ಕೆಂಡದ ಗಿರಿಯ ಮೇಲೊಂದು ಅರಗಿನ ಕಂಬ

download– ಬಿ.ಶ್ರೀಪಾದ ಭಟ್

“ಅಸಮಾನತೆಯು ಹಿಂದೂಯಿಸಂನ ಆತ್ಮ. ಸಾಮಾಜಿಕ ಉಪಯುಕ್ತತೆಯ ಫಲಾಫಲವನ್ನು ಪರಾಮರ್ಶಿಲು ಸೋಲುವ ಹಿಂದೂಯಿಸಂ ಫಿಲಾಸಫಿಯು ವೈಯುಕ್ತಿಕ ನ್ಯಾಯಪರತೆಯ ಫಲಾಫಲವನ್ನು ಪರಾಮರ್ಶಿಸಲು
ಸಹ ಸೋತಿದೆ.” – ಡಾ.ಬಿ.ಆರ್.ಆಂಬೇಡ್ಕರ್.

ಹತ್ತೊಂಬತ್ತನೇ ಶತಮಾನದ ಪ್ರಮುಖ ಆಧ್ಯಾತ್ಮದ ಗುರುವಾಗಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮದ ಕುರಿತಾಗಿ ವ್ಯಕ್ತಿಯೊಬ್ಬನು ತಾನು ನಂಬಿದ ಧರ್ಮದಲ್ಲಿ ಅನೇಕ ಲೋಪದೋಷಗಳಿದ್ದಲ್ಲಿ ಮತ್ತು ಆ ವ್ಯಕ್ತಿಯು ಪ್ರಾಮಾಣಿಕ ಮತ್ತು ಶ್ರದ್ಧೆಯುಳ್ಳವನಾಗಿದ್ದರೆ ಆಗ ದೇವರು ಸ್ವತಃ ಆ ಲೋಪದೋಷಗಳನ್ನು ಸರಿಪಡಿಸುತ್ತಾನೆ. ಬೇರೊಂದು ಧರ್ಮದಲ್ಲಿ ಲೋಪದೋಷಗಳಿದ್ದರೆ ಅದು ಆ ಧರ್ಮದಲ್ಲಿ ನಂಬಿಕೆಯಿಟ್ಟವರಿಗೆ ಸಂಬಂಧಪಟ್ಟಿರುತ್ತದೆ, ದೇವರು ಅದನ್ನು ಸರಿಪಡಿಸುತ್ತಾನೆ. ನಾನು ಹಿಂದೂಯಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿ ಎಲ್ಲಾ ಧರ್ಮಗಳನ್ನು ಪಾಲಿಸಿದ್ದೇನೆ. ಈ ಧರ್ಮಗಳ ಆಚರಣೆಗಳನ್ನು ಆಳವಾಗಿ ಆಚರಿಸಿದಾಗ ನಾನು ಕಂಡುಕೊಂಡ ಸತ್ಯವೇನೆಂದರೆ ಒಂದೇ ದೇವರ ಕಡೆಗೆ ನಾವೆಲ್ಲಾ ಚಲಿಸುತ್ತಿದ್ದೇವೆ. ಆದರೆ ವಿಭಿನ್ನ ದಾರಿಗಳನ್ನು ಬಳಸುತ್ತಿದ್ದೇವೆ.

ದುರಂತವೆಂದರೆ ಧರ್ಮದ ಹೆಸರಿನಲ್ಲಿ ಹಿಂದೂಗಳು, ಮುಸ್ಲಿಂರು, ಕ್ರಿಶ್ಚಿಯನ್ನರು, ವೈಶ್ಣವ, ಶೈವ ಹೀಗೆ ಪರಸ್ಪರ ಕಚ್ಚಾಡುತ್ತಿರುವುದು. ಕ್ರಿಷ್ಣ ಎಂದು ಕರೆಯಲ್ಪಡುವ ದೇವರು ಶಿವ ಎಂದು ಕರೆಯಲ್ಪಡುತ್ತಾನೆ, ಶಿವ ಎಂದು ಕರೆಯಲ್ಪಡುವ ದೇವರು ಜೀಸಸ್ ಎಂದೂ, ಅಲ್ಲಾ ಎಂದೂ ಕರೆಯಲ್ಪಡುತ್ತಾನೆ. ಎಲ್ಲರೂ ಒಂದೇ ಆದರೆ ಈ ನಂಬಿಕೆಯನ್ನು ಜನರು ಜನರು ಸೋಲು ಗೆಲವುಗಳ ನೆಲೆಯಲ್ಲಿ ನೋಡುವ ಜನರು ತಮ್ಮ ಧರ್ಮ ಮಾತ್ರ ಸದಾ ಗೆಲವು ಸಾಧಿಸುತ್ತದೆ ಮತ್ತು ಬೇರೆಲ್ಲ ಧರ್ಮಗಳು ಸೋಲುತ್ತವೆ ಎಂದು ಚಿಂತಿಸುತ್ತಾರೆ ಎಂದು ಹೇಳುತ್ತಾರೆ. ಚಿಂತಕ ಜ್ಯೋತಿರ್ಮಯ ಶರ್ಮ ಅವರು ಸಂಶೋಧನ ಪುಸ್ತಕ Cosmic Love and Human Apathy: Swami Vivekananda’s Re-statement of Religion
ದಲ್ಲಿ ರಾಮಕ್ರಿಷ್ಣ ಮತ್ತು ಅವರ ಶಿಷ್ಯರಾದ ವಿವೇಕನಾಂದರ ಕುರಿತಾಗಿ ಹೊಸ ಚಿಂತನೆಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಾರೆ. ಆ ಪುಸ್ತಕದಲ್ಲಿ ಜ್ಯೋತಿರ್ಮಯ ಶರ್ಮ ಅವರು ಬರೆಯುತ್ತಾರೆ 1896ರಲ್ಲಿ ಅಮೇರಿಕಾ ಮತ್ತು ಲಂಡನ್ ಗೆ ಪ್ರವಾಸ ಮಾಡುವ ವಿವೇಕಾನಂದರು ಅಲ್ಲಿ ಧರ್ಮದ ಕುರಿತಾಗಿ, ತಮ್ಮ ಗುರುಗಳಾದ ರಾಮಕ್ರಿಷ್ಣರ ಕುರಿತಾಗಿ ಮಾತನಾಡುತ್ತ ರಾಮಕ್ರಿಷ್ಣ ಅವರು ಎಲ್ಲಾ ಧರ್ಮಗಳ ಕುರಿತಾದ ಸತ್ಯಗಳನ್ನು ಅರಿಯಲು ಉತ್ಸುಕರಾಗಿದ್ದರು. ಅವರು ಯಾವುದೇ ವ್ಯಕ್ತಿಯ ವೈಯುಕ್ತಿಕ ನಂಬಿಕೆಯನ್ನು ತೊಂದರೆಗೊಳಪಡಿಸಲು ಬಯಸುತ್ತಿರಲಿಲ್ಲ ಎಂದು ಭಾಷಣ ಮಾಡಿದ್ದರು. ರಾಜಕೀಯವಾಗಿ ಹಿಂದೂಯಿಸಂ ಕುರಿತಾಗಿ ಆಳವಾಗಿ ಮಾತನಾಡಿದ್ದ ವಿವೇಕಾನಂದ ಬೇರೆ ಧರ್ಮದ ಜನರ ನಂಬಿಕೆಗಳ ಕುರಿತಾಗಿ ಬಹಳಷ್ಟು ಲಿಬರಲ್ ಆಗಿ ಚಿಂತಿಸುತ್ತಿದ್ದರು.

