ಕದ್ದ ತಲೆಮಾರುಗಳನ್ನು ಹುಡುಕುತ್ತಾ… : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-2)


– ಶ್ರೀಧರ್ ಪ್ರಭು


 

“We are all visitors to this time, this place. We are just passing through. Our purpose here is to observe, to learn, to grow, to love… and then we return home.”

– ಆಸ್ಟ್ರೇಲಿಯದ ಮೂಲನಿವಾಸಿಗಳಲ್ಲಿ ಪ್ರಚಲಿತವಿರುವ ಒಂದು ನಾಣ್ಣುಡಿ

ಪ್ರಪಂಚದ ಮೊದಲ ಕಾಲಾಪಾನಿ

ಇಂಗ್ಲೆಂಡ್ ಮತ್ತು ಅಮೆರಿಕೆಯ ಔದ್ಯೋಗಿಕ ಕ್ರಾಂತಿ ಒಂದು ಕಡೆ ಪ್ರಗತಿ ಮತ್ತು ಶ್ರೀಮಂತಿಕೆ ತಂದರೆ ಇನ್ನೊಂದೆಡೆ ಅತ್ಯಂತ ಕ್ರೂರ ಅಸಮಾನತೆಯನ್ನೂ ತಂದೊಡ್ಡಿತು. ಕಾರ್ಮಿಕರ, ಅದರಲ್ಲೂ ಬಾಲ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ ಮಿತಿ ಮೀರಿತ್ತು. ಬಹುತೇಕ ಜೈಲುಗಳು ತುಂಬಿ ತುಳುಕುತ್ತಿದ್ದವು. ಇಂತಹುದ್ದರಲ್ಲಿ, ಸಾಮ್ರಾಜ್ಯಶಾಹಿಗಳು ಕಂಡು ಕೊಂಡ ಸುಲಭ ಮಾರ್ಗವೆಂದರೆ ಕೈದಿಗಳನ್ನು ದೂರದ ದ್ವೀಪಗಳಿಗೆ ಸಾಗಿಸುವುದು. ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಗ್ಗು ಬಡಿಯಲು ಅಂಡಮಾನಿನ ಕಾಲಾಪಾನಿ Australia-aborigines-artಶಿಕ್ಷೆ ಕಂಡುಕೊಂಡಂತೆ, ತಮ್ಮದೇ ದೇಶದಲ್ಲಿನ ದಂಗೆ, ಹೋರಾಟಗಳನ್ನು ಹತ್ತಿಕ್ಕಲು ಕೈದಿಗಳನ್ನು ಆಸ್ಟ್ರೇಲಿಯಾಗೆ ಸಾಗಿಸುವ ಮಾರ್ಗ ಕಂಡು ಹಿಡಿಯಲಾಯಿತು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ನಡುವಿನ ಸುಮಾರು ಎಂಬತ್ತು ವರ್ಷಗಳ ಅವಧಿಯಲ್ಲಿ ಸುಮಾರು 1,65,000 ಜನರನ್ನು ಆಸ್ಟ್ರೇಲಿಯಾಗೆ ಸಾಗಿಸಲಾಯಿತು.

ಮೂಲನಿವಾಸಿಗಳ ಮಾರಣ ಹೋಮ

ಹೀಗೆ ಕಾಲಿಟ್ಟ ಪಾಶ್ಚಿಮಾತ್ಯರು ಕೇಳಿ ಕಂಡರಿಯದ ರೋಗ ರುಜಿನಗಳನ್ನು ಮೂಲ ನಿವಾಸಿಗಳಿಗೆ ಅಂಟಿಸಿಬಿಟ್ಟರು. ನೆಗಡಿಯಿಂದ ಮೊದಲ್ಗೊಂಡು ಸೀತಾಳೆ ಸಿಡುಬು, ಕಾಲರ, ಕ್ಷಯ ರೋಗ, ಸಿಫಿಲಿಸ್ ನಂತಹ ಗುಪ್ತ ರೋಗಗಳು ಅಂಟಿಕೊಂಡು ಸಿಡ್ನಿ ಸುತ್ತಲಿನ ಅರ್ಧದಷ್ಟು ಮೂಲನಿವಾಸಿಗಳು ಸ್ವರ್ಗವಾಸಿಗಳಾದರು.

ನಲವತ್ತು ಸಾವಿರ ವರ್ಷಗಳಿಂದ ನೆಲವನ್ನು ತಬ್ಬಿ ಬದುಕಿದ ಪ್ರಾಚೀನ ಸಂಸ್ಕೃತಿಯೊಂದನ್ನು ಸಾಮ್ರಾಜ್ಯದಾಹದ ಬಿಳಿಯರು ಕೇವಲ (ಹತ್ತೊಂಬತ್ತನೇ ಶತಮಾನದ ಮೊದಲ) ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಗುರುತು ಸಿಗದಂತೆ ನಾಶಮಾಡಿಬಿಟ್ಟಿದ್ದರು.

