ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿ ನೆಹರೂ ಬರೆದ ಕೆಲವು ಪತ್ರಗಳು (1947-1953)

ಅನುವಾದ : ಬಿ.ಶ್ರೀಪಾದ ಭಟ್

(ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕ್ಷಣದಿಂದ ಇಂಡಿಯಾ ದೇಶ ಹಿಂದುತ್ವ ಮೂಲಭೂತವಾದಿಗಳ ದೌರ್ಜನ್ಯದಿಂದ ನಲಗುತ್ತಿದೆ. ಹಿಂದೂ ಧರ್ಮದಲ್ಲಿ ಜಾತೀಯತೆಯ ಕ್ರೌರ್ಯದಿಂದ ಉಸಿರುಗಟ್ಟುತ್ತಿದ್ದರೂ ಅಲ್ಲೇ ಸಾಯಬೇಕೆ ಹೊರತಾಗಿ ಯಾವುದೇ ಮತಕ್ಕೆ ಹೋಗುವಂತಿಲ್ಲ, ಬೇರೆ ಧರ್ಮದವರು ಸಾರ್ವಜನಿಕವಾಗಿ ಬದುಕುವಂತಿಲ್ಲ, ದನ ತಿನ್ನುವಂತಿಲ್ಲ, ಮಹಿಳೆ ಮಂಗಳಸೂತ್ರ, ಕಾಲುಂಗರ ಧರಿಸಲೇಬೇಕು. ಹೀಗೆ ಸಂಘ ಪರಿವಾರದ ಎಣೆಯಿಲ್ಲದಷ್ಟು ಹಿಂದೂಯಿಸಂನ ಮತೀಯ ಮೂಲಭೂತವಾದ ಇಂದು ಪ್ರಜ್ಞಾವಂತರನ್ನು ಉಸಿರುಗಟ್ಟಿಸುತ್ತಿದೆ. ತೀರಾ ಇತ್ತೀಚೆಗೆ ಪರಿಸರವಾದಿ ಗ್ರೀನ್ ಪೀಸ್ ಸಂಘಟನೆಯ ಆಕ್ಟಿವಿಸ್ಟ್ ಪ್ರಿಯಾ ಪಿಳ್ಳೆ ಬ್ರಿಟೀಷ್ ಸಂಸತ್ತಿನಲ್ಲಿ ಭಾಗವಹಿಸಿ ವಿದೇಶಿ ಕಂಪನಿಯೊಂದು ವ್ಯಾಪಾರದ ಹೆಸರಿನಲ್ಲಿ ಇಂಡಿಯಾದಲ್ಲಿ ನಡೆಸುತ್ತಿರುವ ಪರಿಸರ ನಾಶದ ಕುರಿತು ಕಾರ್ಪೋರೇಟ್ ದುಷ್ಟ ಶಕ್ತಿಗಳ ಕುರಿತು ಮಾತನಾಡುವವರಿದ್ದರು. ಆದರೆ 56 ಇಂಚಿನ ಎದೆಯ ಮೋದಿಯ ಕೇಂದ್ರ ಸರ್ಕಾರ ಅವರು ದೇಶ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಿತು. ಇದು ಅಪ್ಪಟ ಸರ್ವಾಧಿಕಾರಿ ಫ್ಯಾಸಿಸ್ಟ್ ವರ್ತನೆ. ದೇಶದ ಪ್ರಜಾಪ್ರಭುತ್ವವನ್ನು ಕೈಯಾರೆ ನಾಶಪಡಿಸುತ್ತಿರುವ ಈ ಫ್ಯಾಸಿಸ್ಟ್ ಬಿಜೆಪಿ ಸರ್ಕಾರಕ್ಕೆ ಹೈಕೋರ್ಟ ಕಠಿಣ ಪದಗಳಲ್ಲಿ ಛೀಮಾರಿ ಹಾಕಿದೆ. ಪ್ರಿಯಾ ಪಿಳ್ಳೆಯ ವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿದಿದೆ. ಸಂಘ ಪರಿವಾರದ ಈ ಪ್ರಜಾಪ್ರಭುತ್ವ ವಿರೋಧಿ ಫೆನಟಿಸಂ ಅನ್ನು ಆಗಿನ ಪ್ರಧಾನಿ ನೆಹರೂ ಅವರು ನಲವತ್ತರ ದಶಕದಲ್ಲೇ ಮನಗಂಡಿದ್ದರು. ಆರೆಸ್ಸಸ್ ಅನ್ನು ಒಂದು ಅಪಾಯಕಾರಿ ಸೀಕ್ರೆಟ್ ಸೊಸೈಟಿ ಎಂದು ಎಚ್ಚರಿಸಿದ್ದರು. ಈ ಕೋಮುವಾದಿ ದುಷ್ಟ ಶಕ್ತಿಗಳು ದೇಶಕ್ಕೆ ಸದಾ ಕಂಟಕಪ್ರಾಯರಾಗಿರುತ್ತಾರೆ ಎಂದು ನಿರ್ದಾಕ್ಷೀಣ್ಯವಾಗಿ ಬರೆದಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲಾ ಮುಖ್ಯಮಂತ್ರಿಗಳಿಗೆ ಪ್ರತಿ ಹದಿನೈದು ದಿನಕ್ಕೊಮ್ಮೆ ತಪ್ಪದೆ ನಿಯಮಿತವಾಗಿ ಪತ್ರ ಬರೆಯುತ್ತಿದ್ದರು. ಅವುಗಳಲ್ಲಿ ಆಯ್ದ ಮತೀಯವಾದ ಕೋಮುವಾದಕ್ಕೆ ಸಂಬಂದಿಸಿದ ಕೆಲವು ಪತ್ರಗಳನ್ನು ಇಲ್ಲಿ ಅನುವಾದಿಸಲಾಗಿದೆ)

ಪತ್ರ 1

ಕೇಂದ್ರ ಅಥವಾ ಪ್ರಾದೇಶಿಕ ಯಾವುದೇ ಸರ್ಕಾರವಾಗಿರಲಿ ಒಂದು ಸರ್ಕಾರವಾಗಿ ನಾವು ಯಾವುದೇ ಗುಂಪು ಅಥವ ಪಕ್ಷದ ಪರವಾಗಿletters for editors ಪಕ್ಷಪಾತಿಯಾಗಿ ವರ್ತಿಸಬಾರದು. ಒಂದು ಸರ್ಕಾರವಾಗಿ ನಾವು ಕೇವಲ ಕೆಲವೇ ಜನರ ಗುಂಪು ಎಂದು ಮಾತ್ರ ಪರಿಗಣಿಸಬಾರದು ಏಕೆಂದರೆ ನಮಗೆ ಆದರ್ಶಗಳಿವೆ, ಸಿದ್ಧಾಂತಗಳಿವೆ. ಯಾವುದೇ ವ್ಯಕ್ತಿ ಅಥವಾ ಗುಂಪು ಆ ಅದರ್ಶಗಳನ್ನು, ಸಿದ್ಧಾಂತಗಳನ್ನು ವಿರೋಧಿಸಿದರೆ ನಮ್ಮ ಸಂಪೂರ್ಣ ಸಾಮರ್ಥ್ಯ ಬಲದಿಂದ ನಾವು ಆ ಸವಾಲನ್ನು ಸ್ವೀಕರಿಸಬೇಕು ಮತ್ತು ಅದನ್ನು ಸ್ವೀಕರಿಸಲು ಪ್ರಸ್ತಾವಿಸುತ್ತೇವೆ, ಕಳೆದ ಕೆಲವು ವರ್ಷಗಳಿಂದ ಮುಸ್ಲಿಂಲೀಗ್ ಮತ್ತು ಪಾಕಿಸ್ತಾನ ದೇಶವು ಪ್ರಾರಂಬಿಸಿದ ಕೆಲವು ದುಷ್ಟ ನೀತಿಗಳಿಂದಾಗಿ ಉಂಟಾದ ಘೋರವಾದ ಪರಿಣಾಮಗಳ ಕುರಿತಾಗಿ ನಾನು ನಿಮಗೆಲ್ಲ ಬರೆಯುವ ಅವಶ್ಯಕತೆ ಇಲ್ಲವೆಂದೇ ಭಾವಿಸುತ್ತೇನೆ. ಇದರ ಕುರಿತಾಗಿ ನಮಗೆಲ್ಲ ಮಾಹಿತಿ ಇದೆ ಮತ್ತು ಅದರಿಂದುಂಟಾದ ಪರಿಣಾಮಗಳು ನಮಗೆಲ್ಲ ಗೊತ್ತಿದೆ. ಈ ದುಷ್ಟ ನೀತಿಗಳಿಂದ ಉಂಟಾದ ಪರಿಣಾಮಗಳು ಸಂಪೂರ್ಣವಾಗಿ ಕೊನೆಯಾಗದೆ ಇನ್ನೂ ಸಶಕ್ತವಾಗಿವೆ ಮತ್ತು ಈ ಕಾರಣಕ್ಕಾಗಿ ನಾವೆಲ್ಲ ಇನ್ನುಮುಂದೆಯೂ ಜಾಗೂರಕರಗಾಗಿ ಇರಬೇಕಾಗುತ್ತದೆ. ಒಂದು ಬಗೆಯ ಅಪಾಯ ಮತ್ತು ಆತಂಕದ ವಾತಾವರಣವಿದೆ ಮತ್ತು ನಾವು ವಿಶ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಕೆಲ ಜನರು ಯುದ್ಧದ ಕುರಿತಾಗಿ ಪ್ರಾಥಮಿಕ ತಿಳುವಳಿಕೆ ಸಹ ಗೊತ್ತಿಲ್ಲದೆ ಅದರ ಕುರಿತಾಗಿ ಮೂರ್ಖತನದಿಂದ ಮಾತನಾಡುತ್ತಿದ್ದಾರೆ. ಇಂತಹ ಮಾತುಕತೆಗಳನ್ನು ನಾವು ಪುರಸ್ಕರಿಸಬಾರದು. ಆದರೆ ಅಪಾಯಕಾರಿಯಾದ ಸಾಧ್ಯತೆಗಳನ್ನು ಒಳಗೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ನಾವು ಆಕಸ್ಮಿಕ ಘಟನೆಗಳಿಗೆ ತಯಾರಾಗಿರಬೇಕಾಗಿದೆ ಮತ್ತು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.

ಇಲ್ಲಿ ನಮಗೆ ಒಳಗಿನಿಂದಾಗಲಿ ಅಥವ ಬಾಹ್ಯದಿಂದ ಉಂಟಾಗುವ ಅಪಾಯಗಳ ಸಾಧ್ಯತೆ ಕಡಿಮೆ ಮಟ್ಟದಲ್ಲಿದೆ. ಆದರೆ ನಮ್ಮೊಳಗಿನ ಕೋಮುವಾದಿ ಸಂಘಟನೆಗಳು ಮತ್ತು ಪ್ರತಿಗಾಮಿ ಶಕ್ತಿಗಳು ಸ್ವತಂತ್ರ ಇಂಡಿಯಾದ ಭಾವೈಕ್ಯತೆಯನ್ನು ಒಡೆಯಲು ಪ್ರಯತ್ನಿಸುತ್ತಿವೆ. ಆದರೆ ಈ ನಾಶವೇನಾದರು ಸಂಭವಿಸಿದರೆ ಅದರಿಂದುಂಟಾಗುವ ಕ್ರಿಯೆ ಪ್ರತಿಕ್ರಿಯೆಗಳಲ್ಲಿ ತಾವೆಲ್ಲರೂ ಕೊಚ್ಚಿಹೋಗುತ್ತೇವೆಂದು ಈ ಕೋಮುವಾದಿ ಸಂಘಟನೆಗಳಿಗೆ ಅರಿವಿಲ್ಲ. ಆದರೂ ಈ ನಾಶವು ಸಂಭವಿಸುವುದಿಲ್ಲ ಮತ್ತು ನಾವು ಸಧೃಡವಾಗಿ ಮತ್ತು ಪರಿಪೂರ್ಣವಾಗಿ ಈ ಪ್ರತಿಗಾಮಿ ಶಕ್ತಿಗಳೊಂದಿಗೆ ಮುಖಾಮುಖಿಯಾಗಬೇಕಾಗಿದೆ

22 ನವೆಂಬರ್, 1947

ಪತ್ರ 2

ಕೆಲವು ಪ್ರಾಂತ್ಯಗಳಲ್ಲಿ ಆರೆಸ್ಸಸ್ ಸಂಘಟನೆಯು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ ಎಂದು ನನಗೆ ವರದಿಗಳು ಬರುತ್ತಿವೆ. ಸೆಕ್ಷನ್ 144 ಜಾರಿಯಲ್ಲಿದ್ದರೂ ಈ ಪ್ರತಿಭಟನೆಗಳನ್ನು ಆಯೋಜಿಸಲಾಗುತ್ತಿದೆ. ಕೆಲವು ಪ್ರಾಂತ್ಯಗಳ ಆಡಳಿತ ನಡೆಸುತ್ತಿರುವ ಸರ್ಕಾರಗಳು ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಪ್ರಜಾಪ್ರಭುತ್ವದ ಶಾಸನದ ಅದೇಶಗಳನ್ನು ಫೆನಟಿಸಂ ಶಕ್ತಿಗಳು ಉಲ್ಲಂಘಿಸುತ್ತಿದ್ದರೂ ಈ ಸರ್ಕಾರಗಳು ಆ ಉಲ್ಲಂಘನೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ನಾನು ನಿಮ್ಮ ವಿವೇಚನೆಯ ಶಕ್ತಿಗೆ ಅಡ್ಡಿಬರಲು ಬಯಸುವುದಿಲ್ಲ. ಆದರೆ ಪ್ರಜಾಪ್ರಭುತ್ವದ ಶಾಸನದ ವಿರುದ್ಧ ಈ ಬಗೆಯ ಉಲ್ಲಂಘನೆಗಳನ್ನು ಸಮ್ಮತಿಸುವುದರಿಂದಾಗಿ ಮುಂದಿನ ದಿನಗಳಲ್ಲಿ ಘೋರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ.

