ಸಮ್ಮೇಳನ – ಭೈರಪ್ಪರನ್ನು ಸಭೆಯಲ್ಲಿ ಟೀಕೆ ಮಾಡುತ್ತಿದ್ದರೆ, ಜನ ಚಪ್ಪಾಳೆ ಹೊಡೆದರು!

– ಸದಾನಂದ ಲಕ್ಷ್ಮೀಪುರ

“ಈ ಭೂಮಿಯಲ್ಲಿ ಶೇ.50 ರಷ್ಟಿರುವ ಮಹಿಳೆಯರನ್ನು ತನ್ನಂತೆಯೇ ಮನುಷ್ಯರು ಎಂದು ಕಾಣದ ಭೈರಪ್ಪ, ಬರಹಗಾರ ಇರಲಿ, ಒಬ್ಬ ನಾಗರಿಕ ಎಂದು ನನಗನ್ನಿಸುವುದಿಲ್ಲ.” – ಡಾ.ಎಂ.ಎಸ್.ಆಶಾದೇವಿ.

“ಭೈರಪ್ಪನ ಕಾದಂಬರಿಗಳಲ್ಲಿ ಕೆಳ ಸಮುದಾಯಗಳ ಹೆಣ್ಣು ಮಕ್ಕಳು ನಡತೆಗೆಟ್ಟವರಂತೆ ಚಿತ್ರತರಾಗುತ್ತಾರೆ. ಮೇಲ್ವರ್ಗದ ಹೆಣ್ಣು ಮಕ್ಕಳ ವಿಚಾರದಲ್ಲಿ ಹಾಗಿಲ್ಲ.”- ಕೆ. ಷರೀಫಾ.

“ಹೆಣ್ಣು ಮಕ್ಕಳು ಅತ್ಯಾಚಾರ ಆಗಲಿ ಎಂದು ಬಯಸುತ್ತಾರೆ..ಎಂದು ಭೈರಪ್ಪನ ಮನಸ್ಥಿತಿ ಎಂತಹದು? ಎಲ್ಲಾ ಮಹಿಳೆಯರು ಆತನ ವಿರುದ್ಧ ಕೂಗು ಹಾಕಬೇಕಿದೆ.” – ಕೆ.ಎಸ್. ವಿಮಲಾ.

“ವೃತ್ತಿಯಲ್ಲಿ ಇಂಜಿನಿಯರ್ ಆದ ವ್ಯಕ್ತಿ, ದಿನವಿಡೀ ತನ್ನ ಕೆಲಸದಲ್ಲಿ ಮುಳುಗಿದ್ದಾಗ kannada-sammelana-hassan-kavigoshtiತನ್ನ ಪತ್ನಿಯ ಆಕಾಂಕ್ಷೆಗಳಿಗೆ ಗಮನ ಕೊಡಲು ಆಗಿರುವುದಿಲ್ಲ. ಆಗ ಆ ಪತ್ನಿ ಮತ್ತೊಬ್ಬರ ಸನಿಹ ಬಯಸುತ್ತಾಳೆ. ಇದು ಸಹಜ. ವೃತ್ತಿಯಲ್ಲಿ ತಾನೂ ಒಬ್ಬ ಇಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಇದು ಅರ್ಥವಾಗುತ್ತದೆ. ಆದರೆ ಭೈರಪ್ಪನಿಗೆ ಇದು ವಿಕೃತಿಯಾಗಿ ಕಾಣುತ್ತದೆ. ಈ ದೇಶಕ್ಕೆ ಅಂಟಿದ ಶಾಪ ಬ್ರಾಹ್ಮಣ್ಯ. ಅದನ್ನು ಪ್ರತಿಪಾದಿಸುವ ಭೈರಪ್ಪನಿಗೆ ರಾಷ್ಟ್ರೀಯ ಪ್ರಾಧ್ಯಾಪಕ ಪುರಸ್ಕಾರ ದಕ್ಕಿದೆ.” – ಗೌರಿ ಲಂಕೇಶ್.

