ದೋಣಿ ಧ್ವಂಸ ಪ್ರಕರಣ: ಉತ್ತರ ಇಲ್ಲದ ಪ್ರಶ್ನೆಗಳು…

– ಶಿವರಾಜ್

ನಿಮಗೆ ನೆನಪಿರಬಹುದು. ಅಂದು ಅಕ್ಟೋಬರ್ 27, 2006. ಮೈಸೂರಿನ ಪೊಲೀಸರು ಇಬ್ಬರು ಶಂಕಿತ “ಉಗ್ರರನ್ನು” ನಾಟಕೀಯ ಸನ್ನವೇಶದಲ್ಲಿ ಬಂಧಿಸುತ್ತಾರೆ. ಅವರು ಫಹಾದ್ (24) ಮತ್ತು ಮೊಹಮ್ಮದ್ ಅಲಿ ಹುಸೇನ್ (24). ಬಂಧನ ಆಗುವಾಗ ಗುಂಡಿನ ಚಕಮಕಿ ಆಯಿತು. ಮೈಸೂರಿನ ಜನ ಭಯಭೀತರಾಗಿದ್ದರು. ಅಲ್ ಬದರ್ ಸಂಘಟನೆ ಜೊತೆ ಅವರು ಗುರುತಿಸಿಕೊಂಡಿದ್ದರು, ಕರ್ನಾಟಕದ ಹಲವೆಡೆ ದುಷ್ಕೃತ್ಯಗಳನ್ನು ನಡೆಸಲು ಸಂಚು ಹೂಡಿದ್ದರು ಎಂಬ ವರದಿಗಳು ಅಕ್ಟೋಬರ್ 27 ಹಾಗೂ 28ರ ದಿನಪತ್ರಿಕೆಗಳಲ್ಲಿ ಪ್ರಕಟವಾದವು.

ಈಗ ಎಂಟು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳಲು ಕಾರಣವಿದೆ. vikrantakarnataka-nikhil-gowda-Oct2606ಆ ಘಟನೆ ನಡೆದ ಒಂದು ದಿನದ ಹಿಂದೆಯಷ್ಟೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ಮಗ ನಿಖಿಲ್ ಗೌಡ ಸುದ್ದಿಯಲ್ಲಿದ್ದರು. ನಿಖಿಲ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೆಳಗಿನ ಜಾವ 2 ಗಂಟೆಯಲ್ಲಿ ಚರ್ಚ್ ಸ್ಟ್ರೀಟ್ ಹೊಟೇಲ್ ಒಂದಕ್ಕೆ ಹೋಗಿ ಚಿಕನ್ ಸರ್ವ್ ಮಾಡಿ ಎಂದು ಕೇಳಿದ್ದಾರೆ. ತಿನಿಸುಗಳೆಲ್ಲಾ ಖಾಲಿಯಾಗಿದೆ ಎಂದು ಹೊಟೇಲ್‌ನವರು ಹೇಳಿದ್ದ ಕಾರಣಕ್ಕೆ ಮಾತಿನ ಚಕಮಕಿ ನಡೆದು, ಕೆಲ ಗ್ಲಾಸುಗಳು ಪುಡಿಪುಡಿಯಾದವು. ನಂತರ ಇದೇ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾದವು. ಅಕ್ಟೋಬರ್ 26 ರ ಬೆಳಗಿನ ಜಾವ ನಡೆದ ಘಟನೆಯಾದ್ದರಿಂದ, ಅದೇ ದಿನ ಸುದ್ದಿವಾಹಿನಿಗಳಲ್ಲಿ ಮಾತ್ರ ಅದು ಸುದ್ದಿಯಾಯಿತು. ಆಗ ವಾಹಿನಿಗಳು ಈಗಿನಷ್ಟು ಪ್ರಭಾವಿಯಾಗಿರಲಿಲ್ಲ.

ಆದರೆ ಅದೇ ದಿನ ರಾತ್ರಿ 10.30 ರ ಸುಮಾರಿಗೆ ಈ ಎನ್‌ಕೌಂಟರ್ ನಾಟಕ ಮೈಸೂರಿನಲ್ಲಿ ನಡೆಯಿತು. ನಾಟಕ ಏಕೆಂದರೆ, ಅಂದು ಗುಂಡಿನ ಚಕಮಕಿ ಮೂಲಕ ಬಂಧನವಾದ ಆ ಇಬ್ಬರು ಯುವಕರು ಆ ಹೊತ್ತಿಗಾಗಲೇ ಪೊಲೀಸರ ಅನಧಿಕೃತ ಕಸ್ಟಡಿಯಲ್ಲಿ ಇಪ್ಪತ್ತು ದಿನ ಕಳೆದಿದ್ದರು. ಬಂಧನದ ನಾಟಕದ ನಂತರ ಆ ಹುಡುಗರು ಬಾಡಿಗೆಗಿದ್ದ ಮನೆಯ TheHinduMysoreಮಾಲೀಕರೇ “ಅರೇ ಈ ಹುಡುಗ್ರಾ..20 ದಿನದ ಹಿಂದೆನೇ ಪೊಲೀಸರು ಬಂದು ಹಿಡ್ಕೊಂಡು ಹೋಗಿದ್ರು. ಈಗ ಮತ್ತೆ ಎನ್ ಕೌಂಟರ್ ಆಯ್ತಾ..?” ಎಂದು ಮಾಧ್ಯಮದವರ ಮುಂದೆ ಪ್ರಶ್ನೆ ಮಾಡಿದ್ದರು. (http://www.thehindu.com/todays-paper/albadr-terrorist-plot-unearthed/article3066969.ece)

