ನ್ಯಾಯಾಧೀಶರ ನಡೆ: ಹೀಗಾದರೆ ನೊಂದವರಿಗೆ ನ್ಯಾಯದಾನ ಹೇಗೆ..?

– ಮಹೇಶ್ ಸಿ.

ರಾಮಚಂದ್ರಾಪುರ ಮಠದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಕರ್ನಾಕಟಕದ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲು ಇದುವರೆಗೆ ಐದು ಮಂದಿ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಅವರಲ್ಲಿ ನ್ಯಾ.ಎಚ್.ಜಿ.ರಮೇಶ್ ಅವರು ತಾವು ಈ ಹಿಂದೆ ಆರೋಪಿ ಪರ ಹಿರಿhcಯ ವಕೀಲ ಬಿ.ವಿ.ಆಚಾರ್ಯ ಬಳಿ ಜೂನಿಯರ್ ಆಗಿ ಕೆಲಸ ಮಾಡಿದ್ದ ಕಾರಣ ನೀಡಿ ಹಿಂದೆ ಸರಿದಿದ್ದಾರೆ. ಉಳಿದವರು – ಎನ್.ಕುಮಾರ್, ಪಿ.ಬಿ.ಬಜಂತ್ರಿ, ಕೆ.ಎನ್.ಫಣೀಂದ್ರ ಹಾಗೂ ರಾಮಮೋಹನ ರೆಡ್ಡಿ – ಕಾರಣಗಳನ್ನು ಬಹಿರಂಗ ಪಡಿಸಿದಂತಿಲ್ಲ.

ನೋವುಂಡವರು ನ್ಯಾಯಾಲಯದ ಮೊರೆ ಹೋಗುವುದು ನ್ಯಾಯಕ್ಕಾಗಿ. ಪ್ರಕರಣದ ಸಂಬಂಧ ವಿಚಾರಣೆ ನಡೆಸಿ ತೀರ್ಪು ನೀಡುವುದು ನ್ಯಾಯಾಧೀಶರ ಜವಾಬ್ದಾರಿ. ಹೀಗೆ ಕೆಲ ಪ್ರಕರಣಗಳು ತಮ್ಮೆದುರು ಬಂದಾಗ, ವಿಚಾರಣೆ ನಡೆಸದೇ ಎದ್ದುಬಿಟ್ಟರೆ? ನ್ಯಾಯಾಧೀಶರಿಗೆ ಆ ತೀರ್ಮಾನ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿರಬಹುದು. ಆದರೆ, ಒಂದರ ಹಿಂದೆ ಒಂದೆಂಬಂತೆ, ಐದು ಮಂದಿ ಪ್ರಕರಣದಿಂದ ಹಿಂದೆ ಸರಿದರೆ ನ್ಯಾಯದಾನ ಪ್ರಕ್ರಿಯೆಗೆ ತೊಡಕಾಗುವುದಿಲ್ಲವೆ?

ತಮ್ಮ ಮುಂದೆ ಬರುವ ಪ್ರಕರಣದ ಆರೋಪಿ ಅಥವಾ ದೂರುದಾರರ ಜೊತೆ ಯಾ11-court
ವುದೇ ರೀತಿಯ ಸಂಪರ್ಕ, ಸಂಬಂಧ ಇದ್ದಂತಹ ಸಂದರ್ಭಗಳಲ್ಲಿ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯುವುದು ಸಹಜ. ಆಗ ತಮ್ಮ ನ್ಯಾಯದಾನ ಪ್ರಕ್ರಿಯೆಯನ್ನು ಇತರರು ಅನುಮಾನದ ಕಣ್ಣುಗಳಿಂದ ನೋಡಬಹುದು ಎಂಬ ಕಾರಣಕ್ಕೆ ಹಾಗೆ ಮಾಡಬಹುದು. ಬಹುಶಃ ಅದೇ ಕಾರಣಕ್ಕೆ ನ್ಯಾಯಾಧೀಶರು ಎಲ್ಲರೊಂದಿಗೆ ಬೆರೆಯುವುದಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೂ ಕಡಿಮೆ. ಆದರೆ ಈ ಸ್ವಾಮೀಜಿ ಪ್ರಕರಣದಲ್ಲಿ ಐವರು ಹೀಗೆ ಹಿಂದೆ ಸರಿದಿದ್ದಕ್ಕೆ ಏನು ಕಾರಣ ಇರಬಹುದು ಎನ್ನುವುದು ಕುತೂಹಲಕಾರಿ. ಮಾಜಿ ಕಾನೂನು ಮಂತ್ರಿ ಸುರೇಶ್ ಕುಮಾರ್ ಕೂಡಾ ಈ ಬಗ್ಗೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಈ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಚರ್ಚೆಯಾಗುವ ಅಗತ್ಯವಿದೆ.

ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಅನೇಕರು ತಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರ ವಿರುದ್ಧವೇ ನಿಷ್ಪಕ್ಷಪಾತಿಯಾಗಿ ನಡೆದುಕೊಳ್ಳಬೇಕಾಗುತ್ತದೆ. ಅನೇಕ ಪೊraghweshwara_bharathi_gurujಲೀಸ್ ಅಧಿಕಾರಿಗಳು ತಮ್ಮ ವೃತ್ತಿ ಜೀವನದಲ್ಲಿ ಅಂತಹ ಸಂದರ್ಭಗಳನ್ನು ಎದುರಿಸಿ ಕರ್ತವ್ಯ ನಿರ್ವಹಿಸಿದ್ದಾರೆ. ಅನೇಕ ಪತ್ರಕರ್ತರು ಕೂಡಾ ತಮ್ಮ ಆತ್ಮೀಯರಿಗೆ ಕಹಿಯಾಗುವಂತಹ ಸುದ್ದಿಯನ್ನು ಬರೆಯುವಾಗ ಹಿಂದೆ ಮುಂದೆ ನೋಡದ ಎಷ್ಟೋ ಉದಾಹರಣೆಗಳಿವೆ. ನ್ಯಾಯಾಧೀಶರು ಕೂಡಾ, ತಮ್ಮ ಎದುರಿಗಿರುವವರು ಆರೋಪಿ, ದೂರುದಾರ ಎಂದಷ್ಟೇ ಗ್ರಹಿಸಿ ತಮ್ಮ ವಿವೇಚನೆ ಬಳಸಿ ನ್ಯಾಯದಾನ ಮಾಡಲು ಸಾಧ್ಯವಿಲ್ಲವೆ?

7 thoughts on “ನ್ಯಾಯಾಧೀಶರ ನಡೆ: ಹೀಗಾದರೆ ನೊಂದವರಿಗೆ ನ್ಯಾಯದಾನ ಹೇಗೆ..?

  1. Ananda Prasad

    ನ್ಯಾಯಾಧೀಶರು ಒಬ್ಬರ ನಂತರ ಒಬ್ಬರು ಸರದಿಯಲ್ಲಿ ಒಂದು ನಿರ್ದಿಷ್ಟ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದು ತಮ್ಮ ಕರ್ತವ್ಯದಿಂದ ಪಲಾಯನ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಘಾತಕಾರಿಯಾಗಿದೆ. ಇದು ಕಾನೂನು ಪ್ರಕಾರ ಸರಿಯಿರಬಹುದು ಆದರೆ ನೈತಿಕವಾಗಿ ಖಂಡಿತ ಸರಿಯಾದ ನಿರ್ಧಾರವಲ್ಲ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗಿ ಮಠಪ್ರಭುತ್ವ ಮೇಲುಗೈ ಪಡೆಯಲು ಕಾರಣವಾಗುತ್ತದೆ. ನ್ಯಾಯಾಧೀಶರು ಧಾರ್ಮಿಕ ವ್ಯಕ್ತಿಗಳ ವಿಷಯದಲ್ಲಿ ವಿಚಾರಣೆ ನಡೆಸಲೇ ಹಿಂಜರಿಯುತ್ತಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ತಲೆತಗ್ಗಿಸುವಂತೆ ಮಾಡಲಿದೆ. ಅಮೇರಿಕಾ, ಇಂಗ್ಲೆಂಡ್, ಆಷ್ಟ್ರೇಲಿಯಾ, ಜಪಾನ್ ಮೊದಲಾದ ದೇಶಗಳಲ್ಲಿ ನ್ಯಾಯಾಧೀಶರಾದವರು ಧಾರ್ಮಿಕ ವ್ಯಕ್ತಿಗಳ ವಿಷಯದಲ್ಲಿ ಯಾವುದೇ ಮುಲಾಜಿಲ್ಲದೆ ನ್ಯಾಯ ನೀಡುತ್ತಾರೆ. ಹೀಗಾಗಿ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಿಕಾಸ ಹೊಂದುತ್ತಿದೆ. ನಮ್ಮ ನ್ಯಾಯಾಧೀಶರು ಧಾರ್ಮಿಕ ವ್ಯಕ್ತಿಗಳ ವಿಚಾರದಲ್ಲಿ ದುರ್ಬಲ ಮನಸ್ಕರಾಗಿ ವರ್ತಿಸುತ್ತಿರುವುದು ಶೋಚನೀಯ.

    Reply
  2. ಜೆ.ವಿ.ಕಾರ್ಲೊ, ಹಾಸನ

    ಸ್ವಾಮಿಗಳ (ಎಲ್ಲಾ ಧರ್ಮಗಳ) ಮೊಕದ್ದಮೆಗಳನ್ನು ವಿಚಾರಿಸಲು ಒಂದು ಪ್ರತ್ಯೇಕ ನ್ಯಾಯಲಯವನ್ನೇ ಸ್ಥಾಪಿಸುವುದು ಒಳ್ಳೆಯದು. ಯಾಕೋ ಹುಲು ಮಾನವರು ಇವರನ್ನು ವಿಚಾರಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ!

