ಚಾಯ್ ಪೆ ಚರ್ಚಾ : ಸುಳ್ಳುಗಾರನ ಬಂಡವಾಳಶಾಹಿ ಆಡಳಿತದ ಒಂದು ವರ್ಷ

– ಬಿ. ಶ್ರೀಪಾದ ಭಟ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವ್ಯಕ್ತಿತ್ವವನ್ನು ಮತ್ತು ಅವರ ಸರ್ಕಾರ ಒಂದು ವರ್ಷ ತುಂಬಿದ್ದರ ಕುರಿತಾಗಿ ವಿವರಿಸುತ್ತಾ ಪತ್ರಕರ್ತ ನೀಲಂಜನ್ ಮುಖ್ಯೋಪಾಧ್ಯಾಯ್ ಅವರು “ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ರಚನೆಗಳೊಂದಿಗೆ ಕಾರ್ಯ ನಿರ್ವಹಿಸಲು ಮೋದಿ ಅಸಮರ್ಥರೆಂಬುದನ್ನು ಬಿಜೆಪಿ ಸರ್ಕಾರದ ಒಂದು ವರ್ಷದ ಆಡಳಿತವು ಸಾಕ್ಷೀಕರಿಸುತ್ತದೆ. ಮೋದಿಯು ಏಕವ್ಯಕ್ತಿ ಪ್ರದರ್ಶನದ ಮಾದರಿಗೆ ಹೊಂದಿಕೊಳ್ಳುತ್ತಾರೆ. Modiಒಬ್ಬ ವ್ಯಕ್ತಿ, ಏಕ ನಿಷ್ಠೆ, ಒಂದು ಸಂಸ್ಥೆ, ಏಕ ಸದನದ ಸಂಸತ್ತು; ಹೀಗೆ ಒಂದು ರೀತಿ ಏಕಮುಖಿ ಸಂಚಾರದಂತೆ. ಅಂದರೆ ಪರಸ್ಪರ ಸಂಭಾಷಣೆಯ ರೀತಿಯದಲ್ಲ, ಬದಲಾಗಿ ಸ್ವಗತ, ಆತ್ಮಗತ ಭಾಷಣದಂತೆ, ಮತ್ತು ನಿಜ, ಕಡ್ಡಾಯವಾಗಿ ಯಾವುದೇ ಪ್ರಶ್ನೆಗಳಿರುವುದಿಲ್ಲ” ಎಂದು ಬರೆಯುತ್ತಾರೆ.

ಸಮಾಜ ಶಾಸ್ತ್ರಜ್ಞ ನಿಸ್ಸಿಮ್ ಮನ್ನತುಕ್ಕರೆನ್ ಅವರು ಬರೆಯುತ್ತಾ, “ಒಂದು ವರ್ಷದ ಹಿಂದೆ ಮೋದಿ ಪ್ರಧಾನಿ ಆದಾಗ ಮೋದಿಯು ಇಂಡಿಯಾವನ್ನು ಬದಲಿಸುತ್ತಾರ? ಮನಮೋಹನ್ ಸಿಂಗ್ ಮಾಡಲಾಗದ್ದು ಇವರು ಮಾಡುತ್ತಾರ?ಮೋದಿಯು ಇಂಡಿಯಾವನ್ನು ಸೂಪೆರ್‌ಪವರ್ ಘಟ್ಟಕ್ಕೆ ಕೊಂಡೊಯ್ಯುತ್ತಾರ? ಎನ್ನುವ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ ಅತ್ಯಂತ ಮುಖ್ಯವಾದ ಮತ್ತು ಸೂಕ್ಷ್ಮವಾದ ವಿಚಾರವೇನೆಂದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಮೇಲಿನ ಪ್ರಶ್ನೆಗಳು ಸಂಪೂರ್ಣವಾಗಿ ವಿರೋಧಾತ್ಮಕವಾಗಿವೆ. ಆದರೆ ಈ ವಿರೋಧಾತ್ಮಕ ಮನಸ್ಥಿತಿಯಿಂದ ಹೊರಬರಲು ಅಸಮರ್ಥವಾಗಿರುವುದೇ ಇಂಡಿಯಾ ರಾಜಕೀಯದ ಒಂದು ದೊಡ್ಡ ಬಿಕ್ಕಟ್ಟು. ಪ್ರಜೆಗಳ ಹಕ್ಕು ಮತ್ತು ಶಕ್ತಿಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತ ಅವರನ್ನು ಪ್ರಭುತ್ವಕ್ಕೆ, ಆಡಳಿತಗಾರರಿಗೆ ಶರಣಾಗಿಸಲಾಗುತ್ತಿದೆ. ಇಲ್ಲಿ ಮೋದಿಯು ತನಗೆ ಅಧಿಕಾರವನ್ನು ತಂದುಕೊಟ್ಟ ವ್ಯವಸ್ಥೆಯಿಂದಲೇ ಬೇರ್ಪಟ್ಟ ಒಂದು ನೀರ್ಗುಳ್ಳೆಯಂತೆ. ನಾವು ನಾಯಕನನ್ನು ಈ ರೀತಿಯಾಗಿ ಉದ್ಧಾರಕನೆಂದು ಪರಿಭಾವಿಸುವುದು ಸರಿಯೆ ಎನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುತ್ತಾ ಹೋದಂತೆ ಪಾರ್ಲಿಮೆಂಟರಿ ವ್ಯವಸ್ಥೆಯನ್ನೇ ತಿರಸ್ಕರಿಸುವ ಮತ್ತು ಪ್ರಧಾನ ಮಂತ್ರಿಯು ತನ್ನ ಸಹೋದ್ಯೋಗಿಗಳಿಗಿಂತ ಮೊದಲಿಗ ಎನ್ನುವ ಧೋರಣೆಯನ್ನು ನಾವು ಎದುರಿಸಬೇಕಾಗುತ್ತದೆ. modi_bjp_conclaveಪ್ರಧಾನ ಮಂತ್ರಿಯೊಬ್ಬರನ್ನು ಶಕ್ತಿಶಾಲಿ ಸರ್ವಜ್ಞನೆಂಬುವ ತರ್ಕಕ್ಕೆ ಬಲಿಯಾಗಿಸುವ ಕೈಮೀರಿದ ಕ್ಯಾಬಿನೆಟ್ ಅನ್ನು ನಾವು ಮತ್ತೆಲ್ಲಿ ಕಾಣಲು ಸಾಧ್ಯ? ಪ್ರಧಾನ ಮಂತ್ರಿ ಮೋದಿಯ ಎದುರು ಶಾಲಾ ಮಕ್ಕಳಂತೆ ಕೈಕಟ್ಟಿ ನಿಂತುಕೊಂಡ ಅವರ ಕ್ಯಾಬಿನೆಟ್ ಮಂತ್ರಿಗಳ ಪ್ರಾರಂಭದ ದುರದೃಷ್ಟಕರ ದಿನಗಳಿಂದ ಮೊದಲುಗೊಂಡು ವಿದೇಶಾಂಗ ಸಚಿವೆಯ ಎಲ್ಲಾ ಅಧಿಕಾರ ಮತ್ತು ಜವಬ್ದಾರಿಗಳನ್ನು ಕತ್ತರಿಸಿ ಅವರ ರೆಕ್ಕೆಗಳನ್ನೇ ತುಂಡರಿಸುವ ಅತಿಕ್ರೌರ್ಯದ ಅಧಿಕಾರದ ಇಂದಿನ ದಿನಗಳವರೆಗಿನ ಒಂದು ವರ್ಷದ ಆಡಳಿತ ಇಂಡಿಯಾದ ಜಾಗತಿಕ ಶಕ್ತಿಯನ್ನು ಕೀಳುದರ್ಜೆಗೆ ಇಳಿಸಿದೆ. ಹಳೆಯ ಯುಪಿಎ ಸರ್ಕಾರದಲ್ಲಿ ಅದರ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ಮೌನಿಯಾಗಿದ್ದರೆ ಇಂದಿನ ಮೋದಿ ಸರ್ಕಾರದಲ್ಲಿ ಇಡೀ ಕ್ಯಾಬಿನೆಟ್ ಮೌನಿಯಾಗಿದೆ. ಈ ಮೌನಗೊಂಡ ಕ್ಯಾಬಿನೆಟ್ ದೇಶವನ್ನು ’ಮನ್ ಕಿ ಬಾತ್’ ಎನ್ನುವ ಆತ್ಮರತಿಯ ಮೂಲಕ ಗಣರಾಜ್ಯವನ್ನು ಕಟ್ಟಬಹುದೆಂದು ಅಹಂಕಾರದಿಂದ ವರ್ತಿಸುತ್ತಿದೆ. ೧೩೦ ಕೋಟಿ ಜನರ ಭವಿಷ್ಯವನ್ನು ಕೇವಲ ಒಂದು ವ್ಯಕ್ತಿಯ ಕೈಗೆ ಕೊಡಲಾಗುವುದಿಲ್ಲ” ಎಂದು ವಿವರಿಸುತ್ತಾರೆ. ( ದ ಹಿಂದೂ,೨೨,೨೩, ೨೦೧೫)

ಪ್ರಧಾನ ಮಂತ್ರಿ ಮೋದಿಯ ಒಂದು ವರ್ಷದ ಆಡಳಿತದ ಸಾಧನೆಯೆಂದರೆ ಅದು ಸ್ವತಃ ‘ಮೋದಿಯ ಪುನಃಸೃಷ್ಟಿ, ಶೋಧನೆ ಮತ್ತು ಮಾರಾಟ’ ಎಂದು ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಹೇಳಿದ್ದಾರೆ.

