಗಾಗಿ ಈ ಕೊಂಡಿಯನ್ನು ನೋಡಿ. http://kannada.oneindia.com/news/mangalore/mangaluru-moral-policing-by-facebook-group-089757.html

     Reply
 17. ak kukkaje

  ವರ್ತಮಾನ ದಲ್ಲಿ ಬರುವ ನಿಸ್ಪಕ್ಷಪಾತಿ ಬರಹಗಾರರ ಕೆಲವು ವೈಚಾರಿಕತೆಯಿಂದ ಕೂಡಿದ ಅನಿಸಿಕೆಗಳನ್ನು ನೋಡಿದಾಗ ಸಮಯದ ನಿಭಿಡತೆಯ ನಡುವಿನಿಂದಲೂ ನಮ್ಮ ವಿಚಾರಗಳನ್ನು ಮಂಡಿಸದಿರಲು ಸಾಧ್ಯವಾಗುವುದಿಲ್ಲ ಆದರೂ ವರ್ತಮಾನದಲ್ಲಿನ ಲೇಖಕರ ಬಗ್ಗೆ ಬರೆಯುವ ತೀವ್ರ ವಿಮರ್ಶೆಗಳು ಪ್ರಕಟನಾರ್ಹವಾಗುವುದಿಲ್ಲ ಎಂಬ ಅನುಭವವೇದ್ಯದ ಜತೆಯಲ್ಲೇ ಮತ್ತೆ ಕೆಲವಾರು ವಿಚಾರಗಳನ್ನು ವಾಚಕ ಸಮೂಹದಲ್ಲಿ ಹಂಚಲಿಚ್ಚಿಸುವೆನು. ಅದೆಂದರೆ ವರ್ತಮಾನವೂ ಚಿಂತನಾರ್ಹ ಲೇಖನಗಳನ್ನು ನೀಡುವ ಜತೆಯಲ್ಲೇ ಅದರ ನಿಲುವು ಎಡಪಂಥೀಯವಾಗಿದೆ ಎಂಬುವುದನ್ನು ಎಲ್ಲರೂ ಬಲ್ಲರು ಎಡಪಂಥೀಯ ವಿಚಾರದಲ್ಲಿ ಧರ್ಮ ನಿರಪೇಕ್ಷತೆ ಎಂಬುವುದು ಗಮನಾರ್ಹ ಅಂಶ ಇರುವುದರಿಂದ ಸಹಜವಾಗಿಯೇ ಇಲ್ಲಿನ ಕೆಲವಾರು ಬರಹಗಳು ಧರ್ಮದ ಆಚಾರಗಳನ್ನು ವಿಮರ್ಶಿಸುತ್ತವೆ ಅದೇನಿದ್ದರೂ ಎಡಪಂಥೀಯ ವಿಚಾರವು ಎದುರಿಸುವ ಕೋಮು ವಿರೋಧಿ ನಿಲುವಿನ ಬಗ್ಗೆ ಒಲವಿರುವ ನನಗೆ ಇದರಲ್ಲಿ ಸಹಮತವಿದ್ದು ಉಳಿದಂತೆ ಧರ್ಮ ನಿರಪೇಕ್ಷತೆಯನ್ನು ನಾನು ಒಪ್ಪುವುದಿಲ್ಲ. ಧರ್ಮವು ಮನುಷ್ಯನ ಜೀವನಪದ್ದತಿಗೆ ಅಂದರೆ ಇಲ್ಲಿನ ಜೀವನವು ವಿಶ್ವಾಸದ ಬುನಾದಿಯಲ್ಲಿದ್ದು ಆ ವಿಶ್ವಾಸ ಮತ್ತು ಜೀವನ ರೀತಿ ಮುಕ್ತಿಯ ಮಾರ್ಗಕ್ಕೆ ಅರ್ಥಾತ್ ಇಹಲೋಕ ನಂತರದ ಶಾಶ್ವತ ಪರಲೋಕ ಜೀವನಕ್ಕೆ ನೀಡುವ ನಿರ್ದೇಶನಗಳನ್ನು ಸತ್ಯಧರ್ಮವು ನೀಡುತ್ತಿದ್ದು ಅದರ ಅನ್ವೇಷಣೆ,ಅರಿವು ಮತ್ತು ಪಾಲನೆಯಿಂದ ಇಹಪರ ಮುಕ್ತಿಯನ್ನು ಹೊಂದಬಹುದು ಎಂಬ ವಿಶ್ವಾಸ ಹೊಂದಿರುವ ನಾನು ನಾಸ್ತಿಕವಾದವನ್ನು ವಿರೋಧಿಸುವ ಆಸ್ತಿಕನಾಗಿರುವೆ ಎಂದು ಸ್ಪಷ್ಟಪಡಿಸುತ್ತಾ,ಚರ್ಚೆಗೆ ಮುನ್ನುಡಿ ನೀಡಿ ಈ ವಿಚಾರಗಳನ್ನು ಕೇಳಬಯಸುವೆ.ಧರ್ಮ ನಿರಪೇಕ್ಷತೆ ಎಂಬ ವಿಚಾರವು ನಿಜವಾಗಿಯೂ ನಿಮ್ಮ ನಿಲುವು ಆಗಿದ್ದರೆ ಇನ್ನು ಧರ್ಮದ ವಿಶ್ಲೇಷಣೆಯ ಅಗತ್ಯವೇ ಇರುವುದಿಲ್ಲ ಯಾಕೆಂದರೆ ಅದು out of syllabus ಅಲ್ಲವೇ? ಇನ್ನು ಒಂದೊಮ್ಮೆ ಧರ್ಮದಲ್ಲಿನ ತಪ್ಪನ್ನು ಜನರ ಮುಂದೆ ತಂದು ಜಾಗೃತಿ ಮೂಡಿಸುವ ಯೋಜನೆಯಾದರೆ ಸ್ವಾಗತಾರ್ಹ.ಯಾಕೆಂದರೆ ಜನಗಳು ಯಾವ ಯಾವ ಧರ್ಮದಲ್ಲಿ ಯಾವ ಯಾವ ವಿಚಾರಗಳಿವೆ ಎಂದು ತಿಳಿಯಲು ಸಹಕಾರಿಯಾಗಬಹುದು ಆದರೆ ಧರ್ಮರಹಿತ ಬದುಕನ್ನು ಬಯಸುವ ಸಮೂಹ ಮಾಧ್ಯಮವಾಗಿ ಪರೋಕ್ಷವಾಗಿ ವಿವಿಧ ಧರ್ಮಗಳ ಪರಿಚಯಗೊಳಿಸುವ ಕ್ರಿಯೆಯು ಒಂದು ರೀತಿಯಲ್ಲಿ ತಧ್ವಿರುದ್ದತೆ ಎನ್ನದೆ ನಿರ್ವಾಹವಿಲ್ಲ. ಅದೇನಿದ್ದರೂ ಇತ್ಯಾದಿ ಚರ್ಚೆಯು ಧರ್ಮದ ಮೂಲಭೂತವಾಗಿ ಅದರ ಪ್ರಮಾಣಿ ಗ್ರಂಥದಲ್ಲಿ ಪ್ರಮಾದಗಳಿದ್ದರೆ ಸಾಕ್ಷ್ಯಾಧಾರದ ಜತೆಗೆ ಅದನ್ನು ಚರ್ಚಿಸಬೇಕೆ ವಿನಃ ಯಾವುದೊ ಧರ್ಮದ ಹೆಸರಿನ ವ್ಯಕ್ತಿಯೊಬ್ಬ ಮಾಡಿದ ಅದಾವುದಾದರೂ ಪುಂಡಾಟಿಕೆಯನ್ನು ಮುಂದಿರಿಸಿ ಅದನ್ನೇ ಧರ್ಮ ಎಂದು ಬಿಂಬಿಸುವ ರೀತಿಯಲ್ಲಿರುವ ಚರ್ಚೆ ನಿಜಕ್ಕೂ ಅರ್ಥಹೀನ.ವೀರಪ್ಪನ್ ಎಂಬ ವ್ಯಕ್ತಿ ಮಾಡಿದ ತಪ್ಪಿಗೆ ಆತನಿಗಿರುವ ಹೆಸರನ್ನು ಯಾವ ಸಮುದಾಯದಲ್ಲಿ ಬಳಸುತ್ತಾರೆ ಎಂಬ ನಿಟ್ಟಿನಲ್ಲಿ ಚರ್ಚೆ ಸಾಗುವುದು ಸರಿಯೇ!?

  ಇನ್ನು ಇಸ್ಲಾಮಿನಲ್ಲಿ ಅರೆನಗ್ನತೆಗೆ ಮತ್ತು ಸಾರ್ವಜನಿಕ ಅಂಗಾಂಗ ಪ್ರಧರ್ಶನ ಅನುಮತಿ ಇದೆಯೇ ಇಲ್ಲವೇ ಎಂಬ ಚರ್ಚೆಯೇ ಅಪ್ರಸ್ತುತ ಯಾಕೆಂದರೆ ಅದನ್ನು ಅನುಸರಿಸಲು ಯಾರಿಗೂ ಒತ್ತಡ ಇಲ್ಲ ಧಾರ್ಮಿಕ ಹಕ್ಕನ್ನು ನೀಡಿದ ನಮ್ಮ ಸಂವಿಧಾನದ ಪ್ರಕಾರ ಇಲ್ಲಿ ವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಅದಾವನಿದ್ದರೂ ಅವನನ್ನು ಕಾನೂನಿನ ಮುಂದೆ ತರಬೇಕು ಇಸ್ಲಾಮಿನಲ್ಲಿ ಹಲವಾರು ಅನಿಷ್ಟ ಸಿದ್ದಾಂತಗಳು ತುಂಬಿವೆ ಎಂದು ಇರ್ಶಾದ ಎಂಬವರು ಭಾವಿಸಿದ್ದರೆ ಅವರಲ್ಲಿ ಮೊದಲು ಹೇಳಲಿರುವುದು ಸರಿಯಾಗಿ ಕಲಿಯಿರಿ ಎಂದಾಗಿದೆ ಇನ್ನೂ ಹಾಗೆಯೇ ಕಂಡರೆ ಖಂಡಿತಾ ಈ ಧರ್ಮ ಅನುಸರಿಸದಿರಲು ನಿಮ್ಮ ಕಾಯಾವಾಚಾಮನಸಾ ಬದುಕಲು ನೀವು ಬದ್ದರು ಧರ್ಮದಿಂದ ಹೊರಹೋದ ನಿಮ್ಮ ಘೋಷಣೆಗೆ ಇಲ್ಲಿನ ಕಾನೂನು ನಿಮ್ಮನ್ನು ರಕ್ಷಿಸಲೇಬೇಕು ಇನ್ನೂ ಮತಾಂಧರು ನಿಮ್ಮ ಮೇಲೆ ಮುಗಿಬಿದ್ದಲ್ಲಿ ಅವರ ತಪ್ಪು ಖಂಡನೀಯ ನಿಮ್ಮ ನಿಲುವಿಗೆ ನನ್ನ ಬೆಂಬಲ ಇದೆ ಧರ್ಮವು ಯಾರನ್ನೂ ಹಿಡಿದಿಡಲು ಬಯಸುವುದಿಲ್ಲ ಎಂಬ ಪರಮ ಸತ್ಯವನ್ನು ಎಲ್ಲಾ ಧರ್ಮದ ವಿಶ್ವಾಸಿಗಳು ಅರಿತಿರಲಿ.

  ಅದೇನಿದ್ದರೂ ಭಾರತಕ್ಕೆ ಒಂದು ಸಂಸ್ಕೃತಿ ಇದೆ ಅದನ್ನಾದರೂ ಎಲ್ಲರೂ ಒಪ್ಪಲೇಬೇಕು ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರ ಒಂದೇ ಅಲ್ಲ ತುಂಡುಡುಗೆ ಭಾರತೀಯ ಸಂಸ್ಕೃತಿ ಅಲ್ಲ ಎಂಬ ನೆನಪನ್ನು ನೀಡಬಯಸುವೆ ಹಾಗಿದ್ದೂ ನಿಮಗಾಗಾಗಲೀ ನಿಮ್ಮ ಮನೆಯವರಿಗಗಾಲೀ ತುಂಡುಡುಗೆಯಲ್ಲಿ ಪ್ರದರ್ಶನ ನೀಡಬೇಕೆಂಬ ಆಶೆ ಇದ್ದಲ್ಲಿ ಅದಕ್ಕೆ ನೀವು ಸ್ವತಂತ್ರರು ಅದನ್ನು ತಡೆಯುವ ವ್ಯಕ್ತಿಯು ಯಾವ ಹೆಸರನ್ನು ಹೊಂದಿದ್ದರೂ ಅವನಿಗೆದುರಾಗಿ ಕಾನೂನುಕ್ರಮ ಕೈಗೊಳ್ಳಬೇಕು….ಮುಂದೆ ಇದಕ್ಕಾಗಿ ಅದಾವುದೇ ಧರ್ಮವನ್ನು ಎಳೆದು ತರದಿರಿ.. ಆ ಜನಗಳನ್ನು ಮಾತ್ರ ವಿರೋಧಿಸೋಣ.

  Reply
 18. Salam Bava

  ನಾಗಶೆಟ್ ರವರು ಸಮುದಾಯದ ತಲ್ಲಣಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಹೇಶ್ ರು ಒಬ್ಬ ಹೆಣ್ಣಿಗೆ ಕಪಾಳ ಮೋಕ್ಸ ಮಾಡಿದರೆ ಅದು ಒಬ್ಬ ಹಿಂದೂ ಮತಾಂದನ ಕ್ರಿಯೆ ಎಂದು ಬಿಂಬಿಸಲ್ಪಡುದಿಲ್ಲ .ಓರ್ವನ ತಕ್ಷಣದ ಪ್ರತಿಕಿಯೆ ಎಂದು ಶಬ್ದಗಳ ಚೆಲ್ಲಾಟ ಸುರುವಾಗುತ್ತದೆ !ಅದೇ ಪ್ರವಿಲೆಜೆ ಮಲಿಕ್ ನಿಗೆ ಯಾಕಿಲ್ಲ . ಲೇಖನ ಸುರುವಾಗುವುದೇ ‘ಮುಸ್ಲಿಂ ಪ್ರೇಕ್ಸಕ ‘ಎಂದು ,ಅವನು ಕೇವಲ ‘ಪ್ರೇಕ್ಷಕ ‘ಯಾಕಾಗುದಿಲ್ಲ ? ೬೦% ಮುಸ್ಲಿಮರು ನಿರುದ್ಯೋಗ ,ಬಡತನ ,ಶಿಕ್ಹಣದಲ್ಲಿ ಹಿಂದುಳುಯುವಿಕೆ ,ತಲೆಗೊಂದು ಸೂರು ,ವ್ಯೆದ್ಯಕೀಯ ಸೌಲಭ್ಯದ ಕೊರತೆ,ವರದಕ್ಷಿಣೆ ಮತ್ತು ರಾಷ್ಟ್ರೀಯ ಮುಖ್ಯಧಾರೆಯಿಂದ ವಿಮುಖತೆ ಇದೆಲ್ಲಾ ನನನ್ನಂಥವನಿಗೆ ಸಮುದಾಯದ ಸುಟ್ಟು ತಿನ್ನುವ ಸಮಸ್ಯೆಗಳು .ಜಗತ್ತಿನ ಎಲ್ಲಾ ಉಗ್ರವಾದಗಳಿಗೂ ಈ ಒಂದು ಏಟೇ ಕಾರಣ ಮತ್ತು ಬೇರೆಲ್ಲಾ ಸಮಸ್ಯಗಳು ಗೌಣ ಎಂಭಂಥ ಸಜಾಯಿಕೆಯನ್ನು ಲೇಖಕರು ಕೂಟ್ಟು ಒಂದು ತರಹದ ಉಡಾಪೆತನ ಮೆರೆದ್ದಿದ್ದಾರೆ ಮುಸ್ಲಿಂ ಹೆಣ್ಣು ಮಕ್ಕಳು ತಮಗೆ ಇಷ್ಟ ಬಂದಂಥ ವಸ್ತ್ರ ಧರಿಸುತ್ತಾರೆ ,ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಳುತ್ತಾರೆ -ಆದರೆ ಅದನ್ನು ನೋಡುವ ಕಣ್ಣು ಮತ್ತು ಹ್ರದಯ ಬೇಕು . ಎರಡನ್ನೂ ಮುಚ್ಚಿ ಯಾವಗಲೋ ಫಿಕ್ಸ್ ಮಾಡಿಟ್ಟದ್ದನ್ನೇ ಚರ್ವಿತ ಚರ್ವಣ ಮಾಡಿ ದರೆ ?
  ಪಭ್ ದಾಳಿ ಒಂದು ವ್ಯವಸ್ಥಿತವಾಗಿ ,ಪ್ರಿಪ್ಲನ್ನೆಡ್ ಮತ್ತು ಒಂದು ಬಲ್ಯಾಡ ಸಂಘಟನೆ ನಡೆಸಿದ ಧಾಳಿ ,ಅದೇ ತರಹದ್ದು ಈಗಲೂ ಅವರಿಂದ ವ್ಯಾಪಕವಾಗಿ ನಡೆಯುತ್ತಾ ಇದೆ . ಅದನ್ನು ಈ ಒಂದು ಹುಚ್ಚು ಕ್ರತ್ಯಕ್ಕೆ ಸಮೀಕರಿಸುದು ಸಲ್ಲ . ಇನ್ನು ಇದರಲ್ಲಿ ಯಾರನ್ನೂ ವ್ಯೇಯುಕ್ಥಿಕವಾಗಿ ದೂಶಿಸುವುದು ಸಲ್ಲ .ಚರ್ಚೆ ಆರೊಗ್ಯಪೋರ್ನವಾಗಿದ್ದ್ರ್ರೆ ನನ್ನ ಅರಿವಿನ ವಿಸ್ತಾರ ಕೂಡಾ ಹೆಚ್ಚಾಗಬಹುದೆಂದು ನನ್ನ ಅನಿಸಿಕೆ !

  Reply
  1. Nagshetty Shetkar

   ಸಲಾಂ ಬಾವ ಅವರ ಅಭಿಪ್ರಾಯಕ್ಕೆ ನನ್ನ ಸಹಮತಿ ಇದೆ. ಮುಸ್ಲಿಂ ಸಮುದಾಯದ ಅಸಲಿ ಸಮಸ್ಯೆಗಳ ಬಗ್ಗೆ ಚರ್ಚೆಯಾಗತಕ್ಕದ್ದು.

   Reply
 19. Sharada halli

  ಪ್ರತಿಕ್ರೀಯೆ.
  ಇರ್ಷಾದ್ ಉಪ್ಪಿನಂಗಡಿ ಎಂಬ ಲೇಖಕರು ವರ್ತಮಾನ ಬ್ಲಾಗಿನಲ್ಲಿ ಈ ಘಟನೆ ವಿವರಿಸುತ್ತಾರೆ.
  ಮುಸ್ಲಿಮ್ ಮಹಿಳೆಯಾಗಿ ತುಂಡುಡುಗೆ ಧರಿಸಿದ್ದು ತಪ್ಪು’ ಎಂಬ ಕಾರಣಕ್ಕಾಗಿ ಬಾಲಿವುಡ್ ನಟಿ ಹಾಗೂ ರೂಪದರ್ಶಿ ಗೌಹರ್ ಖಾನ್ ಮೇಲೆ ಮುಂಬೈನಲ್ಲಿ ನಡೆಯುತ್ತಿದ್ದ ರಿಯಾಲಿಟಿ ಕಾರ್ಯಕ್ರಮದ ವೇದಿಕೆಯಲ್ಲಿ ಮುಸ್ಲಿಮ್ ಪ್ರೇಕ್ಷಕನೊಬ್ಬ ಹಲ್ಲೆ ನಡೆಸಿ ಮತಾಂಧತೆಯನ್ನು ಮೆರೆದಿರುವ ಘಟನೆ ಮುಸ್ಲಿಮ್ ಸಮಾಜದಲ್ಲಿ ಬುರ್ಖಾ ತೊಡದ ಮಹಿಳೆಯರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ‘
  ಮೇಲಿನ ಮಾತುಗಳನ್ನು ಇರ್ಷಾದ್ ಹೇಳಿದ್ದಾರೆ. ಕೇವಲ ಬೇರೆ ಧರ್ಮೀಯರನ್ನು ಟೀಕಿಸುತ್ತಾ ಸ್ವಧರ್ಮದ ಹುಳುಕುಗಳನ್ನು ಕಂಡು ಕಾಣದಂತೆ ಕುಳಿತು ಕೊಳ್ಳುವವರೇ ಹೆಚ್ಚು ಜನ. ಅಂಥವರಲ್ಲಿ ಇರ್ಷಾದ್ ವಿಭಿನ್ನರಾಗಿ ನಿಲ್ಲುತ್ತಾರೆ. ಆದರೆ ಇಂಥ ಧ್ವನಿಗಳಿಗೆ ಬೆಂಬಲ ಬಹಳವಿಲ್ಲ. ಇಂಥ ಧ್ವನಿಗಳನ್ನು ಹತ್ತಿಕ್ಕುವವರೆ ಎಲ್ಲ.
  ಮೊದಲಿಗೆ ಹೇಳುತ್ತೇನೆ. ನಾನು ಗೌಹಾರ್ ಖಾನ್ ಅವಳ ಮೇಲೆ ಹಲ್ಲೆ ಮಾಡಿದ ಮತಾಂಧನನ್ನಾಗಲೀ ಅಥವಾ ಪಬ್ ಮೇಲೆ ದಾಳಿ ಮಾಡಿದ ಮತಾಂಧರನ್ನಾಗಲಿ ಕ್ಷಮಿಸುವದು ಖಂಡಿತ ಬೇಡ. ಅವರಿಗೆ ಖಂಡಿತ ಶಿಕ್ಷೆ ಆಗಲೇ ಬೇಕು. ಆದರೆ……………
  ಇದೇ ಸಂದರ್ಭದಲ್ಲಿ ಮಹಿಳೆಯರು ಎಂಥ ಉಡುಪುಗಳನ್ನು ಧರಿಸಬೇಕೆಂದು ನಾವೂ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾಗಿದೆ.
  ವೈಜ್ಞಾನಿಕವಾಗಿ ಹೇಳಬೇಕೆಂದರೆ ಸ್ತ್ರೀ ಮತ್ತು ಪುರುಷರ ಶರೀರದ ರಚನೆಗಳು ಅವರ ಮನಸ್ಥಿತಿ ಇವೆಲ್ಲ ಬೇರೆ ಬೇರೆ ಆಗಿವೆ. ಪುರುಷರು ಹೆಣ್ಣಿನ ಅಂಗಾಂಗಗಳನ್ನು ನೋಡಿದ ತಕ್ಷಣವೇ ಉದ್ರೇಕಗೊಳ್ಳುತ್ತಾರೆ. ಪ್ರಕೃತಿ ಹಾಗೆನೇ ಅವರನ್ನು ಸೃಷ್ಟಿಸಿದೆ. ಆದರೆ ಹೆಣ್ಣು ಹಾಗೆ ನೋಡಿದ ತಕ್ಷಣ ಉದ್ರೇಕಗೊಳ್ಳುವದಿಲ್ಲ. ಅವಳಿಗೆ ಉದ್ರೇಕಗೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಅವಳ ಮನಸ್ಥಿತಿ ಹಾಗೇನೇ ಇರುತ್ತದೆ. ಅವಳ ಶರೀರ ರಚನೆ ಹಾಗೇನೇ ಪ್ರಕೃರ್ತಿ ಸೃಷ್ಟಿಸಿದೆ. ಪುರುಷರು ತಾಯಿಯನ್ನು , ತಂಗಿಯನ್ನು ಅಕ್ಕನನ್ನು ಮಗಳನ್ನು ಯಾರನ್ನು ನಗ್ನಾವಸ್ತೆಯಲ್ಲಿ ಅಥವಾ ಅರೆ ನಗ್ನಾವಸ್ತೆಯಲ್ಲಿ ನೋಡಿದರೂ ಬೇಗನೇ ಉದ್ರೇಕಗೊಳ್ಳುತ್ತಾರೆ.(ಸುಧಾ ಪತ್ರಿಕೆಯಲ್ಲಿ ಖ್ಯಾತ ಲೈಂಗಿಕ ತಜ್ಞರಾದ ಶ್ರೀ ವಿನೋದ್ ಛಬ್ಬಿ ಅವರು ‘ಸುಖೀ ಭವ’ ಎಂಬ ಅಂಕಣದಲ್ಲಿ ಈ ವಿಷಯ ಬರೆದಿದ್ದಾರೆ. ಇನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಬೇಕಿದ್ದರೆ ನೋಡಿಕೊಳ್ಳಬಹುದು.) ಆದರೂ ಅನೇಕರು ತಾವು ಬೆಳೆದ ಪರಿಸರ ಬಾಲ್ಯದಿಂದಲೂ ಬೆಳಸಿಕೊಂಡ ಪಾಪ ಪ್ರಜ್ಞೆ ಇಂಥವುಗಳಿಂದ ಪ್ರೇರೇಪಣೆ ಹೊಂದಿ ಕಂಡೂ ಕಾಣದಂತೆ ಅಥವಾ ಬೇರೊಂದು ರೀತಿಯಿಂದ ತಮ್ಮ ಉದ್ರೇಕ ಶಮನ ಮಾಡಿಕೊಳ್ಳುತ್ತಾರೆ ವಿನಃ ಅತಿರೇಕಕ್ಕೆ ಹೋಗುವದಿಲ್ಲ. ಇಂಥವರು 95% ಇದ್ದಾರೆ. ಇಲ್ಲದಿದ್ದರೆ ಹೆಣ್ಣು ಬಾಳುವದೇ ಕಠಿಣವಿತ್ತು. ಆದರೆ ಶೇಕಡಾ 5% ಜನರು ಕುಡಿದ ಅಮಲಿನಲ್ಲಿ ಅಥವಾ ವಿವೇಕ ಶೂನ್ಯರಾಗಿ ವರ್ತಿಸುತ್ತಾರೆ. ಅಂಥವರ ಕಣ್ಣಿಗೆ ಅರೆ ಬರೆ ಉಡುಪು ಧರಿಸಿದ ಹೆಣ್ಣು ಕಣ್ಣಿಗೆ ಬಿದ್ದರೆ ಮಂಗನ ಬುದ್ಧಿ ಕೆರಳುತ್ತದೆ.
  ಇನ್ನು ಹೆಣ್ಣು ಕುಡಿದು ಉನ್ಮತ್ತಳಾಗಿ ಅಸ್ತವ್ಯಸ್ತಳಾಗಿ ರಸ್ತೆಯಲ್ಲಿ ಬಿದ್ದರೆ ಆಕೆಯನ್ನು ನೋಡಿದ ಪುರುಷರ ಮನೋಸ್ಥಿತಿ ಯಾವ ರೀತಿ ಇರುತ್ತದೆ? ಎಲ್ಲರೂ ಹಾಗಿರುವದಿಲ್ಲ. ಒಪ್ಪೋಣ, ಆದರೆ ಕೆಲ ಕಾಮುಕರ ಕಣ್ಣಿಗೆ ಆಕೆ ಬಿದ್ದರೆ ಆಕೆಯ ಮೇಲೆ ದೈಹಿಕ, ಮಾನಸಿಕ ಹಲ್ಲೆ ಆಗದೇ ಇದ್ದೀತೆ? ಆಕೆಗೆ ಆ ದೈಹಿಕ ಅದರಲ್ಲೂ ವಿಶೇಷವಾಗಿ ಮಾನಸಿಕ ಆಘಾತ ತಡೆಯುವ ಶಕ್ತಿ ಇದೆಯೇ? ಮುಂದಿನ ಪರಿಣಾಮವಾದ ಗರ್ಭಧಾರಣೆ; ಅದನ್ನೂ ಹೆಣ್ಣೇ ಅನುಭವಿಸಬೇಕಲ್ಲವೇ? ಬೇಡದ ಈ ಪಿಂಡವನ್ನು ಹೊಸಕಿ ಹಾಕುವಾಗ ತೊಂದರೆ ಅನುಭವಿಸುವವಳು ಹೆಣ್ಣೇ ಅಲ್ಲವೆ? ಅವಳು ಪುರುಷನಷ್ಟು ದೈಹಿಕವಾಗಿ ಬಲಶಾಲಿ ಅಲ್ಲದ ಕಾರಣ ಕೆರಳಿದ ಇಬ್ಬರು ಮೂವರು ಹುಡುಗರು ಏಕಕಾಲಕ್ಕೆ ಆಕ್ರಮಿಸಿದಾಗ ಸೋಲಲೇ ಬೇಕಾಗುತ್ತದೆ. ಅದರೆ ಅದೇ ಒಬ್ಬ ಗಂಡು ಕುಡಿದು ಪೂರ್ಣ ನಗ್ನಾವಸ್ಥೆಯಲ್ಲೇ ಬೀದಿಯೊಂದರಲ್ಲಿ ಬಿದ್ದಿದ್ದಾನೆ ಎಂದುಕೊಳ್ಳಿ ಆಗ ಹೆಣ್ಣುಮಕ್ಕಳು ಉದ್ರೇಕಗೊಂಡು ಅವನನ್ನು ಘಾಸಿಸುತ್ತಾರೆಯೇ? ಎಷ್ಟೇ ಆಧುನಿಕ ಮನೋಭಾವದ ಹುಡುಗಿಯರಿದ್ದರೂ ಹುಡುಗರಂತೆ ವರ್ತಿಸುತ್ತಾರೆಯೇ? ಖಂಡಿತ ಇಲ್ಲ. ಯಾಕೆಂದರೆ ಹುಡುಗಿಯ ಶರೀರದ ಹಾರ್ಮೋನ್ಸ್ ಬೇಗನೇ ಕೆರಳಿಸಿಬಿಡುವದಿಲ್ಲ. ಆಕೆ ಬೆಳೆದ ವಾತಾವರಣ ಬಾಲ್ಯದಿಂದ ಲಜ್ಜೆ , ನಾಚಿಕೆ ಇತ್ಯಾದಿಗಳನ್ನು ರೂಢಿ ಮಾಡಿಸಿದ ಹುಡುಗಿ ತಾನೇ ಅಸಹ್ಹಿಸಿಕೊಳ್ಳುತ್ತಾಳೆ ವಿನಃ ಆ ಪುರುಷನಿಗೆ ಯಾವ ತೊಂದರೆ ಆಗುವದಿಲ್ಲ.
  ಒಟ್ಟಾರೆಯಾಗಿ ನನ್ನ ಅಭಿಪ್ರಾಯವೆಂದರೆ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರಕ್ಕೆ ಬಳಸಿದರೆ ನರಳುವವರು ನೀವೇ. ಮೃದು ಮನದ , ದೇಹದ ಹುಡುಗಿಯರೇ. ಗಂಡು ಕುಡಿತಾನೆ. ನಾನು ಗಂಡಿನ ಸಮನಾಗಬೇಕು. ನಾನು ಕುಡಿದರೇನು ತಪ್ಪು? ನಾನು ನನ್ನಿಷ್ಟ ಬಂದ ಉಡುಪು ಧರಿಸಿದರೇನು ತಪ್ಪು? ಇವು ಇಂದಿನ ಹುಡುಗಿಯರ ಆಲೋಚನೆಗಳಾಗಿವೆ. ನನ್ನಂಥ ವಿಚಾರವಿರುವವರನ್ನು ಅಡಗೂಲಜ್ಜಿ ಜಮಾನದವಳೆಂದೂ , ಬದಲಾವಣೆಗೆ ಹೊಂದಿಕೊಳ್ಳದ ಹೆಣ್ಣೆಂದೂ ಜರೆಯುತ್ತೀರಿ. ಆದರೆ ಒಮ್ಮೆ ಪ್ರಾಂಜಲ ಮನದಿಂದ ಯೋಚಿಸಿದರೆ ಅರ್ಥವಾದೀತು. ತಲೆ ಘಟ್ಟಿಯಾಗಿದೆಯೆಂದು ಗೋಡೆಗೆ ಹೊಡೆದುಕೊಳ್ಳುವದು ಜಾಣತನವಲ್ಲ. ಅನಾಹುತಗಳು ನಡೆದ ನಂತರ ಓ ಹೀಗಾಗಬೇಕು. ಗಲ್ಲಿಗೇರಿಸಬೇಕು. ಇತ್ಯಾದಿ ಕೂಗಾಡುವದಕ್ಕಿಂತ ಮೊದಲೇ ಹೆಣ್ಣು ಹುಡುಗಿಯರೇ ಎಚ್ಚರಗೊಳ್ಳಿರಿ.
  ಕೆಲವು ವಿಷಯಗಳಲ್ಲಿ ಸಮಾನತೆ ಸಾಧಿಸುವ ಹುಚ್ಚಾಟ ಬೇಡ. ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ಹಾಗಂತ ಧರ್ಮದ ಹೆಸರೇಳಿಕೊಂಡು ಹೆಣ್ಣು ಮಕ್ಕಳ ಮೇಲೆ ದಬಾನಿಕೆ ಮಾಡುವವರನ್ನು ನಾನು ಕ್ಷಮಿಸಲ್ಲ. ಖಂಡಿತ ಅವರಿಗೆ ಶಿಕ್ಷೆ ಆಗಲೇಬೇಕು.
  ಹೆಣ್ಣು ಮಕ್ಕಳಿಗೆ ಅವಳ ತಾಯಂದಿರು ತಂದೆ ತಿಳಿಸಿ ಹೇಳಬೇಕೆ ವಿನಃ ಇನ್ನೊಬ್ಬರ ದಬಾನಿಕೆ ಬೇಡ. ಹೆಣ್ಣು ಮಕ್ಕಳೇ ಪುರುಷರಂತೆ ವಿಜ್ಞಾನಿ ಆಗಿ. ಡಾಕ್ಟರ್ ಆಗಿ , ಸಮಾಜ ಸುಧಾರಕರಾಗಿ. ಸಮಾನತೆ ಸಾಧಿಸಿ ತೊರಿಸಿ. ವಿನಹಾ ಕುಡಿಯುವಲ್ಲಿ, ಸಿಗರೇಟು, ಮಾದಕ ವಸ್ತು ಸೇವನೆ, ಅರೆ ನಗ್ನ ಉಡುಪಿನಲ್ಲಿ ಖಂಡಿತ ಸಮಾನತೆ ಬೇಡ. ದಯವಿಟ್ಟು ಅರ್ಥ ಮಾಡಿಕೊಂಡು ಹೂವಿನಂಥ ನಿಮ್ಮ ಶರೀರವನ್ನು ಹೊಸಕಿಹಾಕುವ ಹುನ್ನಾರ ಮಾಡುತ್ತಿರುವ ಕಾಮುಕ ರಾಕ್ಷಸರಿಗೆ ನಿಮ್ಮ ಕೋಮಲ ಶರೀರ ಅರ್ಪಿಸಬೇಡಿರಿ. ಆ ಹೂ. ದೇವ ದೇವನ ಅಡಿದಾವರೆ ಸೇರಲಿ ಧನ್ಯವಾಗಲಿ.