ಬ್ರಿಟಿಷರ ಸಾಮ್ರಾಜ್ಯಶಾಹಿ ದಾಹದಲ್ಲಿ ಬೆಂದು 1901ರ ವರೆಗೂ ಒಂದು ವಸಾಹತುವಾಗಿಯೇ ಉಳಿದಿತ್ತು. ಅರ್ಥಿಕ ಅಸಮಾನತೆಯಲ್ಲಿ ಬೆಂದು ಬಂದ ಶೋಷಿತರು ಮತ್ತು ಸಾಮ್ರಾಜ್ಯ ಶಾಹಿಗಳು ಸೇರಿ ಮೂಲನಿವಾಸಿಗಳನ್ನು ಶೋಷಿಸಿದರು. ಇಂದು ಸಿಡ್ನಿ ರಾಜಧಾನಿಯಾಗಿರುವ ನ್ಯೂ ಸೌತ್ ವೇಲ್ಸ್ ನಿಂದ ಬೇರ್ಪಟ್ಟು ತಮ್ಮದೇ ಪ್ರಾಂತ್ಯ ನಿರ್ಮಿಸಿಕೊಳ್ಳಬೇಕು ಎಂಬ ಆಶಯದಿಂದ ಅಂದು ಕೇವಲ ಪೋರ್ಟ್ ಫಿಲ್ಲಿಪ್ ಒಂದು ಜಿಲ್ಲೆಯಾಗಿದ್ದ ವಿಕ್ಟೋರಿಯಾ ಪ್ರಾಂತ್ಯದ ಜನ ಹೋರಾಟ ನಡೆಸಿದರು. ಒಂದು ಪ್ರಾಂತ್ಯದ “ದೊಡ್ಡಣ್ಣನ” ವ್ಯವಹಾರ ಸಹಿಸದೆ ಹೋರಾಟಗಳು ನಡೆದವು.

ಯಾರಿಗೆ ಬಂತು ಎಲ್ಲಿಗೆ ಬಂತು?

ಆಸ್ಟ್ರೇಲಿಯಾ 1901 ರಲ್ಲಿ ಗಣರಾಜ್ಯವಾಗಿ ಉದಯಿಸಿತು. ಆದರೆ ಮೂಲನಿವಾಸಿಗಳ ಶೋಷಣೆ ಇನ್ನೂ ತೀವ್ರವಾಯಿತು. 1909 ರಿಂದ 1969 ರ ವರೆಗೆ ಸಾವಿರಾರು ಮಕ್ಕಳನ್ನು ತಮ್ಮ ತಂದೆ ತಾಯಿಯರಿಂದ ಕದ್ದು ಸರಕಾರ ಪ್ರಾಯೋಜಿಸಿದ ಹಾಸ್ಟೆಲ್ ಗಳಿಗೆ (ಒಂದು ರೀತಿಯಲ್ಲಿ ಮಕ್ಕಳ ಜೈಲುಗಳು) ಸಾಗಿಸಲಾಯಿತು. ಹೀಗಾಗಿ ಮೂಲನಿವಾಸಿಗಳನ್ನು Australia-family-aborigines“ಕದ್ದ ತಲೆಮಾರುಗಳು’ (ಸ್ಟೋಲನ್ ಜೆನರೇಶನ್ಸ್) ಎಂದು ಕೆರೆಯುವ ಪರಿಪಾಠವಿದೆ. ಇಂದಿಗೆ ಕೇವಲ ನಾಲ್ಕು ದಶಕಗಳ ಹಿಂದಿನವರೆಗೂ ಆಸ್ಟ್ರೇಲಿಯ ಸರಕಾರ ‘ಸುಸಂಸ್ಕೃತ’ ಗೊಳಿಸುವಸಲುವಾಗಿ ಕಾನೂನಿನನ್ವಯ ಮೂಲನಿವಾಸಿಗಳ ಮಕ್ಕಳನ್ನು ಅಪಹರಿಸುತ್ತಿತ್ತು.