೫೬ ಇಂಚಿನ ಎದೆಯ ಸರ್ಕಾರ್ ಅವರ ಆಡಳಿತಕ್ಕೆ ಒಂದು ವರ್ಷ ತುಂಬಿದೆಯಂತೆ. ಅರುಣ್ ಜೇಟ್ಲಿ ಮನೆಯಲ್ಲಿ ದೇಶದ ಪ್ರಮುಖ ಪತ್ರಕರ್ತರು, ಸಂಪಾದಕರ ಜೊತೆ ಏರ್ಪಡಿಸಿದ್ದ ಮಧ್ಯರಾತ್ರಿಯ ಔತಣಕೂಟದಲ್ಲಿ ೫೬ ಇಂಚಿನ ಎದೆಯ ಸರ್ಕಾರ್ ಭಾಗವಹಿಸಿದ್ದರು. modi_ambani_tata_kamathಈ ಸರ್ಕಾರ್ ಅವರ ಋಣ ತೀರಿಸಲೋ ಎಂಬಂತೆ ಇಂಡಿಯಾದ ಮಾಧ್ಯಮಗಳು ಪುಂಖಾನುಪುಂಖವಾಗಿ ಸಮೀಕ್ಷೆಗಳು, ಚರ್ಚೆಗಳನ್ನು ಮಾಡುತ್ತಿವೆ. ದೇಶದ ಪ್ರತಿಯೊಂದು ಸ್ಟುಡಿಯೋಗಳಲ್ಲಿ ಬಿಜೆಪಿ ವಕ್ತಾರರು, ಕೇಂದ್ರ ಮಂತ್ರಿಗಳ ದಂಡೇ ನೆರೆದಿರುವಂತೆ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಗೋಬೆಲ್ಸ್ ತಂತ್ರವನ್ನು ಬಳಸಿಕೊಂಡು ಸುಳ್ಳುಗಳನ್ನು ದಿನವಿಡೀ ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಮಾಧ್ಯಮಗಳೂ ತಮ್ಮ ಶಕ್ತಿ ಮೀರಿ ಶ್ರಮಿಸುತ್ತಿವೆ. ಸುಳ್ಳುಗಳ ಭಾರವನ್ನು ಹೊತ್ತುಕೊಂಡ, ಅತಿರಂಜಿತ ಅಂಕಿಅಂಶಗಳನ್ನು ಉತ್ಪಾದಿಸಿ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ೫೬ ಇಂಚಿನ ಎದೆಯ ಸರ್ಕಾರ್ ’ಖುಷ್ ಹೋನೇ ಕೆ ಲಿಯೆ’ ಸಂಘ ಪರಿವಾರ ಮತ್ತು ಬಹುಪಾಲು ಮಾಧ್ಯಮಗಳು ಹಗಲಿರುಳು ಶ್ರಮಪಡುತ್ತಿದ್ದಾರೆ. ಈ ೫೬ ಇಂಚಿನ ಎದೆಯ ಸರ್ಕಾರ್ ಅವರ ವರ್ಣರಂಜಿತ ಫೋಟೋಗಳು, ಅಸದೃಶ್ಯವಾದ ಡ್ರೆಸ್‌ಗಳು, ಫ್ಲೆಕ್ಸ್ ಬೋರ್ಡಗಳು ಕೇವಲ ಇಂಡಿಯಾದಲ್ಲಿ ಮಾತ್ರವಲ್ಲ, ವಿಶ್ವದಾದ್ಯಾಂತ ರಾರಾಜಿಸಲಿವೆ. ಆಕಾಶ ಮತ್ತು ಭೂಮಿಯನ್ನು ಒಳಗೊಂಡಂತೆ ಎಲ್ಲವೂ ಮೋದಿಯ ಆಡಳಿತ ಫಲವಾಗಿ ಸೃಷ್ಟಿಯಾಗಿವೆ ಎನ್ನುವ ಜಾಹೀರಾತುಗಳು ದೇಶದಾದ್ಯಾಂತ ಕಂಗೊಳಿಸಲಿವೆ

ಕಳೆದ ೬೫ ವರ್ಷಗಳಿಂದ ಬೆಸೆದುಕೊಂಡಿದ್ದ ಇಂಡಿಯಾದ ಗಣರಾಜ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲಾ ಎಳೆಗಳನ್ನು, ಬಂಧಗಳನ್ನು ಕಳೆದ ಒಂದು ವರ್ಷದಲ್ಲಿ ನಾಶಗೊಳಿಸಿ, ಕ್ಯಾಬಿನೆಟ್ ಅರ್ಥಾತ್ ಕೇಂದ್ರ ಮಂತ್ರಿಮಂಡಲವನ್ನೇ ಅದೃಶ್ಯಗೊಳಿಸಿ ಅಧಿಕಾರವನ್ನು ತನ್ನ ಬಳಿ ಕೇಂದ್ರೀಕರಿಸಿಕೊಂಡ ಈ ಮೋದಿ ಅವರ ಸರ್ವಾಧಿಕಾರಿಯ ವ್ಯಕ್ತಿತ್ವವನ್ನು ’ಮನ್ ಕಿ ಬಾತ್’ ಎಂದು ವೈಭವೀಕರಿಸಿ ದೇಶದೆಲ್ಲಡೆ ಹಂಚಲಾಗುತ್ತಿದೆ. ಮೊಟ್ಟ ಮೊದಲು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭಾವೋದ್ರೇಕದಿಂದ ಭಾಷಣ ಮಾಡಿದ ಮೋದಿಯವರ ನಂತರದ ಒಂದು ವರ್ಷದ ಆಡಳಿತದಲ್ಲಿ ರೈತರು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟು ಅವರ ಭವಿಷ್ಯವನ್ನು ಮಾರಕ ಭೂ ಸ್ವಾಧೀನ ಮಸೂದೆ ೨೦೧೪ರಲ್ಲ್ಲಿ ಮಣ್ಣು ಮಾಡಲಾಗಿದೆ. ambani-modiಮೋದಿಯ ಕಾರ್ಪೋರೇಟ್ ಪರವಾದ ಆರ್ಥಿಕ ನೀತಿಗಳ ಅನುಸಾರ ಕೃಷಿ ಸಾಗುವಳಿಯೇ ಹಂತಹಂತವಾಗಿ ಕಣ್ಮರೆಯಾಗಲಿದೆ. ದೇಶದ ತೆರಿಗೆದಾರರ ಹಣವನ್ನು ಬಳಸಿಕೊಂಡು (ಕಳೆದ ೯ ತಿಂಗಳ ಪ್ರವಾಸದ ಖರ್ಚು ೩೧೭ ಕೋಟಿ) ದೂರ ಜಿಗಿತದ ಹರ್ಡಲ್ಸ್ ಓಟಗಾರನ ಹಾಗೆ ಒಂದು ವರ್ಷದಲ್ಲಿ ೧೮ ವಿದೇಶಗಳನ್ನು ಸುತ್ತಿದ ಈ ಮೋದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ರಾಜ್ಯಗಳ ಕಡೆ ಕಾಲಿಟ್ಟಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ನರೇಗಾದಿಂದ ಮೊದಲುಗೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಒಳಗೊಂಡಂತೆ ಅನೇಕ ಜನಕಲ್ಯಾಣ ಯೋಜನೆಗಳಿಗೆ (Social Welfare Schemes) ಸಂಬಂದಿಸಿದ ಅನುದಾನವನ್ನು ಕ್ರಮೇಣ ಕಡಿತಗೊಳಿಸಿರುವುದು ಮೋದಿ ಸರ್ಕಾರದ ಮತ್ತೊಂದು ಕೊಡುಗೆ. ಬಂಡವಾಳಶಾಹಿಗಳಿಗಾಗಿಯೇ ಸರ್ಕಾರವನ್ನು ಸಜ್ಜುಗೊಳಿಸಿರುವ ಮುಕ್ತ ಮಾರುಕಟ್ಟೆಯ, ನವ ಉದಾರೀಕರಣದ ವ್ಯಾಮೋಹಿಯಾದ ಮೋದಿ ಯಾವುದೇ ಮಾದರಿಯ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ. ಎಲ್ಲಾ ಬಡಜನರ ಪರವಾದ ಯೋಜನೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ರದ್ದಾದರೆ ಆಶ್ಚರ್ಯವಿಲ್ಲ.

ವಿದೇಶದಿಂದ ಕಪ್ಪುಹಣವನ್ನು ಮರಳಿ ತರುವ, ತಪ್ಪಿತಸ್ಥರನ್ನು ಶಿಕ್ಷಿಸುವ ಛಾತಿ ಬೇಕೆಂದರೆ ನನ್ನಂತೆ ೫೬ ಇಂಚಿನ ಎದೆ ಬೇಕು ಎಂದು ಚುನಾವಣಾ ಭಾಷಣದಲ್ಲಿ ಹೇಳಿದ್ದ ಈ ಮೋದಿ ಕನಿಷ್ಠ ಒಂದಂಕಿಯ ಮೊತ್ತವನ್ನೂ ಭಾರತೀಯರಿಗೆ ತಂದು ತೋರಿಸದೆ, ಈ ಕಪ್ಪು ಹಣವನ್ನು ಮರಳಿ ತರುವ ಆಶಯಗಳನ್ನು “Money Laundering Bill” ನಲ್ಲಿ ಮಣ್ಣು ಮಾಡಲಾಗಿದೆ. ಸದರಿ ಮೋದಿ ಸರ್ಕಾರದ ಯಶಸ್ವೀ ಮಸೂದೆ ಎಂದೇ ಬಣ್ಣಿಸಲಾಗುವ ಕಲ್ಲಿದ್ದಲು ಮತ್ತು ಸ್ಪೆಕ್ಟ್ರಮ್ ಹರಾಜು ನೀತಿಗಳು ಮುಂದಿನ ದಿನಗಳಲ್ಲಿ ನೇರವಾಗಿಯೇ ಕಾರ್ಪೋರೇಟ್ ಕುಟುಂಬಗಳಿಗೆ Autonomous ನ ಮುಕ್ತ ಸ್ವಾತಂತ್ರವನ್ನು ತಂದುಕೊಡುತ್ತವೆ. ಒಮ್ಮೆ ಈ ಕಾರ್ಪೋರೇಟ್ ಶಕ್ತಿಗಳಿಗೆ ಯಾವುದೇ ಕಾನೂನಿನ ಕಟ್ಟುಪಾಡುಗಳಿಲ್ಲದ ಮುಕ್ತ ಸ್ವಾತಂತ್ರ ದೊರೆತರೆ ಕಲ್ಲಿದ್ದಲಿನ, ಸೇವಾ ವಲಯದ, ಸರಕುಗಳ ಬೆಲೆಗಳು ಊಹೆಗೆ ನಿಲುಕದಷ್ಟು ಏರಿಕೆಯಾಗುತ್ತವೆ. ಜನಸಾಮಾನ್ಯರ ಬದುಕು ದುರ್ಭರಗೊಳ್ಳತೊಡಗುತ್ತದೆ. ಅವರು ಅಂಚಿಗೆ ತಳ್ಳಲ್ಪಡುತ್ತಾರೆ. ಇದು ಈ ಮೋದಿಯ ಒಂದು ವರ್ಷದ ಆಡಳಿತದ ಫಲ.