  Reply
 20. M A Sriranga

  ಶಾರದ ಹಳ್ಳಿ ಅವರಿಗೆ—-ತಾವು ಕಳೆದ ಒಂದೆರೆಡು ವರ್ಷಗಳಲ್ಲಿ ಕರ್ನಾಟಕದಲ್ಲೇ ನಡೆದ ಅತ್ಯಾಚಾರದ ಪ್ರಕರಣಗಳ ಬಗ್ಗೆ ಸ್ವಲ್ಪ ಗಮನಹರಿಸಿದ್ದರೆ ಬಹುಶಃ ತಮ್ಮ ಪ್ರತಿಕ್ರಿಯೆಯಲ್ಲಿರುವ ವಿರೋಧಾಭಾಸ ತಮಗೆ ತಿಳಿಯುತ್ತಿತ್ತೇನೋ? ಶಾಲೆಗೆ ಹೋಗಿದ್ದ ಬಾಲಕಿಯರ ಮೇಲೆ, ಮನೆಯಲ್ಲಿ ಪೂರ್ಣ ಉಡುಪು ಧರಿಸಿದ್ದವರ ಮೇಲೆ ಅತ್ಯಾಚಾರಗಳು ನಡೆದಿವೆ. ಹೆಂಗಸರು,ಯುವತಿಯರು ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರ ಎಂದು ತಿಳಿಯುವುದರಿಂದ ಇವೆಲ್ಲಾ ಘಟಿಸಿಲ್ಲ. ಬದಲಾದ ಕಾಲಮಾನದ ಪರಿಸ್ಥಿತಿಯಲ್ಲಿ ಯುವತಿಯರು, ಗೃಹಿಣಿಯರು ಮನೆಯಿಂದ ಹೊರಗಡೆ ದುಡಿಯಲು ಹೋಗಲೇ ಬೇಕಾದ ಪರಿಸ್ಥಿತಿಯಿದೆ. ಅದರಿಂದ ಹೆಣ್ಣಿಗೆ ಆರ್ಥಿಕ ಸಬಲತೆ ಬರುತ್ತದೆ. ಹಿಂದೆ ಹೆಣ್ಣು ಮಕ್ಕಳನ್ನು ಓದಿಸದೆ, ಕೆಲಸಕ್ಕೆ ಹೋಗಲು ಬಿಡದೇ ಇದ್ದದ್ದೇ ಕಾರಣವಾಗಿ ಹೆಣ್ಣು ಗಂಡನಿಂದ,ಅತ್ತೆ-ಮಾವನ ಮನೆಯವರಿಂದ ಶೋಷಣೆಗೆ ಒಳಗಾಗುತ್ತಿದ್ದಳು. ಇಂದು ವಿದ್ಯೆ,ಉದ್ಯೋಗದಿಂದ ತನ್ನ ಜೀವನವನ್ನು ಸ್ವಂತ ಶಕ್ತಿಯಿಂದ . ತನ್ನ ದುಡಿಮೆಯಿಂದ ನಿರ್ವಹಿಸಿಕೊಳ್ಳಬಲ್ಲೆ ಎಂಬ ಧೈರ್ಯ ಮಹಿಳೆಯರಿಗೆ ಬಂದಿದೆ. ಹೀಗಾಗಿ ಕೇವಲ dress code ನಿಂದಾಗಲೀ, ಸಂಜೆ ವೇಳೆ ಮನೆಬಿಟ್ಟು ಆಚೆ ಹೋಗಬೇಡವೆಂದು ಹೇಳುವುದಾಗಲೀ ಸಮಸ್ಯೆಗೆ ಪರಿಹಾರವಲ್ಲ. ಶಾಲೆ,ಕಾಲೇಜು,ಉದ್ಯೋಗದ ಸ್ಥಳಗಳಲ್ಲಿ,ಸಾರ್ವಜನಿಕ ಸಾರಿಗೆಗಳಾದ ಬಸ್ಸು,ರೈಲು,ಇತ್ಯಾದಿಗಳಲ್ಲಿ ಮತ್ತು ರಸ್ತೆಗಳಲ್ಲಿ ಹೆಣ್ಣಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದು ಆಯಾ ಸಂಸ್ಥೆಗಳ,ಸರ್ಕಾರದ ಕರ್ತವ್ಯ.

  Reply
  1. Ganesh

   Educate boys/men. Train them from childhood as you train girl child. Imbibe culture in boys similar to the way you teach girl child. Least the future generation can lead a safer life.

   Reply
 21. ಅನಿತಾ

  ಇರ್ಷಾದರು ತಮ್ಮ ಲೇಖನದಲ್ಲಿ ಎಲ್ಲಿಯೂ ಮತಾಂಧನ ಕೃತ್ಯಕ್ಕೆ ಮುಸ್ಲಿಂ ದರ್ಮವನ್ನು ಹೊಣೆಯಾಗಿಸಿಲ್ಲ. ಆದರೆ ಆ ಹುಚ್ಚನ ಕೆಲಸದ ಹಿಂದಿನ ಮುಸ್ಲಿಂ ಮತಾಂಧತೆಯನ್ನು ಖಂಡಿಸಿದ್ದಾರೆ. ಆ ಹುಚ್ಚನಿಗೆ ಯಾರೋ ಮುಸ್ಲಿಮರನ್ನು ದ್ವೇಷಿಸುವ ಪಕ್ಷಗಳು ಡುಡ್ಡುಕೊಟ್ಟು ನಟಿಯನ್ನು ಹೊಡೆಸಿರಬಹುದು ಎಂಬ ದೂರಾಲೋಚನೆಗಳೆಲ್ಲ ಮುಸ್ಲಿಂ ಮೂಲಭೂತವಾದವನ್ನು ಕಡೆಗಣಿಸುವ, ಕುಕೃತ್ಯವನ್ನು ಲಘೂಕರಿಸುವ ಜಾಣ್ಮೆಯ ವಾದಗಳಾಗುತ್ತವೆಯೇ ಹೊರತು ಮುಸ್ಲಿಂ ಮೂಲಭೂತವಾದಿ ಗುಂಪುಗಳು, ಅವುಗಳ ನಿಲುವುಗಳ ಬಗ್ಗೆ ಗೊತ್ತಿರುವವರನ್ನು ಫೂಲ್ ಮಾಡಲು ಸಾಧ್ಯವಿಲ್ಲ. ಕಾಸರಗೋಡಿನಲ್ಲಿ ನಾಲ್ಕು ವರ್ಷಗಳ ಹಿಂದೆ ಬುರಖಾ ತೊಡದೆ ಜೀನ್ಸ್ ತೊಟ್ಟ ಮುಸ್ಲಿಂ ಯುವತಿಯೊಬ್ಬಳು ಸ್ವಮತೀಯ ಮೂಲಭೂತವಾದಿಗಳಿಂದ ಅನುಭವಿಸಿದ ಬೆದರಿಕೆ, ಮಾನಸಿಕ ಹಿಂಸೆ ನಮಗೆ ಗೊತ್ತು. ತೊಡುಪುಳದಲ್ಲಿ ಉಪನ್ಯಾಸಕನೊಬ್ಬನ ಕೈ ಕತ್ತರಿಸಲಾಯಿತು. ಮುಸ್ಲಿಂ ಹುಡುಗಿ ಶಾಲೆಗೆ ಹೋದದ್ದು ಎಂಬ ಸಾರಾ ಅಬೂಬಕರರ ಕತೆಯಲ್ಲೂ ಮೂಲಭೂತವಾದಿಗಳ ಮನಸ್ಸು ಅನಾವರಣಗೊಂಡಿದೆ. ಕೆಲವು ಫೇಸ್ ಬುಕ್ ಪುಟಗಳನ್ನು ನೋಡಿದರೂ ಮುಸ್ಲಿಂ ಧರ್ಮೀಯರಲ್ಲೂ ಹುಚ್ಚರಿದ್ದಾರೆ ಅವರ ಸಂಖ್ಯೆ ಕಡಿಮೆಯಲ್ಲ, ಗಣನೀಯವಾಗಿದೆ ಎಂದು ಅರಿವಾದೀತು. ಹೋಗಲಿ ಐ ಸಿ ಸ್ ನಂತಹ ಸಂಘಟನೆಗೆ, ಕಾಶ್ಮೀರ ಹೋರಾಟಕ್ಕೆ ಇಲ್ಲಿಂದ ಯುವಕರನ್ನು ರಫ್ತು ಮಾಡಿದ್ದು ಒಂದಿಬ್ಬರು ಅಮಾಯಕ ಹುಚ್ಚರೆ? ಅದರ ಹಿಂದೆ ಅಪಾಯಕಾರಿ ಸಂಘಟನೆಗಳಿಲ್ಲವೆ? “ಲೇಖನ ಸುರುವಾಗುವುದೇ ‘ಮುಸ್ಲಿಂ ಪ್ರೇಕ್ಸಕ ‘ಎಂದು ,ಅವನು ಕೇವಲ ‘ಪ್ರೇಕ್ಷಕ ‘ಯಾಕಾಗುದಿಲ್ಲ ?” ಎಂದು ಕೇಳತೊಡಗಿದರೆ ಹಿಂದೂಗಳೂ ಅದೇ ಭಾಷೆಯಲ್ಲಿ ತಮ್ಮ ಮತವನ್ನೇಕೆ ಹೊಣೆಗಾರರನ್ನಾಗಿಸುತ್ತೀರಿ ಎಂದು ಕೇಳಬಹುದು. ಹಿಂದೂ/ ಮುಸ್ಲಿಂ ಧರ್ಮವನ್ನು ಟೀಕಿಸುವುದು ಬೇರೆ, ಹಿಂದೂ/ಮುಸ್ಲಿಂ ಮತಾಂಧತೆಯನ್ನು ಖಂಡಿಸುವುದು ಬೇರೆ. ಮುಸ್ಲಿಂ ಮತಾಂಧತೆಯ ಪ್ರಶ್ನೆ ಬಂದಾಗ ನೆನಪಾಗುವ ಬಡತನ, ನಿರುದ್ಯೋಗ ಯಾಕೆ ಹಿಂದೂ ಮತಾಂಧತೆ ಬಗ್ಗೆ ಮಾತನಾಡುವಾಗ ನೆನಪಾಗುವುದಿಲ್ಲ? ಹಿಂದೂ ಸಂಘಟನೆಗಳಿಗೆ ಸೇರಿದ ‘ಹುಚ್ಚ’ರಿಗೆ ಉದ್ಯೋಗ ನೀಡಿ ಅವರ ಬಡತನ ನಿವಾರಿಸಬೇಕು ಎಂದು ಯಾರೂ ಸಮಜಾಯಿಸಿ ನೀಡುವುದಿಲ್ಲ ಯಾಕೆ? ಮುಸ್ಲಿಂ ಮತಾಂಧತೆಯ ಬಗ್ಗೆ ನಿಮ್ಮದು ಪ್ರಗತಿಪರರದ್ದು ಜಾಣಕುರುಡು ಆಗಿದ್ದರೆ ಯಾರಿಗೆ ಏನೂ ಮಾಡಲಾಗುವುದಿಲ್ಲ. ರಾಜಕೀಯದ ಸ್ವಾರ್ಥಕ್ಕೆ ಬಲಿಬಿದ್ದು ಸತ್ಯಕ್ಕೆ ಕುರುಡಾಗುವ ನಿಮ್ಮ ಅಸಲಿ ಗುಟ್ಟು ಸಾಮಾನ್ಯ ಜನರಿಗೆ ಬೇಗ ಅರಿವಾಗಲಿ ಎಂದು ಹಾರೈಸಬೇಕಷ್ಟೆ. ಆದರೆ ನಿಮ್ಮದು ನಿಜಕ್ಕೂ ಅಮಾಯಕತೆಯಾದರೆ, ಮುಸ್ಲಿಂ ಮೂಲಭೂತವಾದದ ಬೇರುಗಳ ಬಗ್ಗೆ ನೀವು ನಿಜಕ್ಕೂ ಅಜ್ಞರಾಗಿದ್ದರೆ ಕೇರಳದಲ್ಲಿರುವ ನಿಮ್ಮ ಸಮಾನಮನಸ್ಕರಾದ ಕಮ್ಯುನಿಷ್ಟರನ್ನು ಖಾಸಗಿಯಾಗಿ ಕೇಳಿ ನೋಡಿ, ಅವರು ವಿವರಿಸುತ್ತಾರೆ. (ಬಹಿರಂಗವಾಗಿ ಅವರೂ ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ರಾಜಕೀಯ)

  Reply
  1. Nagshetty Shetkar

   ಮುಸ್ಲಿಂ ಮೂಲಭೂತವಾದದ ಗುಮ್ಮ ತೋರಿಸಿ ಸಮಾಜದ ಅಸಲಿ ಸಮಸ್ಯೆಗಳಾದ ಅಸ್ಪ್ರುಶ್ಯತೆ, ಮೇಲು-ಕೀಳು, ಪಂಕ್ತಿ ಭೇದ, ಮೂಢನಂಬಿಕೆಗಳು, ಸ್ತ್ರೀ ಶೋಷಣೆ, ಸತಿ ಪದ್ಧತಿ, ವರದಕ್ಷಿಣೆ ಸಾವು, ಇತ್ಯಾದಿಗಳ ಬಗ್ಗೆ ಚರ್ಚೆ ಆಗದ ಹಾಗೆ ಮಾಡುವುದು ಬಲಪಂಥೀಯರ ತಂತ್ರವಾಗಿದೆ. ಇವರಿಗೆ ಸಮಾಜ ಸುಧಾರಣೆ ಕಾಣುವುದು ಬೇಡವಾಗಿದೆ.

   Reply
   1. ಅನಿತಾ

    ಹಾಗಾದರೆ ಹಿಂದೂ ಮೂಲಭೂತವಾದದ ಕುರಿತು ಚರ್ಚೆಯನ್ನೂ ನಿಲ್ಲಿಸೋಣ. ಸಮಾಜ ಸುಧಾರಣೆಯಾಗಬೇಕಾದುದು ಹಿಂದೂ ಸಮಾಜದಲ್ಲಿ ಮಾತ್ರವಲ್ಲ. ಮುಸ್ಲಿಂ ಸಮಾಜದಲ್ಲೂ ಆಗಬೇಕು ತಾನೆ? ಈ ಸಮಾಜಸುಧಾರಣೆಗೆ ಅಡ್ಡಿಯಾಗುತ್ತಿರುವವರು ಮೂಲಭೂತವಾದಿಗಳೆ ಅಲ್ಲವೆ? ಮೂಲಭೂತವಾದವನ್ನು ಕಡೆಗಣಿಸಿ ಹೇಗೆ ಸಮಾಜಸುಧಾರಣೆ ಮಾಡುತ್ತೀರಿ? ಹಿಂದೂ ಸಮಾಜದಲ್ಲಿ ಓರೆಕೋರೆಗಳಿವೆ ಒಪ್ಪಿಕೊಳ್ಳೋಣ. ಮುಸ್ಲಿಂ ಸಮಾಜದಲ್ಲಿ ಇಲ್ಲವೆ? ಉದಾಹರಣೆಗೆ ಮುಸ್ಲಿಂ ಹೆಣ್ಣುಮಗುವಿಗೆ ಕಲಿಯುವ ಆಸೆಯಿದೆ. ಹೆಣ್ಣುಮಕ್ಕಳಿಗೆ ಹೆಚ್ಚು ಕಲಿಸಬಾರದು ಎಂದು ಆಟವಾಡುವ ವಯಸ್ಸಿನಲ್ಲಿ ಬಾಲ್ಯವಿವಾಹ ಮಾಡಿ ಹೆರುವ ಯಂತ್ರವನ್ನಾಗಿ ಪರಿವರ್ತಿಸುವುದು ಮುಸ್ಲಿಂ ಮೂಲಭೂತವಾದವಲ್ಲವೆ? ಅದನ್ನು ವಿರೋಧಿಸದೆ ಸಮಾಜ ಸುಧಾರಣೆ ಹೇಗೆ ಸಾಧ್ಯ? ಪಂಕ್ತಿಬೇಧ ತಪ್ಪು ನಿಜ. ಅದಕ್ಕಿಂತಲೂ ಭೀಕರವಾದುದು ಅರಬೀಕಲ್ಯಾಣ. ಹೆಸರು,ವಿಳಾಸ ತಿಳಿಯದ ಪರದೇಸಿ ಶ್ರೀಮಂತ ಅರಬನಿಗೆ ತಮ್ಮ ಹೆಣ್ಣುಮಗುವನ್ನು ಮದುವೆ ಹೆಸರಿನಲ್ಲಿ ಮಾರಾಟಮಾಡಿ ಅವಳ ಬದುಕನ್ನು ನರಕ ಮಾಡಿ ತಾವು ಬಂಗಲೆ ಕಟ್ಟಿಕೊಂಡು ವಾಸಿಸುವ ಮುಸ್ಲಿಂ ಹೆತ್ತವರ ಲಾಲಸೆ ನಿಮಗೆ ಗೊತ್ತಿಲ್ಲವೆ? ಅದೇಕೆ ಸಮಾಜದ ಸಮಸ್ಯೆಯಾಗಿ ನಿಮಗೆ ಕಾಣಿಸುವುದಿಲ್ಲ? (ಇದೆಲ್ಲದರ ಬಗ್ಗೆ ತಿಳಿಯಬೇಕಾದರೆ ಕೇರಳದ ಪತ್ರಿಕೆಗಳನ್ನು ಓದಿ) ವರದಕ್ಷಿಣೆ ಇರುವುದು ಹಿಂದೂ ಸಮಾಜದಲ್ಲಿ ಮಾತ್ರವಲ್ಲವಲ್ಲ? ವರದಕ್ಷಿಣೆಗಾಗಿಯೇ ನಾಲ್ಕಾರು ಮದುವೆಯಾಗಿ ಆ ಹೆಣ್ಣುಮಕ್ಕಳನ್ನು ಅರ್ಧದಲ್ಲಿ ಕೈಬಿಟ್ಟು ಬದುಕನ್ನು ಎಂಜೋಯ್ ಮಾಡುವ ಮುಸ್ಲಿಂ ಯುವಕರು ನಾಡಿನಲ್ಲಿ ಎಷ್ಟಿಲ್ಲ? ಬಡತನ ಶ್ರೀಮಂತಿಕೆ ಎರಡೂ ಹಿಂದೂಗಳಲ್ಲಿದೆ ಹಾಗೆಯೇ ಮುಸ್ಲಿಮರಲ್ಲಿದೆ. ಮುಸ್ಲಿಮರ ಕೋಮುವಾದಕ್ಕೆ ಬಡತನ, ನಿರುದ್ಯೋಗ ಕಾರಣವಾದರೆ ಹಿಂದೂ ಯುವಕರು ಕೋಮುವಾದಿಗಳಾಗುವುದು ಬಡತನ ನಿರುದ್ಯೋಗಗಳಿಂದಲ್ಲ ಎಂದು ಹೇಗೆ ತೀರ್ಮಾನಿಸುತ್ತೀರಿ? ಕಾಸರಗೋಡಿನಿಂದ ಮಲಪ್ಪುರಂ ವರೆಗೆ ಸಾಗುವಾಗ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಣಿಸುವ ಭವ್ಯ ಬಂಗಲೆಗಳು, ಅರಮನೆ ಸದೃಶ ಮನೆಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಜ್ಯವೆಲ್ಲರಿಗಳು, ಫ್ಲಾಟುಗಳು ಇವುಗಳಲ್ಲಿ ಶೇ ತೊಂಬತೊಂಬತ್ತು ಮುಸ್ಲಿಮರದೇ. ಮುಸ್ಲಿಮರಿಗೆ ಕೇರಳದಲ್ಲಿ ಶೇ12 (ಎಲ್ಲರಿಗಿಂತ ಹೆಚ್ಚು) ಉದ್ಯೋಗ ಮೀಸಲಾತಿಯೂ ಇದೆ. ಶಿಕ್ಷಣದ ಸವಲತ್ತುಗಳಿವೆ. ವ್ಯಾಪಾರ, ವ್ಯವಹಾರ, ರಾಜಕೀಯ ಎಲ್ಲ ರಂಗಗಳಲ್ಲೂ ಅವರು ಮುಂದಿದ್ದಾರೆ. ಇನ್ನು ಸರಕಾರ ಅವರಿಗಾಗಿ ಏನು ಮಾಡಬೇಕಪ್ಪ? ತಮ್ಮ ಸಂಪತ್ತನ್ನು ಪರೋಕ್ಷವಾಗಿ ಮೂಲಭೂತವಾದವನ್ನು ಉತ್ತೇಜಿಸುವ ಚಟುವಟಿಕೆಗಳಿಗೆ ವ್ಯಯಿಸದೆ ತಮ್ಮ ಸಮಾಜದಲ್ಲಿರುವ ಬಡವರನ್ನು ಉದ್ಧರಿಸಲು ಮುಸ್ಲಿಂ ಶ್ರೀಮಂತರು ಮನಸ್ಸು ಮಾಡಬೇಕು. ಸಮಾಜಸುಧಾರಣೆಗೆ ಅಡ್ಡಿಯಾಗುವ ಸ್ತ್ರೀ ಶೋಷಣೆ ಮೊದಲಾದವನ್ನು ನಿಲ್ಲಿಸಿ ಕುಟುಂಬ ಯೋಜನೆ, ಶಿಕ್ಷಣ ಮೊದಲಾದವಕ್ಕೆ ಒತ್ತು ನೀಡಬೇಕಾದರೆ ಮುಸ್ಲಿಂ ಸಮಾಜದಲ್ಲಿ ಪರಿವರ್ತನೆಯಾಗಬೇಕು. ಹಾಗಾಗಬೇಕಾದರೆ ಅಲ್ಲಿ ಕಾಣಿಸುವ ಮೂಲಭೂತವಾದವನ್ನು ಕಡೆಗಣಿಸದೆ, ಪ್ರೋತ್ಸಾಹಿಸದೆ ಅದನ್ನು ವಿರೋಧಿಸುವ ಇರ್ಷಾದರಂಥವರಲ್ಲಿ ಇನ್ನಷ್ಟು ಹುರುಪು ತುಂಬಬೇಕು. ಮುಸ್ಲಿಂ ಮೂಲಭೂತವಾದವೇ ಆ ಸಮಾಜದ ಸುಧಾರಣೆಗೆ ಅಡ್ಡಿಯಾಗಿರುವಾಗ, ಬಡತನ, ಸ್ತ್ರೀ ಶೋಷಣೆ, ನಿರುದ್ಯೋಗಕ್ಕೆ ಕಾರಣವಾಗಿರುವಾಗ ಮೂಲಭುತವಾದವನ್ನು ವಿರೋಧಿಸದೆ ಸಮಾಜ ಸುಧಾರಣೆ ಮಾಡುವುದು ಹೇಗೆ? ಮುಸ್ಲಿಂ ಮೂಲಭೂತವಾದವನ್ನು ಕಡೆಗಣಿಸಿ ಸಮಾಜಸುಧಾರಣೆಯಾಗಬೇಕು ಎನ್ನುವ ಸಲಾಂಬಾವಾರಂಥವರದ್ದು ಅವಾಸ್ತವಿಕ ದ್ವಂದ್ವದ ನಿಲುವು ಮಾತ್ರವಲ್ಲ ತಮ್ಮ ಸಮಾಜದ ಮೂಲಭೂತವಾದವನ್ನು ಮುಚ್ಚಿಹಾಕುವ ಮೂಲಕ ಪರೋಕ್ಷವಾಗಿ ಮೂಲಭೂತವಾದವನ್ನು ಉತ್ತೇಜಿಸಿ ಸಮಾಜಸುಧಾರಣೆಗೆ ಅವರೇ ಅಡ್ಡಿಯಾಗುತ್ತಾರೆ. ಹಿಂದೂಗಳಲ್ಲಿ ಅಸ್ಪೃಶ್ಯತೆ ಪಂಕ್ತಿಬೇಧ ಇದೆ ನಿಜ, ಆದರೆ ಅದನ್ನು ವಿರೋಧಿಸುವ ಧ್ವನಿಗಳೂ ಪ್ರಬಲವಾಗಿವೆ. ಹಾಗಾಗಿ ಹಿಂದೂ ಸಮಾಜ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. (ದೇವಸ್ಥಾನವೊಂದರಲ್ಲಿ ದಲಿತ ವಿಧವೆಯರು ಪೂಜೆ ಮಾಡಿದ್ದನ್ನು ಗಮನಿಸಿ. ಇಂತಹ ಚಿಂತನೆ ಇತರ ಧರ್ಮ ಸಮಾಜಗಳಲ್ಲಿ ಎಷ್ಟು ಆಗಿದೆ? ನನಗೆ ತಿಳಿದಂತೆ ಮಸೀದಿಗಳಲ್ಲಿ ಮಹಿಳೆಯರು ಪ್ರಾರ್ಥಿಸಲೂ ಹಲವು ನಿರ್ಬಂಧಗಳಿವೆ) ಆದರೆ ಮುಸ್ಲಿಂ ಸಮಾಜದಲ್ಲಿರುವ ಅನಿಷ್ಟಗಳ ಮೂಲಕಾರಣಗಳನ್ನು ಗುರುತಿಸಿ ಧ್ವನಿಯೆತ್ತುವ ಇರ್ಷಾದರಂಥ ಯುವಕರು ಇಲ್ಲವೆಂಬಷ್ಟು ಕಡಿಮೆ. ಯಾವುದೇ ಸಮಾಜ ಸುಧಾರಿಸಬೇಕಾದರೆ ಅದರಲ್ಲಿ ಭಿನ್ನ ಚಿಂತನೆಗಳನ್ನು ಆಲಿಸುವ ಪ್ರಜಾಪ್ರಭುತ್ವ ರೀತಿಯಿರಬೇಕು. ಆದರೆ ಮುಸ್ಲಿಮರಲ್ಲಿರುವ ಮೂಲಭೂತವಾದಿಗಳ ಶಕ್ತಿಗೆ ಹೆದರಿಯೇ ಆ ಸಮಾಜದ ಪ್ರಗತಿಪರರು ಧ್ವನಿಯೆತ್ತಲು ಹೆದರುತ್ತಾರೆ. ಇನ್ನು ಸಮಾಜಸುಧಾರಣೆ ಹೇಗೆ ಸಾಧ್ಯ?

    Reply
    1. Nagshetty Shetkar

     ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ಕೊಡಿಸುವ ಬಗ್ಗೆ ನಿಮಗಿರುವ ಆಸಕ್ತಿ ಗಮನಾರ್ಹವಾಗಿದೆ. ಮುಸ್ಲಿಂ ಸಮುದಾಯವು ಶಿಕ್ಷಣದಿಂದ ವನ್ಚಿತವಾಗಿದ್ದು ಶಿಕ್ಷಣದ ಮೂಲಕ ಸಿಗುವ ಅವಕಾಶಗಳಿಂದಲೂ ವಂಚಿತವಾಗಿದೆ (ನೋಡಿ ಸಾಚಾರ್ ವರದಿ). ಆದುದರಿಂದ ಮುಸ್ಲಿಂ ಸಮುದಾಯಕ್ಕೆ ೨೫% ಮೀಸಲಾತಿ ಕೊಡುವುದು ಸುಧಾರಣೆಯ ದೃಷ್ಟಿಯಿಂದ ಉತ್ತಮ.

     Reply
 22. Sharada halli

  ಶ್ರೀರಂಗ ಸರ್ ನನಗೆ ಎಲ್ಲಾ ಸ್ಥಳಗಳಲ್ಲಿ ಮಹಿಳೆಗೆ ಸುರಕ್ಷಿತ ವಾತಾವರಣ ಕೊಡಿಸುವ ಬಗ್ಗೆ ಯಾವ ತಕರಾರಿಲ್ಲ. ಹಾಗೇನೇ ಮಹಿಳಾ ದೌರ್ಜನ್ಯಗಳು ಕೇವಲ ಉಡುಪು ಮಾತ್ರದಿಂದಲೇ ಆಗುತ್ತವೆಂದೂ ಸಾಧಿಸುತ್ತಿಲ್ಲ. ಮಹಿಳೆಯರಿಗೆ ಸುರಕ್ಷತೆ ನೀಡಿದರೆ ಅದರ ಫಲಾನುಭವಿಯಾದ ನನಗೂ ಒಳ್ಳೆಯದೇ ಅಲ್ಲವೆ? ಹಾಗೇನೇ ನಮ್ಮ ಹುಚ್ಚು ಹುಡುಗಿಯರು ಸಮಾನತೆ ಎನ್ನುತ್ತಾ ಪುರುಷರಂತೆ ಕುಡಿಯುವದು, ಮಧ್ಯರಾತ್ರಿ ತಿರುಗಾಡುವದು, ಪ್ರಚೋದನಕಾರಿ ಉಡುಪು ಧರಿಸುವದು ಇತ್ಯಾದಿಗಳಿಂದ ಅವರೇ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ ವಿನಃ ಪುರುಷರಿಗೆ ಯಾವ ಹಾನಿ ಇಲ್ಲ ಎಂದು ಹೇಳಲು ಮತ್ತು ಇನ್ನಷ್ಟು ಬೇಕೆಂದೇ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳದೇ ಎಚ್ಚರಾಗಿರಲಿ ಎಂಬುದಕ್ಕಾಗಿ ಈ ಕಮೆಂಟ ಬರೆದಿದ್ದೇನೆ.