ಹೆತ್ತವರಿಂದ ಬೇರ್ಪಟ್ಟ ಸಾವಿರಾರು ಜನರು ಕಳೆದೇ ಹೋದರು. ವ್ಯಕ್ತಿ ಗಳು ಮಾತ್ರವಲ್ಲ ಹಲವು ಜನಾಂಗಗಳೇ ಕಳೆದು ಹೋದವು

ರಕ್ತದ ಕಲೆ ತೊಳೆಯುತ್ತಾ…

ಆಸ್ಟ್ರೇಲಿಯಾಗೆ ಮೂಲನಿವಾಸಿಗಳ ರಕ್ತ ಅಂಟಿರುವುದು ಎಷ್ಟು ನಿಜವೋ ಅದನ್ನು ತೊಳೆಯಲು ನಡೆಯುತ್ತಿರುವ ಪ್ರಯತ್ನಗಳೂ ಅಷ್ಟೇ ನಿಜ. ತಾವು ಕ್ಷಮಿಸಲಾಗದ ಅಪರಾಧ ಮಾಡಿದ್ದೇವೆ ಎಂಬ ಅಪರಾಧಿ ಪ್ರಜ್ಞೆ ಬಹುತೇಕರಲ್ಲಿದೆ. ಕಳೆದ ದಶಕ ಒಂದರಲ್ಲೇ ಸರಕಾರ ಉತ್ತರ ಆಸ್ಟ್ರೇಲಿಯ ಪ್ರಾಂತದ 21% (ಹದಿಮೂರು ಲಕ್ಷ ಚದುರ ಮೀಟರ್ ನಷ್ಟು) ಭೂಮಿಯ ಒಡೆತನವನ್ನು ಮೂಲನಿವಾಸಿಗಳಿಗೆ ವಹಿಸಿ ಕೊಟ್ಟಿದೆ.

2008 ರಲ್ಲಿ ಅಂದಿನ ಪ್ರಧಾನಿ ಕೆವಿನ್ ರಡ್ ಮೂಲನಿವಾಸಿಗಳ ಬಹಿರಂಗ ಕ್ಷಮೆ ಕೇಳಿದರು. ಸರಕಾರ ಮೂಲನಿವಾಸಿಗಳ ಸಲುವಾಗಿ ಆಸ್ಟ್ರೇಲಿಯ ಸರಕಾರವೇ ಲಕ್ಷಗಟ್ಟಲೆ ಡಾಲರ್ ಖರ್ಚು ಮಾಡಿ ಮೂಲನಿವಾಸಿಗಳ ಆಶಯಗಳನ್ನು ಪ್ರತಿಪಾದಿಸುವ ಸಂವಾದ ಕಾರ್ಯಕ್ರಮಗಳನ್ನು ಸಂಯೋಜಿಸಿದೆ. ಇಂತಹ ಸಾಕಷ್ಟು ಕಾರ್ಯಕ್ರಮಗಳು ಆಸ್ಟ್ರೇಲಿಯ ದೇಶದ ಹೊರಗೂ ಜರುಗಿವೆ. ಅಂತಹ ಒಂದೆರಡು ಕಾರ್ಯಕ್ರಮಗಳು ಬೆಂಗಳೂರಿನಲ್ಲೂ ನಡೆದಿವೆ. ಸರಕಾರವೇ ಮುಂದೆ ನಿಂತು, ದುಡ್ಡು ಮತ್ತು ಅಂತರ ರಾಷ್ಟ್ರೀಯ ಮಟ್ಟದ ಪ್ರಚಾರ ಕೊಡಿಸಿ ತಾವೇ ಎಸಗಿದ ಅನ್ಯಾಯಗಳ ಖಂಡನೆ ಮಾಡುವ ಇಂತಹ ಉದಾಹರಣೆಗಳು ಅಪರೂಪ.

ನವೆಂಬರ್ 2014 ನಲ್ಲಿ ಜರುಗಿದ ಬೆಂಗಳೂರು Australia-aborigines-costumeಸಾಹಿತ್ಯ ಹಬ್ಬ (Bengaluru Literary Festival)ದಲ್ಲಿ ಕೂಡ ಅಂತಹ ಒಂದು ಸಂವಾದ ಜರುಗಿತ್ತು. ಕ್ಯಾತೀ ಕ್ರೇಗೀ, ಡೈಲನ್ ಕೋಲ್ಮನ್, ಅನೀಟ ಹೈಸ್, ಜೇರ್ಡ್ ಥಾಮಸ್, ಎಲೆನ್ ವಾನ್, ನೀರ್ವೆನ್ ಮತ್ತು ನಿಕೋಲ್ ವಾಟ್ಸನ್ ಮೊದಲಾದ ಆಸ್ಟ್ರೇಲಿಯಾದ ಜನಪರ ಲೇಖಕರು ಮತ್ತು ಹೋರಾಟಗಾರರೂ ಪಾಲ್ಗೊಂಡಿದ್ದರು. ಇಂತಹ ಆಸ್ಟ್ರೇಲಿಯದ ಅನೇಕ ಸಾಮಾಜಿಕ ಕಳಕಳಿಯ ಚಿಂತಕರು ಭಾರತದ ದಲಿತ-ಆದಿವಾಸಿ ಹೋರಾಟಗಳ ನಡುವೆ ಬಾಂಧವ್ಯ ಬೆಸೆಯುವ ಪ್ರಯತ್ನದಲ್ಲಿದ್ದಾರೆ.