ಖಾಸಗಿ ಮಿಲಿಟರಿ ಮಾದರಿಯಲ್ಲಿರುವ ಆರೆಸ್ಸಸ್ ಸಂಘಟನೆ ತನ್ನ ಚಿಂತನೆಗಳಲ್ಲಿ ಮತ್ತು ಸಂಸ್ಥೆಯನ್ನು ವಿವಿಧ ಹಂತಗಳಲ್ಲಿRSS_meeting_1939 ಕಟ್ಟುವುದರಲ್ಲಿನ ನೈಪುಣ್ಯತೆಯಲ್ಲಿ ಮತ್ತು ಕಾರ್ಯವಿಧಾನದಲ್ಲಿ ಸಂಪೂರ್ಣವಾಗಿ ಜರ್ಮನಿಯ ನಾಜಿಗಳ ಮಾದರಿಯನ್ನು ಅನುಸರಿಸುತ್ತಿದೆ ಮತ್ತು ಈ ಕುರಿತಾಗಿ ನಮ್ಮ ಬಳಿ ಖಚಿತವಾದ, ನಿಖರವಾದ ಸಾಕ್ಷಿಗಳಿವೆ. ಆದರೆ ನಾಗರಿಕ ಹಕ್ಕುಗಳ ವಿಷಯದಲ್ಲಿ ನಾವು ಮಧ್ಯೆ ತಲೆ ಹಾಕುವುದಿಲ್ಲ. ಅದೇ ವೇಳೆ ತಮ್ಮ ಗುಪ್ತ ಕಾರ್ಯಸೂಚಿಯ ಅನುಷ್ಠಾನಕ್ಕಾಗಿ ಅಸಂಖ್ಯಾತ ಸಂಖ್ಯೆಯಲ್ಲಿ ಸ್ವಯಂಸೇವಕರಿಗೆ ಶಸ್ತ್ರಾಸ್ತ್ರ ತರಬೇತಿ ಕೊಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಹಾಗೆಯೇ ಖಂಡಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆರೆಸ್ಸಸ್ ಸಂಘಟನೆ ವಿರೋಧಿಸುತ್ತಿದೆ ಎನ್ನುವ ಕಾರಣಕ್ಕಾಗಿ ನಾವು ಅದರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಮತ್ತು ಯಾವುದೇ ಬಗೆಯ ನ್ಯಾಯಸಮ್ಮತವಾದ ನೆಲೆಯಲ್ಲಿನ ವಿರೋಧವನ್ನು ನಾವು ಮನ್ನಿಸಲೇಬೇಕಾಗುತ್ತದೆ ಮತ್ತು ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ. ಆದರೆ ಈ ಬಗೆಯ ಚಟುವಟಿಕೆಗಳು ಒಂದು ಒಪ್ಪಿತ ಮಿತಿಯನ್ನು ದಾಟಿ ಮುಂದುವರೆಯುತ್ತಿವೆ ಮತ್ತು ಪ್ರಾಂತೀಯ ಸರ್ಕಾರಗಳು ಆರೆಸ್ಸಸ್ ನ ಈ ಚಟುವಟಿಕೆಗಳ ಮೇಲೆ ಸದಾ ಕಣ್ಣಿಟ್ಟಿರಬೇಕು ಮತ್ತು ಅವಶ್ಯಕತೆ ಉಂಟಾದಲ್ಲಿ ಕ್ರಮ ಜರುಗಿಸಲು ಸಹ ಹಿಂಜರಿಯಬಾರದು

ಎರಡು ಭಿನ್ನ ಧರ್ಮಗಳ ನಡುವೆ ದ್ವೇಷ ಭಾವನೆಯನ್ನು ಪ್ರೋತ್ಸಾಹಿಸುತ್ತಿರುವ ಹಲವು ನಿಯತಕಾಲಿಕೆಗಳ ವಿರುದ್ಧ ಕೆಲವು ಪ್ರಾಂತೀಯ ಸರ್ಕಾರಗಳು ಶಿಸ್ತು ಕ್ರಮ ಕೈಗೊಂಡಿವೆ. ಆದರೆ ಈ ವಿಷಯದಲ್ಲಿ ಬೇರೆ ದಿನಪತ್ರಿಕೆಗಳಿಂಗಿತಲೂ ಮಿಗಿಲಾಗಿ ಈ ಆರೆಸ್ಸಸ್ ಸಂಘಟನೆಯ ದಿನ ಪತ್ರಿಕೆಗಳನ್ನು ದೂಷಿಸಬೇಕಾಗುತ್ತದೆ. ಈ ಆರೆಸ್ಸಸ್ ನ ಪತ್ರಿಕೆಗಳು ಕೋಮುವಾದಿ ಅಜೆಂಡಾವನ್ನು ಈ ಮಾದರಿಯ ಉಗ್ರ ಮಟ್ಟದಲ್ಲಿ ಅದು ಹೇಗೆ ಪ್ರಚಾರ ಮಾಡುತ್ತವೆ ಎಂದು ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ.

ಜರ್ಮನಿಯಲ್ಲಿ ನಾಜಿ ಚಳುವಳಿ ಬೆಳೆದ ಬಗೆಯ ಕುರಿತಾಗಿ ನನಗೆ ಸ್ವಲ್ಪ ಮಾಹಿತಿ ಇದೆ. ಕೆಳ ಮಧ್ಯಮ ವರ್ಗದ ತರುಣರು ಮತ್ತು ಮಹಿಳೆಯರನ್ನು ಪೊಳ್ಳಾದ, ಬಾಹ್ಯಾಡಂಬರದ ಬಲೆಗೆ ಕೆಡವಿಕೊಳ್ಳುವ ವಿಧಾನಗಳ ಮೂಲಕ ಅವರನ್ನು ತನ್ನೆಡೆಗೆ ಆಕರ್ಷಿಸಿತು. ಬುದ್ಧಿಮಟ್ಟದಲ್ಲಿ ಅಷ್ಟೊಂದು ಪರಿಣಿತಿ ಇಲ್ಲದ ಈ ವರ್ಗಕ್ಕೆ ಜೀವನದಲ್ಲಿ ಹೇಳಿಕೊಳ್ಳುವಂತಹ ಮೌಲ್ಯಗಳು ಇಲ್ಲದೇ ಇರುವುದಕ್ಕಾಗಿ ಇವರು ನಾಜಿ ಚಳುವಳಿಗೆ ಆಕರ್ಷಿತರಾದರು. ತುಂಬಾ ಸರಳವಾಗಿದ್ದ, ಮಾನಸಿಕ ಚೈತನ್ಯತೆಯ ಕೊರತೆಯಿಂದಾಗಿ ಈ ತರುಣರು ಮತ್ತು ಮಹಿಳೆಯರು ಸಿದ್ಧಾಂತಗಳು ಮತ್ತು ಯೋಜನೆಗಳಲ್ಲಿ ಸಂಪೂರ್ಣವಾಗಿ ಖುಣಾತ್ಮಕವಾಗಿದ್ದ ಈ ನಾಜಿ ಪಾರ್ಟಿಯೆಡೆಗೆ ಆಸಕ್ತಿ ಬೆಳಸಿಕೊಂಡರು. ನಾಜಿ ಪಕ್ಷವು ಜರ್ಮನಿ ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯಿತು ಮತ್ತು ಇದೇ ಮಾದರಿಯ ಶಕ್ತಿಗಳನ್ನು ಇಂಡಿಯಾದಲ್ಲಿ ಬೆಳೆಯಲಿಕ್ಕೆ ಬಿಟ್ಟಲ್ಲಿ ಇಂಡಿಯಾ ದೇಶಕ್ಕೂ ಜರ್ಮನಿ ದೇಶಕ್ಕೆ ಆದ ಹಾನಿಯನ್ನೇ ಮಾಡುತ್ತಾರೆ. ಆದರೂ ಇಂಡಿಯಾ ದೇಶವು ಬದುಕುಳಿಯುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅಪಾರವಾದ ಗಾಯಗಳೊಂದಿಗೆ ಬದುಕುಳಿಯುವ ಇಂಡಿಯಾ ದೇಶ ನಂತರ ಮತ್ತೆ ಚೇತರಿಕೊಳ್ಳಲು ದಶಕಗಳ ಕಾಲಾವಕಾಶ ಬೇಕಾಗುತ್ತದೆ.

 7 ಡಿಸೆಂಬರ್, 1947

ಪತ್ರ 3

ಸ್ವತಂತ್ರ ದೇಶವಾಗಿ ಇಂಡಿಯಾಗೆ ಆರು ತಿಂಗಳು ತುಂಬಿದೆ. ಈ ಕಾಲಘಟ್ಟದ ಪಯಣ ಅತ್ಯಂತ ಯಾತನಾಮಯವಾಗಿತ್ತು. ಪ್ರತಿಯೊಂದು ದುರ್ಘಟನೆಯು ಮತ್ತೊಂದನ್ನು ಹಿಂಬಾಲಿಸುತ್ತಿತ್ತು, ಅದನ್ನು ಮತ್ತೊಂದು ಹೀಗೆ ಸರಣಿಯೋಪಾದಿಯಲ್ಲಿ ಎಣೆಯಿರದ ಸಂಕಟಗಳು, ಕಲ್ಲುಮುಳ್ಳಿನ ಹಾದಿ ಇವೆಲ್ಲವೂ ಗಾಂಧೀಜಿಯವರ ಹತ್ಯೆಯಂತಹ ದೊಡ್ಡ ದುರಂತದೊಂದಿಗೆ ಪರ್ಯಾವಸಾನಗೊಂಡವು.

ಈ ಆರು ತಿಂಗಳಲ್ಲಿ ನಮ್ಮ ರಾಜಕೀಯ ವಲಯದಲ್ಲಿ ಅಭೂತಪೂರ್ವವೆನ್ನುವಷ್ಟು ಬದಲಾವಣೆಗಳಾದವು. ರಾಜಕೀಯ ಪಕ್ಷವಾಗಿ ಹಿಂದೂ ಮಹಾಸಭಾ ಸಂಘಟನೆ ತನ್ನ ನೆಲೆಯನ್ನು ಕಳೆದುಕೊಂಡು ಅವಸಾನಗೊಂಡಿತು. ಆರೆಸ್ಸಸ್ ಪಕ್ಷವನ್ನು ನಿಷೇಧಿಸಲಾಯಿತು ಮತ್ತು ಈ ನಿಷೇಧಕ್ಕೆ ಬೆಂಬಲಿಸಿ ದೇಶಾದ್ಯಾಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಉತ್ತರ ಪ್ರದೇಶ ಸಂಸತ್ತಿನ ಮುಸ್ಲಿಂ ಲೀಗ್ ಪಕ್ಷವು ಸಹ ರಾಜಕೀಯ ಪಕ್ಷವಾಗಿ ತನ್ನ ನೆಲೆಯನ್ನು ಕಳೆದುಕೊಂಡಿತು. ಮುಂದಿನ ದಿನಗಳಲ್ಲಿ ದೇಶಾದ್ಯಾಂತ ಈ ಮುಸ್ಲಿಂ ಲೀಗ್ ಪಕ್ಷವು ಇದೇ ಮಾದರಿಯಲ್ಲಿ ಕುಂದುತ್ತ ಹೋಗುವ ಸಾಧ್ಯತೆಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ. ಗಾಂಧೀಜಿಯವರ ಹತ್ಯೆಯ ನಂತರವಷ್ಟೇ ಮೇಲಿನ ಘಟನೆಗಳು ಆತುರವೆನ್ನುವಷ್ಟರ ಮಟ್ಟಿಗೆ ಜರುಗಿದರೂ ಸಹ ನಮ್ಮ ರಾಜಕೀಯ ಜೀವನದಲ್ಲಿ ಇದು ಒಂದು ಆರೋಗ್ಯಕರ ಬೆಳವಣಿಗೆ ಎಂದೇ ನಾವು ಪರಿಗಣಿಸಬೇಕಾಗುತ್ತದೆ. ಸೆಕ್ಯುಲರ್ ತತ್ವದ ಪ್ರಜಾಪ್ರಭುತ್ವ ದೇಶವಾಗಿ ಇಂಡಿಯಾವನ್ನು ಕಟ್ಟಲು ಇವೆಲ್ಲವೂ ಅತ್ಯಂತ ಅವಶ್ಯಕವಾದ ನಡೆಗಳಾಗಿದ್ದವು