ಎಲ್ಲಾ ಧರ್ಮಗಳ ನಂಬಿಕೆಗಳು ವಿಭಿನ್ನವಾಗಿದ್ದರೂ ಅದು ಕಡೆಗೆ ಒಂದೇ ದೇವರನ್ನು ಪ್ರಾಥಿಸುತ್ತದೆ ಎಂದು ವಿವೇಕಾನಂದ ಸಹ ನಂಬಿದ್ದರು. ತಮ್ಮ ಅನೇಕ ಸಾರ್ವಜನಿಕ ಭಾಷಣಗಳಲ್ಲಿ ವಿವೇಕಾನಂದ ಅವರು ತಮ್ಮ ಸಂದೇಶವು ಶಾಂತಿ ಮತ್ತು ಧರ್ಮದ ಒಗ್ಗಟ್ಟನ್ನು ಬೆಂಬಲಿಸುತ್ತದೆ ಮತ್ತು ಶತೃತ್ವವನ್ನು download (1)ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಸ್ವತಹ ಹಿಂದೂ ಧರ್ಮದ ಕುರಿತಾಗಿ ನಂಬಿಗೆಯನ್ನು ಹೊಂದಿದ್ದ ವಿವೇಕಾನಂದ ಪ್ರತಿಯೊಬ್ಬರೂ ತನ್ನ ಧರ್ಮದ ಕುರಿತಾದ ಇರುವ ನಂಬಿಕೆಯ ಪ್ರಮಾಣದಷ್ಟೇ ವಿವಿಧ ಧರ್ಮಗಳ ಕುರಿತಾಗಿ ಇರಬೇಕೆಂದು ಹೇಳಿದ್ದರು. ನಂಬಿಕೆಗಳು ಬಹುರೂಪಿಯಾಗಿರುತ್ತವೆಂದು ನಂಬಿದ್ದರು. ವಿವಿಧ ಧರ್ಮಗಳ ನಂಬಿಕೆಗಳ ಕುರಿತಾಗಿ ವಿವೇಕಾನಂದ ಅವರು ಜಗತ್ತಿನಲ್ಲಿರುವ ವಿವಿಧ ಪಂಥಗಳನ್ನು ನಾನು ವಿರೋಧಿಸುವುಲ್ಲ. ಪಂಥಗಳ ಸಂಖ್ಯೆ ಹೆಚ್ಚಾದಷ್ಟು ದೇವರಿಗೆ ಆಯ್ಕೆಗಾಗಿ ವಲಯಗಳು ವಿಶಾಲವಾಗುತ್ತ ಹೋಗುತ್ತವೆ. ಆದರೆ ಪ್ರತಿಯೊಂದು ಸಂದರ್ಭದಲ್ಲಿ, ಸಂಗತಿಗಳಲ್ಲಿ, ವ್ಯಾಜ್ಯಗಳಲ್ಲಿ ಒಂದೇ ಧರ್ಮವನ್ನು ಗುರಿಯಾಗಿ ದೂಷಿಸುವುದನ್ನು ನಾನು ವಿರೋಧಿಸುತ್ತೇನೆ. ಪ್ರತಿಯೊಂದು ಧರ್ಮದವರನ್ನು ನಾವು ಒಳಗೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಪ್ರತಿಪಾದಿಸಿದರು ಎಂದು ಜ್ಯೋತಿರ್ಮಯ ಶರ್ಮ ಹೇಳುತ್ತಾರೆ.

ಒಂದು ಕಡೆ ಧರ್ಮದ ವಿವಿಧ ಮಜಲುಗಳನ್ನು ಅರಿತುಕೊಳ್ಳಲು ಆಧ್ಯಾತ್ಮವನ್ನು ಬಳಸಿಕೊಂಡ ರಾಮಕ್ರಿಷ್ಣ ಹಿಂದೂ ಧರ್ಮವನ್ನು ಸನಾತನ ಧರ್ಮವೆಂದೇ ಪರಿಭಾವಿಸಿದ್ದರು. ಇವರ ಆಧ್ಯಾತ್ಮದ ಚಿಂತನೆಗಳಿಗೂ ಧರ್ಮದ ಕುರಿತಾದ ಶ್ರೇಣೀಕೃತ ವ್ಯವಸ್ಥೆಯ ಕುರಿತಾದ ಚಿಂತನೆಗಳ ನಡುವೆ ಅನೇಕ ವೈರುಧ್ಯಗಳಿದ್ದವು. ಆದರೆ ತಮ್ಮ ಗುರುಗಳಿಂದ ವಿಭಿನ್ನವಾಗಿ ಚಿಂತಿಸಿದ ವಿವೇಕಾನಂದ ಅವರು ಧರ್ಮವನ್ನು ಒಂದು ಕಡೆ ಆಧ್ಯಾತ್ಮದ ತುದಿಯಲ್ಲಿಯೂ ಮತ್ತೊಂದೆಡೆ ರಾಜಕೀಯ ನೆಲೆಯಲ್ಲಿಯೂ ನಿರ್ವಚಿಸಿದರು.
ಹೆಗೆಲ್ನ absolute idealism ಮತ್ತು Phenomenology of Spirit ನ ಫಿಲಾಸಫಿ ಚಿಂತನೆಗಳ ನಂತರ 19ನೇ ಶತಮಾದ ಎರಡು ಮತ್ತು ಮೂರನೇ ದಶಕಗಳಲ್ಲಿ ಯುರೋಪಿನಲ್ಲಿ ಸಂಸ್ಕೃತಿಗಳ ವಿಸ್ಮೃತಿ ಮತ್ತು ಬಂಡವಾಳಶಾಹಿಗಳ ಏಳಿಗೆಗಳು ಆ ಕಾಲದ ದಾರ್ಶನಿಕರಲ್ಲಿ ಚಿಂತೆಯನ್ನು ಹೆಚ್ಚಿಸಿದ್ದವು. ಬೂಜ್ರ್ವ ಶಕ್ತಿಗಳು ತಲೆಯೆತ್ತುತ್ತಿರುವುದು ಅವರಲ್ಲಿ ಆತಂಕವನ್ನುಂಟು ಮಾಡಿತು. ಕಡೆಗೆ 19ನೇ ಶತಮಾನ ಕೊನೆಯ ದಶಕದಲ್ಲಿ ಯುರೋಪ್ ರಾಷ್ಟ್ರಗಳು ಮತ್ತು ಇಂಡಿಯಾದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು, ಚೈತನ್ಯವನ್ನು ಆಧ್ಯಾತ್ಮದ ಚಿಂತನೆಗಳೊಂದಿಗೆ ಬೆಸೆಯಲಾಯಿತು. ಈ ಪ್ರಕ್ರಿಯೆಯು ಕ್ರಮೇಣ ಗಟ್ಟಿಗೊಳ್ಳುತ್ತಾ ಹೋಯಿತೇ ಹೊರತು ಕುಂಠಿತಗೊಳ್ಳಲಿಲ್ಲ. ಧರ್ಮವನ್ನು ಪುನರುಜ್ಜೀವನಗೊಳಿಸುವ ಮಾತುಗಳು ಕೇಳಿಬಂದವು. ಇಂತಹ ಕಾಲಘಟ್ಟದಲ್ಲಿ ವಿವೇಕಾನಂದ ಅವರು ಈ ಹಿಂದೂ ಧರ್ಮದ ಪುನರುಜ್ಜೀವನದ ಚಿಂತನೆಗಳಿಗೆ ಹೊಸ ತಿರುವುಗಳನ್ನು ಕೊಟ್ಟರು. ಈ ಹಿಂದೂ ಧರ್ಮಕ್ಕೆ ಪಾರಮರ್ಥಿಕ ಚಿಂತನೆಗಳ ಜೊತೆ ಜತೆಗೆ ರಾಜಕೀಯ ಪರಿಹಾರವನ್ನೂ ಬೆಸೆದವರು ವಿವೇಕಾನಂದ. ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರಂತಹವರು ಪ್ರತಿಪಾದಿಸಿದ್ದ ಸಂಕೇತಗರ್ಭಿತವಾದ, ಉದಾರವಾದಿ ನೆಲೆಗಳಲ್ಲಿದ್ದ ಧರ್ಮದ ಕುರಿತಾದ ಚಿಂತನೆಗಳನ್ನು ಅಲ್ಲಿಂದ ಬೇರ್ಪಡಿಸಿದ ವಿವೇಕಾನಂದ ಅವರು ಹಿಂದೂಯಿಸಂ ಅನ್ನು ಧಾರ್ಮಿಕ
ಸಮ್ಮೋಹಕತೆಯ ತತ್ವಗಳಿಗೆ, ಜನಸಾಮಾನ್ಯರ ರಾಜಕಾರಣಕ್ಕೆ ಹೊರಳಿಸಿದರು.