ಸ್ವಾತಂತ್ರದ ನಂತರದ ಮೊದಲ ಸಂಸತ್ತಿನ ಅಧಿವೇಶನದಲ್ಲಿ (೧೯೪೯-೫೦) ಮಕ್ಕಳ ಶಿಕ್ಷಣ ಹಕ್ಕಿನ ಕುರಿತಾಗಿ ಚರ್ಚೆchild-labour ನಡೆದಾಗ ಅನೇಕ ಸಂಸದರು ಮಕ್ಕಳೆಲ್ಲಾ ಶಾಲೆಗೆ ಸೇರಿಕೊಂಡರೆ ನಮ್ಮ ಹೊಲ ಗದ್ದೆಗಳಲ್ಲಿ ಕೂಲಿ ಮಾಡುವವರು ಯಾರು ಎಂದು ಪ್ರಶ್ನಿಸಿದ್ದರು. ಅಗ ಇದನ್ನು ಬಹುಪಾಲು ಸಂಸದರು ವಿರೋಧಿಸಿ ೧೧ ವಯಸ್ಸಿನವರೆಗೂ ಶಿಕ್ಷಣವನ್ನು ಕಡ್ಡಾಯ ಮಾಡಬೇಕು ಎಂದು ಗೊತ್ತುವಳಿ ಮಂಡಿಸಿದರು. ಇದನ್ನು ಮಾರ್ಪಡಿಸಿದ ಅಂಬೇಡ್ಕರ್ ಅವರು ಮಕ್ಕಳು ಬಾಲಕಾರ್ಮಿಕರಾಗುವುದೇ ೧೧ನೇ ವಯಸ್ಸಿನ ಸಂದರ್ಭದಲ್ಲಿ. ಬದಲಿಗೆ ೧೪ನೇ ವಯಸ್ಸಿನವರೆಗೂ ಮಕ್ಕಳ ಶಿಕ್ಷಣ ಕಡ್ಡಾಯ ಮತ್ತು ಹಕ್ಕು ಎಂದು ಪ್ರತಿಪಾದಿಸಿದರು. ನಂತರ ಅದು ಅನುಮೋದನೆಗೊಂಡು ೧೪ನೇ ವಯಸ್ಸಿನವರೆಗೂ ಶಿಕ್ಷಣ ಕಡ್ಡಾಯ ಮತ್ತು ಮಕ್ಕಳ ಹಕ್ಕಾಗಿ ಪರಿಗಣಿತವಾಯಿತು. ಆದರೆ ೧೩ ಮೇ, ೨೦೧೫ ರಂದು ಪ್ರಧಾನ ಮಂತ್ರಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ೨೦೧೨ರ ಮಸೂದೆಗೆ ಮತ್ತಷ್ಟು ತಿದ್ದುಪಡಿಗಳನ್ನು ಅನುಮೋದಿಸಿದೆ. ಈ ಮೊದಲಿನ ಬಾಲ ಕಾರ್ಮಿಕ ಪದ್ಧತಿಗೆ ಇರುವ ನಿಷೇಧಕ್ಕೆ ತಿದ್ದುಪಡಿಗಳನ್ನು ಮಾಡಿ ಕೌಟುಂಬಿಕ ಕೆಲಸಗಳು, ಕೌಟುಂಬಿಕ ಉದ್ಯಮದಲ್ಲಿ, ಅಪಾಯಕಾರಿಯಲ್ಲದ ಹೊರಗುತ್ತಿಗೆ ಕೆಲಸಗಳಲ್ಲಿ ಬಾಲಕರನ್ನು ಕಾರ್ಮಿಕರಾಗಿ ಬಳಸಿಕೊಳ್ಳಬಹುದೆಂದು ವಿವರಿಸಿದೆ. ಇದಕ್ಕೆ ಈ ಮೋದಿ ಸಚಿವ ಸಂಪುಟ ಸಭೆ ಕೊಟ್ಟ ವಿವರಣೆ ’ಮಕ್ಕಳ ಕೌಶಲ್ಯವನ್ನು ಹೆಚ್ಚಿಸುವುದು!’ ಅಂದರೆ ಈ ಸದರಿ ಮೋದಿ ಸರ್ಕಾರಕ್ಕೆ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಿಂತಲೂ ಕೌಟುಂಬಿಕ, ಕುಶಲ ಕೆಲಸಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವುದು ಪ್ರಮುಖವಾಗಿದೆ. ಅಂದರೆ ಭಾರತದಂತಹ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿನ ಕೌಟುಂಬಿಕದ ಹಿನ್ನೆಲೆಯಲ್ಲಿ ಬಾಲಕಿಯರಿಗೆ ದಿನವಿಡೀ ಕೆಲಸಕ್ಕೆ ಕೊರತೆ ಇರುವುದಿಲ್ಲ. ಈ ಮೋದಿ ಸರ್ಕಾರದ ಮಸೂದೆ ಜಾರಿಗೊಂಡರೆ ಮುಖ್ಯವಾಗಿ ಬಾಲಕಿಯರು child-marriage-indiaಕೌಟುಂಬಿಕ ಕೆಲಸಗಳಿಗೆ ಸೀಮಿತಗೊಂಡು ಅವರ ಶಿಕ್ಷಣ ಮೊಟಕುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದು ಗ್ರಾಮೀಣ ಭಾಗದ ಬಾಲಕರಿಗೂ ಅನ್ವಯಿಸುತ್ತದೆ. ಇಂಡಿಯಾದಂತಹ ಸಾಮಾಜಿಕ-ಆರ್ಥಿಕ ಸಂರಚನೆಯೇ ದುರ್ಬಲವಾಗಿರುವ ದೇಶದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಹೆಚ್ಚಾಗುತ್ತದೆ. ಇದು ಭಾರತದ ಮಕ್ಕಳಿಗೆ ತನ್ನ ಒಂದು ವರ್ಷದ ಆಡಳಿತ ಪೂರೈಸಿದ ಮೋದಿ ಸರ್ಕಾರದ ಪ್ರತಿಗಾಮಿ ನೀತಿಯ ಕೊಡುಗೆ

ಬಹುಸಂಖ್ಯಾತರ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತ ತತ್ವದ (Majoritarianism) ಪರವಾದ ಗುಣಗಳನ್ನು ಗೌಣಗೊಳಿಸಿಕೊಂಡು ಬಹುತ್ವದ, ಎಲ್ಲರನ್ನೂ ಒಳಗೊಳ್ಳುವಿಕೆಯ ಸಿದ್ಧಾಂತವನ್ನು ರೂಪಿಸಬೇಕಾದ ಅಗತ್ಯವಿರುತ್ತದೆ. ಆದರೆ ಮೋದಿ ಸ್ವತಃ ಒಬ್ಬ Authoritarian ವ್ಯಕ್ತಿತ್ವದ, Majoritarianism ತತ್ವದ ಪರವಾಗಿ ಅಪಾರವಾದ ಒಲವಿರುವ, ತನ್ನನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಬಣ್ಣಿಸಿಕೊಂಡ ಪ್ರಧಾನಿ. ಆರೆಸ್ಸಸ್‌ನ ಕೇಂದ್ರ ಕಛೇರಿಯಲ್ಲಿ ರಾಜಕೀಯ ಫಿಲಾಸಫಿಯನ್ನು ನಿರ್ಧರಿಸುವ ಅಧಿಕಾರವನ್ನು ರೂಪಿಸಲಾಗಿದೆ. ಇದಕ್ಕೆ ಮೋದಿಯವರ ಅನುಮೋದನೆ ಇದೆ. ಆರೆಸ್ಸಸ್ ಹೆಡ್ ಕ್ವಾಟ್ರಸ್‌ನಲ್ಲಿ ರಾಜಕೀಯ, ಸಾಮಾಜಿಕ ತತ್ವ ಸಿದ್ದಾಂತಗಳು ರೆಕ್ಕೆ ಪಡೆದುಕೊಳ್ಳತೊಡಗಿದರೆ ಅಲ್ಲಿಗೆ ಈ ದೇಶದ ಜನರ ಸೆಕ್ಯುಲರಿಸಂ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಆಶಯಗಳು ಮುಣ್ಣುಗೂಡಿದಂತೆ. ಕಳೆದ ಒಂದು ವರ್ಷದಲ್ಲಿ ಅಲ್ಪಸಂಖ್ಯಾತರ ದನಿಯನ್ನೇ ಒತ್ತಿ ಹಿಡಿಯಲಾಗಿದೆ. ಸಂಘ ಪರಿವಾರದ ಸದಸ್ಯರು, ಮೋದಿ ಮಂತ್ರಿಮಂಡಲದ ಮಂತ್ರಿಗಳು ಅಲ್ಪಸಂಖ್ಯಾತರ ವಿರುದ್ಧ ಕಳೆದ ವರ್ಷವಿಡೀ ಪ್ರಚೋದನಾತ್ಮಕವಾಗಿ ಹೇಳಿಕೆಗಳನ್ನು ಕೊಡುತ್ತ,ಬೆದರಿಸುತ್ತಾ ಅವರಿಗೆ ’ಹಿಂದೂ’ಸ್ತಾನದ ಮಹತ್ವವನ್ನು ಪ್ರತಿ ಕ್ಷಣಕ್ಕೂ ಮನವರಿಕೆ ಮಾಡಿಕೊಡಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಮೋದಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದ ವಿಜಯೋತ್ಸವಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತರು ದೆಹಲಿಯ ರಸ್ತೆಗಳಿಗೆ ಮುಸ್ಲಿಂ ರಾಜರು, ನಾಯಕರುಗಳ ಹೆಸರಿರುವ ಸಫ್ದರ್ ಹಶ್ಮಿ ಮಾರ್ಗ, ಫಿರೋಜ್ ಶಾ ರಸ್ತೆ, ಔರಂಗಜೇಬ್ ರಸ್ತೆ, ಅಕ್ಬರ್ ರಸ್ತೆಗಳ ನಾಮಫಲಕಗಳಿಗೆ ಕಪ್ಪು ಮಸಿಯನ್ನು ಬಳಿದಿದ್ದಾರೆ ಮತ್ತು ಇಂಡಿಯಾದಲ್ಲಿ ಇಸ್ಲಾಮೀಕರಣವನ್ನು ಸಹಿಸುವುದಿಲ್ಲ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ

ಕಳೆದ ಒಂದು ವರ್ಷದಲ್ಲಿ ಗಾಂಧಿ ಹಂತಕ ನಾತುರಾಮ್ ಗೋಡ್ಸೆಯ ವೈಭವೀಕರಣ, ಕೇಂದ್ರ ಶಿಕ್ಷಣ ಇಲಾಖೆಯ ಕೇಸರೀಕರಣ, narender_modi_rssಚರ್ಚುಗಳ ಮೇಲೆ ದಾಳಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವ ‘ಘರ್ ವಾಪಸಿ’ ಎನ್ನುವ ಮೂಲಭೂತವಾದಿ ಕಾರ್ಯಚಟುವಟಿಕೆಗಳು, ಲವ್ ಜಿಹಾದಿಯ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ (ಮುಸ್ಲಿಂರನ್ನು ಮದುವೆಯಾಗುತ್ತಾರೆ ಎನ್ನುವ ಕಾರಣಕ್ಕೆ) ಗಳಂತಹ ಫ್ಯಾಸಿಸ್ಟ್ ಪ್ರವೃತ್ತಿಯ ವರ್ತನೆಗಳು, ಹಲ್ಲೆಗಳಿಂದಾಗಿ ಇಂಡಿಯಾದ ಸಾರ್ವಜನಿಕ ಬದುಕಿನ ಜೀವಪರವಾದ ಎಲ್ಲಾ ಸೆಲೆಗಳು ಮತ್ತು ಬಹುಸಂಸ್ಕೃತಿಯ ಜೀವನ ಶೈಲಿ ನಾಶಗೊಂಡಿದೆ.

ಕಡೆಗೆ ಕಳೆದ ಒಂದು ವರ್ಷದ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸದರಿ ನರೇಂದ್ರ ಮೋದಿಯ ಚುನಾವಣಾ ಪ್ರಚಾರಕ್ಕೆ ದಾಖಲೆ ಹಣವನ್ನು ಖರ್ಚು ಮಾಡಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಇಂಡಿಯಾದ ಪ್ರಮುಖ ಕಾರ್ಪೋರೇಟ್ ಕುಟುಂಬಗಳು ವಹಿಸಿಕೊಂಡಿದ್ದವು. ಈ ಕಾರ್ಪೋರೇಟ್ ಹಣದಿಂದ ಚುನಾವಣೆಯನ್ನು ಜಯಿಸಿದ ಮೋದಿ ಇಂದು ಅದರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ. ಈ ಕಾರ್ಪೋರೇಟ್ ಕುಟುಂಬಗಳಿಗೆ ಋಣ ತೀರಿಸಲು “ಭೂಸ್ವಾಧೀನ ಮಸೂದೆ ೨೦೧೪” ನ್ನು ಹಠದಿಂದ ಸಂಸತ್ತಿನಲ್ಲಿ ಅಥವಾ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮೋದಿ ಪಣತೊಟ್ಟಿದ್ದಾರೆ. ಮತ್ತೊಂದೆಡೆ ಆರೆಸ್ಸಸ್ ತನ್ನ ಹಿಂದೂ ರಾಷ್ಟ್ರೀಯತೆಯ ತತ್ವಗಳನ್ನು ಜಾರಿಗೊಳಿಸುವ ತವಕದಲ್ಲಿದೆ. ಈ ಧಾರ್ಮಿಕ ಮೂಲಭೂತವಾದ ಮತ್ತು ಕಾರ್ಪೋರೇಟ್ ಶಕ್ತಿಗಳ ದೌರ್ಜನ್ಯದ ನಡುವೆ ಇಂದು ಇಂಡಿಯಾದ ಜನ ಸಾಮಾನ್ಯರು ಧ್ವಂಸವಾಗುತ್ತಿದ್ದಾರೆ. ಇದು ಯಾವ ಬಗೆಯ “ಅಚ್ಚೇ ದಿನ್”?