ಶ್ರವಣಬೆಳಗೊಳದಲ್ಲಿ ನಡೆದ ಸಮ್ಮೇಳನಕ್ಕೆ ಮಹತ್ವ ತಂದುಕೊಟ್ಟವರು ಈ ನಾಲ್ವರು. ತನ್ನ ಬರಹಗಳ ಮೂಲಕ ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವ ಹಾಗೂ ಮಹಿಳೆಯರನ್ನು ತುಚ್ಚವಾಗಿ ಕಾಣುವ ಮನೋಭಾವದ ಕಾರಣಗಳಿಗಾಗಿ ಜನಪ್ರಿಯರಾಗಿರುವ ಭೈರಪ್ಪನವರನ್ನು ಇವರು ಟೀಕಿಸುತ್ತಿದ್ದರೆ, ಸಭೆಯಲ್ಲಿ ಹಾಜರಿದ್ದವರು ಚಪ್ಪಾಳೆಯಿಂದ ಸ್ವಾಗತಿಸಿದರು. ಈ ಕಾರ್ಯಕ್ರಮ ನಡೆದದ್ದು, bhyrappaಭೈರಪ್ಪನವರ ತವರು ತಾಲೂಕಿನಲ್ಲಿ ಎನ್ನುವುದು ವಿಶೇಷ.

ಭೈರಪ್ಪನವರನ್ನು ಹೊಗಳಿ, ತಲೆ ಮೇಲೆ ಹೊತ್ತು ತಿರುಗುವ ಅನೇಕರು ಅವರ ಪರವಾಗಿ ಹೇಳುವ ಮಾತೆಂದರೆ, ಅವರು ಭಾರೀ ಬೇಡಿಕೆಯ ಲೇಖಕ. ಬೇರೆ ಬೇರೆ ಭಾಷೆಗಳಿಗೆ ಅವರ ಕೃತಿಗಳು ಅನುವಾದವಾಗಿವೆ. ಮಹಾರಾಷ್ಟ್ರದಲ್ಲೂ ಅವರ ಅಭಿಮಾನಿಗಳಿದ್ದಾರೆ..ಎಂದೆಲ್ಲಾ ಮಾತನಾಡುತ್ತಾರೆ. ಅವರು ಬರೆದ ಕಾದಂಬರಿಗಳಲ್ಲಿ ಒಂದೆರಡು ಮಹತ್ವದ್ದು ಎಂದು ವಿಮರ್ಶಾ ವಲಯ ಒಪ್ಪಿಕೊಂಡರೂ, ಅವರ ಒಟ್ಟಾರೆ ಕೃತಿಗಳು ಧ್ವನಿಸುವ ಸಿದ್ಧಾಂತದ ಕಾರಣಕ್ಕೆ ಅವರು ಜೀವಪರ ಚಿಂತಕರ ಟೀಕೆಗೆ ಗುರಿಯಾಗಿದ್ದಾರೆ. ಭೈರಪ್ಪ ಜನಪ್ರಿಯ ಇರಬಹುದು, ಜನಪರ ಅಲ್ಲ. ಇತ್ತೀಚೆಗೆ ಪ್ರಕಟವಾದ ’ಆವರಣ’, ’ಕವಲು’, ’ಯಾನ’ ಕೃತಿಗಳು ನಿಜವಾದ ಭೈರಪ್ಪನವರನ್ನು ಇನ್ನಷ್ಟು ಸ್ಪಷ್ಟವಾಗಿ ಅನಾವರಣಗೊಳಿಸಿದವು. ಇದುವೆರೆಗೆ ಅವರನ್ನು ಮೆಚ್ಚಿಕೊಂಡಿದ್ದ ಅನೇಕ ಓದುಗರು, ಮುಖ್ಯವಾಗಿ ಮಹಿಳೆಯರು, bhyrappa-Kavalu’ಕವಲು’ ಓದಿ ಕಂಗಾಲಾದರು. ’ಆವರಣ’ವಂತೂ ಧರ್ಮದ ಆಧಾರದ ಮೇಲೆ ಸಮುದಾಯಗಳನ್ನು ಒಡೆಯುವ ಕೃತಿ. ಹೀಗಿರುವಾಗ ಅವರು ಜನಪರ ಹೇಗಾದಾರು?