ಕಳೆದ ಈ ಆರು ತಿಂಗಳಲ್ಲಿ ಇಂಡಿಯಾ ಮತ್ತು ಪಾಕಿಸ್ತಾನದಲ್ಲಿ ನಡೆದ ಬೆಳವಣಿಗೆಗಳನ್ನು ಅವಲೋಕಿಸಿದಾಗ ಕೋಮುವಾದಿ ಶಕ್ತಿಗಳುJinnah_and_Muslim_League_founders ಮತ್ತು ಎರಡು ಚಕ್ರಾಧಿಪತ್ಯಗಳ ನಡುವಿನ ಘರ್ಷಣೆಗಳನ್ನು ಇದು ರುಜುವಾತು ಪಡಿಸುತ್ತದೆ. ಇಂಡಿಯಾ ದೇಶವು ಅಭಿವೃಧ್ಧಿಯ ಶಕ್ತಿಯಾಗಿ ಗೆಲುವು ಸಾಧಿಸುತ್ತಿದೆ. ಈ ಶಕ್ತಿಯು ಬಿಕ್ಕಟ್ಟಿನ ದಿನಗಳಲ್ಲಿ ತೀವ್ರ ಪರೀಕ್ಷೆಗೆ ಒಳಗಾಗಿತ್ತು, ಆದರೆ ಗಾಂಧೀಜಿಯವರು ತಮ್ಮ ಧೈರ್ಯ, ಆದರ್ಶ ಮತ್ತು ಜೀನಿಯಸ್ ವ್ಯಕ್ತಿತ್ವದಿಂದಾಗಿ ನಮ್ಮನ್ನೆಲ್ಲ ಉಳಿಸಿದರು ಮತ್ತು ಇದರಿಂದಾಗಿ ಪ್ರತ್ಯಾಘಾತಗಳು, ಪ್ರತಿಗಾಮಿ ಶಕ್ತಿಗಳು ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ನಾವು ಅಲ್ಪತೃಪ್ತರಾಗಿ ವಿಶ್ರಮಿಸಿಕೊಳ್ಳದೇ ಇದೇ ಹಾದಿಯಲ್ಲಿ ಮುಂದುವರೆದರೆ ಗಾಂಧೀಜಿಯವರ ಆದರ್ಶಗಳು ಮತ್ತು ಗುರಿಗಳನ್ನು ಮುಟ್ಟಬಹುದು. ಆದರೆ ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಪ್ರತಿಗಾಮಿ ಶಕ್ತಿಗಳು ಮೇಲುಗೈ ಸಾಧಿಸುತ್ತಿವೆ. ಶರಿಯತ್ ನಿಯಮಗಳನ್ನಾಧರಿಸಿದ ಇಸ್ಲಾಮಿಕ್ ದೇಶದ ಪರವಾಗಿ ಮಿ.ಜಿನ್ನಾ ಮಾತನಾಡುತ್ತಿದ್ದಾರೆ. ಸಂಕುಚಿತ ದೃಷ್ಟಿಕೋನದ ಪ್ರಾದೇಶಿಕ ಪಕ್ಷಗಳು ನಿಯಂತ್ರಣ ಮೀರಿ ಬೆಳೆಯುತ್ತಿವೆ ಮತ್ತು ಕಡೆಗೆ ಜಿನ್ನಾ ಅವರು ಈ ಪಕ್ಷಗಳ ವಿರುದ್ಧ ಕಠಿಣ ಶಬ್ದಗಳಲ್ಲಿ ಎಚ್ಚರಿಕೆಯನ್ನು ನೀಡಬೇಕಾಯ್ತು. ಇನ್ನೂ ಅಭಿವೃದ್ಧಿಯ ಕಡೆಗೆ ಸಂಪೂರ್ಣವಾಗಿ ಮುನ್ನುಗ್ಗಲು ಪಾಕಿಸ್ತಾನಕ್ಕೆ ಇನ್ನೂ ಬಹಳಷ್ಟು ಸಮಯ ಬೇಕಾಗುತ್ತದೆ. ಆದರೆ ಪಾಕಿಸ್ತಾನದಲ್ಲಿ ಏನಾದರು ಆಗಲಿ, ಸೆಕ್ಯುಲರ್ ದೇಶವನ್ನು ನಿರ್ಮಾಣ ಮಾಡುವಂತಹ ಗುರಿ ಮಾತ್ರ ನಮ್ಮ ಮುಂದೆ ನಿಚ್ಛಳವಾಗಿದೆ. ಈ ಸೆಕ್ಯುಲರ್ ಇಂಡಿಯಾದಲ್ಲಿ ಎಲ್ಲಾ ವಿಭಿನ್ನ ಧರ್ಮಗಳ ಜನರು ಆತ್ಮಾಬಿಮಾನದಿಂದ ತಲೆ ಎತ್ತಿ ನಡೆಯುವಂತಾಗಬೇಕು.

 20ಫೆಬ್ರವರಿ, 1948

ಪತ್ರ 4

ಹೈದರಾಬಾದ್ ಮತ್ತು ಕಾಶ್ಮೀರದ ಕುರಿತಾಗಿ ಯಾವುದೇ ನಿರ್ಣಯಗಳನ್ನು ತೆಗೆದುಕೊಂಡಿರಬಹುದು, ಅದರೆ ಪ್ರಾಂತೀಯ ಸರ್ಕಾರಗಳು ತಮ್ಮ ಪ್ರದೇಶದ ವ್ಯಾಪ್ತಿಯೊಳಗಡೆ ಸಂಭವನೀಯವಾಗಿ ತಲೆ ಎತ್ತಬಹುದಾದದ ಅನಿಯಂತ್ರಣವಾದ ಪ್ರತಿಕ್ರಿಯೆಗಳ ಕುರಿತಾಗಿ ತುಂಬಾ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ನಾನು ಈ ಮೊದಲೇ ಹೇಳಿದ ಹಾಗೆ ಇಂಡಿಯಾದ ವಿವಿಧ ಭಾಗಗಳಲ್ಲಿ ಕೋಮುವಾದಿ ಚಟುವಟಿಕೆಗಳು ಮರುಕಳಿಸುವ ಸಾಧ್ಯತೆಗಳು ಗೋಚರಿಸುತ್ತಿವೆ. ಈ ಸಂದರ್ಭದಲ್ಲಿ ಅವರು ಹಿಂದೂ, ಮುಸ್ಲಿಂ ಅಥವಾ ಸಿಖ್ ಯಾವುದೇ ಧರ್ಮದವರಾಗಿರಲಿ ಅವರು ತಂಟೆಕೋರುತನ ಪ್ರಾರಂಬಿಸುವುದನ್ನು ನಿಗ್ರಹಿಸಬೇಕಾಗಿದೆ. ದುರದೃಷ್ಟವಶಾತ್ ಕೆಲವು ಸಿಖ್ ನಾಯಕರು ದುರ್ಬುದ್ಧಿಯಿಂದ ಪ್ರೇರೇಪಿತವಾದ ಚಿಂತನೆಗಳನ್ನು ಜನರ ಮುಂದೆ ಹೇಳುತ್ತಿದ್ದಾರೆ, ಹದ್ದುಮೀರಿದ ಭಾಷಣಗಳನ್ನು ಕೊಡುತ್ತಿದ್ದಾರೆ. ನೀವು ಗಮನಸಿರಬಹುದು, ಹಿಂದೂ ಮಹಾಸಭಾ ಮರಳಿ ರಾಜಕೀಯ ಪ್ರವೇಶಕ್ಕೆ ಯತ್ನಿಸುತ್ತಿದೆ. ಇದು ಅನಪೇಕ್ಷಣೀಯವಾದ, ಒಪ್ಪಲಿಕ್ಕೆ ಸಾಧ್ಯವಾಗದ ನಡೆಯಾಗಿದೆ. ಇದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಯಾವುದೇ ಬಗೆಯ ಕೋಮುವಾದಿ ಸಂಘಟನೆಗಳನ್ನು, ಸಂಸ್ಥೆಗಳನ್ನು ಬೆಂಬಲಿಸಬಾರದು ಹಾಗೂ ಪ್ರೋತ್ಸಾಹಿಸಬಾರದೆಂದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ನಾನು ಹೇಳ ಬಯಸುವುದು ಕೇಂದ್ರ ಅಥವಾ ಪ್ರಾಂತೀಯ ಸರ್ಕಾರಗಳು ಮತ್ತು ಅದರ ಅಧಿಕಾರಿಗಳು ಹಿಂದೂ ಮಹಾಸಭಾದಂತಹ ಸಂಘಟನೆಯೊಂದಿಗೆ ಅಥವಾ ಬೇರೆ ಕೋಮುವಾದಿ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿರಬಾರದು. ಅವು ಯಾವುದೇ ಮುಖವಾಡಗಳನ್ನು ಧರಿಸಿದ್ದರೂ ಸಹಿತ.

ಮತ್ತೊಬ್ಬ ಪ್ರಾಂತೀಯ ಮುಖ್ಯಮಂತ್ರಿಯು ಬರೆದ ಪತ್ರವೊಂದರಲ್ಲಿ ಸೇನೆಯನ್ನು ಪ್ರಾದೇಶಿಕವಾಗಿ ಬೆಳೆಸಬೇಕು ಮತ್ತು ಅದಕ್ಕೆ ಪ್ರಾದೇಶಿಕ ಹೆಸರುಗಳನ್ನು ಕೊಡಬೇಕು ಎಂದು ಹೇಳಿದ್ದಾರೆ. ಇದರ ಮೂಲಕ ಪ್ರಾದೇಶಿಕ ಮಟ್ಟದಲ್ಲಿ ಪ್ರೋತ್ಸಾಹ ಮತ್ತು ಉತ್ಸಾಹ ಹೆಚ್ಚುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದರು. ಆದರೆ ರಕ್ಷಣಾ ಸಚಿವಾಲಯವು ಇದರ ವಿರುದ್ಧ ಆಕ್ಷೇಪಣೆ ಸಲ್ಲಿಸಿತು. ಇದು ಪ್ರಸ್ತುತ ಸೇನಾ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಹೇಳಲಾಗಿತ್ತು. ಇದನ್ನು ನಾನು ಸಮರ್ಥಿಸುತ್ತೇನೆ. ಏಕೆಂದರೆ ಅದು ಕೋಮು ಸ್ವರೂಪವಾಗಿರಲಿ, ಪ್ರಾಂತೀಯ ಸ್ವರೂಪದ್ದಾಗಿರಲಿ ಸೇನೆಯೊಳಗೆ ಯಾವುದೇ ಮಾದರಿಯ ಪ್ರತ್ಯೇಕತೆಯ ಚಿಂತನೆಯನ್ನು ಬೆಳೆಸಬಾರದು.