20 thoughts on “ಚಾಯ್ ಪೆ ಚರ್ಚಾ : ಸುಳ್ಳುಗಾರನ ಬಂಡವಾಳಶಾಹಿ ಆಡಳಿತದ ಒಂದು ವರ್ಷ

  1. ಸೀತಾ

    “ಪ್ರಧಾನ ಮಂತ್ರಿ ಮೋದಿಯ ಎದುರು ಶಾಲಾ ಮಕ್ಕಳಂತೆ ಕೈಕಟ್ಟಿ ನಿಂತುಕೊಂಡ ಅವರ ಕ್ಯಾಬಿನೆಟ್ ಮಂತ್ರಿಗಳ ”
    ಪ್ರಭುಗಳ ಲೇಖನದ ವಾಕ್ಯವು ಹಳೆಯ ಚಿತ್ರವೊಂದನ್ನು ನೆನಪಿಸಿತು:
    http://www.india-seminar.com/2011/628/628_raghu_3.gif

    Reply
    1. ಸೀತಾ

      ಧನ್ಯವಾದಗಳು ಸಾರ್! ಆದರೆ ಈ ಚಿತ್ರ ನನ್ನದಲ್ಲ, ಇದನ್ನು ತೆಗೆದವರು ರಘು ರೈ ಎಂಬ ಹೆಸರಾಂತ ಛಾಯಾಗ್ರಾಹಕ, ಅವರಿಗೇ ನಿಮ್ಮ ಮೆಚ್ಚುಗೆಯನ್ನು ತಲುಪಿಸಿ.

      Reply
  2. Ananda Prasad

    ಬಹುತೇಕ ಮಾಧ್ಯಮಗಳಲ್ಲಿ ಮೋದಿ ಸರ್ಕಾರದ ಒಂದು ವರುಷದ ವಸ್ತುನಿಷ್ಠ ವಿಮರ್ಶೆ ಬರುತ್ತಿಲ್ಲ, ಅದರ ಬದಲು ಭೋಪರಾಕ್ ಮಾತ್ರ ಕಾಣಿಸುತ್ತಿದೆ. ಇದು ಅಪಾಯಕಾರಿ. ಮಾಧ್ಯಮಗಳು ವಸ್ತುನಿಷ್ಠ ವಿಮರ್ಶೆಯಿಂದ ವಿಮುಖವಾಗುತ್ತಿರುವಂತೆ ಕಂಡುಬರುತ್ತಿದೆ. ಮಾಧ್ಯಮಗಳು ಬಂಡವಾಳಶಾಹಿಗಳ ಒಡೆತನದಲ್ಲಿರುವುದು ಇದಕ್ಕೆ ಪ್ರಮುಖ ಕಾರಣ. ಮೋದಿ ವಿದೇಶಗಳಿಗೆ ಸುತ್ತಿ ಬಂಡವಾಳ ತರುತ್ತೇನೆ ಎಂದು ಹೇಳಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದೆ ಎಂಬುದನ್ನು ಡಾಲರ್ ವಿರುದ್ಧ ರೂಪಾಯಿ ವಿನಿಮಯ ದರ ಕಡಿಮೆಯಾಗದಿರುವುದೇ ಪ್ರಧಾನ ಸಾಕ್ಷ್ಯವಾಗಿದೆ. ಮೋದಿ ಅಧಿಕಾರ ವಹಿಸಿಕೊಂಡಾಗ ೬೦ ರೂಪಾಯಿ ಆಸುಪಾಸು ಇದ್ದ ಡಾಲರ್ ವಿರುದ್ಧ ರೂಪಾಯಿ ದರ ಈಗ ೬೩ ರೂಪಾಯಿ ಆಸುಪಾಸು ಇದೆ. ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಬಂದಿದ್ದರೆ ಇದು ೫೦ ರೂಪಾಯಿ ಆಸುಪಾಸಿಗೆ ಇಳಿಯಬೇಕಾಗಿತ್ತು. ದೇಶದ ಆರ್ಥಿಕ ಸ್ಥಿತಿ ಉತ್ತಮವಾಗೇನೂ ಇಲ್ಲ. ಮಾಧ್ಯಮಗಳು ಹುಸಿಪ್ರಚಾರದಲ್ಲಿ ತೊಡಗಿವೆಯೇ ಹೊರತು ಮೋದಿ ಅಧಿಕಾರ ವಹಿಸಿಕೊಂಡಾಗ ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಹೆಚ್ಚಿನ ವ್ಯತ್ಯಾಸವೇನೂ ಕಾಣುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಇಳಿದದ್ದು ಕಾಕತಾಳೀಯವಾಗಿ ಅದು ಮತ್ತೆ ಏರುತ್ತಾ ಹೋದರೆ ದೇಶದಲ್ಲಿ ಜನತೆಯ ಅಸಹನೆ, ಅತೃಪ್ತಿ ಹೆಚ್ಚಲಿದೆ. ತೈಲಬೆಲೆ ಮತ್ತೆ ಏರುವ ಲಕ್ಷಣಗಳು ಕಂಡುಬರುತ್ತಿವೆ.

    ಅತಿಯಾದ ನಗರೀಕರಣದಿಂದ ಹಾಗೂ ಕೈಗಾರಿಕೀಕರಣದಿಂದ ನಗರಗಳು ಮಾಲಿನ್ಯದ ಕೂಪಗಳಾಗುತ್ತಿವೆ ಆದರೂ ಮಾನವನ ಐಶಾರಾಮದ ಜೀವನಶೈಲಿಗೆ ಮೋದಿ ಗೊಬ್ಬರ ಹಾಗೂ ನೀರು ಹಾಕಿ ಬೆಳೆಸುತ್ತಿರುವುದು ವಿಪರ್ಯಾಸವೇ ಸರಿ. ಇದರ ದುಷ್ಪರಿಣಾಮ ಈಗಾಗಲೇ ಪರಿಸರ ಅಸಮತೋಲನದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಒಂದು ಆಲಿಕಲ್ಲು ಮಳೆ, ಬಿರುಗಾಳಿ ರೈತರ ವರ್ಷಪೂರ್ತಿ ಶ್ರಮವನ್ನು ಮಣ್ಣುಪಾಲು ಮಾಡಲು ಸಾಕು. ನಗರವಾಸಿಗಳ ಐಶಾರಾಮದ ಜೀವನದ ಅಡ್ಡಪರಿಣಾಮ ರೈತರ ಮೇಲೆ ಮೊದಲು ಕಾಣಿಸಿಕೊಳ್ಳುತ್ತದೆ. ಈ ವರ್ಷದಲ್ಲಿ ದೇಶದ ಹಲವು ಭಾಗಗಳಲ್ಲಿ ಸುರಿದ ಅಕಾಲಿಕ ಮಳೆ, ಆಲಿಕಲ್ಲು ಮಳೆ ರೈತರಿಗೆ ಭಾರೀ ನಷ್ಟವನ್ನೇ ತಂದಿತ್ತಿದೆ. ಇದು ನಮ್ಮ ಲಂಗುಲಗಾಮಿಲ್ಲದ ಐಶಾರಾಮಿ ಜೀವನದ ದುಷ್ಪರಿಣಾಮ. ಪರಿಸರ ಹಾಗೂ ಭೂಮಿ ಮಾನವನ ಅಟ್ಟಹಾಸ ಹಾಗೂ ಭೋಗಜೀವನವನ್ನು ಸಹಿಸಿಕೊಳ್ಳುವುದಕ್ಕೂ ಒಂದು ಮಿತಿ ಇದೆ. ಇದು ಮಿತಿಯಿಲ್ಲದ ಭೋಗಜೀವನ ಹಿಂದೆ ಓಡುತ್ತಿರುವ ನಮಗೆ ಅಂದರೆ ನಮ್ಮ ಮೋದಿ ಸಾಹೇಬರಿಗೆ ಅರ್ಥವಾಗದೆ ಇರುವುದು ಶೋಚನೀಯ. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಲಿದೆ ಮತ್ತು ಅದರ ಪರಿಣಾಮ ಎಲ್ಲರನ್ನೂ ತಟ್ಟಲಿದೆ.

    ಭಾರತದ ಬಹುತೇಕ ದೊಡ್ಡ ನಗರಗಳು ಮಾಲಿನ್ಯದ ಕೂಪಗಳಾಗಿವೆ. ಆದರೂ ಸರ್ಕಾರ ನಗರೀಕರಣವನ್ನು ಮತ್ತಷ್ಟು ಉತ್ತೇಜಿಸುತ್ತಿರುವುದು ಅವಿವೇಕದ ಪರಮಾವಧಿ. ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಇದು ಆಡಳಿತಗಾರರಿಗೆ ಅರ್ಥವೇ ಆಗುತ್ತಿಲ್ಲ. ಪಾಶ್ಚಾತ್ಯ ದೇಶಗಳ ಯೋಜಿತ ಹಾಗೂ ಸುಂದರ ನಗರಗಳಿಗೆ ಹೋಲಿಸಿದರೆ ನಮ್ಮಲ್ಲಿ ನಗರೀಕರಣ ಅಂತರ್ಜಲವನ್ನು ಸಂಪೂರ್ಣ ಕಲುಷಿತಗೊಳಿಸಿದೆ. ನಗರಗಳಲ್ಲಿ ೨೪ ಗಂಟೆಯೂ ತುಂಬಿ ಹರಿಯುತ್ತಿರುವ ಕೊಳಚೆನೀರಿನ ಪ್ರವಾಹ ಅಂತರ್ಜಲವನ್ನು ಸಂಪೂರ್ಣ ಮಾಲಿನ್ಯಗೊಳಿಸಿದೆ. ಸ್ವಚ್ಛಭಾರತ ಎಂಬುದು ಘೋಷಣೆಯಾಗಿಯೇ ಉಳಿದಿದೆ.