  Reply
 23. Salam Bava

  ಈ ಚರ್ಚೆಯನ್ನು ನಿಲ್ಲಿಸಿದ್ದೆ ,ಆದರೆ ಅನಿತಾರು ನನ್ನನ್ನು ಇನ್ನೊಮ್ಮೆ ಚರ್ಚೆಗೆ ಎಳೆ ತಂದಿದ್ದಾರೆ . ನಾನು ಮೊದಲಿಗೆ ಹೇಳಿದ ಹಾಗೆ -ಲೇಖಕರ ಭಾಲಿಶ ಬರಹಕ್ಕೆ ಎಡ,ಬಲ ಮತ್ತು ನಡು ಪಂಥೀಯರೆಲ್ಲಾ ತುಂಬಾ ಸೀರಿಯಸ್ ಆಗಿ ಪ್ರತಿಕಯಿಸಿದ್ದಾರೆ .ಅವರು ಸಮುದಾಯದ ಒಂದು ಜ್ವಲ್ವಂಥ ಇಶೂ ವನ್ನು ಹಿಡಿದು ಲೇಖನ ಬರೆದಿದ್ದರೆ ನಾಗಶೆಟ್ ರವರ ಹೊರತು ಬೇರೆ ಯಾರೂ ಪ್ರತಿಕಯಿಸುತ್ತರಲಿಲ್ಲ ಎಂದು ನನ್ನ ದ್ರಢ ನಂಬಿಕೆ . ಲೇಖಕರಿಗೂ ಬೇಕಿದದ್ದು ಸಹಾ ಇದೇ ತರಹ ತಮ್ಮ ಸೊಕಾಲ್ಡ ಟಿ . ಆರ್ . ಪಿ ಹೆಚ್ಚಳ !ಮುಸ್ಲಿಂ ಸಮುದಾಯದ ಕುರಿತು ಅನಿತರವರ ಅರಿವಿನ ಆಳ ತುಂಬಾ ಕಮ್ಮಿ . ನೂರಾರು ಸಾಮುದಾಯಿಕ ಸಂಘಟನೆಗಳು ತಮ್ಮನ್ನು ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡಿವೆ ಸಮುದಾಯದಲ್ಲಿ ಹಾಸುಹೊಕ್ಕಾಗಿರುವ ಎಲ್ಲ್ಲಾ ಕೆಡುಕಿನ ವಿರುದ್ದವೂ ಅವರು ಹೋರಾಡುತ್ತಿದ್ದಾರೆ .ಶಾಲೆ ,ಕಾಲೇಜುಗಳನ್ನು ಸ್ತಾಪಿಸುತ್ತಿದ್ದಾರೆ ,ಇನ್ನು ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ನೋಡಲು ಮಂಗಳೂರಿನ ಯಾವುದೇ ಕಾಲೇಜಿನ ಎದುರು ಸಾಯಂಕಾಲ ನಿಂತರೆ ತಮಗೆ ಅರಿವಾಗಬಹುದು . ಬಾಲ್ಯವಿವಾಹ ,ಅರಬಿ ವಿವಾಹ ಇದು ತಮ್ಮ ಸ್ವಪೂಲ ಕಲ್ಪಿತ . ಸಮುದಾಯದಲ್ಲಿ ಸುದಾರಣೆಯ ಆವಶ್ಯಕತೆ ಕಂಡಿತಾ ಇದೆ,ಆದ್ರೆ ತಾವೇಳುವಂತೆ ಮೂಲಭೂತವಾದ ಎಂಭ ಕಲ್ಪಿತ ಗುಮ್ಮ ಅಲ್ಲ
  “ಕಾಸರಗೋಡಿನಿಂದ ಮಲಪ್ಪುರಂ ವರೆಗೆ ಸಾಗುವಾಗ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಣಿಸುವ ಭವ್ಯ ಬಂಗಲೆಗಳು, ಅರಮನೆ ಸದೃಶ ಮನೆಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಜ್ಯವೆಲ್ಲರಿಗಳು, ಫ್ಲಾಟುಗಳು ಇವುಗಳಲ್ಲಿ ಶೇ ತೊಂಬತೊಂಬತ್ತು ಮುಸ್ಲಿಮರದೇ. ಮುಸ್ಲಿಮರಿಗೆ ಕೇರಳದಲ್ಲಿ ಶೇ12 (ಎಲ್ಲರಿಗಿಂತ ಹೆಚ್ಚು) ಉದ್ಯೋಗ ಮೀಸಲಾತಿಯೂ ಇದೆ. ಶಿಕ್ಷಣದ ಸವಲತ್ತುಗಳಿವೆ. ವ್ಯಾಪಾರ, ವ್ಯವಹಾರ, ರಾಜಕೀಯ ಎಲ್ಲ ರಂಗಗಳಲ್ಲೂ ಅವರು ಮುಂದಿದ್ದಾರೆ. ಇನ್ನು ಸರಕಾರ ಅವರಿಗಾಗಿ ಏನು ಮಾಡಬೇಕಪ್ಪ? ತಮ್ಮ ಸಂಪತ್ತನ್ನು ಪರೋಕ್ಷವಾಗಿ ಮೂಲಭೂತವಾದವನ್ನು ಉತ್ತೇಜಿಸುವ ಚಟುವಟಿಕೆಗಳಿಗೆ ವ್ಯಯಿಸದೆ ತಮ್ಮ ಸಮಾಜದಲ್ಲಿರುವ ಬಡವರನ್ನು ಉದ್ಧರಿಸಲು ಮುಸ್ಲಿಂ ಶ್ರೀಮಂತರು ಮನಸ್ಸು ಮಾಡಬೇಕು. ಸಮಾಜಸುಧಾರಣೆಗೆ ಅಡ್ಡಿಯಾಗುವ ಸ್ತ್ರೀ ಶೋಷಣೆ ಮೊದಲಾದವನ್ನು ನಿಲ್ಲಿಸಿ ಕುಟುಂಬ ಯೋಜನೆ, ಶಿಕ್ಷಣ ಮೊದಲಾದವಕ್ಕೆ ಒತ್ತು ನೀಡಬೇಕಾದರೆ ಮುಸ್ಲಿಂ ಸಮಾಜದಲ್ಲಿ ಪರಿವರ್ತನೆಯಾಗಬೇಕು”-
  ಇಂದು ಎಲ್ಲಾ ರಂಗಗಳಲ್ಲೂ ಹಿಂದೂ ,ಮುಸ್ಲಿಂ ಮತ್ತು ಕ್ರಿಶೆನ್ ರು ಸಮನಾಗಿ ರಾಷ್ಟ್ರೀಯ ಮುಖ್ಯಧಾರೆಯಲ್ಲಿ ಅನ್ನೋನ್ಯವಾಗಿ ಪ್ರವರ್ತಿಸುವ ಒಂದು ರಾಜ್ಯ ಕೇರಳ . ಅದನ್ನು ಸಹ ಕಲುಷಿತ ಗೊಳಿಸಲು ತಮ್ಮಂತವರು ಪ್ರಯತ್ನಿಸುದು ಅತ್ಯಂತ ಖೇದಕರ !
  “ಆದುದರಿಂದ ಮುಸ್ಲಿಂ ಸಮುದಾಯಕ್ಕೆ ೨೫% ಮೀಸಲಾತಿ ಕೊಡುವುದು ಸುಧಾರಣೆಯ ದೃಷ್ಟಿಯಿಂದ ಉತ್ತಮ-“Nagshetty Shetkar
  ಇದಕ್ಕೆ ತಮ್ಮ ಅಭಿಪ್ರಾಯವೇನು ?

  ” If you are neutral in situations of injustice, you have chosen the side of the oppressor”
  Desmond Tutu ರವರ ಮೇಲಿನ ವಾಕ್ಯ ನನ್ನ ಅಂತರಾತ್ಮವನ್ನು ಸುಮ್ಮನಿರಲು ಬಿಡುವುದಿಲ್ಲ . ಇಲ್ಲಿ ಪ್ರತಿಕಯಿಸಿ ಏನೂ ಪ್ರಯೋಜನವಿಲ್ ಎಂದು ತಿಳಿದೂ ಸಹಾ !
  ಲೇಖಕರ ವಿಚಾರದಾರೆಯವರ ಒಂದು statement ಲೇಖಕರ ಗಮನಕ್ಕೆ-Daiji World-9/12/2014
  “CPM secretary Yadav Shetty pointed out that an entire community should not be blamed for the actions of a few individuals, and that there should be mutual respect between communities.”

  ಈ ಮೇಲಿನ ಮಾತನ್ನೇ ಒಬಾಮರಿಂದ ಹಿಡಿದು ಅನಿತಾರವರ ನಾಯಕರಾದ ,ನಮ್ಮ ಪ್ರಧಾನ ಮಂತ್ರಿ ಶ್ರ್ರೀ ಮೋದಿಜಿಯವರು ಸಹಾ ಪದೇ ಪದೇ ಹೇಳುತ್ತಾ ಇರುತಾರೆ . ಆದ್ರೆ ಅವರ ಅನುಯಾಯಿಗಳು ಅದನ್ನು ಅರ್ಥ್ಯೆಸುತ್ತಿಲ್ಲ

  Reply
  1. Ganesh

   “Look at others and treat them the way that you expect to be treated by others”.

   “Get into other’s shoe and think, if you truly want to understand”.

   Quote: “ಆದುದರಿಂದ ಮುಸ್ಲಿಂ ಸಮುದಾಯಕ್ಕೆ ೨೫% ಮೀಸಲಾತಿ ಕೊಡುವುದು ಸುಧಾರಣೆಯ ದೃಷ್ಟಿಯಿಂದ ಉತ್ತಮ-“Nagshetty Shetkar
   Quote: “ಇದಕ್ಕೆ ತಮ್ಮ ಅಭಿಪ್ರಾಯವೇನು ?” – Salam Bava.
   Reservation for any community will simply undermine the strength of that community and shall prove to against the natural justice.
   If interested we can discuss.

   Reply
 24. M A Sriranga

  ಸಲಾಂ ಬಾವ ಅವರಿಗೆ—ತಾವು ಇರ್ಶಾದ್ ಅವರ ಲೇಖನವನ್ನು ಬಾಲಿಶ ಎಂದು ತೀರ್ಮಾನಿಸಲು ನಾನಾ ರೀತಿಯ ಪಟ್ಟುಗಳನ್ನು ಹಾಕಿದ್ದೀರಿ. ವಿಷಯಕ್ಕೆ ಸಂಬಂಧ ಪಡದ ಬೇರೆ ಬೇರೆ ವಾದಗಳನ್ನು ಮಂಡಿಸಿದ್ದೀರಿ. . ಈ ರೀತಿಯ ಸಮಸ್ಯೆ/ಪ್ರಸಂಗಗಳನ್ನು ಕುರಿತ ಲೇಖನಗಳು ಹಿಂದೂ ಧರ್ಮೀಯರ ಬಗ್ಗೆ ಪ್ರತಿ ದಿನ ದಿನಪತ್ರಿಕೆಗಳಲ್ಲಿ, ಮತ್ತು ಇಡೀ ಕರ್ನಾಟಕದ ಪ್ರಗತಿಪರತೆಯನ್ನು ಗುತ್ತಿಗೆ ಹಿಡಿದವರಂತೆ ಇರುವ ಪ್ರಗತಿಪರರ ಟಾಬ್ಲ್ಯಾಡ್/ಮಾಸಿಕ ಪತ್ರಿಕೆಗಳಲ್ಲಿ ಪ್ರತಿ ವಾರ/ತಿಂಗಳು ಪ್ರಕಟವಾಗುತ್ತಲೇ ಇರುತ್ತವೆ. ಜತೆಗೆ ಕೆಲವು ಸಾಮಾಜಿಕ ಜಾಲ ತಾಣಗಳು (ಬ್ಲಾಗ್) ಇಡೀ ಹಿಂದೂಗಳ ಆಚರಣೆಗಳನ್ನೆಲ್ಲಾ ಟೀಕಿಸುತ್ತಲೇ ಇರುತ್ತವೆ. ಟಿ ವಿ ಗಳ ಪ್ಯಾನೆಲ್ ಚರ್ಚೆಗಳು ಸಹ ಇದೇ ಕೆಲಸದಲ್ಲಿ ನಿರತವಾಗಿರುತ್ತವೆ. ಇತ್ತೀಚೆಗಿನ ಒಂದೆರೆಡು ಪ್ಯಾನೆಲ್ ಚರ್ಚೆಯನ್ನೇ ಗಮನಿಸಿ. (೧) ಗೊಲ್ಲರ ತಾಂಡ್ಯವೊಂದರಲ್ಲಿ ಹೆಣ್ಣಿಗೆ ದೈಹಿಕವಾಗಿ ಸಹಜವಾದ ಮಾಸಿಕ ಮುಟ್ಟಿನ ಮೂರು ದಿನಗಳ ಬಗ್ಗೆ ಅಲ್ಲಿನ ಜನಗಳಲ್ಲಿರುವ ಮೂಢ ಆಚರಣೆ (೨) ಮಡೆ ಸ್ನಾನದ ಬಗೆಗಿನ ಚರ್ಚೆ. ಈ ಎರಡೂ ಆಚರಣೆಗಳು ಇಡೀ ಹಿಂದೂ ಧರ್ಮದ ಆಚರಣೆ ಏನೋ ಎಂಬಂತೆ ಬಿಂಬಿತವಾದವು. ತಮಗೆ ತಿಳಿದಿರುವಂತೆ ಈ ಎರಡು ಆಚರಣೆಗಳು ಕರ್ನಾಟಕದ ಪ್ರತಿ ಹಳ್ಳಿ,ದೇವಸ್ಥಾನಗಳಲ್ಲಿ ನಡೆಯುತ್ತವೆಯೇ? ಇಲ್ಲ. ಹಾಗಾದರೆ ಇವು ಯಾರೋ ಒಂದಷ್ಟು ಜನಗಳ ಧರ್ಮಾಂಧರ , ಮತಿಗೇಡಿಗಳ ಕೆಲಸ ಎಂದು ಬಿಟ್ಟುಬಿಡಲು ಸಾಧ್ಯವೇ? ಯಾವ ಮಠ, ಸ್ವಾಮೀಜಿ ,ದೇವಸ್ಥಾನದ ಹಂಗಿನಲ್ಲಿ ಬಾಳಬೇಕಾದ ಕಟ್ಟುಪಾಡು ಹಿಂದುಗಳಿಗಿಲ್ಲ. ಇಂತಹ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಮುಸ್ಲಿಂ ಜನಾಂಗದವರಿಗಿದೆ? ಇದನ್ನು ಇದುವರೆಗಿನ ಪ್ರತಿಕ್ರಿಯೆಗಳಲ್ಲಿ ಪ್ರಶ್ನಿಸಿದವರನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸಿದ್ದೀರಿ. ಆ ವಿಷಯ ಮಾತಾಡಿದ್ದೆ ಇರ್ಶಾದ್ ಅವರ ತಪ್ಪು ಎನ್ನುತ್ತಿದ್ದೀರಿ. ತಾವು ಭಾರತದಲ್ಲಿ ವಾಸಿಸುತ್ತಿದ್ದೀರೋ,ವಿದೇಶದಲ್ಲಿ ಇದ್ದೀರೋ ತಿಳಿಯದು. ಆದರೆ ನಿಮ್ಮ ಪ್ರತಿಕ್ರಿಯೆಯ ಕೊನೆಯ ಸಾಲುಗಳಲ್ಲೂ ಸಹ ತಾವು ಧರ್ಮದ ಹೆಸರಿನಲ್ಲಿ ನಿಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಆಶಿಸುತ್ತಿದ್ದೀರಿ. ಒಂದು ವೇಳೆ ನೀವು ಭಾರತದಲ್ಲೇ ವಾಸವಾಗಿದ್ದರೆ ಒಮ್ಮೆ ಯೋಚಿಸಿ ನೋಡಿ. ತಮ್ಮ ಆ ಮಾತುಗಳು ಸರಿಯೇ ಎಂದು.

  Reply
 25. Salam Bava

  M A Sriranga- ರವರೇ ನಾನು ಮೊದಲಿನಿಂದಲೂ ಒಂದೇ ಸ್ಟಾಂಡ್ ನಲ್ಲಿ ಗಟ್ಟಿಯಾಗಿ ನಿಂತೀದ್ದೇನೆ .ಲೇಖಕರನ್ನು ಜಸ್ಥಿಫ್ಯ್ ಮಾಡುವ, ತಮ್ಮ ಧರ್ಮದ ಬಗೆಗಿನ ಟೀಕೆಗೆ ಒಂದು ತರಹದ ಅಸಹನೆ ವ್ಯಕ್ತ ಪಡಿಸಿದ್ದಿರಿ ಅದರ ಉದಾಹರಣೆ – “ಈ ರೀತಿಯ ಸಮಸ್ಯೆ/ಪ್ರಸಂಗಗಳನ್ನು ಕುರಿತ ಲೇಖನಗಳು ಹಿಂದೂ ಧರ್ಮೀಯರ ಬಗ್ಗೆ ಪ್ರತಿ ದಿನ ದಿನಪತ್ರಿಕೆಗಳಲ್ಲಿ, ಮತ್ತು ಇಡೀ ಕರ್ನಾಟಕದ ಪ್ರಗತಿಪರತೆಯನ್ನು ಗುತ್ತಿಗೆ ಹಿಡಿದವರಂತೆ ಇರುವ ಪ್ರಗತಿಪರರ ಟಾಬ್ಲ್ಯಾಡ್/ಮಾಸಿಕ ಪತ್ರಿಕೆಗಳಲ್ಲಿ ಪ್ರತಿ ವಾರ/ತಿಂಗಳು ಪ್ರಕಟವಾಗುತ್ತಲೇ ಇರುತ್ತವೆ. ಜತೆಗೆ ಕೆಲವು ಸಾಮಾಜಿಕ ಜಾಲ ತಾಣಗಳು (ಬ್ಲಾಗ್) ಇಡೀ ಹಿಂದೂಗಳ ಆಚರಣೆಗಳನ್ನೆಲ್ಲಾ ಟೀಕಿಸುತ್ತಲೇ ಇರುತ್ತವೆ. ಟಿ ವಿ ಗಳ ಪ್ಯಾನೆಲ್ ಚರ್ಚೆಗಳು ಸಹ ಇದೇ ಕೆಲಸದಲ್ಲಿ ನಿರತವಾಗಿರುತ್ತವೆ. ”
  ನಾನು ಯಾವ ದೇಶದಲ್ಲಿ ವಾಸಿಸಿದರೂ ಭಾರತೀಯನೆ ,ಅದನ್ನು ನಿಮ್ಮಲ್ಲಿ ದ್ರಡೀಕರಿಸುವ ಆವಶ್ಯಕತೆಯಿಲ್ಲ . ನನ್ನ ಅಭಿವ್ಯಕ್ತಿ ಸ್ವಾತಂತ್ರ ವನ್ನು ಮೊಟಕು ಮಾಡುವ ನಿಮ್ಮ ಪ್ರಯತ್ನ ಖಂಡನೀಯ ., ನಿಮ್ಮ ಈ ಕಳಗಿನ ವಾಕ್ಯದ ಅರ್ಥವೇನು –
  “ಆದರೆ ನಿಮ್ಮ ಪ್ರತಿಕ್ರಿಯೆಯ ಕೊನೆಯ ಸಾಲುಗಳಲ್ಲೂ ಸಹ ತಾವು ಧರ್ಮದ ಹೆಸರಿನಲ್ಲಿ ನಿಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಆಶಿಸುತ್ತಿದ್ದೀರಿ. ಒಂದು ವೇಳೆ ನೀವು ಭಾರತದಲ್ಲೇ ವಾಸವಾಗಿದ್ದರೆ ಒಮ್ಮೆ ಯೋಚಿಸಿ ನೋಡಿ. ತಮ್ಮ ಆ ಮಾತುಗಳು ಸರಿಯೇ ಎಂದು.”
  ನನ್ನ ಮೊದಲಿನ ಪ್ರತಿಕ್ರಿಯಯ ಕೊನೆಯ ಸಾಲು ,ಇನ್ನೊಮ್ಮೆ ಸರಿಯಾಗಿ ಓದಿ “ಈ ಮೇಲಿನ ಮಾತನ್ನೇ ಒಬಾಮರಿಂದ ಹಿಡಿದು ಅನಿತಾರವರ ನಾಯಕರಾದ ,ನಮ್ಮ ಪ್ರಧಾನ ಮಂತ್ರಿ ಶ್ರ್ರೀ ಮೋದಿಜಿಯವರು ಸಹಾ ಪದೇ ಪದೇ ಹೇಳುತ್ತಾ ಇರುತಾರೆ . ಆದ್ರೆ ಅವರ ಅನುಯಾಯಿಗಳು ಅದನ್ನು ಅರ್ಥ್ಯೆಸುತ್ತಿಲ್ಲ”
  ಈ ಮೇಲಿನ ಯಾವ ಸಾಲು ತಮಗೆ ನಾನು ಪ್ರತ್ಯೇಕವಾಗಿರಲು ಬಯಸುತ್ತೇನೆ ಎಂದು ತಮಗೆ ಅನಿಸಿದೆ .?ನಾನು ನನ್ನ ಪ್ರತಿಕಿಯಯಾ ಉದ್ದಕೂ ಮುಸ್ಲಿಮರು ರಾಷ್ಟ್ರೀಯ ಪ್ರಧಾನ ದಾರೆಯಲ್ಲಿ ಒಂದಾಗುವುದರ ಕುರಿತು ಬಲವಾಗಿ ಪ್ರತಿಪಾದಿಸಿದ್ದೇನೆ

  ಹಿಂದೂ ಸಮುದಾಯದ ಬಗ್ಗೆ ನಾನು ವಿಶ್ಲೇಷಿ ಸ ಬಯಸುದಿಲ್ಲ ,ಆದ್ರೆ ನಿಮ್ಮ ಅನಿಸಿಕೆಗಳಿಗೆ ಪ್ರತಿಕಯಿಸುತ್ತೇನೆ . ಕ್ಕ್ಷಮಿಸಿ ,ಕೆಲವು ಇಂಗ್ಲಿಷ್ ನಲ್ಲಿವೆ
  kindly look into our innumerable day-to-day issues. The issues of all remain the same, cutting across religious lines. We have poverty, joblessness, bribery, injustice towards women and children, broken families, farmers’ suicides, uncontrolled price rise, health, sanitation, perhaps this list can continue. Dowry has already taken toll of thousands of young girls and still it continues. Violence in the name of cast continues.
  ಭಾರತಿಯ ಹಿಂದೂ ಮತ್ತು ಮುಸ್ಲಿಮರ ಸಾಮಾಜಿಕ ,ನ್ಯತಿಕ ಮತ್ತು ಆರ್ಥಿಕ ತಲ್ಲಣಗಳು ಸಾದಾರಣ ಒಂದೇ . ಆದರೆ ದಾರ್ಮಿಕ ವಾಗಿ ಹಿಂದೂ ಧರ್ಮದಲ್ಲಿರುವಸ್ಟು ಜಿಜ್ಞಾಸೆಗಳು ಇಸ್ಲಾಮ್ನಲ್ಲಿಲ್ಲ . ಹಿಂದುಗಳಲ್ಲಿರುವ ವರ್ಣಭೇದ ,ಮನುವಾದ ,ಜಾತೀಯತೆ ,ಪುರೋಹಿತಶಾಹಿ ,ಮೂಡನಂಬಿಕೆ ಮುಂತಾದವುಗಳು -ಮುಸ್ಲಿಮರಲಿಲ್ಲ . ಅವರಲ್ಲಿರುವ ದಾರ್ಮಿಕ ಸಮಸ್ಯೆಗಳೆಂದರೆ – ಧಾರ್ಮಿಕ ಅತಿರೇಕತೆ ,ಔಟ್ಡೇಟೆಡ್ ಮೌಳವಿಗಳ ಐಡಿಯಾ ಗಳಿಗೆ ಅತಿ ಮಾನ್ಯತೆ ,ವರದಕ್ಷಿಣೆ ಆದುನಿಕ ಶಿಕ್ಣನಕ್ಕೆ ತೆರೆದುಕೊಳ್ಳದಿರುವಿಕೆ ಇತ್ಯಾದಿ .
  ಸಮುದಾಯದ ಒಂದು ದೊಡ್ಡ ಯುವ ಪೀಳಿಗೆ ಈ ಎಲ್ಲಾ ಸಮಸ್ಯೆಗಳ ವಿರುದ್ದ ನಿರಂತರ ಹೋರಾಟ ನಡೆಸುತ್ತಿದೆ ,ಕೇವಲ ಬ್ಲಾಗ್ನಲ್ಲಿ ಏನನ್ನೂ ಭಾಲಿಶವಾಗಿ ಬರೆದು ಸಮುದಾಯ ವಿರೋದಿಗಳ ಶಾಬ್ಹಾಸ್ ಗಿಟ್ಟಿಸುವುದೇ ಸಾದನೆ ಅಂಥ ಅವರು ಆಶಿಸುದಿಲ್ಲ !
  ಇನ್ನು ನಾಡೋಜ ನಿಸಾರ್ ರವರು ಶ್ರೀರಂಗ ಅಂಥವರನ್ನೇ ನೋಡಿ -“ನಿಮ್ಮೊಡನಿದ್ದೂ ನಿಮ್ಮಂತಾಗದೆ “ಕವನ ಬರೆದದ್ದಾ ಎಂದು ನನಗೆ ಸಂಶಯ !

  Reply
 26. M A Sriranga

  ಸಲಾಂ ಬಾವ ಅವರಿಗೆ– (೧) ನನ್ನ ಪ್ರತಿಕ್ರಿಯೆಯಲ್ಲಿ ತಮಗೆ ನನ್ನನ್ನು ಟೀಕಿಸಲು ಎಷ್ಟು ಅವಶ್ಯವೋ ಆ ವಾಕ್ಯಗಳನ್ನು ಮಾತ್ರ ತಾವು ತೆಗೆದುಕೊಂಡಿದ್ದೀರಿ. “ಈ ರೀತಿಯ ಸಮಸ್ಯೆ/ಪ್ರಸಂಗಗಳನ್ನು ಕುರಿತ ……………… ಟಿ ವಿ ಗಳ ಪ್ಯಾನೆಲ್ ಚರ್ಚೆಗಳು ಸಹ ಇದೆ ಕೆಲಸದಲ್ಲಿ ನಿರತವಾಗಿರುತ್ತವೆ”. ಇದರ ನಂತರದ ವಾಕ್ಯಗಳನ್ನು ತಾವು ಏಕೆ ಗಮನಿಸಲಿಲ್ಲ?
  (೨) ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನೇಕೆ ಮೊಟಕುಗೊಳಿಸಲಿ? ಮೊಟಕುಗೊಳಿಸಲು ನಾನು ಯಾರು? ನಿಮ್ಮ ಈ ಕಲ್ಪನೆ ಅದ್ಭುತವಾಗಿದೆ!!!
  (೩) “ಅನಿತಾರವರ ನಾಯಕರಾದ” ಎಂಬ ಸಾಲಿನ ಔಚಿತ್ಯವೇನು? ಅದರ ಅವಶ್ಯಕತೆಯೇ ಇರಲಿಲ್ಲ ಅಲ್ಲವೇ? ಇದನ್ನು ನಾನು ಹೇಳಿದಾಕ್ಷಣ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಮೊಟಕು ಮಾಡಿದ್ದೇನೆ ಎಂದು ಅರ್ಥವೇ? ನೀವು ಆ ರೀತಿ ಅರ್ಥ ಮಾಡಿಕೊಂಡು ಕೋಪಗೊಂಡರೆ ಅದು ನನ್ನ ತಪ್ಪಲ್ಲ.
  (೪) ತಾವೇ ಪಟ್ಟಿ ಮಾಡಿರುವ ಮುಸ್ಲಿಂ ಜನಾಂಗದ ಸಾಮಾಜಿಕ ಮತ್ತು ಧಾರ್ಮಿಕ ಸಮಸ್ಯೆಗಳ ಬಗ್ಗೆ ಬ್ಲಾಗ್ ಒಂದರಲ್ಲಿ ಬರೆದಾಕ್ಷಣ ಅದು ಹೇಗೆ ತಪ್ಪಾಗುತ್ತದೆ? ಆ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ತಮ್ಮಂತಹ ಯುವ ಪೀಳಿಗೆ ಇರ್ಶಾದ್ ಮತ್ತು ಅವರಂತಹ critical insiderಗಳ ಬಗ್ಗೆ ತೆರೆದ ಮನಸ್ಸಿನವರಾಗಿರಬೇಕು. ಅಂತಹವರನ್ನು T R P ಗಾಗಿ, ಶಬ್ಬಾಸ್ ಗಿಟ್ಟಿಸುವುದಕ್ಕೆ ಬರೆಯುತ್ತಿದ್ದಾರೆ ಎಂದು ಹಂಗಿಸಬಾರದು ಅಲ್ಲವೇ?
  (೫) ನಿಸಾರ್ ಅಹಮದ್ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಅವರ ‘ನಿತ್ಯೋತ್ಸವ’ (ಸಂಗೀತ ಸಂಯೋಜನೆ–ಮೈಸೂರು ಅನಂತಸ್ವಾಮಿ) ಕ್ಯಾಸೆಟ್ ಕನ್ನಡದ ಭಾವಗೀತೆಗಳ ಪ್ರಪ್ರಥಮ ಧ್ವನಿ ಸುರುಳಿ. ಅವರು ‘ಬೆಣ್ಣೆ ಕದ್ದ ಕೃಷ್ಣನ ಬಗ್ಗೆ; ಕವಿತೆ ಬರೆದಿರುವಂತೆ “ಬುರ್ಖಾ” ಬಗ್ಗೆಯೂ ಕವಿತೆ ಬರೆದಿದ್ದಾರೆ. ನೀವು ಉದಾಹರಿಸಿರುವ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಕವನವನ್ನು ನಾನು ಸುಮಾರು ಮೂವತ್ತೈದು ವರ್ಷಗಳ ಹಿಂದೆ ಕಾಲೇಜಿನಲ್ಲಿದ್ದಾಗ ಓದಿದ್ದೇನೆ. ಈಗ ಆ ಕವಿತೆಯ ವಿವರಗಳು ನೆನಪಿನಲ್ಲಿಲ್ಲ.

  Reply
  1. Salam Bava

   ನೀವು ಎತ್ತಿದ ಎಲ್ಲಾ ಎಲ್ಲಾ ಸಂಶಯ ಗಳಿಗೂ ನಾನು ಈ ಮೊದಲೇ ಪ್ರತಿಕಯಿಸಿದ್ದೇನೆ. ನೀವು ಪದೇ ,ಪದೇ ಅದನ್ನೇ ಕೇಳುವುದು ನಾನು ಅದನ್ನೇ ಉತ್ತರಿಸಿವುದು !”ನಿದ್ದ್ರೆ ಮಾಡುವವರನ್ನು ಎಚ್ಹರಿಸಬಹುದು ,ಆದರೆ ನಿದ್ರೆ ಅಭಿನಯಿಸುವವರನ್ನ ಸಾದ್ಯವಿಲ್ಲ “.ನೀವು ಸುಮ್ಮನೆ ಸೌಹಾರ್ದ ಕಟ್ಟುವ ಕೆಲಸ ಮಾಡಿ ,ನೋಡಿ ಅದರಲ್ಲಿ ಎಂಥಾ ತ್ರಪ್ತಿ ಸಿಗುತ್ತೆ ಅಂತಾ !ಡೆಲ್ಲಿ ಯಲ್ಲಿ ಮಂತ್ರಿ ಗಳಿಂದ ಹಿಡಿದು ಹಳ್ಳಿಯ ರೌಡಿ ಶೀಟರ ಗಳವರಗೆ ನಿಮ್ಮ ಧರ್ಮೀಯರು ಕೊಡುವ ದ್ವೇಷ ಪೂರಿತ ಹೇಳಿಕೆ,ಅವರು ನಡೆಸುವ ದಾಂದಲೆಗಳು ,ಆಗ್ರಾದಲ್ಲಿ ನಡೆಸುವ ಫೋರ್ಸೆದ್ ಮತಾಂತರ, ಕೆ ಲಸ ಮುಗಿಸಿ ತನ್ನ ಹೆಂಡತಿ ಮಕ್ಕಳ ಮುಖ ನೋಡಲು ಬರುವವರನ್ನು ಚಾಕು ಹಾಕಿ ಅವರನ್ನು ಮನೆಯಲ್ಲೇ ಮಲಗಿಸುವಂತಹ ಕೆಲಸ ಮಾಡುವ ,ದುಡಿದು ತಿನ್ನುವವರಿಗೆ,ದುಡಿಯುವ ವಾಹನಕ್ಕೆ ಬೆಂಕಿ ಕೊಡುವುದು ಅಂಗಡಿಗಳಿಗೆ ಬೆಂಕಿ ಹಚ್ಚುವುದು-ಇಂಥವರನ್ನುತಮ್ಮಂಥ ವಿದ್ಯಾವಂತ ಪ್ರಜೆಗಳು ಹೀರೋ ಗಳಾಗಿ ಮಾದ್ಡೇ ಇದರ ವಿರುದ್ದ ಪ್ರತಿಭಟಿಸಿ ,ಯಾಕೆಂದರೆ ಈ ಕ್ರತ್ಯಗಳಿಂದ ನಮ್ಮ ಅಖಂಡ ದೇಶದ ಭವಿಷ್ಯಕ್ಕೆ ಅಪಾಯವಿದೆ . ಅದು ಬಿಟ್ಟು ಓರ್ವ ಮೊರ್ಖನ ಕಪಾಳಮೋಕ್ಷ ವನ್ನು ವ್ಯಭವಿಕರಿಸಿ ಸಾದಿಸುದೇನು ?
   ಅಂದ ಹಾಗೆ ನನ್ನಲಿ ನಿಸಾರ ರ ಕಾವ್ಯ ಇದೆ ,ನಿಮ್ಮ ಇಮೇಲ್ ಅಡ್ರೆಸ್ ಕೊಟ್ಟರೆ ಮೇಲ್ ಮಾಡುವೆ . ಅದರ ಒಂದು ಸಾಲು
   “ಒಳಗೊಳಗೆ ಬೇರುಕೊಯ್ದು
   ಲೋಕದೆದುರಲ್ಲಿ ನೀರು ಹೊಯ್ದು
   ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
   ಗೊತ್ತಿಲ್ಲದಂತೆ ನಟಿಸಿ
   ಚಕಾರವೆತ್ತದೆ ನಿಮ್ಮೊಡೆನೆ ಕಾಪಿಹೀರಿ ಪೆಪರೋದಿ ಹರಟಿ
   ಬಾಳ ತಳ್ಳುವುದಿದೆ ನೋಡಿ
   ಅದು ಬಲು ಕಷ್ಟದ ಕೆಲಸ ”
   ಓರ್ವ ಟರ್ಕಿಯ ಯುವ ಕವಿ ಯೆಹುದ್ಯ್ರರ ಕುರಿತಾಗಿ ಸಹ ಇದೇ ಅರ್ಥ ಬರುವ ಕೆಲವು ಸಾಲು ಬರೆದಿದ್ದ . ಶ್ರೀರಂಗರೇ ನಿಮ್ಮೊಡನೆ ಚರ್ಚೆ ಖುಷಿ ತರುತ್ತದೆ ,ಸಮಾನ ಮನಸ್ಕರೊಂದಿಗಿನ ಒಂದು ಬ್ಯಠಕ್ ಎಂಬಥ ಭಾವನೆ ತರಿಸುತ್ತದೆ