ರಾಜಕೀಯ ಹಿಂದೂಯಿಸಂಗೆ ಮೊಟ್ಟ ಮೊದಲ ಬುನಾದಿಯನ್ನು ಹಾಕಿದ್ದು ವಿವೇಕಾನಂದ ಅವರು ಎಂದು ಚಿಂತಕರು ವಿಶ್ಲೇಷಿಸುತ್ತಾರೆ. ಕಲೋನಿಯಲ್ ಆಡಳಿತದ ಸಂದರ್ಭದ 19ನೇ ಶತಮಾನದಲ್ಲಿ ಭಕ್ತಿಪಂಥದ ಚಳುವಳಿಯಿಂದ ಪ್ರೇರೇಪಿತಗೊಂಡಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮವನ್ನು ಮಾನವೀಯ ಜವಾಬ್ದಾರಿಯ ಮೂಲಕ,ರಹಸ್ಯವೆನಿಸುವ ಆಧ್ಯಾತ್ಮದ ಯೋಗದ ಮೂಲಕ ಬೋಧಿಸುತ್ತ ಮಧ್ಯಮವರ್ಗಗಳನ್ನು ಬೆರಗಾಗಿಸಿದ್ದರು. ಜ್ಯೋತಿರ್ಮಯ ಶರ್ಮ ಅವರು ಆದರೆ ರಾಮಕ್ರಿಷ್ಣ ಪರಮಹಂಸರ ಸಮಾನತಾ ಭಾವದ, ರಹಸ್ಯಾತ್ಮಕ ಆಧ್ಯಾತ್ಮಕತೆಯಿಂದ ಧರ್ಮವನ್ನು ಸಂಪೂರ್ಣವಾಗಿ ಹೊರತಂದ ವಿವೇಕಾನಂದ ಅವರು ಧರ್ಮದ ನಂಬಿಕೆಯನ್ನು ನೈತಿಕ ಮತ್ತು ದೈಹಿಕ ಶಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಿದರು ಮತ್ತು ಧರ್ಮ ಮತ್ತು ನಂಬಿಕೆಗಳ ಪರಂಪರೆಯ ಚಿಂತನೆಗಳನ್ನು ಹುಟ್ಟು ಹಾಕಿದರು ಹಾಗೂ ಯಶಸ್ವಿಯಾದರು. ಕೇವಲ ಕಾರಣಗಳ ಮಿತಿಯೊಳಗೆ ಧರ್ಮವನ್ನು ಅರಿತುಕೊಳ್ಳಬೇಕೆಂದು ಪ್ರತಿಪಾದಿಸಿದ ವಿವೇಕಾನಂದ ಹೀಗೆ ಮಾಡುವುದರ ಮೂಲಕ ಸತ್ಯವನ್ನು ವಿವಿಧ ಮಜಲುಗಳಲ್ಲಿ ಅನಾವರಣಗೊಳಿಸಬಹುದೆಂದು, ಪ್ರೀತಿ ಮತ್ತು ಮಮತೆಯನ್ನು ದೇವರನ್ನು ನೋಡುವ ಸಾಕ್ಷಾಧಾರಗಳಾದ ಸಾಮರ್ಥ್ಯಗಳು ಎಂದೂ ಚಿಂತಿಸಿದರು. ಇದರ ಫಲವಾಗಿ ಭಕ್ತಿಪಂಥವು ನಿರಂತರವಾಗಿ ನಿರಾಕರಿಸುತ್ತಾ ಬಂದಿದ್ದ ವಣರ್ಾಶ್ರಮದ ಸನಾತನ ಚಿಂತನೆಗಳ ಸ್ವಧರ್ಮ ಪರಿಕಲ್ಪನೆಯು ಹಿಂಬಾಗಿಲಿನಿಂದ ಪ್ರವೇಶ ಪಡೆದುಕೊಂಡಿತು. ಪೌರುಷತ್ವ, ಬಲಶಾಲಿ ಸಾಮರ್ಥತೆಗಳು ಧರ್ಮದ ಪುನರುಜ್ಜೀವನಕ್ಕೆ ಬುನಾದಿಗಳಾಗಿ ಪ್ರತಿಪಾದನೆಗೊಂಡವು. ಮಾನವೀಯತೆಯ ಪರವಾಗಿದ್ದ ವಿವೇಕಾನಂದರ ಈ ರಾಜಕೀಯ ಹಿಂದೂಯಿಸಂ ಮುಂದೆ ವಿವಿಧ ರೀತಿಯಲ್ಲಿ ಬದಲಾವಣೆಗೊಳ್ಳುತ್ತ ಕಾಲು ಶತಮಾನದ ನಂತರ ಗಾಂಧಿಯವರ ಹಿಂದ್ ಸ್ವರಾಜ್ ಆಗಿ ಹೊರ ಹೊಮ್ಮಿತು ಮdownload (2)ತ್ತು ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರೀಯತೆಯ ಸ್ವರೂಪ ಪಡೆದುಕೊಂಡಿತು.

ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರ ಚಿಂತನೆಗಳ ಈ ಆಧ್ಯಾತ್ಮಕತೆಯ ಸಂಕೇತಗಭರ್ಿತ ಉದಾರವಾದಿ ಚಿಂತನೆಗಳು ಮೇಲಿನಂತೆ ಹೈಜಾಕ್ಗೊಂಡಿದ್ದನ್ನು ಕಣ್ಣಾರೆ ಕಂಡಿದ್ದ ಡಾ.ಬಿ.ಆರ್.ಆಂಬೇಡ್ಕರ್ ಅವರು ಈ ಧಾಮರ್ಿಕ ಆಧ್ಯಾತ್ಮಿಕತೆಯು ಮುಂದೊಂದು ದಿನ ವಿಕಾರ ಸ್ವರೂಪಕ್ಕೆ ತಿರುಗುತ್ತದೆ ಎಂದು ಎಚ್ಚರಿಸಿದ್ದರು. ಈ ಮಾದರಿಯ ಹಿಂದೂ ಧಾರ್ಮಿಕತೆಯ ಆಧ್ಯಾತ್ಮಕತೆಯನ್ನು ಅಂಬೇಡ್ಕರ್ರವರು ಅನೈತಿಕವಾದ,ವಿಕಾರವಾದ ಮೃಗಸದೃಶ್ಯ ಶಕ್ತಿಗೆ ಹೋಲಿಸಿ ಮುಂದೊಂದು ದಿನ ಇದು ರೂಢಿಗತಗೊಳ್ಳುವ ಹೇರುವಿಕೆಯ ಕಾನೂನಾಗಿ ಮಾರ್ಪಡುತ್ತದೆ ಎಂದು 1920ರಲ್ಲಿಯೇ ಎಚ್ಚರಿಸಿದ್ದರು.

ಇಂದು 21ನೇ ಶತಮಾನದಲ್ಲಿ ಈ ಆಧ್ಯಾತ್ಮ ಧಾರ್ಮಿಕತೆಯು ಸಂಪೂರ್ಣವಾಗಿ ವಿಕಾರಗೊಂಡು, ಕ್ರೌರ್ಯದ ಪ್ರದರ್ಶಕ್ಕೆ ಆಡೊಂಬೊಲವಾಗಿ, ಮಾನವ ವಿರೋಧಿ ತತ್ವಗಳಾಗಿ ಪರಿವರ್ತನೆಗೊಂಡು ದಿನೇ ದಿನಕ್ಕೆ ವಿರೂಪಗೊಳ್ಳುತ್ತಿದೆ ಮತ್ತು ಜಟಿಲಗೊಳ್ಳುತ್ತಿದೆ. ಜಾತೀಯತೆಯನ್ನು ವಿರೋಧಿಸಿದ ವಿವೇಕಾನಂದರನ್ನು ತನ್ನ ಮತೀಯವಾದಿ, ಜಾತಿ ಪದ್ಧತಿಯ, ಪ್ರತ್ಯೇಕತೆಯ ಹಿಂದೂ ಧರ್ಮಕ್ಕೆ appropriation ಮಾಡಿಕೊಂಡ ಸಂಘ ಪರಿವಾರ ಈ ಮತಾಂಧತೆಯನ್ನು ವಿರೋಧಿಸುವ ನಾಗರಿಕರ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ.