ಇದೇ ಘಟನೆಯ ಹಿನ್ನೆಲೆಯಲ್ಲಿ ಒಂದು ಇಂಟರೆಸ್ಟಿಂಗ್ ಮಾಹಿತಿ ಇದೆ. ಅದೇ ದಿನ ಕೆಲ ಪತ್ರಕರ್ತರಿಗೂ ಮಾಹಿತಿ ಗೊತ್ತಾಗಿದೆ. ಸಿಟಿ ಎಡಿಷನ್‌ಗಾಗಿ ಸಾಧ್ಯವಾದಷ್ಟು ಸುದ್ದಿ ಕಳುಹಿಸಿದ್ದಾರೆ. ಬಹುತೇಕ ಪತ್ರಿಕೆಗಳಲ್ಲಿ ಅದು ಒಂದು ಕಾಲಂನಷ್ಟು ಮಾತ್ರ ವರದಿಯಾಗಿತ್ತು. ಹೆಚ್ಚು ವಿವರವಾಗಿ ಕಳುಹಿಸಲು ಯಾರಿಗೂ ಸಮಯ ಇರಲಿಲ್ಲ ನೋಡಿ. ಘಟನೆ ನಡೆದದ್ದೇ 10.30 ರಾತ್ರಿ ಆದರೆ, ಪತ್ರಕರ್ತರಿಗೆ ತಿಳಿಯಲು ಒಂದು ಗಂಟೆಯಾದರೂ ಬೇಕು. ಆ ನಂತರ ಖಾತ್ರಿ ಪಡಿಸಿಕೊಂಡು, ಕಚೇರಿಗೆ ಸುದ್ದಿ ಮುಟ್ಟಿಸುವಲ್ಲಿ ತುಂಬಾ ತಡವಾಗುತ್ತದೆ. ರಾತ್ರಿಯೆಲ್ಲಾ ಇದೇ ಸುದ್ದಿಯ ಹಿಂದೆ ಬಿದ್ದಿದ್ದ ಪತ್ರಕರ್ತರಿಗೆ outlook-Nov1306-nikhil-gowdaಪೊಲೀಸರು ಪತ್ರಿಕಾಗೋಷ್ಟಿ ನಡೆಸಿ ಅಧಿಕೃತವಾಗಿ ಮಾಹಿತಿ ನೀಡುವ ಹೊತ್ತಿಗೆ ಮಾರನೆಯ ದಿನ (ಅಕ್ಟೋಬರ್ 27) ಬೆಳಗಾಗಿತ್ತು. ಪತ್ರಿಕಾ ಗೋಷ್ಟಿ ಮುಗಿಸಿಕೊಂಡು ಮನೆಗೆ ಹೋದವರಿಗೆ ಅಚ್ಚರಿ ಕಾದಿತ್ತು. ಆ ಹೊತ್ತಿಗೆ ಮನೆಗೆ ಬಂದಿದ್ದ ರಾಜ್ಯ ಮಟ್ಟದ ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಅದೇ ಘಟನೆ ಲೀಡ್ ಸುದ್ದಿಯಾಗಿ ಮುಖಪುಟದಲ್ಲಿ ಸಾಕಷ್ಟು ವಿವರವಾಗಿ ಪ್ರಕಟವಾಗಿತ್ತು!

ಆಗ ಪತ್ರಿಕಾ ವಲಯದಲ್ಲಿ ದಟ್ಟವಾಗಿ ಹರಡಿದ್ದ ಮಾತುಗಳನ್ನು ನಂಬುವುದಾದರೆ, ಅಂದು ರಾತ್ರಿ ನಡೆದ ಘಟನೆ ಬಗ್ಗೆ ಆ ಪತ್ರಿಕೆಯ ಪ್ರತಿಭಾವಂತ ಸಂಪಾದಕರಿಗೆ ಆ ಮೊದಲೇ ಮಾಹಿತಿ ಇತ್ತು. ಮೈಸೂರಿನ ತಮ್ಮ ವರದಿಗಾರರಿಗೆ ಆ ಬಗ್ಗೆ ಮೊದಲೇ ಹೇಳಿ, ಇಂತಹದೊಂದು ಘಟನೆ ನಡೆಯುವುದಿದೆ. ಆ ಬಗ್ಗೆ ನಿಗಾ ಇಡಿ ಎಂದು ಸೂಚಿಸಿದ್ದರು. ಹಾಗೂ ಮುಕ್ಕಾಲು ಪಾಲು ಸುದ್ದಿಯನ್ನು ಅವರೇ ಬೆಂಗಳೂರಿನಲ್ಲಿ ಕೂತು, ಬಹುಶಃ ಘಟನೆ ನಡೆಯುವ ಹೊತ್ತಿಗಾಗಲೇ, ರೆಡಿ ಮಾಡಿದ್ದರು! ನಂತರದ ದಿನಗಳಲ್ಲಿ ಎಲ್ಲಾ ಸುದ್ದಿ ಮಾಧ್ಯಮಗಳು ಆ ಇಬ್ಬರು ಬಂಧನವಾದವರ ಹಿನ್ನೆಲೆ, ದೂರಾಲೋಚನೆಗಳನ್ನು ಹುಡುಕುತ್ತಾ ಹೊರಟರು. ಹೊಟ್ಟೆಗೆ ಕೂಳಿಲ್ಲದೆ, ಚರ್ಚ್ ಸ್ಟ್ರೀಟ್ ನಲ್ಲಿ ಅನ್ನಕ್ಕಾಗಿ ಬಡಿದಾಡಿದವರ ಸುದ್ದಿ ಮೂಲೆ ಸೇರಿತು.

ಇದೇ ಧಾಟಿಯಲ್ಲಿ ಇರುವ ಮತ್ತೊಂದು ಘಟನೆ ನೆನಪಾಗುತ್ತಿದೆ. ಅದು ನಡೆದದ್ದು 1998 ರಲ್ಲಿ.

ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ತನ್ನ ಕಚೇರಿಯಲ್ಲಿ ಯುವತಿಯೊಂದಿಗೆ ಹೊಂದಿದ್ದ ಸಂಬಂಧದ ಕಾರಣ ವಿವಾದಕ್ಕೆ ಸಿಲುಕಿರುತ್ತಾರೆ. ಕಾಂಗ್ರೆಸ್ ಆತನ ತಪ್ಪುಗಳನ್ನು ಸಾರುವ ವರದಿಯೊಂದನ್ನು ಬಿಡುಗಡೆ ಮಾಡುವ ಮುನ್ನಾ ದಿನ (ಡಿಸೆಂಬರ್ 16, 1998), ಬಿಲ್ ಕ್ಲಿಂಟನ್ ಇರಾಕ್ ರಾಷ್ಟ್ರದ ಮೇಲೆ ವಾಯುದಾಳಿಗೆ ಆದೇಶಿಸುತ್ತಾರೆ. ಕಾಂಗ್ರೆಸ್ ನ ರಿಪಬ್ಲಿಕ್ ಪಾರ್ಟಿ ಸದಸ್ಯರು ಆಗ, ಕ್ಲಿಂಟನ್ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ದಾಳಿ ನಡೆಸಿದರು ಎಂದು ಆರೋಪಿಸುತ್ತಾರೆ. ಆ ಹೊತ್ತಿಗೆ ಕ್ಲಿಂಟನ್ ವಿರುದ್ಧ ಇಂಪೀಚ್ಮೆಂಟ್ ಪ್ರಕ್ರಿಯೆ ಆರಂಭವಾಗಿರುತ್ತೆ. (http://www.politico.com/news/stories/1207/7390.html)

ಅಧಿಕಾರದಲ್ಲಿರುವವರು ಮುಜುಗರದ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಆಗಾಗ ಇಂತಹ ಪ್ರಕರಣಗಳನ್ನು ಸೃಷ್ಟಿಸುತ್ತಾರೆ. ಪೊಲೀಸರ ಭಾಷೆಯಲ್ಲಿ ಹೇಳುವುದಾದರೆ, ಇವೆಲ್ಲವೂ ‘ಅಟೆಂಷನ್ ಡೈವರ್ಶನ್ ಪ್ರಕರಣಗಳು” – ಗಮನ ಬೇರೆಡೆಗೆ ಸೆಳೆದು ಕಳುವು, ಮೋಸ ಮಾಡುವ ಕೃತ್ಯಗಳು. ಬ್ಯಾಂಕ್ ನಿಂದ ಹಣವನ್ನು ಆಗಷ್ಟೆ ಬಿಡಿಸಿ ತರುವವರ ಮೈಮೇಲೆ ಏನನ್ನೋ ಎಸೆದು, ಅವರ ಗಮನ ಅತ್ತ ಹೋದಾಗ ಕೈಯಲ್ಲಿದ್ದ ಬ್ಯಾಗನ್ನು ಎತ್ತಿಕೊಂಡ ಪ್ರಕರಣಗಳು ಗೊತ್ತಲ್ಲ. ಈ ಅಧಿಕಾರಸ್ಥರು ಇಂತಹದೇ ಪ್ರಕರಣಗಳನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಮೋಸ ಹೋಗುವವರ ಸಂಖ್ಯೆಯೂ ದೊಡ್ಡದೇ.

ಸದ್ಯ ಒಂದು ವಾರದಿಂದ ನರೇಂದ್ರ ಮೋದಿ ಸರಕಾರ ಅಲ್ಲಲ್ಲಿ ಟೀಕೆಗಳಿಗೆ ಒಳಗಾಗಿದ್ದು ಸುಗ್ರೀವಾಜ್ಞೆ ಮೂಲಕ farmer-land-acquisitionಜಾರಿಗೆ ತರಲು ಉದ್ದೇಶಿಸಿರುವ ಭೂಸ್ವಾಧೀನ ತಿದ್ದುಪಡಿ ಕಾಯಿದೆ ವಿಚಾರವಾಗಿ. ದಿನೇ ದಿನೇ ಜನ, ರಾಜಕೀಯ ಪಕ್ಷಗಳು ಈ ವಿಚಾರದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಸರಕಾರಕ್ಕೆ ರೈತರ ಕಾಳಜಿ ಇಲ್ಲ ಎನ್ನುವುದು ಸಾಬೀತಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ತೀರಾ ಇಳಿದಿದ್ದರೂ ಅದರ ಲಾಭವನ್ನು ಜನಸಾಮಾನ್ಯರಿಗೆ ನೀಡುತ್ತಿಲ್ಲ. ಬದಲಿಗೆ ಅಬಕಾರಿ ಸುಂಕವನ್ನ ಹೆಚ್ಚಿಸಿ ಮತ್ತಷ್ಟು ಕಡಿಮೆಯಾಗುವುದನ್ನು ತಡೆದಿದ್ದಾರೆ. ಇನ್ನೊಂದು ತಿಂಗಳಲ್ಲಿ ದೆಹಲಿ ಚುನಾವಣೆ ಇದೆ. ಸದ್ಯ ಆಡಳಿತದಲ್ಲಿರುವ ಪಕ್ಷ ತನ್ನ ಇತಿಹಾಸದುದ್ದಕ್ಕೂ ಮತ ಕೇಳುತ್ತಾ ಬಂದಿರುವುದು ಭಾವನೆಗಳನ್ನು ಕೆರಳಿಸಿ, ಹುಸಿ ರಾಷ್ಟ್ರಭಕ್ತಿಯನ್ನು ಪ್ರಚೋದಿಸಿ. ಈ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಲ್ಲಿ ನಡೆದ ದೋಣಿ ಸ್ಫೋಟ ಪ್ರಕರಣವನ್ನು ಹಾಗೂ ಇಂದಿರಾಗಾಂಧಿ ವಿಮಾನ ನಿಲ್ದಾಣದದಲ್ಲಿ ವಿಮಾನ ಅಪಹರಣ ಪ್ರಕರಣದ ಪ್ರಹಸನಗಳನ್ನು ನೋಡಬೇಕಾಗಿದೆ.