    ಮೋದಿಯವರ ವಿದೇಶ ಪ್ರವಾಸಗಳಲ್ಲಿ ಅನಿವಾಸಿ ಭಾರತೀಯರು ಹಾಗೂ ಭಾರತೀಯ ಮೂಲದ ಜನರು ಕುಣಿದು ಕುಪ್ಪಳಿಸಿ “ಅಚ್ಛೇ ದಿನ್ ” ಬಂತೆಂದು ಹಾರಾಡುತ್ತಿದ್ದಾರೆ ಏಕೆಂದರೆ ಅವರಿಗೆ “ಅಚ್ಛೇ ದಿನ್” ಬಂದಿರುವುದು ನಿಜ. ಗಲ್ಫ್ ಪ್ರದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರನ್ನು ಹೊರತುಪಡಿಸಿ ಆಸ್ಟ್ರೇಲಿಯ, ಅಮೇರಿಕ,ಯುರೋಪ್ ದೇಶಗಳು , ಕೆನಡ ಮೊದಲಾದ ದೇಶಗಳಲ್ಲಿ ನೆಲೆಸಿರುವವರಿಗೆ ಹಾಗೂ ಕೆಲಸಮಾಡುತ್ತಿರುವವರಿಗೆ ಬಹಳ ದೊಡ್ಡ ಸಂಬಳ ಬರುತ್ತಿರುವುದು ನಿಜ. ಹಾಗಾಗಿ ಅವರಿಗೆ ಅಚ್ಛೇ ದಿನ ಬಂದಿರಬಹುದು. ಆದರೆ ಭಾರತದ ಸಾಮಾನ್ಯರಿಗೆ ಅಂಥ ಅಚ್ಛೇ ದಿನದ ಲಕ್ಷಣಗಳು ಕಾಣಿಸುತ್ತಿಲ್ಲ. ಕಾಗೆಗಳು ಆಹಾರ ಕಂಡರೆ ಇಡೀ ತಮ್ಮ ಬಳಗವನ್ನು ಕರೆದು ಹಂಚಿಕೊಳ್ಳುತ್ತವೆ. ಆದರೆ ನಮ್ಮ ಅನಿವಾಸಿ ಭಾರತೀಯರು ಎಷ್ಟು ಜನ ತಮ್ಮ ಐಶ್ವರ್ಯವನ್ನು ದೇಶದ ತಮ್ಮ ಬಂಧು ಬಾಂಧವರ ಜೊತೆ ಹಂಚಿಕೊಂಡು ದೇಶದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರೆ ಉತ್ತರ ನಿರಾಶಾದಾಯಕ. ಬೇರೆ ದೇಶಗಳಲ್ಲಿ ನೆಲೆಸಿರುವ ಬಹುತೇಕ ಭಾರತೀಯರು ಭೋಗಜೀವನದಲ್ಲಿ ಮುಳುಗಿದ್ದು ಪಾಶ್ಚಾತ್ಯ ಜೀವನದ ಅಂಧಾನುಕರಣೆಯಲ್ಲಿ ಮೈಮರೆತಿದ್ದಾರೆ. ಧರ್ಮ, ಆಧ್ಯಾತ್ಮ ಎಲ್ಲ ಅವರವರ ಸ್ವಾರ್ಥ ಸಾಧನೆಗೆ ಮಾತ್ರ ಅದಕ್ಕಿಂಥ ಆಚೆ ಹಿಂದೂಗಳ ಧರ್ಮ, ಆಧ್ಯಾತ್ಮ ಉದಾತ್ತ ಗುಣಗಳನ್ನು ತೋರಿಸುತ್ತಿಲ್ಲ.

    Reply
    1. ACB

      “ಕಾಗೆಗಳು ಆಹಾರ ಕಂಡರೆ ಇಡೀ ತಮ್ಮ ಬಳಗವನ್ನು ಕರೆದು ಹಂಚಿಕೊಳ್ಳುತ್ತವೆ. ಆದರೆ ನಮ್ಮ ಅನಿವಾಸಿ ಭಾರತೀಯರು ಎಷ್ಟು ಜನ ತಮ್ಮ ಐಶ್ವರ್ಯವನ್ನು ದೇಶದ ತಮ್ಮ ಬಂಧು ಬಾಂಧವರ ಜೊತೆ ಹಂಚಿಕೊಂಡು ದೇಶದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ”

      NRIs have made life hell by investing $s in real estate of Indian cities. Each NRI owns at least five properties but even family of five Indians doesn’t own one property!

      Reply
  3. raghavendra1980

    ಮಾಧ್ಯಮಗಳು ಮೋದಿಯನ್ನು ಬೆಂಬಲಿಸುತ್ತಿವೆ ಎನ್ನುವ ‘ಸತ್ಯ’ವನ್ನು ಕಂಡುಹಿಡಿದ ನಿಮ್ಮ ತಲೆಗೆ, ತಲೆದೂಗಲೇ ಬೇಕು.

    ಹೆಚ್ಚಿನ ವಿದೇಶೀ ಬಂಡವಾಳದಿಂದ, ವಿದೇಶೀ ವಿನಿಮಯ ದರ ಕಡಿಮೆಯಾಗುತ್ತದೆಂಬ ನಿಮ್ಮ ಅರ್ಥಶಾಸ್ತ್ರದ ಮಹಾಜ್ಞಾನಕ್ಕೂ ಅಬ್ಬಬ್ಬಾ ಎನ್ನಲೇಬೇಕು.

    ಅತಿಯಾದ ನಗರೀಕರಣದಿಂದ, ಆಲಿಕಲ್ಲು ಮಳೆಯಾಗುತ್ತದೆಂಬ ನಿಮ್ಮ ಹವಾಮಾನಶಾಸ್ತ್ರಕ್ಕೂ ‘ಹವಾಹವಾಯಿ’ ಎನ್ನಲಡ್ಡಿಯಿಲ್ಲ.

    ನಿಮ್ಮ ಮೋದಿದ್ವೇಷದ ಅಸಾಮಾನ್ಯಜ್ಞಾನ ಮುಂದುವರೆಯಲಿ 🙂

    Reply
    1. ACB

      Biggest achievement of NaMo government in the last one year is no repetition of Godra pogrom. Country grateful to him for this achievement only. Everything else is disappointing.

      Reply
  4. Ananda Prasad

    ಮಾಧ್ಯಮಗಳು ಆಡಳಿತ ಪಕ್ಷವನ್ನು ಹೊಗಳುವುದರಿಂದ ಅವರಿಗೆ ಅನುಕೂಲ ಇದೆ. ಹೀಗಾಗಿ ಮುಖ್ಯ ವಾಹಿನಿಯ ಮಾಧ್ಯಮಗಳಿಂದ ವಸ್ತುನಿಷ್ಠ ವಿಮರ್ಶೆ ನಿರೀಕ್ಷಿಸುವಂತಿಲ್ಲ. ಮಾಧ್ಯಮಗಳು ನಿಜವಾಗಿ ವಿರೋಧ ಪಕ್ಷದ ಕೆಲಸ ಮಾಡುತ್ತಿರಬೇಕು ಆದರೆ ಇಂದಿನ ಮುಖ್ಯ ವಾಹಿನಿಯ ಮಾಧ್ಯಮಗಳು ಅದನ್ನು ಮಾಡುತ್ತಿಲ್ಲ. ಇದರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೇ ಅಪಾಯ ಇದೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ಗಟ್ಟಿಯಾಗುವುದರ ಬದಲು ವರ್ಷ ಕಳೆದಂತೆಲ್ಲ ಮತ್ತಷ್ಟು ದುರ್ಬಲವಾಗುತ್ತಲೇ ಬರುತ್ತಿದೆ. ವಿದೇಶಿ ಬಂಡವಾಳ ಬಂದರೆ ಅದು ಡಾಲರ್ ರೂಪದಲ್ಲೇ ಬರಬೇಕು. ದೇಶದಲ್ಲಿ ಡಾಲರ್ ಸಂಗ್ರಹ ಹೆಚ್ಚಾದರೆ ರೂಪಾಯಿ ವಿನಿಮಯ ದರ ಇಳಿಯುವುದು ಸಹಜ. ಇದನ್ನು ತಿಳಿಯಲು ಅರ್ಥಶಾಸ್ತ್ರದ ಮಹಾಜ್ಞಾನವೇನೂ ಅಗತ್ಯ ಇಲ್ಲ. ನಗರೀಕರಣ ಹಾಗೂ ಅಲ್ಲಿನ ನಾಗರಿಕರ ಅತಿಯಾದ ವೈಭೋಗದ ಜೀವನದಿಂದ ವಾತಾವರಣದಲ್ಲಿ ಇಂಗಾಲನಿಲದ ಪ್ರಮಾಣ ಹೆಚ್ಚುತ್ತದೆ ಎಂಬುದು ಪ್ರಾಥಮಿಕ ತಿಳುವಳಿಕೆ. ವಾತಾವರಣದಲ್ಲಿ ಇಂಗಾಲನಿಲ ಹೆಚ್ಚಿದಂತೆ ಅಕಾಲಿಕ ಮಳೆ, ಭಾರೀ ಬಿರುಗಾಳಿ, ಆಲಿಕಲ್ಲು ಹಾಗೂ ಭೀಕರ ಸಿಡಿಲಬ್ಬರದ ಮಳೆ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದಕ್ಕೂ ಮಹಾಜ್ಞಾನವೇನೂ ಬೇಕಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇದು ನಮ್ಮೆಲ್ಲರ ಅನುಭವಕ್ಕೆ ಬರುತ್ತಿರುವ ಕಟುಸತ್ಯವೂ ಹೌದು ಆದರೆ ಅದನ್ನು ಒಪ್ಪಿಕೊಳ್ಳಲು ನಮಗೆ ಆಗುತ್ತಿಲ್ಲ ಏಕೆಂದರೆ ಒಪ್ಪಿಕೊಂಡರೆ ನಮ್ಮ ಐಶಾರಾಮದ ಜೀವನಶೈಲಿಗೆ ಕಡಿವಾಣ ಹಾಕಬೇಕಾಗುತ್ತದೆ ಅಲ್ಲವೇ? ಹಾಗಾಗಿ ಸತ್ಯಾಂಶದಿಂದ ದೂರ ಓಡುವುದು ಸುಲಭ. ಮೋದಿಯವರನ್ನು ಟೀಕಿಸಿದರೆ ಮೋದಿ ದ್ವೇಷ ಎನ್ನಲಾಗುತ್ತದೆಯೇ? ನಾನು ಮೋದಿಯವರನ್ನು ಕೆಟ್ಟ ಬೈಗುಳದಿಂದ ಬೈದಿಲ್ಲ. ಓರ್ವ ಒಳ್ಳೆಯ ನಾಯಕ ಟೀಕೆ ಟಿಪ್ಪಣಿಗಳನ್ನು ಸವಾಲಾಗಿ ಹಾಗೂ ಸಕಾರಾತ್ಮಕವಾಗಿ ತೆಗೆದುಕೊಂಡು ಸಾಧನೆ ಮಾಡಿ ತೋರಿಸುತ್ತಾನೆ. ಪ್ರಜಾಪ್ರಭುತ್ವ ಗಟ್ಟಿಯಾಗುವುದು ಹಾಗೂ ಯಶಸ್ವಿಯಾಗುವುದು ಆಗಲೇ.

    Reply
  5. raghavendra1980

    ನಾನು ಅದಾಗಲೇ ಹೇಳಿದಂತೆ ನಿಮ್ಮ ವಿಜ್ಞಾನ ಮತ್ತು ಅರ್ಥಶಾಸ್ತ್ರದ ಮಹಾಜ್ಞಾನ ಮುಂದುವರೆಯಲಿ. ವಿದೇಶಿ ವಿನಿಮಯ ಹೇಗೆ ಬರುತ್ತದೆ ಹಾಗೂ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಲು ಕಾರಣಗಳು ಮತ್ತು ಅದಕ್ಕೆ ಬೇಕಾದ ಕಾಲಜ್ಞಾನದ ಅರಿವೂ ನನಗಿದೆ. ದಯವಿಟ್ಟು ನಿಮ್ಮ ಆ ಜ್ಞಾನವನ್ನು ನನಗೆ ಹಂಚಲು ಬರಬೇಡಿ. (ನಿಮ್ಮ ಒಳ್ಳೆಯದಕ್ಕೆ ಹೇಳುತ್ತೇನೆ, ಬೇರೆಯವರಿಗೂ ಹೇಳಲು ಹೋಗಬೇಡಿ. ನಕ್ಕಾರು). ಒಂದುವರ್ಷದ ಆಡಳಿತದವನ್ನು ನೋಡಿ, ನಗರೀಕರಣ, ಇಂಗಾಲಾಮ ಹೆಚ್ಚಳ ಹಾಗೂ ಅದರಿಂದ ಆಲಿಕಲ್ಲಿನ ಮಳೆಬಂದಿತೆಂದು ಅದಕ್ಕೂ ಮೋದಿಯನ್ನು ಕಾರಣೀಭೂತವನ್ನಾಗಿ ಮಾಡುವ ನಿಮ್ಮ ಮಹೋನ್ನತ ವಿಚಾರಧಾರೆಗೆ…..ನನ್ನ ಸಾಷ್ಟಾಂಗ ನಮಸ್ಕಾರ.