 16 ಅಗಸ್ಟ್, 1948

ಪತ್ರ 5

ಈ ಆರೆಸ್ಸಸ್ ಕುರಿತಾಗಿ ನಮಗೆ ಅನೇಕ ಬಗೆಯಲ್ಲಿ ಎಚ್ಚರಿಕೆಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಅವರುRSS ಸತ್ಯಾಗ್ರಹವನ್ನು ಆರಂಬಿಸಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಗಳು ನಮಗೆ ಲಭ್ಯವಾಗಿವೆ. ಜೈಪುರದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಎಲ್ಲಾ ಮಂತ್ರಿಗಳು ತಮ್ಮ ಮುಖ್ಯ ಕಛೇರಿಯಲ್ಲಿ ಗೈರು ಹಾಜರಾಗಿರುವ ಆ ಸಂದರ್ಭದಲ್ಲಿ ಈ ಸತ್ಯಾಗ್ರಹವನ್ನು ಆಯೋಜಿಸಲು ನಿರ್ಧರಿಸಿದ್ದಾರೆ. ಆದರೆ ಆರೆಸ್ಸಸ್ ಸಂಘಟನೆಯು ಸತ್ಯಾಗ್ರಹವನ್ನು ಎನ್ನುವ ಪದವನ್ನು ಬಳಸುವುದೇ ಒಂದು ವಿರೋಧಭಾಸವಾಗಿ ಕಾಣುತ್ತದೆ. ಏಕೆಂದರೆ ಈ ಸತ್ಯಾಗ್ರಹವೆನ್ನುವ ಚೇತನದಿಂದ ಮತ್ತು ಅದರ ಆದರ್ಶ ಗುಣಗಳಿಂದ ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿರುವ ಆರೆಸ್ಸಸ್ ಗೂ ಸತ್ಯಾಗ್ರಹಕ್ಕೂ ಸಂಬಂಧವೇ ಇಲ್ಲ. ಆರೆಸ್ಸಸ್ ಮೂಲಭೂತವಾಗಿ ಸಾರ್ವಜನಿಕ ಮುಖವಾಡವನ್ನು ಹೊಂದಿದ ಒಂದು ಸೀಕ್ರೆಟ್ ಸಂಸ್ಥೆ. ಈ ಆರೆಸ್ಸಸ್ ಸಂಸ್ಥೆಯಲ್ಲಿ ಸದಸ್ಯರಿಲ್ಲ, ನೊಂದಣಿ ಇಲ್ಲ, ಅಸಂಖ್ಯಾತ ದೇಣಿಗೆಯನ್ನು ಪಡೆಯುತ್ತಿದ್ದರೂ ಅಲ್ಲಿ ಲೆಕ್ಕಪತ್ರಗಳಿಲ್ಲ, ಆರೆಸ್ಸಸ್ ಸಂಘಟನೆಗೆ ಶಾಂತಿಯುತ ವಿಧಾನಗಳಲ್ಲಿ ನಂಬಿಕೆ ಇಲ್ಲ ಇದು ಸತ್ಯಾಗ್ರಹ ನೀತಿಗೆ ವಿರೋಧಿ. ಸಾರ್ವಜನಿಕವಾಗಿ ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾಗಿ ಖಾಸಗಿಯಾಗಿ ನಡೆದುಕೊಳ್ಳುತ್ತಾರೆ. ಪ್ರತಿಯೊಂದು ಪ್ರಾಂತೀಯ ಸರ್ಕಾರಗಳಿಗೂ ಆರೆಸ್ಸಸ್ ಚಟುವಟಿಕೆಗಳ ಸಂಪೂರ್ಣ ವಿವರಗಳು ಗೊತ್ತಿವೆ. ವ್ಯಕ್ತಿಯೊಬ್ಬನನ್ನು ಎದುರಾಳಿ ಎಂದು ಸ್ವೀಕರಿಸಲು ಯಾವುದೇ ತಕರಾರು ಇರಬಾರದು. ಯುವ ಜನತೆಯನ್ನು ಸದಸ್ಯರನ್ನಾಗಿ ಮಾಡಿಕೊಂಡ ಯಾವುದೇ ಸಂಸ್ಥೆಯು ದೂರದೃಷ್ಟಿಯಲ್ಲಿ, ಸಾಮಾನ್ಯ ತಿಳುವಳಿಕೆಯಲ್ಲಿ, ಕಾಣ್ಕೆಯಲ್ಲಿ ಅಪಾರ ಕೊರತೆಯನ್ನು ಹೊಂದಿದ್ದರೆ ಅದು ಶೋಚನೀಯವೆಂದೇ ಹೇಳಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಆರೆಸ್ಸಸ್ ಸಂಘಟನೆಯು ಯುರೋಪಿನ ವಿವಿಧ ಭಾಗಗಳಲ್ಲಿ ಬೆಳೆದ ಫ್ಯಾಸಿಸಂ ಪಕ್ಷಗಳನ್ನು ಹೋಲುತ್ತದೆ.

 6 ಡಿಸೆಂಬರ್, 1948

ಪತ್ರ 6

ಕಳೆದ ಹದಿನೈದು ದಿನಗಳಲ್ಲಿ ಇಂಡಿಯಾದಲ್ಲಿ ಘಟಿಸಿದ ಮಹತ್ವದ ಸಂಗತಿಯೆಂದರೆ ಕೋಮುವಾದದ ರಣರಂಗವು ಪೂರ್ವ ಬಂಗಾಲ ಮತ್ತು ಕಲ್ಕತ್ತ ( ಕೊಲ್ಕತ್ತ)ದಲ್ಲಿ ಮತ್ತೆ ದೊಡ್ಡ ಪ್ರಮಾಣದಲ್ಲಿ ಮರುಕಳಿಸಿರುವುದು. ನನ್ನ ಕಳೆದ ಪತ್ರದಲ್ಲಿ ನಾನು ಪೂರ್ವ ಪಾಕಿಸ್ತಾನದ ಕೆಲವು ಬೆಳವಣಿಗೆಗಳನ್ನು ಕುರಿತಾಗಿ ಬರೆದಿದ್ದು ನಿಮಗೆ ನೆನಪಿರಬಹುದು. ಈ ಬೆಳವಣಿಗಗೆಗಳ ಫಲವಾಗಿ ದಮನಿತ ಸಮುದಾಯಗಳಿಂದ ಬಲು ದೊಡ್ಡ ಪ್ರಮಾಣದಲ್ಲಿ ಜನರು ಇಂಡಿಯಾಗೆ ವಲಸೆ ಬರತೊಡಗಿದರು. ಖುಲಾನ ಜಿಲ್ಲೆಯಲ್ಲಿನ ದೌರ್ಜನ್ಯಗಳು ಮತ್ತು ವಲಸೆ ಬಂದ ಜನರ ದುರವಸ್ಥೆ ಕಲ್ಕತ್ತ ಜನರಲ್ಲಿ ಸ್ವಲ್ಪ ಮಟ್ಟಿಗೆ ಉದ್ರೇಕಕ್ಕೆ ಕಾರಣವಾಯಿತು. ಮುಸ್ಲಿಂ ಮೊಹಲ್ಲಗಳಲ್ಲಿ ಸಣ್ಣ ಪ್ರಮಾಣದ ತೊಂದರೆಗಳು ಆರಂಭಗೊಂಡವು. ನಂತರ ದೊಡ್ಡ ಪ್ರಮಾಣದಲ್ಲಿ ಲೂಟಿ, ಹಲ್ಲೆಗಳು ಪ್ರಾರಂಭಗೊಂಡಿತು. ಸುಮಾರು ಜನರು ಸಾವಿಗೀಡಾದರು. ಈ ಸಾವಿನ ಸುದ್ದಿಯಿಂದಾಗಿ ಈಗಾಗಲೇ ಗಲಭೆಗ್ರಸ್ಥವಾಗಿದ್ದ ಪೂರ್ವ ಪಾಕಿಸ್ತಾನದಲ್ಲಿ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿತು. ಡಾಕಾ ಮತ್ತಿತರ ಪ್ರದೇಶಗಳಲ್ಲಿ ಲೂಟಿ ಮತ್ತು ಹತ್ಯೆಗಳಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳು ಸಾವಿಗೀಡಾದರು. ಈ ಸಂಗತಿಗಳು ಮಾಧ್ಯಮದಲ್ಲಿ ಪ್ರಕಟವಾಗುತ್ತಿರುವುದರಿಂದ ಮತ್ತು ನಿಖರವಾದ ಮಾಹಿತಿ ಲಭ್ಯವಿಲ್ಲದ ಕಾರಣ ಈ ಕ್ಷಣದಲ್ಲಿ ನಾನು ನಿಮಗೆ ಯಾವುದೇ ವಿವರಗಳನ್ನು ಕೊಡಲಾರೆ. ಒಟ್ಟಿನಲ್ಲಿ ಪೂರ್ವ ಪಾಕಿಸ್ತಾನ ಮತ್ತು ಕಲ್ಕತ್ತದಲ್ಲಿ ಪರಿಸ್ಥಿತಿಯು ತುಂಬಾ ಗಂಭೀರಗೊಂಡಿದ್ದು ಮತ್ತಷ್ಟು ಕೆರಳುವ ಸಾಧ್ಯತೆಗಳಿವೆ. ಪೂರ್ವ ಪಾಕಿಸ್ತಾನದಲ್ಲಿನ ಪರಿಸ್ಥಿತಿಯ ಕುರಿತಾಗಿ ನಾನೀಗಲೇ ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ, ಆದರೆ ಕಲ್ಕತ್ತದಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಪರಿಸ್ಥಿತಿಯು ಸಂಪೂರ್ಣ ಹತೋಟಿಯಲ್ಲಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಅಲ್ಲಿನ ಅವರ ಸರ್ಕಾರ ಇಡೀ ಪರಿಸ್ಥಿತಿಯನ್ನು ಅತ್ಯಂತ ನಾಜೂಕಾಗಿ, ಕ್ಷಿಪ್ರಗತಿಯಲ್ಲಿ ಹತೋಟಿಗೆ ತಂದಿದ್ದಾರೆ. ಮೌಲಾನ ಅಬ್ದುಲ್ ಕಲಾಂ ಅಜಾದ್ ಇಂದು ಕಲ್ಕತ್ತಗೆ ಹೊರಡುತ್ತಿದ್ದಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂರು ಮನೆಯನ್ನು ತೊರೆದು ಗುಂಪಾಗಿ ಬೇರೆ ಸ್ಥಳಗಳಲ್ಲಿ ವಾಸಿಸತೊಡಗಿದ್ದು ಕಲ್ಕಕತ್ತದಲ್ಲಿ ಸಧ್ಯದ ಪ್ರಮುಖ ತೊಂದರೆಯಾಗಿದೆ. ಇಲ್ಲಿನ ಕೆಲವು ಮೊಹಲ್ಲಗಳನ್ನು ಸುಟ್ಟು ಹಾಕಲಾಯಿತು. ಆದರೆ ಈ ಬಹುಪಾಲು ಮುಸ್ಲಿಂರು ತಮ್ಮ ಮನೆಗಳಿಗೆ ಮರಳುತ್ತಾರೆ ಎನ್ನುವ ಭರವಸೆ ಇದೆ.

ಪೂರ್ವ ಪಾಕಿಸ್ತಾನದಲ್ಲಿ ಜರುಗಿದ ಘಟನೆಗಳು ಕಲ್ಕತ್ತದಲ್ಲಿ ಪ್ರತಿಧ್ವನಿಸತೊಡಗಿರುವುದು ಕಳವಳಕಾರಿಯಾದದ್ದು. ಆದರೆ ಇದಕ್ಕಿಂತಲೂ ಭೀಕರವಾಗಿರುತ್ತಿತ್ತು. ಆದರೆ ಹಾಗಾಲಿಲ್ಲ ಎನ್ನುವುದೇ ಸಧ್ಯಕ್ಕೆ ಕೆಲಮಟ್ಟಿಗೆ ಮನಶ್ಯಾಂತಿ ಕೊಡುತ್ತದೆ. ಆದರೂ ಪರಿಸ್ಥಿತಿಯು ಇನ್ನೂ ಅಸಹಜವಾಗಿ ನಿಯಂತ್ರಣದಲ್ಲಿ ಇಲ್ಲದಿರುವುದರಿಂದ ಮುಂದಿನ ಪರಿಣಾಮಗಳೂ ಸಹ ಅನಿಶ್ಚತೆಯಿಂದಿವೆ. ನಾವು ಜ್ವಾಲಾಮುಖಿಯ ಮೇಲೆ ಕುಳಿತಂತೆ ಭಾಸವಾಗುತ್ತಿದೆ. ಸಣ್ಣ ಕಿಡಿ ಇಡೀ ಜ್ವಾಲಾಮುಖಿಯನ್ನು ಸ್ಪೋಟಿಸಬಹುದು. ಆದರೆ ಜ್ವಾಲಾಮುಖಿ ಹಾಗೇ ಇದೆ ಮತ್ತು ನಾವು ಅದರ ಕುದಿಯುವಿಕೆಯ ಗಡಗಡ ಶಬ್ದವನ್ನು ಅಲಿಸಬಹುದು. ಪೂರ್ವ ಪಾಕಿಸ್ತಾನದಲ್ಲಿ ಜರುಗಿದ ಭಯಂಕರ ಘಟನೆಗಳ ಕುರಿತಾದ ಸುದ್ದಿಗಳನ್ನು ಕೇಳಿ ನಮ್ಮ ಜನರು ಉದ್ರೇಕಗೊಂಡಿರುವುದು ಸಹಜವೇನೋ. ಇದರ ಫಲವಾಗಿ ಇಲ್ಲಿ ಜರಗುವ ಪ್ರತೀಕಾರದ ಘಟನೆಗಳ ವಿವರಗಳನ್ನು ಕೇಳಿ ಆಲ್ಲಿಯ ಜನ ಉದ್ರೇಕಗೊಳ್ಳತೊಡಗುತ್ತಾರೆ.ಈ ಬಗೆಯ ನಿರಂತರವಾದ ಕ್ರಿಯೆ ಪ್ರತಿಕ್ರಿಯೆ ಒಂದು ವಿಷವರ್ತುಲ.ಇದರಿಂದ ನಾವು ಹೊಬರುವುದು ಹೇಗೆ?