ಇಂಡಿಯನ್ ಎಕ್ಸ್ ಪ್ರೆಸ್ ನ ಹಿರಿಯ ಪತ್ರಕರ್ತ ಪ್ರವೀಣ್ ಸ್ವಾಮಿ ಹೊಸ ವರ್ಷ ಆರಂಭದ ಹಿಂದಿನ ದಿನ ನಡೆದ ದೋಣಿ ಸ್ಫೋಟ ಪ್ರಕರಣದ ಬಗೆಗಿನ ವರದಿಯಲ್ಲಿ ದೋಣಿಯಲ್ಲಿ ಸ್ಫೋಟಕಗಳು ಇದ್ದವು ಎಂದು ಹೇಳಲು ಯಾವುದೇ ಆಧಾರಗಳಿಲ್ಲ. ಅದರಲ್ಲಿದ್ದವರು ಭಯೋತ್ಪಾದಕರು ಆಗಿರಲಿಕ್ಕಿಲ್ಲ, ಬದಲಿಗೆ ಯಾವುದೋ ಸಾಮಾಗ್ರಿಯನ್ನು ಕದ್ದು ಸಾಗಿಸುತ್ತಿರುವವರು ಇರಬಹುದು ಎಂದಿದ್ದರು. (http://indianexpress.com/article/india/india-others/little-evidence-of-terror-link-may-have-been-petty-smugglers/) ಅಷ್ಟಕ್ಕೆ ಬಿಜೆಪಿ ಕಾರ್ಯಕರ್ತರು IndianExpressJan022015ಸೋಮವಾರ ಪತ್ರಿಕಾ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರವೀಣ್ ಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಅಷ್ಟೇ ಅಲ್ಲ ಸ್ವಾಮಿಯ ಪ್ರತಿಕೃತಿಯನ್ನೂ ದಹಿಸಿದರಂತೆ! ದೋಣಿ ಸ್ಫೋಟದ ಪ್ರಕರಣದ ಬಗ್ಗೆ ಅನೇಕ ಗೊಂದಲಗಳಿವೆ. ರಕ್ಷಣಾ ಇಲಾಖೆ ಆ ಗೊಂದಲಗಳನ್ನು ನಿವಾರಿಸುವ ಹೇಳಿಕೆ ಕೊಡಬೇಕು. ಅದು ಬಿಟ್ಟು ಅದೇ ಪಕ್ಷದ ಕಾರ್ಯಕರ್ತರನ್ನು ವರದಿಗಾರನ ವಿರುದ್ಧ ಪ್ರತಿಭಟನೆ ಮಾಡಿಸಬೇಕೆ?

ಪ್ರವೀಣ್ ಸ್ವಾಮಿ ದೇಶದ ರಕ್ಷಣಾ ಕ್ಷೇತ್ರದ ವರದಿಗಾರರ ಪೈಕಿ ಪ್ರಮುಖ ಹೆಸರು. ಆಯಕಟ್ಟಿನ ತಾಣಗಳಲ್ಲಿರುವ ಅಧಿಕಾರಿಗಳ (ಸುದ್ದಿ ಮೂಲಗಳ) ಸಂಪರ್ಕ ಹೊಂದಿರುವ ಪ್ರತಿಭಾವಂತ ಪತ್ರಕರ್ತ. ಅವರು ತಮ್ಮ ವರದಿಯಲ್ಲಿ ಈ ಘಟನೆ ಬಗ್ಗೆ ಸರಕಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಹಾಗೂ ಕೆಲ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಪತ್ರಿಕಾ ಹೇಳಿಕೆ ಪ್ರಕಾರ, ಆ ದೋಣಿಯಲ್ಲಿ ಸ್ಫೋಟಕಗಳು ಇದ್ದ ಕಾರಣ, ಕರಾವಳಿ ಪಡೆ ಅದನ್ನು ಒಂದು ಗಂಟೆ ಕಾಲ ಫಾಲೋ ಮಾಡಿ ತಡೆಯಲು ಪ್ರಯತ್ನಿಸಿ ನಂತರ ದಾಳಿ ನಡೆಸಿ ಉಡಾಯಿಸಿತು. ಪ್ರವೀಣ್ ಸ್ವಾಮಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿರುವ ದೋಣಿಯ ಚಿತ್ರದಲ್ಲಿ ಸ್ಪೋಟಕಗಳು ಕಾಣುತ್ತಿಲ್ಲ. ಒಂದು ಪಕ್ಷ ಅವು ಇದ್ದವು ಎಂದುಕೊಂಡರೂ, ಬೆಂಕಿಗೆ ಆಹುತಿಯಾದಾಗ, ಅವು ಚಿಮ್ಮಿ, ದೋಣಿಯ ಭಾಗಗಳು ತುಂಡು ತುಂಡಾಗಬೇಕಿತ್ತು. ಹಾಗೂ 25 ಮೀಟರ್ ಗಿಂತ ಉದ್ದನೆಯ ದೋಣಿಗಳು 30ಹೆಚ್.ಪಿ ಎಂಜಿನ್ ಗಳಿಂದ ಓಡುತ್ತಿರುತ್ತವೆ. ಅವುಗಳನ್ನು ತಡೆಯಲು ಕರಾವಳಿ ಪಡೆಯ ಅತ್ಯಾಧುನಿಕ ಹಡಗುಗಳು ಒಂದು ಗಂಟೆಗೂ ಹೆಚ್ಚು ಕಾಲ ಅಟ್ಟಿಸಿಕೊಂಡು ಹೋಗಬೇಕಾಯಿತೆ?