   Reply
 27. ಅನಿತಾ

  ಸಲಾಂ ಬಾವಾ ಅವರೇ, ನಾನು ಮೋದಿಯವರು ನನ್ನ ನಾಯಕ ಎಂದು ಎಲ್ಲೂ ಹೇಳಿಲ್ಲ. ಹಾಗೆ ನೀವು ವಿಷಯಾಂತರಿಸುತ್ತಿರುವುದು ಹತಾಶೆಯಿಂದ ಎಂದು ಭಾವಿಸುತ್ತೇನೆ. ಇನ್ನು ನಾಗ್ ಶೆಟ್ಟಿ ಮತ್ತು ನಿಮ್ಮ ಜಂಟಿ ಸವಾಲಿಗೆ (ಮುಸ್ಲಿಮರಿಗೆ ಶೇ 25 ಮೀಸಲಾತಿ) ನನ್ನದೇನೂ ಅಭ್ಯಂತರವಿಲ್ಲ. 25 ರ ಬದಲು 50 ಎಂದು ಹೇಳಿಕೊಂಡರೂ ತಪ್ಪೇನಿಲ್ಲ. ಆಗ ಹಿಂದುಳಿದವರು ಹಾಗೂ ದಲಿತರ ಮೀಸಲಾತಿ ಸೊನ್ನೆ ಆಗುತ್ತದೆ. (ಒಟ್ಟು ಮೀಸಲಾತಿ ಶೇ 50 ಮೀರಬಾರದು- ಸುಪ್ರೀಂಕೋರ್ಟ್) ಕೇರಳದಲ್ಲಿ ಮುಸ್ಲಿಮ‍್ ಮೂಲಭೂತವಾದಿಗಳು ಎಡ ಬಲರಂಗಗಳ ಮೇಲೆ ಹಿಡಿತ ಸಾಧಿಸಿ ತಮ್ಮ ಬ್ಲಾಕ್ ಮೇಲ್ ರಾಜಕೀಯದಿಂದ ಅಪರಿಮಿತ ಸವಲತ್ತುಗಳನ್ನು ಪಡೆದುಕೊಂಡು ಹಿಂದುಳಿದ ಮತ್ತು ದಲಿತರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿರುವುದರ ವಿರುದ್ಧ ಧ್ವನಿಯೆತ್ತುತ್ತಿರುವವರು ಎಸ್ ಎನ್ ಡಿ ಪಿ (ಬಿಲ್ಲವ,ತೀಯಾ,ಈಳವ ಸಂಘಟನೆ) ದೀವಾರ (ಮೀನುಗಾರ) ಸಮುದಾಯ ಮೊದಲಾದ (ಹೆಚ್ಚಾಗಿ ಎಡಪಂಥೀಯ ಒಲವುಳ್ಳ) ಹಿಂದುಳಿದವರೇ ಆಗಿದ್ದಾರೆ. ಹೀಗೆ ವಿರೋಧಿಸಲು ಮೋದಿ ಹೇಳಿಕೊಟ್ಟದ್ದಲ್ಲ. ಯಾಕೆಂದರೆ ಮೋದಿಯವರಿಗೆ ಕೇರಳದಲ್ಲಿ ಯಾವ ಪ್ರಭಾವವೂ ಇಲ್ಲ. ಮುಸ್ಲಿಮರಿಗೆ ಎಲ್ಲ ಹಿಂದುಳಿದ ವರ್ಗಗಳಿಗಿಂತ ಹೆಚ್ಚು ಮೀಸಲಾತಿಯನ್ನು (ಶೇ12) ಕೇರಳದಲ್ಲಿ ನೀಡಲಾಗಿದೆ. ಅದೇ ಸರಿಯಲ್ಲ ಎಂದು ಅವರಿಗಿಂತ ಹಿಂದುಳಿದ ಇತರ ಹಿಂದುಳಿದವರು ಗೊಣಗಾಡುತ್ತಿದ್ದಾರೆ. ಇನ್ನು ನೀವು ಅದನ್ನು ಡಬಲ್ ಮಾಡಿ ಶೇ 25ಕ್ಕೆ ಏರಿಸಬೇಕೆಂದರೆ ನನ್ನ ಅಭಿಪ್ರಾಯ ಯಾಕೆ ಕೇಳುತ್ತೀರಿ? ಯಾವತ್ತೂ ಮೋದಿಯನ್ನು ಅಧಿಕಾರಕ್ಕೆ ತಾರದ, ಕಮ್ಯುನಿಸ್ಟ್ ಕಾಂಗ್ರೆಸ್ ಒಲವುಳ್ಳ ಹಾಗೂ ಸಲಾಂಬಾವಾರು ವರ್ಣಿಸುವಂತೆ ಹಿಂದೂ ಮುಸ್ಲಿಂ ಕ್ರೈಸ್ತ ಮತೀಯರು ಸಮಾನವಾಗಿ ರಾಷ್ಟ್ರೀಯ ಮುಖ್ಯಧಾರೆಯಲ್ಲಿ ಅನ್ಯೋನ್ಯವಾಗಿ ಪ್ರವರ್ತಿಸುವ ಕೇರಳದಲ್ಲಿ ಮುಸ್ಲಿಮೇತರ ಜನರು ಇದಕ್ಕೆ ಏನು ಹೇಳುತ್ತಾರೆ ಎಂದು ಅವರ ಅಭಿಪ್ರಾಯ ಮೊದಲು ಕೇಳಿ. (ಮುಂದಿನ ಚುನಾವಣೆಯಲ್ಲಿ ಮುಸ್ಲಿಮರಿಗೆ 25ಶೇ ಮೀಸಲಾತಿ ಕೊಡುತ್ತೇವೆಂದು ಇದೇ ಮೋದಿಯೇತರ ಪಕ್ಷಗಳು ಪ್ರಣಾಳಿಕೆ ರೂಪಿಸಿ ಜನರ ಬಳಿ ಓಟು ಕೇಳಬಹುದಲ್ಲ. ಅನ್ಯೋನ್ಯವಾಗಿ ವರ್ತಿಸುವ ಜನರು ಅದನ್ನು ಬೆಂಬಲಿಸಲಾರರೆ?) ಸಮುದಾಯ ಸಂಘಟನೆಗಳು ಮುಸ್ಲಿಂ ಮಹಿಳೆಯರನ್ನು ನಾಮಕಾವಸ್ತೆ ವಿದ್ಯಾವಂತರನ್ನಾಗಿ ಮಾಡಿದರೆ ಸಾಲದು, ಅವರನ್ನು ವೈಚಾರಿಕ ಶಕ್ತಿ ಬೆಳೆಸಿಕೊಳ್ಳುವಂತೆಯೂ ಉತ್ತೇಜಿಸಬೇಕಿದೆ. ಮುಸ್ಲಿಂ ಗಂಡಸರು ಧರ್ಮದ ಹೆಸರಲ್ಲಿ ಮಾಡುವ ಶೋಷಣೆ ವಿರುದ್ಧ ಸಿಡಿದೇಳುವ ವಾತಾವರಣವನ್ನೂ ನಿರ್ಮಿಸಬೇಕಿದೆ (ಇಲ್ಲದಿದ್ದರೆ ಕೆಲವು ಗ್ರಾಮಪಂಚಾಯತ್ ಗಳಲ್ಲಿ ಕಂಡುಬರುವಂತೆ ಹೆಸರಿಗೆ ಹೆಂಡತಿ ಅಧ್ಯಕ್ಷೆ ಆದರೆ ಪುರುಷನ ಅಂದರೆ ತನ್ನ ಗಂಡನ ರಬ್ಬರ್ ಸ್ಟಾಂಪ್ ಎನ್ನುವಂತೆ ಆಗುತ್ತದೆ. ಇದು ಹಿಂದೂ ಮಹಿಳೆಯರಿಗೂ ಅನ್ವಯ) ಅರಬೀಕಲ್ಯಾಣ, ಬಾಲ್ಯವಿವಾಹದ ಬಗ್ಗೆ ಕಫೋಲಕಲ್ಪಿತ ಎಂದು ಹೇಳಿ ನೀವು ಕರ್ನಾಟಕದ ಓದುಗರನ್ನು ನಂಬಿಸಬಹುದು. ಆದರೆ ಕೇರಳದವರನ್ನಲ್ಲ. ಹಾಗಾದರೆ ಎಡಪಂಥೀಯರ ಕೈರಳಿ ಟಿವಿ ಸಹಿತ ಕೇರಳದ ಟಿವಿ ಚಾನೆಲ್ಲುಗಳೂ ದೇಶಾಭಿಮಾನಿ ಸಹಿತ ಇಲ್ಲಿನ ಪತ್ರಿಕೆಗಳೂ ಸುಳ್ಳು ಹೇಳುತ್ತವೆ ಎಂದಾಯಿತು( ಇಂತಹ ಸಂಚಿಕೆ ದಿನಾಂಕ ಎಂದು ಸಾಕ್ಷ್ಯ ಒದಗಿಸಲು ಫಕ್ಕನೆ ಸಾಧ್ಯವಾಗುತ್ತಿಲ್ಲ. ಆದರೆ ಕೇರಳದ ಪತ್ರಕರ್ತರನ್ನು ನೀವು ವಿಚಾರಿಸಿ ತಿಳಿದುಕೊಳ್ಳಬಹುದು.) ಕೇರಳದ ಮುಸ್ಲಿಂ ಮೂಲಭೂತವಾದಿಗಳು ಮುಸ್ಲಿಂ ಕನ್ನಿಕೆಯರ ವಿವಾಹಪ್ರಾಯವನ್ನು ಈಗಿನ ಹದಿನೆಂಟರಿಂದ ಹದಿನೈದಕ್ಕೆ ಇಳಿಸಬೇಕೆಂದು ಸುಪ್ರೀಂಕೋರ್ಟಿನ ಮೊರೆಹೋಗಲೂ ಸಿದ್ದವಾಗಿದ್ದರ ಬಗ್ಗೆ ಏಷಿಯಾನೆಟ್ ಚಾನೆಲಿನಲ್ಲಿ ನಡೆದ ಅರ್ಧಗಂಟೆ ಚರ್ಚೆ ನಾನೂ ವೀಕ್ಷಿಸಿದ್ದೆ. ಪ್ರಭಾವಿಗಳಾದ ಮುಸ್ಲಿಂ ಧರ್ಮಗುರುಗಳು ಹಾಗೂ ರಾಜಕೀಯ ನಾಯಕರು ಅದನ್ನು ಸಮರ್ಥಿಸಿಕೊಂಡಿದ್ದರೆ ಮುಸ್ಲಿಂ ಯೂತ್ ಲೀಗ್ ನಾಯಕರೊಬ್ಬರು ಮಾತ್ರ ವಿರೋಧಿಸಿದ್ದರು. ಕೇರಳದ ಹಾಗೂ ಭಾರತದ ರಾಜಕೀಯದಲ್ಲಿ ಮುಸ್ಲಿಂ ಮೂಲಭೂತವಾದಿಗಳ ಪ್ರಭಾವ ಸಾಕಷ್ಟಿದೆ. (ಶಾಬಾನು ಪ್ರಕರಣದ ಹಿಂದೆ ಇದ್ದುದು ಇದೇ ಮೂಲಭೂತವಾದಿಗಳ ಒತ್ತಡವಲ್ಲವೆ) ಮುಸ್ಲಿಂ ಸೇವಾಸಂಸ್ಥೆಗಳು ಶಿಕ್ಷಣಸಂಸ್ಥೆಗಳು ಕಾರ್ಯಾಚರಿಸುತ್ತಿದ್ದರೆ ಒಳ್ಳೆಯದೇ. ಆದರೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಕೇವಲ ಇನ್ನೊಂದು ಬಿಸಿನೆಸ್ ನ ರೂಪ ಆಗಿ ವಿಚಾರವಂತ ಯುವಕರ ಬದಲು ಡಿಗ್ರಿ ಪಡೆದ ಮೂಲಭೂತವಾದಿಗಳನ್ನು ಸೃಷ್ಟಿಸಿದರೆ ಸಮಾಜಕ್ಕೆ ಉಪಯೋಗವಿಲ್ಲ ಹಾನಿಯೇ ಹೆಚ್ಚು(ಯಾವ ಮತದಲ್ಲಾದರೂ). ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಆ ಧರ್ಮದಲ್ಲಿ ಸಮಾನ ಸ್ಥಾನ ನೀಡಿದ್ದೀರಾ? ಹಾಗಾದರೆ ಅವರು ದಲಿತ ಮೀಸಲಾತಿ ಕೇಳುವುದೇಕೆ? ಇದನ್ನು ಯೋಚಿಸಿದ ಬಳಿಕ ಜಾತೀಯತೆ ಇದೆಯೋ ಇಲ್ಲವೋ ಹೇಳಿ. ನಾನು ಎಡಪಂಥದ ವಿರೋಧಿಯಲ್ಲ. ಶಿಕ್ಷಣದ ಪ್ರಾಮುಖ್ಯ ಸಮಾನತೆ ಮೊದಲಾದ ಕೆಲವು ತತ್ವಗಳು ಚೆನ್ನಾಗಿವೆ. ಆದರೆ ಎಡಪಂಥದ ಮುಖವಾಡವನ್ನು ಧರಿಸಿದ ಕೆಲವು ಮುಸ್ಲಿಂ ಮೂಲಭೂತವಾದಿ ಒಲವುಗಳು ಎಡಪಂಥದ ನಿಖರತೆಯನ್ನೂ ನಿಷ್ಪಕ್ಷಪಾತ-ನಿರ್ಭಯತೆಯನ್ನೂ ನಾಶಮಾಡಿ ಎಡಪಂಥವನ್ನೂ ಇನ್ನೊಂದು ಮೂಲಭೂತವಾದವನ್ನಾಗಿ ಪರಿವರ್ತಿಸುತ್ತಿರುವುದು ಆತಂಕಕಾರಿ ಎನಿಸುತ್ತದೆ. ಹಿಂದೂ ಮೂಲಭೂತವಾದದಿಂದಲೇ ಮುಸ್ಲಿಂ ಮೂಲಭೂತವಾದ ಬೆಳೆಯುವುದು ಎಂದು ಸಮಾಧಾನ ಪಡುವ ಮುಸ್ಲಿಂ ಒಲವುಳ್ಳ ಎಡಪಂಥೀಯರಿದ್ದಾರೆ. ಅವರಿಗೆ ನನ್ನ ಪ್ರಶ್ನೆ-ಹಿಂದೂ ಧರ್ಮವೇ ಇಲ್ಲದ ದೇಶಗಳಲ್ಲಿ, ಮೋದಿಯ ಪ್ರಭಾವವೇ ಇಲ್ಲದ ಕೇರಳದಂತಹ ಜಾತ್ಯತೀತ ರಾಜ್ಯದಲ್ಲಿ ಮುಸ್ಲಿಂ ಮೂಲಭೂತವಾದ ಬೆಳೆಯಲು ಕಾರಣವೇನು? ಮುಸ್ಲಿಂ ಮೂಲಭೂತವಾದವನ್ನು ನಿರ್ಲಕ್ಷಿಸಿ ಮುಚ್ಚಿಹಾಕಲು ಅಥವಾ ಸಮಾಧಾನಪಟ್ಟುಕೊಳ್ಳಲು ಅದಕ್ಕೆ ಹಿಂದೂ ಮೂಲಭೂತವಾದ ಕಾರಣ, ಅಮೇರಿಕಾ ಕಾರಣ, ನಿರುದ್ಯೋಗ-ಬಡತನ-ವಿದ್ಯಾಹೀನತೆ ಕಾರಣ ಎನ್ನಲಾಗುತ್ತದೆ. ಹೀಗೆ ಸಂರಕ್ಷಣೆ ನೀಡುವುದು ಮುಸ್ಲಿಂ ಮೂಲಭೂತವಾದದ ಪ್ರೋತ್ಸಾಹಕ್ಕೆ ಹಾಗೂ ಬೆಳವಣಿಗೆಗೆ ಕಾರಣವಾಗುತ್ತದೆ. ಗಾಂಧೀಜಿಯವರು ವಿದೇಶಿ ಬ್ರಿಟಿಷರ ವಿರುದ್ಧವೂ ಅಸ್ಪೃಶ್ಯತೆ ಆಚರಿಸುವ ಸ್ವದೇಶಿಗಳ ವಿರುದ್ದವೂ ಏಕಕಾಲದಲ್ಲಿ ಹೋರಾಡಿದರು. ಈವತ್ತು ಎಡಪಂಥೀಯರು ಮುಸ್ಲಿಂ ಮೂಲಭೂತವಾದದ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳುವ ಬದಲು ಏಕಕಾಲದಲ್ಲಿ ಹಿಂದೂ-ಮುಸ್ಲಿಂ ಮೂಲಭೂತವಾದಗಳೆರಡರ ವಿರುದ್ಧ ಹೋರಾಡುವ ಧೈರ್ಯ ತೋರದಿರುವುದು ವಿಪರ್ಯಾಸ.

  Reply
  1. Nagshetty Shetkar

   ಹಿಂದುಳಿದ ಜಾತಿಗಳನ್ನು ಮುಸಲ್ಮಾನರ ವಿರುದ್ಧ ಎತ್ತಿ ಕಟ್ಟುವುದು ಬಲಪಂಥೀಯರ ಹಳೆಯ ತಂತ್ರವೇ ಆಗಿದೆ. ಇದು ಇತ್ತೀಚಿಗೆ ಮರು ಹುಟ್ಟನ್ನು ಕಂಡುಕೊಂಡಿದೆ. ಹಿಂದುಳಿದ ಜಾತಿಗಳೂ ಮುಸಲ್ಮಾನರು ಅಣ್ಣ ತಮ್ಮಂದಿರು ಎನ್ನಬಹುದು. ಮುಸಲ್ಮಾನರು ಒಂದು ಕಾಲದಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದವರೇ ಆಗಿದ್ದರು. ಅವರೆಲ್ಲರೂ ಶ್ರೇಣಿಕೃತ ಹಿಂದೂ ಸಮಾಜದಲ್ಲಿ ಸಿಗದ ಸಾಮಾಜಿಕ ನ್ಯಾಯವನ್ನು ಅರಸಿ ಇಸ್ಲಾಂಗೆ ಮತಾಂತರಗೊಂಡರು. ಅಣ್ಣ ತಮ್ಮಂದಿರ ನಡುವ ಕಲಹ ತಂದಿಟ್ಟರೆ ಕುಟುಂಬವೇ ಕುಸಿದು ಬೀಳುತ್ತದೆ ದ್ವೇಷಾಗ್ನಿ ಮೆರೆದು ಎಲ್ಲವನ್ನೂ ಸುಟ್ಟು ಮನುಷ್ಯತ್ವವನ್ನು ಬೂದಿಯಾಗಿಸುತ್ತದೆ. ಬಲಪಂಥೀಯರ ಕುಟಿಲ ತಂತ್ರಕ್ಕೆ ಬಗ್ಗದೆ ಒಗ್ಗಟ್ಟನ್ನು ತೋರಿಸುವುದು ಇಂದಿನ ಅನಿವಾರ್ಯತೆಯಾಗಿದೆ.

   Reply
  2. Salam Bava

   ನಿ ಮ್ಮ ಎಲ್ಲಾ ಫ್ರಶ್ತ್ನೆ ಗಳಿಗೂ ನಾಗಶೇಟ್ ರವರು ಅತ್ಯಂತ ಸಮಂಜಸ ಉತ್ತರ ಕೊಟ್ಟಿದಾರೆ . ಇನ್ನು ನೀವು ಕೇರಳದವರಾದರೆ ಅಲ್ಲಿಯ ಯಾವುದಾದರೂ ವೇದಿಕೆಯಲ್ಲಿ ನೀವು ಅವರಲ್ಲಿ ಈ ಎಲ್ಲ್ಲಾ ಪ್ರಶ್ನೆ ಇಡಬಹುದು ,ಯಾಕೆಂದರೆ ಅಲ್ಲಿಯ ಜನರು ಬೌದ್ದಿಕವಾಗಿ ತುಂಬಾ ಪ್ರಜ್ಞಾವಂತರು . ಮೀಸಲಾತಿ ಎಂಬುದು ಒಂದು ಪರಿಹಾರವಲ್ಲ ,ಆದರೆ ಯಾವುದೇ ಸಮುದಾಯದ ಹಿಂದುಳಿವಿಕೆಯನ್ನು ಸ್ವಲ್ಪ ಪುಶ್ ಮಾಡಿ ಒಂದರೆಡು ಹೆಜ್ಜೆ ಮುಂದೆ ತರುವ ಒಂದು ಪ್ರಕ್ರಿಯೆ ಎಂದು ನನ್ನ ಅನಿಸಿಕೆ . ಅಲ್ಲಿಯ ಒಬ್ಬರು ಮದ್ಯ ದೊರೆ ಹಿಂದುಳಿದವರ ಹೆಸರಲ್ಲಿ ಸ್ವಲ್ಪ ಹೇಳಿಕೆ ಕೊಟ್ಟರು ,ಆದ್ರೆ ಪ್ರಜ್ನಾವಂತರಾದ ಈಳವ ಸಮುದಾಯ ಅದಕ್ಕೆ ಯಾವುದೇ ಸೊಪ್ಪು ಹಾಕಲಿಲ್ಲ ಮತ್ತು ಮಾರ್ಕ್ಷ್ವಾದಿಗಳು ಸಹಾ ಆ ಒಂದು ಸಮುದಾಯ ಸಂಘ್ಟಟನೆಯ ನಾಯಕರ ಮತೀಯ ಸೌಹಾರ್ದಾ ಕೆಡಿಸಿ ,ಸಂಘ್ ಪರಿವಾರಕ್ಕೆ ಮಣೆ ಇಕ್ಕುವ ಕಾರ್ಯ ವನ್ನು ನಡೆಯಗೊಡಲಿಲ್ಲ . ಯು . ಆರ್ . ಅನಂತಮೂರ್ತಿ ಯವರು ಸಹಾ ಕೇರಳದ ಸೌಹರ್ದಾತೆಯನ್ನು ,ಅವರ ಭಾಷಾ ಪ್ರೇಮವನ್ನು ತುಂಬಾ ಇಷ್ಟ ಪಡುತ್ತಿದ್ದರು !

   Reply
   1. Nagshetty Shetkar

    ಚರ್ಚೆ ಹಾದಿ ತಪ್ಪಿ ಗೋಹರ್ ಹಲ್ಲೆಯಿಂದ ದೂರ ಸರಿದು ಎಲ್ಲೆಲ್ಲೋ ಹೋಗುತ್ತಿದೆ (ಮುಂಬಯಿಯಿಂದ ಕೇರಳಕ್ಕೆ ಸಾಗಿ ಅರಬ್ಬೀ ಸಮುದ್ರದ ತಡಿ ಸೇರುತ್ತಿದೆ ಅನ್ನಬಹುದು!). ಒಬ್ಬ ಹೆಣ್ಣು ಮಗಳ ಮೇಲೆ ಹಲ್ಲೆ, ಅದರ ಘೋಷಿತ ಕಾರಣ ಯಾವುದೇ ಇರಲಿ, ಖಂಡಿತ ಅಪರಾಧ. ಆ ಅಪರಾಧಕ್ಕೆ ಕಾನೂನು ಪ್ರಕಾರ ಹಲ್ಲೆಕೋರನಿಗೆ ಸಿಗತಕ್ಕದ್ದು. ಗೋಹರ್ ಖಾನ್ ಹಲ್ಲೆಯ ಹಿಂದೆ ಮೂಲಭೂತವಾದಿಗಳ ಕೈವಾಡವಿದ್ದಲ್ಲಿ ಅವರಿಗೂ ತಕ್ಕ ಶಿಕ್ಷೆ ಆಗತಕ್ಕದ್ದು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ದುಷ್ಕರ್ಮಿಗಳಿಗೆ ಶಿಕ್ಷೆ ಆಗತಕ್ಕದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗತಕ್ಕದ್ದು. ಇನ್ನು ಮೂಲಭೂತವಾದದ ಬಗ್ಗೆ ಹೇಳುವುದಾದರೆ, ಎಲ್ಲಾ ಬಗೆಯ ಮೂಲಭೂತವಾದಗಳೂ ಅಪಾಯಕಾರಿ ಏಕೆಂದರೆ ಮೂಲಭೂತವಾದವು ಹಿಂಸೆಯನ್ನು ಪೋಷಿಸುತ್ತದೆ. ಶರಣರು ಮೂಲಭೂತವಾದದ ಅಪಾಯವನ್ನು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದಾರೆ. ಆದುದರಿಂದಲೇ ಶಾಂತಿ, ಸಹನೆ, ಸಂಯಮ, ಸಹಬಾಳ್ವೆ, ಪರೋಪಕಾರ, ಸಮನ್ವಯ ತತ್ವಗಳಿಗೆ ಒತ್ತು ನೀಡಿದ್ದಾರೆ. ಶರಣರು ವಚನಗಳಲ್ಲಿ ಲೋಕಕ್ಕೆ ಒಳಿತು ಉಂಟು ಮಾಡುವ ತತ್ವಗಳನ್ನು ಬೋಧಿಸಿದ್ದಾರೆ. ನನ್ನ ಪ್ರಕಾರ ಎಲ್ಲರೂ ಬಾಲ್ಯದಿಂದಲೇ ವಚನಗಳ ಪಠಣ, ಮನನ, ಅಧ್ಯಯನ ಮಾಡಿದರೆ ವ್ಯಕ್ತಿತ್ವ ವಿಕಾಸವಾಗುತ್ತದೆ. ವಿಕಸಿತ ವ್ಯಕ್ತಿತ್ವ ಎಂದಿಗೂ ಮೂಲಭೂತವಾದಿ ಆಗುವುದಿಲ್ಲ, ಹಿಂಸೆಗೆ ತೊಡಗುವುದಿಲ್ಲ. ವಚನಗಳಿಂದ ಪರಿಶುದ್ಧಗೊಂಡ ಮನಸ್ಸು ಬದುಕನ್ನು ಸುಂದರವಾಗಿಸಲು ಯತ್ನಿಸುತ್ತದೆ. ಮೇಲು-ಕೀಳು ಜಾತಿ-ಕುಲ ಮತ-ಧರ್ಮ ಸಿರಿತನ-ಬಡತನ ಮೊದಲಾದ ಭೇದಭಾವವನ್ನು ಅಳಿಸುತ್ತದೆ. ನಾವೆಲ್ಲರೂ ಒಂದೇ ನಾವು ಮನುಜರು.

    Reply
   2. ಅನಿತಾ

    ಮಾನ್ಯ ಸಲಾಂಬಾವಾ ಅವರೇ, ನಾನು ಕೇರಳದ ಯಾವ ವೇದಿಕೆಯಲ್ಲೂ ಹೊಸದಾಗಿ ಈ ಪ್ರಶ್ನೆಗಳನ್ನು ಕೇಳಬೇಕಾಗಿಲ್ಲ. ಯಾಕೆಂದರೆ ಇಂತಹ ಚರ್ಚೆಗಳನ್ನು ಕೇಳಿಯೇ ನಾನು ಬೆಳೆದಿದ್ದೇನೆ. ಪ್ರತಿದಿನ ಟಿ,ವಿ ಚಾನೆಲ್ ಗಳಲ್ಲೂ ಚರ್ಚೆಗಳು ನಡೆಯುತ್ತಿವೆ. ನೀವೆಂದಂತೆ ಕೇರಳದ ಜನರು ರಾಜಕೀಯವಾಗಿ ಪ್ರಬುದ್ಧರು. ಎಡಪಂಥೀಯ ಪಕ್ಷದಲ್ಲಿದ್ಧೂ ಪಕ್ಷದ ಧೋರಣೆಗಳನ್ನು ಪ್ರಶ್ನಿಸುವ ಅಚ್ಯುತಾನಂದನವರಂತೆ ಅಲ್ಲಿನ ಜನರು ಪ್ರತಿಯೊಂದು ವಿಚಾರವನ್ನೂ ಯಾರೋ ಹೇಳಿದರೆಂದು ಒಪ್ಪಿಕೊಳ್ಳದೆ ಜಿಜ್ಞಾಸೆ ನಡೆಸುವವರು. ಹಾಗಾಗಿಯೇ ಇತ್ತೀಚೆಗೆ ಕೇರಳದಲ್ಲಿ ಮುಸ್ಲಿಂ ಮೂಲಭೂತವಾದ ಮೇರೆ ಮೀರಿ ಬೆಳೆಯುತ್ತಿರುವುದನ್ನು ಜನ ಗುರುತಿಸತೊಡಗಿದ್ದಾರೆ. ಆದ್ದರಿಂದಲೇ ಮುಸ್ಲಿಂ ಹೆಣ್ಣುಮಕ್ಕಳ ವಿವಾಹವಯಸ್ಸನ್ನು ಇಳಿಸುವ ಮೌಲಿಗಳ ಹುನ್ನಾರ ತಿಳಿದೊಡನೆ ಯುವ ಮುಸ್ಲಿಮರಿಂದಲೂ ಸ್ವಲ್ಪ ಪ್ರತಿಭಟನೆ ಕೇಳಿಬಂತು. (ನೀವಾಗಿದ್ದರೆ ಹೀಗೆ ಪ್ರತಿಭಟಿಸುವುದೇ ತಪ್ಪು. ಅದು ಬಲಪಂಥಿಯರ ಹುನ್ನಾರ ಎನ್ನುತ್ತಿದ್ದೀರೇನೋ.) ನೀವು ಉಲ್ಲೇಖಿಸುತ್ತಿರುವ ಅನಂತಮೂರ್ತಿ ಹಿಂದೂ ಧರ್ಮದ ದೊಡ್ಡ critical insider ಆಗಿದ್ದರು. (ಅವರ ಸಾವನ್ನು ಸಂಭ್ರಮಿಸಿದವರ ಬಗ್ಗೆ ನನಗೆ ತಿರಸ್ಕಾರವಿದೆ) ಆದರೆ ಇರ್ಷಾದರಂತಹ ನಿಮ್ಮ ಧರ್ಮದ critical insider ರನ್ನು ನೀವೇ ಅವಮಾನಿಸಿ ಹೀಗಳೆಯುತ್ತಿದ್ದೀರಿ.(ಸಾರಾ ಅಬೂಬಕರ್ ಬರೆಯುತ್ತಿದ್ದಾಗಲೂ ಹೀಗೇ ವಿರೋಧ ಕೇಳಿಬಂದಿತ್ತು. ತಸ್ಲೀಮಾ ದೇಶಭ್ರಷ್ಟರಾದಾಗ ಪ್ರಗತಿಪರ ಧ್ವನಿಗಳು ಮೌನವಾಗಿದ್ದವು) (ಇನ್ನು ನಾಗ್ ಶೆಟ್ಟಿಯವರು ಹಾಗೂ ನೀವು ಮುಸ್ಲಿಮರಿಗೆ 25 ಶೇ ಮೀಸಲಾತಿ ನೀಡುವುದರ ಬಗ್ಗೆ ಅಭಿಪ್ರಾಯವೇನು ಎಂದು ಕೇಳಿದ ಕಾರಣ ನಾನು ಮೀಸಲಾತಿಯ ಹಂಚಿಕೆಯ ಸಮಸ್ಯೆಯನ್ನು ಬಿಡಿಸಿ ಹೇಳಿದೆ. ಆ ವಿಚಾರ ವೈಜ್ಞಾನಿಕವಾಗಿ ಸರಿಯಲ್ಲ ಅಂತ ಅನಿಸಿದರೆ ತಾರ್ಕಿಕ ಕಾರಣ ಕೊಡಿ. ಅದು ಬಿಟ್ಟು ಇದು ಹಿಂದುಳಿದವರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವುದು ಎಂದು ಭಾವುಕ ಪೂರ್ವಾಗ್ರಹಗಳಿಂದ ತೀರ್ಮಾನಿಸತೊಡಗಿದರೆ ನಾನೇನು ಮಾಡಲಿ? ಈಗ ಕೇರಳದಲ್ಲಿ ಚರ್ಚೆಯಾದ ವಿಚಾರವೇ ಇದು. ನೀವು ಹಿಂದುಳಿದವರ ಮನ ಒಲಿಸಿ ಮುಸ್ಲಿಮರಿಗೆ ಶೇ 50 ಮೀಸಲಾತಿ ನೀಡಿದರೆ, ಅದರಿಂದ ಮೂಲಭೂತವಾದ ಕಡಿಮೆಯಾಗಿ ನಾಡಿಗೆ ಒಳ್ಳೆಯದಾಗುವುದಾದರೆ ನನ್ನದೇನೂ ತಕರಾರಿಲ್ಲ. ಆದರೆ ಬಲಪಂಥೀಯರು/ಮೋದಿ ಪಂಗಡದವರ ಪ್ರಭಾವವೇ ಇಲ್ಲದ, ಮುಸ್ಲಿಮರು ಹಲವು ಅನುಕೂಲಗಳನ್ನು ಪಡೆದು ಬಾಳುತ್ತಿರುವ ಕೇರಳದಲ್ಲಿ ಇನ್ನೂ ಮುಸ್ಲಿಂ ಮೂಲಭೂತವಾದ ಕಡಿಮೆಯಾಗದೆ ಬೆಳೆಯುತ್ತಿದೆ, ಶ್ರಿಮಂತ ವಿದ್ಯಾವಂತ ಮುಸ್ಲಿಮರಲ್ಲಿ ಒಂದು ವಿಭಾಗ ಅದನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದೆ ಎಂಬುದು ಸತ್ಯವಿಚಾರ. ಒಳಗೊಳಗೆ ಮುಸ್ಲಿಂ ಮೂಲಭೂತವಾದದ ಬಗ್ಗೆ ಚಿಂತಿತರಾಗಿರುವ ಕೇರಳದ ಕಮ್ಯುನಿಷ್ಟ್ ಪಕ್ಷಗಳು ಬಹಿರಂಗವಾಗಿ ವಿರೋಧಿಸಲು ಹೆದರುವುದು ಸಂಘಟಿತವಾದ ಮುಸ್ಲಿಂ ಮತಗಳು ತಿರುಗಿಬಿದ್ದಾವು ಎಂಬ ರಾಜಕೀಯ ಭೀತಿಯಿಂದ ಎಂಬುದೂ ಸತ್ಯ.)