ಸಮ್ಮೇಳನದಲ್ಲಿ ಭೈರಪ್ಪ ವಿರುದ್ಧ ಮಾತನಾಡಿದ ಲೇಖಕಿಯರ ವಿರುದ್ಧ ಹಲವರು ಅಲ್ಲಲ್ಲಿ ಕೆಂಡಕಾರುತ್ತಿದ್ದಾರೆ. ಅವರಲ್ಲಿ ಕೆಲ ಬೃಹಸ್ಪತಿಗಳು, ಸಮ್ಮೇಳನದಲ್ಲಿ ಅವರಿಗೆ ಕೊಟ್ಟ ವಿಚಾರ ಬೇರೆ, ಆದರೂ ಅವರು ಸುಮ್ಮನೇ ತಮ್ಮ ಬಾಯಿ ಚಪಲಕ್ಕಾಗಿ ಭೈರಪ್ಪನನ್ನು ಎಳೆತಂದು ಟೀಕೆ ಮಾಡಿದರು ಎಂದು ಬರೆಯುತ್ತಿದ್ದಾರೆ. ಸಮ್ಮೇಳನದಲ್ಲಿ ಸಾಹಿತ್ಯ ಕೃತಿ, ಕೃತಿಕಾರನ ಧೋರಣೆಗಳನ್ನು ಮಾತನಾಡದಿದ್ದರೆ, ಇನ್ನೆಲ್ಲಿ ಮಾತನಾಡಬೇಕು? ರೈತರ, ದಮನಿತರ ಪರವಾಗಿ ಮಾತನಾಡಿ ಎಂದು ಜನ ಸಂಸತ್ತಿಗೆ ಕಳುಹಿಸಿದರೆ, ರೈತ ಸಮುದಾಯಕ್ಕೆ ಗಂಡಾಂತರ ಸೃಷ್ಟಿಸಲಿರುವ ತಿದ್ದುಪಡಿಗಳ ಬಗ್ಗೆ ಮಾತನಾಡದೆ, ಭೈರಪ್ಪನವರ ಸಮರ್ಥನೆಗೆ ಕೆಟ್ಟಾ ಕೊಳಕು ಭಾಷೆಯಲ್ಲಿ ಮಾತನಾಡುವರರಿಗೆ ಏನು ಹೇಳಬೇಕು?

7 thoughts on “ಸಮ್ಮೇಳನ – ಭೈರಪ್ಪರನ್ನು ಸಭೆಯಲ್ಲಿ ಟೀಕೆ ಮಾಡುತ್ತಿದ್ದರೆ, ಜನ ಚಪ್ಪಾಳೆ ಹೊಡೆದರು!

  1. Anonymous

    “ವೃತ್ತಿಯಲ್ಲಿ ಇಂಜಿನಿಯರ್ ಆದ ವ್ಯಕ್ತಿ, ದಿನವಿಡೀ ತನ್ನ ಕೆಲಸದಲ್ಲಿ ಮುಳುಗಿದ್ದಾಗ kannada-sammelana-hassan-kavigoshtiತನ್ನ ಪತ್ನಿಯ ಆಕಾಂಕ್ಷೆಗಳಿಗೆ ಗಮನ ಕೊಡಲು ಆಗಿರುವುದಿಲ್ಲ. ಆಗ ಆ ಪತ್ನಿ ಮತ್ತೊಬ್ಬರ ಸನಿಹ ಬಯಸುತ್ತಾಳೆ. ಇದು ಸಹಜ….
    ಗೌರಿ ಲಂಕೇಶ್.
    really… what a great message…!!!