ಈ ಸಂಘ ಪರಿವಾರದ ಲುಂಪೆನ್ ಗುಂಪು ಮತ್ತು ಅವರನ್ನು ಕುರುಡಾಗಿ ಬೆಂಬಲಿಸುವ ಧಾರ್ಮಿಕ ಮತಾಂಧರ ಮೂಲಭೂತವಾದವನ್ನು ವಿರೋಧಿಸುವ ಜನಪರ ಚಿಂತಕರು, ಲೇಖಕರ ಮೇಲೆ ವ್ಯಕ್ತಪಡಿಸುತ್ತಿರುವ ಅಸಹನೆಗಳು ಕ್ರೌರ್ಯದ ನೆಲೆಯಲ್ಲಿ ನಡೆಸುತ್ತಿರುವ ಮಾನಸಿಕ ಹಲ್ಲೆಗಳು ಅಂಬೇಡ್ಕರ್ ಅವರ ಮೇಲಿನ ಎಚ್ಚರಿಕೆಯ ಮಾತುಗಳಿಗೆ ಸಾಕ್ಷಿಯಾಗಿವೆ. ತೀರಾ ಇತ್ತೀಚಿಗೆ ಪೆರುಮಾಳ್ ಮುರುಗನ್ ಅವರ ಕಾದಂಬರಿಯ ವಿರುದ್ಧ ಪ್ರತಿಭಟನೆ, ದೌರ್ಜನ್ಯವನ್ನು ನಡೆಸಿದ ಸಂಘ ಪರಿವಾರದ ಫೆನಟಿಸಂ ಮತ್ತು ಅವರ ಮತಾಂಧ ಪಡೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮತ್ತು ಪ್ರಮುಖ ಚಿಂತಕ ದಿನೇಶ್ ಅಮೀನ್ ಮಟ್ಟು ಅವರ ಮೇಲೆ ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ. ಮೂರು ವರ್ಷಗಳ ಹಿಂದೆ ದಿನೇಶ್ ಅವರು ವಿವೇಕಾನಂದರ ಕುರಿತಾಗಿ ಬರೆದ ವಿಶಿಷ್ಟವಾದ, ಆಕರ ಗ್ರಂಥಗಳನ್ನು ಅಧರಿಸಿ ಬರೆದ ಲೇಖನವನ್ನು ಇಂದು ಹಿಂದೂ ಮತಾಂಧರು ವಿನಾಕಾರಣವಾಗಿ, ಅಮಾನವೀಯವಾಗಿ ಉಲ್ಲೇಖಿಸಿ ಅವರ ವಿರುದ್ಧ ಕೀಳು ಮಟ್ಟದ ಭಾಷೆಯನ್ನು ಪ್ರಯೋಗಿಸುತ್ತಿದ್ದಾರೆ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸಬೇಕು,ಶತೃತ್ವವನ್ನು ನಾನು ವಿರೋಧಿಸುತ್ತೇನೆ ಎಂದು ದೃಢವಾಗಿ ಪ್ರತಿಪಾದಿಸಿದ ವಿವೇಕಾನಂದರ ಮಾನವೀಯತೆಯ ತತ್ವಗಳನ್ನು ಇಂದು ತಮ್ಮ ಮತಾಂಧತೆಗೆ ತಕ್ಕಂತೆ ತಿರುಚಿ appropriation ಮಾಡಿಕೊಂಡ ವಿದ್ಯಾವಂತ ಮತಾಂಧರು ಸಾಮಾಜಿಕ ಜಾಲತಾಣಗಳಲ್ಲಿ ದಿನೇಶ್ ಅವರ ಮೇಲೆ ಶತೃತ್ವವನ್ನು ಸಾಧಿಸುತ್ತಿದ್ದಾರೆ, ದಿನೇಶ್ ಅವರ ಚಿಂತನೆಗಳನ್ನು ಗೌರವಿಸುವ, ಪ್ರಜಾತಾಂತ್ರಿಕವಾಗಿ ಚರ್ಚಿಸುವ ಕನಿಷ್ಠ ನಾಗರಿಕತೆಯನ್ನು ಸಹ ಬೆಳೆಸಿಕೊಂಡಿಲ್ಲ.ಈ ಧಾರ್ಮಿಕ ಮತಾಂಧರನ್ನು ವಿವೇಕಾನಂದರ ಅನುಯಾಯಿಗಳು ಎಂದು ಮಾನ್ಯ ಮಾಡಲು ಸಾಧ್ಯವೇ ಇಲ್ಲ.

ಇನ್ನು ಕರ್ನಾಟಕದಲ್ಲಿ ವಿವೇಕಾನಂದರು ತನ್ನ ಆಸ್ತಿಯೆಂಬಂತೆ ವರ್ತಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಎನ್ನುವ ಮತ್ತೊಬ್ಬ ಹುಸಿ ಚಿಂತಕ, ಹಿಂದುತ್ವವಾದಿ ಪ್ರತಿಪಾದಕ ಮೂರು ವರ್ಷಗಳ ಹಿಂದೆ ದಿನೇಶ್ ರವರ ವಿವೇಕಾನಂದರ ಕುರಿತ ಲೇಖನಕ್ಕೆ ಪ್ರಜಾಪ್ರಭುತ್ವವಿರೋಧಿ ಮಾದರಿಯಲ್ಲಿ ವಿರೋಧಿಸಲು ಹೋಗಿ ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗಿದ್ದರು. ಭಾಷಣಕ್ಕೆ ನಿಂತರೆ ಹಿಂದೂಯಿಸಂ ಪರವಾಗಿ ಉನ್ಮಾದಕಾರಿಯಾಗಿ ಮಾತನಾಡುವ, ಹಿಂದುತ್ವದ ನಿರ್ದಿಷ್ಟ ವೈದಿಕಶಾಹಿಯನ್ನು ಪ್ರತಿಪಾದಿಸುವ ಈ ಸೂಲಿಬೆಲೆಯ ಮತೀಯವಾದಿ ಹಿಂದೂಯಿಸಂ ಚಿಂತನೆಗಳು ಸಂವಿಧಾನ ವಿರೋಧಿಯಾಗಿವೆ. ಪ್ರಜಾತಾಂತ್ರಿಕ ಮೌಲ್ಯಗಳನ್ನು ಧಿಕ್ಕರಿಸುತ್ತವೆ. ಚಲನಶೀಲವಾಗಬಯಸುವ ಮಾನವೀಯ ಧಾರ್ಮಿಕತೆಯನ್ನು ಸಮಾನತೆ, ಜೀವಪರತೆಯನ್ನು ವಿರೋಧಿಸುತ್ತ, ಧಾರ್ಮಿಕತೆಯನ್ನು ಕ್ಷುದ್ರತೆಯ ಮಟ್ಟಕ್ಕೆ ಇಳಿಸುವಲ್ಲಿ ಈ ಸೂಲಿಬೆಲೆಯಂತಹ ಪ್ರತಿಗಾಮಿ ಭಾಷಣಕಾರರು ಯಶಸ್ವಿಯಾಗಿದ್ದಾರೆ.