    Reply
    1. Nagshetty Shetkar

     ಹಿಂದೂಗಳು ಸಂಘಟಿತರಾಗಿ ವೋಟನ್ನು ಒಂದು ನಿರ್ದಿಷ್ಟ ಪಕ್ಷಕ್ಕೆ ಹಾಕುವಂತೆ ಮಾಡುವ ಪ್ರಯತ್ನ ಬಹಳ ಕಾಲದಿಂದ ನಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ಭಾರೀ ಯಶಸ್ಸು ದೊರೆತಿದೆ. ಇದು ವಾಸ್ತವ ಆಗಿರುವಾಗ ಮುಸಲ್ಮಾನರು ಅಥವಾ ದಲಿತರು ಸಂಘಟಿತರಾಗಿ ವೋಟು ಹಾಕಕೂಡದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ಹಿಪಾಕ್ರಸಿ ಅಲ್ಲವ? ಕೇಂದ್ರದ ಭಾಜಪ ಇರಲಿ ಕೇರಳ ಕಮ್ಯುನಿಷ್ಟ್ ಪಕ್ಷಗಳಿರಲಿ “ನಾವೆಲ್ಲರೂ ಒಂದೇ ನಾವು ಮನುಜರು” ಎಂಬ ಸತ್ಯವನ್ನೇ ಮರೆತು ಮತೀಯ ಧ್ರುವೀಕರಣದ ರಾಜಕಾರಣ ನಡೆಸುವುದು ತಪ್ಪು. ಅನಿತಾ ಅವರೇ, ನಿಮ್ಮ ಕಳಕಳಿ ಬಾವ ಅವರ ಕಳಕಳಿಗಿಂತ ಬೇರೆ ಅಲ್ಲ! ನಾವೆಲ್ಲರೂ ಸೌಹಾರ್ದತೆಯನ್ನು ಬಯಸುವವರೆ ಆಗಿದ್ದೇವೆ. ಮತ-ಧರ್ಮ ಜಾತಿ-ಕುಲ ಮೇಲು-ಕೀಳು ಭಾವನೆಗಳನ್ನು ಬಿಟ್ಟು ಮನುಷ್ಯತ್ವವನ್ನು ಮೆರೆಯೋಣ. ಏನಂತೀರಿ?

     Reply
    2. Salam Bava

     ನೀವು ಬೆದರಿಸುವ ಹಾಗೆ ಕೇರಳದಲ್ಲಿ ಮುಸ್ಲಿಂ ಮೂಲಭೂತವಾದ ಅಲ್ಲ ಬೆಳೆದದ್ದು ,ಆರೆಸ್ಸನ ಶಾಖೆಗಳ ಅಂಕೆ ಬೆಳೆದದ್ದು .ನೀವೆ ಹೇಳುವ ಪ್ರಕಾರ ವ್ಯೆಜ್ಹಾನಿಕವಾಗಿ ವಿಶ್ಲೆಷಿದರೂ ಅಲ್ಲಿ ೨೫% ರಸ್ಟಿರುವ ಮುಸ್ಲಿಮರು ಇತರ ಜಾತಿ ಗಳಿಗೆ ಹೋಲಿಸಿದರೆ ತುಂಬಾ ಹಿಂದುಳಿದ್ದಿದ್ದಾರೆ (ಸಾಚಾರ್ ವರದಿ).ಇನ್ನು ನಿಮಗೆ ಅಸ್ಟೊಂದು ರುಚಿಸದ ಕೆಲವು ಮುಸ್ಲಿಮರ ಬಂಗಲೆಗಳು -ಅವರು ಗಲ್ಫ್ ರಾಷ್ಟ್ರದಲ್ಲಿ ಅತ್ಯಂತ ಕಷ್ಟ ಪಟ್ಟು ಸಂಪಾದಿಸಿದ ಹಣದಿಂದ ಕಟ್ಟಿದ್ದು ,ಅವರು ಅದನ್ನು ಅನುಭವಿಸಲಿ, ಬಿಡಿ ಮೇಡಂ !ಅಲ್ಲಿ ಸಾಮಾಜಿಕ ,ಸಾಂಸ್ಕೃತಿಕ ,ರಾಜಕೀಯ ,ಸಿನಿಮಾ (ಕನ್ನಡದಲ್ಲಿ ಹುಡುಕಿದರೂ ಸಿಗದು),ಶಿಕ್ಣಣ ,ವ್ಯಾಪಾರ ,ಮತ್ತು ಕಲೆ ಮುಂತಾದ ಎಲ್ಲಾ ರಂಗಗಳಲ್ಲೂ ಎಲ್ಲಾ ಜಾತಿಯವರೂ ಇದ್ದಾರೆ . ವ್ಯಕಂ ಬಶೀರ್ರಿಂದ ಹಿಡಿದು ಪುನತ್ತಿಲ್ ಕುನ್ಹಿಅಬ್ದುಲ್ಲ ರ ವರೆಗೆ ನೂರಾರು ವಿಚಾರವಾದಿ ಮುಸ್ಲಿಮರು ಧಾರ್ಮಿಕ ಅತಿರೇಕಗಳನ್ನು ಕಡಾ ಕಂಡಿತವಾಗಿ ಒರಗೆ ಹಚ್ಚುತ್ತಾರೆ (ಆದರೆ ಅವರ ವಿಮರ್ಶೆಯಲ್ಲಿ ಒಂದು ತರಹದ ಘನಸ್ಥಿಕೆ ಇರುತ್ತದೆ ,ಉಢಾಫೆ ತಣವಲ್ಲ ). ನೀವು ಮುಸ್ಲಿಂ ಮೂಲಭೂತವಾದಿ ಎಂದು ಆರೋಪಿಸುವ ರಾಜಕೀಯ ಪಕ್ಷ ಗಳಾದ -ಪಿಡಿಪಿ ,ಎಸ್ ಡಿ ಪಿ. ಅಯ್ ಮತ್ತು ವೆಲ್ಫೇರ್ ಪಾರ್ಟಿಗಳಿಗೆ ಕಳೆದ ಲೋಕಸಭಾ ಮತದಾನವಾದ ಮತದಲ್ಲಿ ಸಿಕ್ಕಿದಪ್ರಮಾಣ ೦. ೮೭%. ಕಟ್ಟರ್ ಹಿಂದೂ ಮೂಲಭೂತವಾದಿ ಬಿಜೆಪಿಗೆ ೧೪%(೫೨% ಹಿಂದೂಗಳು) ಮತಗಳು ಬಿದ್ದಿವೆ .ಇದರಲ್ಲಿ ಭಾವುಕತೆ ಏನೂ ಸೇರಿಲ್ಲ ,ಕೇವಲ ಫ್ಯಾಕ್ಟ್ಸ್ ಮತ್ತು ಫಿಗುರೆಸ್ !ಹಿಂದೂ ರಾಷ್ಟ್ರವಾದ ಮತ್ತು ಅವರ ಕುಟಿಲತನ ನೀವು ತಿಳಿದಷ್ಟು ಸುಲಭದಲ್ಲ. ಅದು ನೂರು ವರ್ಷದ ಹಿಂದೆ ಹಾಕಿದ ಮಾಸ್ಟರ್ ಪ್ಲಾನ್ ,ಆ ಪ್ಲಾನ್ ಈಗ ಪಲಪ್ರದವಾಗುತ್ತಾ ಇದೆ . ಆ ಪ್ಲಾನ್ ನಲ್ಲಿ ಗೋಬಲ್ಸ್ ತಂತ್ರ ವಾದ – ನೀವು ಮುಸ್ಲಿಂ ಮೂಲಭೂತವಾದ ಎಂಬ ಎಲ್ಯೂಶಣ್ ,ಪ್ರಸಿದ್ದಿಗೆ ಬೇಕಾಗಿ ಸ್ವಂತ ಸಮುದಾಯವನ್ನೇ ಬಲಿಕೊಡಲು ತಯಾರಾಗುವವರು ಎಲ್ಲ್ಲಾ ಸೇರಿವೆ .

     Reply
     1. ಅನಿತಾ

      ಆರ್ ಎಸ್ ಎಸ್ ಶಾಖೆ ಬೆಳೆದಿವೆಯೆ? ಆರ್ ಎಸ್ ಎಸ್ ಗೆ ಕೇರಳದಲ್ಲಿ ಅಸ್ತಿತ್ವವೇ ಇಲ್ಲವೆಂದರೆ ತಪ್ಪಾಗಲಾರದು. ಮುಸ್ಲಿಂ ಮೂಲಭೂತವಾದ ಬೆಳೆಯುತ್ತಿರುವುದರಿಂದಲೇ ಕೇರಳದ ಹಿಂದುಳಿದ ಸಮುದಾಯಗಳು ಭೀತಿಗೊಳಗಾಗಿವೆ (ಹೀಗೆ ಸತ್ಯ ಹೇಳಿದರೆ ಮುಸ್ಲಿಮರೆದುರು ಹಿಂದುಳಿದವರನ್ನು ಎತ್ತಿಕಟ್ಟುವುದು ಎಂದು ಒಬ್ಬರು ಆರೋಪಿಸಿದ್ದಾರೆ. ಆದರೆ ಸ್ವಯಂ ಹಿಂದುಳಿದವರೇ ಎಚ್ಚೆತ್ತುಕೊಂಡರೆ ಯಾರೇನು ಮಾಡಲು ಸಾಧ್ಯ? ಸಚಾರ್ ವರದಿ ಹೇಳಿದ್ದಕ್ಕೆ ಹಿಂದುಳಿದವರು ಒಪ್ಪಿಕೊಂಡಿದ್ದಾರೆಯೇ? ಮಹಾಜನವರದಿಯಂತೆ ಅಸ್ತಿತ್ವಕ್ಕೆ ಬಾರದ ವರದಿಗಳು ಸಾಕಷ್ಟಿವೆ. ಪ್ರಜಾಪ್ರಭುತ್ವದಲ್ಲಿ ಇಂತಹ ವರದಿಗಳಿಗೆ ಒಂದು ಹಂತದವರೆಗೆ ಮಾತ್ರ ಮಹತ್ವವಿರುವುದು. ಬಹುಮತದ ಸಮ್ಮತಿಯಿಲ್ಲದೆ ಅದನ್ನು ಜನರಮೇಲೆ ಹೇರಲುಬರುವುದಿಲ್ಲ. ಸಂವಿಧಾನಾತ್ಮಕವಾಗಿ ದೊರೆಯುವ ಶೇ50 ಮೀಸಲಾತಿಯಲ್ಲಿ ಅರ್ಧದಷ್ಟು ಮುಸ್ಲಿಮರಿಗೇ ನೀಡಬೇಕೆಂದು ನೀವು ಒತ್ತಾಯಿಸಬೇಕಾದ್ದು ನೀವು ನಿಮ್ಮ ಅಣ್ಣ/ತಮ್ಮಂದಿರು ಎನ್ನುವ (ನಾಗ್ ಶೇಟ್ ಹೇಳಿದ್ದು) ಹಿಂದುಳಿದ ಜಾತಿಯವರಲ್ಲಿ. ಯಾರು ಅಣ್ಣ ಯಾರು ತಮ್ಮ ಯಾರಿಗೆ ಎಷ್ಟುಪಾಲು ಎಂದು ತೀರ್ಮಾನಿಸಿಕೊಳ್ಳಿ.) ಕೇರಳದಲ್ಲಿ ಮುಸ್ಲಿಮರ ಎರಡು-ಮೂರು ಕೋಟಿಯ ಬಂಗಲೆಗಳು, ಜ್ಯುವೆಲ್ಲರಿಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಆಸ್ತಿ ಕಷ್ಟಪಟ್ಟು ಸಂಪಾದಿಸಿದ ದುಡ್ಡಿನಿಂದ ಬಂದದ್ದು ಅಂದರೆ ಜನರು ನಗಾಡಿಯಾರು. (ಗಲ್ಫಿನಲ್ಲಿ ಕಷ್ಟಪಟ್ಟು ದುಡಿದ ಮುಸ್ಲಿಮರೂ ಹಿಂದೂಗಳೂ ಇದ್ದಾರೆ. ಮೈಮುರಿದು ದುಡಿದವರು ತಕ್ಕಮಟ್ಟಿಗೆ ಉತ್ತಮಸ್ಥಿತಿಗೆ ತಲಪಿದ್ದಾರೆ, ಆದರೆ ಕುಬೇರರಾಗಿಲ್ಲ. ಆದರೆ ನಾನು ಹೇಳಿದ ಅರಮನೆಗಳೂ ಬಂಗಲೆಗಳೂ ಕಷ್ಟಪಟ್ಟು ದುಡಿದವರದ್ದಲ್ಲ. ಅವರು ಕಾನೂನಿನ ಕಣ್ಣಿಗೆ ಮಣ್ಣೆರಚಿ ಕಳ್ಳದಂಧೆಗಳಿಂದ ಹೇಗೆ ದುಡ್ಡು ಸಂಪಾದಿಸುತ್ತಿದ್ದಾರೆ ಹೇಗೆ ಯಾವುದಕ್ಕೆ ಖರ್ಚುಮಾಡುತ್ತಿದ್ದಾರೆ ಎಂಬುದು ತಿಳಿದ ಸತ್ಯ. ಅವರೇ ಇಲ್ಲಿನ ಕೋಮುಸೌಹಾರ್ದ ಹಾಳಾಗಲು, ಅಪರಾಧ ಹೆಚ್ಚಾಗಲು ಕಾರಣವಾಗಿದ್ದಾರೆ. ಕೇರಳದ ರಾಜಕೀಯವನ್ನು, ಧಾರ್ಮಿಕಮುಖಂಡರನ್ನೂ ನಿಯಂತ್ರಿಸುವವರು ಇವರೇ) ನೀವು ಪಿಡಿಪಿ ಮೊದಲಾದ ಪಕ್ಷಗಳ ಸಾಲಿಗೆ ಮುಸ್ಲಿಂಲೀಗನ್ನು ಯಾಕೆ ಸೇರಿಸುವುದಿಲ್ಲ? ಕೇರಳದ ಮುಸ್ಲಿಂ ಮೂಲಭೂತವಾದ ಒಂದು ಪ್ರಚ್ಛನ್ನ ಶಕ್ತಿ. ಅದು ಆಯಾ ಸಮಯದ ರಾಜಕೀಯ ವಾತಾವರಣ ನೋಡಿಕೊಂಡು ಬೇಕಾದ ಪಕ್ಷಗಳನ್ನು ಬೆಂಬಲಿಸುತ್ತದೆ. ಆದ್ದರಿಂದಲೇ ಇವರ ಸಂಘಟಿತ ಮತಶಕ್ತಿಯನ್ನು ಎದುರುಹಾಕಿಕೊಳ್ಳುವ ಹೆದರಿಕೆಯಿಂದಲೇ ಎಡ, ಬಲ ರಂಗಗಳು ಮುಸ್ಲಿಂ ಮೂಲಭೂತವಾದವನ್ನು ವಿರೋಧಿಸುವುದಿಲ್ಲ. ಕೇರಳದ ನೈಜ ಜಾತ್ಯತೀತ ಜನತೆಗೆ ಇಂದು ಪರ್ಯಾಯ ಪಕ್ಷಗಳೇ ಇಲ್ಲದೆ ಅಸಹಾಯಕರಾಗಿದ್ದಾರೆ. ಕೇರಳದಲ್ಲಿ ಮುಸ್ಲಿಮರ ಸಂಖ್ಯೆಯೂ ಹೆಚ್ಚು, ವಿದ್ಯಾವಂತರೂ ಹೆಚ್ಚು ಆದುದರಿಂದಲೇ ಆ ಸಂಖ್ಯಾನುಪಾತಕ್ಕೆ ಸಹಜವಾಗಿ ಮುಸ್ಲಿಂ ಲೇಖಕರೂ ಇದ್ದಾರೆ.ಲೇಖಕರು ಇದ್ದಾರೆ ಎಂದಮಾತ್ರಕ್ಕೆ ವಾತಾವರಣ ಬದಲಾಗಬೇಕಿಲ್ಲ. ಕೇರಳದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಬಿ.ಜೆ.ಪಿ ಗೆ ಇದ್ದಕ್ಕಿದ್ದಂತೆ ಮತ ಯಾಕೆ ಏರಿತು ಎಂದರೆ ಉತ್ತರ ಅದೇ- ಮುಸ್ಲಿಂ ಮೂಲಭೂತವಾದ ಎಡಬಲರಂಗಗಳನ್ನು ಕುಣಿಸಿ ಮಣಿಸುತ್ತಿರುವುದನ್ನು ಕಂಡು ಜನ ಪರ್ಯಾಯ ಆಯ್ಕೆಗೆ ತಡಕಾಡುತ್ತ ಇಷ್ಟವಿಲ್ಲದಿದ್ದರೂ ಬಿ.ಜೆ.ಪಿ ಗೆ ಓಟುಹಾಕಿದ್ದಾರೆ. ಅವು ಬಿ.ಜೆ.ಪಿಯ ಶಾಶ್ವತ ಓಟುಗಳಲ್ಲ.

     2. Nagshetty Shetkar

      ನನ್ನ ಮಟ್ಟಿಗೆ ಮೂಲಭೂತವಾದ, ಅದು ಯಾವುದೇ ಧರ್ಮದ್ದಿರಬಹುದು ಅಥವಾ ಐಡಿಯಾಲಜಿಯದ್ದಿರಬಹುದು, ಎಂದಿಗೂ ಅಪಾಯಕಾರಿ. ಆದುದರಿಂದಲೇ ಭಾರತವು ಮೂಲಭೂತವಾದದ ಅಪಾಯವನ್ನು ಎದುರಿಸಲು ಒಂದು ಪರಿಣಾಮಕಾರಿಯಾದ ಸೆಕ್ಯೂಲರ್ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಇನ್ನಷ್ಟು ವಿಕಸಿತವಾಗಬೇಕಾಗಿದೆ. ಭಾರತವು ಸೆಕ್ಯೂಲರ್ ರಾಷ್ಟ್ರವಾಗಿ ವಿಕಾಸಗೊಳ್ಳಲು ಜಾತಿ/ಮತ/ಧರ್ಮಗಳು ಅಡ್ಡಿಯಾಗಿವೆ. ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ವಿಕಾಸಗೊಳ್ಳಲು ಬಂಡವಾಳಶಾಹಿ ಶಕ್ತಿಗಳೂ ನಕ್ಸಲ್ ಶಕ್ತಿಗಳೂ ತಡೆ ಒಡ್ಡಿವೆ. ಜಾತಿ/ಮತ/ಧರ್ಮಗಳ ಸಮಸ್ಯೆ ಹಳೆಯ ಸಮಸ್ಯೆ. ಆದರೆ ಬಂಡವಾಳಶಾಹಿ ಹಾಗೂ ನಕ್ಸಲ್ ಸಮಸ್ಯೆ ಆಧುನಿಕ ಸಮಸ್ಯೆ. ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಭಾರತವೆಂಬ ಪರಿಕಲ್ಪನೆಯು ಒಂದು ಕಲ್ಪನೆಯಾಗಿ ಉಳಿದುಬಿಡುತ್ತದೆ ಹಾಗೂ ತತ್ಪರಿಣಾಮವಾಗಿ ಮೂಲಭೂತವಾದ ಜಯಿಸುತ್ತದೆ. ಈ ಸಂದರ್ಭದಲ್ಲಿ ದೇಶದ ಬಗ್ಗೆ ಕಾಳಜಿ ಉಳ್ಳ ಪ್ರಜ್ಞಾವಂತರೆಲ್ಲ ಪರಸ್ಪರ ದೋಷಾರೋಪಣೆ ಮಾಡುತ್ತಾ ಕದನ ಕುತೂಹಲಿಗಳಾಗಿ ಕಾಲಹರಣ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಮಾನವ ಜನ್ಮ ದೊಡ್ಡದು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳದೇ ಹೋದರೆ ಪರಸ್ಪರ ಕಿತ್ತಾಟದಲ್ಲೇ ಜನ್ಮ ಸವೆದು ಹೋಗುತ್ತದೆ. ದೊಡ್ಡ ದೊಡ್ಡ ಸಮಸ್ಯೆಗಳಿವೆ ದೇಶದ ಮುಂದೆ. ಅವುಗಳನ್ನು ಪರಸ್ಪರ ಸಹಕಾರ ಹಾಗೂ ಸಮನ್ವಯದಿಂದ ಬಗೆಹರಿಸೋಣ. ನಾವೆಲ್ಲರೂ ಒಂದೇ ನಾವು ಮನುಜರು ಅಂತ.

  3. Sharada halli

   ಅನಿತಾ ಅವರೆ ಈ ಬುದ್ದಿಜೀವಿಗಳು ಮುಸಲ್ಮಾನರ ಮೂಲಭೂತವಾದವನ್ನು ಎತ್ತಿ ತೋರಿಸಿದರೆ ಅವರು ಭೂಮಿಯ ಮೇಲೆ ಉಳಿದಾರೆ?? ಅವರೇನಿದ್ದರೂ ಹಿಂದುಗಳ ಅದರಲ್ಲೂ ಬ್ರಾಹ್ಮಣರ ಮೂಲಭೂತವಾದವನ್ನು ಮಾತ್ರ ಟೀಕಿಸುತ್ತಾರೆ ಏಕೆಂದರೆ ಅವರು ಮುಂದೆ ಬಂದರೆ ಹಾಯಲ್ಲ ಹಿಂದೆ ಬಂದರೆ ಒದೆಯಲ್ಲ. ಮತ್ತು ಸಂಘಟಿತರೂ ಅಲ್ಲ. ಅಲ್ಲದೆ ಮತ ಬ್ಯಾಂಕಿಗಳೂ ಅಲ್ಲ. ಸಂಖ್ಯಾ ಬಾಹುಳ್ಯದವರೂ ಅಲ್ಲವಲ್ಲಾ?

   Reply
   1. Salam Bava

    ಇನ್ನು ಶಾರದಾ ಹಳ್ಳಿಯವರ ಕಾಮೆಂಟ್ ನನಗೆ ನಗು ತರಿಸುತ್ತದೆ – ಕೇಂದ್ರದಲ್ಲಿ ಬಲಾಡ್ಯ ಹಿಂದೂ ಸರಕಾರವಿದ್ದು , ಯೋಗಿ ಗಳು ,ಸಾದ್ವಿಗಳು ಮಂತ್ರಿಗಳಾಗಿ ದಿನವೂ ಉದುರಿಸುತ್ತ್ರುವ ನುಡಿಮುತ್ತು ಗಳು ,ದೇಶಕ್ಕೆ ದೇಶವನ್ನೇ ಹಿಂದೂ ರಾಷ್ಟ್ರವಾಗಿ ಘೋಸಿಸುವ ಹುನ್ನಾರ ನಡೆದಿದೆ . ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳಿಂದ ಹಿಡಿದು ರೌಡಿ ಶೀಟರ ಸಂಘ ಕಾರ್ಯ ಕರ್ತನ ವರೆಗೆ ಅವರವರಿಗೆ ವಹಿಸಿಕೊಟ್ಟ ಪಾತ್ರ ನಿರ್ವಹಿಸುತ್ತಿದ್ದಾರೆ . ಮೋದಿ ಪ್ರಧಾನಿಯಾದಾಗ ಅಶೋಕ ಸಿಂಗಲ್ ಹೇಳಿಕೆ “೮೦೦ ವರ್ಷಗಳ ನಂತರ ದೆಲ್ಹಿಯ ಸಿಂಹಾಸನ ಹಿಂದೂಗಳ ಕ್ಯೆಗೆ ಸಿಕ್ಕಿದೆ “.ಇನ್ನೂ ನಿಮಗೆ ತ್ರಪ್ತಿ ಇಲ್ಲ ವೆಂದಾದ್ರೆ ಹೇಗೆ ?

    Reply
 28. Salam Bava

  ಮಿಸ್ ಅನಿತಾರವರೇ – ಈ ಕೆಳಗಿನ ಸುದ್ದಿ ವ್ಯೆಜ್ಹಾನಿಕವಾಗಿ ಬರೆದದ್ದು -Times Of India

  Kerala has 3,000 RSS shakhas: Adhisji
  TNN | May 17, 2003, 01.25AM IST
  inShare
  AHMEDABAD: Rashtriya Swayamsevak Sangh (RSS) ‘sah-prachar pramukh’ Adhisji said here on Friday that there was a tremendous response to the activities undertaken by the RSS in south India.

  Addressing mediapersons after the Narad Jayanti celebrations, the RSS leader said that Kerala has 3,000 RSS ‘shakhas’ — the highest among all states in the country.

  Adhisji also said that Tamil Nadu has been divided into two zones for the smooth functioning of the ‘shakhas’ there.

  ನಿಮಗೆ ಮುಸ್ಲಿಂರೆಂದರೆ ಇಷ್ಟು ಅಸಹನೆ ,ದ್ವೇಷ ,ಅಸೂಯೆ ,ನಂಜು ಮತ್ತು ಕೀಳು ಭಾವನೆ ಯಾಕೆಂದು ಅರ್ಥವಾಗುತ್ತಿಲ್ಲ ! ಅರ್ಥವಾಗಿದ್ದಿದ್ದರೆ ಪರಿಹರಿಸಲು ಪ್ರಯತ್ನಿಸುತ್ತಿದ್ದೆ. ಅವರೂ ನಿಮ್ಮ ಹಾಗೆ ಈ ದೇಶದಲ್ಲಿ ಹುಟ್ಟಿ ಬೆಳೆದ ಇಲ್ಲಿಯ ಪ್ರಜೆಗಳು , ಅವರಿಗೆ ಸಂವಿದಾನದತ್ತ ಹಕ್ಕು ಮತ್ತು ಭಾದ್ಯತೆ ಗಳಿವೆ, ಯಾರದೇ ಕ್ರಪಾಶಯದಲ್ಲಿ ಅವರು ಬದುಕಬೇ ಕಿಲ್ಲ ,ಯಾರನ್ನೂ ತಮ್ಮ ಹಕ್ಕುಗಳಿಗಾಗಿ ಓಲ್ಯಸ ಬೇಕಿಲ್ಲ . of course ಸೌಹಾರ್ದತೆ ಯಿಂದ ,ಪ್ರೀತಿಯಿಂದ ಬಾಳಬೇಕು
  ನೀವು ಜಾತ್ಯಾತೀತತೆಯ ಮಖವಾಡ ತೊಟ್ಟು ,ಕೋಮು ಭಾವನೆ ಪ್ರಸರಿಸುವದು ಯಾಕೆ ? ಕಟ್ಟರ್ ಹಿಂದೂ ರಾಷ್ಟದ ಹಿಂಬಾಲಕರಾಗಿ , ಅದರ ತಳಹದಿಯ ಮೇಲೆ ಚೆರ್ಚಿಸಬಹುದಲ್ಲ . ಮಹಾಜನ ,ಸಾಚಾರೆ ವರದಿ ಅಸ್ತಿತ್ವದಲ್ಲಿವೆ ,ಆದರೆ ಅದನ್ನು ಜ್ಯಾರಿಗೆ ತರುವಂಥ ಕ್ರಾಂತಿಕಾರಿ ಇಛ್ಹಾ ಶಕ್ತಿಯ ಆಳುವವರು ಬೇಕು .
  ೧ “ಕೇರಳದಲ್ಲಿ ಮುಸ್ಲಿಮರ ಎರಡು-ಮೂರು ಕೋಟಿಯ ಬಂಗಲೆಗಳು, ಜ್ಯುವೆಲ್ಲರಿಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಆಸ್ತಿ ಕಷ್ಟಪಟ್ಟು ಸಂಪಾದಿಸಿದ ದುಡ್ಡಿನಿಂದ ಬಂದದ್ದು ಅಂದರೆ ಜನರು ನಗಾಡಿಯಾರು” ಇದು ಹೊಣೆಗೇಡಿ ಬರಹ . ಮುಸ್ಲಿರದಲ್ಲಾ , ಹಿಂದುಗಳಲ್ಲಿ,ಕ್ರಿಶ್ಚಿಯನ್ರಲ್ಲಿ ಸಹಾ ೧೦೦-೨೦೦ ಕೋಟಿಯ ಆಸ್ತಿಯಿರುವ ಗಲ್ಫ್ ಎನ್ನಾರ್ಯ್ ಗಳಿ ದ್ದಾರೆ . ಅದಲ್ಲಾ ಅವ್ರು ಅತ್ಯಂತ ಕಷ್ಟ ಪಟ್ಟು ದುಡಿದದ್ದೇ . ನಿಮ್ಮ ಈ ಹೇಳಿಕೆ ಒಂದು ದುಡಿಯುವ ವರ್ಗಕ್ಕೆ ಮಾಡುವ ಅವಮಾನ ,ಇದು ಒಂದಾ ನಿಮ್ಮ ಅರಿವಿನ ಕೊರತೆ ಅಥವಾ ಫೇಂಕು !ಕಾಂಗ್ರೇಸ್ ,ಕಮುನಿಸ್ಟರು ನ್ಯೆಜ್ಯ ಜಾತ್ಯತೇತರಲ್ಲವೇ . ಭಾರತದಲ್ಲಿ ಎಲ್ಲೆಲ್ಲಾ ಮಾರ್ಕ್ಸ್ವಾದದ ಶಕ್ತಿ ಕುಂದಿದೆಯೂ ಅಲ್ಲೆಲ್ಲಾ ಅರಸ್ಸ್ ಆಟಕಾಯಿಸಿದೆ ಮತ್ತು ಅದರ ಬಲ ವರ್ಧಿಸಿದೆ .ಇದು ಕರ್ನಾಟಕ , ಪ. ಬಂಗಾಳ ಮತ್ತು ಸ್ವಲ್ಪ ಮಟ್ಟಿಗೆ ಕೇರಳಕ್ಕೂ ಅನ್ವಿಸುತ್ತದೆ !ಮುಸ್ಲಿಂ ಲೀಗೆ ಅಪ್ಪಟ ಪ್ರಜ್ಹಾಸತ್ತಾತ್ಮಕ ,ಒಂದು ಸಮುದಾಯಕ್ಕೆ ಸೀಮಿತ ಆದರೆ ಜಾತ್ಯತೀತ ಪಕ್ಷ ಎಂದು ಬಿಜೆಪಿಯವರೂ ಒಪ್ಪುತ್ತಾರಲ್ಲಾ ? ನೀವು ಹೇಳುವಂತೆ ಬಿಜೆಪಿಗೆ ಸಿಕ್ಕಿದ ಮತ ತಾತ್ಕಾಲಿಕ ಏನಲ್ಲ ,ಅದು ಅಲ್ಲಿಯೇ ನಿಂತು ತನ್ನ ಶಕ್ತಿ ವ್ರದ್ದಿಸುತ್ತದೆ .
  ನೆಹರೂ ರವರ ಒಂದು ಪ್ರಸಿದ್ದ ನುಡಿಯಿದೆ – ಅಲ್ಪ ಸಂಖ್ಯಾತ ಕೋಮುವಾದ ಆ ಕೋಮುವಿಗೆ ಮಾರಕ ,ಆದರೆ ಬಹುಸಂಖ್ಯಾತ ಕೋಮುವಾದ ಇಡೀ ದೇಶಕ್ಕೆ ಮಾರಕ ಎಂದು .