ಇಂದು ಪ್ರಪಂಚದಾದ್ಯಂತ ಮೂಲನಿವಾಸಿಗಳು, ದಲಿತರು ಮತ್ತು ದಮನಿತರ ಪರ ನಡೆಯುತ್ತಿರುವ ಹೋರಾಟಗಳ ಆಶಯಗಳು ಬಹುತೇಕವಾಗಿ ಒಂದೇ. ಸಾಮ್ರ್ಯಾಜ್ಯಶಾಹಿಶೋಷಣೆಯ ವಿರುದ್ಧ ನಡೆದ ಸ್ವತಂತ್ರ ಹೋರಾಟದ ಮುಂದುವರಿದ ಭಾಗವಾಗಿ ದಲಿತ, ಶೋಷಿತ ಮತ್ತು ಮೂಲನಿವಾಸಿಗಳಿಗೆ ಸೇರಬೇಕಿರುವ ಹಕ್ಕುಗಳನ್ನು ಪಡೆಯುವ ಹೋರಾಟಗಳು ಒಂದಕ್ಕೊಂದು ಬೆಸೆದು ಒಗ್ಗಟ್ಟಿನ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.

11 thoughts on “ಕದ್ದ ತಲೆಮಾರುಗಳನ್ನು ಹುಡುಕುತ್ತಾ… : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-2)

  1. Salam Bava

    “ಇಂದು ಪ್ರಪಂಚದಾದ್ಯಂತ ಮೂಲನಿವಾಸಿಗಳು, ದಲಿತರು ಮತ್ತು ದಮನಿತರ ಪರ ನಡೆಯುತ್ತಿರುವ ಹೋರಾಟಗಳ ಆಶಯಗಳು ಬಹುತೇಕವಾಗಿ ಒಂದೇ. ಸಾಮ್ರ್ಯಾಜ್ಯಶಾಹಿಶೋಷಣೆಯ ವಿರುದ್ಧ ನಡೆದ ಸ್ವತಂತ್ರ ಹೋರಾಟದ ಮುಂದುವರಿದ ಭಾಗವಾಗಿ ದಲಿತ, ಶೋಷಿತ ಮತ್ತು ಮೂಲನಿವಾಸಿಗಳಿಗೆ ಸೇರಬೇಕಿರುವ ಹಕ್ಕುಗಳನ್ನು ಪಡೆಯುವ ಹೋರಾಟಗಳು ಒಂದಕ್ಕೊಂದು ಬೆಸೆದು ಒಗ್ಗಟ್ಟಿನ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.”
    ತುಂಬಾ ಒಳ್ಳೆಯದಾಗಿ ಹೇಳಿದಿರಿ ಪ್ರಭುರವರೇ .
    ಅಲ್ಲಿಯ ಪ್ರಧಾನಿ ತಮ್ಮ ಪೂರ್ವಿಕರು ಮಾಡಿದ ತಪ್ಪಿಗೆ ಕ್ಕ್ಷಮೆ ಕೇಳಿ ದೊಡ್ಡತನ ಮೆರೆದ್ದಿದ್ದಾರೆ . ಕೆಲವು ವರ್ಷದ ಹಿಂದೆ ಬೆಂಗಳೂರು ಮೂಲದ ನಿರಪರಾದಿ ಡಾಕ್ಟರ್ ಒರ್ವರನ್ನು
    ಅಲ್ಲಿಯ ಪೊಲೀಸರು ಬಂದಿಸಿ ಜ್ಯೆಲಿಗೆ ಹಾಕಿದಾಗ ,ಆಸ್ಟ್ರೇಲಿಯ ದ ಕೋರ್ಟು ಅವರನ್ನು ವಿಚಾರಣೆ ನಡೆಸಿತು. ಅವರು ನಿರಪರಾದಿ ಎಂದು ತಿಳಿದ ಅ ಕ್ಷಣ ,ಕೆಲವು ಲಕ್ಷ ಡಾಲರ್ ಪರಿಹಾರದೊಂದಿಗೆ ,ಕ್ಕ್ಷಮೆ ಕೇಳಿಸಿ ಬಿಡುಗಡೆ ಗೊಳಿಸಿತು . ಇದು ಅತ್ಯಂತ ಅಭಿನಂದಾರ್ಹ . ಗುಣಕ್ಕೆ ಮತ್ಸರವೇಕೆ ಅಯ್ಯಾ ?