    Reply
    1. ಅಭಿನವ ಚನ್ನಬಸವಣ್ಣ

      ಹೆಣ್ಣಿಗೆ ಅವಳದೇ ಆದ ಆಸೆ ಆಕಾಂಕ್ಷೆಗಳಿರುತ್ತವೆ. ದಾಂಪತ್ಯ ಜೀವನದಲ್ಲಿ ಅವುಗಳಿಗೆ ಅವಕಾಶ ಸಿಗದೇ ಹೋದಾಗ ಆಕೆ ದಾಂಪತ್ಯದ ಸೀಮಿತತೆಯನ್ನು ಮೀರುವ ಯತ್ನ ಮಾಡುತ್ತಾಳೆ. ಹೆಣ್ಣನ್ನು ದಾಂಪತ್ಯದ ದಾಸ್ಯಕ್ಕೆ ಸಿಗಿಸುವ ಮನೋಭಾವವುಲ್ಲವರು ಗೌರಿ ಅವರ ಅಭಿಪ್ರಾಯವನ್ನು ಖಂಡತುಂಡವಾಗಿ ವಿರೋಧಿಸುತ್ತಾರೆ.

      Reply
    2. ಕ್ರಾಂತಿಕೇಶ್ವರ

      ಬಹುಶಃ ಸ್ವಂತ ಅನುಭವದ ನೆಲೆಯಿಂದ ಗೌರಿ ಅವರು ಹೀಗೇ ಹೇಳಿರಬಹುದು.

      Reply
  2. Mahesh

    ಜನಪ್ರಿಯತೆಯ ಆಧಾರದ ಮೇಲೆ ಒಬ್ಬ ಲೇಖಕ ಜೀವಪರನಾಗಿದ್ದಾನೆ ಎನ್ನುವುದು ಹೇಗೆ ತಪ್ಪು ಕಲ್ಪನೆಯಾಗಿದೆಯೋ ಹಾಗೇ ತಾವು ಮಾಡುವ ಟೀಕೆಗಳಿಗೆ ಜನ ಚಪ್ಪಾಳೆ ಹೊಡೆದು ಸ್ವಾಗತಿಸಿದುದರ ಆಧಾರದ ಮೇಲೆ ತಾವು ಜೀವಪರವಾಗಿದ್ದೇವೆ ಎಂದು ತಿಳಿದುಕೊಳ್ಳುವುದೂ ಅಷ್ಟೇ ತಪ್ಪು ಕಲ್ಪನೆಯಾಗಿದೆ. ಕೇವಲ ತಪ್ಪುಗಳನ್ನಷ್ಟೇ ಎತ್ತಿ ತೋರಿಸುವುದರಿಂದ ಜನ ಆ ತಪ್ಪುಗಳಿಂದ ವಿಮುಖರಾಗಬಹುದು ಆದರೆ ಅವುಗಳ ಬದಲು ಹೊಸ ತಪ್ಪುಗಳನ್ನೇ ಮಾಡಬಹುದು. ಇದು ತಪ್ಪು ಎಂದು ಪ್ರತಿಪಾದಿಸುವವರು ಯಾವುದು ಸರಿ ಎಂದು ಧೃಢವಾಗಿ ಪ್ರತಿಪಾದಿಸುವುದೂ ಮುಖ್ಯ. ತಪ್ಪು ಪಾತ್ರಗಳ ಟೀಕೆಗಳ ಜೊತೆಗೆ ಸರಿಯಾದ ಪಾತ್ರಗಳ ಗುರುತಿಸುವಿಕೆಯನ್ನೂ ಈ ಸ್ತ್ರೀವಾಗಿ ಲೇಖಕರು ಧೃಢವಾಗಿ ಸಮಾಜದ ಮುಂದಿಟ್ಟರೆ ಭೈರಪ್ಪನವರ ಮಹತ್ವ ತನ್ನಿಂದ ತಾನೆ ಕಡಿಮೆಯಾಗುತ್ತದೆ.