ಇದುವರೆಗೂ ಆ ಘಟನೆ ಸಂಭವಿಸಿದ ಸ್ಥಳದಿಂದ ತಾಂತ್ರಿಕ ತಪಾಸಣೆಗಾಗಿ ಯಾವುದೇ ಸ್ಯಾಂಪಲ್ ಗಳನ್ನು ಸಂಗ್ರಹಿಸಿಲ್ಲ. ರಕ್ಷಣಾ ಇಲಾಖೆ ಪ್ರತಿಕೂಲ ಹವಾಮಾನ ಇರುವ ಕಾರಣ ಅದು ಸಾಧ್ಯವಾಗಿಲ್ಲ ಎಂದು ಹೇಳಿಕೆ ನೀಡುತ್ತದೆ. ಆದರೆ, ಹವಾಮಾನ ಇಲಾಖೆ ನಿಯಮಿತವಾಗಿ ತನ್ನ ವೆಬ್ ತಾಣದಲ್ಲಿ ನೀಡುವ ಮಾಹಿತಿ ಪ್ರಕಾರ ಆ ಪ್ರದೇಶದಲ್ಲಿ ಸಾಧಾರಣ ಹವಾಗುಣ ಇದೆ. ಪ್ರತಿಕೂಲ ಸನ್ನಿವೇಶ ಇಲ್ಲ. ಮೇಲಾಗಿ ಗುಜರಾತ್ ನ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕೆ ಹೋಗುವ ಸಮಯವೇ ಇದು. ಹಾಗಾಗಿ ಪ್ರತಿಕೂಲ ಹವಾಮಾನದ ಪ್ರಶ್ನೆಯೇ ಇಲ್ಲ. ಇಂತಹ ಪ್ರಶ್ನೆಗಳನ್ನು ಸ್ವಾಮಿ ಎತ್ತಿದ್ದಾರೆ. ಹಾಗೂ ಈ ಎಲ್ಲಾ ಕಾರಣಗಳಿಗಾಗಿ ಈ ಪ್ರಕರಣದ ಬಗ್ಗೆ ವಿವರವಾದ ತನಿಖೆಯಾಗಬೇಕೆಂದು ತಮ್ಮ ವರದಿಯಲ್ಲಿ ಒತ್ತಾಯಿಸಿದ್ದಾರೆ. ಉತ್ತರಿಸುವ ಜವಾಬ್ದಾರಿ ಸರಕಾರದ್ದು. ಆದರೆ, ಅವರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಪ್ರವೀಣ್ ಸ್ವಾಮಿ ಬರೆದಿರುವುದು ಸುಳ್ಳೆಂದಾದರೆ, ರಕ್ಷಣಾ ಇಲಾಖೆ ಸಾಬೀತು ಮಾಡಲಿ.

ಈ ಘಟನೆಯ ಹಿನ್ನೆಲೆಯಲ್ಲಿ ಮೇಲಿನ ಕುಮಾರಸ್ವಾಮಿ ಅವಧಿಯ ಪ್ರಕರಣ ಹಾಗೂ ಬಿhotel_empire_nikhil-gowdaಲ್ ಕ್ಲಿಂಟನ್ ನೆನಪಾದರು. ಮೈಸೂರಿನಲ್ಲಿ ಬಂಧನವಾದ ಆ ಉಗ್ರರು ಈಗ ಎಲ್ಲಿದ್ದಾರೆ? ಅವರ ಬಂಧನವಾದ ಎಂಟು ವರ್ಷಗಳ ಮೇಲಾದರೂ, ಅವರ ತಪ್ಪುಗಳು ಸಾಬೀತಾದವಾ? ಶಿಕ್ಷೆಯಾಯಿತಾ? ಗಮನ ಬೇರೆಡೆಗೆ ಸೆಳೆಯಲು ಇರಾಕ್ ಮೇಲೆ ದಾಳಿ ನಡೆಸಿ ಕೆಲವರ ಸಾವಿಗೆ ಕಾರಣರಾದ ಕ್ಲಿಂಟನ್ ಗೆ ಶಿಕ್ಷೆ ಇಲ್ಲವೇ? ದೋಣಿ ಸ್ಫೋಟದಲ್ಲಿ ಸತ್ತವರು ಯಾರು? ಚರ್ಚ್‌ ಸ್ಟ್ರೀಟ್ ನಲ್ಲಿ ಚಿಕನ್ ಕೇಳಿದವರ ವಿರುದ್ಧ ಚಾರ್ಜ್ ಶೀಟ್ ದಾಖಲಾಯಿತೆ? ಹೀಗೆ ನೂರೆಂಟು ಪ್ರಶ್ನೆಗಳು ಏಳುತ್ತವೆ.

4 thoughts on “ದೋಣಿ ಧ್ವಂಸ ಪ್ರಕರಣ: ಉತ್ತರ ಇಲ್ಲದ ಪ್ರಶ್ನೆಗಳು…

  1. ಹೆಸರಲ್ಲೇನಿದೆ?

    ನೌಸೇನೆಯ ನಿವೃತ್ತ ಅಧಿಕಾರಿಯೊಬ್ಬರೊಂದಿಗೆ ಮಾತನಾಡಿದ ಪತ್ರಕರ್ತರೊಬ್ಬರು ಬರೆದ ವರದಿಯ ಸಾರಾಂಶ ಹೀಗಿದೆ:

    ೧. ತಟರಕ್ಷಕ (Coast guard), ಅಥವಾ ನೌಕಾದಳ (Navy) ಇಂತಹ ಸನ್ನಿವೇಶದಲ್ಲಿ ಪ್ರೋಟೊಕಾಲ್ ನ ಪ್ರಕಾರವೇ ಕಾರ್ಯನಿರ್ವಹಿಸುತ್ತದೆ. ತಟರಕ್ಷಕದಳಕ್ಕೆ ಸಂಶಯಾಸ್ಪದ ದೋಣಿಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಅದು ತನ್ನ ಸಣ್ಣ ಹಡಗೊಂದನ್ನು ಕಳಿಸಿಕೊಟ್ಟಿದೆ.