ಲಂಕೇಶ್ ಹೇಳಿದಂತೆ ಸುಳ್ಳು ನನಗೆ ಲಾಭದಾಯಕವಾಗಿದ್ದರೆ ನಾನು ಸತ್ಯವನ್ನೇಕೆ ಹೇಳಬೇಕು ಎನ್ನುವ ಮಾತಿಗೆ ಅಕ್ಷರಶಃ ಸಾಕ್ಷಿಯಂತಿರುವ ಈ ಸೂಲಿಬೆಲೆಯನ್ನು ಹಂಪಿ ಕನ್ನಡ ವಿ.ವಿ.ಯ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ ಮನಸ್ಸಾದರೂ ಎಂತಹ ಕೆಡುಕಿನದು ಎಂದು ನೆನೆಸಿಕೊಂಡರೆ ಗಾಬರಿಯಾಗುತ್ತದೆ. ಇಂತಹವರೊಂದಿಗೆ ಕೈ ಜೋಡಿಸಿರುವ ಕನ್ನಡ ಪ್ರಭ ದಿನಪತ್ರಿಕೆ ತನ್ನ ಪತ್ರಿಕೋದ್ಯಮದ ಎಲ್ಲಾ ಮೌಲ್ಯಗಳನ್ನು ಧಿಕ್ಕರಿಸಿ ವಿನಾಕಾರಣ ದಿನೇಶ್ ಅಮೀನ್ ಅವರ ಮೇಲೆ ವೈಯುಕ್ತಿಕ ದ್ವೇಷವನ್ನು ಸಾಧಿಸುತ್ತಿದೆ. ಹೀಗೆ ಕೀಳು ಮಟ್ಟದಲ್ಲಿ ಹಂಗಿಸುವ ಕನ್ನಡಪ್ರಭ ದಿನಪತ್ರಿಕೆಯ ಈ ಅನೈತಿಕ ಮನಸ್ಥಿತಿಯ ಹಿಂದಿನ ಶಕ್ತಿಗಳಾವುವೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಪತ್ರಿಕೋದ್ಯಮವನ್ನು ರೋಗ್ರಗ್ರಸ್ಥ ತಾಣವಾಗಿ, ಕೊಳೆತು ನಾರುವ ಕೊಚ್ಚೆ ಗುಂಡಿಯಾಗಿ ಪರಿವರ್ತಿಸಿದ ಪತ್ರಕರ್ತರು ಈ ದಿನಪತ್ರಿಕೆಯನ್ನು ದುರುಪಯೋಗಪಡಿಸಿಕೊಂಡು ಇಂದು ದಿನೇಶ್ ರಂತಹ ಚಿಂತಕರ ಚಾರಿತ್ರ್ಯಹರಣದಲ್ಲಿ ತೊಡಗಿದ್ದಾರೆ.

ಆರೋಗ್ಯಪೂರ್ಣ, ಸೌಹಾರ್ದಯುವಾದ ಸಂವಾದವನ್ನು ತಿರಸ್ಕರಿಸುವ ಇಂತಹ ಅಪಾಯಕಾರಿ ಮಾಧ್ಯಮಗಳು, ಪುಢಾರಿ ಪತ್ರಕರ್ತರು, ವಿದ್ಯಾವಂತ ಮತಾಂಧರು ಅಂಬೇಡ್ಕರ್ ಅವರು ವಿವರಿಸಿದಂತೆ ಅನೈತಿಕವಾದ, ವಿಕಾರವಾದ ಮೃಗಸದೃಶ್ಯ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವರ ವಿಚಾರಹೀನತೆಯ ಕುಮ್ಮುಕ್ಕಿನಿಂದಾಗಿ ಇಂದು ವ್ಯವಸ್ಥೆಯಲ್ಲಿ ದ್ವೇಷದ, ಸೇಡಿನ, ಕ್ರೌರ್ಯದ ವಾತಾವರಣ ನಿರ್ಮಾಣಗೊಂಡಿದೆ ಮತ್ತು ನಮ್ಮೆಲ್ಲರ ನಿಷ್ಕ್ರಿಯತೆ ಮತ್ತು ನಿರ್ಲಕ್ಷ ಧೋರಣೆಗಳು, ಸಿನಿಕತನ, ವಿತಂಡವಾದದ ಫಲವಾಗಿಯೇ ಕರ್ನಾಟಕದ ಮತಾಂಧರ ಲುಂಪೆನ್ ಗುಂಪು ಆಳದಲ್ಲಿ ಭಂಡತನವನ್ನು ಬೆಳೆಸಿಕೊಳ್ಳುತ್ತ ಹಿಂಸಾತ್ಮಕ ವಾತಾವರಣವನ್ನು ನಿರ್ಮಿಸಿದೆ.

ದಶಕಗಳ ಹಿಂದೆಯೇ ವಿವೇಕಾನಂದರನ್ನು ಹಿಂದೂ ಧರ್ಮದ ವಕ್ತಾರರಾಗಿ appropriation ಮಾಡಿಕೊಂಡ ಸಂಘ ಪರಿವಾರ ಇಂದು ಅಕ್ಟೋಬರ್2 ಗಾಂಧಿ ಹುಟ್ಟಿದ ದಿನವdineshನ್ನು appropriation ಮಾಡಿಕೊಂಡು ಗೋಡ್ಸೆ ಗಾಂಧಿಯನ್ನು ಕೊಂದ ಜನವರಿ 30 ರ ದಿನದಂದು ದೇಶದ ನಾಲ್ಕು ಮೂಲೆಗಳಲ್ಲಿ ಗೋಡ್ಸೆಯ ಪ್ರತಿಮೆಗಳನ್ನು ನಿರ್ಮಿಸಲು ಹೊರಟಿದೆ. ಆ ದಿನವನ್ನು ವಿಜಯೋತ್ಸವವನ್ನಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್6 ಅನ್ನು ತುಂಬಾ ಲೆಕ್ಕಾಚಾರದಿಂದಲೇ ಆಯ್ದುಕೊಂಡ ಸಂಘ ಪರಿವಾರ ಆ ದಿನದಂದೇ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿತು. ಅದನ್ನು ವೈಭವೀಕರಿಸಲು ಡಿಸೆಂಬರ್ 6 ಅನ್ನು ವಿಜಯೋತ್ಸವ ಹಬ್ಬವನ್ನಾಗಿ ಆಚರಿಸುತ್ತಿದೆ. ಅಂದರೆ ಅಂಬೇಡ್ಕರ್ ನೆನಪಿನಲ್ಲಿ ಮೌನದ, ಧ್ಯಾನದ ದಿನವಾಗಬೇಕಿದ್ದ ಡಿಸೆಂಬರ್ 6 ರಂದು ವಿಜಯೋತ್ಸವ ದಿನವಾಗಿ appropriation ಮಾಡಿಕೊಂಡಿದೆ.
ಪ್ರಜ್ಞಾವಂತರು ಸಂಸ್ಕೃತಿ ಮತ್ತು ಧರ್ಮಗಳ ಪ್ರಶ್ನೆಗಳನ್ನು ಕಡೆಗಣಿಸಿದ್ದರಿಂದ ಅವು ಉಡಾಳರ ಕೈಯಲ್ಲಿ ತ್ರಿಶೂಲಗಳಾದವು, ಅಗ್ನಿ ಭಕ್ಷಕ ರಾಜಕಾರಣಿಗಳ ಕೈಯಲ್ಲಿ ಮಾರಕಾಸ್ತ್ರಗಳಾದವು ಎಂದು ಡಿ.ಆರ್.ನಾಗರಾಜ್ ಮಾರ್ಮಿಕವಾಗಿ ಹೇಳುತ್ತಾರೆ. ಇನ್ನಾದರು ನಾವು ಮರಳಿ ಸಂಸ್ಕೃತಿಯನ್ನು ಕೈಗೆತ್ತಿಕೊಳ್ಳಬೇಕು. ವೈಚಾರಿಕವಾಗಿ, ಬಹುತ್ವದ ಪ್ರತಿಸಂಸ್ಕೃತಿಯನ್ನು ಕಟ್ಟಬೇಕು. ಧರ್ಮವನ್ನು ಈಗಿನ ಗುಲಾಮಿ ಸಂಸ್ಕೃತಿಯಿಂದ ಕಾಪಾಡಬೇಕು. ಅದಕ್ಕೆ ಬೇಕಾದ ಸೆಕ್ಯುಲರ್ ಎನ್ನುವ ಮಾಂತ್ರಿಕ ತತ್ವವನ್ನು ಕಟ್ಟಲು ತೊಡಗಬೇಕು.