ಬಹಳ ವರ್ಷಗಳ ಹಿಂದೆಯೇ ನಾವು ಈ ದ್ವೇಷದ, ಹಿಂಸಾಚಾರದ ವಿಷವರ್ತುಲಕ್ಕೆ ಸಿಲುಕಿಕೊಂಡೆವು. ಮುಸ್ಲಿಂ ಲೀಗ್ ಪಕ್ಷವು ಎರಡು ದೇಶದ ಸಿದ್ಧಾಂತವನ್ನು ಅನೇಕ ವರ್ಷಗಳಿಂದ ಬೋಧಿಸುತ್ತಲೇ ಬಂದಿತ್ತು. ಇದು ದೇಶ ವಿಭಜನೆಗೆ ಕಾರಣವಾಗಿ ಆ ಮೂಲಕ ಭಯಾನಕ ಘಟನೆಗಳು ಜರುಗಿದವು. ಆದರೂ ವಿಭಜನೆಯ ಯಾತನೆ, ನೋವು, ಆಕ್ರಂದನ, ಗಾಯಗಳು ಕಡೆಗೆ ಒಂದು ದಿನ ನಮ್ಮನ್ನು ವಿಷವರ್ತುಲದಿಂದ ಹೊರಬರಲು ಸಹಾಯ ಮಾಡುತ್ತವೆ ಎಂದು ನಂಬಿದ್ದೆವು. ಆದರೆ ಸೆಪ್ಟೆಂಬರ್ 1947ರಲ್ಲಿ ಪಾಕಿಸ್ತಾನ ಮತ್ತು ಉತ್ತರ ಭಾರತದಲ್ಲಿ ಭಯಾನಕ ಘಟನೆಗಳು ಜರುಗಿದವು. ಇದರ ಫಲವಾಗಿ ನಾವು ಭಾರಿ ಬೆಲೆ ತೆರಬೇಕಾಯ್ತು. ಆಗ ಗಾಂಧೀಜಿಯವರ ಉಪಸ್ಥಿತಿ ಕಲ್ಕತ್ತ ಮತ್ತು ಉತ್ತರ ಭಾರತವನ್ನು ರಕ್ಷಿಸಿದ್ದೇನೋ ನಿಜ. ಆದರ ಗಾಯವು ತುಂಬಾ ಆಳವಾಗಿತ್ತು ಮತ್ತು ಹಿಂಸೆಯು ನಿರಂತರವಾಗಿದ್ದರಿಂದ ಆಳವಾದ ಗಾಯವು ಮಾಗುವ ಸಾಧ್ಯತೆ ತುಂಬಾ ಕಡಿಮೆ ಇತ್ತು. ನಾವು ಮುಂದೆಯೂ ಭಾರಿ ಬೆಲೆ ತೆರುತ್ತಲೇ ಇರಬೇಕಾಗುತ್ತದೆ ಮತ್ತು ಈ ಹಿಂಸೆ ವರ್ತುಲ ಸರಣಿ ಎಂದು ಮುಗಿಯುತ್ತದೆ ಎಂದು ನಮಗೂ ಸ್ಪಷ್ಟತೆ ಇಲ್ಲ.

ಹಿಂದೂ ಮತ್ತು ಸಿಖ್ ಧರ್ಮದ ಕೆಲವು ನೇತಾರರು ದೇಶವನ್ನು ಬಲವಂತವಾಗಿ ಮತ್ತೆ ಒಂದುಗೂಡಿಸುತ್ತೇವೆಂದು ವೀರಾವೇಶದಿಂದ ಭಾಷಣ ಮಾಡುತ್ತಿದ್ದಾರೆ. ಮತ್ತೆ ಕೆಲವರು ಪಾಕಿಸ್ತಾನದ ವಿರುದ್ದ ಭಾರತ ಸರ್ಕಾರವು ತುಂಬಾ ದುರ್ಬಲವಾದ ಪಾಲಿಸಿಗಳನ್ನು ರೂಪಿಸಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ ನಾವು ಈಗ ಅನುಸರಿಸುತ್ತಿರುವ ಪಾಲಿಸಿಯನ್ನು ಹೊರತುಪಡಿಸಿ ಮತ್ತೇನನ್ನು ರೂಪಸಿಬೇಕೆಂದು ನಮಗೂ ಗೋಚರಿಸುತ್ತಿಲ್ಲ ಯುದ್ಧದ ಹೊರತಾಗಿ. ಆದರೆ ಯುದ್ಧವನ್ನು ಘೋಷಿಸಿದರೆ ಅದರ ಪರಿಣಾಮಗಳ ಕುರಿತು ಅನೇಕರಿಗೆ ಗೊತ್ತಿರುವಂತಿಲ್ಲ. ಈ ಆಧುನಿಕ ಯುದ್ಧವು ದಾರುಣವಾದ ವಿಷಯ. ಇದು ಶುರವಾದರೆ ಮುಗಿಯುವುದಿಲ್ಲ ಮತ್ತು ಸಂಬಂಧಪಟ್ಟ ಎಲ್ಲರನ್ನೂ ನಾಶಪಡಿಸುತ್ತದೆ. ಅಂದರೆ ಮತ್ತಷ್ಟು ನೇರವಾಗಿ ಹೇಳಬೇಕೆಂದರೆ ಯಾವುದೇ ಸಂದರ್ಭದಲ್ಲಿ ವಿದೇಶಿ ನುಸುಳುವಿಕೆಯಿಂದ ತುಂಬಾ ಕಾಲದವರೆಗು ದೇಶದ ಅಭಿವೃದ್ಧಿಯು ಸ್ಥಗಿತಗೊಳ್ಳುತ್ತದೆ. ಕೇವಲ ಸೇನೆಯ ದೃಷ್ಟಿಕೋನದಿಂದ ನೊಡಿದಾಗ ನಾನು ಯುದ್ಧದಿಂದ ಭಯ ಹೊಂದಲು ಸಾಧ್ಯವೇ ಇಲ್ಲ. ಆದರೆ ಇಡೀ ದೇಶದ ಹಿತಾಸಕ್ತಿಯ ನೆಲೆಯಿಂದ ಅವಲೋಕಿಸಿದಾಗ ನಾವು ಸಾಧ್ಯವಿದ್ದಷ್ಟು ಈ ಯುದ್ಧವನ್ನು ತಡೆಗಟ್ಟುವುದು ಅತ್ಯಂತ ವಿವೇಕಯುತವಾದ ನಿರ್ಧಾರ. ಮತ್ತೊಂದು ಮುಖ್ಯ ವಿಷಯವೇನೆಂದರೆ ದೇಶವೊಂದರ ಪ್ರತೀಕಾರದ ಘಟನೆಗಳು ಪರಿಸ್ಥಿತಿಯನ್ನು ಮತ್ತಷ್ಟು ಹಾಳುಗೆಡವುತ್ತವೆ ಮತ್ತು ಉನ್ಮಾದಕ್ಕೆ ಒಳಗಾಗುವ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರಿಗೆ ಅಪಾಯ ಕಾದಿರುತ್ತದೆ. ಯಾವುದೇ ಬಗೆಯಲ್ಲಿ ತಪ್ಪು ನೀತಿಗಳನ್ನು ಅಳವಡಿಸಿಕೊಳ್ಳುವುದನ್ನು ನಾವು ಕೈಬಿಡಬೇಕು ಏಕೆಂದರೆ ಮತ್ತೊಂದು ಭಾಗದಲ್ಲಿ ಪ್ರತೀಕಾರಕ್ಕಾಗಿ ಫೆನಟಿಸಂ ಶಕ್ತಿಗಳು ಕಾಯುತ್ತಿರುತ್ತವೆ.

 16 ಫೆಬ್ರವರಿ, 1950

ಪತ್ರ7

ಇಂಡಿಯಾ ದೇಶವು ಅಭಿವೃದ್ಧಿ ಹೊಂದಬೇಕಾದರೆ ಮುಸ್ಲಿಂರನ್ನು ಒಳಗೊಂಡಂತೆ ಎಲ್ಲಾ ಅಲ್ಪಸಂಖ್ಯಾತರನ್ನು ನಮ್ಮೊಳಗೆ ಒಳಗೊಳ್ಳಬೇಕು. ಆದರೆ ಹಿಂದೂ ಮಹಾಸಭಾ ಮತ್ತು ಇನ್ನಿತರ ಕೋಮುಶಕ್ತಿಗಳ ದೃಷ್ಟಿಕೋನ ಇದಕ್ಕೆ ವಿರುದ್ಧವಾಗಿದೆ. ಇವರೆಲ್ಲ ಇದನ್ನು ವಿರೋಧಿಸಿದರು. ಈ ಹಿಂದೂ ಮಹಾಸಭಾದ ಸಿದ್ಧಾಂತಗಳು ಇಂಡಿಯಾ ದೇಶಕ್ಕೆ ಮಾರಕವಾಗುತ್ತವೆ ಎಂದು ನನಗೆ ಖಚಿತವಾಗಿದೆ. ವಿಭಜನೆಯನ್ನು ಕೊನೆಗೊಳಿಸುತ್ತೇವೆ ಎಂದು ಹೇಳುವ ಅವರ ಮಾತುಗಳು ತುಂಬಾ ಮೂರ್ಖತನದ್ದು. ನಾವು ಆ ರೀತಿಯಾಗಿ ಮಾಡಲು ಸಾಧ್ಯವಿಲ್ಲ ಮತ್ತು ಆ ರೀತಿಯಾಗಿ ಮಾಡಲೂ ಬಾರದು. ಒಂದು ವಿಭಜನೆಯು ಕೊನೆಗೊಂಡಿದ್ದರೆ ಎರಡೂ ಬಣಗಳಲ್ಲಿನ ಪರಸ್ಪರ ದ್ವೇಷ ಮತ್ತು ಕ್ಷುಲ್ಲಕ ಸಂಗತಿಗಳು ಹಾಗೆಯೇ ಉಳಿದುಕೊಂಡು ಮತ್ತಷ್ಟು ದುರಂತವನ್ನು ಹುಟ್ಟಿಹಾಕುತ್ತಿತ್ತು. ಹೀಗಾಗಿ ಅಂಖಂಡ ಭಾರತದ ಪರಿಕಲ್ಪನೆಯನ್ನು ನಾವು ತಿರಸ್ಕರಿಸಬೇಕು

ಮುಸ್ಲಿಂರು ಈ ದೇಶಕ್ಕೆ ಸದಾ ನಿಷ್ಠೆಯನ್ನು ವ್ಯಕ್ತಪಡಿಸುತ್ತಿರಬೇಕು ಮತ್ತು ಅವರ ಹೊಂದಿರುವರು ಎನ್ನಲಾಗುವ ಪಾಕಿಸ್ತಾನ ಪರmuslims460ನಿಲುವುಗಳನ್ನು ಖಂಡಿಸುತ್ತಿರಬೇಕು ಎನ್ನುವ ಈ ಎರಡು ನೀತಿಗಳು ಇಂದು ನಮ್ಮಲ್ಲಿ ಸಾಮಾನ್ಯವಾಗಿದೆ. ಈ ಮಾದರಿಯ ಧೋರಣೆಗಳು ಸಂಪೂರ್ಣವಾಗಿ ತಪ್ಪು ಮತ್ತು ಈ ಧೋರಣೆಗಳು ಖಂಡನೆಗೆ ಅರ್ಹವಾಗಿವೆ. ಮುಸ್ಲಿಂರಿಗೆ ಸದಾ ಈ ದೇಶಕ್ಕೆ ನಿಷ್ಠೆಯನ್ನು ಪ್ರದರ್ಶಿಸಿ ಎಂದು ಒತ್ತಾಯಿಸುವುದನ್ನು ನಾನು ತಪ್ಪೆಂದು ವಾದಿಸುತ್ತೇನೆ. ಭಯದಿಂದ ನಿಷ್ಠೆಯನ್ನು ಉತ್ಪಾದಿಸಲಾಗುವುದಿಲ್ಲ. ಇದು ಸಹಜ ಬೆಳವಣಿಗೆಯಾಗಿ ರೂಪುಗೊಳ್ಳಬೇಕು. ಈ ನಿಷ್ಠೆಯ ಕುರಿತಾದ ಭಾವುಕತೆ ಬೆಳೆಯುವಂತಹ ವಾತಾವರಣವನ್ನು ನಾವು ಮೊದಲು ರೂಪಿಸಬೇಕು. ಅಲ್ಪಸಂಖ್ಯಾತರ ವಿರುದ್ಧ ಟೀಕೆಗಳು ಮತ್ತು ಹುಸಿ ಆರೋಪಗಳಿಂದ ಯಾವ ಪ್ರಯೋಜನವೂ ಇಲ್ಲ. ನಿರಂತರವಾಗಿ ಬದಲಾಗುತ್ತಿರುವ ವಾತಾವರಣದಿಂದಾಗಿ ನಿಖರವಾದ ದೂರದೃಷ್ಟಿಯ ಯೋಜನೆಗಳನ್ನು ಹಾಕಿಕೊಳ್ಳುವುದು ಕಷ್ಟಕರವಾಗುತ್ತದೆ. ಆದರೆ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನ ರಾಜಕೀಯ ದೃಷ್ಟಿಕೋನದಿಂದ ಹುಟ್ಟಿಕೊಂಡ ಭೇದವನ್ನು ತೆಗೆದುಹಾಕಿ ಅಲ್ಪಸಂಖ್ಯಾತರಿಗೆ ಈ ದೇಶವು ಸುರಕ್ಷವಾದ ಸ್ಥಳ ಎನ್ನುವ ವಾತಾವರಣವನ್ನು ನಿರ್ಮಿಸುವುದು ಸಧ್ಯಕ್ಕೆ ನಮ್ಮ ಮುಂದಿರುವ ದೂರದೃಷ್ಟಿಯ ಚಿಂತನೆ. ಇದು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಇದೊಂದೇ ನಮ್ಮ ಮುಂದಿರುವ ಗುರಿ. ಈ ಕ್ಷಣಕ್ಕೆ ಮಾಡಬಹುದಾದ ತುರ್ತಾದ ಕೆಲಸವೆಂದರೆ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ತಮ್ಮ ರಾಜ್ಯವು ಸುರಕ್ಷಿತವೆನ್ನುವಂತಹ ನಂಬಿಕೆಯನ್ನು ಪ್ರತಿಯೊಂದು ರಾಜ್ಯಗಳು ಬೆಳೆಸಬೇಕಾಗಿದೆ. ಇಂದಿನ ಸಂದರ್ಭದಲ್ಲಿ ಸಂತ್ರಸ್ಥರಿಗೆ, ಶೋಷಿತರಿಗೆ ಪರಿಹಾರವನ್ನು ಕೊಡಬೇಕು ಮನೆಗಳನ್ನು ತೊರೆದವರಿಗೆ ಪುನರ್ವಸತಿ ಕಲ್ಪಿಸಕೊಡಬೇಕು. ವಲಸೆ ಬಂದವರಿಗೆ ಮರಳಿ ಅವರ ಧ್ವಂಸಗೊಂಡ ಮನೆಗಳನ್ನು ಕಟ್ಟಿಕೊಡಬೇಕು. ಧ್ವಂಸಗೊಂಡ ಮನೆಗಳ ಬದಲಿಗೆ ಸರ್ಕಾರಗಳು ಹೊಸ ಮನೆಗಳನ್ನು ಕಟ್ಟಿಕೊಡಬೇಕು. ಮುಖ್ಯವಾಗಿ ತಪ್ಪಿತಸ್ಥರು ಶಿಕ್ಷೆಗೆ ಒಳಗಾಗಬೇಕು ಮತ್ತು ಲೂಟಿ, ಹಿಂಸಾಚಾರಕ್ಕೆ ನಾನು ಬೆಲೆ ತೆರಬೇಕಾಗಿಲ್ಲ ಎನ್ನುವ ಧೋರಣೆಯನ್ನು ಸುಳ್ಳು ಮಾಡಬೇಕು. ಅಪಹರಿಸಲ್ಪಟ್ಟ ಮಹಿಳೆಯರ ಕುರಿತಾಗಿ ವಿಶೇಷ ಕಾಳಜಿ ವಹಿಸಬೇಕು. ಇನ್ನೂ ಮುಂದುವರೆದು ಅಲ್ಪಸಂಖ್ಯಾತರಿಗೆ ಸರ್ಕಾರಗಳಲ್ಲಿ ಮತ್ತು ಇನ್ನಿತರ ಇಲಾಖೆಗಳಲ್ಲಿ ಪ್ರಾತಿನಿಧ್ಯವನ್ನು ಕೊಡುವುದರ ಮೂಲಕ ಅವರಲ್ಲಿ ಭದ್ರತೆಯನ್ನು ದೊರಕಿಸಿಕೊಡಬೇಕು