    Reply
    1. ಕ್ರಾಂತಿಕೇಶ್ವರ

      ಬಾವ ಅವರೇ, ಶೋಷಿತರ ಬಗ್ಗೆ ಆಸ್ಟ್ರೇಲಿಯಾ ಇಷ್ಟೆಲ್ಲಾ ಮಾಡಿರುವಾಗ ನಿಮ್ಮ ಪ್ರೀತಿಯ ಅರೇಬಿಯಾ ಕೂಡ ಏನಾದರೂ ಮಾಡಬೇಕಲ್ಲವೇ? ಉದಾಹರಣಗೆ ಏಳನೇ ಶತಮಾನದಲ್ಲಿ ಇಸ್ಲಾಂ ಪ್ರಸರಣದ ನೆಪದಲ್ಲಿ ನೆಲಸಮ ಮಾಡಿದ ಸ್ಥಳೀಯ ದೇವಾಲಯಗಳನ್ನು ಮತ್ತೆ ಕಟ್ಟುವುದು ಹಾಗೂ ಅರೇಬಿಯಾದ ಬಹುದೇವೋಪಾಸಕ ಜನಸಮುದಾಯಗಳನ್ನು ಹಿಂಸೆಯ ಮೂಲಕ ಮತಾಂತರಗೊಳಿಸಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವುದು. ಇದು ಸಾಧ್ಯವಾಗದಿದ್ದರೆ ಅರೇಬಿಯಾದ ಅಭಿವೃದ್ಧಿಗೆ ದಿನನಿತ್ಯ ದುಡಿಯುವ ಮುಸ್ಲಿಮೇತರ ಸಮುದಾಯಗಳಿಗೆ ದೇವಸ್ಥಾನ ಕಟ್ಟಿಕೊಳ್ಳಲು ಅವಕಾಶ ನೀಡುವುದು. ಏನಂತೀರಿ?

      Reply
  2. ಅಭಿನವ ಚನ್ನಬಸವಣ್ಣ

    “2008 ರಲ್ಲಿ ಅಂದಿನ ಪ್ರಧಾನಿ ಕೆವಿನ್ ರಡ್ ಮೂಲನಿವಾಸಿಗಳ ಬಹಿರಂಗ ಕ್ಷಮೆ ಕೇಳಿದರು.”

    ಇದೇ ರೀತಿ ಸಹಸ್ರಾರು ವರ್ಷಗಳಿಂದ ಶ್ರೇಣೀಕೃತ ಸಮಾಜವನ್ನು ನಿರ್ಮಿಸಿ ಶೋಷಣೆ ನಡೆಸಿದ್ದಕ್ಕೆ ವೈದಿಕ ಮಠಗಳ ಪೀಠಾಧಿಪತಿಗಳು ಸಾರ್ವಜನಿಕವಾಗಿ ಕ್ಷಮೆ ಕೇಳಿಯಾರೇ? @ಪೇಜಾವರ: ವಿಷ್ಣು ದೀಕ್ಷೆ ಬದಲು ಈ ಕೆಲಸ ಮಾಡಿ.