    Reply
  3. M A Sriranga

    ಸದಾನಂದ ಲಕ್ಷ್ಮಿಪುರ ಅವರಿಗೆ—- ಶ್ರವಣಬೆಳಗೊಳದ ಸಾಹಿತ್ಯಸಮ್ಮೇಳನದ ಗೋಷ್ಠಿಯೊಂದರಲ್ಲಿ ಮಹಿಳಾ ಪತ್ರಕರ್ತರು,ಲೇಖಕಿಯರು,ಸಾಹಿತಿಗಳು ಮತ್ತು ವಿಮರ್ಶಕಿಯರು ಭೈರಪ್ಪನವರ ಸಾಹಿತ್ಯದ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಆಧರಿಸಿ ತಾವು ಈ ಲೇಖನ ಬರೆದಿದ್ದೀರಿ. ಹೀಗಾಗಿ ಆ ಅಭಿಪ್ರಾಯಗಳಿಗೆ ತಮ್ಮ ಸಹಮತವಿದೆ ಎಂದು ಭಾವಿಸಿದ್ದೇನೆ. ಆದ್ದರಿಂದ ಈ ಪ್ರತಿಕ್ರಿಯೆ—-. ನಮ್ಮ ಸಮಾಜದಲ್ಲಿ ಮದುವೆಗೆ ಗಂಡು ಮತ್ತು ಹೆಣ್ಣಿನ ಎರಡು ಕುಟುಂಬಗಳ ನಡುವೆ ಒಂದು ಸಾಮಾಜಿಕ ಬಂಧವಿದೆ, ಸಾಮರಸ್ಯವಿದೆ,ಬಾಂಧವ್ಯವಿದೆ . ಅದು ಪ್ರಗತಿಪರರು ಭಾವಿಸಿರುವಂತೆ ಕೇವಲ “ಬಂಧನವಲ್ಲ”. ಮದುವೆಯಿಂದ ಗಂಡು ಹೆಣ್ಣಿನ ನಡುವಿನ ಪ್ರಕೃತಿ ಸಹಜ ಕಾಮದ ಉಪಶಮನವಾಗುತ್ತದೆ. ಆದರೆ ಕೇವಲ ಕಾಮದ ಉಪಶಮನವೊಂದೇ ಅದರ ಅಂತಿಮ ಗುರಿಯಲ್ಲ ಹೆಂಡತಿ ತನ್ನ ಕೆಲಸದಲ್ಲಿ busyಆಗಿ ಮನೆಗೆ ಬರುವುದು ತಡವಾಯಿತೆಂದು ಗಂಡು ಬೇರೊಂದು ಹೆಣ್ಣಿನ ಸಂಗ,ಸಹವಾಸ ಬಯಸಿದರೆ ಆಗ ಹೆಂಡತಿಗೆ ದುಃಖ ದುಮ್ಮಾನಗಳು ಆಗುವುದಿಲ್ಲವೇ? ಹೆಣ್ಣು ಆರ್ಥಿಕವಾಗಿ ಸ್ವಾವಲಂಬಿಯಾಗದೆ ಹಿಂದಿನ ಕಾಲದ ರೀತಿ ಮನೆಯಲ್ಲಿ ಕೂತಿರುವುದು ಪ್ರಗತಿಪರರಿಗೆ ಒಪ್ಪಿಗೆಯೇ? ಇದಕ್ಕೆ ಪ್ರಗತಿಪರರ ಬಳಿ ಏನು ಉತ್ತರವಿದೆ? ಪರಿಹಾರವಿದೆ? Living together with kids or without kids ಅಷ್ಟೇ ತಾನೇ? ಆಗ ಒಂದುವೇಳೆ ಅವರ ಬಾಂಧವ್ಯ ಮುರಿದುಬಿದ್ದರೆ ಮುಂದೆ ಏನು? ಇನ್ನೊಬ್ಬ/ಇನ್ನೊಬ್ಬಳಿಗೆ ಹುಡುಕಾಟ. ಇಂತಹ living togetherನಿಂದ ಕಾನೂನು ಪ್ರಕಾರ ವಿವಾಹ ವಿಚ್ಛೇದನ ಆದವರಿಗೆ ಸಿಗುವ ಜೀವನಾಂಶ ಸಿಗುತ್ತದೆಯೇ?. ಮಹಿಳೆಯರ ಸಬಲೀಕರಣ ಮತ್ತು ಪ್ರಗತಿ ಬಯಸುವವರಿಗೆ ಇದರ ಅರಿವಿರಬೇಕಲ್ಲವೇ? ಹೋಗಲಿ Living together ಅನ್ನು ನಮ್ಮ ದೇಶದ ಕಾನೂನಿನ ರೀತ್ಯ ಮದುವೆ ಎಂದು ಪರಿಗಣಿಸಲಾಗಿದೆಯೇ? ಮಹಿಳೆಯರ ಸಬಲೀಕರಣ ಮತ್ತು ಪ್ರಗತಿ ಬಗ್ಗೆ ವೇದಿಕೆಗಳಿಂದ ಮಾತಾಡುವವರು ಈ ಸಮಸ್ಯೆಗೆ ಉತ್ತರ ಕಂಡು ಹಿಡಿದಿದ್ದಾರೆಯೇ?.