1 ಮಾರ್ಚ, 1950

ಪತ್ರ 8

ಕಳೆದ ಮೂರು ವಾರಗಳಿಂದ ಪೂರ್ವ ಬಂಗಾಲ ಅಥವಾ ಪಶ್ಚಿಮ ಬಂಗಾಲದಲ್ಲಿ ಅಂತಹ ಪ್ರಮುಖ ಘಟನೆಗಳು ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಮುಂದೆ ಏನಾಗಬಹುದು ಅಥವಾ ಪೂರ್ವ ಬಂಗಾಲದ ಕುಗ್ರಾಮವೊಂದರಲ್ಲಿ ನಡೆಯುತ್ತಿರುವ ಘಟನೆಗಳ ಕುರಿತಾಗಿ ನಮಗೆ ನಿಖರವಾದ ಮಾಹಿತಿಗಳಿರುವುದಿಲ್ಲ. ನನಗೆ ವಿವಿಧ ಅಧಿಕೃತ ಮೂಲಗಳಿಂದ ದೊರಕಿದ ಸುದ್ದಿಗಳನ್ನು ಮಾತ್ರ ಹೇಳಬಲ್ಲೆ. ಇದರ ಆಧಾರದ ಮೇಲೆ ಬಂಗಾಳ ಪ್ರಾಂತಗಳಲ್ಲಿ ಗಲಭೆಗಳು ನಡೆದಿಲ್ಲ ಎಂದೇ ಹೇಳಬೇಕಾಗುತ್ತದೆ.

ಪೂರ್ವ ಬಂಗಾಲ ಮತ್ತು ಪಶ್ಚಿಮ ಬಂಗಾಲ ನಡುವಿನ ಪ್ರಯಾಣದ ವ್ಯವಸ್ಥೆ ಗಣನೀಯವಾಗಿ ಸುಧಾರಿಸಿದೆ. ಇದರ ಪರಿಣಾಮವಾಗಿ ಪೂರ್ವ ಬಂಗಾಲದಿಂದ ಪಶ್ಚಿಮ ಬಂಗಾಲಕ್ಕೆ ಹಿಂದೂಗಳ ವಲಸೆಯ ಪ್ರಮಾಣ ಹೆಚ್ಚುತ್ತಿದೆ. ಕೆಲ ಸಂಖ್ಯೆಯಷ್ಟು ಮುಸ್ಲಿಂರು ಕಲ್ಕತ್ತವನ್ನು ತೊರೆದು ಪಶ್ಚಿಮ ಬಂಗಾಲದಿಂದ ಪೂರ್ವ ಬಂಗಾಲಕ್ಕೆ, ಉತ್ತರ ಪ್ರದೇಶ, ಬಿಹಾರ್ ಕಡೆಗೆ ವಲಸೆ ಹೋಗುತ್ತಿದ್ದಾರೆ. ಬೇರೇನು ಸಂಭವಿಸದಿದ್ದರೆ ಈ ಒಳಹರಿವು ಮತ್ತು ಹೊರಹರಿವು ಇದೇ ರೀತಿ ನಿರಂತರವಾಗಿರುತ್ತದೆ. ಪೂರ್ವ ಬಂಗಾಲದಲ್ಲಿ ಹಿಂದೂ ವ್ಯಕ್ತಿ ಅಭದ್ರತೆಯಿಂದ ಆತಂಕದಲ್ಲಿದ್ದಾನೆ ಮತ್ತು ಅಲ್ಲಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಪೂರ್ವ ಬಂಗಾಲದಲ್ಲಿ ಹಿಂದೂಗಳು ಸುಮಾರು 12 ಮಿಲಿಯನ್ನಷ್ಟಿದ್ದಾರೆ ಎನ್ನುವ ಸಂಗತಿಯನ್ನು ಗಮನಿಸಿದಾಗ ಅಲ್ಲಿನ ಸಮಸ್ಯೆಯ ತೀವ್ರತೆ ನಮಗೆ ಅರಿವಾಗುತ್ತದೆ. ಆದರೆ ಪ್ರತಿ ತಿಂಗಳು, ಪ್ರತಿ ವರ್ಷ ಈ ದೊಡ್ಡ ಮಟ್ಟದ ಜನಸಂಖ್ಯೆಯ ಜನರು ತಮ್ಮ ನೆಲೆಗಳಿಂದ ಕಿತ್ತು ಕೊಂಡು ಬೇರೆ ರಾಜ್ಯಗಳಿಗೆ ಬರುತ್ತಿರುವುದು ಮತ್ತು ಅವರೆಲ್ಲ ಹೊರ ರಾಜ್ಯಗಳಲ್ಲಿ ನಿರಾಶ್ರಿತರಾಗಿ ಬದುಕುವುದು ಈ ಪ್ರಕ್ರಿಯೆಯನ್ನು ಬಹಳ ದಿನಗಳವರೆಗೆ ಸಹಿಸಲು ಸಾಧ್ಯವಿಲ್ಲ. ಈ ಬಗೆಯ ನಿರಂತರ ವಲಸೆ ಎರಡೂ ರಾಜ್ಯಗಳಲ್ಲಿಯೂ ಸಾಮಾಜಿಕ ಸಂರಚನೆಯನ್ನು ತೊಂದರೆಗೊಳಪಡಿಸುತ್ತದೆ

ಅಲ್ಪಸಂಖ್ಯಾತರಿಗೆ ಆಯಾ ರಾಜ್ಯಗಳಲ್ಲಿ ಸಹನೀಯವಾಗಿ ಬದಕುವಂತಹ ವಾತಾವರಣವನ್ನು ನಿರ್ಮಿಸಬೇಕು ಮತ್ತು ಅವರ ಸುರಕ್ಷತೆ ಮೊದಲ ಅದ್ಯತೆ ಆಗಿರಬೇಕು.ಈ ಮೂಲಭೂತ ಅಗತ್ಯಗಳನ್ನು ಸಾಧ್ಯವಾಗಿಸಿದರೆ ವಲಸೆಯ ಪ್ರಮಾಣ ಸಂಭವನೀಯವಾಗಿ ತಗ್ಗುತ್ತದೆ. ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಅಲ್ಲಿಂದ ಓಡಿಸಲಾಗುತ್ತಿದೆ. ಇದಕ್ಕೆ ಪರಿಹಾರವೇನು? ಈ ವಲಸೆಯನ್ನು ತಡೆಗಟ್ಟುವುದು ಒಂದು ಜವಬ್ದಾರಿಯಾದರೆ ಈ ಸಮಸ್ಯೆಗೆ ಮೂಲವಾದ ಸಮಸ್ಯೆ ಯಾವುದು? ನನ್ನ ಪ್ರಕಾರ ಕೋಮುವಾದಿ ಮತ್ತು ಸಂಕುಚಿತ ಮನಸ್ಥಿತಿಯಿಂದ ಪಾಕಿಸ್ತಾನ ಎನ್ನುವ ಇಸ್ಲಾಂ ರಾಷ್ಟ್ರದ ಪರಿಕಲ್ಪನೆ ಹುಟ್ಟಿಕೊಂಡಿತು. ಇದೇ ಮನಸ್ಥಿತಿ ಮುಂದುವರೆದರೆ ಇದರ ಪರಿಣಾಮಗಳೂ ಮುಂದುವರೆಯುತ್ತವೆ

ಈ ಮೂಲಭೂತ ಸಮಸ್ಯೆಯ ಕೆಲವು ವಿಷಯಗಳನ್ನು ಮಾತ್ರ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಾನು ಯಾವುದೇ ನಿರ್ಣಯಗಳನ್ನು ನಿಮ್ಮ ಮುಂದಿಡುವುದಿಲ್ಲ ಏಕೆಂದರೆ ಆ ನಿರ್ಣಯಗಳನ್ನು ಜಾರಿಗೊಳಿಸಲು ಕಷ್ಟಕರವಾಗಬಾರದು.

19 ಮಾರ್ಚ, 1950

ಪತ್ರ 9

ಇತ್ತೀಚಿನ ದಿನಗಳಲ್ಲಿ ನನ್ನೊಳಗೆ ಬೆಳೆಯುತ್ತಿರುವ ಒಂದು ಬಗೆಯ ಆತಂಕದ ಗ್ರಹಿಕೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯಾದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಮ್ಮ ಸಂವಿಧಾನವು ಸೂಕ್ತವಾಗಿದೆ ಮತ್ತು ನ್ಯಾಯಬದ್ಧವಾಗಿದೆ. ಇದನ್ನು ಬದಲಿಸುವ ಅಗತ್ಯವೇನು ಇಲ್ಲ.

ಸೇವಾ ವಲಯಗಳಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ತುಂಬಾ ಕಡಿಮೆ ಇದೆ. ಕುಂಠಿತಗೊಳ್ಳುತ್ತಿದೆ. ಕೇಂದ್ರ ಸರ್ಕಾರದ ಇಲಾಖೆಗಳ ಅಂಕಿಸಂಖ್ಯೆಯನ್ನು ಪರಿಶೀಲಿಸಿದಾಗ ಅಲ್ಲಿನ ಒಟ್ಟಾರೆ ಪರಿಸ್ಥಿತಿಯು ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಂರಿಗೆ ತುಂಬಾ ಅನಾನುಕೂಲಕರವಾಗಿದೆ. ಇದು ನನ್ನಲ್ಲಿ ಖೇದವನ್ನುಂಟು ಮಾಡಿದೆ.