    Reply
  3. Sharada halli

    ಚನ್ನಬಸವಣ್ಣ ಹೆಸರಿನ ಶೆಟ್ಕರ್ ಸಾಬರೆ ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ನಿಮ್ಮ ಲಿಂಗಾಯತರು ನಿತ್ಯ ದಲಿತರ ಶೋಷಣೆ ಮಾಡುತ್ತಿದ್ದಾರಲ್ಲಾ ಇನ್ನೂ ತನಕ. ಲಿಂಗಾಯತ ಸ್ವಾಮಿಗಳು ಏಕೆ ಕ್ಷಮೆ ಕೇಳುತ್ತಿಲ್ಲ. ಈ ಲಿಂಗಾಯಿತರು ಮನುಸ್ಮೃತಿ ಓದಿಲ್ಲ. ಹೋಗಲಿ ಕೇಳಿಲ್ಲ ಕೂಡ. ಕೇವಲ ದಲಿತರಲ್ಲದೇ ಅಗಸ, ಕ್ಷೌರಿಕ, ಮುಸಲ್ಮಾನ, ನಾಟೀಕಾರ(ತಳವಾರ) ಮುಂತಾದ ಜಾತಿಗಳನ್ನೂ ಮುಟ್ಟಿಸಿಕೊಳ್ಳದೇ ಶೋಷಣೆ ಮಾಡುತ್ತಾರಲ್ಲಾ. ಇದಕ್ಕೆಲ್ಲ ಮನುಸ್ಮೃತಿ ಕಾರಣವೆನ್ನೋಣವೆಂದರೆ ಅವರೆಲ್ಲ. ಅದರ ಹೆಸರೇ ಕೇಳಿಲ್ಲ. ನಿತ್ಯವೂ ಬಾಯಲ್ಲಿ ಬಸವಣ್ಣನ ವಚನಗಳನ್ನು ಹೇಳುತ್ತಲೇ ಶೋಷಣೆ ಮಾಡುತ್ತಿದ್ದಾರಲ್ಲಾ ಅದಕ್ಕೇನು ಹೇಳುತ್ತೀರಿ? ಇನ್ನು ಸಾವಿರಾರು ವರ್ಷ ಈ ದೇಶದ ಹಿಂದುಗಳನ್ನು ಮತಾಂತರ ಮಾಡಿ ಅವರ ದೇವಾಲಯಗಳನ್ನು ನಾಶ ಮಾಡಿ ಅವರ ದೇವರ ಮೂರ್ತಿಗಳನ್ನು ಉಚ್ಚೆ ಹೇಲುಗಳಿರುವ ಸ್ಥಳದಲ್ಲಿ ಹೂಳಿ(ಔರಂಗಜೇಬನ ಆಸ್ಥಾನದ ಇತಿಹಾಸಕಾರನೇ ಮಾಸೀರ್ – ಈ- ಆಲಂಗೀರಿ ಕೃತಿಯಲ್ಲಿ ಬರೆದಿದ್ದಾನೆ) ಶೋಶಷಣೆ ಮಾಡಿದ್ದಾರಲ್ಲಾ ಇಂದು ಅದಕ್ಕಾಗಿ ಯಾವ ಮುಲ್ಲಾಗಳಾಗಲಿ ಧರ್ಮಗುರುಗಳಾಗಲೀ ಕ್ಷಮೆ ಕೇಳಿದ್ದಾರಾ? ಎಲ್ಲಾ ಧರ್ಮಗಳಲ್ಲೂ ನ್ಯೂನತೆಗಳಿದ್ದೇ ಇವೆ. ಉಳಿದವರು ತಮ್ಮ ಧರ್ಮದ ನ್ಯೂನತೆಗಳನ್ನು ಮುಚ್ಚಿಟ್ಟು ಇನ್ನೋಂದು ಧರ್ಮದ ನ್ಯೂನತೆ ಎತ್ತಿ ಆಡಿ ತೋರಿಸಿ ನಿಂದಿಸಿದರೆ ಭಾರತ ಉದ್ಧಾರವಗಲ್ಲಾ. ಅದಕ್ಕಾಗಿ ಶ್ರಮ ವಹಿಸೋಣ. ಸಂಘಟನೆ ಮಾಡಿ ಹೋರಾಡೋಣ . ಕೇವಲ ಬ್ಲಾಗಿನಲ್ಲಿ ಒಬ್ಬರ ಮೇಲೆ ಒಬ್ಬರು ರಾಡಿ ಎರಚಿದರೆ ಅಥವಾ ಇನ್ನೋಬ್ಬರನ್ನು ಕೆರಳಿಸುವ ಲೇಖನ ಬರೆದರೆ ಸಮಸ್ಯೆ ಬಗೆಹರಿಯುತ್ತಾ? ದಲಿತರ ಶೋಷಣೆ ನಿಲ್ಲುತ್ತಾ? ಕೆಲವು ವ್ಯಕ್ತಿಗಳು ದಲಿತರಿಗಾಗಿ ದುಡಿದಿದ್ದಾರೆ. ಶ್ರೀ ರಾಮಾನುಜರು, ಬಸವಣ್ಣ, ಗಾಂಧಿ, ಬುದ್ಧ ಇವರೆಲ್ಲಾ ಬ್ರಾಹ್ಮಣ ಬಸಿರಿನಲ್ಲೇ ಹುಟ್ಟಿದವರಲ್ಲವೆ? ನಿಮ್ಮ ಭಾವ ಹೇಳುವ ಅನಂತ ಮೂರ್ತಿಗಳೂ ಅವರೇ ಅಲ್ಲವೆ?

    Reply
    1. ಅಭಿನವ ಚನ್ನಬಸವಣ್ಣ

      ವೀರಶೈವ ಮಠಗಳೂ ವೈದಿಕ ಧರ್ಮಕ್ಕೆ ಆತುಕೊಂಡಿವೆ, ಕರ್ಮ ಸಿದ್ಧಾಂತವನ್ನು ಬೋಧಿಸುತ್ತಿವೆ. ಆದರೆ ಶ್ರೇಣೀಕೃತ ಸಮಾಜವನ್ನು ನಿರ್ಮಿಸಿದ್ದು ವೈದಿಕ ಮಠಗಳು. ಮೊದಲು ವೈದಿಕ ಮತಾಧಿಪತಿಗಳು ಕ್ಷಮೆ ಕೇಳಲಿ. ಆಮೇಲೆ ವೀರಶೈವ ಮಠಗಳ ಉಸಾಬರಿ ನೋಡೋಣ.

      Reply
    2. ಹೆಸರಲ್ಲೇನಿದೆ?