  Reply
 29. Sharada halli

  [[ನಿಮಗೆ ಮುಸ್ಲಿಂರೆಂದರೆ ಇಷ್ಟು ಅಸಹನೆ ,ದ್ವೇಷ ,ಅಸೂಯೆ ,ನಂಜು ಮತ್ತು ಕೀಳು ಭಾವನೆ ಯಾಕೆಂದು ಅರ್ಥವಾಗುತ್ತಿಲ್ಲ ! ಅರ್ಥವಾಗಿದ್ದಿದ್ದರೆ ಪರಿಹರಿಸಲು ಪ್ರಯತ್ನಿಸುತ್ತಿದ್ದೆ. ಅವರೂ ನಿಮ್ಮ ಹಾಗೆ ಈ ದೇಶದಲ್ಲಿ ಹುಟ್ಟಿ ಬೆಳೆದ ಇಲ್ಲಿಯ ಪ್ರಜೆಗಳು ]] ಖಂಡಿತಾ ಅವರು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ಪ್ರಜೆಗಳೇ. ಆದರೆ ಪಾಕಿಸ್ತಾನ ಕ್ರಿಕೆಟಿನಲ್ಲಿ ಗೆದ್ದಾಗ ಸಂಭ್ರಮಿಸುವವರು. ಪಟ್ಟಾಕಿ ಹೊಡೆಯುವವರು. ನಾನು ಹೀಗೆ ಹೇಳಿದಾಕ್ಶಣ ನಿಮ್ಮ ಉತ್ತರವೇನೆಂದು ನನಗೆ ಗೊತ್ತಿದೆ. ಏನೆಂದರೆ ಮುಸಲ್ಮಾನರು ತಮ್ಮ ರಾಷ್ಟ್ರಪ್ರೇಮವನ್ನು ಹೆಜ್ಜೆ ಹೆಜ್ಜೆ ಗೆ ಸಾಬೀತು ಪಡಿಸಬೇಕೇ? ಎಲ್ಲರೂ ಹಾಗಿರುವರೆ? ? ಇತ್ಯಾದಿ. ನನ್ನೂರಿನಲ್ಲಿ ಅತಿ ಹೆಚ್ಚು ಅಂದರೆ ಶೇ 40% ಮುಸ್ಲೀಂ ಕುಟುಂಬಗಳಿವೆ. ಅವರು ಭಾರತ ಗೆದ್ದಾಗ ಸಂಭ್ರಮಿಸಿದ್ದನ್ನು ನಾನು ನೋಡಿಲ್ಲ. ನಾನು ಅಂಜುಮನ್ ಕಾಲೇಜಿನಲ್ಲಿ ಡಿಗ್ರಿ ಪಡೆದಿದ್ದೇನೆ. ನಾನು ಡಿಗ್ರಿ ಓದುತ್ತಿದ್ದಾಗ ಪಾಕಿಸ್ತಾನ ವಿಶ್ವ ಕಪ್ ಗೆದ್ದಿತ್ತು. ನನ್ನ ಗೆಳತಿಯರು ಹೇಳುತ್ತಿದ್ದರು ನಾನು ಸುಮಾರು ಹತ್ತು ಇಪ್ಪತ್ತು ಸಲ ಪಾಕ್ ಗೆದೆಯಲೆಂದು ನಮಾಜು ಮಾಡಿದೆ. ಇತ್ಯಾದಿ. ಆದರೆ ಅವರೆಂದೂ ನನಗೆ ಭಾರತ ಗೆದೆಯಲೆಂದು ನಮಾಜು ಮಾಡಿದೆ ಎಂದು ತಿಳಿಸಲೇ ಇಲ್ಲ. ಭಾರತ ನಿಮ್ಮದೆಂದು ಹೇಳುತ್ತೀರಿ. ಶೆಟ್ಕರ್ ಅವರು ಈ ದೇಶದ ದಲಿತರೆ ಇವತ್ತಿನ ಮುಸಲ್ಮಾನರೆಂದು ಹೇಳುತ್ತಾರೆ. ಹಾಗಿದ್ದರೆ ಭಾರತವನ್ನು ನೀವೇಕೆ ಪ್ರೀತಿಸುವದಿಲ್ಲ? ನಿಮ್ಮ ನಡೆನುಡಿಗಳಿಂದ ನೀವೇ ಇನ್ನೊಬ್ಬರು ನಿಮ್ಮನ್ನು ಅನುಮಾನಿಸುವಂತೆ ಮಾಡುತ್ತಿದ್ದೀರಿ. ಇದು ಎಲ್ಲಾ ವ್ಯಕ್ತಿಗಳೂ ಹೀಗೆ ಎಂದು ತಿಳಿಸಲಲ್ಲ ಬರೆದಿದ್ದು. ನಮ್ಮ ನಡುವೆ ಅಬ್ದುಲ್ ಕಲಾಂ ರಂಥ ಮುಸಲ್ಮಾನರೂ ಇದ್ದಾರೆ. ಆದರೆ ಅವರು ಬೆರಳೆಣಿಕೆಯಷ್ಟಿದ್ದಾರಲ್ಲಾ ಏನು ಮಾಡುವದು.??

  Reply
 30. Salam Bava

  ಕುಮರ್ ನಾರಾಯಣನಿಂದ ಹಿಡಿದು ಇತ್ತೀಚಿಗೆ ದೇಶದ ರಹಸ್ಯವನ್ನು ವಿದೇಶಗಳಿಗೆ ,ಶತ್ರು ದೇಶಕ್ಕೆ ಮಾರಿದ ಎಲ್ಲಾ ದೇಶದ್ರೋಹಿಗಳೂ ನಿಮ್ಮ ಧರ್ಮದವರೇ ! ಹಾಗಂತ ನಾನು ಯಾವತ್ತೂ ಹಿಂದುಗಳನ್ನು ಆಪಾದಿಸಲಾರೆ . ಇನ್ನು ನಿಮ್ಮ ಕ್ರಿಕೆಟಿನ ಕುರಿತಾದ ವ್ಯಖಾನ ಹಾಸ್ಯಾಸ್ಪದ ,ಅದು ರಸ್ತೆ ಬದಿ ಚರ್ಚೆಗೆ ಯೋಗ್ಯವೇ ಹೊರತು “ವರ್ತಮಾನ “ದಂಥ ಮೇಲ್ಮಟ್ಟದ ಬ್ಲಾಗಿನಲ್ಲಿ ಚರ್ಚಿಸಲ್ಪಡಲು ಅಲ್ಲ .ನಾವು ದೇಶವನ್ನು ಪ್ರೇಮಿಸುವುದು ನಿಮ್ಮಂಥವರನ್ನು ನಂಬಿಸಲೋ ,ಖುಷಿ ಪಡಿಸಲೋ ಅಲ್ಲ ,ಅದು ನಮ್ಮ ದೀನಿನ ಒಂದು ಅಂಗ . ನಿಮಗೆ ಒಂದು ತರಹ ಕೀಳರಿಮೆ ,ಸಂಶಯ ಮತ್ತು ಪ್ರೆಜುಡಿಸ್ ಇದ್ದರೆ ಅದು ನಿಮ್ಮ ಪ್ರಾಬ್ಲಮ್ ,ಅದನ್ನು ನೀವೇ ಪರಿಹರಿಸಿ ಕೊಳ್ಳಿ !ಇತರರು ನಿಮ್ಮ ಮೂಗಿನ ನೇರಕ್ಕೆ ನಡೆಯ ಬೇಕು ಎಂದರೆ ನಾವು ತಯಾರಿಲ್ಲ . ಎಲ್ಲರೂ ಭಾರತ ಮಾತೆಯ ಮಕ್ಕಳು ಎಂದು ಸೌಹಾರ್ದ ದಿಂದ ,ಪ್ರೀತಿಯಿಂದ ಜೀವಿಸೋಣ

  Reply
 31. ak kukkaje

  ಮೇಡಂ ಅನಿತಾ ರವರೆ

  ಕೇರಳದಲ್ಲಿ RSS ಅಸ್ತಿತ್ವ ಇಲ್ಲ ಎಂಬುವುದು ತಪ್ಪು ಆದರೆ ಸಾಕ್ಷರ ಕೇರಳದ ಬುದ್ದಿಜೀವಿಗಳು ನಿಮ್ಮ RSS ನ ನಿಜ ಬಣ್ಣವನ್ನು ಅರಿಯುವಷ್ಟು ಪ್ರಬುದ್ದರು ಮತ್ತು ಎಲ್ಲಾ ಕೋಮುವಾದದಲ್ಲಿ ಸಮಾನ ಅಂತರವನ್ನು ಕಾಪಾಡುತ್ತಿರುವ ಎಡರಂಗದ ಸಕ್ರಿಯತೆಯಿಂದಾಗಿ ಅಲ್ಲಿ ಅವರಿಗೆ ತಮ್ಮ ಬಾಲವನ್ನು ಸಾಕಷ್ಟು ಬಿಚ್ಚಿಕೊಂಡು ಕುಣಿಯಲು ಸಾಧ್ಯವಾಗಲಿಲ್ಲ ಯಾಕೆಂದರೆ RSS ನ ಅಸ್ತಿತ್ವವೇ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವಾಗಿಸುವ ಗೋಬೇಲ್ಸ್ ಸಿದ್ದಾಂತ ಆದರೆ ಕೇರಳದ ಚಂತನಶೀಲ ಜನತೆ ಈ ಸುಳ್ಳುಗಳು ಸುಳ್ಳುಗಳೇ ಆಗಿವೆ ಎಂದರಿಯುವಲ್ಲಿ ಸಮರ್ಥರು.ಹಾಗಿದ್ದೂ ಸಂಧರ್ಭ ಸಾಧಕ ಭಾಜಪ ನೀವು ಇಲ್ಲಿ ಹೆಸರಿಸಿದ PDP ಸಹಿತ ಹಲವು ಪ್ರಾದೇಶಿಕ ಪಕ್ಷಗಳ ಕದ ತಟ್ಟಿ ನೆಲೆ ಕಾಣಲು ಶ್ರಮಿಸಿದೆ ಇಷ್ಟಕ್ಕೂ ಈ ಹಿಂದೂಗಳು ಯಾರೆಂದು ತಿಳಿಸುವಿರಾ? ಹಿಂದೂ ಒಂದೂ ಎನ್ನುವ ನಿಮ್ಮಲ್ಲಿ ಸಕಲ ಹಿಂದೂ ಎನ್ನಲಾಗುವ ಜನರಿಗೂ ಸಮಾನತೆ ಕಲ್ಪಿಸಲು ಸಿದ್ದರಿರುವಿರಾ ನೀವು ಮನುವನ್ನು ಕಲಿತಿರುವಿರಾ? ಇಲ್ಲವಾದಲ್ಲಿ ಒಮ್ಮೆ ತೆರೆದು ನೋಡಿ…ಬ್ರಾಹ್ಮಣ ಅಲ್ಲದ ಒಬ್ಬ ಸಾಮಾನ್ಯ ಹಿಂದೂವಿಗೆ ನೀವು ಅಷ್ಟಮಟಗಳ ಯಾವುದೇ ಒಂದರಲ್ಲಿ ಪೀಟ ನೀಡುವಿರಾ? ಅಲ್ಲಿನ ಅರ್ಚಕ ಸ್ಥಾನಕ್ಕೆ (ಹಿಂದುಳಿದ ವರ್ಗದ ಹಿಂದೂ ಎನ್ನಲಾಗುವವರೂ ಕೀಳೆಂದು ಕಾಣುವ ದಲಿತರನ್ನು ಬಿಡಿರಿ ದಲಿತರಲ್ಲದ ಇತರ ಹಿಂದುಳಿದ ಜನಗಳೆನಿಸಿದ ನಾಯ್ಕ,ಸಪಲ್ಯ,ಮಡಿವಾಳ,ಗೌಡ,ನೇಕಾರ,ಚಮ್ಮಾರನಿಗಾಗಲೀ) ಅರ್ಚಕರಾಗಿ ನೇಮಿಸಬಲ್ಲಿರಾ? ಬೇಡ ನಿಮ್ಮ ಸಂಘಪರಿವಾರದ ಮುನ್ನೆಡೆಯಲ್ಲಿ ಹೋರಾಡುವ ಅಮಾಯಕ ಹಿಂದುಳಿದ ವರ್ಗದಲ್ಲಿನ ಜಾತಿಯಲ್ಲಿ ಪೂಜಾರಿ ಎನ್ನಲಾಗುವ ಬಿಲ್ಲವ ಈ ದೇವಾಲಯದ ಪೂಜಾರಿ ಆಗಲು ಬ್ರಾಹ್ಮಣರಿಗೆ ಪಥ್ಯವೇ? ಶೆಟ್ಟಿ ಗಳಾದರೂ ಸಹ್ಯವೇ ? ಇನ್ನೆಲ್ಲಿಯ ಹಿಂದೂ ಒಂದೂ ಆಗಿರುವುದು ತಿಳಿಸಬಹುದೇ? ಮೇಡಂ ಅನಿತಾಜಿ ಯವರೇ ಮುಸ್ಲಿಮರಲ್ಲಿ ಪುರೋಹಿತರು ತಮ್ಮ ಸ್ವಾರ್ಥಕ್ಕಾಗಿ ಮಾಡಿದ ಕೆಲವು ಅನಿಸ್ಲಾಮಿ ಆಚರಣೆ ಇದ್ದಲ್ಲಿ ಅದನ್ನು ಇಂದಿನ ವಿದ್ಯಾವಂತ ಮುಸ್ಲಿಮರು ಎದುರಿಸಿ ಹೋಗಲಾಡಿಸುತ್ತಾರೆ ಆದರೆ ಅಲ್ಲಿ ಮೇಲು ಕೀಳು ಇಲ್ಲ ಕ್ಷೌರಿಕನ ಮಗನಾದರೂ ಧಾರ್ಮಿಕತೆ ಕಲಿತರೆ ಮುಲ್ಲಾ ಆಗಿ ನಮಾಜಿನ ಇಮಾಂ ಆಗಿ ಎಲ್ಲರ ಮುಂದೆ ನಿಲ್ಲಬಹುದು. ಆದರೆ ಹಿಂದೂ ಎನ್ನುವ ಭೌಗೋಳಿಕ ಪದವನ್ನು ಧಾರ್ಮಿಕವಾಗಿ ಬಳಸಿ ನಂತರ ರಾಜಕೀಯಕ್ಕೆ ಉಪಯೋಗಿಸಿ ಪ್ಯಾಸಿಸಂ ತಂತ್ರದಿಂದ ರಾಜಕೀಯದಲ್ಲಿ ಬಲ ಸಾಧಿಸಿದ ಸಂಘಪರಿವಾರದ ಹಿಂದೂಗಳು ಉತ್ತರಿಸಲಿ ಬ್ರಾಹ್ಮಣ ಅಲ್ಲದ ವ್ಯಕ್ತಿಗೆ ಪೀಟಾಧಿಪತಿ ಬಿಡಿ ಕನಿಷ್ಠ ಸಂಸ್ಕ್ರತ ಕಲಿಯುವ ಅರ್ಹತೆ ಇದೆಯೇ? ಕಲಿತಲ್ಲಿ ಯಾವ ಶಿಕ್ಷೆ ಮನು ವಿಧಿಸಿದೆ? ಎಂದು ಅದರ ಪುಟಗಳನ್ನೊಮ್ಮೆ ತಿರುವಿ ನೋಡಲಿ ಹಾಗಿದ್ದರೆ ಇವರು ಹೇಳಲು ಸಿದ್ದರೆ? ಹಿಂದೂ ಒಂದೇ ಸಮಾನವಲ್ಲ ಕೆಲವರು ಕಳಪೆ ದರ್ಜೆ ಇನ್ನುಳಿದವರು ಉನ್ನತ ದರ್ಜೆ ಎಂದು? ಅಯ್ಯಯ್ಯೋ ಹೇಳಿದಲ್ಲಿ ನಮ್ಮ ಜನ ಬಲಪಂಥವನ್ನು ಬಿಟ್ಟು ಎಡಪಂಥಕ್ಕೆ ವಾಲಿದರೆ ಅಲ್ಲವೇ? ನಮ್ಮ ಸೀಟು ಅಧಿಕಾರದ ಕುರ್ಚಿ ಅಲುಗಾಡದೆ ಇರಬೇಕಾದರೆ ಈ ಮುಸ್ಲಿಮರನ್ನು ವೈರಿಯಾಗಿ ಚಿತ್ರಿಸಲೇಬೇಕು ಅಲ್ಲವೇ? ಅಲ್ಲವಾದಲ್ಲಿ “‘ಸಮಾನತೆ’ ನಿಜವಾದಲ್ಲಿ” ಬ್ರಾಹ್ಮಣ (ಅಡುಗೆಭಟ್ಟ) ನಲ್ಲದವ ಮಾಡಿದ ಆಹಾರ ಇವರು ಮಟಗಳಲ್ಲಿ ಉಣ್ಣುವರೆ? ಇದೆಲ್ಲಾ ರಾಜಕೀಯ ಎಂದು ನೀವು ತಿಳಿದೂ ಅದು ಇದು ಹೇಳಿ ಯಾಕೆ ಜನರನ್ನು ಮಂಕುಬೂದಿ ಎರಚಿ ಸೌಹಾರ್ದತೆಗೆ ಕೊಳ್ಳಿ ಇಟ್ಟು ಅದರ ಬೆಂಕಿಯಲ್ಲಿ ಚಳಿ ಕಾಯಿಸುವ ತಮ್ಮವರ ಬಗ್ಗೆ ನೀವು ಪರವಹಿಸಿ ವಕಾಲತ್ತು ಮಾಡುವಿರಿ.ಇನ್ನು ಕಳ್ಳ ದಂಧೆಯಲ್ಲಿ ಹಣ ಮಾಡಿದವರಲ್ಲಿ ಮುಸಲ್ಮಾನರು ಮಾತ್ರವಲ್ಲ ಸಾಕಷ್ಟು ಅಮುಸ್ಲಿಮರೂ ಇದ್ದು ಅಂಕಿ ಅಂಶಗಳ ಪ್ರಕಾರ ಗಲ್ಫ್ ಸೇರಿದಂತೆ ಅತಿ ಹೆಚ್ಚು ವಿದೇಶಿ ಹಣ ಚಂದಾ ಪಡೆಯುವುದು ಸಂಘಪರಿವಾರದ ಸಂಘಟನೆ ಆಗಿರುವುದನ್ನು ಅಧ್ಯಯನ ಮಾಡುವಿರಾ ಸನ್ಮಾನ್ಯ ಅನಿತಾಜಿಯವರೇ…..ಇನ್ನು ಗೋಮಾಂಸ ಎಷ್ಟು ವಿದೇಶಕ್ಕೆ ರಫ್ತು ಆಗುತ್ತಿದೆ ಅದು ವಾಜಪೇಯಿಯವರ ಸರಕಾರದಲ್ಲಿಯೂ ಸಲೀಸಾಗಿ ಮುಂದುವರಿದ ವಿಚಾರ ಈಗ ಮೊದಿಜೀಯವರೂ ಮುನ್ನಡೆಸುವ ಸರ್ಕಾರದಲ್ಲಿ ಅದರ ಅಸ್ತಿತ್ವ ಅಲ್ಲಗೆಳೆಯಲು ಸಾಧ್ಯವೇ ಚರ್ಮದ ಕಾರ್ಖಾನೆಯ ಕಚ್ಚಾವಸ್ತು ಇದೆ ಆಗಿದ್ದು ಈ ಕಾರ್ಖಾನೆಗಳು ಸವರ್ಣೀಯ ಅಧೀನದಲ್ಲಿದ್ದು ಅಲ್ಲೆಲ್ಲ ತಲುಪದ ಸಂಘಪರಿವಾರದ ಗೋಪ್ರೇಮಿಗಳು ಯಾಕಾಗಿ ಹೊಟ್ಟೆಪಾಡಿಗೆ ದುಡಿಯುವ ಬಡಚಾಲಕನ ಮೇಲೆ ಮುಗಿ ಬೀಳುವರು ತಿಳಿಸಬಹುದೇ? ನಿಮ್ಮಲ್ಲಿ ಉತ್ತರ ಇರಲಾರದು ಇದ್ದಲ್ಲಿ ಮತ್ತು ಈ ಎಡಪಂಥೀಯ ವೇದಿಕೆ ಅನುವು ನೀಡಿದಲ್ಲಿ ಇನ್ನಷ್ಟು ಈ ಜನಗಳ ಡಾಂಭಿಕತೆಯನ್ನು ಹೊರಗೆಡಹಲಾಗುವುದು. ಸದ್ಯದ ಕುತಂತ್ರದ ಅಧಿಕಾರ ಎಂದೂ ಶಾಶ್ವತವಲ್ಲ ರಾಜಕೀಯವೆಂದರೆ ಅಸಾಧ್ಯವೇ ಸಾದಿತವಾಗುವ ವಿಲಕ್ಸಣತೆ ಹೊಂದಿದೆ ಮುಂದಿನ ದಿನಗಳು ಬಲದಿಂದ ಎಡಕ್ಕೆ ಚಲಿಸಿ ಎಡರಂಗದ ಅಧಿಕಾರದಲ್ಲಿ ಸೌಹಾರ್ದ ಭಾರತ ನಿರ್ಮಾಣವಾಗುವುದನ್ನೂ ಅಲ್ಲಗೆಳೆಯಲಾಗದು ಯಾಕೆಂದರೆ ಸ್ವಾರ್ಥರಹಿತ ಚಿಂತನಶೀಲರು ಎಲ್ಲಾ ಕಾಲದಲ್ಲಿಯೂ ಎಲ್ಲಾ ಜನಾಂಗಗಳಲ್ಲಿಯೂ ಇರುವರು.

  Reply
  1. ಅನಿತಾ

   ನನ್ನನ್ನುದ್ದೇಶಿಸಿ ಮಾಡಿದ ನಿಮ್ಮ ಆಪಾದನೆಗಳ ಗುಣಮಟ್ಟ ನೋಡಿದರೆ ನಾನು ಇದಕ್ಕೆಲ್ಲ ಉತ್ತರಿಸಬೇಕಾಗಿಲ್ಲ. ನಾನು ಹೇಳದ ಉದ್ದೇಶಿಸದ ವಿಚಾರಗಳನ್ನು ಆಪಾದಿಸುತ್ತ ಟೀಕಿಸುತ್ತಿದ್ದೀರಿ. ನಾನು ಆರ್ ಎಸ್ ಎಸ್ ಪರ ವಕಾಲತ್ತು ವಹಿಸಿಲ್ಲ. ದಯವಿಟ್ಟು ನಾನು ಹೇಳಿದ ವಿಚಾರಗಳನ್ನು ಸರಿಯಾಗಿ ಓದಿ ನಿಮ್ಮ ಭಿನ್ನಾಭಿಪ್ರಾಯ ಇದ್ದರೆ ಸಕಾರಣವಾಗಿ ಮಂಡಿಸಿ. ನಿಮಗೆ ಉತ್ತರಿಸಬೇಕಿಲ್ಲವಾದರೂ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ: ಹಿಂದೂ ಮೂಲಭೂತವಾದ ಮತ್ತು ಮುಸ್ಲಿಂ ಮೂಲಭೂತವಾದ ಎರಡನ್ನೂ ಸಮಾನವಾಗಿ ವಿರೋಧಿಸಬೇಕೆನ್ನುವ ನನಗೆ ನಿಮ್ಮ ಜಾತ್ಯತೀತ ಪಾಠಗಳನ್ನು ಹೇಳಿಕೊಡಬೇಕಾಗಿಲ್ಲ. ಆರ್ ಎಸ್ ಎಸ್ ನ ಓರ್ವ ನಾಯಕ ತಮ್ಮ ಸಂಘಟನೆ ಬಗ್ಗೆ ಹೆಗ್ಗಳಿಕೆ ಹೇಳಿಕೊಂಡದ್ದನ್ನು ಒಂದು ಪತ್ರಿಕೆ ಪ್ರಕಟಿಸಿದೆ ಎಂದಾಕ್ಷಣ ಆದು ಆರ್ ಎಸ್ ಎಸ್ಸಿನ ಬೆಳವಣಿಗೆಯ ಸೂಚಕವಲ್ಲ. ಆರ್ ಎಸ್ ಎಸ್ ಶಾಖೆಗಳಲ್ಲಿ ಎಷ್ಟು ಮಂದಿ ಭಾಗವಹಿಸುತ್ತಾರೆ? ಅವರ ಇತರ ಚಟುವಟಿಕೆಗಳೇನು? ಆರ್ ಎಸ್ ಎಸ್ ಬೆಂಬಲದಿಂದ ಯಾವ ಪಕ್ಷ ಕೇರಳದಲ್ಲಿ ಅಧಿಕಾರಕ್ಕೇರಿದೆ? (ಮೋದಿ ಕೇರಳಕ್ಕೆ ಬಂದಾಗ ಯಾವುದೇ ರಾಜಕೀಯ ಮುಖಂಡರಾದರೂ ಅವರ ಜತೆ ವೇದಿಕೆ ಹಂಚಿಕೊಂಡರೆ? ಆದರೆ ಅಬ್ದುಲ್ ನಾಸರ್ ಮದನಿ ಜತೆ ಗುರುತಿಸಿಕೊಂಡ ಎಷ್ಟು ರಾಜಕೀಯ ನಾಯಕರಿಲ್ಲ?) ಸ್ವಲ್ಪ ಮಟ್ಟಿಗೆ ಆರ್ ಎಸ್ ಎಸ್ ಪ್ರಭಾವವಿರುವ ಕಣ್ಣೂರಿನಲ್ಲಿ ಕಳೆದ ವರ್ಷ ಬಹುಮಂದಿ ಕಾರ್ಯಕರ್ತರೆಲ್ಲ ಸಿ.ಪಿ.ಎಂ ಸೇರಿದ್ದು ನಿಮಗೆ ಗೊತ್ತಿಲ್ಲವೆ? ಹಿಂದೂಗಳಲ್ಲಿ ಬ್ರಾಹ್ಮಣ, ಒಕ್ಕಲಿಗ, ವಿಶ್ವಕರ್ಮ, ನಾಯರ್, ಈಳವ ಮೊದಲಾದ ವಿವಿಧ ಸಮುದಾಯದವರಿಗೆ ತಮ್ಮದೇ ಆದ ಮಠಗಳಿವೆ, ದೇವಸ್ಥಾನಗಳಿವೆ. ವೇದಾಧ್ಯಯನ ಮಾಡಿದ ಅವರ ಗುರುಗಳು ಅಲ್ಲಿ ಪೂಜೆ ಮಾಡುತ್ತಾರೆ. ಈಳವ, ನಾಯರ್ ಹಾಗೂ ವಿಶ್ವಕರ್ಮ ಸಮುದಾಯದಲ್ಲಿ ವೇದಾಧ್ಯಯನ ಮಾಡಿ ವೇದಸೂಕ್ತಗಳನ್ನು, ಮಂತ್ರಗಳನ್ನು ಬಲ್ಲವರಿರುವುದು ನಿಮಗೆ ತಿಳಿದಿಲ್ಲವಾದರೆ ನಾನೇನು ಮಾಡಲಿ? ನಿಮ್ಮ ಆಕ್ರೋಷಕ್ಕೆ ಪ್ರತ್ಯುತ್ತರಗಳಿವೆ ಎಂದು ಸೂಚಿಸಲು ಹೀಗೆ ಹೇಳುತ್ತೇನೆ ಹೊರತು ಹಿಂದೂ ಧರ್ಮವನ್ನು ಎತ್ತಿಹಿಡಿಯುವುದಾಗಲೀ ಮುಸ್ಲಿಂ ಧರ್ಮವನ್ನು ತೆಗಳುವುದಾಗಲೀ ನನ್ನ ಉದ್ದೇಶವಲ್ಲ, ಅದರಲ್ಲಿ ನನಗೆ ಆಸಕ್ತಿಯೂ ಇಲ್ಲ. ನನ್ನ ಸಿಟ್ಟಿರುವುದು ಧರ್ಮಗಳ ಬಗೆಗಾಗಲೀ ಆ ಧರ್ಮವನ್ನಾಚರಿಸುವ ಸಾಮಾನ್ಯಜನರ ಬಗೆಗಾಗಲೀ ಅಲ್ಲ. (ಗಲ್ಫಿಗೆ ಹೋಗಿ ಕಷ್ಟಪಟ್ಟು ದುಡಿದು ಸಾಮಾನ್ಯ ಬದುಕಿಗಿಂತ ಉನ್ನತಿಗೇರಿದ ಮುಸ್ಲಿಮರೂ ಖಂಡಿತ ಇದ್ದಾರೆ. ಆದರೆ ನಾನು ಉದ್ದೇಶಿಸಿದ ಕುಬೇರರು ಆ ಗುಂಪಿನವರಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದೇನೆ) ಎಲ್ಲ ಧರ್ಮಗಳಲ್ಲಿರುವ ಮೂಲಭೂತವಾದಿಗಳನ್ನು, ಪ್ರಗತಿವಿರೋಧಿಗಳನ್ನು, ಸ್ತ್ರೀ ಶೋಷಕರನ್ನು ನಾನು ಸಮಾನವಾಗಿ (ಒತ್ತಿ ಹೇಳುತ್ತೇನೆ-‘ಸಮಾನವಾಗಿ, ಪಕ್ಷಪಾತವಿಲ್ಲದೆ, ನನ್ನ ಧರ್ಮದ ಮೂಲಭೂತವಾದಿಗಳ ಬಗ್ಗೆ ರಿಯಾಯಿತಿ ತೋರಿ ಅವರನ್ನು ಸಮರ್ಥಿಸಿಕೊಳ್ಳದೆ) ವಿರೋಧಿಸುತ್ತೇನೆ. ಹಿಂದೂ ಧರ್ಮದ critical insider ಗಳನ್ನೂ ಇಸ್ಲಾಂ ಧರ್ಮದ critical insider ಗಳನ್ನೂ ಸಮಾನವಾಗಿ ಗೌರವಿಸುತ್ತೇನೆ. ಇದೇ ನೈಜ ಜಾತ್ಯತೀತ ನೀತಿ ಎಂದು ನಾನು ತಿಳಿದಿದ್ದೇನೆ ( ಆ ಕಾರಣದಿಂದಲೇ ಕೇರಳದಲ್ಲಿ ಪಿ.ಡಿ.ಪಿ ಮೂಲಭೂತವಾದಿ ಅಬ್ದುಲ್ ನಾಸರ್ ಮದನಿ ಜತೆ ಸಿ.ಪಿ.ಎಂ ನ ಪಿಣರಾಯಿ ವಿಜಯನ್ ವೇದಿಕೆ ಹಂಚಿಕೊಂಡಾಗ ಅದೇ ಪಕ್ಷದ ಅಚ್ಯುತಾನಂದನ್ ಬಲವಾಗಿ ವಿರೋಧಿಸಿದರು) ನನ್ನಲ್ಲಿ ಮೂಲಭೂತವಾದ, ಅಸಹನೆ ಕಾಣುವ ನೀವು ಆತ್ಮ ಶೋಧನೆ ಮಾಡಿಕೊಳ್ಳಿ. ನೀವು ನೈಜ ಜಾತ್ಯತೀತರೆ? ನಿಮಗಿರುವುದು ಸ್ವಧರ್ಮ (ಮುಸ್ಲಿಂ) ಪ್ರೇಮವಲ್ಲವೆ? ಅದಕ್ಕಾಗಿ ತಾನೆ ಹಿಂದೂಧರ್ಮವನ್ನು ವಿರೋಧಿಸುವಲ್ಲಿ ಕಾಣುವ ತೀವ್ರ ಹುರುಪು ಇಸ್ಲಾಂ ಮೂಲಭೂತವಾದಿಗಳನ್ನು (ಗಮನಿಸಿ-ಇಸ್ಲಾಂ ಧರ್ಮವನ್ನಲ್ಲ) ವಿರೋಧಿಸುವಲ್ಲಿ ಕಂಡುಬರುವುದಿಲ್ಲ? ದಯವಿಟ್ಟು ಗಮನಿಸಿ- ತನ್ನ ಧರ್ಮದ ಮೂಲಭೂತವಾದಿಗಳನ್ನು ವಿರೋಧಿಸಲು ಸಿದ್ಧವಿಲ್ಲದವರಿಗೆ ಇನ್ನೊಂದು ಧರ್ಮವನ್ನು ತೆಗಳುವ ನೈತಿಕ ಹಕ್ಕಿಲ್ಲ. ನಿಮ್ಮ ಧರ್ಮದ critical insider ಆದ ಮೇಲಿನ ಲೇಖನ ಬರೆದ ಲೇಖಕರನ್ನೂ ಸಹಿಸಿಕೊಳ್ಳಲಾಗದ ನೀವು ನನ್ನ ಜಾತ್ಯತೀತ ಮೂಲವನ್ನು ಅನುಮಾನಿಸುವ ನೈತಿಕಹಕ್ಕನ್ನೇ ಕಳೆದುಕೊಂಡಿದ್ದೀರಿ. ಇನ್ನೊಂದು ಸ್ಪಷ್ಟನೆ: ಸಂವಿಧಾನ ತಿದ್ದುಪಡಿಮಾಡಿ ಮುಸ್ಲಿಂ ಹೆಂಗಸರಿಗೆ ಶೇ 50 (ಅಂದರೆ ಸಂಪೂರ್ಣ) ಮೀಸಲಾತಿ ನೀಡಿದರೂ ನಾನು ಸಂತಸಪಡುತ್ತೇನೆ. (ಆದರೆ ಮುಸ್ಲಿಂ ಗಂಡಸರಿಗೆ ಮೀಸಲಾತಿ ನೀಡುವ ಅಗತ್ಯವಿಲ್ಲ. ಯಾಕೆಂದರೆ ಬದುಕುವ ಹಲವು ದಾರಿಗಳು ಅವರಿಗೆ ಗೊತ್ತಿವೆ.) ಸರಕಾರ ಬಡ ಮುಸ್ಲಿಂ ಸ್ತ್ರೀಯರ ಸಂಪೂರ್ಣ ಶಿಕ್ಷಣ ವೆಚ್ಚ ವಹಿಸಲಿ. ಮುಸ್ಲಿಂ ಸಮಾಜ ಮುಂದೆ ಬರಬೇಕಾದರೆ, ಮೂಲಭೂತವಾದ ಕಡಿಮೆಯಾಗಬೇಕಾದರೆ ಮುಸ್ಲಿಂ ಸ್ತ್ರೀಯರು ವಿದ್ಯಾವಂತರಾಗಬೇಕು, ಮಾತ್ರವಲ್ಲದೆ ವೈಚಾರಿಕತೆ-ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಮತ್ತು ಪುರುಷಾವಲಂಬನೆ ಅಗತ್ಯವಿಲ್ಲದೆ ಸ್ವತಂತ್ರರಾಗಬೇಕು. ವಿದ್ಯಾವಂತ ವಿಚಾರವಾದಿ ಮುಸ್ಲಿಂ ತಾಯಿ ಮಾತ್ರ ತನ್ನ ಮಗುವನ್ನು ಬಾಲ್ಯದಿಂದಲೇ ಯೋಗ್ಯವಾಗಿ ಬೆಳೆಸಬಲ್ಲಳು. ಮೂಲಭೂತವಾದ ಹೇಳಿಕೊಟ್ಟು ಹಾದಿತಪ್ಪಿಸುವ ಮುಲ್ಲಾಗಳಿಂದ ಮೌಲಿಗಳಿಂದ ಪಾರುಮಾಡಬಲ್ಲಳು.