ನಮ್ಮ ರಕ್ಷಣಾ ಇಲಾಖೆಯಲ್ಲಿ ಮುಸ್ಲಿಂರು ಕಂಡು ಬರುವುದೇ ಇಲ್ಲ. ಡೆಲ್ಲಿ ಸೆಕ್ರಟೇರಿಯೇಟ್ ನಲ್ಲಿ ಮುಸ್ಲಿಂರು ತುಂಬಾ ವಿರಳ ಸಂಖ್ಯೆಯಲ್ಲಿದ್ದಾರೆ. ಬಹುಶ ರಾಜ್ಯಗಳಲ್ಲಿ ಪರಿಸ್ಥಿತಿ ಕೊಂಚ ಉತ್ತಮವಾಗಿರಬಹುದಾರೂ ಅಂತಹ ಗಮನೀಯ ಪ್ರಮಾಣದಲ್ಲಿ ಇರಲಿಕ್ಕಿಲ್ಲ. ಆದರೆ ಇಂದಿನ ಈ ವಸ್ತುಸ್ಥಿತಿಯನ್ನು ಉತ್ತಮಪಡಿಸುವ ಪ್ರಯತ್ನಗಳು ಕಂಡು ಬರದಿರುವುದು ನನ್ನಲ್ಲಿ ದುಗುಡವನ್ನುಂಟು ಮಾಡುತ್ತಿದೆ. ನಾವು ಕೂಡಲೆ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಇನ್ನಷ್ಟು ಬಿಗಡಾಯಿಸುತ್ತದೆ. ನಾವು ನೇಮಕಾತಿ ಸಂದರ್ಭದಲ್ಲಿ ಧರ್ಮವನ್ನು ಗಣನೆಗೆ ತೆಗೆದುಕೊಳ್ಳಬಾರದು ಮತ್ತು ಅದಕ್ಕೆ ಗಮನ ಕೊಡಬಾರದು ಎನ್ನುವ ನೀತಿ ಮೇಲ್ನೋಟಕ್ಕೆ ಸರಿಯಾಗಿಯೇ ಕಾಣುತ್ತದೆ. ನಾನು ಕೋಮುವಾದ ಮತ್ತು ಅದರ ಕ್ರಿಯೆಗಳನ್ನು ತಿರಸ್ಕರಿಸುತ್ತೇನೆ. ಇಂಡಿಯಾದಲ್ಲಿ ಇದು ಒಂದು ಅಪಾಯಕಾರಿ ಪ್ರವೃತ್ತಿ ಮತ್ತು ಇದನ್ನು ಬೇರು ಸಮೇತ ಕಿತ್ತು ಹಾಕಬೇಕು. ಇದೇ ಸಂದರ್ಭದಲ್ಲಿ ವಿವಿಧ ಸಮುದಾಯಗಳನ್ನುಳ್ಳ, ವೈವಿಧ್ಯ ಸಂಸ್ಕೃತಿಗಳ ಬಹುರೂಪಿ ಸಮಾಜವಾದ ಇಂಡಿಯಾದಲ್ಲಿ ನಾವು ಸಮತೋಲನವನ್ನು ಕಾಪಾಡಿಕೊಳ್ಳಬೇಕು ಮತ್ತು ಎಲ್ಲಾ ಧರ್ಮದವರಿಗೂ ಸಮಾನವಾದ ಅವಕಾಶಗಳು ದೊರಕಬೇಕು. ಇಲ್ಲಿ ಕೊಂಚ ಏರುಪೇರಾದರೂ ಅದರಿಂದುಂಟಾಗುವ ಅಸಮತೋಲನದಿಂದ ಮತ್ತಷ್ಟು ಹತಾಶೆ, ಅಸಮಧಾನಗಳು ಬಹಿರಂಗಗೊಳ್ಳುತ್ತವೆ ಮತ್ತು ಇಂಡಿಯಾದಂತಹ ಗಣರಾಜ್ಯ ವ್ಯವಸ್ಥೆಯಲ್ಲಿ ಇದು ಅಪಾಯಕಾರಿ ಬೆಳವಣಿಗೆ ನಾವು ಈ ಅನ್ಯಾಯವನ್ನು ಸರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕನಿಷ್ಠ ನಮ್ಮ ಸೇವಾ ಕ್ಷೇತ್ರಗಳ ಮೂಲಕ ಪ್ರಾರಂಬಿಸಬಹುದು. ಈ ಸೇವಾವಲಯಗಳಲ್ಲಿ ಎಲ್ಲಾ ಧರ್ಮ ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸಿಕೊಡುವುದರ ಮೂಲಕ ಪ್ರತಿಯೊಂದು ಸಮುದಾಯ ಮತ್ತು ವ್ಯಕ್ತಿಗಳ ನಡುವೆ ಸಹೋದರತ್ವವನ್ನು, ಪಾಲುದಾರಿಕೆಯನ್ನು ಬೆಳೆಸಬೇಕಾಗಿದೆ. ವೈಚಾರಿಕ ಮನೋವೃತ್ತಿಯನ್ನು ರೂಪಿಸಬೇಕಾಗಿದೆ. ಇದು ಬೋಧಿಸಿದಷ್ಟು ಸುಲಭವಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಎಲ್ಲವೂ ಸಾಧ್ಯವಿದೆ. ಪ್ರತಿಯೊಬ್ಬರನ್ನು ನಮ್ಮ ಚಿಂತನೆಯೊಳಗೆ, ನಮ್ಮ ಆದ್ಯತೆಗಳೊಂದಿಗೆ ಕೂಡಿಕೊಳ್ಳುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ನಾನು ಮುಸ್ಲಿಂರ ಕುರಿತು ಸಂಭೋದಿಸಿದರೂ ಇದೇ ಚಿಂತನೆಗಳು ಕ್ರಿಶ್ಚಿಯನ್ನರು ಮತ್ತು ಇತರೇ ಅಲ್ಪಸಂಖ್ಯಾತರಿಗೂ ಅನ್ವಯವಾಗುತ್ತದೆ. ಅದರೆ ಅನೇಕ ಕ್ರಿಶ್ಚಿಯನ್ನರಿಗೆ ಇಂಡಿಯಾದಲ್ಲಿ ತಮ್ಮ ಸ್ಥಾನಮಾನಗಳ ಕುರಿತಾಗಿ ಅತಂತ್ರ ಭಾವನೆ ಇದೆ. ಇಂಡಿಯಾ ದೇಶವು ವಿಭಿನ್ನ ಧರ್ಮ, ಭಾಷೆ, ಜೀವನ ಕ್ರಮಗಳನ್ನು ಒಳಗೊಂಡಂತಹ ಬಹುರೂಪಿ ಸಂಸ್ಕೃತಿಯ ದೇಶ. ಇಲ್ಲಿ ಬಹುತ್ವವೇ ನಮ್ಮ ಅಸ್ಮಿತೆ. ಇಂತಹ ವೈವಿಧ್ಯಮಯ ದೇಶದಲ್ಲಿ ಬಹುಸಂಖ್ಯಾತರು ತಮ್ಮ ಧಾರ್ಮಿಕ ಭಾವನೆಗಳನ್ನು ಬೇರೆ ಧರ್ಮದವರ ಮೇಲೆ ಹೇರಬಾರದು. ಅದು ನಮ್ಮ ದೇಶದೊಳಗೆ ಘರ್ಷಣೆಯನ್ನು ಹುಟ್ಟು ಹಾಕುತ್ತದೆ. ಐಕ್ಯತೆ ನಮ್ಮ ಮೂಲ ಮಂತ್ರವಾಗಬೇಕಾಗಿದೆ. ಜನರ ಮನಸ್ಸನ್ನು ಬೆಸೆಯುವ ಕಾರ್ಯಕ್ರಮ ರೂಪಿಸಬೇಕು

ಇಂಡಿಯಾದಲ್ಲಿ ರಾಷ್ಟ್ರೀಯತೆಯ ಮನೋಧರ್ಮ ವಿಸ್ತಾರಗೊಳ್ಳುತ್ತಿದೆ. ಆದರೆ ದೇಶವು ವಿದೇಶಿಯರ ಆಳ್ವಿಕೆಯಲ್ಲಿದ್ದಾಗ ಜನರನ್ನುConstitution_Preamble ಒಗ್ಗೂಡಿಸಲು ಈ ಮಾದರಿಯ ರಾಷ್ಟ್ರೀಯತೆಯ ಅವಶ್ಯಕತೆ ಇದೆ. ಆದರೆ ಸ್ವತಂತ್ರ ರಾಷ್ಟ್ರವಾದ ನಂತರ ಒಂದು ಕಾಲಘಟ್ಟದವರೆಗೆ ಮಾತ್ರ ಇದರ ಪ್ರಸ್ತುತತೆಯನ್ನು ಮಾನ್ಯತೆ ಮಾಡಬಹುದು. ನಂತರ ಇದರ ಪ್ರಭಾವ ಕ್ರಮೇಣ ಕ್ಷಿಣಿಸುತ್ತಾ ಹೋಗುತ್ತದೆ. ಸ್ವತಂತ್ರ ದೇಶದಲ್ಲಿ ಬಹುಸಂಖ್ಯಾತರು ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಾ ಇಡೀ ದೇಶವೇ ತಮ್ಮದೆಂದು ಪ್ರಚಾರ ಮಾಡಲು ಆರಂಬಿಸುತ್ತಾರೆ. ತಮ್ಮ ಈ ಪ್ರಯತ್ನದಲ್ಲಿ ಅಲ್ಪಸಂಖ್ಯಾತರನ್ನು ತಮ್ಮ ಧರ್ಮದೊಳಗೆ ಲೀನವಾಗಿಸಿಕೊಳ್ಳಲು ಹವಣಿಸುತ್ತಾರೆ ಆದರೆ ಇದರಿಂದಾಗಿ ನಮ್ಮೊಳಗಿನ ಘರ್ಷಣೆಯು ಮತ್ತಷ್ಟು ಬಲಗೊಳ್ಳುತ್ತದೆ. ಇಂಡಿಯಾ ದೇಶ ಮತ್ತು ಭಾರತೀಯರಾದ ನಾವು ಈ ಪ್ರವೃತ್ತಿಯನ್ನು ಇಲ್ಲಿನ ಜಾತಿ ಮತ್ತು ಪರಂಪರೆಯ ಹಿನ್ನಲೆಯಲ್ಲಿ ಎಚ್ಚರಿಕೆಯಿಂದ ಗಮನಿಸಬೇಕು. ನಾವು ಪ್ರತ್ಯೇಕ ಗುಂಪುಗಳಿಗೆ ಬಲಿಯಾಗುತ್ತೇವೆ ಮತ್ತು ಐಕ್ಯತೆಯನ್ನು ಮರೆಯುತ್ತೇವೆ. ಇದು ಇಂದು ನಮ್ಮ ಪ್ರವೃತ್ತಿಯಾಗಿ ಬೆಳೆಯುತ್ತಿದೆ.

ಕೋಮುವಾದಿ ಸಂಘಟನೆಗಳು ತೀವ್ರವಾದಿ ಸಂಕುಚಿತ ಮನೋಧರ್ಮಗಳಿಗೆ, ರಾಷ್ಟ್ರೀಯತೆಯ ಮುಖವಾಡದಲ್ಲಿ ಕೋಮುವಾದವನ್ನು ಹುಟ್ಟುಹಾಕುವ ವೇದಿಕೆಗಳಾಗಿ ಬೆಳೆಯುತ್ತಿವೆ. ಏಕತೆಯ ಹೆಸರಿನಲ್ಲಿ ಅವರು ಪ್ರತ್ಯೇಕತೆಯನ್ನು ಭೋದಿಸುತ್ತ ದೇಶವನ್ನು ನಾಶಪಡಿಸುತ್ತಾರೆ. ಸಾಮಾಜಿಕ ನೆಲೆಯಲ್ಲಿ ಪ್ರತಿಕ್ರಿಯೆಯ ಹೆಸರಿನಲ್ಲಿ ಅತ್ಯಂತ ಕೆಟ್ಟ ಗುಣಗಳನ್ನು ಪ್ರದರ್ಶಿಸುತ್ತಾರೆ. ನಾವು ಈ ಎಲ್ಲಾ ಶಕ್ತಿಗಳೊಂದಿಗೆ ಮುಖಾಮುಖಿಯಾಗಬೇಕಾಗಿದೆ.

ಮಹಿಳೆಯರ ವಿಷಯಕ್ಕೆ ಸಂಬಂಧಪಟ್ಟಂತೆ ನಾನು ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ನಾನು ಸೂಚಿಸಿದ್ದೆ. ನನ್ನ ಪ್ರಯತ್ನದ ನಡುವೆಯೂ ಕೆಲವೇ ಮಹಿಳೆಯರನ್ನು ಕಣಕ್ಕಿಳಿಸಲಾಯಿತು ಮತ್ತು ಅವರು ಗೆದ್ದು ಆರಿಸಿಬಂದರು. ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕೊಡದೇ ಹೋದರೆ ದೇಶವು ಅಭಿವೃದ್ಧಿಯನ್ನು ಸಾಧಿಸುವುದಿಲ್ಲ

 20 ಸೆಪ್ಟೆಂಬರ್, 1953

(ಕೃಪೆ : “Letters for a Nation” by Jawaharlal Nehru: to his Chief Ministers – 1947 -1953, Editor : Madhav Khosla)  

7 thoughts on “ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿ ನೆಹರೂ ಬರೆದ ಕೆಲವು ಪತ್ರಗಳು (1947-1953)

  1. ಕ್ರಾಂತಿಕೇಶ್ವರ

    ಈ ಮನುಷ್ಯ ತನ್ನ ಲಿಬರಲ್ ಹ್ಯೂಮನಿಸ್ಮ್ ಪಾಂಡಿತ್ಯವನ್ನು ಪ್ರದರ್ಶಿಸಲೆಂದು ಕೆಲಸಕ್ಕೆ ಬಾರದ ಪತ್ರಗಳನ್ನು ಬರೆಯುತ್ತಾ ಸಮಯ ಹಾಳು ಮಾಡುತ್ತಿದ್ದರಿಂದಲೇ ಚೀನಾ ನಮ್ಮ ನಾಡಿನ ಮೇಲೆ ಆಕ್ರಮಣ ನಡೆಸಿ ನಮ್ಮ ಸೇನೆಯನ್ನು ಸೋಲಿಸಿದ್ದು.