      ಶಾರದಾ ಹಳ್ಳಿಯವರೆ, ಒಂದು ತಿದ್ದುಪಡಿ. ನೀವೆಣಿಸಿದಂತೆ ಗಾಂಧೀಜಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವರಲ್ಲ! ಗುಜರಾತಿ ವಣಿಕ (ವ್ಯಾಪಾರಿ) ಜಾತಿಯಲ್ಲಿ ಹುಟ್ಟಿದವರು. ಮತದ ದೃಷ್ಟಿಯಿಂದ ವೈಷ್ಣವಪಂಥವನ್ನು ಅನುಸರಿಸುವ ಕುಲ.

      Reply
      1. Sharada halli

        ಗಾಂಧಿ ಅವರ ವೈಷ್ಣವ ಕುಲವನ್ನು ವೈಶ್ಯ ಬ್ರಾಹ್ಮಣ ಕುಲವೆಂದು ಕರೆಯುತ್ತಾರಂತೆ ನಮ್ಮೂರಲ್ಲಿ ಹಾಗೆ ಗುಜರಾತಿ ಕುಟುಂಬಗಳು ಹೇಳಿಕೊಳ್ಳುತ್ತವೆ. ಮತ್ತು ಶ್ರೀ ಕೆ. ಎಸ್ ನಾರಾಯಣಾಚಾರ್ಯರು ತಮ್ಮ ಆಚಾರ್ಯ ಚಾಣಕ್ಯ ಕೃತಿಯಲ್ಲಿ ಇವರ ಬಗ್ಗೆ ಬರೆದಿದ್ದಾರೆ. ಮೂಲತಃ ಇವರು ಹೊರದೇಶದವರು. ನಂತರ ವೈಷ್ಣವ ದೀಕ್ಷೆ ಪಡೆದವರೆಂದು ಹೇಳುತ್ತಾ ಇವರೂ ಚಕ್ರಾಂಕನ ಧಾರಿಗಳು ಅಂದರೆ ವೈಷ್ಣವ ಬ್ರಾಹ್ಮಣರು ಹೇಗೆ ಮುದ್ರಾಧಾರಣ ಮಾಡಿಕೊಳ್ಳುತ್ತಿದ್ದರೋ ಹಾಗೆ ಇವರೂ ಮಾಡಿಕೊಳ್ಲುತ್ತಾರೆ ಎಂದು ತಿಳಿಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲೂ ಒಂದು ಸಲ ಅವರನ್ನು ವೈಶ್ಯ ಬ್ರಾಹ್ಮಣನೆಂದು ಕರೆಯಲಾಗಿತ್ತು. ಕಾರಣ ಹಾಗೆ ಬರೆದಿರುವೆ. ಹಾಗೇನೇ ಕಾಯಸ್ಥರನ್ನು ಶ್ರೀ ಬಂಕಿಮ ಚಂದ್ರ ಚಟರ್ಜಿ ಅವರ ಆನಂದಮಠ ಕಾದಂಬರಿಯಲ್ಲಿ ಬ್ರಾಹ್ಮಣರೆಂದು ಕರೆದಿದ್ದಾರೆ.

        Reply
    3. ಹೆಸರಲ್ಲೇನಿದೆ?

      ಓಹ್! ಮತ್ತೊಂದು ವಿಷಯ, ಬುದ್ಧ ಬ್ರಾಹ್ಮಣನಲ್ಲ, ಬುದ್ಧ ಶಾಕ್ಯ ಕ್ಷತ್ರಿಯಕುಲದಲ್ಲಿ ಹುಟ್ಟಿದವನು, ತಂದೆ ಶುದ್ಧೋದನ, ತಾಯಿ ಮಾಯಾದೇವಿ.

      Reply
      1. Sharada halli

        ಹೆಸರಲ್ಲೇನಿದೆ ಅವರೆ ಶಾಕ್ಯ ಮತ್ತು ಶುಂಗ ವಂಶಗಳು ಬ್ರಾಹ್ಮಣ ಕುಲವಾಗಿದ್ದವು ಎಂದು ಶ್ರೀ ಬಾಶಮ್ ಅವರು ‘ಪ್ರಾಚೀನ ಭಾರತವೆಂಬ ಅದ್ಭುತ’ ಎಂಬ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಬೇಕಿದ್ದರೆ ನೋಡಿಕೊಳ್ಳಿ.