   Reply
 32. Sharada halli

  ಹಿಂದೂ ಧರ್ಮದ ಹುಳುಕುಗಳನ್ನು ಪಟ್ಟಿ ಮಾಡಿದ ಮಾನ್ಯ ಕುಕ್ಕಾಜೆಗಳೇ ತಾವು ಪಿಂಜಾರ ದರವೇಶ, ಮತ್ತು ನದಾಫರನ್ನು ಇಮಾಂ ರನ್ನಾಗಿ ಮಾಡುವಿರಾ? ಹೋಗಲಿ ನೀವು ಭಾರತದ ಮುಸಲ್ಮಾನರು ಎಂದಾದರೂ ಹಜ್ನ ಪ್ರಮುಖ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೀರಾ? ಹೋಗಲಿ ನಿಮ್ಮನ್ನು ಅಂದರೆ ಭಾರತೀಯ ಮುಸಲ್ಮಾನರನ್ನು ಎಂದಾದರೂ ಅವರು ಮುಸಲ್ಮಾನರೆಂದು ಹೇಳಿದ್ದಾರೆಯೇ? ನಿಮ್ಮನ್ನೂ ಹಿಂದೂಗಳೆಂದೇ ಅಲ್ಲವೆ ಅವರು ಸಂಬೋಧಿಸುವದು. ಯಾವುದೇ ಏಶಷ್ಯಾದ ಕ್ರಿಸ್ಚಿಯನ್ ಒಬ್ಬ ಪೋಪ್ ಆಗಬಹುದೆ? ಎಲ್ಲಾ ಧರ್ಮಗಳಲ್ಲಿ ಹುಳುಕುಗಳಿವೆ. ಆದರೆ ನಿಮ್ಮ ಕಣ್ಣಿಗೆ ಕಾಣುವದು ಮಾತ್ರ ಹಿಂದೂ ಧರ್ಮದ ಹುಳುಕು ಮಾತ್ರ. ಅಲ್ಲವೆ? ಎಲ್ಲಾ ಧರ್ಮಗಳಲ್ಲಿನ ಮೂಢನಂಬಿಕೆ ಆಚರಣೆಗಳನ್ನು ನಾವು ದ್ವೇಷಿಸೋಣ. ಕೇವಲ ಬೇರೆಯವರದನ್ನು ತೋರಿಸುವದು ನಮ್ಮದನ್ನು ಮಾತ್ರ ಜಾಣತನದಿಂದ ಮುಚ್ಚಿಡುವದು. ಇನ್ನು ನೀವು ಇನ್ನೊಂದು ಲೇಖನದಲ್ಲಿ ಬರೆದಿರುವಂತೆ ಕೇವಲ ಬ್ರಾಹ್ಮಣರು ಶೋಶಷಕರಾಗಿದ್ದಾರೆ ಎಂದಿರುವಿರಿ. ಹಳ್ಳಿಗಳಲ್ಲಿ ಎಷ್ಟು ಬ್ರಾಹ್ಮಣರ ಕುಟುಂಬಗಳಿವೆ? ಅವರಲ್ಲಿ ಮನುಶಾಸ್ತ್ರವನ್ನು ಓದಿದವರು ಎಶಷ್ಟು ? ಆರ್ ಎಸ್ ಎಸ್ ಬಗ್ಗೆ ಕೇಳಿದವರೆಷ್ಟು? ಆದರೂ ಅವರೆಲ್ಲಾ ದಲಿತರನ್ನು ಶೋಷಿಸುತ್ತಾರೆ? ನಮ್ಮೂರಿನ ಸುತ್ತಲಿನ ಎಷ್ಟೋ ಹಳ್ಳಿಗಳಲ್ಲಿ ಒಂದೇ ಒಂದು ಬ್ರಾಹ್ಮಣ ಕುಟುಂಬವಿಲ್ಲ. ಹೀಗಿದ್ದರೂ ದಲಿತರನ್ನು ಯಾರೂ ಊರೊಳಕ್ಕೆ ಬಿಟ್ತುಕೊಳ್ಲುವದಿಲ್ಲ. ನಿಮ್ಮ ಸಾಬರೆ ಅವರನ್ನು ಮುಟ್ತಿಸಿಕೊಳ್ಳುವದಿಲ್ಲ. ಅವರ ಬಾವಿಯಲ್ಲಿ ನೀರು ತರುವದಿಲ್ಲ.(ದಲಿತರಿಗೆ ಪ್ರತ್ಯೇಕ ಬಾವಿ ಇವೆ.) ಆದರೆ ಹೆಸರು ಮಾತ್ರ ಬ್ರಾಹ್ಮಣರದು. ಇನ್ನು ಇವತ್ತಿನವರೆಗೆ ಭಾರತ ಆಳಿದವರು ಯಾರು ಸ್ವಾಮಿ? ಬ್ರಾಹ್ಮಣರೆ? ಕರ್ನಾಟಕದಲ್ಲಿ ಕುರುಬರು ಬೇಡರು ಜೈನರು ಲಿಂಗಾಯತರು ಒಕ್ಕಲಿಗರು ರಾಜ್ಯ ಕಟ್ಟಿ ರಾಜ್ಯಭಾರ ಮಾಡಿದ್ದಾರೆ? ಅವರ ಕೈಯ್ಯಲ್ಲೇ ಅಧಿಕಾರವಿದ್ದಾಗ ತಮ್ಮ ಜನರನ್ನು ಉದ್ದಾರ ಮಾಡಬೇಕಿತ್ತಲ್ಲವೆ? ಹೋಗಲಿ ಈಗಲೂ ಕೂಡ ವಿಧಾನ ಪರಿಷತ್ತು ವಿಧಾನ ಸಬೆ ಲೋಕಸಬಭೆ ಇವುಗಳಿಗೆ ಆರಿಸಿ ಬರುವವರಾರು?? ಯಾರಕೈಯ್ಯಲ್ಲಿ ಅಧಕಾರವಿದೆ? ಈಗಲಾದರೂ ಶೂದ್ರಾದಿಗಳ ಉದ್ಧಾರ ಆಗಿದೆಯಾ? ಅಥವಾ ಶ್ರೇಣೀಕೃತ ವ್ಯವಸ್ಥೆ ಹೋಗಿದೆಯಾ? ಬ್ರಾಹ್ಮಣರಿರುವದೇ 3% ಅದರಲ್ಲಿ ಎಡವಾದಿಗಳು ಅಂದರೆ ಇರುವ ಮೂರು ಪ್ರತಿಶತದಲ್ಲೇ ಎಡವಾದಿಗಳು 90% ಹಾಗಿದ್ದಾಗ ದಲಿತರ ವಿರುದ್ದಧ ಮುಸಲ್ಮಾನರ ವಿರುದ್ಧ ಸಶೂದ್ರರನ್ನು ಎತ್ತಿ ಕಟ್ಟುವವರ ಪ್ರತಿಶತವೆಶಷ್ಟು? ? ? ಕೇವಲ 0.001% ಕೇವಲ ಅಷ್ಟೇ ಸಂಖ್ಯೆಯಿಂದಲೇ ನೂರು ಕೋಟಿಗಟ್ಟಲೇ ಜನರನ್ನು ಎತ್ತಿ ಕಟ್ಟಿ ತಾವು ಹೇಳಿದಂತೆ ಕ್ಜೇಳುವಂತೆ ಮಾಡಿದ್ದಾರೆಂದರೆ ಒಂದೋ ಅವರು ಭೂಮಿಯ ಮೇಲೆ ನಡೆದಾಡುವ ದೇವರೇ ಇರಬೇಕು. ಇಲ್ಲವೆ ಮೋಡಿಗಾರರಾಗಿರಬೇಕು. ಇಲ್ಲವೆ ಭಾರತದ ನೂರುಕೋಟಿಗಳು ಮಹಾ ಮೂರ್ಖರಾಗಿರಬೇಕಾಗುತ್ತೆ.

  ಇನ್ನು ಸಲಾಂ ಬಾವ ಅವರಿಗೆ ಅವರು ನನ್ನ ಪ್ರಶ್ನೆಗೆ ಏನು ಉತ್ತರಿಸುತ್ತಾರೆಂದು ಮೊದಲೇ ಹೇಳಿದ್ದೆ. ಅದೇ ರೀತಿ ಉತ್ತರಿಸಿದ್ದೀರಿ ಧನ್ಯವಾದಗಳು.

  Reply
 33. ak kukkaje

  ಅನಿತಾ ರವರಲ್ಲಿ ಕೇಳಿದ ಪ್ರಶ್ನೆಗೆ ಶಾರದಾ ಹಳ್ಳಿ ಯವರ ಉತ್ತರ ಇವರಿಬ್ಬರೂ ಒಂದೇ ವ್ಯಕ್ತಿಯೇ ತಮ್ಮ ಬಲಪಂಥವನ್ನು ಎಡಪಂತೀಯರಲ್ಲಿ ಹರಡಲು ಎಲ್ಲ ಪ್ರತಿಕ್ರಿಯೆಗಳನ್ನು ಪ್ರಕಟಿಸುವ ವರ್ತಮಾನದ ವೈಶಾಲ್ಯತೆಯ ಪತ್ರಿಕಾ ನಿಲುವನ್ನು ದುರುಪಯೋಗಪಡಿಸಲು ಸ್ವಲ್ಪ ಮಟ್ಟಿಗೆ ಎಡ ನಿಲುವಿನ ವಿಚಾರದ ವೇಷ ಕಟ್ಟಿ ಬಂದವರೇ ಎಂಬ ಸಂದೇಹವಿದೆ ಅದೇನಿದ್ದರೂ ನಿಮ್ಮ ಪ್ರಶ್ನೆಯ ಉತ್ತರ ನೀಡುವೆ ಇಸ್ಲಾಮಿನಲ್ಲಿ ಅದಾವ ಮೊಹಲ್ಲಾದ ಅದಾವ ಮೂಲದ ವ್ಯಕ್ಥಿಯಿದ್ದರೂ ಧಾರ್ಮಿಕ ಅರಿವು ಮತ್ತು ಅನುಸರಣೆ ಸರಿಯಾಗಿದ್ದವನಾದಲ್ಲಿ ಖಂಡಿತಾ ಆತನಿಗೆ ಇಮಾಮನ ಸ್ಥಾನದಲ್ಲಿ ನಿಲ್ಲುವ ಅಧಿಕಾರ ಯಾ ಅರ್ಹತೆ ಇದೆ.ಇನ್ನು ಒಬ್ಬ ಬಡಬ್ರಾಹ್ಮಣನ ಕುರಿತು ನನ್ನ ವಿಶ್ಲೇಷಣೆ ಇಲ್ಲ ಆದರೆ ಬ್ರಾಹ್ಮಣಶಾಹಿಯನ್ನು ಬೆಂಬಲಿಸುವ ಸಕಲ ಸವರ್ಣೀಯ ಅಲ್ಪಸಂಖ್ಯಾತರ ಬಗ್ಗೆ ಹೇಳಿದ್ದು ಅವರು ಬಡಪಾಯಿ ಅಮಾಯಕ ಹಿಂದುಳಿದ ಜನರನ್ನು ತಮ್ಮ ಶಾಹಿತ್ವಕ್ಕೆ ಕಬಳಿಸಿರುವರು

  ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವ್ಯತ್ಯಾಸಗಳನ್ನು ಪ್ರತಿಯೊಬ್ಬ ಪ್ರಜೆಯೂ ಅರಿತಿದ್ದು ಮತ್ತು ಈ ಬಗ್ಗೆ ಜಾಗೃತರಾಗಿದ್ದರೆ,ಸಮಾಜದಲ್ಲಿನ ಮೇಲು ಕೀಳು ಭಾವನೆ ಹೋಗಲಾಡಿಸಿ ಸರ್ವ ಮಾನವರು ಸಮಾನರೆಂಬ ನಿಲುವು ಬಲಗೊಂಡು ಶಾಂತಿಯ ವಾತಾವರಣಕ್ಕೆ ಸಹಕಾರಿಯಾಗಲೂಬಹುದು.

  ಅಂದರೆ ಒಬ್ಬ ವ್ಯಕ್ತಿಯು ಬ್ರಾಹ್ಮಣನಾಗಿ ಜನಿಸಿ ಬದುಕುತ್ತಿರುವ ಮಾತ್ರಕ್ಕೆ ಆತನನ್ನು ಶೋಷಣೆಯ ವಕ್ತಾರ ಎಂದು ತಿಳಿಯುವುದು ಖಂಡಿತಾ ಸರಿಯಲ್ಲ.ಆದರೆ ಜನಾಂಗೀಯವಾದವಾದ ಪ್ಯಾಸಿಸಂ ಎಂಬ ನಿಲುವಿಗೆ ತಿಳಿದೋ ತಿಳಿಯದೆಯೋ ಬದ್ದರಾದ ಎಲ್ಲರನ್ನೂ ಬ್ರಾಹ್ಮಣ್ಯವಾದಿಗಳಾಗಿ ಗುರುತಿಸಬೇಕಾಗಿದೆ. ಅದರಲ್ಲಿ ಅಮಾಯಕರಾದ ಮುಗ್ದ ಹಿಂದುಳಿದ ವರ್ಗದವರೂ ಈ ಪಕ್ಷಗಳ ಮೂಲಕ ಅಧಿಕಾರ ಪದವಿಗಳಿಸುವ ರಾಜಕೀಯ ಸ್ವಾರ್ಥಕ್ಕಾಗಿ ಮೇಲಾಟ ನಡೆಸುವ ಮುಸ್ಲಿಮರೂ ಕ್ರೈಸ್ತರೂ ಇರಬಹುದಾಗಿದ್ದು. ಇವರೆಲ್ಲರಿಗೂ ಬ್ರಾಹ್ಮಣ್ಯ ಏನಾಗಿರುವುದು? ಎಂಬ ಬಗ್ಗೆ ಅರಿವು ಮೂಡಿ ಹುಟ್ಟು ಸವರ್ಣೀಯನಾಗಿಯೂ (ಹುಟ್ಟಿನಲ್ಲಿ ಎಲ್ಲರೂ ಮಾನವರು ಯಾರೂ ಮೇಲು ಕೀಳು ಅಲ್ಲ ಎಂಬ ವಿಚಾರ ಸದ್ಯ ಬದಿಗಿರಿಸೋಣ) ಬ್ರಾಹ್ಮಣಶಾಹಿಯನ್ನು ವಿರೋಧಿಸುವ ನಿಸ್ವಾರ್ಥಿಗಳ ಜತೆ ಸೇರುವುದಾದಲ್ಲಿ ಈ ಪ್ಯಾಸಿಸಂ ಎಂಬ ವಿಷ ದೇಶದಿಂದ ನಿರ್ಮೂಲನಗೊಳ್ಳುವುದು ಖಡಾಖಂಡಿತವಾಗಿದೆ. ಯಾಕೆಂದರೆ ದೇಶದಲ್ಲಿನ ಮೂರು ಶೇಕಡಾ ಇರುವ ಅಲ್ಪ ಸಂಖ್ಯಾತ ಅದರಲ್ಲೂ ಸ್ವಾರ್ಥಹಿತಾಸಕ್ತಿ ಹೊಂದಿದ ಸವರ್ಣೀಯ ಬ್ರಾಹ್ಮಣ ಕುಲಗಳಿಂದ ಮಾತ್ರವಾಗಿ ಇದರ ಅಸ್ತಿತ್ವ ಉಳಿಯಲಾರದು.ಈ ಮೂರು ಶೇಕಡಾ ಮಂದಿ ಜನರು ಭಾರತೀಯ ಬಹುಸಂಖ್ಯಾತ ಮಂದಿಗೆ ಕೋಮುವಾದದ ಅಮಲನ್ನು ನೀಡಿ ತಮ್ಮ ಅಧಿಕಾರವನ್ನು ಹೊಂದಿರುವುದಲ್ಲದೆ ೭೦% ಇರುವ ಅಧಿಕಾರಶಾಹಿಯನ್ನು ಕಬಳಿಸಿ ತನ್ನದಾಗಿಸಿ ಉಳಿದ ೯೭% ಜನತೆಗೆ ಬಾಕಿ ಉಳಿದ ೩೦% ಅಧಿಕಾರವನ್ನು ಹಂಚುವುದರಲ್ಲಿ ಸಫಲವಾಗಿದೆ. ಇವರ ಈ ಯಶಸ್ವಿಯ ಹಿಂದಿನ ಕುತಂತ್ರವನ್ನು ಅರಿಯವಲ್ಲಿ ಅನಕ್ಷರಿಯೂ ಅನೇಕಾನೇಕ ಅವಿದ್ಯಾವಂತರನ್ನೂ ಹೊಂದಿರುವ ಶೋಷಿತ ವಂಚಿತ ಬಹುಜನ ಭಾರತೀಯರು ವಿಫಲರಾದುವುದೇ ಅವರ ಅಸ್ತಿತ್ವದ ರಹಸ್ಯ ಹಾಗೂ ಇತ್ಯಾದಿ ವಿಶ್ಲೇಷಣೆ ವಿಮರ್ಶೆಗಳೆಲ್ಲವೂ ಅದರ ಹಿಂದುಳಿದ ಹಿಂಬಾಲಕರಿಗೆ ಅರ್ಥೈಸಲು ಅಸಾಧ್ಯವಾಗುವಷ್ಟು ರೀತಿಯಲ್ಲಿ ಅವರ ಬ್ರೈನ್ ವಾಶ್ ಗೊಳಿಸುವುದರಲ್ಲಿ ಅವರಲ್ಲಿನ ಶಾಖೆಗಳು ಸಫಲವಾಗಿವೆ ಆದ್ದರಿಂದಲೇ ಇವರು ಹಿಂದುಳಿದ ವರ್ಗದ ಜನಗಳಾಗಿಯೂ ಪ್ಯಾಸಿಸಂ ಎಂಬ ಸಿದ್ದಾಂತವನ್ನೇ ಅರ್ಥೈಸದೆ ಅದರ ಅಮಾಯಕರಾದ ಅನುಯಾಯಿಗಳಾಗಿ ಉಳಿದಿದ್ದು, ಆದ್ದರಿಂದಲೇ ಈ ಜನಗಳ ಮುಂದೆ ಅದಾವ ವಿವರಣೆ ಸಮೀಕ್ಷೆಗಳನ್ನು ನೀಡಿದರೂ ಅವೆಲ್ಲವೂ ಕೋಣನ ಮುಂದೆ ಕಿನ್ನರಿ ಬಾರಿಸಿದ ರೀತಿಗ ಸಮಾನವಾಗುತ್ತಿರುವುದು ದುರದೃಷ್ಟಕರವಾಗಿದೆ

  Reply
  1. Sharada halli

   [[ಅನಿತಾ ರವರಲ್ಲಿ ಕೇಳಿದ ಪ್ರಶ್ನೆಗೆ ಶಾರದಾ ಹಳ್ಳಿ ಯವರ ಉತ್ತರ ಇವರಿಬ್ಬರೂ ಒಂದೇ ವ್ಯಕ್ತಿಯೇ ತಮ್ಮ ಬಲಪಂಥವನ್ನು ಎಡಪಂತೀಯರಲ್ಲಿ ಹರಡಲು ಎಲ್ಲ ಪ್ರತಿಕ್ರಿಯೆಗಳನ್ನು ಪ್ರಕಟಿಸುವ ವರ್ತಮಾನದ ವೈಶಾಲ್ಯತೆಯ ಪತ್ರಿಕಾ ನಿಲುವನ್ನು ದುರುಪಯೋಗಪಡಿಸಲು ಸ್ವಲ್ಪ ಮಟ್ಟಿಗೆ ಎಡ ನಿಲುವಿನ ವಿಚಾರದ ವೇಷ ಕಟ್ಟಿ ಬಂದವರೇ ಎಂಬ ಸಂದೇಹವಿದೆ ]] ನಿಮ್ಮ ಮಾತಿನ ಅರ್ಥ ನೀವು ಹೇಳುವದನ್ನು ಎಲ್ಲರೂ ಒಪ್ಪಬೇಕು. ಇನ್ನೊಬ್ಬರು ಮಾತನಾಡಲೇ ಬಾರದು. ಹಾಗಿದ್ದರೆ ನೀವೇಕೆ ಸಲಾಂಬಾವಾ ಕೇಳಿದ ಪ್ರಶ್ನೆಗೆ ಅನಿತಾ ಉತ್ತರಿಸುತ್ತಿದ್ದಾಗ ನಡುವೆ ಬಂದಿರಿ? ನೀವು ಬರಬಹುದು ಇನ್ನೊಬ್ಬರು ಬರಬಾರದು. ಮತ್ತು ಇದು ಎಡಪಂಥೀಯ ಬ್ಲ್ಲಗ್ ಇಲ್ಲಿ ಬಲವಿಚಾರಗಳನ್ನು ಪ್ರಕಟಿಸಬಾರದೆಂಬುದು ನಿಮ್ಮ ಪರೋಕ್ಷ ಅನಿಸಿಕೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಇದೇನಾ? ಇನ್ನೊಬ್ಬರದನ್ನು ಕೇಳಲೇಬಾರದೆನ್ನುವ ನಿಲುವಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಇನ್ನೊಂದು ಹೆಸರಿದೆಯಾ? ನಿಮಗೆ ಹೇಗೆ ನಿಮ್ಮ ನಿಲುವು ಹೇಳುವ ಸ್ವಾತಂತ್ರ್ಯವಿದೆಯೋ ಹಾಗೆ ಇನ್ನೊಬ್ಬರಿಗು ಇದೆ. ಮೇಲೆ ರಾಘವೇಂದ್ರ ಅವರು ಕೇಳಿದ ಪ್ರಶ್ನೆಗೆ ನೀಬಿಬ್ಬರೂ ನುಣುಚಿಕೊಳ್ಳುತ್ತಿರುವಿರಿ. ಮೊದಲು ಉತ್ತರಿಸುವ ಕೆಲ್ಸ ಮಾದಿ. ನಂತರ ಬಲ ಎಡ ಪಂಥ ಇರಲಿ. ನನ್ನ ಮಟ್ಟಿಗೆ ಹಿಂದೂಗಳನ್ನು ಅದರಲ್ಲೂ ಬ್ರಾಹ್ಮಣರನ್ನು ಬೈಯುವದು ಎಡ ಪಂಥ . ಹಾಗೆ ಮುಸಲ್ಮಾನರ ಅತಿರೇಕಗಳನ್ನು ಕಂಡೂ ಕಾಣದಂತೆ ಕೂಡುವದೇ ಎಡ ಪಂಥ.

   Reply
   1. Nagshetty Shetkar

    ಮಾನ್ಯರೇ, ಪಾಕಿಸ್ತಾನದಲ್ಲಿ ಮೂಲಭೂತವಾದಿಗಳು ನೂರಾರು ಶಾಲಾ ಮಕ್ಕಳ ಬರ್ಬರ ಹತ್ಯೆ ನಡೆಸಿದ್ದಾರೆ. ನಾನು ಈ ಹಿಂದೆಯೇ ಹೇಳಿದ್ದೇನೆ ಮೂಲಭೂತವಾದವು ಮೂಲಭೂತವಾಗಿ ಜನದ್ರೋಹಿ ಹಾಗೂ ಜೀವವಿರೋಧಿ ಅಂತ. ಮೂಲಭೂತವಾದವು ಸಮಾಜವನ್ನು ಸುಟ್ಟು ಬೂದಿ ಮಾಡುವಂತಹ ದುಷ್ಟ ಶಕ್ತಿ. ಮೂಲಭೂತವಾದದ ಸಮರ್ಥನೆ ಸರ್ವಥಾ ಸಲ್ಲದು. ಅಮೀನ ಮಟ್ಟು ಅವರಿಗೆ ತಾತ್ಕಾಲಿಕವಾಗಿ ಬುದ್ಧಿ ಭ್ರಮಣೆ ಆಗಿ ಅಲ್ಪಸಂಖ್ಯಾತರ ಮೂಲಭೂತವಾದವನ್ನು ಸಮರ್ಥಿಸಿಕೊಂಡರೋ ಏನೋ. ಆದರೆ ಅವರ ಬುದ್ಧಿಗೇಡಿ ಹೇಳಿಕೆಗಳನ್ನು ಗಹನವಾದ ಚಿಂತನೆ ಎಂಬಂತೆ ಲೇಖನ ರೂಪದಲ್ಲಿ ವರ್ತಮಾನವು ಪ್ರಕಟಿಸಿದ್ದು ಸರಿಯಲ್ಲ. ಗೋಹರ್ ಹಲ್ಲೆಯನ್ನು ಮೂಲಭೂತವಾದದ ಭೂತ ಕನ್ನಡಿಯಲ್ಲಿ ನೋಡುವುದು ಎಷ್ಟು ತಪ್ಪೋ ಅಷ್ಟೇ ದೊಡ್ಡ ತಪ್ಪು ಮೂಲಭೂತವಾದವನ್ನು ಅಲ್ಪಸಂಖ್ಯಾತ-ಬಹುಸಂಖ್ಯಾತ ಎಂದು ಪ್ರತ್ಯೇಕಿಸಿ ನೋಡುವುದು. ವರ್ತಮಾನದ ಸಂಪಾದಕರಿಗೆ ಇದು ಹೊಳೆಯದಿದ್ದದ್ದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಪಾಕಿಸ್ಥಾನದ ಬಾಲ ಹತ್ಯಾಕಾಂಡವು ಎಲ್ಲರ ಒಳ ಚಕ್ಷುವನ್ನು ತೆರೆಯಿಸಲಿ.

    Reply
    1. Sharada halli

     ನಾಗಶೆಟ್ಟರೆ ನಿಮ್ಮ ಹೆಸರಿನಿಂದ ಬೇರೆ ಯಾರಾದೂ ಈ ಕಮೆಂಟ ಬರೆದಿರುವಿರೋ ಅಥವಾ ನೀವೇ ಹೀಗೆ ಬದಲಾಗಿರುವಿರೋ?? ಇದಂತೂ ಒಳ್ಳೆಯ ಬೆಳವಣಿಗೆಯೇ. ಅದಕ್ಕಾಗಿ ಧನ್ಯವಾದಗಳು. ನೀವು ಹೇಳುವಂತೆ ನಾನು ಯಾವಾಗಲೂ ಎರಡೂ ಮೂಲಭೂತವಾದಗಳನ್ನು ತಿರಸ್ಕರಿಸುತ್ತೇನೆ. ಆದರೆ ಇಲ್ಲಿ ಇರ್ಷಾದರ ಬಗ್ಗೆ ಕೆಲವರು ಹರಿ ಹಾಯುತ್ತಿದ್ದಾರೆ. ಮತ್ತು ತಾವು ಎಡ ಪಂಥದವರೆಂದೂ ವರ್ತಮಾನ ಎಡ ಪಂಥದವರಿಗೆ ಮೀಸಲೇಂದೂ ನನ್ನ ಹಾಗೂ ಅನಿತಾರ ಕಮೆಂಟಗಳು ಬಲಪಂಥವೆಂದೂ ಹಾಗೂ ಅವನ್ನು ಹೇಗೆ ಪ್ರಕಟ ಪಡಿಸುವರೆಂದೂ ಕೇಳಿದ್ದಾರೆ. ಅವರು ಕುಕ್ಕಿಲಾಜೆ ಅವರು. ಇರಲಿ ನೀವು {ಕುಕ್ಕಿಲಾಜೆ} ಇರ್ಷಾದ್ ಅಂಥ ಮೂಲಭೂತವಾದದ ವಿರೋಧಿಯನ್ನು ಸಮರ್ಥಿಸದೇ ಸಲಾಂ ಬಾವ ರಂಥ ಮೂಲಭೂತವಾದಿಗಳನ್ನು ಸಮರ್ಥಿಸುತ್ತೀರಲ್ಲಾ? ನೀವೆಂಥ ಎಡವಾದಿಗಳು? ನೀವೂ ಮುಖವಾಡ ಧರಿಸಿದವರೇ ಅನ್ನಬೇಕಲ್ಲವೆ? ಅಲ್ಲದೇ ಕುಕ್ಕಿಲಾಜೆ ಅವರೆ ನೀವು ಎಡಪಂಥದ ಬ್ಲಾಗಿನಲ್ಲಿ ನಿಮ್ಮನ್ನು ಬರೆಯಲು ಬಿಟ್ತಿದ್ದಾರಲ್ಲಾ? ಎನ್ನುತ್ತೀರಿ? ಎಡ ಪಂಥ ಅಭಿಪ್ರಾಯ ಸ್ವಾತಂತ್ರ್ಯವುಳ್ಳದ್ದೆಂದು ತಿಳಿದಿದ್ದೆ. ನಿಮ್ಮಂಥ ಬಲಪಂಥಿಯರನ್ನು ಅದು ಹೇಗೆ ಕಮೆಂಟು ಹಾಕಲು ಬಿಟ್ಟಿದೆ? ಮೇಲೆ ನಾನು ಪ್ರಶ್ನಿಸಿದಂತೆ ಎದ ಪಂಥವೆಂದರೆ ಕೇವಲ ಹಿಂದೂ ಮೂಲಭೂತವಾದಿಗಳನ್ನು ಟೀಕಿಸಿ ಮುಸ್ಲೀಂ ಮೂಲಭೂತವಾದಿಗಳನ್ನು ಎತ್ತಿ ಹಿಡಿಯುವಂಥದ್ದೇ???

     Reply
 34. A.K.Kukkaje

  First of all excuse me for English comments because this is during night from my friends room which the kannada software not available in this pc anyhow come to the debate…

  I would like to tell you that i never tried to break your freedom of expression but we have to clarify our ideology first. if your interest in fascism,,you can disclose it but here you were appreciated them and same time says that you were not a supporter. instead of this you can declare you are the RSS supporter..what is wrong there that is your personal freedom. see here i declared i am supporting some views of leftist but not atheist,,,so here i would like to tell some facts that there are many incidents of anti national which they are accused Muslims,but later it is proved the miscreants are from RSS only or bhajarangi or ramsena who is pakistani flag hoisted in sindhagi of bijapur are they muslims during BJP government only proved they are ramsena members.such as many incidents did by these people but media published they are muslims what about blast of sanjotha express malengao etc also study about what aseemaanada disclosed.if the miscreants muslims they are the terrorist if the person is not muslims then he is mental is this democracy,is this equality if he is so called muslim name then permanently in jail if not then immediately bail….this is what is happening in the republic india. where is the value of our constitution?

  please stop this dirty politics and respect our constitution… today we can appropriate the killer of gandhiji also even being parliamentarian is this freedom of expression?

  Reply
 35. ಅನಿತಾ

  ವರ್ತಮಾನ ಬ್ಲಾಗಿನಲ್ಲಿ ಕಮೆಂಟ್ಸ್ ರೂಪದಲ್ಲಿ ಅಭಿಪ್ರಾಯ ಸೂಚಿಸಿದ್ದನ್ನೂ ಸಂದೇಹಿಸುವ ಎ,ಕೆ, ಕುಕ್ಕಾಜೆಯಂಥವರ ಜತೆ ಯಾವ ಸಂವಾದ ನಡೆಸುವ ಅಗತ್ಯ ನನಗಿಲ್ಲ. ವರ್ತಮಾನ ಬ್ಲಾಗಿನ ನಿರ್ವಾಹಕರೇ ನನ್ನಂಥವರ ಕಮೆಂಟ್ಸ್ ಅನಗತ್ಯವಾದರೆ ಸ್ಪಷ್ಟಪಡಿಸಿರಿ. ಹಿಂದೂ ಮೂಲಭೂತವಾದ ಮತ್ತು ಮುಸ್ಲಿಂ ಮೂಲಭೂತವಾದ ಎರಡನ್ನೂ ಸಮಾನವಾಗಿ ವಿರೋಧಿಸುವ ನನ್ನಂಥವರ ನಿಲುವೇ ನೀವು ತಿರಸ್ಕರಿಸುವ ಬಲಪಂಥೀಯವೂ, ಕೋಮುವಾದವೂ ಆಗಿದ್ದರೆ ಅದನ್ನೂ ಸ್ಪಷ್ಟೀಕರಿಸಿ. ಎಡಪಂಥದ ಹೆಸರಿನಲ್ಲಿ ಮುಸ್ಲಿಂ ಮೂಲಭೂತವಾದವನ್ನು ಎತ್ತಿಹಿಡಿದು ಅದನ್ನು ಸಮರ್ಥಿಸುತ್ತಿರಬೇಕೆ ಎಂದೂ ಸ್ಪಷ್ಟಪಡಿಸಿ. ಮುಸ್ಲಿಂ ಮೂಲಭೂತವಾದವನ್ನು ವಿರೋಧಿಸುವ ಮುಸ್ಲಿಮರಿಗೂ ಕೂಡ ಇಲ್ಲಿ ಅಭಿವ್ಯಕ್ತಿಯ ಅವಕಾಶವಿಲ್ಲವೆ ತಿಳಿಸಿ. ಒಂದಂತೂ ಸತ್ಯ. ಇಸ್ಲಾಂ ಧರ್ಮವನ್ನು ಮೂಲಭೂತವಾದಿಗಳಿಂದ ವಿಮೋಚನೆಗೊಳಿಸುವುದು ಕಷ್ಟಸಾಧ್ಯವೆಂದೇ ತೋರುತ್ತದೆ. ಯಾಕೆಂದರೆ ಈ ಧರ್ಮದೊಳಗೆ ಸೇರಿಕೊಂಡಿರುವ ಕೆಲವು ಮೂಲಭೂತವಾದಿಗಳಿಗೆ ಅವರ ಧರ್ಮದ ಮೂಲಭೂತವಾದಿ ಮನಸ್ಸುಗಳಿಂದ ಮಾತ್ರವಲ್ಲ, ಪ್ರಗತಿಪರ/ಎಡ ಎಂದು ತೋರಿಸಿಕೊಳ್ಳುವವರಿಂದಲೂ ಬೆಂಬಲವಿದೆ. ಮಾತ್ರವಲ್ಲ ತಮ್ಮ ಧರ್ಮ ಪರಿಶುಧ್ಧವಾಗಿದೆ, ಯಾರು ಕೂಡ ತಮ್ಮ ಧರ್ಮದ ಮೂಲಭೂತವಾದಿಗಳನ್ನು ಟೀಕಿಸಬಾರದು ಎಂಬ ಅಸಹನೆಯುಳ್ಳವರೂ ಇದ್ದಾರೆ.