    ೨. ಈ ಕಾರ್ಯಾಚರಣೆಯಲ್ಲಿ ತಟರಕ್ಷಕ ದಳದ ಎರಡು ಡಾರ್ನಿಯರ್ ವಿಮಾನಗಳ ಬಳಕೆ ಕೂಡಾ ಆಗಿದೆ. ಈ ವಿಮಾನಗಳ ಹಾರಾಟ ಯಾವ ವಿಮಾನ ನಿಲ್ದಾಣದಿಂದ ಆಗಿದೆಯೋ ಆ ವಿಮಾನ ನಿಲ್ದಾಣಗಳ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯ ಬಳಿ ಈ ಹಾರಾಟಗಳ ವರದಿ ಲಭ್ಯವಿರುತ್ತದೆ, ಎಂದರೆ ಯಾವ ದಿನಾಂಕ, ಯಾವ ಸಮಯಕ್ಕೆ ಈ ವಿಮಾನಗಳು ಹಾರಿವೆ ಎನ್ನುವ ವಿವರಗಳು ಸಿಗುತ್ತವೆ.

    ೩. ಸತತ ಹನ್ನೆರಡು ಗಂಟೆಗಳ ಗಮನಿಸುವಿಕೆಯ ನಂತರ ಈ ಸಂಶಯಾಸ್ಪದ ದೋಣಿಯನ್ನು ಸೆರೆಹಿಡಿಯಲು ತಟರಕ್ಷಕ ದಳ ಮುಂದಾಗಿದೆ. ಇದರ ವಾಸನೆಹತ್ತಿದ ದೋಣಿ ಪಾಕಿಸ್ತಾನ ಮತ್ತು ಭಾರತದ ಜಲಸೀಮಾರೇಖೆಯನ್ನು ದಾಟಲು ಹವಣಿಸಿದೆ.

    ೪. ಈ ಸಂದರ್ಭದಲ್ಲಿ ದೋಣಿಯಲ್ಲಿದ್ದವರು ಕರಾಚಿಯಲ್ಲಿ ಮತ್ತು ಥಾಯ್ ಲ್ಯಾಂಡಿನಲ್ಲಿ ಇದ್ದ ವ್ಯಕ್ತಿಗಳ ಜತೆ ಮಾತನಾಡಿದ ಬಗ್ಗೆ ದಾಖಲೆಗಳಿವೆ.

    ೫. ಎಚ್ಚರಿಕೆ ನೀಡುವ ಗುಂಡುಗಳನ್ನು ಹಾರಿಸಿದಾಗ ಈ ದೋಣಿ ನಿಂತಿದೆ (ಹೀಗೆ ನಿಲ್ಲಿಸಿದ ಯಾವುದೇ ದೋಣಿಯನ್ನು ತಟರಕ್ಷಕ ದಳದ ನಾವಿಕರು ಕೂಡಲೇ ಹತ್ತುವುದಿಲ್ಲ. ಮೊದಲಿಗೆ ತಮ್ಮ ನೋಂದಣಿಯನ್ನು ಪ್ರದರ್ಶಿಸಲು, ಮತ್ತು ನಿರಾಯುಧರಾಗಿ ಹೊರಗೆ ಬರಲು ದೋಣಿಯಲ್ಲಿರುವವರಿಗೆ ಅವಕಾಶ ನೀಡಲಾಗುತ್ತದೆ. ಜತೆಗೆ ಇಂತಹ ದೋಣಿಯಿಂದ ಸಾಕಷ್ಟು ದೂರದಲ್ಲಿ ಹಡಗನ್ನು ನಿಲ್ಲಿಸಿಕೊಳ್ಳಲಾಗುತ್ತದೆ. ಏಕಂದರೆ ತಮ್ಮ ದೋಣಿಯನ್ನು ತಟರಕ್ಷಕ ದಳದ ಹಡಗಿಗೆ ಡಿಕ್ಕಿ ಹೊಡೆಸಿ ಆತ್ಮಾಹುತಿ ಮಾಡಿಕೊಂಡರೆ, ಹಡಗಿಗೆ ಧಕ್ಕೆ, ಜತೆಗೆ ನೌಸೇನೆಯ ನಾವಿಕರೂ ಸಾಯುತ್ತಾರೆ, ಇದು ಆತಂಕವಾದಿಗಳಿಗೆ ಜಯವಾದಂತೆ). ದೋಣಿಯಲ್ಲಿದ್ದವರು ಅದರೊಳಗೆ ಅವಿತು ದೋಣಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸ್ಫೋಟಕಗಳು ಹತ್ತಿ ಉರಿದು ದೋಣಿ ಭಸ್ಮವಾಗಿದೆ.

    ಇದು ನಡೆದ ಘಟನೆ. ಇನ್ನು ಪ್ರವೀಣ್ ಸ್ವಾಮಿಯ ಬಗ್ಗೆ ಹೇಳುವುದಾದರೆ, ಈ ಮನುಷ್ಯ ಭಾರತದ ಆಂತರಿಕ ಭದ್ರತೆಯ ತಥಾಕಥಿತ ‘ಪರಿಣತ’! ಆದರೆ ಭಾರತವಿರೋಧಿಗಳ ಕೈಗೆ ಬಡಿಗೆ ಕೊಟ್ಟು ‘ನಮ್ಮನ್ನು ಬಡಿಯಿರಿ’ ಎಂದು ಬೇಡುವ ವೇದನಾಸಂತೋಷಿ. ಸತ್ಯಸಂಗತಿ ಹೊರಬರಲಿ ಎನ್ನುವುದು ಎಲ್ಲರ ಆಶಯ. ಆದರೆ ಸತ್ಯ ಸಂಗತಿಗಳನ್ನು ಮುಂದಿಟ್ಟರೂ ಅದರಲ್ಲಿ ಹುಳುಕು ಹುಡುಕುವುದಾದರೆ ಅಂಥವರಿಗೆ ಏನು ಹೇಳೋಣ? ಒಂದುವೇಳೆ ನಿಮಗೆ ಈ ಘಟನೆಯ ವಿಡಿಯೋ ಚಿತ್ರ ಬೇಕೆಂದಿದ್ದರೆ ಅದನ್ನು ತಟರಕ್ಷಕ ದಳಕ್ಕೆ ಆಗ್ರಹಿಸಿ ಕೇಳಬಹುದು. ಯಾವುದೇ ಕಾರ್ಯಾಚರಣೆಯ ವಿವರಗಳಿಲ್ಲದೆ ಹೋದಲ್ಲಿ ತಟರಕ್ಷಕ ದಳ ಅದನ್ನೂ ನಿಮಗೆ ಕೊಟ್ಟೀತು!