    ಪ್ರಧಾನಿಯನ್ನು ‘ಸುಳ್ಳುಗಾರ’ ಎಂದು ಬರೆದಿರುವ ಈ ಲೇಖನದ ಹರಿವಿನಲ್ಲೇ, ಇದು ಟೀಕೆಯೋ ದ್ವೇಷವೋ ಎಂಬ ಅಂಶ ತುಂಬಿತುಳುಕುತ್ತಿದೆ. ಹಾಗಾಗಿ, ಮಾತುಗಳನ್ನು ಟಂಕಿಸಿ ಮುಗಿದಮೇಲೆ ಟೀಕೆಯನ್ನು ಸವಾಲಾಗಿ ಸ್ವೀಕರಿಸಬೇಕೆಂಬ ಸವಕಲು ಜೋಕ್ ದಯವಿಟ್ಟು ಬೇಡ. ಇನ್ನು ಟೀಕೆ ಟಿಪ್ಪಣಿಗಳನ್ನು ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕ ಸಾಧನೆಮಾಡುವುದರ ಬಗ್ಗೆ ನೀವು ಮೋದಿಯೆಡೆಗೆ ಬೆರಳುತೋರಿಸುವ ಅಗತ್ಯವೇ ಇಲ್ಲ. ಯಾಕೆಂದರೆ ಕಳೆದ ಹದಿಮೂರು ವರ್ಷಗಳಿಂದ ಮೋದಿ ಮಾಡಿರುವುದು ಅದನ್ನೇ. ಟೀಕಿಸಿ, ದ್ವೇಷಿಸಿದವರ ಬಸುರಿಳಿಯಿತೇ ಹೊರತು, ಮೋದಿಯೇನೋ ಕೊಂಕಲಿಲ್ಲ, ಕದಲಲಿಲ್ಲ 🙂 ಥೈಲ್ಯಾಂಡಿಗೆ ಓಡಲೂ ಇಲ್ಲ 🙂 🙂 ನೀವು ಆಡಿ ತೋರಿಸಿದ್ದೀರ, ಅವರು ಮಾಡಿ ತೋರಿಸಿದ್ದಾರೆ ಅಷ್ಟೇ. ಟೀಕೆಯನ್ನು ಸವಾಲಾಗಿ ಸ್ವೀಕರಿಸುವ ಮನೋಭವ ಬರಬೇಕಾದದ್ದು, ಲೇಖನ ಬರೆದ ಶ್ರೀಪಾದುಗೆ ಹಾಗೂ ಅದನ್ನು ಪ್ರಕಟಿಸಿದ ‘ಆಮ್ ಆದ್ಮಿ’ಯವರಿಗೆ. ಕಮೆಂಟುಗಳನ್ನು ಮಾಡರೇಟ್ ಮಾಡುವ ಹಾಗೂ ಅಳಿಸುವ, ಅಥವಾ ಟೀಕೆಗೆ ಸಿಡುಕುವ ವರ್ತಮಾನದ ಮನೆಯವರಿಗೆ.

    Reply
  6. Ananda Prasad

    ನಾನು ಮೋದಿಯವರ ಒಂದು ವರ್ಷದ ಆಡಳಿತದಿಂದ ಆಲಿಕಲ್ಲು ಮಳೆ, ಅಕಾಲಿಕ ಮಳೆ, ಬಿರುಗಾಳಿ ಹೆಚ್ಚಿದೆ ಎಂದು ಹೇಳಿಲ್ಲ ಮಾರಾಯರೇ, ಅತಿಯಾದ ನಗರೀಕರಣ, ಕೈಗಾರಿಕೀಕರಣ, ಹಾಗೂ ಐಶಾರಾಮಿ ಜೀವನಶೈಲಿಯಿಂದ ಇಂಗಾಲನಿಲ ಹೆಚ್ಚಿ ಇಂಥವು ಹೆಚ್ಚಾಗುತ್ತಿವೆ ಎಂದು ಹೇಳಿದ್ದೇನೆ. ನಿಮಗೆ ಸತ್ಯವನ್ನು ಅರಗಿಸಿಕೊಳ್ಳುವ ಛಾತಿ ಇಲ್ಲದಿದ್ದರೆ ಬೇಡ ಬಿಡಿ. ಕಟು ಸತ್ಯ ಹೇಳಿದರೆ ಕಂಡವರು ನಕ್ಕಾರು ಎಂದಿದ್ದೀರಿ, ನಕ್ಕರೆ ನಗಲಿ ಬಿಡಿ ಹಲ್ಲು ಕಂಡೀತು ಅಷ್ಟೇ. ಸುಳ್ಳು ಆಶ್ವಾಸನೆ ಕೊಟ್ಟವರನ್ನು ಸುಳ್ಳುಗಾರ ಎಂದರೆ ನೀವೇಕೆ ಉರಿದುಬೀಳುತ್ತೀರಿ? ಇರುವ ವಿಷಯ ಹೇಳಿದರೆ ಅದು ದ್ವೇಷ ಹೇಗಾಗುತ್ತದೆ ? ಪ್ರಜಾಪ್ರಭುತ್ವದಲ್ಲಿ ಟೀಕೆಗಳಿಗೆ ಸ್ಥಾನವಿದ್ದೇ ಇದೆ. ಟೀಕೆಗಳೇ ಇರಬಾರದು ಎಂದರೆ ಅದು ಸರ್ವಾಧಿಕಾರವಾದೀತು

    Reply
  7. raghavendra1980

    ಯಾವ ಸುಳ್ಳು ಆಶ್ವಾಸನೆಯ ಬಗ್ಗೆ ಮಾತಾನಾಡುತ್ತಿದ್ದೀರಿ ಎಂಬುದರ ಅರಿವಿದೆಯೇ? ಟೀಕೆಯೇ ಬೇಡವೆಂದು ನಾನು ಹೇಳದಿದ್ದರೂ ನಿಮಗೆ ಕಂಡಿದ್ದರೆ, ಕನ್ನಡಕ ಬದಲಾಯಿಸುವುದೊಳ್ಳೆಯದು. ಯಾವ ‘ಇರುವ ವಿಷಯ’ವನ್ನು ತಾವು ಹಾಗೂ ತಮ್ಮ ಅತಿಬುದ್ಧಿವಂತ ಲೇಖಕ ಇಲ್ಲಿ ಪ್ರಸ್ತಾಪಿಸಿದ್ದೀರಿ!?

    “ಅತಿಯಾದ ನಗರೀಕರಣ, ಕೈಗಾರಿಕೀಕರಣ, ಹಾಗೂ ಐಶಾರಾಮಿ ಜೀವನಶೈಲಿಯಿಂದ ಇಂಗಾಲನಿಲ ಹೆಚ್ಚಿ…” ಮೋದಿ ಅಧಿಕರಕ್ಕೆ ಬಂದಾಗಿನಿನಂದ ಎಷ್ಟು ಹೊಸಾ ಕೈಗಾರಿಕೆಗಳು ಪ್ರಾರಂಭವಾಗಿವೆ!? ಎಷ್ಟು ಹೊಸ ನಗರಗಳು ತಲೆಯೆತ್ತಿವೆ!? ಯಾವ ಲಿವರ್ ತಿರುಗಿಸಿ ಎಷ್ಟು ಇಂಗಾಲಾಮ್ಲವನ್ನು ಮೋದಿ ಆಕಾಶಕ್ಕೆ ಬಿಟ್ಟಿದ್ದಾರೆ!? ಬರೇ ಮೋದಿಯ ಆಡಳಿತದಿಂದ ಇವು ನಡೆದಿಲ್ಲವೆಂದ ಮೇಲೆ, ಸುಖಾಸುಮ್ಮನೆ ಅವರ ಮೇಲೆ ಆರೋಪವೇಕೆ!? ಸರ್ಕಾರದ ಪಾಲಿಸಿಗಳನ್ನೇನಾದರೂ ತಾವು ಸರಿಯಾಗಿ ಫಾಲೋ ಮಾಡುತ್ತಿದ್ದಲ್ಲಿ ನಿಮಗೆ ಸ್ಮಾರ್ಟ್ ಸಿಟಿಗೂ, ನಗರೀಕರಣಕ್ಕೂ ಇರುವ ವ್ಯತ್ಯಾಸ ತಿಳಿಯುತ್ತಿತ್ತು.

    ಇಂಗಾಲಾಮ್ಲ ಹೆಚ್ಚಿ, ಆಲಿಕಲ್ಲು ಮಳೆ ಬಿದ್ದಕ್ಕೆ ನಗರೀಕರಣ ಮಾತ್ರವೇ ಕಾರಣವೆನ್ನುವ ನಿಮ್ಮ ಪ್ರಭೃತ್ತಿತನದ ಪರಿಧಿಯಿಂದ ದೂರವೇ ಉಳಿಯುವ ಮನಸ್ಸುಮಾಡಿದ್ದೇನೆ. ನಿಮಗೆ ಒಳ್ಳೆಯದಾಗಲಿ.

    Reply
  8. Ananda Prasad

    ಅಧಿಕಾರಕ್ಕೆ ಬಂದು ನೂರು ದಿನದಲ್ಲಿ ಕಪ್ಪು ಹಣ ವಾಪಾಸ್ ಭಾರತಕ್ಕೆ ತಂದು ಎಲ್ಲರ ಅಕೌಂಟಿಗೆ ಹಣ ಹಾಕುತ್ತೇನೆ ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿದ್ದು ಸುಳ್ಳು ಆಶ್ವಾಸನೆ ಅಲ್ಲವೇ? ಇಂಥ ಸುಳ್ಳು ಹೇಳುವ ಅಗತ್ಯ ಏನಿತ್ತು? ಈಗ ಆ ಆಶ್ವಾಸನೆ ಸುಳ್ಳಾಗಿರುವಾಗ ಸುಳ್ಳುಗಾರ ಎಂದು ಹೇಳಿದರೆ ಏನು ತಪ್ಪು? ಯುಪಿಎ ತಪ್ಪು ಆರ್ಥಿಕ ನೀತಿಗಳಿಂದ ಡಾಲರ್ ವಿರುದ್ಧ ರೂಪಾಯಿ ವಿನಿಮಯ ದರ ಹೆಚ್ಚುತ್ತಿದೆ, ನಮ್ಮ ಸರ್ಕಾರ ಬಂದರೆ ಡಾಲರ್ ವಿರುದ್ಧ ರೂಪಾಯಿ ದರ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದು ಸುಳ್ಳು ಆಶ್ವಾಸನೆ ಅಲ್ಲವೇ? ಅಧಿಕಾರ ವಹಿಸಿಕೊಂಡ ನಂತರ ಈ ಒಂದು ವರ್ಷದಲ್ಲಿ ಡಾಲರ್ ವಿರುದ್ಧ ರೂಪಾಯಿ ದರದಲ್ಲಿ ಕಡಿಮೆಯೇನೂ ಆಗಲಿಲ್ಲ, ಇತ್ತೀಚೆಗೆ ಅದು ಹೆಚ್ಚಾಗುತ್ತಿದೆ ಅಷ್ಟೇ.