    Reply
    1. ಕ್ರಾಂತಿಕೇಶ್ವರ

      ಕಾರ್ಲೋ ಅವರೇ, ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲೂ ಕೂಡ ಹೀಗೇ ಆಗಿದೆ. ಈ ಕೇಸಿನ ವಿಚಾರಣೆಯನ್ನು ಯಾರು ತಿಂಗಳಿಂದ ಮುಂದೂಡುತ್ತಲೇ ಬಂದಿದ್ದ ದೆಹಲಿ ಹೈಕೋರ್ಟಿನ ನ್ಯಾಯಾಧೀಶರು ಕೊನೆಗೆ ವಿಚಾರಣೆ ನಡೆಸಲು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿ ಕೇಸಿನಿಂದ ಕೈತೊಳೆದುಕೊಂಡಿದ್ದಾರೆ. ನೀವು ಹೇಳಿದ ಹಾಗೆ ಯೂ ಪಿ ಎ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಕರ್ಮಕಾಂಡಗಳ ವಿಚಾರಣೆಗೆ ಒಂದು ಪ್ರತ್ಯೇಕ/ವಿಶೇಷ ನ್ಯಾಯಾಲಯವನ್ನೇ ಸ್ಥಾಪಿಸುವುದು ಉತ್ತಮ. ಏನಂತೀರಿ?

      Reply
      1. ಕ್ರಾಂತಿಕೇಶ್ವರ

        “ಯಾರು ತಿಂಗಳಿಂದ ಮುಂದೂಡುತ್ತಲೇ ಬಂದಿದ್ದ” ==> “ಆರು ತಿಂಗಳಿಂದ ಮುಂದೂಡುತ್ತಲೇ ಬಂದಿದ್ದ”

        Reply
  3. Salam Bava

    ನ್ಯಾಯಾಲಯದಲ್ಲಿರುವ ಯಾವುದೇ ವ್ಯಾಜ್ಯಗಳಿಂದ ತಕ್ಕುದಾದ ಕಾರಣಗಳಿಲ್ಲದೇ ನ್ಯಾಯಾಧೀಶರು ಹಿಂ ದೆ ಸರಿಯುವುದು ಒಂದು ಉತ್ತಮ ಹೆಜ್ಜೆಯಲ್ಲ !ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯಾದರೂ ನಮ್ಮ ನ್ಯಾಯಾಂಗದ ಘನತೆಗೆ ಇದು ಕುಂದು ತರುತ್ತೆ . ಕಾಟ್ಜು ,ಕೃಷ್ಣ ಅಯ್ಯರ್ ಮತ್ತು ಸಂತೋಷ್ ಹೆಗ್ಡೆ ಯವರಂತ ದೀಮಂತರು ಎಂಥಾ ಕ್ಲಿಷ್ಟ ಪರಿಸ್ಥಿತಿಯಲ್ಲೂ ತಮ್ಮ ಹೊಣೆಯಿಂದ ಹಿಂದೆ ಜಾರಿದ ನಿದರ್ಶಣ್ ಇಲ್ಲ !

    Reply
    1. ಕ್ರಾಂತಿಕೇಶ್ವರ

      ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ನಡೆಸದೆ ಕೇಸಿನಿಂದ ತಮ್ಮ ಕೈತೊಳೆದುಕೊಂಡ ನ್ಯಾಯಾಧೀಶರೂ ಕೂಡ ತಮ್ಮ ಕ್ರಮಕ್ಕೆ ಸೂಕ್ತ ಕಾರಣವನ್ನು ಕೊಟ್ಟಿಲ್ಲ. ನ್ಯಾಯಾಧೀಶರ ಕ್ರಮದಿಂದಾಗಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಯು ಮುಂದೂಡಲ್ಪಟ್ಟಿದೆ. ತತ್ಕಾರಣ ತಪ್ಪಿತಸ್ಥರಿಗೆ ಶಿಕ್ಷೆ ಸಿಗುವುದು ತಡವಾಗುತ್ತದೆ ಹಾಗೂ ಹೈ ಪ್ರೊಫೈಲ್ ರಾಜಕಾರಣಿಗಳು ಎಂತಹ ಅವ್ಯವಹಾರ ನಡೆಸಿದರೂ ನಡೆಯುತ್ತದೆ ಎಂಬ ಭಾವನೆಯು ಜನಸಾಮಾನ್ಯರಲ್ಲಿ ನೆಲೆ ಮಾಡಿದೆ.ಇದೂ ಕೂಡ ಅನಾರೋಗ್ಯಕರ ಬೆಳವಣಿಗೆ.

      Reply

Leave a Reply

Your email address will not be published. Required fields are marked *