    ಈ ದೋಣಿಯಲ್ಲಿದ್ದವರು ಡೀಸೆಲ್ ಕಳ್ಳಸಾಗಾಣಿಕೆದಾರರು, ಎನ್ನುವ ವಾದವನ್ನೂ ಮುಂದಿಡಲಾಗಿತ್ತು. ಪಾಕಿಸ್ತಾನದಲ್ಲ್ಲಿ ಡೀಸೆಲ್ ಗೆ ೮೬ ರೂಪಾಯಿಗಳು, ಭಾರತದಲ್ಲಿ ೫೬ ರೂಪಾಯಿಗಳು! ಅದ್ಯಾರು ಸ್ವಾಮಿ ಹೆಚ್ಚಿನ ಬೆಲೆಗೆ ಡೀಸೆಲ್ ಕೊಂಡು ಕಡಿಮೆ ಬೆಲೆಗೆ ಮಾರುವವರು?! ಇನ್ನು ಡ್ರಗ್ಸ್ ಸಾಗಿಸುವವರಾಗಿದ್ದರೆ ತಮ್ಮ ಬಳಿ ಇರುವ ಕಳ್ಳ ಮಾಲನ್ನು ಸಮುದ್ರದಲ್ಲಿ ಸುರಿದು ತಟರಕ್ಷಕ ದಳ ಹಿಡಿದಾಗ ಸಾಕ್ಷ್ಯಾಧಾರಗಳ ಕೊರತೆ ತೋರಿಸುತ್ತಿದ್ದರು. ತಮ್ಮದೇ ದೋಣಿಗೆ ಬೆಂಕಿಯಿಟ್ಟುಕೊಳ್ಳುವುದಾದರೆ ಅವರು ಆತ್ಮಾಹುತಿಗೆ ತಯಾರಾಗಿದ್ದವರು ಎನ್ನಿಸುವುದಿಲ್ಲವೆ?

    ಒಂದುವೇಳೆ ಈ ಘಟನೆ ನಡೆಯದೆ, ಆ ದೋಣಿ ಸುರಕ್ಷಿತವಾಗಿ ಭಾರತ ತಲುಪಿ ಅದರ ಮಾಲಿನಿಂದ ಭಾರತದಲ್ಲಿ ಮತ್ತೊಂದು ೧೬/೧೧ ಆಗಿದ್ದರೆ ನಿಮಗೆ ಸಂತೋಷವೆಂದು ಕಾಣುತ್ತದೆ. ಆಗ ನಮ್ಮ ಸೇನೆ, ತಟರಕ್ಷಕ ದಳ ಮತ್ತು ಪೋಲಿಸರನ್ನು ಹೀಗಳೆಯಲು ನಿಮಗೆ ಮತ್ತೊಂದು ಅವಕಾಶ ಸಿಕ್ಕುತ್ತಿತ್ತು.

    ೨೫ ಮೀಟರ್ ಗಿಂತ ಉದ್ದದ ದೋಣಿಗಳಂತೆ (?!), ೩೦ ಎಚ್ ಪಿ ಯ ಎಂಜಿನ್ ಹೊಂದಿರುತ್ತವಂತೆ! ದೋಣಿಗಳ ಬಗ್ಗೆ, ಹಡಗುಗಳ ಬಗ್ಗೆ ಒಂದಕ್ಷರ ತಿಳಿಯದಿದ್ದರೂ ಶಿವರಾಜ್ ರಂಥವರು ಸುದ್ದಿ ಬರೆಯಲು ಬಂದು ಬಿಡುತ್ತಾರೆ. ದೊಡ್ಡ ದೊಡ್ಡ ಹಡಗುಗಳು ಸಣ್ಣ ಬೋಟುಗಳಷ್ಟು ವೇಗವಾಗಿ ಹೋಗಲಾರವು, ಅವುಗಳ ಕ್ಷಮತೆ ಎಷ್ಟು ದೂರ ಪ್ರಯಾಣಿಸಬಲ್ಲವು ಎನ್ನುವುದಾಗಿರುತ್ತದೆ. ಸಣ್ಣದೋಣಿಗಳು ವೇಗವಾಗಿ ಹೋಗಬಲ್ಲವು, ವೇಗದಲ್ಲಿ ಅವು ಫ್ರಿಗೇಟ್ (ಯುದ್ಧ ನೌಕೆ)ಗಳನ್ನು ಹಿಂದೆ ಹಾಕಬಲ್ಲವು. ಈ ಸಂದರ್ಭದಲ್ಲಿ Coast Guard ಬಳಿ ಇದ್ದ ಬಲವೆಂದರೆ ಅದರ ಫೈರಿಂಗ್ ಪವರ್! ಸ್ವಲ್ಪ ಹೋಮ್ ವರ್ಕ್ ಮಾಡಿ ಸುದ್ದಿ ಬರೆಯಿರಿ. ಇಲ್ಲವಾದರೆ ನೀವೂ ಪ್ರವೀಣ ‘ಸ್ವಾಮಿ’ಯಂತೆ ಶಿವರಾಜ ‘ಸ್ವಾಮಿ’, ಭದ್ರತಾ ತಜ್ಞ ಅಂತ ಬೋರ್ಡು ಹಾಕಿಕೊಳ್ಳಬಹುದು.