        Reply
      2. Sharada halli

        ಎಷ್ಟೋ ಸಲ ಅವರ ಜಾತಿ ಒಂದಿರುತ್ತದೆ. ನಾವು ಏನೇನೋ ಮಾಡಿರುತ್ತೇವೆ. ಉದಾಹರಣೆಗೆ ಬಲಿಯನ್ನು ಶ್ರೀ ಜ್ಯೋತಿಬಾ ಫುಲೆಯವರು ದ್ರಾವಿಡನೆನ್ನುತ್ತಾರೆ. ಮತ್ತು ಹಿಂದುಳಿದ ಜಾತಿಯವನಾಗಿದ್ದರಿಂದ ಬ್ರಾಹ್ಮಣನಾದ ವಾಮನ ಮೋಸದಿಂದ ಅವನನ್ನು ಪಾತಾಳಕ್ಕೆ ತಳ್ಳಿದ ಎನ್ನುತ್ತಾರೆ. ಆದರೆ ಬಲಿ ಹೆಗೆ ಹಿಂದುಳಿದ ಜಾತಿಯವನು? ಅವನು ಪ್ರಹ್ಲಾದನ ಮೊಮ್ಮಗ ವಿರೋಚನನ ಮಗ. ಪ್ರಹ್ಲಾದನು ಕಶ್ಯಪನೆಂಬ ಗೋತ್ರೋತ್ಪನ್ನ ಬ್ರಾಹ್ಮಣನ ಮೊಮ್ಮಗ. ಹಿರಣ್ಯ ಕಶಿಪುವಿನ ಮಗ. ಅಂದ ಮೇಲೆ ಬಲಿಯೂ ಕೂಡ ಅದೇ ವಂಶದಲ್ಲಿ ಹುಟ್ಟಿದವನೆಂದ ಮೇಲೆ ಕಶ್ಯಪ ಗೋತ್ರೋತ್ಪನ್ನ ಬ್ರಾಹ್ಮಣನೇ ಆಗಬೇಕಲ್ಲವೆ? ಆದರೂ ಮಾನ್ಯ ಫುಲೆ ಯವರು ಅವನನ್ನು ದ್ರಾವಿಡ ಶೂದ್ರ ಜಾತಿಯವನು ಎನ್ನುತ್ತಾರೆ. ಕೆಲವು ಸಲ ತಮಗೆ ಬೇಕಾದಂತೆ ಇತಿಹಾಸವನ್ನು ತಿರುಚಿಕೊಳ್ಳಲು ವ್ಯಕ್ತಿಗಳ ಜಾತಿಗಳನ್ನೂ ಬುಡಮೇಲು ಮಾಡಿದ್ದು ಕಂಡುಬರುತ್ತದೆ. ಬಸವಣ್ಣನನ್ನೂ ಕೂಡ ಮಾದಿಗನೆಂದು ಹೇಳಿರಲಿಲ್ಲವೆ? ವಾಲ್ಮೀಕಿಯನ್ನು ಬೇಡನೆನ್ನುವದಿಲ್ಲವೆ? ಇವೆಲ್ಲ ಜ್ವಲಂತ ಉದಾಹರಣೆಗಳಾಗಿವೆ.

        Reply
  4. ಹೆಸರಲ್ಲೇನಿದೆ?

    ಎಲ್ಲಿಯವರೆಗೆ ಬ್ರಾಹ್ಮಣ ಮಠಗಳನ್ನು ಆಕ್ಷೇಪಿಸಿ, ದೂಷಿಸಿ ಲೇಖನಗಳು ಪ್ರಕಟವಾದವೋ, ಅಲ್ಲಿಯವರೆಗೆ ನಾಗಶೆಟ್ಟಿ ಶೇತ್ಕರ್ ಅವರು ಕೂಡ ‘ನಡೆಯಲಿ, ಇಕ್ರಲಾ, ವದೀರ್ಲಾ’ ಎಂದು ಪ್ರೋತ್ಸಾಹಿಸುತ್ತಿದ್ದರು. ಯಾವಾಗ ಶಾರದಾ ಹಳ್ಳಿಯವರು ಲಿಂಗಾಯತಮಠಗಳ ಬಗ್ಗೆ ಮಾತಾಡಿದರೋ, ಆಗ ಇದು ತಮ್ಮ ಬುಡಕ್ಕೇ ಬರುತ್ತಿದೆ ಎಂದು ಗೊತ್ತಾಯಿತಲ್ಲ! ಲಿಂಗಾಯತ ಮಠಗಳ ಉಸಾಬರಿ ಆಮೇಲೆ ನೋಡೋಣ ಎನ್ನುವ ಹಾರಿಕೆ ಮಾತು ಆಡುತ್ತಿದ್ದಾರೆ, ಅಭಿನವ ಚನ್ನಬಸವಣ್ಣ ಉರುಫ್ ನಾಗಶೆಟ್ಟಿ ಶೇತ್ಕರ್!

    Reply

Leave a Reply to ಅಭಿನವ ಚನ್ನಬಸವಣ್ಣ Cancel reply

Your email address will not be published. Required fields are marked *