    ಮಾನವನ ಅತಿ ಐಶಾರಾಮದ ಜೀವನಶೈಲಿಯಿಂದ ಹಾಗೂ ಅದಕ್ಕೆ ಅಗತ್ಯವಾದ ವಿಪರೀತ ನಗರೀಕರಣ ಹಾಗೂ ಕೈಗಾರಿಕೀಕರಣದಿಂದ ಭೂಮಿಯ ವಾತಾವರಣದಲ್ಲಿ ಇಂಗಾಲನಿಲ ಪ್ರಮಾಣ ಹೆಚ್ಚುತ್ತಿರುವುದು ಇರುವ ಕಡುಸತ್ಯವಲ್ಲವೇ? ಮೋದಿ ಅಧಿಕಾರಕ್ಕೆ ಬಂದ ನಂತರ ಹಿಂದಿನ ಅದೇ ಐಶಾರಾಮದ ಜೀವನಶೈಲಿಯನ್ನು ಹಾಗೂ ತೀವ್ರ ನಗರೀಕರಣವನ್ನು ಪ್ರಚೋದಿಸುವ ನೀತಿಗಳನ್ನೇ ಇನ್ನಷ್ಟು ತೀವ್ರವಾಗಿ ಜಾರಿಗೆ ತರುತ್ತಿರುವುದು ಕಣ್ಣಿಗೆ ಕಾಣುತ್ತಿರುವ ಸತ್ಯ. ಇದನ್ನು ನಾನು ಕಟುಸತ್ಯ ಎಂದು ಹೇಳಿರುವುದು. ಮೋದಿಯವರು ಜಾರಿಗೆ ತರುತ್ತಿರುವ ನೀತಿಗಳು ಇನ್ನು ಹತ್ತು ವರ್ಷಗಳಲ್ಲಿ ಭಾರತದ ಪರಿಸರದ ಪರಿಸ್ಥಿತಿಯನ್ನು ತೀವ್ರವಾಗಿ ಹದಗೆಡಿಸುವ ಸಂಭವ ಇದೆ.

    Reply
  9. Prasad

    ಕಪ್ಪು ಹಣ ಭಾರತಕ್ಕೆ ತರುವುದು ಒಂದೆರಡು ವರ್ಷಗಳಲ್ಲಿ ಆಗುವ ಕೆಲಸವಲ್ಲ. ಈ ವಿಷಯದಲ್ಲಿ ಸರಕಾರಕ್ಕೆ ಸ್ವಲ್ಪ ಸಮಯ ಕೊಟ್ಟು ನೋಡೋಣ. ಕಾಂಗ್ರೆಸ್ಸಿಗೆ ಅರುವತ್ತು ವರುಷ ಕೊಟ್ಟು NDAಗೆ ಐದು ವರುಷವಾದರೂ ಕೊಡದಿದ್ದರೆ ಹೇಗೆ? ಅಂದಹಾಗೆ ಐವರು ಬಿಲಿಯಾಧಿಪತಿಗಳ ಹೆಸರುಗಳನ್ನು ಸ್ವಿಟ್ಜರ್ಲೆಂಡ್ ಸರಕಾರ ಇವತ್ತು ಅಧಿಕೃತವಾಗಿ ಬಯಲು ಮಾಡಿದೆ.ಇದರಲ್ಲಿ ಅರವಿಂದ್ ಕೇಜ್ರಿವಾಲರ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರವೀಣ್ ಸಾಹ್ನಿಯವರ ಪತ್ನಿ ಸಂಗೀತಾ ಸಾಹ್ನಿ ಹೆಸರು ಕೂಡ ಇದೆ.

    http://kannada.oneindia.com/news/india/black-money-holders-who-are-sneh-lata-sangita-sawhney-094050.html

    Reply
  10. P Bilimale

    ನಮಗೆ ಕಪ್ಪು ಹಣ ಬೇಡ ಮಾರಾಯರೇ, ವಿದೇಶದಲ್ಲಿರುವ ನಮ್ಮ ಪ್ರಧಾನ ಮಂತ್ರಿಗಳನ್ನು ಯಾರಾದರೂ ಭಾರತಕ್ಕೆ ತಂದರೆ ಸಾಕು

    Reply
    1. ಸೀತಾ

      ಬಿಳಿಮಲೆ ಸಾರ್, ನಮ್ಮ ಪ್ರಧಾನಿಗಳು ಎಲ್ಲಿಗೆ ಹೋಗಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದು ಶ್ರೀಸಾಮಾನ್ಯನಿಂದ ಮುಚ್ಚಿಟ್ಟ ರಹಸ್ಯವೇನಲ್ಲ, ಆದರೆ ನಮ್ಮ ವಿರೋಧ ಪಕ್ಷದ ಶೆಹೆಝಾದರು ಎರಡು ತಿಂಗಳು ಎಲ್ಲಿಗೆ ಹೋಗಿದ್ದರು ಏನೇನು ಮಾಡಿದರು ಎಂಬುದು ಇನ್ನೂ ಬಯಲಾಗಿಲ್ಲ. ನಿಮಗೇನಾದರೂ ತಿಳಿದಿದೆಯಾ?

      Reply
      1. P Bilimale

        ಅಯ್ಯೋ..ರಾಹುಲ್ ಎಲ್ಲಿಗೆ ಹೋಗಿದ್ದ ಅಂತ ಅರ್ನಾಬ್ ಗೋಸ್ವಾಮಿಗೇ ತಿಳಿಯಲಿಲ್ಲ ಅಂದ ಮೇಲೆ ನಮಗೆಲ್ಲ ಹೇಗೆ ತಿಳಿದೀತು, ಜೊತೆಗೆ ಆತ ಇದ್ದರೂ ಅಷ್ಟೆ, ಕಾಣೆಯಾದರೂ ಅಷ್ಟೆ, ಆದ್ರೆ ಪ್ರಧಾನ ಮಂತ್ರಿಗಳು ಹಾಗಲ್ಲವಲ್ಲ. ಈಗಿನ್ನೂ ನಮಗೆಲ್ಲ 15 ಲಕ್ಷ ಸಿಗಬೇಕು, ಬಾಂಗ್ಲಾ ದೇಶೀಯರು ವಾಪಾಸು ಹೋಗಬೇಕು, ಡಾಲರ್ ಬೆಲೆ 40ಕ್ಕೆ ಇಳಿಯಬೇಕು, ಮಧ್ಯ ಏಷಿಯಾದ 6 ರಾಷ್ಟ್ರಗಳಿಗೆ ಸದ್ಯದಲ್ಲಿಯೇ ಹೋಗಬೇಕು..370ನೇ ವಿಧಿ ಅಳಿಸಿಹಾಕಬೇಕು..ಇನ್ನೂ ಸಾವಿರ ಕೆಲಸ ಇರೋದ್ರಿಂದ ಸ್ವಲ್ಪ ಆತಂಕ ಅಷ್ಟೆ

        Reply
  11. Reader

    ಯಾರಿಗೆ ಅಚ್ಛೇದಿನ್?