8 thoughts on “ಕೆಂಡದ ಗಿರಿಯ ಮೇಲೊಂದು ಅರಗಿನ ಕಂಬ

  1. Ananda Prasad

    ಸ್ವಾಮಿ ವಿವೇಕಾನಂದರ ಬಗ್ಗೆ ದಿನೇಶ್ ಅಮೀನ್ ಮಟ್ಟು ಅವರು ವಾಸ್ತವ ಸಂಗತಿಗಳನ್ನು ಬರೆದರೆ ಅವರ ಮೇಲೆ ಕೆಟ್ಟದಾಗಿ ವೈಯಕ್ತಿಕ ನಿಂದನೆಗೆ ತೊಡಗುವುದು ಸಮಂಜಸವಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ವೈಯಕ್ತಿಕ ನಿಂದನೆಗೆ ಅವಕಾಶ ಕೊಡಬಾರದು. ಪ್ರತಿಕ್ರಿಯಿಸುವವರು ಇಂಥ ಎಚ್ಚರ ಕಳೆದುಕೊಂಡಾಗ ಮತ್ತು ಇದು ಪದೇ ಪದೇ ಮರುಕಳಿಸುವಾಗ ಕಾನೂನು ಕ್ರಮ ಕೈಗೊಳ್ಳುವುದು ತಪ್ಪೇನೂ ಅಲ್ಲ, ಅದು ಸರ್ವಾಧಿಕಾರಿ ಮನೋಭಾವವೂ ಅಲ್ಲ. ಘನತೆಯಿಂದ ಪ್ರತಿಕ್ರಿಯಿಸದೆ ವೈಯಕ್ತಿಕ ನಿಂದನೆಗೆ ಇಳಿಯುವ ಜನರಿಗೆ ಕಾನೂನಿನ ಎಚ್ಚರಿಕೆ ನೀಡುವುದು ಅಗತ್ಯ. ಸಂವೇದನಾಶೀಲ ಪತ್ರಕರ್ತರಾದ ಮಟ್ಟು ಅವರನ್ನು ಬಲಪಂಥೀಯರು ಕೀಳು ಮಟ್ಟದಲ್ಲಿ ನಿಂದಿಸುವುದು ಸಮರ್ಥನೀಯವಲ್ಲ. ವ್ಯಕ್ತಿಪೂಜೆಯ ಮನೋಭಾವನೆಯಿಂದ ಹೊರಬಂದು ವಾಸ್ತವ ಸಂಗತಿಗಳನ್ನು ಗ್ರಹಿಸಲು ಬಲಪಂಥೀಯರು ಸಿದ್ಧರಿಲ್ಲದಿರುವುದೇ ಬಲಪಂಥೀಯರಲ್ಲಿ ವೈಜ್ಞಾನಿಕ ಮನೋಭಾವದ ತೀವ್ರ ಕೊರತೆಗೆ ಕಾರಣವಾಗಿದೆ. ಇದುವೇ ಬಲಪಂಥೀಯರ ಪ್ರಧಾನ ಸಮಸ್ಯೆಯಾಗಿದೆ.

    Reply
    1. ಕ್ರಾಂತಿಕೇಶ್ವರ

      ಅಮೀನ್ ಮಟ್ಟು ಅವರು ಅವಹೇಳನಕಾರಿ ಕಾಮೆಂಟುಗಳನ್ನು ಮಾಡಿದವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಬದಲು ನಿಲುಮೆಯ ನಿರ್ವಾಹಕರ ಮೇಲೆ ಕ್ರಿಮಿನಲ್ ಕಂಪ್ಲೈಂಟ್ ಕೊಟ್ಟಿದ್ದು ಸರಿಯೇ?

      Reply
  2. jp

    “ಪ್ರಜ್ಞಾವಂತರು ಸಂಸ್ಕೃತಿ ಮತ್ತು ಧರ್ಮಗಳ ಪ್ರಶ್ನೆಗಳನ್ನು ಕಡೆಗಣಿಸಿದ್ದರಿಂದ ಅವು ಉಡಾಳರ ಕೈಯಲ್ಲಿ ತ್ರಿಶೂಲಗಳಾದವು”. -ಕೊಳೆತು ನಾರುವ ಕೊಚ್ಚೆ ಗುಂಡಿಯಾದ ಮೃಗಸದೃಶ್ಯ ವ್ಯವಸ್ಥೆಯ ವಿಚಾರಹೀನತೆಯನ್ನು ಹೇಳುವ ಡಿ.ಆರ್.ನಾಗರಾಜ್ ರ ಮಾರ್ಮಿಕವಾದ ಮಾತು.

    Reply
  3. Ananda Prasad

    ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತನ್ನ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಜಾಮೀನು ನೀಡದೆ ಜೈಲಿಗೆ ತಿಂಗಳುಗಳ ಕಾಲ ಜೈಲಿಗೆ ತಳ್ಳಲಾಗಿತ್ತು. ಆಗ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಹಿಂದುತ್ವವಾದಿ ಪ್ರತಿಗಾಮಿ ಗುಂಪುಗಳು ಚಕಾರವೆತ್ತಿರಲಿಲ್ಲ. ಈಗ ದಿನೇಶ್ ಅಮೀನ್ ಮಟ್ಟು ಅವರು ಅಂತರ್ಜಾಲದಲ್ಲಿ ಹೀನಾಮಾನವಾಗಿ ಅಸಭ್ಯ ಭಾಷೆಯನ್ನು, ಬೈಗುಳಗಳನ್ನು ಬಳಸುವ ಪ್ರತಿಗಾಮಿಗಳನ್ನು ನಿಯಂತ್ರಿಸುವುದಕ್ಕಾಗಿ ಒಂದು ಪೋಲೀಸ್ ದೂರು ಕೊಟ್ಟಾಗ ಪ್ರತಿಗಾಮಿ ಗುಂಪುಗಳು ಆಕಾಶ ಭೂಮಿ ಒಂದು ಮಾಡುವಂತೆ ಬೊಬ್ಬೆ ಹಾಕುತ್ತಿರುವುದು ಸೋಜಿಗವಾಗಿದೆ. ಈಗ ಅಮೀನ್ ಮಟ್ಟು ಅವರೇನೂ ಯಾರನ್ನೂ ಜಾಮೀನುರಹಿತವಾಗಿ ತಿಂಗಳುಗಟ್ಟಲೆ ಜೈಲಿಗೆ ಹಾಕಿಸಿಲ್ಲ ಅಥವಾ ಯಾವುದೇ ಅಂತರ್ಜಾಲ ಪತ್ರಿಕೆಯನ್ನು ಮುಚ್ಚಿಸಿಲ್ಲ. ಆದರೂ ಪ್ರತಿಗಾಮಿ ಗುಂಪುಗಳು ಹಾಗೂ ಅವರ ಬೆಂಬಲಿಗ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಸರ್ವಾಧಿಕಾರಿ ಮನೋಭಾವ ಎಂದು ಬೊಬ್ಬಿರಿಯುತ್ತಿರುವುದು ತಮಾಷೆಯಾಗಿದೆ. ಇವರೆಲ್ಲರಿಗೂ ನವೀನ್ ಸೂರಿಂಜೆಯವರನ್ನು ತಿಂಗಳುಗಟ್ಟಲೆ ಜಾಮೀನಿಲ್ಲದೆ ಹಿಂದಿನ ಬಿಜೆಪಿ ಸರ್ಕಾರ ಜೈಲಿನಲ್ಲಿ ಕೊಳೆಯಿಸಿದಾಗ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಅನಿಸಿರಲಿಲ್ಲ.