    Reply
  4. ರಾಧಾ ಮೋಹನ

    ವಿಚಾರ ಗೋಷ್ಠಿಯ ವಿಷಯ ಏನಿತ್ತು? ಭೈರಪ್ಪನವರ ಬದುಕು ಬರಹದ ಬಗ್ಗೆಯೇ? ಮುಂದಿನ ಸಮ್ಮೇಳನದಲ್ಲಿ ಇನ್ನು ಕೆಲವರು ಚಿದಾನಂದ ಮೂರ್ತಿಯವರ ಬದುಕು ಬರಹದ ವಿಷಯ ಎಳೆದುಕೊಂಡು ನಂಜು ಕಾರುತ್ತಾರೆ ಬಿಡಿ. ವೈಯಕ್ತಿಕ ದ್ವೇಷ ತೀರಿಸಲು ಸಾಹಿತ್ಯ ಸಮ್ಮೇಳನದ ವೇದಿಕೆಗಿಂತ ಒಳ್ಳೆಯ ಸಂದರ್ಭ ಬೇರೆ ಯಾವುದಿದೆ?

    Reply
  5. mallikarjun

    ಅಲ್ಲಾ ಈ ಟೀಕಾಕಾರರಿಗೆ ಬೇರೆ ಕೆಲಸವಿಲ್ಲವೇ? ಗೌರಿ ಲಂಕೇಶ್ ಅವರು ಹಾಸನದಲ್ಲಿ ಇತ್ತೀಚೆಗೆ ನಡೆದ ಕಾಯ೵ಕ್ರಮವೊಂದರಲ್ಲಿ ಮಾತನಾಡಿದರು. ರಾಮನ ಮೇಲೆ ಆಸೆಯಾಯಿತೆಂದು ಶೂಪ೵ನಖಿ ತನ್ನ ಇಂಗಿತವನ್ನು ಹೇಳಿಕೊಂಡಳು. ಆಗ ರಾಮನೇನು ದಿಢೀರನೇ ಅವಳ ಮೂಗು ಕತ್ತರಿಸಲು ಆದೇಶಿಸಿದನೆ. ಅವಳಿಗೂ ಸಾಕಷ್ಟು ಸಾಂತ್ವನ, ತಿಳುವಳಿಕೆ ಹೇಳಿದರೂ ಅವಳು ಒಪ್ಪಲಿಲ್ಲ. ಻ದಕ್ಕಿಂತ ಹೆಚ್ಚಾಗಿ ಶೂಪ೵ನಖಿ ಯಾರು ಎಂದು ಗೌರಿ ಲಂಕೇಶ್್ ಅವರಿಗೆ ತಿಳಿದಿಲ್ಲ ೆನಿಸುತ್ತದೆ

    Reply

Leave a Reply to M A Sriranga Cancel reply

Your email address will not be published. Required fields are marked *