    ರೈತ ಈ ದೇಶದ ಬೆನ್ನೆಲುಬು. ಆದರೆ ಕೇಂದ್ರ ಸರಕಾರದ ಒಂದು ವರ್ಷದ ಆಡಳಿತವನ್ನು ಅವಲೋಕಿಸಿ ದಾಗ ಈ ಬೆನ್ನುಮೂಳೆಯನ್ನು ಮುರಿಯುವ ಸರ್ವ ಪ್ರಯತ್ನದಲ್ಲಿ ಕೇಂದ್ರ ಸರಕಾರ ತೊಡಗಿಸಿಕೊಂಡಿದೆ ಎಂದರೂ ತಪ್ಪಾಗಲಾರದು. `ಅಚ್ಛೇ ದಿನ್ ಆಯೆಗಾ’ ಎಂಬ ¸ Àುಂದರ ವಾಕ್ಯವನ್ನು ದೇಶದಾದ್ಯಂತ ಪಸರಿಸಿ ಈ ದೇಶದ ಪ್ರಜೆಗಳ ಮತವನ್ನು ಕೀಳುವಲ್ಲಿ ಯಶಸ್ವಿಯಾದ ಬಿ.ಜೆ.ಪಿ. ಆನಂತರ ಅವೆಲ್ಲವನ್ನೂ ಮರೆತಂತೆ ವರ್ತಿಸುತ್ತಿದೆ. ಯು.ಪಿ.ಎ. ಸರಕಾರದ ಭ್ರಷ್ಟಾಚಾರ, ಬೆಲೆಯೇರಿಕೆಯಿಂದ ತತ್ತರಿಸಿದ ಜನತೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿ¸ Àುತ್ತಿರುವಾಗ ಮೋದಿಯ ಮಾತುಗಳಿಗೆ ಅನಾಯಾಸ ವಾಗಿ ಆಕರ್ಷಿತರಾದರು.
    ಆದರೆ ಅಧಿಕಾರಕ್ಕೇರಿ ಒಂದು ವರ್ಷ ಕಳೆದರೂ ಹಿಂದಿನ ಯು.ಪಿಎ. ಸರಕಾರಕ್ಕಿಂತ ಸ್ವಲ್ಪವೂ ಭಿನ್ನವಾಗಿಲ್ಲ. ಮತದಾರ ಮೋದಿಯ ವರ್ಚಸ್ಸಿಗೆ ಬಕರಾ ಆಗಿದ್ದಾರೆ ಎಂಬುದು ರುಜುವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ರೈತರ ಆತ್ಮಹತ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆ. ಮಹಾರಾಷ್ಟ್ರದಲಿ ್ಲಯೇ ಕಳೆದ ಮಾರ್ಚ್ ತನಕ 622 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಶದಲ್ಲಿ ಒಂದು ವರ್ಷದಲ್ಲಿ ರೈತರ ಆತ್ಮಹತ್ಯೆಯ ಪ್ರಮಾಣದಲ್ಲಿ 26 ಶೇಕಡಾ ಹೆಚ್ಚಳವಾಗಿದೆ. 2014ರಲ್ಲಿ 109 ರೈತರು ಆತ್ಮಹತ್ಯೆಗೈದಿದ್ದಾರೆ. 2015ರ ಅರ್ಧ ವರ್ಷವೂ ಮುಗಿದಿಲ್ಲ. ಸಾವಿನ ಸಂಖ್ಯೆ ಈಗಾಗಲೇ ¸ Áವಿರ ದಾಟುವ ಹಂತಕ್ಕೆ ತಲುಪಿದೆ. ಹಾಗೆ 1995ರಿಂದ 2014ರ ವರೆಗೆ ಈ ದೇಶದಲ್ಲಿ 2,96,438 ರೈತರು ಆತ್ಮಹತ್ಯೆಯ ಸುಳಿಗೆ ಸಿಲುಕಿ ದ್ದಾರೆ. ಕೃಷಿ ಉತ್ಪಾದನೆಯಲ್ಲಿ ಪ್ರಗತಿಯು ಕೂಡಾ 2006-2007ರಲ್ಲಿ ಶೇಕಡಾ 7.4ರಷ್ಟಿತ್ತು. 2010-2011ರ ವೇಳೆಗೆ ಅದು 3.28ಕ್ಕೆ ಇಳಿದಿತ್ತು.
    `ಅಚ್ಛೇ ದಿನ್ ಆಯೆಗಾ’ ಎಂಬ ಬಿ.ಜೆ.ಪಿ.ಯ ಘೋಷಣೆಯು ರೈತರಲ್ಲಿ ಸಂಚಲನ ಉಂಟುಮಾಡಿತ್ತು. ಮೋದಿಯವರಿಗೆ ದೊರೆತ ಶೇಕಡಾ 31ರಷ್ಟು ಮತಗಳಲ್ಲಿ ಶೇಕಡಾ 60ರಷ್ಟು ಮತಗಳು ಕೃಷಿ ಅವಲಂಬಿತ ರೈತರ ಮತಗಳು ಎಂಬುದನ್ನು ಮೋದಿ ಸರಕಾರ ಮರೆತಂತಿದೆ. ಮೋದಿ ಸರಕಾರ ಅಧಿಕಾರ ಪಡೆದ ಕೂಡಲೇ ರೈತರ ಕೊರಳಿನ ಕುಣಿಕೆಯನ್ನು ಇನ್ನಷ್ಟು ಬಿಗಿಯುವ ಕಾಯಕವನ್ನೇ ಮಾಡಿದೆ. ಈ ದೇಶದಲ್ಲಿ ಕೃಷಿ ಯನ್ನು ಉಪಜೀವನವನ್ನಾಗಿ ಮಾಡಲು ಸಿದ್ಧರಿರುವ ಸಾಕಷ್ಟು ಜನರಿದ್ದಾರೆ. ಸರಕಾರದಿಂದ ಸೂಕ್ತ ಬೆಂಬಲ, ಪ್ರೆÇೀತ್ಸಾಹ ಸಿಗದ ಕಾರಣ ಅವರು ಅದರಿಂದ ದೂರವಾಗುತ್ತಿದ್ದಾರೆ. ಕಷ್ಟಪಟ್ಟು ಬೆವರು ಸುರಿಸಿ ಮಾಡಿದ ಕೃಷಿ ಉತ್ಪನ್ನಗಳ ಪ್ರಯೋಜನಗಳನ್ನು ದಲ್ಲಾಳಿಗಳು ಪಡೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆಯಿದ್ದರೂ ಮೂಲ ರೈತರ ಕೈಗೆ ಅದು ಸಿಗುತ್ತಿಲ್ಲವೆಂಬ ವಾಸ್ತವವೂ ಇದೆ. ಈ ಎಲ್ಲದರ ನಡುವೆ ಅಕಾಲಿಕವಾಗಿ ಸುರಿಯುವ ಮಳೆಯು ಅವರ ಬೆಳೆಗಳನ್ನು ನಾಶ ಮಾಡಿ ಅವರ ಕನಸುಗಳೆಲ್ಲಾ ಮುದುಡಿ ಹೋಗುವಂತೆ ಮಾಡುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರಗಳು ರೈತರ ಬೆನ್ನೆಲುಬಾಗಿ ನಿಲ್ಲಬೇಕು. ಬೆಳೆದು ನಿಂತ ಪೈರುಗಳು ಪ್ರಕೃತಿಯ ವಿಕೋಪಕ್ಕೆ ಸಿಕ್ಕಿ ಬಲಿ ಯಾಗುತ್ತಿವೆ. ನೋಡಿ ಉತ್ತರ ಭಾರತದಲ್ಲಿ ಮಳೆ ಚಂಡಮಾರುತಗಳಿಗೆ ಸಿಲುಕಿ ಶೇಕಡಾ 80ರಷ್ಟು ಕೃಷಿ ವಲಯಗಳು ನಾಶಗೊಂಡವು. ಸಾಲ ಸೋಲ ಮಾಡಿ ಹಾಕಿದ ಬಂಡವಾಳವು ನೀರು ಪಾಲಾದ ಮೇಲೆ ಸಾಲಗಾರರ ಕಿರುಕುಳ ಪ್ರಾರಂಭವಾದಾಗ ಆತ ಆತ್ಮಹತ್ಯೆಯ ಮೊರೆಹೋಗುವುದು ಸಹಜ. ರೈತನ ಆತ್ಮಹತ್ಯೆಯಲ್ಲೂ ರಾಜಕೀಯ ಮಾಡಲು ಈ ಧೂರ್ತ ರಾಜಕರಣಿಗಳು ಹಿಂಜರಿಯಲಾರರು ಎಂಬುದಕ್ಕೆ ಕೇಜ್ರಿವಾಲರ ಪಕ್ಷದ ಪ್ರತಿಭಟನಾ ರ್ಯಾಲಿಯೊಂದರಲ್ಲಿ ರೈತನ ಆತ್ಮಹತ್ಯೆಯ ಘಟನೆಯಾದಾಗ ಇಲ್ಲಿನ ರಾಜಕೀಯ ಪಕ್ಷಗಳು ತಮ್ಮ ತಮ್ಮ ದಾ¼ Àಗಳನ್ನು ಉರುಳಿಸಿದ್ದು ಅರ್ಥವಾಗದ ವಿಚಾರವೇನಲ್ಲ.
    ಆಡಳಿತ ವರ್ಗಗಳು ರೈತನ ಭೂಮಿಯನ್ನು ಕಸಿದು ಬಂಡವಾಳಶಾಹಿಗಳ ತೆಕ್ಕೆಗೆ ಕೊಡಲು ಹವಣಿಸುತ್ತಿರುವುದು ಸಾಮಾನ್ಯವಾಗಿದೆ. ಕಾಪೆರ್Ç ರೇಟ್ ದೊರೆಗಳಿಗೆ ಕೊಡುವ ಪ್ರಾಮುಖ್ಯತೆಯ ಅರ್ಧದಷ್ಟಾದರೂ ರೈತರಿಗೆ ನೀಡಿದ್ದರೆ ಅದು ದೇಶದ ಅಭಿವೃದ್ಧಿಗೆ ಪೂರಕವಾಗುತ್ತಿತ್ತು. ಈ ರೈತರ ಮತಗಳಿಂದ ಅಧಿಕಾರ ಪ್ರಾಪ್ತವಾಗಿದೆ ಎಂಬ ಪ್ರಜ್ಞೆ ಕೇಂದ್ರ ಸರಕಾರಕ್ಕಿರಬೇಕು. ವಾಸ್ಕೊಡಿಗಾಮನ ತರಹ ಹತ್ತೊಂಬತ್ತು ದೇಶ ಸುತ್ತಾಡಿ ಬಂದ ಪ್ರಧಾನಿಗಳು ಇನ್ನು ಮುಂದೆ ಕೆಲ ದೇಶಗಳಿಗೆ ಪ್ರವಾಸ ಹೋಗುವ ಯೋಜನೆಯನ್ನು ಸಿದ್ಧ ಪಡಿಸುತ್ತಿದ್ದಾರೆ. ಇವರು ಪ್ರಧಾನ ಮಂತ್ರಿಗಳೋ ಪ್ರವಾಸ ಮಂತ್ರಿಗಳೋ ಅರ್ಥವಾಗುತ್ತಿಲ್ಲ. ಆದರೆ ಈ ಪ್ರವಾಸಗಳು ಯಾರ ಸಬಲೀಕರಣಕ್ಕಾಗಿ ಯಾರ ಅಭಿವೃದ್ಧಿಗಾಗಿ ಎಂದು ಯೋಚಿಸಬೇಕಾಗಿದೆ. ಉಳುವ ಯೋಗಿಯನ್ನು ಅಳುವಂತೆ ಮಾಡಿ ಪ್ರವಾಸದಲ್ಲಿ ತೊಡಗಿಸಿಕೊಂಡು ಜೊತೆಗೆ ಕಾಪೆರ್Çರೇಟ್ ದೊರೆಗಳನ್ನು ಕೂರಿಸಿಕೊಂಡು ಈ ದೇಶದಲ್ಲಿ ಹುಟ್ಟಿದ್ದೇ ಪ್ರಮಾದ ಎಂದು ವಿಶ್ವ ನಾಯಕರುಗಳ ಮುಂದೆ ಹೇಳುತ್ತಿದ್ದಾ ರಲ್ಲಾ! ಇದು ಈ ದೇಶದ ಜನರಿಗೆ ಬಗೆಯುವ
    ದ್ರೋಹವಲ್ಲವೇ?
    ನೂರು ದಿನಗಳಲ್ಲಿ ಕಪ್ಪÅಹಣ ತರುತ್ತೇನೆಂದು ಮಾತುಕೊಟ್ಟು 365 ದಿನ ಕಳೆದರೂ ತುಟಿ ಪಿಟಿಕ್ಕೆನ್ನುತ್ತಿಲ್ಲ. ಸ್ವಿಝರ್ಲೆಂಡಿನ ಕಾನೂನಿನ ನೆಪ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಧರ್ಮ-ಧರ್ಮಗಳ ನಡುವೆ ಕಿಚ್ಚು ಹಚ್ಚುವಂತಹ ಕೋಮು ಪ್ರಚೋದನಕಾರಿ ಹೇಳಿಕೆಗಳು ಬ ಂದಾಗಲೂ ಅವರ ಬಾಯಿ ಮುಚ್ಚಿಸುವ ಪ್ರಯತ್ನ ನಡೆದಿಲ್ಲ. ಮಧ್ಯಮ ವರ್ಗದವರಿಗೆ ದಿನೇ ದಿನೇ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಕೆಲ ರಾಜ್ಯಗಳ ವಿಧಾನ ಸಭಾ ಚುನಾವಣೆಯ ಸಂದರ್ಭ ಸ್ವಲ್ಪ ತೈಲಬೆಲೆ ಇಳಿಸಿ ಇದೀಗ ಮತ್ತೆ ತೈಲ ಬೆಲೆ ಏರಿಸಿಯಾಗಿದೆ. ಅಡುಗೆ ಅನಿಲದ ¸ Àಬ್ಸಿಡಿಗೂ ಕನ್ನ ಕೊರೆದು ಮಧ್ಯಮ ವರ್ಗದ ಹಾಗೂ ಜನಸಾಮಾನ್ಯರಿಗೆ ಮೋದಿ ಸರಕಾರ ದಿನೇ ದಿನೇ ಹೊರೆಯಾಗುತ್ತಿದೆ. ಆಶ್ವಾಸನೆ ಭರವ¸ Éಗಳೆಲ್ಲ ನೀರಿನಲ್ಲಿಟ್ಟ ಹೋಮದಂತಾಗುತ್ತಿದೆ. ಆದರೆ ಕಾಪೆರ್Çರೇಟ್ ದೊರೆಗಳ ಪಾಲಿಗೆ ಅಚ್ಛೇದಿನ್ ಬರುತ್ತಿದೆ.

    Reply
    1. ಸೀತಾ

      ಭಾರತದಲ್ಲಿ ಹೆಚ್ಚುತ್ತಿರುವ ರೈತಾಪಿ ವರ್ಗದವರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲುವ ಒಂದು ಲೇಖನ ಇಲ್ಲಿದೆ ನೋಡಿ: http://rt.com/news/261673-india-gmo-cotton-suicides/
      “in order to cultivate the genetically modified cotton, known as Bt cotton, produced by American agricultural biotech giant Monsanto, farmers put themselves into huge debt. However, when the crops did not pay off, they turned to pesticides to solve the problem – by drinking the poison to kill themselves.”

      ಇದು ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬಂದಿದೆ. ಮೋದಿ ಸರ್ಕಾರವೊಂದನ್ನೇ ಹೊಣೆಯಾಗಿಸುವುದರಲ್ಲಿ ಅರ್ಥವಿಲ್ಲ.

      Reply

Leave a Reply

Your email address will not be published. Required fields are marked *