  Reply
 36. Abdul khader kukkaje

  * ನಿನ್ನೆ ನಾನು ನೀಡಿದ ಇಂಗ್ಲಿಷ್ ಪ್ರತಿಕ್ರಿಯೆಯಲ್ಲಿ appropriate ಎನ್ನುವುದು typing error ಆಗಿದ್ದು appriciate ಆಗಿ ಓದಬೇಕಾಗಿ ವಿನಂತಿ.

  ಸನ್ಮಾನ್ಯ ಶಾರದಾ ಹಳ್ಳಿಯವರ ಪ್ರಶ್ನೆಯೊಂದು ಉತ್ತರಿಸಲು ನನ್ನಿಂದ ಬಿಟ್ಟು ಹೋಗಿದ್ದು ಅದೆಂದರೆ ಹಜ್ ನ ವೇಳೆ ಭಾರತೀಯ ಮುಸ್ಲಿಮರಿಗೆ ಅಲ್ಲಿನ ಎಲ್ಲಾ ಮಸೀದಿಗೆ ಪ್ರವೇಶ ಇದೆಯೇ? ಉತ್ತರ “ಖಂಡಿತಾ ಇದೆ” ಎಂದಾಗಿದೆ. ಈ ತಪ್ಪಾದ ಮಾಹಿತಿ ತಮಗೆ ಎಲ್ಲಿಂದ ಲಭಿಸಿತೋ? ಯಾಕೆಂದರೆ ಹಜ್ ಎಂಬುವುದೇ ಸಮಾನತೆಯ ಸಂಕೇತವಾಗಿದೆ.ಅಲ್ಲಿ ಯಾವುದೇ ಪ್ರಾದೇಶಿಕತೆಯ ಅಥವಾ ಇನ್ನಾವುದೇ ಆಧಾರದಲ್ಲಿ ಮೇಲು ಕೀಳು ಇಲ್ಲ.ಎಲ್ಲರಿಗೂ ಎಲ್ಲಾ ಮಸೀದಿಗೂ ಮುಕ್ತ ಪ್ರವೇಶವಿದೆ. ಅಲ್ಲಿ ಎಂದಲ್ಲ ಇಸ್ಲಾಮಿನಲ್ಲಿ ಅದಾವುದೇ ಮಸೀದಿಯಲ್ಲಿಯೂ ಅಂತಹ ನಿರ್ಭಂದತೆ ಇಲ್ಲ ಮಸೀದಿಗೆ ಪ್ರವೇಶಿಸಿದ ಕೂಡಲೇ ಮುಂದಿನ ಸಾಲನ್ನು ಪೂರ್ತಿಗೊಳಿಸಿ ನಂತರ ಬಂದವರು ಅದಾವನಿದ್ದರೂ ಹಿಂದಿನ ಸಾಲಲ್ಲಿರುವುದು ರೂಡಿ ಅದಾವುದೇ ಪಂಕ್ತಿಬೇಧಕ್ಕೆ ಅಲ್ಲಿ ಅವಕಾಶವಿಲ್ಲ. ಮುಂದಿನ ಪ್ರಶ್ನೆ ಭಾರತೀಯ ಮುಸ್ಲಿಮರನ್ನು ಅಲ್ಲಿನ ಅರಬರು ಮುಸ್ಲಿಂ ಎಂದು ಒಪ್ಪುತ್ತಾರೆಯೇ? ಉತ್ತರ: ಒಪ್ಪುತ್ತಾರೆ. ಅದೆಷ್ಟೋ ಭಾರತೀಯ ಮುಸ್ಲಿಮರು ಅಲ್ಲಿನ ಮಸೀದಿಗಳಲ್ಲಿ ಇಮಾಂ ಕೆಲಸವನ್ನೂ ನಿರ್ವಹಿಸಿತಿದ್ದು ಅವರ ಹಿಂದೆ ಅರಬ್ ಮುಸ್ಲಿಮರೂ ಸೇರಿದಂತೆ ಸಕಲ ಮುಸ್ಲಿಮರೂ ನಮಾಜುಗಳಲ್ಲಿ ತೊಡಗುತ್ತಾರೆ.ಮುಂದುವರಿದ ನೀವು ಅವರು ನಿಮ್ಮನ್ನು ಹಿಂದೂ ಎಂದು ಕರೆಯುವುದಲ್ಲವೇ? ಅಲ್ಲ ಆದರೆ ಹಿಂದ್ ಅಥವಾ ಹಿಂದಿಗಳೆಂದು ಕರೆಯುವ ಹಲವರಿದ್ದಾರೆ ಒಂದು ರೀತಿಯಲ್ಲಿ ಇದು ಬಹಳ ಪ್ರಮುಖ ಪ್ರಶ್ನೆ ಯಾಕೆಂದರೆ ನಾನು ಈ ಮೊದಲೇ ತಿಳಿಸಿದಂತೆ ಹಿಂದೂ ಎಂಬುವುದು ಒಂದು ಒಂದು ಪ್ರಾದೇಶಿಕತೆಯ ಹೆಸರೇ ವಿನಾ ಧರ್ಮದ್ದಲ್ಲ ಆದ್ದರಿಂದಲೇ ಅರಬ್ ರಾಷ್ಟ್ರಗಳಲ್ಲಿ ಮುಸ್ಲಿಮರನ್ನು ಮಾತ್ರವಲ್ಲ ಎಲ್ಲ ಭಾರತೀಯರನ್ನು ಹಿಂದ್ ಅಥವಾ ಹಿಂದಿಗಳೆಂದು ಕರೆಯುವ ವಾಡಿಕೆ ಇದೆ ಈ ಬೌಗೋಳಿಕ ವ್ಯಾಪ್ತಿಯಲ್ಲಿ ಬದುಕುವ ಎಲ್ಲರೂ ಹಿಂದ್, ಹಿಂದೂ ಯಾ ಹಿಂದಿಗಳೇ ವಿನಾ ನಿಮ್ಮ ಕೇಸರಿ ದ್ವಜ ಹಿಡಿದವನನ್ನು ಹಿಂದೂ ಆಗಿಸಿರುವುದು ಒಂದು ರಾಜಕೀಯ ಲಾಭಕ್ಕೆ ಮಾತ್ರ ನೀವೇ ಹೇಳಿದಂತೆ ಎಲ್ಲ ವರ್ಗದವರಿಗೆ ಅವರವರ ದೇವಾಲಯ ಇದೆ.ಹಾಗಿದ್ದರೆ ಯಾವುದು ಹಿಂದೂ ಧರ್ಮ? ಯಾವುದು ಅಲ್ಲಿನ ಸರ್ವರೂ ಒಪ್ಪುವ ಗ್ರಂಥ.ನಿಜವಾದ ಹಿಂದೂ ಬ್ರಾಹ್ಮಣನೆ? ಹಿಂದೂ ಈ ಶಬ್ದದ ಮೂಲ ಯಾವುದು ಎಲ್ಲಿಂದ ಉಗಮವಾಯಿತು ಎಂದಿನಿಂದ ಚಾಲ್ತಿಗೆ ಬಂತು ಇವೆಲ್ಲವೂ ಅಧ್ಯಯನ ನಡೆಸಿದರೆ ನಿಮ್ಮ ಎಲ್ಲ ಪೊಳ್ಳುತನವೂ ಅರ್ಥವಾಗಬಲ್ಲದು. ಇನ್ನು ನಾನು ಶಾರದಾ ಹಳ್ಳಿ ಮತ್ತು ಅನಿತಾ ಮೇಡಂ ಇಬ್ಬರೂ ಒಂದೇ ಆಗಿರುವರೆ ಎಂಬ ಸಂದೇಹ ವ್ಯಕ್ತಪಡಿಸಿದ್ದು ತಮಗೆ ಮುಜುಗರವಾಗಿದ್ದರೆ ಅದಕ್ಕಾಗಿ ವಿಷಾದ ಕೋರುತ್ತೇನೆ. ನೀವು ನಿಮ್ಮ ಸಿದ್ದಾಂತವನ್ನು ವ್ಯಕ್ತಪಡಿಸದೆ ಒಂದು ರೀತಿಯಲ್ಲಿ ಅಡ್ಡಗೋಡೆಯ ಮೇಲೆ ದೀಪ ಹಚ್ಚುವ ರೀತಿಗೆ ಮಾತ್ರ ಆ ರೀತಿ ಬರೆದೆ ನಿಮ್ಮ ಮಾತಲ್ಲಿ ತಾವು ಕಟ್ಟಾ ಕೇಸರಿ ಪ್ರತಿಪಾದಕರಾಗಿರುವ ಜತೆಯಲ್ಲೇ ಅದರ ಬೆಂಬಲಿಗ ಅಲ್ಲ ಎಂದು ಹೇಳಿಕೆ ನೀಡುವುದು ಮುಂದೆ ಬರಬಹುದಾದ ಪ್ರಶ್ನೆಗಳಿಂದ ನುಣುಚುವ ಉದ್ದೇಶಕ್ಕೆ ಎಂಬುವುದು ವ್ಯಕ್ತ. ಕೇಸರಿ ಎಂದು ಒಪ್ಪಿದರೆ ಅವರ ಪುಂಡಾಟಿಕೆಗೆ ನೀವು ನಿರುತ್ತರರಾಗುತ್ತೀರಿ ಅಲ್ಲವೇ? ಆದ್ದರಿಂದ ನೀವು ನಿಮ್ಮ ನಿಲುವು ವ್ಯಕ್ತಪಡಿಸದೆ ಎಡ ಬಲ ಅದಾವ ಮುಖವಾಡ ಧರಿಸಿ ಬಂದರೂ ನಿಮ್ಮ ವಾದ,ಮಾತಿನ ವರಸೆ ಎಲ್ಲವೂ ನಿಮ್ಮ ಮುಖವಾಡ ಸರಿಸಿ ಕೇಸರಿ ಬಣ್ಣ ಹೊರ ಸೂಸುತ್ತಲೇ ಇರುತ್ತದೆ.

  ಇನ್ನು ನೀವಾಗಲಿ ಸನ್ಮಾನ್ಯ ಮೇಡಂ ಅನಿತಾರವರು ಇರಲಿ ನನ್ನಾವ ಪ್ರಶ್ನೆಗೂ ಉತ್ತರ ನೀಡದೆ ಪಲಾಯನಗೈದಿರುವಿರಿ. ಅದೆಂದರೆ ಕೇಸರಿ ಪಡೆ ಮಾಡಿದ ಹಲವಾರು ಕೃತ್ಯ ಮುಸ್ಲಿಮರ ತಲೆಗೆ ಕಟ್ಟಲು ಮಾಡಿದ ಪ್ರಯತ್ನ ಬಿಜಾಪುರದ ಸಿನ್ಧಗಿಯಲ್ಲಿ ರಾಮಸೇನ ಜನರು ತೋರಿದ ಪಾಕಿಸ್ತಾನಿಪ್ರೇಮ ಗೋ ಮಾಂಸದ ರಾಜಕೀಯ ಸರಕಾರದ ರಫ್ತು ಯಾಕಾಗಿ ಮುಂದುವರಿಯುತ್ತಿದೆ ವಾಜಪೇಯಿ ಸರಕಾರ ಯಾಕಾಗಿ ಧಾಖಲೆಯ ಬೀಫ್ ರಫ್ತಿನಿಂದ ಹೆಸರು ಗಳಿಸಿತು ಯಾಕಾಗಿ ನಿಮ್ಮ ಗೋಪ್ರೆಮಿಗಳು ಚರ್ಮದ ಕಾರ್ಖಾನೆಗೆ ತಲುಪುತ್ತಿಲ್ಲ ಅಲ್ಲಿ ದನದ ಚರ್ಮ ಕಚ್ಚಾ ವಸ್ತು ಅಲ್ಲವೇ? ಎಲ್ಲಿದೆ ಉತ್ತರ ಅದರ ನಿಮ್ಮ ಉತ್ತರವೆ ನಾವು ಕೇಸರಿ ಅಲ್ಲ ಎಂಬ ಪಲಾಯನವಾದ ಅಲ್ಲವೇ?

  ನಾಗ ಶೆಟ್ ಸರ್ ನೀವು ನೀಡುವ ಹೆಚ್ಚಿನ ಅನಿಸಿಕೆಗಳ ಬಗ್ಗೆ ಗೌರವವಿದೆ. ಪಾಕಿಸ್ತಾನದಲ್ಲಿ ನಡೆಯುವುದು ಮೂಲಭೂತವಾದ ಅಲ್ಲ ಪರಂತು ಮತಿಭ್ರಾಂತಿ ಎನ್ನಬಹುದು ಇತ್ಯಾದಿ ಜನಗಳು ಇಸ್ಲಾಮಿನ ಹೆಸರಿನಲ್ಲಿ ಗುರುತಿಸುವುದೇ ಸಮುದಾಯಕ್ಕೆ ಅವಮಾನ.ಮತ್ತು ಈ ಜನರು ಸಮಾಜಕ್ಕೆ ಕಳಂಕವಾಗಿದೆ.

  ಹಾಗೆಂದು ಹೆಸರಿನ ಮೇಲೆ ಧರ್ಮವನ್ನು ನಿಂದಿಸುವುದು ಸರಿಯಲ್ಲ ನಾನು ಇಲ್ಲಿ ಹೇಳುವುದು ಅದನ್ನೇ “ಸರ್ವೇ ಜನಃ ಸುಖಿನೋ ಭವಂತು” ಎಂದು ಪ್ರತಿಪಾದಿಸುವ ಧರ್ಮಕ್ಕೂ ಕೇಸರಿಪಡೆಗೂ ಸಂಬಂಧವೇ ಇಲ್ಲ ಎಂದಾಗಿದೆ.

  ಆನಂದ ಯಾನೆ ಮೋಹನ ಎಂಬ ದುರುಳನ ಕ್ರತ್ಯವನ್ನು ಹಿಂದುವಿನ ಕೆಲಸ ಎನ್ನಬಹುದೇ!?

  ಆದರೆ ಇಲ್ಲಿ ಪ್ರಶ್ನಾರ್ಹ ಹೆಣ್ಣು ಮಕ್ಕಳ ಕಣ್ಮರೆಗೆ ಲವ್ ಜಿಹಾದ ಬಣ್ಣ ಬಳಿದು ಪ್ರತಿರೋಧಿಸಿದ ಕೇಸರಿ ಸ್ವಾಮಿಗಳು ಅದು ಆತನ ಕೃತ್ಯ ಎಂದು ತಿಳಿದಾಗ ಸುಮ್ಮನಾದವು ಮಣಿಪಾಲದಲ್ಲಿನ ಪ್ರಕರಣವೂ ಮುಸ್ಲಿಂ ಹೆಸರಿನ ವ್ಯಕ್ತಿ ಇರಬಹುದೆಂದು ಕೇಸರಿಪಡೆ ಮುಂದೆ ಬಂದವು ಆದರೆ ಆರೋಪಿ ಕೇಸರಿ ವಕ್ತಾರ ಎಂದಾಗ ಹೆಣ್ಣಿನ ಅರೆನಗ್ನತೆ ಮತ್ತು ಕಾಲೇಜು ಕ್ಯಾಂಪಸ್ ನ ಮಾದಕದ್ರವ್ಯ ಚರ್ಚಾ ವಿಷಯವಾಯಿತು ಈ ಮಾಧ್ಯಮಗಳ ದ್ವಿಮುಖ ನೀತಿಯನ್ನು ಖಂಡಿಸದಿರಲು ಸಾಧ್ಯವೇ ಹೇಳಿ.

  ಇನ್ನು ರಾಘವೇಂದ್ರ ಎಂಬವರ ಪ್ರಶ್ನೆ ನನ್ನ ಗಮನಕ್ಕೆ ಬಂದಿಲ್ಲ ದಯವಿಟ್ಟು ಅದನ್ನು copy paste ಮೂಲಕ ನೀಡಿರಿ ನೋಡಬಲ್ಲೆ ಹುಡುಕಾಟಕ್ಕೆ ಸಮಯವಿಲ್ಲ.

  Reply
 37. ಅನಿತಾ

  ನನ್ನ ಮಾತುಗಳನ್ನು ಸರಿಯಾಗಿ ಓದಿ ಪ್ರತಿಕ್ರಿಯಿಸದೆ ಏನೇನೋ ಊಹಿಸಿಕೊಂಡು ನನ್ನ ತಲೆಗೆ ಬಲಪಂಥವನ್ನೋ ಇನ್ನೊಂದನ್ನೋ ಹೇರಿಸುವವರಿಗೂ ತಮ್ಮ ಹಸಿ ಹಸಿ ಸ್ವ ಧರ್ಮ ಪ್ರೀತಿಯನ್ನೂ ಸ್ವ ಧರ್ಮದಲ್ಲಿರುವ ಮೂಲಭೂತವಾದವನ್ನೂ ಸಮರ್ಥಿಸಿಕೊಳ್ಳುವ ಸ್ವಭಾವವನ್ನು ಎಡಪಂಥದ ಹೆಸರಲ್ಲಿ ಮರೆಮಾಚುವವರಿಗೂ ಉತ್ತರಿಸುವುದೆ ಬೇಡ ಎಂದುಕೊಂಡಿದ್ದೆ. ಆದರೆ ಮತ್ತೆ ಮತ್ತೆ ಮಾಡುವ ಆಪಾದನೆಗಳಿಗೆ ಸ್ಪಷ್ಟೀಕರಣ ನೀಡದಿದ್ದರೆ ಸರಿಯಾಗುವುದಿಲ್ಲ. 1, ಶಾರದಾ ಹಳ್ಳಿ ಅವರು ಯಾರೆಂದೇ ನನಗೆ ಗೊತ್ತಿಲ್ಲ. ಅವರ ಮಾತುಗಳನ್ನು ಸಮರ್ಥಿಸುವುದಾಗಲೀ ವಿರೋಧಿಸುವುದಾಗಲೀ ನಾನು ಮಾಡಿಲ್ಲ. ಯಾಕೆಂದರೆ ಒಂದು ಚರ್ಚೆಯಲ್ಲಿ ಭಾಗವಹಿಸುವ ಎಲ್ಲ ಮಂದಿಯ ಜತೆಗೂ ಸಂವಾದಿಸಲು ಸಹಜವಾಗಿಯೇ ಸಾಧ್ಯವಾಗುವುದಿಲ್ಲ. ಅದನ್ನು ಅರ್ಥ ಮಾಡಿಕೊಳ್ಳದೆ ನಾನು ಮತ್ತು ಅವರು ಒಬ್ಬರೇ ವ್ಯಕ್ತಿ ಎಂದು ಭಾವಿಸುವುದು ಅಸಂಬದ್ಧ. 2. ಇಸ್ಲಾಂ ಧರ್ಮದ ಸಂದೇಶಗಳನ್ನು ತಪ್ಪಾಗಿ ತಿಳಿದುಕೊಂಡು, ಸ್ತ್ರೀಯನ್ನು ಅಪಮಾನಿಸಿ ಹುಚ್ಚಾಟವಾಡಿದ ಒಬ್ಬಾತ, ಅವನ ಹಿಂದಿನ ಪ್ರೇರಣೆಯಾಗಿರುವ ಮುಸ್ಲಿಂ ಮೂಲಭೂತವಾದ ಸಿದ್ದಾಂತಗಳು, ಅವುಗಳನ್ನು ಅದೇ ಧರ್ಮಕ್ಕೆ ಸೇರಿದ critical insider ಆಗಿರುವ ವಿಚಾರವಾದಿಗಳಾದ ಪ್ರಸ್ತುತ ಬರಹದ ಲೇಖಕರು ವಿರೋಧಿಸಿದ್ದು ಸಮಂಜಸವಾಗಿದೆ. ಎಲ್ಲ ಬಗೆಯ ಮೂಲಭೂತವಾದಗಳನ್ನೂ ವಿರೋಧಿಸುವುದೇ ನೈಜ ಜಾತ್ಯತೀತವಾದ ಎಂದು ತಿಳಿದವರಿಗೆ ಸಮಾಧಾನ ತಂದಿದೆ. ಮುಸ್ಲಿಮರಲ್ಲಿ critical insider ಗಳು ಬಹಳ ಕಡಿಮೆಯಾಗಿರುವಾಗ ಅಂತಹ ಆರೋಗ್ಯಕರ ಪ್ರವೃತ್ತಿ ತಳೆದ ಯುವ ಲೇಖಕನನ್ನು ಪ್ರೋತ್ಸಾಹಿಸುವುದನ್ನು ಬಿಟ್ಟು ಅದೇ ಅಪರಾಧ ಎಂಬಂತೆ ಚಿತ್ರಿಸಿದ ಖೋಟಾ ಜಾತ್ಯತೀತ ಮನಸ್ಸುಗಳನ್ನು ಖಂಡಿಸಿದ್ದೇನೆಯೇ ಹೊರತು ಎಲ್ಲಿಯೂ ಇಸ್ಲಾಂ ಅಥವಾ ಹಿಂದೂ ಧರ್ಮವನ್ನಾಗಲೀ ಆ ಧರ್ಮವನ್ನಾಚರಿಸುವ ಮುಗ್ಧ ಶ್ರದ್ಧಾಳುಗಳನ್ನು ಅವಮಾನಿಸಿಲ್ಲ. 3. ನನ್ನ ವಿರೋಧ ಹಿಂದೂ ಇಸ್ಲಾಂ ಎರಡೂ ಮತಗಳ ತತ್ವಗಳನ್ನು ತಿರುಚಿದ ಕೆಲವು ಮೂಲಭೂತವಾದ ವ್ಯಾಖ್ಯಾನಗಳು ಹಾಗೂ ಅವುಗಳನ್ನುಪಯೋಗಿಸಿ ಶೋಷಣೆ, ಹಿಂಸೆಗಿಳಿದಿರುವ ಮತೀಯವಾದಿಗಳ ಬಗ್ಗೆ ಎಂದು ಸ್ಪಷ್ಟಪಡಿಸಿದ್ದೇನೆ. ಹಿಂದೂ ಮತ್ತು ಮುಸ್ಲಿಂ ಎರಡೂ ಮತೀಯವಾದಗಳನ್ನು ಸಮಾನವಾಗಿ ವಿರೋಧಿಸಬೇಕು ಎಂಬುದೇ ನನ್ನ ನಿಲುವು. ಅದು ಕೆಲವರಿಗೆ ಕೇಸರಿಯಾಗಿ ಕಂಡರೆ ಕಂಡವರದೇ ದೋಷ, ಕಾಮಾಲೆ ಕಣ್ಣಿಗೆ ಕಾಣಿಸುವುದೆಲ್ಲ ಹಳದಿ. 4. ನಾನೆಲ್ಲೂ ಹಿಂದೂ ಮತೀಯವಾದಿಗಳನ್ನು ಸಮರ್ಥಿಸಿಲ್ಲ. ಅನಂತಮೂರ್ತಿಯವರ ಸಾವನ್ನು ಸಂಭ್ರಮಿಸಿದವರನ್ನು ಖಂಡಿಸುತ್ತೇನೆಂದು ಇದೇ ಲೇಖನದ ಪ್ರತಿಕ್ರಿಯೆಯೊಂದರಲ್ಲಿ ಹೇಳಿದ್ದೇನೆ. 5. ಕುಕ್ಕಾಜೆ ಎಂಬ ಮಹಾನುಭಾವರ ಪ್ರಶ್ನೆಗಳಿಗೆಲ್ಲ ಉತ್ತರಿಸುವುದು ಕಷ್ಟ. ಯಾಕೆಂದರೆ ನಾನು ಹೇಳಿದ ಮಾತನ್ನು ಬಿಟ್ಟು ಏನೇನೋ ಊಹಿಸಿ, ಏನೇನೋ ಕೇಳುತ್ತ ವಿಷಯಾಂತರ ಮಾಡುವವರ ಜತೆ ಸಂವಾದ ಅಸಾಧ್ಯ. ಆದರೂ ವಿವೇಕಯುಕ್ತ ಪ್ರಶ್ನೆ ಕೇಳಿದವರಿಗೆ ನನ್ನ ನಿಲುವು ಮೊದಲೇ ಸ್ಲಷ್ಟಪಡಿಸಿದ್ದೇನೆ. ಉದಾ: “ವಿದ್ಯಾಭ್ಯಾಸ, ಪ್ರಗತಿಯಿಂದ ಮುಸ್ಲಿಂ ಮೂಲಭೂತವಾದ ಕಡಿಮೆಯಾಗುವುದಿದ್ದರೆ ಸಂತೋಷ. ಮುಸ್ಲಿಂ ಸ್ತ್ರೀಯರಿಗೆ ಶೇ 50 ಮೀಸಲಾತಿ ನೀಡಿ. ಬಡ ಮುಸ್ಲಿಂ ಹುಡುಗಿಯರ ಶಿಕ್ಷಣದ ವೆಚ್ಚ ಸರಕಾರ ಭರಿಸಲಿ. ವಿಚಾರವಂತ ವಿದ್ಯಾವಂತ ಮುಸ್ಲಿಂ ತಾಯಿ ತನ್ನ ಮಗುವನ್ನು ಮೂಲಭೂತವಾದಕ್ಕೆ ಪ್ರೇರೇಪಿಸಲಾರಳು.” ಆದರೆ ಸ್ತ್ರೀ ವಿದ್ಯಾಭ್ಯಾಸವನ್ನೇ ವಿರೋಧಿಸುವ ತಾಲಿಬಾನ್ ಮನಸ್ಸುಗಳಿಗೆ ನನ್ನ ಮಾತುಗಳು ರುಚಿಸಿರಲಿಕ್ಕಿಲ್ಲ. ಅದನ್ನೂ ಮುಸ್ಲಿಂ ವಿರೋಧಿ ಎಂದೇ ಭಾವಿಸಿಯಾರು. 5, ತಮ್ಮ ಧರ್ಮದಲ್ಲಿರುವ ಹುಳುಕುಗಳನ್ನು ಮುಚ್ಚಿಟ್ಟು ಇಲ್ಲವೇ ಸಮರ್ಥಿಸಿಕೊಳ್ಳುತ್ತ ಅಥವಾ ಲಘುವಾಗಿ ಕಾಣುತ್ತ ಬೇರೆ ಧರ್ಮದ ಜಾತಿ, ದೈವಾರಾಧನೆ, ಸಿದ್ದಾಂತಗಳು, ಕೊನೆಗೆ ಧರ್ಮದ ಹೆಸರು-ಸ್ವರೂಪ (ಹಿಂದೂ ಧರ್ಮಕ್ಕೆ ಏಕ ದೇವರಿಲ್ಲ. ಆದುದರಿಂದ ಅದು ಪೊಳ್ಳು ಎನ್ನುವುದು) ಗಳನ್ನೆಲ್ಲ ಅಸಂಬದ್ಧ ಎಂದು ಎತ್ತಿ ತೋರಿಸುವುದು ಅನೈತಿಕವಾದುದು. ಅಂತಹ ಚರ್ಚೆಗಳಲ್ಲಿ ಭಾಗವಹಿಸುವ ಇಚ್ಚೆ ನನಗಿಲ್ಲ. ಹಾಗೆ ಮಾಡಿದ್ದೂ ಇಲ್ಲ. ಎಲ್ಲ ಧರ್ಮಗಳಿಗೂ ಅವುಗಳದೇ ತತ್ವ ಸ್ವರೂಪಗಳಿವೆ. ಅವುಗಳನ್ನು ಜನಪರವಾಗಿಯೂ ಬಳಸಬಹುದು, ಜನವಿರೋಧಿಯಾಗಿಯೂ ಬಳಸಬಹುದು. ಹಿಂದೂ ಧರ್ಮ ಮೇಲೋ ಇಸ್ಲಾಂ ಮೇಲೋ ಎಂಬ ಚರ್ಚೆ ಅನಗತ್ಯ. ಆದರೆ ಹಿಂದೂ ಮೂಲಭೂತವಾದಿಗಳು ಮುಸ್ಲಿಂ ಮೂಲಭೂತವಾದಿಗಳು ಇಬ್ಬರೂ ಸಮಾನವಾಗಿ ದೋಷಿಗಳು, ಅಪರಾಧಿಗಳು. ಮುಸ್ಲಿಂ ಮೂಲಭೂತವಾದಿಗಳು ಕ್ಷಮಾರ್ಹರು, ಹಿಂದೂ ಮೂಲಭುತವಾದಿಗಳು ಕ್ರೂರಿಗಳು ಎಂಬ ನಿಲುವು ಸರಿಯಲ್ಲ. ‘ಇಸ್ಲಾಂ ಧರ್ಮ ಕೆಟ್ಟದು ಹಿಂದೂ ಧರ್ಮ ಶ್ರೇಷ್ಠ’ ಎನ್ನುವ ಮನಸ್ಸಿನಷ್ಟೇ ‘ಹಿಂದೂ ಧರ್ಮ ಕೆಟ್ಟದು ಇಸ್ಲಾಂ ಧರ್ಮ ಶ್ರೇಷ್ಠ’ ಎಂಬ ಮನಸ್ಸೂ ಕೊಳಕು. 6. ‘ಮುಸ್ಲಿಂ ಮೂಲಭೂತವಾದ ಅಲ್ಪಸಂಖ್ಯಾತ. ಸ್ವರಕ್ಷಣೆಗಾಗಿ ಬೆಳೆಯುವುದು. ಅಪಾಯಕಾರಿಯಲ್ಲ” ಎಂಬರ್ಥದಲ್ಲಿ ಮಂಗಳೂರಿನಲ್ಲಿ ಒಬ್ಬರು ಜವಾಬ್ದಾರಿಯುತ ಹುದ್ದೆಯಲ್ಲಿರುವ ಜಾತ್ಯತೀತರು ಸಮರ್ಥಿಸಿಕೊಂಡ ಮರುದಿನವೇ ಪಾಕಿಸ್ತಾನದಲ್ಲಿ ಮುಸ್ಲಿಂ ಮೂಲಭೂತವಾದ ( ಅಲ್ಲ ಮತಭ್ರಾಂತು!) ಪೈಶಾಚಿಕವಾಗಿ ಅಟ್ಟಹಾಸಗೈದಿತಲ್ಲ. ಇದು ಯಾವ ಬಹುಸಂಖ್ಯಾತ ಮೂಲಭುತವಾದದ ಭಯದಿಂದ? ಸ್ತ್ರೀಯರ ಶಿಕ್ಷಣವನ್ನು ವಿರೋಧಿಸುವುದೇ ಇವರ ಉದ್ದೇಶವಲ್ಲವೆ? (ಮಲಾನಾಳಿಗೆ ಗುಂಡಿಕ್ಕಿದ ಪಾತಕಿಗಳಲ್ಲವೆ ಇವರು?) ಗುಜರಾತ್ ಹತ್ಯಾಕಾಂಡ ಖಂಡಿತ ಪೈಶಾಚಿಕ ಕೃತ್ಯವೇ ಹೌದು. ಆದರೆ ಪ್ರಗತಿಪರರ ನೆನಪಲ್ಲಿ ಅದು ಮಾತ್ರ ಉಳಿಯುತ್ತದೆ, ತಾಲಿಬಾನಿನಂಥವರ ಸಾವಿರ ಸಾವಿರ ಪೈಶಾಚಿಕ ಕೃತ್ಯಗಳು ಶೀಘ್ರ ‘ಕೇವಲ ಮತಭ್ರಾಂತಾಗಿ’ ಮರೆತು ಹೋಗುತ್ತವೆ. ಈ ಪ್ರವೃತ್ತಿ ಬದಲಾಗಿ ಎಲ್ಲ ಮೂಲಭೂತವಾದಗಳನ್ನೂ ಸಮಾನವಾಗಿ ವಿರೋಧಿಸುವ ಮನಸ್ಸು ನಮ್ಮದಾಗಬೇಕು. ಅದೇ ನೈಜ ಜಾತ್ಯತೀತವಾದ.

  Reply

Leave a Reply

Your email address will not be published.