    Reply
  2. Ravi

    ಗುರುವೆ, “ಹೆಸರಲ್ಲೇನಿದೆ” ಎಂಬ ಬುರುಖಾ ಧರಿಸಿಕೊಂಡ ಮಹಾಶಯರೆ,

    ಮೊದಲಿಗೆ ನಿಮ್ಮ ಹೆಸರು ಹಾಕಿ ಬರೆದುಕೊಂಡರೆ ನೀವು ವಾದಿಸುವ ವಿಷಯಕ್ಕೆ ದೃಢತೆ ಬರುತ್ತದೆ. ಇಲ್ಲವಾದರೆ ಕತ್ತಲಲ್ಲಿ ಕಲ್ಲು ಬೀರಿ ಓಡುವ ‘ಕಿಡಿಗೇಡಿ’ ಎಂಬ ಪತ್ರಿಕಾ ಭಾಷೆಯಂತೆ ನಿಮ್ಮನ್ನೂ ಓದುವವರು ಭಾವಿಸಿಕೊಂಡಾರು!

    ಸ್ಫೋಟಕವೆಂದರೆ ಅದೇನು ಇದ್ದಿಲಿಗೆ ಬಳಸುವ ಉರುವಲಲ್ಲ. ಒಂದೇ ಒಂದು ಶೆಲ್ ಸಿಡಿದರೂ ಇಡೀ ಪ್ರದೇಶವೇ ಚೂರಾಗಿ ಛಿದ್ರಗೊಳ್ಳುವಷ್ಟು ತೀವ್ರತೆಯಿರುತ್ತದೆ. ಇನ್ನು ಸ್ಫೋಟಕಗಳ ಭಾರೀ ಸಂಗ್ರಹವೆಂದರೆ ದೋಣಿಯೇ ಪುಡಿಯಾಗಿ ಹೋಗುವ ಸಾಧ್ಯತೆ ಇದೆ.

    ಇಲ್ಲಿ ದೋಣಿ ಇದ್ದಿಲ ಒಲೆಯಂತೆ ಉರಿಯುತ್ತಿದೆ. ದೂರ ಪ್ರಯಾಣದ ದೋಣಿಗಳಲ್ಲಿ ಹೆಚ್ಚು ಇಂಧನ ಶೇಖರಿಸಿಟ್ಟುಕೊಂಡಿರುವುದು ಸಾಮಾನ್ಯವಾದ್ದರಿಂದ ಇದು ಆ ರೀತಿಯ ಜ್ವಾಲಗಳನ್ನೇ ಹೆಚ್ಚು ಹೋಲುತ್ತಿದೆ. ಇದಲ್ಲದೆ ಸುಳ್ಳೆ ಪ್ರತಿಕೂಲ ಹವಾಮಾನವನ್ನು ಕಲ್ಪಿಸಲಾಗಿದೆ. ಇದುವರೆಗೂ ದೋಣಿಯಲ್ಲಿದ್ದವರ ಶವಗಳು ಪತ್ತೆಯಾಗಿಲ್ಲ. ದೋಣಿಯ ಕ್ರಮಬದ್ಧ ಅವಶೇಷಗಳಾಗಲಿ, ದೋಣಿಯನ್ನು ಹಿಂಬಾಲಿಸುವಾಗ ತೆಗೆದ ಚಿತ್ರಗಳಾಗಲಿ ಬಿಡುಗಡೆಯಾಗಿಲ್ಲ.

    ನಿಮಗೆ ತಿಳಿದಿರಲಿ. ಕರಾವಳಿ ರಕ್ಷಣಾ ಪಡೆಯ ಬಳಿ ಇರುವುದು ಶೇ ೧೦ರಷ್ಟು ಮಾತ್ರ ದೊಡ್ಡ ನೌಕೆಗಳು. ಉಳಿದವು ಈಗ ಆರೋಪಿ ದೋಣಿಯನ್ನು ಹಿಂಬಾಲಿಸಲು ಅನುಕೂಲವಾಗುವಂತವುಗಳೆ. ಸಣ್ಣ ದೋಣಿಯೊಂದನ್ನು ಯುದ್ಧನೌಕೆಯೊಂದು ಹಿಂಬಾಲಿಸುವ ಜೋಕು ನಿಮ್ಮಿಂದ ಸಿಡಿದದ್ದು ಮಹಾಸ್ಫೋಟವಲ್ಲದೆ ಇನ್ನೇನು..

    Reply
  3. ಅಭಿನವ ಚನ್ನಬಸವಣ್ಣ

    ಜಗತ್ತಿಗೆ equality, fraternity, liberty ಎಂಬ ಮೂರು ಮಹಾನ್ ಮೌಲ್ಯಗಳನ್ನೂ ಕೊಟ್ಟ ಫ್ರಾಂಸ್ ದೇಶದ ರಾಜಧಾನಿ ಪ್ಯಾರಿಸ್ (ಇದು ಬಹಳ ಹಿಂದಿನಿಂದಲೂ ಪ್ರಗತಿಪರರ ಅಡ್ಡೆ ಎಂದೇ ಹೆಸರು ಪಡೆದಿದೆ) ನಗರದಲ್ಲಿ ಪತ್ರಿಕೆ ಒಂದರ ಕಚೇರಿಯ ಮೇಲೆ ಭೀಕರ ಧಾಳಿ ನಡೆದಿದ್ದು ಅನೇಕ ಜೀವಗಳು ನಷ್ಟವಾಗಿವೆ. ಮೂಲಭೂತವಾದ ಕರಾಳ ಛಾಯೆ ಎಲ್ಲೆಡೆ ಮೂಡಿದೆ. ಭಯೋತ್ಪಾದನೆಯು – ಅದು ಮೂಲಭೂತವಾದಿಗಳದ್ದೇ ಆಗಿರಲಿ, ಸರಕಾರದ್ದೇ ಆಗಿರಲಿ – ಮೂಲಭೂತವಾಗಿ ಜೀವವಿರೋಧಿ. ಆದುದರಿಂದ ಈ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಭಯೋತ್ಪಾದನೆಯನ್ನು ತಿರಸ್ಕರಿಸೋಣ.

    Reply

Leave a Reply

Your email address will not be published. Required fields are marked *