    Reply
    1. ಕ್ರಾಂತಿಕೇಶ್ವರ

      ಸೂರಿಂಜೆ ಅವರ ಬಂಧನಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಎಲ್ಲಿಯ ಸಂಬಂಧ?! ಸೂರಿಂಜೆ ವಿಷಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಆಗಿಲ್ಲ. ನನಗೆ ತಿಳಿದ ಮಟ್ಟಿಗೆ ಸೂರಿಂಜೆ ಅವರ ಯಾವುದೇ ಬರಹ ಅಥವಾ ಭಾಷಣದ ಬಗ್ಗೆ ಯಾರೂ ತಕರಾರು ತೆಗೆದು ಕೇಸು ದಾಖಲಿಸಿಲ್ಲ. ಸೂರಿಂಜೆ ಅವರು ಹೋಂ ಸ್ಟೇ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ಅವರ ಮೇಲೆ ಕೇಸು ದಾಖಲಿಸಿದರು. ನಂತರ ಸರಕಾರವೇ ಆ ಕೇಸನ್ನು ತೆಗೆದು ಹಾಕಿತು.

      Reply
  4. Ananda Prasad

    ದಂಡಂ ದಶಗುಣಂ ಎಂಬ ಲೋಕೋಕ್ತಿಯೇ ಇದೆ. ವಿವೇಕ ಇಲ್ಲದೆ ಮನಸ್ಸಿಗೆ ಬಂದಂತೆ ಅನಾಮಿಕರಾಗಿ ಅಸಭ್ಯ ಹಾಗೂ ಅಶ್ಲೀಲ ಭಾಷೆಯಲ್ಲಿ ಜಾಲತಾಣಗಳಲ್ಲಿ ತಮ್ಮ ವಿಷಬಾಣಗಳನ್ನು ಬಿಡುವ ಪ್ರತಿಗಾಮಿಗಳಿಗೆ ದಂಡದ ಬಿಸಿ ಗೊತ್ತಾಗಿರುವಂತೆ ಕಾಣುತ್ತದೆ. ದಿನೇಶ್ ಅಮೀನ್ ಮತ್ತು ಅವರು ಜಾಲತಾಣಗಳಲ್ಲಿ ಅವಮಾನಕರ ಹಾಗೂ ವಿಷದಿಂದ ತುಂಬಿದ ಕೀಳು ಬೈಗುಳಗಳ ವಿರುದ್ಧ ಪೋಲೀಸ್ ದೂರು ನೀಡಿರುವುದು ತುಂಬಾ ಪರಿಣಾಮಕಾರಿಯಾಗಿದೆ. ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ವಿಷಕಾರಿ ಭಾಷೆ ಬಳಕೆಯಾಗುವುದು ಸಂಪೂರ್ಣ ನಿಂತಿದೆ. ಇದಕ್ಕಾಗಿ ದಿನೇಶ್ ಅಮೀನ್ ಮಟ್ಟು ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಕನ್ನಡದ ಒಂದು ಸುದ್ದಿ ತಾಣದಲ್ಲಿ ಹಿಂದೆಲ್ಲ ಅತ್ಯಂತ ಅವಾಚ್ಯ ಭಾಷೆಯ ಹಾಗೂ ಅಸಭ್ಯ ಭಾಷೆಯ ಪ್ರತಿಕ್ರಿಯೆಗಳು ನಿರ್ವಾಹಕರ ಸಮ್ಮತಿಯೊಂದಿಗೆ ಪ್ರತಿಗಾಮಿಗಳಿಂದ ಪುಂಖಾನುಪುಂಖವಾಗಿ ಹೊಮ್ಮುತ್ತಿದ್ದವು. ಈಗ ಆ ಕೀಳು ದರ್ಜೆಯ ಪ್ರತಿಕ್ರಿಯೆಗಳು ಪ್ರಕಟವಾಗುವುದು ಕಂಡುಬರುವುದಿಲ್ಲ. ಮೂರ್ಖರಿಗೆ ಹಾಗೂ ನೀಚರಿಗೆ ದಂಡದ ಭಯವನ್ನು ತೋರಿಸಿಯೇ ಹತ್ತಿಕ್ಕಬೇಕಾಗುತ್ತದೆ ಮತ್ತು ಇದು ಪ್ರಭುತ್ವದ ಪ್ರಧಾನ ಜವಾಬ್ದಾರಿಯೂ ಆಗಿದೆ. ನಾಗರಿಕ ಸಮಾಜ ನಿರ್ಮಾಣದಲ್ಲಿ ಇಂಥ ನಿಯಂತ್ರಣಗಳ ಅಗತ್ಯ ಇದ್ದೇ ಇದೆ. ಇಲ್ಲದೆ ಹೋದರೆ ಜಾಲತಾಣಗಳು ರೌಡಿಗಳ ಆಡುಂಬೊಲವಾಗುವುದರಲ್ಲಿ ಸಂದೇಹವಿಲ್ಲ.

    Reply
  5. SSNK

    [[ರಾಜಕೀಯವಾಗಿ ಹಿಂದೂಯಿಸಂ ಕುರಿತಾಗಿ ಆಳವಾಗಿ ಮಾತನಾಡಿದ್ದ ವಿವೇಕಾನಂದ ಬೇರೆ ಧರ್ಮದ ಜನರ ನಂಬಿಕೆಗಳ ಕುರಿತಾಗಿ ಬಹಳಷ್ಟು ಲಿಬರಲ್ ಆಗಿ ಚಿಂತಿಸುತ್ತಿದ್ದರು.]]
    ಸ್ವಾಮಿ ವಿವೇಕಾನಂದರು ಕ್ರೈಸ್ತ ಮಿಷನರಿಗಳು ಮಾಡುತ್ತಿದ್ದ ಮತಾಂತರವನ್ನು ಕಡುವಾಗಿ ವಿರೋಧಿಸಿದ್ದು ಏತಕ್ಕೆ?
    “ಒಬ್ಬ ಹಿಂದು ಮತಾಂತರಗೊಂಡರೆ ಅದು ಒಬ್ಬ ಹಿಂದು ಕಡಿಮೆ ಆಗುವುದಷ್ಟೇ ಅಲ್ಲ. ಬದಲಾಗಿ ಅದು ಒಬ್ಬ ಶತೃ ಹೆಚ್ಚಾದಂತೆ” ಎಂದು ವಿವೇಕಾನಂದರು ಎಚ್ಚರಿಸಿದ್ದರು!
    ಅದಕ್ಕೆ ಸಂಬಂಧಿಸಿದ ಕೊಂಡಿ ಓದಿ ನೋಡಿ: http://www.ramakrishnavivekananda.info/vivekananda/volume_5/interviews/on_the_bounds_of_hinduism.htm
    ವಾಸ್ತವ ಹೀಗಿರುವಾಗ ವಿವೇಕಾನಂದರು ನಿಮ್ಮ ಪ್ರಕಾರ ಲಿಬರಲ್ ಹೇಗಾದರು?

    [[ಚಕ್ರವರ್ತಿ ಸೂಲಿಬೆಲೆ ಎನ್ನುವ ಮತ್ತೊಬ್ಬ ಹುಸಿ ಚಿಂತಕ, ಹಿಂದುತ್ವವಾದಿ ಪ್ರತಿಪಾದಕ]]
    ನಿಮ್ಮ ಪ್ರಕಾರ ಹಿಂದುತ್ವವಾದಿ ಆದ ಕೂಡಲೆ, ಅವರು ಹುಸಿ ಚಿಂತಕರಾಗಿಬಿಡುತ್ತಾರೆ ಅಲ್ಲವೇ? ಅದನ್ನು ಸಮರ್ಥಿಸಿಕೊಳ್ಳಲು ನೀವು ಯಾವ ಪುರಾವೆಯನ್ನೂ ನೀಡಬೇಕಿಲ್ಲ ಅಲ್ಲವೇ!? ಸೂಲಿಬೆಲೆಯವರು ಹೇಳುವುದು ಸುಳ್ಳೆನ್ನುವುದಾದರೆ, ಅವರ ಯಾವ ಮಾತು ಸುಳ್ಳೆನ್ನುವುದನ್ನು ತೋರಿಸಿ, ಸತ್ಯವಾವುದೆನ್ನುವುದನ್ನು ಎಲ್ಲರಿಗೂ ತಿಳಿಸಿಬಿಡಿ.