    Reply
  2. ಥುತ್ತೆರಿಕೆ

    viveka, itihasada arivu enu illada bogalegalu, summane virodhakke kelavaranna bayyoda chata agide.. Mr Krantikeshwar anno bogus hesarinalli matado intha daridra manasina janara agnanada bagge kanikaravide.

    Reply
    1. ಕ್ರಾಂತಿಕೇಶ್ವರ

      ಮಾನ್ಯರೇ, ತಾವು ಪ್ರತಿ ದಿನ ಬೆಳಿಗ್ಗೆ ಎದ್ದ ಕೂಡಲೇ ಕಕ್ಕಸು ಮನೆಯಲ್ಲಿ ಮಲವಿಸರ್ಜನೆ ಮಾಡಿ ಸ್ವಚ್ಛ ಮಾಡಿಕೊಂಡು ಕಂಪ್ಯೂಟರ್ ತೆಗೆಯುವುದು ಉತ್ತಮ, ಇಲ್ಲವಾದರೆ ಅಂತರ್ಜಾಲವನ್ನೇ ಗಬ್ಬೆತ್ತಿಸುತ್ತೀರಿ ನೀವು.

      Reply
    2. Nachi Rib

      ಹೌದು ಸಾರ್ ,ಕೆಲವರಿಗೆ ತಮ್ಮ ಬಣ್ಣಕ್ಕೆ ವಾಲದವರನ್ನು ತುಚ್ಚಿಕರಿಸಿ ಆತ್ಮರತಿ ಕಂಡುಕೊಳ್ಳುವುದೇ ಒಂದು ದಂಧೆಯಾಗಿದೆ !ಇವರ ಕಳೆ ಇಡೀ ಸಾಮಾಜಿಕ ತಾಣಗಳಲ್ಲಿ ಜಿಡ್ಡು ಕಟ್ಟಿ ನಿಂತಿದೆ ,ಎಷ್ಟು ತೊಳೆದರೂ ಹೋಗುವುದಿಲ್ಲ . ನೆಹರೂ ರವರ ಸಿದ್ದಾಂತ ದೊಂದಿಗೆ ನಿಮ್ಮ ವಿರೋದವಿರಲಿ ,ಆದರೆ ಜಗತ್ತೇ ಅಂಗಿಕರಿಸಿದ ಅವರ ಮೇಧಾವಿ ವ್ಯಕ್ತಿತ್ವ ಮತ್ತು ಅವರು ಬರೆದ ಅಮೂಲ್ಯ ಪತ್ರಗಳನ್ನು ಕಾಲ ಕಸಕ್ಕಿಂತ ಕಡೆಯಾಗಿ ಕಾಣುವ ಇವರ ಸಂಸ್ಕಾರಕ್ಕೆ ದಿನೇಶ್ ಮಟ್ಟು ರಂತವರು ಅರೆದ ಮದ್ದೇ ಅರೆಯಬೇಕು ! ಕನಿಷ್ಠ ಮರ್ಯಾದೆಯನ್ನು ತೋರ್ಪಡಿಸದ ಇಂಥವರ ಪ್ರತಿಕಿಯೆಯನ್ನು ಪ್ರಕಟಿಸಬಾರದಾಗಿ ಸಂಪಾದಕರಲ್ಲಿ ನನ್ನ ವಿನಂತಿ

      Reply
      1. BNS

        ನಿಮ್ಮ ವಾದಕ್ಕೆ ಒಪ್ಪದವರನ್ನು ನಿಮ್ಮ ಗುಂಪು ಯಾವ ರೀತಿ ಹೀಗಳೆದು ಬರೆಯುತ್ತೀರಿ ಎನ್ನುವುದೂ ಜಗತ್ತಿಗೆ ತಿಳಿದಿದೆ, ಶ್ರೀಯುತರೇ. ಇನ್ನು ತಮ್ಮ ಮೆಚ್ಚಿನ ದಿನೇಶ್ ಅಮೀನಮಟ್ಟು ಅವರು ಅರೆದ ಮದ್ದನ್ನು ಬೇಕಿದ್ದರೆ ತಾವೂ ಅರೆಯಬಹುದಲ್ಲ! ಮುಖ್ಯಮಂತ್ರಿಯವರ ಮಾಧ್ಯಮಸಲಹೆಗಾರ ಎನ್ನುವ ‘ಅಧಿಕಾರ’ವನ್ನು ದುರುಪಯೋಗಿಸಿಕೊಂಡು ಮತ್ತೊಬ್ಬರ ಅಭಿವ್ಯಕ್ತಿಸ್ವಾತಂತ್ರ್ಯವನ್ನು ಹರಣ ಮಾಡುವುದಕ್ಕೇ ಹೊರಟ ಅಮೀನಮಟ್ಟು ಅವರ ಕ್ರಮ ಕಾನೂನಿನ ಪ್ರಕ್ರಿಯೆಯಲ್ಲಿದೆ. ಅದರ ಫಲಿತಾಂಶ ಬರುವತನಕ ಕಾದು ನೋಡಿ.

        ನೆಹರೂ ಹೇಳುವಂತೆ ಆರೆಸ್ಸೆಸ್ ಕೋಮುವಾದಿ ಸಂಘಟನೆಯೇ ಆಗಿದ್ದರೆ, ಆರೆಸ್ಸೆಸ್ ಗೆ ೧೯೬೩ ರ ಗಣರಾಜ್ಯದಿನದ ಪೆರೇಡ್ ನಲ್ಲಿ ಭಾಗವಹಿಸಲು ಏಕೆ ಆಹ್ವಾನ ನೀಡುತ್ತಿದ್ದರು ಎನ್ನುವುದನ್ನು ಹೇಳಬಲ್ಲಿರಾ?

        Reply
        1. Nachi Rib

          ಅದು ನೆಹರೂರವರ ಹ್ರದಯ ವಿಶಾಲತೆ ಮತ್ತು ಅವರ ರಾಜಕೀಯ ಮುತ್ಸದ್ದಿತನವನ್ನು ತೋರಿಸುತ್ತದೆ ,ಹೊರತು ಆರೆಸ್ಸ್ ನ್ನು ಅವರು ಪವಿತ್ರ ಎಂದು ಸ್ವೀಕರಿಸಿದರು ಎಂದು ಅರ್ಥವಲ್ಲ ! ಮೋದಿಜಿ ಸರಕಾರ ಕೆಜ್ರಿವಾಲ ರನ್ನು ಗಣರಾಜೋಸತ್ವಕ್ಕೆ ಆಹ್ವಾನಿಸುವ ಕನಿಷ್ಠ ಕರ್ಟಸಿ ಯನ್ನೂ ತೋರಲಿಲ್ಲ !ನೆಹರು ಮತ್ತು ಸರ್ದಾರ ಪಟೇಲ ರಲ್ಲಿ ಕೆಲವು ಮಹತ್ವದ ವಿಷಯಗಳಲ್ಲಿ ಭಿನ್ನಮತವಿತ್ತು ,ಆದ್ರೆ ಅದು ಎಂದೂ ವ್ಯಯುಕ್ತಿಕ ವಾಗಿರಲಿಲ್ಲ . ನಿಮ್ಮವರು ಸ್ಯೆದ್ಯಾಂತಿಕ ವಿರೋದಿ ಗಳನ್ನು ಸಾಮಾಜಿಕ ತಾಣಗಳಲ್ಲಿ ಹದ್ದು ಕುಕ್ಕುವಂತೆ ಕುಕ್ಕುತೀರಿ . ಆಮೀನರವರು ತಮ್ಮ ಸ್ಥಾನದ ದುರುಪಯೋಗ ಎಲ್ಲಿ ಮಾಡಿದ್ದಾರೆ ,ಅವರು ಸಾಮಾನ್ಯ ಪ್ರಜೆಯಂತೆ ಕಾನೂನಿನ ಮೊರೆ ಹೊಕ್ಕಿದ್ದು ಅಷ್ಟೇ ! ಆದರೆ ನೀವೆಲ್ಲಾ ಬಾಲ ಮುದುಡಿ ಸುಮ್ಮನೆ ಕೂತಿರಲ್ಲ ,ಅದು ದೊಡ್ಡ ಸಾಧನೆ

          Reply
          1. BNS

            ತನ್ನ ಮಗಳೇ ಮುಂದಿನ ಪ್ರಧಾನಿಯಾಗಬೇಕೆಂದು ಬಯಸಿ, ಆ ದಾರಿಗೆ ಅಡ್ಡವಾಗಿ ಕಾಂಗ್ರೆಸ್ಸಿನಲ್ಲಿದ್ದ ವ್ಯಕ್ತಿಗಳನ್ನು ತುಳಿದಿದ್ದು ನೆಹರೂ ರವರ ‘ಹೃದಯವೈಶಾಲ್ಯ’! ಯಾವುದೇ ರೀತಿಯ ಭಿನ್ನಮತವನ್ನು ಒಪ್ಪದೆ ಇದ್ದಿದ್ದು ಪ್ರಥಮ ಪ್ರಧಾನಿಯ ‘ಹೃದಯವೈಶಾಲ್ಯ’! (ಕೆಂಗಲ್ ಹನುಮಂತಯ್ಯನವರನ್ನು ರಾಜಕೀಯವಾಗಿ ಮುಗಿಸಿದ್ದು ಇದೇ ನಿಮ್ಮ ‘ಮುತ್ಸದ್ದಿ’ ನೆಹರೂ) ಇನ್ನು ರಾಜಕೀಯ ಮುತ್ಸದ್ದಿತನಕ್ಕೆ ಉದಾಹರಣೆಯಾಗಿ ಇಂದಿನ ಕಾಶ್ಮೀರದ ಜ್ವಲಂತಉದಾಹರಣೆ ನಮ್ಮ ಎದುರಿಗೇ ಕಾಣಲು ಇದೆ. ಮಾತೆತ್ತಿದರೆ ನೆಹರೂ, ಪಟೇಲ್ ಎಂದು ಇಂದು ಕೂಗಾಡುವ ಕಾಂಗ್ರೆಸ್ಸಿನ ಮಂದಿ ಹೇಗೆ ವ್ಯವಸ್ಥಿತವಾಗಿ ಸ್ಯೂಡೋಗಾಂಧಿ-ನೆಹರು ಕುಟುಂಬದ ಬಾಲ ಹಿಡಿದು ರಾಜಕೀಯ ಮಾಡಿದ್ದರು, ಸರ್ದಾರ್ ಪಟೇಲರನ್ನು ಮರೆತೇಬಿಟ್ಟಿದ್ದರು ಎನ್ನುವುದನ್ನು ದೇಶದ ಜನತೆ ಮರೆತಿಲ್ಲ.

            ಯಾವ ಮನುಷ್ಯ ಕಳೆದವರ್ಷ ತನ್ನ ಭ್ರಷ್ಟ ಮಂತ್ರಿಯೊಬ್ಬನನ್ನು ಬೆಂಬಲಿಸಿ ಗಣರಾಜ್ಯೋತ್ಸವವನ್ನೂ ಅಗೌರವಿಸಿದ್ದನೋ, ಅಂಥ ಮನುಷ್ಯ ಇಂದು ಅಮೆರಿಕದ ಅಧ್ಯಕ್ಷರು ಮುಖ್ಯ ಅತಿಥಿಯಾದ ಸಮಾರಂಭಕ್ಕೆ ನಾನೂ ಬರುತ್ತೇನೆ ಅವಕಾಶ ಕೊಡಿ ಎಂದರೆ ಏನರ್ಥ? ರಾತ್ರೋರಾತ್ರಿ ಸಂವಿಧಾನದ ಬಗ್ಗೆ, ಗಣರಾಜ್ಯದಿನದ ಬಗ್ಗೆ ಅದುಹೇಗೆ ಗೌರವ ಹುಟ್ಟಿಕೊಂಡಿತು? ಇದನ್ನು ಸ್ವಲ್ಪ ಯೋಚಿಸಿ.

            ಶ್ರೀ ಮಟ್ಟು ಅವರ ಪ್ರಕರಣ ಈ ವಿಷಯಕ್ಕೆ ಹೊರತಾದದ್ದು, ಅದರ ಬಗ್ಗೆ ಬರೆಯುವುದಾದರೆ ನಿಮ್ಮ ‘ದೂಧ್ ಕಾ ಧುಲಾ ಹುವಾ’ ಆದರ್ಶವಾದಿ ಪತ್ರಕರ್ತರ ದ್ವಂದ್ವವನ್ನು ‘ನಿಲುಮೆ’ಯ ರಾಕೇಶ್ ಶೆಟ್ಟಿ ಬಯಲಿಗೆ ಎಳೆದಿದ್ದಾರೆ. ಕಾನೂನಿನ ಪ್ರಕ್ರಿಯೆಯನ್ನು ಕಾದುನೋಡಿ ಎಂದು ಗೌರವ ಕೊಡುವುದನ್ನು ‘ಬಾಲ ಮುದುರಿಕೊಳ್ಳುವುದು’ ಎಂದು ನೀವು ಅರ್ಥೈಸುವುದಾದರೆ ನಿಮಗೆ ಸ್ವಾಗತ.

Leave a Reply

Your email address will not be published. Required fields are marked *