    [[ ಚಲನಶೀಲವಾಗಬಯಸುವ ಮಾನವೀಯ ಧಾರ್ಮಿಕತೆಯನ್ನು ಸಮಾನತೆ, ಜೀವಪರತೆಯನ್ನು ವಿರೋಧಿಸುತ್ತ, ಧಾರ್ಮಿಕತೆಯನ್ನು ಕ್ಷುದ್ರತೆಯ ಮಟ್ಟಕ್ಕೆ ಇಳಿಸುವಲ್ಲಿ ಈ ಸೂಲಿಬೆಲೆಯಂತಹ ಪ್ರತಿಗಾಮಿ ಭಾಷಣಕಾರರು ಯಶಸ್ವಿಯಾಗಿದ್ದಾರೆ.]]
    ಸೂಲಿಬೆಲೆಯವರ ಯಾವ ಮಾತು/ಭಾಷಣ/ಬರಹಗಳು ಜೀವಪರತೆಯನ್ನು ವಿರೋಧಿಸುತ್ತದೆ ತಿಳಿಸುವಿರಾ??

    [[ದಶಕಗಳ ಹಿಂದೆಯೇ ವಿವೇಕಾನಂದರನ್ನು ಹಿಂದೂ ಧರ್ಮದ ವಕ್ತಾರರಾಗಿ appropriation ಮಾಡಿಕೊಂಡ ಸಂಘ ಪರಿವಾರ ]]
    ಸ್ವಾಮಿ ವಿವೇಕಾನಂದರು ಹಿಂದು ಧರ್ಮದ ವಕ್ತಾರರಾಗಿರಲಿಲ್ಲವೇ!? ಅವರು ಕ್ರೈಸ್ತ/ಮುಸಲ್ಮಾನ ಮತಗಳ ವಕ್ತಾರರಾಗಿದ್ದರೆ? ಚಿಕಾಗೋದ ಪತ್ರಿಕೆಗಳು “Hindoo Monk of India” ಎಂದು 1893ರ ಸೆಪ್ಟೆಂಬರ್ 13ರಂದು ಬರೆದದ್ದು ಯಾರ ಕುರಿತಾಗಿ ಸ್ವಾಮಿ!?
    ಆ ದಿನಗಳ ಪತ್ರಿಕಾ ಬರಹಗಳ ಮೇಲೊಮ್ಮೆ ಕಣ್ಣಾಡಿಸಿರಿ:
    http://www.vivekananda.net/NewspaperReports/09Jan1895.html
    http://www.vivekananda.net/NewDiscoveries/9-10-93.jpg
    http://1.bp.blogspot.com/-BXO8Bx1s73M/Tg5DQZY1EgI/AAAAAAAAAPg/GgO2m2F6Bx4/s400/Picture+3.png
    “Hindoo Monk”, “Hindu Priest” ಇತ್ಯಾದಿ ಪದಗಳು ಕಣ್ಣಿಗೆ ಬಿದ್ದಿರಬೇಕಲ್ಲವೇ!?
    ಆ ಪತ್ರಿಕೆಗಳು ಪ್ರಕಟವಾದ ಸಮಯದಲ್ಲಿ ಸಂಘವಾಗಲೀ, ಸಂಘ ಪರಿವಾರವಾಗಲೀ ಇನ್ನೂ ಹುಟ್ಟಿರಲಿಲ್ಲ ಎನ್ನುವುದು ತಿಳಿದಿರುವಿರಿ ಅಲ್ಲವೇ!?
    ವಿವೇಕಾನಂದರು ಹಿಂದು ಧರ್ಮದ ವಕ್ತಾರರಲ್ಲದಿದ್ದಿದ್ದರೆ, ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ, ಹಿಂದು ಧರ್ಮದ ಕುರಿತಾಗಿ ಏಕೆ ಭಾಷಣ ಮಾಡಿದರು? ಅವರನ್ನು ಅಲ್ಲಿನ ಪತ್ರಿಕೆಗಳು “ಹಿಂದೂ ಸಂನ್ಯಾಸಿ” ಎಂದೇಕೆ ಕರೆದವು!?
    ಸಂಘದ ಕುರಿತಾಗಿ ನೀವಾಡುತ್ತಿರುವ ಮಾತುಗಳು ಅಸತ್ಯವಾದವುಗಳು, ಪೂರ್ವಾಗ್ರಹಪೀಡಿತವಾದವುಗಳು ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ!?

    ಸ್ವಾಮಿ ಸತ್ಯದ ಆಧಾರದ ಮೇಲೆ ನಿಮ್ಮ ವಿಚಾರದ ಸೌಧವನ್ನು ಕಟ್ಟಿ. ಸುಳ್ಳಿನ ಆಧಾರದ ಮೇಲೆ ನೀವು ಕಟ್ಟುತ್ತಿರುವುದು ಮರಳಿನ ಗೋಪುರ; ಸತ್ಯದ ಗಾಳಿಗೆ ಅದು ತೂರಿ ಹೋಗುವುದು ಎನ್ನುವುದು ನೆನಪಿರಲಿ!

    Reply
  6. SSNK

    [[ದಂಡಂ ದಶಗುಣಂ ಎಂಬ ಲೋಕೋಕ್ತಿಯೇ ಇದೆ. ವಿವೇಕ ಇಲ್ಲದೆ ಮನಸ್ಸಿಗೆ ಬಂದಂತೆ ಅನಾಮಿಕರಾಗಿ ಅಸಭ್ಯ ಹಾಗೂ ಅಶ್ಲೀಲ ಭಾಷೆಯಲ್ಲಿ ಜಾಲತಾಣಗಳಲ್ಲಿ ತಮ್ಮ ವಿಷಬಾಣಗಳನ್ನು ಬಿಡುವ ಪ್ರತಿಗಾಮಿಗಳಿಗೆ ದಂಡದ ಬಿಸಿ ಗೊತ್ತಾಗಿರುವಂತೆ ಕಾಣುತ್ತದೆ.]]
    ಅಸಭ್ಯ/ಅಶ್ಲೀಲ ಭಾಷೆ ಬಳಸಿದವರ ಮೇಲೆ ಕ್ರಮ ತೆಗೆದುಕೊಳ್ಳುವುದು ಸರಿ.
    ಆದರೆ, ಇಲ್ಲಿ ಕ್ರಮ ತೆಗೆದುಕೊಂಡಿರುವುದು ಆ ರೀತಿಯ ಅಸಭ್ಯ/ಅಶ್ಲೀಲ ಭಾಷೆ ಬಳಸದ ನಿರ್ವಾಹಕರ ಮೇಲೆ.
    ನಿಮಗೇನೋ ಈ ರೀತಿಯ ಕ್ರಮದಿಂದ ಸಂತೋಷವಾಗಿರುವುದು ವೇದ್ಯವಾಗುತ್ತಿದೆ. ಪ್ರಾಯಶಃ ನಿಮಗೆ ಇವರು ನಡೆಸುತ್ತಿದ್ದ ಜಾಲತಾಣ ಪ್ರಸಿದ್ಧವಾಗುತ್ತಿದ್ದ ಕುರಿತಾಗಿ ಹೊಟ್ಟೆಯುರಿ ಇದ್ದಿರಬಹುದು.
    ಇಲ್ಲದಿದ್ದರೆ, ನೀವು ಪ್ರಾಮಾಣಿಕರೇ ಆಗಿದ್ದಿದ್ದರೆ ಈ ರೀತಿಯ ಅನ್ಯಾಯದ ಕ್ರಮದ ಕುರಿತಾಗಿ ಪ್ರತಿಭಟಿಸದೇ ಇರುತ್ತಿರಲಿಲ್ಲ.

    Reply

Leave a Reply

Your email address will not be published. Required fields are marked *